ಧರ್ಮಸ್ಥಳ ಕಾರ್ ಮ್ಯೂಸಿಯಂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
Manjusha Car Museum In Dharmsthala

ಇದು ಧರ್ಮಸ್ಥಳ ಮಂಜೂಷಾ ವಸ್ತು ಸಂಗ್ರಹಾಲಯದ ಇನ್ನೊಂದು ಭಾಗ. ಇದು ವಾಹನಗಳಿಗೆ ಸಂಭಂಧ ಪಟ್ಟಿದಾಗಿದ್ದು ಕುದುರೆ ಗಾಡಿ, ಎತ್ತಿನಗಾಡಿ, ದ್ವಿಚಕ್ರ ವಾಹನ ಸೇರಿದಂತೆ ಕಾರುಗಳು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಇದು ಮಂಜೂಷಾ ಕಾರ್ ಮ್ಯೂಸಿಯಂ. ಈ ಮ್ಯೂಸಿಯಂನಲ್ಲಿ ಇರುವ ಕಾರುಗಳು ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಭಾರತದ ಪ್ರಖ್ಯಾತ ನೊಬೆಲ್ ಪುರಸ್ಕ್ರತ ವಿಜ್ಞಾನಿ ದಿ. ಡಾ.ಸಿ.ವಿ ರಾಮನ್ ಬಳಸುತ್ತಿದ್ದ ಸ್ಟುಡಿಬೇಕರ್ ಚಾಂಪಿಯನ್ ಕಾರು ಇಲ್ಲಿದ್ದು ೧೯೪೭ರಲ್ಲಿ ಅಮೇರಿಕಾದಿಂದ ನಿರ್ಮಾಣವಾಗಿದೆ. ಇಷ್ಟೇ ಅಲ್ಲದೆ ಮಹಾತ್ಮಗಾಂಧಿ ಬಳಸುತ್ತಿದ್ದ ಸ್ಟುಡಿಬೇಕರ್ ಪ್ರೆಸಿಡೆಂಟ್ ಕಾರು ಇಲ್ಲಿದ್ದು ೧೯೨೯ ರಲ್ಲಿ ಅಮೇರಿಕಾದಿಂದ ನಿರ್ಮಾಣವಾಗಿದೆ.೧೯೫೧ರಲ್ಲಿ ನಿರ್ಮಾಣವಾದ ಅಮೇರಿಕಾದ ಡಿಸೋಟ,೧೯೪೯ರಲ್ಲಿ ನಿರ್ಮಾಣವಾದ ಮೈಸೂರಿನ ಮಹಾರಾಜರಾಗಿದ್ದ ಶ್ರೀ ಜಯಚಾಮರಾಜೇಂದ್ರ ಉಪಯೋಗಿಸುತ್ತಿದ್ದ ಡ್ಯಾಂಮ್ಲರ್ ಕಾರು. ೧೯೫೧ ರ ಇಂಗ್ಲೆಂಡಿನ ಜಾಗ್ವರ್ ಮಾರ್ಕ್ ಕಾರು, ೧೯೬೪ರ ಇಂಗ್ಲೆಂಡಿನ ಅಸ್ಟಿನ್ ಪ್ರಿನ್ಸೆಸ್ ಕಾರು. ಕರ್ನಾಟಕ ರಾಜ್ಯ ಸರಕಾರ ಉಪಯೋಗಿಸುತ್ತಿದ್ದ ೧೯೫೪ರ ಅಮೇರಿಕಾದ ಡಾಡ್ಜ್ ಕಿಂಗ್ಸ್ ವೇ, ೧೯೪೬ರ ಅಮೇರಿಕಾದ ಪ್ಲಾಮ್ ಮೌತ್ ಕಾರು, ೧೯೪೩ರ ಅಮೇರಿಕಾದ ಪೋರ್ಡ ಜೀಪು ಇದನ್ನು ಯುದ್ಧಭೂಮಿಯಲ್ಲಿ ಬಳಸುತ್ತಿದ್ದರು. ೧೯೪೮ರ ಜರ್ಮನಿಯ ಮರ್ಸಿಡೆಸ್ ಡೀಸೆಲ್ ಬೆಂಜ್, ೧೯೨೪ರ ಇಂಗ್ಲೆಂಡ್ ನ ರೋಲ್ಸ್ ರಾಯ್ ಕಾರು,೧೯೨೬ರ ಇಂಗ್ಲೆಂಡ್ ನ ಅಗ್ನಿಶಾಮಕ ಯಂತ್ರ ವಾಹನ. ೧೯೨೬ರ ಜರ್ಮನಿಯ ಡ್ಯಾಮ್ಲರ್ ಮರ್ಸಿಡೆಸ್, ೧೯೨೮ ರ ಅಮೇರಿಕಾದ ನ್ಯಾಶ್, ೧೯೩೧ರ ಇಟಲಿಯ ಪಿಯೆಟ್ ಕಾರ್, ೧೯೩೪ರ ಇಂಗ್ಲೆಂಡ್ ನ ಸನ್ ಬೀಮ್, ೧೯೩೦ರ ಇಂಗ್ಲೆಂಡ್ ನ ಮೋರಿಸ್ ಆಕ್ಸ್ ಪಾರ್ಡ್, ೧೯೫೧ರ ಇಟಲಿಯ ಬಗ್ ಪಿಯೆಟ್ , ೧೯೨೯ರ ಇಂಗ್ಲೆಂಡ್ ನ ವೇಕ್ಸಲ್, ೧೯೩೭ರ ಅಮೇರಿಕಾದ ಬ್ಯೂಕ್ ರೋಡ್ ಮಾಸ್ಟರ್, ೧೯೩೮ರ ೧೨ ಸಿಲಿಂಡರ್ ನ ಅಮೇರಿಕಾದ ಲಿಂಕನ್ ಜೆಪೆಕ್ಸ್,೧೯೩೬ರ ಜರ್ಮನಿಯ ಅಡ್ಲರ್ ಟ್ರಂಪ್ ಜ್ಯೂನಿಯರ್, ೧೯೪೭ರ ಅಮೇರಿಕಾದ ಚೆವರ್ ಲೇಟ್, ೧೯೫೩ರ ಇಂಗ್ಲೆಂಡ್ ನ ಆಸ್ಟಿನ್, ೧೯೪೭ರ ಅಮೇರಿಕಾದ ಫ್ರೇಜರ್, ೧೯೪೯ರ ಅಮೇರಿಕಾದ ಡಿಸೋಟಾ, ೧೯೫೦ರ ಜರ್ಮನಿಯ ವಾಕ್ಸ್ ವ್ಯಾಗನ್, ೧೯೫೪ರ ಅಮೇರಿಕಾದ ಕ್ಯಾಡಿಲಾಕ್ಸ್ ಇದರ ವಿಶೇಷತೆಯೆಂದರೆ ಪವರ್ ಸ್ಟೇರಿಂಗ್ ಹಾಗೂ ಕೃತಕ ಬಾಗಿಲು, ೧೯೫೧ರ ಪೋರ್ಡ್ ವಿಕ್ಟೋರಿಯಾ ಕಸಂ-೮, ೧೯೪೮ರ ಇಂಗ್ಲೆಂಡ್ ನ ಮೋರಿಸ್ ಮೈನರ್, ೧೯೪೬ರ ಅಮೇರಿಕಾದ ಶೃಂಗೇರಿ ಗುರುಗಳು ಉಪಯೋಗಿಸುತ್ತಿದ್ದ ಪೆಕೋರ್ಡ್ ಕ್ಲಿಪ್ಪರ್, ೧೯೫೨ರ ಅಮೇರಿಕಾದ ಪಾಂಡೆಕ್ ಸಿಲ್ವರ್ ಸ್ಟ್ರೀಕ್, ೧೯೩೮ ರ ಇಂಗ್ಲಂಡ್ ನ ಸ್ಟಾಂಡರ್ಡ ಬೆಲ್ (ಬೇಬಿ ಡಾಲ್), ೧೯೦೩ರ ಪ್ರೆಂಚ್ ನ ರಿನಾಲ್ಟ್ ಇದರ ವಿಶೇಷತೆಯೆಂದರೆ ಚಕ್ರ ಮತ್ತು ಚಕ್ರದ ರಿಮ್ ಟೀಕ್ ಮರದಿಂದ ನಿರ್ಮಿತವಾಗಿದೆ ಮತ್ತು ಕೆರೆಸಿನ್ ಮುಖ್ಯದೀಪ(ಹೆಡ್ ಲೈಟ್) ಹಾಗೂ ಕೈಯಲ್ಲಿ ಸ್ಟಾರ್ಟ್ ಮಾಡುವುದಾಗಿದೆ ಸಿಂಗಲ್ ಸಿಲಿಂಡರ್. ೧೯೩೩ರ ಇಂಗ್ಲೆಂಡ್ ನ ಮೋರಿಸ್ ಮೈನರ್, ೧೯೪೮ರ ಇಟಲಿಯ ಪಿಯೆಟ್ ಟಪೋಲಿಯನ್, ೧೯೩೪ರ ಇಂಗ್ಲೆಂಡ್ ನ ಅಸ್ಟಿನ್ ಸೆವೆನ್, ೧೯೯೧ರ ಅಮೇರಿಕಾದ ಲಿಂಕನ್ ಟೌನ್ ಕಾರ್ "ಪೋರ್ಡ್" ಇದರ ವಿಶೇಷತೆಯೆಂದರೆ ದೂರದರ್ಶನ, ಹವಾನಿಯಂತ್ರಕ, ಊಟದ ಮೇಜು,ಕೃತಕ ಗೇರ್ ಗಳನ್ನು ಒಳಗೊಂಡಿದೆ.