ವಿಷಯಕ್ಕೆ ಹೋಗು

ಬೆಳ್ತಂಗಡಿ ಚರ್ಚ್

ನಿರ್ದೇಶಾಂಕಗಳು: 12°59′35.7″N 75°16′06.6″E / 12.993250°N 75.268500°E / 12.993250; 75.268500
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

12°59′35.7″N 75°16′06.6″E / 12.993250°N 75.268500°E / 12.993250; 75.268500

ಅತಿ ಪವಿತ್ರ ರಕ್ಷಕ ಯೇಸು ಚರ್ಚು
ಅತಿ ಪವಿತ್ರ ರಕ್ಷಕ ಯೇಸು ಚರ್ಚು ಮುಂಭಾಗದ ಚಿತ್ರ
Lua error in ಮಾಡ್ಯೂಲ್:Location_map at line 526: Unable to find the specified location map definition: "Module:Location map/data/ಭಾರತ ಕರ್ನಾಟಕ" does not exist.
12°59′36″N 75°16′06″E / 12.993321°N 75.26839°E / 12.993321; 75.26839
Denominationರೋಮನ್ ಕಥೊಲಿಕ್ (Latin rite)
History
Founded೧೮೮೫
Architecture
Architect(s)Melvin Correa
Administration
Parishಅತಿ ಪವಿತ್ರ ರಕ್ಷಕ ಯೇಸು, ಬೆಳ್ತಂಗಡಿ
Deaneryಬೆಳ್ತಂಗಡಿ ನಿಕಾಯ
Archdioceseಬೆಂಗಳೂರು ಮಹಾಧರ್ಮಪ್ರಾಂತ್ಯ
Dioceseರೋಮನ್ ಕಥೋಲಿಕ ಧರ್ಮಪ್ರಾಂತ್ಯ, ಮಂಗಳೂರು
Districtದಕ್ಷಿಣ ಕನ್ನಡ
Clergy
Archbishopಅತಿ ವಂ. ಬರ್ನಾಡ್ ಬ್ಲೇಸಿಯಸ್ ಮೊರಾಸ್
Bishop(s)ವಂ. ಅಲೋಷಿಯಸ್ ಪೌಲ್ ಡಿ'ಸೋಜಾ
Vicar(s)ಅತಿ. ವಂ. ಬೊನವೆಂಚರ್ ನಜ್ರೆತ್

ಅತಿ ಪವಿತ್ರ ರಕ್ಷಕ ಯೇಸು ಒಂದು ಐತಿಹಾಸಿಕ ರೋಮನ್ ಕಥೋಲಿಕ್ ಚರ್ಚು ಆಗಿದ್ದು, ಬೆಳ್ತಂಗಡಿಯಲ್ಲಿದೆ. ಪ್ರಸ್ತುತ ಚರ್ಚು ವಿನ್ಯಾಸವನ್ನು ವಂ. ಜೇಮ್ಸ್ ಡಿ'ಸೋಜಾ ಅವರ ಅಧಿಕಾರಾವಧಿಯಲ್ಲಿ ೨೦೧೨ರಲ್ಲಿ ನಿರ್ಮಿಸಲಾಗಿದೆ. ಇದರ ಮೂಲ ವಿನ್ಯಾಸವನ್ನು, ಈಗಿನ ಚರ್ಚಿನ ಪಕ್ಕದಲ್ಲಿಯೇ ನಿರ್ಮಿಸಲಾಗಿದೆ. ಇದು ಬೆಳ್ತಂಗಡಿ ಯಲ್ಲಿರುವ ಅತ್ಯಂತ ಹಳೇಯ ಚರ್ಚುಗಳಲ್ಲಿ ಒಂದಾಗಿದೆ. ಈ ಚರ್ಚು ಬೆಳ್ತಂಗಡಿ ನಿಕಾಯ ಗಳಲಗಲಿ ಒಂದಾಗಿದ್ದು, ರೋಮನ್ ಕಥೋಲಿಕ ಧರ್ಮಪ್ರಾಂತ್ಯ, ಮಂಗಳೂರುಪ್ರಾಂತ್ಯಕ್ಕೆ ಒಳಪಟ್ಟಿದೆ.

