ನಟರಾಜ್ ಎಸ್ ಭಟ್
ನಟರಾಜ್ ಎಸ್. ಭಟ್ | |
---|---|
Born | ನಟರಾಜ್ ಎಸ್. ಭಟ್ ೨೩ ಫೆಬ್ರವರಿ ೧೯೮೪ |
Occupation | ಚಲನಚಿತ್ರ ನಟ |
Years active | ೨೦೦೭ರಿಂದ ಪ್ರಸ್ತುತ |
ನಟರಾಜ್ ಎಸ್. ಭಟ್ ಕನ್ನಡ ಚಲನಚಿತ್ರ ನಟರಾಗಿದ್ದು, ೨೦೧೬ರಲ್ಲಿ ಬಿಡುಗಡೆಯಾದ "ರಾಮಾ ರಾಮಾ ರೇ..." ಎಂಬ ಕನ್ನಡ ಚಲನಚಿತ್ರದಲ್ಲಿ ನಾಯಕ ನಟನಾಗಿ ಹೆಸರು ಪಡೆದಿದ್ದಾರೆ.[೧] .
ಕೌಟುಂಬಿಕ ಹಾಗೂ ಶೈಕ್ಷಣಿಕ ಹಿನ್ನಲೆ
[ಬದಲಾಯಿಸಿ]ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನವರಾದ ಇವರು, ತಮ್ಮ ಪ್ರಾಥಮಿಕ ಶಿಕ್ಷಣ ಹಾಗೂ ಪ್ರೌಢ ಶಿಕ್ಷಣವನ್ನು ತಿಪಟೂರು, ಹಾಗೂ ಕಡೂರಿನಲ್ಲಿ ಪೂರೈಸಿದರು. ೧೯೮೪ ಫೆಬ್ರವರಿ ೨೩ರಂದು ಸುಬ್ರಮಣ್ಯ ಭಟ್ ಹಾಗೂ ಸರಸ್ವತಿ ದಂಪತಿಗಳಿಗೆ ತಿಪಟೂರಿನಲ್ಲಿ ಜನಿಸಿದರು.
ಕಲಾ ವಿಭಾಗದಲ್ಲಿ ಪದವವೀಧರರಾದ ಇವೆರು ಕುವೆಂಪು ವಿಶ್ವವಿದ್ಯಾಲಯದಿಂದ ಕಾನೂನು ಶಾಸ್ತ್ರದಲ್ಲಿ ಪದವಿಯನ್ನೂ ಪಡೆದಿದ್ದಾರೆ.
ವೃತ್ತಿ ಜೀವನ
[ಬದಲಾಯಿಸಿ]ನಿರ್ದೇಶಕ ಪಿ.ಶೇಷಾದ್ರಿಯವರೊಂದಿಗೆ ಸಹಾಯಕ ನಿರ್ದೇಶಕರಾಗಿ ಚಲನಚಿತ್ರ ರಂಗವನ್ನು ಪ್ರವೇಶಿಸಿದ ನಟರಾಜ್, ಹಲವಾರು ಚಲನಚಿತ್ರ ಹಾಗೂ ಧಾರಾವಾಹಿಗಳಿಗೆ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಬಳಿಕ ೨೦೧೬ರಲ್ಲಿ ಬಿಡುಗಡೆಯಾದ "ರಾಮಾ ರಾಮಾ ರೇ..." ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದರು. ಇವರು ಕನ್ನಡ ರಂಗ ಭೂಮಿಯಲ್ಲೂ ನಿರಂತರ ಚಟುವಟಿಕೆಯಲ್ಲಿ ಇದ್ದಾರೆ.
