ಭಾರತೀಯ ಸಶಸ್ತ್ರ ಪಡೆ
ಭಾರತೀಯ ಸಶಸ್ತ್ರ ಪಡೆ | |
---|---|
ಸೇವಾ ಶಾಖೆಗಳು | ಭಾರತೀಯ ಭೂಸೇನೆ
ಭಾರತೀಯ ನೌಕಾಪಡೆ ಭಾರತೀಯ ವಾಯುಸೇನೆ |
ಪ್ರಧಾನ ಕಚೇರಿ | ರಕ್ಷಣಾ ಸಚಿವಾಲಯ, ದಕ್ಷಿಣ ಬ್ಲಾಕ್, ನವ ದೆಹಲಿ |
Leadership | |
ಪ್ರಧಾನ ದಂಡನಾಯಕ | ರಾಷ್ಟ್ರಪತಿ ದ್ರೌಪದಿ ಮುರ್ಮು |
ಪ್ರಧಾನ ಮಂತ್ರಿ | ನರೇಂದ್ರ ಮೋದಿ |
ರಕ್ಷಣಾ ಸಚಿವ | ರಾಜನಾಥ್ ಸಿಂಗ್[೧] |
ರಕ್ಷಣಾ ಕಾರ್ಯದರ್ಶಿ | ಗಿರಿಧರ್ ಅರಮನೆ |
ರಕ್ಷಣಾ ಪಡೆಗಳ ಮುಖ್ಯಸ್ಥ | ಜನರಲ್ ಅನಿಲ್ ಚೌಹಾಣ್ |
ಮಾನವ ಬಲ | |
ಮಿಲಿಟರಿ ವಯಸ್ಸು | 18[೨] |
ಕಡ್ಡಾಯ | No |
ಸಕ್ರಿಯ ಸಿಬ್ಬಂದಿ | 1,445,550[೩] (ranked ಎರಡನೇ) |
ಮೀಸಲು ಸಿಬ್ಬಂದಿ | 1,155,000[೩] |
ವೆಚ್ಚಗಳು | |
ಮುಂಗಡಪತ್ರ | ₹೪,೭೧೩.೭೮ billion($66.9 Billion)[೪] (FY 2020–21) (ranked 3rd) |
Percent of GDP | 2.4% (2019)[೫] |
Industry | |
ದೇಶೀಯ ಪೂರೈಕೆದಾರರು | |
ವಿದೇಶಿ ಪೂರೈಕೆದಾರರು | ರಷ್ಯಾ[೭] France[೭] ಇಸ್ರೇಲ್[೭] ಯುನೈಟೆಡ್ ಕಿಂಗ್ಡಂ[೮] ಅಮೇರಿಕ ಸಂಯುಕ್ತ ಸಂಸ್ಥಾನ[೭] ಇಟಲಿ |
ವಾರ್ಷಿಕ ಆಮದು | US$42.9 billion (2000–16)[೯] |
ವಾರ್ಷಿಕ ರಫ್ತು | US$2.23 billion (2019–20)[೧೦]
List
ಅಫ್ಘಾನಿಸ್ತಾನ ಮಾಲ್ಡೀವ್ಸ್ ತಾಜಿಕಿಸ್ತಾನ್ ನೇಪಾಳ ಭೂತಾನ್ ಇಸ್ರೇಲ್ ಒಮಾನ್ ಬಾಂಗ್ಲಾದೇಶ ವಿಯೆಟ್ನಾಮ್ ಸಂಯುಕ್ತ ಅರಬ್ ಸಂಸ್ಥಾನ ಇರಾನ್ ಥೈಲ್ಯಾಂಡ್ ಕಜಾಕಸ್ಥಾನ್ ಟರ್ಕಿ ಕತಾರ್ ಉಜ್ಬೇಕಿಸ್ಥಾನ್ ಸೌದಿ ಅರೇಬಿಯಾ ಮಲೇಶಿಯ ಫಿಲಿಪ್ಪೀನ್ಸ್ Kyrgyzstan ಇಂಡೋನೇಷ್ಯಾ |
Related articles | |
ಇತಿಹಾಸ | Military history of India Presidency armies British Indian Army Royal Indian Navy Indian National Army Wars involving India |
ಶ್ರೇಯಾಂಕಗಳು | Army Navy Air Force |