ಇತಿಹಾಸ

[ಬದಲಾಯಿಸಿ]
Old church structure which was built around 1894[] and demolished in December 2012

ಇದರ ಮೊದಲ ವಿನ್ಯಾಸ ಸುಮಾರು ೧೮೮೫ರಲ್ಲಿ ನಿರ್ಮಿಸಲಾಗಿದ್ದು, ಪ್ರಸ್ತುತ ವಿನ್ಯಾಸವು ೩ನೆಯದಾಗಿರುತ್ತದೆ. ಹಳೆಯ ಎರಡು ವಿನ್ಯಾಸಗಳನ್ನು ಕೆಡವಿ ಹಾಕಲಾಗಿದೆ. ೧೬೮೨ರಲ್ಲಿ, ಮರಾಠ ರಾಜ ಸಾಂಬಾಜಿ ಗೋವಾ ಪ್ರದೇಶವನ್ನು ಆಕ್ರಮಿಸದಾಗ, ಕೆಲವು ಕಥೋಲಿಕ ಕುಂಟುಬಸ್ಥರು ಗೋವಾದಲ್ಲಿರುವ ಬರ್ದೇಜ್ ಪ್ರದೇಶದಿಂದ ಪಲಾಯನಗೊಂಡು, ಗಡ್ಡಾಯ್ ಎಂಬ ಪ್ರದೇಶಕ್ಕೆ ಬಂದು, ಅತ್ಯಡ್ಕ ಹಾಗೂ ಬೇಗನ್ ಪ್ರದೇಶಗಳಲ್ಲಿ ನೆಲೆಸಿದರು. ಸುಮಾರು ೧೮೭೦ರಲ್ಲಿ, ವಂ. ವಾಜ್ ಚಾಪೆಲ್-ಅನ್ನು ಇಲ್ಲಿ ಕಟ್ಟಿದರು. ಇದು ಮೂಲತಃ ಆಗ್ರಾರ್ ಚರ್ಚು ಇದರ ಭಾಗವಾಗಿದ್ದು, ಚಾಪೆಲ್ ಅಲ್ಲಿಂದ ಕಾರ್ಯನಿರ್ವಹಿಸುತ್ತಿತ್ತು. ಗೋವಾ-ವೆರಾಪೊಲಿ ಯಲ್ಲಿನ ವಾದ-ವಿವಾದಗಳಿಂದಾಗಿ, ಕೆಲವು ಕುಟುಂಬಗಳು ಆಗ್ರಾರ್ ಚರ್ಚು ನಿಂದ ಸ್ವತಂತ್ರಗೊಂಡು ಸಣ್ಣದೊಂದು ಚಾಪೆಲ್ ಅನ್ನು ಗಡ್ಡಾಯ್ ನಲ್ಲಿ ನಿರ್ಮಿಸಿದರು, ಜಮಲಾಬಾದ್ಕೋಟೆಯ ಹತ್ತಿರದಲಲ್ಇರುವ ಸಣ್ಣ ಹಳ್ಳಿಯಾಗಿದೆ. ಅತ್ಯಡ್ಕವು ಮಲೇರಿಯಾ ಪೀಡಿತ ಪ್ರದೇಶವಾಗಿದ್ದರಿಂದ, ೧೮೯೦ರಲ್ಲಿ ಇಲ್ಲಿರುವ ಚಾಪೆಲ್-ಅನ್ನು ಪರಿತ್ಯಕ್ತಗೊಳಿಸಲಾಯ್ತು. ವಂ. ಫಾಸ್ಕಲ್ ಮಸ್ಕರೇನ್ಹಸ್ ಅವರು ಬೆಳಳ‍ತಂಗಡಿಯಲ್ಲಿ ಹುಲ್ಲಿನ ಚಾಪೆಲನ್ನು ಕಟ್ಟಿದರು. ಇದನ್ನು ಕೆಡವಿ ಸ್ಥಿರ ಚರ್ಚನ್ನು ನಿರ್ಮಿಸಲು ಹತ್ತಿರದ ಚರ್ಚುಗಳ ಸಹಾಯದಿಂದ ಸುಮಾರು ೧೦ ವರ್ಷಗಳು ತಗುಲಿದವು. ಇದು ಕೆಲವು ಕಾಲ ತಾಕೊಡೆಯಿಂದ ಕಾರ್ಯನಿರ್ವಸಿತು. ಹಲವು ಕ್ರಿಶ್ಚಿಯನ್ ಅಧಿಕಾರಿಗಳು ಬೆಳ್ತಂಗಡಿ ಯಲ್ಲಿ ವಂ. ಮಸ್ಕರೇನ್ಹಸ್ ಅವರಿಗೆ ಸ್ಥಳ ಸಿಗುವಂತೆ ಸಹಕರಿಸದರು.[]

