ವಿಷಯಕ್ಕೆ ಹೋಗು

ಆಲೂಗಡ್ಡೆಯ ಉಪ್ಪೇರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಫ಼್ರೆಂಚ್ ಫ಼್ರೈಸ್ ಇಂದ ಪುನರ್ನಿರ್ದೇಶಿತ)
French fries
A dish of French fries
ಮೂಲ
ಪರ್ಯಾಯ ಹೆಸರು(ಗಳು)Belgian fries, chips, fries, French-fried potatoes, steak fries, wedges, potato wedges, frites, freedom fries
ಮೂಲ ಸ್ಥಳBelgium
ವಿವರಗಳು
ಸೇವನಾ ಸಮಯSide dish or, rarely, as a main dish
ಬಡಿಸುವಾಗ ಬೇಕಾದ ಉಷ್ಣತೆHot, generally salted, often served with ketchup, vinegar, barbecue sauce, mayonnaise, or other sauces on the side
ಮುಖ್ಯ ಘಟಕಾಂಶ(ಗಳು)Potatoes and oil

ಫ್ರೆಂಚ್ ಫ್ರೈಸ್ (ಅಮೆರಿಕನ್ ಇಂಗ್ಲೀಷ್, ಅಥವಾ ಚಿಪ್ಸ್ ಕೆಲವು ಬಾರಿ ದೊಡ್ಡಕ್ಷರವಾಗಿ ಬರೆಯಲಾಗುತ್ತದೆ[])ಉಪ್ಪೇರಿ [] ಅಥವಾ ಆಲೂಗಡ್ಡೆಯ ಉಪ್ಪೇರಿ ಬಿಸಿ ಎಣ್ಣೆಯಲ್ಲಿ ಹುರಿದ ಆಲೂಗಡ್ಡೆಯ ತೆಳುವಾದ ಚೂರುಗಳು.[] ಅಮೆರಿಕನ್ನರು ಸಾಮಾನ್ಯವಾಗಿ ಯಾವುದೇ ಉದ್ದನೆಯ ಹುರಿದ ಆಲೂಗಡ್ಡೆ ಚೂರುಗಳಿಗೆ ಉಪ್ಪೇರಿ ಎಂದು ಉಲ್ಲೇಖಿಸುತ್ತಾರೆ. ಆದರೆ ವಿಶ್ವದ ಬೇರೆ ಭಾಗಗಳಲ್ಲಿ ವಿಶೇಷವಾಗಿ ಯುನೈಟೆಡ್ ಕಿಂಗ್ಡಮ್, ಆಸ್ಟ್ರೇಲಿಯ, ಐರ್ಲೆಂಡ್ ಮತ್ತು ನ್ಯೂಜಿಲೆಂಡ್‌ನಲ್ಲಿ ದಪ್ಪವಾಗಿ ಕತ್ತರಿಸಿದ ಚಿಪ್ಸ್ ಎಂದು ಕರೆಯಲಾಗುವ ಚೂರುಗಳಿಂದ ಪ್ರತ್ಯೇಕಿಸಲು ಉದ್ದವಾದ ತೆಳುವಾಗಿ ಕತ್ತರಿಸಿದ ಹುರಿದ ಆಲೂಗಡ್ಡೆಗಳ ಚೂರುಗಳನ್ನು ಉಪ್ಪೇರಿ ಎಂದು ಕರೆಯಲಾಗುತ್ತದೆ.[] ಆಲೂಗಡ್ಡೆ ಉಪ್ಪೇರಿಗಳನ್ನು ಫ್ರೆಂಚ್‌ನಲ್ಲಿ ಫ್ರೈಟ್ಸ್ ಅಥವಾ ಪೊಮ್ಮೆಸ್ ಫ್ರೈಟ್ಸ್ ಎಂದು ಕರೆಯಲಾಗುತ್ತದೆ. ಫ್ರೆಂಚ್ ಭಾಷಿಕರಲ್ಲದ ಅನೇಕ ಪ್ರದೇಶಗಳಲ್ಲಿ ಕೂಡ ಅದನ್ನು ಬಳಸಲಾಗುತ್ತದೆ. ಉಳಿದಕಡೆಗಳಲ್ಲಿ "ಫ್ರೈಡ್ ಪೊಟೇಟೊಸ್" ಅಥವಾ "ಫ್ರೆಂಚ್ ಪೊಟೇಟೋಸ್" ಎಂದು ಅರ್ಥ ಕೊಡುವ ಹೆಸರುಗಳನ್ನು ಹೊಂದಿವೆ.

ವ್ಯುತ್ಪತ್ತಿ

[ಬದಲಾಯಿಸಿ]
ಒಲೆಯಲ್ಲಿ ಬೇಯಿಸಿದ ಉಪ್ಪೇರಿಗಳು

ಥಾಮಸ್ ಜೆಫರ್‌ಸನ್ ೧೮೦೨ರಲ್ಲಿ ನಡೆದ ಶ್ವೇತಭವನದ ಭೋಜನಕೂಟದಲ್ಲಿ ಫ್ರೆಂಚ್ ವಿಧಾನದಲ್ಲಿ ಆಲೂಗಡ್ಡೆಗಳನ್ನು ಬಡಿಸಿದರು.[][][] ೨೦ನೇ ಶತಮಾನದ ಪೂರ್ವದಲ್ಲಿ "ಫ್ರೆಂಚ್ ಫ್ರೈಡ್" ಪದವನ್ನು ಡೀಪ್-ಫ್ರೈಡ್ ಅರ್ಥದಲ್ಲಿ ಬಳಸಲಾಯಿತು. ಆಲೂಗಡ್ಡೆಗಳಲ್ಲದೇ ಆನಿಯನ್ ರಿಂಗ್‌ಗಳು ಅಥವಾ ಕೋಳಿಮಾಂಸ ಮುಂತಾದ ಆಹಾರಗಳಿಗೆ ಬಳಸಲಾಯಿತು.[][] ಫ್ರೆಂಚ್ ಫ್ರೈಡ್ ತೆಳುವಾದ ಉದ್ದನೆಯ ಚೂರುಗಳ(ಜೂಲಿಯನಿಂಗ್)ಅರ್ಥದಲ್ಲಿ ಫ್ರೆಂಚಿಂಗ್ ಕುರಿತು ಉಲ್ಲೇಖಿಸುವ ಸಂಭವವಿಲ್ಲ. ಆಲೂಗಡ್ಡೆ ಉಪ್ಪೇರಿಗಳು ಬಳಕೆಗೆ ಬರುವ ತನಕ ಅದು ದೃಢೀಕರಣವಾಗಿರಲಿಲ್ಲ. ಅದಕ್ಕೆ ಮುಂಚಿತವಾಗಿ ಫ್ರೆಂಚಿಂಗ್ ಕೆಳಕಾಲಿನ ಮಾಂಸದ ಚೂರನ್ನು ಕತ್ತರಿಸುವುದನ್ನು ಉಲ್ಲೇಖಿಸುತ್ತಿತ್ತು.[೧೦]

ಪಾಕಯೋಗ್ಯ ಮೂಲ

[ಬದಲಾಯಿಸಿ]

ಬೆಲ್ಜಿಯಂ

[ಬದಲಾಯಿಸಿ]

ಸ್ಪಾನಿಷ್ ನೆದರ್‌ಲ್ಯಾಂಡ್ಸ್‌ನ ಡಿನಾಂಟ್ ಮತ್ತುಲೈಗ್‌ ನಡುವೆ ಮ್ಯೂಸ್ ಕಣಿವೆ ಯ ಪ್ರದೇಶದಲ್ಲಿ ೧೬೮೦ರಲ್ಲಿ ಆಲೂಗಡ್ಡೆಗಳನ್ನು ಹುರಿಯಲಾಯಿತು ಎಂದು ಬೆಲ್ಜಿಯದ ಪತ್ರಕರ್ತ ಜೋ ಗೆರಾರ್ಡ್ ನೆನಪಿಸಿಕೊಳ್ಳುತ್ತಾರೆ.ಈ ಪ್ರದೇಶದ ಬಡ ನಿವಾಸಿಗಳು ಸಣ್ಣ ಹುರಿದ ಮೀನನ್ನು ಭೋಜನಗಳ ಜತೆ ಸೇವಿಸುವುದು ರೂಢಿಯಾಗಿತ್ತು . ಆದರೆ ನದಿ ಹೆಪ್ಪುಗಟ್ಟಿದಾಗ, ಮೀನು ಹಿಡಿಯಲು ಅವರು ವಿಫಲರಾಗಿ, ಭೋಜನದ ಜತೆಗೆ ಸೇವಿಸಲು ಆಲೂಗಡ್ಡೆಗಳನ್ನು ಉದ್ದವಾಗಿ ಕತ್ತರಿಸಿ ಎಣ್ಣೆಯಲ್ಲಿ ಹುರಿದರು.[೧೧][೧೨] ಅಮೆರಿಕದ ಸೈನಿಕರು ವಿಶ್ವ ಯುದ್ಧ Iರ ಸಂದರ್ಭದಲ್ಲಿ ಬೆಲ್ಜಿಯಂಗೆ ಆಗಮಿಸಿದಾಗ, ಫ್ರೆಂಚ್ ಪದವನ್ನು ಪರಿಚಯಿಸಲಾಯಿತು ಮತ್ತು ತರುವಾಯ ಬೆಲ್ಜಿಯನ್ ಉಪ್ಪೇರಿ ರುಚಿಯನ್ನು ಕಂಡರು ಎಂದು ಅನೇಕ ಬೆಲ್ಜಿಯನ್ನರು [who?]ನಂಬಿದ್ದಾರೆ.[ಸೂಕ್ತ ಉಲ್ಲೇಖನ ಬೇಕು] ಅವರು ಬಹುಶಃ ಅವುಗಳನ್ನು "ಫ್ರೆಂಚ್" ಎಂದು ಕರೆದರು. ಆ ಸಮಯದಲ್ಲಿ ಅದು ಬೆಲ್ಜಿಯನ್ ಸೇನೆಯ ಅಧಿಕೃತ ಭಾಷೆಯಾಗಿತ್ತು. ಈ ಸಂದರ್ಭದಲ್ಲಿ ಆಲೂಗಡ್ಡೆ ಉಪ್ಪೇರಿ ಜನಪ್ರಿಯವಾಗಿ ಬೆಳೆಯಿತು. ಲೆಸ್ ಫ್ರೈಟ್ಸ್(ಫ್ರೆಂಚ್)ಅಥವಾ "ಫ್ರೈಟನ್"(ಡಚ್) ರಾಷ್ಟ್ರೀಯ ಲಘುಆಹಾರವಾಯಿತು ಮತ್ತು ಅನೇಕ ರಾಷ್ಟ್ರೀಯ ತಿನಿಸುಗಳ ಗಣನೀಯ ಭಾಗವಾಯಿತು.

