ಅಲೋಷಿಯಸ್ ಪೌಲ್ ಡಿ'ಸೋಜಾ
ಟೆಂಪ್ಲೇಟು:Infobox Christian leader
ಅಲೋಷಿಯಸ್ ಪೌಲ್ ಡಿ'ಸೋಜಾ (ಟೆಂಪ್ಲೇಟು:Lang-knn; ಹುಟ್ಟು ೨೧ ಜೂನ್ ೧೯೪೧) ರೋಮನ್ ಕಥೋಲಿಕ ಧರ್ಮಪ್ರಾಂತ್ಯ, ಮಂಗಳೂರುಇಲ್ಲಿನ ಬಿಷಪರಾಗಿದ್ದಾರೆ. ಅವರು ಬಾಸಿಲ್ ಸಾಲ್ವೊದೊರೆ ಡಿ'ಸೋಜಾ ಅವರ ಉತ್ತರಾಧಿಕಾರಿಯಾಗಿ ೮ ನವೆಂಬರ್ ೧೯೯೬ರಲ್ಲಿ ನೇಮಕಗೊಂಡಿದ್ದಾರೆ.
ಆರಂಭೀಕ ವರ್ಷಗಳು
[ಬದಲಾಯಿಸಿ]ಅಲೋಷಿಯಸ್ ಪೌಲ್ ಡಿ'ಸೋಜಾ ಅವರು ೨೧ ಜೂನ್ ೧೯೪೧ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಹಳ್ಳಿಯಾದ ಅಗ್ರಾರ್ನಲ್ಲಿನ ಹೆಕ್ಕೊಟ್ಟು ಗ್ರಾಮದಲ್ಲಿ ಜನಿಸಿದರು.[೧] ಮಥಾಯಸ್ ಹಾಗೂ ಇಸಾಬೆಲ್ ಡಿ'ಸೋಜಾ ದಂಪತಿಯ ಏಳು ಮಂದಿ ಮಕ್ಕಳಲ್ಲಿ ಆರನೆಯವರಾಗಿ ಹುಟ್ಟಿದರು.[೧] ಕುಟುಂಬವು ಡಿ'ಸೋಜಾ-ಕಾಮತ್ ಕುಲದ ಮಂಗಳೂರು ಕಥೋಲಿಕ ಪ್ರದೇಶಕ್ಕೆ ಸೇರಿದವರಾಗಿದ್ದಾರೆ.[೨] ಸಹೋದರ ವಂ.ಚಾರ್ಲ್ಸ್ ಡಿ'ಸೋಜಾ ಅವರು ರೋಮನ್ ಕಥೋಲಿಕ ಮಹಾಧರ್ಮಪ್ರಾಂತ್ಯ ದೆಹಲಿಯ ಧರ್ಮಗುರು, ಮತ್ತು ಸಹೋದರಿ ಧರ್ಮಭಗಿನಿ ಜಾನಿಸ್ ಎ.ಸಿ. ಅವರು ಚಂಡೀಘಡದಲ್ಲಿದ್ದಾರೆ.[೧] ಅವರು ಪ್ರಾಥಮಿಕ ಶೀಕ್ಷಣವನ್ನು ಅಗ್ರಾರಿನಲ್ಲಿ ಪಡೆದು ಪದವಿಪೂರ್ವ ಶೀಕ್ಷಣವನ್ನು ಬಂಟ್ವಾಳದ ಎಸ್.ವಿಎಸ್. ಸಂಸ್ಥೆಯಲ್ಲಿ ೧೯೫೮ರಲ್ಲಿ ಮುಗಿಸಿದ್ದು,[೧] ಪ್ರೌಢ ಶಿಕ್ಷಣದ ವೇಳೆಯಲ್ಲಿಯೇ ಅವರು ಸಂ. ಜೊಸೇಫರ ಸೆಮಿನರಿಗೆ ಪೌರೋಹಿತ್ಯ ಪಡೆಯಲು ಭರ್ತಿಗೊಂಡರು.[೧]
ಧರ್ಮಪ್ರಾಂತ್ಯದ ಕಾರ್ಯಗಳು
