ಭೂಮಿ ತಾಯಿಯ ಚೊಚ್ಚಲ ಮಗ (ಚಲನಚಿತ್ರ)
ಭೂಮಿ ತಾಯಿಯ ಚೊಚ್ಚಲ ಮಗ | |
---|---|
ನಿರ್ದೇಶನ | ರಾಜೇಂದ್ರ ಸಿಂಗ್ ಬಾಬು |
ನಿರ್ಮಾಪಕ | ಜೈ ಜಗದೀಶ್ ಆದಿತ್ಯ |
ಲೇಖಕ | ರಾಜೇಂದ್ರ ಸಿಂಗ್ ಬಾಬು |
ಪಾತ್ರವರ್ಗ | ಶಿವರಾಜಕುಮಾರ್ ರಮೇಶ್ ಅರವಿಂದ್ ವಿಜಯಲಕ್ಷ್ಮಿ ಲೋಕೆಶ್ |
ಸಂಗೀತ | ವಿ ಮನೋಹರ್ |
ಛಾಯಾಗ್ರಹಣ | ಬಿ ಸಿ ಗೌರಿಶಂಕರ್ |
ಸಂಕಲನ | ಸುರೇಶ ಅರಸ್ |
ಸ್ಟುಡಿಯೋ | ವೈಭವಲಕ್ಷ್ಮಿ ಪ್ರೊಡಕ್ಷನ್ಸ್ |
ಬಿಡುಗಡೆಯಾಗಿದ್ದು | 18 ಸೆಪ್ಟೆಂಬರ್ 1998 |
ಅವಧಿ | 144 ನಿಮಿಷ |
ದೇಶ | ಭಾರತ |
ಭಾಷೆ | ಕನ್ನಡ |
ಭೂಮಿ ತಾಯಿಯ ಚೊಚ್ಚಲ ಮಗ ರಾಜೇಂದ್ರ ಸಿಂಗ್ ಬಾಬು ಅವರು ಬರೆದು ನಿರ್ದೇಶಿಸಿದ 1998ರ ಕನ್ನಡ ಚಲನಚಿತ್ರ. ಚಿತ್ರದ ಹೆಸರು ವರಕವಿ ದ ರಾ ಬೇಂದ್ರೆ ಅವರ ಅದೇ ಹೆಸರಿನ ಕವಿತೆಯಿಂದ ಪ್ರೇರಿತವಾಗಿದೆ. ಇದರಲ್ಲಿ ಶಿವ ರಾಜ್‌ಕುಮಾರ್ , ರಮೇಶ್ ಅರವಿಂದ್ , ವಿಜಯಲಕ್ಷ್ಮಿ , ಶಿಲ್ಪಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. [೧] ಈ ಚಿತ್ರವು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದೆ . ಈ ಚಿತ್ರಕ್ಕೆ ವಿ. ಮನೋಹರ್ ಅವರು ಸಂಗೀತ ಸಂಯೋಜಿಸಿದ್ದರೆ.
ಈ ಚಿತ್ರದಲ್ಲಿ ಲೋಕೇಶ್ ಅವರು ನಟಿಸಿದ ಕಲ್ಲಣ್ಣನ ಪಾತ್ರವು ಬಿಹಾರದ ದಶರಥ ಮಾಂಜಿಯವರಿಂದ ಪ್ರೇರಿತವಾಗಿದೆ. [೨] [೩] ನಿಜ ಜೀವನದಲ್ಲಿ ದಶರಥ ಮಾಂಜಿಯವರು ತಮ್ಮ ಮಡಿದ ಹೆಂಡತಿಯ ನೆನಪಿಗಾಗಿ 22 ವರ್ಷಗಳ ಕಾಲ ಕಲ್ಲಿನ ಬೆಟ್ಟವನ್ನು ಕಡಿದು , ರಸ್ತೆ ನಿರ್ಮಿಸಲು ಶ್ರಮಿಸುತ್ತಾರೆ. ಈ ಚಿತ್ರದಲ್ಲಿ ಗ್ರಾಮಕ್ಕೆ ಅಣೆಕಟ್ಟು ನಿರ್ಮಿಸಲು ಕಲ್ಲಣ್ಣನು ಬೆಟ್ಟ ಕಡಿಯುತ್ತಿರುತ್ತಾನೆ.