ಭಾರತೀಯ ಸಶಸ್ತ್ರ ಪಡೆ ಭಾರತದ ಗಣರಾಜ್ಯದ ಮಿಲಿಟರಿ ಪಡೆಗಳಾಗಿವೆ. ಇದು ಮೂರುವೃತ್ತಿಪರ ಸಮವಸ್ತ್ರ ಸೇವೆಗಳನ್ನು ಒಳಗೊಂಡಿದೆ: ಭಾರತೀಯ ಸೇನೆ, ಭಾರತೀಯ ನೌಕಾಪಡೆ ಮತ್ತು ಭಾರತೀಯ ವಾಯುಸೇನೆ. ಹೆಚ್ಚುವರಿಯಾಗಿ, ಭಾರತೀಯ ಸಶಸ್ತ್ರ ಪಡೆಗಳನ್ನು ಭಾರತೀಯ ಕೋಸ್ಟ್ ಗಾರ್ಡ್ ಮತ್ತು ಅರೆಸೈನಿಕ ಸಂಸ್ಥೆಗಳು (ಅಸ್ಸಾಂ ರೈಫಲ್ಸ್, ಮತ್ತು ವಿಶೇಷ ಗಡಿನಾಡು ಪಡೆ) ಮತ್ತು ಸ್ಟ್ರಾಟೆಜಿಕ್ ಫೋರ್ಸ್ ಕಮಾಂಡ್, ಅಂಡಮಾನ್ ಮತ್ತು ನಿಕೋಬಾರ್ ಕಮಾಂಡ್ ಮತ್ತು ವಿವಿಧ ಅಂತರ್-ಸೇವಾ ಆಜ್ಞೆಗಳು ಮತ್ತು ಸಂಸ್ಥೆಗಳು ಬೆಂಬಲಿಸುತ್ತವೆ. ಸಂಯೋಜಿತ ರಕ್ಷಣಾ ಸಿಬ್ಬಂದಿ. ಭಾರತದ ರಾಷ್ಟ್ರಪತಿಗಳು ಭಾರತೀಯ ಸಶಸ್ತ್ರ ಪಡೆಗಳ ಸರ್ವೋಚ್ಚ ಕಮಾಂಡರ್. ಭಾರತೀಯ ಸಶಸ್ತ್ರ ಪಡೆಗಳು ಭಾರತ ಸರ್ಕಾರದ ರಕ್ಷಣಾ ಸಚಿವಾಲಯದ (ಎಂಒಡಿ) ನಿರ್ವಹಣೆಯಲ್ಲಿದೆ. ೧.೪ ಮಿಲಿಯನ್‌ಗಿಂತಲೂ ಹೆಚ್ಚು ಸಕ್ರಿಯ ಸಿಬ್ಬಂದಿಯೊಂದಿಗೆ, ಇದು ವಿಶ್ವದ ಎರಡನೇ ಅತಿದೊಡ್ಡ ಮಿಲಿಟರಿ ಪಡೆ ಮತ್ತು ವಿಶ್ವದ ಅತಿದೊಡ್ಡ ಸ್ವಯಂಸೇವಕ ಸೈನ್ಯವನ್ನು ಹೊಂದಿದೆ. ಇದು ವಿಶ್ವದ ಮೂರನೇ ಅತಿದೊಡ್ಡ ರಕ್ಷಣಾ ಬಜೆಟ್ ಅನ್ನು ಸಹ ಹೊಂದಿದೆ. ೨೦೧೫ರ ಕ್ರೆಡಿಟ್ ಸ್ಯೂಸ್ ವರದಿಯ ಪ್ರಕಾರ, ಭಾರತೀಯ ಸಶಸ್ತ್ರ ಪಡೆ ವಿಶ್ವದ ಐದನೇ ಅತ್ಯಂತ ಶಕ್ತಿಶಾಲಿ ಮಿಲಿಟರಿ.
ಇತಿಹಾಸ
[ಬದಲಾಯಿಸಿ]ಹಲವಾರು ಸಹಸ್ರಮಾನಗಳಷ್ಟು ಹಳೆಯದಾದ ಮಿಲಿಟರಿ ಇತಿಹಾಸವನ್ನು ಭಾರತ ಹೊಂದಿದೆ. ಸೈನ್ಯದ ಮೊದಲ ಉಲ್ಲೇಖವು ವೇದಗಳ ಜೊತೆಗೆ ರಾಮಾಯಣ ಮತ್ತು ಮಹಾಭಾರತದ ಮಹಾಕಾವ್ಯಗಳಲ್ಲಿ ಕಂಡುಬರುತ್ತದೆ. ಬಿಲ್ಲುಗಾರಿಕೆ ಕುರಿತಾದ ಶಾಸ್ತ್ರೀಯ ಭಾರತೀಯ ಪಠ್ಯಗಳನ್ನು ಮತ್ತು ಸಾಮಾನ್ಯವಾಗಿ ಸಮರ ಕಲೆಗಳನ್ನು ಧನುರ್ವೇದ ಎಂದು ಕರೆಯಲಾಗುತ್ತದೆ.
ಭಾರತೀಯ ಸಶಸ್ತ್ರ ಪಡೆಯ ಅಂಗಗಳು
[ಬದಲಾಯಿಸಿ]ಭಾರತೀಯ ಸಶಸ್ತ್ರ ಪಡೆ ಮೂರು ಮುಖ್ಯ ಅಂಗಗಳಿವೆ:
ಇವುಗಳೊಂದಿಗೆ ಭಾರತೀಯ ಸೈನ್ಯದ ಅಂಗಗಳಾಗಿ ಅಥವಾ ಇವುಗಳ ಜೊತೆ ಕೆಲಸ ಮಾಡುವ ಅಂಗಗಳು ಸಹ ಸೇರಿವೆ:
- ಗಡಿ ರಕ್ಷಣಾ ದಳ (ಬಿಎಸ್‍ಎಫ್)
- ಅಸ್ಸಾಮ್ ರೈಫಲ್ಸ್
- ರಾಷ್ಟ್ರೀಯ ರೈಫಲ್ಸ್
ಇತ್ತೀಚೆಗೆ (ಸಪ್ಟಂಬರ್ ೨೦೦೩ ರಲ್ಲಿ) ಸೇರಿಸಲ್ಪಟ್ಟ ಒಂದು ಅಂಗವೆಂದರೆ
ಭಾರತೀಯ ಸೇನೆಯ ಅತ್ಯುನ್ನತ ಕಮಾಂಡರ್
[ಬದಲಾಯಿಸಿ]- ಭಾರತೀಯ ಸೇನೆಯ ಅಂತಿಮ ಕಮಾಂಡರ್ ಯಾವಾಗಲೂ ಭಾರತದ ರಾಷ್ಟ್ರಪತಿ.
