ವಿಷಯಕ್ಕೆ ಹೋಗು

ತೈ ಚಿ ಚುಆನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಈ ಲೇಖನ ಚೀನೀ ಭಾಷೆಯ ಪದಗಳನ್ನು ಹೊಂದಿದೆ. ಸರಿಯಾದ ಪ್ರದರ್ಶನ ಬೆಂಬಲವಿಲ್ಲದೆದ್ದರೆ ನಿಮಗೆ ಚೀನೀ ಅಕ್ಷರಗಳು ಬದಲಿಗೆ ಪ್ರಶ್ನಾರ್ಥಕ ಚಿನ್ಹೆ, ಚೌಕಗಳು ಅಥವಾ ಇನ್ನಾವುದೇ ಚಿನ್ಹೆಗಳು ಕಾಣಬಹುದು.
Tai chi chuan
(太極拳)
Yang Chengfu in a posture from the Yang style tai chi chuan solo form known as Single Whip c. 1931
ಹೀಗೂ ಕರೆಯಲ್ಪಡುತ್ತದೆt'ai chi ch'üan; taijiquan
ಗಮನHybrid
ಗಡಸುತನForms competition, light-contact (pushing hands, no strikes), full contact (striking, kicking, throws, etc.)
ಮೂಲ ದೇಶChina
ನಿರ್ಮಾತೃDisputed
ಪ್ರಸಿದ್ಧ ಪಟುChen Wangting, Chen Changxing, Yang Lu-ch'an, Wu Yu-hsiang, Wu Ch'uan-yu, Wu Chien-ch'uan, Sun Lu-t'ang, Yang Chengfu, Chen Fake, Wang Pei-sheng
ಮೂಲತನTao Yin
ಒಲಂಪಿಕ್ ಆಟಗಳುDemonstration only
Tai chi chuan
ಸಾಂಪ್ರದಾಯಿಕ ಚೀನೀ
ಸರಳೀಕಸರಿಸಿದ ಚೀನೀ
ಅಕ್ಷರಶಃ ಅರ್ಥ supreme ultimate fist
ಸರಣಿಯ ಭಾಗ
ಚೀನೀ ಯುದ್ಧ ಕಲೆಗಳು
ಚೀನೀ ಯುದ್ಧ ಕಲೆಗಳ ಪಟ್ಟಿ
Terms
ಐತಿಹಾಸಿಕ ಸ್ಥಳಗಳು
ಐತಿಹಾಸಿಕ ವ್ಯಕ್ತಿಗಳು
ದಂತಕಥೆಯಾದ ವ್ಯಕ್ತಿತ್ವಗಳು
ಸಂಬಂಧಿತ

ತೈ ಚಿ ಚುಆನ್' (simplified Chinese: 太极拳; traditional Chinese: 太極拳; pinyin: tàijíquán; Wade–Giles: t'ai4 chi2 ch'üan2) (ಪದವನ್ನು "ಪರಮ ಸರ್ವೋತ್ಕೃಷ್ಟ ಮುಷ್ಟಿ" ಎಂದು ಅಕ್ಷರಶಃ ಭಾಷಾಂತರಿಸಬಹುದು) ಎಂಬುದು ಒಂದು ಆಂತರಿಕ ಚೈನೀಸ್ ಕದನ ಕಲೆ. ಇದನ್ನು ರಕ್ಷಣಾ ತರಬೇತಿ ಹಾಗು ಆರೋಗ್ಯದ ಅನುಕೂಲಗಳು ಎರಡೂ ಕಾರಣಕ್ಕೆ ಅಭ್ಯಾಸ ಮಾಡಲಾಗುತ್ತದೆ. ಇದನ್ನು ವಿಶೇಷವಾಗಿ ಹಲವು ವಿಧದ ಇತರ ವೈಯಕ್ತಿಕ ಕಾರಣಗಳಿಗಾಗಿಯೂ ಸಹ ಅಭ್ಯಾಸ ಮಾಡಲಾಗುತ್ತದೆ: ಇದು ಕ್ಲಿಷ್ಟ ಹಾಗು ಮೃದು ಕದನ ಕಲಾ ತಂತ್ರ, ಪ್ರದರ್ಶನ ಸ್ಪರ್ಧೆಗಳು, ಹಾಗು ದೀರ್ಘಾಯುಷ್ಯ. ಇದರ ಪರಿಣಾಮವಾಗಿ, ಒಂದು ಬಹುಸಂಖ್ಯಾ ತರಬೇತಿ ಪ್ರಕಾರಗಳು ಬಳಕೆಯಲ್ಲಿವೆ, ಸಾಂಪ್ರದಾಯಿಕ ಹಾಗು ಆಧುನಿಕ ಪ್ರಕಾರಗಳೆರಡೂ ಈ ಗುರಿಗಳಿಗೆ ಹೊಂದಿಕೆಯಾಗಿವೆ. ತೈ ಚಿ ಚುಆನ್ ನ ಕೆಲವು ತರಬೇತಿ ಪ್ರಕಾರಗಳು ಬಹುತೇಕ ಜನರು ನಿಧಾನಗತಿಯ ಚಲನೆ ಎಂದು ವರ್ಗೀಕರಿಸಿರುವ ಅಭ್ಯಾಸಕ್ಕೆ ವಿಶೇಷವಾಗಿ ಹೆಸರಾಗಿದೆ.

ಇಂದು, ತೈ ಚಿ ವಿಶ್ವದಾದ್ಯಂತ ವ್ಯಾಪಕವಾಗಿ ಹರಡಿದೆ. ತೈ ಚಿಯ ಹಲವು ಆಧುನಿಕ ಶೈಲಿಗಳು, ಐದು ಸಾಂಪ್ರದಾಯಿಕ ಶಾಲೆಗಳಲ್ಲಿ ಕಡೇಪಕ್ಷ ಒಂದು ಶಾಲೆಯೊಂದಿಗೆ ತಮ್ಮ ಬೆಳವಣಿಗೆಯನ್ನು ಗುರುತಿಸಿಕೊಳ್ಳುತ್ತವೆ: ಚೆನ್, ಯಾಂಗ್, ವೂ/ಹಾವೊ, ವೂ ಹಾಗು ಸನ್.

ಸ್ಥೂಲ ಸಮೀಕ್ಷೆ

[ಬದಲಾಯಿಸಿ]

ತೈ ಚಿ ಚುಆನ್ ಎಂಬ ಪದವನ್ನು ಅಕ್ಷರಶಃ "ಪರಮ ಸರ್ವೋತ್ಕೃಷ್ಟ ಮುಷ್ಟಿ", "ಮಿತಿಯಿಲ್ಲದ ಮುಷ್ಟಿ", "ಬಹಳ ವಿಪರೀತಗಳ ಬಾಕ್ಸಿಂಗ್", ಅಥವಾ ಸರಳವಾಗಿ "ಸರ್ವೋತ್ಕೃಷ್ಟ" ಎಂದು ಭಾಷಾಂತರಿಸಬಹುದು (ಗಮನಿಸಿ ಚಿ ಎಂಬುದು ಈ ಉದಾಹರಣೆಯಲ್ಲಿ ಪಿನ್ಯಿನ್ ಜಿವೇಡ್-ಗೈಲ್ಸ್‌ನ ಲಿಪ್ಯಂತರಣ, ಜೊತೆಗೆ ಇದು "ಜೀವಶಕ್ತಿ" ಅಥವಾ "ಶಕ್ತಿ" ಎಂಬ ಅರ್ಥವನ್ನು ನೀಡುವ ch'i (ಚಿ)/ (ಕಿ)ಗಿಂತ ಭಿನ್ನವಾಗಿದೆ). ತೈಜಿ ಯ ಕಲ್ಪನೆಯು ("ಪರಮ ಸರ್ವೋತ್ಕೃಷ್ಟ") ಟಾಓಇಸ್ಟ್ ಹಾಗು ಕನ್ಫ್ಯೂಷಿಅನ್ ಚೈನೀಸ್ ತತ್ತ್ವಚಿಂತನೆಯಲ್ಲಿ ಕಂಡುಬರುತ್ತದೆ, ಇದು ಐಕ್ಯ ಅಥವಾ ಯಿನ್ ಹಾಗು ಯಾಂಗ್ ರ ತಾಯಿಯ[] ಒಂದು ಏಕೈಕ ಕಟ್ಟಕಡೆಯ ರೂಪವನ್ನು ಪ್ರತಿನಿಧಿಸುತ್ತದೆ, ಇದನ್ನು ತೈಜಿಟು ಸಂಕೇತದ ಮೂಲಕ ನಿರೂಪಿಸಲಾಗಿದೆ. ಈ ರೀತಿಯಾಗಿ, ತೈ ಚಿ ಸಿದ್ಧಾಂತ ಹಾಗು ಅಭ್ಯಾಸ ಹಲವು ಚೈನೀಸ್ ತತ್ತ್ವಚಿಂತನೆಯ ಆಧಾರಗಳೊಂದಿಗೆ ಹುಟ್ಟಿಕೊಂಡಿತು, ಇದರಲ್ಲಿ ಟಾವೊ ತತ್ತ್ವ ಹಾಗು ಕನ್ಫ್ಯೂಷಿಅನ್ ತತ್ತ್ವಗಳು ಸೇರಿವೆ.

ತೈ ಚಿ ತರಬೇತಿಯು ಪ್ರಾಥಮಿಕವಾಗಿ ಏಕವ್ಯಕ್ತಿ ಅಭ್ಯಾಸಗಳನ್ನು ಒಳಗೊಂಡಿರುತ್ತದೆ, ಇದನ್ನು ಪ್ರಕಾರಗಳು (套路 ಟಾಒಲು) ಎಂದು ಕರೆಯಲಾಗುತ್ತದೆ. ಜನಪ್ರಿಯ ಸಂಸ್ಕೃತಿಯಲ್ಲಿ ತೈ ಚಿ ಚುಆನ್ ಕದನ ಕಲೆಯ ಕಲ್ಪನೆಯು ಮಿತಿಮೀರಿದ ನಿಧಾನಗತಿಯ ಚಲನೆಯ ಲಕ್ಷಣಗಳಿಂದ ಕೂಡಿದೆ. ಹಲವು ತೈ ಚಿ ಶೈಲಿಗಳು (ಮೂರು ಅತ್ಯಂತ ಜನಪ್ರಿಯ ಕಲೆಗಳಾದ, ಯಾಂಗ್, ವೂ ಹಾಗು ಚೆನ್‌ಸೇರಿದಂತೆ)ಒಂದು ಶೀಘ್ರ ದ್ವಿತೀಯಕ ಪ್ರಕಾರಗಳಾಗಿವೆ. ತೈ ಚಿಯ ಕೆಲವು ಸಾಂಪ್ರದಾಯಿಕ ಕಲಾ ಶಾಲೆಗಳು ಸಹಭಾಗಿ ಅಭ್ಯಾಸಗಳಾದ "ಪುಷಿಂಗ್ ಹ್ಯಾಂಡ್ಸ್"(ಕೈಗಳನ್ನು ತಳ್ಳುವುದು)ನ ತರಬೇತಿ ನೀಡುತ್ತವೆ, ಹಾಗು ಈ ಪ್ರಕಾರದ ಕದನ ಕಲೆಯ ಭಂಗಿಗಳ ಬಳಕೆಯ ಬಗ್ಗೆ ತರಬೇತಿಯನ್ನು ನೀಡುತ್ತದೆ.

ಈ ಕಲಾಪ್ರಕಾರವು, ಇಂಪೀರಿಯಲ್ ಕೋರ್ಟ್‌ನ ಪರಿಣತ ಒಂಗ್ ಟಾಂಗ್ ಹೆ, ಯಾಂಗ್ ಲೂ ಚಾನ್ ನ ಪ್ರದರ್ಶನವನ್ನು ವೀಕ್ಷಿಸಿದಾಗ ತನ್ನ ಹೆಸರನ್ನು ಪಡೆಯಿತು ("ಅಜೇಯ ಯಾಂಗ್"). ಒಂಗ್ ಬರೆಯುತ್ತಾರೆ: "ತೈಜಿಯನ್ನು ಹಿಡಿದಿರುವ ಕೈಗಳು ಸಂಪೂರ್ಣ ಜಗತ್ತನ್ನು ಅಲ್ಲಾಡಿಸುತ್ತದೆ, ಸರ್ವಶ್ರೇಷ್ಠ ಕೌಶಲದಿಂದ ಕೂಡಿದ ಎದೆಗೂಡು ವೀರರ ಸಮೂಹವನ್ನು ಸೋಲಿಸುತ್ತದೆ"

ಚೀನಾದಲ್ಲಿ, ತೈ ಚಿ ಚುಆನ್ ನ್ನು ಚೈನೀಸ್ ಕದನ ಕಲೆಯ ವೂಡಂಗ್ ಗುಂಪಿನಡಿಯಲ್ಲಿ ವಿಂಗಡಿಸಲಾಗುತ್ತದೆ[]-ಅದೆಂದರೆ, ಆಂತರಿಕ ಶಕ್ತಿಯೊಂದಿಗೆ ಬಳಕೆಯಾಗುವ ಕಲೆಗಳು(ಆಂತರಿಕ ಕಲೆಗಳಿಗೆ ಬಳಸಲಾಗುವ ವ್ಯಾಪಕ ಪದವೆಂದರೆ ನೆಯಿಜಿಯ). ಆದಾಗ್ಯೂ ಕಲಾಪ್ರಕಾರಕ್ಕೆ ವೂಡಂಗ್ ಎಂಬ ಹೆಸರು ವೂಡಂಗ್ ಪರ್ವತದಿಂದ ಹುಟ್ಟಿಕೊಂಡಿತೆಂದು ಜನರು ತಪ್ಪಾಗಿ ಅರ್ಥೈಸಿಕೊಳ್ಳಲು ಎಡೆ ಮಾಡಿಕೊಟ್ಟಿದೆ, ಇದು ಕೇವಲ "ಆಂತರಿಕ ಕಲೆಗಳ" ಕೌಶಲಗಳು, ಸಿದ್ಧಾಂತಗಳು ಹಾಗು ಬಳಕೆಗಳನ್ನು, "ಕ್ಲಿಷ್ಟವಾದ" ಅಥವಾ "ಬಾಹ್ಯ" ಕದನ ಕಲೆಯಾದ ಶೊಲಿನ್ ಪ್ರಕಾರದ ಶೈಲಿಗಳಿಂದ ವ್ಯತ್ಯಾಸಗಳನ್ನು ಅರಿಯಲು ಇಬ್ಭಾಗಿಸಲಾಗಿದೆ.[]

ಕಳೆದ ೨೦ನೇ ಶತಮಾನದ ಆರಂಭದಲ್ಲಿ, ಯಾಂಗ್ ಶೊಹೌ, ಯಾಂಗ್ ಚೆಂಗ್ಫು, ವೂ ಚಿಯೆನ್-ಚುಆನ್ ಹಾಗು ಸನ್ ಲುಟಂಗ್, ತೈ ಚಿ ಕಲೆಯಿಂದಾಗುವ ಆರೋಗ್ಯದ ಅನುಕೂಲಗಳ ಬಗ್ಗೆ ಮೊದಲಿಗೆ ವ್ಯಾಪಕ ಪ್ರಚಾರ ನೀಡಿದರು.[] ಇದರಿಂದಾಗುವ ಆರೋಗ್ಯದ ಅನುಕೂಲ ಹಾಗು ಆರೋಗ್ಯ ಸಂರಕ್ಷಣೆಯು ಕದನ ಕಲಾ ತರಬೇತಿಯಲ್ಲಿ ಕಡಿಮೆ ಆಸಕ್ತಿಯನ್ನು ಹೊಂದಿದ ಅಥವಾ ಇದರ ಬಗ್ಗೆ ಯಾವುದೇ ಆಸಕ್ತಿಯನ್ನು ಹೊಂದಿರದಿದ್ದರೂ, ಜನರು ವ್ಯಾಪಕವಾಗಿ ಈ ಕಲೆಯನ್ನು ಅನುಸರಿಸುವುದು ವೃದ್ಧಿಸಿತು.[] ತೈ ಚಿ ಕಲೆಯ ಬಗೆಗಿನ ವೈದ್ಯಕೀಯ ಅಧ್ಯಯನಗಳು, ಇದೊಂದು ಪರ್ಯಾಯ ವ್ಯಾಯಾಮ ಹಾಗು ಕದನ ಕಲಾ ಚಿಕಿತ್ಸೆಯ ಒಂದು ಪ್ರಕಾರವೆಂದು ಅದರ ಪರಿಣಾಮಕಾರಿತ್ವದ ಬಗ್ಗೆ ಬೆಂಬಲವನ್ನು ಸೂಚಿಸಿದವು.

