ಭಾರತದ ಸಂವಿಧಾನದ ೩೭೦ನೇ ವಿಧಿ

ವಿಕಿಪೀಡಿಯ ಇಂದ
Jump to navigation Jump to search

ಭಾರತೀಯ ಸಂವಿಧಾನದ ೩೭೦ನೇ ವಿಧಿಯು ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ಸ್ವಾಯತ್ತ ಸ್ಥಾನಮಾನವನ್ನು ನೀಡುವ ವಿಧಿಯಾಗಿದೆ.[೧] ಈ ವಿಧಿಯನ್ನು ಸಂವಿಧಾನದ ಭಾಗ XXI ರಲ್ಲಿ ರಚಿಸಲಾಗಿದೆ: ತಾತ್ಕಾಲಿಕ, ಪರಿವರ್ತನಾ ಮತ್ತು ವಿಶೇಷ ನಿಬಂಧನೆಗಳು.[೨] ಜಮ್ಮು ಮತ್ತು ಕಾಶ್ಮೀರದ ಸಂವಿಧಾನ ಸಭೆಯು ಸ್ಥಾಪನೆಯಾದ ನಂತರ, ಭಾರತೀಯ ಸಂವಿಧಾನದ ವಿಧಿಗಳನ್ನು ರಾಜ್ಯಕ್ಕೆ ಅನ್ವಯಿಸಲು ಅಥವಾ ೩೭೦ನೇ ವಿಧಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಲು ಶಿಫಾರಸು ಮಾಡಲು, ಅದಕ್ಕೆ ಅಧಿಕಾರ ನೀಡಲಾಯಿತು. ನಂತರ ಜಮ್ಮು ಕಾಶ್ಮೀರ ಸಂವಿಧಾನ ಸಭೆಯ, ರಾಜ್ಯದ ಸಂವಿಧಾನವನ್ನು ರಚಿಸಿ ೩೭೦ನೇ ವಿಧಿಯನ್ನು ರದ್ದುಗೊಳಿಸುವಂತೆ ಶಿಫಾರಸು ಮಾಡದೆ ಇರುವುದರಿಂದ, ಈ ವಿಧಿಯನ್ನು ಭಾರತೀಯ ಸಂವಿಧಾನದ ಶಾಶ್ವತ ಲಕ್ಷಣವಾಗಿ ಎಂದು ಪರಿಗಣಿಸಲಾಗಿದೆ

ಉದ್ದೇಶ[ಬದಲಾಯಿಸಿ]