ಇತರೆ
[ಬದಲಾಯಿಸಿ]ಭಾರತೀಯ ಸೇನೆಯ ವತಿಯಿಂದ ಕೊಡಲ್ಪಡುವ ಅತ್ಯುಚ್ಚ ಪ್ರಶಸ್ತಿ ಪರಮ ವೀರ ಚಕ್ರ.
ಸಶಸ್ತ್ರ ಪಡೆಗಳ ಮೂರು ಮುಖ್ಯಸ್ಥರು
[ಬದಲಾಯಿಸಿ]- ೯-೧೧-೨೦೧೬:
- ಸೇನಾ ಮುಖ್ಯಸ್ಥ ದಲಬಿರ್ ಸಿಂಗ್
- ನೌಕಾದಳದ ಮುಖ್ಯಸ್ಥ ಸುನಿಲ್ ಲಂಬ ಮತ್ತು
- ಭಾರತೀಯ ವಾಯುಪಡೆಯ ಉಪ ಮುಖ್ಯ ಬಿಎಸ್ ಧನೊಅ
ಭೂ ಸೇನಾ ಮುಖ್ಯಸ್ಥರಾಗಿ ಬಿಪಿನ್ ರಾವತ್ ಅಧಿಕಾರ ಸ್ವೀಕಾರ
[ಬದಲಾಯಿಸಿ]- 31 Dec, 2016
- ಜನರಲ್ ಬಿಪಿನ್ ರಾವತ್ ಅವರು ಸೇನಾ ಪಡೆಯ 27ನೇ ಮುಖ್ಯಸ್ಥರಾಗಿ ಶನಿವಾರ ಅಧಿಕಾರಿ ವಹಿಸಿಕೊಂಡರು. ಸೇನಾ ಪಡೆ ಮುಖ್ಯಸ್ಥ ಜನರಲ್ ದಲ್ಬೀರ್ ಸಿಂಗ್ ಸುಹಾಗ್ ಅವರ ಅಧಿಕಾರಾವಧಿ ಡಿಸೆಂಬರ್ 31ರಂದು ಕೊನೆಗೊಂಡಿದ್ದು, ಬಿಪಿನ್ ರಾವತ್ ಅವರು ನೂತನ ಮುಖ್ಯಸ್ಥರಾಗಿ ಅಧಿಕಾರ ವಹಿಸಿದರು. 1978ರಲ್ಲಿ ರಾವತ್ ಅವರು ಗೋರ್ಖಾ ರೈಫಲ್ಸ್ ಪಡೆಗೆ ನೇಮಕಗೊಳ್ಳುವ ಮೂಲಕ ಭಾರತೀಯ ಸೇನೆಯಲ್ಲಿ ಕರ್ತವ್ಯ ಪ್ರಾರಂಭಿಸಿದರು.[೧೧]
- ವಾಯುಪಡೆಯ ಮುಖ್ಯಸ್ಥರಾಗಿ ಬೀರೇಂದರ್ ಸಿಂಗ್ ಧನೋವಾ ಸಹ ಅಧಿಕಾರ ಸ್ವೀಕರಿಸಿದರು. ಬಿಪಿನ್ ಅವರು ಸೇನೆಯ 27ನೇ ಮುಖ್ಯಸ್ಥರಾಗಿದ್ದರೆ, ಧನೋವಾ ಅವರು ವಾಯುಪಡೆಯ 25ನೇ ಮುಖ್ಯಸ್ಥರಾಗಿದ್ದಾರೆ.[೧೨]
ಭೂ ಸೇನಾ ಮುಖ್ಯಸ್ಥರಾಗಿ ಮುಕುಂದ್ ನರವಣೆ ಅಧಿಕಾರ ಸ್ವೀಕಾರ
[ಬದಲಾಯಿಸಿ]- 2019 ಡಿಸೆಂಬರ್ 31 ರಂದು ಲೆಫ್ಟಿನೆಂಟ್ ಜನರಲ್ ಮನೋಜ್ ಮುಕುಂದ್ ನರವಣೆ ಅವರು ಭೂಸೇನಾ ಮುಖ್ಯಸ್ಥರಾಗಿ ರಾವತ್ ಅವರಿಂದ ಮಂಗಳವಾರ ಅಧಿಕಾರ ವಹಿಸಿಕೊಂಡರು.[೧೩] [೧೪]
ಮೂರೂ ಪಡೆಗಳ ಮುಖ್ಯಸ್ಥರ ಹುದ್ದೆ ಸೃಷ್ಠಿ ಮತ್ತು ನೇಮಕ
[ಬದಲಾಯಿಸಿ]- ಭಾರತದ ‘ರಕ್ಷಣಾ ಪಡೆಗಳ ಮುಖ್ಯಸ್ಥ-(ಬಿಪಿನ್ ರಾವತ್)
