ಟಿ. ಆರ್. ಅನಂತರಾಮು

ವಿಕಿಪೀಡಿಯ ಇಂದ
Jump to navigation Jump to search
ಟಿ. ಆರ್. ಅನಂತರಾಮು
ತಾಳಗುಂದ ರಾಮಣ್ಣ ಅನಂತರಾಮು
ಜನನ೩, ಆಗಸ್ಟ್, ೧೯೪೯
ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ, ತಾಳಗುಂದ
ವೃತ್ತಿಭೂವಿಜ್ಞಾನಿ, ಸಂಶೋಧಕ, ಪರಿಶೋಧಕ, ಅಂಕಣಕಾರ, ವಿಜ್ಞಾನ ಲೇಖಕರು ಮತ್ತು ಸಂಪಾದಕರು
ಭಾಷೆಕನ್ನಡ
ರಾಷ್ಟ್ರೀಯತೆಭಾರತೀಯ
ಪೌರತ್ವಭಾರತೀಯ
ವಿದ್ಯಾಭ್ಯಾಸಭೂ ವಿಜ್ಞಾನದಲ್ಲಿ ಎಂ.ಎಸ್ಸಿ
ಪ್ರಮುಖ ಪ್ರಶಸ್ತಿ(ಗಳು)ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಇತ್ಯಾದಿ

ತಾಳಗುಂದ ರಾಮಣ್ಣ ಅನಂತರಾಮು (ಟಿ. ಆರ್. ಅನಂತರಾಮು) ಒಬ್ಬ ಭೂವಿಜ್ಞಾನಿ, ಸಂಶೋಧಕ, ಪರಿಶೋಧಕ, ಅತ್ಯಂತ ಸಮರ್ಥ, ಜನಪ್ರಿಯ, ಅಂಕಣಕಾರ, ವಿಜ್ಞಾನ ಲೇಖಕರು ಮತ್ತು ಸಂಪಾದಕರು. ಇವರು ಅನೇಕ ವಾರಪತ್ರಿಕೆಗಳಲ್ಲಿ, ಮಾಸಿಕಗಳಲ್ಲಿ ತಮ್ಮ ಅತ್ಯಂತ ವಿಚಾರಪೂರ್ಣ ಲೇಖನಗಳನ್ನು ಮಂಡಿಸಿದ್ದಾರೆ. ಸುಮಾರು ೫೦ ಪುಸ್ತಕಗಳನ್ನು ಬರೆದಿದ್ದಾರೆ. ಅಷ್ಟೇನೂ ಬೆರಗು, ಸಂಭ್ರಮಗಳನ್ನು ತರದ ಭೂ-ವಿಜ್ಞಾನದಂತಹ ವಿಷಯದಲ್ಲಿಯ ಸಂಗತಿಗಳನ್ನು ಜನಸಾಮಾನ್ಯರಿಗೂ ಕುತೂಹಲ ಕೆರಳಿಸುವಂತೆ, ಮನಮುಟ್ಟುವಂತೆ ತಲುಪಿಸಿ, ಅವರಲ್ಲಿ ಆಸಕ್ತಿಯನ್ನುಂಟು ಮಾಡಿದ ಏಕೈಕ ಕನ್ನಡ-ವಿಜ್ಞಾನ ಲೇಖಕ ಟಿ.ಆರ್.ಅನಂತರಾಮುರವರು.