ಜಮ್ಮು ಮತ್ತು ಕಾಶ್ಮೀರದ ಮೂಲ ಪ್ರವೇಶವು, ಇತರ ಎಲ್ಲ ರಾಜಪ್ರಭುತ್ವಗಳಂತೆ ರಕ್ಷಣಾ, ವಿದೇಶಾಂಗ ವ್ಯವಹಾರ ಮತ್ತು ಸಂವಹನ ಎಂಬ ಮೂರು ವಿಷಯಗಳಲ್ಲಿತ್ತು. ಇಡೀ ಭಾರತಕ್ಕಾಗಿ ಸಂವಿಧಾನವನ್ನು ರೂಪಿಸುತ್ತಿದ್ದ ಭಾರತದ ಸಂವಿಧಾನ ಸಭೆಗೆ ಪ್ರತಿನಿಧಿಗಳನ್ನು ಕಳುಹಿಸಲು ಎಲ್ಲಾ ರಾಜಪ್ರಭುತ್ವಗಳನ್ನು ಆಹ್ವಾನಿಸಲಾಯಿತು. ತಮ್ಮದೇ ರಾಜ್ಯಗಳಿಗೆ ವಿಧಾನ ಸಭೆಗಳನ್ನು ಸ್ಥಾಪಿಸಲು ಅವರನ್ನು ಪ್ರೋತ್ಸಾಹಿಸಲಾಯಿತು. ಹೆಚ್ಚಿನ ರಾಜ್ಯಗಳು ಸಮಯಕ್ಕೆ ಸರಿಯಾಗಿ ಸಭೆಗಳನ್ನು ಸ್ಥಾಪಿಸಲು ಸಾಧ್ಯವಾಗಲಿಲ್ಲ. ಆದರೆ ಕೆಲವು ರಾಜ್ಯಗಳು ಸ್ಥಾಪನೆ ಮಾಡಿದವು: ನಿರ್ದಿಷ್ಟವಾಗಿ ಸೌರಾಷ್ಟ್ರ ಯೂನಿಯನ್, ತಿರುವಾಂಕೂರು-ಕೊಚ್ಚಿನ್ ಮತ್ತು ಮೈಸೂರುಗಳನ್ನು. ಬಳಿಕ ಎಲ್ಲಾ ರಾಜ್ಯ ಇಲಾಖೆಯು ತಮ್ಮ ತಮ್ಮ ರಾಜ್ಯಗಳಿಗೆ ಮಾದರಿ ಸಂವಿಧಾನವನ್ನು ಅಭಿವೃದ್ಧಿಪಡಿಸಿದರೂ, ಮೇ ೧೯೪೯ರಲ್ಲಿ ಎಲ್ಲಾ ರಾಜ್ಯಗಳ ಆಡಳಿತಗಾರರು ಮತ್ತು ಮುಖ್ಯಮಂತ್ರಿಗಳು ಭೇಟಿಯಾಗಿ ರಾಜ್ಯಗಳಿಗೆ ಪ್ರತ್ಯೇಕ ಸಂವಿಧಾನದ ಅಗತ್ಯವಿಲ್ಲ ಎಂದು ಒಪ್ಪಿಕೊಂಡರು. ಅವರು ಭಾರತದ ಸಂವಿಧಾನವನ್ನೇ ತಮ್ಮ ಸಂವಿಧಾನವೆಂದು ಒಪ್ಪಿಕೊಂಡರು. ವಿಧಾನಸಭೆಗಳನ್ನು ಮಾಡಿದ ರಾಜ್ಯಗಳು ಕೆಲವು ತಿದ್ದುಪಡಿಗಳನ್ನು ಸೂಚಿಸಿದವು. ಎಲ್ಲಾ ರಾಜ್ಯಗಳ (ಅಥವಾ ರಾಜ್ಯಗಳ ಒಕ್ಕೂಟಗಳ) ಸ್ಥಾನವು ಸಾಮಾನ್ಯ ಭಾರತೀಯ ಪ್ರಾಂತ್ಯಗಳಿಗೆ ಸಮಾನವಾಯಿತು.[೩]

ಜಮ್ಮು ಮತ್ತು ಕಾಶ್ಮೀರದ ವಿಷಯದಲ್ಲಿ, ಭಾರತದ ಸಂವಿಧಾನ ಸಭೆಯ ಪ್ರತಿನಿಧಿಗಳು ಭಾರತೀಯ ಸಂವಿಧಾನದ ನಿಬಂಧನೆಗಳನ್ನು ಮೂಲ ಪ್ರವೇಶ ಸಾಧನಕ್ಕೆ ಅನುಗುಣವಾದ ರಾಜ್ಯಗಳಿಗೆ ಮಾತ್ರ ಅನ್ವಯಿಸಬೇಕು ಎಂದು ವಿನಂತಿಸಿದರು. "ಆ ಸಮಯದಲ್ಲಿ ಅಸ್ತಿತ್ವದಲ್ಲಿದ್ದ ಪರಿಸ್ಥಿತಿಯನ್ನು ಅನುಸರಿಸಿ ಈ ಭರವಸೆಯನ್ನು ಮಾಡಲಾಯಿತು. ಅದನ್ನು ಈಗಿನ ಪರಿಸ್ಥಿತಿಯನ್ನು ಅವಲಂಬಿಸಿ ಯಾವುದೇ ಟೀಕೆ ಮಾಡುವುದು ಸಾಧುವಲ್ಲ [೪][೫] ಅದರಂತೆ, ೩೭೦ನೇ ವಿಧಿಯನ್ನು ಭಾರತೀಯ ಸಂವಿಧಾನದಲ್ಲಿ ಸೇರಿಸಲಾಯಿತು. ಇದು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡುವ ಸಂವಿಧಾನದ ಇತರ ವಿಧಿಗಳನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯಿಸಲಾಗುವುದು ಎಂದು ಷರತ್ತು ವಿಧಿಸಲಾಯಿತು. ಇದು "ತಾತ್ಕಾಲಿಕ ನಿಬಂಧನೆ"ಯಾಗಿದ್ದು, ಇದರ ಅನ್ವಯಿಕತೆಯು ರಾಜ್ಯದ ಸಂವಿಧಾನವನ್ನು ರೂಪಿಸಿ ಅಳವಡಿಸಿಕೊಳ್ಳುವವರೆಗೆ ಮಾತ್ರ ಉಳಿಸಲು ಉದ್ದೇಶಿಸಲಾಗಿತ್ತು. ಹಾಗಿದ್ದರೂ, ೩೭೦ನೇ ವಿಧಿಯನ್ನು ರದ್ದುಗೊಳಿಸಲು ಅಥವಾ ತಿದ್ದುಪಡಿ ಮಾಡಲು ಶಿಫಾರಸು ಮಾಡದೆ ೧೯೫೭ರ ಜನವರಿ ೨೫ ರಂದು ರಾಜ್ಯದ ವಿಧಾನಸಭೆಯು ವಿಲೀನಗೊಂಡಿತು . ಹೀಗಾಗಿ ಈ ವಿಧಿಯು ಭಾರತೀಯ ಸಂವಿಧಾನದ ಶಾಶ್ವತ ಲಕ್ಷಣವಾಗಿ ಮಾರ್ಪಟ್ಟಿದೆ.[೬][೭]

