ದ ವೇಸ್ಟ್ ಲ್ಯಾಂಡ್
ದ ವೇಸ್ಟ್ ಲ್ಯಾಂಡ್ [A] ಎಂಬುದು ಟಿ. ಎಸ್. ಎಲಿಯಟ್ ವಿರಚಿತ 1922ರಲ್ಲಿ ಪ್ರಕಟವಾಗಿದ್ದ 434-ಸಾಲುಗಳಿಂದ ಕೂಡಿದ [B] ಆಧುನಿಕತಾ ಸಿದ್ಧಾಂತದ ಕವಿತೆಯಾಗಿದೆ. ಇದನ್ನು "20ನೆಯ ಶತಮಾನದ ಅತ್ಯಂತ ಪ್ರಮುಖ ಕವಿತೆಗಳಲ್ಲಿ ಒಂದು" ಎಂದು ಕರೆಯಲಾಗುತ್ತದೆ.[೧] ಕವಿತೆಯ ಅಸ್ಪಷ್ಟತೆಯ[೨] ಹೊರತಾಗಿ — ವಿಡಂಬನೆ ಹಾಗೂ ಕಾಲಜ್ಞಾನ ಕೃತಿಯ ಸ್ವರೂಪಗಳ ನಡುವಿನ ರೂಪಾಂತರ ಮತ್ತು ವಕ್ತೃ/ವಿವರಣೆಗಾರ, ಸ್ಥಳ ಹಾಗೂ ಸಮಯಗಳ ಹಠಾತ್ ಹಾಗೂ ಮುನ್ಸೂಚನೆಯಿಲ್ಲದ ಬದಲಾವಣೆಗಳು, ಅದರ ಶೋಕಾತ್ಮಕ ಆದರೆ ಭಯವುಂಟುಮಾಡುವಂತಹಾ ವ್ಯಾಪಕ ಮತ್ತು ಅಸಂಗತ ಸಂಸ್ಕೃತಿಗಳು ಹಾಗೂ ಸಾಹಿತ್ಯಗಳನ್ನು ಒಂದೆಡೆ ಸೇರಿಸುವಿಕೆಗಳನ್ನು ಒಳಗೊಂಡ — ಈ ಕವಿತೆಯು ಆಧುನಿಕ ಸಾಹಿತ್ಯದ ಅತ್ಯಂತ ಪರಿಚಿತ ಒರೆಗಲ್ಲಾಗಿ ಮಾರ್ಪಟ್ಟಿದೆ.[೨] ಅದರಲ್ಲಿನ ಅತ್ಯಂತ ಜನಪ್ರಿಯ ಪದಗುಚ್ಛಗಳಲ್ಲಿ "ಏಪ್ರಿಲ್ ಈಸ್ ದ ಕ್ರೂಯೆಲಿಸ್ಟ್ ಮಂಥ್ " (ಅದರ ಮೊದಲ ಸಾಲು ); "ಐ ವಿಲ್ ಷೋ ಯು ಫಿಯರ್ ಇನ್ ಎ ಹ್ಯಾಂಡ್‌ಫುಲ್ ಆಫ್ ಡಸ್ಟ್ "; ಮತ್ತು (ಅದರ ಕೊನೆಯ ಸಾಲು) ಸಂಸ್ಕೃತ ಭಾಷೆಯ ಮಂತ್ರ "ಶಾಂತಿಃ ಶಾಂತಿಃ ಶಾಂತಿಃ "ಗಳು ಸೇರಿವೆ.[C]
ಸಾಹಿತ್ಯ ರಚನೆಯ ಇತಿಹಾಸ
[ಬದಲಾಯಿಸಿ]ಬರವಣಿಗೆಗಳು
[ಬದಲಾಯಿಸಿ]ನಂತರ ದ ವೇಸ್ಟ್ ಲ್ಯಾಂಡ್ ಕವಿತೆಯಾಗಿ ರೂಪುಗೊಳ್ಳಲಿದ್ದ ಕೃತಿಯ ಮೇಲೆ 1922ರಲ್ಲಿ ಅದರ ಪ್ರಥಮ ಪ್ರಕಟಣೆಗೆ ಹಲವು ವರ್ಷಗಳ ಮುಂಚೆಯೇ ಎಲಿಯಟ್‌ರು ಬಹುಶಃ ಕಾರ್ಯಪ್ರವೃತ್ತರಾಗಿದ್ದರು. ನ್ಯೂಯಾರ್ಕ್‌ನ ವಕೀಲ ಹಾಗೂ ಆಧುನಿಕತಾ ಸಿದ್ಧಾಂತದ ಪ್ರವರ್ತಕ ಜಾನ್ ಕ್ವಿನ್‌ರವರಿಗೆ 9 ಮೇ 1921ರಂದು ಬರೆದ ಪತ್ರದಲ್ಲಿ , ಎಲಿಯಟ್‌ರು ತಾನು "ಒಂದು ದೀರ್ಘವಾದ ಕವಿತೆಯು ಮನಸ್ಸಿನಲ್ಲಿದೆ ಹಾಗೂ ಭಾಗಶಃ ಕಾಗದದಲ್ಲಿ ಬರೆದಿಟ್ಟಿದ್ದೇನೆ ಅದನ್ನು ನಾನು ಪ್ರಾಯಶಃ ಮುಗಿಸಲಿದ್ದೇನೆ".[೩]
ತಮ್ಮ ಜೀವನಚರಿತ್ರೆಯಲ್ಲಿ ರಿಚರ್ಡ್ ಅಲ್ಡಿಂಗ್‌ಟನ್ ನಿರೂಪಿಸುವ ಪ್ರಕಾರ ಎಲಿಯಟ್‌ರು ಲಂಡನ್‌ನಲ್ಲಿ ದ ವೇಸ್ಟ್ ಲ್ಯಾಂಡ್ ಕವಿತೆಯ ಹಸ್ತಪ್ರತಿಯ ಕರಡನ್ನು ತಮ್ಮ ಮುಂದೆ ಓದಿ ಹೇಳುವ "ಒಂದು ವರ್ಷ ಅಥವಾ ಸ್ವಲ್ಪ ಆಚೀಚೆಯ ಅವಧಿಯ" ಮುನ್ನಾ ಎಲಿಯಟ್‌ರು ರಾಷ್ಟ್ರಕ್ಕೆ ಆಗಮಿಸಿ ತಮ್ಮನ್ನು ಭೇಟಿ ಮಾಡಿದ್ದರು. ಸ್ಮಶಾನವೊಂದರ ಮುಂದೆ ನಡೆದುಕೊಂಡು ಹೋಗುತ್ತಾ ಅವರು ಥಾಮಸ್ ಗ್ರೇಯವರು ಹಳ್ಳಿಯೊಂದರ ಸಮಾಧಿಭೂಮಿಯಲ್ಲಿದ್ದುಕೊಂಡು ಬರೆದ ಶೋಕಗೀತೆ ಯೊಂದರ ಬಗ್ಗೆ ಚರ್ಚಿಸುತ್ತಿದ್ದರು. ಅಲ್ಡಿಂಗ್‌ಟನ್ ಹೀಗೆಂದು ಬರೆಯುತ್ತಾರೆ: " ಎಲಿಯಟ್‌ರು ಅಷ್ಟೊಂದು ಜನಪ್ರಿಯವಾದ ಕೃತಿಯನ್ನು ಮೆಚ್ಚಿಗೆಯಿಂದ ನೋಡುತ್ತಾರೆ ಹಾಗೂ ಅದರ ಬಗ್ಗೆ ಗ್ರೇಯವರಂತೆ ಸ್ಪಷ್ಟವಾಗಿಯೇ ತಮ್ಮ ಮಿತಿಗಳನ್ನು ಅರಿತುಕೊಂಡ ಓರ್ವ ಸಮಕಾಲೀನ ಕವಿಯು ಅಂತಹುದೇ ಜನಪ್ರಿಯತೆಯನ್ನು ತನಗೆ ಗಳಿಸಿಕೊಡಬಲ್ಲಂತಹಾ ಅಂತಹಾ ಒಂದು ಕವಿತೆಯ ಮೇಲೆ ತನ್ನ ಎಲ್ಲಾ ಕುಶಲತೆಗಳನ್ನು ಧಾರೆಯೆರೆಯಬಲ್ಲ ಎಂದು ಪ್ರಶಂಸೆ ವ್ಯಕ್ತಪಡಿಸುತ್ತಾರೆ ಎಂಬುದನ್ನು ಕಂಡುಕೊಳ್ಳಲು ನನಗೆ ಅಚ್ಚರಿಯೆನಿಸಿತು."[೪]
ನರಕ್ಕೆ ಸಂಬಂಧಿಸಿದ ವ್ಯಾಧಿಯ ಒಂದು ಸ್ವರೂಪದಿಂದ ಪೀಡಿತರಾಗಿದ್ದಾರೆಂದು ತಿಳಿದುಬಂದ ನಂತರ ಎಲಿಯಟ್‌ರಿಗೆ ವಿಶ್ರಾಂತಿಯನ್ನು ಪಡೆದುಕೊಳ್ಳಲು ಸೂಚಿಸಲಾದುದರಿಂದ, ಅವರು ತಾವು ಉದ್ಯೋಗದಲ್ಲಿದ್ದ ಬ್ಯಾಂಕ್‌ನಲ್ಲಿ ಮೂರು ತಿಂಗಳ ರಜೆಗೆ ಅರ್ಜಿ ಗುಜರಾಯಿಸಿದ್ದರು ; ಅವರ ಸಿಬ್ಬಂದಿ ಸದಸ್ಯತ್ವ ಚೀಟಿಯಲ್ಲಿ ಅದಕ್ಕೆ ನಮೂದಿಸಲಾಗಿದ್ದ ಕಾರಣವು "ನರದೌರ್ಬಲ್ಯ " ಎಂಬುದಾಗಿತ್ತು". ಅವರು ಮತ್ತು ಅವರ ಮೊದಲನೆಯ ಪತ್ನಿ, ವಿವಿಯೆನ್ನೆ ಹೇಯ್-ವುಡ್ ಎಲಿಯಟ್‌ರು, ಚೇತರಿಸಿಕೊಳ್ಳಲು ಅವಕಾಶ ಹಾಗೂ ಬಿಡುವಿನ ಸಮಯಕ್ಕಾಗಿ ಮಾರ್ಗೇಟ್ ಎಂಬ ಕರಾವಳಿಯ ವಿಹಾರಧಾಮಕ್ಕೆ ಪ್ರಯಾಣಿಸಿದರು. ಅಲ್ಲಿರುವಾಗ, ಎಲಿಯಟ್ ಕವಿತೆಯೊಂದರ ಕೃತಿರಚನೆಯಲ್ಲಿ ಪ್ರವೃತ್ತರಾದರು ಹಾಗೂ ಲಂಡನ್‌ಗೆ ಅಲ್ಪಕಾಲಕ್ಕೆ ಮರಳಿದ ನಂತರ ಎಲಿಯಟ್ ದಂಪತಿಗಳು ಪ್ಯಾರಿಸ್‌ಗೆ ತೆರಳಿ ನವೆಂಬರ್ 1921ರಲ್ಲಿ ಅಲ್ಲಿ ಪೌಂಡ್‌ರ ಆತಿಥ್ಯದಲ್ಲಿದ್ದಾಗ ಬಹುಶಃ ಅದರ ಆದಿಯ ಆವೃತ್ತಿಯನ್ನು ಎಜ್ರಾ ಪೌಂಡ್‌ರವರಿಗೆ ತೋರಿಸಿದ್ದರು. ಎಲಿಯಟ್‌ರು ಒಟ್ಟೋಲೈನ್ ಮಾರ್ರೆಲ್‌ರಿಂದ ಶಿಫಾರಸು ಮಾಡಲ್ಪಟ್ಟಿದ್ದ ವೈದ್ಯರಾಗಿದ್ದ ರೋಜರ್ ವಿಟ್ಟೋಜ್ ರವರಿಂದ ಚಿಕಿತ್ಸೆ ಪಡೆಯಲು ಸ್ವಿಟ್ಜರ್‌ಲೆಂಡ್‌ನ ಲಾಸನ್ನೇಗೆ ಹೋಗುವ ಮಾರ್ಗದಲ್ಲಿದ್ದರು ; ಪ್ಯಾರಿಸ್‌ನಿಂದ ಸ್ವಲ್ಪವೇ ಹೊರಗಿರುವ ಆರೋಗ್ಯಧಾಮದಲ್ಲಿ ವಿವಿಯೆನ್ನರು ಉಳಿದುಕೊಳ್ಳಬೇಕಾಗಿತ್ತು. ಲಾಸನ್ನೇ ನಗರದಲ್ಲಿ ಎಲಿಯಟ್‌ರು ಈ ಕವಿತೆಯ 19-ಪುಟಗಳ ಆವೃತ್ತಿಯನ್ನು ರಚಿಸಿದರು.[೫] ಜನವರಿ 1922ರ ಆದಿಭಾಗದಲ್ಲಿ ಅವರು ಲಾಸನ್ನೇಯಿಂದ ಮರಳಿದರು. ಆ ಸಂದರ್ಭದಲ್ಲಿ ಪೌಂಡ್‌ರು ಹಸ್ತಪ್ರತಿಯಲ್ಲಿ ಗಮನಾರ್ಹ ಪ್ರಮಾಣದ ಅಂಶಗಳನ್ನು ತೆಗೆದುಹಾಕಿದರು ಹಾಗೂ ವಿವರಣಾತ್ಮಕ ಸಂಪಾದಕೀಯ ಟಿಪ್ಪಣಿಗಳನ್ನು ಬರೆದರು. ಎಲಿಯಟ್‌ರು ನಂತರದ ಕಾಲದಲ್ಲಿ ಆ ಕವಿತೆಯನ್ನೇ ಪೌಂಡ್‌ರಿಗೆ ಸಮರ್ಪಿಸಿದರು.
ಹಸ್ತಪ್ರತಿಯ ಕರಡುಗಳು
[ಬದಲಾಯಿಸಿ]ಎಲಿಯಟ್‌ರು ಕವಿತೆಯ ಹಸ್ತಪ್ರತಿಯ ಕರಡುಗಳನ್ನು ಅಕ್ಟೋಬರ್ 1922ರಲ್ಲಿ ಜಾನ್ ಕ್ವಿನ್‌ರಿಗೆ ಕಳಿಸಿದರು ; ಅವುಗಳು ನ್ಯೂಯಾರ್ಕ್‌ನಲ್ಲಿದ್ದ ಕ್ವಿನ್‌ರವರಿಗೆ ಜನವರಿ 1923ರಲ್ಲಿ ತಲುಪಿದವು.[D] ಕ್ವಿನ್‌ರ ಮರಣಾನಂತರ ಅವುಗಳ ಉತ್ತರಾಧಿಕಾರತ್ವವನ್ನು ಆತನ ಸಹೋದರಿ ಜ್ಯೂಲಿಯಾ ಆಂಡರ್‌ಸನ್‌ರು ಪಡೆದಿದ್ದರು. ವರ್ಷಗಳುರುಳಿದ ನಂತರ 1950ರ ದಶಕದ ಆದಿಯಲ್ಲಿ Mrs ಆಂಡರ್‌ಸನ್‌ರ ಪುತ್ರಿ , ಮೇರಿ ಕಾನ್ರಾಯ್‌ರು ತಮ್ಮ ಸಂಗ್ರಹಾಗಾರದಲ್ಲಿ ಈ ಹಸ್ತಪ್ರತಿಯ ದಾಖಲೆಗಳನ್ನು ಕಂಡರು. 1958ರಲ್ಲಿ ಆಕೆ ಅವನ್ನು ಖಾಸಗಿಯಾಗಿ ನ್ಯೂಯಾರ್ಕ್ ಸಾರ್ವಜನಿಕ ಗ್ರಂಥಾಲಯಕ್ಕೆ ಮಾರಾಟ ಮಾಡಿದರು.
