ಹಸಿರು ಕಳ್ಳಿಪೀರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭಾರತದಲ್ಲಿ ಕಂಡುಬಂದ ಹಸಿರು ಕಳ್ಳಿಪೀರ
ಹಸಿರು ಕಳ್ಳಿಪೀರ
ssp. orientalis
Conservation status
Scientific classification
ಸಾಮ್ರಾಜ್ಯ:
Animalia
ವಿಭಾಗ:
Chordata
ವರ್ಗ:
ಗಣ:
ಕುಟುಂಬ:
ಕುಲ:
ಪ್ರಜಾತಿ:
M. orientalis
Binomial name
ಮೆರಾಪ್ಸ್ ಓರಿಯಂಟಾಲಿಸ್
Latham, 1801
Synonyms

Merops viridis Neumann, 1910

ಹಸಿರು ಕಳ್ಳಿಪೀರ ("ಮೆರಾಪ್ಸ್ ಓರಿಯೆಂಟಲಿಸ್") ಕಳ್ಳಿಪೀರ ಕುಟುಂಬದ ಒಂದು ಪ್ಯಾಸರೀನ್ ಪಕ್ಷಿಯಾಗಿದೆ.ಇದು ವ್ಯಾಪಕವಾಗಿ ಉಪ ಸಹಾರಾ ಆಫ್ರಿಕಾದ ಸೆನೆಗಲ್ ಮತ್ತು ಗ್ಯಾಂಬಿಯಾದಿಂದ ಇಥಿಯೋಪಿಯದವರೆಗೆ,ನೈಲ್ ಕಣಿವೆಯಲ್ಲಿ,ಪಶ್ಚಿಮ ಅರೇಬಿಯಾ,ಮತ್ತು ಏಷ್ಯಾಭಾರತದಿಂದ ವಿಯೆಟ್ನಾಮ್ ವರೆಗೆ ಹಬ್ಬಿದೆ.[೧] ಈ ಜಾತಿ ಮುಖ್ಯವಾಗಿ ಕೀಟ ತಿನ್ನುವ ಮತ್ತು ಅವು ಹುಲ್ಲುಗಾವಲು, ತೆಳುವಾದ ಪೊದೆಗಳು ಮತ್ತು ಸಾಮಾನ್ಯವಾಗಿ ತೀರಾ ನೀರಿಲ್ಲದ ಕಾಡಿನಲ್ಲಿ ಕಂಡುಬಂದಿಲ್ಲ. ಅನೇಕ ಪ್ರಾಂತೀಯ ಗರಿಗಳ ವ್ಯತ್ಯಾಸಗಳು ಕಂಡುಬಂದಿದ್ದು ಮತ್ತು ಹಲವಾರು ಉಪವರ್ಗಗಳನ್ನು ಗುರುತಿಸಲಾಗಿದೆ.


ವಿವರಣೆ[ಬದಲಾಯಿಸಿ]

ಇತರ ಕಳ್ಳಿಪೀರಗಳಂತೆ ಇದು ಸಮೃದ್ಧವಾಗಿ ಬಣ್ಣದಿಂದ ಕುಡಿದೆ. ತೆಳುವಾದ ಪಕ್ಷಿಯಾಗಿದ್ದು ಕೇವಲ ಸುಮಾರು 9 ಇಂಚು(16-18 ಸೆಂ.ಮೀ)ಗಳಷ್ಟು ಉದ್ದವಾಗಿದ್ದು, ೨ ಇಂಚು ಉದ್ದನೆಯ ಕೇಂದ್ರ ಗರಿಗಳನ್ನು ಹೊಂದಿರುತ್ತದೆ.ಲಿಂಗಗಳ ದೃಷ್ಟಿ ವಿಶಿಷ್ಟ ಅಲ್ಲ. ಇಡೀ ಗರಿಗಳ ಹೊಳೆಯುವ ಹಸಿರು ಮತ್ತು ವಿಶೇಷವಾಗಿ ಗಲ್ಲದ ಮತ್ತು ಗಂಟಲು ನೀಲಿ ಲೇಪಿತ ಬಣ್ಣದಿಂದಾಗಿದೆ. ಕಿರೀಟ ಮತ್ತು ಬೆನ್ನಿನ ಮೇಲ್ಭಾಗ ಚಿನ್ನದ ಹೊಳಪಿನ ಕೆಂಪು ಮಿಶ್ರಿತ ಲೇಪಿತ ಇದೆ. ಉತ್ತಮವಾದ ಕಪ್ಪನೆಯ ಒಂದು ರೇಖೆ,ಕಣ್ಣಿನ ಮುಂದೆಮತ್ತು ಹಿಂದೆ ಸಾಗುತ್ತದೆ. ಐರಿಸ್ ಕಡುಗೆಂಪು ಬಣ್ಣದಿಂದ ಕೂಡಿದ್ದರೆ,ಕಾಲುಗಳು ಗಾಢ ಬೂದು, ಮತ್ತು ಕೊಕ್ಕು ಕಪ್ಪು ಬಣ್ಣದಿಂದಾಗಿದೆ. ಅಡಿ ತಳದಲ್ಲಿ ಸೇರುವ ಮೂರು ಕಾಲ್ಬೆರಳುಗಳು ದುರ್ಬಲವಾಗಿರುತ್ತವೆ.