ಜಮ್ಮು ಮತ್ತು ಕಾಶ್ಮೀರದ ಸ್ವಾಯತ್ತತೆ: ರಚನೆ ಮತ್ತು ಮಿತಿಗಳು[ಬದಲಾಯಿಸಿ]

ಭಾರತದ ಸಂವಿಧಾನವು ಒಂದು ಸಂಯುಕ್ತ ರಾಷ್ಟ್ರದ ರಚನೆಯಾಗಿದೆ. ಶಾಸನದ ವಿಷಯಗಳನ್ನು 'ಯೂನಿಯನ್ ಪಟ್ಟಿ', 'ರಾಜ್ಯ ಪಟ್ಟಿ' ಮತ್ತು 'ಏಕಕಾಲೀನ ಪಟ್ಟಿ' ಎಂದು ವಿಂಗಡಿಸಲಾಗಿದೆ. ಕೇಂದ್ರ ಸರ್ಕಾರವು ಪ್ರತ್ಯೇಕವಾಗಿ ವಿಷಯಗಳನ್ನು ಶಾಸನಬದ್ಧಗೊಳಿಸಲು ರಕ್ಷಣಾ, ಮಿಲಿಟರಿ ಮತ್ತು ವಿದೇಶಾಂಗ ವ್ಯವಹಾರಗಳು, ಪ್ರಮುಖ ಸಾರಿಗೆ ವ್ಯವಸ್ಥೆಗಳು, ಬ್ಯಾಂಕಿಂಗ್, ಷೇರು ವಿನಿಮಯ ಕೇಂದ್ರಗಳು ಮತ್ತು ತೆರಿಗೆಗಳಂತಹ ವಾಣಿಜ್ಯ ವಿಷಯಗಳು ಸೇರಿದಂತೆ ೧೦೦ ವಿಷಯಗಳು ಕೇಂದ್ರ ಪಟ್ಟಿಯಲ್ಲಿ ಒದಗಿಸಲಾಗಿದೆ. ರಾಜ್ಯಗಳಿಗೆ ಶಾಸನ ಮಾಡಲು ಕಾರಾಗೃಹಗಳು, ಕೃಷಿ, ಹೆಚ್ಚಿನ ಕೈಗಾರಿಕೆಗಳು ಮತ್ತು ಕೆಲವು ತೆರಿಗೆಗಳನ್ನು ಒಳಗೊಂಡ ೬೧ ವಸ್ತುಗಳು ರಾಜ್ಯ ಪಟ್ಟಿಯಲ್ಲಿ ಲಭ್ಯವಿದೆ. ಕೇಂದ್ರ ಮತ್ತು ರಾಜ್ಯಗಳು ಶಾಸನಬದ್ಧಗೊಳಿಸಬಹುದಾದ ಏಕಕಾಲೀನ ಪಟ್ಟಿಯಲ್ಲಿ ಅಪರಾಧ ಕಾನೂನು, ಮದುವೆ, ದಿವಾಳಿತನ, ಕಾರ್ಮಿಕ ಸಂಘಗಳು, ವೃತ್ತಿಗಳು ಮತ್ತು ಬೆಲೆ ನಿಯಂತ್ರಣ ಇತ್ಯಾದಿ ವಿಷಯಗಳು ಸೇರಿವೆ. ಸಂಘರ್ಷದ ಸಂದರ್ಭದಲ್ಲಿ, ಯೂನಿಯನ್ ಶಾಸನವು ಮೊದಲ ಆದ್ಯತೆಯನ್ನು ಪಡೆಯುತ್ತದೆ. ಸಂವಿಧಾನದಲ್ಲಿ ನಿರ್ದಿಷ್ಟಪಡಿಸದ ವಿಷಯಗಳ ಬಗ್ಗೆ ಕಾನೂನುಗಳನ್ನು ರೂಪಿಸಲು ಅಧಿಕಾರವು ಕೇಂದ್ರದ ಒಕ್ಕೂಟದಲ್ಲಿದೆ. ಕೇಂದ್ರವು ಕೆಲವು ಕೈಗಾರಿಕೆಗಳನ್ನು, ಜಲಮಾರ್ಗಗಳನ್ನು, ಬಂದರು ಇತ್ಯಾದಿಗಳನ್ನು 'ರಾಷ್ಟ್ರೀಯ' ಎಂದು ನಿರ್ದಿಷ್ಟಪಡಿಸಬಹುದು. ಈ ಸಂದರ್ಭದಲ್ಲಿ ಅವು ಕೇಂದ್ರದ ಶಾಸನದಲ್ಲಿ ಸೇರಲ್ಪಡುತ್ತದೆ.[೮]

