ರಾಮಕೃಷ್ಣ ವಿ. ಹೊಸೂರು
ರಾಮಕೃಷ್ಣ ವಿ. ಹೊಸೂರು. | |
---|---|
Born | ೧೬ ಮೇ ೧೯೫೩ |
Occupation | ಬಯೋಫಿಸಿಕಲ್ ವಿಜ್ಞಾನಿ |
Spouse | ಮೇಧಾವಿನಿ ಹೊಸೂರು |
Children | ಪವನ್ ಹೊಸೂರು(ಮಗ) ಕೀರ್ತಿ ಹೊಸೂರು ರೈ(ಮಗಳು) |
Awards | ಪದ್ಮಶ್ರೀ ಬ್ರೂಕರ್ ಯಂಗ್ ಸೈಂಟಿಸ್ಟ್ ಅವಾರ್ಡ್ , ಐಎನ್ಎಸ್ಎ ಯಂಗ್ ಸೈಂಟಿಸ್ಟ್ ಮೆಡಲ್ , ಬಿ.ಎಮ್.ಬಿರ್ಲಾ ಪ್ರಶಸ್ತಿ , ಸೊಸೈಟಿ ಫಾರ್ ಕ್ಯಾನ್ಸರ್ ರಿಸರ್ಚ್ ಅವಾರ್ಡ್ , ಜೆ.ಸಿ.ಬೋಸ್ ನ್ಯಾಷನಲ್ ಫೆಲೋಶಿಪ್ , ಪ್ರೊ.ಜಿ.ಎನ್.ರಾಮಚಂದ್ರನ್ ಚಿನ್ನದ ಪದಕ , ಆಚಾರ್ಯ ಪ್ರಫುಲ್ಲ ಚಂದ್ರ ರೈ ಮೆಮೊರಿಯಲ್ ಅವಾರ್ಡ್ , ಫೆಲೋ ಆಫ್ ಇಂಟರ್ನ್ಯಾಷನಲ್ ಸೊಸೈಟಿ ಆಫ್ ಮ್ಯಾಗ್ನೆಟಿಕ್ ರೆಸೊನೆನ್ಸ್ |
ಪ್ರೊಫೆಸರ್ ರಾಮಕೃಷ್ಣ ವಿಜಯಾಚಾರ್ಯ ಹೊಸೂರು(೧೬ ಮೇ ೧೯೫೩) ರವರು ಭಾರತೀಯ ಬಯೋಫಿಸಿಕಲ್ ವಿಜ್ಞಾನಿ . ಇವರು ಪರಮಾಣು ಮ್ಯಾಗ್ನೆಟಿಕ್ ರೆಸೋನೆನ್ಸ್ ಮತ್ತು ಆಣ್ವಿಕ ಬಯೋಫಿಸಿಕ್ಸ್ ಕ್ಷೇತ್ರಗಳಲ್ಲಿನ ಪರಿಣತಿಗೆ ಹೆಸರುವಾಸಿಯಾಗಿದ್ದಾರೆ .[೧] [೨] [೩]ಭಾರತ ಸರಕಾರವು ೨೦೧೪ ರಲ್ಲಿ , ಭಾರತದ ನಾಲ್ಕನೇ ಅತ್ಯುನ್ನತ ಪುರಸ್ಕಾರವಾದ ಪದ್ಮಶ್ರೀ ಪ್ರಶಸ್ತಿಯನ್ನು ಹೊಸೂರವರ ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರಗಳಿಗೆ ನೀಡಿದ ಕೊಡುಗೆಗಳಿಗಾಗಿ ನೀಡಿ ಗೌರವಿಸಲಾಯಿತು.[೪]
ಜನನ
[ಬದಲಾಯಿಸಿ]ರಾಮಕೃಷ್ಣ ವಿ. ಹೊಸೂರು ರವರು ೧೬ ಮೇ ೧೯೫೩ ರಂದು ದಕ್ಷಿಣ ಭಾರತದ ಕರ್ನಾಟಕ ರಾಜ್ಯದಲ್ಲಿ ಜನಿಸಿದರು . [೫]
ಶಿಕ್ಷಣ
[ಬದಲಾಯಿಸಿ]ರಾಮಕೃಷ್ಣ ವಿಜಯಾಚಾರ್ಯ ಹೊಸೂರು ರವರು
- ಕರ್ನಾಟಕ ವಿಶ್ವವಿದ್ಯಾಲಯದಿಂದ ೫ ನೇ ಶ್ರೇಯಾಂಕವನ್ನು ಪಡೆದು ರಸಾಯನಶಾಸ್ತ್ರ , ಭೌತಶಾಸ್ತ್ರ ಮತ್ತು ಗಣಿತದಂತಹ ಐಚ್ಛಿಕ ವಿಷಯಗಳಲ್ಲಿ ಪದವಿಯನ್ನು ಪಡೆದರು .
