ಮೊದಲನೆಯ ಮಹಾಯುದ್ಧದ ಕಾಲದಲ್ಲಿ ಭಾರತೀಯ ಸೇನೆ
ಮೊದಲನೆಯ ಮಹಾಯುದ್ಧದ ಕಾಲದಲ್ಲಿ ಭಾರತೀಯ ಸೇನೆಯನ್ನು ಕೆಲವೊಮ್ಮೆ ಬ್ರಿಟಿಷ್ ಭಾರತೀಯ ಸೇನೆ ಎಂದೂ ಕರೆಯಲಾಗಿದ್ದು, ಯೂರೋಪಿಯನ್ ಮೆಡಿಟರೇನಿಯನ್ ಮತ್ತು ಮಧ್ಯಪೂರ್ವ ರಣಾಂಗಣಗಳಿಗೆ ಹಲವಾರು ಸೇನಾ ವಿಭಾಗಗಳನ್ನು ಹಾಗೂ ಸ್ವತಂತ್ರ ಸೇನಾದಳಗಳನ್ನು ಮೊದಲನೆಯ ಮಹಾಯುದ್ಧದ ಕಾಲದಲ್ಲಿ ಒದಗಿಸಿತ್ತು. ಹೊರದೇಶಗಳಲ್ಲಿ ಒಂದು ಮಿಲಿಯನ್ ಸೈನಿಕರ ದಂಡು ಸೇವೆ ಸಲ್ಲಿಸಿ, ಆ ಸೈನಿಕರ ಪೈಕಿ ೬೨,೦೦೦ ಸೈನಿಕರು ವೀರಸ್ವರ್ಗವನ್ನು ಪಡೆದರು ಮತ್ತು ೬೭,೦೦೦ ಸೈನಿಕರು ಗಾಯಗೊಂಡರು. ಒಟ್ಟು ೭೪,೧೮೭ ಭಾರತೀಯ ಸೈನಿಕರು ಈ ಯುದ್ಧದಲ್ಲಿ ಮಡಿದರು.
ಕಿಚನರ್ ಭಾರತದ ಪ್ರಧಾನ ದಂಡನಾಯಕರಾಗಿ ನೇಮಕಗೊಂಡ ಬಳಿಕ, ೧೯೦೩ರಲ್ಲಿ ಭಾರತೀಯ ಸೇನೆಯಲ್ಲಿ ಹಲವಾರು ಪ್ರಮುಖ ಸುಧಾರಣೆಗಳಾದವು. ಅವರು ದೊಡ್ಡ ಪ್ರಮಾಣದ ಸುಧಾರಣೆಗಳನ್ನು ಸ್ಥಾಪಿಸಿದರು; ಅವುಗಳ ಪೈಕಿ ಮೂರು ಪ್ರತ್ಯೇಕ ಅಧ್ಯಕ್ಷರ ಆಡಳಿತಕ್ಕೆ ಒಳಪಟ್ಟಿದ್ದ ಸೇನಾವಿಭಾಗಗಳನ್ನು ಒಂದುಗೂಡಿಸಿ, ಮತ್ತಷ್ಟು ಮೇಲುಸ್ತರದ ರಚನೆಗಳನ್ನು ನಿರ್ಮಿಸಿ, ಹತ್ತು ಸೇನಾ ವಿಭಾಗಗಳನ್ನು ಸ್ಥಾಪಿಸಿದ ಕಾರ್ಯಗಳು ಪ್ರಮುಖವಾದವು.[೧]
ಮೊದಲನೆಯ ಮಹಾಯುದ್ಧದಲ್ಲಿ ಭಾರತೀಯ ಸೇನೆಯು ಜರ್ಮನ್ ಚಕ್ರಾಧಿಪತ್ಯದ ವಿರುದ್ಧ ಜರ್ಮನ್ ಪೂರ್ವ ಆಫ್ರಿಕದಲ್ಲಿ ಮತ್ತು ಪಶ್ಚಿಮ ವಿಭಾಗಗಳಲ್ಲಿ ಕಾದಾಡಿತು. ವೈಪ್ರೆಸ್ ನ ಮೊದಲನೆಯ ಸಮರದಲ್ಲಿ ಖುದಾದಾದ್ ಖಾನ್ ವಿಕ್ಟೋರಿಯಾ ಕ್ರಾಸ್ ಪದಕವನ್ನು ಪಡೆದ ಮೊದಲ ಭಾರತೀಯರೆಂಬ ಕೀರ್ತಿಗೆ ಭಾಜನರಾದರು. ಭಾರತೀಯ ತುಕಡಿಗಳನ್ನು ಈಜಿಪ್ಟ್, ಗಲ್ಲೀಪೋಲೀಗೆ ಕಳುಹಿಸಲಾಯಿತು ಹಾಗೂ ಸುಮಾರು ೭೦೦,೦೦೦ ಭಾರತೀಯ ಸೈನಿಕರು ಮೆಸೊಪೊಟೋಮಿಯಾದಲ್ಲಿ ಅಟಮನ್ ಸಾಮ್ರಾಜ್ಯದ ವಿರುದ್ಧ ಸೆಣಸಿದರು.[೨] ಕೆಲವು ತುಕಡಿಗಳನ್ನು ಹೊರದೇಶಗಳಿಗೆ ಕಳುಹಿಸಲಾಯಿತು, ಇತರ ತುಕಡಿಗಳು ಭಾರತದಲ್ಲಿಯೇ ಇದ್ದು ವಾಯುವ್ಯ ಗಡಿ ರಕ್ಷಣಾಕಾರ್ಯ ಹಾಗೂ ಆಂತರಿಕ ಭದ್ರತೆ ಮತ್ತು ತರಬೇತಿ ನೀಡುವ ಕೆಲಸಗಳನ್ನು ಮಾಡಲು ನಿಯೋಜಿಸಲ್ಪಟ್ಟವು.
ಕಿಚನರ್ ಅವರ ಸುಧಾರಣೆಗಳು
[ಬದಲಾಯಿಸಿ]೧೯೦೨ರಲ್ಲಿ ಹರ್ಬರ್ಟ್ ಕಿಚನರ್ ರನ್ನು ಭಾರತದ ಪ್ರಧಾನ ದಂಡನಾಯಕರಾಗಿ ನೇಮಕ ಮಾಡಲಾಯಿತು ಹಾಗೂ ಐದು ವರ್ಷಗಳ ನಂತರ ಅವರ ಸೇವಾವಧಿಯನ್ನು ಮತ್ತೆ ಎರಡು ವರ್ಷಗಳವರೆಗೆ ವಿಸ್ತರಿಸಲಾಯಿತು ಹಾಗೂ ಈ ವಿಸ್ತರಿಸಲ್ಪಟ್ಟ ಸಮಯದಲ್ಲಿ ಅವರು ಭಾರತೀಯು ಸೇನೆಯಲ್ಲಿ ಹಲವಾರು ಸುಧಾರಣೆಗಳನ್ನು ತಂದರು.[೧] ಈ ಸುಧಾರಣೆಗಳ ಪ್ರಕಾರ ಭಾರತದಲ್ಲಿ ಒಂದೇ ಸೇನೆಯಿರುವುದೆಂದಾಗಿ, ಮೂರು ಪ್ರತ್ಯೇಕ ಅಧ್ಯಕ್ಷೀಯ ಆಡಳಿತಗಳಿಗೆ ಒಳಗಾಗಿದ್ದು ಸೇನೆಗಳನ್ನು ಒಂದುಗೂಡಿಸಲಾಯಿತು.[೩] ಅದೇ ವೇಳೆಗೆ ರಾಜರುಗಳಾಳುತ್ತಿದ್ದ ರಾಜ್ಯsಗಳ ಸೇನಾದಳಗಳನ್ನೂ ಚಕ್ರಾಧಿಪತ್ಯದ ಸೇವೆಗಾಗಿ ದಕ್ಕುವಂತೆ ಮಾಡಿಕೊಳ್ಳಲಾಯಿತು.[೩] ಭಾರತೀಯ ಸೇನೆಯಲ್ಲಿರುವ ತುಕಡಿಗಳಲ್ಲದೆ ಇನ್ನೂ ಹೆಚ್ಚಿನ ತುಕಡಿಗಳನ್ನು ಬ್ರಿಟಿಷ್ ಸೇನೆಯು ಒದಗಿಸುವುದನ್ನು ಮುಂದುವರಿಸಿತು. ಭಾರತೀಯ ಸೇನೆ ಎಂಬ ಪದವು ಬ್ರಿಟಿಷ್ ಮತ್ತು ಭಾರತೀಯ ತುಕಡಿಗಳೆರಡನ್ನೂ ಆಳುವಂತಹ ಒಟ್ಟಾರೆ ಅಧಿಕಾರವನ್ನು ಪ್ರತಿನಿಧಿಸುವ ಪದವಾಗಿ ಬಳಕೆಗೆ ತರಲಾಯಿತು. ಭಾರತೀಯ ಸೇನೆಯ ನೂತನ ರಚನೆಯನ್ನು ಒಂಬತ್ತು ವಿಭಾಗಗಳಲ್ಲಿ ಸ್ಥಾಪಿಸಲಾಯಿತು; ಪ್ರತಿ ವಿಭಾಗದಲ್ಲೂ ಒಂದು ಅಶ್ವಪಡೆ ಮತ್ತು ಮೂರು ಪದಾತಿದಳಗಳಿದ್ದವು ಹಾಗೂ ಈ ಒಂಬತ್ತು ವಿಭಾಗಗಳು ಮತ್ತು ಮೂರು ಸ್ವತಂತ್ರ ಪದಾತಿ ದಂಡುಗಳು ಭಾರತದಲ್ಲಿ ಸೇವೆ ಸಲ್ಲಿಸುವುದೆಂದು ನಿರ್ಧರಿಸಲಾಯಿತು.[೪] ಭಾರತೀಯ ಸೇನೆಯು ಒಂದು ಬರ್ಮಾದಲ್ಲಿನ ವಿಭಾಗ ಮತ್ತು ಒಂದುಆಡೆನ್ ನಲ್ಲಿನ ದಂಡುಗಳನ್ನು ಒದಗಿಸುವ ಜವಾಬ್ದಾರಿಯನ್ನೂ ಹೊಂದಿತ್ತು.[೪]
ನೂತನ ವಿಭಾಗಗಳ ಮೇಲ್ವಿಚಾರಣೆ ಮತ್ತು ಹತೋಟಿಗಾಗಿ ಸಹಾಯ ಒದಗಿಸುವ ಸಲುವಾಗಿ ಎರಡು ಭೂ ಸೇನೆಗಳು ರಚಿಸಲ್ಪಟ್ಟವು - ಉತ್ತರದ ಸೇನೆ ಮತ್ತು ದಕ್ಷಿಣದ ಸೇನೆ.[೪] ಉತ್ತರದ ಸೇನೆಯಲ್ಲಿ ಐದು ವಿಭಾಗಗಳು ಮತ್ತು ಮೂರು ದಂಡುಗಳಿದ್ದು ಬಂಗಾಳದ ವಾಯುವ್ಯ ಗಡಿಪ್ರದೇಶದ ಜವಾಬ್ದಾರಿಯನ್ನು ಇದರ ಮೇಲೆ ಹೊರಿಸಲಾಗಿತ್ತು; ದಕ್ಷಿಣದ ಸೇನೆಯಲ್ಲಿ ನಾಲ್ಕು ವಿಭಾಗಗಳಿದ್ದು, ಭಾರತದ ಹೊರಗೆ ಎರಡು ದಳಗಳನ್ನು ಹೊಂದಿದ್ದು, ದಕ್ಷಿಣ ಭಾರತ ಮತ್ತು ಬಲೂಚಿಸ್ತಾನಗಳ ಹೊಣೆ ಇದರದ್ದಾಗಿತ್ತು.[೪] ಈ ನೂತನ ವ್ಯವಸ್ಥೆಯ ದಳಗಳು ಮತ್ತು ದಂಡುಗಳಿಗೆ ಒಂದೇ ಅನುಕ್ರಮಣಿಕೆಯಲ್ಲಿ ಸಂಖ್ಯೆಗಳನ್ನು ನೀಡಲಾಯಿತು ಮತ್ತು ಬಾಂಬೆ, ಮದ್ರಾಸ್ ಮತ್ತು ಬಂಗಾಳದ ಸೇನೆಗಳ ಹಳೆಯ ಬಿರುದಾಗಳಿಗಳನ್ನು ಕೈಬಿಡಲಾಯಿತು.[೩] ಈ ನೂತನ ದಳಗಳು ಮತ್ತು ದಂಡುಗಳು ತಮ್ಮ ಮೂಲಸ್ಥಾನದಲ್ಲೇ ಇರುವುದರ ಬದಲು ಈಗ ದೇಶದ ಯಾವ ಭಾಗಕ್ಕಾದರೂ ಸೇವೆ ಸಲ್ಲಿಸಲು ಕರೆಯಲ್ಪಡಬಹುದಾಗಿತ್ತು ಹಾಗೂ ವಾಯುವ್ಯ ಗಡಿಪ್ರದೇಶದಲ್ಲಿ ಕಾರ್ಯನಿರ್ವಹಣಾ ಪ್ರಯಾಣವನ್ನು ಒಂದು ವ್ಯವಸ್ಥಿತ ಹಾಗೂ ನಿರ್ಧರಿತ ಹುದ್ದೆಯೆಂದು ಪರಿಗಣಿಸಲಾಯಿತು.[೩] ಆದರೆ ಸರ್ವ-ಬ್ರಿಟಿಷ್ ಅಥವಾ ಸರ್ವ-ಭಾರತೀಯ ದಂಡುಗಳನ್ನು ರಚಿಸುವ ವ್ಯವಸ್ಥೆಗೆ ಮಾತ್ರ ಬೆಂಬಲ ದೊರಕಲಿಲ್ಲ ಹಾಗೂ ಪ್ರತಿ ದಳ ಅಥವಾ ದಂಡಿನಲ್ಲಿ ಒಂದು ಬ್ರಿಟಿಷ್ ತಂಡವನ್ನು ಹೊಂದುವಂತಹ ವ್ಯವಸ್ಥೆಯನ್ನು ಮುಂದುವರಿಸಲಾಯಿತು.[೩]
ಸಂಸ್ಥೆ(ಸಂಘಟನೆ)
[ಬದಲಾಯಿಸಿ]೧೯೧೪ರಲ್ಲಿ, ಭಾರತೀಯ ಸೇನೆಯು ಸ್ವಯಂ ಇಚ್ಛೆಯಿಂದ ಪಾಲ್ಗೊಂಡ ಪ್ರಪಂಚದ ಅತಿ ದೊಡ್ಡ ಸೇನೆಯಾಗಿದ್ದು[೧] ಅದರಲ್ಲಿ ಒಟ್ಟು ೨೪೦,೦೦೦ ಜನಗಳಿದ್ದರು[೫] ಹಾಗೂ ನವೆಂಬರ್ ೧೯೧೮ರ ಹೊತ್ತಿಗೆ ಅದರಲ್ಲಿ ೫೪೮,೩೧೧ ಜನರಿದ್ದು, ಅದನ್ನು ಚಕ್ರಾಧಿಪತ್ಯದ ಸಮರಕೌಶಲದ ಮೀಸಲುಪಡೆಯೆಂದು ಪರಿಗಣಿಸಲಾಗಿತ್ತು.[೬] ವಾಯುವ್ಯ ಗಡಿಯಲ್ಲಿ ಆಕ್ರಮಣ ನಡೆದಾಗ ಮತ್ತು ದಾಳಿಗಳು ನಡೆದಾಗ ಈ ದಳವನ್ನು ನಿಯತವಾಗಿ ಕರೆಸಲಾಗುತ್ತಿತ್ತು ಹಾಗೂ ಬ್ರಿಟಿಷ್ ಸಾಮ್ರಾಜ್ಯಕ್ಕೆ ಈಜಿಪ್ಟ್ ಸಿಂಗಪುರ ಮತ್ತು ಚೀನಾಗಳಲ್ಲಿ ಕಾವಲುಪಡೆಯನ್ನು ಒದಗಿಸುವುದಕ್ಕೂ ಇದಕ್ಕೆ ಕರೆ ಕಳುಹಿಸಲಾಗುತ್ತಿತ್ತು.[೭] ಈ ಸೇನಾ ಪಡೆಯನ್ನು ಎರಡು ಸೇನೆಗಳಾಗಿ ವಿಭಜಿಸಲಾಯಿತು: ಉತ್ತರದ ಸೇನೆಯು ವಾಯುವ್ಯದ ಗಡಿಯಿಂದ ಬಂಗಾಳದ ವರೆಗೆ ವಿಸ್ತರಿತವಾಗಿದ್ದು, ಅದರಲ್ಲಿ ಐದು ವಿಭಾಗಗಳು ಹಾಗೂ ಮೂರು ದಂಡುಗಳು ಅಧೀನಗೊಂಡಿದ್ದವು ಹಾಗೂ ದಕ್ಷಿಣದ ಸೇನೆಯು ಬಲೂಚಿಸ್ತಾನದಿಂದ ದಕ್ಷಿಣ ಭಾರತದವರೆಗೆ ಹಬ್ಬಿದ್ದುದಾಗಿದ್ದು ಅದರಲ್ಲಿ ನಾಲ್ಕು ವಿಭಾಗಗಳು ಅಧೀನದಲ್ಲಿಯೂ, ಎರಡು ವ್ಯೂಹಗಳು ಭಾರತದ ಹೊರಜಾಗಗಳಲ್ಲಿಯೂ ಸೇವೆ ಸಲ್ಲಿಸುತ್ತಿದ್ದವು.[೮] ಈ ಎರಡು ಸೇನೆಗಳು ೩೯ ಅಶ್ವಪಡೆಗಳು, ೧೩೮ ಪದಾತಿ ದಳಗಳು(ಅದರಲ್ಲಿ ೨೦ ಗೂರ್ಖಾ)ದಳಗಳೂ ಸೇರಿದಂತೆ,[೫] ಒಂದು ಜಂಟಿ ಅಶ್ವ-ಪದಾತಿ ದಳ, ಒಂದು ಕಾರ್ಪ್ಸ್ ಆಫ್ ಗೈಡ್ಸ್ ಘಟಕ, ಮೂರು ಸುರಂಗಕಾರಕ ದಂಡುಗಳು ಮತ್ತು ೧೨ ಪರ್ವತ ಫಿರಂಗಿದಳದ ತಂಡಗಳನ್ನು ಹೊಂದಿದ್ದವು.[೧]
ಈ ಸುಧಾರಣೆಯಿಂದಾದ ಒಂಬತ್ತು ವಿಭಾಗಗಳಲ್ಲಿ ಪ್ರತಿ ವಿಭಾಗದಲ್ಲೂ ಒಂದು ಅಶ್ವಪಡೆ ನತ್ತಯ ಮೂರು ಪದಾತಿ ದಳಗಳಿದ್ದವು. ಅಶ್ವಪಡೆಯಲ್ಲಿ ಒಂದು ಬ್ರಿಟಿಷ್ ಮತ್ತು ಎರಡು ಭಾರತೀಯ ದಂಡುಗಳಿದ್ದವು ಮತ್ತು ಪದಾತಿದಳದಲ್ಲಿ ಒಂದು ಬ್ರಿಟಿಷ್ ಮತ್ತು ಮೂರು ಭಾರತೀಯ ಪದಾತಿ ದಂಡುಗಳಿದ್ದವು.[೯] ಭಾರತೀಯ ಸೇನೆಯ ಪದಾತಿ ದಳವು ಬ್ರಿಟಿಷ್ ಪದಾತಿ ದಳಕ್ಕಿಂತಲೂ ಚಿಕ್ಕದಾಗಿರುತ್ತಿತ್ತು; ಇದರಲ್ಲಿ ಮೂವತ್ತು ಆಡಳಿತಾಧಿಕಾರಿಗಳು ಮತ್ತು ೭೨೩ ಇತರೆ ಶ್ರೇಣಿಯವರಿದ್ದರೆ[೫] ಬ್ರಿಟಿಷರದರಲ್ಲಿ ೨೯ ಆಡಳಿತಾಧಿಕಾರಿಗಳು ಮತ್ತು ೯೭೭ ಇತರ ಶ್ರೇಣಿಯವರು ಇರುತ್ತಿದ್ದರು.[೧೦] ಭಾರತೀಯ ಪದಾತಿ ದಳಗಳನ್ನು ಆಗಾಗ್ಗೆ ವಿವಿಧ ಬುಡಕಟ್ಟುಗಳು, ಜಾತಿಗಳು ಅಥವಾ ಧರ್ಮಗಳ ಆಧಾರದ ಮೇಲೆ ವಿಂಗಡಿಸಲಾಗುತ್ತಿತ್ತು.[೧೧] ಪ್ರತಿ ವಿಭಾಗದ ಕೇಂದ್ರಕಚೇರಿಗಳಿಗೆ ಸೇರಿದಂತಹ ಹೆಚ್ಚುವರಿ ದಂಡುಗಳಲ್ಲಿ ಒಂದು ಅಶ್ವದಳ, ಒಂದು ದಂಡಿನ ಸಲುವಾಗಿ ರಸ್ತೆ, ಸೇತುವೆ, ಮುಂತಾದುವುಗಳನ್ನು ಮಾಡುವವರ ದಳ ಮತ್ತು ಬ್ರಿಟಿಷ್ ರಾಯಲ್ ಫೀಲ್ಡ್ ಆರ್ಮಿ ಒದಗಿಸಿದ ಒಂದು ಫಿರಂಗಿ ದಳಗಳು ಇರುತ್ತಿದ್ದವು. ಪ್ರತಿ ವಿಭಾಗದಲ್ಲೂ ಸುಮಾರು ೧೩,೦೦೦ ಜನರು ಇರುತ್ತಿದ್ದರು, ಇದು ಬ್ರಿಟಿಷ್ ವಿಭಾಗಕ್ಕಿಂತಲೂ ಕೊಂಚ ಕಡಿಮೆ ಸಂಖ್ಯೆಯೇ ಆಗಿರುತ್ತಿತ್ತು; ಏಕೆಂದರೆ ಇಲ್ಲಿನ ಪದಾತಿ ದಳ ಮತ್ತು ಫಿರಂಗಿ ದಳಗಳು ಅಲ್ಲಿಗಿಂತಲೂ ಕಡಿಮೆ ಸಂಖ್ಯೆಯನ್ನು ಹೊಂದಿರುತ್ತಿದ್ದವು.[೧೨] ೩೮ ಭಾರತೀಯ ದಳಗಳ ಅಧಿಕಾರ ವಹಿಸಲು ಸಾಕಾಗುವಷ್ಟು ಸಂಖ್ಯೆಯಾದ ೫೦೦ ಬ್ರಿಟಿಷ್ ಅಧಿಕಾರಿಗಳನ್ನು ಕಿಚನರ್ಸ್ ಆರ್ಮಿಯ ನೂತನ ವಿಭಾಗಗಳಿಗೆ ವರ್ಗ ಮಾಡಿದುದರಿಂದ ಭಾರತೀಯ ಸೇನೆಯು ಮತ್ತಷ್ಟು ದುರ್ಬಲವಾಯಿತು.[೧೩]
ಯಥಾಕ್ರಮವಾದ ಭಾರತೀಯ ಸೇನೆಯೊಂದಿಗೆ ರಾಜರುಗಳಾಳುತ್ತಿದ್ದ ರಾಜ್ಯಗಳ ಸೇನೆಗಳು ಮತ್ತು ಸಹಾಯಕ ಸೈನ್ಯದ (ಯೂರೋಪಿಯನ್ ಸ್ವಯಂ ಇಚ್ಛೆಯಿಂದ ಬಂದವರ ಪಡೆ)ದಳಗಳನ್ನೂ ಸಹ ತುರ್ತು ಪರಿಸ್ಥಿತಿಗಳಲ್ಲಿ ಸಹಾಯ ಮಾಡಲು ಕರೆಯಲಾಗುತ್ತಿತ್ತು.[೧] ರಾಜರಾಳ್ವಿಕೆಯ ರಾಜ್ಯಗಳು ಸಾಮ್ರಾಜ್ಯ ಸೇವಾ ದಳಗಳನ್ನು ರಚಿಸಿದರು ಮತ್ತು ೧೯೧೪ರಲ್ಲಿ ಈ ದಳದಲ್ಲಿ ೨೨,೬೧೩ ಜನರಿದ್ದು, ಅವರು ೨೦ ಅಶ್ವದಳಗಳು ಮತ್ತು ೧೪ ಪದಾತಿ ದಳಗಳಲ್ಲಿ ಸೇವೆ ಸಲ್ಲಿಸುತ್ತಿದ್ದರು.[೧೨] ಯುದ್ಧ ಕೊನೆಗೊಳ್ಳುವ ವೇಳೆಗೆ ೨೬,೦೦೦ ಸೈನಿಕರು ಸಾಮ್ರಾಜ್ಯ ಸೇವೆಯಲ್ಲಿ ಹೊರದೇಶಗಳಲ್ಲಿ ಕಾರ್ಯವೆಸಗಿದ್ದರು.[೧೪] ಸಹಾಯಕ ದಳವು ಇನ್ನೂ ೪೦,೦೦೦ ಸೈನಿಕರನ್ನು ೧೧ ಅಶ್ವದಳಗಳಲ್ಲಿ ಮತ್ತು ೪೨ ಸ್ವಯಂಸೇವಕ ಪದಾತಿದಳಗಳಲ್ಲಿ ಹೊಂದಿತ್ತು.[೫] ಅಲ್ಲದೆ ಗಡಿಪ್ರದೇಶದ ಸೇನೆ ಮತ್ತು ಸೇನಾ ಪೊಲೀಸರ ಸೇವೆಯೂ ಲಭ್ಯವಿದ್ದು ಆ ಎರಡೂ ದಳಗಳಲ್ಲಿ ಒಟ್ಟು ಸುಮಾರು ೩೪,೦೦೦ ಜನರಿದ್ದರು.[೫]