[ಬದಲಾಯಿಸಿ]ಡಿ'ಸೋಜಾ ಅವರು ೩ ಡಿಸೆಂಬರ್ ೧೯೬೬ರಲ್ಲಿ ಗುರುದೀಕ್ಷೆಯನ್ನು ಪಡೆದು,[೨] ಪವಿತ್ರ ಶಿಲುಬೆ ಚರ್ಚ್, ಕೊರ್ಡೆಲ್-ನಲ್ಲಿ ಸಹಾಯಕ ಗುರುಗಳಾಗಿ೧೯೭೦ರವರೆಗೆ ಸೇವೆ ಸಲ್ಲಿಸಿದರು.[೧] ಈ ವೇಳೆಯಲ್ಲಿ, ಅವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಪದವಿಯನನ್ಉ ಪಡೆದರು.[೧] ಇದರಿಂದಾಗಿ ಮೆಚ್ಚುಗೆ ಪಡೆದುಕೊಂಡ ಇವರ ರೋಮನ್ ಕಥೋಲಿಕ ದೈವಶಾಸ್ತ್ರದ ಮೇಲಿನ ಜ್ಞಾನ ಹಾಗೂ ಸಾಮರ್ಥ್ಯವನ್ನು ಕಂಡ ಅಂದಿನ ಮಂಗಳೂರು ಬಿಷಪ್ ಇವರನ್ನುಧರ್ಮಪ್ರಾಂತ್ಯದ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದರು.[೧] ಕ್ಯಾನನ್ ಕಾನೂನುನಲ್ಲಿ ಡಾಕ್ಟರೇಟ್ ಪದವಿ ಪಡೆಯಲು ೧೯೭೧ರಲ್ಲಿ, ಧರ್ಮಪ್ರಾಂತ್ಯದ ಅಧಿಕಾರಿಗಳು ಇವರನ್ನು ರೋಮ್-ಗೆ ಕಳುಹಿಸಿದರು canonical law, ಅಲ್ಲಿ ಅವರು ಕ್ರೈಸ್ತ ವಿವಾಹ ಕಾನೂನಿನಲ್ಲಿ ವಿಶೇಷ ಪರಿಣತಿಯನ್ನು ಪಡೆದರು.[೨] ಇದನ್ನು ಪೂರ್ಣಗೊಳಿಸಿದ ನಂತರ ಅವರನ್ನು "ರೋಮನ್ ರೋಟ" ದ ವಕೀಲರನ್ನಾಗಿ ನೀಮಕ ಮಾಡಲಾಯಿತು—ಇದು ಕ್ರೈಸ್ತ ಧರ್ಮದ ಸರ್ವೋಚ್ಚ್ ಟ್ರಿಬ್ಯೂನಲ್ ಆಗಿರುತ್ತದೆ, ಹಾಗಾಗಿ ಈ ಪದವಿಗೇರಿದ ಮೊದಲ ಭಾರತೀಯ ಗುರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.[೨] ಡಿ'ಸೋಜಾ ಅವರು "ರೋಮನ್ ರೋಟ" ದ ವಕೀಲರ ಆಯ್ಕೆಯಲಲ್ಇ ಅರ್ಹತೆ ಪಡೆದಿರುವ ಇಬ್ಬರು ಭಾರತೀಯ ಗುರುಗಳಲ್ಲಿ ಒಬ್ಬರಾಗಿದ್ದು, ೧೯೮೪ರಿಂದ ಮಂಗಳೂರು ಪ್ರಾಂತ್ಯದ ನ್ಯಾಯಾಂಗ ಮಂಡಳಿಯ ಗುರುಗಳಾಗಿ ಸೇವೆ ಸಲ್ಲಿಸಿದರು.[೨]
