ದಿನೇಶ್ ಖನ್ನಾ
| ದಿನೇಶ್ ಖನ್ನಾ | |||||||||||||||||||||||||||||||||
|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
| — ಬ್ಯಾಡ್ಮಿಂಟನ್ ಆಟಗಾರ — | |||||||||||||||||||||||||||||||||
| ವೈಯುಕ್ತಿಕ ಮಾಹಿತಿ | |||||||||||||||||||||||||||||||||
| ಹುಟ್ಟು | 4 January 1943 ಫತೇಘರ್ ಚುರಿಯನ್, ಗುರ್‌ದಾಸ್ಪುರ, ಪಂಜಾಬ್, ಭಾರತ | ||||||||||||||||||||||||||||||||
| ದೇಶ | ಭಾರತ | ||||||||||||||||||||||||||||||||
Medal record
| |||||||||||||||||||||||||||||||||
ದಿನೇಶ್ ಕುಮಾರ್ ಖನ್ನಾರವರು ಭಾರತದ ಮಾಜಿ ಬ್ಯಾಡ್ಮಿಂಟನ್ ಆಟಗಾರರಾಗಿದ್ದಾರೆ. ಇವರು ಜನವರಿ ೪, ೧೯೪೩ ರಲ್ಲಿ ಪಂಜಾಬ್‌ನ ಗುರುದಾಸ್ಪುರ್ ಜಿಲ್ಲೆಯಲ್ಲಿರುವ ಫತೇಘರ್ ಚುರಿಯನ್ ಎಂಬ ಪ್ರದೇಶದಲ್ಲಿ ಜನಿಸಿದರು.[೧]
ಮೂಲತಃ ಸ್ವಯಂ ಕಲಿಕೆಯ ಬ್ಯಾಡ್ಮಿಂಟನ್ ತಾರೆಯಾದ ದಿನೇಶ್ ಖನ್ನಾರವರು ತಮ್ಮ ಐದನೇ ವಯಸ್ಸಿನಲ್ಲಿಯೇ ಆಟವನ್ನು ಪ್ರಾರಂಭಿಸಿದರು. ಅವರು ೧೯೫೬ ರಲ್ಲಿ ತಮ್ಮ ೧೩ ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಜೂನಿಯರ್ ನ್ಯಾಷನಲ್ಸ್ ನಲ್ಲಿ ಭಾಗವಹಿಸಿದರು. ಮುಂದಿನ ವರ್ಷ ಅವರು ಈ ಚಾಂಪಿಯನ್ ಶಿಪ್ ನ ಫೈನಲ್ ತಲುಪಿದರು. ೧೯೬೧ ರಲ್ಲಿ ಮುಂಬೈನಲ್ಲಿ ಮಲೇಷ್ಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾಗವಹಿಸುವ ಮೂಲಕ ಅವರ ಅಂತರರಾಷ್ಟ್ರೀಯ ವೃತ್ತಿಜೀವನ ಪ್ರಾರಂಭವಾಯಿತು.[೨]
ವೃತ್ತಿ
[ಬದಲಾಯಿಸಿ]ದಿನೇಶ್ ಖನ್ನಾ ೧೯೬೫ ರಲ್ಲಿ ಪುರುಷರ ಸಿಂಗಲ್ಸ್ ಏಷ್ಯನ್ ಚಾಂಪಿಯನ್ ಆಗಿದ್ದರು ಮತ್ತು ೧೪ ನವೆಂಬರ್ ೧೯೬೫ ರಂದು ಏಷ್ಯನ್ ಬ್ಯಾಡ್ಮಿಂಟನ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.[೩][೪][೫] ಅವರು ೧೯೬೬ ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದರು.[೬] ಅವರು ೧೯೬೬ ರಲ್ಲಿ ಭಾರತೀಯ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್ ಆಗಿದ್ದರು ಮತ್ತು ೧೯೬೫ ರಲ್ಲಿ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದರು.[೭] ಸ್ವಾತಂತ್ರ್ಯದ ನಂತರ, ೧೯೬೭ ರಲ್ಲಿ ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಸೆಮಿಫೈನಲ್ ತಲುಪಿದ ಮೊದಲ ಭಾರತೀಯರಾಗಿದ್ದಾರೆ.