ಆಂಗ್ ಲೀ
ಆಂಗ್ ಲೀ | |
---|---|
Born | |
Education | University of Illinois at Urbana-Champaign |
Alma mater | Tisch School of the Arts of New York University |
Occupation(s) | Film director, film producer, film screenwriter |
Years active | 1990– present |
Notable work | Pushing Hands, The Wedding Banquet, Eat Drink Man Woman, Sense and Sensibility, The Ice Storm, Crouching Tiger, Hidden Dragon, Hulk, Brokeback Mountain, Life of Pi |
Spouse(s) | Jane Lin (林惠嘉, 1983–) |
Children | Haan Lee (b. 1984) Mason Lee (b. 1990) |
ಚೈನೀಸ್ : 李安; pinyin: Lǐ Ān; (ಜ:ಅಕ್ಟೋಬರ್ ೨೩,೧೯೫೪) ಸನ್.೨೦೧೨ ರಲ್ಲಿ,ಅಮೆರಿಕದ 'ಲಾಸ್ ಏಂಜಲಿಸ್:' ನ,ಲೈಫ್ ಆಫ್ ಪೈಚಲನಚಿತ್ರಕ್ಕಾಗಿ ನಾಲ್ಕು ಆಸ್ಕರ್ ಪ್ರಶಸ್ತಿಗಳನ್ನು ಗೆದ್ದ ನಿರ್ದೇಶಕ, ಆಂಗ್ ಲೀ ಅವರಿಗೆ ಈಗ ಬಹಳ ಸಂಭ್ರಮ. ಆಸ್ಕರ್ ಪ್ರಶಸ್ತಿ ಸಮಾರಂಭದ ಬಳಿಕ ಲ್ಯೂರ್‌ನಲ್ಲಿ ನಡೆದ 'ಟೆಂಟ್ವಿಯತ್ ಸೆಂಚುರಿ ಫಾಕ್ಸ್ ಎಂಡ್ ಫಾಕ್ಸ್ ಸರ್ಚ್‌ಲೈಟ್ ಪಿಕ್ಚರ್ ಅಕಾಡೆಮಿ ಅವಾರ್ಡ್ ನಾಮಿನಿಗಳ ಪಾರ್ಟಿ'ಯಲ್ಲಿ ಆಂಗ್ ಲೀ,ಜೊತೆಗೆ, ಎನಿಮೇಶನ್ ನಿರ್ದೇಶಕ, 'ಎರಿಕ್ ಜಾನ್ ಡಿ ಬೋರ್', ಭಾರತೀಯ ನಟ, ಸೂರಜ್ ಶರ್ಮಾ, ಗೀತರಚನಕಾರ, ಮೈಕೆಲ್ ಡಾನಾ, ಮತ್ತು ಸಿನೆಮಾಟೋಗ್ರಾಫರ್, ಕ್ಲಾಡಿಯೋ ಮಿರಾಂಡಾ,ರವರೂ ಜತೆಗೂಡಿದರು. ಆಸ್ಕರ್ ಪ್ರಶಸ್ತಿ ವಿಜೇತರಿಗೆ ಇತರ ಪ್ರಶಸ್ತಿಗಳೂ ಬೆನ್ನುಹತ್ತಿಬಂದು ಅವರೆಲ್ಲಾ ಅತಿ ಸಂತೋಷಪಡುತ್ತಿದ್ದಾರೆ.
ಜನನ,ವಿದ್ಯಾಭ್ಯಾಸ, ಮತ್ತು ವೃತ್ತಿಜೀವನ
[ಬದಲಾಯಿಸಿ]ಆಂಗ್ ಲೀ (ಜ.ಅಕ್ಟೋಬರ್,೨೩,೧೯೫೪)'ತೈವನೀಸ್ ಅಮೇರಿಕನ್ ಫಿಲ್ಮ್ ನಿರ್ದೆಶಕ','ಪಟ್ಕಥಾ ಲೇಖಕ' ಮತ್ತು' ಚಲನಚಿತ್ರನಿರ್ಮಾಪಕ,' ಈಗಾಗಲೇ ಹಲವಾರು ವೈವಿಧ್ಯಮಯ ಚಿತ್ರಗಳನ್ನು ನಿರ್ದೇಶಿಸಿ,'ಅಂತಾರಾಷ್ಟ್ರೀಯ ವಲಯ'ದಲ್ಲಿ ಜನಪ್ರಿಯರಾಗಿದ್ದಾರೆ.