- ಭಾರತೀಯ ತಂತ್ರಜ್ಞಾನ ಸಂಸ್ಥೆ , ಮುಂಬೈ ( ಐಐಟಿ - ಬಿ) ನಿಂದ ರಸಾಯನಶಾಸ್ತ್ರದಲ್ಲಿ ಎಂಎಸ್ಸಿ ಮಾಡಿದರು .
- ೧೯೭೮ ರಲ್ಲಿ ಮುಂಬೈನ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ (ಟಿಐಎಫ್ಆರ್) ನಿಂದ ಪಿಎಚ್ಡಿ ಪದವಿಯನ್ನು ಪಡೆದರು .
ವೃತ್ತಿಜೀವನ
[ಬದಲಾಯಿಸಿ]ಹೊಸೂರು ರವರು ಆಗಸ್ಟ್ ೧೯೭೮ ರಲ್ಲಿ ಟಿಐಎಫ್ಆರ್ ನಲ್ಲಿ ಸೇರ್ಪಡೆಯಾಗುವ ಮೂಲಕ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು . ೧೯೮೬ ರಲ್ಲಿ , ಅವರು ರೀಡರ್ನ ಹುದ್ದೆಗೆ ಟಿಐಎಫ್ಆರ್ ಅನ್ನು ಸೇರಿಕೊಂಡರು . ಐದು ವರ್ಷಗಳ ನಂತರ , ಅವರು ಅಸೋಸಿಯೇಟ್ ಪ್ರಾಧ್ಯಾಪಕರಾಗಿ ಮತ್ತು ೧೯೯೬ ರಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು . ಅವರು ೨೦೦೩ ರಿಂದ ರಾಸಾಯನಿಕ ವಿಜ್ಞಾನ ಇಲಾಖೆಯಲ್ಲಿ ಟಾಟಾ ಇನ್ಸ್ಟಿಟ್ಯೂಟ್ ನ ಹಿರಿಯ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ . ಇವರು ೨೦೦೨ ರಿಂದ ೨೦೦೪ ರವರೆಗೆ ಇನ್ಸ್ಟಿಟ್ಯೂಟ್ ನ ವಿಜಿಲೆನ್ಸ್ ಅಧಿಕಾರಿ ಆಗಿದ್ದರು ಮತ್ತು ೨೦೦೨ ರಿಂದ ಇಲ್ಲಿಯವರೆಗೂ ಹೈ ಫೀಲ್ಡ್ ನ್ಯೂಕ್ಲಿಯರ್ ಮ್ಯಾಗ್ನೆಟಿಕ್ ರೆಸೊನೆನ್ಸ್ ನ ರಾಷ್ಟ್ರೀಯ ಸೌಲಭ್ಯಕ್ಕಾಗಿ ಸಂಚಾಲಕರಾಗಿದ್ದಾರೆ . ರಾಮಕೃಷ್ಣ ಹೊಸೂರು ರವರು ಮದುವೆಯಾಗಿದ್ದು , ಇಬ್ಬರು ಮಕ್ಕಳಿದ್ದಾರೆ ಮತ್ತು ಅವರ ಕುಟುಂಬವು ಮುಂಬೈನಲ್ಲಿ ವಾಸ ಮಾಡುತ್ತಿದ್ದಾರೆ . [೭]
ಸಂಶೋಧನಾ ವಿಭಾಗಗಳು
[ಬದಲಾಯಿಸಿ]- ಮಾಲಿಕ್ಯೂಲರ್ ಬಯೋಫಿಸಿಕ್ಸ್ .[೮]
- ಸ್ಟ್ರಕ್ಚರಲ್ ಬಯಾಲಜಿ .
- ಬಯೋಮಾಲಿಕ್ಯೂಲರ್ ಎನ್ಎಂಆರ್ .[೯]
- ಬಯೋಫಿಸಿಕಲ್ ಕೆಮಿಸ್ಟ್ರಿ .
ಪಬ್ಲಿಕೇಷನ್ಸ್
[ಬದಲಾಯಿಸಿ]- ಲೇಖನಗಳು: ೨೦೫ (ನಿಯತಕಾಲಿಕಗಳು :೧೬೭ , ಪುಸ್ತಕ ಲೇಖನಗಳು : ೯ , ಸಮಾವೇಶದ ಪ್ರಕ್ರಿಯೆಗಳು : ೨೭ , ಜನಪ್ರಿಯ : ೨) .
- ಪುಸ್ತಕಗಳು : ೩ (೧ ಲಿಖಿತ ಮತ್ತು ೨ ಸಂಪಾದಿತ) .
- ಪುಸ್ತಕ ವಿಮರ್ಶೆಗಳು: ೩ .