ರಣಾಂಗಣ ಪಡೆಯ ಕೇಂದ್ರಕಚೇರಿಯು ದೆಹಲಿಯಲ್ಲಿದ್ದಿತು ಮತ್ತು ಹಿರಿಯ ಅಧಿಕಾರಿ(ಭಾರತದ ಪ್ರಧಾನ ದಂಡನಾಯಕ)ರಿಗೆ ಭಾರತದ ಜನರಲ್ ಸಿಬ್ಬಂದಿಯ ಪ್ರಧಾನ ಅಧಿಕಾರಿಯ ಬೆಂಬಲವಿರುತ್ತಿತ್ತು. ಭಾರತೀಯ ಸೇನೆಯ ಎಲ್ಲಾ ಹಿರಿಯ ಅಧಿಕಾರದ ಹುದ್ದೆಗಳು ಮತ್ತು ಸಿಬ್ಬಂದಿಗಳ ಹುದ್ದೆಗಳು ಬ್ರಿಟಿಷ್ ಮತ್ತು ಭಾರತೀಯ ಸೇನೆಗಳ ಹಿರಿಯ ಆಡಳಿತಾಧಿಕಾರಿಗಳ ವರ್ತುಲದಲ್ಲಿ ಒಬ್ಬರ ನಂತರ ಒಬ್ಬರದ್ದರಂತೆ ಬದಲಾಗುತ್ತಿತ್ತು. ೧೯೧೪ರಲ್ಲಿ ಪ್ರಧಾನ ದಂಡನಾಯಕರಾಗಿದ್ದವರು ಭಾರತೀಯ ಸೇನೆಯ[೧೫] ಜನರಲ್ ಸರ್ ಬ್ಯೂಚಾಂಪ್ ಡಫ್ ಹಾಗೂ ಜನರಲ್ ಸಿಬ್ಬಂದಿಯ ಪ್ರಧಾನ ಅಧಿಕಾರಿಯಾಗಿದ್ದವರು ಬ್ರಿಟಿಷ್ ಸೇನೆಯ ಲೆಫ್ಟಿನೆಂಟ್ ಆಗಿದ್ದ ಜನರಲ್ ಸರ್ ಪರ್ಸಿ ಲೇಕ್ ರವರು.[೧೬] ಪ್ರತಿ ಭಾರತೀಯ ಪದಾತಿ ದಳದಲ್ಲಿ ಭಾರತದಲ್ಲಿರುವ ಬ್ರಿಟಿಷ್ ಸೇನೆಯಿಂದ ಆಯ್ಕೆಯಾದ ೧೩ ಆಡಳಿತಾಧಿಕಾರಿಗಳು ಮತ್ತು ೧೭ ಭಾರತೀಯ ಸೇನೆಯಿಂದ ಆಯ್ಕೆಯಾದ ಆಡಳಿತಾಧಿಕಾರಿಗಳು ಇರುತ್ತಿದ್ದರು - ಇವರು ವಲಸೆ ಬಂದ ಬ್ರಿಟಿಷ್ ಅಧಿಕಾರಿಗಳಾಗಿದ್ದು ವಸಾಹತುಶಾಹಿ ಭಾರತೀಯ ಆಡಳಿತದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಯುದ್ಧದ ತೀವ್ರತೆ ಹೆಚ್ಚಾದಂತೆ ಹಾಗೂ ಹೆಚ್ಚು ಹೆಚ್ಚು ಅಧಿಕಾರಿಗಳು ಸಾವನ್ನಪ್ಪುತ್ತಿದ್ದಂತೆ, ಬ್ರಿಟಿಷ್ ಮೂಲದ ಅಧಿಕಾರಿಗಳನ್ನೇ ಸತ್ತವರ ಜಾಗದಲ್ಲಿ ಭರ್ತಿ ಮಾಡುವುದು ಬಹಳ ಕಷ್ಟವಾಯಿತು ಹಾಗೂ ತತ್ಕಾತಣಗಳಿಂದ ಹಲವಾರು ಸಂದರ್ಭಗಳಲ್ಲಿ ಪದಾತಿದಳಗಳಿಗೆ ಅಧಿಕಾರಿಗಳನ್ನು ನೇಮಕ ಮಾಡುವುದನ್ನೇ ಕಡಿಮೆ ಮಾಡಲಾಯಿತು. ೧೯೧೯ರಲ್ಲಿ ಮೊಟ್ಟಮೊದಲ ಬಾರಿಗೆ ಭಾರತೀಯ ಮೂಲದವರನ್ನು ಅಧಿಕಾರಿಯ ಹುದ್ದೆಗಾಗಿ ತರಬೇತಿಗೆ ಒಳಗಾಗಲು ರಾಯಲ್ ಮಿಲಿಟರಿ ಕಾಲೇಜ್ಗೆ ಆಯ್ಕೆ ಮಾಡಲು ಅನುಮತಿ ನೀಡಲಾಯಿತು.[೧೭]
ಭಾರತೀಯ ಸೇನೆಗೆ ಸಾಮಾನ್ಯವಾಗಿ ವಾರ್ಷಿಕವಾಗಿ ಹುದ್ದೆಗೆ/ತರಬೇತಿಗೆ ಆಯ್ಕೆ ಮಾಡಿಕೊಳ್ಳುತ್ತಿದ್ದದ್ದು ೧೫,೦೦೦ ಜನರನ್ನು; ಯುದ್ಧಕಾಲದಲ್ಲಿ ೮೦೦,೦೦೦ಕ್ಕೂ ಹೆಚ್ಚು ಜನ ಸೇನೆಗೆ ಸೇರಲು ಸ್ವಯಂ ಪ್ರೇರಣೆಯಿಂದ ಮುಂದೆ ಬಂದರು ಹಾಗೂ ಸಮರೇತರ ಹುದ್ದೆಗಳಲ್ಲಿ ಸೇವೆ ಸಲ್ಲಿಸಲು ೪೦೦,೦೦೦ಕ್ಕೂ ಹೆಚ್ಚು ಜನರು ತಾವಾಗಿಯೇ ಮುಂದೆ ಬಂದರು. ೧೯೧೮ರ ವೇಳೆಗೆ ಸುಮಾರು ೧.೩ ಮಿಲಿಯನ್ ಜನರು ಸೇವೆ ಸಲ್ಲಿಸಲು ಮುಂದೆ ಬಂದಿದ್ದರು.[೧೮] ಒಂದು ಮಿಲಿಯನ್ ಭಾರತೀಯ ತುಕಡಿಗಳು ಯುದ್ಧಕಾಲದಲ್ಲಿ ಹೊರದೇಶದಲ್ಲಿ ಸೇವೆ ಸಲ್ಲಿಸಿದವು; ಆ ಸೇವೆ ಸಲ್ಲಿಸಿದವರ ಪೈಕಿ ೬೨,೦೦೦ ಜನರು ಹತರಾದರು ಮತ್ತು ೬೭,೦೦೦ ಜನರು ಗಾಯಗೊಂಡರು.[೧೯] ಒಟ್ಟಾರೆ, ಮೊದಲನೆಯ ಮಹಾಯುದ್ಧ ದಲ್ಲಿ ೭೪,೧೮೭ ಭಾರತೀಯ ಸೈನಿಕರು ಸಾವನ್ನಪ್ಪಿದರು.[೧೪]
ಗೃಹ ಸೇವೆ
[ಬದಲಾಯಿಸಿ]ಮೊದಲನೆಯ ಮಹಾಯುದ್ಧ ಕ್ಕೆ ಮುನ್ನ ಭಾರತೀಯ ಸೇನೆಯನ್ನು ಆಂತರಿಕ ಭದ್ರತೆ ಮತ್ತು ವಾಯುವ್ಯ ಗಡಿಯನ್ನು ಆಫ್ಘಾನಿಸ್ತಾನದವರ ದಾಳಿಯಿಂದ ಕಾಪಾಡಲು ಬಳಸಿಕೊಳ್ಳಲಾಗುತ್ತಿತ್ತು. ಯುದ್ಧ ಸಾರಿದಾಕ್ಷಣ ಈ ಕೆಲಸಗಳೇನೂ ತಪ್ಪಲಿಲ್ಲ. ಗಡಿಯ ರಕ್ಷಣೆಗಾಗಿ ನಿಯಮಿಸಲ್ಪಟ್ಟ ಸೇನಾ ವಿಭಾಗಗಳೆಂದರೆ ಪ್ರಸ್ತುತದಲ್ಲಿದ್ದ ಮೊದಲನೆಯ (ಪೆಷಾವರ್) ವಿಭಾಗ, ಎರಡನೆಯ (ರಾವಲ್ಪಿಂಡಿ) ವಿಭಾಗ, ನಾಲ್ಕನೆಯ (ಕ್ವೆಟ್ಟಾ) ವಿಭಾಗ.[೨೦] ಯುದ್ಧ-ರಚಿತವಾದ, ಭಾರತಕ್ಕೆ ಸೇವೆ ಸಲ್ಲಿಸಿದ, ಏಕೈಕ ವಿಭಾಗವೆಂದರೆ ೧೯೧೬ರಲ್ಲಿ ರಚಿತವಾದ ೧೬ನೆಯ ಭಾರತೀಯ ವಿಭಾಗ; ಇದನ್ನೂ ಸಹ ವಾಯವ್ಯ ಗಡಿಯಲ್ಲಿಯೇ ಪಹರೆ ಕಾಯಲು ನಿಲ್ಲಿಸಲಾಯಿತು.[೨೦] ಈ ಎಲ್ಲಾ ವಿಭಾಗಗಳೂ ಇನ್ನೂ ತಮ್ಮ ತಮ್ಮ ನಿರ್ದೇಶಿತ ಸ್ಥಳಗಳಲ್ಲೇ ಇದ್ದವು ಮತ್ತು ಮೊದಲನೆಯ ಮಹಾಯುದ್ಧ ಮುಗಿದ ನಂತರ ಮೂರನೆಯ ಆಫ್ಘನ್ ಯುದ್ಧದಲ್ಲಿ ಪಾಲ್ಗೊಂಡವು.[೨೦]
ಯುದ್ಧಕಾರಣವನ್ನು ಬೆಂಬಲಿಸುವ ಯತ್ನದಲ್ಲಿ, ಭಾರತವು ಆಫ್ಘಾನಿಸ್ತಾನದ ತೀವ್ರತರವಾದ ಆಕ್ರಮಣಕ್ಕೆ ತುತ್ತಾಗುವ ಸಂಭವವಿತ್ತು. ೧೯೧೫ರ ಅಕ್ಟೋಬರ್ ಮಾಸದಲ್ಲಿ ಸುಸ್ಪಷ್ಟವಾಗಿ ಯುದ್ಧಕೌಶಲದ ಯುಕ್ತಿಗಳನ್ನೇ ಪ್ರಧಾನವಾದ ಉದ್ದೇಶವಾಗಿರಿಸಿಕೊಂಡಟರ್ಕೋ-ಜರ್ಮನ್ ಮಿಷನ್ ಒಂದು ಕಾಬೂಲ್ ನಲ್ಲಿ ಬಂದು ಸೇರಿತು. ಆಟೋಮಾನ್ ಸುಲ್ತಾನರ ಪಕ್ಷ ಸೇರಲು ಒಡಂಬಡಿಸಿದ ಸಂಘಗಳ ಆಂತರಿಕ ವಿರೋಧದ ನಡುವೆಯು, ಹಬೀಬುಲ್ಲಾ ಖಾನ್ ತಮ್ಮ ಶಾಂತಿ ಒಪ್ಪಂದದ ರೀತ್ಯಾ ನಡೆದುಕೊಂಡರು ಮತ್ತು ಆಫ್ಘಾನಿಸ್ತಾನದ ತಟಸ್ಥತೆಯನ್ನು ಮುಂದುವರಿಸಿಕೊಂಡು ಬಂದರು.[೨೧] ಇಷ್ಟಾಗಿಯೂ, ಗಡಿಪ್ರದೇಶದಲ್ಲಿ ಸ್ಥಳೀಯ ಘಟನೆಗಳು ನಡೆದೇ ತೀರಿದವು ಮತ್ತು ಆ ಘಟನೆಗಳ ಪೈಕಿ ತೋಚಿಯಲ್ಲಿ ನಡೆದ ಕಾರ್ಯಾಚರಣೆ (೧೯೧೪–೧೫), ಮೊಹ್ಮಂದರು, ಬುನರ್ವಾಲರು ಮತ್ತು ಸ್ವಾತಿಗಳ ವಿರುದ್ಧ ಕಾರ್ಯಾಚರಣೆ (೧೯೧೫), ಕಲಾತ್ ಕಾರ್ಯಾಚರಣೆಗಳು (೧೯೧೫–೧೬), ಮೊಹ್ಮಂದ್ ತಡೆಯೊಡ್ಡುವಿಕೆe (೧೯೧೬–೧೭), ನಹ್ಸೂದರ ವಿರುದ್ಧ ಕಾರ್ಯಾಚರಣೆ (೧೯೧೭) ಮತ್ತು ಮರ್ರಿ ಮತ್ತು ಖೆತ್ರಾನ್ ಬುಡಕಟ್ಟುಗಳ ವಿರುದ್ಧ ಕಾರ್ಯಾಚರಣೆ (೧೯೧೮)ಗಳು ಪ್ರಮುಖವಾದವು.[೨೨]
ಭಾರತ ಮತ್ತು ಬರ್ಮಾ ನಡುವೆ ಇರುವ ಈಶಾನ್ಯ ಗಡಿ ಪ್ರದೇಶದಲ್ಲಿ ಡಿಸೆಂಬರ್ ೧೯೧೪ರಿಂದ ಫೆಬ್ರವರಿ ೧೯೧೫ರ ವರೆಗೆ ಬರ್ಮಾ ಸೇನಾ ಪೊಲೀಸರು ಕಚಿನ್ಸ್ ಬುಡಕಟ್ಟು ಜನಾಂಗದವರ ವಿರುದ್ಧ ದಂಡನಾ ಕ್ರಮಗಳನ್ನು ಕೈಗೊಂಡರು ಹಾಗೂ ಇದಕ್ಕೆ ೧/೭ನೆಯ ಗೂರ್ಖಾ ರೈಫಲ್ಸ್ ಮತ್ತು ೬೪ನೆಯ ಮಾರ್ಗನಿರ್ಮಾಣ-ನಿರ್ವಾಹಕದಳಗಳ ಬೆಂಬಲವೂ ಇತ್ತು.[೨೩] ನವೆಂಬರ್ ೧೯೧೭ರಿಂದ ಮಾರ್ಚ್ ೧೯೧೯ರ ವರೆಗೆ, ಕುಕಿ ಬುಡಕಟ್ಟು ಜನಾಂಗದ ವಿರುದ್ಧ ಕಾರ್ಯಾಚರಣೆಗಳನ್ನು ಅಸ್ಸಾಂ ರೈಫಲ್ಸ್ ನ ಸಹಕಾರಿ ಸೈನ್ಯದ ಘಟಕಗಳು ಮತ್ತು ಬರ್ಮಾ ಸೇನಾ ಪೊಲೀಸರು ಕೈಗೊಂಡರು.[೨೪]
ಮೊದಲಿಗೆ ಆಂತರಿಕ ಭದ್ರತೆಗಾಗಿ ಹಾಗೂ ನಂತರ ತರಬೇತಿ ವಿಭಾಗಗಳಾಗಿ ಭಾರತದಲ್ಲಿ ಉಳಿದ ಇತರ ವಿಭಾಗಗಳೆಂದರೆ ೫ನೆಯ (ಮ್ಹೌ) ವಿಭಾಗ, ೮ನೆಯ (ಲಕ್ನೋ) ವಿಭಾಗ ಮತ್ತು ೯ನೆಯ (ಸಿಕಂದರಾಬಾದ್) ವಿಭಾಗ.[೨೦] ಯುದ್ಧ ನಡೆಯುತ್ತಿದ್ದ ಕಾಲದಲ್ಲಿ ಈ ವಿಭಾಗಗಳು ತಮ್ಮ ಪದಾತಿ ದಳಗಳನ್ನು ಇತರ ಕ್ರಿಯಾತ್ಮಕವಾಗಿರುವ ವ್ಯೂಹಗಳಿಗೆ ಕಳುಹಿಸಬೇಕಾದ ಪರಿಸ್ಥಿತಿ ಒದಗಿ, ತನ್ಮೂಲಕ ಈ ವಿಭಾಗಗಳ ಪದಾತಿದಳಗಳು ಬಡವಾದವು; ೫ನೆಯ (ಮ್ಹೌ) ವಿಭಾಗವು ೫ನೆಯ (ಮ್ಹೌ) ಅಶ್ವದಳವನ್ನು೨ನೆಯ ಭಾರತೀಯ ಅಶ್ವದಳ ವಿಭಾಗಕ್ಕೆ ನೀಡಬೇಕಾಯಿತು. ೮ನೆಯ (ಲಕ್ನೋ) ವಿಭಾಗವು ೮ನೆಯ (ಲಕ್ನೋ) ಅಶ್ವದಳವನ್ನು ಮೊದಲನೆಯ ಭಾರತೀಯ ಅಶ್ವದಳದ ಹಿತಕ್ಕಾಗಿ ಕೊಡಮಾಡಿತು ಮತ್ತು ೨೨ನೆಯ (ಲಕ್ನೋ) ಪದಾತಿ ದಳವು ೧೧ನೆಯ ಭಾರತೀಯ ವಿಭಾಗಕ್ಕೆ ಸೇರಿಹೋಯಿತು. ೯ನೆಯ (ಸಿಕಂದರಾಬಾದ್)ವಿಭಾಗವು ೯ನೆಯ (ಸಿಕಂದರಾಬಾದ್) ಅಶ್ವದಳವನ್ನು೨ನೆಯ ಭಾರತೀಯ ಅಶ್ವದಳದ ಪುಷ್ಟೀಕರಣಕ್ಕಾಗಿ ಕಳೆದುಕೊಂಡಿತು ಮತ್ತು ೨೭ನೆಯ (ಬೆಂಗಳೂರು) ಪದಾತಿ ದಳವನ್ನು ಬ್ರಿಟಿಷ್ ಪೂರ್ವ ಆಫ್ರಿಕಾಗೆ ರವಾನಿಸಲಾಯಿತು.[೨೦] ಇತರ ಯುದ್ಧಪೂರ್ವ ಘಟಕಗಳ ಪೈಕಿ ಬರ್ಮಾ ವಿಭಾಗವು ಬರ್ಮಾದಲ್ಲಿಯೇ ಆಂತರಿಕ ರಕ್ಷಣಾ ಕಾರ್ಯಗಳನ್ನು ಮಾಡಿಕೊಂಡು ಉಳಿಯಿತು; ಅಂತೆಯೇ ಆಡೆನ್ ಪದಾತಿ ದಳವು ಆಡೆನ್ ನಲ್ಲಿಯೇ ಉಳಿಯಿತು.[೨೦]
ಯುದ್ಧಕ್ಕೆ ಭಾರತೀಯ ಸೇನೆಯ ಪ್ರವೇಶ
[ಬದಲಾಯಿಸಿ]೧೯೦೧ರಲ್ಲಿ ಪರ್ಷಿಯನ್ ಕೊಲ್ಲಿಯ ಶಿರೋಭಾಗದಲ್ಲಿರುವ ಮಸ್ಜಿದ್-ಎ-ಸುಲೇಮಾನ್ ನಲ್ಲಿ ವಾಣಿಜ್ಯಪರವಾದ ಪ್ರಮಾಣದ ತೈಲದ ಪತ್ತೆಯಾಯಿತು.[೨೫] ೧೯೧೪ರಲ್ಲಿ ಯುದ್ಧದ ಆರಂಭದ ದಿನಗಳಲ್ಲಿ, ಈ ತೈಲದ ಮೈದಾನಗಳಲ್ಲಿ ಕಾರ್ಯವೆಸಗುವ ಪರವಾನಗಿ ಇದ್ದ ಖಾಸಗಿ ಮಾಲಿಕತ್ವದ ಆಂಗ್ಲೋ-ಪರ್ಷಿಯನ್ ತೈಲ ಕಂಪನಿಯನ್ನು ಬ್ರಿಟಿಷ್ ಸರ್ಕಾರವು ಕೊಳ್ಳುವ ಹಂತದಲ್ಲಿತ್ತು; ಅದರ ಪ್ರಮುಖ ಉದ್ದೇಶವು ಬ್ರಿಟಿಷ್ ಸೇನೆಗೆ ತೈಲವನ್ನು ಒದಗಿಸುವುದಾಗಿತ್ತು. ಕೆಲವೇ ದಿನಗಳಲ್ಲಿ ಆಟೋಮಾನ್ ಟರ್ಕಿಷ್ ಸೇನೆಯನ್ನು ಚಾಲ್ತಿಗೊಳಿಸಲಾಗುತ್ತಿರುವುದು ಸುಸ್ಪಷ್ಟವಾಗಿ ಅರಿವಿಗೆ ಬಂದಿತು ಹಾಗೂ ಆಗಸ್ಟ್ ನಲ್ಲಿ ಈ ಬಹುವಿಧಗಳಲ್ಲಿ ಅವಶ್ಯವಾದ ಸ್ವತ್ತನ್ನು ರಕ್ಸಿಸುವ ಸಲುವಾಗಿ ಸಾದಿಲವಾರು ಹಂಚಿಕೆಗಳನ್ನು ಹಮ್ಮಿಕೊಳ್ಳಲು ಭಾರತ ಸರ್ಕಾರಕ್ಕೆ ಆದೇಶ ನೀಡಲಾಯಿತು. ಟರ್ಕಿಷ್ ಸೇನೆಯು ಜರ್ಮನ್ನರನ್ನು ಬೆಂಬಲಿಸುವುದಾಗಿ ಹೊರಬಂದಾಗ ಭಾರತೀಯ ಸೇನೆಯು ತೈಲಪ್ರದೇಶಗಳನ್ನು ರಕ್ಷಿಸಬೇಕೆಂಬುದು ನಿಯೋಜಿತ ಹಂಚಿಕೆಯಾಗಿತ್ತು. ಮುಂಜಾಗರೂಕತಾ ಕ್ರಮವಾಗಿ ಭಾರತೀಯ ದಂಡಯಾತ್ರಾ ದಳ D (ಕೆಳಗೆ ನೋಡಿ)ಯು ಲೆಫ್ಟಿನೆಂಟ್-ಜನರಲ್ ಸರ್ ಆರ್ಥರ್ ಬ್ಯಾರೆಟ್ ರ ನೇತೃತ್ವದಲ್ಲಿ ಬಾಂಬೆಯಿಂದ ಬಹ್ ರೈನ್ ಗೆ ೧೬ ಅಕ್ಟೋಬರ್ ೧೯೧೪ರಂದು ಪ್ರಯಾಣ ಬೆಳೆಸಿತು.[೨೬] ಯುದ್ಧದ ಯತ್ನವನ್ನು ಬೆಂಬಲಿಸಲು ಸಾಮ್ರಾಜ್ಯದ ಜನರಲ್ ಸಿಬ್ಬಂದಿಯು ಕರೆ ನೀಡಿದುದಕ್ಕೆ ಓಗೊಟ್ಟು ಸೆಪ್ಟೆಂಬರ್[೨೭] ನ ಕೊನೆಯಲ್ಲಿ ಯೂರೋಪ್ ಗೆ ತರಾತುರಿಯಲ್ಲಿ ಕಳುಹಿಸಲ್ಪಟ್ಟಿದ್ದ ದಂಡಯಾತ್ರಾ ದಳ A ಮತ್ತು ದಂಡಯಾತ್ರಾದಳ D ಒಟ್ಟುಗೂಡಿ ಭಾರತದ ಹೊರಗೆ ಯುದ್ಧದಲ್ಲಿ ತೊಡಗಿಕೊಂಡಂತಹ ಮೊದಲ ಭಾರತೀಯ ಸೇನಾದಳಗಳಾದವು.