ಹಸ್ತಪ್ರತಿಯ ಕರಡುಗಳ ಅಸ್ತಿತ್ವ ಹಾಗೂ ಅವು ಎಲ್ಲಿವೆ ಎಂಬ ಬಗೆಗಿನ ಮಾಹಿತಿಗಳನ್ನು ಕವಿಯ ಎರಡನೇ ಪತ್ನಿ ಹಾಗೂ ವಿಧವೆ ವ್ಯಾಲೆರೀ ಎಲಿಯಟ್‌ರವರಿಗೆ ಏಪ್ರಿಲ್ 1968ರವರೆಗೆ ತಿಳಿಸಲಾಗಿರಲಿಲ್ಲ.[೬] 1971ರಲ್ಲಿ ಫೇಬರ್ ಅಂಡ್ ಫೇಬರ್ ಸಂಸ್ಥೆಯು ಮೂಲ ಕರಡುಪ್ರತಿಗಳ "ಫ್ಯಾಸಿಮಿಲಿ/ಯಥಾಪ್ರತಿ ಮತ್ತು ಪ್ರತಿಲೇಖ"ಗಳನ್ನು ಪ್ರಕಟಿಸಿತ್ತು ಅದನ್ನು ಸಂಪಾದಿಸಿದ್ದು ಹಾಗೂ ಟಿಪ್ಪಣಿಗಳನ್ನು ಬರೆದಿದ್ದು ವ್ಯಾಲೆರೀ ಎಲಿಯಟ್‌ರವರಾಗಿದ್ದಾರೆ. ಪೌಂಡ್ ಸಂಪಾದಕೀಯದ ಬದಲಾವಣೆಗೆ ಮುಂಚಿನ ಸಂಪೂರ್ಣ ಕವಿತೆಯು ಆ ಫ್ಯಾಸಿಮಿಲಿ/ಫ್ಯಾಕ್ಸ್/ಯಥಾಪ್ರತಿಯಲ್ಲಿದೆ.
ಪರಿಷ್ಕರಣೆ
[ಬದಲಾಯಿಸಿ]ಕವಿತೆಯ ಕರಡುಗಳು ಅದು ಮೂಲತಃ ಅಂತಿಮ ಪ್ರಕಟಿತ ಆವೃತ್ತಿಯ ಬಹುತೇಕ ಎರಡು ಪಟ್ಟು ಸಾಮಗ್ರಿಯನ್ನು ಹೊಂದಿತ್ತು ಎಂಬುದನ್ನು ತೋರ್ಪಡಿಸುತ್ತವೆ. ಸ್ವತಃ ಎಲಿಯಟ್‌ರೂ ಕೂಡಾ ದೊಡ್ಡದಾದ ಖಂಡಗಳನ್ನು ತೆಗೆದು ಹಾಕುವುದಕ್ಕೆ ಜವಾಬ್ದಾರರಾಗಿದ್ದರೂ ಎಜ್ರಾ ಪೌಂಡ್‌ರು ಸೂಚಿಸಿದ ಬದಲಾವಣೆಗಳೇ ಇದರಲ್ಲಿನ ಗಮನಾರ್ಹ ಪ್ರಮಾಣದ ತೆಗೆದುಹಾಕುವಿಕೆಗಳಿಗೆ ಭಾಗಶಃ ಕಾರಣವಾಗಿದೆ.
ಕವಿತೆಯ ಈಗಿನ ಜನಪ್ರಿಯ —'ಏಪ್ರಿಲ್ ಈಸ್ ದ ಕ್ರೂಯೆಲೆಸ್ಟ್ ಮಂಥ್ , ಬ್ರೀಡಿಂಗ್ / ಲಿಲಾಕ್ಸ್ ಔಟ್ ಆಫ್ ದ ಡೆಡ್ ಲ್ಯಾಂಡ್ , ...'— ಎಂಬ ಆರಂಭಿಕ ಸಾಲುಗಳು ಬೆರಳಚ್ಚು ಪ್ರತಿಯ ಎರಡನೇ ಪುಟದ ಮೇಲ್ಭಾಗದವರೆಗೆ ಕಾಣಿಸಿಕೊಂಡಿರಲಿಲ್ಲ. ಬೆರಳಚ್ಛು ಪ್ರತಿಯ ಮೊದಲ ಪುಟವು ಎರಡನೆಯ ವಿಭಾಗದ ಎ ಗೇಮ್ ಆಫ್ ಚೆಸ್ ನ ಕೊನೆಯಲ್ಲಿ ನಾವು ಮತ್ತೆ ಕಾಣುವ ಬೀದಿ ಧ್ವನಿಯ ರೂಪದ 54 ಸಾಲುಗಳನ್ನು ಹೊಂದಿತ್ತು. ಸ್ವತಃ ಎಲಿಯಟ್‌ರೇ ಈ ಪುಟವನ್ನು ಸೀಸದ ಕಡ್ಡಿಯ/ಪೆನ್ಸಿಲ್‌ನ ತೆಳುವಾದ ಗೆರೆಯಿಂದ ಹೊಡೆದು ಹಾಕಿದ ಹಾಗೆ ಕಂಡುಬರುತ್ತದೆ.
ಅದೇ ತರಹದ ಎಲಿಯಟ್‌ರು ಮಾಡಿರಬಹುದಾದ ಅಂತಹುದೇ ಸರಿಪಡಿಕೆಗಳ ಹಲವು ಚಿಹ್ನೆಗಳು ಹಾಗೂ ಸಾಕಷ್ಟು ಸಂಖ್ಯೆಯಲ್ಲಿ ವಿವಿಯೆನ್‌ರು ನೀಡಿದ ಟಿಪ್ಪಣಿಗಳು ಗಮನಾರ್ಹ ಸಂಖ್ಯೆಯಲ್ಲಿ ಕಂಡುಬರುವುದಾದರೂ, ಬಹು ಗಮನಾರ್ಹ ಸಂಪಾದಕೀಯ ಸೂಚನೆಗಳು ಸ್ಪಷ್ಟವಾಗಿ ಪೌಂಡ್ ಅವರದ್ದಾಗಿದ್ದು, ಅವರು ಈ ಕವಿತೆಗೆ ಹಲವು ಹೊಡೆದುಹಾಕುವಿಕೆಗಳನ್ನು ಶಿಫಾರಸು ಮಾಡಿದ್ದರು.
'ದ ಟೈಪಿಸ್ಟ್ ಹೋಮ್ ಅಟ್ ಟೀಟೈಮ್ ' ವಿಭಾಗವು ಮೂಲತಃ ಸಂಪೂರ್ಣವಾಗಿ ಅಯಾಂಬಿಕ್ ಪಂಚಗಣಿ ಛಂದಸ್ಸಿನ ಕ್ರಮಬದ್ಧ ಚೌಪದಿಗಳಿಂದ ಕೂಡಿದ್ದು ಎಬಿಎಬಿ/ಅಬಾಬ್ ನ ಪ್ರಾಸಬದ್ಧತೆಯನ್ನು ಹೊಂದಿತ್ತು ಆ ಅವಧಿಯಲ್ಲಿ ಎಲಿಯಟ್ ರ ಆಲೋಚನೆಯನ್ನು ಆವರಿಸಿದ್ದ ಗ್ರೇಯವರ ಶೋಕರೂಪಿ ಎಲೆಜಿ ಕೃತಿ ಯದ್ದೇ ರೂಪ ಇದಾಗಿತ್ತು. ಕರಡಿನ ಈ ಭಾಗದ ಬಗೆಗಿನ ಪೌಂಡ್‌ರ ಟಿಪ್ಪಣಿ ಈ ರೀತಿಯಿತ್ತು "ಅಷ್ಟೊಂದು ಪ್ರಮಾಣದ ಚರಣಗಳನ್ನು ಹೊಂದುವಷ್ಟರ ಮಟ್ಟಿಗೆ ಚರಣವು ಆಸಕ್ತಿದಾಯಕವಾಗಿಲ್ಲ". ಕೊನೆಯಲ್ಲಿ ನಾಲ್ಕು-ಸಾಲುಗಳ ಚರಣಗಳ ನಿಯಮಿತತೆಯನ್ನು ತ್ಯಜಿಸಲಾಯಿತು.
ಆವೃತ್ತಿಯೊಂದರಲ್ಲಿ 'ದ ಫೈರ್ ಸರ್ಮನ್ 'ನ ಆರಂಭದಲ್ಲಿ, ವೀರ ದ್ವಿಪದಿಗಳಿಂದ ಕೂಡಿದ ದೀರ್ಘವಾದ ವಿಭಾಗವಿದ್ದು, ಇದು ಅಲೆಗ್ಸಾಂಡರ್ ಪೋಪ್'ರ ದ ರೇಪ್ ಆಫ್ ದ ಲಾಕ್ ಕೃತಿಯ ಅನುಕರಣೆಯಂತಿದೆ. ಇದು ಓರ್ವ ಮಹಿಳೆ ಫ್ರೆಸ್ಕಾಳನ್ನು ವರ್ಣಿಸಿತ್ತು (ಹಿಂದಿನ ಕವಿತೆಯಾದ "ಜೆರಾನ್ಷನ್ "ನಲ್ಲಿ ಈ ಪಾತ್ರವು ಕಾಣಿಸಿಕೊಂಡಿತ್ತು). ರಿಚರ್ಡ್ ಎಲ್ಲ್‌ಮನ್‌ರು ಅದನ್ನು ವರ್ಣಿಸುವ ಹಾಗೆ, "ಪೋಪ್‌ರ ಬೆಲಿಂಡಾಳ ಹಾಗೆ ಆಕೆಯ ವೇಷಭೂಷಗಳನ್ನು ರೂಪಿಸುವ ಗೋಜಿಗೆ ಹೋಗದೇ, ಫ್ರೆಸ್ಕಾಳು ಜಾಯ್ಸ್‌ರ ಬ್ಲೂಮ್‌ಳ ಹಾಗೆ ಕೆಲಸವನ್ನಾರಂಭಿಸಿದ್ದಳು." ಅದರ ಸಾಲುಗಳು ಹೀಗಿದ್ದವು:
- ಲೀವಿಂಗ್ ದ ಬಬ್ಲಿಂಗ್ ಬೆವೆರೇಜ್ ಟು ಕೂಲ್ ,
- ಫ್ರೆಸ್ಕಾ ಸ್ಲಿಪ್ಸ್ ಸಾಫ್ಟ್‌ಲಿ ಟು ದ ನೀಡ್‌ಫುಲ್ ಸ್ಟೂಲ್,
- ವೇರ್ ದ ಪಾಥೆಟಿಕ್ ಟೇಲ್ ಆಫ್ ರಿಚರ್ಡ್‌ಸನ್
- ಈಸಸ್ ಹರ್ ಲೇಬರ್ ಟಿಲ್ ದ ಡೀಡ್ ಈಸ್ ಡನ್ . . .
ಎಲ್ಲ್‌ಮನ್ ಹೀಗೆ ಟಿಪ್ಪಣಿಸುತ್ತಾರೆ " ಪೋಪ್‌ರು ದ್ವಿಪದಿಗಳನ್ನು ಚೆನ್ನಾಗಿ ರಚಿಸಿರುವುದರಿಂದ, ಹಾಗೂ ಜಾಯ್ಸ್/ಜಾಯ್ಸೆರು ತೆಗೆದುಹಾಕುವಿಕೆಯನ್ನು ಕೈಗೊಂಡಿರುವುದರಿಂದ ಅದನ್ನೇ ಮತ್ತೊಂದು ಬಾರಿ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಪೌಂಡ್‌ರವರು ಎಲಿಯಟ್‌ರಿಗೆ ಎಚ್ಚರಿಸಿದ್ದರು.."
ಐದು ವಿಭಾಗಗಳ ಮಧ್ಯೆ ಎಲಿಯಟ್‌ರು ಸೇರಿಸಬೇಕೆಂದಿದ್ದ ಕೆಲವು ಸಣ್ಣ ಸಣ್ಣ ಕವಿತೆಗಳನ್ನು ಕೂಡಾ ಪೌಂಡ್ ತೆಗೆದುಹಾಕಿದ್ದರು. ಎಲಿಯಟ್‌ರು 'ಡಿರ್ಗೆ/ಡರ್ಜ್' ಎಂದು ಶೀರ್ಷಿಕೆಯಿಟ್ಟಿದ್ದ ಅವುಗಳಲ್ಲಿ ಒಂದು ಹೀಗೆ ಆರಂಭಗೊಳ್ಳುತ್ತದೆ
- ಫುಲ್ ಫೇಥಮ್ ಫೈವ್ ಯುವರ್ ಬ್ಲೇಯ್‌ಸ್ಟೀನ್ ಲೈಸ್[I]
- ಅಂಡರ್ ದ ಫ್ಲಾಟ್‌ಫಿಶ್ ಅಂಡ್ ದ ಸ್ಕ್ವಿಡ್ಸ್.
- ಗ್ರೇವ್'ಸ್ ಡಿಸೀಸ್ ಇನ್ ಎ ಡೆಡ್ ಜ್ಯೂ'ಸ್ ಐಸ್
- ವೇರ್ ದ ಕ್ರ್ಯಾಬ್ಸ್ ಹ್ಯಾವ್ ಈಟ್ ದ ಲಿಡ್ಸ್
- . . .