[೮] ಇವರು ೧೯೭೪ರಲ್ಲಿ ಟೆಹ್ರಾನ್ ಏಷ್ಯನ್ ಗೇಮ್ಸ್ ನಲ್ಲಿ ಕಂಚಿನ ಪದಕ ಗೆದ್ದ ಭಾರತೀಯ ತಂಡವನ್ನು ಮುನ್ನಡೆಸಿದವರಾಗಿದ್ದಾರೆ.[೯] ೧೯೬೬ ರಲ್ಲಿ ವಿವಿಧ ಅಂತರರಾಷ್ಟ್ರೀಯ ಪಂದ್ಯಾವಳಿಗಳಲ್ಲಿನ ಅವರ ಪ್ರದರ್ಶನದ ಆಧಾರದ ಮೇಲೆ, ಅವರು ೧೯೬೭ ರ ಆಲ್ ಇಂಗ್ಲೆಂಡ್ ಚಾಂಪಿಯನ್ಶಿಪ್‌ನಲ್ಲಿ ಜಂಟಿ ೩ ನೇ ಶ್ರೇಯಾಂಕವನ್ನು ಪಡೆದರು. ಇದು ಆ ಸಮಯದಲ್ಲಿ ನಿಯಮಿತ ಔಪಚಾರಿಕ ವಿಶ್ವ ಶ್ರೇಯಾಂಕದ ಅನುಪಸ್ಥಿತಿಯಲ್ಲಿ ಅನಧಿಕೃತ ವಿಶ್ವ ಶ್ರೇಯಾಂಕವನ್ನು ಪ್ರತಿಬಿಂಬಿಸಿತು. ೧೯೭೨- ೧೯೭೩ರ ಥಾಮಸ್ ಕಪ್ ಸರಣಿಗಳಲ್ಲಿ ಭಾರತ ತಂಡ ಫೈನಲ್(ಅಂತಿಮ ಸುತ್ತು)ಗೆ ತಲುಪಲು ನೆರವಾದರು.[೧೦] ೧೯೬೨ ರಲ್ಲಿ ರ್ ಅಪ್
ಚಂಡೀಗಢ ಎಂಜಿನಿಯರಿಂಗ್ ಕಾಲೇಜಿನಿಂದ ಸಿವಿಲ್ ಎಂಜಿನಿಯರಿಂಗ್ ಪದವೀಧರರಾದ ದಿನೇಶ್ ಖನ್ನಾರವರು ಇಂಡಿಯನ್ ಆಯಿಲ್ ಕಾರ್ಪೊರೇಷನ್ ನಲ್ಲಿ ಹಿರಿಯ ಹುದ್ದೆಗಳನ್ನು ಅಲಂಕರಿಸಿದ್ದರು. ಅವರು ರಾಷ್ಟ್ರೀಯ ಆಯ್ಕೆಗಾರರಾಗಿಯೂ ಸೇವೆ ಸಲ್ಲಿಸಿದರು.[೧೧]
ಸಾಧನೆಗಳು
[ಬದಲಾಯಿಸಿ]ಏಷ್ಯನ್ ಚಾಂಪಿಯನ್‌ಶಿಪ್‌ಗಳು
[ಬದಲಾಯಿಸಿ]ಪುರುಷರ ಸಿಂಗಲ್ಸ್
| ವರ್ಷ | ಸ್ಥಳ | ಎದುರಾಳಿ | ಅಂಕ | ಫಲಿತಾಂಶ |
|---|---|---|---|---|
| ೧೯೬೫ | ಲಕ್ನೋ, ಭಾರತ | ೧೫-೩, ೧೫-೧೧ | ||
| ೧೯೬೯] | ಮನಿಲಾ, ಫಿಲಿಪೈನ್ಸ್ | ೭-೧೫, ೧೩-೧೮ |
ಕಾಮನ್ವೆಲ್ತ್ ಗೇಮ್ಸ್
[ಬದಲಾಯಿಸಿ]ಪುರುಷರ ಸಿಂಗಲ್ಸ್
| ವರ್ಷ | ಸ್ಥಳ | ಎದುರಾಳಿ | ಅಂಕ | ಫಲಿತಾಂಶ |
|---|---|---|---|---|
| ೧೯೬೬ | ಕಿಂಗ್ಸ್ಟನ್, ಜಮೈಕಾ | ೧೫-೮, ೧೫-೭ |
ಉಲ್ಲೇಖಗಳು
[ಬದಲಾಯಿಸಿ]- ↑ https://web.archive.org/web/20160910182501/http://www.sportsbharti.com/badminton/whos-who/dinesh-khanna/
- ↑ https://web.archive.org/web/20160910182501/http://www.sportsbharti.com/badminton/whos-who/dinesh-khanna/
- ↑ https://web.archive.org/web/20160910182501/http://www.sportsbharti.com/badminton/whos-who/dinesh-khanna/
- ↑ "ಆರ್ಕೈವ್ ನಕಲು". Archived from the original on 2024-02-26. Retrieved 2024-02-26.
- ↑ https://books.google.co.in/books?id=4aQKAwAAQBAJ&pg=PA176&redir_esc=y#v=onepage&q&f=false