೧೯೦೮ರಲ್ಲಿ ವಂ. ಪಿಯದಾದೆ ಡಿ'ಸೋಜಾ ಅವರು ಹೊಸ ಚರ್ಚನ್ನು ನಿರ್ಮಿಸಿದರು. ವಂ. ಕ್ಲಿಫರ್ಡ್ ಡಿ'ಸೋಜಾರವರು ಹೊಸ ಚರ್ಚ್-ನಿವಾಸವನ್ನು ೧೯೮೨ರಲ್ಲಿ ನಿರ್ಮಿಸಿದರು. ವಂ. ಗ್ರೆಗೊರಿ ಡಿ'ಸೋಜಾ ಅವರು ಚಾರ್ಮಾಡಿಯಲ್ಲಿ ಚಾಪೆಲ್ ನಿರ್ಮಿಸಿದರು. ೧೦ ಆಗಸ್ಟ್ ೧೯೩೯ರಲ್ಲಿ, ವಂ. ಜೋನ್ ಜಿ. ಪಿಂಟೊ ಅವರು ಬಂಗಾಡಿಯಲ್ಲಿ(ಇಂದುಬೆಟ್ಟು) ಚಾಪೆಲ್ಅನ್ನುನಿರ್ಮಿಸಿದ್ದು, ಕಾಲಾನಂತರ ಅದು ಚರ್ಚ್ ಆಗಿ ಪರಿರ್ವತಿತಗೊಂಡಿತು. ಆರ್ವ(ಅಳದಂಗಡಿ), ಇಂದುಬೆಟ್ಟು ಹಾಗೂ ನಾರಾವಿ ಚರ್ಚುಗಳು ಬೆಳ್ತಂಗಡಿಯ ಅಧೀನಗೊಳಪಟ್ಟವು. ವಂ. ರೊಸಾರಿಯೊ ಫೆರ್ನಾಡಿಸ್ ಚರ್ಚನ್ನು ವಿಸ್ತರಿಸಿದರು.[]

ಧರ್ಮಗುರು ವಂ. ಹೆನ್ರಿ ಮಚಾದೊ ಅಧಿಕಾರಾವಧಿಯಲ್ಲಿ ಶತಮಾನೋತ್ಸವವನ್ನು ೧೯೮೫ರಲ್ಲಿ ಆಚರಿಸಲಾಗಿದೆ.[] ೨ನೇ ಚರ್ಚ್ ಕಟ್ಟಡ ವಿನ್ಯಾಸವು ಸುಮಾರು ನೂರು ವರ್ಷಗಳಷ್ಟು ಹಳೆಯದಾಗಿದ್ದುದಲ್ಲದೇ, ಪ್ರಸ್ತುತ ಜನಸಂಖ್ಯೆ ಒಳಗಡೆ ನಿಲ್ಲುವಷ್ಟು ಸ್ಥಳಾವಕಾಶ ಇಲ್ಲವಾದ್ದರಿಂದ ಸಹಾಯದಾನಿಗಳ ಹಾಗೂ ನೆರೆಯ ಚರ್ಚುಗಳ ಉದಾರ ಮನಸ್ಸಿನಿಂದ ಚರ್ಚ್ ಆಡಳಿತ ಮಂಡಳಿಯು ಹೊಸ ಕಟ್ಟಡವನ್ನು ನಿರ್ಮಿಸಲು ತೀರ್ಮಾನಿಸಿತು. ಇದಕ್ಕಾಗಿ ಸುಮಾರು ೩ ಕೋಟಿ ಅಂದಾಜು ಮೊತ್ತವನ್ನು ನಿರ್ಣಯೊಸಲಾಯ್ತು.[] ಪ್ರಸ್ತುತ ಚರ್ಚ್ ಕಟ್ಟಡ ಪವಿತ್ರ ರಕ್ಷಕ ಯೇಸುವಿನ ಹೆಸರಿನಲ್ಲಿ ಪೂರ್ವ ಶತಮಾನೋತ್ಸವ ಸಮಾರಂಭ ಹಾಗೂ ಚರ್ಚ್ ಕಟ್ಟಡ ಉದ್ಘಾಟನಾ ಕಾರ್ಯಕ್ರಮವನ್ನು ಒಂದೇ ದಿನ ನೆರವೇರಿಸಲಾಯ್ತು.[]

