ಪಳೆಯುಳಿಕೆಯ ಇಂಧನ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಕಲ್ಲಿದ್ದಲು, ಪಳೆಯುಳಿಕೆ ಇಂಧನಗಳಲ್ಲಿ ಒಂದು.

ಪಳೆಯುಳಿಕೆ ಇಂಧನಗಳು ಹೂಳಲಾದ ಸತ್ತ ಸಾವಯವ ಜೀವಗಳ ಆಮ್ಲಜನಕವಿಲ್ಲದೆ ಕೊಳೆತ ಸ್ಥಿತಿಯಂತಹ ನೈಸರ್ಗಿಕ ಸಂಪನ್ಮೂಲಗಳಿಂದ ರಚನೆಯಾಗಿರುವ ಇಂಧನಗಳಾಗಿವೆ. ಸಾವಯವಗಳು ಮತ್ತು ಅದರ ಪಳೆಯುಳಿಕೆ ಇಂಧನಗಳು ನಿರ್ಧಿಷ್ಟವಾಗಿ ಮಿಲಿಯನ್ ವರ್ಷಗಳಷ್ಟು ಹಳೆಯದಾಗಿರುತ್ತವೆ. ಮತ್ತು ಕೆಲವೊಮ್ಮೆ ೬೫೦ ಮಿಲಿಯನ್ ವರ್ಷಗಳಿಗಿಂತ ಹೆಚ್ಚು ಹಳೆಯದಾಗಿರುವ ಸಾದ್ಯತೆ ಇದೆ.[೧] ಈ ಇಂಧನಗಳು ಇಂಗಾಲ ಮತ್ತು ಹೈಡ್ರೋಕಾರ್ಬನ್‌ಗಳನ್ನು ಅತ್ಯಂತ ಅಧಿಕ ಪ್ರಮಾಣದಲ್ಲಿ ಒಳಗೊಂಡಿರುತ್ತದೆ.

ಬಾಷ್ಪಶೀಲ ವಸ್ತುಗಳಾದ, ಇಂಗಾಲ; ಜಲಜನಕ ಗಳ ಕಡಿಮೆ ಪ್ರಮಾಣದಿಂದ ಮಿಥೇನ್ ನಂತಹ ದ್ರವರೂಪದ ಪೆಟ್ರೋಲಿಯಂನಂತಹ ಸಂಯುಕ್ತವಸ್ತುಗಳು ಘಟಿಸುತ್ತವೆ. ಮತ್ತು ಬಾಷ್ಪಶೀಲರಹಿತ ವಸ್ತುಗಳಾದ. ಆಂತ್ರಸೈಟ್ ಕಲ್ಲಿದ್ದಲುಗಳು ಸಂಪೂರ್ಣವಾಗಿ ಇಂಗಾಲವೆಂಬ ಮೂಲವಸ್ತುವಿನ ವಿಘಟನೆಯಿಂದಾಗಿ ರಚನೆಗೊಂಡಿದೆ. ಹೈಡ್ರೋಕಾರ್ಬನ್ ಘಟಕಗಳಲ್ಲಿ ಎಣ್ಣೆಯೊಂದಿಗೆ ಬೆರೆತ ಅಥವಾ ಅದೊಂದನ್ನೇ ಅಥವಾ ಮಿಥೇನ್ ಕ್ಲಾತ್ರೇಟ್ಸ್ ರೂಪದಲ್ಲಿ ಮಿಥೇನ್ ಅನ್ನು ಕಾಣಬಹುದು. ಇವನ್ನು ಸಾಮಾನ್ಯವಾಗಿ ಅಂಗೀಕರಿಸಿ ಬಳಸಲಾಗಿದೆ. ಅದೆಂದರೆ ಅವೆಲ್ಲಾ ಸತ್ತು ನಶಿಸಿದ ಸಸ್ಯಗಳು ಮತ್ತು ಪ್ರಾಣಿಗಳನ್ನು[೨] ಭೂಮಿಯ ಆಳವಾದ ಪದರದಲ್ಲಿ ನೂರಾರು ಮಿಲಿಯನ್ ವರ್ಷಗಳ ಕಾಲ, ಶಾಖ ಮತ್ತು ಒತ್ತಡದಿಂದ ವಿಘಟನೆಗೊಳ್ಳುತ್ತಾ, ವಿಭಜನೆಗೊಂಡಂತಹ ಪಳೆಯುಳಿಕೆ ಅಂಶದ ಘಟಕಗಳಿಂದ ರಚನೆಯಾಗಿವೆ.[೩] ಈ ಒಂದು ಬೈಯೋಜೆನಿಕ್ ಥಿಯರಿಯನ್ನು ೧೫೫೬ ರಲ್ಲಿ ಜಾರ್ಜ್ ಅಗ್ರಿಕೋಲ್‌ ನಿಂದ ಮೊಟ್ಟ ಮೊದಲ ಬಾರಿಗೆ ಪರಿಚಯಿಸಲ್ಪಟ್ಟಿತ್ತು. ಮತ್ತು ಆನಂತರ ೧೮ನೇ ಶತಮಾನದಲ್ಲಿ ಮಿಕೈಲ್ ಲೊಮೊನೊಸೊವ್ ನಿಂದ ಪರಿಚಯವಾಗಿತ್ತು.


ಎನರ್ಜಿ ಇನ್ಫರ್ಮೇಶನ್ ಅಡ್ಮಿನಿಸ್ಟೇಶನ್‌ನಿಂದ ೨೦೦೭ ರಲ್ಲಿ ಇಂತಿಷ್ಟು ಖರ್ಚಾದ ಅಂದಾಜಿನ ಪ್ರಮಾಣವನ್ನು ಲೆಕ್ಕಹಾಕಲಾಯಿತು. ಪ್ರಂಪಚದಲ್ಲಿ ಪ್ರಾಥಮಿಕ ಶಕ್ತಿ ಬಳಕೆಗಾಗಿ ೮೬.೪% ನಷ್ಟು ಪ್ರಯಾಣದಲ್ಲಿ ಪಳೆಯುಳಿಕೆ ಇಂಧನಗಳಿಗಾಗಿ ಹಂಚಿಕೆಯಾಗಿದೆ. ಶಕ್ತಿಯ ಪ್ರಾಥಮಿಕ ಮೂಲಗಳು ಖನಿಜತೈಲ ೩೬.೦%, ಕಲ್ಲಿದ್ದಲು ೨೭.೪%, ನೈಸರ್ಗಿಕ ಅನಿಲ ೨೩.೦%, ನಷ್ಟು ಪ್ರಮಾಣವನ್ನು ಹೊಂದಿವೆ.[೪]. ಪಳೆಯುಳಿಕೆಯಿಲ್ಲದ ಮೂಲಗಳು ೨೦೦೬ ರಲ್ಲಿ ಹೈಡ್ರೋಎಲೆಕ್ಟ್ರಿಕ್ ೬.೩%, ನ್ಯೂಕ್ಲಿಯರ್ ೮.೫% ಮತ್ತು (ಜಿಯೋಥರ್ಮಲ್, ಸೋಲಾರ್, ಅಲೆ, ಗಾಳಿ, ಮರ, ಕಸ ಇವೆಲ್ಲವುಗಳ ಪ್ರಮಾಣ ೦.೯% ರಷ್ಟು ಒಳಗೊಂಡಿವೆ.[೫] ಜಗತ್ತಿನಲ್ಲಿ ಶಕ್ತಿಯ ಬಳಕೆಯು ಒಂದು ವರ್ಷಕ್ಕೆ ೨.೩% ನಷ್ಟು ಏರುತ್ತಲೇ ಇತ್ತು.

ಪಳೆಯುಳಿಕೆ ಇಂಧನಗಳು ಪುನರ್ನವೀಕರಣ ಮಾಡಲಾಗದ ಸಂಪನ್ಮೂಲಗಳು ಏಕೆಂದರೆ ಅವು ರಚನೆಯಾಗಲು ಮಿಲಿಯನ್ ಗಟ್ಟಲೆ ವರ್ಷಗಳನ್ನು ತೆಗೆದುಕೊಳ್ಳುತ್ತವೆ ಮತ್ತು ಈ ಘಟಕಗಳನ್ನು ಹೊಸ ಇಂಧನಗಳು ರೂಪುಗೊಳ್ಳುವುದಕ್ಕಿಂತ ಹೆಚ್ಚು ವೇಗದಲ್ಲಿ ಬರಿದು ಮಾಡಲಾಗುತ್ತಿದೆ. ಪಳೆಯುಳಿಕೆ ಇಂಧನಗಳ ಉತ್ಪಾದನೆ ಮತ್ತು ಉಪಯೋಗವು ಪರಿಸರಕ್ಕೆ ಸಂಬಂಧಪಟ್ಟ ಆತಂಕಗಳನ್ನು ಏರಿಕೆಯಾಗುವಂತೆ ಮಾಡುತ್ತದೆ. ಜಾಗತಿಕರಣ ಚಳುವಳಿಯು ನವೀಕರಣಗೊಳ್ಳುವ ಶಕ್ತಿಯ ಉತ್ಪಾದನೆಗೋಸ್ಕರ ಆರಂಭವಾಗಿದೆ ಆದ್ದರಿಂದ ಏರಿಕೆಯಾಗಿರುವ ಶಕ್ತಿಯ ಅಗತ್ಯತೆಗಳನ್ನು ಮುಟ್ಟಲು ಸಹಾಯವಾಗುವಂಥ ಮಾರ್ಗದಲ್ಲಿ ಸಾಗಲಾಗುತ್ತಿದೆ.

