ಮುದಾರ್ಥ
ಮುದಾರ್ಥ (ಕೊಂಕಣಿ) ಇದು ಕರ್ನಾಟಕದ ಉಡುಪಿ ಜಿಲ್ಲೆಯಿಂದ ಬಂದಿರುವ ಕೆಲವು ಮಂಗಳೂರಿನ ಕ್ಯಾಥೋಲಿಕ್ ಬಾಮನ್ ಮನೆತನಗಳ ಹೆಸರು ಮತ್ತು ಬಿರುದಾಗಿದೆ.
ಮುದಾರ್ಥರ ಪೂರ್ವಜರು ಉತ್ತರ ಗೋವಾದ ಬಾರ್ಡೆಜ್ ಜಿಲ್ಲೆಯ ಅಸ್ಸಗಾವ್ ಮತ್ತು ಅಂಜುನಾ ಗ್ರಾಮಗಳಿಂದ ಬಂದವರು ಎಂದು ನಂಬಲಾಗಿದೆ.[೧] ಪ್ರೊ. ವಿಲ್ಫ್ರೆಡ್ ಡಿಸೋಜಾ ಅವರು ಮುದಾರ್ಥರ ಇತಿಹಾಸ ಮತ್ತು ವಂಶಾವಳಿ ಕುರಿತಾದ ಅವರ ಮುದಾರ್ಥರ ಇತಿಹಾಸ (೧೯೯೬) ಕೃತಿಯಲ್ಲಿ, ಮುದಾರ್ಥಗಳ ಮೂಲವನ್ನು ಕ್ರಿಸ್ತ ಪೂರ್ವ ೨ನೇ ಶತಮಾನದಿಂದ ಕಾಶ್ಮೀರದಿಂದ ಗೋವಾಕ್ಕೆ ಕ್ರಮೇಣವಾಗಿ ವಲಸೆ ಬಂದ ಗೌಡ ಸಾರಸ್ವತ ಬ್ರಾಹ್ಮಣರಿಗೆ [೧] ಜೋಡಿಸುತ್ತಾರೆ. ಅಲ್ಲದೆ ಮುದಾರ್ಥರ ಈ ಬ್ರಾಹ್ಮಣ ಪೂರ್ವಜರ ಹೆಸರುಗಳು ತಿಳಿದಿಲ್ಲವಾದರೂ, ಅವರ ಪೂರ್ವಜರ ಉಪನಾಮವು ಪುರುಷ ಕಡೆಯಿಂದ ಪ್ರಭು ಮತ್ತು ಹೆಣ್ಣಿನ ಕಡೆಯಿಂದ ಶೆಣೈ ಎಂದು ಅವರ ಮೌಖಿಕ ಸಂಪ್ರದಾಯದ ಪ್ರಕಾರ ಹೇಳಬಹುದಾಗಿದೆ ಎಂದೂ ಅಲ್ಲಿ ಬರೆದಿದ್ದಾರೆ.
ಒಂದು ದಂತಕಥೆ ಪ್ರಕಾರ ಕಲಂಗೂಟ ನಗರದ ಶೆಣೈ ಕುಟುಂಬದ ಒಂದು ಹುಡುಗಿ, ಅಸ್ಸಗಾವ್ ನಗರದ ಒಂದು ಪ್ರಭು ಕುಟುಂಬದ ಹುಡುಗನೊಬ್ಬನನ್ನು ಮದುವೆಯಾಗುತ್ತಾಳೆ, ಮತ್ತು ಅವರ ಕುಟುಂಬವು ೧೬ನೇ ಶತಮಾನದ ಮಧ್ಯಭಾಗದಲ್ಲಿ ರೋಮನ್ ಕ್ಯಾಥೊಲಿಕ್ ಗೆ ಮತಾಂತರವಾಗುತ್ತದೆ
ಅಸ್ಸಾಗಾವದ ಮೂಲ ಗೌಡ ಸಾರಸ್ವತ ಬ್ರಾಹ್ಮಣ ವಸಾಹತುಗಾರರ ಕುಲವನ್ನು ಮುದ್ರಾಗಳು ಎಂದು ಕರೆಯಲಾಗುತ್ತಿತ್ತು.[೨] ಸಂಸ್ಕೃತ ವಿದ್ವಾಂಸರಾದ ಪ್ರೊ. ಸಿಡಿಜೆ ಪಿಂಟೋರವರ ಪ್ರಕಾರ ಮುದ್ರಾರು ಸ್ಮಾರ್ತ ಪಂಥಕ್ಕೆ ಸೇರಿದವರು. ಮುದ್ರಾರು ಭಾರದ್ವಾಜ ಗೋತ್ರ (ಕುಲದ) ಕ್ಕೆ ಸೇರಿದವರಾಗಿದ್ದು, ಅವರ ಕುಲದೇವತೆ (ಕುಟುಂಬ ದೇವತೆ) ಭೂಮಿಕಾ - ರವಳನಾಥ ಆಗಿತ್ತು.[೨] ಪೋರ್ಚುಗೀಸರು ತಮ್ಮ ಮತಾಂತರ ಚಟುವಟಿಕೆಗಳನ್ನು ಪ್ರಾರಂಭಿಸಿದಾಗ, ಹೆಚ್ಚಿನ ಮುದ್ರಾರು ತಮ್ಮ ಕುಟುಂಬಗಳ ವಿಗ್ರಹಗಳೊಂದಿಗೆ ಉತ್ತರಕ್ಕೆ ಓಡಿಹೋದರು ಮತ್ತು ದಕ್ಷಿಣ ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ನೆಲೆಸಿದರು.