ವಿಷಯಕ್ಕೆ ಹೋಗು

ಮಿಲೆವಾ ಮ್ಯಾರಿಕ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಿಲೆವಾ ಮ್ಯಾರಿಕ್
ಮಿಲೆವಾ ಮ್ಯಾರಿಕ್
ಮಿಲೆವಾ ಮ್ಯಾರಿಕ್ ೧೮೯೬
ಜನನ೧೯ ಡಿಸೆಂಬರ್ ೧೮೭೫
ಟಿಟೆಲ್, ಆಸ್ಟ್ರೋ-ಹಂಗೇರಿಯನ್
ಮರಣಆಗಸ್ಟ್ ೧೯೪೮
ಜ್ಯೂರಿಕ್, ಸ್ವಿಟ್ಜರ್ಲೆಂಡ್
Resting placeಫ್ರೈಡಾಫ್ ನಾರ್ಧೀನ್,ಜ್ಯೂರಿಕ್,ಸ್ವಿಟ್ಜರ್ಲೆಂಡ್
ಶಿಕ್ಷಣ ಸಂಸ್ಥೆ(ಇ.ಟಿ.ಎಚ್) ಜ್ಯೂರಿಕ್, ಸ್ವಿಟ್ಜರ್ಲೆಂಡ್
ಸಂಗಾತಿ(s)ಆಲ್ಬರ್ಟ್ ಐನ್ಸ್ಟೀನ್;(೧೯೦೩–೧೯೧೯)
ಮಕ್ಕಳುಲಿಸೆರಲ್ ಐನ್ಸ್ಟೀನ್, ಹ್ಯಾನ್ಸ್ ಆಲ್ಬರ್ಟ್ ಐನ್ಸ್ಟೀನ್, ಎಡ್ವರ್ಡ್ ಐನ್ಸ್ಟೀನ್
ಪೋಷಕಮರಿಜಾ ಮ್ಯಾರಿಕ್ ಹಾಗೂ ಮಿಲೋಸ್ ಮ್ಯಾರಿಕ್

ಮಿಲೆವಾ ಮ್ಯಾರಿಕ್-(ಡಿಸೆಂಬರ್ ೧೯, ೧೮೭೫-ಆಗಸ್ಟ್ ೪, ೧೯೪೮) ಸರ್ಬಿಯ ದೇಶದ ಪ್ರಖ್ಯಾತ ಭೌತಶಾಸ್ತ್ರಜ್ಞೆ.[] ಜ್ಯೂರಿಚ್ ಪಾಲಿಟೆಕ್ನಿಕ್ಕಿನಲ್ಲಿ ಆಲ್ಬರ್ಟ್ ಐನ್ಸ್ಟೀನ್ ಅವರು ಬೋಧಿಸುತ್ತಿದ್ದ ವಿದ್ಯಾರ್ಥಿಗಳ ನಡುವೆ ಏಕೈಕ ಮಹಿಳೆಯಾಗಿದ್ದರು.ಮ್ಯಾರಿಕ್ ಹಾಗೂ ಆಲ್ಬರ್ಟ್ ನಡುವೆ ಸಂಬಂಧ ಬೆಳೆದು ನಂತರದಲ್ಲಿ ವಿವಾಹವಾದರು.ಆದರೆ ಅವರ ಮದುವೆಗೆ ಮೊದಲೇ ಒಬ್ಬ ಮಗಳು ಜನಿಸಿದ್ದಳು.ಲೈಸೆರ್ಲ್ ಎಂಬ ಹೆಸರಿನ ಆ ಮಗು ಬಹುಬೇಗ ತೀರಿಹೋಹಿತು. ಆವರ ವಿವಾಹ ೧೯೦೩ರಲ್ಲಿ ನಡೆಯಿತು. ಅವರಿಗೆ ಹ್ಯಾನ್ಸ್ ಆಲ್ಬರ್ಟ್ ಹಾಗೂ ಎಡ್ವರ್ಡ್ ಎಂಬ ಇಬ್ಬರು ಗಂಡು ಮಕ್ಕಳು ಜನಿಸಿದರು.[] ಮ್ಯಾರಿಕ್ ೧೯೧೪ರಲ್ಲಿ ಆಲ್ಬರ್ಟ್ ಅವರಿಂದ ದೂರವಾದರು,ಅವರ ಜೊತೆಗೆ ತಮ್ಮ ಇಬ್ಬರು ಮಕ್ಕಳನ್ನು ಕರೆದುಕೊಂಡು ಬರ್ಲಿನ್ ಇಂದ ಜ್ಯೂರಿಚ್ ಗೆ ಮರಳಿದರು. ಮ್ಯಾರಿಕ್ ದಂಪತಿಯು ೧೯೧೯ರಲ್ಲಿ ವಿಚ್ಛೇದನ ಮಾಡಿಕೊಂಡರು, ಆದರೆ ಆ ವರ್ಷವೇ ಆಲ್ಬರ್ಟ್ ಪುನಃ ಮದುವೆಯಾದರು.ಆಲ್ಬರ್ಟ್ ಅವರಿಗೆ ೧೯೨೧ರಲ್ಲಿ ನೊಬೆಲ್ ಪ್ರಶಸ್ತಿ ದೊರಕಿತು,ಆ ಹಣವನ್ನೆಲ್ಲಾ ತಮ್ಮ ಮಕ್ಕಳಿಗೆ ಸಹಾಯವಾಗಲೆಂದು ಮ್ಯಾರಿಕ್ ಅವರಿಗೆ ನೀಡಿದರು. ೧೯೩೦ರಲ್ಲಿ ತಮ್ಮ ೨೦ವರ್ಷದ ಮಗ ಎಡ್ವರ್ಡ್ ಸ್ಕಿಜೋಫ್ರೇನಿಯಾ ಎಂಬ ಖಾಯಿಲೆಯಿಂದ ಬಳಲುತ್ತಿದ್ದನು. ಅವನ ಆ ಖಾಯಿಲೆಯನ್ನು ಗುಣಪಡಿಸಲೆಂದು ಅವರ ಮೂರು ಮನೆಗಳಲ್ಲಿ ಎರಡು ಮನೆಯನ್ನು ಮಾರಿ ಗುಣವಾಗುವಂತೆ ನೋಡಿಕೊಂಡಳು. ಆದರೆ ನಂತರದಲ್ಲಿ ಆಲ್ಬರ್ಟ್ ಅವರು ತಮ್ಮ ಎರಡನೇ ಹೆಂಡತಿಯ ಜೊತೆ ಅಮೇರಿಕ ದೇಶಕ್ಕೆ ವಲಸೆ ಹೋದರು.[][]