ಸ್ವತಂತ್ರ ಸೇನಾದಳಗಳು
[ಬದಲಾಯಿಸಿ]ಖಾಯಂ ಆದ ವಿಭಾಗಗಳ ಜೊತೆಗೆ ಭಾರತೀಯ ಸೇನೆಯು ಹಲವಾರು ಖಾಸಗಿ ದಂಡುಗಳನ್ನು ನಿರ್ಮಿಸಿತು. ದಕ್ಷಿಣದ ಸೇನೆಯ ಅಂಗವಾಗಿ ಆಡೆನ್ ಬ್ರಿಗೇಡ್ ಅನ್ನು ಆಡೆನ್ ಪ್ರೊಟೆಕ್ಟೊರೇಟ್ ನಲ್ಲಿ ಸಮರಕೌಶಲಗಳಿಗೆ ಹಾಗೂ ಹಂಚಿಕೆಗಳಿಗೆ ಉಪಯೋಗವಾಗುವಂತಹ, ಯೂರೋಪ್ ನಿಂದ ಭಾರತಕ್ಕೆ ಇದ್ದ ಪ್ರಮುಖ ನೌಕಾಮಾರ್ಗದಲ್ಲಿ ಇರಿಸಲಾಯಿತು.[೨೦] ಬನ್ನು ಬ್ರಿಗೇಡ್, ದೇರಾಜಾತ್ ಬ್ರಿಗೇಡ್ ಮತ್ತು ಕೋಹತ್ ಬ್ರಿಗೇಡ್ ಗಳೆಲ್ಲವೂ ಉತ್ತರದ ಸೇನೆಯ ಅಂಗಗಳಾಗಿದ್ದವು ಹಾಗೂ ಆ ದಳಗಳನ್ನು ವಾಯುವ್ಯ ಗಡಿಯ ಗುಂಟ ಪಹರೆಗೆ ಹಚ್ಚಲಾಗಿತ್ತು.[೨೦] ೧೨ ಮೇ ೧೯೧೮ರಂದು, ಬನ್ನು ಮತ್ತು ದೇಜಾರಾತ್ ದಂಡುಗಳನ್ನು ಜನರಲ್ ಜಿ,ಡಬ್ಲ್ಯೂ. ಬೇಯ್ನಾನ್ ರ ನೇತೃತ್ವದ ವಝೀರಿಸ್ತಾನ್ ಭೂ ದಳದ ಸುಪರ್ದಿಗೆ ಒಪ್ಪಿಸಲಾಯಿತು.[೨೮] ದಕ್ಷಿಣ ಪರ್ಷಿಯಾ ಮತ್ತು ಪರ್ಷಿಯಾ ಕೊಲ್ಲಿಯಲ್ಲಿದ್ದ ಆಂಗ್ಲೋ-ಪರ್ಷಿಯನ್ ತೈಲ ನಿಕ್ಷೇಪಗಳನ್ನು ರಕ್ಷಿಸುವ ಸಲುವಾಗಿ, ಪರ್ಷಿಯನ್ ಚಳುವಳಿಯ ಆರಂಭದ ದಿನಗಳಲ್ಲಿದಕ್ಷಿಣ ಪರ್ಷಿಯಾ ಬ್ರಿಗೇಡ್ಅನ್ನು ೧೯೧೫ರಲ್ಲಿ ರಚಿಸಲಾಯಿತು.[೨೦]
ದಂಡಯಾತ್ರಾ ದಳಗಳು
[ಬದಲಾಯಿಸಿ]ಭಾರತೀಯ ಸೇನೆಯು ಮೊದಲನೆಯ ಮಹಾಯುದ್ಧ ದ ಸಮಯದಲ್ಲಿ ಏಳು ದಂಡಯಾತ್ರಾ ಪಡೆಗಳನ್ನು ರಚಿಸಿ, ಹೊರದೇಶಗಳಿಗೆ ಕಾರ್ಯಾರ್ಥವಾಗಿ ಕಳುಹಿಸಿತು.[೨೯]
ಭಾರತೀಯ ದಂಡಯಾತ್ರಾ ಪಡೆ A
[ಬದಲಾಯಿಸಿ]ಯುದ್ಧವು ಆರಂಭವಾದ ಕಾಲದಲ್ಲಿ ಭಾರತೀಯ ಸೇನೆಯಲ್ಲಿ ೧೫೦,೦೦೦ ತರಬೇತಿ ಪಡೆದ ಪುರುಷರಿದ್ದರು ಮತ್ತು ಭಾರತ ಸರ್ಕಾರವು ಎರಡು ಅಶ್ವದಳಗಳ ಮತ್ತು ಎರಡು ಪದಾತಿ ದಳಗಳ ಸೇವೆಯನ್ನು ಸಮುದ್ರದ ಅತ್ತಣ ದೇಶಗಳಲ್ಲಿನ ಯುದ್ಧಕ್ಕೆ ಕಳುಹಿಸಿಕೊಡುವ ಇರಾದೆ ತೋರಿತು.[೩೦] ಭಾರತೀಯ ದಂಡಯಾತ್ರಾ ದಳ A ಎಂದು ಕರೆಯಲ್ಪಟ್ಟ ಈ ದಳವು ಜನರಲ್ ಸರ್ ಜೇಮ್ಸ್ ವಿಲ್ ಕಾಕ್ಸ್ ರ ನೇತೃತ್ವದಲ್ಲಿ ಯುದ್ಧದಲ್ಲಿ ಭಾಗವಹಿಸಿತು.[೩೦] ಸೇನಾದಳ A ಬ್ರಿಟಿಷ್ ದಂಡಯಾತ್ರಾ ದಳಕ್ಕೆ ಸೇರ್ಪಡೆಗೊಳಿಸಲಾಯಿತು ಹಾಗೂ ಈ ನಾಲ್ಕೂ ವಿಭಾಗಗಳನ್ನು ಎರಡು ಸೇನಾ ದಂಡುಗಳಾಗಿ ಪರಿವರ್ತಿಸಲಾಯಿತು: ಒಂದು ಪದಾತಿಗಳ ಭಾರತೀಯ ಸೇನಾಂಗ ಮತ್ತು ಇನ್ನೊಂದು ಭಾರತೀಯ ಅಶ್ವದಳ ಸೇನಾಂಗ.[೩೧][೩೨] ಮಾರ್ಸೀಲೆಸ್ ಅನ್ನು ೩೦ ಸೆಪ್ಟೆಂಬರ್ ೧೯೧೪ರಂದು ತಲುಪಿದಾಗ ಯುದ್ಧ ಘೋಷಿತವಾಗಿ ಇನ್ನೂ ಆರು ವಾರಗಳಾಗಿದ್ದವಷ್ಟೆ; ಆಗ ಈ ಪಡೆಯನ್ನು ವೈಪ್ರೆಸ್ ಸೇಲೆಯಂಟ್ ಗೆ ಕಳುಹಿಸಲಾಯಿತು ಮತ್ತು ಅಲ್ಲಿ, ೧೯೧೪ರ ಅಕ್ಟೋಬರ್ ತಿಂಗಳಲ್ಲಿ, ಈ ಸೇನಾಂಗಗಳು ಬಸ್ಸೀ ಕದನದಲ್ಲಿ ಪಾಲ್ಗೊಂಡವು.[೩೩] ಮಾರ್ಚ್ ೧೯೧೫ರಲ್ಲಿ ೭ನರಯ (ಮೀರತ್) ವಿಭಾಗವನ್ನು ನಿಯೋವ್ ಚಾಪಲೆ ಕದನದಲ್ಲಿ ಮುತ್ತಿಗೆ ಹಾಕುವುದಕ್ಕೆ ಮುಂದಾಳತ್ವ ವಹಿಸಲು ಆಯ್ಕೆ ಮಾಡಲಾಯಿತು.[೩೩] ಈ ದಂಡಯಾತ್ರಾ ದಳಕ್ಕೆ ಅವರು ಫ್ರ್ಯಾನ್ಸ್ ನಲ್ಲಿ ಕಾಲಿಟ್ಟಾಗ ನೀಡಲ್ಪಟ್ಟ ಲೀ ಎನ್ ಫೀಲ್ಡ್ ಬಂದೂಕುಗಳಂತಹ ನೂತನ ಶಸ್ತ್ರಗಳನ್ನು ಬಳಸುವುದರ ಬಗ್ಗೆ ಅರಿವು ಇಲ್ಲದಿರುವ ಕಾರಣ ಬಹಳವೇ ತೊಂದರೆಯಾಯಿತು; ಅಲ್ಲದೆ ಈ ದಳದ ಬಳಿ ಬಹಳ ಕಡಿಮೆ ಶಸ್ತ್ರಗಳಿದ್ದವು ಹಾಗೂ ಮುಂದಿನ ಸಾಲಿನಲ್ಲಿ ಯುದ್ಧಕ್ಕೆ ನಿಂತಿರುವಾಗ ತಮ್ಮ ಬಳಿ ಶಸ್ತ್ರಗಳೇ ಇಲ್ಲವಾಗಿ ಪಕ್ಕದ ಸೇನಾಂಗದವರನ್ನು ಶಸ್ತ್ರಾಸ್ತ್ರಗಳಿಗಾಗಿ ಹಾಗೂ ತಮ್ಮನ್ನು ರಕ್ಷಿಸಲಿಕ್ಕಾಗಿ ಅವಲಂಬಿಸುವಂತಹ ಪರಿಸ್ಥಿತಿ ಬಂದೊದಗಿತು.[೩೩] ಅವರಿಗೆ ಆ ಖಂಡದ ಹವಾಗುಣವೂ ಒಗ್ಗುತ್ತಿರಲಿಲ್ಲ ಹಾಗೂ ಚಳಿ ತಡೆಯಲು ಬೇಕಾದ ಬೆಚ್ಚನೆಯ ಬಟ್ಟೆಗಳು ಅವರ ಬಳಿ ಇರಲಿಲ್ಲ; ಹೀಗಾಗಿ ಅವರ ಮನೋಸ್ಥಿತಿಯು ಉತ್ತೇಜನಕಾರಿಯಾರಿರಲೇ ಇಲ್ಲ; ಅಷ್ಟೇ ಅಲ್ಲದೆ, ಮೀಸಲು ಪದ್ಧತಿಯೂ ಅವರಿಗೆ ಉರುಳಾಯಿತು - ಬೆಂಬಲಕ್ಕೆಂದು ಸೈನ್ಯಗಳನ್ನು ಯಾವುದೇ ತುಕಡಿಯಿಂದ ಕರೆಸಿಕೊಳ್ಳಲಾಗುತ್ತಿತ್ತು ಹಾಗೂ ಅವರ ನೂತನ ಘಟಕಗಳಿಗೆ ಯಾವ ವಿಧದಲ್ಲೂ ಹೊಂದಾಣಿಕೆಯಾಗುತ್ತಿರಲಿಲ್ಲ. ಅಧಿಕಾರಿಗಳ ಸಾವುಗಳು ಹೆಚ್ಚಿನ ತೊಡಕುಗಳನ್ನು ಉಂಟುಮಾಡುತ್ತಿದ್ದವು; ಏಕೆಂದರೆ ಹೋದವರ ಜಾಗಕ್ಕೆ ಬಂದಂತಹ ಅಧಿಕಾರಿಗಳಿಗೆ ಭಾರತೀಯ ಸೇನೆಯ ಪರಿಚಯವಿರುತ್ತಿರಲಿಲ್ಲ ಹಾಗೂ ಅವರ ಭಾಷೆಯನ್ನು ಮಾತನಾಡಲು ಬರುತ್ತಿರಲಿಲ್ಲ.[೩೩] ಖಿನ್ನತೆ ಹೆಚ್ಚಿದಂತೆ ಹಲವಾರು ಸೈನಿಕರು ರಣರಂಗದಿಂದ ಓಡಿಹೋದರು ಮತ್ತು ಕಡೆಗೆ ಪದಾತಿ ದಳಗಳನ್ನು ಹಿಂದಕ್ಕೆ ಕರೆದುಕೊಂಡು ಅಕ್ಟೋಬರ್ ೧೯೧೫ರಲ್ಲಿ ಈಜಿಪ್ಟ್ ಗೆ ಕಳುಹಿಸಲಾಯಿತು ಹಾಗೂ ಅವರ ಜಾಗದಲ್ಲಿ ಕಿಚನರ್ಸ್ ಆರ್ಮಿಯ ನೂತನ ಬ್ರಿಟಿಷ್ ವಿಭಾಗಗಳನ್ನು ನಿಯಮಿಸಲಾಯಿತು.[೩೩][೩೪]
ಪದಾತಿ ದಳಗಳನ್ನು ಹಿಂತೆಗೆದುಕೊಂಡನಂತರ, ವಾಯುವ್ಯದ ಗಡಿಯಲ್ಲಿ ಉಳಿದ ಭಾರತದ ಸೇನಾ ಘಟಕಗಳು ಕೇವಲ ಎರಡು ಅಶ್ವದಳಗಳಾಗಿದ್ದವು. ನವೆಂಬರ್ ೧೯೧೬ರಲ್ಲಿ, ಈ ಎರಡು ಭಾರತೀಯ ಅಶ್ವದಳ ವಿಭಾಗಗಳಿಗೆ ಮರುಸಂಖ್ಯೆ ನೀಡಿ ೧ನೆಯ ಮತ್ತು ೨ನೆಯ ಸಂಖ್ಯೆಯ ವಿಭಾಗಗಳನ್ನು ೪ನೆಯ ಮತ್ತು ೫ನೆಯ ಅಶ್ವದಳ ವಿಭಾಗಗಳೆಂದು ಕರೆದರು.[೩೫] ಬ್ರಿಟಿಷ್ ಅಶ್ವದಳಗಳ ಜೊತೆಜೊತೆಯೇ ಸೇವೆ ಸಲ್ಲಿಸುತ್ತಿದ್ದ ಈ ವಿಭಾಗಗಳನ್ನು ಮುಂದಿನ ಸಾಲಿನ ಕೊಂಚ ಹಿಂಭಾಗದಲ್ಲೇ ಇರಿಸಿಕೊಂಡು ದೊರೆಯಬಹುದೆಂದು ಆಶಾಭಾವ ಹೊಂದಿದ್ದ ಮುನ್ನಡೆಗಾಗಿ ಕಾಯುತ್ತಿದ್ದರು. ಯುದ್ಧದ ವೇಳೆಯಲ್ಲಿ ಕೆಲವೊಮ್ಮೆ ಈ ದಳದವರು ಕಂದಕಗಳಲ್ಲಿ ಪದಾತಿಗಳಂತೆ ಸೇವೆ ಸಲ್ಲಿಸಿದರು, ಪ್ರತಿ ಅಶ್ವದಳವೂ ಸವಾರಿಯಿಂದ ಕೆಳಗಿಳಿದಾಗ ಸವಾರಿರಹಿತ ದಳವಾಗಿ ಮಾರ್ಪಟ್ಟಿತು. ಇಂತಹ ಪರಿಸ್ಥಿತಿಯಲ್ಲಿ, ಈ ತುಕಡಿಗಳು ಮುಂದಿನ ಸಾಲಿಗೆ ಹೋದಾಗ ಅವು ಕೇವಲ ಸೇನಾಪ್ರದೇಶವನ್ನಷ್ಟೇ ಆಕ್ರಮಿಸಲು ಸಾಧ್ಯವಾಗುತ್ತಿತ್ತು.[೩೬] ಮಾರ್ಚ್ ೧೯೧೮ರಲ್ಲಿ ಈ ದಳವನ್ನೇ ಹಿಂದಕ್ಕೆ ಕರೆದು ಈಜಿಪ್ಟ್ ಗೆ ಕಳುಹಿಸುವ ಮುನ್ನ, ಈ ದಳವು ಸೊಮ್ಮೆಗಳ ಕದನ, ಬಾಝೆಂಟಿನ್ ಸಮರ, ಫ್ಲೆರ್ಸ್-ಕೌರ್ಸೆಲೆಟ್ಟೆ ಕದನ, ಹಿಂಡೆನ್ ಬರ್ಗ್ ರೇಖೆಯತ್ತ ಮುನ್ನಡೆ ಹಾಗೂ ಕಡೆಯದಾಗಿ ಕ್ಯಾಂಬ್ರಾಯ್ ಕದನಗಳಲ್ಲಿ ಪಾಲ್ಗೊಂಡಿತು.[೩೩]
ಫ್ರ್ಯಾನ್ಸ್ ಮತ್ತು ಬೆಲ್ಜಿಯಂಗಳಲ್ಲಿ ಸೇವೆ ಸಲ್ಲಿಸಿದ ೧೩೦,೦೦೦ ಭಾರತೀಯ ಸೈನಿಕರ ಪೈಕಿ ಸುಮಾರು ೯,೦೦೦ ಜನರು ಸಾವನ್ನಪ್ಪಿದರು.[೧೪]
ಭಾರತೀಯ ದಂಡಯಾತ್ರಾ ಪಡೆ B