ಗ್ರೇಟ್ ಬ್ರಿಟನ್‌

[ಬದಲಾಯಿಸಿ]

ಚಿಪ್ಸ್

[ಬದಲಾಯಿಸಿ]
ಮೀನು ಮತ್ತು ಚಿಪ್ಸ್

ಬ್ರಿಟನ್‌ನಲ್ಲಿ ಹುರಿದ ಪ್ರಥಮ ಚಿಪ್ಸ್ ೧೮೬೯ರಲ್ಲಿ ಓಲ್ಡ್‌ಹಾಮ್ ಟಾಮಿಫೀಲ್ಡ್ ಮಾರುಕಟ್ಟೆಯ ಸ್ಥಳವೆಂದು ಸ್ಪಷ್ಟವಾಗಿತ್ತು.[ಸೂಕ್ತ ಉಲ್ಲೇಖನ ಬೇಕು] ಸ್ಕಾಟ್‌ಲ್ಯಾಂಡ್‌ನಲ್ಲಿ ಚಿಪ್ಸ್ ಮೊದಲಿಗೆ ಡಂಡೀಯಲ್ಲಿ ಮಾರಾಟವಾಯಿತು, "...೧೮೭೦ರ ದಶಕದಲ್ಲಿ, ಬ್ರಿಟಿಷ್ ಭೋಜನಕಲೆಯ ವೈಭವವಾದ ಚಿಪ್- ನಗರದ ಗ್ರೀನ್‌ಮಾರ್ಕೆಟ್‌ನಲ್ಲಿ ಬೆಲ್ಜಿಯನ್ ವಲಸೆಗಾರ ಎಡ್ವರ್ಡ್ ಡಿ ಗರ್ನಿಯರ್ ಮೊದಲಿಗೆ ಮಾರಾಟ ಮಾಡಿದ.[೧೩] ಯುನೈಟೆಡ್ ಕಿಂಗ್ಡಂ ಮತ್ತು ಐರ್ಲೆಂಡ್‌ನಲ್ಲಿ ಸಾಂಪ್ರದಾಯಿಕ ಚಿಪ್ಸ್‌ಗಳನ್ನು ಸಾಮಾನ್ಯವಾಗಿ ದಪ್ಪನಾಗಿ ೯.೫-೧೩ಮಿಮೀ ನಡುವೆ (⅜ - ½ ಇಂಚುಗಳು)ಚೌಕದಲ್ಲಿ ಅಡ್ಡಛೇದ ಮಾಡಲಾಗುತ್ತದೆ ಮತ್ತು ಎರಡು ಬಾರಿ ಬೇಯಿಸಲಾಗುತ್ತದೆ(ಆದರೂ ಎರಡು ಬಾರಿ ಹುರಿಯವುದು ಇಂದು ತೀರಾ ಕಡಿಮೆ ಅಭ್ಯಾಸವಾಗಿದೆ). ಇದರಿಂದ ಹೊರಭಾಗದಲ್ಲಿ ಹೆಚ್ಚು ಸುಲಭವಾಗಿ ಮುರಿಯುವ ಮತ್ತು ಒಳಭಾಗದಲ್ಲಿ ನಯವಾಗಿರಿಸುತ್ತದೆ. ಮೇಲ್ಮೈಪ್ರದೇಶ ಮತ್ತು ಗಾತ್ರದ ನಡುವೆ ಅನುಪಾತವು ಕಡಿಮೆಯಾಗಿರುವುದರಿಂದ ಕಡಿಮೆ ಕೊಬ್ಬಿನ ಅಂಶವನ್ನು ಹೊಂದಿರುತ್ತದೆ. ದಪ್ಪವಾಗಿ ಕತ್ತರಿಸಿದ ಚಿಪ್ಸ್ ‌ಗಳನ್ನು ಸಂದರ್ಭಾನುಸಾರ ಅದರ ಸುವಾಸನೆ ಮತ್ತು ಪೌಷ್ಟಿಕ ಅಂಶವನ್ನು ವೃದ್ಧಿಸಲು ಸಿಪ್ಪೆಸುಲಿಯದ ಆಲೂಗಡ್ಡೆಗಳಿಂದ ತಯಾರಿಸಲಾಗುತ್ತದೆ. ಅದರ ಅತ್ಯಂತ ನೀರಿನ ಅಂಶದಿಂದಾಗಿ ಯುರೋಪಿನ ಫ್ರೆಂಚ್ ಫ್ರೈ ರೀತಿಯಲ್ಲಿ ಗರಿ ಗರಿ ಉಪ್ಪೇರಿ ತರಹ ಬಡಿಸುವ ಅವಶ್ಯಕತೆಯಿರುವುದಿಲ್ಲ. ಚಿಪ್ಸ್ ಜನಪ್ರಿಯ ಮೀನು ಮತ್ತು ಚಿಪ್ಸ್‌ನ ಹೊರಗೆ ಒಯ್ಯುವ ತಿನಿಸಿನ ಭಾಗವಾಗಿದೆ. ಯುನೈಟೆಡ್ ಕಿಂಗ್ಡಂ, ಆಸ್ಟ್ರೇಲಿಯ, ಐರ್ಲೆಂಡ್ ಮತ್ತು ನ್ಯೂಜಿಲೆಂಡ್‌ನಲ್ಲಿ ಮೀನು ಮತ್ತು ಚಿಪ್ ಅಂಗಡಿ ಇಲ್ಲದಿರುವ ಕೆಲವೇ ಪಟ್ಟಣಗಳಿವೆ. ಈ ರಾಷ್ಟ್ರಗಳಲ್ಲಿ "ಆಲೂಗಡ್ಡೆ ಉಪ್ಪೇರಿ" ಪದವು ಚಿಕ್ಕದಾಗಿ ಕತ್ತರಿಸಿದ(ಶೂಸ್ಟ್ರಿಂಗ್)ಉಪ್ಪೇರಿ‌ಗಳನ್ನು ಉಲ್ಲೇಖಿಸಿದ್ದು, ಅಮೆರಿಕ ಮೂಲದ ದಿಢೀರ್ ಆಹಾರದ ಫ್ರಾಂಚೈಸಿಗಳು ಪೂರೈಸುತ್ತಾರೆ.

ಫ್ರಾನ್ಸ್ ಮತ್ತು ಫ್ರೆಂಚ್ ಭಾಷಿಕ ಕೆನಡಾ

[ಬದಲಾಯಿಸಿ]

