ಪ್ರತಾಪ್ ಸಿಂಹ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪ್ರತಾಪ್ ಸಿಂಹ
Born
Occupation(s)ಪತ್ರಕರ್ತ, ಲೇಖಕ, ಲೋಕಸಭಾ ಸಂಸದ
Spouseಡಾ.ಅರ್ಪಿತಾ
Childrenವಿಪಂಚಿ
Parent(s)ಬಿ.ಇ. ಗೋಪಾಲ ಗೌಡ, ಪುಷ್ಪ
Websitehttp://pratapsimha.com/

ಪ್ರತಾಪ್ ಸಿಂಹ ಕನ್ನಡದ ಜನಪ್ರಿಯ ಅಂಕಣಕಾರರು ಹಾಗೂ ಪತ್ರಿಕೋದ್ಯಮಿ. ಸಕಲೇಶಪುರದಲ್ಲಿ ಜನಿಸಿರುವ ಇವರು ತಮ್ಮ ಪದವಿ ಪುರ್ವ ಶಿಕ್ಷಣವನ್ನು ಚಿಕ್ಕಮಗಳೂರುನಲ್ಲಿ ಮುಗಿಸಿ, ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯಲ್ಲಿರುವ ಎಸ್ ಡಿ ಎಮ್ ಕಾಲೇಜಿನಿಂದ ಮನಃಶಾಸ್ತ್ರ ಹಾಗೂ ಪತ್ರಿಕೋದ್ಯಮದಲ್ಲಿ ಪದವಿಯನ್ನು ಪಡೆದಿದ್ದಾರೆ. ಎಂಸಿಜೆ ಮಂಗಳೂರಿನಿಂದ ಪತ್ರಿಕೋದ್ಯಮದಲ್ಲಿ ಸ್ನಾತ್ತಕೋತ್ತರ ಪದವಿ ಹಾಗೂ ಎಮ್ ಐ ಸಿ ಇ ಮಂಗಳೂರಿಂದ ಕಂಪ್ಯೂಟರ್ ಅಪ್ಲಿಕೇಷನ್ ಡಿಪ್ಲೋಮಾ ಮಾಡಿದ್ದರೆ. ವಿಜಯಕರ್ನಾಟಕ ಪತ್ರಿಕೆಯಲ್ಲಿ ಬರೆಯುತ್ತಿದ್ದ ಬೆತ್ತಲೆ ಜಗತ್ತು ಅಂಕಣದಿಂದ ಜನಪ್ರಿಯರಾದ ಇವರು ಅನಂತರ ಕನ್ನಡಪ್ರಭ ಪತ್ರಿಕೆಯಲ್ಲಿ ಸುದ್ದಿ ಸಂಪಾದಕರಾಗಿ ಕಾರ್ಯ ನಿರ್ವಹಿಸಿದರು ಮತ್ತು 'ಬೆತ್ತಲೆ ಪ್ರಪಂಚ' ಅಂಕಣ ಬರೆಯುತ್ತಿದ್ದರು. ಕರ್ನಾಟಕ ರಾಜ್ಯಸಕಾ೯ರ ನೀಡುವ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿದ್ದಾ ರೆ. ೨೦೧೪ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಮೈಸೂರು ಲೋಕಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿ ಆಯ್ಕೆಯಾದರು.

ಕೃತಿಗಳು[ಬದಲಾಯಿಸಿ]

ಅಂಕಣ ಬರಹಗಳ ಸಂಗ್ರಹ[ಬದಲಾಯಿಸಿ]

  • ಬೆತ್ತಲೆ ಜಗತ್ತು - ೧೪ ಪುಸ್ತಕಗಳು (ಅಂಕಣ ಬರಹಗಳ ಸಂಗ್ರಹ)
  • ನರೇಂದ್ರ ಮೋದಿ; ಯಾರೂ ತುಳಿಯದ ಹಾದಿ.
  • ಟಿಪ್ಪುಸುಲ್ತಾನ: ಸ್ವಾತಂತ್ರವೀರನಾ?
  • ನೇತಾಜಿ: ಚಲೋ ದಿಲ್ಲಿ ಎಂದು ಹೋದರೆಲ್ಲಿ?.
  • ಮೈನಿಂಗ್ ಮಾಫಿಯಾ
  • ಮೋದಿ ಮುಸ್ಲಿಂ ವಿರೋಧಿಯೇ?

ಪ್ರಶಸ್ತಿಗಳು[ಬದಲಾಯಿಸಿ]

  • ೨೦೦೫ ರಲ್ಲಿ ಶಿವಮೊಗ್ಗದ ಶ್ರೀಗಂಧ ಚಾರಿಟೆಬಲ್ ಟ್ರಸ್ಟ್ನ ಪ್ರತಿಭಾನ್ವಿತ ಯುವ ಪತ್ರಕರ್ತ ಪುರಸ್ಕಾರ ಹಾಗೂ ಪೇಜಾವರ ಶ್ರೀಗಳಿಂದ ಸನ್ಮಾನ.
  • ೨೦೦೮ ರಲ್ಲಿ ಅಂಕಣ ಬರಹಕ್ಕಾಗಿ (ಬೆತ್ತಲೆ ಜಗತ್ತು) ನೀಡಿದ ಮೊಟ್ಟಮೊದಲ ಆರ್ಯಭಟ ಪ್ರಶಸ್ತಿ.
  • ೨೦೧೧ ರಲ್ಲಿ ಪತ್ರಿಕೋದ್ಯಮಕ್ಕಾಗಿ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ.ಈ ಪ್ರಶಸ್ತಿ ಪಡೆದ ಅತ್ಯಂತ ಕಿರಿಯ ಪತ್ರಕರ್ತ ಎಂಬ ಹೆಗ್ಗಳಿಕೆ.
  • ೨೦೦೯ ರಲ್ಲಿ ಮಿಥಿಕ್ ಸೊಸೈಟಿ ಪ್ರಶಸ್ತಿ