ವಿಷಯಕ್ಕೆ ಹೋಗು

ರಾರ್ಕ್ವಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಾರ್ಕ್ವಲ್‍ಗಳು[೨]
Temporal range: Miocene–Recent[೧]
ನೀಲಿ ತಿಮಿಂಗಿಲ, ಬಲೀನಾಪ್ಟೆರಾ ಮಸ್ಕ್ಯುಲಸ್
Scientific classification e
ಕ್ಷೇತ್ರ: ಯೂಕ್ಯಾರ್ಯೋಟಾ
ಸಾಮ್ರಾಜ್ಯ: ಅನಿಮೇಲಿಯ
ವಿಭಾಗ: ಕಾರ್ಡೇಟಾ
ವರ್ಗ: ಮ್ಯಾಮೇಲಿಯಾ
ಗಣ: ಆರ್ಟಿಯೊಡ್ಯಾಕ್ಟೈಲ
ಕೆಳಗಣ: ಸೆಟೇಸೀ
ಸಣ್ಣಗಣ: ಮಿಸ್ಟಿಸೆಟಿ
ಮೇಲ್ಕುಟುಂಬ: ಬಲೀನೊಪ್ಟೆರಾಯ್ಡೀ
ಕುಟುಂಬ: ಬಲೇನೊಪ್ಟೆರಿಡೇ
Gray 1864
Type genus
Balaenoptera
Extant genera

Balaenoptera
Megaptera

Synonyms

Eschrichtiidae? Ellerman & Morrison-Scott 1951
Rhachianectidae Weber 1904

ರಾರ್ಕ್ವಲ್ ಸಿಟೇಸಿಯ ಗಣದ ಬಲೀನಾಪ್ಟಿರಿಡೀ ಕುಟುಂಬಕ್ಕೆ ಸೇರಿದ ಸಾಗರವಾಸಿ ತಿಮಿಂಗಿಲ.[೩][೪][೫] ಬಲೀನಾಪ್ಟಿರ ಜಾತಿಯ ಪೈಸೇಲಸ್, ಬೋಯಾಲಿಸ್, ಅಕ್ಯೂಟೊರಾಸ್ಟ್ರೇಟ್ ಮತ್ತು ಎಡೆನಿ ಎಂಬ ಪ್ರಭೇದಗಳಿಗೂ ಸಿಬಾಲ್ಡಸ್ ಜಾತಿಯ ಮಸ್ಕ್ಯುಲಸ್ ಪ್ರಭೇದಕ್ಕೂ ಸಾಮಾನ್ಯವಾಗಿ ಈ ಹೆಸರನ್ನು ಅನ್ವಯಿಸುವುದುಂಟು.

ಶಾರೀರಿಕ ಲಕ್ಷಣಗಳು

[ಬದಲಾಯಿಸಿ]

ಇವುಗಳ ಗಂಟಲು ಮತ್ತು ಎದೆಗಳ ಮೇಲೆ 2.5-5 ಸೆಂಮೀ ಆಳದ 10-1000 ಉದ್ದುದ್ದನೆಯ ಮಡಿಕೆಗಳಂಥ ತೋಡುಗಳುಂಟು. ಇದು ಇವುಗಳ ಬಲುಮುಖ್ಯ ಲಕ್ಷಣ. ಈ ಮಡಿಕೆಗಳಿಂದಲೇ ಈ ತಿಮಿಂಗಿಲಗಳಿಗೆ ರಾರ್ಕ್ವಲ್ ಎಂದು ಹೆಸರು ಬಂದಿರುವುದು. ಬಾಯಿ ತೆರೆದಾಗ ಅದರ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಈ ಮಡಿಕೆಗಳು ಹೆಚ್ಚಿಸುತ್ತವೆ.[೬] ಇವುಗಳ ಇನ್ನೊಂದು ಮುಖ್ಯ ಲಕ್ಷಣವೆಂದರೆ, ಮರಿಗಳು ಬೆಳೆದು ಪ್ರೌಢಾವಸ್ಥೆ ತಲುಪುತ್ತಿದ್ದಂತೆ ಅವುಗಳ ಬಾಯಲ್ಲಿರುವ ಹಲ್ಲುಗಳು ಉದುರಿಹೋಗಿ ಬದಲಿಗೆ ಆಹಾರವನ್ನು ಸೋಸುವ ಸಾಮರ್ಥ್ಯವುಳ್ಳ ಬಲೀನ್ ಎಂಬ ಸೋಸುಕ ರೂಪುಗೊಳ್ಳುವುದು.

