ಬ್ರಹ್ಮಾಂಡ
ಪೀಠಿಕೆ
[ಬದಲಾಯಿಸಿ]- (ಈ ಪುಟ ತಪ್ಪಾಗಿ ಇಂಗ್ಲಿಷ್ನ ವಿಶ್ವ-ಯೂನಿವರ್ಸ್ಗೆ ಜೋಡಿಸಿದೆ, ಗ್ಯಾಲಾಕ್ಷಿಗೆ Galaxy ಜೋಡಿಸಬೇಕಿತ್ತು)
- ನಾವು ಬ್ರಹ್ಮಾಂಡದ ಬಗೆಗೆ ವೈಜ್ಞಾನಿಕವಾಗಿ ತೀಳಿದುಕೊಳ್ಳುವುದಾದರೆ , ಮೊದಲು ವಿಶ್ವ ಅಥವಾ ಈ ಜಗತ್ತು (ಯೂನಿವರ್ಸ್). ಬ್ರಹ್ಮಾಂಡ ಅಥವಾ ನೀಹಾರಿಕೆ (ಗ್ಯಾಲಾಕ್ಸಿ/ಗೆಲಾಕ್ಸಿಗಳು), ನಮ್ಮ ಬ್ರಹ್ಮಾಂಡ ಅಥವಾ ಆಕಾಶ ಗಂಗೆ (ಮಿಲ್ಕೀ ವೇ) ಇವುಗಳ ವೈಜ್ಞಾನಿಕ ವ್ಯಾಖ್ಯೆ ಅಗತ್ಯ. ಬ್ರಹ್ಮಾಂಡವನ್ನು ವಿಶ್ವ ಅಥವಾ ಜಗತ್ತು ಎಂದು ತಪ್ಪು ತಿಳಿಯುವ ಸಾಧ್ಯತೆ ಇದೆ. ನಾವು ಹಾಲಿ ಇರುವ ಈ ಬ್ರಹ್ಮಾಂಡವು ವಿಶಾಲ ವಿಶ್ವದಲ್ಲಿ ಇರುವ ಲಕ್ಷ ಲಕ್ಷ ಬ್ರಹ್ಮಾಂಡಗಳಲ್ಲಿ ಒಂದು. ವಿಶ್ವವೆಂದರೆ ಹಾಗೆ ಲಕ್ಷ-ಕೋಟಿ ಬ್ರಹ್ಮಾಂಡಗಳನ್ನು ಹೊಟ್ಟೆಯಲ್ಲಿ ತುಂಬಿಕೊಂಡ ಊಹಿಸಲೂ ಅಗದಷ್ಟು ದೊಡ್ಡ ಜಗತ್ತು. ರಾತ್ರಿ ಆಕಾಶ ಶುಭ್ರ ವಾಗಿದ್ದಾಗ ಮೇಲಕ್ಕೆ ನೋಡಿದರೆ ಒಂದು ತಿಳಿ ಬಿಳಿಯ ಮೋಡದ ಸೆಲೆ ಆಕಾಶದ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹರಿದಂತೆ ಕಾಣುವುದು. ಅದು ವಾಸ್ತವವಾಗಿ ಮೋಡವಲ್ಲ ಅದೇ ನಮ್ಮ ಆಕಾಶ ಗಂಗೆಯೆಂಬ ಬ್ರಹ್ಮಾಂಡದ (ಗ್ಯಾಲಾಕ್ಷಿ) ಪಾರ್ಶ್ವ ನೋಟ. ನಾವು ಅದರೊಳಗೇ ಒಂದು ಬದಿಯಲ್ಲಿದ್ದು ಅದನ್ನು ನೋಡುತ್ತಿದ್ದೇವೆ. ಇಂಗ್ಲಿಷಿನಲ್ಲಿ ಇದನ್ನು ಮಿಲ್ಕಿ ವೇ (ಕ್ಷೀರಪಥ) ಎನ್ನುವರು.
- ನಮ್ಮ ಬ್ರಹ್ಮಾಂಡ, ಆಕಾಶಗಂಗೆ, ಕ್ಷೀರಪಥ, ಮಿಲ್ಕೀ ವೇ, ನಮ್ಮ ನೀಹಾರಕ(ನೀಹಾರಿಕೆ) ಎಂದಾಗಲೆಲ್ಲಾ, ನಾವು ಮತ್ತು ನಮ್ಮ ಸೂರ್ಯಮಂಡಲ ಇರುವ ಈ ನಕ್ಷತ್ರ ಲೋಕಕ್ಕೇ ಹೇಳುವುದು.
- ಈ ನಮ್ಮ ಒಂದು ಮಧ್ಯಮ ಗಾತ್ರದ ಬ್ರಹ್ಮಾಂಡದ ಅಗಾಧತೆ ಅಧ್ಭುತವಾದುದು. ನಮ್ಮ ಭೂಮಿ ಮತ್ತು ಇತರ ಗ್ರಹಗಳ ಕುಟುಂಬವನ್ನು ಹೊಂದಿದ ಸೂರ್ಯ ಮಧ್ಯಮ ಗಾತ್ರದ ನಕ್ಷತ್ರ. ಈ ಆಕಾಶಗಂಗೆಯೆಂಬ ಬ್ರಹ್ಮಾಂಡದಲ್ಲಿ ಎಷ್ಟು ನಕ್ಷತ್ರಗಳಿರಬಹುದೆಂದು ಸಾಕಷ್ಟು ಕರಾರುವಾಕ್ಕಾಗಿ ಊಹಿಸಲು ವಿಜ್ಞಾನಿಗಳು ಪ್ರಯತ್ನಿಸಿದ್ದಾರೆ . ವಿಜ್ಞಾನಿ ಎಡ್ವಿನ್ ಹಬಲ್ ನು ಈ ವಿಶ್ವದಲ್ಲಿರುವ ಸುಮಾರು 200 ಬಿಲಿಯನ್ (20,000 ಕೋಟಿ ನೀಹಾರಿಕೆ)ಬ್ರಹ್ಮಾಂಡ ವಿರುವುದೆಂದು ಹೇಳಿದ್ದಾನೆ. ಬ್ರಹ್ಮಾಂಡಗಳಲ್ಲಿ ನಮ್ಮ ಆಕಾಶಗಂಗೆಯೂ ಒಂದು ಎಂದು ಲೆಕ್ಕ ಹಾಕಿದ್ದಾನೆ. ಈ ಸಂಖ್ಯೆಯ ಬಗೆಗೆ ಸ್ವಲ್ಪ ವಿವಾದವಿದ್ದರೂ ಬಹುಮಟ್ಟಿಗೆ ಅದು ಸರಿ ಎಂದು ಅನೇಕ ಖಗೋಳ ವಿಜ್ಞಾನಿಗಳು ಹೇಳಿದ್ದಾರೆ.[೧]
- ನಮ್ಮ ಆಕಾಶಗಂಗೆಯಲ್ಲಿ ಬ್ರಹ್ಮಾಂಡ)ದಲ್ಲಿ ಸುಮಾರು ೨೦೦ರಿಂದ ೪೦೦ ಶತಕೋಟಿ ನಕ್ಷತ್ರಗಳೂ ಸುಮಾರು ೧೦೦ ಶತಕೋಟಿ ಗ್ರಹಗಳೂ ಇವೆ ಎಂದು ಊಹಿಸಿದ್ದಾರೆ. (The Milky Way contains between 200 and 400 billion stars and at least 100 billion planets)[೨]
- Galaxy-en(ಗ್ಯಾಲಾಕ್ಷಿ):[[೩]]
ವಿಶ್ವದಲ್ಲಿ ನಮ್ಮ ಬ್ರಹ್ಮಾಂಡ ಅಥವಾ ಆಕಾಶಗಂಗೆಯ ಗಾತ್ರ
[ಬದಲಾಯಿಸಿ]- ಬ್ರಹ್ಮಾಂಡವು (ಗ್ಯಾಲಕ್ಸಿ) ನಕ್ಷತ್ರಗಳು, ನಾಕ್ಷತ್ರಿಕ ಅವಶೇಷಗಳು, ಅಂತರತಾರಾ ಅನಿಲ, ಧೂಳು, ಮತ್ತು ಕೃಷ್ಣ ದ್ರವ್ಯ (ಡಾರ್ಕ್ ಮ್ಯಾಟರ್) ಇವೆಲ್ಲದರ ಪರಸ್ಪರ ಗುರುತ್ವಬಲದ ಸೆಳೆತಕ್ಕೆ ಒಳಗಾಗಿರುವ ವ್ಯವಸ್ಥೆ. ಬ್ರಹ್ಮಾಂಡಗಳು (ನಕ್ಷತ್ರ ಲೋಕಗಳು) ನೂರು ಟ್ರಿಲಿಯನ್ ನಕ್ಷತ್ರಗಳ, (1014) ದೈತ್ಯ ಬ್ರಹ್ಮಾಂಡಗಳಿಂದ ಹಿಡಿದು, ಕೆಲವೇ ಸಾವಿರ ನಕ್ಷತ್ರಗಳ ಕುಬ್ಜ ಗಾತ್ರದವರೆಗೂ ಇವೆ. ಅವು ತಮ್ಮ ದ್ರವ್ಯರಾಶಿಯ (ತೂಕ-ಭಾರ) ಅಥವಾ ತನ್ನ ಗೆಲಾಕ್ಸಿಯ ಕೇಂದ್ರದ ಸುತ್ತ ಸುತ್ತುತ್ತವೆ. ಈ ಬ್ರಹ್ಮಾಂಡಗಳು ಅಥವಾ ನೀಹಾರಿಕೆಗಳು ಅಂಡಾಕಾರ, ಸುರುಳಿಯಾಕಾರ, ಮತ್ತು ಅನಿಯಮಿತ ಆಕೃತಿಗಳುಳ್ಳವು. ಅವನ್ನು ಅದೇ ಪ್ರಕಾರ ವರ್ಗೀಕರಿಸಲಾಗಿದೆ. ಅನೇಕ ಬ್ರಹ್ಮಾಂಡಗಳು ಅವುಗಳ ಕೇಂದ್ರಗಳಲ್ಲಿ ಕಪ್ಪು ಕುಳಿಗಳನ್ನು ಹೊಂದಿವೆಯೆಂದು ಹೇಳಲಾಗಿದೆ. ಆಕಾಶಗಂಗೆ ಅಥವಾ ಕ್ಷೀರಪಥದ (ಮಿಲ್ಕೀ ವೇ ಯ ಅನುವಾದ) ಕೇಂದ್ರ ಧನುರಾಶಿಯ ‘ಎ’ ಬಿಂದುವಿನ ಹತ್ತಿರವಿರುವ ಕಪ್ಪು ಕುಳಿಯು ದ್ರವ್ಯರಾಶಿ(ತೂಕ)ಯು ಸೂರ್ಯನ ದ್ರವ್ಯರಾಶಿಯ (ತೂಕದ) ನಾಲ್ಕು ಮಿಲಿಯನ್ ನಷ್ಟು ಎಂದು ಲೆಕ್ಕ ಹಾಕಿದ್ದಾರೆ, ಮಾರ್ಚ್ 2016 ರಲ್ಲಿ ಶೋಧನೆ ಮಾಡಿ ಕಂಡಂತೆ, ಜಿ.ಎನ್-zಝಡ್ 1 ಹೆಸರಿನ ಬ್ರಹ್ಮಾಂಡವು ಭೂಮಿಯಿಂದ 32 ಶತಕೋಟಿ ಜ್ಯೋತಿರ್ವರ್ಷಗಳ ದೂರದಲ್ಲಿರುವ ಅತ್ಯಂತ ಹಳೆಯ ಮತ್ತು ಅತ್ಯಂತ ದೂರದ್ದೆಂದು ಗುರುತಿಸಲಾದ ಬ್ರಹ್ಮಾಂಡವಾಗಿದೆ. (ಜ್ಯೋತಿರ್ವಷ=ಬೆಳಕು ಸೆಕೆಂಡಿಗೆ 3 ಲಕ್ಷ ಕಿಮೀ ವೇಗದಲ್ಲಿ ಒಂದು ವರ್ಷ ಚಲಿಸುವ ದೂರ) ಅದು ಮಹಾಸ್ಪೋಟದ 40 ಕೋಟಿ ವರ್ಷಗಳನಂತರ ಜನಿಸಿದ್ದು. ಹಿಂದೆ, ಜುಲೈ 2015 ರ, 13.2 ಶತಕೋಟಿ ಜ್ಯೋತಿರ್ವರ್ಷಗಳ ದೂರದಲ್ಲಿರುವ ಜಿಎಸ’ವೈ8ಪಿ7 ಎಂಬ ಬ್ರಹ್ಮಾಂಡವೇ ದೂರದ್ದು ಎಂದು ತಿಳಿದಿದ್ದ ಬ್ರಹ್ಮಾಂಡ (ಗ್ಯಾಲಕ್ಸಿ) ಆಗಿತ್ತು.[೩][೪][೫]
- ಸುಮಾರು 170 ಶತಕೋಟಿ ಯಿಂದ 200 ಶತಕೋಟಿ ಬ್ರಹ್ಮಾಂಡಗಳು ನಮ್ಮ ವಿಶ್ವದಲ್ಲಿದೆಯೆಂದು ಊಹಿಸಿದ್ದಾರೆ. ಬ್ರಹ್ಮಾಂಡವು (ಗೆಲಕ್ಸಿ) ವ್ಯಾಸದಲ್ಲಿ ಸಾಮಾನ್ಯವಾಗಿ 1,000 ದಿಂದ 100,000 ಪಾರಸೆಕ್ (ಸೂರ್ಯ-ದೂರಮಾನ) ಇದ್ದು ಮತ್ತು ಒಂದರಿಂದ ಮತ್ತೊಂದು ಲಕ್ಷಾಂತರ ಸೂರ್ಯ-ದೂರಮಾನ ದೂರದಿಂದ ಬೇರ್ಪಡಿಸಲಾಗಿರುತ್ತದೆ ಅತ್ಯಂತ ಬ್ರಹ್ಮಾಂಡಗಳ ನಡುವಿನ ಜಾಗವನ್ನು ಒಂದು ಪ್ರತಿ ಘನ ಮೀಟರ್ ಒಂದು ಪರಮಾಣುವಿನ ಸರಾಸರಿ ಸಾಂದ್ರತೆಯನ್ನು ಹೊಂದಿರುವ ಅತಿಸೂಕ್ಷ್ಮ ಅನಿಲವು ತುಂಬಿರುತ್ತದೆ. ಬಹುತೇಕ ಬ್ರಹ್ಮಾಂಡಗಳ ಗುಂಪುಗಳು, ಗುರುತ್ವಾಕರ್ಷಣತ್ವದಿಂದ ಗೊಂಚಲುಗಳಾಗಿ ವ್ಯವಸ್ಥೆಗೊಳಿಸಲ್ಪಟ್ಟಿವೆ. ಇವನ್ನು ನಕ್ಷತ್ರಗಳ ಮಹಾ ಸಂಘಗಳು ಎಂದು ಕರೆಯಲಾಗುತ್ತದೆ. ದೊಡ್ಡ ಪ್ರಮಾಣದ ಈ ಸಂಬಂಧಗಳ ಸುತ್ತಲೂ ಸಾಮಾನ್ಯವಾಗಿ ಹಾಳೆಗಳು ಮತ್ತು ಫಿಲಾಮೆಂಟ್ಗಳಿದ್ದು ಸುತ್ತ ಅಪಾರ ಖಾಲಿ ಜಾಗಗಳಿರುವಂತೆ ಜೋಡಿಸಲಾಗುತ್ತದೆ.[೬]
- ನಮ್ಮ ಬರಿ ಕಣ್ಣಿಗೆ ಕಾಣುವ ಮತ್ತು ಸಾಮಾನ್ಯ ದೂರದರ್ಶಕಕ್ಕೆ ಕಾಣುವ ನಕ್ಷತ್ರಗಳೆಲ್ಲಾ ನಮ್ಮ ಆಕಾಶ ಗಂಗೆಯ ವ್ಯವಸ್ಥೆಗೆ ಸೇರಿದ ನಕ್ಷತ್ರಗಳೇ. ಈ ನಮ್ಮ ಬ್ರಹ್ಮಾಂಡವು ಒಂದು ಇಡ್ಲಿಯ ಆಕಾರದಲ್ಲಿದೆ. ಇದರ ವ್ಯಾಸವು ಸುಮಾರು 1ಲಕ್ಷ ಜ್ಯೋತಿರ್'ವರ್ಷಗಳು , ದಪ್ಪವು ಸುಮಾರು 10,000 ಜ್ಯೋತಿರ್ವರ್ಷಗಳು. ಸೂರ್ಯನು/ನಮ್ಮ ಸೌರಮಂಡಲವು ಆಕಾಶಗಂಗೆಯ ಕೇಂದ್ರದಲ್ಲಿಲ್ಲ. ಕೇಂದ್ರಕ್ಕೆ 30,000 ಜ್ಯೋತಿರ್ವರ್ಷಗಳ ದೂರದಲ್ಲಿದ್ದಾನೆ. ಆಕಾಶಗಂಗೆಯ ಕೇಂದ್ರವು ಧನು-ವೃಶ್ಚಿಕ ರಾಶಿಗಳ ದಿಕ್ಕಿನಲ್ಲಿದೆ. ಅದರಿಂದ ನಕ್ಷತ್ರಗಳು ಆ ದಿಕ್ಕಿನಲ್ಲಿ ಹೆಚ್ಚು; 80,000 ಜ್ಯೋತಿರ್’ವರ್ಷಗಳವರೆಗೆ ವ್ಯಾಪಿಸಿವೆ. ಅದರ ಎದುರು ದಿಕ್ಕಿನಲ್ಲಿ ನಕ್ಷತ್ರಗಳು 2000 ಜ್ಯೋತಿರ್’ವರ್ಷಗಳವರೆಗೆ ಮಾತ್ರ ಕಾಣುವುದು. ಆದರೂ ನಮಗೆ ಆಕಾಶಗಂಗೆಯು ವೃತ್ತವಾಗಿ ಕಾಣುವುದರಿಂದ ಸೌರವ್ಯೂಹವು ಆಕಾಶಗಂಗೆಯ ಕೇಂದ್ರದ ಹತ್ತಿರವೇ ಇರಬೇಕು ಮತ್ತು ಇದು ಆಕಾಶಗಂಗೆಯ ಕೇಂದ್ರದಿಂದ ಸುಮಾರು 100 ಜ್ಯೋತಿರ್’ವರ್ಷಗಳ ಎತ್ತರದಲ್ಲಿರಬೇಕೆಂದು ನಿರ್ಣಯಿಸಿದ್ದಾರೆ. ಈ ಇಡ್ಲಿಯ ಆಕಾರದ ಆಕಾಶಗಂಗೆಯಲ್ಲಿ ನಕ್ಷತ್ರಗಳು ಸರಿ ಸುಮಾರಾಗಿ ಸಮ ಸಾಂದ್ರತೆಯಿಂದ (ದ್ರವ್ಯಗಳ ಸಮತೂಕ) ಹರಡಿವೆ.
- ಕೆನಡಾ ಮತ್ತು ಹಾಲೆಂಡಿನ ವಿಜ್ಞಾನಿಗಳಾದ ಊರ್ಟನ ಲಿಂಡ್ಬಾಲ್ಡ್ ರ ಸಂಶೋಧನೆಯಂತೆ ಸೂರ್ಯನು ತನ್ನ ಪರಿವಾರದೊಂದಿಗೆ ಈ ಆಕಾಶಗಂಗೆಯ ಕೇಂದ್ರವನ್ನು ಇತರ ನಕ್ಷತ್ರಗಳ ಜೊತೆ ಸುತ್ತುತ್ತಿದ್ದಾನೆ. ಆಕಾಶಗಂಗೆಯ ಕೇಂದ್ರವನ್ನು ಸುತ್ತುವ ಸೂರ್ಯನ ಪ್ರದಕ್ಷಿಣ ವೇಗ ಸೆಕೆಂಡಿಗೆ 150 ಮೈಲಿ/240 ಕಿ.ಮೀ. ಈ ವೇಗದಲ್ಲಿ ಒಂದು ಪ್ರದಕ್ಷಿಣೆ ಮುಗಿಸಲು ಸೂರ್ಯನಿಗೆ 25 ಕೋಟಿ ವರ್ಷಗಳು ಬೇಕು. ಭೂಮಿಯ ಜನನವಾದ ನಂತರ ಸೂರ್ಯನು 18-19 ಪ್ರದಕ್ಷಿಣೆಗಳನ್ನು ಮುಗಿಸಿದ್ದಾನೆ.(ಭೂಮಿಯ ಪ್ರಾಯ 454 ಕೋಟಿ ವರ್ಷ (10/10% ವ್ಯತ್ಯಾಸಕ್ಕೆ ಅವಕಾಶ ವಿದೆ).
- ಆಕಾಶಗಂಗೆಯಲ್ಲಿ ನಕ್ಷತ್ರಗಳಲ್ಲದೆ ತಾರಾಗುಚ್ಛಗಳ, ಜ್ಯೋತಿರ್ಮೇಘಗಳೂ ಇವೆ. ಗ್ರಹದಂತಿರುವವು ಮತ್ತು ಉಂಗುರದಂತಿರುವುವು ಎಂದು ಎರಡು ಬಗೆ. ಇವು ಸೂರ್ಯನ ಹತ್ತಿಪ್ಪತ್ತರಿಂದ ಹಿಡಿದು ನೂರಿನ್ನೂರರಷ್ಟು ಸೌರಭಾರಗಳಷ್ಟಿರುತ್ತವೆ. ಇವುಗಳ ಜೊತೆ ಲೆಖ್ಕಕ್ಕೆ ಸಿಗದ ಅಪಾರ ದ್ರವ್ಯರಾಶಿಯ ಕೃಷ್ಣದ್ರವ್ಯವಿದೆ [೭][೮]
ಸೂರ್ಯ-ಭೂಮಿ-ಆಕಾಶಗಂಗೆ
[ಬದಲಾಯಿಸಿ]- ನಮ್ಮ ಭೂಮಿಯಿಂದ 9 ಕೋಟಿ 30ಲಕ್ಷ ಮೈಲಿಗಳ ದೂರದಲ್ಲಿ ಸೂರ್ಯನಿದ್ದಾನೆ ಭೂಮಿಯ ವ್ಯಾಸವು ಸುಮಾರು 8000 ಮೈಲಿಗಳಾದರೆ/ 12756.274ಕಿಮೀ. ಸೂರ್ಯನ ವ್ಯಾಸ ಇದರ 108ರಷ್ಟು. 12,713.504 ಕಿ.ಮೀ ಸೂರ್ಯನ ವ್ಯಾಸವು ಇದರ 108 ರಷ್ಟು. ಸೂರ್ಯನ ಹೊಟ್ಟೆಯಲ್ಲಿ 13ಲಕ್ಷ ಭೂಮಿಯನ್ನು ತುಂಬಬಹುದು. ಭೂಮಿಯ ಭಾರ 6 ಕೋಟಿ ಕೋಟಿ ಕೋಟಿ ಟನ್ ಗಳಷ್ಟು (5.9742 * 1024 ಕೆಜಿ.) ಸೂರ್ಯನ ಭಾರ ಇದರ 3,33,000ದಷ್ಟು. ಅದೇ ಭೂಮಿಯ ಹತ್ತಿರದ ಚಂದ್ರ 2,28, ಸಾವಿರ ಮೈಲಿಗಳ ದೂರದಲ್ಲಿದ್ದಾನೆ. ಒಂದೂಕಾಲು ಜ್ಯೋತಿಸೆಕೆಂಡುಗಳ ದೂರ.
- ಆಕಾಶದಲ್ಲಿರುವ ನಕ್ಷತ್ರಗಳೆಲ್ಲಾ ಸೂರ್ಯರೇ. ಕೆಲವು ಸೂರ್ಯನಿಗಿಂತ ಚಿಕ್ಕವು ಕೆಲವು ದೊಡ್ಡವು. ಹಾಗೆಯೇ ಅವುಗಳ ಉಷ್ಣತೆಯಲ್ಲಿಯೂ ಹೆಚ್ಚು ಕಡಿಮೆ ಇದೆ. ವಯಸ್ಸಿನಲ್ಲೂ ಕೆಲವು ಹಿರಿಯವು ಕೆಲವು ಕಿರಿಯವು. ನಮ್ಮ ಬ್ರಹ್ಮಾಂಡದಲ್ಲಿ ಸೂರ್ಯ ಒಂದು ಮಧ್ಯಮ ಗಾತ್ರದ ನಕ್ಷತ್ರ. ನಕ್ಷತ್ರದಲ್ಲಿ ನಮಗೆ ಅತ್ಯಂತ ಹತ್ತಿರದ ನಕ್ಷತ್ರ ನಾಲ್ಕು ಕಾಲು ಜ್ಯೋತಿರ್ವರ್ಷದ ದೂರದಲ್ಲಿದೆ. ಅತಿದೂರದ ನಕ್ಷತ್ರ 80,000 ಜ್ಯೋತಿರ್ವರ್ಷದಷ್ಟು ದೂರದ್ದು. ಹಿಂದೆ ಹೇಳಿದಂತೆ ಆಕಾಶಗಂಗೆಯ ಕೇಂದ್ರದಿಂದ ಸುಮಾರು 30,000 (/26000) ಜ್ಯೋತಿರ್ವರ್ಷದಷ್ಟು ದೂರದಲ್ಲಿ ಮತ್ತು ತಲದಿಂದ 100 ಜ್ಯೋತಿರ್ವರ್ಷ ಎತ್ತರದಲ್ಲಿ ಸೂರ್ಯನ ಸ್ಥಾನ. ಸೂರ್ಯ ಈ ಆಕಾಶಗಂಗೆಯಲ್ಲಿ ಒಂದು ಬಿಂದು. ಈ ವಿಶ್ವಕ್ಕೆ ಹೋಲಿಸುವುದಾದರೆ, ಸಹಾರಾ ಮರುಭೂಮಿಯಲ್ಲಿ ಒಂದು ಮರಳಿನ ಕಣವಿದ್ದಂತೆ.
- ವಿವರವಾದ ಲೇಖನ/ಮುಖ್ಯ ಲೇಖನ :ದೇವಯಾನಿ ನಕ್ಷತ್ರಪುಂಜ ?
- ನಮಗೆ ಹತ್ತಿರದ ಆಂಡ್ರೊಮಿಡಾ ಗ್ಯಾಲಾಕ್ಸಿ ಅಥವಾ ದೇವಯಾನಿ ನಕ್ಷತ್ರಪುಂಜವೆಂಬ ಬ್ರಹ್ಮಾಂಡ ಅಥವಾ ನೀಹಾರಕ (ಖಗೋಲಶಾಸ್ತ್ರ ಪ್ರವೇಶಿಕೆ ಬರೆದ ಆರ್.ಎಲ್.ನರಸಿಂಹಯ್ಯನವರು ಅದಕ್ಕೆ ದ್ರೌಪದೀ ನೀಹಾರಕವೆಂದು ಹೆಸರಿಟ್ಟಿದ್ದಾರೆ.). ಇದು ನಮ್ಮಿಂದ 7,50,000(2,50,000?ವಿಕಿಯಲ್ಲಿ) ಜ್ಯೋತಿರ್ವರ್ಷ ದೂರದಲ್ಲಿರಬೇಕೆಂದು ಊಹಿಸಿದ್ದಾರೆ1.
- ಆಂಡ್ರೊಮಿಡಾ(ಗ್ರೀಕ್ ಪುರಾಣ) ಇಥಿಯೋಪಿಯನ್ ರಾಜಕುಮಾರಿ ಮತ್ತು ಕಾಸಿಯೋಪಿಯಾ (Cassiopeia) ಮಗಳು; ಅವಳನ್ನು ಒಂದು ಬಂಡೆಗೆ ಕಟ್ಟಿದ್ದರು. ಪೋಸಿಡಾನ್ನ ಕಳಿಸಿದ್ದ ಒಂದು ಸಮುದ್ರ ದೈತ್ಯಕ್ಕೆ ಅವಳನ್ನು ಬಲಿಕೊಡಲು ನಿಶ್ಚಯಿಸಿದ್ದರು. ಆದರೆ ಅವಳನ್ನು ಪರ್ಸೀಯಸ್ ರಕ್ಷಿಸಿದ; ನಂತರ ಅವಳು ಅವನ ಪತ್ನಿಯಾದಳು. ಈ ನೀಹಾರಿಕೆಗೆ ಅವಳ ಹೆಸರು.[೯]
ಇತರ ಬ್ರಹ್ಮಾಂಡಗಳು
[ಬದಲಾಯಿಸಿ]ಆಕಾಶಗಂಗೆ ಮತ್ತು ಅಕ್ಕಪಕ್ಕದ ಕೆಲವು ಡಿಗ್ರಿಗಳು ಹೊರತುಪಡಿಸಿ ಮಿಕ್ಕ ಖಗೋಲ ಪ್ರದೇಶದಲ್ಲಿ ನೀಹಾರಕಗಳು ಸಮಸಾಂದ್ರತೆಯಿಂದ ಹರಡಿವೆ. ಆಕಾಶಗಂಗೆಯ ಸುತ್ತಲೂ (ಒಳಗೂ ಹೊರಗೂ)ಕವಿದಿರುವ ಕಾಂತಿರಹಿತ ಅನಿಲಮೇಘವು ಆಕಾಶಗಂಗೆಯ ದಿಕ್ಕಿನಲ್ಲಿ ಮತ್ತು ಅದರ ಅಂಚಿನಲ್ಲಿ ಇರುವ ನೀಹಾರಕಗಳು ಕಾಣಲು ಅಡ್ಡಿಯಾಗಿದೆ. ಆದಕಾರಣ ಉಳಿದಭಾಗಕ್ಕೆ ಹೋಲಿಸಿ ಖಗೋಳದ ಎಲ್ಲೆಡೆಯೂ ಹೆಚ್ಚುಕಡಿಮೆ ನೀಹಾರಕಗಳು ಸಮನಾಗಿ ಹರಡಿವೆಯೆಂದು ಹೇಳಬಹುದು. ಎಲ್ಲಾ ನೀಹಾರಕಗಳೂ ಆಕಾಶಗಂಗೆಯಷ್ಟು ಅಥವಾ ದ್ರೌಪದೀ ನೀಹಾರಕದಷ್ಟು (ಆಂಡ್ರೋಮಿಡಾ) ದೊಡ್ಡದಲ್ಲ. ಇವೆರಡೂ ಬಹಳ ದೊಡ್ಡ ಬ್ರಹ್ಮಾಂಡಗಳೆಂದು ಕಂಡುಬಂದಿದೆ. ವಿಶ್ವಾಕಾಶದಲ್ಲಿ ಸುಮಾರು 20 ಲಕ್ಷ ಜ್ಯೋತರ್'ವಷಗಳಿಗೊಂದರಂತೆ ನೀಹಾರಿಕಗಳು ಹಬ್ಬಿವೆ. ನಮ್ಮ ಆಕಾಶಗಂಗೆಯಲ್ಲಿ ಕೃತ್ತಿಕಾ ನಕ್ಷತ್ರಗಳ ಪುಂಜವಿದ್ದಂತೆ ನೀಹಾರಿಕೆಗಳ ಗುಚ್ಛಗಳಿವೆ. ಅವನ್ನು 'ಬ್ರಹ್ಮಾಂಡಸ್ತಬಕ' ಅಥವಾ 'ನೀಹಾರಿಕಸ್ತಬಕ' ಎಂದು ಖಭೌತ ಪ್ರಾಧ್ಯಾಪಕ ಆರ್.ಎಲ್ ನರಸಿಂಹಯ್ಯನವರು ಕರೆದಿದ್ದಾರೆ1. ನಮ್ಮ ಆಕಾಶಗಂಗೆಯ ಸಮೀಪವೇ ಎಂದರೆ ಏಳೆಂಟು ಲಕ್ಷ ಜ್ಯೋತಿರ್ವರ್ಷದ ದೂರದಲ್ಲಿಯೇ ಅನೇಕ ನೀಹಾರಿಕೆಗಳು ಕಂಡಿವೆ; ಅದರಿಂದ ನಮ್ಮ ಬ್ರಹ್ಮಾಂಡವೂ ಒಂದು 'ನೀಹಾರಿಕಸ್ತಬಕ'ದಲ್ಲಿದೆ ಎನ್ನಬಹುದು1.
ಬ್ರಹ್ಮಾಂಡಗಳ ಶೋಧನೆ ಮತ್ತು ವಿಂಗಡಣೆ
[ಬದಲಾಯಿಸಿ]- ಆಕಾಶ ಗಂಗೆಯ ಹೊರಗಿನ ಕೆಲವು ನೀಹಾರಿಕೆ ಗಳು ಬರಿಗಣ್ಣಿಗೆ ಗೋಚರಿಸುತ್ತವೆ. ಸೈಮನ್ ಮೊರಿಸೆಂಬುವವನು 1612 ರಲ್ಲಿಯೇ ಆಂಡ್ರಮಿಡಾ ನೀಹಾರಿಕೆಯನ್ನು ಗುರುತಿಸಿದ್ದನು. ಆದರೆ ಅದನ್ನು ಹೊಳೆಯುವ ಅನಿಲಗಳ ರಾಶಿ ಅಥವಾ ಜ್ಯೋತಿರ್’ಮೇಘ (ನೆಬ್ಯೂಲ) ಎಂದು 1922 ರ ವರೆಗೂ ತಿಳಿದಿದ್ದರು. 1922ರಲ್ಲಿ 100 ಇಂಚು ವ್ಯಾಸದ , ಮೌಟ್ ವಿಲ್ಸನ್ ದೂರದರ್ಶಕದಲ್ಲಿ ಎಡ್ವಿನ್ ಹಬಲ್’ನು ಪರಿಶೀಲನೆ ಮಾಡಿ ಅದರಲ್ಲಿ ನಕ್ಷತ್ರಗಳನ್ನು ಗುರುತಿಸಿ ಅದನ್ನು ಒಂದು ಪ್ರತ್ಯೇಕ ಬ್ರಹ್ಮಾಂಡವೆಂದು ತೋರಿಸಿದನು. ಹೀಗೆ 1936 ರಲ್ಲಿ ಹಬಲ್’ನು ಬ್ರಹ್ಮಾಂಡ ಮಾರ್ಫಾಲಜಿ ಎಂಬ ಸಿದ್ದಾಂತವನ್ನು ಮಂಡಿಸಿದನು. ಅದು ಈಗಲೂ ಚಾಲ್ತಿಯಲ್ಲಿದೆ.
- 1990ರ ನಂತರ 'ಹಬ್ಬಲ್ ಬಾಹ್ಯಾಕಾಶ ದೂರದರ್ಶಕ'ದ ಉಪಯೋಗದ ನಂತರ ಆಕಾಶ ಕಾಯ ಮತ್ತು ಬ್ರಹ್ಮಾಂಡಗಳ ನಿಖರ ಪರಿಚಯ ಸಾಧ್ಯವಾಯಿತು. ಆಕಾಶದಲ್ಲಿ ಜ್ಯೋತಿರ್ಮೇಘಗಳಲ್ಲದೆ (ನ್ಯೆಬ್ಯೂಲಾ) ಕೃಷ್ಣದ್ರವ್ಯವೂ (ಡಾರ್ಕ್'ಮ್ಯಾಟರ್) ಖಾಲಿ ಪ್ರದೇಶಗಳೂ ಮತ್ತು ಅಸಂಖ್ಯಾತ ನೀಹಾರಿಕೆಗಳೂ (ಬ್ರಹ್ಮಾಂಡ) ಇರುವುದು ಪತ್ತೆಯಾಯಿತು. ಅದರ ಮೂಲಕ ನಡೆದ ಸಂಶೋಧನೆ ವಿಶ್ವದಲ್ಲಿ ಸುಮಾರು 125 ಬಿಲಿಯನ್ (1.25×1011) ಬ್ರಹ್ಮಾಂಡಗಳಿವೆಯೆಂಬುದಕ್ಕೆ ಆಧಾರ ದೊರೆಯಿತು. ಹೊಸ ಅವಿಷ್ಕಾರಗಳಿಂದ ಸಾಮಾನ್ಯ ಕಣ್ಣಿಗೆ ಗೋಚರಿಸದ ವಸ್ತುಗಳನ್ನೂ ಬಾಹ್ಯಾಕಾಶದಲ್ಲಿ ಗುರುತಿಸಲು ಸಾಧ್ಯವಾಯಿತು. ಅವು ರೇಡಿಯೋ ಟೆಲಿಸ್ಕೋಪು, ಇನ್'ಪ್ರಾರೆಡ್ ಕ್ಯಾಮರಾ, ಎಕ್ಷರೇ ಟೆಲಿಸ್ಕೋಪುಗಳು. ಇವು ಆಕಾಶದಲ್ಲಿರುವ ಹಬ್ಬಲ್ ದೂರದರ್ಶಕದಿಂದ ಕಾಣದ ದೂರದ ಆಕಾಶ ಕಾಯಗಳನ್ನೂ ಲೋಕಗಳನ್ನೂ ಕಾಣಲು ಸಾಧ್ಯವಾಯಿತು.
- ಎಡ್ವಿನ್ ಹಬ್ಬಲ್’ನು ವಿಶ್ಲೇಷಣೆಮಾಡಿ, ಈ ನೀಹಾರಿಕೆಗಳನ್ನು ಮೇಲ್ನೋಟಕ್ಕೆ ಕಾಣುವ ಆಕೃತೀಯ ಸ್ವರೂಪ ಕ್ರಮ ಅನುಸರಿಸಿ ಅವುಗಳನ್ನು ವಿಂಗಡಣೆ ಮಾಡಿದ್ದಾನೆ.
- 1.ಅಂಡಾಕಾರದ ಗೆಲಕ್ಸಿಗಳು: ಇವು ನಯವಾದ, ವೈಶಿಷ್ಟ್ಯವಿಲ್ಲದ ಬೆಳಕಿನಲ್ಲಿ ಹರಡಿಕೊಂಡಿದೆ ಮತ್ತು ದೀರ್ಘವೃತ್ತಗಳಂತೆ ತೊರುವುದು.("E"),
- 2.ಸುರುಳಿಯಾಕಾರದ ನಕ್ಷತ್ರಪುಂಜಗಳು: ಇವು ಸಾಮಾನ್ಯವಾಗಿ ಎರಡು ಬಾಹುಗಳ ಸುರುಳಿಯಾಕಾರದ ವಿನ್ಯಾಸವನ್ನು ಹೊಂದಿದೆ, ಮತ್ತು ಅಂಡಾಕಾರದ ಗ್ಯಾಲಕ್ಸಿಯನ್ನು ಹೋಲುತ್ತದೆ. ಮಧ್ಯದಲ್ಲಿ ನಕ್ಷತ್ರಗಳ ಸಾಂದ್ರತೆಯ ಉಬ್ಬು ಕೇಂದ್ರವಿರುವುದು, ಒಂದು ಚಪ್ಪಟೆ ಡಿಸ್ಕ್ ನಂತಿರುವುದು. . ಎಲ್ಲಾ ಅರ್ಧದಷ್ಟು ಸುರುಳಿ ನೀಹಾರಕಗಳು ಕೇಂದ್ರದಲ್ಲಿ ಉಬ್ಬು ಹೊಂದಿವೆ, ಅವು ಪಟ್ಟಿ (ಬಾರ್)ಯ ರಚನೆಯನ್ನು ಹೊಂದಿರುತ್ತವೆ. ("S")("SB").
- ಉಭಯ ಪೀನ ಗೆಲಾಕ್ಸಿಗಳು : ಇವುಗಳ ಸುರಳಿ ಸುತ್ತಲೂ ಪ್ರಕಾಶಮಾನವಾಗಿದ್ದು ಕೇಂದ್ರದಲ್ಲಿ ಉಬ್ಬು ಇವೆ. ಸುರಳಿ ಗೆಲಕ್ಸಿಗಳಿಗೆ ಭಿನ್ನವಾಗಿ, ಉಬ್ಬಿದ ತಟ್ಟೆ (ಡಿಸ್ಕ್) ಇದ್ದು, ಸಕ್ರಿಯವಾಗಿ ಯಾವುದೇ ಗಮನಾರ್ಹ ಸುರುಳಿಯಾಕಾರದ ವಿನ್ಯಾಸವನ್ನು ಹೊಂದಿರುವುದಿಲ್ಲ. ನಕ್ಷತ್ರಗಳು ರೂಪಗೊಳ್ಳುವ ವಿಸ್ತೃತ ಡಿಸ್ಕ್ ರಚನೆಯನ್ನು ಒಳಗೊಂಡಿರುತ್ತವೆ (S0)
ಪಟ್ಟಿಯುಳ್ಳ ಸುರುಳಿಯಾಕಾರ ನೀಹಾರಕ
[ಬದಲಾಯಿಸಿ]- ನಮ್ಮ ಆಕಾಶಗಂಗೆ ನೀಹಾರಕವೂ (ಗ್ಯಾಲಕ್ಸಿಯೂ) ಸೇರಿದಂತೆ ಸುರುಳಿ ನೀಹಾರಕಗಳು (ಸ್ಪೈರಲ್ ಗೆಲಕ್ಸಿ, ಬಹುತೇಕ, ಸುರುಳಿಯ ತೋಳಿನ ವಿನ್ಯಾಸವನ್ನು ಹೊಂದಿವೆ. ಏಕಮುಖ, ಎರಡೂ ಬದಿಗೆ ಬಾಹ್ಯದಲ್ಲಿ ಬಾಹು ಆಕಾರದ ಪಟ್ಟಿ ವಿಸ್ತರಿಸಿ ಸುರಳಿಯಲ್ಲಿ ಸೇರಿಕೊಳ್ಳುತ್ತವೆ. ಹಬಲ್ ವರ್ಗೀಕರಣ ಯೋಜನೆಯಲ್ಲಿ, ಇದನ್ನು ಎಸ್.ಬಿ. ಮೂಲಕ ಸೂಚಿಸಲಾಗುತ್ತದೆ, ಜೊತೆಗೆ “ಎ, ಬಿ ಅಥವಾ ಸಿ” ಎಂದು ವರ್ಗೀಕರಣವು ಸೂಚಿಸುತ್ತದೆ. ಸುರುಳಿ ತೋಳಿನ ರೂಪ (ಸಾಮಾನ್ಯ ಸುರುಳಿಯಾಕಾರದ ಗೆಲಕ್ಸಿಗಳ ರೀತಿಯಲ್ಲೇ ಇದ್ದು, ಸಾಂದ್ರತೆಯ ಅಲೆಯು ಹೊರಭಾಗದ ಮುಖ್ಯ ಭಾಗಕ್ಕೆ ಹರಡಿದ ಪರಿಣಾಮವಾಗಿ ಹೆಚ್ಚು ಕ್ರಯಾ ಶೀಲವಾಗಿವೆ; ಇಲ್ಲವೇ, ಅನೇಕ ಪಟ್ಟಿಗಳುಳ್ಳ ನೀಹಾರಕಗಳಲ್ಲಿ ಅನಿಲವು ತೋಳಿಗೆ ಹರಿಯುವ ಪರಿಣಾಮವಾಗಿ ಅವು ಹೆಚ್ಚು ಸಕ್ರಿಯವಾಗಿರುತ್ತವೆ. ಈ ಪಟ್ಟಿಗಳು ತಾತ್ಕಾಲಿಕ ರಚನೆಗಳೆಂದು ಭಾವಿಸಲಾಗಿದೆ. [೧೧]
- ನಮ್ಮದೇ ಕ್ಷೀರಪಥ ನೀಹಾರಕವು(ಗೆಲಾಕ್ಸಿ) ದೊಡ್ಡ ಬಿಲ್ಲೆ ಆಕಾರದ ಸುರುಳಿಯಾಕಾರದ ನೀಹಾರಕ (ಗ್ಯಾಲಕ್ಸಿ). ವ್ಯಾಸದಲ್ಲಿ ಸುಮಾರು 30 ಕಿಲೋ ಪಾರಸೆಕ್ಸ್ ( ಮತ್ತು ಒಂದು ಕಿಲೋ ಪಾರಸೆಕ್ಸ್ ದಪ್ಪ {A parsec is equal to about 3.26 light-years (31 trillion kilometres or 19 trillion miles)} . ಇದು ಸುಮಾರು ಇನ್ನೂರು ಬಿಲಿಯನ್ (2×1011). ನಕ್ಷತ್ರಗಳನ್ನು ಒಳಗೊಂಡಿದೆ ಮತ್ತು ಸುಮಾರು ಸೂರ್ಯನ ದ್ರವ್ಯರಾಶಿಯ ಆರು ನೂರು ಬಿಲಿಯನ್ {5.8×1011)=solar masses=(M☉)} ನಷ್ಟು ಒಟ್ಟು ದ್ರವ್ಯರಾಶಿಯನ್ನು ಹೊಂದಿದೆ. ಅನೇಕ ವರ್ಷಗಳವರೆಗೆ ವಿಜ್ಞಾನಿಗಳು ಕ್ಷೀರಪಥದಲ್ಲಿ 100 ಶತಕೋಟಿ ನಕ್ಷತ್ರಗಳು ಇದ್ದವು ಎಂದಿದ್ದರು, ಆದರೆ ಕಳೆದ ವರ್ಷ ಯೇಲ್ ವಿಜ್ಞಾನಿ ಈ ಸಂಖ್ಯೆ ಹತ್ತಿರ ಹತ್ತಿರ 300 ಶತಕೋಟಿ ನಕ್ಷತ್ರಗಳು ಇವೆ ಎಂದಿದ್ದಾನೆ.{M☉=ಸೂರ್ಯನ ತೂಕ/ದ್ರವ್ಯರಾಶಿ) = (1.98855±0.00025)×1030 kg}[೧೨][೧೩]
ಇತರ ಆಕೃತಿ ಆಧಾರಿತ ವರ್ಗೀಕರಣ
[ಬದಲಾಯಿಸಿ]- ಪಾರಸ್ಪರಿಕ ಕಲನೆಗೊಳ್ಳುವ ನೀಹಾರಿಕೆಗಳು (Interacting galaxies)
- ವಿಚಿತ್ರ ನೀಹಾರಿಕೆಗಳು ಇತರ ನೀಹಾರಿಕೆಗಳೊಡನೆ ಗುರುತ್ವಾಕರ್ಷಣೆಯಿಂದ ಪಾರಸ್ಪರಿಕ ಕಲನೆಗೊಂಡು ಅಸಾಮಾನ್ಯ ಗುಣಗಳನ್ನು ಹೊಂದುತ್ತವೆ.
- 1.ಉಂಗುರ ನೀಹಾರಿಕೆಗಳು ನಕ್ಷತ್ರಗಳ ಉಂಗುರಾಕೃತಿಯ ರಚನೆಯನ್ನು ಹೊಂದಿದೆ. ಮತ್ತು ಅಂತರತಾರಾ ಮಾಧ್ಯಮದ ಒಂದು ಖಾಲಿ ಕೇಂದ್ರವನ್ನು ಹೊಂದಿದೆ. ಒಂದು ಸುರುಳಿಯಾಕಾರದ ನೀಹಾರಿಕೆಯ ಮಧ್ಯಭಾಗದ ಮೂಲಕ, ಒಂದು ಸಣ್ಣ ನೀಹಾರಿಕೆಯು ಹಾದುಹೋದಾಗ ಒಂದು ಉಂಗುರ ನೀಹಾರಿಕೆಯು ಸಂಭವಿಸುತ್ತದೆ ಎಂದು ಭಾವಿಸಲಾಗಿದೆ. ಆಂಡ್ರೊಮಿಡಾ ನಕ್ಷತ್ರಪುಂಜದಲ್ಲಿ ಅಂತಹ ಕ್ರಿಯೆಯ ರಚನೆಯನ್ನು ತೋರುತ್ತದೆ. ಅದರ ಅತಿಗೆಂಪು ವಿಕಿರಣ ಬೀರುವಿಕೆಯನ್ನು ವೀಕ್ಷಿಸಿದಾಗ ಮತ್ತು ಅದರಲ್ಲಿರುವ ಉಂಗುರ ಬಾಹುಳ್ಯವು ಇದರ ಪರಿಣಾಮವಾಗಿರಬಹುದು ಎಂದು ಊಹಿಸಲಾಗಿದೆ.
- 2.ಒಂದು ಉಬ್ಬಿದ ನೀಹಾರಿಕೆಯು ಅಂಡಾಕಾರದ ಮತ್ತು ಸ್ಪೈರಲ್ ಗೆಲಕ್ಸಿಗಳ ಎರಡೂ ಗುಣಗಳನ್ನು ಹೊಂದಿರುವ ಮಧ್ಯಂತರ ರೂಪ. ಇವನ್ನು ಹಬಲ್-ವರ್ಗೀಕರಣದಲ್ಲಿ ಎಸ್’ಒ’ ಎಂದು ವರ್ಗೀಕರಿಸಲಾಗಿದೆ, ಮತ್ತು ಅವು ಅಂಡಾಕಾರದ ಟೊಳ್ಳು ಸುರುಳಿ-ಬಾಹುಗಳು ಅಸಂಬದ್ಧ ನಿಯಮ ಹೊಂದಿದೆ. (ಪಟ್ಟಿಯುತ ಉಬ್ಬಿದ ನೀಹಾರಿಕೆಯು ಹಬಲ್ ವರ್ಗೀಕರಣದಲ್ಲಿ ಎಸ್’ಬಿ’ಒ’ ಚಿನ್ಹೆ ಹೊಂದಿದೆ.)
- 3.ನಿಯಮರಹಿತ-1 ನೀಹಾರಿಕೆಗಳನ್ನು ಯಾವುದೇ ಅಂಡಾಕಾರದ ಅಥವಾ ಸುರುಳಿ ರೂಪದ್ದೆಂದು ಸುಲಭವಾಗಿ ವಿಂಗಡಿಸಲು ಆಗದು. ಒಂದು ನಿಯಮರಹಿತ (ಅವ್ಯವಸ್ಥಿತ) ನೀಹಾರಿಕೆಯು ಜಟಿಲ ರಚನೆ ಹೊಂದಿದೆ. ಅದು ಹಬಲ್ ಯೋಜನೆಯೊಂದಿಗೆ ಹೊದಾಣಿಕೆಯಾಗುವುದಿಲ್ಲ.
- 4. ನಿಯಮರಹಿತ-2 ನೀಹಾರಿಕೆಯು ವರ್ಗೀಕರಣ ಹೋಲುವ ಯಾವುದೇ ಹಬಲ್ ಯೋಜನೆ ರಚನೆಯನ್ನು ಹೊಂದುವುದಿಲ್ಲ. (ಚಿಕ್ಕ) ಅನಿಯಮಿತ ನೀಹಾರಿಕೆಗಳ ಹತ್ತಿರದ ಉದಾಹರಣೆಗಳೆಂದರೆ (ಕುಬ್ಜ) ಮೆಗೆಲ್ಯಾನಿಕ್ ಮೇಘಗಳು.
- ಒಂದು ಅಲ್ಟ್ರಾ ವಿಕೀರ್ಣ ನೀಹಾರಿಕೆಯು (ಯು.ಡಿ.ಜಿ) ಅತ್ಯಂತ ಕಡಿಮೆ ಸಾಂದ್ರತೆಯ ನೀಹಾರಿಕೆಯಾಗಿದೆ. ಕ್ಷೀರಪಥ ನೀಹಾರಿಕೆಯ, ಅದೇ ಗಾತ್ರದ ಆದರೆ ಕ್ಷೀರಪಥದ ಕೇವಲ 1%ನಷ್ಟು ದೃಷ್ಟಿಗೋಚರ ಎಣಿಕೆಗೆ ಸಿಗಬಲ್ಲ ತಾರೆಗಳನ್ನು ಹೊಂದಿದೆ. ಅಲ್ಲಿ ನಕ್ಷತ್ರ ರಚನೆಗೆ ಬೇಕಾದ ಅನಿಲದ ಕೊರತೆ ಇರುವುದರಿಂದ ಪ್ರಕಾಶಮಾನತೆಯ ಕೊರತೆಯೂ ಇದೆ.[೧೪]
ಕುಬ್ಜ ಬ್ರಹ್ಮಾಂಡಗಳು (Dwarf galaxy)
[ಬದಲಾಯಿಸಿ]- ದೊಡ್ಡ ದೀರ್ಘವೃತ್ತಾಕಾರದ ಮತ್ತು ಸುರಳಿ ಗ್ಯಾಲಕ್ಸಿಗಳ ಪ್ರಾಧಾನ್ಯತೆಯ ಹೊರತಾಗಿಯೂ ವಿಶ್ವದಲ್ಲಿ ಬಹಳಷ್ಟು ಬ್ರಹ್ಮಾಂಡಗಳು ಕುಬ್ಜಗಳು (ಸಣ್ಣವು). ಇತರ ಬ್ರಹ್ಮಾಂಡಗಳ ರಚನೆಗಳಿಗೆ ಹೋಲಿಸಿದರೆ ಈ ಕುಬ್ಜಗಳು ಅಥವಾ ಪುಟ್ಟ ಬ್ರಹ್ಮಾಂಡಗಳು ಕೆಲವೇ ಶತಕೋಟಿ ನಕ್ಷತ್ರಗಳನ್ನು ಹೊಂದಿವೆ. ಅವು, ಗಾತ್ರದಲ್ಲಿ ನಮ್ಮ ಕ್ಷೀರಪಥದ ನೂರನೇ ಒಂದು ಭಾಗ ಮಾತ್ರಾ ಇವೆ. ಈ ಗ್ಯಾಲಕ್ಸಿಗಳಲ್ಲಿ ತುಲನಾತ್ಮಕವಾಗಿ ಸಣ್ಣ. ಅಲ್ಟ್ರಾ-ಸಾಕುಬ್ಜ ಬ್ರಹ್ಮಾಂಡಗಳು ಇತ್ತೀಚೆಗೆ ಪತ್ತೆಯಾಗಿದ್ದು, ಅವು ಅಡ್ಡಲಾಗಿ (ವ್ಯಾಸ) ಕೇವಲ 100 ಪರಸೆಕ್ಸ್ ಇವೆ.
- ಅನೇಕ ಕುಬ್ಜ ಗೆಲಕ್ಸಿಗಳು ಒಂದು ದೊಡ್ಡ ನೀಹಾರಕವನ್ನು ಪರಿಭ್ರಮಿಸುತ್ತವೆ. ನಮ್ಮ ಕ್ಷೀರಪಥವೇ ಕನಿಷ್ಠ ಒಂದು ಡಜನ್ ಇಂತಹ ಉಪಬ್ರಹ್ಮಾಂಡಗಳನ್ನು ಹೊಂದಿದೆ. ಇನ್ನೂ ಅಂದಾಜು 300-500 ಉಪಬ್ರಹ್ಮಾಂಡಗಳನ್ನು ಪತ್ತೆಹಚ್ಚಬಹುದು ಎಂಬ ನಂಬುಗೆ ಇದೆ. ಕುಬ್ಜ ಬ್ರಹ್ಮಾಂಡಗಳನ್ನು ಸಹ ಅಂಡಾಕಾರದ, ಸುರುಳಿಯಾಕಾರದ ಅಥವಾ ಅನಿಯಮಿತ ಹೀಗೆ ವಿಂಗಡಿಸಬಹುದು. ಆದರೆ ಈ ಸಣ್ಣ ಕುಬ್ಜ ಅಂಡಾಕಾರದ (ಎಲಿಪ್ಸೀಯ) ಬ್ರಹ್ಮಾಂಡಗಳು ದೊಡ್ಡ ಬ್ರಹ್ಮಾಂಡಗಳುನ್ನು ಯಾವುದೇ ರೀತಿಯಲ್ಲೂ ಹೋಲುವುದಿಲ್ಲ. ಬದಲಿಗೆ, ಅವುಗಳನ್ನು ಹೆಚ್ಚಾಗಿ, ಗೋಳಾಕೃತಿ ಕುಬ್ಜಗಳೆಂದು ಕರೆಯಲಾಗುತ್ತದೆ.
- ನಮ್ಮ ಆಕಾಶಗಂಗೆಯ ನೆರೆಯ 27 ಕುಬ್ಜ ಬ್ರಹ್ಮಾಂಡಗಳ ಇರುವಿಕೆ, ಒಂದು ಅಧ್ಯಯನದಿಂದ ಕಂಡುಬಂದಿರುವುದು, ಅವುಗಳಲ್ಲಿ, ಅವು ಸಾವಿರಾರು ಅಥವಾ ಲಕ್ಷಾಂತರ ನಕ್ಷತ್ರಗಳನ್ನು ಹೊಂದಿದ್ದರೂ ಕೂಡಾ ಅವುಗಳ ಕೇಂದ್ರ ದ್ರವ್ಯ ರಾಸಿ, ಸುಮಾರು 10 ಮಿಲಿಯನ್ ಸೌರ ತೂಕಗಳು, ಅಷ್ಟೇ. ಇದರಿಂದ ಬ್ರಹ್ಮಾಂಡಗಳು ಹೆಚ್ಚಾಗಿ ಕೃಷ್ಣದ್ರವ್ಯದಿಂದ (ಡಾರ್ಕ್'ಮ್ಯಾಟರ್) ರೂಪುಗೊಳ್ಳುತ್ತವೆ,ಎಂಬ ಅಭಿಪ್ರಾಯಕ್ಕೆ ಬರಲು ಕಾರಣವಾಗಿದೆ, ಅವುಗಳ ಕನಿಷ್ಠ ಗಾತ್ರ ಡಾರ್ಕ್ ಮ್ಯಾಟರ್’ನ ಅಸಹಜ ಗುರುತ್ವ ಸಮ್ಮಿಳನವನ್ನು ಸೂಚಿಸಬಹುದು. ದೊಡ್ಡ ಗಾತ್ರವನ್ನು ಹಿಡಿದಿಡಲು ಅವುಗಳ ಬೆಚ್ಚಗಿನ ಕೃಷ್ಣ ದ್ರವ್ಯದ ಅಸಾಮರ್ಥ್ಯವೇ ಕಾರಣವಿರಬಹುದು.
ಸಕ್ರಿಯ ಬ್ರಹ್ಮಾಂಡಗಳು
[ಬದಲಾಯಿಸಿ]- ಗ್ಯಾಲಕ್ಸಿಗಳ/ಬ್ರಹ್ಮಾಂಡಗಳ ಪರಸ್ಪರ ಕಲನಕ್ರಿಯೆ
- ಆಂಟೆನಾ(ಚಾಚು ಮೀಸೆಯ) ಗ್ಯಾಲಕ್ಸಿಗಳು ಪರಸ್ಪರ ಘರ್ಷಣೆ ಒಳಗಾಗಿ ಅಂತ್ಯದಲ್ಲಿ ಸಂಧರ್ಭಾನುಸಾರ ಅವುಗಳ ವಿಲೀನಕ್ಕೆ ಕಾರಣವಾಗುತ್ತದೆ.
- ಗ್ಯಾಲಕ್ಸಿಗಳ ನಡುವೆ ಪರಸ್ಪರ ಹೊಂದಾಣಿಕೆ /ಘರ್ಷಣೆ ಆಗಾಗ್ಗೆ ನಡೆಯುವುದು , ಮತ್ತು ಅವು ಗ್ಯಾಲಕ್ಸಿಯ ವಿಕಾಸದಲ್ಲಿ ಒಂದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಗ್ಯಾಲಕ್ಸಿಗಳ ನಡುವೆ ಘರ್ಷಣೆ ತಪ್ಪಿದರೆ ಪಾರಸ್ಪರಿಕ ಗುರುತ್ವಾಕರ್ಷಣೆಯ ಕಾರಣ ಸ್ವರೂಪ ಕೆಡಲು ಕಾರಣವಾಗಬಹುದು, ಮತ್ತು ಅನಿಲ ಮತ್ತು ಧೂಳಿನ ಕೆಲವು ವಿನಿಮಯಕ್ಕೂ ಕಾರಣವಾಗಬಹುದು.
- ಎರಡು ನಕ್ಷತ್ರಪುಂಜ(ಗ್ಯಾಲಕ್ಸಿ)ಗಳು ಪರಸ್ಪರ ನೇರವಾಗಿ ಹಾದು ಹೋಗಿ ವಿಲೀನಗೊಳ್ಳಲು ಸಾಕಷ್ಟು ಸಂಬಂಧಿ ಆವೇಗ ಇಲ್ಲದಾಗ ಘರ್ಷಣೆಗಳು ಉಂಟಾಗುತ್ತವೆ. ಪರಸ್ಪರ ಗ್ಯಾಲಕ್ಸಿಗಳ ನಕ್ಷತ್ರಗಳು ಸಾಮಾನ್ಯವಾಗಿ ಡಿಕ್ಕಿ ಹೊಡೆಯುವುದಿಲ್ಲ, ಆದರೆ ಎರಡರ ಅನಿಲ ಮತ್ತು ಧೂಳು ಪರಸ್ಪರ ಕಲನಹೊಂದಿ(ಮಿಳಿತ) ಕೆಲವೊಮ್ಮೆ ತಾರಾ ರಚನೆಯಾಗುತ್ತವೆ. ಈ ಒಂದು ಘರ್ಷಣೆ ತೀವ್ರವಾಗಿ ಗ್ಯಾಲಕ್ಸಿಗಳ ಆಕಾರ ವಿರೂಪಗೊಳಿಸಬಲ್ಲದು. ಅದು ಗ್ಯಾಲಕ್ಸಿಯಲ್ಲಿ ಪಟ್ಟಿ, ಉಂಗುರಗಳು ಅಥವಾ ಬಾಲ-ತರಹದ ರಚನೆಗಳಿಗೆ ಕಾರಣವಾಗಬಹುದು.
- ತೀವ್ರ ತೆರನಾದ ಪರಸ್ಪರ ಕಲನವು ಅಥವಾ ಗ್ಯಾಲಕ್ಸಿಯ ವಿಲೀನವು; ಈ ಸಂದರ್ಭದಲ್ಲಿ ಎರಡು ನಕ್ಷತ್ರಪುಂಜಗಳ ಗ್ಯಾಲಕ್ಸಿಗಳು ಪರಸ್ಪರ ಒಂದನ್ನೊಂದು ಹಾದು ಹೋಗಲು ತುಲನಾತ್ಮಕವಾಗಿ ಆವೇಗ ಸಾಕಾಗುವುದಿಲ್ಲ; ಬದಲಿಗೆ, ಅವು ಕ್ರಮೇಣ ಒಂದು,ದೊಡ್ಡ ಗ್ಯಾಲಕ್ಸಿಯನ್ನು ರಚಿಸಲು ವಿಲೀನಗೊಳ್ಳುವ ಮೂಲಕ ಕಾರಣವಾಗಬಹುದು. ಗ್ಯಾಲಕ್ಸಿಗಳ ವಿಲೀನಗಳನ್ನು ಹೋಲಿಸಿ ನೋಡಿದರೆ, ಒಂದು ವೇಳೆ ವಿಲೀನಗೊಳ್ಳುವ ಗ್ಯಾಲಕ್ಸಿಗಳಲ್ಲಿ ಒಂದು ಅತಿ ದೊಡ್ಡದಗಿದ್ದು ಇತರ ವಿಲೀನಕ್ಕೊಳಗಾಗುವ ಗ್ಯಾಲಕ್ಸಿಗಳನ್ನು ತನ್ನೊಳಗೆ ಸೇರಿಸಿಕೊಂಡರೆ ಅದನ್ನು ನಕ್ಷತ್ರ-ಭಕ್ಷಕ (ನರಭಕ್ಷಕತ್ವ-cannibalism) ಎಂದು ಕರೆಯಲಾಗುತ್ತದೆ. ಅಗಾಧ ಗಾತ್ರದ ಗ್ಯಾಲಕ್ಸಿ ತುಲನಾತ್ಮಕವಾಗಿ ತೊಂದರೆಗೊಳಗಾಗದೆ ಉಳಿಯುತ್ತದೆ. ಆದರೆ ಸಣ್ಣ ಗ್ಯಾಲಕ್ಸಿ ಚೂರಾಗುತ್ತದೆ.
ತಾರೆಗಳ ಸ್ಪೊಟ ನೀಹಾರಿಕೆ
[ಬದಲಾಯಿಸಿ]- ನೀಹಾರಕಗಳಲ್ಲಿ ತಾರಾಸ್ಪೋಟ (ಸ್ಟಾರ್ ಬರ್ಸ್ಟ್ ಗ್ಯಾಲಕ್ಸಿ).
- ನಕ್ಷತ್ರಗಳು ಸಂಗ್ರಹಿತವಾದ ದೈತ್ಯ ಅಣುಸಂಯೋಜಿತ ಶೀತ ಅನಿಲ ಮೋಡಗಳಿಂದ ರೂಪುಗೊಳ್ಳುತ್ತವೆ. ಕೆಲವು ಗ್ಯಾಲಕ್ಸಿಗಳು ತ್ವರಿತ ಗತಿಯಲ್ಲಿ ತಾರಾಸ್ಪೋಟ ಕ್ರಿಯೆಯಿಂದ ತಾರೆಗಳನ್ನು ಸೃಷ್ಟಿಸುತ್ತವೆ. ಅವು ಹಾಗೆ ಮುಂದುವರಿದರೆ ನೀಹಾರಿಕೆಯ ಜೀವಿತಾವಧಿ ಕಡಿಮೆ. ಅಲ್ಪ ಕಾಲಾವಧಿಯಲ್ಲಿ ತಮ್ಮ ಮೀಸಲು ಅನಿಲವನ್ನೆಲ್ಲಾ ಬಳಸುತ್ತದೆ. ಆದ್ದರಿಂದ ನೀಹಾರಿಕೆಯ ಚಟುವಟಿಕೆಯಿಂದ ಸಾಮಾನ್ಯವಾಗಿ ಅದರ ಇತಿಹಾಸ ಅಲ್ಪಾವಧಿಯಲ್ಲಿ ಕೊನೆಗೊಳ್ಳುತ್ತದೆ. ಅವು ಕೇವಲ ಹತ್ತು ದಶಲಕ್ಷ ವರ್ಷಗಳ ಕಾಲ ಇರುತ್ತವೆ. ತಾರಾಸ್ಪೋಟ (ಸ್ಟಾರ್ ಬರ್ಸ್ಟ್) ಬ್ರಹ್ಮಾಂಡಗಳ (ವಿಶ್ವದ) ಪ್ರಾಚೀನ ಇತಿಹಾಸದ ಸಂದರ್ಭದಲ್ಲಿ ಹೆಚ್ಚು ಸಾಮಾನ್ಯವಾಗಿದ್ದವು, ಮತ್ತು ಪ್ರಸ್ತುತ, ಇನ್ನೂ ಒಟ್ಟು ಸುಮಾರು 15%. ತಾರೆಗಳ ಉತ್ಪಾದನೆ ಆಗುತ್ತಿದೆ.