- ದಿ. 30-12-2019 ರಂದು ಹೊಸದಾಗಿ ರಚನೆಯಾಗಿರುವ ‘ರಕ್ಷಣಾ ಪಡೆಗಳ ಮುಖ್ಯಸ್ಥ’ (ಸಿಡಿಎಸ್- Chief of Defence Staff,) ಹುದ್ದೆಗೆ ಹಾಲಿ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರನ್ನು ನೇಮಕ ಮಾಡಲಾಗಿದೆ. ಅವರು ಹಾಲಿ ನಿರ್ವಹಿಸುತ್ತಿರುವ ಭೂ ಸೇನಾ ಮುಖ್ಯಸ್ಥ ಸೇವೆಯಿಂದ ನಿವೃತ್ತಿಯಾಗಲು ಒಂದು ದಿನ ಬಾಕಿ ಇರುವಾಗಲೇ ರಾವತ್ ಅವರನ್ನು ನೂತನ ಹುದ್ದೆಗೆ ನೇಮಕಮಾಡಲಾಗಿದೆ. ಸಿಡಿಎಸ್ ಮುಖ್ಯಸ್ಥರ ನಿವೃತ್ತಿ ವಯಸ್ಸು 65 ವರ್ಷ ಎಂದು ದಿ.29-12-2019 ರಂದು ಕೇಂದ್ರ ಸರ್ಕಾರ ಘೋಷಿಸಿತ್ತು. ಅವರು 2019 ಡಿಸೆಂಬರ್ 31ರಂದು ೬೨ ನೇ ವಯಸ್ಸಿಗೆ ನಿವೃತ್ತರಾದ ನಂತರವೂ ‘ರಕ್ಷಣಾ ಪಡೆಗಳ ಮುಖ್ಯಸ್ಥ’ರಾಗಿ ಮೂರು ವರ್ಷ ಮುಂದುವರೆಯುವರು. [೧೫]
ಸಿಡಿಎಸ್ ಕರ್ತವ್ಯಗಳು
[ಬದಲಾಯಿಸಿ]- 2019 ಡಿಸೆಂಬರ್ 31ರಿಂದ ಜಾರಿಗೆ ಬರುವಂತೆ ರಾವತ್ ಅವರನ್ನು ಸಿಡಿಎಸ್ ಆಗಿ ನೇಮಿಸಲಾಗಿದೆ ಎಂದು ರಕ್ಷಣಾ ಸಚಿವಾಲಯದ ಪ್ರಕಟಣೆ ತಿಳಿಸಿದೆ. ರಾವತ್ ಅವರು ಸೇನೆಗೆ 1978ರ ಡಿಸೆಂಬರ್‌ನಲ್ಲಿ ಸೇರ್ಪಡೆಯಾಗಿದ್ದರು. ಸೇನಾ ಮುಖ್ಯಸ್ಥರಾಗಿ 2017ರ ಜನವರಿ 1ರಿಂದ ಅವರು ಕಾರ್ಯನಿರ್ವಹಿಸುತ್ತಿದ್ದರು; ರಾವತ್ ಅವರಿಗೆ ಮೂರೂ ಪಡೆಗಳ ಮುಖ್ಯಸ್ಥರು ಹೊಂದಿರುವ ಶ್ರೇಣಿಯೇ ಇರುತ್ತದೆ. ಆದರೆ, ಸಮಾನರಲ್ಲಿ ಪ್ರಥಮರು ಎಂಬುದು ಸಿಡಿಎಸ್ ಹುದ್ದೆಯ ಹೆಚ್ಚುಗಾರಿಕೆ..
- ರ್‍ಯಾಂಕ್
- ಮೂರೂ ಪಡೆಗಳ ಮುಖ್ಯಸ್ಥರಂತೆ ರಕ್ಷಣಾ ಪಡೆಗಳ ಮುಖ್ಯಸ್ಥರೂ ‘ನಾಲ್ಕು ಸ್ಟಾರ್’ ಅಧಿಕಾರಿ ಎನಿಸುವರು. ಅದೇ ವೇತನಶ್ರೇಣಿ ಅದೇ. ಆದರೆ ಇವರು ಸಮಾನರಲ್ಲಿ ಮೊದಲಿಗರಾಗಿರುತ್ತಾರೆ. ಸೇನಾ ಪಡೆಯ ಮುಖ್ಯಸ್ಥರು ಆ ಹುದ್ದೆಯಲ್ಲಿ ಮೂರು ವರ್ಷ ಪೂರ್ಣಗೊಳಿಸಿದಾಗ ಅಥವಾ 62 ವರ್ಷ ವಯಸ್ಸಾದಾಗ ನಿವೃತ್ತಿ ಹೊಂದುತ್ತಿದ್ದರು. ಈ ನಿಯಮಕ್ಕೆ ತಿದ್ದುಪಡಿ ಮಾಡಿರುವ ಸರ್ಕಾರವು ಸಿಡಿಎಸ್ ನಿವೃತ್ತಿ ವಯಸ್ಸನ್ನು ಮಾತ್ರ 65 ವರ್ಷಕ್ಕೆ ಹೆಚ್ಚಿಸಿದೆ.