ದಹಿಸುತ್ತಿರುವ ಪಳೆಯುಳಿಕೆ ಇಂಧನಗಳು ಒಂದು ವರ್ಷಕ್ಕೆ ಸುಮಾರು ೨೧.೩ ಬಿಲಿಯನ್ ಟನ್‌ಗಳಷ್ಟು (೨೧.೩ [[ಗಿಗಾಟನ್‌|ಗಿಗಾಟನ್‌]]ಗಳು) ಗಳು) ಕಾರ್ಬನ್ ಡೈ ಆಕ್ಸೈಡ್ ಅನ್ನು ಉತ್ಪಾದಿಸುತ್ತವೆ. ಆದರೆ ಸ್ವಾಭಾವಿಕ ವಿಧಾನಗಳು ಅರ್ಧ ಪ್ರಮಾಣವನ್ನು ಹೀರಿಕೊಳ್ಳುತ್ತವೆ ಎಂದು ಅಂದಾಜಿಸಲಾಗಿದೆ, ಇದರಿಂದಾಗಿ ಪ್ರತಿವರ್ಷ ೧೦.೬೫ ಬಿಲಿಯನ್ ಟನ್‌ಗಳಷ್ಟು ಕಾರ್ಬನ್ ಡೈಆಕ್ಸೈಡ್ ಪ್ರಮಾಣ ಹೆಚ್ಚಾಗುತ್ತಲಿದೆ (ಒಂದು ಟನ್ ವಾತಾವರಣದ ಕಾರ್ಬನ್ ೪೪/೧೨ ಅಥವಾ ೩.೭ ಟನ್‌ಗಳಷ್ಟು ಕಾರ್ಬನ್ ಡೈಆಕ್ಸೈಡ್‌ಗೆ ಸಮನಾಗಿರುತ್ತದೆ).[೬] ಕಾರ್ಬನ್ ಡೈಆಕ್ಸೈಡ್, ಗ್ರೀನ್‌ಹೌಸ್ ಗ್ಯಾಸ್‌ಗಳಲ್ಲಿ ಒಂದಾಗಿದೆ, ಇದು ವಿಕಿರಣ ಬಲವನ್ನು ಹೆಚ್ಚು ಮಾಡುತ್ತದೆ ಮತ್ತು ಗ್ಲೋಬಲ್ ವಾರ್ಮಿಂಗ್ ಅನ್ನು ಹೆಚ್ಚಿಸುತ್ತದೆ, ಇದರಿಂದಾಗಿ ಸರಾಸರಿ ಭೂಮಿಯ ಮೇಲ್ಮೈ ತಾಪಮಾನಹೆಚ್ಚಾಗುತ್ತದೆ, ಹವಾಮಾನ ವಿಜ್ಞಾನಿಗಳುಇದರಿಂದಾಗುವ ಪ್ರಮುಖವಾದ ಅಡ್ಡ ಪರಿಣಾಮಗಳಾಗುತ್ತವೆಂದು ನಂಬಿದ್ದಾರೆ.

ಮೂಲ[ಬದಲಾಯಿಸಿ]

ಫೈಟೋಪ್ಲಾಂಕ್ಟನ್ ಮತ್ತು ಝೂಪ್ಲಾಂಕ್ಟನ್‌ಗಳೆರಡೂ ಸೇರಿ ಸಾವಯವಗಳ ಎನಾರೋಬಿಕ್ ವಿಘಟನಾ ಘಟಕಗಳಿಂದ ಪಳೆಯುಳಿಕೆ ಇಂಧನಗಳು ರೂಪುಗೊಳ್ಳುತ್ತವೆ. ತುಂಬಾ ದೊಡ್ಡ ಪ್ರಮಾಣದಲ್ಲಿ ಸಾಗರದ ಆಳವಾದ ತಳಹದಿಯಲ್ಲಿ ಮಿಲಿಯನ್ ವರ್ಷಗಳ ಹಿಂದೆ ಆ ಎರಡೂ ಸಾವಯವ ಘಟಕಗಳು ಹುದುಗಿಕೊಂಡಿರುತ್ತವೆ. ಈ ಸಾವಯವ ವಸ್ತುವು, ಮಣ್ಣಿನ ಜೊತೆ ಸೇರಿ ಭೂಮಿಯ ನಿಕ್ಷೇಪದ ದೊಡ್ಡ ಭಾರದ ಪದರಗಳ ಭೌಗೋಳಿಕ ಸಮಯಪೂರ್ತಿ ಹೂತು ಹೋಗಿರುತ್ತದೆ. ಶಾಖ ಮತ್ತು ಒತ್ತಡಗಳ ಪರಿಣಾಮಕಾರಿ ದೊಡ್ದ ಹಂತಗಳು ಸಾವಯವ ವಸ್ತುವಾಗಲು ಕಾರಣವಾಗುತ್ತದೆ. ರಾಸಾಯನಿಕವಾಗಿ [[ಸ್ಥಾನ, ಗುಣರೂಪ ಬದಲಾವಣೆ ಮಾರ್ಪಟ್ಟು, ಮೊದಲ ಒಂದು ಮೇಣದ ವಸ್ತುವಾಗಿ ಬದಲಾಗುವುದನ್ನು ಕೆರೋಜೆನ್ ಎಂದು ಹೆಸರಿಸಿದ್ದು ಇದು ಎಣ್ಣೆ ಬಾವಿಗಳಲ್ಲಿ ಸಿಗುತ್ತದೆ, ಮತ್ತು ಕೆಟಜೆನಿಸಿಸ್|ಸ್ಥಾನ, ಗುಣರೂಪ ಬದಲಾವಣೆ ಮಾರ್ಪಟ್ಟು, ಮೊದಲ ಒಂದು ಮೇಣದ ವಸ್ತುವಾಗಿ ಬದಲಾಗುವುದನ್ನು ಕೆರೋಜೆನ್ ಎಂದು ಹೆಸರಿಸಿದ್ದು ಇದು ಎಣ್ಣೆ ಬಾವಿಗಳಲ್ಲಿ ಸಿಗುತ್ತದೆ, ಮತ್ತು ಕೆಟಜೆನಿಸಿಸ್]] ಎಂದು ಕರೆಯಲಾಗುವ ಈ ಕ್ರಿಯೆಯಲ್ಲಿ ಕೆರೋಜೆನ್ ಜೊತೆಗೆ ಅಧಿಕ ಶಾಖವನ್ನು ನೀಡಿ ದ್ರವ ಮತು ಅನಿಲಯುಕ್ತ ಹೈಡ್ರೋಕಾರ್ಬನ್‌ಗಳನ್ನು ರೂಪಾಂತರಿಸುವುದು.

ಯಾವುದೇ ಇಂಧನ ಮಿಶ್ರಣದಲ್ಲಿ ಸಾವಯವ, ಅಥವಾ ಹೈಡ್ರೋಕಾರ್ಬನ್, ಸಂಯುಕ್ತ ವಸ್ತುಗಳ ಒಂದು ದೊಡ್ಡ ವಿಸ್ತಾರವಾದ ಶ್ರೇಣಿಯು ಕ್ರಮ ಬದ್ಧವಾಗಿದೆ. ಒಂದು ನಿರ್ಧಿಷ್ಟ ಹೈಡ್ರೋಕಾರ್ಬನ್ ಗಳ ಮಿಶ್ರಣವು ಒಂದು ಇಂಧನವನ್ನು ಕೊಡುತ್ತದೆ. ಕುದಿಯುವ ಬಿಂದು, ಕರಗುವ ಬಿಂದು, ಸಾಂದ್ರತೆ, ಸ್ನಿಗ್ದತೆ ಇತ್ಯಾದಿಗಳು ಅದರ ಗುಣಲಕ್ಷಣಗಳಾಗಿವೆ. ಕೆಲವೊಂದು ಇಂಧನಗಳಾದ ನೈಸರ್ಗಿಕ ಅನಿಲ, ಉದಾಹರಣೆಗಾಗಿ, ಇದೊಂದು ಮಾತ್ರ ತುಂಬಾ ಕಡೆಮೆ ಕುದಿಯುವ, ಅನಿಲಯುಕ್ತ ಅವಯವ ಅಂಶಗಳನ್ನು ಹೊಂದಿದೆ. ಬೇರೆ ಇಂಧನಗಳ ಕುರಿತಂತೆ ಗ್ಯಾಸೋಲಿನ್ ಅಥವಾ ಡೀಸೆಲ್ ತುಂಬ ಹೆಚ್ಚು ಕುದಿಯುವ ಅವಯವ ಅಂಶಗಳನ್ನು ಹೊಂದಿದೆ.