ಎಲಿಯಟ್ ರ ಪತ್ನಿ ವಿವಿಯೆನ್‌ರ ಕೋರಿಕೆಯ ಪ್ರಕಾರ, ಎ ಗೇಮ್ ಆಫ್ ಚೆಸ್ ವಿಭಾಗದ ಒಂದು ಚರಣವನ್ನು ಕವಿತೆಯಿಂದ ಹೊರತೆಗೆಯಲಾಯಿತು : "ಅಂಡ್ ವಿ ಷಲ್ ಪ್ಲೇ ಎ ಗೇಮ್ ಆಫ್ ಚೆಸ್/ದ ಐವರಿ ಮೆನ್ ಮೇಕ್ ಕಂಪೆನಿ ಬಿಟ್ವೀನ್ ಅಸ್ / ಪ್ರೆಸ್ಸಿಂಗ್ ಲಿಡ್‌ಲೆಸ್ ಐಸ್ ಅಂಡ್ ವೇಯ್ಟಿಂಗ್ ಫಾರ್ ಎ ನಾಕ್ ಅಪಾನ್ ದ ಡೋರ್ ". ಈ ವಿಭಾಗವು ಸುವ್ಯಕ್ತವಾಗಿ ಅವರ ವೈವಾಹಿಕ ಜೀವನದ ಮೇಲೆ ಆಧಾರಿತವಾಗಿತ್ತು, ಆದುದರಿಂದ ಈ ಸಾಲುಗಳು ಬಹಳಷ್ಟು ವಿಚಾರಗಳನ್ನು ಬಹಿರಂಗಗೊಳಿಸುತ್ತಿವೆ ಎಂದು ಆಕೆಗೆ ಅನಿಸಿರಲಿಕ್ಕೂ ಸಾಕು. ಆದಾಗ್ಯೂ "ಐವರಿ ಮೆನ್" ಸಾಲು ಎಲಿಯಟ್ ರಿಗೆ ಬೇಕಾಗಿದ್ದ ಮಹತ್ವದ ಯಾವುದೋ ವಿಚಾರವಿರಬಹುದು: 1960ರಲ್ಲಿ ವಿವಿಯೆನ್‌ರ ಸಾವಿನ ಹದಿಮೂರು ವರ್ಷಗಳ ನಂತರ ಆತ ಈ ಸಾಲನ್ನು ಲಂಡನ್ ಗ್ರಂಥಾಲಯಕ್ಕೆ ಸಹಾಯಾರ್ಥವಾಗಿ ಮಾರಲಾದ ಪ್ರತಿಯೊಂದರಲ್ಲಿ ಸೇರಿಸಿದ್ದರು.[ಸೂಕ್ತ ಉಲ್ಲೇಖನ ಬೇಕು]
ಎಲಿಯಟ್‌ರಿಗೆ ಕವಿತೆಯ "ಹುಟ್ಟನ್ನು/ಹುಟ್ಟುಹಬ್ಬವನ್ನು" ಆಚರಿಸುವ ಬಗ್ಗೆ ಡಿಸೆಂಬರ್ 1921ರ ಕೊನೆಯ ಅವಧಿಯಲ್ಲಿ ಬರೆದಿದ್ದ ಪತ್ರವೊಂದರಲ್ಲಿ, ಪೌಂಡ್‌ರು "ಸೇಜ್ ಹಾ/ಹೊಮ್ಮೆ " ಎಂಬ ಶೀರ್ಷಿಕೆಯ 48 ಸಾಲುಗಳ ಪೋಲಿ/ಅಶ್ಲೀಲ ಕವಿತೆಯೊಂದನ್ನು ಬರೆದಿದ್ದರು ಅದರಲ್ಲಿ ಅವರು ಎಲಿಯಟ್‌ರನ್ನು ಕವಿತೆಯ ತಾಯಿಯಾಗಿ ಗುರುತಿಸಿದ್ದರೆ ತಮ್ಮನ್ನು ಸೂಲಗಿತ್ತಿಗೆ ಹೋಲಿಸಿಕೊಂಡಿದ್ದರು.[೭] ಅದರಲ್ಲಿನ ಕೆಲವು ಚರಣಗಳು ಹೀಗಿದ್ದವು :
- E. P. ಹೋಪ್‌ಲೆಸ್ ಅಂಡ್ ಅನ್‌ಹೆಲ್ಪ್‌ಡ್
- ಎಂಥ್ರೋನ್‌ಡ್ ಇನ್ ದ ಮಾರ್ಮೋರಿಯನ್ ಸ್ಕೈಸ್
- ಹಿಸ್ ವರ್ಸ್ ಒಮಿಟ್ಸ್ ರಿಯಾಲಿಟೀಸ್,
- ಏಂಜೆಲಿಕ್ ಹ್ಯಾಂಡ್ಸ್ ವಿತ್ ಮದರ್ ಆಫ್ ಪರ್ಲ್
- ರೀಟಚ್ ದ ಸ್ಟ್ರಾಪ್ಪಿಂಗ್ ಸರ್ವೆಂಟ್ ಗರ್ಲ್,
- ...
- ಬಾಲ್ಸ್ ಅಂಡ್ ಬಾಲ್ಸ್ ಅಂಡ್ ಬಾಲ್ಸ್ ಎಗೇನ್
- ಕೆನ್ ನಾಟ್ ಟಚ್ ಹಿಸ್ ಫೆಲ್ಲೋ ಮೆನ್.
- ಹಿಸ್ ಫೋಮಿಂಗ್ ಅಂಡ್ ಅಬಂಡೆಂಟ್ ಕ್ರೀಮ್
- ಹ್ಯಾಸ್ ಕೋಟೆಡ್ ಹಿಸ್ ವರ್ಲ್ಡ್. ದ ಕೋಟ್ ಆಫ್ ಡ ಡ್ರೀಮ್;
- ಆರ್ ಸೇ ದಟ್ ದ ಅಪ್‌ಜಟ್ ಆಫ್ ಸ್ಪರ್ಮ್
- ಹ್ಯಾಸ್ ರೆಂಡರ್ಡ್ ಹಿಸ್ ಸೆನ್ಸ್ ಪಾಚಿಡರ್ಮ್.
ಪ್ರಕಟಣೆಯ ಇತಿಹಾಸ
[ಬದಲಾಯಿಸಿ]ಕೃತಿಯ ಸಂಪಾದನೆಯು ಇನ್ನೂ ಆರಂಭವಾಗುವ ಮುನ್ನವೇ ಎಲಿಯಟ್‌ರು ಓರ್ವ ಪ್ರಕಾಶಕರನ್ನು ಹುಡುಕಿಕೊಂಡರು.[E] ನ್ಯೂ ಯಾರ್ಕ್‌ನ ಬೋನಿ ಅಂಡ್ ಲೈವ್‌ರೈಟ್ ಪ್ರಕಾಶನ ಸಂಸ್ಥೆಯ ಹೊರೇಸ್ ಲೈವ್‌ರೈಟ್‌ರು ಎಜ್ರಾ ಪೌಂಡ್‌ರೊಂದಿಗೆ ಹಲವು ಭೇಟಿಗಳಿಗಾಗಿ ಪ್ಯಾರಿಸ್‌ನಲ್ಲಿದ್ದರು. 3 ಜನವರಿ 1922ರಂದು ರಾತ್ರಿಯ ಭೋಜನದೊಂದಿಗಿನ ಭೇಟಿಯಲ್ಲಿ , ಅವರು ಪೌಂಡ್, ಜೇಮ್ಸ್ ಜಾಯ್ಸ್/ಜಾಯ್ಸೆ (ಯುಲಿಸಿಸ್ ) ಮತ್ತು ಎಲಿಯಟ್‌ರವರುಗಳು ರಚಿಸಿದ ಕೃತಿಗಳನ್ನು ಪ್ರಕಟಿಸುವುದರ ಬಗ್ಗೆ ಪ್ರಸ್ತಾಪವನ್ನಿಟ್ಟರು. ಶರತ್ಕಾಲದಲ್ಲಿ ಪ್ರಕಟಿಸಲು ಉದ್ದೇಶಿಸಿದ್ದ ಕವಿತೆಗಳ ಪುಸ್ತಕದ ಆವೃತ್ತಿಯೊಂದಕ್ಕೆ ಎಲಿಯಟ್‌ರು 15%ರಷ್ಟು ಸಂಭಾವನೆ/ರಾಜಧನವನ್ನು ಪಡೆಯಬಹುದಾಗಿತ್ತು.[೮]
ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳಲು ಹಾಗೂ ಹೆಚ್ಚಿನ ವಾಚಕವೃಂದವನ್ನು ತಲುಪಲು ಎಲಿಯಟ್ ನಿಯತಕಾಲಿಕೆಗಳೊಂದಿಗಿನ ಒಪ್ಪಂದಗಳನ್ನು ಕೂಡಾ ಆಶ್ರಯಿಸಿದರು. ದ ಡಯಲ್ ನಿಯತಕಾಲಿಕೆಯ[೯] ಲಂಡನ್‌ನ ಬಾತ್ಮೀದಾರರಾಗಿದ್ದುದರಿಂದ ಹಾಗೂ ಆ ಪತ್ರಿಕೆಯ ಸಹ-ಮಾಲೀಕ ಹಾಗೂ ಸಹ-ಸಂಪಾದಕ ಸ್ಕೋಫೀಲ್ಡ್ ಥಾಯರ್‌ರ ಮಹಾವಿದ್ಯಾಲಯದ ಸ್ನೇಹಿತರೂ ಆಗಿದ್ದರಿಂದ, ದ ಡಯಲ್ ಪತ್ರಿಕೆಯು ಆದರ್ಶ ಆಯ್ಕೆಯಾಗಿತ್ತು. ದ ಡಯಲ್ ಪತ್ರಿಕೆಯು ಕವಿತೆಗೆ (ಅದರ ಮಾನಕ ದರಕ್ಕಿಂತ 25% ಹೆಚ್ಚಿನ ಮೊತ್ತ) $150ರಷ್ಟು (£34)[೧೦] ಮೊತ್ತವನ್ನು ಪ್ರಸ್ತಾಪಿಸಿದರೂ ಒಂದು ವರ್ಷದ ಶ್ರಮದಿಂದ ಮೂಡಿದ ಕೃತಿಗೆ ಅಷ್ಟು ಕಡಿಮೆ ಬೆಲೆಯೇ ಎಂದು ಎಲಿಯಟ್ ನೊಂದುಕೊಂಡಿದ್ದರು, ವಿಶೇಷವಾಗಿ ಇದಕ್ಕೆ ಕಾರಣ ಒಂದು ಸಣ್ಣ ಕಥೆಯನ್ನು ಬರೆದ ಮತ್ತೋರ್ವ ಲೇಖಕರಿಗೆ ಭಾರೀ ಮೊತ್ತದ ಸಂಭಾವನೆಯನ್ನು ಕೊಟ್ಟಿದ್ದುದು ತಿಳಿದುಬಂದುದಾಗಿತ್ತು.[೧೧] ದ ಡಯಲ್ ನೊಂದಿಗಿನ ವ್ಯವಹಾರವು (ಪರಿಗಣಿಸಿದ್ದ ಇತರೆ ನಿಯತಕಾಲಿಕೆಗಳಲ್ಲಿ ಲಿಟಲ್ ರಿವ್ಯೂ ಮತ್ತು ವ್ಯಾನಿಟಿ ಫೇರ್ ಸೇರಿದ್ದವು) ಬಹುಮಟ್ಟಿಗೆ ತಪ್ಪಿಹೋಗುವುದರಲ್ಲಿತ್ತು ಆದರೆ ಪೌಂಡ್‌ರ ಪ್ರಯತ್ನಗಳಿಂದಾಗಿ ಅಂತಿಮವಾಗಿ ವ್ಯವಹಾರವೊಂದು ಕುದುರಿತು, ಅದರ ಪ್ರಕಾರ $150 ಮೊತ್ತಕ್ಕೆ ಹೆಚ್ಚುವರಿಯಾಗಿ ಎಲಿಯಟ್‌ರಿಗೆ ಅವರು ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಅನುಪಮ ಸೇವೆಗಾಗಿ ದ ಡಯಲ್ ನಿಯತಕಾಲಿಕೆಯ ಎರಡನೆಯ ವಾರ್ಷಿಕ ಪ್ರಶಸ್ತಿಯನ್ನು ನೀಡುವುದೆಂದು ನಿರ್ಧಾರವಾಯಿತು. ಈ ಪ್ರಶಸ್ತಿಯಲ್ಲಿ $2,000ಗಳ (£450) ಮೊತ್ತವೂ ಒಳಗೊಂಡಿತ್ತು.[೧೨]
ನ್ಯೂ ಯಾರ್ಕ್‌ನಲ್ಲಿ ಬೇಸಿಗೆಯ ಕೊನೆಯ ಹೊತ್ತಿಗೆ (ಎಲಿಯಟ್‌ರ ಹಿತಾಸಕ್ತಿಗಳನ್ನು ಪ್ರತಿನಿಧಿಸುತ್ತಿದ್ದ ವಕೀಲ ಹಾಗೂ ಸಾಹಿತ್ಯಕೃತಿಗಳ ಪೋಷಕ ಜಾನ್ ಕ್ವಿನ್‌ರೊಂದಿಗೆ ) ಬೋನಿ ಅಂಡ್ ಲೈವ್‌ರೈಟ್ ಸಂಸ್ಥೆಯು ದ ಡಯಲ್ ನೊಂದಿಗೆ ಒಡಂಬಡಿಕೆಯೊಂದನ್ನು ಮಾಡಿಕೊಂಡಿತು, ಅದರ ಪ್ರಕಾರ ನಿಯತಕಾಲಿಕೆಯು USನಲ್ಲಿ ಕವಿತೆಗಳನ್ನು ಪ್ರಕಟಿಸುವ ಮೊದಲಿಗ ಸಂಸ್ಥೆಯಾಗಲಿದ್ದು ಅದಕ್ಕೆ ಪ್ರತಿಯಾಗಿ ಬೋನಿ ಅಂಡ್ ಲೈವ್‌ರೈಟ್ ಸಂಸ್ಥೆಯಿಂದ ರಿಯಾಯಿತಿ ಬೆಲೆಗೆ ಪುಸ್ತಕದ 350 ಪ್ರತಿಗಳನ್ನು ಖರೀದಿಸುವ ಒಪ್ಪಿಗೆಯನ್ನು ಒಳಗೊಂಡಿತ್ತು.[೧೩] ಬೋನಿ ಅಂಡ್/ಮತ್ತು ಲೈವ್‌ರೈಟ್ ಸಂಸ್ಥೆಯು ದ ಡಯಲ್ ಪ್ರಶಸ್ತಿಯು ಎಲಿಯಟ್‌ರಿಗೆ ದೊರೆತಿರುವುದರ ವಿಚಾರವನ್ನು ತಮ್ಮ ಆರಂಭಿಕ ಮಾರಾಟಗಳನ್ನು ಹೆಚ್ಚಿಸಿಕೊಳ್ಳಲು ಪ್ರಚಾರದ ವಸ್ತು ವಾಗಿ ಬಳಸಿಕೊಳ್ಳಬಹುದಾಗಿತ್ತು.
ಈ ಕವಿತೆಯು ಮೊತ್ತಮೊದಲಿಗೆ ಲೇಖಕರ ಟಿಪ್ಪಣಿಗಳನ್ನು ಹೊಂದಿರದೇ UKನಲ್ಲಿ ದ ಕ್ರಿಟೇರಿಯನ್ ಎಂಬ ಎಲಿಯಟ್‌ರು ಆರಂಭಿಸಿದ್ದ ಹಾಗೂ ಸಂಪಾದಕತ್ವವನ್ನು ವಹಿಸಿಕೊಂಡಿದ್ದ ಒಂದು ಸಾಹಿತ್ಯಪರ ನಿಯತಕಾಲಿಕೆಯ ಪ್ರಥಮ ಸಂಚಿಕೆಯಲ್ಲಿ (ಅಕ್ಟೋಬರ್ 1922) ಪ್ರಕಟವಾಯಿತು. USನಲ್ಲಿನ ಈ ಕವಿತೆಯ ಮೊದಲ ಕಾಣಿಸಿಕೊಳ್ಳುವಿಕೆಯು ದ ಡಯಲ್ ನಿಯತಕಾಲಿಕೆಯ (ವಾಸ್ತವವವಾಗಿ ಅಕ್ಟೋಬರ್ ತಿಂಗಳ ಕೊನೆಗೆ ಪ್ರಕಟವಾಗಿತ್ತು) ನವೆಂಬರ್ 1922ರ ಸಂಚಿಕೆಯಲ್ಲಾಗಿತ್ತು. ಡಿಸೆಂಬರ್ 1922ರಲ್ಲಿ, ಈ ಕವಿತೆಯನ್ನು USನಲ್ಲಿ ಬೋನಿ ಅಂಡ್ ಲೈವ್‌ರೈಟ್ ಸಂಸ್ಥೆಯು ಪುಸ್ತಕರೂಪದಲ್ಲಿ ಪ್ರಕಟಿಸಿತು, ಇದು ಟಿಪ್ಪಣಿಗಳನ್ನು ಹೊಂದಿದ ಪ್ರಥಮ ಪ್ರಕಟಣೆಯಾಗಿತ್ತು. ಸೆಪ್ಟೆಂಬರ್ 1923ರಲ್ಲಿ, ಹೋಗಾರ್ಥ್ ಪ್ರೆಸ್ ಮುದ್ರಣಾಲಯ ಎಂಬ ಎಲಿಯಟ್ ರ ಸ್ನೇಹಿತರಾಗಿದ್ದ ಲಿಯೋನಾರ್ಡ್ ಮತ್ತು ವಿರ್ಜೀನಿಯಾ ವೂಲ್ಫ್‌ರವರುಗಳು ನಡೆಸುತ್ತಿದ್ದ ಖಾಸಗಿ ಮುದ್ರಣಾಲಯವೊಂದು, ದ ವೇಸ್ಟ್ ಲ್ಯಾಂಡ್ ನ ಮೊತ್ತಮೊದಲ UK ಪುಸ್ತಕ ಆವೃತ್ತಿಯನ್ನು ಸುಮಾರು 450 ಪ್ರತಿಗಳ ಆವೃತ್ತಿಯನ್ನು ಪ್ರಕಟಪಡಿಸಿತು, ವಿರ್ಜೀನಿಯಾ ವೂಲ್ಫ್‌ರು ಕೈಗಳಿಂದ ಇದರ ಅಚ್ಚುಮೊಳೆ ಜೋಡಣೆಯನ್ನು ನಿರ್ವಹಿಸಿದ್ದರು.
