ಪೌಟೇರಿಯಾ ಕ್ಯಾಂಪೆಚಿಯಾನಾ
ಪೌಟೇರಿಯಾ ಕ್ಯಾಂಪೆಚಿಯಾನಾ ಅಥವಾ ಮೊಟ್ಟೆ ಹಣ್ಣು ಇದನ್ನು ಸಾಮಾನ್ಯವಾಗಿ ಕಪ್ ಕೇಕ್ ಹಣ್ಣು ಅಥವಾ ಕ್ಯಾನಿಸ್ಟೆಲ್ ಎಂದು ಕರೆಯಲಾಗುತ್ತದೆ. ಇದು ದಕ್ಷಿಣ ಮೆಕ್ಸಿಕೋ, ಬೆಲೀಜ್, ಗ್ವಾಟೆಮಾಲಾ ಮತ್ತು ಎಲ್ ಸಾಲ್ವಡಾರ್‌ನಲ್ಲಿ ಸ್ಥಳೀಯವಾಗಿ ಮತ್ತು ಬೆಳೆಸಲಾಗುವ ನಿತ್ಯಹರಿದ್ವರ್ಣ ಮರವಾಗಿದೆ. ಭಾರತ, ಕೋಸ್ಟರಿಕಾ, ಬ್ರೆಜಿಲ್, ಯುನೈಟೆಡ್ ಸ್ಟೇಟ್ಸ್, ಡೊಮಿನಿಕನ್ ರಿಪಬ್ಲಿಕ್, ಆಸ್ಟ್ರೇಲಿಯಾ, ಕಾಂಬೋಡಿಯಾ, ವಿಯೆಟ್ನಾಂ, ಇಂಡೋನೇಷಿಯಾ, ಶ್ರೀಲಂಕಾ, ನೈಜೀರಿಯಾ ಮತ್ತು ಫಿಲಿಪೈನ್ಸ್‌ನಂತಹ ದೇಶಗಳಲ್ಲಿ ಇದನ್ನು ಬೆಳೆಸಲಾಗುತ್ತದೆ. ಈ ಮರದಲ್ಲಿನ ಸೇವಿಸಬಹುದಾದ ಭಾಗವೆಂದರೆ ಅದರ ಹಣ್ಣು, ಇದನ್ನು ಆಡುಮಾತಿನಲ್ಲಿ ಮೊಟ್ಟೆಯ ಹಣ್ಣು ಎಂದು ಕರೆಯಲಾಗುತ್ತದೆ.[೧]
ಕ್ಯಾನಿಸ್ಟೆಲ್ ೧೦ ಮೀಟರ್ (೩೩ ಅಡಿ) ಎತ್ತರಕ್ಕೆ ಬೆಳೆಯುತ್ತದೆ. ಇದು ಕಿತ್ತಳೆ-ಹಳದಿ ಬಣ್ಣದ ಹಣ್ಣನ್ನು ಉತ್ಪಾದಿಸುತ್ತದೆ. ಇದನ್ನು ಹಳದಿ ಸಪೋಟ್ ಎಂದೂ ಕರೆಯುತ್ತಾರೆ. ಇದು ೭ ಸೆಂಟಿ ಮೀಟರ್ (೨.೮ ಇಂಚು) ಉದ್ದದವರೆಗೆ ಇರುತ್ತದೆ. ಕ್ಯಾನಿಸ್ಟೆಲ್ ನ ತಿರುಳು ಸಿಹಿಯಾಗಿರುತ್ತದೆ. ಇದು ಗಟ್ಟಿಯಾಗಿದ್ದು, ಬೇಯಿಸಿದ ಮೊಟ್ಟೆಯ ಹಳದಿ ಭಾಗದ ವಿನ್ಯಾಸವನ್ನು ಹೊಂದಿರುತ್ತದೆ. ಆದ್ದರಿಂದ ಆಡುಮಾತಿನಲ್ಲಿ ಇದನ್ನು ಎಗ್‌ಫ್ರೂಟ್ ಅಥವಾ ಮೊಟ್ಟೆ ಹಣ್ಣು ಎಂದು ಕರೆಯುತ್ತಾರೆ. ಇದು ಲುಕುಮಾ, ಮಾಮಿ ಸಪೋಟ್ ಮತ್ತು ಅಬಿಯುಗೆ ನಿಕಟ ಸಂಬಂಧ ಹೊಂದಿದೆ.