- ಹೀಗೆ ತಾರಾಸ್ಪೋಟವುಳ್ಳ ನೀಹಾರಿಕೆಗಳಲ್ಲಿ ಮೋಡಗಳ(ಜ್ಯೋತಿರ್ಮೇಘಗಳ) ಸಾಂದ್ರ ಶೇಖರಣೆ ಮತ್ತು ಹೊಸ ತಾರೆಗಳ ಸೃಷ್ಟಿ (ಎಚ್2 ರಲ್ಲಿ) ಕಂಡುಬರುವುದು. ದೈತ್ಯ ತಾರೆಗಳು ಮಹಾನೊವಾಗಳ(ಮಹಾಜ್ಯೋತಿರ್ಮೇಘ) ಸ್ಪೋಟಕ್ಕೆ ಕಾರಣವಾಗುತ್ತವೆ ಮುದಿ ತಾರೆಗಳ ಮರಣದಿಂದ ಸ್ಪೋಟಗಳು ಸಂಭವಿಸಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಳಿದುಳಿದ ಧೂಳಿನ (ಅಯಾನೀಕೃತ)ಅನಿಲದ ಸಂವಹನ ವಾಗುವುದು. ನಂತರ ಸರಣಿಯಲ್ಲಿ ಸ್ಪೋಟಗಳಾಗಿ ನಕ್ಷತ್ರ ರೂಪುಗೊಳ್ಳುವ ಕ್ರಿಯೆ ನಡೆದು ಲಭ್ಯವಿರುವ ಅನಿಲವನ್ನು ಉಪಯೋಗಿಸಿಕೊಂಡ ನಂತರ ತಾರಾಸ್ಪೋಟ ಕ್ರಿಯೆ ಅಂತ್ಯಗೊಳ್ಳುವುದು.
- ಈ ತಾರಾಸ್ಪೋಟಗಳು ಸಾಮಾನ್ಯವಾಗಿ ನೀಹಾರಿಕೆಗಳ ಪರಸ್ಪರ ವಿಲೀನಗೊಳಿಸುವ ಅಥವಾ ಪರಸ್ಪರ ಸಂವಹನ ಗೊಳಿಸುವ ಕ್ರಿಯೆಗೆ ಸಂಬಂಧಿಸಿವೆ. (ಉದಾ:ಎಮ್82) ಇಂತಹ ಪರಸ್ಪರ ಸಂವಹನ/ಸಂಮಿಲನ ಕ್ರಿಯೆಗೆ ಮಾದರಿ ಉದಾಹರಣೆ ದೊಡ್ಡ ಎಂ81. ಅನಿಯಮಿತ(ಅವ್ಯವಸ್ಥಿತ) ನೀಹಾರಿಕೆಗಳು .ಸಾಮಾನ್ಯವಾಗಿ ಬಿಟ್ಟು ಬಿಟ್ಟು ಗಂಟುಗಳನ್ನು ಪ್ರದರ್ಶಿಸುತ್ತವೆ. [೧೯] [೨೦] [೨೧]
ಸಕ್ರಿಯ ಗ್ಯಾಲಕ್ಸಿ
[ಬದಲಾಯಿಸಿ]- ಸಕ್ರಿಯ ಗ್ಯಾಲಕ್ಸಿ/ನೀಹಾರಕ/ಬ್ರಹ್ಮಾಂಡ
- ಗ್ಯಾಲಕ್ಸಿಯು ಸಕ್ರಿಯ ಕೇಂದ್ರ (ನ್ಯೂಕ್ಲಿಯಸ್) ಭಾಗವನ್ನು ಹೊಂದಿದ್ದರೆ ಅದನ್ನು ಸಕ್ರಿಯ ಗ್ಯಾಲಕ್ಸಿ ಎಂದು ವರ್ಗೀಕರಿಸಲಾಗಿದೆ. ಈ ಗ್ಯಾಲಕ್ಸಿಗಳಿಂದ ಬಹಳಷ್ಟು ಶಕ್ತಿಯ ಗ್ಯಾಲಕ್ಸಿಯ ಕೇಂದ್ರ ಸಕ್ರಿಯ ಕೇಂದ್ರದಿಂದ ಹೊರಹಾಕಲ್ಪಡುತ್ತದೆ. ಉತ್ಪಾದನೆಯ ಭಾಗವು ಗ್ಯಾಲಕ್ಸಿಯ ಅಂತರತಾರಾ ಮಾಧ್ಯಮದ ಧೂಳು ಮತ್ತು ನಕ್ಷತ್ರಗಳ ಬದಲಿಗೆ ಈ ಕ್ರಿಯೆ ನಡೆಯುವುದು.
- ಒಂದುಬಗೆಯ ಸುರುಳಿ ಗೆಲಕ್ಸಿಗಳ ಅಥವಾ ಕ್ವೇಸಾರ್, ಸಕ್ರಿಯ ನೀಹಾರಕಗಳು. ಅವುಗಳ ಪ್ರಕಾಶಮಾನತೆ ಅವಲಂಬಿಸಿ ವರ್ಗೀಕರಿಸಲಾಗಿದೆ, ಅವು ಎಕ್ಸ್ ರೇ- ಕಿರಣಗಳು ರೂಪದಲ್ಲಿ ಹೆಚ್ಚಿನ ಶಕ್ತಿಯ ವಿಕಿರಣವನ್ನು ಸೂಸುತ್ತವೆ.
ಕ್ವೇಸಾರ್'ಗಳು
[ಬದಲಾಯಿಸಿ]- ಕ್ವೇಸಾರ್’ಗಳು (quasarಗಳು) (ಭಾಗಶಃ-ನಾಕ್ಷತ್ರಿಕ ರೇಡಿಯೋ ಮೂಲಗಳು) ಅತ್ಯಂತ ಶಕ್ತಿಯುತ ಮತ್ತು ದೂರದ ಸದಸ್ಯರು.ಅವನ್ನು ಸಕ್ರಿಯ ಗ್ಯಾಲಕ್ಸಿಯ ಬೀಜಕಣಗಳು ಎಂದು ಕರೆಯುವರು. ಕ್ವೇಸಾರ್ ಅತ್ಯಂತ ಹೊಳೆಯುವ ಕೆಂಪು ತಾರಾ ಬೀಜ ಮತ್ತು ಮೇಲ್ತರದ ಕೆಂಪು ವಿದ್ಯುತ್ಕಾಂತೀಯ ಶಕ್ತಿಯ ರೇಡಿಯೋ ಅಲೆಗಳ ಮೂಲ. ರೇಡಿಯೋ ಅಲೆಗಳ ಜೊತಗೆ ಕಣ್ಣಿಗೆ ಎದ್ದು ಕಾಣುವ ಬೆಳಕಿದೆ. ಬೆಳಕಿನಲ್ಲಿ ಅದು 'ನೀಹಾರಕ'ಕ್ಕಿಂತ ನಕ್ಷತ್ರಗಳನ್ನು ಹೋಲುತ್ತದೆ. ಬದಲಿಗೆ ತಾರಾಗಣದ ವಿಸ್ತೃತ ವರ್ಣಪಟಲ (ಸ್ಪೆಕ್ಟ್ರಾ) ಉತ್ಸರ್ಜನ ರೇಖೆಗಳಲ್ಲಿ ಕಾಂತಿಯನ್ನು ಚಿಮ್ಮುವ ಗುಣವು ತಾರೆಗಳಿಗಿಂತ ಬೇರೆಯಾಗಿದೆ. ಅದಕ್ಕಾಗಿ ಅದನ್ನು ಬಹಳ ಅನುರೂಪಿ-ನಕ್ಷತ್ರಗಳು ಅಥವಾ "ಭಾಗಶಃ-ನಾಕ್ಷತ್ರಿಕ" ಎಂದು ಕರೆಯಲಾಗುತ್ತದೆ. ಅವುಗಳ ಪ್ರಕಾಶಮಾನತೆ ಕ್ಷೀರಪಥಕ್ಕಿಂತ 100 ಪಟ್ಟು ಹೆಚ್ಚಾಗಿದೆ. ಹೆಚ್ಚಿನ ಕ್ವೇಸಾರ್’ಗಳು ಸುಮಾರು 12 ಶತಕೋಟಿ ವರ್ಷಗಳ ಹಿಂದೆ ರೂಪುಗೊಂಡವು; ಮತ್ತು ಅವು ಪರಸ್ಪರ ಸಂಘರ್ಷದಿಂದ ವಿಲೀನಗೊಳ್ಳುವ ಗ್ಯಾಲಕ್ಸಿಗಳ ಕೇಂದ್ರದಂತೆ ಕಪ್ಪು ರಂಧ್ರಗಳನ್ನು/ಕಪ್ಪು ಕುಳಿಗಳನ್ನು (black hole) ಹೊಂದಿವೆ. ಅಥವಾ ದ್ವಂದ್ವ ಬೃಹತ್ ಕಪ್ಪು ಕುಳಿ ಹೊಂದಿರುತ್ತವೆ (ಬೈನರಿ ಕಪ್ಪು ಕುಳಿ). 1980 ರವರೆಗೆ ಕ್ವೇಸಾರ್’ ವಿಷಯ ವಿವಾದಾತ್ಮಕವಾಗಿತ್ತು. “ಕ್ವೇಸಾರ್” ಭಾರಿ ಗಾತ್ರದ ಗ್ಯಾಲಕ್ಸಿಯಿಂದ ಸುತ್ತುವರಿದ ಮಧ್ಯದ ಕಾಂಪ್ಯಾಕ್ಟ್ ಪ್ರದೇಶವಾಗಿದೆ; ಅದು ಅದರ ಕೇಂದ್ರದ “ಬೃಹತ್ ಕಪ್ಪು ಕುಳಿ” ಎಂದು ಈಗ ವೈಜ್ಞಾನಿಕ ಒಮ್ಮತದ ಅಭಿಪ್ರಾಯಕ್ಕೆ ಬರಲಾಗಿದೆ. ಇದರ ಗಾತ್ರ 'ಸ್ಕವಾರ್ಜ್ಸ್ಚೈಲ್ಡ್ ಕಪ್ಪು ಕುಳಿಯ (Schwarzschild radius ಅತ್ಯಂತ ಚಿಕ್ಕ ಕಪ್ಪು ಕುಳಿಯ?) ತ್ರಿಜ್ಯದ 10-10,000 ಪಟ್ಟು ದೊಡ್ಡದು. ಒಂದು ಕ್ವೇಸಾರ್ ಹೊರಸೂಸಲ್ಪಡುವ ಅಗಾದ ಶಕ್ತಿ ಕಪ್ಪು ಕುಳಿಯ ಸುತ್ತ ಸಂಚಯನಗೊಂಡ ದ್ರವ್ಯರಾಶಿಯಿಂದ ಪಡೆಯಲಾಗಿದೆ. [೨೨][೨೩][೨೪][೨೫]
ಪ್ರಕಾಶಕ ಅತಿಗೆಂಪು ಗ್ಯಾಲಕ್ಸಿ(ಬ್ರಹ್ಮಾಂಡ-ನೀಹಾರಿಕೆ)
[ಬದಲಾಯಿಸಿ]- ಪ್ರಕಾಶಕ ಇನ್ಫ್ರಾರೆಡ್ ಗ್ಯಾಲಕ್ಸಿಗಳು: (Luminous Infrared Galaxies or (LIRG's)
- ಪ್ರಕಾಶಕ ಇನ್ಫ್ರಾರೆಡ್ ಗ್ಯಾಲಕ್ಸಿಗಳು ಪ್ರಕಾಶಮಾನತೆ ಹೊಂದಿದ ಗ್ಯಾಲಕ್ಸಿಗಳು ಪ್ರಕಾಶ ಮಾಪನದಲಲ್ಲಿ ಅವು 1011 L☉(L☉=ಸೂರ್ಯನ ಪ್ರಕಾಶ) ಮೇಲೆ ಇವೆ. ಈ ಬಗೆಯ ಸ್ಟಾರ್ ಗೆಲಕ್ಸಿಗಳು ಒಂದು ಬಗೆಯ ಸುರುಳಿಯುಳ್ಳ ಅತಿ ಪ್ರಕಾಶದ.(LIRG's) ಗೆಲಕ್ಸಿಗಳು (ಬ್ಹ್ಮಾಂಡಗಳು) ಸ್ಟಾರ್’ಬರ್ಸ್ಟ್ ಗ್ಯಾಲಕ್ಸಿಗಳಿಗಿಂತ ಹೆಚ್ಚು ಇವೆ. ಸೇಫೆರ್ಟ್ ಗ್ಯಾಲಾಕ್ಷಿ ಮತ್ತು ಇನ್’ಪ್ರಾರೆಡ್’ ಭಾಗಶಃ-ನಾಕ್ಷತ್ರಿಕ ವಸ್ತುಗಳು ಸಮಾನ ಪ್ರಕಾಶಮಾನತೆ ಹೊಂದಿದವು. ಮೊದಲು ಭಾಗಶಃ-ಪ್ರಕಾಶಕ ಇನ್ಫ್ರಾರೆಡ್ ಗ್ಯಾಲಕ್ಸಿಗಳು ಹೆಚ್ಚು ಹೇರಳವಾಗಿದ್ದವು. ಇನ್ಫ್ರಾರೆಡ್ ಗೆಲಕ್ಸಿಗಳು ಹೊರಸೂಸುವ ಶಕ್ತಿಯು ಇತರ ಎಲ್ಲಾ ಒಟ್ಟು ತಾರೆಗಳ ತರಂಗಾಂತರಗಳಿಗಿಂತ ಹೆಚ್ಚು. ಅದು ಅತಿಗೆಂಪು (infrared) ಶಕ್ತಿಯನ್ನು ಹೊರಸೂಸುತ್ತವೆ, ಆ ಶಕ್ತಿಯ ಪ್ರಮಾಣ- ಒಂದು ಪ್ರಕಾಶಕ ಅತಿಗೆಂಪು ಗ್ಯಾಲಕ್ಸಿಯ(LIRG's luminosity) ಪ್ರಕಾಶಮಾನತೆ ನಮ್ಮ ಸೂರ್ಯನ 100 ಶತಕೋಟಿ ಪಟ್ಟು ಹೆಚ್ಚು.[೨೬]
ಬ್ರಹ್ಮಾಂಡಗಳ ರಚನೆ ಮತ್ತು ವಿಕಾಸ
[ಬದಲಾಯಿಸಿ]- ಗ್ಯಾಲಕ್ಸಿಗಳ ರಚನೆ ಮತ್ತು ವಿಕಾಸ
- ಗ್ಯಾಲಕ್ಸಿಯ (ಬ್ರಹ್ಮಾಂಡಗಳ) ರಚನೆ ಮತ್ತು ವಿಕಾಸದ ವಿಷಯ ಖಭೌತಿಕಶಾಸ್ತ್ರದಲ್ಲಿ ಈಗಲೂ ಸಂಶೋಧನೆಯ ಸಕ್ರಿಯ ಕ್ಷೇತ್ರವಾಗಿದೆ.