ರಾರ್ಕ್ವಲ್‌ಗಳೆಲ್ಲವೂ ದೊಡ್ಡಗಾತ್ರದ ಪ್ರಾಣಿಗಳು. ದೇಹದ ಉದ್ದ ೯-೨೦ ಮೀ ಇರುತ್ತದೆ. ದೇಹದ ಆಕಾರ ಈಜಲು ಸಹಾಯಕವಾಗಿರುವಂತೆ ರೂಪಿತವಾಗಿದೆ. ಬಾಯಿಗಿಂತ ಕೊಂಚ ಹಿಂದೆ ದೇಹದ ಎರಡು ಪಾರ್ಶ್ವಗಳಲ್ಲಿ ಎರಡು ಈಜುರೆಕ್ಕೆಗಳೂ ಬೆನ್ನಮೇಲೆ ಒಂದು ಈಜುರೆಕ್ಕೆಯೂ ಇವೆ. ಈಜುವುದರಲ್ಲಿ ಬಲು ನಿಷ್ಣಾತವೆಂದು ಎನಿಸಿರುವ ಈ ತಿಮಿಂಗಿಲಗಳು ತುಂಬ ಶೀಘ್ರಗತಿಯಲ್ಲಿ ಈಜಬಲ್ಲವು; ಗಂಟೆಗೆ ೮ ಕಿಮೀ. ವೇಗದಲ್ಲಿ ಈಜುತ್ತವೆ ಎನ್ನಲಾಗಿದೆ. ಒಂಟೊಂಟಿಯಾಗಿಯೋ ದೊಡ್ಡ ಮಂದೆಗಳಲ್ಲೋ ಈಜುತ್ತ, ಬೆಳಗ್ಗೆ ಮತ್ತು ಸಾಯಂಕಾಲ ಆಹಾರವನ್ನು ಹುಡುಕುತ್ತಾ ಸಾಗುತ್ತವೆ.

ಮುಖ್ಯವಾಗಿ ಸೀಗಡಿ, ಕೋಪಿಪೋಡ, ಮುಂತಾದ ಸಣ್ಣಗಾತ್ರದ ಪ್ರಾಣಿಗಳನ್ನು ತಿಂದು ಬದುಕುತ್ತವೆ. ಕೆಲವು ಬಗೆಯವು ಮೀನು, ಷಾರ್ಕ್, ಸ್ಕ್ವಿಡ್ಡು ಮುಂತಾದವನ್ನೂ ಕಬಳಿಸುತ್ತವೆ.

ಸಂತಾನೋತ್ಪತ್ತಿ

[ಬದಲಾಯಿಸಿ]

ಇವುಗಳ ಸಂತಾನವೃದ್ಧಿಯ ಕಾಲ ಚಳಿಗಾಲ. ಒಂದು ಸೂಲಿಗೆ ಸಾಮಾನ್ಯವಾಗಿ ಒಂದೇ ಒಂದು ಮರಿ ಹುಟ್ಟುತ್ತದೆ. ಅಪೂರ್ವವಾಗಿ ಅವಳಿಗಳು ಹುಟ್ಟುವುದೂ ಉಂಟು. ಗರ್ಭಾವಸ್ಥೆಯ ಅವಧಿ ೧೦-೧೨ ತಿಂಗಳು; ೩ ೧/೨ - ೪ ವರ್ಷಗಳಲ್ಲಿ ಮರಿಗಳು ಪ್ರೌಢಾವಸ್ಥೆ ತಲುಪುತ್ತವೆ.

ನೀಲಿ ತಿಮಿಂಗಿಲ

[ಬದಲಾಯಿಸಿ]

ಸಿಬಾಲ್ಡಸ್ ಜಾತಿಯ ರಾರ್ಕ್ವಲ್ ತಿಮಿಂಗಿಲಕ್ಕೆ ನೀಲಿ ತಿಮಿಂಗಿಲ ಎಂಬ ಹೆಸರೂ ಇದೆ. ಅತ್ಯಂತ ದೊಡ್ಡ ಗಾತ್ರದ ತಿಮಿಂಗಿಲ ಇದು; ಲಭ್ಯ ಮಾಹಿತಿಯ ಪ್ರಕಾರ ಇದೇ ಅತ್ಯಂತ ಭಾರಿಗಾತ್ರದ ಸ್ತನಿ. ವಯಸ್ಕ ತಿಮಿಂಗಿಲ ಸುಮಾರು ೩೦ಮೀ. ಉದ್ದವೂ ೧೧೦ ಟನ್ ಭಾರವೂ ಇರುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. "Family Balaenopteridae Gray 1864 (rorqual)". Fossilworks. Archived from the original on 26 ಮೇ 2022. Retrieved 9 April 2018.
  2. Mead, J. G.; Brownell, R. L., Jr. (2005). "Order Cetacea". In Wilson, D. E.; Reeder, D. M (eds.). Mammal Species of the World (3rd ed.). Johns Hopkins University Press. pp. 723–743. ISBN 978-0-8018-8221-0. OCLC 62265494. {{cite book}}: Invalid |ref=harv (help)CS1 maint: multiple names: authors list (link)
  3. Britannica, The Editors of Encyclopaedia. "rorqual". Encyclopedia Britannica, 5 Oct. 2018, https://www.britannica.com/animal/rorqual. Accessed 13 October 2023.
  4. "Rorquals (Balaenopteridae) ." Grzimek's Animal Life Encyclopedia. . Encyclopedia.com. 19 Sep. 2023 <https://www.encyclopedia.com>.
  5. https://eol.org/pages/7660
  6. Minasian, Stanley M.; Balcomb, Kenneth C.; Foster, Larry, eds. (1984). The World's Whales: The Complete Illustrated Guide. New York: The Smithsonian Institution. p. 18. ISBN 978-0-89599-014-3.

ಹೊರಗಿನ ಕೊಂಡಿಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: