ನೀಲಿ ಗಲ್ಲದ ಕಳ್ಳಿಪೀರ
ನೀಲಿ ಗಲ್ಲದ ಕಳ್ಳಿಪೀರ | |
---|---|
Conservation status | |
Scientific classification | |
ಸಾಮ್ರಾಜ್ಯ: | |
ವಿಭಾಗ: | |
ವರ್ಗ: | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | N. athertoni
|
Binomial name | |
Nyctyornis athertoni | |
ನೀಲಿ ಗಲ್ಲದ ಕಳ್ಳಿಪೀರದ ವಿತರಣೆ ನಕ್ಷೆ | |
Synonyms | |
Merops athertoni |
ನೀಲಿ ಗಲ್ಲದ ಕಳ್ಳಿಪೀರವು ಭಾರತೀಯ ಉಪಖಂಡದಲ್ಲಿ ಮತ್ತು ಆಗ್ನೇಯ ಏಷ್ಯಾದ ಕೆಲವು ಭಾಗಗಳಲ್ಲಿ ಕಂಡುಬರುವ ಬೀ-ಈಟರ್ಗಳ ದೊಡ್ಡ ಜಾತಿಗೆ ಸೇರಿದೆ. ಅರಣ್ಯ ಪ್ರದೇಶಗಳಲ್ಲಿ ಕಂಡು ಬರುವ ಇದು ಮಲಯನ್ ಪ್ರದೇಶದಿಂದ ಭಾರತದ ಪಶ್ಚಿಮ ಘಟ್ಟಗಳಿಗವರೆಗೆ ವ್ಯಾಪಿಸಿದೆ. ಅದರ ಗಂಟಲಿನಲ್ಲಿ ಉದ್ದವಾದ ನೀಲಿ ಗರಿಗಳಿದ್ದು, ಇದರಿಂದ ಇದಕ್ಕೆ ಈ ಹೆಸರು ಬಂದಿದೆ. ಇವು ಇತರ ಚಿಕ್ಕದಾದ ಕಳ್ಳಿಪೀರಗಳಂತೆ ಗುಡಾರದಿಂದ ಕೂಡಿಲ್ಲ ಮತ್ತು ಸಕ್ರಿಯವಾಗಿಲ್ಲ. ಮತ್ತು ಇವುಗಳ ಬಾಲವು ಇತರ ಕಳ್ಳಿಪೀರಗಳ ಪ್ರಭೇದಗಳಲ್ಲಿ ಕಂಡುಬರುವ ಸುದೀರ್ಘವಾದ ಕೇಂದ್ರ ಬಾಲ ಗರಿಗಳನ್ನು ಹೊಂದಿರುವುದಿಲ್ಲ.
ವಿವರಣೆ
[ಬದಲಾಯಿಸಿ]ಈ ದೊಡ್ಡ ಗಾತ್ರದ ಕಳ್ಳಿಪೀರದ ಕೊಕ್ಕು ದೊಡ್ಡ ಕುಡಗೋಲು ಆಕಾರದದ್ದು ಮತ್ತು ಬಾಲದ ತುದಿಯ ಆಕಾರ ಚೌಕವಾಗಿರುತ್ತದೆ. ಹಕ್ಕಿಯ ಬಣ್ಣ ಹುಲ್ಲು ಹಸಿರಾಗಿದ್ದು, ಮುಖ, ಗಲ್ಲ ಮತ್ತು ಹಣೆ ವೈಡೂರ್ಯದಿಂದ ಕೂಡಿದೆ. ಹೊಟ್ಟೆಯ ಬಣ್ಣ ಹಳದಿಯಿಂದ ಆಲಿವ್ ಆಗಿದ್ದು, ಹಸಿರು ಅಥವ ನೀಲಿ ಬಣ್ಣದ ಗೆರೆಗಳಿರುತ್ತವೆ. ಈಶಾನ್ಯ ಭಾರತೀಯದಲ್ಲಿ ಕಂಡುಬರುವ ನೀಲಿ ಗಲ್ಲದ ಕಳ್ಳಿಪೀರವು, ಪೆನಿನ್ಸುಲರ್ ಇಂಡಿಯಾಗಿಂತ ಹೆಚ್ಚಿನ ಘಾಡವಾದ ಹಸಿರು ಬಣ್ಣವನ್ನು ಹೊಂದಿರುತ್ತದೆ.[೪]
ವಿತರಣೆ ಮತ್ತು ಆವಾಸಸ್ಥಾನ
[ಬದಲಾಯಿಸಿ]ಈ ಪ್ರಭೇದವು ಹೆಚ್ಚಾಗಿ ಮಧ್ಯಮ ಎತ್ತರದಲ್ಲಿ ಆದರೆ ೨೦೦೦ಮೀ ಎತ್ತರಕ್ಕಿಂತ ಕೆಳಗಿರುವ ವಿವಿಧ ಆವಾಸಸ್ಥಾನಗಳಲ್ಲಿ ಕಂಡುಬರುತ್ತದೆ. ಸಾಧಾರಣ ಎತ್ತರದ ಪ್ರದೇಶಗಳಲ್ಲಿರುವ ತೀಕ್ಷ್ಣವಾದ ಅರಣ್ಯ ಪ್ರದೇಶವು ಇದರ ವಿಶಿಷ್ಟ ಆವಾಸಸ್ಥಾನವಾಗಿದೆ. ಇದು ಏಕೈಕವಾಗಿ ಅಥವಾ ಮೂರರವರೆಗಿನ ಸಣ್ಣ ಗುಂಪುಗಳಲ್ಲಿ ಕಂಡುಬರುತ್ತದೆ.[೫] ಸತ್ಪುರ, ಪಶ್ಚಿಮ ಘಟ್ಟ, ಪೂರ್ವ ಘಟ್ಟ, ನೀಲಗಿರಿಸ್, ಚೋಟಾ ನಾಗ್ಪುರ್ ಮತ್ತು ಉಪ-ಹಿಮಾಲಯ ಕಾಡುಗಳ ಬೆಟ್ಟ ಪ್ರದೇಶಗಳಿಂದಲು ವರದಿಯಾಗಿದೆ.[೬][೭][೮]
ವರ್ತನೆ
[ಬದಲಾಯಿಸಿ]ಈ ಹಕ್ಕಿಯ ಕರೆ ಜೋರಾಗಿ ಇದೆ, ಆದರೆ ಆಗಾಗ್ಗೆ ಕರೆ ಮಾಡುವುದಿಲ್ಲ ಮತ್ತು ಹಸಿರು ಕಳ್ಳಿಪೀರಗಳಷ್ಟು ಸಕ್ರಿಯವಾಗಿಲ್ಲ. ಇವು ಭಾರತದಲ್ಲಿ ಫೆಬ್ರವರಿ ಇಂದ ಆಗಸ್ಟ್ ತನಕ ಸಂತಾನೋತ್ಪತ್ತಿ ಮಾಡುತ್ತವೆ. ಸಾಮಾನ್ಯವಾಗಿ ಗೂಡಿನ ಉತ್ಖನನವು ಮೊಟ್ಟೆಗಳಿಡುವ ಒಂದು ತಿಂಗಳ ಮೊದಲು ಪ್ರಾರಂಭವಾಗುತ್ತದ ಮತ್ತು ಇದರ ಗೂಡು ಮಣ್ಣಿನ ದಂಡೆಯಲ್ಲಿ ಆಳವಾದ ಸುರಂಗದೊಳಗಿರುತ್ತದೆ. ಇದರಲ್ಲಿ ನಾಲ್ಕು ಗೋಳಾಕಾರದ ಮತ್ತು ಬಿಳಿ ಮೊಟ್ಟೆಗಳನ್ನು ಹಾಕುತ್ತವೆ.[೯]. ಇವುಗಳ ಮುಖ್ಯ ಆಹಾರ ಜೇನು ನೊಣಗಳಾಗಿರುತ್ತವೆ.