'ಟಿ.ಅರ್.ಅನಂತರಾಮು,'ಕನ್ನಡ-ವಿಜ್ಞಾನ ಲೇಖಕ

ಕನ್ನಡ ವಿಶ್ವಕೋಶ, ಜ್ಞಾನ-ವಿಜ್ಞಾನ ಕೋಶ, ಕಿರಿಯರ ಕರ್ನಾಟಕ, ಕರ್ನಾಟಕ ಸಂಗಾತಿ, ಕರ್ನಾಟಕ ಕೋಶ, ಮುಂತಾದ ಪರಾಮರ್ಶಿಕಗ್ರಂಥಗಳನ್ನು ತಂದ ವಿಶಿಷ್ಠ ವ್ಯಕ್ತಿ. ೨೦೦೯ ರ ಆಗಸ್ಟ್ ೯, ರಂದು ಅನಂತರಾಮುರವರನ್ನು ಅಭಿನಂದಿಸುವ ಸಮಾರಂಭ ತುಮಕೂರಿನಲ್ಲಿತ್ತು. ೬೦ ರ ಹರೆಯದ ಟಿ. ಆರ್. ಅನಂತರಾಮುರ ೫೦ ನೆಯ ಕೃತಿಯ ಬಿಡುಗಡೆಯ ಸಮಾರಂಭವದು. ಒಬ್ಬ ಕನ್ನಡ ಲೇಖಕನ ಲೇಖನಿಯಿಂದ ಮೂಡಿ ಬಂದ ಶ್ರೇಷ್ಠ, ಗುಣಮಟ್ಟದ ಕೃತಿಗಳು, ಯುವಜನರನ್ನು ಪ್ರೇರೇಪಿಸುವಂತಹದು, ಮತ್ತು ಅನುಮೋದಿಸಲು ಮಜಬೂರ್ ಮಾಡುವಂತಹದು. ಕಾವೇರಿನದಿ ನೀರಿನ ಚಳುವಳಿ ಉಗ್ರಸ್ವರೂಪ ತಾಳಿದ್ದ ಸಮಯದಲ್ಲಿ, ನದಿಯ ಆಯಾಮಗಳೆಲ್ಲವನ್ನೂ ಸ್ಪಷ್ಟವಾಗಿ ಪರಿಚಯಿಸುವ ಅತ್ಯುತ್ತಮ ಪರಾಮರ್ಶನ ಗ್ರಂಥವೊಂದನ್ನು ಸಂಪಾದಿಸಿ, ಜನತೆಗೆ ಕೊಟ್ಟಿದ್ದಾರೆ. ವಿಜ್ಞಾನ ಶಿಕ್ಷಕರಿಗೆ, ಸಂವಹಕರಿಗೆ ಕರ್ನಾಟಕ ಸರ್ಕಾರದ ವಾರ್ಷಿಕ ಪ್ರಶಸ್ತಿ ಯನ್ನು ಟಿ.ಆರ್.ಅನಂತರಾಮುರವರು ತಮ್ಮ ಆರು ಜನ ಮಿತ್ರರ ಜೊತೆಯಲ್ಲಿ ಹಂಚಿಕೊಂಡಿದ್ದಾರೆ.

ತಂದೆ-ತಾಯಿಗಳು ಹಾಗೂ ಮನೆಯ ಪರಿಸರ[ಬದಲಾಯಿಸಿ]

'ತಾಳಗುಂದ ರಾಮಣ್ಣ ಅನಂತರಾಮು' ರವರು, ೩, ಆಗಸ್ಟ್, ೧೯೪೯ ರಂದು, ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ, ತಾಳಗುಂದವೆಂಬ ಊರಿನಲ್ಲಿ ಜನಿಸಿದರು. ಸ್ವತಃ, ಓದಿನಲ್ಲಿ ಅತ್ಯಂತ ಆಸಕ್ತರಾದ ತಾಯಿ, ವೆಂಕಟಲಕ್ಷ್ಮಮ್ಮನವರು ಟಿ. ಆರ್. ಅನಂತ ರಾಮುರಿಗೆ ಬಾಲ್ಯದ ದೊಡ್ಡ ಆದರ್ಶವ್ಯಕ್ತಿಯಾಗಿದ್ದಾರೆ. ಅವರದೇ ಹೆಚ್ಚಿನ ಪ್ರೇರಣೆ. ೮೦ ರ ಹೊಸ್ತಿಲಲ್ಲಿರುವ ತಾಯಿಯವರು. ತಮ್ಮ ಬಹುಭಾಗದ ಸಮಯವನ್ನು ಇಂದಿಗೂ ಓದಿನಲ್ಲಿ ಕಳೆಯುತ್ತಾರಂತೆ. ತಂದೆ, ಶ್ರೀರಾಮಣ್ಣನವರು. ಶ್ರೀ. ಟಿ. ಆರ್. ಅನಂತರಾಮು ರವರು, ೧೯೭೨ ರಲ್ಲಿ ಮೈಸೂರು ವಿಶ್ವವಿದ್ಯಾಲಯದ, ಮೈಸೂರಿನಲ್ಲಿ, MSc;(ಭೂ ವಿಜ್ಞಾನದಲ್ಲಿ) ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದರು.