ಪ್ರಕಾರದ ಚಲನೆಯ ಮೇಲೆ ಏಕಮಾತ್ರವಾಗಿ ಗಮನವನ್ನು ಕೇಂದ್ರೀಕರಿಸುವುದರಿಂದ ಮನಸ್ಸನ್ನು ಶಾಂತಗೊಳಿಸುವ ಹಾಗು ಸ್ಪಷ್ಟತೆಯ ಸ್ಥಿತಿಗೆ ಸಹಕಾರಿಯಾಗಿದೆ.[ಸೂಕ್ತ ಉಲ್ಲೇಖನ ಬೇಕು] ತೈ ಚಿ ತರಬೇತಿಯ ವೈಶಿಷ್ಟ್ಯತೆಗಳಾದ ಸಾಮಾನ್ಯ ಆರೋಗ್ಯ ಅನುಕೂಲ ಹಾಗು ಒತ್ತಡ ನಿರ್ವಹಣೆಯ ಜೊತೆಯಲ್ಲಿ, ಸಾಂಪ್ರದಾಯಿಕ ಚೀನಾ ಔಷಧಪದ್ದತಿಯ ಅಂಶಗಳನ್ನು ಕೆಲವೊಂದು ಸಾಂಪ್ರದಾಯಿಕ ಶಾಲೆಗಳಲ್ಲಿ ಉನ್ನತ ತರಬೇತಿಯನ್ನು ಪಡೆಯುತ್ತಿರುವ ತೈ ಚಿ ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತದೆ.[]

ಕೆಲವು ಕದನ ಕಲೆಗಳು, ವಿಶೇಷವಾಗಿ ಜಪಾನಿನ ಕದನ ಕಲೆಗಳಲ್ಲಿ, ವಿದ್ಯಾರ್ಥಿಗಳು ತಮ್ಮ ಅಭ್ಯಾಸದ ಸಮಯದಲ್ಲಿ ಸಮವಸ್ತ್ರವನ್ನು ಧರಿಸುವ ಅಗತ್ಯವಿದೆ. ತೈ ಚಿ ಚುಆನ್ ಶಾಲೆಗಳಲ್ಲಿ ಸಾಮಾನ್ಯವಾಗಿ ಸಮವಸ್ತ್ರವನ್ನು ಧರಿಸುವ ಅಗತ್ಯವಿರುವುದಿಲ್ಲ, ಆದರೆ ಸಾಂಪ್ರದಾಯಿಕ ಹಾಗು ಆಧುನಿಕ ತರಬೇತುದಾರರಿಬ್ಬರೂ ಸಾಮಾನ್ಯವಾಗಿ ಸಡಿಲ, ಸುಲಭವಾದ ಉಡುಗೆಗಳನ್ನು ಹಾಗು ಚಪ್ಪಟೆಯಾದ-ಅಡಿಭಾಗವನ್ನು ಹೊಂದಿರುವ ಬೂಟುಗಳನ್ನು ಧರಿಸಲು ಸಲಹೆ ಮಾಡುತ್ತಾರೆ.[][]

ತೈ ಚಿ ಚುಆನ್ ನ ದೈಹಿಕ ಕೌಶಲಗಳನ್ನು ತೈ ಚಿನ ಶ್ರೇಷ್ಠ ಗ್ರಂಥಗಳಲ್ಲಿ ವಿವರಿಸಲಾಗಿದೆ, ಇದು ಸಾಂಪ್ರದಾಯಿಕ ತರಬೇತುದಾರರ ಒಂದು ಲೇಖನ ಸಂಗ್ರಹ. ಇದು ಸ್ನಾಯುಗಳ ಎಳೆತಕ್ಕೆ ಬದಲಿಯಾಗಿ ಸಹಯೋಜನ ಹಾಗು ವಿಶ್ರಾಂತಿಯನ್ನು ಆಧರಿಸಿ ಸಂದುಗಳ ಮೂಲಕ ಶಕ್ತಿಯನ್ನು ಬಳಸುವುದು, ಈ ಪ್ರಕಾರವಾಗಿ ಆಕ್ರಮಣವನ್ನು ತಟಸ್ಥಗೊಳಿಸುವುದು ಅಥವಾ ಆಕ್ರಮಣವನ್ನು ಆರಂಭಿಸುವುದು. [ಸೂಕ್ತ ಉಲ್ಲೇಖನ ಬೇಕು]ಕಲಿಕಾ ಪ್ರಕ್ರಿಯೆಯಲ್ಲಿ ಒಳಗೊಳ್ಳುವ ನಿಧಾನ, ಪುನರಾವರ್ತಿತ ಅಭ್ಯಾಸವು ಶಕ್ತಿಯು ಹೇಗೆ ನಿಧಾನವಾಗಿ ಹುಟ್ಟಿಕೊಂಡು ಗಣನೀಯವಾಗಿ ಏರಿಕೆಯಾಗಿ, ಆಂತರಿಕ ಪರಿಚಲನೆಯು ಮುಕ್ತವಾಗುತ್ತದೆಂದು ಹೇಳಲಾಗಿದೆ(ಉಸಿರಾಟ, ದೇಹದ ತಾಪಮಾನ, ರಕ್ತ, ದುಗ್ಧರಸ, ಕ್ರಮಾಕುಂಚನ(ಅನ್ನನಾಳ ಅಥವಾ ಕರುಳಿನಲ್ಲಿರುವ ಪದಾರ್ಥಗಳನ್ನು ಮುಂದಕ್ಕೆ ತಳ್ಳಲು ನೆರವಾಗುವ ಸ್ನಾಯುಗಳ ಚಲನೆ) ಮುಂತಾದವು.)[ಸೂಕ್ತ ಉಲ್ಲೇಖನ ಬೇಕು]

ತೈ ಚಿ ಚುಆನ್ ನ ಅಧ್ಯಯನವು ಪ್ರಾಥಮಿಕವಾಗಿ ಮೂರು ಅಂಶಗಳನ್ನು ಒಳಗೊಂಡಿವೆ[ಸೂಕ್ತ ಉಲ್ಲೇಖನ ಬೇಕು]:

  • ಆರೋಗ್ಯ: ಒಬ್ಬ ಅನಾರೋಗ್ಯಕರ ಅಥವಾ ಉಳಿದಂತೆ ಕಲ್ಮಶಚಿತ್ತದ ವ್ಯಕ್ತಿಗೆ ಶಾಂತತೆಯ ಸ್ಥಿತಿಗೆ ತಲುಪಲು ಅಥವಾ ತೈ ಚಿಯನ್ನು ಒಂದು ಕದನ ಕಲೆಯಾಗಿ ಅಭ್ಯಾಸ ಮಾಡಲು ಕಷ್ಟಕರವೆನಿಸಬಹುದು. ಆದ್ದರಿಂದ ತೈ ಚಿ ಬಗೆಗಿನ ಆರೋಗ್ಯ ತರಬೇತಿಯು,ಒತ್ತಡದಿಂದ ದೇಹ ಹಾಗು ಮನಸ್ಸಿನ ಮೇಲಾಗುವ ದೈಹಿಕ ಪರಿಣಾಮಗಳನ್ನು ನಿವಾರಿಸುವ ಬಗ್ಗೆ ಗಮನ ಹರಿಸುತ್ತದೆ.

ತೈ ಚಿ ಕಲೆಯ ಬಗ್ಗೆ ಗಮನ ಹರಿಸುವವರು, ಪರಿಣಾಮಕಾರಿ ಆತ್ಮ-ರಕ್ಷಣೆಗೆ ಮೊದಲ ಹೆಜ್ಜೆಯಾದ ಉತ್ತಮ ದೈಹಿಕ ಸಾಮರ್ಥ್ಯದ ಬಗ್ಗೆ ಬಹಳ ಪ್ರಾಮುಖ್ಯತೆಯನ್ನು ನೀಡಬೇಕು.

  • ಧ್ಯಾನ: ತೈ ಚಿಯ ಧ್ಯಾನಸ್ಥ ಅಂಶದ ಮೂಲಕ ಮನಸ್ಸನ್ನು ಕೇಂದ್ರೀಕರಿಸುವುದು ಹಾಗು ಶಾಂತತೆಯನ್ನು ಹೊಂದುವುದು ಗರಿಷ್ಠ ಆರೋಗ್ಯ ರಕ್ಷಣೆಗೆ ಅತ್ಯಗತ್ಯವಾಗಿದೆ ಎಂದು ಹೇಳಲಾಗುತ್ತದೆ (ಒಂದು ಅರ್ಥದಲ್ಲಿ ಒತ್ತಡವನ್ನು ಶಮನಗೊಳಿಸಿಕೊಂಡು ಸಂತುಲನವನ್ನು ಕಾಪಾಡಿಕೊಳ್ಳುವುದು) ಜೊತೆಗೆ ಈ ಪ್ರಕಾರವನ್ನು ಒಂದು ಮೃದು ಶೈಲಿಯ ಕದನ ಕಲೆ ಎಂದು ಬಳಸಲಾಗುತ್ತದೆ.
  • ಕದನ ಕಲೆ: ತೈ ಚಿ ಕಲೆಯನ್ನು ಕದನದಲ್ಲಿ ಆತ್ಮ-ರಕ್ಷಣೆಯ ಒಂದು ರೂಪವಾಗಿ ಬಳಸುವ ಸಾಮರ್ಥ್ಯವು, ವಿದ್ಯಾರ್ಥಿಗೆ ಕಲೆಯ ಬಗೆಗಿನ ತಿಳುವಳಿಕೆ ಕುರಿತು ಪರೀಕ್ಷೆಯಾಗಿದೆ. ಕದನದ ರೀತಿಯಲ್ಲಿ ನೋಡಿದಾಗ, ತೈ ಚಿ ಚುಆನ್ ಬಾಹ್ಯ ಶಕ್ತಿಗಳಿಗೆ ಪ್ರತಿಕ್ರಿಯೆಯಾದ ಸೂಕ್ತ ಬದಲಾವಣೆಯ ಅಧ್ಯಯನ; ಆಕ್ರಮಣವನ್ನು ವ್ಯತಿರಿಕ್ತ ಬಲದಿಂದ ಎದುರಿಸುವ ಬದಲಾಗಿ ಆಗಮಿಸುವ ಆಕ್ರಮಣಕ್ಕೆ ಮಣಿಯುವ ಹಾಗು "ಸಹಿಸಿಕೊಳ್ಳುವ" ಬಗೆಗಿನ ಅಧ್ಯಯನ[]. ತೈ ಚಿಯನ್ನು ಒಂದು ಕದನ ಕಲೆಯನ್ನಾಗಿ ಬಳಸುವುದು ಸ್ವಲ್ಪ ಸವಾಲಿನ ಸಂಗತಿಯಾಗಿರುವುದರ ಜೊತೆಗೆ ಇದಕ್ಕೆ ಒಂದು ದೊಡ್ಡ ಪ್ರಮಾಣದ ತರಬೇತಿಯ ಅಗತ್ಯವಿದೆ.[೧೦]

ಇತಿಹಾಸ ಹಾಗು ಶೈಲಿಗಳು

[ಬದಲಾಯಿಸಿ]
ತೈ ಚಿ ಶೈಲಿಯ ಯಾಂಗ್ ಶೈಲಿಯನ್ನು ಪ್ರದರ್ಶಿಸುತ್ತಿರುವ ಒಬ್ಬ ಚೀನಾ ಮಹಿಳೆ

ತೈ ಚಿ ಚುಆನ್ ನಲ್ಲಿ ಐದು ಪ್ರಮುಖ ಶೈಲಿಗಳಿವೆ, ಪ್ರತಿಯೊಂದನ್ನು ಅದು ಹುಟ್ಟಿಕೊಂಡ ಚೀನಾ ಕುಟುಂಬದ ಮೇಲೆ ಹೆಸರಿಸಲಾಗಿದೆ:

ಅವಧಿಯ ಸರಿಯಾದ ಕ್ರಮಾಂಕವನ್ನು ಮೇಲೆ ಪಟ್ಟಿ ಮಾಡಲಾಗಿದೆ. ಜನಪ್ರಿಯತೆಯಲ್ಲಿ (ಚಿಕಿತ್ಸಕರ ಸಂಖ್ಯೆಯನ್ನು ಆಧರಿಸಿ)ಯಾಂಗ್, ವೂ, ಚೆನ್, ಸನ್, ಹಾಗು ವೂ/ಹಾವೋ ಕ್ರಮಾಂಕದಲ್ಲಿದೆ.[] ಪ್ರಮುಖ ಕೌಟುಂಬಿಕ ಶೈಲಿಗಳು ಹೆಚ್ಚಿನ ಮೂಲ ಸಿದ್ಧಾಂತವನ್ನು ಹಂಚಿಕೊಳ್ಳುತ್ತವೆ, ಆದರೆ ತರಬೇತಿಯ ವಿಧಾನಗಳಲ್ಲಿ ಭಿನ್ನವಾಗಿರುತ್ತವೆ.

ಪ್ರಸಕ್ತದಲ್ಲಿ ಡಜನ್ ಗಟ್ಟಲೆ ಹೊಸ ಶೈಲಿಗಳು, ಮಿಶ್ರ ಶೈಲಿಗಳು, ಹಾಗು ಪ್ರಮುಖ ಶೈಲಿಗಳ ಕವಲುಗಳಿವೆ, ಆದರೆ ಐದು ಕೌಟುಂಬಿಕ ಶಾಲೆಗಳನ್ನು ಸಾಂಪ್ರದಾಯಿಕ ಶೈಲಿಗಳ ಗುಂಪುಗಳೆಂದು ಅಂತಾರಾಷ್ಟ್ರೀಯ ಸಮುದಾಯವು ಗುರುತಿಸಿದೆ. ಇತರ ಪ್ರಮುಖ ಶೈಲಿಗಳೆಂದರೆ ಜ್ಹಾವ್ಬಾವ್ ತೈ ಚಿ, ಚೆನ್ ಶೈಲಿಗೆ ನಿಕಟವಾದ ಇದನ್ನು ಪಾಶ್ಚಿಮಾತ್ಯ ಚಿಕಿತ್ಸಕರು ಒಂದು ವಿಶಿಷ್ಟ ಶೈಲಿಯೆಂದು ಹೊಸದಾಗಿ ಗುರುತಿಸಿದ್ದಾರೆ. ಇದಲ್ಲದೆ ಫೂ ಚೆನ್ ಸಂಗ್ ಸೃಷ್ಟಿಸಿದ ಫೂ ಶೈಲಿಯು ಚೆನ್, ಸನ್ ಹಾಗು ಯಾಂಗ್ ಶೈಲಿಗಳಿಂದ ಹುಟ್ಟಿಕೊಂಡಿದೆ, ಜೊತೆಗೆ ಪಾ ಕುವ ಚಾಂಗ್ ದ ಚಲನೆಗಳಿಂದ ಒಂದುಗೂಡಿದೆ.