ಗರಿಷ್ಟ ವೇಗ- ೪೨ ಕಿಮೀ / ಗಂ.

ಆಯಸ್ಸು- ೧೨-೧೮ ವರ್ಷ.[೨]

ಜೀವನ ಶೈಲಿ- ಒಂಟಿಯಾಗಿ.

ಆಹಾರ ಹಾಗೂ ಆವಾಸ[ಬದಲಾಯಿಸಿ]

ಜೇನು ನೊಣ,ಸಣ್ಣ ಹುಳ ಹುಪ್ಪಟೆಗಳು,ಇರುವೆಗಳು ಮುಖ್ಯ ಆಹಾರ.ಜನವಸತಿ ಇರುವೆಡೆ ತಂತಿ ಇತ್ಯಾದಿ ಎತ್ತರದ ಪ್ರದೇಶದಲ್ಲಿ ಕುಳಿತುಕೊಳ್ಳುತ್ತದೆ ಮತ್ತು ಬಿಲಗಳಲ್ಲಿ ಗೂಡು ಮಾಡಿ ಜೀವಿಸುತ್ತದೆ.

ಜೋಡಿ ಹಸಿರು ಕಳ್ಳಿಪೀರಗಳು

ಜೀವಿವರ್ಗೀಕರಣ ಶಾಸ್ತ್ರ[ಬದಲಾಯಿಸಿ]

ಹಸಿರು ಕಳ್ಳಿಪೀರ(ನೇಪಾಳ)

ಹಸಿರು ಕಳ್ಳಿಪೀರವನ್ನು ಮೊದಲ ಈಗಿನ ವೈಜ್ಞಾನಿಕ ಹೆಸರು ಬಳಸಿಕೊಂಡು 1801 ರಲ್ಲಿ ಇಂಗ್ಲೀಷ್ ಪಕ್ಷಿ ವಿಜ್ಞಾನಿ ಜಾನ್ ಲಥಾಮ್ ವಿವರಿಸಿದರು. ಅಲ್ಲದೆ ಹಲವಾರು ಸಮುದಾಯಗಳು ಉಪವರ್ಗಗಳನ್ನು ನಿರ್ದಿಷ್ಟವಾಗಿ ಸೂಚಿಸಲಾಗಿದೆ. ಇವರೆಗೆ ಕಂಡುಬಂದಿರುವ ಉಪ ಜಾತಿಗಳನ್ನು ಈ ಕೆಳಗೆ ಪಟ್ಟಿಮಾಡಲಾಗಿದೆ.

 • "viridissimus" ಉಪಜಾತಿಯು ಸೆನೆಗಲ್, ಉತ್ತರ ಇಥಿಯೋಪಿಯದಲ್ಲಿ ಕಂಡುಬರುತ್ತದೆ (ದೀರ್ಘ ಸ್ಟ್ರೀಮರ್ ಜೊತೆ ಗಂಟಲು , ಕಿರೀಟ ಮತ್ತು ಕತ್ತಿನ ಹಿಂಭಾಗದಲ್ಲಿ ಹೆಚ್ಚು ಹಸಿರು ಹೊಂದಿದೆ).
 • "ಕ್ಲಿಯೋಪಾತ್ರ" ಉತ್ತರ ಸುಡಾನಿಂದ ನೈಲ್ ಕಣಿವೆವರೆಗೆ ಕಂಡುಬಂದಿದೆ.
 • ಸುಡಾನ್ ನ ಉತ್ತರ ಚಾಡ್ ನಿಂದ "flavoviridis".
 • ಅರೇಬಿಯನ್ ಪ್ರಸ್ಥಭೂಮಿಯಲ್ಲಿ "muscatensis" (ಹೆಚ್ಚು ಹಳದಿ ಹಸಿರು ಬಣ್ಣದ ಕಿರಿದಾದ ಕಾಲುವೆಯಾಕಾರದ ಗಂಟಲು).
 • "ಓರಿಯೆಂಟಾಲಿಸ್" ಭಾರತ ಮತ್ತು ಶ್ರೀಲಂಕಾದಿಂದ(ತಲೆ ಮತ್ತು ಕುತ್ತಿಗೆ ಕೆಂಪು ಲೇಪಿತ ಬಣ್ಣ ಹೊಂದಿದೆ).

ಬಾಹ್ಯ ಸಂಪರ್ಕ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

 1. Fry, K, Fry, C.H (1992). Kingfishers, Bee-Eaters and Rollers. A Handbook. Princeton University Press. ISBN 0-7136-8028-8.{{cite book}}: CS1 maint: multiple names: authors list (link)
 2. Animals, a-z. "Little green bee eater".
 • http://a-z-animals.com/animals/green-bee-eater.
 • Winged friends by M Y Ghorpade, ISBN-10: 1900318237.
 • ಮಿ೦ಚುಳ್ಳಿ by K.P. Poornachandra Tejaswi ಕೆ. ಪಿ. ಪೂರ್ಣಚಂದ್ರ ತೇಜಸ್ವಿ.
 • ಪಕ್ಷಿ ಪ್ರಪಂಚ: ಹರೀಶ್ ಆರ್.ಭಟ್ ಹಾಗೂ ಪ್ರಮೋದ್ ಸುಬ್ಬರಾವ್.