ಗ್ಯಾಲರಿ
[ಬದಲಾಯಿಸಿ]-
ಥೈಲ್ಯಾಂಡ್ ನಲ್ಲಿ ಕಂಡುಬಂದ ನೀಲಿ ಗಲ್ಲದ ಕಳ್ಳಿಪೀರ
-
ನೀಲಿ ಗಲ್ಲದ ಕಳ್ಳಿಪೀರ
-
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Xeno-Canto(ಧ್ವನಿ ರೆಕಾರ್ಡಿಂಗ್ಗಳು)
- Oriental Bird Images (ಚಿತ್ರಗಳು) Archived 2020-10-24 ವೇಬ್ಯಾಕ್ ಮೆಷಿನ್ ನಲ್ಲಿ.
ಉಲ್ಲೇಖಗಳು
[ಬದಲಾಯಿಸಿ]- ↑ "Nyctyornis athertoni". IUCN Red List of Threatened Species. Version 2013.2. International Union for Conservation of Nature. 2012. Retrieved 26 November 2013.
{{cite web}}
: Invalid|ref=harv
(help) - ↑ Jardine, William; P. J. Selby (1830). lllustrations of Ornithology. Volume 2. plate 58. Edinburgh: W.H.Lizars.
{{cite book}}
: Unknown parameter|lastauthoramp=
ignored (help) - ↑ Guenther, A (ed) (1892). Catalogue of the birds in the British Museum. Vol 17. Trustees of the British Museum.
{{cite book}}
:|author=
has generic name (help) - ↑ Rasmussen PC; JC Anderton (2005). Birds of South Asia: The Ripley Guide. Vol. 2. Smithsonian Institution & Lynx Edicions. p. 268.
{{cite book}}
: Unknown parameter|lastauthoramp=
ignored (help) - ↑ Inglis, Charles M (1949). "The Bluebearded Bee-eater (Alcemerops athertoni Jard. & Selby) on the Nilgiris". J. Bombay Nat. Hist. Soc. 48 (3): 581–582.
- ↑ Osmaston, BB (1922). "The occurrence of the Bluebearded Bee-eater Nyctiornis athertoni in the Central Provinces". J. Bombay Nat. Hist. Soc. 28 (3): 805.
- ↑ Hewetson, C (1944). "Bearded Bee-eater (Alcemerops athertoni) in the Central Provinces". J. Bombay Nat. Hist. Soc. 44 (4): 592–593.
- ↑ Ara, Jamal (1951). "Distribution of the Blue-bearded Bee-eater [Nyctiornis athertoni (Jardine & Selby)]". J. Bombay Nat. Hist. Soc. 50 (1): 175–176.
- ↑ Blanford, WT (ed) (1895). Fauna of British India. Birds Vol. 3. pp. 115–116.
{{cite book}}
:|author=
has generic name (help)