ಆರಂಭಿಕ ಜೀವನ

[ಬದಲಾಯಿಸಿ]

ಮಿಲೆವಾ ಮ್ಯಾರಿಕ್ ಅವರು ೧೯ ಡಿಸೆಂಬರ್ ೧೮೭೫ರಲ್ಲಿ ಆಸ್ಟ್ರೋ-ಹಂಗೇರಿಯನ್ ಮೊನ್ಯಾರ್ಕಿ ಅಂದರೆ ಈಗಿನ ಸರ್ಬಿಯಾ ದೇಶದ ಟಿಟೆಲ್ ಎಂಬ ನಗರದಲ್ಲಿ ಒಂದು ಶ್ರೀಮಂತ ಕುಟುಂಬದಲ್ಲಿ ಜನಿಸಿದರು. ಮಿಲೊಸ್ ಮ್ಯಾರಿಕ್ ಹಾಗೂ ಮರಿಜಾ ರುಜಿಕ್ ದಂಪತಿಯ ಮೂರು ಜನ ಮಕ್ಕಳಲ್ಲಿ ಹಿರಿಯವಳಾಗಿದ್ದಳು.ಆವಳ ಜನನದ ನಂತರದಲ್ಲಿಯೇ ಅವಳ ತಂದೆ ಮಿಲಿಟರಿ ಕೆಲಸ ಬಿಟ್ಟು ರುಮಾ ನಗರದ ನ್ಯಾಯಾಲಯದಲ್ಲಿ ಕೆಲಸಕ್ಕೆ ಸೇರಿದರು ನಂತರದಲ್ಲಿ ಜಾಗ್ರೇಬ್ನಲ್ಲಿ ಕೆಲಸಕ್ಕೆ ಸೇರಿದರು. ಮೈರಿಕ್ ಅವರು ತಮ್ಮ ಪದವಿಪೂರ್ವ ಶಿಕ್ಷಣವನ್ನು ೧೮೮೬ರಲ್ಲಿ ಮುಗಿಸಿದರು ಹಾಗೂ ಪ್ರೌಢ ಶಿಕ್ಷಣವನ್ನು ನೋವಿಸ್ಯಾಡ್ ಎಂಬ ಬಾಲಕಿಯರ ಶಾಲೆಯಲ್ಲಿ ಓದಿದರು, ನಂತರದ ಶಿಕ್ಷಣವನ್ನು ಸ್ರೆಂಸ್ಕಾ ಮಿಟ್ರೋವಿಕಾ ಎಂಬ ಶಾಲೆಯಲ್ಲಿ ಮುಗಿಸಿದರು. ೧೮೯೦ರಲ್ಲಿ ಮ್ಯಾರಿಕ್ ಸಬ್ಯಾಕ್ಕಿನ ರಾಯಲ್ ಸರ್ಬಿಯನ್ ಗ್ರಾಮರ್ ಶಾಲೆಯಲ್ಲಿ ಭಾಗವಹಿಸಿದ್ದರು. ೧೮೯೧ರಲ್ಲಿ ಜಾಗ್ರೇಬ್ ನಗರದ ಆಲ್ ಮೇಲ್ ರಾಯಲ್ ಕ್ಲಾಸಿಕಲ್ ಪ್ರೌಢ ಶಾಲೆಗೆ ಸೇರುವಂತೆ ಅವಳ ತಂದೆ ಅವಳು ಖಾಸಗಿ ವಿದ್ಯಾರ್ಥಿಯಾಗಿ ಸೇರಿಕೊಳ್ಳುವಂತೆ ವಿಶೇಷ ಅನುಮತಿಯನ್ನು ಪಡೆದಿದ್ದರು. ೧೮೯೨ರಲ್ಲಿ ಪ್ರವೇಶ ಪರೀಕ್ಷೆಯನ್ನು ಬರೆದು ಹತ್ತನೇ ತರಗತಿಗೆ ಬಂದಳು. ಅವಳು ಫೆಬ್ರವರಿ ೧೮೯೪ರಲ್ಲಿ ಭೌತಶಾಸ್ತ್ರ ಉಪನ್ಯಾಸವನ್ನು ಕೇಳಲು ವಿಶೇಷ ಅನುಮತಿಯನ್ನು ಪಡೆದಿದ್ದಳು, ಸೆಪ್ಟೆಂಬರ್ ೧೮೯೪ರಲ್ಲಿ ಕೊನೆಯ ಪರೀಕ್ಷೆಯನ್ನು ಪೂರ್ಣಗೊಳಿಸಿದಳು.ಅವಳು ಗಣಿತ ಹಾಗೂ ಭೌತಶಾಸ್ತ್ರದಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿದ್ದಳು.[]. ಆ ವರ್ಷ ಅವಳು ಅನಾರೋಗ್ಯ ಪೀಡಿತಳಾಗಿ ಸ್ವಿಟ್ಜರ್ಲೆಂಡ್ಡಿಗೆ ಹೋಗಲು ತೀರ್ಮಾನಿಸಿದಳು.೧೮೯೬ರಲ್ಲಿ ಮ್ಯಾರಿಕ್ ಮೆಚುರಾ ಪರೀಕ್ಷೆಯಲ್ಲಿ ಉತ್ತೀರ್ಣರಾದರು ನಂತರ ಜ್ಯೂರಿಕ್ ವಿಶ್ವವಿದ್ಯಾಲಯದಲ್ಲಿ ಒಂದು ಸೆಮೆಸ್ಟರ್ ವೈದ್ಯಕೀಯ ಕೋರ್ಸ್ ಓದಿದರು.

