ವರ್ಗ:ಕವನ

ವಿಕಿಪೀಡಿಯ ಇಂದ
Jump to navigation Jump to search

ಕವನ ಸಾಹಿತ್ಯದ ಬಗ್ಗೆ ಲೇಖನಗಳು.

ಕವನ ಸಂಕಲನಗಳು : ಕನ್ನಡಹನಿಗಳಲ್ಲಿ ಕಾಣಬಹುದಾಗಿದೆ. ಎಲ್ಲವನ್ನೂ ಇಲ್ಲಿ ಸೇರಿಸಲು ಅಸಾಧ್ಯ. ಒಂದು ಜಲಕ್ ಈ ಕೆಳಗೆ :)

ಕಾರಣವೇ ಗೊತ್ತಿಲ್ಲದೆ

ಅಳು ಒಂದು ಮೂಡಿದೆ

ಮನದಲಾಡಿ ಭಯವಾಗಿದೆ

ಜೊತೆಯಲಿ ನೀನಿಲ್ಲದೆ

ಅನಿಸುತಿದೆ... ಈ ಕ್ಷಣವು

ಕನಸಾಗಿರಬಾರದೆ.....

ಹಳೆ ಗಾಯ ಮರೆಯಲು

ಹೊಸ ಗಾಯದ ಜರೂರತ್ತಿದೆ !

ಒಂದು ರೊಮ್ಯಾಂಟಿಕ್ ಕವನ[ಬದಲಾಯಿಸಿ]


 • ಉದಾಹರಣೆ :
 • ಮನಸು - ಕನಸು
 • ಪೂರ್ಣಿಮೆಯ ಒಂದು ದಿನ
 • ನಡೆದಿರಲು ತೋಟದಲಿ
 • ಅಚ್ಚರಿಯು ಎನ್ನೊಳಗೆ
 • ಮುದದ ಅಲೆ ಮನಸಿನಲಿ ಏಳುತಿರಲು ||೧||
 • ಏಕೆಂದು ಚಿಂತಿಸಿದೆ
 • ತಿಂಗಳಿನ ಸೊಗಸಲ್ಲ
 • ಇಂತಿರುವ ಚೆಲುವನ್ನು
 • ಕಂಡೆ ನಾನಂದು ನೀನಗುತಲಿರಲು ||೨||
 • ಅಂದು ನಾ ಸಂಜೆಯಲಿ
 • ಒಬ್ಬನೇ ಕುಳಿತಿರಲು
 • ಪುಳಕಿತವು ದೇಹದಲಿ
 • ಬಾನಿನಂಚಿನಲಿರಲು ಕೆಂಪುರಾಗ ||೩||
 • ಸಂಜೆಯಲಿ ಸೊಗಸೇನು
 • ಅಂದು ನಾ ನಿನ್ನೊಡನೆ
 • ನಡೆದಿರಲು ತೋಟದಲಿ
 • ನಿನ್ನ ಕದಪಿನಲಿಂತು ರಾಗ ರಾಗ ||೪||
 • ಮೈಮರೆತು ಕೇಳಿದೆನು
 • ಕೋಗಿಲೆಯ ಇನಿದನಿಯ
 • ಮೂಡಣದಿ ಉಷೆಮೂಡಿ
 • ಬಾನಿನಿಂ ಸಗ್ಗ ಭುವಿಗಿಳಿಯುತಿರಲು ||೫||
 • ಉಷೆಯು ಮೋಹಕವಲ್ಲ
 • ಇಂಚರವು ಇನಿದಲ್ಲ
 • ಕೇಳುವೆನು ಆ ನಿನ್ನ
 • ಇನಿದನಿಯು ಮನದೊಳಗೆ ಮಿಡಿಯುತಿರಲು ||೬||
 • (ರಚನೆ:- ಬಿ.ಎಸ್.ಚಂದ್ರಶೇಖರ ಸಾಗರ)

ಕಣ್ಮರೆ[ಬದಲಾಯಿಸಿ]

    ವಸಂತ ಮಾಸದಿ ಕೋಗಿಲೆಯ ಧ್ವನಿ ಕೇಳಿಸುತಿಲ್ಲ...
    ಸೂರ್ಯಮುಳುಗಿದ ಹೊತ್ತಲ್ಲಿ ಘೂಳಿಡುತ್ತಿದ್ದ ನರಿ ಹಿಂಡಿನ ಸದ್ದಿಲ್ಲ...
    ಕಗ್ಗತಲ ಕಾಡಿನಲಿ ಕಂಡ ಮಿಂಚು ಹುಳುವಿನ ಬೆಳಕಿಲ್ಲ...
    ಮಳೆಯ ಬರುವಿಕೆಗಾಗಿ ವಟಗುಡುವ ಕಪ್ಪೆಗಳ ಸದ್ದಿಲ್ಲ...
    ಮಾನವನ ಆಸೆಗೆ ಕೊನೆಇಲ್ಲ...
    ನಿಸರ್ಗ ಪಾಠಕಲಿಸುವುದ ಬಿಡುವುದಿಲ್ಲ... ಹಸಿರಾಗಿ ನವಿರಾದ ಎಲೆಯಾಗಿ ನಾಚಿಕೆಗೆ ಕೆಂಪಾಗಿ ಮುಡಿಯಲ್ಲಿ ಹೂವಾಗಿ ಪ್ರೇಮಿಗಳ ಪಾಲಿನ ಪೀತಿಯ ಸಂಕೇತವಾಗಿ ಅರಳಿದೆ

ತಾಯಿ[ಬದಲಾಯಿಸಿ]