'ಕರ್ನಾಟಕ ಸರಕಾರದ ವಿಜ್ಞಾನ ಪ್ರಶಸ್ತಿ ವಿಜೇತರು'

ಅನಂತರಾಮುರವರ ವೃತ್ತಿ-ಜೀವನ[ಬದಲಾಯಿಸಿ]

 • ೧೯೭೨ ರಿಂದ ೧೯೭೬ ರ ವರೆಗೆ, ಬೆಂಗಳೂರಿನ, ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಭೂ-ವಿಜ್ಞಾನದ ಅಧ್ಯಾಪಕ.
 • ದಕ್ಷಿಣ ಕನ್ನಡ ಜಿಲ್ಲೆಯ, ಸೂರತ್ ಕಲ್, ರೀಜನಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೆಲಸ.
 • ೧೯೭೭ ರಲ್ಲಿ, ರಿಂದ ೨೦೦೮ ರ ವರೆಗೆ, ಬೆಂಗಳೂರಿನ ಭಾರತೀಯ ಭೂ-ವೈಜ್ಞಾನ ಸರ್ವೇಕ್ಷಣ ಸಂಸ್ಥೆ ಯಲ್ಲಿ ಭೂ-ವಿಜ್ಞಾನಿ.
 • ಅನಂತರಾಮು, ನಾಡಿನಾದ್ಯಂತ ಚಿನ್ನದ ನಿಕ್ಷೇಪಕ್ಕಾಗಿ ವ್ಯಾಪಕ ಶೋಧನೆ. ದುರ್ಗಮ ಕಾಡುಗಳ ಸಮೀಕ್ಷೆಗಳನ್ನು ನಡೆಸಿದರು.
'ವರ್ಷ ೨೦೧೩ ರಲ್ಲಿ ಬೆಂಗಳೂರಿನಲ್ಲಿ ಆಯೋಜಿಸಿದ ಕನ್ನಡ ವಿಕಿಪೀಡಿಯ ದಶಮಾನೋತ್ಸವದಲ್ಲಿ ಪಾಲ್ಗೊಂಡಾಗ'

ಪ್ರಶಸ್ತಿಗಳು[ಬದಲಾಯಿಸಿ]

 • ಕಳೆದ ೩೬ ವರ್ಷಗಳಿಂದಲೂ ವಿಜ್ಞಾನವನ್ನು ಜನಪ್ರಿಯಗೊಳಿಸಲು ನಾಡಿನ ವಿವಿಧ ಪತ್ರಿಕೆಗಳಲ್ಲಿ ೮೦೦ಕ್ಕೂ ಮಿಕ್ಕು ವಿಜ್ಞಾನ ಲೇಖನಗಳನ್ನು ಪ್ರಕಟಿಸಿರುತ್ತಾರೆ.
 • ಪ್ರಕಟಿಸಿರುವ ಕನ್ನಡ ವಿಜ್ಞಾನ ಪುಸ್ತಕಗಳು : ೫೦.
 • ಹಿಮದ ಸಾಮ್ರಾಜ್ಯ’ ದಲ್ಲಿ,’ ಕೃತಿಗೆ, '೧೯೮೫ ರ ಅತ್ಯುತ್ತಮ ವಿಜ್ಞಾನ ಕೃತಿ'ಯೆಂದು 'ಕರ್ನಾಟಕ ಸಾಹಿತ್ಯ ಕಾಡೆಮಿ'ಯಿಂದ ಬಹುಮಾನ ದೊರೆತಿದೆ.
 • ಕರ್ನಾಟಕ ಸಾಹಿತ್ಯ ಅಕಾಡೆಮಿ’ ಬಹುಮಾನ.
 • ಭೂಕಂಪನಗಳು’ ಕೃತಿಗೆ ೧೯೯೪ ರ ’ಆರ್ಯಭಟ್ಟ ಪ್ರಶಸ್ತಿ’.
 • ಕಾಲಗರ್ಭಕ್ಕೆ ಕೀಲಿಕೈ,’ ಕೃತಿಗೆ, ೨೦೦೦ ದ, 'ಗೋರೂರು ರಾಮಸ್ವಾಮಿ ಅಯ್ಯಂಗಾರ್ ಪ್ರಶಸ್ತಿ'.
 • 'ಕರ್ತಾರನಿಗೊಂದು ಕಿವಿಮಾತು,’ '೨೦೦೩ ರ ಅತ್ಯುತ್ತಮ ವಿಜ್ಞಾನದ ಕೃತಿ'ಯೆಂದು 'ಕರ್ನಾಟಕ ಸಾಹಿತ್ಯ ಅಕಾಡೆಮಿ'ಯಿಂದ ಬಹುಮಾನ.
 • ’ಮೌಲ್ಯ ಗೌರವ ಪ್ರಶಸ್ತಿ,’ ೨೦೦೬
 • ವಿಜ್ಞಾನ ಶಿಕ್ಷಕರಿಗೆ, ಸಂವಹಕರಿಗೆ ಕರ್ನಾಟಕ ಸರ್ಕಾರ ನೀಡುವ ವಾರ್ಷಿಕ ಪ್ರಶಸ್ತಿಯನ್ನು ಪಡೆದರು.
 • ತುಮಕೂರು ವಿಶ್ವ ವಿದ್ಯಾನಿಲಯ ೨೦೧೫ ರಲ್ಲಿ ಗೌರವ ಡಾಕ್ಟರೇಟ್(ವಿಜ್ಞಾನ ) ನೀಡಿ ಗೌರವಿಸಿದೆ .