ಮೈಸೂರು ರಾಜ ಟಿಪ್ಪು ಸುಲ್ತಾನ್ ಕಟ್ಟಿದ ಜಮಲಾಬಾದ್ ಕೋಟೆ ಗೆ ಈ ಚರ್ಚು ಹತ್ತಿರವಿರುವದರಿಂದ, ಇದಕ್ಕೆ ೧೨೫ಕ್ಕೂ ಅಧಿಕ ವರ್ಷಗಳ ಇತಿಹಾಸವಿದೆ. ಇದು ಟಿಪ್ಪು ಸುಲ್ತಾನ ನ ದುಷ್ಕೃತ್ಯಗಳನ್ನು ಹೊರತಾಗಿಯೂ ನಂಬಿಕೆ ನಿರತ ಕ್ರಿಶ್ಚಿಯನ್ನರ ಪುರಾವೆಯನ್ನೊಳಗೊಂಡಿದೆ. ಸುಮಾರು ೮೦೦ ಮಂದಿ ಕ್ರಿಶ್ಚಿಯನ್ ಬಂಧುಗಳು ಹುತಾತ್ಮ ರಾಗಿ ಕ್ರಿಶ್ಚಿಯನ್ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಲು ಇತರರಿಗೆ ಸ್ಪೂರ್ತಿಯಾಗಿದ್ದಾರೆ .[೩] ರಾಜಕೀಯ ಕಾರಣಗಳಿಂದಾಗಿ ಟಿಪ್ಪು ಸುಲ್ತಾನ್ ಅವರು ಕ್ರಿಶ್ಚಿಯನ್ನರಿಗೆ ನೀಡಿದ ಕಿರುಕುಳ ಹಾಗೂ ಚರ್ಚಿನ ಮೇಲಿನ ಅವರ ಆಕ್ರಮಣವನ್ನು ಇತಿಹಾಸದಿಂದ ಮರೆಮಾಚಲಾಗಿದ್ದು, ಟಿಪ್ಪು ಸುಲ್ತಾನ್ ಅವರನ್ನು ದಕ್ಷಿಣ ಕರ್ನಾಟಕ ದ ಸ್ವಾತಂತ್ರ್ಯದ ಹೋರಾಟಗಾರನಾಗಿ ಬಿಂಬಿಸಲಾಗಿದೆ.

ಜನಸಂಖ್ಯೆ

[ಬದಲಾಯಿಸಿ]

ಚರ್ಚ್ ೬೨೨ ಕುಟುಂಬಗಳನ್ನು ಹೊಂದಿದ್ದು, ಸೆಪ್ಟೆಂಬರ್ ೨೦೧೧ ಗಣತಿಯ ಪ್ರಕಾರ ೨,೯೦೨ ಸದಸ್ಯ ಜನಸಂಖ್ಯೆಯನ್ನು ಹೊಂದಿದೆ.[]

ಮಹತ್ವ

[ಬದಲಾಯಿಸಿ]