- ‘ಮೂರು ಪಡೆಗಳಲ್ಲಿ ಬರಬಹುದಾದ ಸಮಸ್ಯೆಗಳನ್ನು ನಿವಾರಿಸಿ, ಸಮನ್ವಯ ರೂಪಿಸುವ ಮೂಲಕ ಒಂದು ನಿರ್ಧಾರಕ್ಕೆ ಬರಲು ಸಾಧ್ಯವಾಗುವಂತೆ ಸರ್ಕಾರಕ್ಕೆ ಸಲಹೆ ನೀಡಲು ಸಿಡಿಎಸ್ ಅಗತ್ಯ’ ಎಂದು ಸೇನೆಯ ನಿವೃತ್ತ ಅಧಿಕಾರಿಗಳು ಹೇಳುತ್ತಾರೆ. ರಕ್ಷಣಾ ನೀತಿ ರೂಪಿಸುವುದು, ಮೂರೂ ಪಡೆಗಳ ಬಜೆಟ್ ರೂಪಿಸುವುದು, ಶಸ್ತ್ರಾಸ್ತ್ರ ಖರೀದಿ, ತರಬೇತಿ, ಸೇನಾ ಕಾರ್ಯಾಚರಣೆಗಳನ್ನು ಯೋಜಿಸುವುದು, ಮೊದಲಾದ ವಿಚಾರಗಳಲ್ಲಿ ಮೂರೂ ಪಡೆಗಳಲ್ಲಿ ಸಮನ್ವಯ ಸಾಧಿಸುವುದಕ್ಕೆ ಇದು ಅನುಕೂಲ ಎಂದು ನಿವೃತ್ತ ಅಧಿಕಾರಿಗಳು ‘ರಕ್ಷಣಾ ಪಡೆಗಳ ಮುಖ್ಯಸ್ಥರು ಹೇಳುತ್ತಾರೆ. [೧೬]
ಸೇನೆಗೆ ಬಲ ಪೂರಕ ಡ್ರೋನ್ ಒಪ್ಪಂದ
[ಬದಲಾಯಿಸಿ]- 28 Jun, 2017
- ಮೋದಿ ಮತ್ತು ಡೊನಾಲ್ಡ್ ಟ್ರಂಪ್ -ರಕ್ಷಣಾ ಸಹಕಾರ : ಕಡಲ ಕಣ್ಗಾವಲಿಗೆ ೨೨ - ರೂ.೧೨,೯೦೦ ರಿಂದ ೧೯,೩೫೦ ರ ಪ್ರಿಡೇಟರ್ ಡ್ರೋನ್ಭಾ ಭಾರತಕ್ಕೆ ಕರಾವಳಿ ಕಣ್ಗಾವಲು ಡ್ರೋನ್‌ಗಳ ಮಾರಾಟಕ್ಕೆ ಅಮೆರಿಕ ಒಪ್ಪಿಗೆ ಸೂಚಿಸಿದೆ. ಎರಡೂ ದೇಶಗಳ ಮಧ್ಯೆ ರಕ್ಷಣಾ ಮತ್ತು ಭದ್ರತಾ ಸಹಕಾರ ಏರ್ಪಟ್ಟಿದೆ. [೧೭]
ಸೇನಾ ಸಲಕರಣೆ ಖರೀದಿ
[ಬದಲಾಯಿಸಿ]ರಕ್ಷಣಾ ಸಚಿವಾಲಯವು Rs.3,000 ಕೋಟಿ ಮೊತ್ತದ ಸೇನಾ ಸಲಕರಣೆಗಳಾದ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ಷಿಪಣಿ ಮತ್ತು ಶಸ್ತ್ರಸಜ್ಜಿತ ರಕ್ಷಣಾ ವಾಹನಗಳು ಸೇರಿವೆ. ಭಾರತೀಯ ಭೂ ಸೇನೆಯ ಅರ್ಜುನ ಟ್ಯಾಂಕ್‌ಗಳ ನೆರವಿಗೆಂದು ಅರ್ಮರ್ಡ್ ರಿಕವರಿ ವೆಹಿಕಲ್–ಎಆರ್‌ವಿಗಳನ್ನು (ಶಸ್ತ್ರಸಜ್ಜಿತ ರಕ್ಷಣಾ ವಾಹನ) ಖರೀದಿಸಸುವುದು. ಅರ್ಜುನ ಟ್ಯಾಂಕ್‌ಗಳು ಕೆಟ್ಟು ನಿಂತಾಗ, ದುರ್ಗಮ ಸ್ಥಳದಲ್ಲಿ ಸಿಲುಕಿದಾಗ ಅವನ್ನು ಅಲ್ಲಿಂದ ಹೊರಗೆ ತರುವ ಎಆರ್‌ವಿಗಳನ್ನು ಖರೀದಿಸಲು ಉದ್ದೇಶಿಸಿರುವ ಎಆರ್‌ವಿಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಿಡಿಸಿದೆ. ಈ ವಾಹನಗಳನ್ನು ಭಾರತ್ ಅರ್ಥ ಮೂವರ್ಸ್ ಲಿಮಿಟೆಡ್ ತಯಾರಿಸುತ್ತದೆ. ಸಾಮರ್ಥ್ಯ* 20 ಟನ್ ಎಳೆಯುವ ಸಾಮರ್ಥ್ಯ* 8 ಟನ್ ಭಾರ ಎತ್ತುವ ಸಾಮರ್ಥ್ಯ; ಕ್ಷಿಪಣಿಯ ವಿಶೇಷತೆಗಳು;* ಈ ಕ್ಷಿಪಣಿಯ ಗರಿಷ್ಠ ವೇಗ-3,700 ಕಿ.ಮೀ. ಇದು ಜಗತ್ತಿನ ಅತ್ಯಂತ ವೇಗದ ಕ್ಷಿಪಣಿ ಎಂಬ ಹೆಗ್ಗಳಿಕೆ ಹೊಂದಿದೆ; * 290 ಕಿ.ಮೀ. ಈ ಕ್ಷಿಪಣಿಯ ದಾಳಿ ವ್ಯಾಪ್ತಿ ಹೋದಿದೆ;* 200 ಕೆ.ಜಿ. ತೂಕದ ಸಿಡಿತಲೆಗಳನ್ನು ಹೊತ್ತೊಯ್ಯುವುದು.[೧೮]
ಸೇನೆಗೆ ೨೦೨೦ - ೨೧ ರ ಅಂದಾಜು ಬಜೆಟ್
