ರಿಕ್ಷಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎಳೆಯಲ್ಪಟ್ಟ ರಿಕ್ಷಾ, ಜಪಾನ್, ೧೮೯೭

ಮೂಲತಃ ರಿಕ್ಷಾ ಶಬ್ದವು ಎರಡು ಅಥವಾ ಮೂರು ಚಕ್ರಗಳ ಪ್ರಯಾಣಿಕ ಗಾಡಿಯನ್ನು ಸೂಚಿಸುತ್ತಿತ್ತು. ಈಗ ಇದು ಎಳೆಯಲ್ಪಡುವ ರಿಕ್ಷಾ ಎಂದು ಪರಿಚಿತವಾಗಿದೆ. ಒಬ್ಬ ಪ್ರಯಾಣಿಕನನ್ನು ಹೊರುವ ಇದನ್ನು ಸಾಮಾನ್ಯವಾಗಿ ಒಬ್ಬ ವ್ಯಕ್ತಿಯು ಎಳೆಯುತ್ತಾನೆ. ಈ ಪದದ ಮೊದಲ ಪರಿಚಿತ ಬಳಕೆಯು ೧೮೭೯ರಲ್ಲಿ ಆಯಿತು.[೧] ಕಾಲ ಕಳೆದಂತೆ, ಸೈಕಲ್ ರಿಕ್ಷಾಗಳು, ಆಟೊರಿಕ್ಷಾಗಳು ಮತ್ತು ವಿದ್ಯುತ್ ರಿಕ್ಷಾಗಳನ್ನು ಆವಿಷ್ಕರಿಸಲಾಯಿತು. ಪ್ರವಾಸೋದ್ಯಮದಲ್ಲಿ ಬಳಕೆಗಾಗಿ ಕೆಲವು ಅಪವಾದಗಳನ್ನು ಬಿಟ್ಟರೆ, ಇವು ಮೊದಲಿನ ಎಳೆಯಲ್ಪಟ್ಟ ರಿಕ್ಷಾಗಳ ಸ್ಥಾನವನ್ನು ತುಂಬಿವೆ.

ಎಳೆಯಲ್ಪಟ್ಟ ರಿಕ್ಷಾಗಳು ಜನಪ್ರಿಯ ಸಾರಿಗೆಯ ರೂಪವನ್ನು ಸೃಷ್ಟಿಸಿದವು, ಮತ್ತು ಏಷ್ಯಾದ ನಗರಗಳೊಳಗೆ ೧೯ನೇ ಶತಮಾನದಲ್ಲಿ ಪುರುಷ ಶ್ರಮಿಕರಿಗೆ ಉದ್ಯೋಗದ ಮೂಲವಾದವು. ಅವುಗಳ ನೋಟ ಹೊಸದಾಗಿ ಪಡೆದ ಗುಂಡು ಮಣಿಗಳ ವ್ಯವಸ್ಥೆಗಳ ಜ್ಞಾನಕ್ಕೆ ಸಂಬಂಧಿತವಾಗಿತ್ತು. ಕಾರುಗಳು, ಟ್ರೈನುಗಳು ಮತ್ತು ಸಾರಿಗೆಯ ಇತರ ರೂಪಗಳು ವ್ಯಾಪಕವಾಗಿ ಲಭ್ಯವಾದಾಗ ಅವುಗಳ ಜನಪ್ರಿಯತೆ ಕಡಿಮೆಯಾಯಿತು.

ಉಲ್ಲೇಖಗಳು[ಬದಲಾಯಿಸಿ]

  1. "Rickshaw". Merriam-Webster, Incorporated. Retrieved April 10, 2013.

ಹೆಚ್ಚಿನ ಓದಿಗಾಗಿ[ಬದಲಾಯಿಸಿ]

  • Bandyopadhyay, Subir (1990). Calcutta cycle-rickshaw pullers: a sociological study. Minerva Associates Publications. ISBN 978-8185195278.
  • Fung, Chi Ming (2005). Reluctant Heroes: Richshaw Pullers in Hong Kong And Canton, 1874-1954. Hong Kong University Press. Royal Asiatic Society of Great Britain and Ireland. ISBN 978-9622097346.
  • Indian Institute of Economics (1962). A socio-economic survey of rickshaw drivers in Hyderabad City area. A.P.
  • Mulhall, Priscilla (2010). Solar-assisted Electric Auto Rickshaw Three Wheeler. Illinois Institute of Technology.
  • Warren, James Francis (2003). Rickshaw Coolie: A People's History of Singapore, 1880-1940. NUS Press. ISBN 978-9971692667.
"https://kn.wikipedia.org/w/index.php?title=ರಿಕ್ಷಾ&oldid=912354" ಇಂದ ಪಡೆಯಲ್ಪಟ್ಟಿದೆ