೧೯೮೩ರ ಜಪಾನ್ ನ ಡಾಟ್ಸನ್ ಇದು [[ಕನ್ನಡ ಚಿತ್ರರಂಗ]]ದ ಮೇರು ನಟ ವಿಷ್ಣುವರ್ಧನ್ ಉಪಯೋಗಿಸುತ್ತಿದ್ದ ಕಾರು. ೧೯೩೭ರ ಜೋಕೋಸ್ಲಾವಿಯಾದ ಸ್ಕೋಡ ಕಾರು,೧೯೬೨ರ ಅಮೇರೀಕಾದ ಚೆವರ್‍ ಲೇಟ್ ಇಂಪಾಲ, ೧೯೫೫ರ ಅಮೇರಿಕಾದ ಡಾಡ್ಜ ಕಿಂಗ್ಸ್ ವೇ, ೧೯೨೬ರ ಅಮೇರಿಕಾದ ಆಂಬುಲೆನ್ಸ, ೧೯೨೯ರ ಅಮೇರಿಕಾ ಚೆವರ್‍ ಲೇಟ್ ವ್ಯಾನ್ (ಶಾಲಾ ವಾಹನ) ಇದು ಪೂರ್ತಿಯಾಗಿ ಮರದ ಹೂರ ಮೈಯನ್ನು ಹೊಂದಿದೆ, ೧೯೧೫ರ ಅಮೇರಿಕಾದ ಕ್ರೇನ್ ಅಳವಡಿತ ಟ್ರಾಕ್ಟರ್ ಇದರ ಚಕ್ರವು ಕಬ್ಬಿಣದಿಂದ ಮಾಡಲ್ಪಟ್ಟದೆ.೧೯೪೮ರ ಮಿಲಿಟರಿ ವಾಟರ್ ಟ್ಯಾಂಕ್, ೧೯೪೬ರ ಅಮೇರಿಕಾದ ಡಾಡ್ಜ ಪವರ್ ವ್ಯಾಗನ್ ಮಿನಿಲಾರಿ, ರೈಲು, ಇಷ್ಟೇ ಅಲ್ಲದೆ ರಾಜಸ್ಥಾನದ ಅಲೆಮಾರಿ ಜನಾಂಗದವರು ಉಪಯೋಗಿಸುತ್ತಿದ್ದ ಎತ್ತಿನಗಾಡಿ,೧೮೯೯ರ ಕಾಲದ ಎತ್ತಿನಗಾಡಿ ,೧೮೬೪ರ ಕಾಲದ ಎತ್ತಿನಗಾಡಿ, ಇವುಗಳು ಮೈಸೂರಿನ ಸಿಮ್ ಸಸ್ ಕಂಪೆನಿಗೆ ಬಂದಿದ್ದನ್ನು ಮಂಜೂಷಾಕ್ಕೆ ತರಲಾಯಿತು. ಕೇರಳ ಕಥಕ್ಕಳಿ ಸಂಚಾರಕ್ಕೆ ಉಪಯೋಗಿಸುತ್ತಿದ್ದ ಎತ್ತಿನಗಾಡಿ, ೧೯೦೫ರ ತಮಿಳುನಾಡಿನಿಂದ ಕಾಶಿ ಹೋಗಲು ಉಪಯೋಗಿಸುತ್ತಿದ್ದ ಎತ್ತಿನಗಾಡಿ, ೧೯೨೬ ರ ಕೆರೆಸಿನ್ ಮುಖ್ಯದೀಪ(ಹೆಡ್ ಲೈಟ್)ನ ಕುದುರೆಗಾಡಿ, ಕಾಂಚಿಪುರ ಸ್ವಾಮಿಗಳು ಮೆರವಣಿಗೆ ಹೋಗುತ್ತಿದ್ದ ರಥ, ಮನುಷ್ಯ ಎಳೆದುಕೊಂಡು ಹೋಗುತ್ತಿದ್ದ ಮೆಡ್ರಾಸ್ ರಿಕ್ಷಾ ಇದರ ಚಕ್ರ ಮರದ ನಿರ್ಮಿತವಾಗಿದೆ. ಇಷ್ಟೆ ಅಲ್ಲದೆ ಹಳೆಯ ದ್ವಿಚಕ್ರ ವಾಹನ, ಬೀದರ್ ನ ಭಾರತೀಯ ವಾಯುಸೇನಾ ತರಬೇತಿ ಕೇಂದ್ರದಿಂದ ಉಚಿತವಾಗಿ ಬಂದ ೪-ಟಿ-೨ ವಿಮಾನ, ಡಿ.ಸಿ-೩ ಮಾದರಿಯ ೧೯೩೮ರ ಡಕೋಟ ವಿಮಾನ, ಇದನ್ನು ಪ್ರಯಾಣ, ವಸ್ತುಸಾಗಾಟ ಮತ್ತು ವಾಯುಸೇನಾ ಕಾರ್ಯಕ್ಕೆ ಬಳಸಲಾಗುತ್ತಿತ್ತು. ಇದು ಸಂಶೋದನೆಗೆ ಹಾಗೂ ಕೆಲವು ಕಂಪೆನಿಗಳಿಗೆ ಉಪಯುಕ್ತವಾದ ಮಾಹಿತಿ ನೀಡಲಿದೆ.