[ಬದಲಾಯಿಸಿ]- ರಕ್ಷಣಾ ಕ್ಷೇತ್ರಕ್ಕೆ ನೀಡುತ್ತಿರುವ ಅನುದಾನದಲ್ಲಿ ಮೂರು ವಿಭಾಗಗಳಿಗೆ ದೊರೆಯುತ್ತಿರುವ ಪ್ರಮಾಣ ಬಹಳ ಕಡಿಮೆ ಇದೆ. ಭೂ ಸೇನೆ, ವಾಯು ಪಡೆಗಳ ಅಭಿವೃದ್ಧಿಗೆ ಮತ್ತು ಬಹು ವಿಸ್ತಾರವಾದ ಸಾಗರ ಗಡಿ ಹೊಂದಿರುವ ಭಾರತದ ನೌಕಾಪಡೆಯ ಬಲವೃದ್ಧಿ ಹೆಚ್ಚು ಅನುದಾನ ಅಗತ್ಯ ಎಂದು ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
- ದೇಶದ ರಕ್ಷಣಾ ವಲಯಕ್ಕೆ 2020–21ನೇ ಸಾಲಿನ ಬಜೆಟ್‌ನಲ್ಲಿ ರೋ.3.37 ಲಕ್ಷ ಕೋಟಿ ಮೀಸಲಿಟ್ಟಿರುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಪ್ರಕಟಿಸಿದರು.ಆಧುನೀಕರಣ, ಶಸ್ತ್ರಾಸ್ತ್ರಗಳ ಖರೀದಿಗಾಗಿ ಈ ಬಜೆಟ್‌ನಲ್ಲಿ ರೂ.1.13 ಲಕ್ಷ ಕೋಟಿ ತೆಗೆದಿರಿಸಲಾಗಿದೆ. ನಿವೃತ್ತಿ ವೇತನಕ್ಕೆ ರೂ.1.33 ಲಕ್ಷ ಕೋಟಿ ತೆಗೆದಿರಿಸಲಾಗಿದೆ; ರಕ್ಷಣಾ ಕ್ಷೇತ್ರಕ್ಕೆ ಒಟ್ಟು ಜಿಡಿಪಿಯ- ಶೇ 1.5ರಷ್ಟಿದೆ. ಆಧುನೀಕರಣಕ್ಕೆ ಜಿಡಿಪಿಯ ಶೇ 2.5ರಷ್ಟು ಮೊತ್ತವನ್ನು ತೆಗೆದಿರಿಸಬೇಕು ಎಂಬುದು ತಜ್ಞರ ಅಭಿಪ್ರಾಯ.[೧೯]
- ಭಾರತಕ್ಕಿಂತಲೂ ಚೀನಾ, ಪಾಕಿಸ್ತಾನ ಮುಂದಿವೆ: ಕಳೆದ ವರ್ಷದ 2019-20 ಮಧ್ಯಂತರ ಬಜೆಟ್‌ನಲ್ಲಿ ರಕ್ಷಣಾ ಕ್ಷೇತ್ರಕ್ಕೆ ರೂ.3 ಲಕ್ಷ ಕೋಟಿ ಅನುದಾನ ನೀಡಿದ್ದರೂ ನೆರೆಯ ಪಾಕಿಸ್ತಾನ ಮತ್ತು ಚೀನಾಗೆ ಹೋಲಿಸಿದರೆ ಅದು ಕಡಿಮೆ. ಭಾರತದ ರಕ್ಷಣಾ ಅನುದಾನ ದೇಶದ ಜಿಡಿಪಿಯ ಶೇ 2ಕ್ಕಿಂತಲೂ ಕಡಿಮೆ ಇದೆ. ಆದರೆ ಪಾಕಿಸ್ತಾನವು ಜಿಡಿಪಿಯ ಶೇ 3.5 ಮತ್ತು ಹೆಚ್ಚು ಆದಾಯವಿರುವ ಚೀನಾವು ಜಿಡಿಪಿಯ ಶೇ 3ರರಷ್ಟನ್ನು ರಕ್ಷಣಾ ಕ್ಷೇತ್ರಕ್ಕೆ ಅನುದಾನ ನೀಡುತ್ತಿವೆ. ಭಾರತದಲ್ಲಿ 1,000 ಮಂದಿಗೆ ಒಬ್ಬನಂತೆ ಯೋಧರಿದ್ದರೆ ಪಾಕಿಸ್ತಾನದಲ್ಲಿ ಸರಾಸರ 4.25 ಜನಕ್ಕೆ ಒಬ್ಬಯೋಧ, ಮತ್ತು ಚೀನಾದಲ್ಲಿ 2.23ರಂತೆ(ಜನಕ್ಕೆ) ಒಬ್ಬ ಯೋಧರಿದ್ದಾರೆ.[೨೦]
ನೋಡಿ
[ಬದಲಾಯಿಸಿ]- ಭಾರತ ಮತ್ತು ಪಾಕೀಸ್ತಾನಗಳ ಆರ್ಥಿಕ ಬಲ ಮತ್ತು ಸೈನ್ಯ ಬಲ
- 2008ರ ಮುಂಬಯಿ ದಾಳಿ
- ರಫೆಲ್ ಯುದ್ಧವಿಮಾನ - ಭಾರತ ಮತ್ತು ಫ್ರಾನ್ಸ್ ಒಪ್ಪಂದ
- ಭಾರತೀಯ ವಾಯುಸೇನೆ
- ಭಾರತೀಯ ವಾಯುಸೇನೆ
- ಉರಿಯಲ್ಲಿ ಭಯೋತ್ಪಾದಕರ ದಾಳಿ ೨೦೧೬
- ಭಯೋತ್ಪಾದನೆ
- ಅರ್ಜುನ ಕದನ ಟ್ಯಾಂಕ್
- ರಾಷ್ಟ್ರೀಯ ಭದ್ರತೆ
ರಕ್ಷಣಾ ಸಾಮಗ್ರಿ ರಪ್ತು ಯೋಜನೆ
[ಬದಲಾಯಿಸಿ]- 2025ರ ವೇಳೆಗೆ ದೇಶದಲ್ಲಿ ಉತ್ಪಾದಿಸಿದ ರೂ.35 ಸಾವಿರ ಕೋಟಿಯಷ್ಟು ಮೌಲ್ಯದ ರಕ್ಷಣಾ ಸಾಮಗ್ರಿಯನ್ನು ರಫ್ತು ಮಾಡುವ ಯೋಜನೆ. ರಕ್ಷಣಾ ಸಾಮಗ್ರಿಗಳ ರಫ್ತು ಕ್ಷೇತ್ರದಲ್ಲಿ 2020ರಲ್ಲಿ 24ನೇ ಸ್ಥಾನದಲ್ಲಿ ಭಾರತದ ಇದೆ. ಅದನ್ನು ಉತ್ತಮಪಡಿಸುವ ಯೋಜನೆಗಳ ರೂಪುರೇಷೆ;ಲಖನೌದಲ್ಲಿ ಡಿಫೆನ್ಸ್ ಎಕ್ಸ್ಪೊ ಮತ್ತು 2020:ಭಾರತದ ಗುರಿ;d: 06 ಫೆಬ್ರವರಿ 2020}