- ತಾಂತ್ರಿಕ ವರದಿಗಳು: ೩ .[೧೦]
ಪ್ರಶಸ್ತಿಗಳು
[ಬದಲಾಯಿಸಿ]- ಯಂಗ್ ಸೈಂಟಿಸ್ಟ್ ಅವಾರ್ಡ್ , ಬ್ರೂಕರ್ ಕಾರ್ಪೊರೇಶನ್ - ೧೯೮೩ .[೧೧]
- ಯಂಗ್ ಸೈಂಟಿಸ್ಟ್ ಮೆಡಲ್ , ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿ - ೧೯೮೪.
- ಬಾಂಬೆ ವಿಶ್ವವಿದ್ಯಾಲಯದ ಬಿ.ಡಿ.ತಿಲಕ್ ಲೆಕ್ಚರ್ ಪ್ರಶಸ್ತಿ - ೧೯೮೯ .
- ಬಿ.ಎಮ್.ಬಿರ್ಲಾ ಪ್ರಶಸ್ತಿ , ಬಿರ್ಲಾ ಸೈನ್ಸ್ ಸೆಂಟರ್ - ೧೯೯೨ .[೧೨]
- ಕ್ಯಾನ್ಸರ್ ರಿಸರ್ಚ್ ಸೊಸೈಟಿಯ ೩ ನೇ ವಾರ್ಷಿಕ ಪ್ರಶಸ್ತಿ - ೧೯೯೮ .
- ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿ ಯಿಂದ ಆರ್.ಕೆ.ಅಸುಂಡಿ ಲೆಕ್ಚರ್ ಪ್ರಶಸ್ತಿ - ೧೯೯೮ .
- ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿಯಿಂದ ಡಾ.ಜಗದೀಶ್ ಶಂಕರ್ ಲೆಕ್ಚರ್ ಪ್ರಶಸ್ತಿ - ೨೦೦೩.
- ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಬಯಾಲಜಿ ಯಿಂದ ಐಐಸಿಬಿ ಫೌಂಡೇಶನ್ ಡೇ ಲೆಕ್ಚರ್ ಅವಾರ್ಡ್ - ೨೦೦೪.
- ತ್ರಿವೇಂಡ್ರಮ್ ನ ಪ್ರಾದೇಶಿಕ ಸಂಶೋಧನಾ ಪ್ರಯೋಗಾಲಯದ ಆರ್.ಆರ್.ಎಲ್. ಫೌಂಡೇಷನ್ ಡೇ ಅವಾರ್ಡ್ - ೨೦೦೬ .
- ಜೆ.ಸಿ.ಬೋಸ್ ನ್ಯಾಷನಲ್ ಫೆಲೋಶಿಪ್ , ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ , ಭಾರತ ಸರಕಾರ - ೨೦೦೭ .
- ಇಂಡಿಯನ್ ಕೆಮಿಕಲ್ ಸೊಸೈಟಿಯ , ಪಾದ್ರಿ ಯಡ್ಡನಪಳ್ಳಿ ಮೆಮೊರಿಯಲ್ ಲೆಕ್ಚರ್ ಅವಾರ್ಡ್ - ೨೦೦೯.[೧೩]
- ಪ್ರೊ.ಜಿ.ಎನ್.ರಾಮಚಂದ್ರನ್ ಚಿನ್ನದ ಪದಕ - ಕೌನ್ಸಿಲ್ ಫಾರ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ - ೨೦೦೯.
- ಆಚಾರ್ಯ ಪ್ರಫುಲ್ಲಾ ಚಂದ್ರ ರೈ ಸ್ಮಾರಕ ಪ್ರಶಸ್ತಿ , ಇಂಡಿಯನ್ ಕೆಮಿಕಲ್ ಸೊಸೈಟಿ - ೨೦೧೧ .
- ಪದ್ಮಶ್ರೀ ಪುರಸ್ಕಾರ - ೨೦೧೪ .[೧೪]
ಉಲ್ಲೇಖಗಳು
[ಬದಲಾಯಿಸಿ]- ↑ INSA
- ↑ "TIFR". Archived from the original on 2018-07-17. Retrieved 2019-05-16.
- ↑ http://www.tifr.res.in/~hosur/
- ↑ ಪದ್ಮಶ್ರೀ ೨೦೧೪
- ↑ ರಾಮಕೃಷ್ಣ ವಿ.ಹೊಸೂರು
- ↑ "ಶಿಕ್ಷಣ". Archived from the original on 2019-05-18. Retrieved 2019-05-18.
- ↑ https://alchetron.com/Ramakrishna-V-Hosur
- ↑ https://www.cbs.ac.in/research/chemistry
- ↑ https://chemistry.stanford.edu/events/ramakrishna-v-hosur-department-chemical-sciences
- ↑ ಪಬ್ಲಿಕೇಷನ್ಸ್
- ↑ ಪ್ರಶಸ್ತಿಗಳು
- ↑ B.M.Birla Award
- ↑ http://www.tifr.res.in/~hosur/
- ↑ "ಪದ್ಮ ಪುರಸ್ಕಾರ ವಿಜೇತರು". Archived from the original on 2018-10-15. Retrieved 2019-05-18.