ಅಸ್ತಿತ್ವದಲ್ಲಿರುವ ಎಲ್ಲ ಶೈಲಿಗಳನ್ನು ಚೆನ್ ಶೈಲಿಯೊಂದಿಗೆ ಗುರುತಿಸಬಹುದಾಗಿದೆ, ಇದನ್ನು ತಲೆಮಾರುಗಳವರೆಗೆ ಕೌಟುಂಬಿಕ ರಹಸ್ಯವೆಂದು ರವಾನಿಸಲಾಗುತ್ತಿತ್ತು. ಚೆನ್ ಕೌಟುಂಬಿಕ ವೃತ್ತಾಂತದ ದಾಖಲೆಯಲ್ಲಿ, ಕುಟುಂಬದ ಒಂಬತ್ತನೇ ತಲೆಮಾರಿನ ಚೆನ್ ವಾಂಗ್ಟಿಂಗ್‌ನನ್ನು ಇಂದಿನ ತೈ ಚಿ ಪ್ರಕಾರದ ಶೋಧಕನೆಂದು ಹೇಳಲಾಗುತ್ತದೆ. ಯಾಂಗ್ ಲೂ-ಚಾನ್, ತೈ ಚಿ ಪ್ರಕಾರವನ್ನು ಕಲಿತ ಕುಟುಂಬದ ಹೊರಗಿನ ಮೊದಲ ವ್ಯಕ್ತಿ. ಕದನದಲ್ಲಿನ ಅವನ ಯಶಸ್ಸು ಅವನಿಗೆ "ಅಜೇಯ ಯಾಂಗ್" ಎಂಬ ಅಡ್ಡ ಹೆಸರನ್ನು ಗಳಿಸಿಕೊಟ್ಟಿತು, ಜೊತೆಗೆ ಅವನ ಪ್ರಯತ್ನ ಹಾಗು ತರಬೇತಿ ನೀಡುವ ವೈಖರಿಯು ನಂತರ ತೈ ಚಿಯ ಜ್ಞಾನ ವಿಸ್ತರಣೆಗೆ ಮಹತ್ವದ ಕೊಡುಗೆಯನ್ನು ನೀಡಿತು.

ಟಾಓಯಿಸ್ಟ್ ಹಾಗು ಬೌದ್ಧ ಮಂದಿರಗಳ ಮೇಲೆ ತೈ ಚಿ ಚುಆನ್ ನ ರೂಪಕಾರಕ ಪ್ರಭಾವಗಳನ್ನು ಗುರುತಿಸುತ್ತಾ ಹೋದಾಗ, ದಂತ ಕಥೆಗಳಿಗಿಂತ ಆಧುನಿಕ ಐತಿಹಾಸಿಕ ದೃಷ್ಟಿಕೋನದಿಂದ ತಿಳಿಯುವುದು ಕಡಿಮೆ ಎಂಬಂತೆ ಕಾಣುತ್ತದೆ. ಆದರೆ ಸಂಗ್ ಸಾಮ್ರಾಜ್ಯ ನಿಯೋ-ಕನ್ಫ್ಯೂಷಿಯಾನಿಸಂನ ಸಿದ್ಧಾಂತಗಳ ಮೇಲೆ ತೈ ಚಿ ಚುಆನ್ ಪ್ರಾಯೋಗಿಕ ಸಂಪರ್ಕ ಹಾಗೂ ಅವಲಂಬನೆಯನ್ನು (ಟಾಓಯಿಸ್ಟ್, ಬೌದ್ಧ ಧರ್ಮ ಹಾಗು ಕನ್ಫ್ಯೂಷಿಅನ್ ಸಂಪ್ರದಾಯಗಳ ಒಂದು ಪ್ರಜ್ಞಾಪೂರ್ವಕ ಸಂಯೋಜನೆ, ವಿಶೇಷವಾಗಿ ಮೆನ್ಸಿಯಸ್ ನ ಬೋಧನೆಗಳು) ಕೆಲವು ಸಾಂಪ್ರದಾಯಿಕ ಕಲಾಶಾಲೆಗಳು ಸಮರ್ಥಿಸುತ್ತವೆ.[] ಈ ಶಾಲೆಗಳು ತೈ ಚಿ ಸಿದ್ಧಾಂತಗಳು ಹಾಗು ಅಭ್ಯಾಸಗಳನ್ನು ಟಾಓಯಿಸ್ಟ್ ಸನ್ಯಾಸಿ ಜ್ಹಾಂಗ್ ಸ್ಯಾನ್ಫೆಂಗ್ ೧೨ನೇ ಶತಮಾನದಲ್ಲಿ ರೂಪಿಸಿದನೆಂದು ಅಭಿಪ್ರಾಯಪಡುತ್ತವೆ, ಅದೇ ಸಮಯದಲ್ಲಿ ನಿಯೋ-ಕನ್ಫ್ಯೂಷಿಯನ್ ಕಲಾಶಾಲೆಯ ತತ್ತ್ವಗಳು ಚೀನಾದ ಬೌದ್ಧಿಕ ಜೀವನಕ್ರಮದ ಮೇಲೆ ಪ್ರಭಾವ ಬೀರಿದ್ದವು.[] ಆದಾಗ್ಯೂ, ಆಧುನಿಕ ಸಂಶೋಧನೆಯು ಈ ಸಮರ್ಥನೆಗಳ ಕ್ರಮಬದ್ಧತೆ ಬಗ್ಗೆ ಗಂಭೀರವಾದ ಸಂಶಯಗಳನ್ನು ವ್ಯಕ್ತಪಡಿಸುತ್ತದೆ. ೧೭ನೇ ಶತಮಾನದಲ್ಲಿ ಹುಯಾಂಗ್ ಜಾಂಗ್ಕ್ಸಿ (೧೬೧೦-೧೬೯೫ A.D.) ರಚಿಸಿದ "ಎಪಿಟಾಪ್ ಫಾರ್ ವಾಂಗ್ ಜ್ಹೆಂಗ್ನಾನ್" (೧೬೬೯) ಕೃತಿಯು ಜ್ಹಾಂಗ್ ಸ್ಯಾನ್ಫೆಂಗ್ ಹಾಗು ಕದನ ಕಲೆಗಳ ನಡುವೆ ಯಾವುದೇ ಸಂಬಂಧದ ಬಗ್ಗೆ ಸೂಚನೆ ನೀಡುವ ಮೊದಲ ಉಲ್ಲೇಖವಾಗಿದೆ. ಏನೇ ಆಗಲಿ, ಇದನ್ನು ಸಾಹಿತ್ಯಿಕವಾಗಿ ಪರಿಗಣಿಸದೆ ಬದಲಿಗೆ ಒಂದು ರಾಜಕೀಯ ರೂಪಕೋಕ್ತಿಯಾಗಿ ಅರ್ಥೈಸಿಕೊಳ್ಳಬೇಕು. ತೈ ಚಿ ಹಾಗು ಜ್ಹಾಂಗ್ ಸ್ಯಾನ್ಫೆಂಗ್ ನಡುವಿನ ಸಂಬಂಧದ ಸಮರ್ಥನೆಯು ೧೯ನೇ ಶತಮಾನಕ್ಕೆ ಮುಂಚೆ ಎಲ್ಲೂ ಕಂಡು ಬರುವುದಿಲ್ಲ.[೧೧]

ವಂಶ ವೃಕ್ಷಾವಳಿ

[ಬದಲಾಯಿಸಿ]
ಟೊರೊಂಟೊ, ಕೆನಡಾದಲ್ಲಿ ನಡೆದ ಒಂದು ಕ್ರೀಡಾಯುದ್ಧದಲ್ಲಿ ವೂ ಶೈಲಿಯ ಮಾಸ್ಟರ್ ಎಡ್ಡಿ ವೂ ಗ್ರಾಸ್ಪ್ ದಿ ಬರ್ಡ್'ಸ್ ಟೈಲ್ ಮಾದರಿಯನ್ನು ಪ್ರದರ್ಶಿಸುತ್ತಿರುವುದು.

ಈ ವಂಶ ವೃಕ್ಷಾವಳಿಗಳು ಸಮಗ್ರವಾಗಿಲ್ಲ. ಒಂದು ನಕ್ಷತ್ರಚಿಹ್ನೆಯಿಂದ ಸೂಚಿಸಲ್ಪಟ್ಟ ಹೆಸರುಗಳು ವಂಶಾವಳಿಯ ಅತೀ ಪ್ರಸಿದ್ಧ(ದಂತಕತೆ) ಅರೆ-ಪ್ರಸಿದ್ಧ ವ್ಯಕ್ತಿಗಳು; ಈ ನಡುವೆ ವಂಶಾವಳಿಯಲ್ಲಿ ಅವರ ಪಾತ್ರವನ್ನು ಹಲವು ಪ್ರಮುಖ ಕಲಾಶಾಲೆಗಳು ಅಂಗೀಕರಿಸಿವೆ, ಇದು ಪರಿಚಿತ ಐತಿಹಾಸಿಕ ದಾಖಲೆಗಳಿಂದ ಸ್ವತಂತ್ರವಾಗಿ ರುಜುವಾತುಪಡಿಸಲಾಗಿಲ್ಲ. ಚೆಂಗ್ ಮಾನ್-ಚಿಂಗ್ ಹಾಗು ಚೈನೀಸ್ ಕ್ರೀಡಾ ಆಯೋಗದ ಸಂಕ್ಷಿಪ್ತ ರೂಪಗಳು ಯಾಂಗ್ ಕೌಟುಂಬಿಕ ರೂಪಗಳಿಂದ ಹುಟ್ಟಿಕೊಂಡಿದೆ, ಆದರೆ ಯಾಂಗ್ ಕುಟುಂಬದ ಪ್ರಮುಖ ತರಬೇತುದಾರರು ಯಾಂಗ್ ಕುಟುಂಬದ ತೈ ಚಿ ಚುಆನ್ ಎಂದು ಗುರುತಿಸುವುದಿಲ್ಲ. ಚೆನ್, ಯಾಂಗ್ ಹಾಗು ವೂ ಕುಟುಂಬಗಳು ಸ್ಪರ್ಧಾತ್ಮಕ ಉದ್ದೇಶಗಳಿಗಾಗಿ ತಮ್ಮದೇ ಆದ ಸಂಕ್ಷಿಪ್ತ ಪ್ರದರ್ಶನ ರೂಪಗಳಿಗೆ ಇತ್ತೀಚಿಗೆ ಪ್ರಚಾರ ನೀಡುತ್ತಿದ್ದಾರೆ.

ಪ್ರಸಿದ್ಧ ವ್ಯಕ್ತಿಗಳು

[ಬದಲಾಯಿಸಿ]
Zhang Sanfeng*
c. 12th century
NEIJIA
 
 
 
 
 
Wang Zongyue*
1733-1795

ಐದು ಪ್ರಮುಖ ಸಾಂಪ್ರದಾಯಿಕ ಕೌಟುಂಬಿಕ ಶೈಲಿಗಳು

[ಬದಲಾಯಿಸಿ]
Chen Wangting
1580–1660
9th generation Chen
CHEN STYLE
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
Chen Changxing
1771–1853
14th generation Chen
Chen Old Frame
 
 
 
 
 
 
 
 
 
 
 
 
 
Chen Youben
c. 1800s
14th generation Chen
Chen New Frame
 
 
 
 
 
 
 
 
 
 
 
 
 
 
 
 
 
 
 
 
 
 
Yang Lu-ch'an
1799–1872
YANG STYLE
 
 
 
 
 
 
 
 
 
 
 
 
 
Chen Qingping
1795–1868
Chen Small Frame, Zhaobao Frame
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
Yang Pan-hou
1837–1892
Yang Small Frame
 
 
 
 
 
Yang Chien-hou
1839–1917
 
 
 
 
 
Wu Yu-hsiang
1812–1880
WU/HAO STYLE
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
Wu Ch'uan-yu
1834–1902
 
Wang Jaio-Yu
1836-1939
Original Yang
 
Yang Shao-hou
1862–1930
Yang Small Frame
 
Yang Ch'eng-fu
1883–1936
Yang Big Frame
 
Li I-yü
1832–1892
 
 
 
 
 
 
 
 
 
 
 
 
 
 
 
 
 
 
 
 
 
 
 
 
Wu Chien-ch'üan
1870–1942
WU STYLE
108 Form
 
Kuo Lien Ying
1895–1984
 
 
 
 
 
Yang Shou-chung
1910–85
 
Hao Wei-chen
1849–1920
 
 
 
 
 
 
 
 
 
 
 
 
 
 
 
 
 
 
 
 
 
 
Wu Kung-i
1900–1970
 
 
 
 
 
 
 
 
 
 
 
 
 
Sun Lu-t'ang
1861–1932
SUN STYLE
 
 
 
 
 
 
 
 
 
 
 
 
 
 
 
 
 
 
 
 
 
 
Wu Ta-k'uei
1923–1972
 
 
 
 
 
 
 
 
 
 
 
 
 
Sun Hsing-i
1891–1929

ಆಧುನಿಕ ಪ್ರಕಾರಗಳು

[ಬದಲಾಯಿಸಿ]
Yang Ch`eng-fu
 
 
 
 
 
 
 
 
 
 
 
 
 
 
 
Cheng Man-ch'ing
1901–1975
Short (37) Form
 
Chinese Sports Commission
1956
Beijing 24 Form
 
 
 
 
 
 
 
 
 
 
 
 
 
1989
42 Competition Form
(Wushu competition form combined from Sun, Wu, Chen, and Yang styles)

ತರಬೇತಿ ಹಾಗು ಕಲಾತಂತ್ರಗಳು

[ಬದಲಾಯಿಸಿ]
ಸಿಂಗಲ್ ವ್ಹಿಪ್ ಕೌಶಲದ ಹಲವು ಸಂಭಾವ್ಯ ಬಳಕೆಗಳಲ್ಲಿ ಒಂದನ್ನು ಯಾಂಗ್ ಚೆಂಗ್ಫು ಉಪಯೋಗಿಸುತ್ತಿರುವುದು.