ಪೂರಕ ಮಾಹಿತಿ
[ಬದಲಾಯಿಸಿ]- ಎಸ್–400 ಕ್ಷಿಪಣಿ:ರಷ್ಯಾದಿಂದ ಎಸ್–400 ಕ್ಷಿಪಣಿ ಖರೀದಿಗೆ ಭಾರತ ಒಲವು, ಅಮೆರಿಕ ಅಸಮಾಧಾನ;29 May, 2018 &
- ರಷ್ಯಾದೊಂದಿಗೆ ಭಾರತ ಒಪ್ಪಂದ ರಕ್ಷಣಾ ಸಾಮರ್ಥ್ಯ ಹೆಚ್ಚಿಸಲಿದೆ ಎಸ್–400 ಟ್ರಯಂಪ್;30 May, 2018 Archived 2018-05-29 ವೇಬ್ಯಾಕ್ ಮೆಷಿನ್ ನಲ್ಲಿ.
- ವಾಯುದಾಳಿ ನಿಷ್ಕ್ರಿಯಕ್ಕೆ ಆಗಸದಲ್ಲೇ ಗುರಾಣಿ;;: 05 ಅಕ್ಟೋಬರ್ 2018
ಆಭಿಪ್ರಾಯಗಳು-ಸಲಹೆಗಳು
[ಬದಲಾಯಿಸಿ]- ಸೇನೆಯ ಹೊಟ್ಟೆ ಗಟ್ಟಿ ಮಾಡಿ!(8Oct,2016):ಕ್ಯಾ.ಜಿ.ಆರ್ ಗೋಪಿನಾಥ್:[೧] Archived 2016-10-08 ವೇಬ್ಯಾಕ್ ಮೆಷಿನ್ ನಲ್ಲಿ.
- ಶತ್ರು ಪಾಳಯದೊಳಗೇ ನುಗ್ಗುವ ವಿಶೇಷ ಪಡೆ;8 Oct, 2016;[೨] Archived 2016-10-08 ವೇಬ್ಯಾಕ್ ಮೆಷಿನ್ ನಲ್ಲಿ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Bharat Rakshak - ಭಾರತೀಯ ಸೇನೆಗೆ ಸಂಬಂಧಪಟ್ಟ ಅನೇಕ ಲೇಖನಗಳಿವೆ
- ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಡನೆ ಎಸ್–400 ವಾಯುಪ್ರದೇಶ ರಕ್ಷಣಾ ಕ್ಷಿಪಣಿಗಳ ಖರೀದಿಗೆ ಪ್ರಧಾನಿ ನರೇಂದ್ರ ಮೋದಿ ಸಹಿ ಹಾಕಿದ್ದಾರೆ. ಸುಮಾರು ₹40 ಸಾವಿರ ಕೋಟಿ ಮೊತ್ತದ ಈ ಒಪ್ಪಂದಸುದೀರ್ಘ ಕಥನ: ಆಗಸ–ಸಾಗರ ರಕ್ಷಣೆಗೆ ರಷ್ಯಾ ಸಹಯೋಗ;05 ಅಕ್ಟೋಬರ್ 2018
ಉಲ್ಲೇಖ
[ಬದಲಾಯಿಸಿ]- ↑ cite web|url=https://m-economictimes-com.cdn.ampproject.org/v/s/m.economictimes.com/news/defence/rajnath-singh-to-be-the-new-defence-minister-of-india/amp_articleshow/69593474.cms?amp_js_v=a2&_gsa=1&usqp=mq331AQA#aoh=15593102270663&_ct=1559310270799&referrer=https%3A%2F%2Fwww.google.com&_tf=From%20%251%24s&share=https%3A%2F%2Fm.economictimes.com%2Fnews%2Fdefence%2Frajnath-singh-to-be-the-new-defence-minister-of-india%2Farticleshow%2F69593474.cms
- ↑ "Categories of Entry". Indian Army. Archived from the original on 23 August 2011. Retrieved 23 August 2011.