ದ ವೇಸ್ಟ್ ಲ್ಯಾಂಡ್ (ಎಲಿಯಟ್‌ರ ಇತರೆ ಕವಿತೆ ಮತ್ತು ಗದ್ಯಕೃತಿಗಳನ್ನು ಕೂಡಾ) ಕೃತಿಯ ಪ್ರಕಟಣಾ ಇತಿಹಾಸವನ್ನು ಡೊನಾಲ್ಡ್ ಗ್ಯಾಲ್ಲಪ್‌ರು ದಾಖಲಿಸಿಟ್ಟಿದ್ದಾರೆ.[೧೪]
ಲ್ಲಾಯ್ಡ್‌ಸ್ ಬ್ಯಾಂಕ್‌ನಲ್ಲಿನ 1922ರ ಅವಧಿಯಲ್ಲಿ £500 ($2,215)[೧೫] ರಷ್ಟು ಇದ್ದ ಎಲಿಯಟ್‌ರ ವೇತನವನ್ನು ದ ಡಯಲ್ , ಬೋನಿ ಅಂಡ್ ಲೈವ್‌ರೈಟ್ ಮತ್ತು ಹೋಗಾರ್ಥ್ ಪ್ರೆಸ್ ಮುದ್ರಣಾಲಯ ಪ್ರಕಟಣೆಗಳ ನಂತರ ಸರಿಸುಮಾರು £630 ($2,800)ಕ್ಕೆ ನಿಗದಿಪಡಿಸಲಾಯಿತು.[೧೬][F]
ಶೀರ್ಷಿಕೆ
[ಬದಲಾಯಿಸಿ]ಎಲಿಯಟ್‌ರು ಮೂಲತಃ ಈ ಕವಿತೆಗೆ ಹಿ ಡೂ ದ ಪೊಲೀಸ್ ಇನ್ ಡಿಫರೆಂಟ್ ವಾಯ್ಸಸ್ ಎಂಬ ಶೀರ್ಷಿಕೆಯನ್ನಿಡಲು ಇಚ್ಛಿಸಿದ್ದರು.[೧೭] ಎಲಿಯಟ್‌ರು ಸ್ವಿಟ್ಜರ್‌ಲೆಂಡ್‌ನಿಂದ ಮರಳಿ ತಂದ ಕವಿತೆಯ ಆವೃತ್ತಿಯಲ್ಲಿ ಕವಿತೆಯ ಮೊದಲ ಎರಡು ವಿಭಾಗಗಳಾದ —'ದ ಬ್ಯೂರಿಯಲ್ ಆಫ್ ದ ಡೆಡ್ ' ಮತ್ತು 'ಎ ಗೇಮ್ ಆಫ್ ಚೆಸ್ 'ಗಳು — ಈ ಶೀರ್ಷಿಕೆಯಡಿ ಕಾಣಿಸಿಕೊಂಡಿದ್ದವು. ಈ ವಿಚಿತ್ರದ ಪದಪುಂಜವನ್ನು ಚಾರ್ಲ್ಸ್ ಡಿಕನ್ಸ್‌ರ ಕಾದಂಬರಿ ಅವರ್ ಮ್ಯೂಚ್ಯುಯಲ್ ಫ್ರೆಂಡ್ ನಿಂದ ತೆಗೆದುಕೊಳ್ಳಲಾಗಿದ್ದು, ಅದರಲ್ಲಿ ಓರ್ವ ವಿಧವೆ ಬೆಟ್ಟಿ ಹಿಜ್ಡೆನ್‌ಳು ಅನಾಥನಾದ ಹಾಗೂ ತಾನು ದತ್ತು ತೆಗೆದುಕೊಂಡಿದ್ದ ಮಗ ಸ್ಲಾಪ್ಪಿಯ ಬಗ್ಗೆ ಹೀಗೆನ್ನುತ್ತಾಳೆ : "ಯು ಮೈಟ್‌ನಾಟ್ ಥಿಂಕ್ ಇಟ್, ಬಟ್ ಸ್ಲಾಪ್ಪಿ ಈಸ್ ಎ ಬ್ಯೂಟಿಫುಲ್ ರೀಡರ್ ಆಫ್ ನ್ಯೂಸ್‌ಪೇಪರ್. ಹಿ ಡೂ ದ ಪೊಲೀಸ್ ಇನ್ ಡಿಫರೆಂಟ್ ವಾಯ್ಸಸ್." ಇದು ಓದುಗರಿಗೆ ಹೀಗೆ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ, ಕವಿತೆಯಲ್ಲಿ ಹಲವು ಬೇರೆ ಬೇರೆ ಧ್ವನಿಗಳಿದ್ದರೂ (ಕಥಾನಿರೂಪಕರು), ಕೆಲವರು ವಿಮರ್ಶಕರ ಪ್ರಕಾರ ಅವುಗಳೆಲ್ಲದರ ಕೇಂದ್ರ ಪ್ರಜ್ಞೆ ಒಂದೇ ಎಂದು ಭಾವಿಸುತ್ತಾರೆ. ಈ ಶೀರ್ಷಿಕೆಯನ್ನು ತಿರಸ್ಕರಿಸಿದುದರಿಂದ ಕಳೆದುಕೊಂಡುದೇನಿರಬಹುದೆಂದರೆ ಟಿರೇಸಿಯಾಸ್ ಬಗೆಗಿನ ತನ್ನ ಟಿಪ್ಪಣಿಯಲ್ಲಿ ತನ್ನ ಪಾತ್ರಗಳ ಬಗೆಗಿನ ಸಮಾನತೆಗಳ ಬಗ್ಗೆ ಟಿಪ್ಪಣಿಯನ್ನು ಎಲಿಯಟ್ ಮತ್ತೆ ಉಳಿಸಿಕೊಳ್ಳಬೇಕಾಗಿ ಬಂದದ್ದಿರಬಹುದು.
ಕೊನೆಯಲ್ಲಿ ಎಲಿಯಟ್ ಆಯ್ದುಕೊಂಡ ಶೀರ್ಷಿಕೆ ದ ವೇಸ್ಟ್ ಲ್ಯಾಂಡ್ ಆಗಿತ್ತು. ಕವಿತೆಯ ಬಗ್ಗೆ ಬರೆದ ತನ್ನ ಪ್ರಥಮ ಟಿಪ್ಪಣಿಯಲ್ಲಿ ಆ ಶೀರ್ಷಿಕೆಗೆ ಕಾರಣ ಅಂತಿಮ ಪಾನಪಾತ್ರೆಯ ಬಗೆಗಿನ ಆಖ್ಯಾಯಿಕೆಯ ಮೇಲಿನ ಜೆಸ್ಸೀ L. ವೆಸ್ಟನ್‌ರ ಪುಸ್ತಕ ಫ್ರಮ್ ರಿಚ್ಯುಯಲ್ ಟು ರೋಮ್ಯಾನ್ಸ್ ಎಂದು ಹೇಳುತ್ತಾರೆ. ಇದರಲ್ಲಿನ ಸೂಚ್ಯ ಉಲ್ಲೇಖವು ಮಹಾರಾಜ ಫಿಷರ್‌ನ ಗಾಯಗೊಳ್ಳುವಿಕೆ ಹಾಗೂ ತದನಂತರದ ಆತನ ಭೂಮಿಗಳು ಬರಡುಗೊಳ್ಳುವಿಕೆಯಾಗಿತ್ತು. ಮಹಾರಾಜನನ್ನು ಪುನಃಸ್ಥಾಪನೆಗೊಳಿಸಲು ಹಾಗೂ ಆತನ ಭೂಮಿಗಳನ್ನು ಪುನಃ ಫಲವತ್ತಾಗಿಸಲು ಅಂತಿಮ ಪಾನಪಾತ್ರೆಯ ಅನ್ವೇಷಕ ಹೀಗೆಂದು ಕೇಳಲೇಬೇಕಿತ್ತು "ನಿನ್ನನ್ನು ಬಾಧಿಸುತ್ತಿರುವುದೇನು?"
ಕವಿತೆಯ ಶೀರ್ಷಿಕೆಯನ್ನು ಅನೇಕವೇಳೆ ತಪ್ಪಾಗಿ "ವೇಸ್ಟ್ ಲ್ಯಾಂಡ್ " (ವೆಸ್ಟನ್ ಬಳಸಿದ ಹಾಗೆ ) ಅಥವಾ "ವೇಸ್ಟ್‌ಲ್ಯಾಂಡ್" ಎಂದು ನಿರ್ದೇಶಕ ಗುಣವಾಚಿಯನ್ನು ಹೊರತುಪಡಿಸಿ ಹೇಳಲಾಗುತ್ತದೆ. ಆದಾಗ್ಯೂ ಎಜ್ರಾ ಪೌಂಡ್‌ರಿಗೆ ಬರೆದಿದ್ದ ಪತ್ರವೊಂದರಲ್ಲಿ, ಎಲಿಯಟ್‌ರು ಶೀರ್ಷಿಕೆಯು "ದ" ಇಂದ ಆರಂಭಗೊಳ್ಳುತ್ತದೆ ಎಂದು ವಿನೀತವಾಗಿಯೇ ಆಗ್ರಹಿಸಿದ್ದರು.[೧೮]
ರಚನೆ
[ಬದಲಾಯಿಸಿ]ಪುಸ್ತಕದಲ್ಲಿ ಕವಿತೆಗಿಂತ ಮೊದಲಿಗೆ ಪೆಟ್ರಾನಿಯಸ್‌ನ ಸಟೈರಿಕಾನ್‌ನ ಲ್ಯಾಟಿನ್ ಮತ್ತು ಗ್ರೀಕ್ ಶಿಲಾಶಾಸನವು ಕಂಡುಬರುತ್ತದೆ. ಆಂಗ್ಲದಲ್ಲಿ ಇದನ್ನು ಹೀಗೆ ಹೇಳಬಹುದು : "ಐ ಸಾ ವಿತ್ ಮೈ ಓನ್ ಐಸ್ ದ ಸಿಬಿಲ್ ಆಫ್ ಕ್ಯುಮೇ ಹ್ಯಾಂಗಿಂಗ್ ಇನ್ ಎ ಜಾರ್, ಅಂಡ್ ವೆನ್ ದ ಬಾಯ್ಸ್ ಸೆಡ್ ಟು ಹರ್, ಸಿಬಿಲ್, ವಾಟ್ ಡೂ ಯೂ ವಾಂಟ್ ?(ಕನ್ನಡದಲ್ಲಿ ಇದನ್ನು ಹೀಗೆ ಹೇಳಬಹುದು : "ನಾನು ನನ್ನ ಕಣ್ಣಾರೆ ಕ್ಯುಮೇನ ಕೊರವಂಜಿಯನ್ನು ಜಾಡಿಯಲ್ಲಿ ನೇತಾಡುತ್ತಿರುವುದನ್ನು ಕಂಡೆ, ಬಾಲಕರು ಆಕೆಗೆ ಕೊರವಂಜಿಯೇ ನಿನಗೇನು ಬೇಕು? ಎಂದು ಕೇಳಿದಾಗ) ಷೀ ರಿಪ್ಲೈಡ್ ಐ ವಾಂಟ್ ಟು ಡೈ (ಅವಳೆಂದಳು ನಾನು ಸಾಯಲಿಚ್ಛಿಸುತ್ತೇನೆ )."