ಟೆರ್ರೆಸ್ಟ್ರಿಯಲ್ ಪ್ಲಾಂಟ್‌ಗಳು, ಬೇರೆ ರೀತಿಯಲ್ಲಿ ಕಲ್ಲಿದ್ದಲು ರಚನೆಯಾಗಲು ಕಾರಣವಾಗುತ್ತದೆ. ವಿವಿಧ ಹೆಚ್ಚಿನ ಕಲ್ಲಿದ್ದಲು ಘಟಕಗಳ ದಿನಾಂಕ ಭೂಮಿಯ ಇತಿಹಾಸದ ಕಾರ್ಬೊನಿಫೆರಸ್ ಅವಧಿಗೆ ಸೇರಿವೆ. ಟೆರ್ರೆಸ್ಟ್ರಿಯಲ್ ಪ್ಲಾಂಟ್‌ಗಳು ಕೆರೋಜೆನ್ III ವಿಧದ ಒಂದು ನೈಸರ್ಗಿಕ ಅನಿಲದ ಮೂಲವನ್ನು ಸಹ ರೂಪಿಸುತ್ತವೆ.

ಮಹತ್ವ[ಬದಲಾಯಿಸಿ]

ಮೆಕ್ಸಿಕೋ ಕೊಲ್ಲಿಯಲ್ಲಿನ ಎಣ್ಣೆ ಬಾವಿ
UK ಸ್ಕಾಟ್‌ಲ್ಯಾಂಡ್ ಗ್ರೇಂಜ್‌ಮೌತ್‌ನ ಒಂದು ಪೆಟ್ರೋಕೆಮಿಕಲ್ ರಿಫೈನರಿ

ಪಳೆಯುಳಿಕೆ ಇಂಧನಗಳು ತುಂಬ ಮಹತ್ವಯುತ ಪ್ರಾಮುಖ್ಯತೆಯಿರುವ ಕಚ್ಛಾ ಉತ್ಪನ್ನಗಳಾಗಿವೆ. ಏಕೆಂದರೆ ನಿರ್ಧಿಷ್ಟವಾದ ದೊಡ್ಡ ಪ್ರಮಾಣದ ಶಕ್ತಿಯನ್ನು ಉತ್ಪಾದಿಸಲು ಈ ಇಂಧನಗಳನ್ನು ಸುಡಬಹುದಾಗಿದೆ. (ಕಾರ್ಬನ್ ಡೈಆಕ್ಸೈಡ್‌ಮತ್ತು ನೀರಾಗಿ ಆಕ್ಸಿಡೀಕೃತ ಮಾಡಲಾಗಿದೆ). ಕಲ್ಲಿದ್ದಲಿನ ಉಪಯೋಗವು ಇಂಧನದಂತೆ ಎಂಬ ಇತಿಹಾಸದ ದಾಖಲೆಗಳಲ್ಲಿ ಉಲ್ಲೇಖಿತವಾಗಿದೆ. ಲೋಹದ ಅದಿರು ಕರಗುವುದಕ್ಕಾಗಿ ಕಲ್ಲಿದ್ದಲನ್ನು ಕುಲುಮೆಗಳಲ್ಲಿನ ಸುಡು ಒಲೆಗಳನ್ನು ಓಡಿಸಲೆಂದು ಬಳಸಲಾಗುತ್ತಿತ್ತು.

 ಭೂಮಿಯಿಂದ ಪೆಟ್ರೋಲಿಯಂ ನಿಧಾನವಾಗಿ ಜಿನುಗುವ ಸ್ಥಳಗಳಿಂದ ಅರೆ-ಘನ ಹೈಡ್ರೋಕಾರ್ಬನ್‌ಗಳನ್ನು ಪುರಾತನ ಕಾಲದಲ್ಲಿಯೂ ಸಹ ಸುಡಲಾಗುತ್ತಿತ್ತು, [೭] ಆದರೆ ಈ ವಸ್ತುಗಳನ್ನು ಅತಿ ಹೆಚ್ಚಾಗಿ ನೀರು ಸೋರಿಕೆ ತಡೆಯಲೆಂದು ಮತ್ತು ಕೊಳೆಯದಂತೆ ಸಂರಕ್ಷಿಸಿಡುವುದಕ್ಕಾಗಿ ಉಪಯೋಗಿಸಲಾಗುತ್ತಿತ್ತು.[೮]

ವಾಣಿಜ್ಯಾತ್ಮಕ ಉಪಯೋಗಕ್ಕಾಗಿ ಪೆಟ್ರೋಲ್ ಅನ್ನು, ಪ್ರಾಣಿ ಮೂಲಗಳಿಂದ (ಮುಖ್ಯವಾಗಿ ವ್ಹೇಲ್ ಎಣ್ಣೆ) ಬರುವ ಎಣ್ಣೆಗಳ ಬೃಹತ್ ರೂಪಾಂತರದಂತೆ, ೧೯ನೇ ಶತಮಾನದಲ್ಲಿ ಎಣ್ಣೆ ದೀಪಗಳಲ್ಲಿ ಎಣ್ಣೆಯಾಗಿ ಬಳಸಲಾಗುತ್ತಿತ್ತು. [೯]

ಖನಿಜತೈಲ ಉತ್ಪಾದನೆಯ ಒಂದು ಅನಗತ್ಯವಾದ ಉಪಉತ್ಪನ್ನದಂತೆ ಒಮ್ಮೆಲೆ ಭಗ್ಗನೆ-ಹೊತ್ತಿ ಉರಿಯುವ ನೈಸರ್ಗಿಕ ಅನಿಲವನ್ನು ಈಗ ಒಂದು ಹೆಚ್ಚು ಬೆಲೆಬಾಳುವ ಸಂಪನ್ಮೂಲವೆಂದು ಭಾವಿಸಲಾಗಿದೆ.[೧೦]

ಮಂದ ಮತಿಯ ಕಚ್ಚಾ ತೈಲವು, ಸಾಂಪ್ರದಾಯಿಕ ಕಚ್ಚಾ ತೈಲಕ್ಕಿಂತ ಹೆಚ್ಚಿನ ಸ್ನಿಗ್ದತೆ ಹೊಂದಿದೆ ಮತ್ತು ಟಾರ್ ಮರಳು, ಅಲ್ಲಿ ಶಿಲಾಜಿತುವನ್ನು ಮರಳು ಮತ್ತು ಜೇಡಿಮಣ್ಣಿನ ಜೊತೆಗೆ ಬೆರೆಸಿರುವಂತೆ ಕಾಣುತ್ತದೆ. ಅಲ್ಲಿ ಅವು ಪಳೆಯುಳಿಕೆ ಇಂಧನದ ಮೂಲಗಳಂತೆ ತುಂಬ ಪ್ರಮುಖವಾಗುತ್ತಿವೆ.[೧೧] ತೈಲ ಬಾವಿ ಮತ್ತು ಕೆರೋಜೆನ್ ಇರುವಂಥ ಸಮಾನ ರೂಪವಿರುವ ಭೂಮಿ ನಿಕ್ಷೇಪದ ಪದರದ ಬಂಡೆಗಳು, ಇವು ಒಂದು ಹೆಚ್ಚಿನ ಪರಮಾಣು ತೂಕದ ಸಂಕೀರ್ಣ ಮಿಶ್ರಣವಾಗಿರುವ ಸಾವಯವ ಸಂಯೂಕ್ತ ವಸ್ತುವಾಗಿದೆ. ಇದನ್ನು ಚೆನ್ನಾಗಿ ಶಾಖಕೊಟ್ಟು (ಪೈರೋಲೈಜ್ಡ್) ಬಿಸಿಮಾಡಿದಾಗ ಸಂಶ್ಲೇಷಣೆಯಿಂದ ಮಾಡಿದ ಕಚ್ಚಾ ತೈಲವು ಉತ್ಪತ್ತಿಯಾಗುತ್ತದೆ. ಈ ಎಲ್ಲಾ ವಸ್ತುಗಳನ್ನು ಇನ್ನೂ ವಾಣಿಜ್ಯ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕಾಗಿದೆ.[೧೨] ಆಂತರಿಕ ಯಂತ್ರಗಳ ದಹನ ಕ್ರಿಯೆಯಲ್ಲಿ ಪಳೆಯುಳಿಕೆ ಇಂಧನ ಶಕ್ತಿ ಕೇಂದ್ರಗಳು, ಮತ್ತು ಬೇರೆ ಉಪಯೋಗಗಳಿಗೆಂದು ಈ ಇಂಧನಗಳನ್ನು ಬಳಸಲಾಗುತ್ತಿದೆ.