ಜಮ್ಮು ಮತ್ತು ಕಾಶ್ಮೀರದ ವಿಷಯದಲ್ಲಿ, ಪ್ರವೇಶ ಕೇಂದ್ರದಲ್ಲಿ ನೀಡಲಾದ 'ಯೂನಿಯನ್ ಪಟ್ಟಿ' ಮತ್ತು 'ಏಕಕಾಲೀನ ಪಟ್ಟಿ' ಯನ್ನು ಮೊದಲಿಗೆ ಮೊಟಕುಗೊಳಿಸಲಾಗಿತ್ತು. ಆದರೆ ನಂತರ ಅವುಗಳನ್ನು ರಾಜ್ಯ ಸರ್ಕಾರದ ಒಪ್ಪಿಗೆಯೊಂದಿಗೆ ವಿಸ್ತರಿಸಲಾಯಿತು. ನಿರ್ದಿಷ್ಟಪಡಿಸದ ವಿಷಯಗಳು ಕೇಂದ್ರಕ್ಕಿಂತ ಹೆಚ್ಚಾಗಿ ರಾಜ್ಯ ಶಾಸನದಲ್ಲಿ ಸ್ಥಾನ ಪಡೆದಿದೆ. ರಾಜ್ಯ ಸ್ವಾಯತ್ತ ಸಮಿತಿಯ ಪ್ರಕಾರ, ಪ್ರಸ್ತುತ ಕೇಂದ್ರ ಪಟ್ಟಿಯಲ್ಲಿರುವ ೧೦೦ ವಸ್ತುಗಳ ಪೈಕಿ ೯೪ ವಸ್ತುಗಳು ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯಿಸುತ್ತವೆ. ಗುಪ್ತಚರ ಕೇಂದ್ರ ಬ್ಯೂರೋ ತನಿಖೆ ಮತ್ತು ತಡೆಗಟ್ಟುವ ಬಂಧನದ ನಿಬಂಧನೆಗಳು ಅನ್ವಯಿಸುವುದಿಲ್ಲ. 'ಏಕಕಾಲೀನ ಪಟ್ಟಿ'ಯಲ್ಲಿ, ೪೭ ವಸ್ತುಗಳ ಪೈಕಿ ೨೬ ವಸ್ತುಗಳು ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯಿಸುತ್ತವೆ. ಮದುವೆ ಮತ್ತು ವಿಚ್ಛೇದನ, ಶಿಶುಗಳು ಮತ್ತು ಅಪ್ರಾಪ್ತ ವಯಸ್ಕರು, ಕೃಷಿ ಭೂಮಿಯನ್ನು ಹೊರತುಪಡಿಸಿ ಆಸ್ತಿ ವರ್ಗಾವಣೆ, ಒಪ್ಪಂದಗಳು, ದಿವಾಳಿತನ, ಟ್ರಸ್ಟ್‌ಗಳು, ನ್ಯಾಯಾಲಯಗಳು, ಕುಟುಂಬ ಯೋಜನೆ ಮತ್ತು ದತ್ತಿಗಳನ್ನು ಕೈಬಿಡಲಾಗಿದೆ. ಅಂದರೆ, ಆ ವಿಷಯಗಳ ಬಗ್ಗೆ ಕಾನೂನು ರೂಪಿಸಲು ರಾಜ್ಯಕ್ಕೆ ಪ್ರತ್ಯೇಕ ಹಕ್ಕಿದೆ. ರಾಜ್ಯ ಸಂಸ್ಥೆಗಳಿಗೆ ಚುನಾವಣೆಗಳನ್ನು ಶಾಸನ ಮಾಡುವ ಹಕ್ಕು ರಾಜ್ಯದ ಮೇಲಿದೆ.[೯]

ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯಿಸುವ ಭಾರತೀಯ ಕಾನೂನುಗಳು[ಬದಲಾಯಿಸಿ]

ಭಾರತೀಯ ಸಂಸತ್ತು ಅಂಗೀಕರಿಸಿದ ಕಾಯಿದೆಗಳನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಕಾಲಾಂತರದಲ್ಲಿ ವಿಸ್ತರಿಸಲಾಗಿದೆ.

 • ಅಖಿಲ ಭಾರತ ಸೇವೆಗಳ ಕಾಯ್ದೆ
 • ನೆಗೋಶಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್
 • ಕೇಂದ್ರ ವಿಜಿಲೆನ್ಸ್ ಆಯೋಗ ಕಾಯ್ದೆ
 • ಅಗತ್ಯ ಸರಕುಗಳ ಕಾಯಿದೆ[೧೧]
 • ಹಜ್ ಸಮಿತಿ ಕಾಯ್ದೆ
 • ಆದಾಯ ತೆರಿಗೆ ಕಾಯ್ದೆ[೧೨]
 • ಕೇಂದ್ರ ಕಾನೂನುಗಳು (ಜಮ್ಮು ಮತ್ತು ಕಾಶ್ಮೀರಕ್ಕೆ ವಿಸ್ತರಣೆ) ಕಾಯ್ದೆ, ೧೯೫೬
 • ಕೇಂದ್ರ ಕಾನೂನುಗಳು (ಜಮ್ಮು ಮತ್ತು ಕಾಶ್ಮೀರಕ್ಕೆ ವಿಸ್ತರಣೆ) ಕಾಯ್ದೆ, ೧೯೬೮

೩೭೦ನೇ ವಿಧಿಗೆ ಸಹಾಯ ಮಾಡುವ ಮೂಲಕ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ಕಾಯ್ದೆಯ ಅನ್ವಯಿಸದಿರುವಿಕೆಯನ್ನು ೨೦೧೦ರಲ್ಲಿ ನಿಗದಿಪಡಿಸಲಾಗಿದೆ.[೧೫][೧೬]

ವಿಧಿಯ ರದ್ದತಿ[ಬದಲಾಯಿಸಿ]

೩೭೦ ನೇ ವಿಧಿಯನ್ನು ರದ್ದುಪಡಿಸುವ ವಿಧೇಯಕವನ್ನು ಆಗಸ್ಟ್ ೫, ೨೦೧೯ ರಂದು ಕೇಂದ್ರ ಗೃಹಸಚಿವ ಅಮಿತ್ ಶಾ ಮಂಡಿಸಿದರು. ವಿಧೇಯಕಕ್ಕೆ ರಾಜ್ಯಸಭೆಯಲ್ಲಿ ಅಂಗೀಕಾರ ದೊರಕಿತು.[೧೭] ಜಮ್ಮುಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿಯೂ, ಲಡಾಖ್ ಪ್ರದೇಶವನ್ನು ಮತ್ತೊಂದು ಕೇಂದ್ರಾಡಳಿತಪ್ರದೇಶವನ್ನಾಗಿಯೂ ಪರಿಗಣಿಸುವ ವಿಧಿಯೂ ಅಂಗೀಕೃತವಾಯಿತು.[೧೮] ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿ, 35ಎ ವಿಧಿಯನ್ನು ರದ್ದುಪಡಿಸುವ ಶಿಫಾರಸಿಗೆ ಸುಗ್ರೀವಾಜ್ಞೆ ಮೂಲಕ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಂಕಿತ ಹಾಕುವ ರದ್ದುಪಡಿಸಿದರು. ಇದು ದಿ ೬ ಆಗಸ್ಟ್ ೨೦೧೯ ಲೋಕಸಭೆ ಅಂಗೀಕರಿಸುವ ಮೂಲಕ ಅಂತಿಮ ಅಂಕಿತ ಪಡೆಯಿತು. ಹೀಗೆ ಜಾರಿಯಾದ ಅಧಿಸೂಚನೆಯ ನಿಯಮ ಖಾಯಂ ಆದಂತೆ ಆಯಿತು.[೧೯][೨೦] ಅದರೆ ರದ್ದತಿಗೆ ಕೊಟ್ಟ ಕಾರಣಗಳ ಬಗೆಗೆ ವಿವಾದ ಇದೆ.[೨೧]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

