ಬಂಗುಡೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಂಗುಡೆ ಮೀನು

ಬಂಗುಡೆ ಒಂದು ಸಮುದ್ರ ಮೀನಿನಲ್ಲಿ ಕಂಡು ಬರುವ ಪ್ರಭೇದ. ಇದನ್ನು ಇಂಡಿಯನ್ ಮ್ಯಾಕೆರೆಲ್ ಅಥವಾ ರಾಸ್ಟ್ರೆಲ್ಲಿಗರ್ ಕನಗುರ್ಟಾ ಎಂದು ಕರೆಯುತ್ತಾರೆ. ಇದು ಸಾಮಾನ್ಯವಾಗಿ ಭಾರತೀಯ ಮತ್ತು ಪಶ್ಚಿಮ ಪೆಸಿಫಿಕ್ ಸಮುದ್ರಗಳಲ್ಲಿ ಕಂಡುಬರುತ್ತದೆ. ಇದನ್ನು ಸಾಮಾನ್ಯವಾಗಿ ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಪಾಕಪದ್ಧತಿಯಲ್ಲಿ ಬಳಸಲಾಗುತ್ತದೆ. ಇದನ್ನು ಇಂಡೋನೇಷ್ಯಾದಲ್ಲಿ 'ಕೆಂಬಂಗ್', ಗುಜರಾತಿನಲ್ಲಿ ಬಂಗ್ಡಿ (ಬಾಂಗ್ಡಿ), ಮರಾಠಿ ಭಾಷೆಯಲ್ಲಿ ಬಂಗ್ಡಾ (ಬಾಂಗ್ಡಾ) ಮತ್ತು ತುಳು, ಕೊಂಕಣಿ ಮತ್ತು ಕನ್ನಡದಲ್ಲಿ 'ಬಂಗುಡೆ' ಎಂದು ಕರೆಯುತ್ತಾರೆ.[೨][೩]

ಆವಾಸಸ್ಥಾನ ಮತ್ತು ವಿಧ[ಬದಲಾಯಿಸಿ]

ಭಾರತೀಯ ಮತ್ತು ಪೆಸಿಫಿಕ್ ಸಮುದ್ರ ತೀರದ ಬೆಚ್ಚಗಿನ ಆಳವಿಲ್ಲದ ನೀರಿನಲ್ಲಿ ಇವುಗಳು ಹೆಚ್ಚಾಗಿ ಕಂಡುಬರುತ್ತವೆ. ಇದು ಕರ್ನಾಟಕದ ಕರಾವಳಿ ತೀರ ಪ್ರದೇಶ ಮತ್ತು ಮಂಗಳೂರಿನ ಅತ್ಯಂತ ಜನಪ್ರಿಯ ಮೀನು ಆಹಾರ. ಬಂಗುಡೆಯಲ್ಲಿ ಸುಮಾರು ೨೧ ವಿಧಗಳಿವೆ. ಬಂಗುಡೆಯು ಸ್ಕೊಂಬ್ರಿಡೆ ಕುಟುಂಬಕ್ಕೆ ಸೇರಿದೆ. ಸ್ಕೊಂಬರ್ ಮತ್ತು ರಾಶ್ಟ್ರೆಲ್ಲಿಗೆರ್ ಬಂಗುಡೆಯ ಪ್ರಮುಖ ಪ್ರಜಾತಿಗಳು. ಭಾರತೀಯ ಬಂಗುಡೆ ಮೀನಿಗೆ ಇಂಡಿಯನ್ ಮ್ಯಾಕೆರೆಲ್ ಎಂದು ಕರೆಯುತ್ತಾರೆ. ಕರಾವಳಿಯ ಬಂಗುಡೆಗಳಲ್ಲಿ ನುರುವಾಯಿ ಬಂಗುಡೆಯು ಒಂದು ವಿಧ.[೪]

ಗುಣಲಕ್ಷಣಗಳು[ಬದಲಾಯಿಸಿ]

ಹೆಚ್ಚಿನ ಬಂಗುಡೆ ಮೀನುಗಳು ಸ್ಕೊಂಬ್ರಿಡೆ ಕುಟುಂಬಕ್ಕೆ ಸೇರಿದೆ. ಇವು ಸಾಧಾರಣವಾಗಿ ಟ್ಯೂನ ಮೀನಿಗಿಂತಲೂ ಚಿಕ್ಕದಾಗಿರುತ್ತವೆ. ಇದರ ಕಿವಿರುಗಳು ಮತ್ತು ರೆಕ್ಕೆಗಳು ಸಣ್ಣದಾಗಿರುತ್ತವೆ.

ಆಹಾರಾಂಶ[ಬದಲಾಯಿಸಿ]

ಬಂಗುಡೆ ಮೀನಿನಲ್ಲಿ ಸರಾಸರಿ ೧೩% ಕೊಬ್ಬಿನಾಂಶ,೧೮% ಪ್ರೋಟೀನ್ ಹಾಗೂ ಎ ಮತ್ತು ಡಿ ಜೀವಸತ್ವ ಇದೆ. ಖನಿಜಾಂಶಗಳಾದ ಕ್ಯಾಲ್ಸಿಯಂ, ರಂಜಕ, ಪೊಟಾಶಿಯಂ, ಸೋಡಿಯಂ, ಮೆಗ್ನೇಶಿಯಂ, ಕಾರ್ಬೊಹೈಡ್ರೇಟ್ ಮತ್ತು ಸತು ಇದರಲ್ಲಿ ಇದೆ. ಬಂಗುಡೆ ಸುಮಾರು ೬೩% ನೀರಿನಾಂಶ ಹೊಂದಿದೆ.[೫][೬]

ಜೀವನ ಚಕ್ರ[ಬದಲಾಯಿಸಿ]

ಹೆಣ್ಣು ಮೀನು ೩,೦೦,೦೦೦ ದಿಂದ ೧೫,೦೦,೦೦೦ ಮೊಟ್ಟೆಗಳನ್ನು ಇಡುತ್ತವೆ. ಬಂಗುಡೆ ಮೀನಿನ ಮೊಟ್ಟೆಗಳು ಲಾರ್ವಾ ರೂಪದಲ್ಲಿರುವುದರಿಂದ ತೆರೆದ ಸಮುದ್ರದಲ್ಲಿ ತೇಲುತ್ತವೆ.

ಉಲ್ಲೇಖ[ಬದಲಾಯಿಸಿ]

  1. Collette, B.; Di Natale, A.; Fox, W.; Juan Jorda, M. & Nelson, R. (2011). "Rastrelliger kanagurta". IUCN Red List of Threatened Species. 2011: e.T170328A6750032. doi:10.2305/IUCN.UK.2011-2.RLTS.T170328A6750032.en. Retrieved 1 December 2022.
  2. https://www.etymonline.com/word/mackerel
  3. https://m.dailyhunt.in/news/bangladesh/kannada/avadi-epaper-avadi/bangude+khyaatigenu+kadame-newsid-97926691
  4. https://www.sciencedaily.com/releases/2012/02/120208103226.htm
  5. https://kannada.boldsky.com/health/wellness/2018/amazing-health-benefits-of-bangada-fish-018957.html
  6. https://www.bbcgoodfood.com/recipes/collection/mackerel
"https://kn.wikipedia.org/w/index.php?title=ಬಂಗುಡೆ&oldid=1187641" ಇಂದ ಪಡೆಯಲ್ಪಟ್ಟಿದೆ