೧೮ ನೇ ಶತಮಾನದ ಕೊನೆಯ ಅರ್ಧಭಾಗಕ್ಕಿಂದ ಮೊದಲು, ಗಾಳಿ ಗಿರಣಿಗಳು ಅಥವಾ ನೀರಿನ ಗಿರಣಿಗಳಿಂದಾಗೊ, ಹಿಟ್ಟಿನ ಗಿರಣಿಗಳು, ಮರ ಕುಯ್ಯುವ ಅಥವಾ ನೀರನ್ನು ಪಂಪ್ ಮಾಡಿ ಎತ್ತುವ ಮತ್ತು ಮರಸುಡುವ ಅಥವಾ ಒಣಗಿದ ಸೊಪ್ಪು(ನೀರಿನಿಂದ ಕೊಳೆತು ಸ್ವಲ್ಪಮಟ್ಟಿಗೆ ಇಂಗಾಲವಾಗಿ ಮಾರ್ಪಟ್ಟ ನೀರಿನಲ್ಲಿ ಉರುವಲಾಗಿ ಉಪಯೋಗಿಸುವ) ಗೃಹೋಪಯೋಗಿ ಶಾಖ ಒದಗಿಸುವ ಹೀಗೆ ಹಲವು ಕಾರ್ಖಾನೆಗಳಿಗೆ ಬೇಕಾದ ಶಕ್ತಿಯನ್ನು ಒದಗಿಸಲಾಯಿತು. ಪಳೆಯುಳಿಕೆ ಇಂಧನಗಳ ಅತಿ ವಿಸ್ತಾರವಾದ ಅಳತೆಯ ಬಳಕೆಯಲ್ಲಿ ಮೊದಲು ಕಲ್ಲಿದ್ದಲು ಮತ್ತು ನಂತರ ಖನಿಜತೈಲ, ಹಬೆಯಂತ್ರಗಳಲ್ಲಿ ಬೆಂಕಿ ಉರಿಯಲು ಬಳಸಿದ್ದನ್ನು ಕೈಗಾರಿಕಾ ಕ್ರಾಂತಿ ಎಂದು ಕರೆಯಲಾಗಿತ್ತು. ಅದೇ ಸಮಯದಲ್ಲಿ ಅನಿಲ ದೀಪಗಳಿಗೆ ನೈಸರ್ಗಿಕ ಅನಿಲವನ್ನು ಅಥವಾ ಕಲ್ಲಿದ್ದಲ ಅನಿಲಗಳನ್ನು ಬಹು ವಿಸ್ತಾರವಾಗಿ ಉಪಯೋಗಿಸಲಾಗುತ್ತಿತ್ತು. ಆಂತರಿಕ ಯಂತ್ರಗಳ ದಹನ ಕ್ರಿಯೆಯ ಸಂಶೋಧನೆ ಮತ್ತು ಆಟೋಮೊಬೈಲ್ ಮತ್ತು ಟ್ರಕ್‌ಗಳಲ್ಲಿ ಇದರ ಬಳಕೆಯು ಸಾಕಷ್ಟು ಏರಿಕೆಯಾಗಿದೆ ಮತ್ತು ಗ್ಯಾಸೋಲಿನ್ ಮತ್ತು ಡೀಸೆಲ್ ಎಣ್ಣೆಗಳಿಗಾಗಿ ಬೇಡಿಕೆ ಇದ್ದು, ಅವೆರಡೂ ಪಳಿಯುಳಿಕೆ ಇಂಧನಗಳಿಂದ ಮಾಡಲ್ಪಟ್ಟಿದೆ. ಸಾರಿಗೆಯ ಬೇರೆ ವಿಧಾನಗಳಾದ, ರೈಲ್ವೆಗಳು ಮತ್ತು ವಿಮಾನ ಸಂಚಾರ ಗಳಿಗೂ ಸಹ ಪಳೆಯುಳಿಕೆ ಇಂಧನಗಳು ಬೇಕಾಗಿದೆ. ವಿದ್ಯುತ್ಚಕ್ತಿ ಉತ್ಪಾದನೆ ಮತ್ತು ಪೆಟ್ರೋಕೆಮಿಕಲ್ ಕಾರ್ಖಾನೆಗಳಲ್ಲಿ ಪಳೆಯುಳಿಕೆ ಇಂಧನಗಳ ಬೇರೆ ಬೇರೆ ಬೃಹತ್ ಬಳಕೆಯಾಗುತ್ತಿದೆ. ಡಾಂಬರು ಇದು ಪೆಟ್ರೋಲಿಯಂನ ತ್ಯಾಜ್ಯದಿಂದ ಉಳಿದ ಒಂದು ಸಾರ, ಇದನ್ನು ರಸ್ತೆಗಳ ನಿರ್ಮಾಣ ಕಾರ್ಯಗಳಲ್ಲಿ ಉಪಯೋಗಿಸಲಾಗಿದೆ.

ಹಂತಗಳು ಮತ್ತು ಹರಿವುಗಳು[ಬದಲಾಯಿಸಿ]

Main article: Peak oil

ಪ್ರಾಥಮಿಕ ಶಕ್ತಿಯ ಮೂಲಗಳ ಹಂತಗಳು ಭೂಮಿಯ ಕೆಳಗೆ ಸಂರಕ್ಷಣೆಯಾಗಿವೆ. ಉತ್ಪಾದನೆಯ ಹರಿವು ಪ್ರಾಥಮಿಕ ಶಕ್ತಿ ಮೂಲಗಳ ಅತ್ಯಂತ ಪ್ರಮುಖವಾದ ಭಾಗವೆಂದರೆ ಇಂಗಾಲ ಆಧಾರಿತವಾದ ಪಳೆಯುಳಿಕೆ ಶಕ್ತಿಯ ಮೂಲಗಳಾಗಿವೆ. ೨೦೦೨ ರಲ್ಲಿ ಪ್ರಾಥಮಿಕವಾಗಿ ಶಕ್ತಿ ಉತ್ಪಾದನೆಯ ೭೯.೬% ನಷ್ಟು ಭಾಗವನ್ನು ಕಲ್ಲಿದ್ದಲು, ಎಣ್ಣೆ ಮತ್ತು ನೈಸರ್ಗಿಕ ಅನಿಲಗಳೇ ಆವರಿಸಿದ್ದವು. (ಎಣ್ಣೆ ಸಮನ್ವಯವು ಮಿಲಿಯನ್ ಟನ್ ಗಳಲ್ಲಿ (mtoe)) (೩೪.೯+೨೩.೫+೨೧.೨).

೨೦೦೫-೨೦೦೭ರ ಸಮಯದಲ್ಲಿ ಹಂತಗಳು (ಸಾಬೀತಾದ ಪರಿಮಿತಿಗಳು)

 • ಕಲ್ಲಿದ್ದಲು: ೯೯೭,೭೪೮ ಮಿಲಿಯನ್ ಶಾರ್ಟ್ ಟನ್ಸ್ (೯೦೫ ಬಿಲಿಯನ್ ಮೆಟ್ರಿಕ್ ಟನ್ಸ್),[೧೩] ೪,೪೧೬ ಬಿಲಿಯನ್ ಬ್ಯಾರಲ್ಸ್ ಎಣ್ಣೆಗೆ ಸಮವಾಗಿರುತ್ತದೆ
 • ಎಣ್ಣೆ: ೧,೧೧೯-೧,೩೧೭ ಬಿಲಿಯನ್ ಬ್ಯಾರಲ್ಸ್ (೧೭೮-೨೦೯ ಬಿಲಿಯನ್ ಕಿಲೋಮೀಟರ್ಸ್)[೧೪]
 • ನ್ಯಾಚುರಲ್ ಗ್ಯಾಸ್: ೬,೧೮೩-೬,೩೮೧ ಟ್ರಿಲಿಯನ್ ಕ್ಯುಬಿಕ್ ಫೀಟ್ (೧೭೫-೧೮೧ ಟ್ರಿಲಿಯನ್ ಕ್ಯೂಬಿಕ್ ಮೀಟರ್‌ಗಳು),[೧೪] ೧,೧೬೧ ಬಿಲಿಯನ್ ಬ್ಯಾರೆಲ್‌ಗಳಷ್ಟು ಎಣ್ಣೆಗೆ ಸಮನಾಗಿರುತ್ತದೆ

ಹರಿವುಗಳು (ಪ್ರತಿದಿನದ ಉತ್ಪಾದನೆ) ೨೦೦೬ರ ಸಮಯದಲ್ಲಿ

 • ಕಲ್ಲಿದ್ದಲು: ೧೮,೪೭೬,೧೨೭ ಶಾರ್ಟ್ ಟನ್‌ಗಳು (೧೬,೭೬೧,೨೬೦ ಮೆಟ್ರಿಕ್ ಟನ್‌ಗಳು),[೧೫] ದಿನಕ್ಕೆ ೫೨ ಮಿಲಿಯನ್ ಬ್ಯಾರೆಲ್‌ಗಳಷ್ಟು ಎಣ್ಣೆಗೆ ಸಮನಾಗಿರುತ್ತದೆ
 • ಎಣ್ಣೆ: ದಿನಕ್ಕೆ ೮೪ ಮಿಲಿಯನ್ ಬ್ಯಾರಲ್‌ಗಳು (೧೩ ಮಿಲಿಯನ್ ಕಿಲೋಮೀಟರ್‌ಗಳು)[೧೬]
 • ನ್ಯಾಚುರಲ್ ಗ್ಯಾಸ್: ೧೦೪,೪೩೫ ಬಿಲಿಯನ್ ಕ್ಯುಬಿಕ್ ಫೀಟ್ (೨,೯೬೦ ಬಿಲಿಯನ್ ಕ್ಯುಬಿಕ್ ಮೀಟರ್‌ಗಳು),[೧೭] ಒಂದು ದಿನಕ್ಕೆ ೧೯ ಮಿಲಿಯನ್ ಬ್ಯಾರಲ್‌ಗಳಷ್ಟು ಎಣ್ಣೆಗೆ ಸಮನಾಗಿರುತ್ತದೆ

ಭೂಮಿಯ ತಳಭಾಗದಲ್ಲಿ, ಮೇಲೆ ತಿಳಿಸಿರುವ ನಿರ್ಧಿಷ್ಟ ಸಂರಕ್ಷಣಾ ಘಟಕಗಳು ಮತ್ತು ಹರಿವುಗಳ ಜೊತೆಗೆ ಉತ್ಪಾದನೆಯ ವರ್ಷಗಳನ್ನು ಬಿಟ್ಟು ಬಿಡಲಾಯಿತು.

