ಪಂಚಮವೇದ

ವಿಕಿಪೀಡಿಯ ಇಂದ
Jump to navigation Jump to search

ಪಂಚಮ ವೇದ ಅಂದರೆ ನಾಲ್ಕು ಅಂಗೀಕೃತ ವೇದಗಳ ಹೊರಗಿರುವ, ಆದಾಗ್ಯೂ ವೇದದ ಸ್ಥಾನ ಹೊಂದಿರುವ ಪಠ್ಯ. ಒಂದು ನಿರ್ದಿಷ್ಟ ಪಠ್ಯ ಅಥವಾ ಪಠ್ಯಗಳು ಮತ್ತು ಅವುಗಳ ಬೋಧನೆಗಳಿಗೆ ಹಿಂದೂ ಧರ್ಮವು ವೇದಗಳೊಂದಿಗೆ ಸಂಬಂಧಿಸುವ ಶಾಶ್ವತತೆ ಮತ್ತು ಅಧಿಕಾರ ನೀಡಲು ಪಂಚಮ ವೇದದ ಕಲ್ಪನೆಯನ್ನು ಅನೇಕ ವೈದಿಕೋತ್ತರ ಹಿಂದೂ ಪಠ್ಯಗಳಲ್ಲಿ ಪ್ರಸ್ತಾಪಿಸಲಾಗಿದೆ.[೧] ಈ ಕಲ್ಪನೆ ಪ್ರಾಚೀನವಾದುದು, ಮತ್ತು ಮೊದಲ ಸಲ ಉಪನಿಷತ್ತುಗಳಲ್ಲಿ ಕಾಣಿಸಿತು, ಆದರೆ ಅವುಗಳ ನಂತರದ ಕಳೆದ ಕೆಲವು ಶತಮಾನಗಳಲ್ಲಿ ಹೆಚ್ಚು ಇತ್ತೀಚಿನ ಸಂಸ್ಕೃತ ಮತ್ತು ದೇಶೀಯ ಪಠ್ಯಗಳಿಗೂ ಅನ್ವಯಿಸಲಾಗಿದೆ.

ಪಂಚಮ ವೇದಕ್ಕೆ ಅತ್ಯಂತ ಮುಂಚಿನ ಉಲ್ಲೇಖ ಛಾಂದೋಗ್ಯ ಉಪನಿಷತ್‍ನಲ್ಲಿ ಕಂಡುಬರುತ್ತದೆ. ಈ ಉಪನಿಷತ್ತು ಪಂಚಮ ವೇದ ಪದವನ್ನು ಅದರ ಕಾಲದ ಇತಿಹಾಸ-ಪುರಾಣಗಳಿಗೆ ("ಪ್ರಾಚೀನ ಸಂಪ್ರದಾಯಗಳು") ಅನ್ವಯಿಸುತ್ತದೆ,

ಇತಿಹಾಸಪುರಾಣಮ್ ಪಂಚಮಮ್ ವೇದಾನಾಮ್

ಮಹಾಭಾರತವು ಇತಿಹಾಸದ ಈ ಉಲ್ಲೇಖವನ್ನು ಬಳಸಿತು. ಮಹಾಭಾರತವು ಇತಿಹಾಸವೆಂದೂ ಕರೆಯಲ್ಪಡುವ ಭಾರತೀಯ ಮಹಾಕಾವ್ಯ ವರ್ಗಕ್ಕೆ ಸೇರಿದೆ. ಮಹಾಭಾರತವು ತನ್ನನ್ನು ತಾನು ಪಂಚಮ ವೇದವೆಂದು ಉಲ್ಲೇಖಿಸಿಕೊಂಡಿದೆ. ವೇದಗಳ ಪೌರಾಣಿಕ ಸಂಪಾದಕರಾದ ವ್ಯಾಸರಿಂದ ಬರೆಯಲ್ಪಟ್ಟದ್ದೆಂದು ಆರೋಪಿಸಲಾಗಿರುವ ಸಂಗತಿಯ ಮೇಲೂ ಅವಲಂಬಿಸಿ, ಮಹಾಭಾರತವು ತನ್ನನ್ನು ತಾನು ಎಲ್ಲ ಜನರಿಗಾಗಿ ಉದ್ದೇಶಿತವಾದ ಹೊಸ ಯುಗಕ್ಕೆ ಹೊಸ ವೇದವೆಂದು ಘೋಷಿಸಿಕೊಂಡಿದೆ. ಇದು ತಾನು ನಾಲ್ಕು ಅಂಗೀಕೃತ ವೇದಗಳಿಗೆ ಸಮಾನವೆಂದು ಮತ್ತು ಕೆಲವು ರೀತಿಯಲ್ಲಿ ವೇದಗಳಿಗಿಂತ ಶ್ರೇಷ್ಠವೆಂದು ಹೇಳಿಕೊಂಡಿದೆ. ಇನ್ನೊಂದು ಪ್ರಧಾನ ಹಿಂದೂ ಮಹಾಕಾವ್ಯವಾದ ರಾಮಾಯಣವೂ ತಾನು ಪಂಚಮ ವೇದವೆಂದು ಹಕ್ಕು ಸಾಧಿಸುತ್ತದೆ.