ಫ್ರಾನ್ಸ್ ಮತ್ತು ಫ್ರೆಂಚ್ ಭಾಷಿಕ ಕೆನಡಾದಲ್ಲಿ, ಹುರಿದ ಆಲೂಗಡ್ಡೆಗಳನ್ನು "ಪೊಮ್ಮೆಸ್ ಡಿ ಟೆರ್ರೆ ಫ್ರೈಟ್ಸ್ " "ಪೊಮ್ಮೆಸ್ ಫ್ರೈಟ್ಸ್" , "ಪಟಾಟೇಸ್ ಫ್ರೈಟ್ಸ್" ಅಥವಾ ಸರಳವಾಗಿ(ಸಾಮಾನ್ಯವಾಗಿ) "ಫ್ರೈಟ್ಸ್" ಎಂದು ಕರೆಯಲಾಗುತ್ತದೆ.[ಸೂಕ್ತ ಉಲ್ಲೇಖನ ಬೇಕು] ಚಿಪ್ಸ್‌ಗಳು ತೀರಾ ಸಣ್ಣದಾಗಿದ್ದು, ತೆಳುವಾಗಿದ್ದರೆ, ಐಗಿಲ್ಲೆಟೆಸ್ ಪದವನ್ನು ಬಳಸಲಾಗುತ್ತದೆ. ಪೊಮ್ಮೆಸ್ ಫ್ರೈಟ್ಸ್ ಅಮೆರಿಕನ್ ಫ್ರೆಂಚ್ ಉಪ್ಪೇರಿ‌ಗಿಂತ ಭಿನ್ನವಾಗಿರುತ್ತದೆ. ಅದರಲ್ಲಿ ಅವುಗಳನ್ನು ಸಾಮಾನ್ಯವಾಗಿ ಎರಡು ಬಾರಿ ಹುರಿಯಲಾಗುತ್ತದೆ. ಅವುಗಳನ್ನು ಹುರಿಯಲು ಭಿನ್ನ ಎಣ್ಣೆಗಳನ್ನು ಬಳಸಲಾಗುತ್ತದೆ ಮತ್ತು ಉಳಿದ ಚೂರುಗಳನ್ನು ಬಳಸಲಾಗುತ್ತದೆ ಮತ್ತು ವಿವಿಧ ವಿಧಗಳ ಆಲೂಗಡ್ಡೆಗಳನ್ನು ಬಳಸಲಾಗುತ್ತದೆ. ಪ್ಯಾರಾಮೆಂಟಿಯರ್ ಫ್ರಾನ್ಸ್‌ನಲ್ಲಿ ಆಲೂಗಡ್ಡೆಗಳ ಸೇವನೆಗೆ ಉತ್ತೇಜನ ನೀಡಿದರು. ಆದರೆ ಅವರು ನಿರ್ದಿಷ್ಟವಾಗಿ ಹುರಿದ ಆಲೂಗಡ್ಡೆಗಳ ಬಗ್ಗೆ ಪ್ರಸ್ತಾಪಿಸಲಿಲ್ಲ. ಅನೇಕ ಅಮೆರಿಕನ್ನರು ಈ ತಿನಿಸನ್ನು ಫ್ರಾನ್ಸ್‌ಗೆ ಸೇರಿದ್ದೆನ್ನುತ್ತಾರೆ ಮತ್ತು ಅಮೆರಿಕ ಅಧ್ಯಕ್ಷ ಥಾಮಸ್ ಜೆಫರ್‌ಸನ್ ಸೂಚನೆಯನ್ನು ಇದಕ್ಕೆ ಸಾಕ್ಷ್ಯವಾಗಿ ನೀಡುತ್ತಾರೆ. "Pommes de terre frites à cru, en petites tranches" ("ಆಲೂಗಡ್ಡೆಗಳನ್ನು ಹಸಿಯಾಗಿರುವಾಗ ಸಣ್ಣದಾಗಿ ಕತ್ತರಿಸಿ ಬಿಸಿ ಎಣ್ಣಯಲ್ಲಿ ಹುರಿಯುವುದು") ಥಾಮಸ್ ಜೆಫರ್ಸನ್ ಕೈನ ಹಸ್ತಪ್ರತಿಯಲ್ಲಿ (ಸರಿಸುಮಾರು ೧೮೦೧-೧೮೦೯) ಮತ್ತು ಪಾಕಸೂತ್ರವು ಬಹುಮಟ್ಟಿಗೆ ಖಚಿತವಾಗಿ ಅವರ ಮುಖ್ಯ ಬಾಣಸಿಗ,ಹೊನೊರೆ ಜೂಲಿಯನ್ ಅವರಿಂದ ಬಂದಿದೆ.[] ಇದರ ಜತೆಗೆ, ೧೮೧೩[೧೪] ರಿಂದ ಫ್ರೆಂಚ್ ಉಪ್ಪೇರಿ ಎಂದು ಬಣ್ಣಿಸುವ ಪಾಕಸೂತ್ರಗಳು ಜನಪ್ರಿಯ ಅಮೆರಿಕನ್ ಅಡುಗೆಪುಸ್ತಕಗಳಲ್ಲಿ ನೀಡಲಾಗಿದೆ. ೧೮೫೦ರ ದಶಕದ ಕೊನೆಯಲ್ಲಿ, ಅವುಗಳಲ್ಲೊಂದು "ಫ್ರೆಂಚ್ ಫ್ರೈಡ್ ಪೊಟೇಟೋಸ್" ಪದವನ್ನು ಪ್ರಸ್ತಾಪಿಸಿತು.[೧೫] ಫ್ರೈಟ್ಸ್ ಪೌಟೈನ್ ಎಂದು ಹೆಸರಾದ ಕ್ವಿಬೆಕಾಯಿಸ್ ತಿನಿಸಿನ ಮುಖ್ಯ ಘಟಕಾಂಶವಾಗಿದೆ, ಗಿಣ್ಣು ಮೊಸರುಗಳಿಂದ ಮತ್ತು ಕಂದು ರಸದಿಂದ ಮುಚ್ಚಿದ ಹುರಿದ ಆಲೂಗಡ್ಡೆಗಳನ್ನು ಹೊಂದಿರುತ್ತದೆ. ಇದು ಅನೇಕ ವ್ಯತ್ಯಾಸಗಳಿಂದ ಕೂಡಿದ ತಿನಿಸಾಗಿರುತ್ತದೆ.

ಸ್ಪೇನ್

[ಬದಲಾಯಿಸಿ]

ಸ್ಪೇನ್‌ನಲ್ಲಿ ಹುರಿದ ಆಲೂಗಡ್ಡೆಗಳನ್ನು "ಪಟಾಟಾಸ್ ಫ್ರೈಟಾಸ್" ಎಂದು ಕರೆಯಲಾಗುತ್ತದೆ. ಇನ್ನೊಂದು ಸಾಮಾನ್ಯ ರೂಪದಲ್ಲಿ ಆಲೂಗಡ್ಡೆಗಳನ್ನು ಕ್ರಮವಲ್ಲದ ಆಕಾರಗಳಲ್ಲಿ ಕತ್ತರಿಸಿ, ಮಸಾಲೆಯ ಟೊಮೇಟೊ ಸಾಸ್ ಲೇಪಿಸಲಾಗುತ್ತದೆ ಮತ್ತು ಇದನ್ನು "ಪಟಾಟಾಸ್ ಬ್ರಾವಾಸ್" ಎಂದು ಕರೆಯಲಾಗುತ್ತದೆ. ಈ ತಿನಿಸನ್ನು ಸ್ಪೇನ್‌ನಲ್ಲಿ ಆವಿಷ್ಕರಿಸಲಾಯಿತು ಎಂದು ಕೆಲವರು ಹೇಳುತ್ತಾರೆ. ಇದು ಆಲೂಗಡ್ಡೆಯು ನವ ವಿಶ್ವದ ವಸಾಹತುಗಳ ಮೂಲಕ ಕಾಣಿಸಿಕೊಂಡ ಪ್ರಥಮ ಐರೋಪ್ಯ ರಾಷ್ಟ್ರವಾಗಿದೆ ಮತ್ತು ಗೆಲಿಸಿಯದ ಮೀನಿನ ತಿನಿಸುಗಳಿಗೆ ಜತೆಯಾಗಿ ಪ್ರಥಮವಾಗಿ ಕಾಣಿಸಿಕೊಂಡಿತು. ಅಲ್ಲಿಂದ ಅದು ದೇಶದ ಉಳಿದ ಕಡೆ ಹರಡಿತು. ಒಂದು ಶತಮಾನಕ್ಕೆ ಹೆಚ್ಚು ಕಾಲದ ನಂತರ ಬೆಲ್ಜಿಯಂಗೆ ಪರಿವರ್ತನೆಯಾದ ಸ್ಪಾನಿಷ್ ನೆದರ್‌ಲ್ಯಾಂಡ್ಸ್‌ಗೆ ಕೂಡ ವಿಸ್ತರಿಸಿತು.[ಸೂಕ್ತ ಉಲ್ಲೇಖನ ಬೇಕು] ಅವಿಲಾದ ಸೇಂಟ್ ತೆರೇಸಾ ಪ್ರಥಮ ಚಿಪ್ಸ್ ಹುರಿದಿದ್ದಾರೆಂದು ಬೆಲ್ಜಿಯಂನ ಆಂಟ್‌ವರ್ಪ್‌ನ ಫ್ರೈಟ್ ಮ್ಯೂಸಿಯಂನ ಮೇಲ್ವಿಚಾರಕ ಪ್ರೊಫೆಸರ್ ಪಾಲ್ ಇಲ್ಲೆಜಮ್ಸ್ ನಂಬಿದ್ದಾರೆ. ಮೆಡಿಟರೇನಿಯನ್ ಪಾಕಪದ್ಧತಿಯಲ್ಲಿ ಹುರಿಯುವ ಸಂಪ್ರದಾಯವನ್ನು ಸಹ ಅವರು ಉಲ್ಲೇಖಿಸಿದ್ದಾರೆ.[೧೨][೧೬] [೧೬]

ವಿಸ್ತರಿಸಿದ ಜನಪ್ರಿಯತೆ

[ಬದಲಾಯಿಸಿ]
ತಾಪಸ್ಥಾಪಿ ಉಷ್ಣತೆ ನಿಯಂತ್ರಣದೊಂದಿಗೆ ಹೊಟೆಲೊಂದರಲ್ಲಿ ಆಲೂಗಡ್ಡೆ ಉಪ್ಪೇರಿ ತಯಾರಿಕೆ

ಶೈತ್ಯೀಕರಿಸಿದ ಉಪ್ಪೇರಿ

[ಬದಲಾಯಿಸಿ]