ಭಾರಿ ಸಾಲಗಳಿಂದ ಹೊರೆಯಾಗಿರುವ ರೈತರ ದುಃಸ್ಥಿತಿ , ಬೆಳೆ ವೈಫಲ್ಯದಿಂದಾಗಿ ಉತ್ತರ ಕರ್ನಾಟಕದಲ್ಲಿ ಆದ ರೈತರ ಆತ್ಮಹತ್ಯೆಗಳು ಈ ಚಿತ್ರದ ಕಥಾವಸ್ತು. ಶಿವ ರಾಜ್‌ಕುಮಾರ್ ಹಾಗು ರಮೇಶ್ ಅರವಿಂದ್ ಅವರ ನೈಜ ನಟನೆಗೆ ಬಹಳ ಮೆಚ್ಛುಗೆ ಪಡೆದಿದೆ.
ಪಾತ್ರವರ್ಗ
[ಬದಲಾಯಿಸಿ]- ಶಿವ ರಾಜ್‌ಕುಮಾರ್ ಕರ್ಣನಾಗಿ
- ಭರತ್ ಕುಮಾರ್ ಆಗಿ ರಮೇಶ್ ಅರವಿಂದ್
- ಸಪ್ನಾ ಸಾಗರ್ ಆಗಿ ವಿಜಯಲಕ್ಷ್ಮಿ
- ನಿಲಾಂಬಿಕಾ ಪಾತ್ರದಲ್ಲಿ ಶಿಲ್ಪಾ
- ಚನ್ನಬಸಪ್ಪನಾಗಿ ಸಬಿಯಾಸಾಚಿ ಚಕ್ರವರ್ತಿ
- ಕಲ್ಲಣ್ಣ ಪಾತ್ರದಲ್ಲಿ ಲೋಕೇಶ್
- ಪಾಟೀಲ್ ಆಗಿ ರಂಗಾಯಣ ರಘು
- ಗಿರಿಜಾ ಲೋಕೇಶ್ ಗ್ರಾಮಸ್ಥರಾಗಿ
- ಗುರುಬಸ್ಯ ಪಾತ್ರದಲ್ಲಿ ಶಂಕರ್ ಅಶ್ವತ್
- ಗ್ರಾಮಸ್ಥನಾಗಿ ಕರಿಬಸವಯ್ಯ
- ಎಂ.ಎಸ್.ವಾಸುದೇವ ರಾವ್ ಸಿ.ಎಸ್.ನರಸಿಂಹ ಮೂರ್ತಿಯಾಗಿ
- ಜಿ.ಕೆ ಗೋವಿಂದ ರಾವ್ ಮುಖ್ಯಮಂತ್ರಿಯಾಗಿ
- ಹೊನ್ನವಳ್ಳಿ ಕೃಷ್ಣ ಕೃಷ್ಣನಾಗಿ
ಸಂಗೀತ
[ಬದಲಾಯಿಸಿ]ವಿ.ಮನೋಹರ್ ಸಂಗೀತ ಸಂಯೋಜಿಸಿದ್ದಾರೆ. [೪]
ಪ್ರಶಸ್ತಿಗಳು
[ಬದಲಾಯಿಸಿ]- ಸಾಮಾಜಿಕ ಕಾಳಜಿಯ ವಿಶೇಷ ಚಲನಚಿತ್ರ
- ಅತ್ಯುತ್ತಮ ಕಥೆಗಾರ - ರಾಜೇಂದ್ರ ಸಿಂಗ್ ಬಾಬು
- ಅತ್ಯುತ್ತಮ ಸಂಭಾಷಣೆ ಬರಹಗಾರ - ಎಸ್.ಸುರೇಂದ್ರನಾಥ್
ಬಾಹ್ಯ ಲಿಂಕ್‌ಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ Mysore directors foray into Sandalwood
- ↑ "ಆರ್ಕೈವ್ ನಕಲು". Archived from the original on 2022-12-04. Retrieved 2021-05-25.
- ↑ https://bangaloremirror.indiatimes.com/entertainment/reviews/Olave-Mandara-A-fairytale-on-the-road/articleshow/21698823.cms
- ↑ Bhoomi Thayiya Chochala Maga [1998]