- 'ಸೆನ್ಸ್,ಅಂಡ್ ಸೆನ್ಸಿಬಿಲಿಟಿ',(Sense and Sensibility,(೧೯೯೫)
- 'ಕ್ರೌಚಿಂಗ್ ಟೈಗರ್',(Crouching Tiger),
- 'ಹಿಡನ್ ಡ್ರಾಗನ್,(Hidden Dragon,(೨೦೦೦)
- ಅಕ್ಯಾಡೆಮಿ ಪ್ರಶಸ್ತಿ, ಅತ್ಯುತ್ತಮ ವಿದೇಶಿ ಚಿತ್ರ,ಮತ್ತು ಇದೇ ತರಹ ಪ್ರಶಸ್ತಿಯನ್ನು ಎರಡುಬಾರಿ ಗೆದ್ದಿದ್ದಾರೆ.
- 'ಹಲ್ಕ್' (Hulk)(೨೦೦೩)
- 'ಬ್ರೋಕ್ ಬ್ಯಾಂಕ್ ಮೌಂಟೇನ್',(Brokeback Mountain),(೨೦೦೫)
- 'ಲೈಫ್ ಆಫ್ ಪೈ'(Life of Pi)(೨೦೧೨).
ಎಷಿಯಾದಲ್ಲಿ ಜನಿಸಿದ ಪ್ರಪ್ರಥಮವ್ಯಕ್ತಿಗೆ 'ಆಸ್ಕರ್','ಗೋಲ್ಡನ್ ಗ್ಲೋಬ್' ಮತ್ತು 'ಬೆಪ್ಹ್ತಾ ನಿರ್ದೇಶಕ ಪ್ರಶಸ್ತಿ',೨ ಬೆಸ್ಟ್ ಫಿಲ್ಮ್ ಪ್ರಶಸ್ತಿಗಳು 'ಗೋಲ್ಡನ್ ಬೇರ್',(ಬರ್ಲಿನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ) ಹೀಗೆ ಪ್ರಶಸ್ತಿಗಳ ಸುರಿಮಳೆಯಾಯಿತು.
ಜೀವನ ಚರಿತ್ರೆ
[ಬದಲಾಯಿಸಿ]'ಆಂಗ್ ಲೀ'ರವರು ಜನಿಸಿದ್ದು, ದಕ್ಷಿಣ ತೈವಾನ್ ನ ಕೃಷಿ ಪ್ರಧಾನಪಿಂಗ್ ತುಂಗ್ಕೌಂಟಿಯ,'ಚಾಂವ್ ಚಾವ್' ಎಂಬ ಗ್ರಾಮದಲ್ಲಿ 'ಆಂಗ್ ಲೀ'ರವರ ಮನೆಯವರು ವಿದ್ಯಾಭ್ಯಾಸಕ್ಕೆ ಮತ್ತು 'ಚೈನೀಸ್ ಕ್ಲಾಸಿಕ್ಸ್' ಕಲಿಕೆಗೆ ಬಹಳ ಒತ್ತುಕೊಡುತ್ತಿದ್ದರು. ತಂದೆ-ತಾಯಿಗಳು ಚೀನಾ ಮೆನ್ ಲ್ಯಾಂಡ್ ನಿಂದ ತೈವಾನ್ ಗೆ ಹೋದರು. ೧೯೪೯ ರ, 'ಚೀನಾದ ರಾಷ್ಟ್ರೀಯ ಸಿವಿಲ್ ಯುದ್ಧದ ಸೋಲಿನ ಬಳಿಕ', ತಂದೆ ಚೈನಾದ ಲಲಿತಕಲೆಗಳ ಅಭ್ಯಾಸಕ್ಕೆ ಮತ್ತು ಸಂಸ್ಕೃತಿಗೆ ಒತ್ತುಕೊಟ್ಟು ಅದರಲ್ಲೇ ಮುಂದುವರೆಯಲು ಪ್ರೋತ್ಸಾಹಿಸಿದರು. ಅವರಿಗೆ 'ಕ್ಯಾಲಿಗ್ರಫಿ' ಅತಿಮೆಚ್ಚಿನ ವಿಷಯವಾಗಿತ್ತು. 