ಡಿ'ಸೋಜಾ ವರು ಮಂಗಳೂರಿಗೆ ೧೯೭೬ರಲ್ಲಿ ಹಿಂತಿರುಗಿದರು, ಮತ್ತು ಮಂಗಳೂರು ಧರ್ಮಪ್ರಾಂತ್ಯದ ಕುಲಪತಿಯಾಗಿ ೧೯೭೭ರಲ್ಲಿ ನೇಮಕಗೊಂಡರು.[೨] ಈ ಸಮಯದಲ್ಲಿ, ಗ್ಲಾಡ್ಸನ್ ಮನೆ ಹಾಗೂ ವೃತ್ತಿಪರತೆಯ ಉಸ್ತುವಾರಿಯನ್ನು ಹೊಂದಿದ್ದರು, ಇದು ಬೋಳಾರ ಇಲಲ್ರುವ ಸಣ್ಣ ಸೆಮಿನರಿ.[೧] ಅವರು ಏಕಕಾಲದಲ್ಲಿ ಕಾಸ್ಸಿಯ ಚರ್ಚಿನ ಧರ್ಮಗುರುಗಳಾಗಿ ೧೯೮೮ರಿಂದ ಮತ್ತು ಧರ್ಮಪ್ರಾಂತ್ಯದ ಮಹಿಳಾ ಸಮಿತಿಯ ಅಧ್ಯಕ್ಷ್ಯರಾಗಿ ೧೯೮೫ರಿಂದ ಸೇವೆ ಸಲ್ಲಿಸದರು.[೨] ಜೆಪ್ಪುವಿನಲ್ಲಿರುವ ಸಂ.ಜೋಸೆಫ್ ಸೆಮಿನರಿಗೆ ಮೊತ್ತ ಮೊದಲ ಫ್ರಾಂತೀಯ ಗುರು ಮುಖ್ಯಾಧ್ಯಕ್ಷರಾಗಿ ೧೯೯೫ರಲ್ಲಿ ನೇಮಕಗೊಂಡರು.[೧]
ಮಂಗಳೂರು ಧರ್ಮಪ್ರಾಂತ್ಯದ ಬಿಷಪ್
[ಬದಲಾಯಿಸಿ]೧೧ಜನವರಿ ೧೯೯೬ರಲ್ಲಿ ಪರಮ ಪೂಜ್ಯ ದ್ವಿತೀಯ ಪೋಪ್ ಜಾನ್ ಪೌಲ್ ಅವರು ಮಂಗಳುರು ಧರ್ಮಪ್ರಾಂತ್ಯಕ್ಕೆ ಡಿ'ಸೋಜಾ ಅವರನ್ನು ಸಹಾಯಕ ಬಿಷಪರನ್ನಾಗಿ ನೇಮಿಸಿದರು.[೨] ೧೯೯೬ರಲ್ಲಿ ಬಿಷಪ್ ಬಾಸಿಲ್ ಸಾಲ್ವೊದೊರೆ ಡಿ'ಸೋಜಾ ಅವರ ಆಕಸ್ಮಿಕ ಮರಣದ ನಂತರ, ಇವರು ನಾಮಮಾತ್ರ ಬಿಷಪ್ ಆಗಿ ಅದೇ ವರ್ಷದ ೧೫ ಮೇ ತಿಂಗಳಿನಲ್ಲಿ ನಿಯುಕ್ತಿಗೊಂಡರು.[೧] ೨೭ ಡಿಸೆಂಬರ್-ನಲ್ಲಿ ಅವರನ್ನು ಅಧಿಕೃತವಾಗಿ ಮಂಗಳೂರಿನ ಬಿಷಪ್ ಎಂದು ನಾಮಕರಣ ಮಾಡಲಾಯಿತು.[೧]
