ಮತ್ತಿ (ಔಷಧೀಯ ಸಸ್ಯ)

ವಿಕಿಪೀಡಿಯ ಇಂದ
Jump to navigation Jump to search
Terminalia arjuna
Fruit I IMG 9577.jpg
Arjuna fruit
Flowers with Sykes's warbler I IMG 1880.jpg
Arjuna flowers with a Sykes's Warbler
ವೈಜ್ಞಾನಿಕ ವರ್ಗೀಕರಣ
ಸಾಮ್ರಾಜ್ಯ: Plantae
ವಿಭಾಗ: Magnoliophyta
ವರ್ಗ: Magnoliopsida
ಗಣ: Myrtales
ಕುಟುಂಬ: Combretaceae
ಕುಲ: Terminalia
ಪ್ರಭೇದ: T. arjuna
ದ್ವಿಪದ ಹೆಸರು
Terminalia arjuna
(Roxb.) Wight & Arn.
ಅರ್ಜುನ ಮರ

ಮತ್ತಿ (ಅರ್ಜುನ) (ಔಷಧೀಯ ಸಸ್ಯ) ಇದು ಆಯುರ್ವೇದ ಔಷಧ ಪದ್ಧತಿಯಲ್ಲಿ ಬಳಕೆಯಲ್ಲಿರುವ ಒಂದು ಸಸ್ಯ. ಅರ್ಜುನ ಮರವು ಟರ್ಮಿನಲಿಯಾ ಕುಟುಂಬಕ್ಕೆ ಸೇರಿದೆ. ಇದನ್ನು ಸಾಮಾನ್ಯವಾಗಿ ಅರ್ಜುನ್ ಮರ, ಥಲ್ಲಾ ಮಡ್ಡಿ, ಕುಂಬಕ್, ಮಧು ಮರಣ ಮತ್ತು ನೀರೂ ಮಾರುತು ಎಂದು ಕರೆಯಲಾಗುತ್ತದೆ.[೧][೨]

ಸಸ್ಯದ ವಿವರಣೆ[ಬದಲಾಯಿಸಿ]

ಅರ್ಜುನ ಮರವು ೨೦-೨೫ಮೀ ಎತ್ತರವಿರುತ್ತದೆ. ಸಾಮಾನ್ಯವಾಗಿ ಬಟ್ರೆಸ್ಟೆಡ್ ಕಾಂಡವನ್ನು ಹೊಂದಿರುತ್ತದೆ. ಶಂಕುವಿನಾಕಾರದ ಎಲೆಗಳನ್ನು ಹೊಂದಿದೆ. ಇದರ ಎಲೆಗಳು ಹಸಿರು ಬಣ್ಣದಲ್ಲಿರುತ್ತದೆ. ಎಲೆಯ ಕೆಳಭಾಗವು ಕಂದು ಬಣ್ಣದಲ್ಲಿರುತ್ತದೆ. ನಯವಾದ ಬೂದು ತೊಗಟೆಯನ್ನು ಹೊಂದಿದೆ. ಇದು ಮಾರ್ಚ್ ಮತ್ತು ಜೂನ್ ನಡುವೆ ಕಾಣುವ ಹಳದಿ ಬಣ್ಣದ ಹೂವುಗಳು ಬೆಳೆಯುತ್ತವೆ.[೩]

ಬೆಳೆಯುವ ಪ್ರದೇಶ[ಬದಲಾಯಿಸಿ]

ಅರ್ಜುನ ಮರ ಬಾಂಗ್ಲಾದೇಶ, ಉತ್ತರಪ್ರದೇಶ, ಮಧ್ಯ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ದಕ್ಷಿಣ ಮತ್ತು ಮಧ್ಯ ಭಾರತದಲ್ಲಿ ಸಾಮಾನ್ಯವಾಗಿ ನದಿಯ ದಡಗಳಲ್ಲಿ ಅಥವಾ ಶುಷ್ಕ ನದಿ ಹಾಸಿಗೆಗಳ ಬಳಿ ಬೆಳೆಯುತ್ತದೆ. ಇದನ್ನು ತಮಿಳು ಭಾಷೆಯಲ್ಲಿ ಮಠಿಮಾರಾ, ಮಲಯಾಳಂನಲ್ಲಿ 'ಮಾರುತ ಮಾರಮ್' (ಮಾರುತಮ್ ಪ್ಯಾಟೈ), ತಮಿಳಿನಲ್ಲಿ ತೆಲ್ಲಾ ಮಡ್ಡಿ (ತೆಳು ಮಡಿ) ಎಂದು ಕರೆಯಲಾಗುತ್ತದೆ.[೪][೫]

ಉಪಯೋಗ[ಬದಲಾಯಿಸಿ]

ರೇಷ್ಮೆ ಉತ್ಪಾದನೆ[ಬದಲಾಯಿಸಿ]

ಅರ್ಜುನವು ಆಂಥೆರಿಯಾ ಪ್ಯಾಫಿಯಾ ಪತಂಗವುಳ್ಳ ಎಲೆಗಳನ್ನು ಕೊಡುವ ಜಾತಿಗಳಲ್ಲಿ ಒಂದಾಗಿದೆ. ಇದು ಟಸ್ಸರ್ ರೇಷ್ಮೆಯನ್ನು ಉತ್ಪಾದಿಸುತ್ತದೆ. ಇದೊಂದು ವಾಣಿಜ್ಯ ಪ್ರಾಮುಖ್ಯತೆಯ ಒಂದು ಕಾಡು ರೇಷ್ಮೆ.

ಬೌದ್ಧ ಧರ್ಮದಲ್ಲಿ[ಬದಲಾಯಿಸಿ]

ಥೇರವಾಡದ ಬೌದ್ಧ ಧರ್ಮದಲ್ಲಿ ಅರ್ಜುನ ಮರದ ಉಲ್ಲೇಖವಿದೆ[೬]

ಔಷಧೀಯ ಬಳಕೆ[ಬದಲಾಯಿಸಿ]

ವಗುಭಟ ಕ್ರಿ.ಶ. ೭ನೇ ಶತಮಾನಲ್ಲಿ ಹೃದಯ ರೋಗದ ಚಿಕಿತ್ಸೆಗಾಗಿ ಅರ್ಜುನವನ್ನು ಆಯುರ್ವೇದದಲ್ಲಿ ಪರಿಚಯಿಸಲಾಯಿತು. ಇದನ್ನು ಸಾಂಪ್ರದಾಯಿಕವಾಗಿ ಹಾಲಿನ ಕಷಾಯದಂತೆ ತಯಾರಿಸಲಾಗುತ್ತದೆ. ಪ್ರಾಚೀನ ಭಾರತೀಯ ವೇದಗಳಲ್ಲಿ ಇದರ ಉಲ್ಲೇಖವಿದೆ. ಗಾಯಗಳು, ರಕ್ತಸ್ರಾವ ಮತ್ತು ಹುಣ್ಣುಗಳ ಚಿಕಿತ್ಸೆಯಲ್ಲಿ ಅರ್ಜುನ ಮರವನ್ನು ಬಳಸುತ್ತಾರೆ.[೭][೮]

ಉಲ್ಲೇಖ[ಬದಲಾಯಿಸಿ]