ಜೀವನ ಚರಿತ್ರೆ

[ಬದಲಾಯಿಸಿ]

೧೮೯೬ರ ವಸಂತಕಾಲದಲ್ಲಿ ಗಣಿತದ ಪ್ರವೇಶ ಪರೀಕ್ಷೆಯಲ್ಲಿ ೪.೨೫ ಶ್ರೇಣಿಯನ್ನು ಹೊಂದುವ ಮೂಲಕ ಜ್ಯೂರಿಕ್ ಪಾಲಿಟೆಕ್ನಿಕ್ ಸೇರಿಕೊಂಡರು. ಅವರು ಆಲ್ಬರ್ಟ್ ಐನ್ಸ್ಟೀನ್ ಅವರ ಜೊತೆಯೇ ಭೌತಶಾಸ್ತ್ರ ಹಾಗೂ ಗಣಿತ ವಿಷಯವನ್ನು ಬೋಧನೆ ಮಾಡುವ ಸಲುವಾಗಿ ಡಿಪ್ಲಮೋ ಪದವಿಗೆ ಸೇರಿಕೊಂಡಳು. ಆರು ಜನರ ಆ ಗುಂಪಿನಲ್ಲಿ ಏಕೈಕ ಮಹಿಳೆಯಾಗಿದ್ದಳು, ಅಲ್ಲದೆ ಆ ಪದವಿಯನ್ನು ಓದುತ್ತಿರುವ ಐದನೇ ಮಹಿಳೆಯಾಗಿದ್ದಳು. ಆ ಕಾಲೇಜಿನಲ್ಲಿ ಸಾಮಾನ್ಯವಾಗಿ ಮಹಿಳೆಯರನ್ನು ಸೇರಿಸಿಕೊಳ್ಳುತ್ತಿರಲಿಲ್ಲ ಆದರೆ ಅವಳ ಅಪಾರವಾದ ಜ್ಞಾನ ಹೊಂದಿದ್ದ ಕಾರಣ ಅವರನ್ನು ಸೇರಿಸಿಕೊಳ್ಳಲಾಯಿತು.ಆ ಸಮಯದಲ್ಲಿ ಅವರಿಗೆ ಆಲ್ಬರ್ಟ್ ಕೂಡ ಒಬ್ಬ ಒಳ್ಳೆಯ ಸ್ನೇಹಿತರಾದರು.

ಮ್ಯಾರಿಕ್ ಅವರು ೧೮೯೭/೯೮ರಲ್ಲಿ ಮುಂದಿನ ಶಿಕ್ಷಣಕ್ಕೆಂದು ಹೈಡೆಲ್ಬರ್ಗ್ ವಿಶ್ವವಿದ್ಯಾಲಯ ಸೇರಿಕೊಂಡರು. ಭೌತಶಾಸ್ತ್ರ ಹಾಗೂ ಗಣಿತ ಉಪನ್ಯಾಸಗಳಲ್ಲಿ ಪರೀಕ್ಷಕರಾಗಿ ಭಾಗವಹಿಸುತ್ತಿದ್ದರು. ಅವರು ಪುನಃ ಏಪ್ರಿಲ್ ೧೮೯೮ರಲ್ಲಿ ಜ್ಯೂರಿಕ್ ಪಾಲಿಟೆಕ್ನಿಕ್ ಸೇರಿದರು. ಆವರು ಅಲ್ಲಿ ಸುಮಾರು ವಿಷಯಗಳಲ್ಲಿ ಪದವಿಯನ್ನು ಮಾಡಿದರು: ಡಿಫರೆಂಷಿಯಲ್ ಅಂಡ್ ಇಂಟಿಗ್ರಲ್ ಕ್ಯಾಲ್ಕ್ಯುಲಸ್, ಡಿಸ್ಕ್ರಿಪ್ಟಿವ್ ಅಂಡ್ ಪ್ರೊಜೆಕ್ಟಿವ್ ಜಿಯೋಮೆಟ್ರಿ, ಮೆಕಾನಿಕ್ಸ್, ಥಿಯೋರಿಟಿಕಲ್ ಫಿಸಿಕ್ಸ್, ಅಪ್ಲೈಡ್ ಫಿಸಿಕ್ಸ್, ಎಕ್ಸ್ಪಿರಿಮೆಂಟಲ್ ಫಿಸಿಕ್ಸ್ ಹಾಗೂ ಅಸ್ಟ್ರೋನಮಿ. ೧೮೯೯ರಲ್ಲಿ ಮಧ್ಯಂತರ ಡಿಪ್ಲಮೋ ಪರೀಕ್ಷೆಯನ್ನು ಬರೆದರು. ಅವರು ೫.೦೫ರಷ್ಟು ಶ್ರೇಣಿಯೊಂದಿಗೆ ಆರು ಜನರಲ್ಲಿ ಐದನೇ ಸ್ಥಾನದಲ್ಲಿ ಬಂದರು. ಅವಳು ಭೌತಶಾಸ್ತ್ರದಲ್ಲಿ ಆಲ್ಬರ್ಟ್ ಅವರಂತೆಯೇ ೫.೫ ಪಡೆದಿದ್ದರು. ೧೯೦೦ರಲ್ಲಿ ಕೊನೆಯ ಡಿಪ್ಲಮೋ ಪರೀಕ್ಷೆಯಲ್ಲಿ ಗಣಿತ ವಿಷಯದಲ್ಲಿ ೨.೫ ಪಡೆದು ಅನುತ್ತೀರ್ಣರಾಗಿದ್ದರು. ಆಲ್ಬರ್ಟ್ ಅವರು ಆ ಪರೀಕ್ಷೆಯಲ್ಲಿ ೪.೯೧ ಪಡೆದು ನಾಲ್ಕನೇ ಸ್ಥಾನದಲ್ಲಿದ್ದರು. ಆಲ್ಬರ್ಟ್ ಅವರಿಂದ ಗರ್ಭಿಣಿ ಆದಕಾರಣ ಮ್ಯಾರಿಕ್ ಅವರ ಶಿಕ್ಷಣಕ್ಕೆ ಅಡ್ಡಿಯಾಯಿತು. ಆದರೆ ಅವಳು ಮೂರು ತಿಂಗಳ ಗರ್ಭಿಣಿಯಾಗಿದ್ದಾಗ ಪುನಃ ಡಿಪ್ಲಮೊ ಪರೀಕ್ಷೆಗೆ ಕೂತಳು, ಅದರೆ ಅದರಲ್ಲಿಯೂ ಸಹ ಅದೇ ಶ್ರೇಯಾಂಕದೊಂದಿಗೆ ಅನುತ್ತೀರ್ಣಳಾದಳು. ಭೌತಶಾಸ್ತ್ರ ಉಪನ್ಯಾಸಕರಾದ ಹೆನ್ರಿಕ್ ವೆಬರ್ ಅವರ ಕೆಳಗೆ ಪಿ.ಎಚ್.ಡಿ ಪ್ರಬಂಧ ಬೆಳವಣಿಗೆ ಮಾಡುವ ಕೆಲಸದಲ್ಲಿ ನಿರತಳಾದಳು ಅಲ್ಲದೆ ತನ್ನ ಡಿಪ್ಲಮೊ ಪದವಿಯನ್ನು ಬಿಡುತ್ತ ಬಂದಳು. ಜನವರಿ ೧೯೦೨ರಲ್ಲಿ ನೋವಿಸ್ಯಾಡ್ ಗೆ ಹೊರಟಳು. ಆವರ ಮಗಳ ಹೆಸರೇ ಲೈಸೆರ್ಲ್ ಆಗಿತ್ತು.ಅವರ ಮಗಳ ಅಣೆಬರಹ ಯಾರು ತಿಳಿಯಲು ಸಾಧ್ಯವಿರಲಿಲ್ಲ,ಆ ಮಗು ಬಹುಶಃ ೧೯೦೩ರಲ್ಲಿ ವಿಧಿವಶವಾಗಿರಬಹುದು ಅತವ ಅವರು ದತ್ತು ಕೊಟ್ಟಿರಬಹುದು.[]