J. R. ಸಿಂಪಲ್‌ಟನ್ ಕಂಪೆನಿ ೧೯೪೦ರ ದಶಕದಲ್ಲಿ ಆಲೂಗಡ್ಡೆ ಉಪ್ಪೇರಿಯನ್ನು ಶೈತ್ಯೀಕರಿಸಿದ ರೂಪದಲ್ಲಿ ಯಶಸ್ವಿಯಾಗಿ ವಾಣಿಜ್ಯೀಕರಿಸಿದ ಹಿರಿಮೆ ಗಳಿಸಿದೆ. ತರುವಾಯ, ೧೯೬೭ರಲ್ಲಿ ಮೆಕ್‌ಡೊನಾಲ್ಡ್‌ನ ರೇ ಕ್ರೊಕ್ ಸಿಂಪಲ್‌ಟನ್ ಕಂಪೆನಿಗೆ ತಾಜಾ ಕತ್ತರಿಸಿದ ಆಲೂಗಡ್ಡೆಗಳಿಗೆ ಬದಲಾಗಿ ಶೈತ್ಯೀಕರಿಸಿದ ಉಪ್ಪೇರಿಗಳನ್ನು ಪೂರೈಸುವಂತೆ ಗುತ್ತಿಗೆ ನೀಡಿದರು. ೨೦೦೪ರಲ್ಲಿ, ಅಮೆರಿಕದ ಆಲೂಗಡ್ಡೆ ಬೆಳೆಯಲ್ಲಿ ೨೯%ರಷ್ಟನ್ನು ಶೈತ್ಯೀಕರಿಸಿದ ಉಪ್ಪೇರಿ ತಯಾರಿಕೆಗೆ ಬಳಸಲಾಯಿತು- ೯೦%ನ್ನು ಆಹಾರ ಸೇವೆಗಳ ಕ್ಷೇತ್ರ ಮತ್ತು ಚಿಲ್ಲರೆ ಕ್ಷೇತ್ರವು ೧೦%ಸೇವಿಸುತ್ತದೆ.[೧೭] UK ಯ ಮನೆಗಳ ಪೈಕಿ ೮೦% ಪ್ರತೀ ವರ್ಷ ಶೈತ್ಯೀಕರಿಸಿದ ಉಪ್ಪೇರಿ‌ಗಳನ್ನು ಖರೀದಿಸುತ್ತದೆ ಎಂದು ಅಂದಾಜು ಮಾಡಲಾಗಿದೆ.[೧೮] ಕೆನಡಾದ ಮೆಕೇನ್ ಫುಡ್ಸ್ ಶೈತ್ಯೀಕರಿಸಿದ ಉಪ್ಪೇರಿ‌ಯ ವಿಶ್ವದ ಪ್ರಮುಖ ಉತ್ಪಾದಕವಾಗಿದೆ. ಗೃಹಬಳಕೆಯ ಉತ್ಪನ್ನಗಳ ಜತೆಯಲ್ಲಿ, ಅವು ಮೆಕ್‌ಡೊನಾಲ್ಡ್ ಮತ್ತು ಕೆಎಫ್‌ಸಿ ಮುಂತಾದ ದಿಢೀರ್ ಆಹಾರ ತಯಾರಿಕೆಯ ಕಂಪೆನಿಗಳಿಗೆ ಅವು ಶೈತ್ಯೀಕರಿಸಿದ ಉಪ್ಪೇರಿ ಪೂರೈಕೆ ಮಾಡುತ್ತವೆ.

ಅಮೆರಿಕದ ಪ್ರಭಾವ

[ಬದಲಾಯಿಸಿ]

ಚಿಪ್ಸ್ ಬಹುತೇಕ ಕಾಮನ್‌ವೆಲ್ತ್ ರಾಷ್ಟ್ರಗಳಲ್ಲಿ ಈಗಾಗಲೇ ಜನಪ್ರಿಯ ಆಹಾರವಾಗಿದ್ದರೂ, ಫ್ರೆಂಚ್ ಉಪ್ಪೇರಿ‌ಯ ತೆಳು ಶೈಲಿಯನ್ನು U.S.ಆಧಾರದ ಫಾಸ್ಟ್ ಫುಡ್ ಸರಪಣಿಗಳಾದ ಮೆಕಡೊನಾಲ್ಡ್`ಸ್ ಮುಂತಾದವು ವಿಶ್ವಾದ್ಯಂತ ಆಂಶಿಕವಾಗಿ ಜನಪ್ರಿಯಗೊಳಿಸಿದವು.[ಸೂಕ್ತ ಉಲ್ಲೇಖನ ಬೇಕು] ೧೯೬೦ರ ದಶಕದಿಂದ ಮನೆಯ ಅಡುಗೆಗೆ ಪೂರ್ವ ನಿರ್ಮಿತ ಆಲೂಗಡ್ಡೆ ಉಪ್ಪೇರಿ ಲಭ್ಯವಿವೆ. ಸಾಮಾನ್ಯವಾಗಿ ಮುಂಚಿತವಾಗಿ ಹುರಿದು(ಕೆಲವು ಬಾರಿ ಬೇಯಿಸಿದ), ಶೈತ್ಯೀಕರಿಸಿ, ಮೊಹರು ಮಾಡಿದ ಪ್ಲಾಸ್ಟಿಕ್ ಚೀಲದಲ್ಲಿ ಇರಿಸಲಾಗುತ್ತದೆ. ಆಲೂಗಡ್ಡೆ ಉಪ್ಪೇರಿಗಳ ನಂತರ ವೈವಿಧ್ಯಗಳು ಜಜ್ಜಿದ ಮತ್ತು ಬ್ರೆಡ್ಡಿನ ಚೂರುಗಳಿಂದ ಮುಚ್ಚಿರುವುದು ಸೇರಿರುತ್ತದೆ. ಅನೇಕ ಅಮೆರಿಕ ದಿಢೀರ್ ಆಹಾರ ಮತ್ತು ಸಾಮಾನ್ಯ ಆಹಾರ ಸರಪಣಿಗಳು ಕಾಶಿ, ಡೆಕ್ಸ್‌ಟ್ರಿನ್ ಪುಡಿ ಉದುರಿಸುವುದಕ್ಕೆ ಪರಿವರ್ತಿತವಾಗಿದೆ ಮತ್ತು ನಿರ್ದಿಷ್ಟ ರುಚಿಗಳ ಉಪ್ಪೇರಿಗಳಿಗೆ ಸುವಾಸನೆಗಳನ್ನು ಲೇಪಿಸಲಾಗುತ್ತದೆ. ಜಜ್ಜುವಿಕೆಗಳು ಮತ್ತು ಬ್ರೆಡ್ ಚೂರುಗಳಿಂದ ಮುಚ್ಚಿದ ಫಲಿತಾಂಶಗಳು ಮತ್ತು ಅದನ್ನು ಅನುಸರಿಸಿದ ಮೈಕ್ರೋವೇವಿಂಗ್ ವ್ಯಾಪಕ ಅಂಗೀಕಾರವನ್ನು ಸಾಧಿಸಿಲ್ಲ. ಒಲೆಯಿಂದ ಹುರಿಯುವುದು ಸಾಂಪ್ರದಾಯಿಕವಾಗಿ ಹುರಿದ ತಿನಿಸಿಗಿಂತ ಭಿನ್ನವಾದ ತಿನಿಸನ್ನು ನೀಡುತ್ತದೆ.[೧೯]

ವೈವಿಧ್ಯತೆಗಳು

[ಬದಲಾಯಿಸಿ]
ಎನಿಮಲ್ ಫ್ರೈಸ್ (ಗಿಣ್ಣು, ಸುಟ್ಟ ಈರುಳ್ಳಿಗಳು ಮತ್ತು ಲೇಪನ) ಇನ್-N-ಔಟ್ ಬರ್ಗರ್ ಗುಪ್ತ ಮೆನುವಿನಿಂದ.

"ಥಿಕ್ ಕಟ್ ಫ್ರೈಸ್", "ಸ್ಟೀಕ್ ಫ್ರೈಸ್", "ಶೂಸ್ಟ್ರಿಂಗ್ ಫ್ರೈಸ್", "ಜೊಜೊ ಫ್ರೈಸ್", "ಕ್ರಿಂಕಲ್ ಫ್ರೈಸ್", "ಕರ್ಲಿ ಫ್ರೈಸ್", "ಹ್ಯಾಂಡ್‌ಕಟ್ ಫ್ರೈಸ್" ಮತ್ತು "ಟೊರ್ನೆಡೊ ಫ್ರೈಸ್" ಮುಂತಾದ ವ್ಯತ್ಯಾಸಗಳನ್ನು ಉಪ್ಪೇರಿಗಳು ಹೊಂದಿವೆ. ಸಿಪ್ಪೆಯನ್ನು ಉಳಿಸಿಕೊಂಡು ದಪ್ಪನಾಗಿ ಕತ್ತರಿಸಿದ ಉಪ್ಪೇರಿಯನ್ನು ಆಲೂಗಡ್ಡೆ ವೆಜಸ್‌ಗಳೆಂದು ಕರೆಯಲಾಗುತ್ತದೆ. ಆಲೂಗಡ್ಡೆಯ ಸಿಪ್ಪೆಯಿಲ್ಲದ ಉಪ್ಪೇರಿಗಳನ್ನು ಸ್ಟೀಕ್ ಫ್ರೈಸ್ ಎಂದು ಕರೆಯಲಾಗುತ್ತದೆ. ಇದು ಅವಶ್ಯಕವಾಗಿ ಬ್ರಿಟಿಷ್ "ಚಿಪ್‌"ನ ಅಮೆರಿಕಕ್ಕೆ ಸಮಾನವಾದ ಪದವಾಗಿದೆ. ಅವುಗಳನ್ನು ಬ್ರೆಡಿಂಗ್‌ನಿಂದ, ಸಂಬಾರದ್ರವ್ಯದಿಂದ ಅಥವಾ ಇತರೆ ಘಟಕಾಂಶದಿಂದ ಲೇಪಿಸಬಹುದು. ಸುವಾಸನೆಭರಿತ ಉಪ್ಪೇರಿಗಳನ್ನು ತಯಾರಿಸಲು ಇವುಗಳಲ್ಲಿ ಬೆಳ್ಳುಳ್ಳಿ ಪುಡಿ, ಈರುಳ್ಳಿ ಪುಡಿ, ಕರಿ ಮೆಣಸು, ಕೆಂಪು ಮೆಣಸು ಮತ್ತು ಉಪ್ಪು ಕೂಡ ಸೇರಿರುತ್ತದೆ. ಗಿಣ್ಣಿನ ಉಪ್ಪೇರಿಗಳನ್ನು ತಯಾರಿಸಲು ಗಿಣ್ಣು ಮತ್ತು ಒಣಮೆಣಸಿನ ಕಾಯಿ ಉಪ್ಪೇರಿಗಳನ್ನು ತಯಾರಿಸಲು ಒಣಮೆಣಸಿನ ಕಾಯಿ ಕೂಡ ಒಳಗೊಂಡಿರುತ್ತದೆ. ಕೆಲವು ಬಾರಿ ಆಲೂಗಡ್ಡೆ ಉಪ್ಪೇರಿಗಳನ್ನು ತಯಾರಿಸುವಾಗ ಒಲೆಯಲ್ಲಿ ಅಂತಿಮ ಹಂತವಾಗಿ ಬೇಯಿಸಲಾಗುತ್ತದೆ(ಕಾರ್ಖಾನೆಯಲ್ಲಿ ತಯಾರಿಕೆಯ ಸಂದರ್ಭದಲ್ಲಿ ಎಣ್ಣೆಯಿಂದ ಲೇಪಿಸಲಾಗುತ್ತದೆ): ಇವುಗಳನ್ನು ಸಾಮಾನ್ಯವಾಗಿ ಶೈತ್ಯೀಕರಣದಲ್ಲಿ ಮಾರಾಟ ಮಾಡಲಾಗುತ್ತದೆ ಮತ್ತು ಅವನ್ನು ಓವನ್ ಉಪ್ಪೇರಿ ಅಥವಾ ಓವನ್ ಚಿಪ್ಸ್ ಎಂದು ಕರೆಯಲಾಗುತ್ತದೆ. ಉತ್ತರ ಅಮೆರಿಕದಲ್ಲಿ ಕೆಲವು ಹೋಟೆಲುಗಳು ಸಾಂಪ್ರದಾಯಿಕ ಆಲೂಗಡ್ಡೆಗಳಿಗೆ ಬದಲಾಗಿ ಸಿಹಿ ಆಲೂಗಡ್ಡೆಗಳಿಂದ ತಯಾರಿಸಿದ ಆಲೂಗಡ್ಡೆ ಉಪ್ಪೇರಿಗಳನ್ನು ಒದಗಿಸುತ್ತವೆ.[ಸೂಕ್ತ ಉಲ್ಲೇಖನ ಬೇಕು] ಸುಕ್ಕಾದ ಉಪ್ಪೇರಿಗಳು ಅವುಗಳ ಆಕಾರದಿಂದ ಸುವಾಸನೆಯನ್ನು ಕಾಯ್ದುಕೊಳ್ಳುತ್ತವೆ. ಅವು ಸಣ್ಣ ಗಾಳಿ ಪೊಟ್ಟಣಗಳನ್ನು ಸೃಷ್ಟಿಸಿ ಸುವಾಸನೆಯನ್ನು ಹಿಡಿದಿಡುತ್ತದೆ.