- ರಚನೆ
- ಆರಂಭಿಕ ಬ್ರಹ್ಮಾಂಡದ ಪ್ರಸಕ್ತ ಮಾದರಿಗಳಿಗಳು ಖಭೌತಶಾಸ್ತ್ರದ ಮಹಾ ಸ್ಪೋಟದ (ಕಾಸ್ಮಾಲಜಿಯ ಬಿಗ್ ಬ್ಯಾಂಗ್) ಸಿದ್ಧಾಂತವನ್ನು ಆಧರಿಸಿವೆ. ಈ ಘಟನೆಯ ಸುಮಾರು 300,000 ವರ್ಷಗಳ ನಂತರ, ಪುನರ್'ಸಂಯೋಜನ (ರಿಕಾಂಬಿನೇಷನ್) ಎಂಬ ಕ್ರಿಯೆಯಲ್ಲಿ ಜಲಜನಕ ಮತ್ತು ಹೀಲಿಯಂ ಅಣುಗಳ ರೂಪುಗೊಂಡವು. ಎಲ್ಲಾ ಜಲಜನಕವು (ಹೈಡ್ರೋಜನ್) ತಟಸ್ಥವಾಗಿತ್ತು (ಅಯಾನೀಕೃತಗೊಳ್ಳದ್ದು) ಮತ್ತು ಸುಲಭವಾಗಿ ಬೆಳಕಿನ್ನು ಹೀರಿಕೊಂಡಿತು. ಯಾವುದೇ ನಕ್ಷತ್ರಗಳು ಇನ್ನೂ ರಚನೆಯಾಗಿರಲಿಲ್ಲ. ಪರಿಣಾಮವಾಗಿ ಈ ಅವಧಿಯನ್ನು, "ಕತ್ತಲೆಯ ಯುಗ" ಎಂದು ಕರೆಯಲಾಗಿದೆ. ಈ ಆದಿಸ್ವರೂಪದ ದ್ರವ್ಯದಲ್ಲಿ ದೊಡ್ಡ ರಚನೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿತು. ಈ ಆದಿಸ್ವರೂಪದ ವಿಷಯದಲ್ಲಿ ಸಾಂದ್ರತೆಯ ಏರಿಳಿತಗಳ (ಅಥವಾ ಅಸಮಾವರ್ತಕ ಅಕ್ರಮಗಳ) ಕಾಲವಾಗಿತ್ತು. ಪರಿಣಾಮವಾಗಿ, ಬ್ಯಾರಿಯೊನಿಕ್ ಮ್ಯಾಟರ್ (ಭಾರ ಕಣಗಳು) ಶೀತ ಕೃಷ್ಣ ದ್ರವ್ಯದಲ್ಲಿ (ಕೋಲ್ಡ್ ಡಾರ್ಕ್ ಮ್ಯಾಟರ್) ಸಾಂದ್ರೀಕರಿಸಲು ಆರಂಭಿಸಿದವು.[೨೭]
ಆರಂಭಿಕ ಬ್ರಹ್ಮಾಂಡಗಳು (ಗ್ಯಾಲಕ್ಸಿಗಳು)
[ಬದಲಾಯಿಸಿ]- ಆರಂಭದಲ್ಲಿ ಕಾಣಿಸಿಕೊಂಡ ನೀಹಾರಿಕೆಗಳ ಬಗೆಗೆ ಆಧಾರವು 2006ರಲ್ಲಿ ಪತ್ತೆಯಾದ ನಂತರ ಗ್ಯಾಲಕ್ಸಿ IOK-1 ಬಿಗ್ ಬ್ಯಾಂಗ್ ನಂತರ ಕೇವಲ 750 ಮಿಲಿಯನ್ ವರ್ಷಗಳ ನಂತರದ ಗ್ಯಾಲಾಕ್ಷಿಗೆ ಅನುಗುಣವಾದ 6.96 ರ ಅಸಾಧಾರಣ ‘ಅಧಿಕ ರಕ್ತ ಪಲ್ಲಟ(ಕೆಂಪು ಸ್ಥಳಾಂತರ)’ಕ್ಕೆ ಹೊಂದಿಕೆಯಾಗಿರುವುದು ಕಂಡುಬಂತು; ಮತ್ತು ಅದು ಅತ್ಯಂತ ಹೆಚ್ಚು ದೂರದ ಮತ್ತು ಆದಿಸ್ವರೂಪದ ಬ್ರಹ್ಮಾಂಡ (ಗ್ಯಾಲಕ್ಸಿ) ಎಂಬುದು, ಕಂಡು ಬಂತು. ವಿಶ್ವದಾದ್ಯಂತ ಇತರ ಕಾಯಗಳು (ಉದಾಹರಣೆಗೆ ಅಬೆಲ್ 1835-IR1916 ಮಾಹಿತಿ) ಹೆಚ್ಚಿನ ‘ಅಧಿಕ ರಕ್ತ ಪಲ್ಲಟ’ ಹೊದಿರುವುದಾಗಿ ಹೇಳಿದನು. ಆದರೆ IOK-1 ರ ವಯಸ್ಸು ಮತ್ತು ಸಂಯೋಜನೆ ಹೆಚ್ಚು ವಿಶ್ವಾಸಾರ್ಹವಾಗಿ ಡಿಸೆಂಬರ್ 2012 ರಲ್ಲಿ,ಧೃಡೀಕರಿಸಲ್ಪಟ್ಟಿತು. ಖಗೋಳಶಾಸ್ತ್ರಜ್ಞರು/ಖಗೋಳಸಂಚಾರಿಗಳು UDFj--39546284 ಎಂಬ ಆಕಾಸ ಕಾಯವು 11.9 ಒಂದು‘ಅಧಿಕ ರಕ್ತ ಪಲ್ಲಟ’(ಕೆಂಪು ಸ್ಥಳಾಂತರದ) ಮೌಲ್ಯವನ್ನು ಹೊಂದಿದೆ; ಆದ್ದರಿಂದ ಅದು ಅತ್ಯಂತ ದೂರದ ಖಗೋಲಕಾಯವೆಂದು ವರದಿ ಮಾಡಿದರು. ಈ ಆಕಾಶ-ಕಾಯ ಮಹಾಸ್ಪೋಟದ (ಬಿಗ್ ಬ್ಯಾಂಗ್) ನಂತರ,ಸುಮಾರು "380 ಮಿಲಿಯನ್ ವರ್ಷಗಳ" ಹೊತ್ತಿಗೆ ಅಸ್ತಿತ್ವದಲ್ಲಿದ್ದವು ಎಂದು ಅಂದಾಜಿಸಲಾಗಿದೆ. (ಅದು ಸುಮಾರು 13.8 ಶತಕೋಟಿ ವರ್ಷಗಳ ಹಿಂದೆ), ಅದು ಸುಮಾರು 13.42 ಶತಕೋಟಿ ಬೆಳಕಿನ ವರ್ಷಗಳ ದೂರದಲ್ಲಿರುತ್ತದೆ. ಅಂದರೆ ಮೊದಲಿನ ಭ್ರೂಣ-ಬ್ರಹ್ಮಾಂಡಗಳು ಈಗ ಕರೆಯಲ್ಪಡುವ ಆರಂಭದ “ಕತ್ತಲೆಯುಗ”ದಲ್ಲಿ ("ಡಾರ್ಕ್'ಏಜ್)" ಬೆಳೆದಿದೆ(ದೊಡ್ಡದಾಗಿದೆ).ಇತ್ತೀಚನ ಶೋಧನೆಯಂತೆ ಮೇ 5, 2015 ರಲ್ಲಿ, ಗಮನಿಸಿದ "ಗ್ಯಾಲಕ್ಸಿಇಜಿಎಸ್’-ಜಡೆಸ್.8-1" ಅತ್ಯಂತ ದೂರದ ಮತ್ತು ಮುಂಚಿನ ಗ್ಯಾಲಕ್ಸಿಎನ್ನಬಹುದು. ಅದು ಮಹಾಸ್ಪೋಟದ (ಬಿಗ್ ಬ್ಯಾಂಗ್’ನ) 670 ಮಿಲಿಯನ್ ವರ್ಷಗಳ ನಂತರ ರೂಪಿಸಲ್ಪಟ್ಟ ಅತ್ಯಂತ ಮೊದಲಿನ ಬ್ರಹ್ಮಾಂಡವೆಂಬುದನ್ನು ಸೂಚಿಸುತ್ತದೆ. ಗ್ಯಾಲಕ್ಸಿಇಜಿಎಸ್’-ಜಡೆಸ್.8-1 ರಿಂದ ಬೆಳಕು ಭೂಮಿಯನ್ನು ತಲುಪಲು 13 ಬಿಲಿಯನ್ ವರ್ಷಗಳನ್ನು ತೆಗೆದುಕೊಳ್ಳುವುದು. ಏಕೆಂದರೆ ಬ್ರಹ್ಮಾಂಡದ ವಿಸ್ತರಣೆಯಿಂದಾಗಿನಿಂದ 13 ಶತಕೋಟಿ ವರ್ಷಗಳ ಕಾಲ ತೆಗೆದುಕೊಂಡು,ದೂರ ಸರಿದು, ಅದು ಈಗ 30 ಬಿಲಿಯನ್ ಜ್ಯೋತಿರ್ವರ್ಷಗಳ ದೂರದಲ್ಲಿ ಬಂದಿದೆ.[೨೮]
- ಜೆನ್ನಿಫರ್ ಚು | MIT ನ್ಯೂಸ್ ಆಫೀಸ್:
- ಜನವರಿ 7, 2016 MIT ಯಲ್ಲಿ ಈಗ ಖಗೋಳಶಾಸ್ತ್ರಜ್ಞರು, ಮಿಸ್ಸೌರಿ ವಿಶ್ವವಿದ್ಯಾಲಯ, ಫ್ಲೋರಿಡಾ ವಿಶ್ವವಿದ್ಯಾಲಯ, ಮತ್ತು ಬೇರೆಡೆ, ಒಂದು ಬೃಹತ್ತಾದ, ವಿಸ್ತಾರವಾದ ಮಥಿಸುತ್ತಿರುವ ಗ್ಯಾಲಕ್ಸಿಯನ್ನು, ಬಿಗ್ ಬ್ಯಾಂಗ್'ನ 3.8 ಶತಕೋಟಿ ವರ್ಷಗಳ ನಂತರ ರೂಪುಗೊಂಡ (ಕ್ಲಸ್ಟರ್) ಬ್ರಹ್ಮಾಂಡಗುಚ್ಛವನ್ನು ಪತ್ತೆಹಚ್ಚಿವೆ. ಮತ್ತು ಭೂಮಿಯಿಂದ 10 ಶತಕೋಟಿ ಬೆಳಕಿನ ವರ್ಷಗಳದೂರದಲ್ಲಿದೆ. ಸಾವಿರಾರು ಗೆಲಕ್ಸಿಗಳನ್ನು ಒಳಗೊಂಡಿದೆ. ಈ ಬೃಹತ್ ಬ್ರಹ್ಮಾಂಡ ಸೂರ್ಯನ 250 ಟ್ರಿಲಿಯನ್ ಪಟ್ಟು ಹೆಚ್ಚು ಅಗಾಧ, ಅಥವಾ ಆಕಾಶಗಂಗೆ ಗ್ಯಾಲಕ್ಸಿಯ 1,000 ಪಟ್ಟಿಗೂ ಹೆಚ್ಚು ದೊಡ್ಡ ಬೃಹತ್ ಬ್ರಹ್ಮಾಂಡ.(The cluster, named IDCS J1426.5+3508 (or IDCS 1426), is the most massive cluster of galaxies yet discovered in the first 4 billion years after the Big Bang.[೨೯]
ಹಿಗ್ಗುತ್ತಿರುವ ವಿಶ್ವ- ಭವಿಷ್ಯದಲ್ಲಿ
[ಬದಲಾಯಿಸಿ]- ಬ್ರಹ್ಮಾಂಡ ವಿಕಾಸ (ಎವಲ್ಯೂಷನ್)
- ಗ್ಯಾಲಕ್ಸಿಯ ರಚನೆಯ ನಂತರ ಒಂದು ಶತಕೋಟಿ ವರ್ಷಗಳಲ್ಲಿ ಪ್ರಮುಖ ರಚನೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿದವು. ಅವು ವೃತ್ತಾಕಾರದ ಗೊಂಚಲುಗಳು, ಕೇಂದ್ರದಲ್ಲಿ ಅತೀ ಬೃಹತ್ತಾದ ಕಪ್ಪು ಕುಳಿ, ಮತ್ತು ಲೋಹದ ಕಳಪೆ ಹೆಚ್ಚುಸಂಖ್ಯೆಯ 2ನೇವರ್ಗದ ನಕ್ಷತ್ರಗಳು, ಅದರಲ್ಲಿ ಉಬ್ಬು ಕಪ್ಪು ಕುಳಿಯು ಗೆಲಕ್ಸಿಗಳ ಬೆಳವಣಿಗೆಯನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದಂತೆ ಕಾಣುತ್ತದೆ ಅದು ಬ್ರಹ್ಮಾಂಡಗಳ ಸೃಷ್ಟಿ ರಚನೆಯಲ್ಲಿ ಹೆಚ್ಚುವರಿ ದ್ರವ್ಯದ ಒಟ್ಟು ಪ್ರಮಾಣವನ್ನು ಸೀಮಿತಗೊಳಿಸುವ ಮೂಲಕ ಸಕ್ರಿಯವಾಗಿದ್ದಿರಬೇಕು. ಈ ಆರಂಭಿಕ ಯುಗ ಸಮಯದಲ್ಲಿ, ಬ್ರಹ್ಮಾಂಡಗಳು ದೊಡ್ಡ ಪ್ರಮಾಣದ -ಸ್ಪೋಟಗಳಾಗಿ ನಕ್ಷತ್ರ ರಚನೆಗೆ ಒಳಗಾಗಿವೆ.
- ಎರಡು ಶತಕೋಟಿ ವರ್ಷಗಳಿಂದ ಸಂಗ್ರಹಿಸಿದ ದ್ರವ್ಯರಾಶಿಯು ಗ್ಯಾಲಕ್ಸಿ ತಾಟಿನಲ್ಲಿ ನೆಲೆ ಗೊಂಳ್ಳುತ್ತದೆ. ಬ್ರಹ್ಮಾಂಡವು ಈ ಸಮಯದಲ್ಲಿ ಉನ್ನತ ವೇಗದ ಮೋಡಗಳಿಂದ ಮತ್ತು ಕುಬ್ಜ ಬ್ರಹ್ಮಾಂಡಗಳಿಂUದ ಒಳಬೀಳುವ ದ್ರವ್ಯವನ್ನು ತನ್ನ ಜೀವನ ಪೂರ್ತಿ ಹೀರಿಕೊಳ್ಳುತ್ತದೆ. ಈ ವಸ್ತು/ದ್ರವ್ಯ ಬಹುತೇಕ ಜಲಜನಕ ಮತ್ತು ಹೀಲಿಯಂ ಆಗಿದೆ. ಈ ಕ್ರಿಯೆ ಮುಂದುವರಿಯುತ್ತದೆ. ಈ ವಿಧನದಲ್ಲಿ ನಾಕ್ಷತ್ರಿಕ ಜನನ ಮರಣಗಳ ಚಕ್ರ ನಿಧಾನವಾಗಿ ಮತ್ತು ಅಂತಿಮವಾಗಿ ಭಾರಿ ಧಾತುಗಳ ಅಧಿಕ ಉತ್ಪಾದನೆಗೆ ಅವಕಾಶ ಮಾಡಿಕೊಟ್ಟು ಗ್ರಹಗಳ ರಚನೆಗೆ ಕರಣವಾಗುತ್ತದೆ.[೩೦]
- ಬ್ರಹ್ಮಾಂಡಗಳ ವಿಲೀನಗಳು ಆರಂಭಿಕ ಯುಗದಲ್ಲಿ ಸಾಮಾನ್ಯವಾಗಿದ್ದವು. ಆಕಾಶಗಂಗೆ ಬ್ರಹ್ಮಾಂಡ ಮತ್ತು ಹತ್ತಿರದ ಆಂಡ್ರೊಮಿಡಾ ನಕ್ಷತ್ರಪುಂಜಗಳು ಸುಮಾರು ಸೆಕೆಂಡಿಗೆ 130 ಕಿ.ಮೀ. ವೇಗದಲ್ಲಿ ಪರಸ್ಪರ ಹತ್ತಿರ ಚಲಿಸುತ್ತಿವೆ. ಅವುಗಳ ಪಾರ್ಶ್ವದ ಮೇಲಿನ ಚಲನೆಗಳನ್ನು ಅವಲಂಬಿಸಿ ಎರಡೂ, ಸುಮಾರು ಐದು ಆರು ಬಿಲಿಯನ್ ವರ್ಷಗಳಲ್ಲಿ ಡಿಕ್ಕಿ ಯಾಗಬಹುದು. ನಮ್ಮ ಕ್ಷೀರಪಥವು ಆಂಡ್ರೊಮಿಡಾದಂಥ ದೊಡ್ಡ ಗ್ಯಾಲಕ್ಸಿಗೆ ಮೊದಲು ಡಿಕ್ಕಿಯಾಗದಿದ್ದರೂ ಕ್ಷೀರಪಥದ ಘರ್ಷಣೆಗೆ ಕಳೆದ ಸಣ್ಣ ಕುಬ್ಜ ಬ್ರಹ್ಮಾಂಡದ ಜೊತೆ ಡಿಕ್ಕಿಯಾದ ಪುರಾವೆ ಇದೆ. ಇಂತಹ ದೊಡ್ಡ ಪ್ರಮಾಣದ ಪರಸ್ಪರ ಘರ್ಷಣೆ ಅಪರೂಪ. ಸಮಯ ಕಳೆದಂತೆ, ಸಮಾನ ಗಾತ್ರದ ಎರಡು ವ್ಯವಸ್ಥೆಗಳ ವಿಲೀನಗಳು ಸರ್ವೇ ಸಾಮಾನ್ಯವಾಗಿದೆ.