ಮದುವೆ ಮತ್ತು ಸಂಸಾರ

[ಬದಲಾಯಿಸಿ]

೧೯೦೩ರಲ್ಲಿ ಮ್ಯಾರಿಕ್ ಹಾಗೂ ಆಲ್ಬರ್ಟ್ ಸ್ವಿಟ್ಜರ್ಲೆಂಡಿನ ಬರ್ನ್ ಎಂಬ ಊರಿನಲ್ಲಿ ಮದುವೆಯಾದರು, ಆಲ್ಬರ್ಟ್ ಅಲ್ಲಿಯೆ ಅತ್ತಿರದಲ್ಲಿನ ಫೆಡರಲ್ ಆಫಿಸ್ ಫಾರ್ ಇಂಟಲೆಕ್ಚ್ಯುಯಲ್ ಪ್ರಾಪರ್ಟಿ ಎಂಬ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದರು. ಆಲ್ಬರ್ಟ್ ೧೯೦೯ರ ತನಕ ಬರ್ಲಿನ್ ನಲ್ಲಿ ವಾಸವಿದ್ದರು ನಂತರ ಜ್ಯೂರಿಕ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರ ಕೆಲಸ ದೊರೆತಾಗ ಅವರ ಎರಡನೆಯ ಮಗ ಎಡ್ವರ್ಡ್ ಜನಿಸಿದನು. ೧೯೧೧ರಲ್ಲಿ ಚಾರ್ಲ್ಸ್ ವಿಶ್ವವಿದ್ಯಾಲಯದಲ್ಲಿ ಕೆಲಸ ಸಿಕ್ಕ ಕಾರಣ ಪ್ರೇಗ್ ನತ್ತ ಪ್ರಯಾಣ ಬೆಳೆಸಿದರು. ಒಂದು ವರ್ಷದ ನಂತರ ಜ್ಯುರಿಕ್ ಗೆ ವಾಪಸ್ಸಾದರು.

ಬರ್ಲಿನ್ ಪ್ರಯಾಣ ಹಾಗೂ ಬೇರ್ಪಡಿಕೆ

[ಬದಲಾಯಿಸಿ]