ಮೆಣಸಿನ ಗಿಣ್ಣಿನ ಉಪ್ಪೇರಿಗಳು

ಫ್ರಾನ್ಸ್‌ನಲ್ಲಿ ದಪ್ಪನಾಗಿ ಕತ್ತರಿಸಿದ ಉಪ್ಪೇರಿಗಳನ್ನು ಪಾಮ್ಮೇಸ್ ಪಾಂಟ್ ನ್ಯೂಫ್ ಅಥವಾ ಸರಳವಾಗಿ ಪಾಮ್ಮೇಸ್ ಫ್ರೈಟ್ಸ್ ಎಂದು ಕರೆಯಲಾಗಿದ್ದು, ೧೦ ಮಿಮೀ ದಪ್ಪಗಿರುತ್ತದೆ. ತೆಳು ಭಿನ್ನತೆಗಳು ಪಾಮ್ಮೆಸ್ ಅಲ್ಯುಮೆಟ್ಟೆಸ್ (ಮ್ಯಾಚ್‌ಸ್ಟಿಕ್ ಆಲೂಗಡ್ಡೆಗಳು) ±೭ ಮಿಮೀ ಮತ್ತು ಪಾಮ್ಮೆಸ್ ಪೈಲೆಸ್ (ಆಲೂಗಡ್ಡೆ ಸ್ಟ್ರಾಗಳು),೩-೪ಮಿಮೀ(ಸರಿಸುಮಾರು ಕ್ರಮವಾಗಿ ⅜, ¼ and ⅛ ಇಂಚುಗಳು).[೨೦] ಎರಡು ಬಾರಿ ನೆನೆಯಿಸುವ ತಂತ್ರವು ಪ್ರಮಾಣಕವಾಗಿದೆ(ಬೊಕ್ಯೂಸ್). "ಪಾಮ್ಮೆಸ್ ಗಾಫ್ರೆಟ್ಟೆಸ್" ಅಥವಾ "ವ್ಯಾಫಲ್ ಉಪ್ಪೇರಿ" ಒಂದು ಮಾದರಿಯ ಆಲೂಗಡ್ಡೆ ಉಪ್ಪೇರಿಗಳಲ್ಲ. ಆದರೆ ವಾಸ್ತವವಾಗಿ ಗರಿಮುರಿಗಳಾಗಿದ್ದು, ಗ್ರೇಟರ್‌ನಲ್ಲಿ ಪ್ರತೀ ಮುಂದಿನ ಸರಿಸುವಿಕೆಗೆ ಮುಂಚಿತವಾಗಿ ಆಲೂಗಡ್ಡೆಯನ್ನು ಕಾಲು ಭಾಗ ತಿರುಗಿಸುವ ಮೂಲಕ ಮತ್ತು ಒಂದು ಬಾರಿ ಆಳವಾಗಿ ಹುರಿಯುವ ಮೂಲಕ ಪಡೆಯಲಾಗುತ್ತದೆ.[೨೧]

ಹಾರ್ವರ್ಡ್ ಸ್ಕ್ವೇರ್ ಹೊಟೆಲ್‌ನಲ್ಲಿ ಬಡಿಸುವ ಸಿಹಿ ಆಲೂಗಡ್ಡೆ ಉಪ್ಪೇರಿಗಳು.

ಜೀನ್ ಸೆಸ್ಟರ್‌ಮನ್ಸ್, ಬೆಲ್ಜಿಯನ್ ಮುಖ್ಯ ಬಾಣಸಿಗನಾಗಿದ್ದು, ಸ್ಟೆಪರ್‌ಗ್ರಾಸ್ ‌ಗೆ(ಪ್ರೈಯರಿ ಗ್ರಾಸ್)ಗೆ ಪೇಟೆಂಟ್ ಪಡೆದನು. ಅದು ತೀವ್ರವಾಗಿ ತೆಳುವಾಗಿ ಕತ್ತರಿಸಿದ ಫ್ರೆಂಚ್ ಫ್ರೈಡ್ ಆಲೂಗಡ್ಡೆಗಳಾಗಿದ್ದು, ಜರ್ಮನಿಯಲ್ಲಿ ಕೆಲಸ ಮಾಡುವಾಗ ೧೯೬೮ರಲ್ಲಿ ಅಭಿವೃದ್ಧಿಪಡಿಸಿದ್ದನು. ಈ ಹೆಸರು ನಿರ್ದಿಷ್ಟ ಸಾಸ್ ಒಳಗೊಂಡ ತಿನಿಸನ್ನು ಮತ್ತು ಅವನ ಹೊಟೆಲ್‌ನ್ನು ಉಲ್ಲೇಖಿಸುತ್ತದೆ.[೨೨] ಅವರ ಸರಪಣಿಯ ಉಪ್ಪೇರಿಗಳಿಗೆ ಪ್ಯಾಕ್ ಮಾಡಿ ಅಂಗಡಿಗಳಿಗೆ ಕಳಿಸುವುದಕ್ಕೆ ಸ್ವಲ್ಪ ಮುಂಚೆ ಸಕ್ಕರೆ ದ್ರಾವಣದಿಂದ ಅದ್ದಲಾಗುತ್ತದೆ ಎಂದು ಸಂದರ್ಶನವೊಂದರಲ್ಲಿ ಬರ್ಗರ್ ಕಿಂಗ್ ಅಧ್ಯಕ್ಷ ಡೊನಾಲ್ಡ್ ಸ್ಮಿತ್ ತಿಳಿಸಿದ್ದಾರೆ. ಸಕ್ಕರೆಯು ಅಡುಗೆ ಕೊಬ್ಬಿನಲ್ಲಿ ತಿಳಿಕಂದು ಬಣ್ಣಕ್ಕೆ ತಿರುಗಿ, ಗ್ರಾಹಕರು ನಿರೀಕ್ಷಿಸುವ ಚಿನ್ನದ ಬಣ್ಣವನ್ನು ಉತ್ಪಾದಿಸುತ್ತದೆ. ಅದರ ಹೊರತು ಉಪ್ಪೇರಿಗಳು ಹೊರಭಾಗದಲ್ಲಿ ಅಥವಾ ಒಳಭಾಗದಲ್ಲಿ ಸರಿಸುಮಾರು ಒಂದೇ ಬಣ್ಣವನ್ನು ಹೊಂದಿರುತ್ತದೆ: ಹೂರಣದ ಹಳದಿ. ಮೆಕ್‌ಡೊನಾಲ್ಡ್ ಕೂಡ ಅದರ ಉಪ್ಪೇರಿಗಳಿಗೆ ಸಕ್ಕರೆ ಕವಚಗಳನ್ನು ನೀಡುತ್ತದೆಂದು ಸ್ಮಿತ್ ನಂಬಿದ್ದಾರೆ. ಮೆಕ್‌ಡೊನಾಲ್ಡ್ ಉಪ್ಪೇರಿಗಳನ್ನು ೧೫ರಿಂದ ೨೦ ನಿಮಿಷಗಳ ಒಟ್ಟು ಕಾಲ ಹುರಿಯುತ್ತದೆಂದೂ ಮತ್ತು ಉಪ್ಪೇರಿಗಳನ್ನು ಕನಿಷ್ಠ ಎರಡು ಬಾರಿ ಹುರಿಯಲಾಗುತ್ತದೆಂದೂ ಭಾವಿಸಲಾಗಿದೆ. ಉಪ್ಪೇರಿಗಳು ದನದ ಗಟ್ಟಿಚರಬಿ ಅಥವಾ ಕೊಬ್ಬನ್ನು ಹೊಂದಿರುತ್ತದೆಂದು ಕಂಡುಬರುತ್ತದೆ.[೨೩]