ಸಂ. ಥೆರೆಸಾ ಪ್ರೌಢ ಶಿಕ್ಷಣ ಸಂಸ್ಥೆ ಅನ್ನು ವಂ. ಎಲಿಯಾಸ್ ಪಿ. ಡಾಯಸ್ ೧ ಜೂನ್ ೧೯೬೫ರಲ್ಲಿ ಸ್ಥಾಪಿಸಿದರು.[] ೩೧ ಶಿಕ್ಷಕಿಯರನ್ನು ಒಳಗೊಂಡು ೬೩೮ ವಿದ್ಯಾರ್ಥಿ ವೃಂದವನ್ನು ಹೊಂದಿದ ಸಂ. ಥೆರೆಸಾ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಉರ್ಸುಲಾಯ್ನ್ ಫ್ರಾನ್ಸಿಸ್ಕನ್ ಸಭೆಯ ಧರ್ಮಭಗಿನಿಯರು ಬೋಧನೆಯನ್ನು ಮಾಡುತ್ತಿದ್ದರು, ಇದು ಚರ್ಚ್ ಅಧೀನದಲ್ಲಿತ್ತು. ಅವರು ಸಮಾಜ ಸೇವೆಯಲ್ಲಿಯೂ ತೊಡಗಿಸಿಕೊಂಡಿದ್ದರು, ಬಡವರಿಗೆ ಸಹಾಯ ಮತ್ತು ಕಷ್ಟಕರವಾದ ಕುಟುಂಬಗಳಿಗೆ ಸಲಹೆಗಳನ್ನು ನೀಡುತ್ತಿದ್ದರು.ಸಂ. ಥೆರೆಸಾ ಪ್ರೌಢ ಶಿಕ್ಷಣ ಸಂಸ್ಥೆ ಸಹ ಉರ್ಸುಲಾಯ್ನ್ ಫ್ರಾನ್ಸಿಸ್ಕನ್ ಸಭೆಯ ಧರ್ಮಭಗಿನಿಯರು ನಡೆಸಿಕೊಂಡು ಹೋಗುತ್ತಿದ್ದರು.

ವಂ. ಜೋನ್ ಜಿ. ಪಿಂಟೊ ಅವರು ಪ್ರಾಥಮಿಕ ಶಾಲೆ ಯನ್ನು ಬೆಳ್ತಂಗಡಿಯಲ್ಲಿ ಪ್ರಾರಂಭಿಸಿದರು. ವಂ. ರೊಸಾರಿಯೊ ಫೆರ್ನಾಡಿಸ್ ೧೯೪೯ರಲ್ಲಿ ಶಾಲೆಗೆ ಹೊಸ ಕಟ್ಟಡವನ್ನು ನಿರ್ಮಿಸಿದರು.[] ಪವಿತ್ರ ರಕ್ಷಕ ಯೇಸು ಕನ್ನಡ ಮಾಧ್ಯಮ ಶಾಲೆಯು ೭೫೦ ವಿದ್ಯಾರ್ಥಿಗಳನ್ನು ಹೊಂದಿದ್ದು, ಆಂಗ್ಲ ಮಾಧ‍ಯಮ ಶಾಲೆಯು ೨೧೦ ವಿದ್ಯಾರ್ಥಿಗಳನ್ನು ಹೊಂದಿದೆ. ಚರ್ಚ್ ಸದಸ್ಯರ ಅನುಬಂಧವನ್ನು ಹೆಚ್ಚಿಸಲು ನಿರಂತರವಾಗಿ ಸಮುದಾಯ ಕೂಡುವಿಕೆ ಹಾಗೂ ವಾರ್ಡ್-ಸಭೆಗಳನ್ನು ನಡೆಸಲಾಗುತ್ತಿದೆ. ಚರ್ಚ್ ನಡೆಸುವ ಶಿಕ್ಷಣ ಸಂಸ್ಥೆಗಳು ಬೆಳ್ತಂಗಡಿಯಲ್ಲಿಯೇ ಉನ್ನತ ಮಟ್ಟದಾಗಿವೆ. ಚರ್ಚ್ ಕಥೊಲಿಕ್ ಸಭಾ, ಫ್ರಾನ್ಸಿಸ್ಕನ್ ಮೂರನೇ ಪಂಕ್ತಿ, ಪೊಂಪೈ ಸೊಡಾಲಿಟಿ, ಅನ್ನ ನಿಧಿ, ಮದುವೆ ನಿಧಿ, ಸಮಾಧಿ ನಿಧಿ, ಸಂ.ವಿನ್ಸೆಂಟ್ ದೆ ಪೌಲ್ ಸಮಿತಿ, ವೈ.ಸಿ.ಎಸ್, ಲೀಜನ್ ಆಫ್ ಮೇರಿ, ಸಂಗೀತ ತಂಡ, ಬಲಿಪೀಠ ಹುಡುಗರು ಹಾಗೂ ಸ್ವಸಹಾಯ ಗುಂಪುಗಳನ್ನು ಚರ್ಚ್ ತನ್ನ ಸದಸ್ಯರ ಆರ್ಥಿಕ ಶ್ರೇಯೋಭಿವೃದ್ಧಿಗೆ ಪ್ರಚುರಪಡಿಸಿದೆ.[]