ಒಂಭತ್ತು ಮಂದಿ ಗುರುಗಳನ್ನೊಳಗೊಂಡ ಪಾಸ್ಟೊರಲ್ ಕೇಂದ್ರವನ್ನು ಡಿ'ಸೋಜಾ ಅವರು ಬಿಷಪರಾದ ಬಳಿಕ ಸಂಪೂರ್ಣಗೊಳಿಸಿದರು .[೧] ಕರಾವಳಿ ಅಭಿವೃದ್ಧಿ ಮತ್ತು ಶಾಂತಿ ಸಂಸ್ಥೆ (ಸಿಒಡಿಪಿ)ಯನ್ನು ಬಲಪಡಿಸಿದರು, ಮತ್ತು was instrumental in the establishment of ಫಾದರ್ ಮುಲ್ಲರ್ ವೈದ್ಉಕೀಯ ಕಾಲೇಜುಇದರ ಸಂಸ್ಥಾಪಣೆಯಲ್ಲಿ ೧೯೯೯ರಲ್ಲಿ ಉದ್ಘಾಟಿಸುವ ಮುಖಾಂತರ ಕಾರಣೀಕರ್ತರಾಗಿದ್ದಾರೆ.[೧] ಪ್ರಸ್ತುತ ಇವರು ಭಾರತದ ದೇಶೀಯ ಬಿಷಪರ ಕೌಟುಂಬಿಕ ಕೇದ್ರ ಸಮಿತಿ ಅಧ್ಯಕ್ಷ್ಯರಾಗಿದ್ದಾರೆ.[೧] ಡಿ'ಸೋಜಾ ಅವರು ಹಲವಾರು ಪದವಿ, ಪ್ರೌಢ ಶಿಕ್ಷಣ, ಪ್ರಾಥಮಿಕ ಶಿಕ್ಷಣ ಸಂಸ್ಥೆಗಳ ಪೋಷಕ ಹಾಗೂ ಆಡಳಿತಾಧಿಕಾರಿಯಾಗಿದ್ದಾರೆ.[೧] ಜಾತಿ, ವರ್ಗ, ಮತೀಯ ಭಾವನೆಗಳನ್ನು ಲೆಕ್ಕಿಸದೇ 'ಹತ್ತು ಅಂಶ'ಗಳ ಕಾರ್ಯಕ್ರಮವನ್ನು ಧರ್ಮಪ್ರಾಂತ್ಯದ ಚರ್ಚ್-ಗಳಲ್ಲಿ ಅನುಸರಿಸುವಂತೆ ಪ್ರೇರೇಪಿಸಿದರು.[೧]
- ಸೂಕ್ತ ವ್ಯಕ್ತಿಗಳನ್ನು ಆರಿಸಿ ಅವರಿಂದ ಧರ್ಮನಿಷ್ಠೆ ಹಾಗೂ ರೋಮನ್ ಕಥೋಲಿಕತೆಯನ್ನು ಹರಡುವಲ್ಲಿ ಸಹಕಾರ.
- ವಾರ್ಡ್ ಮುಖಾಂತರ ಚರ್ಚ್ ವಿಧಿ-ವಿಧಾನಗಳಲ್ಲಿ ಪಾತ್ರ ವಹಿಸುವಂತೆ ತಯಾರಿಸುವಲ್ಲಿ ಕ್ರಿಶ್ಚಿಯನ್ನರಿಗೆ ಪ್ರೇರಪಣೆ.
- ಕ್ರೈಸ್ತ ಮೌಲ್ಯಗಳನ್ನು ಬೋಧನೆ ಹಾಗೂ ಅವುಗಳನನ್ಉ ಅಭ್ಯಸಿಸುವಲ್ಲಿ ಸಹಾಯ ಮಾಡುವಂತೆ ಸ್ವಯಂಪ್ರೇರಿತ ಗುಂಪುಗಳ ರಚನೆ.
- ಕ್ರೈಸ್ತರಲ್ಲಿ ಏಕತೆ ಹಾಗೂ ಅಂತರ್-ಧರ್ಮೀಯರೊಂದಿಗೆ ಸಹಬಾಳ್ವೆಗೆ ನಾಂದಿ.
- ಅಲ್ಪಸಂಖ್ಯಾತ ಕ್ರೈಸ್ತ ಚಳವಳಿ.
- ಮಹಿಳಾ ಸಂಘಗಳನ್ನು ಬಲಿಷ್ಠಗೊಳಿಸುವಿಕೆ.
- ಅನಾಥರಿಗೆ ಮೂಲ ಸಂಪನ್ಮೂಲಗಳನ್ನು ಒದಗಿಸುವಿಕೆ.