"ತೈ ಚಿ ಚುಆನ್" ಎಂಬ ಹೆಸರು ತೈಜಿ ಸಂಕೇತವಾದ ತೈಜಿತು ಅಥವಾ T'ai chi t'u , 太極圖)ನಿಂದ ಹುಟ್ಟಿಕೊಂಡಿದೆಯೆಂದು ಹೇಳಲಾಗುತ್ತದೆ, ಪಾಶ್ಚಿಮಾತ್ಯ ದೇಶಗಳಲ್ಲಿ ಇದನ್ನು ಸಾಮಾನ್ಯವಾಗಿ ಯಿನ್-ಯಾಂಗ್ ರೇಖಾಸಂಕೇತವೆಂದು ಪರಿಚಿತವಾಗಿದೆ. ಇದೇ ಕಾರಣದಿಂದ, ಅತ್ಯಂತ ಹಳೆಯ ಕಲಾಶಾಲೆಗಳಲ್ಲಿ ರಕ್ಷಿಸಲಾದ ತೈ ಚಿ ಚುಆನ್ ಬಗೆಗಿನ ಬರಹಗಳನ್ನು ಯಿನ್ (ಗ್ರಹಿಸುವ ಶಕ್ತಿಯುಳ್ಳ) ಹಾಗು ಯಾಂಗ್ (ಸಕ್ರಿಯ) ತತ್ತ್ವಗಳ ಅಧ್ಯಯನವೆಂದು ಹೇಳಲಾಗುತ್ತದೆ. ಇದನ್ನು ಚೈನೀಸ್ ಶ್ರೇಷ್ಠಗ್ರಂಥಗಳಲ್ಲಿ ಕಂಡು ಬರುವ ಪಾರಿಭಾಷಿಕ ಪದಗಳನ್ನು, ವಿಶೇಷವಾಗಿ ಐ ಚಿಂಗ್ ಹಾಗು ಟಾವೋ ತೆ ಚಿಂಗ್ ಅನ್ನು ಬಳಸಿಕೊಂಡಿರುವುದು ಕಂಡುಬಂದಿದೆ.[]

ಮುಖ್ಯ ತರಬೇತಿಯು ಎರಡು ಪ್ರಾಥಮಿಕ ಲಕ್ಷಣಗಳನ್ನು ಒಳಗೊಂಡಿರುತ್ತದೆ: ಮೊದಲನೆಯದು ಏಕವ್ಯಕ್ತಿ ಪ್ರಕಾರ (ch'üan (ಚಾನ್) ಅಥವಾ quán (ಕ್ವಾನ್), 拳), ಈ ಪ್ರಕಾರವು ಒಂದು ನಿಧಾನಗತಿಯ ಚಲನಾ ಕ್ರಮವನ್ನು ಹೊಂದಿರುವುದರ ಜೊತೆಗೆ ಬೆನ್ನೆಲುಬು ನೇರವಾಗಿಟ್ಟುಕೊಳ್ಳುವುದು, ಕಿಬ್ಬೊಟ್ಟೆಯಿಂದ ಉಸಿರಾಟ ಹಾಗು ಚಲನೆಯ ಒಂದು ಸ್ವಾಭಾವಿಕ ಮಟ್ಟಕ್ಕೆ ಪ್ರಾಶಸ್ತ್ಯ ನೀಡುತ್ತದೆ; ಎರಡನೆಯದು ಪುಷಿಂಗ್ ಹ್ಯಾಂಡ್ಸ್(ಕೈಯಿಂದ ತಳ್ಳುವುದು)ನ ವಿಭಿನ್ನ ಶೈಲಿಗಳು (ತುಐ ಶೌ , 推手)ಪ್ರಕಾರದ ಚಲನೆ ತತ್ವಗಳನ್ನು ಹೆಚ್ಚು ಪ್ರಾಯೋಗಿಕ ವಿಧಾನದಲ್ಲಿ ಭಾಗಿದಾರನೊಂದಿಗೆ ತರಬೇತಿ ಪಡೆಯುವ ಕ್ರಮ.

ಏಕವ್ಯಕ್ತಿ ಪ್ರಕಾರವು ವಿದ್ಯಾರ್ಥಿಗಳನ್ನು ಅವರ ಗುರುತ್ವ ಕೇಂದ್ರದ ಮೂಲಕ ಒಂದು ಸಂಪೂರ್ಣ, ಸ್ವಾಭಾವಿಕ ಮಟ್ಟದ ಚಲನೆಗೆ ಒಯ್ಯುತ್ತದೆ. ನಿಖರವಾಗಿ, ನಿಯಮಿತವಾಗಿ ಏಕವ್ಯಕ್ತಿ ಪ್ರಕಾರದ ಪುನರಾವರ್ತಿತ ಅಭ್ಯಾಸವು ದೇಹದ ಭಂಗಿಗೆ ಮರುತರಬೇತಿ ಜೊತೆಗೆ, ವಿದ್ಯಾರ್ಥಿಯ ದೇಹದುದ್ದಕ್ಕೂ ರಕ್ತಪರಿಚಲನೆಗೆ ಪ್ರಚೋದಿಸಿ, ಅವರ ಕೀಲುಗಳ ಸರಾಗ ಬಾಗುವಿಕೆಯನ್ನು ನಿರ್ವಹಿಸುತ್ತದೆ ಹಾಗೂ ಕಲಾಪ್ರಕಾರಗಳು ಸೂಚಿಸುವ ಕದನ ಕಲೆಯ ಅನುಕ್ರಮವಾದ ಬಳಕೆಯನ್ನು ವಿದ್ಯಾರ್ಥಿಗಳಿಗೆ ಮತ್ತಷ್ಟು ಪರಿಚಯ ಮಾಡಿಕೊಡುತ್ತದೆ. ತೈ ಚಿಯ ಪ್ರಮುಖ ಸಾಂಪ್ರದಾಯಿಕ ಕಲಾಪ್ರಕಾರಗಳು ಹೊರರೂಪದಲ್ಲಿ ಸ್ವಲ್ಪಮಟ್ಟಿಗೆ ವ್ಯತ್ಯಾಸವನ್ನು ಹೊಂದಿರುತ್ತವೆ, ಆದರೆ ಹಲವು ಸ್ಪಷ್ಟ ಸದೃಶ್ಯತೆಗಳು ಅವುಗಳ ಸಮಾನ ಹುಟ್ಟಿನ ಬಗ್ಗೆ ವಿವರ ನೀಡುತ್ತವೆ. ಏಕವ್ಯಕ್ತಿ ಪ್ರಕಾರಗಳು, ಬರಿಗೈ ಹಾಗು ಆಯುಧ, ಪುಷಿಂಗ್ ಹ್ಯಾಂಡ್ಸ್ ಪ್ರಕಾರದ ಚಲನೆಯಲ್ಲಿ ವೈಯಕ್ತಿಕವಾಗಿ ಅಭ್ಯಸಿಸಲಾಗುವ ನಿಯಮಗಳು ಜೊತೆಗೆ ಕದನಕಲೆಯ ಬಳಕೆಯ ಸನ್ನಿವೇಶಗಳನ್ನು ಆತ್ಮ-ರಕ್ಷಣಾ ತರಬೇತಿಯಾಗಿ ವಿದ್ಯಾರ್ಥಿಗಳನ್ನು ತಯಾರು ಮಾಡಲಾಗುತ್ತದೆ. ಹಲವು ಸಾಂಪ್ರದಾಯಕ ಕಲಾಶಾಲೆಗಳಲ್ಲಿ, ಏಕವ್ಯಕ್ತಿ ಪ್ರಕಾರದ ವಿವಿಧ ಮಾರ್ಪಾಡುಗಳನ್ನು ಅಭ್ಯಸಿಸಬಹುದು: ಉದಾಹರಣೆಗೆ, ವೇಗ-ನಿಧಾನ, ಸಣ್ಣ ವೃತ್ತ-ದೊಡ್ಡ ವೃತ್ತ, ಚೌಕಾಕಾರ-ಗೋಳಾಕಾರ(ಸಂದುಗಳ ಮೂಲಕ ಸಾಮರ್ಥ್ಯ ತೋರುವ ವಿವಿಧ ನಿರೂಪಣೆಗಳು), ನೆಲದ ಮಟ್ಟಕ್ಕೆ ಕೂರುವುದು/ಸ್ವಲ್ಪ ಎತ್ತರದಲ್ಲಿ ಕೂರುವುದು(ಪ್ರಕಾರದ ಉದ್ದಕ್ಕೂ ತೂಕವನ್ನು-ತಡೆಯುವಂತೆ ಮಂಡಿಗಳನ್ನು ಒಂದು ಹಂತದವರೆಗೂ ಬಾಗಿಸುವ ಪ್ರಮಾಣ)ಉದಾಹರಣೆ.

ಪುಷಿಂಗ್ ಹ್ಯಾಂಡ್ಸ್ ಬಗ್ಗೆ ಇಬ್ಬರು ವಿದ್ಯಾರ್ಥಿಗಳು ಮಾಹಿತಿಯನ್ನು ಸ್ವೀಕರಿಸುತ್ತಿರುವುದು, ಇದು ತೈ ಚಿ ತರಬೇತಿ ವ್ಯಾಯಾಮಗಳಲ್ಲಿ ಮುಖ್ಯ ಭಾಗವಾಗಿದೆ.

ತೈ ಚಿ ಚು‌ಆನ್ ನ ಸಿದ್ಧಾಂತವೆಂದರೆ ತೀವ್ರವಾದ ಶಕ್ತಿಗೆ ಪ್ರತಿರೋಧವಾಗಿ ವ್ಯಕ್ತಿಯು ಬಿರುಸುತನವನ್ನು ಬಳಸಿದರೆ, ನಂತರ ಕಡೆ ಪಕ್ಷ ಸ್ವಲ್ಪ ಪ್ರಮಾಣದಲ್ಲಿ ಇಬ್ಬರೂ ಗಾಯಗೊಳ್ಳುವುದು ಖಚಿತ. ತೈ ಚಿ ಸಿದ್ಧಾಂತದ ಪ್ರಕಾರ, ಇಂತಹ ಗಾಯವು ಪಾಶವೀ ಶಕ್ತಿಯ ಜೊತೆಗೆ ಮತ್ತೊಂದು ಪಾಶವ ಶಕ್ತಿಯು ಸಂಧಿಸುವ ಒಂದು ಸ್ವಾಭಾವಿಕ ಪರಿಣಾಮ. ವಿದ್ಯಾರ್ಥಿಗಳಿಗೆ ನೇರವಾಗಿ ಕದನ ಮಾಡುವ ಅಥವಾ ಆಗಮಿಸುವ ಒಂದು ಶಕ್ತಿಯನ್ನು ಪ್ರತಿರೋಧಿಸುವ ತರಬೇತಿ ನೀಡಲಾಗುವುದಿಲ್ಲ, ಬದಲಿಗೆ, ಅದನ್ನು ಸರಾಗವಾಗಿ ಎದುರಿಸಲು ತರಬೇತಿ ನೀಡಲಾಗುತ್ತದೆ ಜೊತೆಗೆ ದೈಹಿಕ ಸ್ಪರ್ಶದಲ್ಲೇ ಇದ್ದುಕೊಂಡು ಎದುರಾಳಿಯ ಚಲನೆಯನ್ನು ಅನುಸರಿಸಿ ಎದುರಾಳಿಯು ಆಕ್ರಮಣದಿಂದ ದಣಿವಾಗುವ ತನಕ ಅಥವಾ ಸುರಕ್ಷಿತವಾಗಿ ಪುರ್ನರ್ನಿರ್ದೇಶಿಸಿ, ಯಾಂಗ್ ಜೊತೆಗೆ ಯಿನ್ ಸಂಧಿಸುವವರೆಗೂ ಕದನ ನಡೆಸಬಹುದು. ಸರಿಯಾದ ರೀತಿಯಲ್ಲಿ ಕದನ ನಡೆಸಿದರೆ, ಈ ಯಿನ್/ಯಾಂಗ್ ಅಥವಾ ಯಾಂಗ್/ಯಿನ್ ಕದನದಲ್ಲಿ ಸಮಸ್ಥಿತಿಯನ್ನು ಕಾಪಾಡಿಕೊಳ್ಳುವುದು, ಅಥವಾ ವಿಶಾಲ ತಾತ್ವಿಕ ಪ್ರಜ್ಞೆಯಲ್ಲಿ ಇದು ತೈ ಚಿ ಚುಆನ್ ತರಬೇತಿಯ ಒಂದು ಪ್ರಾಥಮಿಕ ಉದ್ದೇಶವಾಗಿದೆ. ಲಾಓ ತ್ಸು ತಮ್ಮ ಟಾಓ ತೆ ಚಿಂಗ್ ನಲ್ಲಿ ಇದರ ಬಗ್ಗೆ ಮೂಲ ಮಾದರಿಯನ್ನು ಒದಗಿಸಿ, "ಮೃದು ಹಾಗು ಅನುವರ್ತನಶೀಲರು ಗಡಸು ಹಾಗು ಬಲಶಾಲಿಯನ್ನು ಸೋಲಿಸುತ್ತಾರೆ" ಎಂದು ಬರೆದಿದ್ದಾರೆ.