ಚಲನಚಿತ್ರ ಹಾಗೂ ಧಾರಾವಾಹಿಗಳ ಪಟ್ಟಿ
[ಬದಲಾಯಿಸಿ]ನಟಿಸಿದ ಕನ್ನಡ ಚಲನಚಿತ್ರಗಳ ಪಟ್ಟಿ
[ಬದಲಾಯಿಸಿ]ವರ್ಷ | ಶೀರ್ಷಿಕೆ | ಪಾತ್ರ | ಟಿಪ್ಪಣಿಗಳು | ನಿರ್ದೆಶಕರು |
---|---|---|---|---|
೨೦೧೪ | ವಿದಾಯ | ಪತ್ರಕರ್ತ | ಪೋಷಕ ನಟ, | ಪಿ.ಶೇಷಾದ್ರಿ |
೨೦೧೬ | ಭಾಗ್ಯರಾಜ್ | ಸಜ್ಜನ | ಹಾಸ್ಯ ನಟ | ದೀಪಕ್ ಮಧುವನಹಳ್ಳಿ |
೨೦೧೬ | ರಾಮಾ ರಾಮಾ ರೇ... | ಸ್ಯಾಂಡಲ್ ರಾಜ | ನಾಯಕ ನಟ, ರೆಡಿಯೋ ಸಿಟಿಯಿಂದ ಅತ್ಯತ್ತಮ ನಟ ಪ್ರಶಸ್ತಿ,
ಈ ಚಿತ್ರವು ಪ್ರಥಮ ನಿರ್ದೇಶನದ ಅತ್ಯತ್ತಮ ಚಿತ್ರ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದಿದೆ.[೨] |
ಡಿ. ಸತ್ಯ ಪ್ರಕಾಶ್ |
೨೦೧೯ | ಕಳ್ಬೆಟ್ಟದ ದರೋಡೆಕೋರರು | ವೆಂಕಿ | ವೆಂಕಿ | ದೀಪಕ್ ಮಧುವನಹಳ್ಳಿ |
೨೦೨೨ | ಮ್ಯಾನ್ ಆಫ್ ದಿ ಮ್ಯಾಚ್[೩] | ನಟ | ನಾಯಕ ನಟ | ಡಿ. ಸತ್ಯ ಪ್ರಕಾಶ್ |
೨೦೨೨ | ಪದವಿಪೂರ್ವ | ಹರೀಶ್ | ಬಿಡುಗಡೆಗೆ ಸಿದ್ಧವಿರುವ ಚಿತ್ರ | ಹರಿಪ್ರಸಾಧ್ ಜಯಣ್ಣ |
೨೦೨೨ | ಮಾರೀಚ[೪] | ಜಯರಾಮ್ | ಬಿಡುಗಡೆಗೆ ಸಿದ್ಧವಿರುವ ಚಿತ್ರ | ಸುಧೀರ್ ಶಾನುಭೋಗ್ |
೨೦೨೨ | ಆಡೇ ನಮ್ ಗಾಡ್ | ದಾಮೋದರ | ಚಿತ್ರಈಕರಣ ಹಂತದಲ್ಲಿದೆ. | ಪಿ.ಎಚ್.ವಿಶ್ವನಾಥ್ |
೨೦೨೧ | ಕುಬ್ಸ[೫] | ರಾಮಚಂದ್ರ | ಬಿಡುಗಡೆಗೆ ಸಿದ್ಧವಿರುವ ಚಿತ್ರ | ರಮೇಶ್ |
ಧಾರಾವಾಹಿಗಳ ಪಟ್ಟಿ
[ಬದಲಾಯಿಸಿ]ವರ್ಷ | ಶೀರ್ಷಿಕೆ | ಪಾತ್ರ | ಟಿಪ್ಪಣಿಗಳು | ವಾಹಿನಿ |
---|---|---|---|---|
೨೦೦೭ | ಕಾಮಿಡಿ ಕಿಲಾಡಿಗಳು | ರಿಯಾಲಿಟಿ ಶೋದಲ್ಲಿ ಸ್ಪರ್ಧಿ | ಝೀ ಕನ್ನಡ | |
೨೦೦೮ | ಇದೇ ಪ್ರೀತಿ ಪ್ರೇಮ | ಉದಯ ಟಿ.ವಿ | ||
೨೦೦೯ | ಮಹಾನವಮಿ | ಸಹ ನಿರ್ದೇಶಕ | ಈ-ಟ.ವಿ ಕನ್ನಡ | |
೨೦೧೦ | ಶ್ರೀ ರಾಘವೆಂದ್ರ ಮಹಿಮೆ | ಭಾರಧ್ವಜ ಮುನಿ | ಈ-ಟ.ವಿ ಕನ್ನಡ | |
೨೦೦೭ | ಬಂದೇ ಬರುತಾವ ಕಾಲ | ಸಹಾಯಕ ನಿರ್ದೇಶಕ | ಈ ಟೀವಿ ಕನ್ನಡ | |
೨೦೧೨ | ಬೆಂಕಿಯಲ್ಲಿ ಅರಳಿದ ಹೂವು | ಸಹ ನಿರ್ದೇಶಕ | ಝೀ ಕನ್ನಡ |
ಉಲ್ಲೇಖಗಳು
[ಬದಲಾಯಿಸಿ]- ↑ ""ಟೈಮ್ಸ್ ಆಫ್ ಇಂಡಿಯಾ" ಪತ್ರಿಕೆಯ ವರದಿ".
- ↑ ""ಚಿತ್ರಲೋಕ " ಜಾಲತಾಣದ ವರದಿ". Archived from the original on 2023-03-29. Retrieved 2022-05-30.
- ↑ ""ಟೈಮ್ಸ್ ಆಫ್ ಇಂಡಿಯಾ" ಪತ್ರಿಕೆಯಲ್ಲಿ ಪ್ರಕಟವಾದ ಚಿತ್ರ ವಿಮರ್ಷೆ".
- ↑ "Nataraj turns undercover cop in a Sudheer Shanbhogue directorial - Times of India". The Times of India (in ಇಂಗ್ಲಿಷ್). Retrieved 2021-07-25.
- ↑ ""ಪ್ರಜಾವಾಣಿ" ಪತ್ರಿಕೆಯ ವರದಿ".