ಹಣ್ಣಿನ ವಿವರಣೆ
[ಬದಲಾಯಿಸಿ]ತಳಿಯನ್ನು ಅವಲಂಬಿಸಿ ಹಣ್ಣಿನ ಆಕಾರ ಮತ್ತು ಗಾತ್ರ ವ್ಯತ್ಯಾಸಗೊಳ್ಳುತ್ತದೆ. ಉತ್ತಮ ತಳಿಗಳು ಸ್ಥಿರವಾಗಿ ೪೦೦ ಗ್ರಾಂ (೧೪ ಔನ್ಸ್) ತೂಕದ ಹೊಳಪುಳ್ಳ ಚರ್ಮದೊಂದಿಗೆ ದೊಡ್ಡ, ಅಂಡಾಕಾರದ ಹಣ್ಣುಗಳನ್ನು ಉತ್ಪಾದಿಸುತ್ತವೆ. ಉತ್ತಮ ಪ್ರಭೇದಗಳು ಕೆನೆ, ಮೌಸ್ಸ್-ತರಹದ ವಿನ್ಯಾಸವನ್ನು ಹೊಂದಿದ್ದರೂ, ತಿರುಳು ಸ್ವಲ್ಪ ಗಂಜಿಯಂತೆ ಪೇಸ್ಟಿಯಾಗಿರುತ್ತದೆ.[೨] ಸುವಾಸನೆಯು ಸಮೃಧ್ದವಾಗಿರುತ್ತದೆ ಮತ್ತು ಮೊಟ್ಟೆಯ ಕಸ್ಟರ್ಡ್ ಅನ್ನು ನೆನಪಿಸುತ್ತದೆ. ಒಂದು ಹಣ್ಣು ಒಂದರಿಂದ ಆರು ದೊಡ್ಡ ಕಂದು ಬೀಜಗಳನ್ನು ಹೊಂದಿರಬಹುದು.
ಕ್ಯಾನಿಸ್ಟೆಲ್‍ನ ವಿಷಮಸ್ಥಿತಿ ಹಣ್ಣು ಹಣ್ಣಾಗುವುದನ್ನು ತೋರಿಸುತ್ತದೆ. ಸಂಪೂರ್ಣವಾಗಿ ಪ್ರಬುದ್ಧವಾದ ಹಣ್ಣು ತೀವ್ರವಾದ ಹಳದಿ ಚರ್ಮದ ಬಣ್ಣವನ್ನು ತೋರಿಸುತ್ತದೆ. ಇದು ಅಂತಿಮವಾಗಿ ಮೃದುವಾಗುತ್ತದೆ ಮತ್ತು ಮರದಿಂದ ಕಳಚಿ ಬೀಳುತ್ತದೆ. ಕೀಟಗಳು ಮತ್ತು ಪಕ್ಷಿಗಳು ಹಣ್ಣಿನ ತಿರುಳನ್ನು ತಿನ್ನುವುದಿಲ್ಲ. ಗಟ್ಟಿಯಾಗಿರುವಾಗಲೇ ಮರದಿಂದ ಕತ್ತರಿಸಿದ ಬೆಳೆದ ಹಣ್ಣುಗಳು ಕಡಿಮೆ ಸಂಕೋಚನ ಹೊಂದಿರುತ್ತದೆ ಮತ್ತು ಮೊಟ್ಟೆಯ ಹಳದಿ ಭಾಗದ ವಿನ್ಯಾಸವನ್ನು ಹೊಂದಲು ಬೇಕಾಗುವ ಕ್ಲೈಮ್ಯಾಕ್ಟೀರಿಕ್ ಬದಲಾವಣೆಗಳನ್ನು ಅಭಿವೃದ್ಧಿಪಡಿಸಲು ವಿಫಲವಾಗುತ್ತವೆ.