[೧] ಬಾರ್ಡೆಜ್‌ನಲ್ಲಿ ಉಳಿದವರು ಕ್ಯಾಥೋಲಿಕರಾದರು ಮತ್ತು ಮುಡೋಟ್ಸ್ ಎಂದು ಕರೆಯಲ್ಪಟ್ಟರು.[೧] ಕೆಲವು ಮುಡೋಟ್ಸ್ ಗಳು ೧೫೯೧ರ ಬರಗಾಲವನ್ನು ತಪ್ಪಿಸಿಕೊಂಡು ದಕ್ಷಿಣ ಕನ್ನಡಕ್ಕೆ ವಲಸೆ ಹೋಗಿ ಮೊದಲು ಬೆಳ್ಮಣ್ಣಿನ ಬಾಳೇಗುಂಡಿ ಪ್ರದೇಶದಲ್ಲಿ ನೆಲೆಯೂರಿದರು, ಕಾಲಾನುಕ್ರಮದಲ್ಲಿ ಅವರನ್ನು ಮುದಾರ್ಥರು ಎಂದು ಕರೆಯಲಾಯಿತು.[೧] ಕ್ರಮೇಣ, ಈ ಮುದಾರ್ಥರಲ್ಲಿ ಕೆಲವರು ಶಿರ್ವ ಮತ್ತು ಮೂಡುಬೆಳ್ಳೆ ಕಡೆಗೆ ತೆರಳಿದರು. [೧]
೧೯ ನೇ ಮತ್ತು ೨೦ ನೇ ಶತಮಾನಗಳಲ್ಲಿ, ಹೆಚ್ಚಿನ ಮುದಾರ್ಥರು ತಮ್ಮ ಉಪನಾಮವನ್ನು ಡಿಸೋಜಾ ಎಂದು ಬದಲಾಯಿಸಿಕೊಂಡರು, ಆದರೆ ಬೆಳ್ಮಣ್ಣಿನ ಕೆಲವರು ಇನ್ನೂ ಹಳೆಯ ಉಪನಾಮವನ್ನು ಹೊಂದಿದ್ದಾರೆ. ಮಂಗಳೂರಿನ ವಂಶಪಾರಂಪರ್ಯ ಶಾಸ್ತ್ರಜ್ಞ ಮೈಕೆಲ್ ಲೋಬೊ ಅವರ ಪ್ರಕಾರ, ಕೆಲವು ಡಿಸೋಜಾ-ಮುದಾರ್ಥ ಕುಲಗಳು ಬೆಳ್ಮಣ್ನ ಡಿಸೋಜಾ ಕುಟುಂಬ; ಬೆಂದೂರಿನ ಡಿಸೋಜಾ ಕುಟುಂಬ; ಕಿರೆಂನ ಡಿಸೋಜಾ ಕುಟುಂಬ; ಮೂಡುಬೆಳ್ಳೆಯ ಡಿಸೋಜಾ ಕುಟುಂಬ; ಮೂಲ್ಕಿಯ ಡಿಸೋಜಾ ಕುಟುಂಬ ; ಪಕ್ಷಿಕೆರೆಯ ಡಿಸೋಜಾ ಕುಟುಂಬ; ಪೆಜಾರಿನ ಡಿಸೋಜಾ ಕುಟುಂಬ; ಪಿಲಾರದ ಡಿಸೋಜಾ ಕುಟುಂಬ; ಮತ್ತು ಶಿರ್ವದ ಡಿಸೋಜಾ ಕುಟುಂಬಗಳನ್ನೂ ಒಳಗೊಂಡಿವೆ.
ಉಲ್ಲೇಖಗಳು
[ಬದಲಾಯಿಸಿ]
- D'Souza, Eugene (5 September 2009). "Prof Wilfred D'Souza – Third Generation Teacher Who Achieved Greater Heights". Daijiworld Media Pvt Ltd Mangalore. Archived from the original on 14 February 2012. Retrieved 20 October 2008.
{{cite journal}}
: Cite journal requires|journal=
(help). - D'Souza, Wilfred R. D'Souza (1996). History of the Mudarthas. Mangalore: Codialbail Press..
- Lobo, Michael (2000). Distinguished Mangalorean Catholics, 1800–2000: a historico-biographical survey of the Mangalorean Catholic community. Camelot Publishers. ISBN 978-81-87609-01-8..