 • ಕಲ್ಲಿದ್ದಲು: ೧೪೮ ವರ್ಷಗಳು
 • ಎಣ್ಣೆ: ೪೩ ವರ್ಷಗಳು
 • ನ್ಯಾಚುರಲ್ ಗ್ಯಾಸ್: ೬೧ ವರ್ಷಗಳು

ಗರಿಷ್ಟ ಮಟ್ಟದ ಆಶಾವದಿ ಯೋಜನೆಯಿಂದ ಸಂರಕ್ಷಿತಾ ಅಂದಾಜು ಲೆಕ್ಕಗಳ (ಎಣ್ಣೆ ಮತ್ತು ಅನಿಲ ವಾರ್ತೆ, ವಿಶ್ವದ ಎಣ್ಣೆ) ನಿರೂಪಣೆಯೊಂದಿಗೆ ಉತ್ಪಾದನೆಯ ವರ್ಷಗಳನ್ನು ಭೂಮಿಯ ತಳದಲ್ಲೇ ಬಿಡಲಾಗಿತ್ತು.

 • ಕಲ್ಲಿದ್ದಲು: ೪೧೭ ವರ್ಷಗಳು
 • ಎಣ್ಣೆ: ೪೩ ವರ್ಷಗಳು
 • ನ್ಯಾಚುರಲ್ ಗ್ಯಾಸ್: ೧೬೭ ವರ್ಷಗಳು

ಗಮನಿಸಬೇಕಾದ ಈ ಲೆಕ್ಕಾಚಾರವು ಆಗಿನ ಹಲವು ವರ್ಷಗಳಿಗಾಗಿ ಒಂದು ನಿರ್ಧಿಷ್ಟ ಸ್ಥಿರಾಂಕ ಹಂತದಲ್ಲಿ ಆ ಉತ್ಪನ್ನವು ಉತ್ಪಾದಿಸಲ್ಪಟ್ಟಿರಬಹುದಾಗಿದೆ ಮತ್ತು ಆ ಎಲ್ಲಾ ನಿರೂಪಿಸಲಾದ ಸಂರಕ್ಷಿತಘಟಕಗಳನ್ನು ಪುನಃ ಸ್ವಾಧೀನ ಪಡಿಸಿಕೊಳ್ಳಬೇಕಾಗಿದೆ. ನಿಜಸ್ಥಿತಿಯಲ್ಲಿ, ಎಲ್ಲಾ ಮೂರು ಸಂಪನ್ಮೂಲಗಳ ಅನುಬೋಗವು ಏರಿಕೆಯಾಗುತ್ತಲೇ ಇದೆ. ಹಾಗಿರುವಾಗ ಇದು ಸೂಚಿಸುವುದೇನೆಂದರೆ ಸಂಪನ್ಮೂಲವು ತುಂಬಾ ವೇಗವಾಗಿ ಬಳಸಲ್ಪಡುವುದು, ನಿಜಸ್ಥಿತಿಯಲ್ಲಿ, ಈ ಉತ್ಪಾದನಾ ಸೂಚಕ ವಕ್ರರೇಖೆಯು, ಒಂದು ನಿರ್ಧಿಷ್ಟ ಅವಧಿ ವಕ್ರರೇಖೆಗೆ ಅತಿ ಹೆಚ್ಚು ಸಮಾನಸದೃಶವಾಗಿದೆ. ಕೆಲವೊಂದು ಸಮಯದಲ್ಲಿ, ಪ್ರತೀ ಸಂಪನ್ಮೂಲದ ಉತ್ಪಾದನೆ ಒಂದು ಪ್ರದೇಶದ ಒಳಗೆ, ದೇಶ ಅಥವಾ ಜಗತ್ತಿನಾ ಎಲ್ಲೆಡೆ ಒಂದು ಗರಿಷ್ಟ ಮೌಲ್ಯವನ್ನು ತಲುಪುವುದು. ಅದಾದನಂತರ, ಉತ್ಪಾದನೆಯು ಆರ್ಥಿಕವಾಗಿ ಕಾರ್ಯರೂಪಕ್ಕೆ ಬರಲು ಸಾಧ್ಯವಿಲ್ಲವೋ ಅಥವಾ ಭೌತಿಕವಾಗಿ ಉತ್ಪಾದಿಸಲು ಸಾಧ್ಯವಾಗುವುದಿಲ್ಲ, ಅಲ್ಲಿಯವರೆಗೆ ಈ ಉತ್ಪಾದನೆಯು ಇಳಿಮುಖವಾಗಿ ನಡೆಯಲಾರಂಭಿಸುವುದು. ಈ ಒಂದು ಬಾಗಿದ ವಕ್ರರೇಖೆ, ಪೆಟ್ರೋಲಿಯಂಗೆ ಸಂಬಂಧಿಸದ್ದಾಗಿದ್ದು ವಿವರಣೆಗಾಗಿ ಹಬ್ಬರ್ಟ್ ಪೀಕ್ ಥಿಯರಿ ಯನ್ನು ನೋಡಿ. ಗಮನಿಸಿ ಆ ನಿರೂಪಿಸಲಾದ ಸಂರಕ್ಷಣಾ ಘಟಕಗಳ ಅಂದಾಜು ಲೆಕ್ಕಚಾರವು ಯುದ್ಧತಂತ್ರೋಪಾಯದ ಭವಿಷ್ಯ ಉದ್ದೇಶಕ್ಕಾಗಿ ಇರುವ ಸಂರಕ್ಷಣಾ ಘಟಕಗಳನ್ನು ಸೇರಿಸಿಕೊಂಡಿಲ್ಲ ಹಾಗಾಗಿ ಅದು (ಜಗತ್ತಿನಲ್ಲಿ) ೪.೧ ಬಿಲಿಯನ್ ಗಿಂತ ಹೆಚ್ಚು ಬ್ಯಾರೆಲ್ಸ್ ಪ್ರಮಾಣವಿದೆ.

ಮೇಲಿನ ಚರ್ಚೆಯು ಜಗತ್ತಿನಾದ್ಯಂತ ಶಕ್ತಿ ಸಮತೋಲನವನ್ನು ಒತ್ತಿ ಹೇಳುತ್ತಾ ಅದಕ್ಕೆ ಹೆಚ್ಚಿನ ಪಾಧಾನ್ಯತೆ ನೀಡುತ್ತಿದೆ. ತೈಲ ಸಂಸ್ಕರಣಾ ಘಟಕಗಳ ಪರಿಮಾಣಗಳಿರುವ ಸಂಬಂಧವನ್ನು ಅರ್ಥಮಾಡಿಕೊಳ್ಳುವುದು ತುಂಬ ಮೌಲ್ಯನೀಯ ಕೂಡ ಆಗಿದೆ. ಒಂದು ಪ್ರದೇಶ ಅಥವಾ ದೇಶದಿಂದ (R/C) ವಾರ್ಷಿಕ ಅನುಭೋಗಕ್ಕಾಗಿ ಎಷ್ಟು ಪ್ರಮಾಣದ ಪೆಟ್ರೋಲಿಯಂ ಉತ್ಪನ್ನಗಳನ್ನು ಉಪಯೋಗಿಸುತ್ತಿದ್ದಾರೆ ಎಂಬ ಅಂಕಿ ಅಂಶ ಸಿಗುತ್ತದೆ. ಉದಾಹರಣೆಗೆ, ಯುನೈಟೆಡ್ ಕಿಂಗ್ ಡಂನ ಎನರ್ಜಿ ಪಾಲಿಸಿ ಯು ಯುರೋಪಿನ R/C ಮೌಲ್ಯವು ೩.೦ ಅಂದರೆ ಜಗತ್ತಿನ ಅಳತೆ ಮಾನಕ್ಕಿಂತ ಇದು ತುಂಬಾ ಕಡಿಮೆ ಎಂದು (ಕಂಡು ಕೊಂಡಿವೆ) ಗುರುತಿಸಿದೆ. ಮತ್ತು ಆ ಪ್ರದೇಶವನ್ನು ಶಕ್ತಿಯ ಶಸ್ತ್ರಾಸ್ತ್ರಗಳು ಬಳಕೆಯನ್ನು ತೆರೆದಿಡುತ್ತದೆ. ಉದ್ದೇಶಪೂರ್ವಕ ಜಾಗತಿಕ ಚರ್ಚೆಯ ವಿಷಯವೇ ಈ ಪಳೆಯುಳಿಕೆ ಇಂಧನಗಳ ಬದಲೀ ರೂಪದ ವಸ್ತುಗಳಾಗಿದ್ದು ಅವು ನಿರ್ಧಿಷ್ಟ ಗುಣಲಕ್ಷಣ ಹೊಂದಿರಬೇಕು.