[ಬದಲಾಯಿಸಿ]೧೯೧೪ರಲ್ಲಿ ಬ್ರಿಟಿಷ್ ಪೂರ್ವ ಆಫ್ರಿಕಾದ ರಾಜ್ಯಪಾಲರು ಜರ್ಮನಿಯ ಸೇನೆಯೊಡನೆ ಜರ್ಮನ್ ಪೂರ್ವ ಆಫ್ರಿಕಾದಲ್ಲಿ ಹೋರಾಡಲು ಸಹಾಯವನ್ನು ಕೋರಿದರು ಹಾಗೂ ಈ ಸಮಸ್ಯೆಯನ್ನು ಬಗೆಹರಿಸುವ ಜವಾಬ್ದಾರಿಯನ್ನು ಭಾರತ ಕಚೇರಿಗೆ ರವಾನಿಸಲಾಯಿತು; ಭಾರತವು ಎರಡು ತುಕಡಿಗಳನ್ನು ಜೋಡಣೆ ಮಾಡಿ ಹಡಗಿನ ಮೂಲಕ ಅವರಿಗೆ ಸಹಾಯ ಮಾಡಲು ಕಳುಹಿಸಿಕೊಟ್ಟಿತು.[೩೭] ಭಾರತೀಯ ದಂಡಯಾತ್ರಾ ಪಡೆ B ಯಲ್ಲಿ ೯ನೆಯ (ಸಿಕಂದರಾಬಾದ್) ವಿಭಾಗದಿಂದ ಆಯ್ದ ೨೭ನೆಯ (ಬೆಂಗಳೂರು) ಸೇನಾದಳ ಮತ್ತು ಒಂದು ಸಾಮ್ರಾಜ್ಯ ಸೇವಾ ಪದಾತಿ ದಳ, ಸೇನೆಗೆ ರಸ್ತೆ, ಸೇತುವೆ. ಇತ್ಯಾದಿಗಳನ್ನು ನಿರ್ಮಿಸಿಕೊಡುವ ಒಂದು ಸಹಾಯಕ ದಳ, ಗಿರಿ ಫಿರಂಗಿದಳದ ಒಂದು ತುಕಡಿ ಮತ್ತು ಎಂಜಿನಿಯರ್ ಗಳಿದ್ದು, ಈ ಪಡೆಯನ್ನು ಜರ್ಮನ್ ಪೂರ್ವ ಆಫ್ರಿಕಾದ ಮೇಲೆ ಆಕ್ರಮಣ ನಡೆಸುವ ಸಲುವಾಗಿ ಟಾಂಗನ್ಯಿಕಾಗೆ ಕಳುಹಿಸಲಾಯಿತು.[೩೮] ಮೇಜರ್ ಜನರಲ್ ಆರ್ಥರ್ ಐಟ್ಕೆನ್ ರ ನೇತೃತ್ವದಲ್ಲಿ ಈ ಪಡೆಯು ಟಾಂಗವನ್ನು ೧೯೧೪ರ ನವೆಂಬರ್ ೨-೩ರಂದು ತಲುಪಿತು. ನಂತರ ಜರುಗಿದ ಟಾಂಗ ಯುದ್ಧದಲ್ಲಿ, ಐಟ್ಕೆನ್ ರ ೮,೦೦೦ ಜನರುಳ್ಳ ಸೇನೆಯನ್ನು ೧,೦೦೦ ಜನರುಳ್ಳ, ಜರ್ಮನ್ ಕಮ್ಯಾಂಡರ್ ಪಾಲ್ ಎಮಿಲ್ ವಾನ್ ಲೆಟ್ಟೋ-ವೋರ್ಬೆಕ್ ರ ಅಧೀನದ ಪಡೆಯು ಹೀನಾಯವಾಗಿ ಸೋಲಿಸಿತು.[೩೯] ೮೧೭ ಸಾವುಗಳು, ನೂರಾರು ಬಂದೂಕುಗಳು, ೧೬ ಮೆಷೀನ್ ಗನ್ ಗಳು ಮತ್ತು ೬೦೦,೦೦೦ ಸುತ್ತಿಗಳಿಗಾಗುವಷ್ಟು ಮದ್ದುಗುಂಡುಗಳನ್ನು ಕಳೆದುಕೊಂಡ ಈ ಸೇನೆಯು ೧೯೧೪ರ ನವೆಂಬರ್ ೫ರಂದು ಹಿಂದಿರುಗಲು ಮತ್ತೆ ಹಡಗೇರಿತು.[೩೯]
ಭಾರತೀಯ ದಂಡಯಾತ್ರಾ ಪಡೆ C
[ಬದಲಾಯಿಸಿ]ಭಾರತೀಯ ದಂಡಯಾತ್ರಾ ಪಡೆ C ೧೯೧೪ರಲ್ಲಿ ಬ್ರಿಟಿಷ್ ಪೂರ್ವ ಆಫ್ರಿಕಾದಲ್ಲಿ ಸೇವೆ ಸಲ್ಲಿಸಲೆಂದು ಒಂದುಗೂಡಿಸಿದ ಎರಡನೆಯ ಪಡೆ; ಈ ಪಡೆಗಾಗಿ ಒಂದುಗೂಡಿದ ದಂಡುಗಳೆಂದರೆ ಐದು ಪದಾತಿ ಸೇನಾಂಗಗಳುಳ್ಳ ಸಾಮ್ರಾಜ್ಯ ಸೇವಾ ಪದಾತಿ ದಳ, ಭಾರತೀಯ ಸೇನೆಯ೨೯ನೆಯ ಪಂಜಾಬಿಗಳು, ರಾಜರುಗಳಾಳುತ್ತಿದ್ದ ರಾಜ್ಯಗಳಾದ ಜಿಂದ್, ಭರತ್ ಪುರ್, ಕಪೂರ್ ತಾಲಾ ಮತ್ತುರಾಂಪುರ್ ಗಳ ಸೇನೆಗಳು, ಒಂದು ಸ್ವಯಂಸೇವಕ ೧೫ ಪೌಂಡರ್ ಫಿರಂಗಿದಳ, ೨೨ನೆಯ (ದೇರಾಜಾತ್) ಬೆಟ್ಟಗುಡ್ಡಗಳ ಫಿರಂಗಿ ದಳ (ಗಡಿನಾಡ ಪಡೆ), ಒಂದು ಸ್ವಯಂಸೇವಕ ಮ್ಯಾಕ್ಸಿಮ್ ಗನ್ ಫಿರಂಗಿದಳ ಮತ್ತು ಒಂದು ರಣಾಂಗಂ ತುರ್ತುಚಿಕಿತ್ಸಾವಾಹನ. ಈ ಪಡೆಯ ಪ್ರಧಾನ ಕಾರ್ಯವು ಉಗಾಂಡಾದ ರೈಲುಮಾರ್ಗದ ಪಹರೆ ಹಾಗೂ ಕಿಂಗ್ಸ್ ಆಫ್ರಿಕನ್ ರೈಫಲ್ಸ್ ಗಳನ್ನು ಕಾಯುವಂತಹುದಾಗಿದ್ದು ಸಂಪರ್ಕ ರಕ್ಷಣಾ ಚಟುವಟಿಕೆಗಳಿಗಾಗಿ ಈ ಪಡೆಯನ್ನು ಬಳಸಿಕೊಳ್ಳುವುದೆಂದು ಹಂಚಿಕೆ ಹೂಡಲಾಗಿತ್ತು. ಮೊಂಬಾಸಾ ತಲುಪಿದ ನಂತರ, ಪಡೆ C ವಿದಳಗೊಳಿಸಲಾಯಿತು ಮತ್ತು ಅದರ ಘಟಕಗಳನ್ನು ಕ್ರಮೇಣ ಬೇರೆಬೇರೆಯಾಗಿಯೇ ಬಳಸಿಕೊಳ್ಳಲಾಯಿತು.[೨೯] ಈ ಪಡೆಯು ಭಾಗವಹಿಸಿದ್ದ ಒಂದು ಕ್ರಿಯಾತ್ಮಕ ಕಾರ್ಯವೆಂದರೆ ಅಕ್ಟೋಬರ್ ೧೯೧೪ರಲ್ಲಿ ಕಿಲಿಮಾಂಜೆರೋ ಕದನದಲ್ಲಿ ಹೋರಾಡಿದುದು. ೪,೦೦೦ ಜನಗಳುಳ್ಳ ಪಡೆ C ಬ್ರಿಟಿಷ್ ಮತ್ತು ಜರ್ಮನ್ ಪೂರ್ವ ಆಫ್ರಿಕಾಗಳ ಗಡಿಯ ಬಳಿ, ಬ್ರಿಗೇಡಿಯಲ್ ಜನರಲ್ ಜೆ.ಎಂ. ಸ್ಟುವರ್ಟ್ ರ ನೇತೃತ್ವದಲ್ಲಿ, ಜಮಾಯಿಸಿತು. ಆ ಪ್ರದೇಶದಲ್ಲಿನ ಜರ್ಮನ್ ಸೇನೆಯ ಸಂಖ್ಯೆಯು ೨೦೦ ಎಂಬ ಬೇಹುಗಾರರ ವರದಿಯು ತಪ್ಪು ವರದಿಯೆಂದು ನಂತರ ತಿಳಿದುಬಂದಿತು;ಆ ಪ್ರಾಂತ್ಯದಲ್ಲಿ ೬೦೦ ಆಸ್ಕಾರಿಗಳು ಮೂರು ಕಂಪನಿಗಳಲ್ಲಿ ಇದ್ದರಲ್ಲದೆ ವಸಾಹತು ಸ್ವಯಂಸೇವಕರು, ೮೬ ಯುವ ಜರ್ಮನ್ ರಾವುತರು ಇದ್ದರು.[೪೦] ನವೆಂಬರ್ ೩, ೧೯೧೪ರಂದು ಬ್ರಿಟಿಷ್ ಪಡೆಗೆ ಸೇರಿದಂತಹ ಸುಮಾರು ೧,೫೦೦ ಪಂಜಾಬಿಗಳು ಲಾಂಗಿಡೋ ಬಳಿ ಬೆಟ್ಟವನ್ನು ಏರಿ ಮನ್ನಡೆದರು; ಆದರೆ ಪ್ರಬಲವಾದ ಜರ್ಮನಿಯ ಸೈನಿಕರ ಪಡೆಯು ಸುರಕ್ಷಿತ ಸ್ಥಳಗಳಿಂದ ಎರಡೂ ಕಡೆಗಳಿಂದ ನಡೆಸಿದ ಗುಂಡಿನ ದಾಳಿಗೆ, ಮುಂಜಾನೆಯ ಮಂಜಿನಲ್ಲಿ ಮುಂದಡಿಯಿಡುತ್ತುದ್ದ ಇವರು ಸಿಲುಕಿದರು. ಭಾರತದ ಬೃಹತ್ ಪದಾತಿ ದಳವು ಎದುರಾಳಿಗಳ ದಾಳಿಯನ್ನು ಪರಿಣಾಮಕಾರಿಯಾಗಿ ಪ್ರತಿರೋಧಿಸಿತು, ಆದರೆ, ಹಗಲಿನಲ್ಲಿ ಬ್ರಿಟಿಷ್ ಆಕ್ರಮಣಕಾರರು ಮುಂದಡಿಯಿಡುವಲ್ಲಿ ವಿಫಲರಾದುದಲ್ಲದೆ ಅಪಾರ ಸಾವುನೋವುಗಳನ್ನು ಅನುಭವಿಸಿದರು. ಬೆಳಗಿನ ಅರ್ಧ ಸಮಯ ಕಳೆಯುವುದರೊಳಗೆ ಜರ್ಮನ್ನರ ವಾಹನ, ಕುದುರೆಗಳನ್ನೇರಿದ ರಾವುತರ ಪಡೆಯೊಂದು ಶಸ್ತ್ರಾಸ್ತ್ರಗಳೊಡನೆ ಸಜ್ಜಾಗಿ ಬಂದು ಸೈನಿಕರಿಗೆ ಅವಶ್ಯವಾದ ವಸ್ತುಗಳ ಸರಬರಾಜನ್ನು ಹೊತ್ತು ತರುತ್ತಿದ್ದ ಸುಮಾರು ನೂರು ಹೇಸರಕತ್ತೆಗಳ ಹಿಂಡಿನ ಮೇಲೆ ಆಕ್ರಮಣ ಮಾಡಿ ಆ ಹಿಂಡನ್ನು ನಜ್ಜುಗುಜ್ಜಾಗಿಸಿ ದಿಕ್ಕಾಪಾಲಾಗಿಸಿತು. ಹೀಗೆ ಚೆಲ್ಲಾಪಿಲ್ಲಿಯಾದ ಸೇನಾಪಡೆಯನ್ನು ಹೊಂದಿದ್ದ ಬ್ರಿಟಿಷ್ ಅಧಿಕಾರಿಗಳು ಕತ್ತಲಾಗುವವರೆಗೆ ಕಾದು, ತಾವು ಇನ್ನು ಅಲ್ಲಿರುವುದು ಕ್ಷೇಮವಲ್ಲವೆಂದು ಮನಗಂಡು, ಬೆಟ್ಟದಿಂದ ಕೆಳಗಿಳಿದು, ಬ್ರಿಟಿಷ್ ಪೂರ್ವ ಆಫ್ರಿಕಾದತ್ತ 'ಬಂದ ದಾರಿಗೆ ಸುಂಕವಿಲ್ಲ' ಯಾವುದೇ ವಿಧವಾದ ಸಾಧನೆಯೂ ಇಲ್ಲದೆ, ಮರಳಿದರು.[೪೧][೪೨]
ಭಾರತೀಯ ದಂಡಯಾತ್ರಾ ಪಡೆ D
[ಬದಲಾಯಿಸಿ]ಹೊರದೇಶದಲ್ಲಿ ಸೇವೆ ಸಲ್ಲಿಸಿದ ಭಾರತೀಯ ಸೇನೆಯ ಅತಿ ದೊಡ್ಡ ಪಡೆಯೇ ಭಾರತೀಯ ದಂಡಯಾತ್ರಾ ಪಡೆ ದ; ಇದು ಮೆಸೊಪೊಟೋಮಿಯಾದಲ್ಲಿ, ಲೆಫ್ಟಿನೆಂಟ್ ಕರ್ನಲ್ ಸರ್ ಜಾನ್ ನಿಕ್ಸನ್ ರ ಮುಖಂಡತ್ವದಲ್ಲಿ ಸೇವೆ ಸಲ್ಲಿಸಿತು.[೩೩] ನವೆಂಬರ್ ೧೯೧೪ರಲ್ಲಿ ಮೊದಲು ಕಳುಹಿಸಲ್ಪಟ್ಟ ಘಟಕ ೬ನೆಯ (ಪೂನಾ) ವಿಭಾಗವಾಗಿದ್ದು ಬಾರ್ಸಾದಲ್ಲಿ ಹಾಗೂ ಅದರ ಸುತ್ತಮುತ್ತ ಇದ್ದ ಬ್ರಿಟಿಷ್ ಸ್ಥಾಪಿತ ತೈಲಕೇಂದ್ರಗಳನ್ನು ರಕ್ಷಿಸುವ ಕೆಲಸವನ್ನು ಇದಕ್ಕೆ ವಿಧಿಸಲಾಗಿತ್ತು .[೨೯] ಮೆಸಪೊಟೋಮಿಯನ್ ಚಳುವಳಿಯ ಅಂಗವಾಗಿ ಈ ಸೇನಾಂಗದವರು ಮೇಜರ್ ಜನರಲ್ ಬ್ಯಾರೆಟ್ ರ ಮೇಲ್ವಿಚಾರಣೆಯಲ್ಲಿ ಹಾಗೂ ನಂತರ ಮೇಜರ್ ಜನರಲ್ ಟೌನ್ ಷೆಂಡ್ ರ ಕೈಕೆಳಗೆ ಸೇವೆ ಸಲ್ಲಿಸಿದರು. ಮೊದಮೊದಲು ಸತತವಾದ ಜಯಗಳು ಲಭಿಸಿದ ನಂತರ, ಈ ಚಳುವಳಿಗೆ ಬಲು ದೊಡ್ಡದಾದ ಹಿನ್ನಡೆಯು ಸಿಟೆಸೈಫಾನ್ ಕದನದಲ್ಲಿ ಸಂಭವಿಸಿತು; ನವೆಂಬರ್ ೧೯೧೫ರಲ್ಲಿ ಸಂಭವಿಸಿದ ಈ ಆಘಾತಕ್ಕೆ ಸೇನಾ ಸಂಚಾಲನಾ ನಿರ್ಬಂಧಗಳು ಕಾರಣವಾದವು.[೨೯] ಈ ಕಾರ್ಯಾಚರಣೆಯ ನಂತರ, ಪೂನಾ ವಿಭಾಗವು ಕಟ್ ಗೆ ಹಿಂದಿರುಗಿತು; ಅಲ್ಲಿ ಟೌನ್ ಷೆಂಡ್ ನಗರಕ್ಕೆ ಶತ್ರುಸೇನೆ ಹಾಕಿದ್ದ ಮುತ್ತಿಗೆಯನ್ನು ಮೆಟ್ಟಿಹಾಕಿ ವಶಪಡಿಸಿಕೊಳ್ಳಲು ನಿರ್ಧರಿಸಿದರು, ಹೀಗಾಗಿ ಕಟ್ ನ ಮುತ್ತಿಗೆಯು ಆರಂಭವಾಯಿತು.