ತೈ ಚಿ ಕದನ ಕಲೆಯ ಅಂಶವು ಎದುರಾಳಿಯ ಚಲನೆಗಳ ಸಂವೇದನೆ ಮೇಲೆ ಅವಲಂಬಿತವಾಗಿದ್ದು, ಗುರುತ್ವ ಕೇಂದ್ರವು ಸೂಕ್ತ ಪ್ರತಿಕ್ರಿಯೆಗಳನ್ನು ಆದೇಶಿಸುತ್ತದೆ. ಎದುರಾಳಿಯ ದೇಹ ಸ್ಪರ್ಶವಾದ ತಕ್ಷಣವೇ ಅವನ ಗುರುತ್ವ ಕೇಂದ್ರದ ಮೇಲೆ ಪರಿಣಾಮಕಾರಿಯಾಗಿ ಪ್ರಭಾವವನ್ನು ಬೀರಬೇಕು ಅಥವಾ "ಬಂಧಿಸಬೇಕು". ಇದನ್ನು ತೈ ಚಿ ಕದನ ಕಲೆಯ ವಿದ್ಯಾರ್ಥಿಯ ಒಂದು ಪ್ರಾಥಮಿಕ ಗುರಿಯಾಗಿ ತರಬೇತಿ ನೀಡಲಾಗುತ್ತದೆ.[] ಕೇಂದ್ರವನ್ನು ಸೆರೆಹಿಡಿಯುವ ಸಂವೇದನಶೀಲತೆಯು ಸಾವಿರಕ್ಕೂ ಅಧಿಕ ಗಂಟೆಗಳ ಕಾಲ ಮೊದಲು ಯಿನ್ (ನಿಧಾನಗತಿಯ, ಪುನರಾವರ್ತಿತ, ಧ್ಯಾನಸ್ಥ, ಕಡಿಮೆ ಪರಿಣಾಮ) ಹಾಗು ನಂತರ ಯಾಂಗ್ ("ವಾಸ್ತವಿಕ," ಸಕ್ರಿಯ, ವೇಗ, ಹೆಚ್ಚಿನ ಪರಿಣಾಮ) ಕದನ ಕಲೆ ತರಬೇತಿಯನ್ನು ಸೇರಿಸಿ, ಪ್ರಕಾರಗಳು, ಪುಷಿಂಗ್ ಹ್ಯಾಂಡ್ಸ್, ಹಾಗು ಮುಷ್ಟಿಯುದ್ಧದ ತರಬೇತಿಯನ್ನು ಪಡೆದ ನಂತರ ಸಾಧನೆಯಾಗುತ್ತದೆ. ತೈ ಚಿಯನ್ನು ಮೂರು ಮೂಲಭೂತ ಶ್ರೇಣಿಗಳಲ್ಲಿ ತರಬೇತಿ ನೀಡಲಾಗುತ್ತದೆ: ನಿಕಟ, ಮಧ್ಯಮ ಹಾಗು ದೂರ, ಹಾಗು ನಂತರ ಇದರ ನಡುವೆ ಎಲ್ಲ ತರಬೇತಿ ಅಂಶಗಳನ್ನು ಒಳಗೊಂಡಿರುತ್ತವೆ. ಗುದ್ದುಗಳಿಗಿಂತ ಹೆಚ್ಚಾಗಿ ತಳ್ಳುವುದು ಹಾಗು ಮುಕ್ತ ಕೈ ಹೊಡೆತಗಳು ಸಾಮಾನ್ಯವಾಗಿ ಹೆಚ್ಚಾಗಿರುತ್ತವೆ, ಜೊತೆಗೆ ಸಾಧಾರಣವಾಗಿ ಕಾಲುಗಳು ಹಾಗು ಕೆಳ ಭಾಗಕ್ಕೆ ಒದೆತ ನೀಡಲಾಗುತ್ತದೆ, ಸೊಂಟಕ್ಕಿಂತ ಮೇಲ್ಭಾಗದಲ್ಲಿ ಶೈಲಿಯನ್ನು ಅವಲಂಬಿಸಿ ಒದೆತವನ್ನು ನೀಡಲಾಗುವುದಿಲ್ಲ. ಬೆರಳುಗಳು, ಮುಷ್ಟಿಗಳು, ಅಂಗೈಗಳು, ಕೈಗಳ ಬದಿಗಳು, ಮಣಿಕಟ್ಟುಗಳು, ಮುಂದೋಳುಗಳು, ಮೊಣಕೈಗಳು, ಭುಜಗಳು, ಹಿಂಭಾಗ, ಸೊಂಟಗಳು, ಮಂಡಿಗಳು ಹಾಗು ಪಾದಗಳನ್ನು ಸಾಮಾನ್ಯವಾಗಿ ಹೊಡೆತಕ್ಕೆ ಬಳಸಲಾಗುತ್ತದೆ ಜತೆಗೆ ಕಣ್ಣುಗಳು, ಗಂಟಲು, ಹೃದಯ, ತೊಡೆಸಂದು ಹಾಗು ಇತರ ಅಕ್ಯೂಪ್ರೆಷರ್ ಸ್ಥಾನಗಳಿಗೆ ಹೊಡೆಯುವುದನ್ನು ಉನ್ನತ ದರ್ಜೆಯ ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಾರೆ. ಜಾಯಿಂಟ್ ಟ್ರಾಪ್ಸ್, ಲಾಕ್ಸ್ ಮತ್ತು ಬ್ರೇಕ್ಸ್(ಚಿನ್ ನ) ತಂತ್ರಗಳನ್ನೂ ಸಹ ಬಳಸಲಾಗುತ್ತದೆ. ಹಲವು ತೈ ಚಿ ಗುರುಗಳು ತಮ್ಮ ವಿದ್ಯಾರ್ಥಿಗಳು ರಕ್ಷಣಾತ್ಮಕ ಅಥವಾ ಎದುರಾಳಿಯನ್ನು ನಿಷ್ಕ್ರಿಯಗೊಳಿಸುವ ತಂತ್ರಗಳನ್ನು ಸಂಪೂರ್ಣವಾಗಿ ಕಲಿಯುವುದನ್ನು ನಿರೀಕ್ಷಿಸುತ್ತಾರೆ, ಜೊತೆಗೆ ಆಕ್ರಮಣಕಾರಿ ಕೌಶಲಗಳ ಬಗ್ಗೆ ವ್ಯಾಪಕ ತರಬೇತಿ ಪಡೆಯುವ ಮುಂಚೆ ಒಬ್ಬ ವಿದ್ಯಾರ್ಥಿಯು ಗುರುಗಳ ಮುಂದೆ ರಕ್ಷಣಾತ್ಮಕ ತಂತ್ರಗಳ ಪರಿಣತಿಯನ್ನು ಪ್ರದರ್ಶಿಸಬೇಕು. ರಕ್ಷಣಾರಹಿತರನ್ನು ಕಾಪಾಡಲು ಹಾಗು ಎದುರಾಳಿಯ ಮೇಲೆ ಕರುಣೆಯನ್ನು ತೋರಲು ಸಾಂಪ್ರದಾಯಿಕ ಕಲಾಶಾಲೆಗಳಲ್ಲಿ ಕದನ ಕಲೆ ಸದ್ಗುಣ ಅಥವಾ ವೀರತ್ವದ ವೂ ಟೆ (武德)ಪ್ರದರ್ಶನದ ನಿರೀಕ್ಷೆಗೆ ಸಾಂಪ್ರದಾಯಿಕ ಶಾಲೆಗಳು ಮಹತ್ವ ನೀಡುತ್ತವೆ.[]

ದೈಹಿಕ ಪ್ರಕಾರದ ಜೊತೆಯಲ್ಲಿ, ತೈ ಚಿ ಕದನ ಕಲಾ ಶಾಲೆಗಳು ಹೊಡೆತದ ಸಾಮರ್ಥ್ಯವು ಇನ್ನೊಬ್ಬ ವ್ಯಕ್ತಿಗೆ ಎಷ್ಟು ಪರಿಣಾಮ ಬೀರಿದೆ ಎಂಬುದಕ್ಕೆ ಗಮನವನ್ನು ಹರಿಸುತ್ತದೆ. ದೈಹಿಕವಾಗಿ ಒಂದೇ ರೀತಿ ಕಾಣುವ ಅಂಗೈ ಹೊಡೆತಗಳು ಎದುರಾಳಿಯ ದೇಹದ ಮೇಲೆ ಸಂಪೂರ್ಣ ವಿಭಿನ್ನ ಪರಿಣಾಮವನ್ನು ಬೀರುವ ರೀತಿಯಲ್ಲಿ ಪ್ರದರ್ಶಿಸಬೇಕು. ಒಂದು ಅಂಗೈ ಹೊಡೆತದಲ್ಲಿ ಕೇವಲ ಎದುರಾಳಿಯನ್ನು ಹಿಂದಕ್ಕೆ ತಳ್ಳಬಹುದಾಗಿದೆ, ಇದರ ಬದಲಿಗೆ ಎದುರಾಳಿಯ ಗುರುತ್ವ ಕೇಂದ್ರಕ್ಕೆ ಭಂಗ ತರುವ ಮೂಲಕ ನೆಲದಿಂದ ಲಂಬವಾಗಿ ಮೇಲಕ್ಕೆತ್ತುವ ಬಗ್ಗೆ ಗಮನ ಹರಿಸಬಹುದು; ಅಥವಾ ಇನ್ನೊಬ್ಬ ವ್ಯಕ್ತಿಗೆ ಆಂತರಿಕ ಹಾನಿಯುಂಟುಮಾಡುವ ಉದ್ದೇಶದಿಂದ ಅಂತಿಮ ಹಂತದ ಹೊಡೆದ ನೀಡಬಹುದು.

ಇತರ ತರಬೇತಿ ಅಭ್ಯಾಸಗಳು ಸೇರಿವೆ:

  • ನೇರವಾದ ಖಡ್ಗ ವನ್ನು ಬಳಸಿಕೊಂಡು ಆಯುಧಗಳ ತರಬೇತಿ ಹಾಗು ಖಡ್ಗವಿದ್ಯೆಯ ಬಳಕೆಯನ್ನು ಜಿಯಾನ್ ಅಥವಾ ಚಿಯೇನ್ ಅಥವಾ ಗಿಮ್ (jiàn(ಜಿಯಾನ್) 劍)ಎಂದು ಕರೆಯಲಾಗುತ್ತದೆ, ಕೆಲವು ಬಾರಿ ಕರೆಯುವ ಅಗಲಕತ್ತಿ ಅಥವಾ ಟಾಓ ಒಂದು ಭಾರವಾದ ಡೊಂಕಾದ ಬಾಗುಕತ್ತಿ ಯಾಗಿದೆ (dāo 刀(ಡಾಓ)ವನ್ನು ವಾಸ್ತವವಾಗಿ ಒಂದು ದೊಡ್ಡ ಚೂರಿ ಯೆಂದು ಪರಿಗಣಿಸಲಾಗಿದೆ, ಮಡಚಬಹುದಾದ ಫ್ಯಾನ್ ನನ್ನು ಸ್ಯಾನ್ ಎಂದೂ ಸಹ ಕರೆಯಲಾಗುತ್ತದೆ, ಮರದ ದೊಣ್ಣೆಯನ್ನು ಕುನ್ (棍) ಎಂದು ಕರೆಯಲಾಗುತ್ತದೆ(೨ ಮೀಟರ್ ಉದ್ದ), ೭ ಅಡಿ (೨ ಮೀಟರ್) ಉದ್ದದ ಈಟಿ ಹಾಗು ೧೩ ಅಡಿ (೪ ಮೀಟರ್) ಉದ್ದದ ಶೂಲ ವನ್ನು(ಎರಡನ್ನೂ qiāng 槍 (ಕಿಯಾಂಗ್) ಎಂದು ಕರೆಯಲಾಗುತ್ತದೆ) ಬಳಸಲಾಗುತ್ತದೆ. ಕೆಲವು ಸಾಂಪ್ರದಾಯಿಕ ಶೈಲಿಗಳಲ್ಲಿ ಇಂದಿಗೂ ಬಳಸುವ ಹೆಚ್ಚಿನ ನವೀನ ಆಯುಧಗಳಲ್ಲಿ ದೊಡ್ಡ ದಾದಾಓ ಅಥವಾ ಟಾ ಟಾಓ (大刀) ಹಾಗು ಪುಡಓ ಅಥವಾ P'u Tao (ಪು ಟಾಓ) (撲刀)ಬಾಗುಕತ್ತಿಗಳು, ಈಟಿಗೊಡಲಿ (jǐ(ಜಿ)戟), ಬೆತ್ತ , ಹಗ್ಗದ-ಈಟಿ , ಮೂರು ಭಾಗವಾಗಿರುವ ದೊಣ್ಣೆ , ಗಾಳಿ ಹಾಗು ಬೆಂಕಿಯ ಚಕ್ರಗಳು , ಕುಣಿಕೆ ಹಗ್ಗ , ಚಾವಟಿ , ಸರಪಳಿ ಚಾವಟಿ ಹಾಗು ಉಕ್ಕಿನ ಚಾವಟಿ .
  • ಎರಡು-ವ್ಯಕ್ತಿಗಳ ಮುಷ್ಟಿಯುದ್ಧ ವರಿಸೆಯ ಪಂದ್ಯ(ಪುಷ್ ಹ್ಯಾಂಡ್ಸ್ ಸ್ಪರ್ಧೆಗಳ ಭಾಗ ಹಾಗು/ಅಥವಾ ಸ್ಯಾನ್ ಶೌ 散手);
  • ಉಸಿರಾಟದ ವ್ಯಾಯಾಮಗಳು; ನೆಯಿ ಕುಂಗ್ (內功 nèigōng(ನೆಯಿಗೊಂಗ್) ಅಥವಾ, ಸಾಧಾರಣವಾಗಿ ಚಿ ಕುಂಗ್ (氣功 qìgōng(ಕಿಗೊಂಗ್))ನ್ನು ch'i(氣 qì) ಅಥವಾ "ಉಸಿರಾಟದ ಶಕ್ತಿ"ಯನ್ನು ದೈಹಿಕ ಚಲನೆ ಮತ್ತು ಪೋಸ್ಟ್ ಸ್ಟ್ಯಾಂಡಿಂಗ್(ಸ್ಥಿರ ಭಂಗಿ)ಸಮನ್ವಯದೊಂದಿಗೆ ಬೆಳೆಸಿಕೊಳ್ಳುವುದರ ಜೊತೆಗೆ ಅಥವಾ ಎರಡರ ಸಂಯೋಜನೆಯನ್ನು ಮಾಡುವುದು. ಇದನ್ನು ಮುಂಚೆ ಕೇವಲ ಒಂದು ಪ್ರತ್ಯೇಕ ಪೂರಕ ತರಬೇತಿ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತಿತ್ತು. ಕಳೆದ ೬೦ ವರ್ಷಗಳಿಂದೀಚೆಗೆ ಜನಸಾಮಾನ್ಯರು ಇವುಗಳ ಬಗ್ಗೆ ಹೆಚ್ಚಿನ ತಿಳುವಳಿಕೆ ಗಳಿಸಿದ್ದಾರೆ.

ಆಧುನಿಕ ತೈ ಚಿ

[ಬದಲಾಯಿಸಿ]
ಬೀಜಿಂಗ್ ನ ಟೆಂಪಲ್ ಆಫ್ ಹೆವೆನ್ ನಲ್ಲಿ ನಡೆಯುತ್ತಿರುವ ಹೊರಾಂಗಣ ಅಭ್ಯಾಸ.