'ಲೀ', 'ತೈವಾನ್ ನ ಪ್ರಾಂತೀಯ ಹೈಸ್ಕೂಲ್ ವಿದ್ಯಾಭ್ಯಾಸ'ಮಾಡಬೇಕಾಯಿತು.(ಈಗ ಅದು 'ನ್ಯಾಷನಲ್ ತೈನಾನ್ ಫಸ್ಟ್ ಸೀನಿಯರ್ ಹೈಸ್ಕೂಲ್') ಅವರ ತಂದೆ ಅಲ್ಲಿನ ಪ್ರಾಂಶುಪಾಲರಾಗಿದ್ದರು. ಅವರು, ವಾರ್ಷಿಕ ಕಾಲೇಜ್ ವಿಶ್ವವಿದ್ಯಾಲಯದ ಜಂಟಿ-ಎಂಟ್ರನ್ಸ್ ಪರೀಕ್ಷೆಯಲ್ಲಿ ಉತ್ತೀರ್ಣನಾಗಬೇಕಿತ್ತು. ತೈವಾನ್ ನಲ್ಲಿ ವಿಶ್ವವಿದ್ಯಾಲಯಕ್ಕೆ ದಾಖಲಾಗಲು ಇದು ಅತಿ ಮುಖ್ಯವಾಗಿತ್ತು. ಆದರೆ 'ಲೀ' ಎರಡು ಬಾರಿ 'ನಾ ಪಾಸಾದರು'. ಈ ಬೆಳವಣಿಗೆಯಿಂದ ತಂದೆಯವರಿಗೆ ಬಹಳ ನಿರಾಶೆಯಾಯಿತು. ಅವರು ೩ ವರ್ಷದ ಕಾಲೇಜ್ ವಿದ್ಯಾಭ್ಯಾಸಕ್ಕೆ 'ನ್ಯಾಷನಲ್ ಆರ್ಟ್ಸ್ ಸ್ಕೂಲ್' (ಈಗ ನ್ಯಾಷನಲ್ ತೈವಾನ್ ವಿಶ್ವವಿದ್ಯಾಲಯ ಆಫ್ ಆರ್ಟ್ಸ್ ಎಂದು ವಿಸ್ತಾರಗೊಂಡು ಖ್ಯಾತಿ ಪಡೆದಿದೆ.)ಭರ್ತಿಮಾಡಿದರು. ಇಲ್ಲೇ ಲೀಯವರು, ಸನ್.೧೯೭೫ ರಲ್ಲಿ ಪದವಿಗಳಿಸಿದರು. ತಂದೆಗೆ ಮಗ, ಪ್ರೊಫೆಸರ್ ಆಗಬೇಕೆಂಬ ಆಶೆ. ಆದರೆ ಮಗ,ಲೀ ನಾಟಕ ಮತ್ತು ಕಲೆಗಳಲ್ಲಿ ಹೆಚ್ಚುಆಸಕ್ತರಾದರು. ಓದಿನಲ್ಲಿ ಆದ ವೈಫಲ್ಯವನ್ನು ಮರೆಯಲು ಅವರು 'ಪರ್ಫಾರ್ಮೆನ್ಸ್ ಆರ್ಟ್ ವಲಯ'ದಲ್ಲಿ ತಮ್ಮ ಮನಸ್ಸನ್ನು ಕೆಂದ್ರೀಕರಿಸಿದರು. ಆಗಾಗಲೇ ಹೆಸರಾಂತ ಚಿತ್ರನಿರ್ಮಾಪಕ,'ಇಂಗ್ಮರ್ ಬರ್ಜ್ ಮನ್' ರ,'ದ ವರ್ಜಿನ್ ಸ್ಪ್ರಿಂಗ್' ನೋಡಿ ಬೆರಗಾಗಿದ್ದರು. ಸನ್.೧೯೬೦ ರಲ್ಲಿ,ಇದು ಅವರ ಜೀವನದ ಹಾದಿಯನ್ನೇ ಬದಲಿಸಿತು.