   'ಹೆಣ್ಣು ಸಂಸಾರದ ಕಣ್ಣು' ಎಂಬ ನಾಣ್ಣುಡಿ ಇದೆ. ಒಂದು ಕುಟುಂಬದ ಸುಖ, ಶಾಂತಿ, ಸಂತೋಷ, ನೆಮ್ಮದಿಯು ಆ ಮನೆಯ ಮಹಿಳೆಯನ್ನು ಅವಲಂಬಿಸಿರುತ್ತದೆ. ಮನೆಯ ಕೇಂದ್ರ ಬಿಂದು ಮಹಿಳೆಯಾಗಿದ್ದು, ವಿವಿಧ ಕಾರ್ಯವನ್ನು ನಿರ್ವಹಿಸುವ ಜವಾಬ್ದಾರಿ ಮತ್ತು ಹೊಣೆ ಅವಳದಾಗಿರುತ್ತದೆ.ಈ ಎಲ್ಲಾ ಸಾಮಥ್ರ್ಯವನ್ನು ಹೊಂದಿರುವವಳು ಹೆಣ್ಣು. ಹೀಗಾಗಿ ಅವಳು ಸಂಸಾರದ ಕಣ್ಣು.
 
  

ಇದು ನಮ್ಮ ಶಾಲೆ - ಇದು ನಮ್ಮೂರ ಶಾಲೆ'[ಬದಲಾಯಿಸಿ]

   ನನ್ನ ನೆಚ್ಚಿನ ನಮ್ಮೂರ ಶಾಲೆ
   ತವರು ಭಾಷೆಯ ಕಲಿಸುವ ಶಾಲೆ
   ಏಕಭಾವ ಬೆಳೆಸುವ ಶಾಲೆ
   ನಾಡ - ಸಂಸ್ಕೃತಿಯ ತೆರೆದಿಡೋ ಶಾಲೆ
   ಮುನ್ನುಡಿ ಕಲಿಸುವ ಕನ್ನಡ ಶಾಲೆ
   ನನ್ನ ನೆಚ್ಚಿನ ನಮ್ಮೂರ ಶಾಲೆ... 
   ಗುರು ಹಿರಿಯರಿಗೆ ನಮಿಸಿ ಮಿತ್ರ ಭಾವನೆ ಬೆಳೆಸಿದ ಶಾಲೆ

ಅದುವೇ ದೇವರ ನಿರ್ಣಯ[ಬದಲಾಯಿಸಿ]

ಏನನ್ನು ಆಸೆ ಪಡಬೇಡ,

ಏನನ್ನು ಊಹಿಸಿಕೊಳ್ಳಬೇಡ,

ಏನನ್ನು ಕೇಳಬೇಡ,

ಏನನ್ನು ಕೋರಬೇಡ,

ಹಾಗೇಯೆ ಬಿಟ್ಟು ಬಿಡು,

ಏನು ಆಗಬೇಕು ಅದು ಆಗುತ್ತದೆ,

ಅದುವೇ ದೇವರ ನಿರ್ಣಯ...ಕಂದ[ಬದಲಾಯಿಸಿ]

   ನನ್ನ ಪುಟ್ಟ ಕಂದ,
   ನಿನ್ನ ತೊದಲು ಮಾತು ಎಷ್ಟು ಚಂದ...
   
   ನಿನ್ನ ಮುದ್ದಾದ ಮುಖ,
   ಚಂದ್ರನಿಗಿಂತ ಅಂದ...
   ನಿನ್ನ ತುಂಟಾಟ ನೋಡಲು,
   ನನ್ನ ಮನಸ್ಸಿಗಂತು ಬಲು ಆನಂದ...


ಕಲಿಯುವುದಿದೆ ಇನ್ನೂ...[ಬದಲಾಯಿಸಿ]

ಹೇ ಜೇನು ಹುಳುವೇ... ನೀನೆಷ್ಷೂಂದು ಕಾರ್ಯಮುಖಿ??! ಒಂದು ಗಳಿಗೆಯೂ ತೆಗೆದುಕೊಳ್ಳುವುದಿಲ್ಲ ವಿಶ್ರಾಂತಿ... ಯಾರಿಗಾಗಿ ಕೊಡಿಟ್ಟಿರುವೆ ನಿನ್ನೆಲ್ಲಾ ಸಿಹಿಗಳನು??! ನಿನ್ನಿಂದ ಕಲಿಯುವುದು ಬಹಳಷ್ಷಿದೆ ಇನ್ನೂ... ಕಲಿಸುವೆಯಾ ನಿನ್ನಷ್ಟು ಕಾರ್ಯೋನ್ಮುಕವಾಗಿರುವುದನ್ನು??!... ಅದುವೇ ದೇವರ ನಿರ್ಣಯ[ಬದಲಾಯಿಸಿ]

ಉಪವರ್ಗಗಳು

ಈ ವರ್ಗದಲ್ಲಿ ಈ ಕೆಳಗಿನ ಉಪವರ್ಗ ಇದೆ.

"ಕವನ" ವರ್ಗದಲ್ಲಿರುವ ಲೇಖನಗಳು

ಈ ವರ್ಗದಲ್ಲಿ ಈ ಕೆಳಗಿನ ೩ ಪುಟಗಳನ್ನು ಸೇರಿಸಿ, ಒಟ್ಟು ೩ ಪುಟಗಳು ಇವೆ.

"https://kn.wikipedia.org/w/index.php?title=ವರ್ಗ:ಕವನ&oldid=934160" ಇಂದ ಪಡೆಯಲ್ಪಟ್ಟಿದೆ