ಸುರುಳಿ ಉಪ್ಪೇರಿಗಳು

ಸುರುಳಿ ಉಪ್ಪೇರಿಗಳು

[ಬದಲಾಯಿಸಿ]

ಸುರುಳಿ ಉಪ್ಪೇರಿಗಳು ಫ್ರೆಂಚ್ ಉಪ್ಪೇರಿಯ ರೀತಿಯಾಗಿದ್ದು, ಅವುಗಳ ಸ್ಪ್ರಿಂಗ್ ರೀತಿಯ ಆಕಾರದ ವಿಶಿಷ್ಠ ಲಕ್ಷಣವನ್ನು ಹೊಂದಿದೆ. ಅವುಗಳನ್ನು ಸಾಮಾನ್ಯವಾಗಿ ಇಡೀ ಆಲೂಗಡ್ಡೆಗಳಿಂದ ತಯಾರಿಸಲಾಗುತ್ತಿದ್ದು, ವಿಶೇಷ ಸುರುಳಿ ಈಳಿಗೆಯಿಂದ ಕತ್ತರಿಸಲಾಗುತ್ತದೆ. ಅವುಗಳು ಹೆಚ್ಚುವರಿ ಸುವಾಸನೆಯ ಉಪಸ್ಥಿತಿಯ ಲಕ್ಷಣಗಳಿಂದ ಕೂಡಿದೆ(ಇವು ಪ್ರಮಾಣಕ ಉಪ್ಪೇರಿಗಳ ಹಳದಿ ಬಣ್ಣದ ನೋಟಕ್ಕೆ ಹೋಲಿಸಿದರೆ ಉಪ್ಪೇರಿಗಳಿಗೆ ಹೆಚ್ಚು ಕಿತ್ತಲೆ ಬಣ್ಣದ ನೋಟವನ್ನು ನೀಡುತ್ತದೆ), ಆದರೂ ಇದು ಯಾವಾಗಲೂ ಹಾಗೆ ಇರುವುದಿಲ್ಲ. ಕೆಲವುಬಾರಿ ಅವುಗಳನ್ನು ಮನೆಯಲ್ಲಿ ತಯಾರಿಕೆಗಾಗಿ ಪ್ಯಾಕ್ ಮಾಡಲಾಗುತ್ತದೆ. ಸಾಮಾನ್ಯವಾಗಿ ಶೈತ್ಯೀಕರಿಸಿದ ಪ್ಯಾಕ್‌ಗಳಲ್ಲಿ ತಯಾರಿಸಲಾಗುತ್ತದೆ. ಅಮೆರಿಕದಲ್ಲಿ ಅನೇಕ ಹೊಟೆಲುಗಳಲ್ಲಿ ಮತ್ತು ದಿಢೀರ್ ಆಹಾರದ ಅಂಗಡಿಗಳಾದ ಆರ್ಬಿ'ಸ್ ಮತ್ತು ಹಾರ್ಡೀ`ಸ್‌ನಲ್ಲಿ ಕೂಡ ಕಂಡುಬರುತ್ತದೆ. ಕೆಚಪ್, ಗಿಣ್ಣು, ಹುರಿದ ಸಾಸ್ ಅಥವಾ ಸಿಹಿ ಮೆಣಸಿನ ಸಾಸ್ ಮತ್ತು ಹುಳಿ ಕೆನೆ ಮುಂತಾದ ಆರೋಚಕದೊಂದಿಗೆ ಅವುಗಳನ್ನು ಬಡಿಸಲಾಗುತ್ತದೆ.

ಟಾರ್ನೆಡೊ(ಬಿರುಗಾಳಿ) ಉಪ್ಪೇರಿಗಳು

ಟೊರ್ನಾಡೊ ಉಪ್ಪೇರಿ

[ಬದಲಾಯಿಸಿ]

ಟೊರ್ನಾಡೊ ಉಪ್ಪೇರಿಗಳನ್ನು ಹಸಿಯಾದ ಆಲೂಗಡ್ಡೆಯನ್ನು ಲೋಹದ ಕಂಬಿಯಿಂದ ರಂಧ್ರ ಕೊರೆದು ಸಿಕ್ಕಿಸಿ, ಆಲೂಗಡ್ಡೆಯನ್ನು ಸುರುಳಿಯಾಗಿ ಕತ್ತರಿಸುವ ವಿಶೇಷ ಬ್ಲೇಡ್‌ನಲ್ಲಿ ತಿರುಗಿಸುವ ಮೂಲಕ ಆಲೂಗಡ್ಡೆಯನ್ನು ಕತ್ತರಿಸುತ್ತದೆ, ಆದರೆ ಲೋಹದ ಕಂಬಿಯನ್ನಲ್ಲ. ಆಲೂಗಡ್ಡೆಯನ್ನು ಲೋಹದ ಕಂಬಿಯ ಉದ್ದಕ್ಕೂ ಸರಿಸಮನಾಗಿ ಹರಡಲಾಗುತ್ತದೆ ಮತ್ತು ಆಳವಾಗಿ ಹುರಿಯಲಾಗುತ್ತದೆ. ಬೇಯಿಸುವ ಪ್ರಕ್ರಿಯೆಯು ಆಲೂಗಡ್ಡೆಯನ್ನು ಲೋಹದ ಕಂಬಿಗೆ ಅಂಟುವಂತೆ ಮಾಡಿ ಸ್ಥಾನದಲ್ಲಿ ಹಿಡಿದಿಡುತ್ತದೆ. ಒಣ ಸುವಾಸನೆಗಳನ್ನು ಚಿಮುಕಿಸುವ ಮೂಲಕ ಅಥವಾ ಸಾಸ್‌‍ನೊಂದಿಗೆ ಬಡಿಸಲಾಗುತ್ತದೆ. ಟೊರ್ನಾಡೊ ಫ್ರೈ ಲೋಹದ ಕಂಬಿಯ ಮೇಲೆ ಆಲೂಗಡ್ಡೆಯು ವಿಶಿಷ್ಟ ಬಿರುಗಾಳಿಯ ಆಕಾರ ಹೊಂದುವುದರಿಂದ ಆ ಹೆಸರು ಪಡೆದಿದೆ. ಟೊರ್ನಾಡೊ ಉಪ್ಪೇರಿ‌ಗಳನ್ನು ದಕ್ಷಿಣ ಕೊರಿಯದಲ್ಲಿ ೨೦೦೧ರಲ್ಲಿ ಸೃಷ್ಟಿಸಲಾಯಿತು ಮತ್ತು ೨೦೦೫ರಲ್ಲಿ ಉತ್ತರಅಮೆರಿಕದಲ್ಲಿ ಪರಿಚಯಿಸಲಾಯಿತು.

ಜತೆ ಆರೋಚಕಗಳು

[ಬದಲಾಯಿಸಿ]

ಉಪ್ಪೇರಿಗಳನ್ನು ಬೇಯಿಸಿದ ಸ್ವಲ್ಪ ಹೊತ್ತಿನಲ್ಲೇ ಉಪ್ಪಿನಲ್ಲಿ ಸವರಲಾಗುತ್ತದೆ. ನಂತರ ಅವುಗಳನ್ನು ವಿವಿಧ ಆರೋಚಕಗಳಿಂದ ಬಡಿಸಲಾಗುತ್ತದೆ. ಉಪ್ಪು, ವಿನೇಗರ್ (ಮಾಲ್ಟ್ ವಿನೇಗರ್ ಅಥವಾ, ಕೆನಡಾದಲ್ಲಿ, ಬಿಳಿಯ ವಿನೇಗರ್), ಕೆಚಪ್, ಕರಿ, ಕರಿ ಕೆಚಪ್ (ಮುಂಚಿನ ಆರೋಚಕದ ಸ್ವಲ್ಪ ಬಿಸಿಯಾದ ಮಿಶ್ರಣ), ಬಿಸಿ ಅಥವಾ ಮೆಣಸಿನ ಸಾಸ್, ಸಾಸಿವೆ, ಮಯೋನೈಸ್, ಬೇರ್‌ನೇಸ್ ಸಾಸ್, ಟಾರ್ಟಾರ್ ಸಾಸ್, ಜಾಟ್‌ಜಿಕಿ, ಫೆಟಾ ಗಿಣ್ಣು, ಬೆಳ್ಳುಳ್ಳಿ ಸಾಸ್, ಫ್ರೈ ಸಾಸ್, ರಾಂಚ್ ಡ್ರೆಸಿಂಗ್, ಬಾರ್ಬೆಕ್ ಸಾಸ್, ಗ್ರೇವಿ, ಐಯೋಲಿ, ಕಂದು ಸಾಸ್, ನಿಂಬೆ, ಪಿಕ್ಕಾಲಿಲ್ಲಿ, ಪಿಕಲ್ಡ್ ಸೌತೆಕಾಯಿ, ಘೇರ್‌ಕಿನ್ಸ್, ಅತೀ ಸಣ್ಣ ಉಪ್ಪುನೀರಿನ ಈರುಳ್ಳಿಗಳು, ಜೇನುತುಪ್ಪ ಅಥವಾ ಬಿಸಿ ಸಾಸ್ನೊಂದಿಗೆ ಸಿದ್ಧಗೊಳಿಸಲಾಗುತ್ತದೆ.