 1. https://en.wikipedia.org/wiki/Article_370_of_the_Constitution_of_India
 2. https://www.constitution.org/cons/india/p21.html
 3. https://hidf1.files.wordpress.com/2011/02/the-story-of-the-integration-of-the-indian-states-by-v-p-menon.pdf
 4. https://www.deccanherald.com/content/440377/bjp-quiet-explained-article-370.html BJP is quiet since I explained Article 370 to Modi: Jethmalani Srinagar, Nov 8, 2014, (PTI), NOV 08 2014
 5. http://www.oxfordscholarship.com/view/10.1093/acprof:oso/9780198074083.001.0001/acprof-9780198074083
 6. http://economictimes.indiatimes.com/news/politics-and-nation/article-370-granting-special-status-to-the-state-is-permanent-jammu-and-kashmir-high-court/articleshow/49310080.cms
 7. http://www.deccanherald.com/content/440377/bjp-quiet-explained-article-370.html BJP is quiet since I explained Article 370 to Modi: Jethmalani Srinagar, Nov 8, 2014, (PTI), NOV 08 2014
 8. https://en.wikipedia.org/wiki/Article_370_of_the_Constitution_of_India#CITEREFCottrell,_Kashmir:_The_vanishing_autonomy2013
 9. https://books.google.com/books?id=rY9fAAAAQBAJ&pg=PT259
 10. https://en.wikipedia.org/wiki/Border_Security_Force
 11. https://en.wikipedia.org/wiki/Essential_Commodities_Act
 12. https://en.wikipedia.org/wiki/The_Income-tax_Act,_1961
 13. https://en.wikipedia.org/wiki/Goods_and_Services_Tax_(India)
 14. https://en.wikipedia.org/wiki/Goods_and_Services_Tax_(India)
 15. http://www.achrweb.org/ihrrq/issue2/order_extraordinaire.html
 16. Mistake of Past Which is Ruining The present and will Hurt the Future;NOVEMBER 1, 2017 / DEEPAK DOGNEY-article 35A of our constitution which derives from article 370 in 1954.
 17. DelhiAugust 5, India Today Web Desk New; August 5, 2019UPDATED:; Ist, 2019 11:37. "No Article 370 for Jammu & Kashmir, historic move by Modi govt". India Today (in ಇಂಗ್ಲಿಷ್). Retrieved 2019-08-05.CS1 maint: extra punctuation (link)
 18. DelhiAugust5. "Jammu and Kashmir Live News: Article 370 to be revoked, J&K to be reorganised".
 19. https://www.udayavani.com/news-section/national-news/jammu-and-kashmir-to-be-union-territory-with-legislature-ladakh-to-be-ut-without-legislature ಸುಗ್ರೀವಾಜ್ಞೆ ಮೂಲಕ ಅಂಗೀಕಾರ; <---ನಾಗೇಂದ್ರ ತ್ರಾಸಿ, Aug 5, 2019,---!]
 20. ಜಾರಿಯಾದಾಗ ಪರಿಣಾಮಗಳು
 21. 370ನೇ ವಿಧಿ ರದ್ದುತಿ ನಂತರ ಮೋದಿ ಭಾಷಣ: ಆ ಮಾತುಗಳು ಪೂರ್ತಿ ಸತ್ಯವಲ್ಲ;; ಪ್ರಜಾವಾಣಿ;d: 10 ಸೆಪ್ಟೆಂಬರ್ 2019,