ಒಂದು ಶುದ್ಧ ಆರೋಗ್ಯದ ದೃಷ್ಟಿಯಿಂದ, ತೈ ಚಿ ತರಬೇತಿಗಳು ಆಸ್ಪತ್ರೆಗಳು, ಕ್ಲಿನಿಕ್ಕುಗಳು, ಸಮುದಾಯ ಹಾಗು ಹಿರಿಯ ನಾಗರೀಕರ ಕೇಂದ್ರಗಳಲ್ಲಿ ಕಳೆದ ಇಪ್ಪತ್ತು ವರ್ಷಗಳಿಗೂ ಮೇಲ್ಪಟ್ಟು ಜನಪ್ರಿಯತೆಯನ್ನು ಗಳಿಸಿದೆ. ಬೇಬಿ ಬೂಮರ್ಸ್(೨೦ನೇ ಶತಮಾನದ ಮಧ್ಯಭಾಗದಲ್ಲಿ ಜನಿಸಿದವರು) ವಯಸ್ಸಿನವರು ಹಾಗು ಹಿರಿಯರಿಗೆ ಒತ್ತಡವನ್ನು ಕಡಿಮೆ ಮಾಡುವ ತರಬೇತಿಯಾಗಿ ಕಲೆಯು ಜನಪ್ರಿಯತೆಯನ್ನು ಗಳಿಸಿದೆ.[೧೨][೧೩]

ಇದರ ಜನಪ್ರಿಯತೆಯ ಪರಿಣಾಮವಾಗಿ, ತೈ ಚಿ ಕಲೆಯನ್ನು ಮುಖ್ಯವಾಗಿ ಆತ್ಮ-ರಕ್ಷಣಾ ಕಲೆಯಾಗಿ ಅಭ್ಯಾಸಮಾಡುವುದಾಗಿ ಹೇಳುವ ಜನರು, ಅದರ ಸೌಂದರ್ಯಪ್ರಿಯತೆಗಾಗಿ ಅಭ್ಯಾಸ ಮಾಡುವ ಜನರು(ಕೆಳಗಿನ ವೂಶು ಭಾಗವನ್ನು ನೋಡಿ), ಹಾಗು ದೈಹಿಕ ಹಾಗು ಮಾನಸಿಕ ಆರೋಗ್ಯದ ಅನುಕೂಲಕ್ಕಾಗಿ ಅಭ್ಯಾಸ ಮಾಡಲು ಆಸಕ್ತಿ ತೋರುವ ಜನರ ಅಭಿಪ್ರಾಯಗಳು ಭಿನ್ನವಾಗಿವೆ. ಪ್ರಾಥಮಿಕವಾಗಿ ವೂಶುವನ್ನು ಪ್ರದರ್ಶನದ ದೃಷ್ಟಿಯಿಂದ ಅಭ್ಯಸಿಸಲಾಗುತ್ತದೆ; ಈ ರೀತಿಯಾದ ಪ್ರಕಾರಗಳನ್ನು ಸ್ಪರ್ಧೆಗಳಲ್ಲಿ ಅಂಕವನ್ನು ಗಳಿಸುವ ಉದ್ದೇಶದಿಂದ ರೂಪಿಸಲಾಗಿರುತ್ತದೆ ಜೊತೆಗೆ ಹೆಚ್ಚಾಗಿ ಆರೋಗ್ಯ ನಿರ್ವಹಣೆ ಅಥವಾ ಕದನ ಕಲಾ ಸಾಮರ್ಥ್ಯದ ಬಗ್ಗೆ ಲಕ್ಷ್ಯ ವಹಿಸುವುದಿಲ್ಲ. ಹೆಚ್ಚಿನ ಸಾಂಪ್ರದಾಯಿಕ ಪ್ರಕಾರಗಳ ತರಬೇತುದಾರರು ಆರೋಗ್ಯ ಹಾಗು ಕದನ ಕಲೆ ಅಂಶಗಳು ಎರಡೂ ಸಮಾನವಾಗಿ ಅಗತ್ಯವಿರುತ್ತದೆಂದು ನಂಬುತ್ತಾರೆ: ತೈ ಚಿಯ ಯಿನ್ ಹಾಗು ಯಾಂಗ್ . ಹೀಗಾಗಿ ತೈ ಚಿ "ಕೌಟುಂಬಿಕ" ಶಾಲೆಗಳು, ವಿದ್ಯಾರ್ಥಿಗಳ ಕಲಾಭ್ಯಾಸದ ಉದ್ದೇಶವು ಏನೇ ಆಗಿದ್ದರೂ, ಇಂದಿಗೂ ಒಂದು ಕದನ ಕಲೆಯ ಅರ್ಥಾನ್ವಯದಲ್ಲಿ ತರಬೇತಿಯನ್ನು ನೀಡುತ್ತವೆ.[೧೪]

ಕ್ರೀಡೆಯಾಗಿ ತೈ ಚಿ

[ಬದಲಾಯಿಸಿ]

ತೈ ಚಿ ಚುಆನ್ ತರಬೇತಿ ನೀಡುವ ಹಲವು ಕುಟುಂಬಗಳು ಚೀನಾದಿಂದ ಸ್ಥಳಾಂತರಗೊಂಡಿದ್ದರಿಂದ ಅಥವಾ ೧೯೪೯ರಲ್ಲಿ ಕಮ್ಯೂನಿಸ್ಟ್ ಆಳ್ವಿಕೆಯು ಸ್ಥಾಪನೆಗೊಂಡ ನಂತರ ತೈ ಚಿ ಚುಆನ್ ತರಬೇತಿಯನ್ನು ನಿಲ್ಲಿಸಲು ಒತ್ತಡ ಹೇರಿದ್ದರಿಂದ,ವೂಶು ಪಂದ್ಯಾವಳಿಗಳ ತೀರ್ಮಾನಗಳಲ್ಲಿ ತೈ ಚಿ ಚುಆನ್ನನ್ನು ಪ್ರಮಾಣೀಕರಿಸುವುದಕ್ಕಾಗಿ, ಸರ್ಕಾರವು ಚೈನೀಸ್ ಸ್ಪೋರ್ಟ್ಸ್ ಕಮಿಟಿಯ ಪ್ರಾಯೋಜಕತ್ವವನ್ನು ವಹಿಸಿಕೊಂಡಿತು. ಇದು ೧೯೫೬ರಲ್ಲಿ ಯಾಂಗ್ ಕುಟುಂಬ ಕೈ ಪ್ರಕಾರವನ್ನು 24 ಭಂಗಿಗಳಿಗೆ ಮೊಟಕುಗೊಳಿಸಲು ನಾಲ್ಕು ವೂಶು ತರಬೇತುದಾರರನ್ನು ನೇಮಕ ಮಾಡಿತು. ಅವರು ತೈ ಚಿ ಚುಆನ್ ನ ಸ್ವರೂಪವನ್ನು ಹಾಗೆ ಉಳಿಸಿಕೊಳ್ಳಲು ಬಯಸಿದ್ದರು. ಆದರೆ ತರಬೇತಿ ನೀಡಲು ಕಷ್ಟವಾಗದ ಹಾಗೆ ಹಾಗು ದೀರ್ಘವಾದ(ಸಾಧಾರಣವಾಗಿ ೮೮ ರಿಂದ ೧೦೮ ಭಂಗಿಗಳಿದ್ದವು) ಸಾಂಪ್ರದಾಯಿಕ, ಏಕವ್ಯಕ್ತಿ ಕೈ ಪ್ರಕಾರಕ್ಕಿಂತ ಸುಲಭವಾಗಿ ಕಲಿಯುವ ಒಂದು ನಿಯತಕ್ರಮವನ್ನು ಸೃಷ್ಟಿಸಲು ಬಯಸಿದ್ದರು. ಕಳೆದ ೧೯೭೬ರಲ್ಲಿ, ಪ್ರದರ್ಶನದ ಉದ್ದೇಶದಿಂದ ಒಂದು ಸ್ವಲ್ಪಮಟ್ಟಿಗಿನ ದೀರ್ಘ ಪ್ರಕಾರವನ್ನು ಅಭಿವೃದ್ಧಿಪಡಿಸಿತು. ಇದು ಸಹ ಸಾಂಪ್ರದಾಯಿಕ ಪ್ರಕಾರಗಳ ಸಂಪೂರ್ಣ ಸ್ಮರಣೆಯನ್ನು, ಸಮತೋಲನವನ್ನು ಹಾಗು ಸಮನ್ವಯದ ಅಗತ್ಯಗಳನ್ನು ಒಳಗೊಂಡಿರಲಿಲ್ಲ. ಈ ಸಂಯೋಜಿತ ೪೮ ಪ್ರಕಾರಗಳನ್ನು ಮೂರು ವೂಶು ತರಬೇತುದಾರರು ಪ್ರೊಫೆಸರ್ ಮೆನ್ ಹುಯಿ ಫೆಂಗ್ ರ ಸಾರಥ್ಯದಲ್ಲಿ ರೂಪಿಸಿದರು. ಈ ರೀತಿಯಾದ ಸಂಯೋಜಿತ ಪ್ರಕಾರಗಳನ್ನು ಶಾಸ್ತ್ರೀಯ ನಾಲ್ಕು ಮೂಲ ಪ್ರಕಾರಗಳ ಕೆಲವು ಲಕ್ಷಣಗಳನ್ನು ಸರಳಗೊಳಿಸಿ ಹಾಗು ಸಂಯೋಜಿಸುವ ಆಧಾರದ ಮೇಲೆ ರೂಪಿಸಲಾಯಿತು; ಚೆನ್, ಯಾಂಗ್, ವೂ, ಹಾಗು ಸನ್. ಚೀನಾದಲ್ಲಿ ತೈ ಚಿ ಮತ್ತೆ ಜನಪ್ರಿಯಗೊಂಡಾಗ, ಆರು-ನಿಮಿಷಗಳ ಸೀಮಿತ ಅವಧಿಯೊಂದಿಗೆ ಪೂರ್ಣಗೊಳ್ಳುವಂತೆ ಸ್ಪರ್ಧಾತ್ಮಕ ಪ್ರಕಾರಗಳನ್ನು ಅಭಿವೃದ್ಧಿಪಡಿಸಲಾಯಿತು. ಕಳೆದ ೧೯೮೦ರ ಕಡೆ ಭಾಗದಲ್ಲಿ, ಚೈನೀಸ್ ಸ್ಪೋರ್ಟ್ಸ್ ಕಮಿಟಿ ವಿವಿಧ ಹಲವು ಸ್ಪರ್ಧಾತ್ಮಕ ಪ್ರಕಾರಗಳನ್ನು ಪ್ರಮಾಣೀಕರಣಗೊಳಿಸಿತು. ಅವರು ನಾಲ್ಕು ಪ್ರಮುಖ ಶೈಲಿಗಳು ಹಾಗು ಸಂಯೋಜಿತ ರೂಪಗಳನ್ನು ಪ್ರದರ್ಶಿಸುವ ತಂಡಗಳನ್ನು ಅಭಿವೃದ್ಧಿಪಡಿಸಿತು. ಈ ಶೈಲಿಗಳ ಐದು ತಂಡಗಳನ್ನು ವಿವಿಧ ಗುಂಪುಗಳು ರೂಪಿಸಿದರು, ಜೊತೆಗೆ ನಂತರ ಚೀನಾದ ವೂಶು ತರಬೇತುದಾರರ ಸಮಿತಿಯು ಅಂಗೀಕರಿಸಿತು. ಈ ರೀತಿಯಾಗಿ ಪ್ರಕಾರಗಳ ಎಲ್ಲ ತಂಡಗಳನ್ನು ಅವರ ಶೈಲಿಗಳ ಆಧಾರದ ಮೇಲೆ ಹೆಸರಿಸಲಾಯಿತು. ಉದಾಹರಣೆಗೆ, ಚೆನ್ ಶೈಲಿಯ ರಾಷ್ಟ್ರೀಯ ಸ್ಪರ್ಧಾತ್ಮಕ ಪ್ರಕಾರವು ೫೬ ಪ್ರಕಾರಗಳನ್ನು ಹೊಂದಿದೆ, ಹಾಗು ಮುಂತಾದವು.ಿ ಸಂಯೋಜಿತ ಪ್ರಕಾರವೆಂದರೆ ದಿ ೪೨ ಫಾರ್ಮ್ ಅಥವಾ ಸರಳವಾಗಿ ಸ್ಪರ್ಧಾತ್ಮಕ ಪ್ರಕಾರ . ಮತ್ತೊಂದು ಆಧುನಿಕ ಪ್ರಕಾರವೆಂದರೆ, ೧೯೫೦ರ ದಶಕದ ಸುಮಾರಿಗೆ ರೂಪುಗೊಂಡ ತೈ-ಚಿ ಚಾನ್ ಪ್ರಕಾರದ ಸಂಯೋಜನೆಯಿರುವ 67 ಚಲನೆಗಳು, ಇದು ಒಂದು ಸಂಯೋಜಕ ಪ್ರಕಾರದೊಂದಿಗೆ ಮಿಶ್ರಣಗೊಂಡ ಯಾಂಗ್, ವೂ, ಸನ್, ಚೆನ್ ಹಾಗು ಫೂ ಪ್ರಕಾರಗಳ ಲಕ್ಷಣಗಳನ್ನು ಹೊಂದಿದೆ. ವೂಶು ತರಬೇತುದಾರ ಬೌ ಸಿಮ್ ಮಾರ್ಕ್ ಈ ೬೭ ಸಂಯೋಜನೆಯ ಒಬ್ಬ ಪ್ರಮುಖ ನಿರೂಪಕ.

ತೈ ಚಿ ಚುಆನ್ ನ ಈ ಆಧುನಿಕ ರೂಪಾಂತರಗಳು(ಕೆಲವೊಂದು ಬಾರಿ ಪಿನ್ಯಿನ್ ರೋಮನೀಕರಣವಾದ ತೈ ಜಿ ಕುಆನ್ ಬಳಸಿಕೊಂಡು ಪಟ್ಟಿ ಮಾಡಲಾಗುತ್ತದೆ) ಅಂತಾರಾಷ್ಟ್ರೀಯ ವೂಶು ಸ್ಪರ್ಧಾವಳಿಗಳ ಒಂದು ಅವಿಭಾಜ್ಯ ಅಂಗವಾಗಿರುವುದರ ಜೊತೆಗೆ ಹಲವಾರು ಜನಪ್ರಿಯ ಚೈನೀಸ್ ಚಲಚಿತ್ರಗಳಲ್ಲಿ ಕಂಡುಬಂದಿದೆ. ಇದರಲ್ಲಿ ಜನಪ್ರಿಯ ವೂಶು ಸ್ಪರ್ಧಿಗಳು ಪಾತ್ರ ನಿರ್ವಹಿಸಿರುತ್ತಾರೆ ಅಥವಾ ಸಂಯೋಜನೆ ಮಾಡಿರುತ್ತಾರೆ, ಉದಾಹರಣೆಗೆ ಜೆಟ್ ಲಿ ಹಾಗು ಡೋನ್ನಿ ಯೆನ್.

ಕಳೆದ ೧೯೯೦ರ ೧೧ನೇ ಏಶಿಯನ್ ಪಂದ್ಯಗಳಲ್ಲಿ, ಮೊದಲ ಬಾರಿಗೆ ವೂಶುವನ್ನು ಸ್ಪರ್ಧೆಯಲ್ಲಿ ಸೇರ್ಪಡೆಗೊಳಿಸಲಾಯಿತು. ಇದರಲ್ಲಿ ೪೨ ಪ್ರಕಾರ ವು ತೈ ಚಿ ಕದನ ಕಲೆಯನ್ನು ಪ್ರತಿನಿಧಿಸಲು ಆಯ್ಕೆ ಮಾಡಲಾಯಿತು. ಇಂಟರ್ನ್ಯಾಷನಲ್ ವೂಶು ಫೆಡರೇಶನ್ (IWUF) ವೂಶು ಒಲಂಪಿಕ್ ಪಂದ್ಯಾವಳಿಗಳಭಾಗವಾಗಬೇಕೆಂದು, ಆದರೆ ಪದಕಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲವೆಂದು ಅರ್ಜಿ ಸಲ್ಲಿಸಿತು.[೧೫]

ವೃತ್ತಿಗಾರರು ಇತರ ಶಾಲೆಯ ವಿದ್ಯಾರ್ಥಿಗಳು ವಿರುದ್ಧ ತಮ್ಮ ಪ್ರಾಯೋಗಿಕ ಕದನ ಕಲಾ ಕೌಶಲಗಳನ್ನು ಪರೀಕ್ಷಿಸುವುದರ ಜೊತೆಗೆ ಪುಷಿಂಗ್ ಹ್ಯಾಂಡ್ಸ್ ಹಾಗು ಸಂಷೌ ಸ್ಪರ್ಧೆಯಲ್ಲಿ ಕದನ ಕಲಾ ಶೈಲಿಯನ್ನೂ ಪರೀಕ್ಷಿಸುತ್ತಾರೆ.

ಆರೋಗ್ಯದ ಅನುಕೂಲಗಳು

[ಬದಲಾಯಿಸಿ]
ತೈ ಚಿಯನ್ನು ಹಿರಿಯರಿಗೆ ಅಥವಾ ದುರ್ಬಲರಿಗೆ ಯೌವ್ವನದ ಸ್ವಾಭಾವಿಕ ಕಸುವನ್ನು ಪುನಃ ಗಳಿಸುವ ಒಂದು ವಿಧಾನವಾಗಿ ಪ್ರಚಾರಗೊಳಿಸಲಾಗುತ್ತಿದೆ.