ಸಾಹಿತ್ಯಕ ಚಟುವಟಿಕೆಗಳು, ಜನಪ್ರಿಯ ವಿಜ್ಞಾನ ಕ್ಷೇತ್ರ[ಬದಲಾಯಿಸಿ]

 • ಪ್ರಧಾನ ಸಂಪಾದಕ, ’ಸುಭಾಷ್ ಪಬ್ಲಿಕೇಶನ್ಸ್’, ’ವಿಸ್ಮಯ ವಿಜ್ಞಾನ ಮಾಲಿಕೆ’, ೩೩ ಕೃತಿಗಳ ಸಂಪಾದನೆ
 • ನವಕರ್ನಾಟಕ ಸಂಸ್ಥೆಯ ಪ್ರಕಟಣೆ ’ಜ್ಞಾನ-ವಿಜ್ಞಾನ ಕೋಶ’ ದ ಸಹಾಯಕ ಸಂಪಾದಕ
 • ನವಕರ್ನಾಟಕ ಸಂಸ್ಥೆಯ, ಪದ ವಿವರಣ ಕೋಶದ ಸಹಾಯಕ ಸಂಪಾದಕ, ಪರಿಷ್ಕೃತ ಆವೃತ್ತಿಗಾಗಿ (೨೦೦೫) ರ ವಿಜ್ಞಾನ ಲೇಖನಗಳ ಸೇರ್ಪಡೆಗೆ ನಿರ್ವಾಹಕ.
 • ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪ್ರಕಟಿಸಿರುವ ೨೦೦೩ ’ಕರ್ನಾಟಕ ಸಂಗಾತಿ’, ಪರಾಮರ್ಶನ ಗ್ರಂಥಕ್ಕೆ ಕರ್ನಾಟಕ ಭೂ ವಿಜ್ಞಾನ’ ಕುರಿತಂತೆ ಆಕರ ಲೇಖನ.
 • ಹಂಪಿ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸುತ್ತಿರುವ ’ವಿಜ್ಞಾನಸಂಗಾತಿ ಮಾಸ ಪತ್ರಿಕೆ’ ಯ ಸಂಪಾದಕತ್ವ-೨೦೦೨-೨೦೦೩.
 • ’ಹಂಪಿ ಕನ್ನಡ ವಿಶ್ವವಿದ್ಯಾಲಯ’ ಪ್ರಕಟಣೆ ’ಕಿರಿಯರ ಕರ್ನಾಟಕ’ ಮತ್ತು ’ಕರ್ನಾಟಕ ಕೋಶ’ ಕ್ಕೆ ಲೇಖನಗಳು.
 • ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಪ್ರಕಟಣೆ, ’ಬಾಲ ವಿಜ್ಞಾನ ಮಾಸಪತ್ರಿಕೆ’ ಯ ಸಂಪಾದಕ ಮಂಡಳಿಯ ಸದಸ್ಯ.
 • ’ಬೆಂಗಳೂರು ಆಕಾಶವಾಣಿ’ಯಲ್ಲಿ ೧೯೭೨ ರಿಂದಲೂ ವಿಜ್ಞಾನದ ಮುನ್ನಡೆಯೂ ಸೇರಿದಂತೆ, ೧೦೦ ಕ್ಕೂ ಮಿಕ್ಕು ಭಾಷಣ-ಸಂದರ್ಶನ.
 • 'National Book Trust of India', ’ನವದೆಹಲಿ’ ಮತ್ತು ’ಸಿ. ಎಸ್. ಐ. ಆರ್ ಸಂಸ್ಥೆ’ಗೆ ವಿಜ್ಞಾನ ಪುಸ್ತಕಗಳ ಅನುವಾದ.
 • 'DSERT' ಸಂಸ್ಥೆ’ಗೆ ಶಿಲೆಗಳನ್ನು ಕುರಿತಂತೆ, ’೨ ಸಾಕ್ಷ್ಯ ಚಿತ್ರ’ ಹಾಗೂ ಭೂವಿಜ್ಞಾನ ಕುರಿತಂತೆ ೪ ಚಿತ್ರ ಪಟ (ಚಾರ್ಟ್) ತಯಾರಿಕೆ