ಜುಲೈ ೧೯೧೩ರಲ್ಲಿ ಮ್ಯಾಕ್ಸ್ ಪ್ಲಾಂಕ್ ಹಾಗೂ ವಾಲ್ತರ್ ನರ್ನ್ಸ್ಟ್, ಆಲ್ಬರ್ಟ್ ಅವರಿಗೆ ಬರ್ಲಿನ್ ಗೆ ಬರುವಂತೆ ಆಹ್ವಾನಿಸಿದರು, ಅದರಂತೆಯೇ ಒಪ್ಪಿಕೊಂಡರು ಆದರೆ ಮ್ಯಾರಿಕ್ ಅವರಿಗೆ ಇದು ಇಷ್ಟವಾಗಲಿಲ್ಲ.ಆಗಸ್ಟ್ ತಿಂಗಳಲ್ಲಿ ಒಂದು ರಜೆ ದಿನದಂದು ಆಲ್ಬರ್ಟ್ ಹಾಗೂ ಮ್ಯಾರಿ ಕ್ಯೂರಿ ತಮ್ಮ ಮಕ್ಕಳ ಜೊತೆ ವಾಯುವಿಹಾರಕ್ಕೆಂದು ಹೊರಟರು. ಮ್ಯಾರಿಕ್ ಅವರ ಮಗ ಎಡ್ವರ್ಡ್ ಅನಾರೋಗ್ಯದ ಕಾರಣ, ಅವರನ್ನು ತಡವಾಗಿ ಸೇರಿಕೊಂಡರು. ಅದೇ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಆಲ್ಬರ್ಟ್ ಮ್ಯಾರಿಕ್ ಅವರ ತಂದೆ-ತಾಯಿಯನ್ನು ನೋವಿ-ಸ್ಯಾಡ್ ಎಂಬಲ್ಲಿ ಭೇಟಿಯಾದರು, ಆ ಸಮಯದಲ್ಲಿ ಅವರು ವೆನಾಗೆ ಹೊರಟಿದ್ದರು. ಮ್ಯಾರಿಕ್ ತಮ್ಮ ಇಬ್ಬರು ಮಕ್ಕಳನ್ನು ಆರ್ಥೋಡಾಕ್ಸ್ ಕ್ರೈಸ್ತರೆಂದು ನಾಮಕರಣ ಮಾಡಿದರು. ಅನಂತರ ಆಲ್ಬರ್ಟ್ ಜರ್ಮನಿಯಲ್ಲಿ ತಮ್ಮ ಸಂಬಂಧಿಕರನ್ನು ಭೇಟಿಯಾಗಲು ಹೋದರು, ಮ್ಯಾರಿಕ್ ಜ್ಯೂರಿಕ್ ಗೆ ವಾಪಸ್ಸಾದರು. ಕ್ರಿಸ್-ಮಸ್ ನಂತರ ಮ್ಯಾರಿಕ್ ಫ್ರಿಟ್ಜ್ ಹೇಬರ್ ನೊಂದಿಗೆ ವಾಸಿಸಲು ಬರ್ಲಿನ್ ಗೆ ಹೊರಟಳು. ಅದೇ ಮಾರ್ಚ್ ತಿಂಗಳಲ್ಲಿ ಆಲ್ಬರ್ಟ್ ಕೂಡ ಬರ್ಲಿನ್ ಗೆ ಬಂದು ವಾಸಿಸಿದರು. ಆಲ್ಬರ್ಟ್ ಬರುವಾಗ ಹ್ಯಾಂಟ್ವರ್ಪ್, ಎರೆನ್ಫೆಸ್ಟ್ ಹಾಗೂ ಲೊರೆಂಟ್ಜ್ ಅವರನ್ನು ಲೇಡನ್ ನಲ್ಲಿ ಭೇಟಿಯಾದರು, ಆದರೆ ಮ್ಯಾರಿಕ್ ಅವರು ತಮ್ಮ ಮಕ್ಕಳ ಜೊತೆ ಲೊಕ್ಯಾರ್ನೊ ಗೆ ಪ್ರವಾಸಕ್ಕೆಂದು ಹೋಗಿ ಏಪ್ರಿಲ್ ತಿಂಗಳಲ್ಲಿ ವಾಪಸ್ಸಾದರು.೧೯೧೨ ರಿಂದ ಮ್ಯಾರಿಕ್ ಅವರ ಸಂಸಾರದಲ್ಲಿ ಹೊಡಕುಗಳು ಶುರುವಾದವು, ಅಲ್ಲದೇ ಆಲ್ಬರ್ಟ್ [] ತಮ್ಮ ಸೋದರ ಸಂಬಂಧಿ ಎಲ್ಸಾ ಲೊವೆಂಥಾಲ್ ಅವರ ಜೊತೆ ಭಾಂದವ್ಯವನ್ನು ಬೆಳೆಸಿಕೊಳ್ಳಾಲು ಶುರು ಮಾಡಿದ್ದರು. ಮ್ಯಾರಿಕ್ ಅವರು ಬರ್ಲಿನ್ ಗೆ ಬರಲು ಇಷ್ಟವಿಲ್ಲದಿದ್ದರೂ ಅವರ ಒತ್ತಡಕ್ಕೆ ಮಣಿದು ಬಂದಿದ್ದರು. ಅವರು ಬಂದು ಕೆಲವು ದಿನಗಳ ನಂತರ ಆಲ್ಬರ್ಟ್ ಕ್ರೂರವಾಗಿ ವರ್ತಿಸಲು ಶುರುಮಾಡಿದರು. ೧೯೧೪ರ ಬೇಸಿಗೆಯಲ್ಲಿ ಮ್ಯಾರಿಕ್ ತಮ್ಮ ಮಕ್ಕಳ ಜೊತೆ ಪುನಃ ಜ್ಯೂರಿಕ್ ಗೆ ಹೊರಟಳು. ಇವರ ಜಗಳವು ನ್ಯಾಯಲಯದ ಮೆಟ್ಟಿಲೇರಿತು. ಆಲ್ಬರ್ಟ್ ತಮ್ಮ ಸಂಬಳದ ಅರ್ಧದಷ್ಟು ಭಾಗವನ್ನು ಮ್ಯಾರಿಕ್ ಅವರಿಗೆ ಪ್ರತಿ ತಿಂಗಳು ನೀಡುವಂತೆ ನ್ಯಾಯಲಯ ತೀರ್ಪು ಹೊರಹಾಕಿತು. ಫೆಬ್ರವರಿ ೧೪, ೧೯೧೯ರಲ್ಲಿ ಅವರ ವಿವಾಹ ವಿಚ್ಛೇದನವಾಯಿತು. ಅವರು ಒಂದು ಒಪ್ಪಂದವನ್ನು ಸಹ ಮಾಡಿಕೊಂಡಿದ್ದರು, ಅದೇನೆಂದರೆ ಆಲ್ಬರ್ಟ್ ಅವರ ನೊಬೆಲ್ ಪ್ರಶಸ್ತಿಯ ಹಣವನ್ನು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಇಡಬೇಕೆಂದು. ಅವರು ಬ್ಯಾಂಕ್ ನಲ್ಲಿ ಇರಿಸಿದ್ದ ಹಣದಲ್ಲಿ ಮ್ಯಾರಿಕ್ ಬಡ್ಡಿ ಬಂದ ಹಣವನ್ನು ಉಪಯೋಗೊಸೊಕೊಳ್ಳುತ್ತಿದ್ದಳು ಆದರೆ ಉಳಿದ ಹಣ ಬ್ಯಾಂಕ ನಲ್ಲಿಯೇ ಇರುತ್ತಿತ್ತು. ಜೂನ್ ೧೯೧೯ರಲ್ಲಿ ಆಲ್ಬರ್ಟ್ ಎರಡನೆಯ ಮದುವೆ ಆದ ನಂತರ ಮ್ಯಾರಿಕ್ ಅವರನ್ನು ಭೇಟಿಯಾಗಲು ಹಾಗೂ ತಮ್ಮ ಮಕ್ಕಳ ಭವಿಷ್ಯವನ್ನು ಯೋಚಿಸಲು ಜ್ಯೂರಿಕ್ ಗೆ ಭೇಟಿ ನೀಡಿದರು. ೧೯೨೨ರಲ್ಲಿ ಆಲ್ಬರ್ಟ್ ಅವರಿಗೆ ತಾವು ನೊಬೆಲ್ ಪ್ರಶಸ್ತಿ ಗೆದ್ದಿರುವ ವಿಷಯ ಮುಟ್ಟೀತು, ೧೯೨೩ರಲ್ಲಿ ಆ ಹಣವನ್ನೆಲ್ಲಾ ಮ್ಯಾರಿಕ್ ಗೆ ಹಸ್ತಾಂತರಿಸಿದರು. ಆ ಹಣದಲ್ಲಿ ಜ್ಯೂರಿಕ್ ನಲ್ಲಿ ಮೂರು ಮನೆಯನ್ನು ಖರೀದಿಸಲಾಯಿತು. ಮ್ಯಾರಿಕ್ ಒಂದು ಮನೆಯಲ್ಲಿ ವಾಸವಿದ್ದರು, ಉಳಿದ ಎರಡು ಮನೆ ಬಂಡವಾಳದ್ದಾಗಿತ್ತು. ಇ.ಟಿ.ಎಚ್.ನಲ್ಲಿ ಉಪನ್ಯಾಸಕರಾಗಿದ್ದ ಜಾರ್ಜ್ ಬುಷ್ ಹಾಗೂ ಅವರ ಕುಟುಂಬ ಇವರ ಮನೆಯಲ್ಲಿಯೇ ಬಾಡಿಗೆಗಾಗಿ ಇದ್ದರು.೧೯೩೦ರಲ್ಲಿ ೨೦ ವರ್ಷದ ಎಡ್ವರ್ಡ್ ಸ್ಕೀಜೊಫ್ರೇನಿಯಾ ಎಂಬ ಖಾಯಿಲೆಯಿಂದ ಬಳಲುತ್ತಿದ್ದನು.