ಮಿತಿಗಳು ಮತ್ತು ಪರ್ಯಾಯ ಇಂಧನಗಳು[ಬದಲಾಯಿಸಿ]

Main articles: Peak oil and Hubbert peak theory

ಪೂರೈಕೆ ಮತ್ತು ಬೇಡಿಕೆಯ ಮೂಲ ನೀತಿ ಸೂತ್ರವು ಸೂಚಿಸುವಂತೆ ಹೈಡ್ರೋಕಾರ್ಬನ್‌ನ ಪೂರೈಕೆಯು ಕಡಿಮೆಯಾದಂತೆ, ಬೆಲೆಗಳು ಏರುತ್ತವೆ. ಆದ್ದರಿಂದ ಬೆಲೆಗಳ ಏರಿಕೆಯು ಪರ್ಯಾಯಗಳ ಹೆಚ್ಚಳಕ್ಕೆ ದಾರಿಮಾಡುವುದು ನವೀಕರಣಗೊಳ್ಳಬಲ್ಲ ಶಕ್ತಿ ಯು ಆರ್ಥಿಕವಲ್ಲದ ಮೂಲಗಳು ಮುಂಚಿತವಾಗಿಯೇ ಸಾಕಷ್ಟು ಆರ್ಥಿಕ ಉಪಯೋಗಕ್ಕೆ ಯೋಗ್ಯವಾದ್ದವಾಗಿ ಪೂರೈಸುತ್ತವೆ. ಕೃತಕ ಗ್ಯಾಸೋಲಿನ್ ಗಳು ಮತ್ತು ಬೇರೆ ನವೀಕರಣಗೊಳ್ಳಬಲ್ಲ ಶಕ್ತಿ ಯ ಮೂಲಗಳು, ವಾಸ್ತವಿಕವಾಗಿ ಬೆಲೆಯ ದುಬಾರಿ ಉತ್ಪಾದನೆ ಮತ್ತು ಕ್ರಿಯಾತ್ಮಕ ತಾಂತ್ರಿಕತೆಗಳನ್ನು, ಸಂಪ್ರದಾಯಬದ್ಧ ಪೆಟ್ರೋಲಿಯಂ ಸಂಸ್ಕರಣಾ ಘಟಕಗಳಿಗಿಂತ ಹೆಚ್ಚು ಹಣದ ಅವಶ್ಯಕತೆಯಿದೆ. ಎನರ್ಜಿ ಅಭಿವೃದ್ಧಿಯನ್ನು ನೋಡಿ. ವಿವಿಧ ಪರ್ಯಾಯ ಶಕ್ತಿಯ ಮೂಲಗಳಲ್ಲಿ ನ್ಯೂಕ್ಲಿಯರ್, ಹೈಡ್ರೋ ಎಲೆಕ್ಟ್ರಿಕ್, ಸೋಲಾರ್, ಗಾಳಿ ಮತ್ತು ಜಿಯೋ ಥರ್ಮಲ್ ಇವುಗಳು ಸೇರಿವೆ.

ಪರಿಸರದ ಪರಿಣಾಮಗಳು[ಬದಲಾಯಿಸಿ]

1800-2004 ಇಂಧನ ವಿಧಾನದಿಂದ ಜಾಗತಿಕ ಪಳೆಯುಳಿಕೆ ಕಾರ್ಬನ್ ಹೊಸಸೂಸುವಿಕೆಸೂಚನೆ: ಒಟ್ಟು [32] ರಲ್ಲಿ ಕಾರ್ಬನ್ ಒಂದೇ 27% ಪ್ರತಿನಿಧಿಸುತ್ತದೆ

ಯೂನೈಟೆಡ್ ಸ್ಟೇಟ್ಸ್‌ನಲ್ಲಿ, ೯೦% ಗಿಂತ ಹೆಚ್ಚು ಗ್ರೀನ್ ಹೌಸ್ ಗ್ಯಾಸ್‌ನ ಹೊರಸೂಸುವಿಕೆಗಳು, ಪಳೆಯುಳಿಕೆ ಇಂಧನ ದಹನ ಕ್ರಿಯೆಯಿಂದ ಬರುತ್ತಿದೆ.[೧೮] ಪಳೆಯುಳಿಕೆ ಇಂಧನಗಳ ದಹನ ಕ್ರಿಯೆಯು ಬೇರೆ ವಾಯು ಮಾಲಿನ್ಯಕಾರಕಗಳನ್ನೂ ಸಹ ಹೊರಹಾಕುತ್ತದೆ. ಅವೆಂದರೆ ನೈಟ್ರೋಜನ್ ಆಕ್ಸೈಡ್, ಸಲ್ಫರ್ ಡೈಆಕ್ಸೈಡ್, ಬಾಷ್ಪಶೀಲ ಸಾವಯವ ಸಂಯುಕ್ತಗಳು ಮತ್ತು ಭಾರದ ಲೋಹಗಳು

ಕೆನಡಾ ಪರಿಸರದ ಪ್ರಕಾರ :

"ಕಾರ್ಖಾನೆಗಳ ಕ್ಷೇತ್ರಗಳಲ್ಲಿಯೇ, ವಿದ್ಯುಚ್ಚಕ್ತಿ ಕ್ಷೇತ್ರವು ವಿಶೇಷ ವಿಭಿನ್ನ ಏಕೆಂದರೆ ಎಲ್ಲಾ ವಾಯು ಮಾಲಿನ್ಯ ವಿಷಯಗಳು, ದಹನ ಹೊರ ಸೂಸುವ ಹೊಗೆಯಿಂದ ಹೊರತಾದ್ದರಿಂದ ಅದು ಅತೀ ದೊಡ್ಡ ಕೊಡುಗೆಯಾಗಿದೆ. ಕೆನಡಿಯನ್‌ನ ನೈಟ್ರೋಜನ್ ಆಕ್ಸೈಡ್ಸ್ ಮತು ಸಲ್ಫರ್ ಡೈಆಕ್ಸೈಡ್ಸ್ ಬಿಡುಗಡೆ ಮಾಡುವುದರಲ್ಲಿ ವಿದ್ಯುಚ್ಛಕ್ತಿ ಉತ್ಪಾದನೆಯದು ಅತಿ ದೊಡ್ಡ ಪಾಲಿದೆ. ಇದು ಹಿಮ ಮತ್ತು ಆಮ್ಲ ಮಳೆ ಹಾಗೂ ಚಿಕ್ಕ ಕಣಗಳಿಂದಾದ ವಸ್ತುಗಳ ಕೊಡುಗೆ ನೀಡಿದೆ. ಕೆನಡಾದಲ್ಲಿ ಪಾದರಸದ ಹೊರಸೂಸುವಿಕೆಯು ಒಂದು ಅತೀ ದೊಡ್ಡ ಬೃಹತ್ ಹಿಡಿತರಹಿತ ಕಾರ್ಖಾನೆಯ ಮೂಲವಾಗಿದೆ. ಪಳೆಯುಳಿಕೆ ಇಂಧನ - ಶಾಖವಿದ್ದ ವಿದ್ಯುತ್ ಶಕ್ತಿ ಘಟಕಗಳು ಸಹ ಕಾರ್ಬನ್ ಡೈ ಆಕ್ಸೈಡ್ ನ್ನು ಹೊರಹಾಕುತ್ತದೆ, ಇದು ಪರಿಸರ ಬದಲಾವಣೆಗೆ ಕೊಡುಗೆ ನೀಡಬಹುದು. ಇವೆಲ್ಲದರೊಂದಿಗೆ ಸೇರಿ, ಕೇಂದ್ರವು ನೀರು ಮತ್ತು ಪ್ರಾಣಿ ಸಸ್ಯಗಳ ಆ ವಾಸಸ್ಥಾನ ಮತ್ತು ಜೀವಿಗಳ ಜಾತಿ, ಇವೆಲ್ಲವುಗಳ ಮೇಲೆ ಮಹತ್ವದ ಪರಿಣಾಮಗಳನ್ನು ಬೀರಿದೆ. ಪ್ರಮುಖವಾಗಿ, ಹೈಡ್ರೋ ಡ್ಯಾಮ್‌ಗಳು ಮತ್ತು ರವಾನಿಸುವ ಲೈನ್‌ಗಳು, ನೀರು ಮತ್ತು ಜೈವಿಕ ವೈವಿದ್ಯಗಳ ಮೇಲೆ ಮಹತ್ವದ ಪರಿಣಾಮ ಬೀರುತ್ತವೆ."[೧೯]

ಕಳೆದ 400,000 ವರ್ಷಗಳಲ್ಲಿ ಕಾರ್ಬನ್ ಡೈಆಕ್ಸೈಡ್ ಬದಲಾವಣೆಗಳು, ಕೈಗಾರಿಕಾ ಕ್ರಾಂತಿಯಿಂದ ಆದ ಹೆಚ್ಚಳವನ್ನು ತೋರುತ್ತವೆ.