ಆರೋಗ್ಯದ ಅಂಶಗಳು

[ಬದಲಾಯಿಸಿ]
ಎಣ್ಣೆಯಲ್ಲಿ ಬೇಯಿಸುವ ಉಪ್ಪೇರಿಗಳು

ಆಲೂಗಡ್ಡೆ ಉಪ್ಪೇರಿಗಳನ್ನು ಹುರಿಯುವುದರಿಂದ ಹೆಚ್ಚಿನ ಪ್ರಮಾಣದ ಕೊಬ್ಬು ಹೊಂದಿರುತ್ತದೆ. ನೆದರ್‌ಲ್ಯಾಂಡ್ಸ್‌ನ ಮಾಸ್ಟ್ರಿಚ್ ವಿಶ್ವವಿದ್ಯಾನಿಲಯ ೫೫ರಿಂದ ೭೦ರ ವಯೋಮಾನದ ೧೨೦೦೦೦ ವ್ಯಕ್ತಿಗಳ ಮೇಲೆ ನಿರ್ವಹಿಸಿದ ೧೩ ವರ್ಷಗಳ ಸುದೀರ್ಘ ಅವಲೋಕನದಲ್ಲಿ ಆಕ್ರಿಲಾಮೈಡ್‌ನ ಹೆಚ್ಚುವರಿ ಸೇವನೆಯಿಂದ (ಆಲೂಗಡ್ಡೆಯನ್ನು ಬೇಯಿಸಿದಾಗ ಅಥವಾ ಹುರಿದಾಗ) ಶೇಕಡ ೬೦ರಷ್ಟು ಮೂತ್ರಪಿಂಡದ ಕ್ಯಾನ್ಸರ್‌ ಅವಕಾಶವನ್ನು ಹೆಚ್ಚಿಸುತ್ತದೆಂದು ತೋರಿಸಿದೆ.[೨೪](ನೋಡಿ ಆಕ್ರಿಲಾಮೈಡ್ಸ್s). ಆದಾಗ್ಯೂ, ಸ್ವೀಡನ್‌ನ ಸ್ಟಾಕ್‌ಹೋಮ್‌ನ ಸಾರ್ವಜನಿಕ ಆರೋಗ್ಯ ಮತ್ತು ಕಾರೊಲಿನ್ಸ್‌ಕಾ ಸಂಸ್ಥೆಯ ಹಾರ್ವರ್ಡ್ ಶಾಲೆಯ ಸಂಶೋಧಕರು ಆಕ್ರಿಲಾಮೈಡ್ ಅಂಶ ಹೆಚ್ಚಿರುವ ಆಹಾರ ಸೇವನೆ ಮತ್ತು ಕ್ಯಾನ್ಸರ್ ಮೂರು ರೂಪಗಳಾದ, ಕೋಶ, ದೊಡ್ಡ ಕರುಳು ಮತ್ತು ಮೂತ್ರಪಿಂಡದ ಹೆಚ್ಚುವರಿ ಅಪಾಯಗಳ ನಡುವೆ ಯಾವುದೇ ಸಂಬಂಧವಿಲ್ಲದಿರುವುದನ್ನು ಪತ್ತೆಹಚ್ಚಿದೆ.[೨೫] ದನದ ಚರ್ಬಿ, ಹಂದಿ ಕೊಬ್ಬು ಅಥವಾ ಇತರೆ ಪ್ರಾಣಿಗಳ ಕೊಬ್ಬುಗಳು ಆಹಾರಕ್ಕೆ ಅತ್ಯಧಿಕ ಹೈಡ್ರೋಜನ್ ಪರಮಾಣುಗಳಿಂದ ಕೂಡಿದ ಕೊಬ್ಬನ್ನು ಸೇರಿಸುತ್ತದೆ. ಪ್ರಾಣಿಗಳ ಕೊಬ್ಬುಗಳನ್ನು ಪಾಮ್ ಎಣ್ಣೆ ಮುಂತಾದ ಉಷ್ಣವಲಯದ ಎಣ್ಣೆಗಳಿಂದ ಬದಲಿಸುವುದರಿಂದ, ಅತ್ಯಧಿಕ ಹೈಡ್ರೋಜನ್ ಪರಮಾಣುಗಳಿಂದ ಕೂಡಿದ ಕೊಬ್ಬನ್ನು ಇನ್ನೊಂದಕ್ಕೆ ಬದಲಿಸುತ್ತದೆ. ಪ್ರಾಣಿಗಳ ಕೊಬ್ಬುಗಳನ್ನು ಆಂಶಿಕವಾಗಿ ಜಲಜನಕೀಕರಿಸಿದ ಎಣ್ಣೆಯಿಂದ ಬದಲಿಸುವುದರಿಂದ ಕೊಲೆಸ್ಟರಾಲ್ ಕಡಿಮೆಯಾಗುತ್ತದೆ. ಆದರೆ ಟ್ರಾನ್ಸ್ ಫ್ಯಾಟ್ ಸೇರಿಸುತ್ತದೆ.ಇದು LDL ಕೊಲೆಸ್ಟರಾಲ್ ಹೆಚ್ಚಿಸುತ್ತದೆ ಮತ್ತು HDL ಕೊಲೆಸ್ಟರಾಲ್ ತಗ್ಗಿಸುತ್ತದೆ. ಕೆನೋಲಾ ಎಣ್ಣೆಯನ್ನು ಕೂಡ ಬಳಸಬಹುದು. ಆದರೆ ದನದ ಕೊಬ್ಬು ಸಾಮಾನ್ಯವಾಗಿ ಹೆಚ್ಚು ಜನಪ್ರಿಯವಾಗಿದ್ದು, ವಿಶೇಷವಾಗಿ ಮತೀಯ ಎಣ್ಣೆಯನ್ನು ಬಳಸುವ ದಿಢೀರ್ ಆಹಾರದ ಅಂಗಡಿಗಳಲ್ಲಿ ಸಾಮಾನ್ಯವಾಗಿ ಜನಪ್ರಿಯವಾಗಿದೆ.[೨೬][೨೭][೨೮] ಅನೇಕ ಹೊಟೆಲ್‌ಗಳು ಹೈಡ್ರೋಜನ್ ಪರಮಾಣು ರಹಿತ ಎಣ್ಣೆಗಳ ಬಳಕೆಯ ಬಗ್ಗೆ ಈಗ ಜಾಹೀರಾತು ನೀಡುತ್ತವೆ. ಫೈವ್ ಗೈಯ್ಸ್, ಉದಾಹರಣೆಗೆ, ಅವುಗಳ ಉಪ್ಪೇರಿಗಳು ಕಡಲೆಕಾಯಿ ಎಣ್ಣೆಯಲ್ಲಿ ತಯಾರಾಗುತ್ತದೆಂದು ಜಾಹೀರಾತು ಪ್ರಕಟಿಸುತ್ತದೆ. ಆದರೆ ಚಿಕ್-ಫಿಲ್-A ಅವು ಕ್ಯಾನೊಲಾ ಎಣ್ಣೆಯನ್ನು ಬಳಸುವುದಾಗಿ ಜಾಹೀರಾತು ನೀಡುತ್ತವೆ.

ಕಾನೂನು ವಿಷಯಗಳು

[ಬದಲಾಯಿಸಿ]

೧೯೯೪ರಲ್ಲಿ ಲಂಡನ್ ಸ್ಟ್ರಿಂಗ್‌ಫೆಲೋಸ್ ರಾತ್ರಿಕ್ಲಬ್ ಮಾಲೀಕ ಪೀಟರ್ ಸ್ಟ್ರಿಂಗ್‌ಫೆಲೊ ಮೆಕೇನ್ ಫುಡ್ಸ್ ತನ್ನ ಉದ್ದದ ತೆಳು ಚಿಪ್ಸ್‌ಗಳ ಬ್ರಾಂಡ್‌ಗೆ ಸ್ಟ್ರಿಂಗ್‌ಫೆಲೋಸ್ ಹೆಸನ್ನು ಬಳಸುವುದರ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿದರು. ಅವರು ಸ್ಟ್ರಿಂಗ್‌ಫೆಲೋಸ್ ವಿರುದ್ಧ ಮೆಕೇನ್ ಫುಡ್ (GB)ಲಿಮಿಟೆಡ್ (೧೯೯೪) ದಾವೆಯಲ್ಲಿ ಸೋತರು. ಎರಡು ಹೆಸರುಗಳ ಬಳಕೆಯ ನಡುವೆ ಸಾರ್ವಜನಿಕರ ಮನಸ್ಸಿನಲ್ಲಿ ಯಾವುದೇ ಸಂಬಂಧವಿಲ್ಲ. ಆದ್ದರಿಂದ ಮೆಕೇನ್‌ರ ಉತ್ಪನ್ನದಿಂದ ರಾತ್ರಿಕ್ಲಬ್‌ಗೆ ಯಾವುದೇ ವ್ಯಾಪಾರ ನಷ್ಟ ಉಂಟಾಗುವುದಿಲ್ಲ ಎನ್ನುವ ಆಧಾರದ ಮೇಲೆ ಅವರು ದಾವೆಯಲ್ಲಿ ಸೋತರು.[೨೯][೩೦] ೨೦೦೪ರ ಜೂನ್‌ನಲ್ಲಿ ಅಮೆರಿಕದ ಕೃಷಿ ಇಲಾಖೆಯು ಜಿಲ್ಲಾ ನ್ಯಾಯಾಧೀಶ ಟೆಕ್ಸಾಸ್, ಬ್ಯೂಮಾಂಟ್ ಸಲಹೆ ಮೇಲೆ ತೆಳು ಹಿಟ್ಟಿನಿಂದ ಲೇಪಿತವಾದ ಫ್ರೆಂಚ್ ಉಪ್ಪೇರಿ‌ನ್ನು ಕೊಳೆಯಬಹುದಾದ ಕೃಷಿ ವಸ್ತುಗಳ ಕಾಯ್ದೆ ಅನ್ವಯ ತರಕಾರಿ ಎಂದು ವರ್ಗೀಕರಿಸಿತು.ಆದರೂ ಇದನ್ನು ಮುಖ್ಯವಾಗಿ ವ್ಯಾಪಾರದ ಕಾರಣಗಳಿಗಾಗಿ ಮಾಡಲಾಯಿತು- ಫ್ರೆಂಚ್ ಉಪ್ಪೇರಿ ಸಂಸ್ಕರಿತ ಆಹಾರ ಎಂದು ಪಟ್ಟಿಮಾಡುವ ಮಾನದಂಡವನ್ನು ಮುಟ್ಟುವುದಿಲ್ಲ-ಇದು ಸೂಪರ್ ಸೈಜ್ ಮಿ ಸಾಕ್ಷ್ಯಚಿತ್ರದಿಂದ ಗಮನಾರ್ಹ ಮಾಧ್ಯಮದ ಗಮನವನ್ನು ಆಂಶಿಕವಾಗಿ ಸೆಳೆಯಿತು.