ಮ್ಯಾರಿಕ್ ಅವರ ಪ್ರತಿಮೆ

ಅದೇ ವರ್ಷದಲ್ಲಿ ಜ್ಯೂರಿಕ್ ವಿಶ್ವವಿದ್ಯಾಲಯದ ಮನೋವೈದ್ಯರ ಬಳಿ ತೋರಿಸಲಾಯಿತು. ಅದಕ್ಕಾಗಿ ಅವರು ತಮ್ಮ ಎರಡು ಮನೆಯನ್ನು ಮಾರಬೇಕಾಗಿ ಬಂದಿತು. ೧೯೩೯ರಲ್ಲಿ ಅವಳು ವಾಸವಿದ್ದ ಮನೆಯನ್ನು ಆಲ್ಬರ್ಟ್ ಅವರಿಗೆ ಅಸ್ತಾಂತರಿಸಿದಳು ಅದರೆ ಆಲ್ಬರ್ಟ್ ಅವರು ಕೂಡ ತಮ್ಮ ಮಗನ ಖಾಯಿಲೆ ವಾಸಿಗೆಂದು ಹಣವನ್ನು ಆಗಾಗ ಕಲುಹಿಸುತ್ತಲೇ ಇದ್ದರು. ಜ್ಯೂರಿಕ್ ನಲ್ಲಿಯೇ ಆಗಸ್ಟ್ ೪, ೧೯೪೮ರಲ್ಲಿ ೭೨ ರಷ್ಟು ವಯಸ್ಸಾಗಿದ್ದಾಗ ಮ್ಯಾರಿಕ್ನ್ ಅವರು ಸಾವನ್ನಪ್ಪಿದರು, ಅವರ ಅಂತ್ಯ ಸಂಸ್ಕಾರ ನಾರ್ಧನ್-ಸಿಮೆಟ್ರಿಯಲ್ಲಿ ನಡೆಯಿತು. ಆವರ ಮಗ ಎಡ್ವರ್ಡ್ ೧೯೬೫ರಲ್ಲಿ ಸಾವನ್ನಪ್ಪಿದನು.

ಭೌತಶಾಸ್ತ್ರದಲ್ಲಿ ಮ್ಯಾರಿಕ್ ಪಾತ್ರ

[ಬದಲಾಯಿಸಿ]

ಮಿಲೆವಾ ಮ್ಯಾರಿಕ್ ಅವರು ಭೌತಶಾಸ್ತ್ರಕ್ಕೆ ಕಾಣಿಕೆ ನೀಡಿದ್ದಾರೆಯೋ ಅಥವಾ ಇಲ್ಲವೋ ಎಂಬುದು ಒಂದು ಚರ್ಚೆಗೆ ದಾರಿ ಮಾಡಿ ಕೊಟ್ಟಿದೆ. ಅವರು ಆಲ್ಬರ್ಟ್ ಅವರಿಗೆ ಕೆಲಸದಲ್ಲಿ ಸಹಾಯ ಮಾಡಿದ್ದಾರೆಯೋ ಇಲ್ಲವೋ ಅಥವಾ ಹ್ಯಾನಸ್ ಮಿರಾಬಿಲಸ್ ಪತ್ರಗಳಲ್ಲಿ ಅವರ ಪಾತ್ರ ಹೆಚ್ಚಾಗಿದೆಯೇ ಎಂಬುದು ಚ್ರ್ಚೆಗೆ ದಾರಿ ಮಾಡಿ ಕೊಟ್ಟಿದೆ. ವೃತ್ತಿಪರ ಇತಿಹಾಸಕಾರರ ಒಮ್ಮತದ ಹೇಳಿಕೆಗಳನ್ನು ಗಮನಿಸಿದರೆ ಅವರು ಭೌತಶಾಸ್ತ್ರಕ್ಕೆ ಕಾಣಿಕೆ ನೀಡಿಲ್ಲವೆಂದು ತಿಳಿಯುತ್ತದೆ. ಕೆಲವು ಮಾಹಿತಿಗಳ ಪ್ರಕಾರ ಅವರು ಕೇವಲ ಸಹಾಯಕ ವೃತ್ತಿಯಲ್ಲಿ ಮಾತ್ರ ಇದ್ದರು ಎಂದು ತಿಳಿಯುತ್ತದೆ ಹಾಗೂ ಆಲ್ಬರ್ಟ್ ಅವರ ಜೊತೆ ಬಹು ಕಾಲವನ್ನು ಕಳೆಯುತ್ತಿದ್ದರು ಎಂಬುದು ತಿಳಿಯುತ್ತದೆ. ಮ್ಯಾರಿಕ್ ಅವರು ಕೇವಲ ಸಹಾಯಕರೋ ಅಥವಾ ವಿಜ್ಞಾನಿಯೋ ಎಂಬುದು ೧೯೦೫ರ ಪತ್ರವೊಂದರಲ್ಲಿ ತಿಳಿಯುತ್ತದೆ.