U.S.ವಿಜ್ಞಾನಿ ಜೆರ್ರಿ ಮಾಲ್ಮನ್ ಮತ್ತು USA ಟುಡೇ ಪ್ರಕಾರ: ಮಾಲ್ಮನ್, ವೈಜ್ಞಾನಿಕ ನಿಶ್ಚಿತತೆಯ ಹಂತಗಳನ್ನು ವ್ಯಾಖ್ಯಾನಿಸಲು ಬಳಸುತ್ತಿದ್ದ IPCC ಭಾಷೆಯನ್ನು ಬಹಳ ನೈಪುಣ್ಯತೆಯಿಂದ ಚಾತುರ್ಯದಿಂದ ತಯಾರಿಸಿದ್ದ. ೯೯% ನಿಖರವಾಗಿ ಅರ್ಥೈಸಿದ "ಮೂಲ ಸ್ವರೂಪದ ನಿಶ್ಚಿತತೆ"ಯ ಜೊತೆಗೆ ಪಳೆಯುಳಿಕೆ ಇಂಧನಗಳ ನಿಂದನೆಯು ಪಾದದ ಕೆಳಗೆ ಬಿದ್ದಿರುವುದೆಂಬ ಹೊಸ ವರದಿಯನ್ನು ಹೇಳಿದನು. ಮಾಲ್ಮನ್ ಹೇಳುವಂತೆ ೨೦೦೧ರಲ್ಲಿ ೬೬% ನಿಖರತೆ ಇರುವ ತಂಡದ ಕೊನೆಯ ವರದಿಯಲ್ಲಿ "ಲೈಕ್ಲಿ" ಯಿಂದ ಅದು ಒಂದು ಮಹತ್ವದ ನೆಗೆತವಾಗಿದೆ. ಈ ವರ್ಷದ ಶ್ರಮದಲ್ಲಿ ಎರಡು ತಿಂಗಳು ಕಳೆಯಲು ೧೬೦೦ ಪುಟಗಳಿಗಿಂತ ಹೆಚ್ಚಿಗೆ ಇರುವ ಸಂಶೋಧನೆಯ ಪುನರ್ ಪರಿಶೀಲನೆ ಮಾಡುತ್ತಾ ಮತ್ತು ಹೊಸ ತೆರಿಗೆ ನಿರ್ಧರಿಸುದರ ಬಗ್ಗೆ ಕೂಲಂಕುಷವಾಗಿ ಪ್ರಯತ್ನಿಸುವುದರ ಮೂಲಕ ಅವನ ಪಾತ್ರವು ತನ್ನನ್ನು ತಾನು ತೊಡಗಿಸಿಕೊಂಡಿದ್ದ.[೨೦]

ಪಳೆಯುಳಿಕೆ ಇಂಧನಗಳ ದಹನ ಕ್ರಿಯಿಯಿಂದ ಸಲ್ಪ್ಯೂರಿಕ್, ಕಾರ್ಬೋನಿಕ್, ಮತ್ತು ನೈಟ್ರಿಕ್ ಆಮ್ಲಗಳು ಉತ್ಪತ್ತಿಯಾಗುತ್ತವೆ. ಆಮ್ಲ ಮಳೆಯ ರೂಪದಲ್ಲಿ ಭೂಮಿಗೆ ಬೀಳುತ್ತವೆ. ನೈಸರ್ಗಿಕ ಪ್ರದೇಶಗಳು ಮತ್ತು ಕೃತಕವಾಗಿ ರಚಿಸಲ್ಪಟ್ಟ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತವೆ. ಮಾರ್ಬಲ್ ಮತ್ತು ಸುಣ್ಣದ ಕಲ್ಲುಗಳಿಂದ ನಿರ್ಮಾಣಗೊಂಡ ಸ್ಮಾರಕಗಳು ಮತ್ತು ಶಿಲ್ಪಕಲೆಗಳು ಮುಖ್ಯವಾಗಿ, ಆಮ್ಲಗಳು ಕ್ಯಾಲ್ಸಿಯಂ ಕಾರ್ಬೋನೇಟ್ ಅನ್ನು ಕರಗುವಂತೆ ಮಾಡುವುದರಿಂದ ಘಾಸಿಗೊಂಡು ಹಾಳಾಗುತ್ತವೆ.

ಮುಖ್ಯವಾಗಿ ಯೂರೇನಿಯಂ ಮತ್ತು ಥೋರಿಯಂಗಳು ಪರಿಸರಕ್ಕೆ ಬಿಡುಗಡೆಯಾಗುವುದರಿಂದ, ಪಳೆಯುಳಿಕೆ ಇಂಧನಗಳು ವಿಕಿರಣಶೀಲ ವಸ್ತುಗಳನ್ನೂ ಹೊಂದಿವೆ. ೨೦೦೦ದಲ್ಲಿ, ಸುಮಾರು ೧೨,೦೦೦ ಟನ್‌ಗಳಷ್ಟು ಥೋರಿಯಂ, ಮತ್ತು ೫೦೦೦ ಟನ್‌ಗಳಷ್ಟು ಯೂರೇನಿಯಂ , ಸುಡುತ್ತಿರುವ ಕಲ್ಲಿದ್ದಿಲಿನಿಂದ ಜಗತ್ತಿನಾದ್ಯಂತ ಬಿಡುಗಡೆಯಾಗಿದ್ದವು.[೨೧] ೧೯೮೨ ರಲ್ಲಿ ಅಂದಾಜಿಸಿದಂತೆ, ಥ್ರೀ ಮೈಲ್ ಐಲ್ಯಾಂಡ್ ಘಟನೆಯಲ್ಲಿ ಆಗಿದ್ದಕ್ಕಿಂತ, ೧೫೫ ಪಟ್ಟು ಹೆಚ್ಚು US ಕಲ್ಲಿದ್ದಲನ್ನು ಉರಿಸುವುದರಿಂದ ವಿಕಿರಣಶೀಲತೆ ಉಂಟಾಗಿತ್ತು.[೨೨] ಹೇಗಾದರೂ, ಕಲ್ಲಿದ್ದಲಿನ ದಹನ ಕ್ರಿಯೆಯಿಂದ ಹೊರಬರುವ ಈ ವಿಕಿರಣಶೀಲತೆಯು ಪ್ರತಿಯೊಂದು ಮೂಲದಲ್ಲಿ ಚಿಕ್ಕದಾಗಿರುತ್ತದೆ ಮತ್ತು ಮಾನವ ಶರೀರದ ಆರೋಗ್ಯದ ಮೇಲೆ ಯಾವುದೇ ಹಾನಿಕರ ದುಷ್ಪರಿಣಾಮ ಉಂಟುಮಾಡುವುದೆಂದು ಎಲ್ಲೂ ತೋರಿಸಲಾಗಿಲ್ಲ.[ಸೂಕ್ತ ಉಲ್ಲೇಖನ ಬೇಕು]

ಕಲ್ಲಿದ್ದಲಿನ ದಹನ ಕ್ರಿಯೆಯು ಅತೀ ದೊಡ್ಡ ಪ್ರಮಾಣದಲ್ಲಿ ತಳದ ಬೂದಿ ಮತ್ತು ಹಾರುವ ಬೂದಿಯನ್ನು ಬಿಡುಗಡೆ ಮಾಡುತ್ತದೆ. ಈ ವಸ್ತುಗಳನ್ನು ವಿವಿಧ ಅಪ್ಲಿಕೇಷನ್‌ಗಳಲ್ಲಿ ಬಳಸಲಾಗಿದೆ. ಉದಾಹರಣೆಗೆ ಸುಮಾರು ೪೦% US ಉತ್ಪಾದನೆಯಲ್ಲಿ.[೨೩]

