ರಾಣಿಪುರಂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಾಣಿಪುರಂ[ಬದಲಾಯಿಸಿ]

ರಾಣಿಪುರಂ ಕೇರಳದ ಉತ್ತರದ ತುದಿಯಲ್ಲಿರುವ ಪ್ರಸಿದ್ಧ ಶಿಖರ. ಸಮುದ್ರಮಟ್ಟದಿಂದ 750 ಮೀಟರ್ ಎತ್ತರದಲ್ಲಿರುವ ರಾಣಿಪುರಂ ಕೇರಳಕಾಸರಗೋಡು ಜಿಲ್ಲೆಯ ವೆಳ್ಳರಿಕುಂಡು ತಾಲೂಕಿನಲ್ಲಿದೆ. ವಿವಿಧ ವನ್ಯ ಜೀವಿಗಳು ಸೇರಿದಂತೆ ಆನೆಗಳ ಹಿಂಡುಗಳೂ ಇಲ್ಲಿವೆ. ರಾಣೀಪುರಂ ಒಂದು ಪ್ರಸಿದ್ಧ ಪ್ರವಾಸೀ ತಾಣವಾಗಿದೆ. ಹಿಂದೆ ಮದತುಮಲ ಎಂದು ಕರೆಯಲ್ಪಡುತ್ತಿದ್ದ ರಾಣಿಪುರಂ ಕರ್ನಾಟಕದ ಗಡಿಭಾಗದಲ್ಲಿದೆ. ಅತ್ಯುತ್ತಮ ಟ್ರೆಕ್ಕಿಂಗ್ ಅನುಭವ ನೀಡುವ ರಮ್ಯ-ರಮಣೀಯ ತಾಣ ಇದಾಗಿದೆ. ರಾಣಿಪುರಂ ಬಹುವಿಧ ಸಸ್ಯವರ್ಗಗಳನ್ನು ಹೊಂದಿರುವ ನಿತ್ಯಹರಿದ್ವರ್ಣ ಚೋಳ ಕಾಡುಗಳು, ಮನ್ಸೂನ್ ಕಾಡುಗಳು ಮತ್ತು ಹಸಿರು ಹುಲ್ಲುಗಾವಲುಗಳನ್ನು ಒಳಗೊಂಡಿದೆ. ದೈನಂದಿನ ಒತ್ತಡದಿಂದ ನೆಮ್ಮದಿ ಪಡೆಯಲು ರಾಣಿಪುರಂ ಸೂಕ್ತ ಸ್ಥಳವಾಗಿದೆ. ವಾರಾಂತ್ಯವನ್ನು ಪ್ರಕೃತಿ ಜೊತೆ ಕಳೆಯಲು ಇದು ಸಹಾಯಮಾಡುತ್ತದೆ. ನೌಸರ್ಗಿಕ ಸಂಪನ್ಮೂಲಗಳ ಗಣಿಯಾದ ರಾಣಿಪುರಂ ಗಿರಿಧಾಮವು ಉತ್ತಮ ಅನುಭವ ನೀಡುತ್ತದೆ.

ವಿಶೇಷತೆ[ಬದಲಾಯಿಸಿ]

ಕಾಸರಗೋಡು ಪಟ್ಟಣದಿಂದ 85 ಕಿ.ಮೀ ದೂರದಲ್ಲಿರುವ ರಾಣಿಪುರಂ ಹಸಿರುಯುಕ್ತ ಶಿಖರಗಳ ಸೌಂಧರ್ಯವನ್ನು ಹೊತ್ತುಕೊಂಡಿದೆ. ಮೊದಲು ಮದತುಮಲ ಎಂದು ಕರೆಯಲಾಗುತ್ತಿದ್ದ ರಾಣಿಪುರಂ ನ್ನು ಕೊಟ್ಟಾಯಂ ಕ್ಯಾಥೋಲಿಕ್ ಡಯೋಸಿಸ್ ವತಿಯಿಂದ ವಸಾಹತಿನ ಉದ್ದೇಶಕ್ಕಾಗಿ ಕೊಂಡುಕೊಳ್ಳಲಾಗಿತ್ತು. ಮದತುಮಾಲದ ವಿಸ್ತಾರವಾದ ಕಾಡುಗಳು ಕರ್ನಾಟಕದ ಅರಣ್ಯಗಳೊಂದಿಗೆ ವಿಲೀನಗೊಂಡು, ತಲಕಾವೇರಿ ವನ್ಯಜೀವಿ ಅಭಯಾರಣ್ಯವನ್ನು ರೂಪಿಸುತ್ತದೆ. ವಿವಿಧ ಕಾಡುಗಳು, ಹುಲ್ಲುಗಾವಲುಗಳಿಂದ ಸದಾ ಹಸಿರಿನಿಂದ ಕಾಣುವ ಈ ರಾಣಿಪುರಂ ಅದಕ್ಕಾಗಿಯೇ ಹೆಸರುವಾಸಿ. ರಾಣಿಪುರಂ ವನ್ಯಜೀವಿ ಅಭಯಾರಣ್ಯವು ಜೀವವೈವಿಧ್ಯಗಳನ್ನು ಸಂರಕ್ಷಿಸುವಲ್ಲಿ ಪ್ರಮುಖ ಕಾರ್ಯವೆಸಗುತ್ತದೆ. ಮತ್ತೇರಿದ ಮರಗಳು, ಚಿಲಿಪಿಲಿ ಹಕ್ಕಿಗಳ ಕಲರವ ಭವ್ಯವಾದ ಅನುಭವ ನೀಡುತ್ತವೆ. ಅಳಿವಿನಂಚಿನಲ್ಲಿರುವ ಕೆಲವು ಪ್ರಾಣಿ ಪಕ್ಷಿಗಳಿಗೆ ರಾಣಿಪುರಂ ರಕ್ಷಣೆ ನೀಡುತ್ತದೆ.[೧] ‘ಮಾಣಿ’ ಎಂದು ಕರೆಯಲ್ಪಡುವ ರಾಣಿಪುರಂ ನ ಬೆಟ್ಟದ ತುದಿಯನ್ನು ತಲುಪಲು ಕಾಲುದಾರಿಯ ಮೂಲಕ ದಟ್ಟ ಅರಣ್ಯದಲ್ಲಿ ಚಲಿಸಬೇಕಾಗುತ್ತದೆ. ಕಾಡಿನ ಸುತ್ತಲಿನ ಶ್ರೀಮಂತ [[ಸಸ್ಯ]ಜಾತಿ ಮತ್ತು ಪ್ರಾಣಿಕೋಟಿಗಳು ರಾಣಿಪುರಂ ನ ಪ್ರಾಭಲ್ಯವನ್ನು ಹೆಚ್ಚಿಸುತ್ತದೆ. ಹಾಗೆಯೇ ದಟ್ಟವಾದ ಕಾಡಿನ ಮೂಲಕ ನಡೆದುಕೊಂಡು ಹೋಗುವುದು ಅತ್ಯಂತ ಆಸಕ್ತಿದಾಯಕ ಅನುಭವಗಳಲ್ಲಿ ಒಂದಾಗಿದೆ. ಗಂಟೆಗಳ ನಡಿಗೆಯ ನಂತರ ಊಟಿಗೆ ಹೋಲುವ ಬೆಟ್ಟದ ತುದಿಗೆ ಬಂದು ತಲುಪಬಹುದು. ಸಮೃದ್ಧವಾದ ಹುಲ್ಲುಗಾವಲಿನ ರಮಣೀಯ ದೃಶ್ಯದ ಜೊತೆಗೆ ಶುದ್ಧ ಗಾಳಿಯು ಮನಸ್ಸಿಗೆ ಮುದನೀಡುತ್ತದೆ. ಚಾರಣಿಗರು, ಪ್ರಕೃತಿ ಪ್ರೇಮಿಗಳು ಮತ್ತು ಪಕ್ಷಿ ವೀಕ್ಷಕರಿಗೆ ಇದು ಸೂಕ್ತವಾದ ತಾಣವಾಗಿದೆ. ಕೇರಳದ ಪ್ರಸಿದ್ಧ ಗಿರಿಧಾಮಗಳಲ್ಲೊಂದಾದ ರಾಣಿಪುರಂ ಪ್ರವಾಸೋದ್ಯಮಕ್ಕೆ ಪುಷ್ಟಿ ನೀಡುತ್ತದೆ. ಕಾನ್ಹಂಗಾಡ್, ಪಥನಾಡಿ ರಸ್ತೆಯ ಮೂಲಕವೂ ರಾಣಿಪುರಂ ತಲುಪಬುದು. ಕಾನ್ಹಂಗಾಡ್ ನಿಂದ 10 ಕಿ.ಮೀ ದೂರದಲ್ಲಿರುವ ಪಥನಾಡಿಯಿಂದ ಜೀಪ್ ಗಳನ್ನು ಬಾಡಿಗೆಗೆ ಪಡೆಯಬಹುದಾಗಿದೆ.

ರಾಣಿಪುರಂ ಶಿಖರ[ಬದಲಾಯಿಸಿ]

ಸಮುದ್ರ ಮಟ್ಟದಿಂದ 1002 ಕಿ.ಮೀ ಎತ್ತರದಲ್ಲಿರುವ ರಾಣಿಪುರಂ ಕೇರಳದ ಊಟಿ ಎಂದೂ ಜನಪ್ರಿಯವಾಗಿದೆ. [೨]ಮುಖ್ಯವಾಗಿ ರಾಣಿಪುರಂ ಪರಿಸರ ಪ್ರವಾಸೋದ್ಯಮಕ್ಕೆ ಹೆಸರುವಾಸಿ. 1930 ರವರೆಗೆ ರಾಣಿಪುರಂ ಮದತುಮಾಲ ಎಂದು ಕರೆಯಲ್ಪಡುತ್ತಿತ್ತು. [೩] ರಾಣಿಪುರಂ ನಿತ್ಯಹರಿದ್ವರ್ಣ ಕಾಡುಗಳು, ಮನ್ಸೂನ್ ಕಾಡುಗಳನ್ನು ಹೊಂದಿದೆ. ಶೋಲಾ ಮರಗಳು, ಇನ್ನಿತರ ವಿಶೇಷ ಅರಣ್ಯ ಸಂಪತ್ತನ್ನು ಹೊಂದಿದೆ. ಈ ಕಾಡುಗಳು ಹಲವಾರು ಪ್ರಾಣಿಪಕ್ಷಿಗಳಿಗೆ ವಾಸಸ್ಥಾನವಾಗಿದೆ. ಜಿಂಕೆ, ಆನೆಗಳು, ವಿವಿಧ ರೀತಿಯ ಮಂಗಗಳು, ಪಕ್ಷಿ ಪ್ರಭೇದಗಳು ಇಲ್ಲಿ ಕಾಣಸಿಗುತ್ತವೆ. ಕರ್ನಾಟಕತಲಕಾವೇರಿ ಅಭಯಾರಣ್ಯದೊಂದಿಗೆ ರಾಣಿಪುರಂ ತನ್ನ ಗಡಿಯನ್ನು ವಿಲೀನಗೊಳಿಸುತ್ತದೆ. ಕೇರಳದ ಇತರ ಗಿರಿಧಾಮಗಳಂತೆ ರಾಣಿಪುರಂ ಅತ್ಯಂತ ಜನಪ್ರಿಯ ಚಾರಣ ಸ್ಥಳವಾಗಿದೆ. ಎತ್ತರದ ಟ್ರೆಕ್ಕಿಂಗ್ ಪಾಯಿಂಟ್ ನ್ನು ‘ಮಣಿಮಾಲಾ’ ಎಂದು ಕರೆಯಲಾಗುತ್ತದೆ.ಇಲ್ಲಿನ ಹಸಿರ ಸೌಂದರ್ಯ, ಸ್ವಚ್ಛವಾದ ತಂಪು ಗಾಳಿ ಚಾರಣದ ದಣವು ನಿವಾರಿಸುವಂತೆ ಮಾಡುತ್ತದೆ. ಪ್ರಕೃತಿಯ ಮಡಿಲ ಸೌಂಧರ್ಯದಲ್ಲಿ ಆಯಾಸ ಮರೆಯಾಗುತ್ತದೆ. ಚಾರಣ ಮಾಡುವ ವೇಳೆ ಅಪರೂಪದ ಔಷಧೀಯ ಸಸ್ಯಗಳನ್ನು ಕಾಣಬಹುದು. ವಿವಿಧ ರೀತಿಯ ಜೀವಿಗಳು, ಹಲವು ಪ್ರಭೇದಗಳ ಪಕ್ಷಿಗಳನ್ನೂ ಗುರುತಿಸಬಹುದು. ಛಾಯಾಚಿತ್ರಗಾರರೂ ಇವುಗಳ ಪ್ರಯೋಜನ ಪಡೆದುಕೊಳ್ಳುತ್ತಾರೆ. ಈ ಚಾರಣವು ರೋಮಾಂಚನಕಾರೀ ಅನುಭವವನ್ನೂ ನೀಡುತ್ತದೆ.

ಪ್ರವಾಸೋದ್ಯಮ[ಬದಲಾಯಿಸಿ]

ಅರಣ್ಯ ವೀಕ್ಷಣೆ, ಆನೆಗಳ ವೀಕ್ಷಣೆಗೆ ಜೀಪ್ ಸವಾರಿಯ ಮೊರೆ ಹೋಗಬಹುದಾಗಿದೆ. ದಟ್ಟ ಅರಣ್ಯರಾಶಿಯನ್ನು ಹೊಂದಿರುವ ರಾಣಿಪುರಂ ನಲ್ಲಿ ಮಳೆಯ ಪ್ರಮಾಣವೂ ಅಧಿಕವಾಗಿದೆ. ಈ ಗಿರಿಧಾಮವು ವಿವಿಧ ಪ್ರಭೇದಗಳ ಚಿಟ್ಟೆ-ಪಾತರಗಿತ್ತಿಗಳನ್ನೂ ಹೊಂದಿದೆ. ಕೇರಳ ಪ್ರವಾಸೋದ್ಯಮ ಇಲಾಖೆಯು ಪ್ರವಾಸಿಗರನ್ನು ಇನ್ನಷ್ಟು ಆಕರ್ಷಿಸಲು ಸಾಹಸ ಕ್ರೇಡೆಗಳನ್ನೂ ಆಯೋಜಿಸಿದೆ. ರಾಣಿಪುರಂ ಗಿರಿಧಾಮವನ್ನು ಭೇಟಿ ಮಾಡಲು ಅಕ್ಟೋಬರ್ ತಿಂಗಳು ಸೂಕ್ತ ಸಮಯವಾಗಿದೆ. ಇಲ್ಲಿಗೆ ಹತ್ತಿರದ ರೈಲು ನಿಲ್ದಾಣವೆಂದರೆ ಕಾಸರಗೋಡು ರೈಲು ನಿಲ್ದಾಣ ಹಾಗೂ ಸಮೀಪದ ಬಸ್ ತಂಗುದಾಣವೆಂದರೆ ಕಾನ್ಹಂಗಾಡ್. [೪] ಅತ್ಯಂತ ನೈಸರ್ಗಿಕವಾದ ಈ ಪ್ರವಾಸೀ ತಾಣವು ಎಲ್ಲರ ಮೆಚ್ಚಿನ ವಾರಾಂತ್ಯದ ತಾಣವಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. https://www.thrillophilia.com/tours/ranipuram-trek
  2. https://travel.manoramaonline.com/travel/getting-about-kerala/kasaragod/ranipuram-kasaragod-very-own-ootty-hills-trekking-mist-travel.html
  3. https://www.thrillophilia.com/tours/ranipuram-trek
  4. https://adventurecompass.com/tour/4347[ಶಾಶ್ವತವಾಗಿ ಮಡಿದ ಕೊಂಡಿ]