- ಚರ್ಚ್ ಹಾಗೂ ವಾರ್ಡ್ ಸ್ತರಗಳಲ್ಲಿ ಸಂಪನ್ಮೂಲ ಗುಂಪುಗಳ ರಚನೆ.
- ಕ್ರಿಸ್ತ ಕೇಂದ್ರಿತ ಕುಟುಂಬಗಳ ರಚನೆ.
- ಕ್ರಿಸ್ತನ ಮಾರ್ಗದಲ್ಲಿ ನಡೆಯುವಂತೆ ಯುವಜನತೆಗೆ ಪ್ರೇರಣೆ.
ಡಿ'ಸೋಜಾ ಅವರು ಅಂತರಾಷ್ಟ್ರೀಯ ಕೊಂಕಣಿ ಸಮಾವೇಶ ಮತ್ತು ಅಖಿಲ ಭಾರತೀಯ ಬಿಷಪ್ ಸಮಾವೇಶಗಳನ್ನು ಸಂಘಟಿಸಿದ್ದಾರೆ.[೧] He translated the Bible into Konkani in a mini-pocket form.[೧] ಮಂಗಳೂರಿನಲ್ಲಿ ಕ್ರೈಸ್ತ ಧರ್ಮದ ರೋಮನ್ ಕಥೋಲಿಕತೆಯನ್ನು ಪ್ರಚುರಪಡಿಸಿದುದಲ್ಲದೇ, ಸ್ಥಳೀಯ ಜನರೊಂದಿಗೆ ಕೋಮು ಸೌಹಾರ್ದವನ್ನು ಬೆಳೆಸುವಲ್ಲಿ ಶ್ರಮವಹಿಸಿದ್ದಾರೆ.[೧]
ಮುಂದೆ ನೋಡಿ
[ಬದಲಾಯಿಸಿ]ಸೈಟೇಶನ್ಸ್
[ಬದಲಾಯಿಸಿ]- ↑ ೧.೦೦ ೧.೦೧ ೧.೦೨ ೧.೦೩ ೧.೦೪ ೧.೦೫ ೧.೦೬ ೧.೦೭ ೧.೦೮ ೧.೦೯ ೧.೧೦ ೧.೧೧ ೧.೧೨ ೧.೧೩ ೧.೧೪ ೧.೧೫ ೧.೧೬ ೧.೧೭ ೧.೧೮ ೧.೧೯ "Rev. Dr. Aloysius P. D'Souza (Mangalorean Star: May, 2006)". Mangalorean.com. ಮೇ 2006. Archived from the original on 14 ಮಾರ್ಚ್ 2014. Retrieved 15 ಜನವರಿ 2012.
- ↑ ೨.೦ ೨.೧ ೨.೨ ೨.೩ ೨.೪ ೨.೫ ೨.೬ ೨.೭ Lobo 2000, p. 225
ಉಲ್ಲೇಖಗಳು
[ಬದಲಾಯಿಸಿ]- Lobo, Michael (2000). Distinguished Mangalorean Catholics, 1800–2000: a historico-biographical survey of the Mangalorean Catholic community. Camelot Publishers. ISBN 978-81-87609-01-8.
{{cite book}}
: Invalid|ref=harv
(help).
ಬಾಹ್ಯ ಆಧಾರಗಳು
[ಬದಲಾಯಿಸಿ]- Bishop Aloysius Paul D'Souza's profile at Catholic-hierarchy.org
- Bishop Aloysius Paul D'souza's Press meet on YouTube, Udayavani
- Bishop Aloysius Paul D'souza's Christmas message on YouTube, Udayavani
- Pages using the JsonConfig extension
- EngvarB from March 2014
- Use dmy dates from March 2014
- CS1 errors: invalid parameter value
- 1941 births
- Living people
- People from Mangalore
- Mangaloreans
- Indian Jesuits
- Indian Roman Catholic bishops
- 20th-century Roman Catholic bishops
- 21st-century Roman Catholic bishops
- Indian male educational theorists
- Indian translators
- Translators to Konkani
- 20th-century translators
- 21st-century translators