೧೯೧೬ರ ಜನವರಿಯಿಂದ ಮಾರ್ಚ್ ವರೆಗೆ ಟೌನ್ ಷೆಂಡ್ ಶತ್ರುಗಳ ಮುತ್ತಿಗೆಯನ್ನು ಹಿಮ್ಮೆಟ್ಟಿಸಲು ಹಲವಾರು ದಾಳಿಗಳನ್ನು ನಡೆಸಿದರು. ಅನುಕ್ರಮವಾಗಿ, ಆ ದಾಳಿಗಳು ಷೇಕ್ ಸಾದ್ ನ ಸಮರ,ವಾಡಿಯ ಸಮರ , {2ಹನ್ನಾದ ಸಮರ{/2}, ಮತ್ತು ದುಜಾಯ್ಲಾ ರಿಡೌಟ್ ಸಮರಗಳಲ್ಲಿ ಸಂಭವಿಸಿದವು.[೪೩]
ಆದರೆ ಶತ್ರುವ್ಯೂಹವನ್ನು ಛೇದಿಸಿ ಮುನ್ನುಗ್ಗುವ ಎಲ್ಲಾ ಯತ್ನಗಳು ವಿಫಲವಾದವು ಮತ್ತು ಎರಡೂ ಬಣಗಳು ಬಹಳ ಸಾವುನೋವುಗಳನ್ನು ಅನುಭವಿಸಿ ಎರಡೂ ಕಡೆಗಳಿಗೆ ಈ ಮುತ್ತಿಗೆ ಬಹಳ ದುಬಾರಿಯಾಯಿತು. ಫೆಬ್ರವರಿಯ ವೇಳೆಗೆ ಕಟ್-ಆಲ್-ಅಮಾರಾದಲ್ಲಿದ್ದ ಟೌನ್ ಷೆಂಡ್ ರ ಬಳಿಯಿದ್ದ ಆಹಾರ ಹಾಗೂ ಗೆಲ್ಲುವ ಭರವಸೆಗಳೆರಡೂ ಕ್ಷೀಣಿಸಲಾರಂಭಿಸಿದವು. ರೋಗಗಳು ಬಹಳ ಬೇಗ ಹರಡಲಾರಂಭಿಸಿ, ಅವನ್ನು ತಡೆಯುವವುದಾಗಲೀ, ಗುಣ ಪಡಿಸುವುದಾಗಲೀ ಆಗದ ಮಾತಾಯಿತು; ಏಪ್ರಿಲ್ ೧೯೧೬ರಲ್ಲಿ ಟೌನ್ ಷೆಂಡ್ ಶರಣಾದರು.[೨೯] ಡಿಸೆಂಬರ್ ೧೯೧೬ರಲ್ಲಿ ೩ನೆಯ ಮತ್ತು ೭ನೆಯ ವಿಭಾಗಗಳು ಪಶ್ಚಿಮದ ಗಡಿಪ್ರದೇಶದಿಂದ ಬಂದು ಸೇರಿದವು.[೪೪]
೧೯೧೭ರಲ್ಲಿ III ಸೇನಾಂಗ(ಭಾರತ)[೨೯] ದಲ್ಲಿನ ಭಾರತೀಯ ಸೇನೆಯ ಒಂದು ಅಶ್ವದಳ ಮತ್ತು ಏಳು ಪದಾತಿ ದಳಗಳನ್ನು ಹೊಂದಿದ್ದ,ಫ್ರೆಡೆರಿಕ್ ಸ್ಟಾನ್ಲೀ ಮಾಡ್ ರ ನೇತೃತ್ವದ ಬ್ರಿಟಿಷ್ ಪಡೆಯು ಬಾಗ್ದಾದ್ ನತ್ತ ಮುಂದುವರಿಯಿತು ಹಾಗೂ ಮಾರ್ಚ್ ನಲ್ಲಿ ಬಾಗ್ದಾದನ್ನು ವಶಪಡಿಸಿಕೊಂಡಿತು.[clarification needed] ಈ ಮುನ್ನಡೆಯು ೧೯೧೮ರಲ್ಲೂ ಮುಂದುವರಿಯುತು ಮತ್ತು ಅಕ್ಟೋಬರ್ ನಲ್ಲಿ ಶರ್ಗಾತ್ ಕದನದ ನಂತರ, ಟರ್ಕಿಯ ಸೇನೆಗಳ ಶರಣಾದವು ಮತ್ತು ಮುಡ್ರೋಸ್ ಕದನವಿರಾಮದ ಒಪ್ಪಂದಕ್ಕೆ ಸಹಿ ಹಾಕಲಾಯಿತು.[೪೫] ಮೆಸೊಪೊಟೋಮಿಯಾದ ಚಳುವಳಿಯು ಸರಿಸುಮಾರು ಭಾರತೀಯ ಸೇನೆಯ ಚಳುವಳಿಯೇ ಆಗಿತ್ತೆನ್ನಬಹುದು; ಏಕೆಂದರೆ, ಇದರಲ್ಲಿ ತೊಡಗಿದ್ದ ಬ್ರಿಟಿಷ್ ದಳಗಳೆಂದರೆ ೧೩ನೆಯ (ಪಶ್ಚಿಮದ) ವಿಭಾಗ ಮತ್ತು ಭಾರತೀಯ ದಳಗಳಿಗೆ ನೇಮಕಗೊಂಡಿದ್ದ ಬ್ರಿಟಿಷ್ ತುಕಡಿಗಳಷ್ಟೆ.[೪೩] ಈ ಚಳುವಳಿಯಲ್ಲಿ ೧೧,೦೧೨ ಮಡಿದರು, ೩,೯೮೫ ಜನರು ಗಾಯದಿಂದ ಸತ್ತರು, ೧೨,೬೭೮ ಜನರು ರೋಗದಿಂದ ಸತ್ತರು, ೧೩,೪೯೨ ಜನರು ಕಾಣೆಯಾದರು ಅಥವಾ ಸೆರೆಹಿಡಿಯಲ್ಪಟ್ಟರು (ಕಟ್ ನ ೯,೦೦೦ ಸೆರೆಯಾಳುಗಳೂ ಸೇರಿದಂತೆ), ಹಾಗೂ ೫೧,೮೩೬ ಜನರು ಗಾಯಗೊಂಡರು.[೪೬]
ಭಾರತೀಯ ದಂಡಯಾತ್ರಾ ಪಡೆ E
[ಬದಲಾಯಿಸಿ]ಭಾರತೀಯ ದಂಡಯಾತ್ರಾ ಪಡೆ Eಯಲ್ಲಿ ೧೯೧೮ರಲ್ಲಿ ಫ್ರ್ಯಾನ್ಸ್ ನಿಂದ ವರ್ಗವಾದ ಎರಡು ಭಾರತೀಯ ಅಶ್ವಪಡೆಯ ವಿಭಾಗಗಳು (೪ನೆಯ ಅಶ್ವಪಡೆಯ ವಿಭಾಗ ಮತ್ತು ೫ನೆಯ ಅಶ್ವಪಡೆಯ ವಿಭಾಗ)ಇದ್ದವು ಹಾಗೂ ಈ ಪಡೆಯನ್ನು ಪ್ಯಾಲೆಸ್ಟೈನ್ ನಲ್ಲಿ ಸೇವೆಗಾಗಿ ಬಳಸಿಕೊಳ್ಳಲಾಯಿತು. ಈ ಪಡೆಯೊಂದಿಗೆ ಸಾಮ್ರಾಜ್ಯ ಸೇವಾ ಪದಾತಿ ದಳವೂ ಸೇರಿತು; ಈ ದಳವು ಮೂರು ರಾಜರಾಳ್ವಿಕೆಯಲ್ಲಿದ್ದ ರಾಜ್ಯಗಳಾದ ಮೈಸೂರು, ಹೈದರಾಬಾದ್ ಮತ್ತು ಜೋಧ್ ಪುರ್ ಗಳ ಲ್ಯಾನ್ಸರ್ ರೆಜಿಮೆಂಟುಗಳಿಂದ ಕೂಡಿದುದಾಗಿತ್ತು .[೨೯] ೩ನೆಯ (ಲಾಹೋರ್) ವಿಭಾಗ, ಮತ್ತು ೭ನೆಯ (ಮೀರತ್) ವಿಭಾಗಗಳನ್ನು ಮೆಸೊಪೊಟೋಮಿಯಾಗೆ ವರ್ಗಾಯಿಸಲಾಯಿತು.[೪೭] ಅದೇ ವೇಳೆಗೆ ೩೬ ಭಾರತೀಯ ಸೇನಾ ತುಕಡಿಗಳನ್ನು ಬ್ರಿಟಿಷ್ ಸೇನೆಯ ಬಲವರ್ಧನೆಗಾಗಿ ಈ ವಿಭಾಗಗಳಿಗೆ ಕಳುಹಿಸಲಾಯಿತು: ೧೦ನೆಯ (ಐರಿಷ್) ವಿಭಾಗ, ೫೩ನೆಯ ವಿಭಾಗ, ೬೦ನೆಯ ವಿಭಾಗ ಮತ್ತು ೭೫ನೆಯ ವಿಭಾಗಗಳು; ಈ ಎಲ್ಲಾ ವಿಭಾಗಗಳು ಭಾರತೀಯ ವಿಭಾಗೀಯ ಮಾದರಿಯಲ್ಲೇ ರಚಿಸಲಾಗಿದ್ದು ಒಬ್ಬ ಬ್ರಿಟಿಷ್ ಮತ್ತು ಮೂವರು ಭಾರತೀಯ ತುಕಡಿಗಳು ಪ್ರತಿ ದಂಡಿನಲ್ಲಿದ್ದವು.[೪೭]
ಭಾರತೀಯ ದಂಡಯಾತ್ರಾ ಪಡೆ F
[ಬದಲಾಯಿಸಿ]ಭಾರತೀಯ ದಂಡಯಾತ್ರಾ ಪಡೆ F ೧೦ನೆಯ ಭಾರತೀಯ ವಿಭಾಗ ಮತ್ತು ೧೧ನೆಯ ಭಾರತೀಯ ವಿಭಾಗಗಳನ್ನು ಹೊಂದಿದ್ದು, ಈ ಎರಡೂ ವಿಭಾಗಗಳು ಈಜಿಪ್ಟ್ ನಲ್ಲಿ ೧೯೧೪ರಲ್ಲಿ ರಚಿತವಾಗಿದ್ದು, ಸೂಯಝ್ ಕಾಲುವೆಯನ್ನು ಕಾಯುವುದಕ್ಕಾಗಿ ಇವನ್ನು ನಿಯಮಿಸಲಾಗಿತ್ತು. ಈ ಪಡೆಗೆ ಸೇರಿದ ಇತರ ತುಕಡಿಗಳೆಂದರೆ ನಿಯಮಿತವಾದ ೮ನೆಯ ಲಕ್ನೋ ವಿಭಾಗದಿಂದ ಬ್ರಿಟಿಷ್ ದಂಡುಗಳ ರಹಿತವಾದ ೨೨ನೆಯ ಲಕ್ನೋ ಪದಾತಿ ದಳ ಮತ್ತು ಒಂದು ಸಾಮ್ರಾಜ್ಯ ಸೇವಾ ಅಶ್ವಪಡೆಯ ದಳ.[೪೮]
೧೯೧೬ರಲ್ಲಿ ೧೦ನೆಯ ವಿಭಾಗವನ್ನು ವಿದಳಗೊಳಿಸಲಾಯಿತು ಮತ್ತು ಅದರ ತುಕಡಿಗಳನ್ನು ಬೇರೆ ಸೇನಾಂಗಗಳಿಗೆ ಸೇರಿಸಲಾಯಿತು.[೨೯] ೨೮ನೆಯ ಸೇನಾದಳವನ್ನು ೭ನೆಯ (ಮೀರತ್) ವಿಭಾಗಕ್ಕೆ ೧೯೧೫ರಲ್ಲಿ ನಿಯಮಿಸಲಾಯಿತು, the ೨೯ನೆಯ ಸೇನಾದಳವು ಗಲ್ಲಿಪೊಲಿ ಚಳುವಳಿಯಲ್ಲಿ ಸ್ವತಂತ್ರವಾಗಿ ಸೇವೆ ಸಲ್ಲಿಸಿತು ಹಾಗೂ ಜೂನ್ ೧೯೧೭ರಲ್ಲಿ ವಿದಳಗಳಿಸಲಾಯಿತು. ೩೦ನೆಯ ಸೇನಾದಳವನ್ನು ಮೊದಲಿಗೆ ೧೨ನೆಯ ಭಾರತೀಯ ವಿಭಾಗಕ್ಕೆ ಏಪ್ರಿಲ್ ೧೯೧೫ರಲ್ಲಿ ಸೇರಿಸಲಾಯಿತು, ನಂತರ ಅದನ್ನು ೬ನೆಯ (ಪೂನಾ) ವಿಭಾಗಕ್ಕೆ ಸೆಪ್ಟೆಂಬರ್ ೧೯೧೫ರಲ್ಲಿ ವರ್ಗಾಯಿಸಲಾಯಿತು.[೪೯]
೧೧ನೆಯ ವಿಭಾಗವನ್ನು ೧೯೧೫ರಲ್ಲಿಯೇ, ಈ ಮುನ್ನವೇ, ವಿದಳಗೊಳಿಸಲಾಗಿತ್ತು, ಆದರೆ ಅದರ ಸೇನಾಂಗಗಳು ಹೆಚ್ಚು ದಿನ ಸೇವೆ ಸಲ್ಲಿಸಲಿಲ್ಲ.[೨೯] ೩೧st ದಳವು ಜನವರಿ ೧೯೧೬ರಲ್ಲಿ ೧೦ನೆಯ ವಿಭಾಗಕ್ಕೆ ಸೇರ್ಪಡೆಯಾಯಿತು, ಆದರೆ ಒಂದು ತಿಂಗಳ ನಂತರ ವಿಚ್ಛಿನ್ನಗೊಳಿಸಲಾಯಿತು. ೩೨ನೆಯ ದಳವನ್ನು ಜನವರಿ ೧೯೧೬ರಲ್ಲಿ ವಿದಳಗೊಳಿಸಲಾಯಿತು. ೩೩ನೆಯ ದಳವನ್ನು ೧೯೧೫ರ ಆಗಸ್ಟ್ ನಲ್ಲಿ ಪರ್ಷಿಯಾದ ಬುಷೈರ್ ಗೆ ಕಳುಹಿಸಲಾಯಿತು ಹಾಗೂ ನಂತರ ೧೯೧೫ರ ಡಿಸೆಂಬರ್ ನಲ್ಲಿ ವಿಚ್ಛಿನ್ನಗೊಳಿಸಲಾಯಿತು.[೪೯]
ಭಾರತೀಯ ದಂಡಯಾತ್ರಾ ಪಡೆ G
[ಬದಲಾಯಿಸಿ]ಏಪ್ರಿಲ್ ೧೯೧೫ರಲ್ಲಿ ಭಾರತೀಯ ದಂಡಯಾತ್ರಾ ಪಡೆ G ಯನ್ನು ಗಲ್ಲಿಪೊಲಿ ಚಳುವಳಿಯನ್ನು ಸಬಲಗೊಳಿಸಲು ಕಳುಹಿಸಲಾಯಿತು.[೧೪] ಅದು ತನ್ನ ಜನಕವಿಭಾಗವಾದ ೧೦ನೆಯ ಭಾರತೀಯ ವಿಭಾಗದಿಂದ ದೂರದಲ್ಲಿ ಸೇವೆ ಸಲ್ಲಿಸಿದ ೨೯ನೆಯ ವಿಭಾಗವನ್ನು ಅದರ ಅಂಗವಾಗಿ ಹೊಂದಿತ್ತು.[೨೯] ಗೂರ್ಖಾಗಳ ಮೂರು ತುಕಡಿಗಳು ಮತ್ತು ಒಂದು ಸಿಖ್ಖರ ತುಕಡಿಯನ್ನು ಹೊಂದಿದ್ದು,[೫೦] ಈ ದಳವನ್ನು ಈಜಿಪ್ಟ್ ನಿಂದ ಕಳುಹಿಸಲಾಯಿತು ಮತ್ತು ಹಿಂದಿನ ಸಮರಗಳಲ್ಲಿ ನಶಿಸಿಹೋಗಿದ್ದ ಬ್ರಿಟಿಷ್ ೨೯ನೆಯ ವಿಭಾಗಕ್ಕೆ ಸೇರಿಸಲಾಯಿತು.[೫೧] ಎರಡನೆಯ ಕ್ರಿಥಿಯ ಯುದ್ಧದ ಸಂದರ್ಭದಲ್ಲಿ ಕಾವಲುಪಡೆಯಾಗಿ ಇರಿಸಲ್ಪಟ್ಟಿದ್ದ ಈ ದಳವು ಮೂರನೆಯ ಕ್ರಿಥಿಯ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿತು. ಎಡಭಾಗದಲ್ಲಿ ಮುನ್ನಡೆ ಸಾಧಿಸುತ್ತಿದ್ದ ಈ ದಳವನ್ನು ಬಹಳ ಬೇಗ ತಡೆಹಿಡಿಯಲಾಯಿತು; ಏಜಿಯನ್ ತೀರ ದಲ್ಲಿ ಮಾತ್ರ ೧/೬ನೆಯ ಗೂರ್ಖಾ ರೈಫಲ್ಸ್ ಪಡೆ ಮುನ್ನಡೆ ಸಾಧಿಸಲು ಸಾಧ್ಯವಾಯಿತು. ಗಲ್ಲಿ ಕಂದಕದ ನೆಲದ ಮೇಲೆ ಮುಂದಕ್ಕೆ ಸಾಗುತ್ತಿದ್ದ ೧೪ನೆಯ ಫೆರೋಝ್ ಪುರ್ ಸಿಖ್ಖರ ದಂಡು ಸರಿಸುಮಾರು ನಾಶವೇ ಆಗಿಹೋಯಿತು; ೫೧೪ ಸೈನಿಕರ ಪೈಕಿ ೩೮೦ ಜನ ಮರಣ ಹೊಂದಿದರು ಹಾಗೂ ಆ ದಳದ ೮೦% ಅಧಿಕಾರಿಗಳು ಹತರಾದರು. ಈ ದಳವು ನಂತರ ಗಲ್ಲಿ ಕಂದಕ ಸಮರದಲ್ಲಿ ಪಾಲ್ಗೊಂಡಿತು ಹಾಗೂ ಇಲ್ಲಿ ೨/೧೦ನೆಯ ಗೂರ್ಖಾ ರೈಫಲ್ಸ್ ಪಡೆಯು ಅರ್ಧ ಮೈಲಿಯಷ್ಟು ಮುನ್ನಡೆ ಸಾಧಿಸಲು ಸಾಧ್ಯವಾಯಿತು. ತದನಂತರ ಈ ಪಡೆಯು ಸಾರಿ ಬಾಯ್ರ್ ಸಮರದಲ್ಲಿ ಭಾಗವಹಿಸಿತು; ನೌಕಾಪಡೆಯ ಬಾಂಬ್ ಧಾಳಿಯ ರಕ್ಷೆಯಲ್ಲಿ, ೧/೬ನೆಯ ಗೂರ್ಖಾ ರೈಫಲ್ಸ್ ದಳವು ಆ ಬೆಟ್ಟವನ್ನು ಆಕ್ರಮಿಸಿ, ವಶಪಡಿಸಿಕೊಂಡಿತು; ತದನಂತರ ಆ ಬೆಟ್ಟದ ಮೇಲೆ ರಾಯಲ್ ನೌಕಾಪಡೆಯು ಷೆಲ್ ದಾಳಿ ನಡೆಸಿತು. ಅವರ ಸಾವುನೋವುಗಳು ಹೆಚ್ಚಿ, ದಳದ ನೇತೃತ್ವವನ್ನು ಸೇನಾಂಗದ ವೈದ್ಯಕೀಯ ಅಧಿಕಾರಿಗಳು ವಹಿಸಿಕೊಳ್ಳಬೇಕಾದ ಸಂದರ್ಭ ಬಂದೊದಗಿದಾಗ ದಳವು ಹೊರಟ ಜಾಗಕ್ಕೇ ಹಿಂದಿರುಗುವುದು ಅನಿವಾರ್ಯವಾಯಿತು.[೫೨] ಸಾರಿ ಬಾಯ್ರ್ ನ ಆಕ್ರಮಣವು ವಿಫಲವಾದನಂತರ ಈ ದಳವನ್ನು ಈಜಿಪ್ಟ್ ಗೆ ವಾಪಸ್ ಕರೆದುಕೊಳ್ಳಲಾಯಿತು. ಈ ಸಮರದ ಅವಧಿಯಲ್ಲಿ ೨೯ನೆಯ ದಳದ ೧,೩೫೮ ಸೈನಿಕರು ಮಡಿದರು ಮತ್ತು ೩,೪೨೧ ಜನರು ಗಾಯಗೊಂಡರು.[೫೩]
ಇತರ ಕಾರ್ಯಾಚರಣೆಗಳು:
[ಬದಲಾಯಿಸಿ]ತ್ಸಿಂಗ್ ತಾವ್ ಗೆ ಮುತ್ತಿಗೆ
[ಬದಲಾಯಿಸಿ]ಚೀನಾದ ಟಿಯಾಂಜಿನ್ ಶಹರದ ಕಾವಲುಸೇನೆಯ ಅಂಗವಾಗಿದ್ದ ಒಂದು ಭಾರತೀಯ ಸೇನೆಯ ಅಂಗವಾದ ೩೬ನೆಯ ಸಿಖ್ಖರ ದಳವು ತ್ಸಿಂಗ್ ತಾವ್ ನ ಮುತ್ತಿಗೆಯಲ್ಲಿ ಪಾಲ್ಗೊಂಡಿತು. ತ್ಸಿಂಗ್ ತಾವ್ ಜರ್ಮನ್ನರ ಹತೋಟಿಯಲ್ಲಿದ್ದ ಚೀನಾದ ಬಂದರಾಗಿತ್ತು.[೫೪] ಬ್ರಿಟಿಷ್ ಸರ್ಕಾರ ಮತ್ತು ಇತರ ಸಹ ಯೂರೋಪಿಯನ್ ದೇಶಗಳು ಈ ಪ್ರದೇಶದ ಬಗ್ಗೆ ಜಪಾನೀಯರಿಗಿದ್ದ ಗುರಿ ಮತ್ತು ಉದ್ದೇಶಗಳ ಬಗ್ಗೆ ಆತಂಕಗೊಂಡಿದ್ದವು; ಆದ್ದರಿಂ ಒಂದು ಚಿಕ್ಕ ಲಾಂಛನಾತ್ಮಕವಾದ ಬ್ರಿಟಿಷ್ ಸೇನೆಯನ್ನು ಟಿಯಾಂಜಿನ್ ನಿಂದ ಅಲ್ಲಿಗೆ ಕಳುಹಿಸುವುದರ ಮೂಲಕ ತಮ್ಮ ಆತಂಕವನ್ನು ಹೋಗಲಾಡಿಸಿಕೊಳ್ಳಲು ತೀರ್ಮಾನಿಸಲಾಯಿತು. ೧,೫೦೦ ಸೈನಿಕರಿದ್ದ ಈ ತುಕಡಿಯನ್ನು ಬ್ರಿಗೇಡಿಯರ್-ಜನರಲ್ ನಥಾನಿಯಲ್ ವಾಲ್ಟರ್ ಬರ್ನಾರ್ಡಿಸ್ಟನ್ ರ ನೇತೃತ್ವದಲ್ಲಿ ನಡೆಸಲಾಗಿದ್ದು, ಅದರಲ್ಲಿ ೧,೦೦೦ ೨ನೆಯ ಸೌತ್ ವೇಲ್ಸ್ ಬಾರ್ಡರರ್ಸ್ ಸೇನಾದಳಕ್ಕೆ ಸೇರಿದ ಸೈನಿಕರು ಇದ್ದರು ಮತ್ತು ನಂತರದಲ್ಲಿ ಇವರನ್ನು ೩೬ನೆಯ ಸಿಖ್ ದಳಸ ೫೦೦ ಸೈನಿಕರು ಜೊತೆಗೂಡಿದರು.[೫೪] ಜಪಾನೀ ನೇತೃತ್ವದ ಪಡೆಯು ಬಂದರಿಗೆ ೧೯೧೪ರ ಅಕ್ಟೋಬರ್ ೩೧ರಿಂದ ನವೆಂಬರ್ ೭ರವರೆಗೆ ಮುತ್ತಿಗೆ ಹಾಕಿತು.[೧೪][೫೪] ಮುತ್ತಿಗೆ ಕೊನೆಗೊಂಡಾಗ ಜಪಾನೀ ಸೇನೆಯ ೨೩೬ ಸೈನಿಕರು ಹತರಾಗಿ ೧,೨೮೨ ಸೈನಿಕರು ಗಾಯಗೊಂಡಿದ್ದರು; ಬ್ರಿಟಿಷ್/ಭಾರತೀಯ ಸೇನೆಯ ೧೨ ಸೈನಿಕರು ಹತರಾಗಿ ೫೩ ಸೈನಿಕರು ಗಾಯಗೊಂಡಿದ್ದರು. ಜರ್ಮನ್ ಸೇನೆಯ ೧೯೯ ಸೈನಿಕರು ಹತರಾಗಿ ೫೦೪ ಸೈನಿಕರು ಗಾಯಗೊಂಡಿದ್ದರುd.[೫೫]