ಕೊಯ್ಲು, ಸಂಸ್ಕರಣೆ ಮತ್ತು ಪಳೆಯುಳಿಕೆ ಇಂಧನಗಳ ವಿತರಣೆಯು ಪರಿಸರದ ಕಾಳಜಿಯನ್ನು ಸೃಷ್ಟಿಸುತ್ತವೆ. ಕಲ್ಲಿದ್ದಲು ಗಣಿಗಾರಿಕೆ ವಿಧಾನಗಳು ಮುಖ್ಯವಾಗಿ ಗುಡ್ಡ ಅಥವಾ ಬೆಟ್ಟದ ತುದಿಯನ್ನು ಅಗೆದು ತೆಗೆಯುವುದು ಮತ್ತು ಭೂಮಿಯನ್ನು ಬರಿದು ಮಾಡುವುದು, ಇವು ಪರಿಸರದ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತದೆ. ತೈಲಬಾವಿಗಳನ್ನು ಕೊರೆದು ತೈಲ ತೆಗೆಯುವುದರಿಂದ ನೀರಿನೊಳಗಿನ ಜಲಚರ ಪ್ರಾಣಿಗಳಿಗೆ ಅಪಾಯ ತಟ್ಟುತ್ತದೆ. ತೈಲ ಸಂಸ್ಕರಣಾ ಘಟಕಗಳು ಸಹ ವಾಯು ಮತ್ತು ಜಲಮಾಲಿನ್ಯಗಳಂತಹ ದುಷ್ಪರಿಣಾಮವನ್ನು ಪರಿಸರದ ಮೇಲೆ ಉಂಟು ಮಾಡುತ್ತವೆ. ಕಲ್ಲಿದ್ದಲಿನ ಸಾಗಾಣಿಕೆಯು ಡೀಸೆಲ್ ಶಕ್ತಿಯ ವಾಹನ ಸರಬರಾಜನ್ನು ಬಳಸಿಕೊಂಡು, ಆಗ ಕಚ್ಚಾ ತೈಲವು ಮುಖ್ಯವಾಗಿ ಟ್ಯಾಂಕರ್ ಗಳ ಹಡಗುಗಳಿಂದ ಸರಬರಾಜಾಗುತ್ತದೆ. ಇಂಥ ಪ್ರತಿಯೊಂದು ಸಾಗಾಣಿಕೆಯು ಪಳೆಯುಳಿಕೆ ಇಂಧನಗಳ ದಹನ ಕ್ರಿಯೆಯ ಅವಶ್ಯಕವಾಗಿ ಬಳಸಿಕೊಳ್ಳುತ್ತದೆ.


ಪರಿಸರ ಕಾನೂನು ಕಾಯ್ದೆಯು ಈ ಎಲ್ಲಾ ಹೊರಹಾಕುವುದನ್ನು ಮಿತಗೊಳಿಸಲು ವಿಭಿನ್ನ ರೀತಿಯ ಪ್ರಯತ್ನಗಳನ್ನು ಬಳಸುತ್ತಿದೆ. ಅಂತಹವೆಂದರೆ ಕಮಾಂಡ್-ಮತ್ತು-ಕಂಟ್ರೋಲ್ (ಮಾಲಿನ್ಯದ ಪ್ರಮಾಣ ಅಥವಾ ತಾಂತ್ರಿಕ ಬಳಕೆ ಪ್ರಮಾಣಗಳ ಬಗ್ಗೆ ಅಧಿಕೃತ ಆದೇಶ) ಆರ್ಥಿಕ ಬಡ್ತಿಗಳು ಅಥವಾ ಸ್ವಯಂನಿರೂಪಣಾ ಕಾರ್ಯಕ್ರಮಗಳು.

USA ಯಲ್ಲಿನ ಅಂಥ ಒಂದು ಕಾಯ್ದೆಯ ಉದಾಹರಣೆಯೇ "EPA-ಇದು ಗಾಳಿಯಲ್ಲಿ ಉತ್ಪತ್ತಿಯಾಗುವ ಪಾದರಸ ವಿಸರ್ಜನಾ ಅಂಶಗಳನ್ನು ತಡೆಗಟ್ಟಲೆಂದು ಇರುವ ಯೋಜನಾ ನಿಯಮಗಳು. ೨೦೦೫ ರಲ್ಲಿ ಬಿಡುಗಡೆಯಾದ ಕಾಯ್ದೆಯಡಿಯಲ್ಲಿ, ಕಲ್ಲಿದ್ದಲಿನ ದಹನದ ಶಕ್ತಿ ಉತ್ಪಾದನಾ ಘಟಕಗಳು ೨೦೧೮ ರಿಂದ ಈಚೆಗೆ ಶೇಕಡಾ ೭೦ ಕ್ಕಿಂತ ಕಡಿಮೆ ಇರುವಂತೆ ಘಟಕ ವಿಸರ್ಜನೆ ಮಾಡುವ ಅಗತ್ಯವಿದೆ ಎನ್ನಲಾಗಿದೆ."[೨೪].

ಆರ್ಥಿಕ ಅಂಶಗಳಲ್ಲಿ, ಪಳೆಯುಳಿಕೆ ಇಂಧನಗಳಿಂದ ಆಗುವ ಮಾಲಿನ್ಯವು ಋಣಾತ್ಮಕ ಹೊರಸ್ಥಿತಿಗೆ ಸಂಬಂಧಿಸಿದೆ. "ತೆರಿಗೆ ನಿಯಮ" ವನ್ನು ಸಾಮಾಜಿಕ ಬೆಲೆಗಳ ಖಚಿತಗೊಳ್ಳಲೆಂದು ಇರುವ ಒಂದು ಮಾರ್ಗವಾಗಿದೆ. ಅದಕ್ಕಾಗಿ ಮಾಲಿನ್ಯದ ಬೆಲೆಯನ್ನು ಆಂತರಿಕ ಗೊಳಿಸಲಾಗಿದೆ

 ಇದು ಪಳೆಯುಳಿಕೆ ಇಂಧನಗಳನ್ನು ಹೆಚ್ಚು ದುಬಾರಿಯಾಗುವಂತೆ ಮಾಡುವ ಗುರಿಯಾಗಿದೆ. ಆ ಮೂಲಕ, ಅವುಗಳ ಬಳಕೆ ಮತ್ತು ಮಾಲಿನ್ಯದ ಪ್ರಮಾಣವನ್ನು ಅವರ ಜೊತೆ ಸಂಘಟಿತಗೊಂಡು ಕಡಿಮೆ ಮಾಡಲಾಗುವುದು. ಈ ಎಲ್ಲ ಆಂಶಗಳ ಗಣನೆಗಾಗಿ ನಿಧಿಯನ್ನೂ ಜೊತೆಗೆ ಏರಿಸಲಾಗುತ್ತದೆ.

ಮಾಜಿ CIA ನಿರ್ದೇಶಕ ಜೇಮ್ಸ್ ವೂಲ್ಸೇ ಇತ್ತೀಚಿಗೆ ದೇಶದ ರಕ್ಷಣಾತ್ಮಕ ಅಭಿಪ್ರಾಯಗಳನ್ನು ಕುರಿತ ಪಳಿಯುಳಿಕೆ ಇಂಧನಗಳಿಂದ ದೂರ ಸರಿಯುವುದರ ಬಗ್ಗೆ ಸ್ಥೂಲ ವಿವರಣೆ ನೀಡಿದ್ದರು.[೨೫]

ಇವನ್ನೂ ಗಮನಿಸಿ[ಬದಲಾಯಿಸಿ]

No portals specified: please specify at least one portal

ಆಕರಗಳು[ಬದಲಾಯಿಸಿ]

 1. ಪಾಲ್ ಮನ್, ಲಿಸಾ ಗಹಗನ್, ಮತ್ತು ಮಾರ್ಕ್ ಬಿ. ಗೋರ್ಡನ್, "Tectonic setting of the world's giant oil and gas fields," in ಮೈಕೇಲ್ ಟಿ. ಹಲ್ಬೌಟಿ (ed.) Giant Oil and Gas Fields of the Decade, 1990-1999 , ಟಲ್ಸಾ, ಓಕ್ಲಾ.: American Association of Petroleum Geologists, ಪು.೫೦, ೨೨ ಜೂನ್ ೨೦೦೯.
 2. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 3. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 4. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 5. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 6. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 7. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 8. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 9. Ball, Max W.; Douglas Ball, Daniel S. Turner (1965). This Fascinating Oil Business. Indianapolis: Bobbs-Merrill. ISBN 0-672-50829-X.  Cite uses deprecated parameter |coauthors= (help)
 10. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 11. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 12. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 13. World Estimated Recoverable Coal
 14. ೧೪.೦ ೧೪.೧ World Proved Reserves of Oil and Natural Gas, Most Recent Estimates
 15. http://www.eia.doe.gov/pub/international/iealf/table೧೪.xls
 16. http://www.eia.doe.gov/emeu/international/RecentPetroleumConsumptionBarrelsperDay.xls
 17. http://web.archive.org/web/20010612154834/http://www.eia.doe.gov/pub/international/iealf/table13.xls
 18. US EPA.೨೦೦೦. Inventory of U.S. Greenhouse Gas Emissions and Sinks: ೧೯೯೦-೧೯೯೮, Rep. EPA ೨೩೬-R-೦೦-೦೧. US EPA, ವಾಷಿಂಗ್ಟನ್, DC, http://www.epa.gov/globalwarming
 19. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 20. http://www.usatoday.com/tech/science/೨೦೦೭-೦೧-೩೦-ipcc-report_x.htm
 21. Coal Combustion: Nuclear Resource or Danger - ಅಲೆಕ್ಸ್ ಗಬ್ಬರ್ಡ್
 22. Nuclear proliferation through coal burning - ಗೋರ್ಡನ್ ಜೆ. ಔಬ್ರೆಚ್ಟ್, II, ಒಹಿಯೊ ಸ್ಟೇಟ್ ಯೂನಿವರ್ಸಿಟಿ
 23. American Coal Ash Association. ""CCP Production and Use Survey"" (PDF). 
 24. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 25. Video of Woolsey speech

ಬಾಹ್ಯ ಕೊಂಡಿಗಳು[ಬದಲಾಯಿಸಿ]

Debate