ವಿಸ್ತರಣೆಯಾಗುವ ಬ್ರಹ್ಮಾಂಡದ ಭವಿಷ್ಯ: ಭವಿಷ್ಯದ ಪ್ರವೃತ್ತಿಗಳು
[ಬದಲಾಯಿಸಿ]- ನಮ್ಮ ಕ್ಷೀರಪಥದಂತಿರುವ ಸುರಳಿ ಬ್ರಹ್ಮಾಂಡಗಳು ತಮ್ಮ ಸುರುಳಿ ಬಾಹುಗಳಲ್ಲಿ ದಟ್ಟವಾದ ಆಣ್ವಿಕ ಮೇಘಗಳನ್ನೂ, ಅಂತರತಾರಾ ನಕ್ಷತ್ರಗಳ ಹೈಡ್ರೋಜನ್'ನ್ನೂ ಹೊಂದಿರುವವರೇಗೆ ಅವು ಹೊಸ ಪೀಳಿಗೆಗಳ ಉತ್ಪತ್ತಿಗೆ ಕಾರಣವಾಗುತ್ತವೆ. ಆಂಡಾಕಾರದ ಅಥವಾ ಧೀರ್ಘವೃತ್ತಾಕಾರದ ಬ್ರಹ್ಮಾಂಡಗಳು (ಇಲಿಪ್ಟಿಕಲ್ ಗೆಲಕ್ಸಿಗಳು) ಹೆಚ್ಚಾಗಿ ಈ ಅನಿಲ ರಹಿತವಾಗಿವೆ. ಆದರೂ ಅವು ಕೆಲವು ಹೊಸ ನಕ್ಷತ್ರಗಳನ್ನು ರೂಪಿಸುತ್ತವೆ. ನಕ್ಷತ್ರ ರಚನೆಗೆ ಅಗತ್ಯವಾದ ದ್ರವ್ಯಗಳ ಪೂರೈಕೆ ಅಸೀಮಿತವಾಗಿದೆ (ಮಿತಿ ಇಲ್ಲ). ಒಮ್ಮೆ ನಕ್ಷತ್ರಗಳು ಜಲಜನಕದ ಪೂರೈಕೆಯನ್ನು ಭಾರೀ ಧಾತುಗಳಾಗಿ ಪರಿವರ್ತಿಸಿದ್ದಾದರೆ, ಹೊಸ ನಕ್ಷತ್ರ ರಚನೆಯ ಕ್ರಿಯೆ ಅಂತ್ಯವಾಗುತ್ತದೆ.
- ನಕ್ಷತ್ರ ರಚನೆಯ ಈಗಿನ ಯುಗ ಇನ್ನೂ ನೂರು ಶತಕೋಟಿ ವರ್ಷಗಳ ವರೆಗೆ ಮುಂದುವರೆಯುವ ನಿರೀಕ್ಷೆ ಇದೆ, ಮತ್ತು ನಂತರ "ನಾಕ್ಷತ್ರಿಕ ಯುಗ" ಸುಮಾರು ಹತ್ತು ಟ್ರಿಲಿಯನ್ ನಿಂದ ನೂರು ಟ್ರಿಲಿಯನ್ ವರ್ಷಗಳಿಗೆ (1013-1014 ವರ್ಷಗಳ ಕಾಲಕ್ಕೆ) ಕುಗ್ಗುವುದು., ಎಕೆಂದರೆ ಚಿಕ್ಕ, ಮತ್ತು, ಸಣ್ಣ ಕೆಂಪು ಕುಬ್ಜಗಳು ಮಸುಕಾಗಲು ಆರಂಭಿಸುವುವು ಎಂದು ನಿರೀಕ್ಷಿಸಲಾಗಿದೆ. ಈ ನಾಕ್ಷತ್ರಿಕಯುಗದ ಕೊನೆಯಲ್ಲಿ ಬ್ರಹ್ಮಾಂಡಗಳು ಸಾಂದ್ರ ವಸ್ತುಗಳನ್ನು ಹೊಂದಿರುತ್ತವೆ. ನಮ್ಮ ಬ್ರಹ್ಮಾಂಡದ ನಕ್ಷತ್ರಗಳು,ಅಂದರೆ ಬ್ರೌನ್ ಡ್ವಾರ್ಪ್, ಶ್ವೇತ ಕುಬ್ಜ ("ಕಪ್ಪು ಕುಬ್ಜ") ಶೀತ ಕುಬ್ಜ ನಕ್ಷತ್ರಗಳು, ನ್ಯೂಟ್ರಾನ್ ನಕ್ಷತ್ರಗಳು ಮತ್ತು ಕಪ್ಪು ಕುಳಿಗಳು ಸಾಂದ್ರ ವಸ್ತುಗಳನ್ನು ಹೊಂದಿರುತ್ತವೆ. ಅಂತಿಮವಾಗಿ, ಗುರುತ್ವ ವಿಶ್ರಾಂತಿ ಪರಿಣಾಮವಾಗಿ(? ಗುರತ್ವವಿಲ್ಲದ ಸ್ಥಿತಯೇ) ಎಲ್ಲಾ ನಕ್ಷತ್ರಗಳು ಕೇಂದ್ರದ ಅತೀ ಬೃಹತ್ತಾದ ಕಪ್ಪು ಕುಳಿಗಳನ್ನು (supermassive black holes) ಸೇರುತ್ತವೆ ಅಥವಾ ಘರ್ಷಣೆಯ ಪರಿಣಾಮವಾಗಿ ಅಂತರ-ಬ್ರಹ್ಮಾಂಡ (ಇಂಟರ್ ಗ್ಯಾಲಕ್ಟಿಕ್) ಬಾಹ್ಯಾಕಾಶಕ್ಕೆ ಎಸೆಯಲ್ಪಡುತ್ತವೆ (ಒಂದು ತಾತ್ವಿಕ ಊಹೆ?-ಇವೆಲ್ಲಾ ಕೋಟಿ ಕೋಟಿ ವರ್ಷಗಳ ನಂತರ ಘಟಿಸಬಹದಾದ ಘಟನಾವಳಿಗಳ ಊಹೆ) [೩೧][೩೨][೩೩]
ಮಬ್ಬು ಉಪ ತಾರಾಪುಂಜ ಪತ್ತೆ
[ಬದಲಾಯಿಸಿ]- 25 Nov, 2016
- ಟೋಕಿಯೊ: ನಮ್ಮ ತಾರಾಪುಂಜ (ಗೆಲಾಕ್ಸಿ) ಆಕಾಶ ಗಂಗೆಯ ಪ್ರಭಾವಲಯದಲ್ಲಿರುವ ಮಬ್ಬಾದ ಉಪ ಗೆಲಾಕ್ಸಿಯೊಂದನ್ನು (ಸ್ಯಾಟಲೈಟ್ ಗೆಲಾಕ್ಸಿ) ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಆಕಾಶ ಗಂಗೆಯಲ್ಲಿ ಇದುವರೆಗೆ ಪತ್ತೆಯಾಗಿರುವ ಉಪ ಗೆಲಾಕ್ಸಿಗಳಲ್ಲೇ ಇದು ಅತ್ಯಂತ ಮಬ್ಬಾದ (ಅತ್ಯಂತ ಕಡಿಮೆ ಬೆಳಕಿನ) ಕುಬ್ಜ ಗೆಲಾಕ್ಸಿ ಎಂದು ವಿಜ್ಞಾನಿಗಳು ಬಣ್ಣಿಸಿದ್ದಾರೆ. ವರ್ಗೊ ತಾರಾ ಸಮೂಹವಿರುವ ದಿಕ್ಕಿನಲ್ಲೇ ಈ ಉಪ ಗೆಲಾಕ್ಸಿ ಪತ್ತೆಯಾಗಿದೆ. ಇದಕ್ಕೆ ‘ವರ್ಗೊ–1’ ಎಂದು ಹೆಸರಿಡಲಾಗಿದೆ. ಜಪಾನಿನ ಟೊಹೊಕು ವಿಶ್ವವಿದ್ಯಾಲಯದ ಅಧ್ಯಯನಕಾರರು ಈ ಉಪ ಗೆಲಾಕ್ಸಿಯನ್ನು ಪತ್ತೆ ಮಾಡಿದ್ದಾರೆ. ಆಕಾಶ ಗಂಗೆಯ ಪ್ರಭಾವಲಯದಲ್ಲಿ ಇನ್ನೂ ಪತ್ತೆಯಾಗದ ಹಲವು ಕುಬ್ಜ ಉಪ ತಾರಾಪುಂಜಗಳು ಇರಬಹುದು ಎಂದು ಅವರು ಶಂಕಿಸಿದ್ದಾರೆ.
- ಹಿಂದೆ ಇಂತಹ ನಕ್ಷತ್ರ ಪುಂಜಗಳನ್ನು ಹುಡುಕುವಾಗ 2.5 ಮೀಟರ್ಗಳಿಂದ ನಾಲ್ಕು ಮೀಟರ್ಗಳವರೆಗೆ ವ್ಯಾಸ ಹೊಂದಿರುವ ದೂರದರ್ಶಕಗಳನ್ನು ಬಳಸಲಾಗುತ್ತಿತ್ತು. ಹಾಗಾಗಿ ಸೂರ್ಯನಿಗೆ ಸಮೀಪದಲ್ಲಿದ್ದ ಮತ್ತು ಬೆಳಕಿನ ತೀವ್ರತೆ ಹೆಚ್ಚಿದ್ದ ಉಪ ಗೆಲಾಕ್ಸಿಗಳು ಮಾತ್ರ ಪತ್ತೆಯಾಗುತ್ತಿದ್ದವು. ಆದರೆ, ಜಪಾನಿನ ವಿಜ್ಞಾನಿಗಳು 8.2 ಮೀಟರ್ ವ್ಯಾಸ ಹೊಂದಿರುವ ಸುಬರು ದೂರದರ್ಶಕದ ಹೈಪರ್ ಸುಪ್ರೈ ಕ್ಯಾಮ್ (ಎಚ್ಎಸ್ಸಿ) ಬಳಸಿದ್ದರಿಂದ ಆಗಸದಲ್ಲಿ ಹೆಚ್ಚು ವಿಸ್ತಾರವಾದ ವ್ಯಾಪ್ತಿಯಲ್ಲಿ ಕುಬ್ಜ ಗೆಲಾಕ್ಸಿಗಳನ್ನು ಹುಡುಕಲು ಸಾಧ್ಯವಾಗಿದೆ.
ವಿವರ:
[ಬದಲಾಯಿಸಿ]- ವರ್ಗೊ–1: ಪತ್ತೆಯಾದ ಉಪ ಗೆಲಾಕ್ಸಿ ಹೆಸರು
- 2.8 ಲಕ್ಷ ಜ್ಯೋತಿರ್ವರ್ಷ: ಉಪ ಗೆಲಾಕ್ಸಿಯು ಸೂರ್ಯನಿಂದ ಇರುವ ದೂರ
- ಸೇಗ್–1’: ಇದುವರೆಗೆ ಕಂಡು ಬಂದಿದ್ದ ಅತಿ ಮಬ್ಬಾದ ಕುಬ್ಜ ಉಪ ಗೆಲಾಕ್ಸಿ
- ಜಪಾನಿನ ಟೊಹೊಕು ವಿ.ವಿಯ ಡೈಸುಕೆ ಹೊಮ್ಮ ಎಂಬ ಪದವಿ ವಿದ್ಯಾರ್ಥಿ ಮಸಾಶಿ ಚಿಬಾ ಮಾರ್ಗದರ್ಶನದಲ್ಲಿ ‘ವರ್ಗೊ–1’ ಪತ್ತೆ ಮಾಡಿದ್ದಾರೆ.
ಉಪಯೋಗ:
[ಬದಲಾಯಿಸಿ]- ಈ ಸಂಶೋಧನೆಯು ತಾರಾಪುಂಜಗಳ ಸೃಷ್ಟಿ ಮತ್ತು ಅವುಗಳ ಉಗಮಕ್ಕೆ ಕಪ್ಪು ದ್ರವ್ಯಗಳು (ಡಾರ್ಕ್ ಮ್ಯಾಟರ್) ಹೇಗೆ ನೆರವಾಗುತ್ತವೆ ಎಂಬುದರ ಬಗ್ಗೆ ಮಹತ್ವದ ಮಾಹಿತಿಗಳನ್ನು ನೀಡಲಿವೆ ಎಂದು ವಿಜ್ಞಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
50ಕ್ಕೂ ಹೆಚ್ಚು ಗೆಲಾಕ್ಸಿಗಳು:
[ಬದಲಾಯಿಸಿ]- ಪ್ರಸ್ತುತ, ಆಕಾಶ ಗಂಗೆಯ ವ್ಯಾಪ್ತಿಯಲ್ಲಿ 50 ಉಪ ಗೆಲಾಕ್ಸಿಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ 40 ಗೆಲಾಕ್ಸಿ ಮಬ್ಬಾಗಿವೆ ಮತ್ತು ಚದುರಿಕೊಂಡಿವೆ. ಇವುಗಳೆಲ್ಲ ‘ಕುಬ್ಜ ಅಂಡಗೋಳ (ಪೂರ್ಣವಾಗಿ ಗೋಳಾಕಾರದಲ್ಲಿ ಇಲ್ಲದಿರುವ ಸ್ಥಿತಿ) ಗೆಲಾಕ್ಸಿ’ಗಳಾಗಿವೆ.
ಉಪ ಗೆಲಾಕ್ಸಿ:
[ಬದಲಾಯಿಸಿ]- ಇವು ಕೂಡ ತಾರಾಪುಂಜಗಳೇ. ಆದರೆ, ತಮಗಿಂತ ದೊಡ್ಡ ತಾರಾಪುಂಜಗಳ ಸುತ್ತ ಸುತ್ತುತ್ತವೆ. ಈ ಸುತ್ತುವಿಕೆಗೆ ದೊಡ್ಡ ತಾರಾಪುಂಜಗಳ ಗುರುತ್ವಾಕರ್ಷಣೆ ಶಕ್ತಿ ಕಾರಣ.
400 ದಶಲಕ್ಷ ಜ್ಯೋತಿರ್ವರ್ಷ ದೂರದ ಗ್ಯಾಲಕ್ಸಿ
[ಬದಲಾಯಿಸಿ]- 4 Mar, 2017;
- ಪ್ರತಿ ಸಕೆಂಡ್ಗೆ 8 ಕಿ.ಮೀ. ವೇಗ, ಪ್ರತಿ 97 ನಿಮಿಷಗಳಿಗೊಮ್ಮೆ ಭೂಮಿಯ ಪರಿಭ್ರಮಣೆ ನಡೆಸುತ್ತಿರುವ ಹಬಲ್ ಬಾಹ್ಯಾಕಾಶ ದೂರದರ್ಶಕವು ದಟ್ಟ ಗ್ಯಾಲಕ್ಸಿಯ ಚಿತ್ರವನ್ನು ಸೆರೆ ಹಿಡಿದಿದೆ. ಭೂಮಿಯ ದಟ್ಟ ವಾತಾವರಣದ ಹೊರಗೆ ಕೃತಕ ಉಪಗ್ರಹದಂತೆ ಧರೆಯನ್ನು ಪರಿಭ್ರಮಿಸುತ್ತ ವ್ಯೋಮ–ವೀಕ್ಷಣೆ ನಡೆಸುತ್ತಿರುವ ಹಬಲ್ ಬಾಹ್ಯಾಕಾಶ ದೂರದರ್ಶಕ ದಟ್ಟವಾದ ಗ್ಯಾಲಕ್ಸಿಯ ಚಿತ್ರವನ್ನು ಸೆರೆ ಹಿಡಿದಿದೆ.
- ‘ಯುಜಿಸಿ 12591’ ಎಂದು ಹೆಸರಿಸಲಾಗಿರುವ ಗ್ಯಾಲಕ್ಸಿ ಮತ್ತು ಅದರ ಪ್ರಭಾವಲಯವು ಸೂರ್ಯನಿಗಿಂತ ನೂರಾರು ಕೋಟಿ ಪಟ್ಟು ಅಧಿಕ ರಾಶಿ ಹೊಂದಿದೆ. ಇದು ನಮ್ಮ ನಕ್ಷತ್ರ ಪುಂಜ ‘ಕ್ಷೀರ ಪಥ’ಕ್ಕಿಂತ ನಾಲ್ಕು ಪಟ್ಟು ದಟ್ಟವಾಗಿದೆ ಎಂದು ನಾಸಾ ಪ್ರಕಟಣೆ ತಿಳಿಸಿದೆ.
