ರೋ ಜಿಂಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರೋ ಜಿಂಕೆ
ಗಂಡು ಮತ್ತು ಹೆಣ್ಣು ರೋ ಜಿಂಕೆ
Conservation status
Scientific classification e
ಕ್ಷೇತ್ರ: ಯೂಕ್ಯಾರ್ಯೋಟಾ
ಸಾಮ್ರಾಜ್ಯ: ಅನಿಮೇಲಿಯ
ವಿಭಾಗ: ಕಾರ್ಡೇಟಾ
ವರ್ಗ: ಮ್ಯಾಮೇಲಿಯಾ
ಗಣ: ಆರ್ಟಿಯೊಡ್ಯಾಕ್ಟೈಲ
ಕುಟುಂಬ: ಸರ್ವಿಡೀ
ಉಪಕುಟುಂಬ: ಕ್ಯಾಪ್ರಿಯೋಲಿನೇ
ಕುಲ: ಕ್ಯಾಪ್ರಿಯೋಲಸ್
ಪ್ರಜಾತಿ:
ಕ. ಕ್ಯಾಪ್ರಿಯೋಲಸ್
Binomial name
ಕ್ಯಾಪ್ರಿಯೋಲಸ್ ಕ್ಯಾಪ್ರಿಯೋಲಸ್
ರೋ ಜಿಂಕೆಯ ವ್ಯಾಪ್ತಿ
Synonyms

ಸರ್ವಸ್ ಕ್ಯಾಪ್ರಿಯೋಲಸ್ Linnaeus, 1758

ರೋ ಜಿಂಕೆಯು ಆರ್ಟಿಯೊಡ್ಯಾಕ್ಟಿಲ ಗಣದ ಸರ್ವಿಡೀ ಕುಟುಂಬಕ್ಕೆ ಸೇರಿದ ಜಿಂಕೆ. ಯೂರೇಷ್ಯ ವಲಯದಲ್ಲಿ ತೀರ ಉತ್ತರ ಭಾಗ ಮತ್ತು ಭಾರತಗಳನ್ನುಳಿದು ಉಳಿದೆಡೆಗಳಲ್ಲಿ ವ್ಯಾಪಕವಾಗಿ ಕಾಣದೊರೆಯುತ್ತದೆ. ಕ್ಯಾಪ್ರಿಯೋಲಸ್ ಇದರ ಪ್ರಾಣಿವೈಜ್ಞಾನಿಕ ಹೆಸರು. ವಿರಳವಾಗಿ ಮರ, ಪೊದೆಗಳಿರುವಂಥ ಬಯಲು ಪ್ರದೇಶದಲ್ಲಿ ವಾಸಿಸುತ್ತದೆ.

ದೇಹರಚನೆ[ಬದಲಾಯಿಸಿ]

ಇದು ಸುಮಾರು 1 ಮೀ. ಎತ್ತರವಿರುವ ಪ್ರಾಣಿ. ದೇಹದ ಉದ್ದ 1-1.5 ಮೀ, ತೂಕ 15-30 ಕೆಜಿ.[೩] ಬಣ್ಣ ಕೆಂಪುಮಿಶ್ರಿತ ಕಂದು. ಗಂಡಿನಲ್ಲಿ 0.25 ಮೀಟರ್ ಉದ್ದದ ಮೂರು ಕವಲುಗಳುಳ್ಳ ಕೊಂಬುಗಳಿವೆ. ಬಾಲ ಇಲ್ಲವೇನೋ ಎನ್ನವಷ್ಟರ ಮಟ್ಟಿಗೆ ಮೋಟಾಗಿದೆ.

ವರ್ತನೆ[ಬದಲಾಯಿಸಿ]

ರೋ ಜಿಂಕೆಗಳು ಸಣ್ಣ ಕುಟುಂಬಗಳಲ್ಲಿ ವಾಸಿಸುತ್ತವೆ. ಗಂಡುಗಳು ಸಾಮಾನ್ಯವಾಗಿ ಒಂಟೊಂಟಿಯಾಗಿ ಇರುವುವು. ಬೆಳಗಿನ ಜಾವ ಮತ್ತು ಸಂಜೆಯ ವೇಳೆಯಲ್ಲಿ ಮಾತ್ರ ತಾವು ಅಡಗಿರುವ ತಾಣಗಳಿಂದ ಹೊರಬಂದು ಹುಲ್ಲು ಮೇಯತೊಡಗುತ್ತವೆ. ತುಂಬ ಚುರುಕಾದ ಪ್ರಾಣಿಗಳಿವು. ಬಲು ಚೆನ್ನಾಗಿ ಈಸಬಲ್ಲವು. ಮೇಯುತ್ತಿರುವಾಗ ಏನಾದರೂ ಅಡಚಣೆಯುಂಟಾದರೆ ಅಥವಾ ಗಾಬರಿಯುಂಟಾದರೆ ನಾಯಿ ಬೊಗಳುವಂತೆ ಶಬ್ದಮಾಡಿ ಕೂಗುವುವು.