ಪೋಪರ ನಿಯೋಗಿಯಾಗಿ ಐವರಿ ಕೋಸ್ಟ್ನಲ್ಲಿ ಸೇವೆ ಸಲ್ಲಿಸಿ ನಿಧನರಾದ, ಮಹಾಧರ್ಮಾಧ್ಯಕ್ಷರಾದ ಡಾ| ಆಂಬ್ರೊಸ್ ಮಾಡ್ತಾ, ಅವರ ಪ್ರಾರ್ಥಿವ ಶರೀರವನ್ನು, ೧೫ ಡಿಸೆಂಬರ್ ೨೦೧೨ರಲ್ಲಿ ಸುಮಾರು ೩,೫೦೦ ಜನರ ಸಮ್ಮುಖದಲ್ಲಿ ಸಮಾಧಿ ಮಾಡಲಾಗಿದೆ. ಮರಣ ಅಂತ್ಯಕ್ರಿಯೆಗಳನ್ನು ಭಾರತದ ಪೋಪ್ ಅಪೋಸ್ತಲಿಕ ಪ್ರತಿಧಿಯಾದ ಸಾಲ್ವೊದೊರೆ ಪೆನಾಚಿಯೊ ಅವರೊಂದಿಗೆ ಮಂಗಳೂರು ಬಿಷಪ್ ಡಾ|. ಅಲೋಷಿಯಸ್ ಪೌಲ್ ಡಿ'ಸೋಜಾ ಸಹ ಪೌರೋಹಿತ್ಯದಲ್ಲಿ ನೆರವೇರಿಸಲಾಯ್ತು.[]

ಆಡಳಿತ

[ಬದಲಾಯಿಸಿ]

೨೦೧೫ರವರೆಗೆ ೨೩ ಪುರೋಹಿತರು ಬೆಳ್ತಂಗಡಿ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದಾರೆ. ಅವರಲ್ಲಿ ವಂ. ಆಲ್ಬರ್ಟ್ ಪಿಂಟೊ ೧೬ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು ಮಾತ್ರವಲ್ಲದೇ ಚರ್ಚಿನ ಸುತ್ತಮುತ್ತ ಚಾರ್ಮಾಡಿ, ನೆರಿಯಾ, ತೊಟ್ಟಾಡಿ ಹಾಗೂ ಬಹುದೂರ ಹಳ್ಳಿಗಳಲ್ಲಿ ನೆಲೆಸಿದ್ದ ಮಲಯಾಳಿ ಬೈಸಿಕಲಿನಲ್ಲಿ ಸಂಚರಿಸಿ ಅವರಿಗೆ ಬಲಿಪೂಜೆಯನ್ನು ಮಲಯಾಳಂನಲ್ಲಿ ನೆರವೇರಿಸುತ್ತಿದ್ದರು.[]