ಶಿಲಾಶಾಸನದ ನಂತರ ಒಂದು ಅರ್ಪಣೆಯ ಪುಟವಿದೆ ಅದರಲ್ಲಿ ಹೀಗಿದೆ (1925ರ ಮರುಪ್ರಕಟಣೆಯಲ್ಲಿ ಇದನ್ನು ಸೇರಿಸಲಾಗಿತ್ತು ) " ಎಜ್ರಾ ಪೌಂಡ್ ರಿಗೆ: il miglior fabbro " ಇಲ್ಲಿ ಎಲಿಯಟ್‌ರು ಡಾಂಟೆಯ ಪರ್ಗಟಾರಿಯೋ ದ , ದ ಡಿವೈನ್ ಕಾಮಿಡಿ ಕೃತಿಯ ಎರಡನೇ ಗೀತಮಾಲೆ ಕ್ಯಾಂಟೋ XXVIನ 117ನೆಯ ಸಾಲನ್ನು ಹಾಗೂ ಅದರಲ್ಲಿ ಡಾಂಟೆಯು ಚಾರಣಕವಿ ಅರ್ನಾಟ್ ಡೇನಿಯಲ್‌ನನ್ನು "ಮಾತೃಭಾಷೆಯ ಅತ್ಯುತ್ತಮ ಲೋಹಕಾರ " ಎಂದು ವರ್ಣಿಸುವ ಹಾಗೂ ಪೌಂಡ್‌ನ ಆತನೇ "ಅತ್ಯುತ್ತಮ ಕರಕುಶಲಗಾರ" ಎಂಬುದಾಗಿ ಪದಪುಜವನ್ನು ಭಾಷಾಂತರಿಸಿರುವ ಆತನ ದ ಸ್ಪಿರಿಟ್ ಆಫ್ ರೊಮ್ಯಾನ್ಸ್ (1910) ಕೃತಿಯ ಎರಡನೇ ಅಧ್ಯಾಯದ ಶೀರ್ಷಿಕೆಯನ್ನು ಕೂಡಾ ಉದ್ಧರಿಸುತ್ತಿದ್ದಾರೆ."[೧೯] ಪೌಂಡ್‌ರವರಿಗೆ ಉಡುಗೊರೆಯಾಗಿ ನೀಡಿದ ಕವಿತೆಯ 1922ರ ಬೋನಿ & ಲೈವ್‌ರೈಟ್ ಪೇಪರ್‌ಬ್ಯಾಕ್ ಆವೃತ್ತಿಯಲ್ಲಿ ಈ ಅರ್ಪಣೆಯನ್ನು ಮೂಲತಃ ಶಾಯಿಯಲ್ಲಿ ಎಲಿಯಟ್‌ರು ಬರೆದಿದ್ದರು; ಇದನ್ನು ತದನಂತರ ಭವಿಷ್ಯದ ಆವೃತ್ತಿಗಳಲ್ಲಿ ಸೇರಿಸಲಾಯಿತು.[೨೦]
ದ ವೇಸ್ಟ್ ಲ್ಯಾಂಡ್ ಕೃತಿಯ ಐದು ಭಾಗಗಳಿಗೆ ಕೆಳಕಂಡ ಶೀರ್ಷಿಕೆಗಳನ್ನು ನೀಡಲಾಗಿದೆ:
- ದ ಬ್ಯೂರಿಯಲ್ ಆಫ್ ದ ಡೆಡ್
- ಎ ಗೇಮ್ ಆಫ್ ಚೆಸ್
- ದ ಫೈರ್ ಸರ್ಮನ್
- ಡೆತ್ ಬೈ ವಾಟರ್
- ವಾಟ್ ದ ಥಂಡರ್ ಸೆಡ್
ಕವಿತೆಯ ಪಠ್ಯದ ನಂತರ, ಆತನು ಬಳಸಿರುವ ರೂಪಕಾಲಂಕಾರಗಳು, ಆಧಾರಲೇಖಗಳು ಹಾಗೂ ಉಲ್ಲೇಖಗಳನ್ನು ವಿವರಿಸುವ ಉದ್ದೇಶದಿಂದ ಕೂಡಿರುವ ಹಲವು ಪುಟಗಳನ್ನು ಆವರಿಸಿರುವ ಟಿಪ್ಪಣಿಗಳು ಕಂಡುಬರುತ್ತವೆ. ಕವಿತೆಯನ್ನು ಅರ್ಥೈಸಿಕೊಳ್ಳುವಲ್ಲಿ ಈ ಟಿಪ್ಪಣಿಗಳಲ್ಲಿ ಕೆಲವು ಸಾಕಷ್ಟು ಉಪಯುಕ್ತವಾಗಬಲ್ಲವು, ಆದರೆ ಕೆಲವು ವಾದಯೋಗ್ಯವಾಗಿದ್ದು ಮತ್ತಷ್ಟು ಗೊಂದಲಗೊಳಿಸುವಂತಿದ್ದು, ಹಾಗೂ ಬಹುತೇಕ ಅಸ್ಪಷ್ಟವಾದ ವಾಕ್ಯವೃಂದಗಳಿಗೆ ಟಿಪ್ಪಣಿಗಳನ್ನು ನೀಡದೇ ಬಿಡಲಾಗಿದೆ. ಇರುವ ಟಿಪ್ಪಣಿಗಳನ್ನೂ ಕೂಡಾ ಎಲಿಯಟ್‌ರ ಕೃತಿಗಳ ಪ್ರಕಾಶಕರು ದ ವೇಸ್ಟ್ ಲ್ಯಾಂಡ್ ಕೃತಿಯನ್ನು ಪ್ರತ್ಯೇಕ ಪುಸ್ತಕವನ್ನಾಗಿ ಮುದ್ರಿಸುವುದನ್ನು ಸಮರ್ಥನೆಯನ್ನು ಒದಗಿಸಲು ಸಾಕಷ್ಟು ದೀರ್ಘವಾಗಿರುವ ಸಾಮಗ್ರಿಯನ್ನು ಕೋರಿಕೊಂಡ ನಂತರವಷ್ಟೇ ಸೇರಿಸಲಾಯಿತು.[G]
ಎಲಿಯಟ್‌ರು ದ ವೇಸ್ಟ್ ಲ್ಯಾಂಡ್ ಅನ್ನು ಮೂಲತಃ ಬಿಡಿ ಕವಿತೆಗಳ ಸಂಗ್ರಹವನ್ನಾಗಿಸಲು ಉದ್ದೇಶಿಸಿದ್ದರೋ ಅಥವಾ (ಹೆಚ್ಚುವರಿ ಕವಿತೆಗಳನ್ನು ಅವುಗಳನ್ನು ಸೇರಿಸುವ ಬಗ್ಗೆ ಟಿಪ್ಪಣಿಗಳನ್ನು ಕೋರಿ ಪೌಂಡ್‌ರವರ ಬಳಿಗೆ ಕಳಿಸಲಾಗಿತ್ತು) ಐದು ವಿಭಾಗಗಳನ್ನೊಳಗೊಂಡ ಒಂದೇ ಕವಿತೆಯಾಗಿರಬೇಕೆಂದು ಬಯಸಿದ್ದರೋ ಎಂಬ ಬಗ್ಗೆ ಸ್ವಲ್ಪ ಸಂದೇಹಗಳಿವೆ.
ಶೈಲಿ
[ಬದಲಾಯಿಸಿ]ನಾಟಕೀಯ ಸ್ವಗತದ ನಿರೂಪಣೆಯ ಸಾಧ್ಯತೆಗಳನ್ನು ಅನ್ವೇಷಿಸುವ ಎಲಿಯಟ್‌ರ ಆಸಕ್ತಿಯಿಂದಾಗಿ ಈ ಕೃತಿಯ ಶೈಲಿಯು ಭಾಗಶಃ ಹೊರಹೊಮ್ಮುತ್ತದೆ. ಈ ಆಸಕ್ತಿಯು ಕನಿಷ್ಟ J. ಆಲ್‌ಫ್ರೆಡ್ ಪ್ರುಫ್ರಾಕ್‌ರ ದ ಲವ್ ಸಾಂಗ್ ನ ಅವಧಿಯಷ್ಟಾದರೂ ಹಿಂದಿನದಾಗಿದೆ.
ಎಲಿಯಟ್‌ರು ಡೇವ್ ಸ್ಟ್ಯಾಂಪರ್ ಮತ್ತು ಜೀನ್ ಬಕ್‌ರ ಸಂಯೋಜನೆಯ ಝೇಗ್‌ಫೀಲ್ಡ್ ಫಾಲ್ಲಿಸ್ ರಚಿತ ಗೀತೆ ದ ಶೇಕ್ಸ್‌ಪೆಹೆರಿಯನ್ ರ್ರ್ಯಾಗ್ ಅನ್ನು ಉಲ್ಲೇಖಿಸುತ್ತಾ ಸಂಗೀತ ಕಲಾಮಂದಿರವನ್ನು ಹಾಗೂ ಮನರಂಜನೆಯ ಜನಪ್ರಿಯ ಸ್ವರೂಪದ ಈ ಸೊಗಡಿನ ಹಲವು ಅಂಶಗಳನ್ನು ಕೂಡಾ ಕವಿತೆಯೊಳಗೆ ಅಳವಡಿಸುವುದನ್ನು ಆಸ್ವಾದಿಸಿದ್ದರು.[೨೧] ಕೃತಿಯ ಉದ್ದಕ್ಕೂ ವಿಷಯವಸ್ತುವನ್ನು ಬೇರೆ ಬೇರೆ ಧ್ವನಿಗಳಲ್ಲಿ ಮೂಡಿಸುವ ಫ್ಯೂಗ್ ಸಂಗೀತಕೃತಿಯ ಮಾದರಿಯನ್ನು ಇದು ಅನುಸರಿಸುತ್ತದೆ[ಸೂಕ್ತ ಉಲ್ಲೇಖನ ಬೇಕು].
ಒಂದು ಅಳವಡಿತ ವೈಖರಿಯಿಂದ ಮತ್ತೊಂದಕ್ಕೆ ಬದಲಾಯಿಸಿಕೊಳ್ಳುವ ಅದರ ರೀತಿ, ವಿವಿಧ ವಾಣಿ/ಧ್ವನಿಗಳ ನಡುವೆ ಅದು ಸಂಚರಿಸುವ ಬಗೆ ಹಾಗೂ ಅದು ಮಾಡುವ ವಿದೇಶೀ ಭಾಷೆಗಳ ಪದಪುಂಜಗಳ ಬಳಕೆ ಹಾಗೂ ಇವೆಲ್ಲವುಗಳಿಗಿಂತ ಹೆಚ್ಚಾಗಿ ಬಹುಶಃ ಕವಿತೆಯ ಅಸಂಬದ್ಧ ಸ್ವರೂಪವು ಈ ಕವಿತೆಯ ಶೈಲಿಯಲ್ಲಿನ ಅತ್ಯಂತ ವೈಶಿಷ್ಟ್ಯಸೂಚಕ ಶೈಲಿಯಾಗಿದೆ. ಆಸಕ್ತಿದಾಯಕವಾದುದೆಂದರೆ, ಎಲಿಯಟ್‌ರು ದ ವೇಸ್ಟ್ ಲ್ಯಾಂಡ್ ಕವಿತೆಯನ್ನು ಬರೆಯುತ್ತಿದ್ದ ಸಮಯದಲ್ಲಿಯೇ ರಾಬರ್ಟ್ ಬ್ರಿಡ್ಜಸ್ ತನ್ನ ಪ್ರಪ್ರಥಮ ಮಾತ್ರಾಸೂಚಕ ನವ-ಮಿಲ್ಟನ್ ಸದೃಶ ಕೃತಿಗಳಲ್ಲಿ ಮೊದಲನೆಯದಾದ, 'ಪೂರ್ ಪಾಲ್' ಎಂಬ ಕವಿತೆಯ ರಚನೆಯಲ್ಲಿ ತೊಡಗಿದ್ದ, ಈ ಕೃತಿಯೂ ಕೂಡಾ ವಿವಿಧ ಬೇರೆ ಬೇರೆ ಭಾಷೆಗಳನ್ನು ಒಳಗೊಂಡ ಸಾಲುಗಳನ್ನು ಹೊಂದಿದೆ.
ಮೂಲಗಳು
[ಬದಲಾಯಿಸಿ]ಎಲಿಯಟ್‌ರು ಉದ್ಧರಿಸುವ ಮೂಲಗಳು ಅಥವಾ ಅವರು ಪ್ರಸ್ತಾಪವನ್ನು ಮಾಡುವುದು ಈ ಕೆಳಕಂಡವರ ಕೃತಿಗಳನ್ನು ಒಳಗೊಂಡಿರುತ್ತದೆ : ಹೋಮರ್, ಸೋಫೋಕ್ಲೆ/ಕ್ಲಿಸ್, ಪೆಟ್ರಾನಿಯಸ್, ವಿರ್ಜಿಲ್, ಒವಿಡ್[೨೨], ಹಿಪ್ಪೋದ ಸಂತ ಅಗಸ್ಟೀನ್, ಡಾಂಟೆ ಅಲಿಘಿಯ್ರಿ, ವಿಲಿಯಂ ಷೇಕ್ಸ್‌ಪಿಯರ್, ಎಡ್ಮಂಡ್ ಸ್ಪೆನ್ಸರ್, ಗೆರಾರ್ಡ್ ಡೆ ನರ್ವಾಲ್, ಥಾಮಸ್ ಕಿಡ್, ಜಾಫ್ರೆ ಛಾಸರ್, ಥಾಮಸ್ ಮಿಡಲ್‌ಟನ್, ಜಾನ್ ವೆಬ್‌ಸ್ಟರ್, ಜೋಸೆಫ್ ಕಾನ್ರಾಡ್, ಜಾನ್ ಮಿಲ್ಟನ್, ಆಂಡ್ರ್ಯೂ ಮಾರ್ವೆಲ್, ಚಾರ್ಲ್ಸ್ ಬಾಡೆಲೈರ್, ರಿಚರ್ಡ್ ವಾಗ್ನರ್, ಆಲಿವರ್ ಗೋಲ್ಡ್‌ಸ್ಮಿತ್, ಹರ್ಮನ್ ಹೆಸ್ಸೆ, ಆಲ್ಡೌಸ್ ಹಕ್‌ಸ್ಲೇ, ಪಾಲ್ ವರ್ಲೈನ್, ವಾಲ್ಟ್ ವಿಟ್‌ಮನ್ ಮತ್ತು ಬ್ರಾಮ್ ಸ್ಟೋಕರ್. ಎಲಿಯಟ್‌ರು ಬೈಬಲ್, ಚರ್ಚ್ ಆಫ್ ಇಂಗ್ಲೆಂಡಿನ ಸ್ತೋತ್ರಪಾಠಗಳ ಪುಸ್ತಕ, ಹಿಂದೂಗಳ ಬೃಹದಾರಣ್ಯಕ ಉಪನಿಷತ್ತು ಹಾಗೂ ಬುದ್ಧನ ಅಗ್ನಿ ಧರ್ಮಬೋಧೆ ಗಳೂ ಸೇರಿದಂತೆ ಧಾರ್ಮಿಕ ಕೃತಿಗಳ ಹಾಗೂ ಸರ್ ಜೇಮ್ಸ್ ಫ್ರೇಜರ್‌ರ ದ ಗೋಲ್ಡನ್ ಭಾಫ್/ಬೌ ಮತ್ತು ಜೆಸ್ಸೀ ವೆಸ್ಟನ್‌ರ ಫ್ರಮ್ ರಿಚ್ಯುಯಲ್ ಟು ರೋಮ್ಯಾನ್ಸ್ (ನಿರ್ದಿಷ್ಟವಾಗಿ ಅದರಲ್ಲಿನ ಕೆಲ್ಟಿಕ್ ಪುರಾಣಸಾಹಿತ್ಯದ ಬಗೆಗಿನ ವೆಸ್ಟ್‌ಲ್ಯಾಂಡ್ ಕೃತಿಯ ಪ್ರಧಾನ ಆಶಯದ ಅಧ್ಯಯನ)ನಂತಹಾ ಸಾಂಸ್ಕೃತಿಕ ಮತ್ತು ಮಾನವಶಾಸ್ತ್ರದ ಅಧ್ಯಯನಗಳ ವ್ಯಾಪಕ ಬಳಕೆಯನ್ನು ಕೂಡಾ ಮಾಡಿರುತ್ತಾರೆ. ಮೂಲ ಮುಖ ಟಿಪ್ಪಣಿಯಲ್ಲಿ ಎಲಿಯಟ್‌ರು ಹೀಗೆಂದು ಬರೆದಿದ್ದಾರೆ "ಶೀರ್ಷಿಕೆ ಮಾತ್ರವಲ್ಲ, ಆದರೆ ಯೋಜನೆ ಮತ್ತು ಕವಿತೆಯ ಆನುಷಂಗಿಕ ಪ್ರತಿಮಾಪಂಥದ ಸಾಕಷ್ಟು ಬಳಕೆಗಳ ಬಗ್ಗೆ ಮಿಸ್ ಜೆಸ್ಸೀ L ವೆಸ್ಟನ್‌ರು ಸಲಹೆಯನ್ನಿತ್ತಿದ್ದರು"[H], ಆದರೆ - ಮೂವತ್ತು ವರ್ಷಗಳ ನಂತರ - ಕವಿತೆಯ ಟಿಪ್ಪಣಿಗಳಲ್ಲಿ ವೆಸ್ಟನ್‌ರ ಸಲಹೆಗೆ ಉದಾರವಾದ ಒಪ್ಪಿಗೆಯನ್ನು ಬಹಿರಂಗವಾಗಿ ಹಿಂತೆಗೆದುಕೊಂಡು, "ಬಹಳ ಮಂದಿ ಅನ್ವೇಷಕರನ್ನು ವ್ಯರ್ಥ ಪ್ರಯತ್ನಕ್ಕೆ ಈಡು ಮಾಡಿದಂತಾಯಿತು/ಕಾಡುಬಾತುಗಳ ಬೇಟೆಗೆ ಕಳಿಸಿದಂತಾಯಿತು" ಎಂದು ತನ್ನ ಪಶ್ಚಾತ್ತಾಪವನ್ನು ವ್ಯಕ್ತಪಡಿಸಿದ್ದರು."[೨೩]. ಎಲಿಯಟ್‌ರು ದ ವೇಸ್ಟ್ ಲ್ಯಾಂಡ್‌ಅನ್ನು ಹೊರತುಪಡಿಸಿ ಇತರೆ ಬಳಸಿದ್ದ ಸಂಕೇತಗಳಲ್ಲಿ ಮಹಾರಾಜ ಫಿಷರ್ ಕಿಂಗ್, ಟ್ಯಾರೋ ಕಟ್ಟು, ಅಪಾಯಕಾರಿ ಪೂಜಾಕೊಠಡಿ, ಮತ್ತು ಅಂತಿಮ ಪಾನಪಾತ್ರೆಯ ಅನ್ವೇಷಣೆಗಳು ಸೇರಿದ್ದವು.