- ↑ ೩.೦ ೩.೧ International Institute for Strategic Studies (15 February 2019). The Military Balance 2019. ಲಂಡನ್: Routledge. p. 266. ISBN 978-1-85743-988-5.
- ↑ Tian, Nan; Fleurant, Aude; Kuimova, Alexandra; Wezeman, Pieter D.; Wezeman, Siemon T. (27 April 2020). "Trends in World Military Expenditure, 2019". Stockholm International Peace Research Institute. Retrieved 27 April 2020.
- ↑ Tian, Nan; Fleurant, Aude; Kuimova, Alexandra; Wezeman, Pieter D.; Wezeman, Siemon T. (27 April 2020). "Trends in World Military Expenditure, 2019". Stockholm International Peace Research Institute. Retrieved 27 April 2020.
- ↑ http://mod.nic.in/product&supp/welcome.html Archived 4 July 2012 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ೭.೦ ೭.೧ ೭.೨ ೭.೩ "India / Aircraft / Jianjiji / Fighter". Stockholm International Peace Research Institute. Archived from the original on 19 January 2012.
- ↑ "Czech Tatra becoming into Indian Armed Forces". MAFRA a.s. Archived from the original on 10 ಜನವರಿ 2015. Retrieved 19 ಫೆಬ್ರವರಿ 2015.
- ↑ "Arms Transfers Database". SIPRI. Archived from the original on 14 February 2013. Retrieved 20 February 2013.
- ↑ "India's annual defence exports to touch Rs 35,000 crore by 2024: Rajnath Singh". The Economic Times. 27 February 2020. Retrieved 28 March 2020.
- ↑ ಸೇನಾ ಮುಖ್ಯಸ್ಥರಾಗಿ ಬಿಪಿನ್ ರಾವತ್ ಅಧಿಕಾರ ಸ್ವೀಕಾರ
- ↑ "ವಾಯುಪಡೆ, ಸೇನೆಯ ಹೊಸ ಮುಖ್ಯಸ್ಥರ ಅಧಿಕಾರ ಸ್ವೀಕಾರ;1 Jan, 2017". Archived from the original on 2017-01-01. Retrieved 2017-01-01.
- ↑ ಭಾರತ ರಕ್ಷಣಾ ಸಚಿವಾಲಯದ ಪ್ರಕಟಣೆ
- ↑ ಪ್ರಜಾವಾಣಿ d: 31 ಡಿಸೆಂಬರ್ 2019;ಲೆಫ್ಟಿನೆಂಟ್ ಜನರಲ್ ಮನೋಜ್ ಮುಕುಂದ್ ನರವಣೆ ಅವರು ಭೂಸೇನಾ ಮುಖ್ಯಸ್ಥರಾಗಿ ಅಧಿಕಾರ ಸ್ವೀಕಾರ
- ↑ ರಕ್ಷಣಾ ಪಡೆಗಳ ಮೊದಲ ಮುಖ್ಯಸ್ಥರಾಗಿ ಬಿಪಿನ್ ರಾವತ್ ನೇಮಕ;d-30 ಡಿಸೆಂಬರ್ 2019
- ↑ ರಕ್ಷಣಾ ಪಡೆಗಳ ಮೊದಲ ಮುಖ್ಯಸ್ಥರಾಗಿ ಬಿಪಿನ್ ರಾವತ್ ನೇಮಕ;ಏಜೆನ್ಸಿಸ್ Updated: 31 ಡಿಸೆಂಬರ್ 2019,
- ↑ ಪಿಟಿಐ;ರಕ್ಷಣಾ ಸಹಕಾರ ಹೆಚ್ಚಳಕ್ಕೆ ಇಂಗಿತ: ಕಡಲ ಕಣ್ಗಾವಲು ಹೆಚ್ಚಿಸಲಿರುವ ಪ್ರಿಡೇಟರ್ ಡ್ರೋನ್
- ↑ Rs.3,000 ಕೋಟಿ ಮೊತ್ತದ ಸೇನಾ ಸಲಕರಣೆ ಖರೀದಿಗೆ ರಕ್ಷಣಾ ಸಚಿವಾಲಯ ಅನುಮೋದನೆ;01 ಡಿಸೆಂಬರ್ 2018,
- ↑ ಬಜೆಟ್ 2020 | ರಕ್ಷಣಾ ವಲಯಕ್ಕೆ ₹3.37 ಲಕ್ಷ ಕೋಟಿ;ಪಿಟಿಐ d: 02 ಫೆಬ್ರವರಿ 2020,
- ↑ [https://www.prajavani.net/business/budget/union-budget-expectations-from-defence-sector-indian-army-iaf-navvy-701233.htmlಬಜೆಟ್ 2020: ರಕ್ಷಣಾ ಕ್ಷೇತ್ರಕ್ಕೆ ಸಾಕಾಗ್ತಿಲ್ಲ ಅನುದಾನ, ದೇಶದ ಭದ್ರತೆಗೇ ಆತಂಕ ಪ್ರಜಾವಾಣಿ ವೆಬ್ ಡೆಸ್ಕ್ Updated: 28 ಜನವರಿ 2020,][ಶಾಶ್ವತವಾಗಿ ಮಡಿದ ಕೊಂಡಿ]