ಉಪಯೋಗಗಳು
[ಬದಲಾಯಿಸಿ]ಇದರ ಕ್ಯಾನಿಸ್ಟೆಲ್ ಅನ್ನು ತಾಜಾವಾಗಿ ತಿನ್ನಬಹುದು. ಇದು ಗಟ್ಟಿಯಾಗಿದ್ದು, ಬೇಯಿಸಿದ ಮೊಟ್ಟೆಯ ಹಳದಿ ಭಾಗದ ವಿನ್ಯಾಸವನ್ನು ಹೊಂದಿರುತ್ತದೆ. ಮಾಗಿದ ಹಣ್ಣನ್ನು ಜಾಮ್, ಮುರಬ್ಬ, ಪ್ಯಾನ್‌ಕೇಕ್‌ಗಳು ಮತ್ತು ಹಿಟ್ಟಿನಂತೆ ಮಾಡಬಹುದು. ಮಾಗಿದ ತಿರುಳನ್ನು ಹಾಲು ಮತ್ತು ಇತರ ಪದಾರ್ಥಗಳೊಂದಿಗೆ ಬೆರೆಸಿ ಅದರ ಶೇಕ್ ಮಾಡಲಾಗುತ್ತದೆ, ಮತ್ತು ಇದನ್ನು ಕೆಲವೊಮ್ಮೆ ಕಸ್ಟರ್ಡ್‌ಗಳಿಗೆ ಸೇರಿಸಲಾಗುತ್ತದೆ ಅಥವಾ ಐಸ್ ಕ್ರೀಮ್ ತಯಾರಿಸಲು ಬಳಸಲಾಗುತ್ತದೆ. ಇದನ್ನು ಎಗ್‌ಫ್ರೂಟ್ ನಾಗ್ ಎಂದು ಕರೆಯಲಾಗುವ ಮಿಲ್ಕ್‌ಶೇಕ್‌ನಲ್ಲಿಯೂ ಬಳಸಲಾಗುತ್ತದೆ. ಈ ಮರವನ್ನು ಎಲ್ಲಿ ಸಿಗುತ್ತದೆಯೊ ಅಲ್ಲಿಯೇ ನಿರ್ಮಾಣ ಕೆಲಸಕ್ಕಾಗಿ ಬಳಸಲಾಗುತ್ತದೆ. ವಿಶೇಷವಾಗಿ ಹಲಗೆಗಳು ಅಥವಾ ಹೆಂಚು ಹೊದಿಸಲು ಇಡುವ ಛಾವಣಿಯಾಗಿ ಬಳಸಲಾಗುತ್ತದೆ. ಅದರ ಸ್ಥಳೀಯ ವ್ಯಾಪ್ತಿಯಲ್ಲಿ, ಇದು ಚಿಕಲ್ ಅನ್ನು ಕಲಬೆರಕೆ ಮಾಡಲು ಬಳಸುವ ಲ್ಯಾಟೆಕ್ಸ್‌ನ ಮೂಲವಾಗಿದೆ.[೩]
ಮೂಲ
[ಬದಲಾಯಿಸಿ]ಮೆಕ್ಸಿಕನ್ ಪಟ್ಟಣದ ಕ್ಯಾಂಪೀಚೆಯಲ್ಲಿ ಇದು ಸ್ಥಳೀಯವಾಗಿ ಸಿಗುವುದರಿಂದ ಇದರ ನಿರ್ದಿಷ್ಟ ಹೆಸರನ್ನು ಮೆಕ್ಸಿಕನ್ ಪಟ್ಟಣವಾದ ಕ್ಯಾಂಪೀಚೆಯಿಂದ ಪಡೆಯಲಾಗಿದೆ. ಇದನ್ನು ಅನೇಕ ದೇಶಗಳಲ್ಲಿ ಬೆಳೆಸಲಾಗುತ್ತದೆ ಮತ್ತು ಮಾರಾಟ ಮಾಡಲಾಗುತ್ತದೆ. ಇದನ್ನು ಅನೇಕ ದೇಶೀಯ ಹೆಸರುಗಳಿಂದ ಕರೆಯಲಾಗುತ್ತದೆ. ಫಿಲಿಪ್ಪೈನ್ಸ್ ನಲ್ಲಿ ಇದನ್ನು ಚೆಸಾ, ಟೈಸಾ ಅಥವಾ ಅತಿಸಾ ಎಂದು ಕರೆಯಲಾಗುತ್ತದೆ. ಶ್ರೀಲಂಕಾದಲ್ಲಿ, ಈ ಹಣ್ಣನ್ನು ಲಾಲು, ಲವುಲು ಅಥವಾ ಲಾಲು ಎಂದು ಕರೆಯಲಾಗುತ್ತದೆ. ಥೈಲ್ಯಾಂಡ್‌ನಲ್ಲಿ, ಇದನ್ನು ಲ್ಯಾಮುಟ್ ಖಮೆನ್ ಅಥವಾ ಥೋ ಖಮೆನ್‍ನಂತಹ ವಿಭಿನ್ನ ಸಾಂಪ್ರದಾಯಿಕ ಜನಪ್ರಿಯ ಹೆಸರುಗಳಿಂದ ಕರೆಯಲಾಗುತ್ತದೆ. ಆದರೆ ಈ ಹಣ್ಣನ್ನು ಪೀಚ್‌ನ ಮೂಲದಿಂದ ಕರೆಯಲಾಗುತ್ತದೆ.[೪]
ಮೊಟ್ಟೆಯ ಹಳದಿ ಭಾಗದಂತಿರುವ ವಿಶಿಶ್ಟವಾದ ರಚನೆಯನ್ನು ನೋಡಿ ಇದಕ್ಕೆ ಹೆಸರುಗಳನ್ನು ಇಡಲಾಗಿದೆ. ಇದನ್ನು ಮಲಯದಲ್ಲಿ ಬುವಾ ಕುನಿಂಗ್ ಟೆಲೂರ್ (ಹಳದಿ ಹಣ್ಣು) ಎಂದು ಕರೆಯಲಾಗುತ್ತದೆ. ವಿಯೆಟ್ನಾಮೀಸ್‌ನಲ್ಲಿ ಕೇ ಟ್ರಂಗ್ ಗಾ (ಕೋಳಿ ಮೊಟ್ಟೆ ಸಸ್ಯ), ಥಾಯ್‌ನಲ್ಲಿ ಮೋನ್ ಖೈ ( ಖೈ ಎಂದರೆ ಮೊಟ್ಟೆ) ಮತ್ತು ತೈವಾನ್‌ನಲ್ಲಿ ಡ್ಯಾನ್‌ಹುವಾಂಗ್ ಗುವೋ (ಮೊಟ್ಟೆಯ ಹಳದಿ ಹಣ್ಣು) ಇದನ್ನು ಆಗ್ನೇಯ ಏಷ್ಯಾದಾದ್ಯಂತ ಸಾವೊ ಮೆಂಟೆಗಾ (ಬಟರ್ ಸಪೋಡಿಲ್ಲಾ, ಅದರ ಬಣ್ಣ ಮತ್ತು ವಿನ್ಯಾಸಕ್ಕಾಗಿ) ಎಂದು ಕರೆಯಲಾಗುತ್ತದೆ. ಇಂಡೋನೇಷ್ಯಾದಲ್ಲಿ ಇದನ್ನು ಅಲ್ಕೆಸಾ ಎಂದೂ ಕರೆಯುತ್ತಾರೆ. ಪೂರ್ವ ಆಫ್ರಿಕಾದಲ್ಲಿ ತುಲನಾತ್ಮಕವಾಗಿ ಅಪರೂಪವಾಗಿದ್ದರೂ, ಅವುಗಳನ್ನು ಕಾಣಬಹುದು ಮತ್ತು ಸ್ವಾಹಿಲಿ ಭಾಷೆಯಲ್ಲಿ, ಹಣ್ಣನ್ನು ಗೊಂದಲಮಯವಾಗಿ ಜೈತುನಿ ಎಂದು ಹೆಸರಿಸಲಾಗಿದೆ. ತೈವಾನೀಸ್ ಈ ಹಣ್ಣನ್ನು ಕ್ಸಿಯಾಂಟಾವೊ (ಪೀಚ್ ಆಫ್ ದಿ ಇಮ್ಮಾರ್ಟಲ್ಸ್) ಎಂದೂ ಕರೆಯುತ್ತಾರೆ.
ಉಲ್ಲೇಖಗಳು
[ಬದಲಾಯಿಸಿ]