  • ರಷ್ಯಾಭೌತಶಾಸ್ತ್ರಜ್ಞ ಅಬ್ರಾಮ್ ಜೊಫೆ ಅವರ ಪುರಾವೆಗಳ ಪ್ರಕಾರ ಹ್ಯಾನಸ್ ಮಿರಾಬಿಲಸ್ ಪತ್ರಿಕೆಯಲ್ಲಿ ಐನ್ ಸ್ಟೀನ್-ಮ್ಯಾರಿಟಿ ಎಂದು ಹೇಳಿದ್ದಾರೆ. ಸ್ವಿಸ್ ಸಂಪ್ರದಾಯದ ಪ್ರಕಾರ ಮ್ಯಾರಿಟಿ ಎಂಬ ಹೆಸರು ಮ್ಯಾರಿಕ್ ಅವರ ಅಧಿಕೃತ ಹೆಸರಾಗಿದೆ. ಆದರೆ ಒಂದು ಪ್ರಶ್ನೆಯೆಂದರೆ ಜೊಫೆ ಅವರು ಹೇಳಿರುವಂತೆ ೧೯೦೫ ರ ವಿಜ್ಞಾನದ ಕಣದಲ್ಲಿರುವವರ ಪ್ರಕಾರ ಆಲ್ಬರ್ಟ್ ಅವರ ಆಗಮನ ಮರೆಯುವಂತಿಲ್ಲ.
  • ಮಿಲೆವಾ ಉದ್ದೇಶ ಪೂರ್ವಕವಾಗಿಯೇ ೧೯೦೫ರ್ ಘಟನೆಯನ್ನು ಕುರಿತು ಒಬ್ಬ ಸರ್ಬಿಯಾದ ಗೆಳೆಯನ ಬಳಿ ವಿಷಯ ಹೇಳಿಕೊಂಡಳು. ಅದು ಏನೆಂದರೆ "ನಾವು ಮಾಡಿರುವ ಕೆಲಸ ನನ್ನ ಗಂಡನನ್ನು ವಿಶ್ವವಿಖ್ಯಾತನನ್ನಾಗಿ ಮಾಡುತ್ತದೆ". ಆ ಕೆಲಸವನ್ನು " ಹೋಮ್ ಟೌನ್ ಫೋಕ್ಲೋರ್" ಎಂದು ಬಣ್ಣಿಸಲಾಗಿದೆ. ಒಂದು ಪುರಾವೆಯಲ್ಲಿ ಆಲ್ಬರ್ಟ್ ಅವರು ಹೇಳಿರುವಂತೆ ಇದು ನನ್ನ ಕೆಲಸ, ಇದು ನನ್ನ ಸಿದ್ಧಾಂತ ಎಂಬುದನ್ನು ಜಾನ್ ಸ್ಟ್ಯಾಕಲ್ ಎಂಬುವರು ವಿರೋಧಿಸುತ್ತಾರೆ. ಎರಡು ಸಂದರ್ಭಗಳಲ್ಲಿ ಮ್ಯಾರಿಕ್ ಅವರು ಗಮನಿಸಿದಂತೆ ಆಲ್ಬರ್ಟ್ ಅವರು ವಿಭಿನ್ನವಾಗಿ ಪ್ರತಿಕ್ರಹಿಸಿದ್ದರು ಆದರೆ ಮ್ಯಾರಿಕ್ ಆ ವಿಷಯವನ್ನು ಗಂಭೀರವಾಗಿ ಪರಿಗಣಿಸಲಿಲ್ಲ.
  • ಸ್ಟ್ಯಾಕಲ್ ಅವರು ಹೇಳುವಂತೆ "ಮ್ಯಾರಿಕ್ ಅವರ ಕುರಿತು ನಮ್ಮಲ್ಲಿ ಯಾವುದೇ ಸಾಕ್ಷಿ ಪುರಾವೆಗಳಿಲ್ಲ, ಯಾವ ಪತ್ರಗಳು ವಿಜ್ಞಾನಕ್ಕೆ ಸಂಬಂಧ ಪಟ್ಟಂತೆ ಕಾಣುತ್ತಿಲ್ಲ. ಇತ್ತ ಆಲ್ಬರ್ಟ್ ಅವರಿಗೆ ಅಥವಾ ಬೇರೆಯವರಿಗೆ ಸಹಾಯ ಮಾಡಿದ ಯಾವುದೇ ಪುರಾವೆಗಳಿಲ್ಲ, ಈ ರೀತಿ ಕಾರಣಗಳಿಲ್ಲದೆ ಅವರನ್ನು ವಿಜ್ಞಾನಿ ಎಂದು ಕರೆಯಲು ಸಾಧ್ಯವಿಲ್ಲ".
  • ಆಲ್ಬರ್ಟ್ ಅವರು ತಮ್ಮ ವಿವಾಹವಿಚ್ಛೇದನದ ಪತ್ರದಲ್ಲಿ ತಮಗೆ ಬಂದ ನೊಬೆಲ್ ಪ್ರಶಸ್ತಿಯ ಹಣವನ್ನು ಮ್ಯಾರಿಕ್ ಅವರಿಗೆ ನೀಡುವುದಾಗಿ ಹೇಳಿದ್ದರು. ಆ ಒಪ್ಪಂದದ ಪ್ರಕಾರ ಆ ಹಣವು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಮೀಸಲಿರಬೇಕೆಂದು ಆಗಿತ್ತು. ಹೊಸದಾಗಿ ಬಿಡುಗಡೆಯಾದ ಪತ್ರಗಳ ಪ್ರಕಾರ, ವಾಲ್ಟರ್ ಐಸ್ಯಾಕ್ಸನ್ ಅವರು ಹೇಳುವಂತೆ " ಮ್ಯಾರಿಕ್ ಅವರು ಆದಾಯ ಬರಲೆಂದು ಆ ಹಣವನ್ನು ಮೂರು ಮನೆಗಳನ್ನು ಖರೀದಿಸುವುದರ ಮೂಲಕ ದುರುಪಯೋಗಪಡಿಸಿಕೊಂಡಿದ್ದಾರೆ".[]
  • ಆಲ್ಬರ್ಟ್ ಅವರ ಸಿದ್ಧಾಂತಗಳ ಬೆಳವಣಿಗೆಯಲ್ಲಿ ಮ್ಯಾರಿಕ್ ಅವರ ಪಾತ್ರ ಇದೆ ಎಂದು ಯಾವುದೇ ಬಲವಾದ ಕಾರಣಗಳಿಲ್ಲ. ಅವರ ಮೊದಲ ಮಗ ಹ್ಯಾನ್ಸ್ ಆಲ್ಬರ್ಟ್ ಹೇಳುವಂತೆ ಅವನ ತಾಯಿ ಮದುವೆಯಾದ ನಂತರ ವಿಜ್ಞಾನದಲ್ಲಿ ತಮ್ಮ ಆಸಕ್ತಿಯನ್ನು ಬಿಟ್ಟರು. ಆಲ್ಬರ್ಟ್ ಅವರು ಮ್ಯಾರಿಕ್ ಅವರಿಂದ ಬೇರೆಯಾದ ನಂತರ ವಿಜ್ಞಾನ ಕ್ಷೇತ್ರದಲ್ಲಿ ಬಹಳ ಮುಂದುವರೆದರು.
  • ಇತ್ತ ಮ್ಯಾರಿಕ್ ಯಾವುದೇ ಸಿದ್ಧಾಂತಗಳನ್ನು ಪ್ರಕಟಿಸಲಿಲ್ಲ. ಒಂದು ವಿಷಯವನ್ನು ಪರಿಗಣಿಸುವುದಾದರೆ ಅವರು ವಿಜ್ಞಾನಕ್ಕೆ ಏನೇ ಕಾಣಿಕೆ ನೀಡಿಲ್ಲದಿದ್ದರೂ ಮದುವೆಗೆ ಮುನ್ನ ಅವರು ಆ ಕ್ಷೇತ್ರದಲ್ಲಿ ಬಹಳ ಮುಂದಿದ್ದರು.
ಮ್ಯಾರಿಕ್ ಅವರ ಸಮಾಧಿ