ಇವನ್ನೂ ಗಮನಿಸಿ‌

[ಬದಲಾಯಿಸಿ]

ಟೆಂಪ್ಲೇಟು:Portal

  • ಚಿಪ್ ಪ್ಯಾನ್
  • ಕಾರ್ನೆ ಅಸಾಡಾ ಉಪ್ಪೇರಿ
  • ಡೀಪ್ ಫ್ರೈಯರ್
  • ಬಿಸಿ ಎಣ್ಣೆಯಲ್ಲಿ ಹುರಿಯುವುದು
  • ಫ್ರೀಡಂ ಉಪ್ಪೇರಿ           
  • ಫ್ರೈ ಸಾಸ್
  • | ಹೋಮ್‌ ಫ್ರೈಸ್
  • ಆಲೂಗಡ್ಡೆ ವೆಜ್‌ಗಳು
  • ಪೌಟೈನ್
  • ಪಾಮ್ಮೇಸ್ ಸೌಫ್ಲೀಸ್
  • ವ್ಯಾಕ್ಯುಮ್ ಫ್ರೈಯರ್
  • ಟೇಟರ್ ಟಾಟ್ಸ್

ಉಲ್ಲೇಖಗಳು‌‌

[ಬದಲಾಯಿಸಿ]
ಟಿಪ್ಪಣಿಗಳು
  1. "french fries - Definition". Merriam-Webster Online Dictionary. 2007-04-25. Retrieved 2009-05-07.
  2. "The American Heritage Dictionary, Fourth Edition, 2000". Bartleby.com. Archived from the original on 2008-12-05. Retrieved 2009-05-07.
  3. "french fry - Definition". Food & Culture Encyclopedia. Retrieved 2009-12-05.
  4. Halliburton, Rachel; Muir, Jenni (2008). "London's best chips". Time Out London. p. 2. Archived from the original on 2008-05-19. Retrieved 2008-05-14.
  5. ೫.೦ ೫.೧ Ebeling, Charles (2005-10-31). "French fried: From Monticello to the Moon, A Social, Political and Cultural Appreciation of the French Fry". The Chicago Literary Club. Archived from the original on 2007-02-03. Retrieved 12 January 2007.
  6. Suman Bandrapalli (May 2, 2000). "Where do French fries come from?". Christian Science Monitor. Retrieved 2009-07-05. Thomas Jefferson sampled them in Paris and brought the recipe home. At a White House dinner in 1802, the menu included "potatoes served in the French manner." But that's not how they got their name. {{cite news}}: Cite has empty unknown parameter: |coauthors= (help)
  7. Fishwick, Marshall W (1998) [Summer 1998]. fee required "The Savant as Gourmet". The Journal of Popular Culture. 32 (part 1). Oxford: Blackwell Publishing: 51–58. doi:10.1111/j.0022-3840.1998.3201_51.x. {{cite journal}}: Check |url= value (help)
  8. Mackenzie, Catherine (7 April 1935). "Food the City Likes Best". The New York Times Magazine: SM18. Retrieved 2007-04-15. … the chef at the Rainbow Room launches into a description of his special steak, its French-fried onion rings, its button mushrooms
  9. Rorer, Sarah Tyson (c1902). "Page 211". Mrs. Rorer's New Cook Book. Philadelphia: Arnold & Company. p. 211. Archived from the original on 2011-05-05. Retrieved 2007-04-12. French Fried Chicken {{cite book}}: Check date values in: |year= (help); Unknown parameter |chapterurl= ignored (help)CS1 maint: year (link)
  10. ಆಕ್ಸ್ಫರ್ಡ್ ಇಂಗ್ಲೀಷ್ ನಿಘಂಟು, ಜೂನ್ ೨೦೧೦
  11. J. ಗೆರಾರ್ಡ್, Curiosités de la table dans les Pays-Bas Belgiques, s.l., ೧೭೮೧.
  12. ೧೨.೦ ೧೨.೧ Ilegems, Paul (1993) [1993]. De Frietkotcultuur (in Dutch). Loempia. ISBN 90-6771-325-2.{{cite book}}: CS1 maint: unrecognized language (link) ಉಲ್ಲೇಖ ದೋಷ: Invalid <ref> tag; name "ilegems1" defined multiple times with different content
  13. "Dundee Fact File". Dundee City Council. Archived from the original on 8 ಏಪ್ರಿಲ್ 2007. Retrieved 20 March 2007.
  14. ಉಡೆ,ಲೂಯಿಸ್. ದಿ ಫ್ರೆಂಚ್ ಕುಕ್
  15. Warren, Eliza (uncertain: 1856, 1859?). The economical cookery book for housewives, cooks, and maids-of-all-work, with hints to the mistress and servant. London: Piper, Stephenson, and Spence. p. 88. OCLC 27869877. French fried potatoes {{cite book}}: Check date values in: |year= (help); External link in |year= (help)CS1 maint: year (link)
  16. ೧೬.೦ ೧೬.೧ Schoetens, Marc (December 13, 2005). "Heilige Teresa bakte de eerste frieten" (in Dutch). De Morgen. Archived from the original on ಡಿಸೆಂಬರ್ 30, 2005. Retrieved October 25, 2006.{{cite news}}: CS1 maint: unrecognized language (link) (ಫೆಬ್ರವರಿ ೨೫ ೨೦೦೭ರಂದು ಈ ರೀತಿ ದಾಖಲೆ ಸಿಕ್ಕಿದೆ "Nieuw boek van frietprofessor Paul Ilegems over frietkotcultuur" ೨೦೦೫೧೨೧೩.೩೧೩೩೨೦೬೬೭೨೬೯೬೫೭೪)
  17. http://www.fas.usda.gov/htp/Hort_Circular/೨೦೦೧/೦೧-೦೧/froznpot.htm
  18. "ಆರ್ಕೈವ್ ನಕಲು". Archived from the original on 2011-02-11. Retrieved 2011-05-09.
  19. Gerdes, Sharon (1 December 2001). "Batters and Breadings Liven Tastes". Virgo Publishing © – Food Product Design. Archived from the original on 27 September 2007. Retrieved 24 March 2007.
  20. ಎವ್ಲಿನ್ ಸೇಂಟ್-ಆಂಗೆ, ಪಾಲ್ ಅರಾಟೊವ್(ತರ್ಜುಮೆದಾರ)ಲಾ ಬೊನ್ನೆ ಕ್ವಿಸಿನ್ ಡೆ ಮೇಡಮ್ E. ಸೇಂಟ್-ಆಂಗೆ : ದಿ ಎಸೆನ್ಷಿಯಲ್ ಕಂಪ್ಯಾನಿಯನ್ ಫಾರ್ ಅಥೆಂಟಿಕ್ ಫ್ರೆಂಚ್ ಕುಕಿಂಗ್ ,ಲಾರೌಸೆ, ೧೯೨೭, ಅನುವಾದ ಟೆನ್ ಸ್ಪೀಡ್ ಪ್ರೆಸ್,೨೦೦೫, ISBN ೧-೫೮೦೦೮-೬೦೫-೫, p. ೫೫೩.
  21. "Les pommes gauffrettes" (in ಫ್ರೆಂಚ್). "Chef Simon" Sabine et Bertrand SIMON cole. Archived from the original on 27 ಜೂನ್ 2007. Retrieved 9 April 2007.{{cite web}}: CS1 maint: unrecognized language (link)
  22. "Steppegras" (in Dutch). Restaurant Steppegras. Retrieved 17 April 2007.{{cite web}}: CS1 maint: unrecognized language (link)
  23. Poundstone, William (1983) [1983]. Big Secrets. William Morrow and Co. p. 23. ISBN 0-688-04830-7.
  24. "Frieten zijn nu officieel kankerverwekkend". University of Maastricht Holland. Retrieved 8 November 2010.
  25. "Study Shows Acrylamide In Baked And Fried Foods Does Not Increase Risk Of Certain Cancers In Humans". Harvard School of Public Health. Archived from the original on 23 ನವೆಂಬರ್ 2010. Retrieved 3 December 2010.
  26. "Fats and Cholesterol". Harvard School of Public Health. Archived from the original on 16 ಮೇ 2008. Retrieved 14 September 2006.
  27. "Trans: The Phantom Fat". Nutrition Action Healthletter (Center for Science in the Public Interest). Archived from the original on 1 ಸೆಪ್ಟೆಂಬರ್ 2006. Retrieved 14 September 2006.
  28. Mayo Clinic Staff (22 June 2006). "Dietary fats: Know which types to choose © 1998-2006". Mayo Foundation for Medical Education and Research (MFMER). Retrieved 14 September 2006.
  29. Solomon, Nicola. "Sequel opportunities". AKME Publications – Akme Student Law Library, with permission: earlier published in the New Law Journal, 25 March 1994 and in abriged form in The Author of Spring 1994. Archived from the original on 2007-08-14. Retrieved 2007-03-25.
  30. "Section 7 – Intellectual Property" (PDF). Semple Piggot Rochez Ltd. 2001. Archived from the original (PDF) on 2006-10-12. Retrieved 2007-03-25.
ಗ್ರಂಥಸೂಚಿ

ಬಾಹ್ಯ ಕೊಂಡಿಗಳು‌‌

[ಬದಲಾಯಿಸಿ]