ಕನ್ಯಾರಾಶಿ
ಕನ್ಯಾರಾಶಿ ಆಕಾಶದಲ್ಲಿರುವ 88 ನಕ್ಷತ್ರಪುಂಜಗಳಲ್ಲಿ ಒಂದು (ವರ್ಗೊ). ವಿಷುವದಂಶ 11 ಗಂ. 35 ಮಿ-15ಗಂ. ಮೊ. ಘಂಟಾವೃತ್ತಾಂಶ 15o ಉ-22o ದ. ಪ್ರಧಾನ ನಕ್ಷತ್ರ ಚಿತ್ತಾ. ಸಪ್ತರ್ಷಿಮಂಡಲದ ವಕ್ರರೇಖೆಯನ್ನು ಸರಾಗವಾಗಿ ಪುರ್ವ-ದಕ್ಷಿಣ ದಿಕ್ಕಿಗೆ ವಿಸ್ತರಿಸಿದಾಗ ಮೊದಲು ಎದುರಾಗುವ ಉಜ್ಜ್ವಲ ಕೆಂಪು ನಕ್ಷತ್ರ ಸ್ವಾತೀ; ತರುವಾಯ ನೀಲಿ ಬಣ್ಣದ ಚಿತ್ತಾ; ಮುಂದೆ ನಾಲ್ಕು ನಕ್ಷತ್ರಗಳು ರಚಿಸುವ ಸ್ಪಷ್ಟ ಚತುಷ್ಕೋನಾಕೃತಿಯಲ್ಲಿ (ಹಸ್ತಾ) ಈ ರೇಖೆ ಅಂತ್ಯವಾಗುವುದು. ರಾಶಿಚಕ್ರ ಮತ್ತು ವಿಷುವದ್ವೃತ್ತ ಇವೆರಡರ ಮೇಲೆಯೂ ಕನ್ಯಾರಾಶಿ ಇದೆ. ಸೂರ್ಯ]ನ ವಾರ್ಷಿಕ ಭೂಪರಿಭ್ರಮಣೆಯಲ್ಲಿ ಕನ್ಯಾರಾಶಿ ಒಂದು ಗಡಿ ಬಿಂದಿ-ಇಲ್ಲಿ ಸೂರ್ಯ ವಿಷುವದ್ವೃತ್ತ ಉತ್ತರದಿಂದ ದಕ್ಷಿಣಕ್ಕೆ ಅಡ್ಡಹಾಯುತ್ತದೆ (ಸು. ಸೆಪ್ಟಂಬರ್ 23). ಮುಂದಿನ ದಿವಸಗಳಲ್ಲಿ (ಮಾರ್ಚ್ 21ರ ವರೆಗೆ ಸೂರ್ಯ ದಕ್ಷಿಣಾರ್ಧ ಗೋಳದಲ್ಲಿಯೇ ಇರುವುದರಿಂದ ಉತ್ತರಾರ್ಧಗೋಳದ ಜನರಿಗೆ (ಉದಾಹರಣೆಗೆ ಭಾರತ) ಹಗಲಿನ ಉದ್ದ ರಾತ್ರಿಗಿಂತ ಕಿರಿದು. ಅನೇಕ ರೇಡಿಯೋ ಮತ್ತು ಎಕ್ಸ್ ಕಿರಣಾಕರಗಳನ್ನು ಕನ್ಯಾರಾಶಿಯಲ್ಲಿ ಗುರುತಿಸಲಾಗಿದೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- The Deep Photographic Guide to the Constellations: Virgo
- Star Tales – Virgo
- Virgo Constellation at Constellation Guide