೧೯೧೫ರ ಸಿಂಗಪುರ ದಂಗೆ
[ಬದಲಾಯಿಸಿ]೧೯೧೫ರ ಸಿಂಗಪುರ ದಂಗೆಯು ೫ನೆಯ ಹಗುರ ಪದಾತಿ ದಳದ ೮೫೦ ಸಿಪಾಯಿಗಳು ಸಿಂಗಪುರದಲ್ಲಿ ಯುದ್ಧಕಾಲದಲ್ಲಿ ಬ್ರಿಟಿಷರ ವಿರುದ್ಧ ಹೂಡಿದ್ದ ದಂಗೆಯಾಗಿದ್ದು, ಇದು ೧೯೧೫ರ ಗದ್ದರ್ ಪಿತೂರಿಯ ಒಂದು ಅಂಗವಾಗಿತ್ತು. ೫ನೆಯ ಹಗುರ ಪದಾತಿ ದಳವು ಸಿಂಗಪುಕ್ಕೆ ಮದ್ರಾಸ್ ನಿಂದ ಅಕ್ಟೋಬರ್ ೧೯೧೪ರಲ್ಲಿ ಬಂದು ಸೇರಿದ್ದಿತು. ಈ ಸಿಪಾಯಿಗಳನ್ನು ಫ್ರ್ಯಾನ್ಸ್ ಗೆ ಕಳುಹಿಸಲ್ಪಟ್ಟ ಯಾರ್ಕ್ ಷೈರ್ ಹಗುರ ಪದಾತಿದಳದ ಸ್ಥಾನವನ್ನು ತುಂಬಲು ಕಳುಹಿಸಲಾಗಿತ್ತು.[೫೬] ೫ನೆಯ ಹಗುರ ಪದಾತಿದಳವು ಪ್ರಮುಖವಾಗಿ ಪಂಜಾಬಿ ಮುಸ್ಲಿಮ್ಮರನ್ನೇ ತನ್ನ ದಳಕ್ಕೆ ಆಯ್ದುಕೊಳ್ಳುತ್ತಿತ್ತು. ಕಳಪೆ ಸಂವಹನ, ಅಶಿಸ್ತು ಮತ್ತು ದುರ್ಬಲ ನಾಯಕತ್ವಗಳ ಕಾರಣಗಳಿಂದ ಅವರ ಉತ್ಸಾಹವು ಯಾವಾಗಲೂ ತಗ್ಗಿಯೇ ಇರುತ್ತಿದ್ದಿತು.[೫೭] ಈ ರೆಜಿಮೆಂಟನ್ನು ಜರ್ಮನ್ ಹಡಗಾದ SMS ಎಂಡೆನ್ ನ ಸೆರೆಯಾಳುಗಳನ್ನು ಕಾಯಲು ನಿಯಮಿಸಲಾಗಿತ್ತು.[೫೭] ಅವರು ಫೆಬ್ರವರಿ ೧೬, ೧೯೧೫ರ ವೇಳೆಗೆ ಹಾಂಗ್ ಕಾಂಗ್ ಗೆ ತೆರಳುವ ನಿರೀಕ್ಷೆ ಹೊಂದಿದ್ದರು; ಆದರೆ ಅವರು ಆಟೋಮಾನ್ ಸಾಮ್ರಾಜ್ಯದ ಸಹ ಮುಸ್ಲಿಮರ ವಿರುದ್ಧ ಯುದ್ಧ ಮಾಡಲು ಹೊರಡಬೇಕಾಗುತ್ತದೆ ಎಂಬ ವದಂತಿಗಳು ಹರಡಲಾರಂಭಿಸಿದವು.[೫೭] ಜರ್ಮನ್ ಸೆರೆಯಾಳು ಒಬರ್ಲೆಫ್ಟಿನೆಂಟ್ ಲಾಟರ್ ಬಾಷ್ ಈ ವದಂತಿಗಳಿಗೆ ಮತ್ತಷ್ಟು ಬಣ್ಣ ಹಚ್ಚಿ, ಅವನ್ನು ಹರಡತೊಡಗಿದರು ಮತ್ತು ಸೇನೆಯು ಬ್ರಿಟಿಷ್ ಕಮ್ಯಾಂಡರ್ ಗಳ ವಿರುದ್ಧ ದಂಗೆ ಏಳುವುದಕ್ಕೆ ಪ್ರೋತ್ಸಾಹಿಸಿದರು.[೫೭] ಸಿಪಾಯಿ ಇಸ್ಮೈಲ್ ಖಾನ್ ಓಂದು ಗುಂಡನ್ನು ಹಾರಿಸುವುದರ ಮೂಲಕ ದಂಗೆಯ ಆರಂಭವನ್ನು ಸೂಚಿಸಿದರು. ತಾಂಗ್ಲಿನ್ ಸೇನಾಗೃಹಗಳಲ್ಲಿದ್ದ ಅಧಿಕಾರಿಗಳನ್ನು ಕೊಚ್ಚಿಹಾಕಲಾಯಿತು ಹಾಗೂ ಸುಮಾರು ೮೦೦ ದಂಗೆಕೋರರು ರಸ್ತೆಗಿಳಿದು ಸಿಕ್ಕ ಸಿಕ್ಕ ಯೂರೋಪಿಯನ್ನರನ್ನು ಕೊಚ್ಚಿಹಾಕಿದರು. ಈ ದಂಗೆಯು ಹತ್ತು ದಿನಗಳ ಕಾಲ ನಡೆಯಿತು ಹಾಗೂ ಇದನ್ನು ಹತ್ತಿಕ್ಕಬೇಕಾದರೆ ಸಿಂಗಪುರ ಸ್ವಯಂಸೇವಕರ ಫಿರಂಗಿದಳದ ಸೈನಿಕರು, ಹೆಚ್ಚುವರಿ ಬ್ರಿಟಿಷ್ ಘಟಕಗಳು, ಜೊಹೋರ್ ನ ಸುಲ್ತಾನರ ಸಹಾಯ ಹಾಗೂ ಇತರ ಮಿತ್ರಸೇನೆಗಳ ಸಹಾಯ ಪಡೆಯಬೇಕಾಯಿತು.[೫೭] ನಂತರದ ದಿನಗಳಲ್ಲಿ ಒಟ್ಟಾರೆ ೩೬ ದಂಗೆಕೋರರನ್ನು ಹತ್ಯೆ ಮಾಡಲಾಯಿತು ಮತ್ತು ೭೭ ಅಧಿಕಾರಿಗಳನ್ನು ಗಡೀಪಾರು ಮಾಡಲಾಯಿತು ಹಾಗೂ ೧೨ ದಂಗೆಕೋರರನ್ನು ಸೆರೆಮನೆಗೆ ತಳ್ಳಲಾಯಿತು.[೫೭]
ವಿಕ್ಟೋರಿಯಾ ಕ್ರಾಸ್ ಪಡೆದವರು
[ಬದಲಾಯಿಸಿ]೧೯೧೧ರವರೆಗೆ ಭಾರತೀಯ ಸೈನಿಕರು ವಿಕ್ಟೋರಿಯಾ ಕ್ರಾಸ್ ಪದಕವನ್ನು ಪಡೆಯಲು ಅನರ್ಹರೆಂದು ಪರಿಗಣಿಸಲಾಗಿತ್ತು; ಬದಲಾಗಿ ಅವರು ಇಂಡಿಯನ್ ಆರ್ಡರ್ ಮೆರಿಟ್ ಎಂಬ ಹಳೆಯ ಗೌರವರೀತಿಯನ್ನು ಪಡೆಯುತ್ತಿದ್ದು. ಈ ಗೌರವವನ್ನು ಈಸ್ಟ್ ಇಂಡಿಯಾ ಕಂಪನಿಯು ಭಾರತದಲ್ಲಿ ಆಳ್ವಿಕೆ ಆರಂಭಿಸಿದ ಮೊದಲ ದಿನಗಳಲ್ಲಿ ಸ್ಫಾಪಿಸಲ್ಪಟ್ಟಿತ್ತು. ಯಾವುದೇ ಸಮರದಲ್ಲಿ ವಿಕ್ಟೋರಿಯಾ ಕ್ರಾಸ್(VC) ಪಡೆಯುವ ಗೌರವಕ್ಕೆ ಪಾತ್ರರಾದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಕನ್ನಾಟ್ ನ ಓನ್ ಬಲೂಚೀಗಳ ೧೨೯ನೆಯ ಡ್ಯೂಕ್ ಆದ ಖುದಾದಾದ್ ಖಾನ್ ಭಾಜನರಾದರು .[೫೮] ೩೧ನೆಯ ಅಕ್ಟೋಬರ್ ೧೯೧೪ರಂದು ಬೆಲ್ಜಿಯಂನ ಹೊಲ್ಲೆಬೆಕೆಯಲ್ಲಿ ಆ ತುಕಡಿಯ ಮುಖಂಡತ್ವ ವಹಿಸಿದ್ದ ಬ್ರಿಟಿಷ್ ಅಧಿಕಾರಿಯು ಗಾಯಗೊಂಡಾಗ ಹಾಗೂ ಮತ್ತೊಂದು ಗನ್ ತುಪಾಕಿಯ ಹೊಡೆತಕ್ಕೆ ಸಿಕ್ಕಿ ನಿಷ್ಕ್ರಿಯಗೊಂಡಾಗ, ಸಿಪಾಯಿ ಖುದಾದಾದ್, ಸ್ವಯಂ ಗಾಯಗೊಂಡಿದ್ದರೂ ಆ ಗನ್ ತುಕಡಿಯಲ್ಲಿದ್ದ ಇನ್ನೂ ಐವರು ಹತರಾಗುವವರೆಗೆ ತಮ್ಮ ಗನ್ ನಿಂದ ಗುಂಡು ಹಾರಿಸುತ್ತಲೇ ಇದ್ದರು.[೫೯]
ಮೊದಲನೆಯ ಮಹಾಯುದ್ಧ ದಲ್ಲಿ ವಿಕ್ಟೋರಿಯಾ ಕ್ರಾಸ್ ಅನ್ನು ಪಡೆದ ಭಾರತೀಯ ಸೇನೆಯ ಇತರ ಸದಸ್ಯರೆಂದರೆ:
- ದರ್ವಾನ್ ಸಿಂಘ್ ನೆಗಿ, ೩೯ನೆಯ ಘರ್ ವಾಲ್ ರೈಫಲ್ಸ್
- ೨೩–೨೪ ನವೆಂಬರ್ ೧೯೧೪ರ ರಾತ್ರಿ ಫ್ರ್ಯಾನ್ಸ್ ನ ಫೆಸ್ಟ್ಯೂಬರ್ಟ್ ನ ಬಳಿ ತೋರಿಸಿದ ಅಪ್ರತಿಮ ಶೌರ್ಯಕ್ಕೆ; ಸೇನಾದಳವು ನಾವು ತೋಡಿದ ಹಳ್ಳಗಳಿಂದ ಶತ್ರುಸೈನಿಕರನ್ನು ಮರುವಶಪಡಿಸಿಕೊಳ್ಳುತ್ತಲೋ ಅಥವಾ ಹೊರಹಾಕುತ್ತಲೋ ಇರುವ ಸಂದರ್ಭದಲ್ಲಿ, ಹಾಗೂ, ತಲೆಯಲ್ಲಿ ಎರಡು ಗಾಯಗಳು ಮತ್ತು ತೋಳಿನಲ್ಲಿ ಒಂದು ಗಾಯವಾಗಿದ್ದಾಗಲೂ, ಪ್ರತಿ ಸತತ ಅಡ್ಡಹಾಯಿಯನ್ನೂ ದಾಟುವಲ್ಲಿ ಮೊದಲಿಗರಾಗಿ, ಬಾಂಬ್ ಗಳು ಮತ್ತು ರೈಫಲ್ ಗಳು ಬಹಳ ಸಮೀಪದಲ್ಲೇ ಸಿಡಿಯುತ್ತಾ, ಗುಂಡು ಉಗುಳುತ್ತಾ ಇದ್ದರೂ, ಧೃತಿಗೆಡದೆ ಹೋರಾಡಿದುದಕ್ಕಾಗಿ.[೫೯]
- ಫ್ರ್ಯಾಂಕ್ ಅಲೆಕ್ಸಾಂಡರ್ ಡಿ ಪಾಸ್(೦}, 34ನೆಯ ರಾಜಕುವರ ಆಲ್ಬರ್ಟ್ ವಿಕ್ಟರ್ ರ ಓನ್ ಪೂನಾ ಹಾರ್ಸ್
- ಫೆಸ್ಟರ್ಬರ್ಟ್ ಬಳೀ on ೨೪ ನವೆಂಬರ್ ೧೯೧೪ರಂದು ವಿಶೇಷವಾದ ಶೌರ್ಯ ಮೆರೆದದ್ದಕ್ಕೆ; ಜರ್ಮನಿಯ ಸೇನಾಶಿಬಿರಕ್ಕೆ ನುಗ್ಗಿ ಶತ್ರುಗಳ ಬಾಂಬ್ ಧಾಳಿಯನ್ನೂ ಲೆಕ್ಕಿಸದೆ ಅಡ್ಡಹಾಯಿಯನ್ನು ನಾಶಪಡಿಸಿದುದಕ್ಕಾಗಿ ಹಾಗೂ ನಂತರ ಗುಂಡಿನ ಬಿರುಸಾದ ಮಳೆಯ ನಡುವೆ ಎದೆಗುಂದದೆ ಸಾಗಿ ಬಯಲಲ್ಲಿ ಬಿದ್ದಿದ್ದ ಗಾಯಾಳುವೊಬ್ಬನನ್ನು ರಕ್ಷಿಸಿದ್ದಕ್ಕಾಗಿ.[೬೦]
- ವಿಲಿಯಮ್ ಬ್ರೂಸ್, ೫೯ನೆಯ ಸಿಂಡ್ ರೈಫಲ್ಸ್
- ೧೯ ಡಿಸೆಂಬರ್ ೧೯೧೪ರಂದು, ಗಿವೆಂಚಿಯ ಬಳಿ, ರಾತ್ರಿ ನಡೆಸಿದ ಆಕ್ರಮಣದಲ್ಲಿ, ಲೆಫ್ಟಿನೆಂಟ್ ಬ್ರೂಸ್ ಒಂದು ಸಣ್ಣ ತುಕಡಿಯನ್ನು ತಮ್ಮ ಮುಖಂಡತ್ವದಲ್ಲಿ ತೆಗೆದುಕೊಂಡು ಹೋಗಿ ಶತ್ರುಗಳ ಒಂದು ಸುರಂಗವನ್ನು ವಶಪಡಿಸಿಕೊಂಡರು. ಕತ್ತಿನಲ್ಲಿ ತೀವ್ರವಾದ ಗಾಯವಾಗಿದ್ದರೂ, ಅವರು ಆ ಸುರಂಗದಲ್ಲಿ ಮುಂದಿನಿಂದ ಹಿಂದಿನವರೆಗೆ ಓಡಾಡುತ್ತಾ, ಶತ್ರುಸೈನಿಕರ ಧಾಳಿಯನ್ನು ಎದುರಿಸಲು ತನ್ನ ಸೈನಿಕರನ್ನು ಕೆಲವು ಗಂಟೆಗಳವರೆಗೆ ಹುರಿದುಂಬಿಸುವಲ್ಲಿ ಹತ್ಯೆಗೊಳ್ಳುವವರೆಗೆ ನಿರತರಾಗಿದ್ದರು. ಇಡೀ ದಿನ ಬಂದೂಕುಗಳಿಂದ ಮತ್ತು ಬಾಂಬುಗಳಿಂದ ಧಾಳಿಯು ತೀವ್ರವಾಗಿ ನಡೆದಿತ್ತು; ಲೆಫ್ಟಿನೆಂಟ್ ಬ್ರೂಸ್ ರವರ ಚಾಣಾಕ್ಷ ಏರ್ಪಾಟು, ಹಾಗೂ ತಾವೇ ಒಂದು ಉದಾಹರಣೆಯಾಗಿ ನಿಂತು, ಸೇನೆಯನ್ನು ಹುರಿದುಂಬಿಸಿದ ರೀತಿಯಿಂದ ಅವರ ಕೈಕೆಳಗಿನ ಸೈನಿಕರು ಸಂಜೆಯವರೆಗೆ ಆ ಸುರಂಗವನ್ನು ವಶದಲ್ಲಿರಿಸಿಕೊಂಡಿದ್ದರು, ತರುವಾಯ ಆ ಸುರಂಗ ಶತ್ರುಗಳ ಪಾಲಾಯಿತು.[೬೧]
- ಯೂಸ್ಟೇಸ್ ಜೋತಮ್, ೫೧ನೆಯ ಸಿಖ್ಖರ ದಳ ಉತ್ತರ ವಝೀರಿಸ್ತಾನ್ ಸೇನಾದಳಕ್ಕೆ ಸೇರಿದ್ದುದು
- ೭ ಜನವರಿ ೧೯೧೫ರಂದು, ಸ್ಪೈನಾ ಖೈಸೋರಾ (ತೋಛಿ ಕಣಿವೆ)ಯಲ್ಲಿ; ಖೋಸ್ತ್ ವಾಲ್ ಬುಡಕಟ್ಟಿನವರ ವಿರುದ್ಧದ ಕಾರ್ಯಾಚರಣೆಯಲ್ಲಿ, ಉತ್ತರ ವಝೀರಿಸ್ತಾನ್ ಸೇನಾದಳದ ಹನ್ನೆರಡು ಸೈನಿಕರ ತುಕಡಿಯೊಂದರ ಮುಖಂಡತ್ವ ವಹಿಸಿದ ಕ್ಯಾಪ್ಟನ್ ಜೋತಮ್ ರ ಪಡೆಯನ್ನು ಸುಮಾರು ೧೫೦೦ ಜನರುಳ್ಳ ಬುಡಕಟ್ಟಿನವರ ಪಡೆಯು ಒಂದು ಕಣಿವೆಯಲ್ಲಿ ಮುತ್ತಿಗೆ ಹಾಕಿತು. ಅವರು ತಮ್ಮ ಪಡೆಗೆ ಹಿಂದೆಗೆಯಲು ಆಜ್ಞೆಯಿತ್ತರು ಹಾಗೂ ತಾವೂ ತಪ್ಪಿಸಿಕೊಳ್ಳಬಹುದಾಗಿತ್ತು; ಆದರೆ ತನ್ನ ಕುದುರೆಯನ್ನು ಕಳೆದುಕೊಂಡಿದ್ದ ತನ್ನ ಪಡೆಯವನೊಬ್ಬನನ್ನು ರಕ್ಷಿಸುವ ಯತ್ನದಲ್ಲಿ, ಪರಾಕ್ರಮದಿಂದ ಹೋರಾಡಿ, ತಮ್ಮ ಪ್ರಾಣವನ್ನೇ ಅರ್ಪಿಸಿದರು.[೬೨]
- ಮೀರ್ ದಾಸ್ತ್, ೫೫ನೆಯ ಕೋಕ್ಸ್ ರೈಫಲ್ಸ್ (ಗಡಿ ಕಾವಲು ಪಡೆ)
- ೨೬ ಏಪ್ರಿಲ್ ೧೯೧೫ರಂದು, ಬೆಲ್ಜಿಯಂನ ವಿಯೆಲ್ಟೆಯಲ್ಲಿ, ಜಮಾದಾರ್ ಮೀರ್ ದಾಸ್ತ್ ತನ್ನ ತುಕಡಿಯನ್ನು ಆಕ್ರಮಣಕಾಲದಲ್ಲಿ ಬಹಳ ಪರಾಕ್ರಮದಿಂದ ಚಲಾಯಿಸಿದರು ಹಾಗೂ ನಂತರ ಸೇನಾದಳದ ವಿವಿಧ ಸದಸ್ಯರನ್ನು ಕಲೆಹಾಕಿದರು (ಯಾವುದೇ ಬ್ರಿಟಿಷ್ ಅಧಿಕಾರಿಗಳು ಉಳಿದಿಲ್ಲದಿದ್ದಾಗ) ಹಾಗೂ ಹಿಂದೆಗೆಯಲು ಆದೇಶ ಬರುವವರೆಗೆ, ಆ ಸದಸ್ಯರನ್ನೆಲ್ಲಾ ತಮ್ಮ ಮೇಲ್ವಿಚಾರಣೆಯಲ್ಲಿಯೇ ಇರಿಸಿಕೊಂಡಿದ್ದರು. ಆ ದಿನ, ತೀವ್ರವಾದ ಗುಂಡಿನ ಚಕಮಕಿಯ ನಡುವೆ ಸಾಗಿ, ಎಂಟು ಬ್ರಿಟಿಷ್ ಹಾಗೂ ಭಾರತೀಯ ಅಧಿಕಾರಿಗಳನ್ನು ಸುರಕ್ಷಿತ ತಾಣಕ್ಕೆ ಮುಟ್ಟಿಸುವಲ್ಲಿ ಅವರು ತೋರಿಸಿದ ಧೈರ್ಯ ಮತ್ತು ಸಾಹಸಗಳು ಪ್ರಶಂಸನೀಯ.[೬೩]
- ಜಾನ್ ಸ್ಮಿತ್ ೧೫ನೆಯ ಲೂಧಿಯಾನಾ ಸಿಖ್ಖರು
- ರಿಷೆಬೌರ್ಗ್ ಲಾವೋಯ್ ಬಳಿ೧೮ನೆಯ ಮೇ, ೧೯೧೫ರಂದು ತೋರಿಸಿದ ಸ್ಪಷ್ಟವಾದ ಶೌರ್ಯಕ್ಕಾಗಿ; ತಮಗೂ ಮುನ್ನ ಎರಡು ದಳಗಳು ಬಹಳವೇ ಅಪಾಯಕಾರಿಯಾದ ಸ್ಥಳವನ್ನು ಹಾದು ಶತ್ರುಗಳ ತಾಣಕ್ಕೆ ಬಹಳ ಸಮೀಪಕ್ಕೆ ಬಾಂಬ್ ಗಳನ್ನು ಸರಬರಾಜು ಮಾಡಲು ವಿಫಲರಾಗಿದ್ದಾಗ, ಸ್ವಯಿಚ್ಛೆಯಿಂದ ಮುಂದೆ ಬಂದ ೧೦ ಜನರ ಬಾಂಬಿಂಗ್ ತುಕಡಿಯೊಡನೆ ಅವರು ಶತ್ರುಸೈನಕ್ಕಿಂತ ಕೇವಲ ೨೦ ಗಜಗಳ ದೂರದವರೆಗೆ ೯೬ ಬಾಂಬುಗಳನ್ನು ಒದಗಿಸುವಲ್ಲಿ ಯಶಸ್ವಿಯಾದರು. ಲೆಫ್ಟಿನೆಂಟ್ ಸ್ಮಿತ್, ತಮ್ಮ ತುಕಡಿಯ ಇಬ್ಬರು ಸದಸ್ಯರೊಡಗೂಡಿ(ಮಿಕ್ಕ ಎಂಟು ಜನರು ಮಡಿದಿದ್ದರು ಅಥವಾ ಗಾಯಗೊಂಡಿದ್ದರು), ತಾವು ಬಯಸಿದ್ದ ಸ್ಥಳಕ್ಕೆ ಬಾಂಬುಗಳನ್ನು ತೆಗೆದುಕೊಂಡುಹೋಗುವಲ್ಲಿ ಯಶಸ್ವಿಯಾದರು; ತಮ್ಮ ಕಾರ್ಯ ಸಾಧಿಸಲು ಅವರು ಒಂದು ಹೊಳೆಯನ್ನು ಈಜಿ ದಾಟಬೇಕಾಗಿತ್ತು ಹಾಗೂ ಅವರು ಹಾಗೆ ದಾಟುವ ಸಂದರ್ಭದಲ್ಲಿ ಅವರು ಹೊವಿಟ್ಝರ್, ಷಾರ್ಪ್ ನೆಲ್, ಮೆಷೀನ್-ಗನ್ ಮತ್ತು ರೈಫಲ್ ಗಳಿಂದ ಎರಗಿದ ಗುಂಡಿನ ಸುರಿಮಳೆಯನ್ನೇ ಎದುರಿಸಬೇಕಾಯಿತು.[೬೪]
- ಕುಲ್ ಬೀರ್ ಥಾಪಾ, ೩ನೆಯ ಗೂರ್ಖಾ ರೈಫಲ್ಸ್.
- ೨೫ ಸೆಪ್ಟೆಂಬರ್೧೯೧೫ರಂದು ಫ್ರ್ಯಾನ್ಸ್ ನ ಫಾಕ್ವಿಸ್ಸಾರ್ಟ್ ನಲ್ಲಿ ರೈಫಲ್ ಮ್ಯಾನ್ ಥಾಪಾ, ತಾನೇ ಗಾಯಾಳುವಾಗಿದ್ದಾಗಲೂ, ಲೀಸೆಸ್ಟರ್ಷೈರ್ ಸೇನಾದಳಕ್ಕೆ ಸೇರಿದ ಒಬ್ಬ ಗಾಯಗೊಂಡ ಸೈನಿಕನನ್ನು ಜರ್ಮನ್ ಕಂದಕದ ಮೊದಲ ಸಾಲಿನ ಹಿಂಭಾಗದಲ್ಲಿ ಕಂಡರು. ತನ್ನನ್ನು ತಾನು ಉಳಿಸಿಕೊಳ್ಳಬೇಕೆಂದು ಎಷ್ಟೇ ತಾಕೀತು ಮಾಡಿದರೂ, ಆ ಗೂರ್ಖಾ ಇಡೀ ದಿನ ಮತ್ತು ರಾತ್ರಿ ಗಾಯಗೊಂಡ ಸೈನಿಕನೊಡನೆ ಇದ್ದರು. ಮರುದಿನ, ನಸುಕಿನಲ್ಲೇ, ಇನ್ನೂ ಮಬ್ಬು ಕವಿದಿದ್ದಾಗಲೇ, ಆ ಗಾಯಗೊಂಡವನನ್ನು ಜರ್ಮನ್ ವೈರನ್ನು ದಾಟಿಸಿಕೊಂಡು ತಂದರು ಹಾಗೂ ಸಾದೃಶವಾಗಿ ಸುರಕ್ಷಾ ಸ್ಥಳದಲ್ಲಿ ಅವನನ್ನು ಇರಿಸಿ, ಹಿಂತಿರುಗಿ, ಇಬ್ಬರು ಗಾಯಗೊಂಡ ಗೂರ್ಖಾಗಳನ್ನು, ಒಬ್ಬರಾದ ಮೇಲೆ ಒಬ್ಬರಂತೆ, ಕರೆದುಕೊಂಡುಬಂದರು. ಅವರು ಮತ್ತೆ ಹಿಂತಿರುಗಿ, ಹಾಡಹಗಲಿನಲ್ಲೇ, ಶತ್ರುಗಳು ಗುಂಡು ಹಾರಿಸುತ್ತಿರುವಾಗಲೇ, ಆ ಬ್ರಿಟಿಷ್ ಸೈನಿಕನನ್ನು ಹೊತ್ತುಕೊಂಡುಬಂದರು.[೬೫]
- ಲಾಲಾ, ೪೧ನೆಯ ಡೋಗ್ರಾಗಳು
- ೨೧ ಜನವರಿ ೧೯೧೬ರಂದು, ಮೆಸೊಪೊಟೋಮಿಯಾದ ಎಲ್ ಓರಾದಲ್ಲಿ, ಶತ್ರುಸೇನೆಯ ಸಮೀಪವೇ ಒಬ್ಬ ಬ್ರಿಟಿಷ್ ಅಧಿಕಾರಿ ಬಿದ್ದಿರುವುದನ್ನು ಕಂಡ ಲ್ಯಾನ್ಸ್-ನಾಯಕ್ ಲಾಲಾ ಆ ಬ್ರಿಟಿಷನನ್ನು ತಾತ್ಕಾಲಿಕ ಸುರಕ್ಷತೆಯತ್ತ ಎಳೆದುಹಾಕಿದರು. ಅವರ ಗಾಯಗಳಿಗೆ ಬ್ಯಾಂಡೇಜ್ ಕಟ್ಟಿದನಂತರ, ಲ್ಯಾನ್ಸ್-ನಾಯಕರಿಗೆ ಬಯಲಲ್ಲಿ ಗಾಯಗೊಂಡು ಮಲಗಿದ್ದ ತಮ್ಮ ಸಹಾಯಕ ಅಧಿಕಾರಿಯ ಕೂಗು ಕೇಳಿಸಿತು. ಶತ್ರುವು ಕೇವಲ100 yards (91 m) ದೂರದಲ್ಲಿದ್ದನು. ಲಾಲಾ ತಾವು ಸಹಾಯಕ್ಕೆ ಧಾವಿಸಿಯೇ ತೀರುವುದಾಗಿ ಹೇಳಿದರು. ಅವರು ತಮ್ಮ ಬಟ್ಟೆಯನ್ನೇ ಕಳಚಿ ಗಾಯಗೊಂಡ ಅಧಿಕಾರಿಯು ಬೆಚ್ಚಗಿರಲೋಸುಗ ತೊಡಿಸಿ, ಅಧಿಕಾರಿಯೊಡನೆ ಕತ್ತಲಾಗುವವರೆಗೆ ಇದ್ದು, ನಂತರ ಸುರಕ್ಷಾತಾಣಕ್ಕೆ ಬಂದರು. ಕತ್ತಲಾದ ನಂತರ ಅವರು ಮೊದಲು ಗಾಯಗೊಂಡಿದ್ದ ಅಧಿಕಾರಿಯನ್ನು ಸುರಕ್ಷಾ ಸ್ಥಳಕ್ಕೆ ಸೇರಿಸಿ, ನಂತರ ಒಂದು ಸ್ಟ್ರೆಚರ್ ತಂದು ತಮ್ಮ ಸಹಾಯಕ ಅಧಿಕಾರಿಯನ್ನು ಹೊತ್ತೊಯ್ದರು.[೬೬]
- ಜಾನ್ ಅಲೆಕ್ಸಾಂಡರ್ ಸಿಂಟನ್, ಭಾರತೀಯ ವೈದ್ಯಕೀಯ ಸೇವೆ
- ೨೧ ಜನವರಿ ೧೯೧೬ರಂದು, ಮೆಸೊಪೊಟೋಮಿಯಾದ ಓರಾ ರೂಯಿನ್ಸ್ ನಲ್ಲಿ, ಕ್ಯಾಪ್ಟನ್ ಸಿಂಟನ್ ಬಿರುಸಾದ ಗುಂಡುಹಾರಿಸುವಿಕೆಯ ನಡುವೆಯೂ ಗಾಯಾಳುಗಳ ಶುಶ್ರೂಷೆಯಲ್ಲಿ ನಿರತರಾಗಿದ್ದರು. "ಸುಸ್ಪಷ್ಟವಾದ, ಸುಗೋಚರವಾದ ಎದೆಗಾರಿಕೆ ಮತ್ತು ಸೇವಾತತ್ಪರತೆಗಾಗಿ. ಎರಡೂ ತೋಳುಗಳಿಗೆ ಗುಂಡೇಟು ಬಿದ್ದಿದ್ದರೂ ಹಾಗೂ ಪಕ್ಕೆಯಲ್ಲಿ ಗುಂಡು ಹಾದುಹೋಗಿದ್ದರೂ, ಅವರು ಆಸ್ಪತ್ರೆಗೆ ಹೋಗಲು ನಿರಾಕರಿಸಿ, ಹಗಲಿನ ಬೆಳಕು ಇರುವವರೆಗೆ ಅಲ್ಲಿಯೇ ಇದ್ದು, ಬಿರುಸಾದ ಯುದ್ಧದ ನಡುವೆಯೂ ತಮ್ಮ ಸೇವೆಯಲ್ಲಿ ಅಚಲವಾಗಿ ನಿರತರಾಗಿದ್ದರು. ಇದಕ್ಕೂ ಹಿಂದಿನ ಮೂರು ಸಂದರ್ಭಗಳಲ್ಲೂ ಸಿಂಟನ್ ಶ್ರೇಷ್ಠಮಟ್ಟದ ಎದೆಗಾರಿಕೆಯನ್ನು ಪ್ರದರ್ಶಿಸಿದ್ದರು."[೬೭]
- ಶಹಮದ್ ಖಾನ್, ೮೯ನೆಯ ಪಂಜಾಬಿಗಳು
- ೧೨–೧೩ ಏಪ್ರಿಲ್ ೧೯೧೬ರಂದು ಮೆಸೊಪೊಟೋಮಿಯಾದ ಬೀಯ್ಟ್ ಅಯೀಸಾ, ನಾಯಕ್ ಶಹಮದ್ ಖಾನ್ ಒಂದು ಮೆಷಿನ್-ಗನ್ ನ ಉಸ್ತುವಾರಿಯಲ್ಲಿದ್ದು, ಕಾದುಕುಳಿತಿದ್ದ ಶತ್ರುವಿಗೂ ನಮ್ಮ ಹೊಸ ರೇಖೆಗೂ ನಡುವೆ ಇದ್ದ ೧೫೦ ಗಜಗಳಿಗೂ ಕಡಿಮೆ ಅಂತರವನ್ನು ಕಾಯುವುದರಲ್ಲಿ ನಿರತರಾಗಿದ್ದರು. ಅವರು ಶತ್ರುಗಳನ್ನು ಮೂರು ಬಾರಿ ಹಿಮ್ಮೆಟ್ಟಿಸಿದರು, ಹಾಗೂ ಇಬ್ಬರು ಬೆಲ್ಟ್-ತುಂಬುವವರ ಹೊರತಾಗಿ ತನ್ನೊಡನಿದ್ದ ಮಿಕ್ಕೆಲ್ಲರೂ ಮಡಿದ ನಂತರವೂ, ಏಕಾಂಗಿಯಾಗಿ ತನ್ನ ಗನ್ ಬಳಸುತ್ತಾ ಕಾದಾಡಿದರು. ಮೂರುಗಂಟೆಗಳ ಕಾಲ ಅವರು ಆ ಅಂತರವನ್ನು ತೀವ್ರವಾದ ಗುಂಡಿನ ಮಳೆಯ ನಡುವೆಯೂ ಕಾಪಾಡಿದರು ಹಾಗೂ ನಂತರ, ತಮ್ಮ ಗನ್ ಹಾರಿಸಲ್ಪಟ್ಟಾಗ, ಅವರು ಮತ್ತು ಅವರ ಇಬ್ಬರು ಬೆಲ್ಟ್ ತುಂಬುವವರು ರೈಫಲ್ ಗಳನ್ನು ಬಳಸುತ್ತಾ ತಮ್ಮ ನೆಲೆಯನ್ನು ಬಿಟ್ಟುಕೊಡದೆ ಸೆಣಸಾಡುತ್ತಿದ್ದು, ಹಿಂದಿರುಗಲು ಅಣತಿ ಬಂದಾಗ ವಾಪಸಾದರು. ನಂತರ, ಸಹಾಯಹಸ್ತ ಒದಗಿ ಬಂದಾಗ ಅವರು ತಮ್ಮ ಗನ್ ಅನ್ನು, ಮದ್ದುಗುಂಡುಗಳನ್ನು, ಒಬ್ಬ ಬಹಳವೇ ಗಾಯಗೊಂಡ ವ್ಯಕ್ತಿಯನ್ನು ಹಾಗೂ, ಕಡೆಗೆ, ಎಲ್ಲಾ ಶಸ್ತ್ರಗಳು ಮತ್ತು ಸಲಕರಣೆಗಳನ್ನು ಹಿಂದಕ್ಕೆ ತಂದರು.[೬೮]
- ಗೋಬಿಂದ್ ಸಿಂಘ್, ೨೮ನೆಯ ಲೈಟ್ ಕ್ಯಾವಲ್ರಿ
- ನವೆಂಗರ್ ೩೦ರ ರಾತ್ರಿ ಮತ್ತು ಡಿಸೆಂಬರ್ ೧, ೧೯೧೭ರಂದು, ಫ್ರ್ಯಾನ್ಸ್ ನ ಪೋಝೀಯ್ರೆಸ್ ನ ಪೂರ್ವದಲ್ಲಿ, ಲ್ಯಾನ್ಸ್-ದಫೇದಾರ್ ಗೋಬಿಂದ್ ಸಿಂಘ್ ಸೇನಾದಳದ ಕೇಂದ್ರಕಚೇರಿ ಮತ್ತು ಸೇನಾದಳದ ನಡುವೆ ಸಂದೇಶಗಳನ್ನು ರವಾನಿಸಲು ಮೂರುಬಾರಿ ಸ್ವ ಇಚ್ಛೆಯಿಂದ ಮುಂದೆ ಬಂದರು; ಈ ಕ್ರಮಿಸಬೇಕಾದ ದೂರವು ಬಯಲುಪ್ರದೇಶದಲ್ಲಿ 1.5 miles (2.4 kilometres)ಗಳಷ್ಟಿದ್ದು ಅಲ್ಲಿ ಶತ್ರುಸೇನೆಗಳ ಗುಂಡಿನ ಚಕಮಕಿ ಬಿರುಸಾಗಿ ನಡೆದಿತ್ತು. ಪ್ರತಿ ಬಾರಿಯೂ ಅವರ ಕುದುರೆಗೆ ಗುಂಡು ತಗುಲಿ ಅದು ಸಾವನ್ನಪ್ಪಿ, ಅವರು ನಡೆದೇ ಹಿಂತಿರುಗಿಬರಬೇಕಾಗಿಬಂದರೂ, ಅವರು ಪ್ರತಿಬಾರಿಯೂ ಸಂದೇಶವನ್ನು ರವಾನಿಸುವುದರಲ್ಲಿ ಯಶಸ್ವಿಯಾದರು.[೬೯]
- ಕರನ್ ಬಹಾದೂರ್ ರಾಣಾ, ೩ನೆಯ ಗೂರ್ಖಾ ರೈಫಲ್ಸ್
- ೧೦ ಏಪ್ರಿಲ್ ೧೯೧೮ರಂದು ಈಜಿಪ್ಟಿನ ಎಲ್ ಕೆಫ್ರ್ ನಲ್ಲಿ, ಒಂದು ಮುತ್ತಿಗೆಯ ಸಂದರ್ಭದಲ್ಲಿ ರೈಫಲ್ ಮನ್ ಕರನ್ ಬಹಾದೂರ್ ರಾಣಾ ಮತ್ತು ಇನ್ನೂ ಕೆಲವರು ಲೆವಿಸ್ ಗನ್ನನ್ನು ಕೈಯಲ್ಲಿ ಹಿಡಿದು, ಶತ್ರುಸೇನೆಯ ಒಂದು ಮೆಷಿನ್ ಗನ್ ಅನ್ನು ಕಾರ್ಯಗತವಾಗಿರಿಸಿರಲೋಸುಗ, ಬಿರುಸಿನ ಗುಂಡುಹಾರುವಿಕೆಯ ಮಧ್ಯೆಯೂ, ತೆವಳುತ್ತಾ ಮುಂದಕ್ಕೆ ಸಾಗಿದರು. ಲೆವಿಸ್ ಗನ್ ತಂಡದ ನಂಬರ್. ೧ ಗುಂಡುಹಾರಿಸತೊಡಗಿದರು ಆದರೆ ಕ್ಷಣಗಳಲ್ಲೇ ಅವರಿಗೆ ಗುಂಡಿಕ್ಕಲಾಯಿತು; ಅದನ್ನು ಕಂಡ ರೈಫಲ್ ಮ್ಯಾನ್ ಸತ್ತವನ ದೇಹವನ್ನು ಗನ್ ನಿಂದ ಬದಿಗೆ ಸರಿಸಿ, ಗುಂಡು ಹಾರಿಸತೊಡಗಿ, ಶತ್ರುಸೈನ್ಯದ ಗನ್ ಪಡೆಯನ್ನು ನಾಶಗೊಳಿಸಿ, ನಂತರ ತಮ್ಮ ಮುಂದಿದ್ದ ಶತ್ರು ಬಾಂಬರ್ ಗಳ ಶಸ್ತ್ರಗಳ ಆರ್ಭಟವನ್ನು ಮೌನಗೊಳಿಸಿ, ಎದುರಾಳಿ ರೈಫಲ್ ಮೆನ್ ಗಳನ್ನು ಸೋಲಿಸಿದರು. ದಿನದ ಉಳಿದ ಭಾಗದಲ್ಲಿ ಅವರು ಮಹತ್ತರವಾದ ಕಾರ್ಯಗಳನ್ನು ಮಾಡಿ, ಕಡೆಗೆ, ಹಿಮ್ಮೆಟ್ಟುವ ಸಮಯ ಬಂದಾಗ ರಕ್ಷಣಾ ಸಂಬಂಧಿತವಾದ ಗುಂಡುಹಾರಿಸುವಿಕೆ (ಇವರು ಹಿಮ್ಮೆಟ್ಟುವಾಗ ಶತ್ರುಗಳು ಮುಂದೆ ಸರಿದು ಕೊಲ್ಲದಿರಲೆಂದು ಗುಂಡಿನ ವರ್ಷವನ್ನೇ ಹರಿಸುವ ಕ್ರಮ)ಯಲ್ಲಿ, ಶತ್ರುವು ಅವರ ಬಹಳ ಸಮೀಪಕ್ಕೆ ಬರುವವರೆಗೆ, ನಿರತರಾಗಿದ್ದರು.[೭೦]
- ಬದ್ಲೂ ಸಿಂಘ್, ೧೪ನೆಯ ಮರ್ರೇಸ್ ಜಾತ್ ಲ್ಯಾನ್ಸರ್ಸ್/೧}
- ೨ ಸೆಪ್ಟೆಂಬರ್ ೧೯೧೮ರಂದು ಪ್ಯಾಲೆಸ್ಟೈನ್ ನ ಜೋರ್ಡಾನ್ ನದಿಯ ಪಶ್ಚಿಮ ದಂಡೆಯಲ್ಲಿ, ತನ್ನ ತುಕಡಿಯು ಬಲಿಷ್ಠವಾದ ಶತ್ರುದಳದ ಮೇಲೆ ಆಕ್ರಮಣ ಮಾಡುತ್ತಿದ್ದಾಗ, ರೆಸಾಯ್ದಾರ್ ಬದ್ಲೂ ಸಿಂಘ್ ಮೆಷಿನ್-ಗನ್ ಗಳನ್ನು ಹಾಗೂ ೨೦೦ ಜನರನ್ನು ಹೊಂದಿದ್ದ ಶತ್ರುಗಳ ಪದಾತಿ ಸೈನ್ಯವು ಒಂದು ಬೆಟ್ಟದ ಮರೆಯಿಂದ ತಮ್ಮ ಸೇನೆಗೆ ಅಪಾರವಾದ ಸಾವುನೋವುಗಳನ್ನು ಉಂಟುಮಾಡುತ್ತಿರುವುದನ್ನು ಗಮನಿಸಿದರು. ಒಂದು ಕ್ಷಣವೂ ಶಂಕಿಸದೆ ಅವರು ಸೈನಿಕರೊಡಗೂಡಿದರು ಹಾಗೂ ಅಪಾಯದ ಬಗ್ಗೆ ಇನಿತೂ ಪರಿವೆಯೇ ಇಲ್ಲದೆ ಮುನ್ನುಗ್ಗಿ ಆ ಸ್ಥಳವನ್ನು ವಶಪಡಿಸಿಕೊಂಡರು. ಬೆಟ್ಟದ ತುದಿಯನ್ನು ತಲುಪಿ, ಏಕಾಂಗಿಯಾಗಿ ಒಂದು ಮೆಷಿನ್ ಗನ್ ಅನ್ನು ವಶಪಡಿಸಿಕೊಳ್ಳುತ್ತಿದ್ದಾಗ ಅವರು ಪ್ರಾಣಾಂತಿಕವಾಗಿ ಗಾಯಗೊಳಿಸಲ್ಪಟ್ಟರು; ಆದರೆ ಅವರು ಸಾಯುವ ಮುಂಚೆಯೇ ಎಲ್ಲಾ ಗನ್ ಗಳು ಮತ್ತು ಪದಾತಿಗಳು ಅವರಿಗೆ ಶರಣಾಗಿದ್ದುದಾಗಿತ್ತು.[೭೧]
ಪರಿಣಾಮಗಳು
[ಬದಲಾಯಿಸಿ]- ಮತ್ತಷ್ಟು ಮಾಹಿತಿಗಾಗಿ, ಮೊದಲನೆಯ ಮಹಾಯುದ್ಧ ಮತ್ತು ಅದರ ಪರಿಣಾಮ ಮತ್ತು ಭಾರತೀಯ ಸೇನೆಯ ಸೇನಾದಳಗಳ ಪಟ್ಟಿ (೧೯೨೨)ಗಳನ್ನು ನೋಡಿರಿ
೧೯೧೯ರಲ್ಲಿ ಭಾರತೀಯ ಸೇನೆಯು ೪೯೧,೦೦೦ ಯುವಕರನ್ನು ಸೇನೆಗೆ ಸೇರಿಸಿಕೊಳ್ಳುವ ಅವಕಾಶವಿತ್ತು, ಆದರೆ ಸೇನೆಯಲ್ಲಿ ಅನುಭವಿ ಅಧಿಕಾರಿಗಳ ಕೊರತೆ ಇತ್ತು, ಬಹುತೇಕ ಅಧಿಕಾರಿಗಳು ಯುದ್ಧದಲ್ಲಿ ಮಡಿದಿದ್ದರು ಅಥವಾ ಗಾಯಗೊಂಡಿದ್ದರು.[೭೨] ೧೯೨೧ರಲ್ಲಿ ಭಾರತ ಸರ್ಕಾರವು ವಾಯುವ್ಯ ಗಡಿ ಪ್ರಾಂತ್ಯದ ರಕ್ಷಣೆ ಮತ್ತು ಆಂತರಿಕ ಭದ್ರತೆಗಳನ್ನು ಪ್ರಧಾನ ಗುರಿಯಾಗಿರಿಸಿಕೊಂಡು ತನ್ನ ಸೇನಾ ಅವಶ್ಯಕತೆಗಳನ್ನು ಪರಿಶೀಲಿಸಿಸಲಾರಂಭಿಸಿತು.[೭೩] ೧೯೨೫ರ ಹೊತ್ತಿಗೆ ಭಾರತದ ಸೇನೆಯು ಸಂಖ್ಯೆಯು ಬಹಳವೇ ತಗ್ಗಿ ಕೇವಲ ೧೯೭,೦೦೦ ದಳಗಳಷ್ಟಿದ್ದು, ಅದರಲ್ಲಿ ೧೪೦,೦೦೦ ಜನ ಭಾರತೀಯರಿದ್ದರು.[೭೪] ಆಗ ಕಾಲ್ದಳಗಳಿಗೆ ಮೂರು ಕಾರ್ಯಗಳಲ್ಲಿ ಒಂದನ್ನು ವಿಧಿಸಲಾಯಿತು: ಭೂಸೇನೆಯಲ್ಲಿ ನಾಲ್ಕು ಪದಾತಿ ವಿಧಾಗಗಳು ಮತ್ತು ಐದು ಅಶ್ವಪಡೆಯ ಸೇನಾದಳಗಳು; ರಕ್ಷಣಾ ಸೇನಾಪಡೆಯಲ್ಲಿ ಹನ್ನೆರಡು ಪದಾತಿ ದಳಗಳು ಮತ್ತು ಮುತ್ತಿಗೆಗೆ ಒಳಗಾದ ಸಂದರ್ಭದಲ್ಲಿ ಬೆಂಬಲಿಸುವ ಅಂಗವಾಗಿ ಒಂದು ಬೆಂಬಲ ಪಡೆ ಹಾಗೂ ಅದಕ್ಕೆ ಬೇಕಾದ ಶಸ್ತ್ರಗಳು; ಹಾಗೂ ಕಡೆಯದಾಗಿ ಆಂತರಿಕ ಭದ್ರತಾ ಪಡೆಗಳು, ೪೩ ಪದಾತಿ ದಳಗಳು ನಾಗರಿಕ ದಳದ ಪುಷ್ಟೀಕರಣಕ್ಕೆ ಹಾಗೂ ಅಗತ್ಯ ಬಿದ್ದಾಗ ಭೂಸೇನೆಗೆ ಬೆಂಬಲ ನೀಡಲು.[೭೫] ಅಶ್ವದಳದ ಸಂಖ್ಯೆಯನ್ನು ೩೯ರಿಂದ ೨೧ಕ್ಕೆ ಇಳಿಸಲಾಯಿತು. ಪದಾತಿ ದಳಗಳನ್ನು ೨೦ ಬೃಹತ್ ದಳಗಳಾಗಿ ಪರಿವರ್ತಿಸಿ ಪ್ರತಿ ದಂಡಿನಲ್ಲೂ ನಾಲ್ಕು ಅಥವಾ ಐದು ತುಕಡಿಗಳು ಹಾಗೂ ಒಂದು ಹೆಚ್ಚುವರಿ ತರಬೇತಿ ತುಕಡಿ ಇರುವಂತೆ ವಿಂಗಡಿ, ಯಾವಾಗಲೂ ಹತ್ತನೆಯ ಸಂಖ್ಯೆಯಿಂದಲೇ ಗುರುತಿಸಿ, ಇದರೊಡನೆ ಹತ್ತು ಗೂರ್ಖಾ ಪಡೆಗಳನ್ನೂ ಸೇರಿಸಿಕೊಂಡಿತ್ತು.[೭೬] ೧೯೨೨ರ ವೇಳೆಗೆ ಒಂಬತ್ತು ಒಂಟಿ ದಂಡಿನ ದಳಗಳನ್ನು ವಿದಳಗೊಳಿಸಲಾಯಿತು.[೭೬] ಬೃಹತ್ ದಳಗಳ ಪೈಕಿ ಎರಡು ದಳಗಳನ್ನು ನಂತರ ವಿದಳಗೊಳಿಸಲಾಯಿತು, ೩ನೆಯ ಮದ್ರಾಸ್ ದಳವನ್ನು ವಿತ್ತಸಂಬಂಧಿತ ಕಾರಣಗಳಿಂದ, ಮತ್ತು ೨೦ನೆಯ ಬರ್ಮಾ ರೈಫಲ್ಸ್ ಅನ್ನು ಬರ್ಮಾ ಭಾರತ ಸರ್ಕಾರದ ಆಡಳಿತದಿಂದ ಹೊರತಾದ ದಿನದಿಂದ.[೭೬]
ಮೊದಲನೆಯ ಮಹಾಯುದ್ಧ ಮುಗಿದರೂ ಭಾರತೀಯ ಸೇನೆಯು ಕಾದಾಡುವುದು ಮುಗಿಯಲಿಲ್ಲ; ಸೇನೆಯು ೧೯೧೯ರ ಮೂರನೆಯ ಆಫ್ಘನ್ ಯುದ್ಧದಲ್ಲಿ ಪಾತ್ರವಹಿಸಿ,[೭೭] ನಂತರ ೧೯೧೯ರಿಂದ ೧೯೨೦ರವರೆಗೆ ಹಾಗೂ ಮತ್ತೆ ೧೯೨೦ರಿಂದ ೧೯೨೪ರವರೆಗೆ ವಝೀರಿಸ್ತಾನ್ ಚಳುವಳಿಯಲ್ಲಿ ಕಾದಾಡಿತು.[೭೮] ೧೯೩೦–೧೯೩೧ರಲ್ಲಿ ಅಫ್ರೀಡೀಗಳ ವಿರುದ್ಧ ಕಾರ್ಯಾಚರಣೆ, ೧೯೩೩ರಲ್ಲಿ ಹಾಗೂ ಮತ್ತೆ ೧೯೩೫ರಲ್ಲಿ ಮಹಮಂದರ ವಿರುದ್ಧ ಹಾಗೂ ಕಡೆಯದಾಗಿ ಎರಡನೆಯ ಮಹಾಯುದ್ಧವು ಆರಂಭವಾಗುವುದಕ್ಕೆ ಕೊಂಚ ಮುನ್ನ ಮಗದೊಮ್ಮೆ ೧೯೩೬–೧೯೩೯ರಲ್ಲಿ ವಝೀರಿಸ್ತಾನ್ ನಲ್ಲಿ ಭಾರತೀಯ ಸೇನೆಯು ಕಾರ್ಯಾಚರಣೆಯಲ್ಲಿ ನಿರತವಾಗಿತ್ತು.[೭೯]
೧೯೩೧ರಲ್ಲಿ ಮೊದಲನೆಯ ಮಹಾಯುದ್ಧ ದಲ್ಲಿ ಕಾದು ಮಡಿದ ಸ್ಮರಣಾರ್ಥವಾಗಿ ನವದೆಹಲಿಯಲ್ಲಿ ಇಂಡಿಯಾ ಗೇಟ್ಅನ್ನು ನಿರ್ಮಾಣ ಮಾಡಲಾಯಿತು.[೮೦]
ಇವನ್ನೂ ಗಮನಿಸಿ
[ಬದಲಾಯಿಸಿ]- ಭಾರತೀಯ ಸೇನೆ(೧೮೯೫–೧೯೪೭)
- ಭಾರತೀಯ ರಕ್ಷಣಾ ಕಾಯಿದೆ ೧೯೧೫
- ಮೊದಲನೆಯ ಮಹಾಯುದ್ಧ ದ ಮಧ್ಯಪೂರ್ವ ರಣಾಂಗಣ
- ಎರಡನೆಯ ಮಹಾಯುದ್ಧದ ಕಾಲದಲ್ಲಿ ಭಾರತೀಯ ಸೇನೆ
- ಬ್ರಿಟಿಷ್ ರಾಜ್# ಮೊದಲನೆಯ ಮಹಾಯುದ್ಧ ಮತ್ತು ನಂತರದ ಸ್ಥಿತಿ ರಾಜಕೀಯ ಆಗುಹೋಗುಗಳಿಗಾಗಿ
- www.king-emperor.com ಭಾರತೀಯ ಸೇನೆ ೧೯೦೦-೧೯೩೯
ಟಿಪ್ಪಣಿಗಳು
[ಬದಲಾಯಿಸಿ]- ↑ ೧.೦ ೧.೧ ೧.೨ ೧.೩ ೧.೪ ಸಮ್ನರ್, ಪುಟ.೩
- ↑ "Participants from the Indian subcontinent in the First World War". Memorial Gates Trust. Retrieved 12 ಸೆಪ್ಟೆಂಬರ್ 2009.
{{cite journal}}
: Cite journal requires|journal=
(help) - ↑ ೩.೦ ೩.೧ ೩.೨ ೩.೩ ೩.೪ ಹೀತ್ ಕೋಟ್, ಪುಟ.೧೮೪
- ↑ ೪.೦ ೪.೧ ೪.೨ ೪.೩ ಪೆರಿ, ಪುಟ.೮೩
- ↑ ೫.೦ ೫.೧ ೫.೨ ೫.೩ ೫.೪ ಪೆರಿ, ಪುಟ.೮೫
- ↑ ವಿಲ್ ಮಾಟ್, ಪುಟ.೯೪
- ↑ ಜೆಫ್ರಿ, ಪುಟ.೩
- ↑ "The Indian Army: 1914". Archived from the original on 9 ಮೇ 2013. Retrieved 15 ಅಕ್ಟೋಬರ್ 2009.
- ↑ ಬರುವಾ, ಪುಟ.೧೩೦
- ↑ ಬ್ರಿಡ್ಜರ್, ಪುಟ.೬೩
- ↑ "Indian Army History". Global Security.org. Retrieved 9 ಅಕ್ಟೋಬರ್ 2009.
- ↑ ೧೨.೦ ೧೨.೧ ಪೆರಿ, ಪುಟ.೮೬
- ↑ ಚಾಪೆಲ್ (೨೦೦೩), ಪುಟ.೯
- ↑ ೧೪.೦ ೧೪.೧ ೧೪.೨ ೧೪.೩ ೧೪.೪ "Commonwealth War Graves Commission Report on India 2007–2008" (PDF). Commonwealth War Graves Commission. Archived from the original (PDF) on 18 ಜೂನ್ 2010. Retrieved 7 ಸೆಪ್ಟೆಂಬರ್ 2009.
- ↑ ಹೀತ್ ಕೋಟ್, ಪುಟ.೧೯೭
- ↑ [75] ^ ಡೇವಿಸ್, ಪುಟ ೫೫
- ↑ ಹೀತ್ ಕೋಟ್ ಪುಟಗಳು.೨೦೦-೨೧೦
- ↑ ಪತಿ, ಪುಟ.೩೧
- ↑ ಸಮ್ನರ್, ಪುಟ.೭
- ↑ ೨೦.೦ ೨೦.೧ ೨೦.೨ ೨೦.೩ ೨೦.೪ ೨೦.೫ ೨೦.೬ ೨೦.೭ ೨೦.೮ ಸಮ್ನರ್, ಪುಟ.೯
- ↑ ೧೯೧೯ರ ಮೂರನೆಯ ಆಫ್ಘನ್ ಯುದ್ಧದ ಅಧಿಕೃತ ವರದಿ , ಪುಟ.೧೧
- ↑ ರಿಡ್ಡಿಕ್, ಪುಟಗಳು.೯೬–೧೦೦
- ↑ The London Gazette: (Supplement) no. 29652. p. 6699. 4 July 1916. Retrieved 2009-09-19.
- ↑ [212] ^ ರೀಡ್, ಪುಟ. ೪
- ↑ ಕಿಂಝರ್, ಪುಟ.೪೮
- ↑ ಫೋರ್ಡ್, ಪುಟಗಳು.೨೩–೨೪
- ↑ Omissi, David. "India and the Western Front". Retrieved 18 ಅಕ್ಟೋಬರ್ 2009.
- ↑ ವಝೀರಿಸ್ತಾನ್ ಚಳುವಳಿ. ಸರಕಾರಿ ವರದಿಗಳು ಪ್ರಕಟಿತವಾಗಿವೆ. ಕೈಗೊಂಡ ಕಾರ್ಯಗಳಲ್ಲಿ ವಿಜಯ. ೫ ಮೇ ೧೯೧೮ರ ನಾಗರಿಕ ಮತ್ತು ಸೇನಾ ಗೆಝೆಟ್ ನಿಂದ ಮರುಪ್ರಕಟಿತ.
- ↑ ೨೯.೦೦ ೨೯.೦೧ ೨೯.೦೨ ೨೯.೦೩ ೨೯.೦೪ ೨೯.೦೫ ೨೯.೦೬ ೨೯.೦೭ ೨೯.೦೮ ೨೯.೦೯ ಸಮ್ನರ್, ಪುಟ.೬
- ↑ ೩೦.೦ ೩೦.೧ ರಿಡ್ಡಿಕ್, ಪುಟ.೯೭
- ↑ ಸಮ್ನರ್, ಪುಟ.೪
- ↑ Baker, Chris. "The British Corps of 1914-1918". The Long, Long Trail. Retrieved 6 ಜುಲೈ 2009.
- ↑ ೩೩.೦ ೩೩.೧ ೩೩.೨ ೩೩.೩ ೩೩.೪ ೩೩.೫ ೩೩.೬ ಸಮ್ನರ್, ಪುಟ.೫
- ↑ Barua, Pradeep (2003). Gentlemen of the Raj. Praeger Publishing. p. 15.
{{cite book}}
: Unknown parameter|city=
ignored (help) - ↑ Baker, Chris. "The Mounted Divisions of 1914-1918". The Long, Long Trail. Retrieved 9 ಸೆಪ್ಟೆಂಬರ್ 2009.
- ↑ Baker, Chris. "The 2nd Indian Cavalry Division in 1914-1918". The Long, Long Trail. Archived from the original on 29 ಮೇ 2009. Retrieved 9 ಸೆಪ್ಟೆಂಬರ್ 2009.
- ↑ ಚಾಪೆಲ್ (೨೦೦೫), ಪುಟ.೧೧
- ↑ ಚಾಪೆಲ್ (೨೦೦೫), ಪುಟಗಳು.೧೧–೧೨
- ↑ ೩೯.೦ ೩೯.೧ ಚಾಪೆಲ್ (೨೦೦೫), ಪುಟ.೧೨
- ↑ ಹಾಯ್ಟ್, ಪುಟ.೫೫
- ↑ ಹಾಯ್ಟ್, ಪುಟ.೫೬
- ↑ [18] ^ [27] ^ ಮಿಲ್ಲರ್, ಪುಟ ೧೦೩
- ↑ ೪೩.೦ ೪೩.೧ Baker, Chris. "Mesopotamia". The Long, Long Trail. Retrieved 4 ಸೆಪ್ಟೆಂಬರ್ 2009.
- ↑ Baker, Chris. "Mesopotamia". Retrieved 17 ಸೆಪ್ಟೆಂಬರ್ 2009.
- ↑ ಕರ್ಶ್, ಪುಟ.೩೨೭
- ↑ "ಬ್ರಿಟಿಷ್ ಸಾಮ್ರಾಜ್ಯದ ಸೇನಾ ಪರಿಶ್ರಮಗಳ ಅಂಕಿ-ಅಂಶಗಳು" (ಲಂಡನ್: HMSO, ೧೯೨೦)
- ↑ ೪೭.೦ ೪೭.೧ ಪೆರ್ರೆಟ್, ಪುಟಗಳು.೨೪–೨೬
- ↑ ರೈನಾಲ್ಡಿ, ಪುಟ.೧೨೫
- ↑ ೪೯.೦ ೪೯.೧ "Indian Army Brigades" (PDF). orbat.com. Archived from the original (PDF) on 10 ಅಕ್ಟೋಬರ್ 2008. Retrieved 8 ಸೆಪ್ಟೆಂಬರ್ 2009.
- ↑ ಪೆರಿ, ರೋಲ್ಯಾಂಡ್. "ಮೋನಾಶ್: ದ ಔಟ್ ಸೈಡರ್ ಹೂ ವನ್ ಎ ವಾರ್" ಪುಟ ೨೧೧
- ↑ ಹೇಥಾರ್ನ್ ವೇಯ್ಟ್, ಪುಟ.೫೫
- ↑ ಹೇಥಾರ್ನ್ ವೇಯ್ಟ್, ಪುಟ.೭೩
- ↑ "The Gallipoli Campaign" (PDF). Australian Government, Department of Veterans affairs. Archived from the original (PDF) on 2 ಜುಲೈ 2009. Retrieved 4 ಸೆಪ್ಟೆಂಬರ್ 2009.
- ↑ ೫೪.೦ ೫೪.೧ ೫೪.೨ ವಿಲ್ಮಾಟ್, ಪುಟ.೯೧
- ↑ ಹಾಪ್ಟ್ ವೆರ್ನರ್, ಪುಟ.೧೪೭
- ↑ "Commentary on the Mutiny". New York Times'. 2 ಮೇ 1915.
{{cite news}}
: Italic or bold markup not allowed in:|publisher=
(help) - ↑ ೫೭.೦ ೫೭.೧ ೫೭.೨ ೫೭.೩ ೫೭.೪ ೫೭.೫ "1915 Indian (Singapore) Mutiny". National Library Singapore. Archived from the original on 24 ಫೆಬ್ರವರಿ 2009. Retrieved 16 ಸೆಪ್ಟೆಂಬರ್ 2009.
- ↑ "Subadar Khudadad Khan, Victoria Cross (VC)". Mod Uk. Archived from the original on 10 ಜೂನ್ 2009. Retrieved 4 ಸೆಪ್ಟೆಂಬರ್ 2009.
- ↑ ೫೯.೦ ೫೯.೧ The London Gazette: (Supplement) no. 28999. p. 10425. 4 December 1914. Retrieved 2009-08-02.
- ↑ "The Victoria Cross". National Army Museum. Archived from the original on 20 ಆಗಸ್ಟ್ 2010. Retrieved 15 ಸೆಪ್ಟೆಂಬರ್ 2009.
- ↑ ಲಂಡನ್ ಗೆಝೆಟ್ ೪ ಸೆಪ್ಟೆಂಬರ್ ೧೯೧೯
- ↑ The London Gazette: (Supplement) no. 29240. p. 7279. 23 July 1915. Retrieved 26 November 2007.
- ↑ "Beluchis Fine Fighter". New York Times. 25 ಜುಲೈ 1915. Retrieved 16 ಸೆಪ್ಟೆಂಬರ್ 2009.
{{cite news}}
: Italic or bold markup not allowed in:|publisher=
(help); Unknown parameter|articledate=
ignored (help) - ↑ The London Gazette: no. 29210. p. 6269. 1915-06-29. Retrieved 2008-08-14.
- ↑ "Victoria Cross holders". National Army Museum. Archived from the original on 12 ನವೆಂಬರ್ 2009. Retrieved 4 ಸೆಪ್ಟೆಂಬರ್ 2009.
- ↑ ಲಂಡನ್ ಗೆಝೆಟ್ ೨೭ ಜುಲೈ ೧೯೪೫
- ↑ ಲಂಡನ್ ಗೆಝೆಟ್ ೨೧ Juneಜೂನ್ ೧೯೧೬
- ↑ ಲಂಡನ್ ಗೆಝೆಟ್ ೨೬ ಸೆಪ್ಟೆಂಬರ್ ೧೯೧೬
- ↑ ಲಂಡನ್ ಗೆಝೆಟ್ ೧ ಡಿಸೆಂಬರ್ ೧೯೧೭
- ↑ The London Gazette: (Supplement) no. 30575. p. 7307. 21 June 1918. Retrieved 2009-03-23.
- ↑ ಲಂಡನ್ ಗೆಝೆಟ್ ೨೩ ಸೆಪ್ಟೆಂಬರ್ ೧೯೧೮
- ↑ ಜೆಫ್ರಿ, ಪುಟ.೧೦೧
- ↑ ಜೆಫ್ರಿ, ಪುಟ.೧೦೩
- ↑ ಜೆಫ್ರಿ, ಪುಟ.೧೦೯
- ↑ ಸಮ್ನರ್, ಪುಟ.೧೩
- ↑ ೭೬.೦ ೭೬.೧ ೭೬.೨ ಸಮ್ನರ್, ಪುಟ.೧೫
- ↑ ಬಾರ್ಥಾರ್ಪ್, ಪುಟ.೧೫೭
- ↑ ನೋಡಿ, ಬಾರ್ಥಾರ್ಪ್, ಪುಟ.೧೫೮.
- ↑ ಬಾರ್ಥಾರ್ಪ್, ಪುಟ.೧೭೦.
- ↑ "India Gate". India.gov.ind. Retrieved 7 ಸೆಪ್ಟೆಂಬರ್ 2009.
ಉಲ್ಲೇಖಗಳು
[ಬದಲಾಯಿಸಿ]- Barthorp, Michael (2002). Afghan Wars and the North-West Frontier 1839–1947. Cassell. ISBN 0304362948.
- Baura (2005). The state at war in South Asia. University of Nebraska Press. ISBN 0803213441.
{{cite book}}
: Text "Pradeep" ignored (help) - Bridger, Geoff (2009). The Great War Handbook. Barnsley: Pen and Sword. ISBN 978 1 84415 936 9.
- Chappell, Mike (2003). The British Army in World War I: The Western Front 1914-16. Osprey Publishing. ISBN 1841763993.
- Chappell, Mike (2005). The British Army in World War I: The Eastern Fronts Volume 3 of The British Army in World War I. Osprey Publishing. ISBN 1841764019.
- Davis, Paul K (1994). Ends and means: the British Mesopotamian campaign and commission. Associated University Press. ISBN 083863530X.
- Ford, Roger (2009). Eden to Armageddon: The First world war in the Middle East. London: Weidenfeld and Nicolson. ISBN 9780297844815.
- Heathcote, T A (1995). The Military in British India: the development of British land forces in South Asia, 1600-1947. Manchester University Press ND. ISBN 0719035708.
- Hoyt, Edwin P (1981). Guerilla: Colonel von Lettow-Vorbeck and Germany's East African Empire. MacMillan Publishing Co. ISBN 0025552104.
- Jeffery, Keith (1984). The British Army and the Crisis of Empire, 1918-22. Manchester University Press ND. ISBN 0719017173.
- Kinzer, Stephen (2003). All the Shah's Men: An American Coup and the Roots of Middle East Terror. London: Stephen Kinzer, John Wiley and Sons. p. 48.
- Karsh, Efraim (2001). Empires of the Sand: The Struggle for Mastery in the Middle East. Harvard University Press. ISBN 0674005414.
- March, Francis Andrew (1921). History of the World War. Plain Label Books. ISBN 1603032428.
- Miller, Charles (1974). Battle for the Bundu: The First World War in German East Africa. Macdonald & Jane's. ISBN 0025849301.
- Pati, Budheswar (1996). India and the First World War. Atlantic Publishers & Distributors. ISBN 8171565816.
- Perrett, Bryan (1999). Megiddo 1918. Osprey Publishing. ISBN 1855328275.
- Perry, Frederick William (1988). The Commonwealth Armies. Manchester University Press ND. ISBN 0719025958.
- Reid, Brian Holden (1997). Military Power: land warfare in theory and practice. Routledge. ISBN 0714647683.
- Riddick, John F (2006). The History of British India: a chronology. Greenwood Publishing Group. ISBN 0313322805.
- Rinaldi, Richard A (2008). Order of Battle British Army 1914. Ravi Rikhye. ISBN 0977607283.
- Sumner, Ian (2001). The Indian Army 1914-1947. Osprey Publishing. ISBN 1841761966.
- Werner, Haupt (1994). Deutschlands Schutzgebiete in Übersee : 1884 - 1918. Podzun Pallas Verlag. ISBN 3790902047.
- Willmott, H P (2003). First World War. Dorling Kindersley. ISBN 1405300299.
- Pages using the JsonConfig extension
- CS1 errors: missing periodical
- CS1 errors: unsupported parameter
- CS1 errors: markup
- Pages containing cite templates with deprecated parameters
- Articles with hatnote templates targeting a nonexistent page
- Wikipedia articles needing clarification from November 2010
- Articles with invalid date parameter in template
- CS1 errors: unrecognized parameter
- Use dmy dates from November 2010
- ಮೊದಲನೆಯ ಮಹಾಯುದ್ಧ ದಲ್ಲಿ ಭಾರತ