ವಂ. ಎಲಿಯಾಸ್ ಪಿ. ಡಾಯಸ್ ಉತ್ಸಾಹಭರಿತವಾಗಿ ಏಳು ವರ್ಷ ಸೇವೆ ಸಲ್ಲಿಸಿದರು.ಅವರು ಹೆಣ್ಣಿನ ಅಭಿವೃದ್ಧಿ ಶಿಕ್ಷಣದಿಂದಲೇ ಸಾಧ‍್ಯ ಎಂದು ಬಲವಾಗಿ ನಂಬಿದ್ದರಿಂದ ಸಂ. ಥೆರೆಸಾ ಪ್ರೌಢ ಹುಡುಗಿಯರ ಶಿಕ್ಷಣ ಸಂಸ್ಥೆ ಗಳನ್ನು ಸ್ಥಾಪಿಸದರು. ಉರ್ಸುಲಾಯ್ನ್ ಫ್ರಾನ್ಸಿಸ್ಕನ್ ಸಭೆಯ ಧರ್ಮಭಗಿನಿಯರಿಗೆ ಇದರ ಮೇಲ್ವಿಚಾರಣೆಯನ್ನು ವಹಿಸಲಾಗಿತ್ತು. ತದನಂತರ ಸಂ. ಥೆರೆಸಾ ಪ್ರೌಢ ಹುಡುಗಿಯರ ಶಿಕ್ಷಣ ಸಂಸ್ಥೆಯು ಸಂಯುಕ್ತ ಶಿಕ್ಷಣ ಸಂಸ್ಥೆಯಾಗಿ ತನ್ನ ಹೆಸರನ್ನುಸಂ. ಥೆರೆಸಾ ಪ್ರೌಢ ಶಿಕ್ಷಣ ಸಂಸ್ಥೆ ಎಂದು ಬದಲಾಯಿಸಿತು. ವಂ. ಇ. ಪಿ. ಡಾಯಸ್ ಅವರು ಉಜಿರೆಯಲ್ಲಿ ನಿರ್ಮಾಣವಾದ ಚರ್ಚ್-ನ ಮೊದಲ ಧರ್ಮಗುರುವಾಗಿದ್ದು, ಇದು ಬೆಳ್ತಂಗಡಿ ಚರ್ಚಿನಿಂದ ಸುಮಾರು ೬ ಕಿಮೀ ದೂರದಲ್ಲಿದೆ, ಮತ್ತು ಉಜಿರೆಯಲ್ಲಿ ಅನುಗ್ರಹ ಶಿಕ್ಷಣ ಸಂfಸ್ಥೆಯ ಸ್ಥಾಪನೆಯಲ್ಲಿ ಪ್ರಮುಖರಾಗಿದ್ದಾರೆ.[]

ವಂ. ವಿಕ್ಟರ್ ಪಿಂಟೊ ಅವರು ಧರ್ಮಪ್ರಾಂತ್ಯದಿಂದ ೧೯೬೦ರಲ್ಲಿ ನಿಯುಕ್ತಿಗೊಂಡ ಮೊದಲ ಸಹಾಯಕ ಧರ್ಮಗುರು.

ವಂ. ಲಾರೆನ್ಸ್ ಡಿ'ಸೋಜಾ ಅವರು ೨೧ನೇ ಧರ್ಮಗುವಾಗಿ ಸೇವೆಸಲ್ಲಿಸಿದ್ದು ಅವರ ಅವಧಿಯಲ್ಲಿ ವಂ. ನೆಲ್ಸನ್ ಒಲಿವೆರಾ ಸಹಾಯಕ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದರು.

ವಂ. ಜೆರಾಲ್ಡ್ ಡಿ'ಸೋಜಾ ೨೩ನೇ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ಧಾರೆ.