ಪಾಶ್ಚಿಮಾತ್ಯ ವಿದ್ಯಾರ್ಥಿಗಳಿಗೆ ತೈ ಚಿ ಕಲೆಯು ಪರಿಚಯವಾಗುವ ಮೊದಲು, ತೈ ಚಿ ಚುಆನ್‌ನಿಂದ ಉಂಟಾಗುವ ಆರೋಗ್ಯದ ಅನುಕೂಲಗಳನ್ನು ಸಾಂಪ್ರದಾಯಿಕ ಚೀನಾ ಔಷಧಪದ್ಧತಿಯ ಮೂಲಕ ವ್ಯಾಪಕವಾಗಿ ವಿವರಿಸಲಾಯಿತು. ಇದು ದೇಹ ಹಾಗು ಗುಣಪಡಿಸುವ ವಿಧಾನಗಳ ದೃಷ್ಟಿಕೋನವನ್ನು ಆಧರಿಸಿದೆ. ಆಧುನಿಕ ವಿಜ್ಞಾನದಿಂದ ಅಧ್ಯಯನ ಅಥವಾ ಬೆಂಬಲಕ್ಕೆ ಒಳಗಾಗಿಲ್ಲ. ಇಂದು, ತೈ ಚಿ ಪಾಶ್ಚಿಮಾತ್ಯ ದೇಶಗಳಲ್ಲಿ ಕಠಿಣವಾದ ವೈಜ್ಞಾನಿಕ ಅಧ್ಯಯನಗಳ ಪ್ರಕ್ರಿಯೆಗೆ ಒಳಪಟ್ಟಿದೆ.[೧೬] ಇಂದು ಬಹುತೇಕ ಆರೋಗ್ಯ ಅಧ್ಯಯನಗಳು ಕೆಲವು ಕ್ಷೇತ್ರಗಳಲ್ಲಿ ತೈ ಚಿಯ ಅಭ್ಯಾಸದಿಂದ ಒಂದು ಸ್ಪಷ್ಟವಾದ ಅನುಕೂಲಗಳನ್ನು ಪ್ರದರ್ಶಿಸುತ್ತಿದೆ, ವೈದ್ಯಕೀಯ ವೃತ್ತಿಪರರು ಅತ್ಯಂತ ಅನುಕೂಲಕರ ಶೈಲಿ ಮುಂತಾದ ಸೌಮ್ಯಕಾರಕ ಅಂಶಗಳನ್ನು ನಿರ್ಧರಿಸಲು ಹೆಚ್ಚು ಆಳವಾದ ಅಧ್ಯಯನಗಳಿಗೆ ಕರೆ ನೀಡಿದೆ. ಉತ್ತಮ ಫಲಿತಾಂಶಗಳನ್ನು ಪ್ರದರ್ಶಿಸಲು ಹಾಗೂ ವ್ಯಾಯಾಮದ ಇತರ ಮಾದರಿಗಳಂತೆ ತೈ ಚಿ ಪರಿಣಾಮಕಾರಿಯಾಗಿದೆಯೇ ಎಂಬುದನ್ನು ತೋರಿಸಲು ಅಭ್ಯಾಸದ ಅವಧಿ ಸೂಚಿಸಿದ್ದಾರೆ.[೧೬]

ದೀರ್ಘಾವಧಿ ಕಾಯಿಲೆ ಸ್ಥಿತಿಗಳು

[ಬದಲಾಯಿಸಿ]

ತೀವ್ರತರವಾದ ತೈ ಚಿಯ ಅಭ್ಯಾಸವು ಕೆಲವು ಅನುಕೂಲಕರ ಪರಿಣಾಮಗಳನ್ನು ಬೀರಿದ್ದರ ಬಗ್ಗೆ ಸಂಶೋಧಕರು ಪತ್ತೆ ಮಾಡಿದ್ದಾರೆ. ಇದು ಸಮತೋಲನದ ನಿರ್ವಹಣೆಗೆ ಉತ್ತೇಜನ, ನಮ್ಯತೆ, ಹೃದಯ ರಕ್ತನಾಳದ ಯುಕ್ತತೆ ಹಾಗು ಆರೋಗ್ಯವಂತ ವಯಸ್ಸಾದ ರೋಗಿಗಳು ಮತ್ತು ದೀರ್ಘಾವಧಿಯ ಪಾರ್ಶ್ವವಾಯು ಪೀಡನೆಯಿಂದ ಚೇತರಿಸಿಕೊಳ್ಳುವ ವ್ಯಕ್ತಿಗಳು ಕೆಳಕ್ಕೆ ಬೀಳುವ ಅಪಾಯವನ್ನು ತಗ್ಗಿಸುತ್ತದೆ.[೧೭], ಹೃದಯ ಸ್ತಂಭನ, ತೀವ್ರ ರಕ್ತದೊತ್ತಡ, ಹೃದಯಾಘಾತ, ಬಹುವಿಧದ ಸ್ಕ್ಲೆರೋಸಿಸ್(ಗಡಸುಗಟ್ಟಿಕೆ), ಪಾರ್ಕಿನ್ಸನ್, ಹಾಗು ಅಲ್ಜಿಮರ್ ಕಾಯಿಲೆ ಎಲ್ಲದಕ್ಕೂ ಅನುಕೂಲಕರವಾಗಿದೆಂದು ಪತ್ತೆಹಚ್ಚಿದರು. ತೈ ಚಿಯ ಶಾಂತವಾದ, ಕಡಿಮೆ ಪರಿಣಾಮವನ್ನು ಹೊಂದಿರುವ ಚಲನೆಗಳು, ಸರ್ಫಿಂಗ್‌ಗೆ ಹೆಚ್ಚು ಹಾಗೂ ಇಳಿಜಾರಿನ ಸ್ಕೀಯಿಂಗ್ ಸ್ಪರ್ಧೆಗೆ ಬೇಕಾಗುವಷ್ಟು ಕ್ಯಾಲರಿಗಳನ್ನು ಖರ್ಚುಮಾಡುತ್ತದೆ.[೧೮]

ತೈ ಚಿಯನ್ನು ಯೋಗದ ಜೊತೆಗೆ ೧೨–೧೪ ವಾರಗಳ ಕಾಲ ಅಭ್ಯಸಿಸಿದಾಗ, ಅದು ೨೦–೨೬ ಮಿಲಿಗ್ರಾಂಗಳಷ್ಟು LDLಗಳ ಮಟ್ಟವನ್ನು ತಗ್ಗಿಸುತ್ತದೆ.[೧೯] ಈ ಅಧ್ಯಯನಗಳ ಒಂದು ಆಮೂಲಾಗ್ರ ಪುನರ್ಪರಿಶೀಲನೆ ಮಿತಿಗಳನ್ನು ಅಥವಾ ಹಾಗು ಪಕ್ಷಪಾತಗಳನ್ನು ತೋರಿತು. ಇದರಿಂದಾಗಿ ತೈ ಚಿಯ ಅನುಕೂಲಗಳ ಬಗ್ಗೆ ಒಂದು ದೃಢ ನಿರ್ಣಯಕ್ಕೆ ಬರುವುದು ಕಷ್ಟಕರವಾಯಿತು.[೧೬] ಪುನರ್ಪರಿಶೀಲನೆ ನಡೆಸಿದ ಸಂಶೋಧಕರ ನೇತೃತ್ವದಲ್ಲಿ ನಡೆದ ನಂತರದ ಅಧ್ಯಯನದಲ್ಲಿ ತೈ ಚಿ(ಸಾಧಾರಣ ಹಿಗ್ಗಿಸುವಿಕೆಗೆ ಹೋಲಿಸಿದರೆ) ಮಂಡಿಯ ಅಸ್ಥಿಸಂಧಿವಾತದಿಂದ ದೈಹಿಕವಾಗಿ ಹಾಗು ಮಾನಸಿಕವಾಗಿ ನರಳುವ ೬೦ ದಾಟಿದ ಜನರ ಒಟ್ಟಾರೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಿಸಿ, ಅವರ ನೋವನ್ನು ಅತೀವ ಕಡಿಮೆ ಮಾಡುವ ಸಾಮರ್ಥ್ಯ ತೋರಿಸಿರುವುದನ್ನು ಪತ್ತೆಮಾಡಲಾಯಿತು.[೨೦] ಇದರ ಜೊತೆಯಲ್ಲಿ, ಸಮಾನ-ಸ್ಕಂದರಿಂದ ವಿಶ್ಲೇಷಣೆಗೊಳಪಟ್ಟ,ಪ್ರಕಟಣೆಯಾಗದ ಒಂದು ಪ್ರಾಯೋಗಿಕ ಅಧ್ಯಯನವು, ತೈ ಚಿ ಹಾಗು ಸಂಬಂಧಿತ ಕಿಗಾಂಗ್ ಮಧುಮೇಹದ ತೀವ್ರತೆಯನ್ನು ಕಡಿಮೆ ಮಾಡುತ್ತದೆಂಬ ಪೂರ್ವಭಾವಿ ಸಾಕ್ಷ್ಯವನ್ನು ಪತ್ತೆ ಮಾಡಿತು.[೨೧]

ಒಂದು ಇತ್ತೀಚಿನ ಅಧ್ಯಯನವು ಆರೋಗ್ಯವಂತ ಪ್ರೌಢವಯಸ್ಕರ ಮೇಲೆ ತೈ ಚಿ ಮತ್ತು ಆರೋಗ್ಯ ಶಿಕ್ಷಣ ಹೀಗೆ ಎರಡು ವಿಧದ ನಡವಳಿಕೆಯ ಹಸ್ತಕ್ಷೇಪದ ಪರಿಣಾಮಗಳನ್ನು ಮೌಲ್ಯಮಾಪನ ಮಾಡಿತು. ಇವರಿಗೆ ೧೬ ವಾರಗಳ ಹಸ್ತಕ್ಷೇಪದ ನಂತರ, ಅವರಿಗೆ VARIVAX ಲಸಿಕೆ ನೀಡಲಾಯಿತು, ಇದೊಂದು ದುರ್ಬಲಗೊಂಡ ಒಕ/ಮೆರ್ಕ್ ವಾರಿಸೆಲ್ಲ ಜೊಸ್ಟರ್ ವೈರಸ್ ಲಸಿಕೆ. ಕೇವಲ ಆರೋಗ್ಯದ ಬಗ್ಗೆ ಶೈಕ್ಷಣಿಕ ಮಾಹಿತಿಯನ್ನು ಪಡೆದ ನಿಯಂತ್ರಿತ ಗುಂಪಿಗಿಂತ ತೈ ಚಿ ಅಭ್ಯಸಿಸಿದ ಗುಂಪು ವಾರಿಸೆಲ್ಲ ಜೊಸ್ಟರ್ ವೈರಸ್ ಗೆ ಕೋಶ-ಮಧ್ಯವರ್ತಿ ಪ್ರತಿರಕ್ಷಕ ಗುಣವನ್ನು ಅಧಿಕವಾಗಿ ಹಾಗು ಗಮನಾರ್ಹ ಮಟ್ಟದಲ್ಲಿ ತೋರಿತು. ತೈ ಚಿಯು ವಾರಿಸೆಲ್ಲ ಜೋಸ್ಟರ್‌ನ ವೈರಸ್-ನಿರ್ದಿಷ್ಟ ಕೋಶ-ಮಧ್ಯವರ್ತಿ ಪ್ರತಿರಕ್ಷಣೆಯ ತಟಸ್ಥ ಸ್ಥಿತಿಯನ್ನು ವರ್ಧಿಸಿ, ವಾರಿಸೆಲ್ಲ ಲಸಿಕೆಯ ಪರಿಣಾಮಕತ್ವವನ್ನು ಹೆಚ್ಚಿಸುತ್ತದೆ. ಕೇವಲ ತೈ ಚಿಯೊಂದೇ ಷಿನ್ಗಲ್ಸ್(ಸರ್ಪಸುತ್ತು)ವಿನ ಸಂಭವನೀಯತೆಯನ್ನು ಅಥವಾ ಪರಿಣಾಮಗಳನ್ನು ತಗ್ಗಿಸುವುದಿಲ್ಲ. ಆದರೆ ವಾರಿಸೆಲ್ಲ ಜೊಸ್ಟರ್ ವೈರಸ್ ಲಸಿಕೆಯ ಪರಿಣಾಮಗಳನ್ನು ಸುಧಾರಿಸುತ್ತದೆ.[೨೨]

ಒತ್ತಡ ಹಾಗು ಮಾನಸಿಕ ಆರೋಗ್ಯ

[ಬದಲಾಯಿಸಿ]

ತೈ ಚಿಯು ನಾರಾಡ್ರಲಿನ್(ಆಡ್ರಿನಲ್ ಗ್ರಂಥಿಯ ಕೇಂದ್ರಭಾಗದಿಂದ ಮತ್ತು ಅನುವೇದನಾ ನರಾಗ್ರಗಳಿಂದ ಒಸರುವ, ನರಪ್ರೇಷಕವಾಗಿ ಕೆಲಸ ಮಾಡುವ ಹಾರ್ಮೋನು) ಹಾಗು ಕಾರ್ಟಿಸೋಲ್ ನ ಉತ್ಪತ್ತಿ ಮೇಲೆ ಸ್ವಲ್ಪ ಪರಿಣಾಮ ಬೀರಿ ಚಿತ್ತಸ್ಥಿತಿ ಹಾಗು ಹೃದಯದ ಬಡಿತದ ಮೇಲೆ ಕೆಲವು ಪರಿಣಾಮಗಳನ್ನು ಬೀರಬಹುದೆಂಬ ಸೂಚನೆಗಳಿವೆ. ಆದಾಗ್ಯೂ, ಇತರ ದೈಹಿಕ ವ್ಯಾಯಾಮದ ಅಭ್ಯಾಸಗಳಿಗಿಂತ ಇದರ ಪರಿಣಾಮವು ಭಿನ್ನವಾಗಿರುವುದಿಲ್ಲ.[೨೩] ಒಂದು ಅಧ್ಯಯನದ ಪ್ರಕಾರ, ತೈ ಚಿಯು ಅಟೆನ್ಷನ್ ಡೆಫಿಸಿಟ್(ಏಕಾಗ್ರತೆ ಕೊರತೆ) ಹಾಗು ಹೈಪರ್ ಆಕ್ಟಿವಿಟಿ ಡಿಸಾರ್ಡರ್ (ADHD) ರೋಗಲಕ್ಷಣಗಳನ್ನು ೧೩ ಮಂದಿ ಹದಿವಯಸ್ಕರಲ್ಲಿ ಕಡಿಮೆಗೊಳಿಸಿದ್ದು ಕಂಡು ಬಂದಿದೆ. ತೈ ಚಿಯ ಕಲಿಕಾ ಅವಧಿಯು ಸಮಾಪ್ತಗೊಂಡ ನಂತರ ರೋಗಲಕ್ಷಣಗಳಲ್ಲಿ ಚೇತರಿಕೆಯು ಬಹುಕಾಲದವರೆಗೂ ಕಂಡು ಬಂದಿತು.[೨೪]