ವಿಮರ್ಶಕರುಗಳಿಂದ ಪಡೆದ ಸ್ವೀಕೃತಿ
[ಬದಲಾಯಿಸಿ]ಕವಿತೆಯ ಕುರಿತಾದ ಆರಂಭಿಕ ಸ್ವಾಗತವು ಮಿಶ್ರಪ್ರತಿಕ್ರಿಯೆಯಾಗಿತ್ತು ; ಅದರ ಸಾರ್ವತ್ರಿಕ ಹತಾಶೆಯನ್ನು ಹಾಗೂ ದೇಶೀಯ ತಂತ್ರಗಳ ಚಿತ್ರಣವನ್ನು ಹಲವರು ಹೊಗಳಿದ್ದಾರಾದರೂ , F. L. ಲ್ಯೂಕಾಸ್‌ರಂತಹಾ ಇತರರು, ಮೊದಲಿಂದಲೇ ಈ ಕವಿತೆಯ ಬಗ್ಗೆ ಅಸಹ್ಯಿಸಿಕೊಂಡಿದ್ದರೆ,[೨೪] ಚಾರ್ಲ್ಸ್ ಪಾವೆಲ್‌ರು "ಅಷ್ಟೊಂದು ಮಟ್ಟಿಗಿನ ವ್ಯರ್ಥ ಪುಟಗಳು" ಎಂದು ಟೀಕೆ ಮಾಡಿದ್ದರು.[೨೫]
ಎಡ್ಮಂಡ್ ವಿಲ್ಸನ್‌ರು ದ ಡಯಲ್ ಗೆಂದು 1922ರಲ್ಲಿ ರಚಿಸಿದ "ದ ಪೊಯೆಟ್ರಿ ಆಫ್ ಡ್ರೌತ್ " ಎಂಬ ಪ್ರಭಾವಶಾಲಿ ಕೃತಿಯು ಅನೇಕ ವಿಮರ್ಶಕರು ಟೀಕಿಸಿದ ಪ್ರಕಾರ ಕವಿತೆಯು ಪ್ರಯೋಜನೀಯ ಎಂದೆನಿಸುವಂತಹಾ ಸಂರಚನೆಯನ್ನು ಹೊಂದಿದೆ ಎಂದು ಬಿಂಬಿಸುವಲ್ಲಿ ಅಸಾಧಾರಣವಾಗಿ ಉದಾರತೆಯನ್ನು ಪ್ರದರ್ಶಿಸುತ್ತಿದೆ ಹಾಗೂ ಜೀವನಚರಿತ್ರೆಗೆ ಸಂಬಂಧಿಸಿದ ಮತ್ತು ಭಾವಾತ್ಮಕವಾದ ಅಂಶಗಳಿಗೆ ಮಹತ್ವವನ್ನು ನೀಡಿದೆ:
ಜೀವನವು ಕೇವಲ ಬರಡು ಹಾಗೂ ನಿರರ್ಥಕ ಮಾತ್ರವಲ್ಲ, ಬದಲಿಗೆ ಜನರು ಅದರ ಬರಡುತನ ಹಾಗೂ ನಿರರ್ಥಕತೆಗಳನ್ನು ಹಿಂದೆಯೇ ಸಾವಿರಗಳಷ್ಟು ಬಾರಿ ಅನುಭವಿಸಿದ್ದಾರೆ. T. S. ಎಲಿಯಟ್‌ರು ಲಂಡನ್ ನಗರದಲ್ಲಿನ ಬಂಜರು ಪ್ರದೇಶಗಳ ಮೂಲಕ ಹಾದುಹೋಗುತ್ತಾ ಈ ಬಂಜರು ಪ್ರದೇಶವು ಮೊದಲಿನಿಂದಲೂ ಅಲ್ಲಿದೆ ಎಂಬುದರ ಬಗ್ಗೆ ತೀವ್ರತೆಯನ್ನು ಅನುಭವಿಸುತ್ತಾರೆ. ಟಿರೆಸಿಯಾಸ್‌ನ ತರಹ ಆತನೂ ಕೂಡಾ ಥೇ/ಥೀಬೆಸ್‌ನ ಗೋಡೆಯ ಕೆಳಗೆ ಕುಳಿತಿರುತ್ತಾನೆ ; ಬುದ್ಧನ ಹಾಗೆ ಆತನು ಕೂಡಾ ವಿಶ್ವವನ್ನು ಶುಷ್ಕ ದಾವಾನಲವೆಂದು ಭಾವಿಸಿದ್ದಾನೆ ; ಕೊರವಂಜಿಯ ಹಾಗೆ ಆತನಿಗೆ ಎಲ್ಲವೂ ಗೊತ್ತಿದೆ ಆದರೆ ಎಲ್ಲವೂ ಗೊತ್ತಿದ್ದರೂ ಪ್ರಯೋಜನವಿಲ್ಲ.
ಎಲಿಯಟ್‌ರನ್ನು ತಿರಸ್ಕಾರದಿಂದ ಕಂಡಿದ್ದ ಭಯಾನಕ ಕೃತಿಗಳ ಲೇಖಕ H. P. ಲವ್‌ಕ್ರಾಫ್ಟ್‌ನು ಈ ಕವಿತೆಯನ್ನು "ಕಾರ್ಯತಃ ಪದಪುಂಜಗಳು, ಪಾಂಡಿತ್ಯಪೂರ್ಣ ಸೂಚ್ಯ ಉಲ್ಲೇಖಗಳು, ಉದ್ಧರಣೆಗಳು , ಗ್ರಾಮ್ಯ ಶಬ್ದಗಳು ಹಾಗೂ ಸಾಮಾನ್ಯವಾಗಿ ನಿರುಪಯುಕ್ತ ಕಂತೆಗಳ ಅರ್ಥಶೂನ್ಯ ಸಂಗ್ರಹವಾಗಿದೆ "[೨೬] ಎಂದು ಕರೆದಿದ್ದರು ಹಾಗೂ "ವೇಸ್ಟ್ ಪೇಪರ್ : ಎ ಪೊಯೆಮ್ ಆಫ್ ಪ್ರೊಫೌಂಡ್ ಇನ್‌ಸಿಗ್ನಿಫಿಕೆನ್ಸ್ " ಎಂಬ ಶೀರ್ಷಿಕೆಯ ಕಟುವಾದ ಹಾಸ್ಯಪ್ರಹಸನವನ್ನು ರಚಿಸಿದ್ದರು.[೨೭]
ವಿಮರ್ಶಕ ಹೆರಾಲ್ಡ್ ಬ್ಲೂಮ್‌ರು ದ ವೇಸ್ಟ್ ಲ್ಯಾಂಡ್ ಕೃತಿಯ ಅಗ್ರಗಾಮಿ ಕೃತಿಗಳೆಂದರೆ ಆಲ್‌ಫ್ರೆಡ್ ಲಾರ್ಡ್ ಟೆನ್ನಿಸನ್‌ರ ಮಾಡ್ ಎಂಬ ಏಕವ್ಯಕ್ತಿ ನಾಟಕ ಹಾಗೂ ನಿರ್ದಿಷ್ಟವಾಗಿ ವಾಲ್ಟ್ ವಿಟ್‌ಮನ್‌ರ ಎಲೆಜಿ, ವೆನ್ ಲೈಲಾಕ್ಸ್ ಲಾಸ್ಟ್ ಇನ್ ದ ಡೋರ್‌ಯಾರ್ಡ್ ಬ್ಲೂಮ್‌ಡ್ ಗಳೆಂದು ಭಾವಿಸಿದ್ದರು. ಎಲಿಯಟ್‌ರ ಕವಿತೆಯ ಪ್ರಮುಖ ಪ್ರತಿಮೆಗಳು ವಿಟ್‌ಮನ್‌ರ ಓಡ್: ದ ಲೈಲಾಕ್ಸ್‌ನಲ್ಲಿ ಕಂಡುಬರುತ್ತವೆ ಅದು ಎಲಿಯಟ್‌ರ ಕವಿತೆಗಳಾದ "ಅನ್‌ರಿಯಲ್ ಸಿಟಿ," ದ ಡ್ಯೂಪ್ಲಿಕೇಷನ್ ಆಫ್ ದ ಸೆಲ್ಫ್", "ಡಿಯರ್ ಬ್ರದರ್ ", "ಮರ್ಮರ್ ಆಫ್ ಮೆಟರ್ನಲ್ ಲೇಮೆಂಟೇಷನ್ ", ದ ಇಮೇಜ್ ಆಫ್ ಫೇಸಸ್ ಪೀರಿಂಗ್ ಅಟ್ ಅಸ್ ಮತ್ತು ಹರ್ಮಿಟ್ ಥ್ರಷ್ ಗೀತೆಗಳೊಂದಿಗೆ ಆರಂಭವಾಗುತ್ತದೆ.
ಎಲಿಯಟ್‌ರು WWII ಮಹಾಸಮರದ ಅವಧಿಯಲ್ಲಿ ಒಂದು ಸಂಜೆ ರಾಜಕುಟುಂಬದ ಮುಂದೆ ಕವಿತೆಯ ಕೆಲವು ಚರಣಗಳನ್ನು ಓದಿದ್ದರು. ವರ್ಷಗಳುರುಳಿದ ನಂತರ, ಒಮ್ಮೆ ರಾಜಮಾತೆಯವರು ಆ ಸಂಜೆಯನ್ನು ಹೀಗೆ ನೆನಪಿಸಿಕೊಂಡರು:
ಉತ್ತಮ ಪೋಷಾಕಿನಲ್ಲಿದ್ದ ಕೊಂಚಮಟ್ಟಿಗೆ ವಿಷಣ್ಣವದನನಾಗಿದ್ದ ಈ ವ್ಯಕ್ತಿಯನ್ನು ಕೊಠಡಿಯೊಂದಕ್ಕೆ ಕರೆಸಿಕೊಂಡಿದ್ದೆವು, ನಂತರ ಆತ ಕವಿತೆಯನ್ನು ಓದಿದ... ನನಗನಿಸುವ ಮಟ್ಟಿಗೆ ಅದರ ಹೆಸರು ದ ಡೆಸರ್ಟ್ ಎಂಬುದಾಗಿತ್ತು. ಹಾಗೂ ಮೊದಲಿಗೆ ಹುಡುಗಿಯರು [ಎಲಿಜಬೆತ್ ಮತ್ತು ಮಾರ್ಗರೇಟ್ ] ಅದನ್ನು ಕೇಳಿ ಮುಸಿಮುಸಿ ನಕ್ಕರು, ನಂತರ ನಾನೂ ಮುಸಿಮುಸಿ ನಕ್ಕೆ ಹಾಗೂ ನಂತರ ಮಹಾರಾಜರೂ ನಕ್ಕರು.[೨೮]
"ದ ಬ್ಯೂರಿಯಲ್ ಆಫ್ ದ ಡೆಡ್ "ನಲ್ಲಿನ ಪ್ರಸ್ತಾಪಗಳು
[ಬದಲಾಯಿಸಿ]"ದ ಬ್ಯೂರಿಯಲ್ ಆಫ್ ದ ಡೆಡ್" ಎಂಬುದು ಎಲಿಯಟ್‌ರ ಕೃತಿಯ ಮೊದಲ ವಿಭಾಗದ ಶೀರ್ಷಿಕೆಯಾಗಿದ್ದು ಅದರಲ್ಲಿ ಚರ್ಚ್ ಆಫ್ ಇಂಗ್ಲೆಂಡ್‌ನ (ಆಂಗ್ಲಿಕನ್)ನ ಸ್ತೋತ್ರಪಾಠಗಳ ಪುಸ್ತಕ ಬುಕ್ ಆಫ್ ಕಾಮನ್ ಪ್ರೇಯರ್‌ನ ಪ್ರಸ್ತಾಪವನ್ನು ಮಾಡಲಾಗಿದೆ.
"ದ ಬ್ಯೂರಿಯಲ್ ಆಫ್ ದ ಡೆಡ್"ನ ಎರಡನೇ ಪರಿಚ್ಛೇದವು ಅಧಿಕಾರರಹಿತ ಮೇರಿಯ ಧ್ವನಿಯನ್ನು ಬದಲಾಯಿಸಿ ನಿರೂಪಕನ ಧ್ವನಿಗೆ ತಿರುಗುತ್ತದೆ. ಈ ಪರಿಚ್ಛೇದದ ಮೊದಲ ಹನ್ನೆರಡು ಸಾಲುಗಳು ಹಳೆಯ ಒಡಂಬಡಿಕೆಯ ಮೂರು ಉಲ್ಲೇಖಗಳನ್ನು ಹೊಂದಿದ್ದು ನಿರೂಪಕನು ಬೇಸಿಗೆಯ ಕ್ಷಾಮದಿಂದ ಪೀಡಿತವಾದ ಹಾಗೂ ಅದರ ಪರಿಣಾಮವಾಗಿ ಮರಳುಭೂಮಿಯಾಗಿ ಮಾರ್ಪಟ್ಟ ಪ್ರದೇಶದಲ್ಲಿ ತಾನಿರುವುದನ್ನು ಕಂಡುಕೊಳ್ಳುತ್ತಾನೆ. ಆತನನ್ನು ಹೀಬ್ರ್ಯೂ ಭಾಷೆಯ ಬೈಬಲ್‌ಗಳಲ್ಲಿ ಸರ್ವೇ ಸಾಮಾನ್ಯವಾದ "ಸನ್ ಆಫ್ ಮ್ಯಾನ್/ಯೇಸುಕ್ರಿಸ್ತ,"ಎಂಬ ನಾಮಧೇಯದಿಂದ ಕರೆಯಲಾಗುತ್ತಿತ್ತು, ಕೆಲವೊಮ್ಮೆ ಯಾವುದೇ ವ್ಯಕ್ತಿಯನ್ನು ಸೂಚಿಸಲು ಬಳಸಬಹುದಾದ —i.e. ಮನುಷ್ಯನ ಪುತ್ರ = ಮಾನವ, ಆದರೆ ಕೆಲವೊಮ್ಮೆ ನಿರ್ದಿಷ್ಟ ವ್ಯಕ್ತಿಯನ್ನು ಪ್ರತ್ಯೇಕವಾದಿ ಸೂಚಿಸಲು ಬಳಸಲಾಗುತ್ತಿತ್ತು ಉದಾಹರಣೆಗೆ ಇಸ್ರೇಲ್‌ನ ಜನರಿಗೆ ತಮ್ಮ ವಿಗ್ರಹಾರಾಧನೆಯನ್ನು ಬಿಡದಿದ್ದರೆ ಆ ಬಗ್ಗೆ ಪಶ್ಚಾತ್ತಾಪಪಡಬೇಕಾಗುತ್ತದೆ ಎಂದು ಎಚ್ಚರಿಸಲು ದೇವರು ಕಳಿಸಿಕೊಟ್ಟನೆಂದು ಹೇಳಲಾದ ಎಝೆಕಿಯೆಲ್‌ನಂತೆ. ಇದು ಹೊಸ ಒಡಂಬಡಿಕೆಯಲ್ಲಿ ಬಳಸಲಾದ ನಾಮಧೇಯವೂ ಆಗಿದ್ದು, ಗಮನಾರ್ಹವಾಗಿ ತನ್ನ ಬರಲಿರುವ ಸಾವು ಹಾಗೂ ಭವಿಷ್ಯದ್ದರ್ಶನದ ಮರಳುವಿಕೆಯ ಬಗ್ಗೆ ಅಥವಾ ಬರಲಿರುವ ತೀರ್ಪುಗಳ ಬಗೆಗೆ ಪ್ರವಾದೀಯ ಭವಿಷ್ಯವಾಣಿಯನ್ನು ಹೇಳಬೇಕಾದರೆ ಏಸು ತನ್ನನ್ನು ಕರೆದುಕೊಳ್ಳಲು ಬಳಸುತ್ತಿದ್ದ ನಾಮಧೇಯವಾಗಿದೆ (e.g. ಮಾರ್ಕ್‌ನ ಸುವಾರ್ತೆ 10:32-34, ಮ್ಯಾಥ್ಯೂನ ಸುವಾರ್ತೆ 20:17-19; ಲ್ಯೂಕನ ಸುವಾರ್ತೆ 18:31-34 ಮತ್ತು ಮಾರ್ಕ್ 8:38-9:1, ಮ್ಯಾಥ್ಯೂ 16:27-28, ಲ್ಯೂಕ್ 9:26-27).
ಎಝೆಕಿಯೆಲ್‌ನಲ್ಲಿ ದೇವರು ಅಂತಿಮವಾಗಿ ಪ್ರವಾದಿಗೆ ಇಸ್ರೇಲ್ ಬದಲಾಗುವುದಿಲ್ಲವೆಂದು ಹೇಳುತ್ತಾನೆ; ಆದುದರಿಂದ ಅವರ ಬಲಿಪೀಠಗಳು ನಿರ್ಜನವಾಗುತ್ತವೆ, ಮೂರ್ತಿಗಳು ಹಾನಿಗೊಳ್ಳುತ್ತವೆ ಮತ್ತು ಅವರ ನಗರಗಳು ವ್ಯರ್ಥವಾದ ವಸ್ತುಗಳಿಂದ ತುಂಬಿಹೋಗುತ್ತವೆ ಎನ್ನುತ್ತಾನೆ. ಇಕ್ಲಿಸಿಯಾಸ್ಟೀಸ್ ಕೃತಿಯಲ್ಲಿ, ದೇವರು ಯಹೂದಿ ಜನಸಮೂಹಕ್ಕೆ ಅವರು ತಮ್ಮ ಯೌವನದ ದಿನಗಳನ್ನು ನೆನಪಿಟ್ಟುಕೊಳ್ಳಲೇ ಬೇಕಿರುತ್ತದೆ ಏಕೆಂದರೆ ಅವರ ವಯಸ್ಸಾದ ದಿನಗಳಲ್ಲಿ "ಭಯವುಂಟು ಮಾಡುವ ಪರಿಸ್ಥಿತಿಗಳು ಬರುವ ಹಾದಿಯಲ್ಲಿವೆ" ಮತ್ತು "ನಂತರ ಭೂಮಿಯಲ್ಲಿ ಮೊದಲು ಹೇಗೆ ಧೂಳಿನಿಂದ ಕೂಡಿತ್ತೋ ಅದೇ ಪರಿಸ್ಥಿತಿಗೆ ಹಿಂದಿರುಗಲಿದೆ "ಎಂದು ಎಚ್ಚರಿಸುತ್ತಾನೆ (ಪ್ರಮಾಣೀಕೃತ ಕಿಂಗ್ ಜೇಮ್ಸ್ ಆವೃತ್ತಿ , ಎಝೆಕಿಯೆಲ್ 6:4, ಇಕ್ಲಿಸಿಯಾಸ್ಟೀಸ್ 12:5-7). ಗಿಷ್‌ರು ಈ ಪ್ರಸ್ತಾಪಗಳನ್ನು ವಿಶ್ಲೇಷಿಸಿ ಹೀಗೆಂದು ಬರೆಯುತ್ತಾರೆ , "ಬಂಜರು/ಸತ್ತವರಿಂದ ಕೂಡಿದ ಭೂಮಿ, ಭಗ್ನವಾದ ಮೂರ್ತಿಗಳು, ಭಯ ಹಾಗೂ ಧೂಳು ಇವೆಲ್ಲವೂ ಮಾನವನ ವೈಫಲ್ಯತೆಯ ಗೂಢಾರ್ಥವನ್ನು ಸೂಚಿಸುತ್ತವೆ" (50). ಅಂತಹಾ ಧೈರ್ಯಗೆಡುವ ಘಟನೆಗಳ ಸರಣಿಯಿಂದ ಜರ್ಜರಿತನಾದ ನಂತರ, ನಿರೂಪಕನಿಗೆ ನಿಗೂಢವಾದ "ಕೆಂಪು ಶಿಲಾಗುಡ್ಡದ" ಕೆಳಗೆ ಆಶ್ರಯವನ್ನು ನೀಡಲಾಗುತ್ತದೆ ಇದು ಬರಲಿರುವ ಯೆಹೂದ್ಯರ ಉದ್ಧಾರಕನನ್ನು ಸೂಚಿಸುವ "ಬರಡು ಭೂಮಿಯಲ್ಲಿ ಬಂದ ನದಿಗಳೋಪಾದಿಯ ನೀರಿನಂತೆ, ಕಷ್ಟದಾಯಕವಾದ ಭೂಮಿಯಲ್ಲಿ ದೊರಕಿದ ಭಾರೀ ಗುಡ್ಡದ ನೆರಳಿನಂತೆ " ಕಾಪಾಡುವ ಇಸಯ್ಯಾದಲ್ಲಿನ ಉಲ್ಲೇಖವಾಗಿದೆ(ಇಸಯ್ಯಾ 32:2).
ನಂತರ ಇದು ರಿಚರ್ಡ್ ವಾಗ್ನರ್ ವಿರಚಿತ ನೃತ್ಯನಾಟಕ ಟ್ರಿಸ್ಟಾನ್ ಮತ್ತು ಐಸೋಲ್ಡೆ ನ 5–8 ಚರಣಗಳನ್ನು ಇದು ಉಲ್ಲೇಖಿಸುತ್ತದೆ[೨೯] [೩೦][೩೧]
Frisch weht der Wind
der Heimat zu:
mein irisch Kind,
wo weilest du?
(ಉಲ್ಲಾಸಗೊಳ್ಳುವಂತೆ ಗಾಳಿಯು ಬೀಸುತ್ತಲಿದೆ/ಮನೆಯ ಕಡೆಗೆ /ನನ್ನ ಐರಿಷ್ ಮಗುವೇ /ನೀನು ಎಲ್ಲೆಲ್ಲಿ ಅಲೆಯುತ್ತಿರುವೆ ?) ಅದು ನಂತರ ಅಂಕ 3, ಚರಣ 24ರಲ್ಲಿನ , Oed' und leer das Meer (ಡೀಸೊಲೇಟ್ ಅಂಡ್ ಎಂಪ್ಟಿ [ಈಸ್] ದ ಸೀ)ಅನ್ನು ಉಲ್ಲೇಖಿಸುತ್ತದೆ.[೩೨]
"ಅನ್‌ರಿಯಲ್ ಸಿಟಿ" ವಿಭಾಗದಲ್ಲಿ ಜನಸಂದಣಿಯು ಚಳಿಗಾಲದ ಮುಂಜಾವೊಂದರಲ್ಲಿ ದಟ್ಟ ಮಂಜಿನ ನಡುವೆ ನಡೆದುಕೊಂಡು ಸಾಗುತ್ತಿದೆ. ಅದರಲ್ಲಿದ್ದ ಜನರ ವಿಪರೀತ ಸಂಖ್ಯೆಯನ್ನು ಕಂಡು ಚಕಿತನಾದ ನಿರೂಪಕನು ಹೀಗೆಂದು ಉದ್ಗರಿಸುತ್ತಾನೆ, "ಸಾವು ಇಷ್ಟೊಂದು ಜನರನ್ನು ನಾಶ ಮಾಡುತ್ತದೆ ಎಂದು ನಾನು ಭಾವಿಸಿರಲಿಲ್ಲ "(63). ಈ ಪದ್ಯಚರಣವು ಡಾಂಟೆಯ ಇನ್‌ಫರ್ನೋದ ಹಾಗೂ ನರಕದ ಹಜಾರದಲ್ಲಿ ಆತನು ಕಂಡ ಅಪಾರ ಸಂಖ್ಯೆಯ ಜನರ ನೇರ ಪ್ರಸ್ತಾಪವಾಗಿದೆ. ಡಾಂಟೆ ಹೀಗೆಂದು ಬರೆಯುತ್ತಾರೆ, "ಆತ್ಮಗಳ ಅಂತ್ಯಕಾಣದ ಸಾಲು ಹಿಂಡು ಹಿಂಡಾಗಿ ಸಾಗುತ್ತಿತ್ತು, ತೀರ ಎಷ್ಟೆಂದರೆ ಸಾವು ಅದು ಹೇಗೆ ಅಷ್ಟೊಂದು ಜನರನ್ನು ನಾಶ ಮಾಡಬಲ್ಲದು ಎಂದು ಅಚ್ಚರಿಪಟ್ಟೆ" (3.55-57). ಡಾಂಟೆಯು ಆ ಜನಸಂದಣಿಯಲ್ಲಿದ್ದ ಓರ್ವನನ್ನು ಗುರುತಿಸಿ ವರ್ಣಿಸುತ್ತಾ ಹೀಗೆಂದು ಬರೆಯುತ್ತಾರೆ , "ನಾನು ಖಂಡಿತಾ ಭಾರೀ ನಿರಾಕರಣೆಯನ್ನು ಮಾಡಿರಬಹುದಾಗಿದ್ದ ಓರ್ವ ಹೇಡಿಯ ನೆರಳನ್ನು ಕಂಡೆ " (3.59-60). ಡಾಂಟೆಯು ಪ್ರಸ್ತಾಪಿಸಿದ "ಭಾರೀ ನಿರಾಕರಣೆಯು" ಒಳ್ಳೆಯದು ಅಥವಾ ಕೆಟ್ಟದನ್ನು ಆಯ್ದುಕೊಳ್ಳದ ಹೇಡಿತನದ ಬಗ್ಗೆ ಆಗಿರುತ್ತದೆ. ಅವರು ಎಂದೂ ಜೀವಿಸುವಿಕೆಯನ್ನೇ ಕಾಣದೇ ಸತ್ತಿದ್ದಾರೆ; ಅಷ್ಟು ಮಾತ್ರವಲ್ಲದೇ, ಅವರು ಧಾರ್ಮಿಕರಾಗುವ ಇಲ್ಲವೇ ಪಾಪವನ್ನು ಮಾಡುವ ಬಗ್ಗೆ ಯಾವುದೇ ಆಯ್ಕೆಯನ್ನು ಮಾಡದಿರುವ ಕಾರಣ ಅವರು ಸ್ವರ್ಗ ಅಥವಾ ನರಕ ಎರಡಕ್ಕೂ ಪ್ರವೇಶಿಸುವಂತಿರುವುದಿಲ್ಲ.
ಇವನ್ನೂ ಗಮನಿಸಿ
[ಬದಲಾಯಿಸಿ]- 1922 ಕವನ ಕ್ಷೇತ್ರದಲ್ಲಿ, ಪ್ರಥಮ ಪ್ರಕಟಣೆಯ ವರ್ಷ
ಉಲ್ಲೇಖಗಳು
[ಬದಲಾಯಿಸಿ]ಟಿಪ್ಪಣಿಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ Bennett, Alan (12 July 2009). "Margate's shrine to Eliot's muse". The Guardian. Retrieved 1 September 2009.
- ↑ Jump up to: ೨.೦ ೨.೧ ಟೈಮ್ಸ್ ಪತ್ರಿಕೆ ಯ ಲೇಖನ ಅಕ್ಟೋಬರ್ 9, 2009 " ದ ವೇಸ್ಟ್ ಲ್ಯಾಂಡ್‌ನಿಂದ ಹೊರಕ್ಕೆ : TS ಎಲಿಯಟ್ ರಾಷ್ಟ್ರದ ಅತ್ಯಂತ ಜನಪ್ರಿಯ ಕವಿಯಾಗಿದ್ದಾರೆ" Archived 2011-06-15 ವೇಬ್ಯಾಕ್ ಮೆಷಿನ್ ನಲ್ಲಿ. ಪಡೆದಿದ್ದು 2010-08-08
- ↑ ಎಲಿಯಟ್ 1988, p. 451
- ↑ ಅಲ್ಡಿಂಗ್‌ಟನ್ p. 261
- ↑ ಎಲಿಯಟ್ 1971 p. xxii
- ↑ ಎಲಿಯಟ್ 1971 p. xxix
- ↑ ಎಲಿಯಟ್ 1988 pp. 498-9
- ↑ ಪುಸ್ತಕದ ರಾಯಧನ ವ್ಯವಹಾರ: ರೈನೆ, p. 77
- ↑ T. S. ಎಲಿಯಟ್‌ರ "ಲಂಡನ್ ಲೆಟರ್ಸ್ " ಟು ದ ಡಯಲ್ , ವೀಕ್ಷಣೆ 28 ಫೆಬ್ರವರಿ 2008.
- ↑ 1922ರಲ್ಲಿನ ಪ್ರತಿ ಬ್ರಿಟಿಷ್ ಪೌಂಡ್‌ಗೆ US ಡಾಲರ್‌ಗಳ ವಿನಿಮಯ ಬೆಲೆ : ಆಫೀಸರ್
- ↑ ಡಯಲ್ ಪತ್ರಿಕೆಯ ಆರಂಭಿಕ ಪ್ರಸ್ತಾಪ : ರೈನೆ, p. 78.
- ↑ ಎಲಿಯಟ್‌ರಿಗೆ ದ ಡಯಲ್ ನಿಯತಕಾಲಿಕೆಯು ಪ್ರಶಸ್ತಿಯನ್ನು ಘೋಷಿಸಿದ್ದುದು, ವೀಕ್ಷಣೆ 28 ಫೆಬ್ರವರಿ 2008
- ↑ ಡಯಲ್ ಪತ್ರಿಕೆಯು ಪುಸ್ತಕಗಳನ್ನು ಖರೀದಿಸುವುದು : ರೈನೆ, p. 86. ಇದರಿಂದಾಗಿ ದ ಡಯಲ್ ಗೆ $315ರಷ್ಟು ಹೆಚ್ಚಿನ ವೆಚ್ಚವಾಯಿತು ಎಂದು ರೈನೆ ಸೇರಿಸುತ್ತಾರೆ.
- ↑ ಗ್ಯಾಲಪ್ 1969 pp. 29-31, 208
- ↑ ಎಲಿಯಟ್‌ರ 1922ರ ವೇತನ : ಗಾರ್ಡನ್ 2000 p. 165
- ↑ ಕವಿತೆಯಿಂದ ಬಂದ ಒಟ್ಟು ಆದಾಯ : ರೈನೆ, p. 100
- ↑ ಎಲಿಯಟ್ 1971 p. 4
- ↑ ಎಲಿಯಟ್ 1988 p. 567.
- ↑ ಪೌಂಡ್ 2005 p. 33
- ↑ ವಿಲ್‌ಹೆಲ್ಮ್ 1990 p. 309
- ↑ Ackerley, C J (2007). T S Eliot: 'The Love Song of J. Alfred Prufrock' and 'The Waste Land'. Humanities-Ebooks. ISBN 978-1-84760-015-8.