ವಂ. ಜೇಮ್ಸ್ ಡಿ'ಸೋಜಾ, ಅತ್ಯಂತ ಸಾರ್ಮರ್ಥ್ಯವುಳ್ಳ ೨೩ನೇ ಧರ್ಮಗುರವಾಗಿದ್ದು ಅವರ ಅಧಿಕಾರಾವಧಿಯಲ್ಲಿ ೩.೫ಕೋಟಿ ವೆಚ್ಚದಲ್ಲಿ ಪ್ರಸ್ತುತ ಚರ್ಚ್ ಕಟ್ಟಡವನ್ನು ನಿರ್ಮಿಸಲಾಗಿದೆ. ಅವರು ಪೂರ್ವ ಬೆಳ್ಳಿ ಶತಮಾನೋತ್ಸವ ಸಂಭ್ರಮಾಚರಣೆಯನ್ನು ಪೂರ್ಣಗೊಳಿಸುವಲ್ಲಿ ಉಪಯುಕ್ತ ಸಲಹೆಗಳನ್ನು ೨೦ನೇ ಸಹಾಯಕ ಧರ್ಮಗುರುಗಳಾದ ವಂ. ಪೌಲ್ ಪ್ರಕಾಶ್ ಅವರೊಂದಿಗೆ ನೆರವೇರಿಸದರು.

ಪ್ರಸ್ತುತ ೨೪ನೇ ಧರ್ಮಗುರುಗಳಾಗಿ ವಂ.ಬೊನವೆಂಚರ್ ನಜ್ರೆತ್ ಚರ್ಚ್ ಸದಸ್ಯರ ಪ್ರೀತಿಗೆ ಪಾತ್ರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರಸ್ತುತ ರಚನೆ

[ಬದಲಾಯಿಸಿ]

ಹೊಸ ಚರ್ಚ್ ಕಟ್ಟಡವು ೩.೫ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲ್ಪಟ್ಟಿದ್ದು, ಇದಕ್ಕೆ ಸದಸ್ಯರು ೧೫೦೦೦ ಘಂಟೆಗಳ ಸ್ವಯಂಪ್ರೇರಿತ ಶ್ರಮವನ್ನು ನೀಡಿದ್ದಲ್ಲದೇ, ೩೦ಲಕ್ಷ ರೂಪಾಯಿಗಳನ್ನು ನೀಡಿರುತ್ತಾರೆ. ಚರ್ಚಿನ ಹೊಸ ಘಂಟೆ ೪೫೦ ಕೆಜಿ ತೂಕವನ್ನು ಹೊಂದಿದ್ದು, ಇದನ್ನು ಇಟಲಿ ಯಿಂದ ಆಮದೀಕರಿಸಲಾಗಿದೆ. ಅದಕ್ಕೆ ಪ್ರತಿಯಾಗಿ ೫೦ ಕೆಜಿ ತೂಕದ ಘಂಟೆಯನ್ನು ಮುಂಚೆಯೇ ಫ್ರಾನ್ಸ್ ದೇಶದಿಂದ ಆಮದೀಕರಿಸಿ ಘಂಟೆಗೂಡಿನಲ್ಲಿ ಜೋಡಿಸಲಾಗಿದೆ. ಹೊಸ ಘಂಟೆಯನ್ನು ಸ್ಥಳೀಯರು ದಾನವಾಗಿ ನೀಡಿರುತ್ತಾರೆ.[]

ಮುಂದೆ ನೋಡಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ ೧.೨ "Beltangady Parish". www.dioceseofmangalore.com.
  2. ೨.೦ ೨.೧ ೨.೨ "Holy Redeemer Parish Turns 125, to Get New Church Building". Daijiworld. Archived from the original on 2016-08-19. Retrieved 2016-10-14.
  3. ೩.೦ ೩.೧ "Holy Redeemer Church". Daijiworld. Archived from the original on 2016-03-04. Retrieved 2016-10-14.
  4. ೪.೦ ೪.೧ "Beltangady: Bishop Inaugurates Newly-built Holy Redeemer Church". Daijiworld. Archived from the original on 2016-03-05. Retrieved 2016-10-14.
  5. ೫.೦ ೫.೧ "Holy Redeemer Parish". www.dioceseofmangalore.com. Archived from the original on 2017-04-30. Retrieved 2016-10-14.
  6. "Holy Redeemer Parish". Daijiworld. Archived from the original on 2016-08-19. Retrieved 2016-10-14.
  7. "Thousands Bid Tearful Adieu to Archbishop Dr Ambrose Madtha". Daijiworld. Archived from the original on 2016-03-05. Retrieved 2016-10-14.


ಬಾಹ್ಯ ಕೊಂಡಿಗಳು

[ಬದಲಾಯಿಸಿ]