ಗೌರವಗಳು

[ಬದಲಾಯಿಸಿ]

೨೦೦೫ರಲ್ಲಿ ಜ್ಯುರಿಕ್ ನಲ್ಲಿ ಇ.ಟಿ.ಎಚ್. ಅವರ ವತಿಯಿಂದ ಮ್ಯಾರಿಕ್ ಅವರಿಗೆ ಗೌರವಿಸಲಾಯಿತು. ಜ್ಯುರಿಕ್ ನಲ್ಲಿನ ಅವರ ಮನೆಯನ್ನು ಹಟನ್ಸ್ಟ್ರಾಸ್ ೬೨ ಎಂದು ಕರೆಯಲಾಯಿತು, ಅದೇ ವರ್ಷದಲ್ಲಿ ಅವಳ ಪ್ರೌಢಶಾಲೆ ಮುಗಿಸಿದ ನಗರ ಸ್ರೆಂಸ್ಕಾ ಮಿಟ್ರೋವಿಕಾದಲ್ಲಿ ಅವರ ಪ್ರತಿಮೆಯನ್ನು ಸ್ಥಾಪಿಸಲಾಯಿತು. ಅದೇ ರೀತಿಯ ಪ್ರತಿಮೆ ನೋವಿ-ಸ್ಯಾಡ್ ನಲ್ಲಿಯೂ ಸಹ ಸ್ಥಾಪಿಸಲಾಗಿದೆ. ಮ್ಯಾರಿಕ್ ಅವರು ವಾಸವಿದ್ದ ನಗರ ನಾರ್ಧನ್-ಸಿಮೆಟ್ರಿಯಲ್ಲಿ ಜೂನ್ ೨೦೦೯ರಲ್ಲಿ ಅವಿಸ್ಮರಣೀಯ ಸಮಾಧಿಶಿಲೆಯನ್ನು ಅವರಿಗೆ ಅರ್ಪಿಸಲಾಯಿತು.[]

ಉಲ್ಲೇಖಗಳು

[ಬದಲಾಯಿಸಿ]
  1. https://scientificwomen.net/women/maric-einstein-mileva-62
  2. https://3dna.news/en/Data/YAGO/sub_Mileva_Marik.html
  3. ಪ್ರಶಸ್ತಿ ಪಡೆದ ಭೌತಶಾಸ್ತ್ರಜ್ಞರು[ಶಾಶ್ವತವಾಗಿ ಮಡಿದ ಕೊಂಡಿ]
  4. https://www.independent.co.uk/news/long_reads/mileva-maric-albert-einsten-physics-science-history-women-a8396411.html
  5. ಮ್ಯಾರಿಕ್[ಶಾಶ್ವತವಾಗಿ ಮಡಿದ ಕೊಂಡಿ]
  6. https://www.biography.com/historical-figure/mileva-einstein-maric
  7. ಅವರ ಕ್ವಾಂಟಮ್ ಮೆಕಾನಿಕ್ಸ್[ಶಾಶ್ವತವಾಗಿ ಮಡಿದ ಕೊಂಡಿ]
  8. ಅವರ ಖಾಸಗಿ ಪತ್ರಗಳು[ಶಾಶ್ವತವಾಗಿ ಮಡಿದ ಕೊಂಡಿ]
  9. https://blogs.scientificamerican.com/guest-blog/the-forgotten-life-of-einsteins-first-wife/

ಮಗುವಿನ ಹೆಸರುಗಳು MAGUVINA HESARUGAḶU