- ↑ ಡರ್ಕ್ ವೇಯ್ಡ್‌ಮನ್ : ಅಂಡ್ ಐ ಟಿರೆಸಿಯಾಸ್ ಹ್ಯಾವ್ ಫೋರ್‌ಸಫರ್‌ಡ್ ಆಲ್.... . : LITERATURA ನಲ್ಲಿ 51 (3), 2009, S. 98-108.
- ↑ ವೈಲ್ಡ್ ಗೂಸ್ ಛೇಸ್/ವ್ಯರ್ಥ ಪ್ರಯತ್ನ: ಎಲಿಯಟ್ 1961
- ↑ ಲ್ಯೂಕಾಸ್ , F. L., 'ದ ವೇಸ್ಟ್ ಲ್ಯಾಂಡ್', ದ ನ್ಯೂ ಸ್ಟೇಟ್ಸ್‌ಮನ್ , 3 ನವೆಂಬರ್ 1923. Archived 2011-06-07 ವೇಬ್ಯಾಕ್ ಮೆಷಿನ್ ನಲ್ಲಿ.ಉದ್ಧೃತ ಭಾಗಗಳು: Archived 2011-06-07 ವೇಬ್ಯಾಕ್ ಮೆಷಿನ್ ನಲ್ಲಿ. ಮೆಕ್‌ಮಿಲನ್ ಕೇಸ್‌ಬುಕ್ ಸರಣಿ ಹಾಗೂ ರೂಟ್‌ಲೆಡ್ಜ್ ಕ್ರಿಟಿಕಲ್ ಹೆರಿಟೇಜ್ ಸರಣಿಗಳಲ್ಲಿ ಮರು ಮುದ್ರಣಗಳನ್ನು ಮಾಡಲಾಗಿದೆ.
- ↑ ಚಾರ್ಲ್ಸ್ ಪಾವೆಲ್ , 'C.P.' ಎಂದು ಬರೆಯುವಿಕೆ , ಮೊದಲು ಮ್ಯಾಂಚೆಸ್ಟರ್ ಗಾರ್ಡಿಯನ್ ನಲ್ಲಿ ಪ್ರಕಟವಾದ ದ ವೇಸ್ಟ್ ಲ್ಯಾಂಡ್ ನ ವಿಮರ್ಶೆಯೊಂದರಲ್ಲಿ , 31 ಅಕ್ಟೋಬರ್ 1923, ಪುಟ 7, ಮತ್ತು T. S. ಎಲಿಯಟ್: ದ ಕ್ರಿಟಿಕಲ್ ಹೆರಿಟೇಜ್ (ಸಂಪುಟ 1, ಪುಟಗಳು 194 – 195)ದಲ್ಲಿ ಮರುಮುದ್ರಣ. ರೂಟ್‌ಲೆಡ್ಜ್ ಮತ್ತು ಕೆಗನ್ ಪಾಲ್, ಲಂಡನ್, 1982
- ↑ S. T. ಜೋಷಿ, ಎ ಡ್ರೀಮರ್ ಅಂಡ್ ಎ ವಿಷನರಿ , p. 179
- ↑ s:Waste Paper
- ↑ "ಎಲಿಜಬೆತ್ , ದ ಕ್ವೀನ್ ಮದರ್," ದ ಆಕ್ಸ್‌ಫರ್ಡ್ ಡಿಕ್ಷನರಿ ಆಫ್ ಮಾಡರ್ನ್ ಕೊಟೇಶನ್ಸ್ . Ed. ಎಲಿಜಬೆತ್ ನಾಲೆಸ್. ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್, 2008.
- ↑ ಎಲಿಯಟ್‌ರ ಟಿಪ್ಪಣಿಯು "V. ಟ್ರಿಸ್ಟಾನ್ ಅಂಡ್ ಐಸೋಲ್ಡೆ , I, ಚರಣಗಳು 5-8".
- ↑ "ಲಿಬ್ರೆಟ್ಟಿ : ಟ್ರಿಸ್ಟಾನ್ ಅಂಡ್ ಇಸ್ಲೋಡ್ : ಆಕ್ಟ್ ಒನ್, ಸೀನ್ ಒನ್". Archived from the original on 2011-07-16. Retrieved 2011-04-23.
- ↑ doi:10.1093/english/38.162.227
This citation will be automatically completed in the next few minutes. You can jump the queue or expand by hand - ↑ ಎಲಿಯಟ್‌ರ ಟಿಪ್ಪಣಿ : "Id. . III, ಚರಣ 24."
- ↑ ವಿಲಿಯಮ್‌ಸನ್ 2007
- ↑ ಎಲಿಯಟ್ 1986 pp. 109-10
ಉಲ್ಲೇಖಿಸಲಾದ ಕೃತಿಗಳು
[ಬದಲಾಯಿಸಿ]- Aldington, Richard (1941). Life for Life's Sake. The Viking Press.
- Bush, Ronald (1991). T. S. Eliot. Cambridge: Cambridge University Press. ISBN 0521390745.
- ಎಲಿಯಟ್ , T.S. (1961) "ದ ಫ್ರಾಂಟೀಯರ್ಸ್ ಆಫ್ ಕ್ರಿಟಿಸಿಸಮ್ " ಆನ್ ಪೊಯೆಟ್ರಿ ಅಂಡ್ ಪೊಯೆಟ್ಸ್. ನಲ್ಲಿ. ನ್ಯೂ ಯಾರ್ಕ್ : ನೂನ್‌ಡೇ ಪ್ರೆಸ್.
- ಎಲಿಯಟ್, T. S. (1971) ದ ವೇಸ್ಟ್ ಲ್ಯಾಂಡ್: ಎ ಫ್ಯಾಸಿಮಿಲಿ ಅಂಡ್ ಟ್ರಾನ್ಸ್‌ಕ್ರಿಪ್ಟ್ ಆಫ್ ದ ಒರಿಜಿನಲ್ ಡ್ರಾಫ್ಟ್‌ಸ್ ಇನ್‌ಕ್ಲೂಡಿಂಗ್ ದ ಅನ್ನೊಟೇಷನ್ಸ್ ಆಫ್ ಎಜ್ರಾ ಪೌಂಡ್ ವ್ಯಾಲೆರೀ ಎಲಿಯಟ್‌ರಿಂದ ಸಂಪಾದನೆ ಹಾಗೂ ಒಂದು ಪರಿಚಯಲೇಖನ, ಹಾರ್‌ಕೋರ್ಟ್ ಬ್ರೇಸ್ & ಕಂಪೆನಿ, ISBN 0-15-694870-2
- ಎಲಿಯಟ್, T. S. (1988) ದ ಲೆಟರ್ಸ್ ಆಫ್ T. S. ಎಲಿಯಟ್ , vol. 1. ಹಾರ್ಕೋರ್ಟ್ , ಬ್ರೇಸ್ ಜೊವಾನೋವಿಚ್
- ಎಲಿಯಟ್, T. S. (1986) "ದ ಫ್ರಾಂಟೀಯರ್ಸ್ ಆಫ್ ಕ್ರಿಟಿಸಿಸಂ " ಆನ್ ಪೊಯೆಟ್ರಿ ಅಂಡ್ ಪೊಯೆಟ್ಸ್ ನಲ್ಲಿ ಲಂಡನ್ : ಫೇಬರ್ ಅಂಡ್ ಫೇಬರ್ Ltd., ಲಂಡನ್ ISBN 0-571-08983-6
- Eliot, T.S. (2001). The Waste Land. New York: W. W. Norton. ISBN 0393974995.
- Gallup, Donald (1969). T. S. Eliot: A Bibliography (A Revised and Extended Edition). New York: Harcourt, Brace & World.
- Gordon, Lyndall (2000). T. S. Eliot: An Imperfect Life. New York: W. W. Norton & Company. ISBN 0393320936.
- ಆಫೀಸರ್, ಲಾರೆನ್ಸ್ H. (2008) "ಡಾಲರ್-ಪೌಂಡ್ ಎಕ್ಸ್‌ಚೇಂಜ್ ರೇಟ್ ಫ್ರಮ್ 1791", MeasuringWorth.com
- Pound, Ezra (2005). The Spirit of Romance. New Directions. ISBN 0811216462.
- Rainey, Lawrence (2005). Revisiting the Waste Land. New Haven: Yale University Press. ISBN 0300107072.
- Wilhelm, James J. (1990). Ezra Pound in London and Paris, 1908-1925. Pennsylvania State University Press. ISBN 027100682X.
- ವೇಯ್ಡ್‌ಮನ್, ಡರ್ಕ್. ಆಂಡ್ ಐ ಟಿರೆಸಿಯಾಸ್ ಹ್ಯಾವ್ ಫೋರ್‌ಸಫರ್‌ಡ್ ಆಲ್ : ಮೋರ್ ದ್ಯಾನ್ ಅಲ್ಯೂಷನ್ಸ್ ಟು ಅವಾಯ್ಡ್ ಇನ್ T.S.ಎಲಿಯಟ್'ಸ್ ದ ವೇಸ್ಟ್ ಲ್ಯಾಂಡ್? . : LITERATURA ನಲ್ಲಿ 51 (3), 2009, pp. 98–108.
- ವಿಲಿಯಮ್‌ಸನ್, ಸ್ಯಾಮ್ಯುಯೆಲ್ H. (2007) "ಫೈವ್ ವೇಸ್ ಟು ಕಂಪ್ಯೂಟ್ ದ ರಿಲೇಟಿವ್ ವ್ಯಾಲ್ಯೂ ಆಫ್ ಎ U.S. ಡಾಲರ್ ಅಮೌಂಟ್, 1790 - 2006," MeasuringWorth.Com
ಪ್ರಾಥಮಿಕ ಮೂಲಗಳು
[ಬದಲಾಯಿಸಿ]- Eliot, T. S. (1963). Collected Poems, 1909-1962. New York: Harcourt, Brace & World. ISBN 0151189781.
- ದ ವೇಸ್ಟ್ ಲ್ಯಾಂಡ್: ಎ ಫ್ಯಾಸಿಮಿಲಿ ಅಂಡ್ ಟ್ರಾನ್ಸ್‌ಕ್ರಿಪ್ಟ್ ಆಫ್ ದ ಒರಿಜಿನಲ್ ಡ್ರಾಫ್ಟ್‌ಸ್ ಇನ್‌ಕ್ಲೂಡಿಂಗ್ ದ ಅನ್ನೊಟೇಷನ್ಸ್ ಆಫ್ ಎಜ್ರಾ ಪೌಂಡ್ T. S. ಎಲಿಯಟ್‌ರಿಂದ, ವ್ಯಾಲೆರೀ ಎಲಿಯಟ್‌ರು ಟಿಪ್ಪಣಿ ಬರೆದಿದ್ದು ಹಾಗೂ ಸಂಪಾದಿಸಿದ್ದರು. (ಫೇಬರ್ ಅಂಡ್ ಫೇಬರ್, 1971) ISBN 0-571-09635-2 (ಪೇಪರ್‌ಬ್ಯಾಕ್ ISBN 0-571-11503-9)
ದ್ವಿತೀಯ ಮೂಲಗಳು
[ಬದಲಾಯಿಸಿ]- Ackroyd, Peter (1984). T. S. Eliot. London: Hamish Hamilton. ISBN 0241113490.
- Bedient, Calvin (1986). He Do the Police in Different Voices. Chicago: University of Chicago Press. ISBN 0226041417.
- Bloom, Harold (2003). Genius: a Mosaic of One Hundred Exemplary Creative Minds. New York: Warner Books. ISBN 0446691291.
- Brooker, Jewel (1990). Reading the Waste Land: Modernism and the Limits of Interpretation. Amherst: University of Massachusetts Press. ISBN 0870238035.
{{cite book}}
: Unknown parameter|coauthors=
ignored (|author=
suggested) (help) - Drew, Elizabeth (1949). T. S. Eliot: The Design of His Poetry. New York: Charles Scribner's Sons.
- Gish, Nancy (1988). The Waste Land: A Student's Companion to the Poem. Boston: Twayne. ISBN 0805780238.
- Miller, James (1977). T. S. Eliot's Personal Waste Land. University Park: Pennsylvania State University Press. ISBN 0271012374.
- Moody, A. David (1994). The Cambridge Companion to T. S. Eliot. Cambridge: Cambridge University Press. ISBN 0521421276.
- North, Michael (2000). The Waste Land (Norton Critical Editions). W. W. Norton. ISBN 0393974995.
- Reeves, Gareth (1994). T. S. Eliot's the Waste Land. New York: Harvester Wheatsheaf. ISBN 0745007384.
- Southam, B. C. (1996). A Guide to the Selected Poems of T. S. Eliot. San Diego: Harcourt Brace. ISBN 0156002612.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಮೇಲ್ಕಂಡ ಕವಿತೆ
- ಟಿಪ್ಪಣಿಗಳಿಂದ ಕೂಡಿದ ಆವೃತ್ತಿಗಳು
- ದ ವೇಸ್ಟ್ ಲ್ಯಾಂಡ್ @ ದ ಯೇಲ್ ಮಾಡರ್ನಿಸಮ್ ಲ್ಯಾಬ್ನ ಬಗ್ಗೆ ಪ್ರಮುಖವಾದ ಪ್ರಬಂಧ Archived 2011-06-21 ವೇಬ್ಯಾಕ್ ಮೆಷಿನ್ ನಲ್ಲಿ.
- "ದ ವೇಸ್ಟ್ ಲ್ಯಾಂಡ್"ದ ಅನ್ವೇಷಣೆ
- ಮೂಲದೊಂದಿಗೆ ದ ವೇಸ್ಟ್ ಲ್ಯಾಂಡ್ನ ಹೈಪರ್ಟೆಕ್ಸ್ಟ್ ಆವೃತ್ತಿ
- ಧ್ವನಿಮುದ್ರಣಗಳು
- T.S. ಎಲಿಯಟ್ ಕವಿತೆವನ್ನು ಓದಿ ಹೇಳುತ್ತಿರುವ ಧ್ವನಿಮುದ್ರಣ Archived 2004-06-10 ವೇಬ್ಯಾಕ್ ಮೆಷಿನ್ ನಲ್ಲಿ.
- ಲಿಬ್ರಿವಾಕ್ಸ್ ಸಂಸ್ಥೆ ಯಿಂದ ಉಚಿತ ಆಡಿಯೋಬುಕ್
- BBC ಧ್ವನಿಮುದ್ರಣ ಕಡತ. ದ ವೇಸ್ಟ್ ಲ್ಯಾಂಡ್ ಮತ್ತು ಎಲಿಯಟ್ನ ಬಗ್ಗೆ ಚರ್ಚೆ ರೇಡಿಯೋ 4'ನ ಕಾರ್ಯಕ್ರಮ ನಮ್ಮ ಕಾಲದಲ್ಲಿ .
- Pages using the JsonConfig extension
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Pages with incomplete DOI references
- Articles with hatnote templates targeting a nonexistent page
- Articles with unsourced statements from October 2010
- Articles with unsourced statements from February 2007
- CS1 errors: unsupported parameter
- Commons link is locally defined
- 1922ರ ಕವಿತೆಗಳು
- ಆಧುನಿಕತಾ ಸಿದ್ಧಾಂತದ ಗ್ರಂಥಗಳು
- T. S. ಎಲಿಯಟ್‌ರ ಕವಿತೆಗಳು
- ಮೂಲತಃ ದ ಕ್ರಿಟೇರಿಯನ್ (ನಿಯತಕಾಲಿಕೆ)ನಲ್ಲಿ ಪ್ರಕಟವಾದ ಕೃತಿಗಳು
- ಕವನ
- ಸಾಹಿತ್ಯ
- Pages using ISBN magic links