 • ಮೈಸೂರು ವಿಶ್ವವಿದ್ಯಾಲಯ ಪ್ರಕಟಿಸಿರುವ ’ಕನ್ನಡ ವಿಶ್ವಕೋಶ’ಕ್ಕೆ ಭೂವಿಜ್ಞಾನ ಕುರಿತಂತೆ ಲೇಖನಗಳು
 • ’ಉದಯ ಟೀವಿ’ಯು ರೂಪಿಸಿದ ’ಪರಿಚಯ ಕಾರ್ಯಕ್ರಮ’ ದಲ್ಲಿ ಸಂದರ್ಶನ
 • ಈಟೀವಿ 'ETV' ಯಲ್ಲಿ ಪ್ರಸಾರವಾದ ’ಕಡಲ ತೀರದ ಭಾರ್ಗವ,’ ಶಿವರಾಮ ಕಾರಂತ-ಸರಣಿಯಲ್ಲಿ ಶಿವರ ಕಾರಂತರ ವಿಜ್ಞಾನ ಸಾಹಿತ್ಯ ನಿರ್ಮಾಣ ಕುರಿತು ಸಂದರ್ಶನಗಳು.
 • ’ಚಂದನ ವಾಹಿನಿ’ಯಲ್ಲಿ ವಿಜ್ಞಾನ ಕಾರ್ಯಕ್ರಮಗಳು-೧೦
 • ಮೈಸೂರಿನಲ್ಲಿರುವ, ಭಾರತೀಯ ಭಾಷಾ ವಿಜ್ಞಾನ ಕೇಂದ್ರ '(CICL)' ಕುರಿತು ನಿರ್ಮಿಸುತ್ತಿರುವ ಕರ್ನಾಟಕ ಕುರಿತ ’ಭಾಷಾ ಮಂದಾಕಿನಿ’ ಸರಣಿಗೆ, ಕರ್ನಾಟಕ ಭೂ-ವೈಜ್ಞಾನಿಕ ಅದ್ಭುತಗಳನ್ನು ಕುರಿತಂತೆ ೨ ಕಂತುಗಳ ಸಾಕ್ಷ್ಯಚಿತ್ರಗಳಿಗೆ ಭೂ-ವೈಜ್ಞಾನಿಕ ಸಾಹಿತ್ಯ ರಚನೆ.
 • ’ಬೆಂಗಳೂರಿನ ಕನ್ನಡ ಗಣಕ ಪರಿಷತ್ತು’ ಅಭಿವೃದ್ಧಿಪಡಿಸಿದ ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಶ್ವ ಕೋಶದ ಸೀಡಿ ('CD') ಆವೃತ್ತಿಯ ವಿಜ್ಞಾನ ವಿಭಾಗಕ್ಕೆ ಪ್ರಧಾನ ಸಂಪಾದಕ.
 • ’ಅಂತಾರಾಷ್ಟ್ರೀಯ ಭೂಗ್ರಹ ವರ್ಷಾಚರಣೆ’ ಅಂಗವಾಗಿ ೮-೯ ರಲ್ಲಿ ರಾಜ್ಯದಾದ್ಯಂತ ’ಉಪನ್ಯಾಸ’.
 • ’ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ವೈಜ್ಞಾನಿಕ ಕಾರ್ಯಕ್ರಮಗಳಲ್ಲಿ ಮಾರ್ಗದರ್ಶನ ಮತ್ತು ಉಪನ್ಯಾಸ.
 • ’ಕನ್ನಡ ಪುಸ್ತಕ ಪ್ರಾಧಿಕಾರ’ ಆಯೋಜಿಸಿರುವ 'J. D. Barnal ರವರ ಕೃತಿ, 'Science in History' ಅನುವಾದದ, ಪ್ರಧಾನ ಸಂಪಾದಕ
 • ೩ ನೇ ಕನ್ನಡ ಸಾಹಿತ್ಯ ಸಮ್ಮೇಳನ, ಸಿರ ತಾಲ್ಲೂಕು,[೧]

