ತಿಲಕರತ್ನೆ ದಿಲ್ಶಾನ್

ವಿಕಿಪೀಡಿಯ ಇಂದ
Jump to navigation Jump to search
ತಿಲಕರತ್ನೆ ದಿಲ್ಶಾನ್

ತಿಲಕರತ್ನೆ ಮುಡಿಯನ್ಸೆಲಗೆ ದಿಲ್ಶಾನ್ (ಜನನ: ಅಕ್ಟೋಬರ್ ೧೪, ೧೯೭೬ ಕಲುತರ ಶ್ರೀಲಂಕಾದಲ್ಲಿ) ಶ್ರೀಲಂಕಾದ ಆಟಗಾರ ಮತ್ತು ಶ್ರೀಲಂಕಾದ ಮಾಜಿ ನಾಯಕ. ಈತ ನವೆಂಬರ್ ೧೯೯೯ರಿಂದ ತಂಡದ ಸದಸ್ಯನಾಗಿದ್ದಾರೆ. ಬಲಗೈ ಅಗ್ರ ಕ್ರಮಾಂಕದ ಬ್ಯಾಟ್ಸ್ಮಾನ್ ಆದ ಈತ ಆಫ್ ಸ್ಪಿನ್ ಬೌಲಿಂಗ್ ಕೂಡ ಮಾಡುತ್ತಾರೆ. ಈತ ಅತ್ತ್ಯುತ್ತಮ ಫೀಲ್ಡಿಂಗ್ ಮಾಡುವುದರ ಮೂಲಕ ಒಬ್ಬ ಪರಿಪೂರ್ಣ ಆಲ್ರೌಂಡ್ ಕ್ರಿಕೆಟಿಗ ಎಂದು ಹೆಸರು ಪಡೆದಿದ್ದಾರೆ. ದಿಲ್ಶಾನ್ ೨೦೦೯ ಐಸಿಸಿ ಅವಾರ್ಡ್ಸ್‌ನ ವರ್ಷದ ಶ್ರೇಷ್ಠ ಟ್ವೆಂಟಿ೨೦ ಪ್ರದರ್ಶನ ಎಂಬ ಪ್ರಶಸ್ತಿ ಪಡೆದುಕೊಂಡರು.

ವೈಯಕ್ತಿಕ ಜೀವನ[ಬದಲಾಯಿಸಿ]

ದಿಲ್ಶಾನ್ ತನ್ನ ಹದಿನಾರನೇ ವಯಸ್ಸಿನಲ್ಲಿ ಇಸ್ಲಾಮ್‍ನಿಂದ ಬುದ್ಧಿಸಮ್‍ಗೆ ಮತಾಂತರ ಹೊಂದಿದರು. ಕಲುತರ ವಿದ್ಯಾಲಯ ನ್ಯಾಷನಲ್ ಸ್ಕೂಲ್‍ನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿದರು. ದಿಲ್ಶಾನ್ ಶ್ರೀಲಂಕಾದ ನಟಿ ಮಂಜುಳಾ ತಿಲಿನಿಯನ್ನು ವಿವಾಹವಾದರು.