- ಈ ಗ್ಯಾಲಕ್ಸಿ ಭೂಮಿಯಿಂದ 400 ದಶಲಕ್ಷ ಜ್ಯೋತಿರ್ವರ್ಷ ದೂರದಲ್ಲಿದ್ದು, ಗಂಟೆಗೆ 1.8 ದಶಲಕ್ಷ ಕಿ.ಮೀ. ವೇಗದಲ್ಲಿ ತಿರುಗುತ್ತಿದೆ. ನಾಸಾ ಮತ್ತು ಯುರೋಪಿಯನ್ ಸ್ಪೇಸ್ ಏಜೆನ್ಸಿ(ಇಎಸ್ಎ) ಸಹಯೋಗದ ಹಬಲ್ ಬಾಹ್ಯಾಕಾಶ ದೂರದರ್ಶಕವು ಸೆರೆ ಹಿಡಿದಿರುವ ಚಿತ್ರದಿಂದ ಹೆಚ್ಚಿನ ಅಧ್ಯಯನ ಸಾಧ್ಯವಾಗಲಿದೆ. ಗ್ಯಾಲಕ್ಸಿ ರೂಪಗೊಂಡಿರುವ ಬಗೆಗಿನ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಸುಲಭವಾಗಲಿದೆ.[೩೬]
- ಖಗೋಳಶಾಸ್ತ್ರಜ್ಞರು ಬಿಗ್ ಬ್ಯಾಂಗ್ನ ಎರಡು ಶತಕೋಟಿ ವರ್ಷಗಳ ನಂತರ, ಮುಂಚಿನ ವಿಶ್ವದಲ್ಲಿ ಕಂಡುಬಂದ ಇನ್ನೂ ದೊಡ್ಡ ಮತ್ತು ಅತಿ ದೊಡ್ಡ ಗ್ಯಾಲಕ್ಸಿ ಸೂಪರ್ ಕ್ಲಸ್ಟರ್ ಅನ್ನು ಅಕ್ಟೋಬರ್ 2018ರಲ್ಲಿ ಕಂಡುಹಿಡಿದಿದ್ದಾರೆ. ಗ್ಯಾಲಕ್ಸಿ ಪ್ರೊಟೊ-ಸೂಪರ್ಕ್ಲಸ್ಟರ್, ಹೈಪರಿಯನ್ ಎಂಬ ಅಡ್ಡಹೆಸರು[೩೭]
ಭೂಮಿಯನ್ನು ಹೋಲುವ ಏಳು ಗ್ರಹಗಳನ್ನು ಪತ್ತೆ ಮಾಡಿದ ನಾಸಾ
[ಬದಲಾಯಿಸಿ]- 23 Feb, 2017;
- ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಸೌರಮಂಡಲದಾಚೆ ಇನ್ನೊಂದು ಸೌರಮಂಡಲವನ್ನು ಪತ್ತೆ ಹಚ್ಚಿದೆ. ಈ ಸೌರಮಂಡಲದಲ್ಲಿ ಭೂಮಿಯಂತೆ ಇರುವ 7 ಗ್ರಹಗಳನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದು, ವಾಸಯೋಗ್ಯ ಗ್ರಹಗಳು ಎಷ್ಟಿವೆ ಎಂಬುದರ ಬಗ್ಗೆ ಸಂಶೋಧನೆ ನಡೆಸಲಾಗುತ್ತಿದೆ.
- ನಮ್ಮ ಸೌರಮಂಡಲದಂತೆಯೇ ಇರುವ ಈ ಹೊಸ ಸೌರಮಂಡಲದಲ್ಲಿ ಕುಬ್ಜ ನಕ್ಷತ್ರದ ಸುತ್ತುವ ಏಳು ಗ್ರಹಗಳನ್ನು ಪತ್ತೆ ಹಚ್ಚಿದ್ದು, ಇವುಗಳಲ್ಲಿ ಕೆಲವು ಗ್ರಹಗಳು ವಾಸಯೋಗ್ಯ ವಾತಾವರಣವನ್ನು ಹೊಂದಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಏಳು ಗ್ರಹಗಳ ಪೈಕಿ ಮೂರು ಗ್ರಹಗಳಲ್ಲಿ ಜೀವಿಗಳು ವಾಸಿಸಲು ಯೋಗ್ಯವಾದ ವಾತಾವರಣವಿದ್ದು, ಇಲ್ಲಿ ನೀರಿನ ಸೆಲೆ ಕಂಡು ಬಂದಿದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ.
- ಸೂರ್ಯನಿಗಿಂತ 200 ಪಟ್ಟು ಕಾಂತಿಹೀನವಾಗಿರುವ ನಕ್ಷತ್ರವೊಂದರ ಸುತ್ತಲೂ ಈ ಗ್ರಹಗಳು ತಿರುಗುತ್ತಿವೆ. ಭೂಮಿಯಿಂದ ಸುಮಾರು 40 ಜೋತಿರ್ ವರ್ಷಗಳಷ್ಟು ದೂರವಿರುವ ಸೌರಮಂಡಲವನ್ನು ಹೋಲುವ ಈ ಸೌರಮಂಡಲದ ಕೇಂದ್ರ ಬಿಂದುವಾದ ಕುಬ್ಜ ನಕ್ಷತ್ರಕ್ಕೆ ತ್ರಪ್ಪಿಸ್ಟ್ (Trappist-1) ಎಂದು ಹೆಸರಿಡಲಾಗಿದೆ. 1 ನಕ್ಷತ್ರದ ಸುತ್ತಲೂ ಭೂಮಿಯಂತೆ ಇರುವ ಏಳು ಗ್ರಹಗಳು ಸುತ್ತುತ್ತಿವೆ. Trappist-1 ನಮ್ಮ ಸೂರ್ಯನಂತೆ ಕೇಂದ್ರ ಸ್ಥಾನದಲ್ಲಿದ್ದರೆ, ಸೌರಮಂಡಲದಲ್ಲಿ ಬುಧಗ್ರಹದ ಕಕ್ಷೆಯಷ್ಟು ಪರಿಧಿಯಲ್ಲಿ ಈ ಗ್ರಹಗಳು ಸ್ಥಿತಿಗೊಂಡಿವೆ. ಈ ಗ್ರಹಗಳನ್ನು ಸದ್ಯಕ್ಕೆ b,c,d,e,f,g,h ಎಂದು ಹೆಸರಿಸಲಾಗಿದ್ದು ಕೇಂದ್ರ ಬಿಂದುವಾದ ನಕ್ಷತ್ರಕ್ಕೆ A ಎಂದು ಹೆಸರಿಡಲಾಗಿದೆ.[೩೮]
'ಸರಸ್ವತಿ’ ನಕ್ಷತ್ರಪುಂಜಗಳ ಮಹಾಸಮೂಹ ಪತ್ತೆ
[ಬದಲಾಯಿಸಿ]- 14 Jul, 2017;
- ಭಾರತದ ಖಭೌತ ವಿಜ್ಞಾನಿಗಳು ನಕ್ಷತ್ರಪುಂಜಗಳ (ಗೆಲಾಕ್ಸಿ) ಮಹಾ ಸಮೂಹವೊಂದನ್ನು ಪತ್ತೆ ಮಾಡಿದ್ದಾರೆ. ಇದು ಭೂಮಿಯಿಂದ 400 ಕೋಟಿ ಜ್ಯೋತಿರ್ವರ್ಷಗಳಷ್ಟು (1 ಜ್ಯೋತಿರ್ವರ್ಷ= ಒಂದು ವರ್ಷದಲ್ಲಿ ಬೆಳಕಿನ ಕಿರಣ ಸಾಗುವ ದೂರ) ದೂರದಲ್ಲಿದೆ. ತಾರಾಪುಂಜಗಳ ಈ ಮಹಾಸಮೂಹವನ್ನು ‘ಸರಸ್ವತಿ’ ಎಂದು ಹೆಸರಿಸಲಾಗಿದೆ. ಇದು ವಿಶ್ವದಲ್ಲಿರುವ ಅತ್ಯಂತ ಬೃಹತ್ತಾದ ಸಮೂಹಗಳಲ್ಲಿ ಒಂದು. ಇದು ಮೀನಾ ನಕ್ಷತ್ರಪುಂಜದ ದಿಕ್ಕಿನಲ್ಲಿ ಇದೆ.
- ಈ ಮಹಾ ಸಮೂಹದಲ್ಲಿ ಕನಿಷ್ಠ 40 ನಕ್ಷತ್ರಪುಂಜಗಳ ಗುಂಪುಗಳಿವೆ ಮತ್ತು 10 ಸಾವಿರಕ್ಕೂ ಹೆಚ್ಚು ನಕ್ಷತ್ರಪುಂಜಗಳಿವೆ. ಇಷ್ಟೊಂದು ದೊಡ್ಡ ಸಮೂಹ ಈ ವಿಶ್ವದಲ್ಲಿ ಇದೆ ಎಂಬ ಕಲ್ಪನೆಯೇ 10–15 ವರ್ಷಗಳ ಹಿಂದೆ ಇರಲಿಲ್ಲ ಎಂದು ಈ ಶೋಧ ನಡೆಸಿರುವ ಪುಣೆಯ ಇಂಟರ್ ಯೂನಿವರ್ಸಿಟಿ ಸೆಂಟರ್ ಫಾರ್ ಆಸ್ಟ್ರಾನಮಿಯ ತಂಡದ ಮುಖ್ಯಸ್ಥ ಪ್ರೊ. ಸೊಮಕ್ ರಾಯ್ಚೌಧರಿ ಹೇಳಿದ್ದಾರೆ.
- ವಿಶ್ವ ಹೇಗೆ ಸೃಷ್ಟಿಯಾಯಿತು ಎಂಬ ಬಗೆಗಿನ ಜನಪ್ರಿಯ ಸಿದ್ಧಾಂತಗಳು ‘ಸರಸ್ವತಿ’ಯಂತಹ ಬೃಹತ್ ಸಮೂಹದ ಅಸ್ತಿತ್ವವನ್ನು ಕಲ್ಪಿಸಿಕೊಂಡಿರಲೇ ಇಲ್ಲ. ಹಾಗಾಗಿ ವಿಶ್ವದ ಸೃಷ್ಟಿಯ ಬಗೆಗಿನ ಹೊಸ ಸಿದ್ಧಾಂತಗಳ ಬಗ್ಗೆ ಚಿಂತನೆ ನಡೆಸಲು ಇದು ಅವಕಾಶ ಒದಗಿಸಿಕೊಡಲಿದೆ.[೩೯]
ಬ್ರಹ್ಮಾಂಡದ ಬಗೆಗೆ ಕವಿ
[ಬದಲಾಯಿಸಿ]*ಕವಿಯ ವಿಶ್ವದ ಕಲ್ಪನೆ
|
ನೋಡಿ
[ಬದಲಾಯಿಸಿ]ಹೊರ ಸಂಪರ್ಕ
[ಬದಲಾಯಿಸಿ]- [[೫]] Stephen Hawking warns against seeking out aliens;PTI,London|Sep 25, 2016
- ಸೌರಜ್ವಾಲೆಗಿಂತ ಸಾವಿರ ಕೋಟಿ ಹೆಚ್ಚು ಶಕ್ತಿಶಾಲಿ ಜ್ವಾಲೆ-
ಆಧಾರ
[ಬದಲಾಯಿಸಿ]- 1. ಜಗತ್ತುಗಳ ಹುಟ್ಟು ಸಾವು, ಲೇಖಕ:ಆರ್.ಎಲ್.ನರಸಿಂಹಯ್ಯ. ಪ್ರಾದ್ಯಾಪಕರು, ಸೆಂಟ್ರಲ್' ಕಾಲೇಜು ಬೆಂಗಳೂರು.ಪ್ರಕಟಣೆ ಕಾವ್ಯಾಲಯ ಮೈಸೂರು.
ಉಲ್ಲೇಖ
[ಬದಲಾಯಿಸಿ]- ↑ http://asd.gsfc.nasa.gov/blueshift/index.php/2015/07/22/how-many-stars-in-the-milky-way/
- ↑ https://web.archive.org/web/20140723213047/http://hubblesite.org/newscenter/archive/releases/2012/07/full/
- ↑ http://www.space.com/29270-milky-way-size-larger-than-thought.html
- ↑ http://www.huffingtonpost.com/entry/number-of-stars-in-the-milky-way_b_4976030.html?section=india
- ↑ https://arxiv.org/abs/1408.1787
- ↑ http://www.britannica.com/place/Milky-Way-Galaxy
- ↑ ಜಗತ್ತುಗಳ ಹುಟ್ಟು ಮತ್ತು ಸಾವು -ಆರ್.ಎಲ್. ನರಸಿಂಹಯ್ಯ ಸೆಂಟ್ರಲ್ ಕಾಲೇಜು ಮೈಸೂರು ಭೌತ ಶಾಸ್ತ್ರ ವಿಭಾಗ (೧೯೫೨)
- ↑ https://web.archive.org/web/20140813125916/http://hypertextbook.com/facts/2000/AlinaVayntrub.shtml
- ↑ WordWeb
- ↑ https://web.archive.org/web/20120729081504/http://www.star.le.ac.uk/edu/Elliptical.shtml
- ↑ Knapen, J. H.; Perez-Ramirez, D.; Laine,S.(2002)."Circumnuclear regions in barred spiral galaxies — II. Relations to host galaxies"
- ↑ Phelps, Steven; et al. (October 2013). "The Mass of the Milky Way and M31 Using the Method of Least Action"
- ↑ "ಆರ್ಕೈವ್ ನಕಲು". Archived from the original on 2011-02-22. Retrieved 2011-02-22.
- ↑ https://web.archive.org/web/20120227172628/http://www.star.le.ac.uk/edu/Irregular.shtml
- ↑ http://www.sciencemag.org/news/2008/08/no-slimmi[ಶಾಶ್ವತವಾಗಿ ಮಡಿದ ಕೊಂಡಿ] ಡ್ವಾರ್ಫ್ ಗೆಲಕ್ಸಿ
- ↑ http://astronomy.swin.edu.au/cosmos/I/Interacting+Galaxies
- ↑ http://www.astr.ua.edu/keel/galaxies/agnintro.html
- ↑ http://casswww.ucsd.edu/archive/public/tutorial/Starbursts.html
- ↑ http://chandra.harvard.edu/xray_sources/starburst.html Kennicutt Jr., R. C.; et al. (2005). Demographics and Host Galaxies of Starbursts.
- ↑ Starbursts: From 30 Doradus to Lyman Break Galaxies
- ↑ http://www.astr.ua.edu/keel/galaxies/starburst.html
- ↑ 4 July 2011.[[ಶಾಶ್ವತವಾಗಿ ಮಡಿದ ಕೊಂಡಿ]]
- ↑ June 18, 2015 (EDT/Hubble Sees the 'Teenage Years' of Quasars/ Greenstein, Jesse L.; Schmidt, Maarten (1964).
- ↑ "The Quasi-Stellar Radio Sources 3C 48 and 3C 273". The Astrophysical Journal 140: 1./
- ↑ "ಆರ್ಕೈವ್ ನಕಲು" (PDF). Archived from the original on 2016-03-21. Retrieved 2016-04-20.
- ↑ "ಆರ್ಕೈವ್ ನಕಲು". Archived from the original on 2019-01-08. Retrieved 2016-04-20.
- ↑ http://www.eso.org/public/news/eso1431/
- ↑ http://www.space.com/18879-hubble-most-distant-galaxy.html
- ↑ Most distant massive galaxy cluster identified)[[೧]]
- ↑ How are galaxies made [[೨]]
- ↑ name="cosmic_battle"
- ↑ Physics offers glimpse into the dark side of the Universe
- ↑ "ಆರ್ಕೈವ್ ನಕಲು". Archived from the original on 2012-06-04. Retrieved 2016-04-22.
- ↑ "ಆರ್ಕೈವ್ ನಕಲು". Archived from the original on 2016-03-05. Retrieved 2016-04-22.
- ↑ "ಮಬ್ಬು ಉಪ ತಾರಾಪುಂಜ ಪತ್ತೆ;25 Nov, 2016". Archived from the original on 2016-11-29. Retrieved 2016-12-02.
- ↑ 400 ದಶಲಕ್ಷ ಜ್ಯೋತಿರ್ವರ್ಷ ದೂರದ ಗ್ಯಾಲಕ್ಸಿ ಚಿತ್ರ ಸೆರೆ ಹಿಡಿದ ‘ಹಬಲ್’;ಏಜೆನ್ಸಿಸ್;4 Mar, 2017
- ↑ 'Largest galaxy cluster in early universe found' Press Trust of India, Los Angeles, OCT 18 2018,
- ↑ ಭೂಮಿಯನ್ನು ಹೋಲುವ ಏಳು ಗ್ರಹಗಳನ್ನು ಪತ್ತೆ ಮಾಡಿದ ನಾಸಾ
- ↑ "'ಸರಸ್ವತಿ' ನಕ್ಷತ್ರಪುಂಜಗಳ ಮಹಾಸಮೂಹ ಪತ್ತೆ;ಪ್ರಜಾವಾಣಿ ವಾರ್ತೆ;14 Jul, 2017". Archived from the original on 2017-07-15. Retrieved 2017-07-16.