ಸಂತಾನೋತ್ಪತ್ತಿ[ಬದಲಾಯಿಸಿ]

ಗಂಡು ಹೆಣ್ಣುಗಳು ಕೂಡುವ ಕಾಲ ಜುಲೈ-ಆಗಸ್ಟ್. ಗಂಡು ಸಾಮಾನ್ಯವಾಗಿ ಒಂದೇ ಒಂದು ಹೆಣ್ಣಿನೊಡನೆ ಕೂಡುತ್ತದೆ. ಹೆಣ್ಣಿಗಾಗಿ ಗಂಡುಗಳ ನಡುವೆ ಕಾದಾಟ ನಡೆಯುವುದುಂಟು. ಒಂದು ಸೂಲಿಗೆ ಒಂದು ಇಲ್ಲವೆ ಎರಡು ಮರಿ ಜನನ. ರೋ ಜಿಂಕೆಯ ವಿಶಿಷ್ಟಲಕ್ಷಣವೆಂದರೆ ನಿಷೇಚನಕ್ರಿಯೆ ಜರಗಿದ ನಾಲ್ಕೂವರೆ ತಿಂಗಳ ತರುವಾಯ ನಿಷೇಚಿತ ಅಂಡ ಗರ್ಭಾಶಯದ ಭಿತ್ತಿಗೆ ಅಂಟಿ ಪಿಂಡವಾಗಿ ಬೆಳೆಯತೊಡಗುವುದು. ಈ ಗುಣ ಬೇರಾವ ಜಿಂಕೆಗಳಲ್ಲೂ ವರದಿಯಾಗಿಲ್ಲ. ಗರ್ಭಧರಿಸಿದ ಹೆಣ್ಣುಜಿಂಕೆ ಮರಿಹಾಕುವ ಮೊದಲು ತನ್ನೊಡನೆ ಇರಬಹುದಾದ ಹಿಂದಿನ ಪ್ರಾಯದ ಮರಿಗಳನ್ನೆಲ್ಲ ಓಡಿಸಿ ಕಾಡಿನಲ್ಲಿ ಅವಿತಿದ್ದು ಹತ್ತು ದಿವಸಗಳ ಅನಂತರ ಹೊಸ ಮರಿಗಳೊಂದಿಗೆ ಹಿಂತಿರುಗುತ್ತದೆ. ಮರಿಗಳ ಮೈಮೇಲೆ ಮೂರು ಸಾಲು ಬಿಳಿ ಚುಕ್ಕಿಗಳಿರುವುವು. ಕೀಚಲು ಸದ್ದು ಮಾಡುವುವು.

ಆಯಸ್ಸು[ಬದಲಾಯಿಸಿ]

ರೋ ಜಿಂಕೆಯ ಆಯಸ್ಸು ಸುಮಾರು 17 ವರ್ಷಗಳೆನ್ನಲಾಗಿದೆ. ಆದರೆ ಮೃಗಾಲಯಗಳಲ್ಲಿ 7-8 ವರ್ಷಗಳಿಗಿಂತ ಹೆಚ್ಚು ಕಾಲ ಬುದುಕುವುದಿಲ್ಲ.[೪]

ಉಲ್ಲೇಖಗಳು[ಬದಲಾಯಿಸಿ]

  1. Lovari, S.; Herrero, J.; Masseti, M.; Ambarli, H.; Lorenzini, R.; Giannatos, G. (2016). "Capreolus capreolus". IUCN Red List of Threatened Species. 2016: e.T42395A22161386. doi:10.2305/IUCN.UK.2016-1.RLTS.T42395A22161386.en. Retrieved 19 November 2021.
  2. Linnæus, C. (1758). "Cervus capreolus". Systema naturæ per regna tria naturæ, secundum classes, ordines, genera, species, cum characteribus, differentiis, synonymis, locis. Tomus I (in ಲ್ಯಾಟಿನ್) (10th ed.). Holmiæ (Stockholm): Laurentius Salvius. p. 78.
  3. Macdonald, David W.; Barrett, Priscilla (1993). Mammals of Europe. Oxford: Princeton University Press. pp. 211–214. ISBN 0-691-09160-9.
  4. Andersen, Reidar; Linnell, John D. C. (2000). "Irruptive potential in roe deer: Density-dependent effects on body mass and fertility". The Journal of Wildlife Management. 64 (3): 698–706. doi:10.2307/3802739. JSTOR 3802739. Retrieved 17 November 2020.

ಹೆಚ್ಚಿನ ಓದಿಗೆ[ಬದಲಾಯಿಸಿ]

  • Prior, Richard (1995).  ''The Roe Deer: Conservation of a Native Species''. Swan-Hill Press.

ಹೊರಗಿನ ಕೊಂಡಿಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: