ವಿಷಯಕ್ಕೆ ಹೋಗು

ಯಮುನೋತ್ರಿ

Coordinates: 31°01′N 78°27′E / 31.01°N 78.45°E / 31.01; 78.45
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಯಮುನೋತ್ರಿ
Yamunotri
ನದಿ ದಡ
ಯಮುನೊತ್ರಿ ನದಿ ಯಮುನೊತ್ರೀ
ಯಮುನೊತ್ರಿ ನದಿ ಯಮುನೊತ್ರೀ
Lua error in ಮಾಡ್ಯೂಲ್:Location_map at line 525: Unable to find the specified location map definition: "ಮಾಡ್ಯೂಲ್:Location map/data/India Uttarakhand" does not exist.
Coordinates: 31°01′N 78°27′E / 31.01°N 78.45°E / 31.01; 78.45
ದೇಶಭಾರತ
ರಾಜ್ಯಉತ್ತರಾ ಖಂಡ್
ಜಿಲ್ಲೆಉತ್ತರಕಾಶಿ
Vehicle registrationಯುಕೆ
Websiteuk.gov.in

ಯಮುನೋತ್ರಿ ಭಾರತಉತ್ತರಾಖಂಡ ರಾಜ್ಯದಲ್ಲಿನ ಒಂದು ತೀರ್ಥಕ್ಷೇತ್ರ. ಯಮುನಾ ನದಿಯ ಉಗಮಸ್ಥಾನವಾದ ಯಮುನೋತ್ರಿ ಹಿಮಾಲಯದ ಅತಿ ಪವಿತ್ರ ಚತುರ್ಧಾಮಗಳ ಪೈಕಿ ಒಂದು. ಉತ್ತರಾಖಂಡದ ಮುಖ್ಯ ನಗರಗಳಾದ ಹರಿದ್ವಾರ, ರಿಷಿಕೇಶ ಮತ್ತು ಡೆಹ್ರಾಡೂನ್‍‍ಗಳಿಂದ ಪೂರ್ಣ ಒಂದು ದಿನದ ಪ್ರಯಾಣ ಮಾಡಿ ಯಮುನೋತ್ರಿಯನ್ನು ತಲುಪಬಹುದಾಗಿದೆ. ದಾರಿಯ ಕೊನೆಯ ೧೩ ಕಿ.ಮೀ. ದೂರವನ್ನು ಕಾಲ್ನಡೆಯಲ್ಲಿ ಅಥವಾ ಪಲ್ಲಕ್ಕಿ ಯಾ ಕುದುರೆಗಳ ಮೇಲೆ ಕುಳಿತು ಕ್ರಮಿಸಬೇಕು. ೧೮ನೆಯ ಶತಮಾನದಲ್ಲಿ ಜೈಪುರದ ಮಹಾರಾಣಿ ಗುಲಾರಿಯಾರಿಂದ ಕಟ್ಟಿಸಲ್ಪಟ್ಟ ಯಮುನೋತ್ರಿ ದೇವಾಲಯವು ವಿಪರೀತ ಪ್ರಕೃತಿಯಿಂದ ಹಲವು ಬಾರಿ ಹಾನಿಗೊಳಗಾಗಿದೆ. ಯಮನ ಸಹೋದರಿ ಯಮುನೆಯ ಈ ದೇವಾಲಯದ ಪರಿಸರದಲ್ಲಿ ಹಲವು ಬಿಸಿನೀರಿನ ಕುಂಡಗಳಿವೆ. ಈ ಕುಂಡದೊಳಕ್ಕೆ ಅಕ್ಕಿ ಅಥವಾ ಆಲೂಗಡ್ಡೆಗಳನ್ನು ಬಟ್ಟೆಯೊಳಗೆ ಕಟ್ಟಿ ಇಳಿಬಿಟ್ಟು ಬೇಯಿಸಲಾಗುತ್ತದೆ. ಬೆಂದ ಈ ವಸ್ತುಗಳನ್ನು ದೇವಿಗೆ ಸಮರ್ಪಿಸಿ ಪ್ರಸಾದದ ರೂಪದಲ್ಲಿ ಭಕ್ತರು ತೆಗೆದುಕೊಂಡು ಮರಳುತ್ತಾರೆ. ಸಮುದ್ರಮಟ್ಟದಿಂದ ೩೨೩೫ ಮೀ. ಎತ್ತರದಲ್ಲಿರುವ ಯಮುನೋತ್ರಿ ಚತುರ್ಧಾಮಗಳ ಪೈಕಿ ಅತ್ಯಂತ ಮೇಲ್ಭಾಗದಲ್ಲಿದೆ. ಹಿಮಾವೃತ ಬಂದರ್‌ಪೂಂಛ್ ಪರ್ವತಶ್ರೇಣಿಯ ತಪ್ಪಲಲ್ಲಿರುವ ಯಮುನೋತ್ರಿ ಅದ್ಭುತ ಪ್ರಕೃತಿ ಸೌಂದರ್ಯದ ತಾಣವಾಗಿದೆ. ಕೇದಾರನಾಥ, ಬದರಿನಾಥ ಮತ್ತು ಗಂಗೋತ್ರಿ ಕ್ಷೇತ್ರಗಳಂತೆ ಯಮುನೋತ್ರಿ ಧಾಮವು ಸಹ ಚಳಿಗಾಲದ ೬ ತಿಂಗಳುಗಳ ಕಾಲ ಸಂಪೂರ್ಣವಾಗಿ ಹಿಮದಲ್ಲಿ ಮುಚ್ಚಿಹೋಗಿರುತ್ತದೆ. ಯಮುನಾ ನದಿಯ ಮೂಲವು ದೇವಾಲಯದಿಂದ ಇನ್ನೂ ಪರ್ವತಗಳ ಮೇಲ್ದಾರಿಯಲ್ಲಿ ಸುಮಾರು ೪೨೦೦ ಮೀ. ಎತ್ತರದಲ್ಲಿದೆ.[]

ಯಮುನೋತ್ರಿ ದೇವಾಲಯ ಮತ್ತು ಆಶ್ರಮ

ಬಾಹ್ಯ ಸಂಪರ್ಕಕೊಂಡಿಗಳು

[ಬದಲಾಯಿಸಿ]

ಇವನ್ನೂ ನೋಡಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. http://uttarakhandtourism.gov.in/utdb/?q=yamunotri