ಜೂನ್ ೨೦೦೭ರಲ್ಲಿ, ಅಮೆರಿಕ ಸಂಯುಕ್ತ ಸಂಸ್ಥಾನದ ನ್ಯಾಷನಲ್ ಸೆಂಟರ್ ಫಾರ್ ಕಾಂಪ್ಲಿಮೆಂಟರಿ ಅಂಡ್ ಆಲ್ಟರ್ನೇಟಿವ್ ಮೆಡಿಸಿನ್ ಧ್ಯಾನಸ್ಥ ಸಂಶೋಧನೆಯ ಸ್ಥಿತಿಯ ಒಂದು ಸ್ವತಂತ್ರ, ಸಮಾನ-ಸ್ಕಂದರಿಂದ ವಿಶ್ಲೇಷಣೆಗೊಳಪಟ್ಟ, ಮೆಟಾ-ವಿಶ್ಲೇಷಣೆಯನ್ನು ಪ್ರಕಟಿಸಿತು. ಇದನ್ನು ಯುನಿವರ್ಸಿಟಿ ಆಫ್ ಆಲ್ಬರ್ಟ ಎವಿಡೆನ್ಸ್-ಬೇಸ್ಡ್ ಪ್ರ್ಯಾಕ್ಟಿಸ್ ಸೆಂಟರ್ ನ ಸಂಶೋಧಕರು ಆಯೋಜಿಸಿದ್ದರು. ಧ್ಯಾನದ ಐದು ವಿಸ್ತಾರವಾದ ವರ್ಗಗಳಲ್ಲಿ ವರದಿಯು ೮೧೩ ಅಧ್ಯಯನಗಳ (ತೈ ಚಿಯನ್ನು ಒಳಗೊಂಡಂತೆ ೮೮ ಅಧ್ಯಯನಗಳು) ವಿಶ್ಲೇಷಣೆ ಮಾಡಿತು: ಮಂತ್ರ ಧ್ಯಾನ, ಸಾವಧಾನತೆ ಧ್ಯಾನ, ಯೋಗ, ತೈ ಚಿ, ಹಾಗು ಕಿ ಗಾಂಗ್. ವರದಿಯು ಈ ರೀತಿಯಾದ ನಿರ್ಣಯಕ್ಕೆ ಬಂದಿತು "ಧ್ಯಾನದ ಚಿಕಿತ್ಸಾ ಪರಿಣಾಮವನ್ನು ಪ್ರಸಕ್ತ ಸಾಹಿತ್ಯದ ಆಧಾರದ ಮೇಲೆ ಸ್ಥಾಪಿಸಲಾಗುವುದಿಲ್ಲ," ಜೊತೆಗೆ "ಆರೋಗ್ಯದ ಕಾಳಜಿಯಲ್ಲಿ ಧ್ಯಾನದ ಅಭ್ಯಾಸಗಳಿಂದಾಗುವ ಪರಿಣಾಮಗಳ ದೃಢ ತೀರ್ಮಾನಗಳನ್ನು ಲಭ್ಯವಿರುವ ಸಾಕ್ಷ್ಯಗಳನ್ನು ಆಧರಿಸಿ ಇತ್ಯರ್ಥಗೊಳಿಸಲು ಸಾಧ್ಯವಿಲ್ಲ.[೨೫]

ಆನ್ಲೈನ್ ತೈ ಚಿ & ಆರೋಗ್ಯ ಮಾಹಿತಿ ಕೇಂದ್ರ

[ಬದಲಾಯಿಸಿ]

ಕಳೆದ ೨೦೦೩ರಲ್ಲಿ, ವಿಶ್ವದ ಅತ್ಯಂತ ದೊಡ್ಡ ವೈದ್ಯಕೀಯ ಗ್ರಂಥಾಲಯ ಹಾಗು U.S. ಡಿಪಾರ್ಟ್ಮೆಂಟ್ ಆಫ್ ಹೆಲ್ತ್ ಅಂಡ್ ಹ್ಯೂಮನ್ ಸರ್ವೀಸಸ್ ನ ಉಪವಿಭಾಗವಾದ ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್, ಅಮೆರಿಕನ್ ತೈ ಚಿ ಹಾಗು ಕಿಗೊಂಗ್ ಅಸೋಸಿಯೇಶನ್ ಗೆ "ದಿ ತೈ ಚಿ & ಕನ್ಸ್ಯೂಮರ್ ಹೆಲ್ತ್ ಇನ್ಫಾರ್ಮೇಶನ್ ಸೆಂಟರ್" ಹೆಸರಿನ ಅಂತರ್ಜಾಲವನ್ನು ರೂಪಿಸಲು ಅನುದಾನವನ್ನು ನೀಡಿತು. ಮಾಹಿತಿ ಕೇಂದ್ರವನ್ನು ಅಧಿಕೃತವಾಗಿ ೨೦೦೪ರಲ್ಲಿ ಬಿಡುಗಡೆ ಮಾಡಲಾಯಿತು ಜೊತೆಗೆ ಅಂದಿನಿಂದ ತೈ ಚಿಯಿಂದಾಗುವ ವಿವಿಧ ಆರೋಗ್ಯದ ಅನುಕೂಲಗಳ ಬಗ್ಗೆ ವೈಜ್ಞಾನಿಕ, ವಿಶ್ವಾಸಾರ್ಹ ಹಾಗು ವ್ಯಾಪಕ ಮಾಹಿತಿಯನ್ನು ಒದಗಿಸುತ್ತಿದೆ - ಇದು ಸಂಧಿವಾತ, ಮಧುಮೇಹ, ಫಾಲ್ ಪ್ರಿವೆನ್ಶನ್(ಹಿರಿಯರು ಅಪಘಾತದಿಂದ ಬೀಳುವ ಸಂದರ್ಭಗಳನ್ನು ನಿವಾರಿಸುವುದು), ನೋವನ್ನು ತಗ್ಗಿಸುವುದು, ಮಾನಸಿಕ ಆರೋಗ್ಯ, ಹೃದಯ-ರಕ್ತನಾಳದ ಕಾಯಿಲೆಗಳು, ದೈಹಿಕ ಸಾಮರ್ಥ್ಯ ಹಾಗು ಸಾಮಾನ್ಯ ಆರೋಗ್ಯಕ್ಕೆ ತೈ ಚಿ ಅಭ್ಯಾಸದಿಂದ ಉಂಟಾಗುವ ಆರೋಗ್ಯ ಅನುಕೂಲಗಳ ಬಗ್ಗೆ ಮಾಹಿತಿ ನೀಡುತ್ತದೆ.[೨೬]

ಕಾದಂಬರಿಗಳಲ್ಲಿ ತೈ ಚಿ ಚುಆನ್

[ಬದಲಾಯಿಸಿ]
ತಮ್ಮ ವಿದ್ಯಾರ್ಥಿಯ ಭಂಗಿಯನ್ನು ಸರಿಪಡಿಸುತ್ತಿರುವ ಯಾಂಗ್ ಶೈಲಿಯ ಗುರು

ಆಧುನಿಕ ನುಡಿಗಟ್ಟಿನಲ್ಲಿ ತೈ ಚಿ ಚುಆನ್

[ಬದಲಾಯಿಸಿ]

ಚೀನಾ, ತೈವಾನ್ ಹಾಗು ಸಿಂಗಾಪುರದಲ್ಲಿ ಪ್ರಮುಖವಾಗಿ ಹಾಗು ಬಹುಶಃ ವಿಶ್ವದ ಇತರ ಭಾಗಗಳಲ್ಲಿರುವ ಹಲವಾರು ಜನಾಂಗೀಯ ಚೈನೀಸ್ ಗುಂಪುಗಳ ದೊಡ್ಡ ಸಮೂಹವು, ನುಡಿಗಟ್ಟಿನ ಅಭಿವ್ಯಕ್ತಿ "ತೈಜಿ ಆಡುವುದು", ನಯವಾಗಿ ತಳ್ಳುವ ಅಥವಾ ತಮ್ಮ ಜವಾಬ್ದಾರಿಯನ್ನು ಬೇರೆಡೆ ತಿರುಗಿಸಿಕೊಳ್ಳುವ ಜನರನ್ನು ಉಲ್ಲೇಖಿಸಿ ಬಳಸುತ್ತಿದ್ದರು.

ಇವನ್ನೂ ನೋಡಿ

[ಬದಲಾಯಿಸಿ]

ಟಿಪ್ಪಣಿಗಳು

[ಬದಲಾಯಿಸಿ]
  1. Cheng Man-ch'ing (1993). Cheng-Tzu's Thirteen Treatises on T'ai Chi Ch'uan. North Atlantic Books. p. 21. ISBN 978-0938190455.
  2. Sun Lu Tang (2000). Xing Yi Quan Xue. Unique Publications. p. 3. ISBN 0-86568-185-6.
  3. ೩.೦ ೩.೧ ೩.೨ ೩.೩ ೩.೪ Wile, Douglas (2007). "Taijiquan and Taoism from Religion to Martial Art and Martial Art to Religion". Journal of Asian Martial Arts. 16 (4). Via Media Publishing. ISSN 1057-8358.
  4. ೪.೦ ೪.೧ Wile, Douglas (1995). Lost T'ai-chi Classics from the Late Ch'ing Dynasty (Chinese Philosophy and Culture). State University of New York Press. ISBN 978-0791426548.
  5. "T'ai Chi gently reduces blood pressure in elderly" (required registration). The Lancet. Retrieved 2007-07-02.
  6. ೬.೦ ೬.೧ Wu, Kung-tsao (2006). Wu Family T'ai Chi Ch'uan (吳家太極拳). Chien-ch’uan T’ai-chi Ch’uan Association. ISBN 0-9780499-0-X.
  7. Lam, Dr. Paul. "What should I wear to practice Tai Chi?". Tai Chi Productions. Retrieved 2008-07-14.
  8. Fu, Zhongwen (2006-06-09). Mastering Yang Style Taijiquan. Translated by Louis Swaim. Berkeley, California: Blue Snake Books. ISBN 1583941525.
  9. Wong Kiew Kit (November 1996). The Complete Book of Tai Chi Chuan: A Comprehensive Guide to the Principles. Element Books Ltd. ISBN 978-1852307929.
  10. ಜೆಫ್ಫ್ ಪ್ಯಾಟರ್ಸನ್, ಅಂಡರ್ಸ್ಟ್ಯಾಂಡಿಂಗ್ ತೈ ಚಿ ಪುಷ್ ಹ್ಯಾಂಡ್ಸ್
  11. Henning, Stanley (1994). "Ignorance, Legend and Taijiquan". Journal of the Chen Style Taijiquan Research Association of Hawaii. 2 (3). Archived from the original on 2010-01-01. Retrieved 2010-07-19.{{cite journal}}: CS1 maint: ref duplicates default (link)
  12. Yip, Y. L. (Autumn 2002). "Pivot – Qi". The Journal of Traditional Eastern Health and Fitness. 12 (3). Insight Graphics Publishers. ISSN 1056-4004.
  13. "SGMA 2007 Sports & Fitness Participation Report From the USA Sports Participation Study". SGMA. p. 2. Archived from the original on 2012-12-10. Retrieved 2007-08-18.
  14. Woolidge, Doug (1997). "T'AI CHI". The International Magazine of T’ai Chi Ch’uan. 21 (3). Wayfarer Publications. ISSN 0730-1049. {{cite journal}}: Unknown parameter |month= ignored (help)
  15. "Wushu likely to be a "specially-set" sport at Olympics". Chinese Olympic Committee. 2006. Retrieved 2007-04-13.
  16. ೧೬.೦ ೧೬.೧ ೧೬.೨ Wang, C (2004). "The effect of Tai Chi on health outcomes in patients with chronic conditions: a systematic review". Archives of Internal Medicine. 164 (5): 493–501. doi:10.1001/archinte.164.5.493. PMID 15006825. {{cite journal}}: |access-date= requires |url= (help); Unknown parameter |coauthors= ignored (|author= suggested) (help)
  17. Au-Yeung, PhD, Stephanie S. Y. (January 7, 2009). "Short-form Tai Chi Improves Standing Balance of People With Chronic Stroke". Neurorehabilitation and Neural Repair. 23: 515. doi:10.1177/1545968308326425. Archived from the original on ಜೂನ್ 20, 2009. Retrieved ಜುಲೈ 19, 2010. {{cite journal}}: Unknown parameter |coauthors= ignored (|author= suggested) (help)
  18. "Calories burned during exercise". NutriStrategy. Retrieved 2007-04-13.
  19. Brody, Jane E. (2007-08-21). "Cutting Cholesterol, an Uphill Battle". The New York Times. Retrieved 2008-07-14.
  20. "Tai chi helps cut pain of knee arthritis: study". Reuters. October 25, 2008. Retrieved 2008-10-26. Those who did tai chi experienced greater pain reduction, less depression and improvements in physical function and overall health, researchers led by Dr. Chenchen Wang of Tufts Medical Center in Boston reported...
  21. Pennington, LD (2006). "Tai chi: an effective alternative exercise". DiabetesHealth. Archived from the original on 2007-05-21. Retrieved 2007-04-13.
  22. Irwin, MR (2007). "Augmenting Immune Responses to Varicella Zoster Virus in Older Adults: A Randomized, Controlled Trial of Tai Chi". Journal of the American Geriatrics Society. 55 (4): 511–517. doi:10.1111/j.1532-5415.2007.01109.x. PMID 17397428. Retrieved 2007-04-08. {{cite journal}}: Unknown parameter |coauthors= ignored (|author= suggested) (help)
  23. Jin, P (1989). "Changes in Heart Rate, Noradrenaline, Cortisol and Mood During Tai Chi". Journal of Psychosomatic Research. 33 (2): 197–206. doi:10.1016/0022-3999(89)90047-0. PMID 2724196. Archived from the original on 2007-10-12. Retrieved 2007-04-13.
  24. Hernandez-Reif, M (2001). "Attention deficit hyperactivity disorder: benefits from Tai Chi". Journal of Bodywork & Movement Therapies. 5 (2): 120–123. doi:10.1054/jbmt.2000.0219. Archived from the original on 2007-10-12. Retrieved 2007-04-13. {{cite journal}}: Unknown parameter |coauthors= ignored (|author= suggested) (help)
  25. Ospina MB, Bond TK, Karkhaneh M, Tjosvold L, Vandermeer B, Liang Y, Bialy L, Hooton N,Buscemi N, Dryden DM, Klassen TP (June 2007). "Meditation Practices for Health: State of the Research (Prepared by the University of Alberta Evidence-based Practice Center under Contract No. 290-02-0023)" (PDF). Evidence Report/Technology Assessment No. 155 (AHRQ Publication No. 07-E010). Rockville, MD: Agency for Healthcare Research and Quality: 6. Archived from the original (PDF) on 2009-02-25. Retrieved 2010-07-19.{{cite journal}}: CS1 maint: multiple names: authors list (link)
  26. "The Online Tai Chi and Health Information Center funded by the U.S. government". American Tai Chi and Qigong Association. Retrieved 2010-05-23.


ಮತ್ತಷ್ಟು ಮಾಹಿತಿಗಾಗಿ

[ಬದಲಾಯಿಸಿ]

ಬಾಹ್ಯ ಕೊಂಡಿಗಳು

[ಬದಲಾಯಿಸಿ]
ಪ್ರಮುಖ ಶೈಲಿಗಳ ವಿಡಿಯೋ ಚಿತ್ರಗಳು

ಟೆಂಪ್ಲೇಟು:Wushu (sport)

ಟೆಂಪ್ಲೇಟು:Manav by country