ಪುರಾಣಗಳಲ್ಲಿ ಇದಕ್ಕೆ ಹೋಲುವಂಥ ಹಕ್ಕುಸಾಧನೆಗಳನ್ನು ಮಾಡಲಾಗಿದೆ. ಪುರಾಣಗಳು ಇತಿಹಾಸಗಳೊಂದಿಗೆ, ಅಥವಾ ತಮ್ಮನ್ನು ತಾವು ಪಂಚಮ ವೇದವೆಂದು ಹಕ್ಕು ಸಾಧಿಸುತ್ತವೆ, ಆಗಾಗ್ಗೆ ತಮ್ಮನ್ನು "ಪುರಾಣ ವೇದ"ವೆಂದು ಉಲ್ಲೇಖಿಸಿಕೊಳ್ಳುತ್ತವೆ. ಭಾಗವತ ಪುರಾಣವು ನಾಲ್ಕು ವೇದಗಳು ಬ್ರಹ್ಮನ ನಾಲ್ಕು ಬಾಯಿಗಳಿಂದ, ಒಂದು ಬಾಯಿಯಿಂದ ಒಂದರಂತೆ, ಹೊರಹೊಮ್ಮಿದ ನಂತರ, ಐದನೇ ವೇದವಾದ ಇತಿಹಾಸಪುರಾಣವು ಅವನ ಐದನೇ ಬಾಯಿಯಿಂದ ಅಥವಾ ಅವನ ಎಲ್ಲ ಬಾಯಿಗಳಿಂದ ಹೊರಹೊಮ್ಮಿತು ಎಂದು ಹೇಳಿ ಛಾಂದೋಗ್ಯ ಉಪನಿಷತ್ತಿನ ಐದನೇ ವೇದಕ್ಕೆ ಸಂಬಂಧಿಸಿದ ಹೇಳಿಕೆಯನ್ನು ವಿಸ್ತರಿಸುತ್ತದೆ. ನಂತರ ಅದು ವ್ಯಾಸರ ಅತ್ಯುತೃಷ್ಟ ಸಾಧನೆ ಎಂಬ ಆಧಾರದ ಮೇಲೆ ತಾನು ಇತರ ಎಲ್ಲ ಪುರಾಣಗಳಿಗಿಂತ ಸರ್ವೋಚ್ಚವೆಂದು ಘೋಷಿಸಿಕೊಂಡಿತು. ಹಾಗೆಯೇ, ಪುರಾಣಗಳು ಪಂಚಮ ವೇದವೆಂದು ಸ್ಕಂದ ಪುರಾಣವೂ ಸೂಚಿಸುತ್ತದೆ, ಹಾಗಾಗಿ ತನಗೆ ತಾನು ಧರ್ಮಗ್ರಂಥಗಳ ಅಧಿಕಾರ ಕೊಟ್ಟುಕೊಳ್ಳುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. Smith, Brian K. (August 1987). "Exorcising the Transcendent: Strategies for Defining Hinduism and Religion". History of Religions. 27 (1): 32–55. doi:10.1086/463098. JSTOR 1062532. at p. 46.
"https://kn.wikipedia.org/w/index.php?title=ಪಂಚಮವೇದ&oldid=780625" ಇಂದ ಪಡೆಯಲ್ಪಟ್ಟಿದೆ