ಅನಂತರಾಮುರವರ ಕೊಡುಗೆಗಳು[ಬದಲಾಯಿಸಿ]

ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣ ಸಂಸ್ಥೆಯಲ್ಲಿ ಹಿರಿಯ ವೈಜ್ಞಾನಿಯಾಗಿ ಟಿ. ಆರ್. ಅನಂತರಾಮುರ ಕೊಡುಗೆ ಬಹಳ ಮಹತ್ವದ್ದಾಗಿದೆ. ಅವರು ಬಹುತೇಕ ಜನಪ್ರಿಯ ವಿಜ್ಞಾನ ಲೇಖಕರಂತೆ, ’ಮಾಹಿತಿ-ಸಂಗ್ರಹಣೆ’, ’ಸಂಸ್ಕರಣೆ’, ವಿಷ್ಲೇಷಣೆ, ಶುದ್ಧೀಕರಣ, ಪಾರಭಾಷಿಕ ಪದಗಳಿಗೆ ಸಮಾನ ಕನ್ನಡಪದಗಳ-ಸೃಷ್ಟಿ’, ಮುಂತಾದ ಕೇವಲ ಬರವಣಿಗೆಗೆ ಮಾತ್ರ ತಮ್ಮ ಆಸಕ್ತಿಯನ್ನು ಸೀಮಿತಗೊಳಿಸದೆ, ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

'ಕೋಲಾರ ಗೋಲ್ಡ್ ಫೀಲ್ಡ್ಸ್,’ ನ ಗಣಿಯೊಳಗೆ ೩ ಕಿ.ಮೀಟರ್ ಗೂ ಹೆಚ್ಚಿನ ಆಳದ ಪರಿಸರಕ್ಕೆ ಇಳಿದುಹೋಗಿ, ೬೯ ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ, ಸಂಶೋಧನಾ ಕೆಲಸಗಳನ್ನು ಕೈಗೊಂಡಿದ್ದಾರೆ. ಉತ್ತರಭಾರತದ ’ಮೇಘಾಲಯ ರಾಜ್ಯ’ ದ ಬೆಟ್ಟ-ಕಣಿವೆಗಳಲ್ಲಿಯೂ-ನಿಕ್ಷೇಪಗಳನ್ನು ಶೋಧಿಸುವ ಕೆಲಸದಲ್ಲಿ ಯಶನ್ನು ಪಡೆದಿದ್ದಾರೆ.

ದಕ್ಷಿಣ ಭಾರತದ ’ಮಲೆಮಹದೇಶ್ವರ’ ಬೆಟ್ಟಗಳ ಪ್ರದೆಶದಲ್ಲಿ ೨,೫೦೦ ಚ. ಕಿಲೋಮೀಟರ್ ವಿಸ್ತೀರ್ಣದ ದುರ್ಗಮಕಾಡುಗಳ-ಭೂಪ್ರದೇಶದಲ್ಲಿ, ಸಂಚರಿಸಿ, ಅಲ್ಲಿಯೇ ಶಿಬಿರವನ್ನು ಹೂಡಿ, ಅಲ್ಲಿನ ಶಿಲಾನಿಕ್ಷೇಪಗಳ ನಕ್ಷೆಯನ್ನು ಸಿದ್ಧಪಡಿಸಿದ್ದಾರೆ. ಇಂತಹ ನಕ್ಷೆಯನ್ನು ಸಿದ್ಧಪಡಿಸಿದವರಲ್ಲಿ ಮೊದಲಿಗರು.

ಜಿಲ್ಲಾಮಟ್ಟದಲ್ಲಿ ಸರ್ವ ಸಮಸ್ತ ಸಂಪಮ್ಮೂಲಗಳನ್ನೂ ನೀರು, ಮಣ್ಣು ಅರಣ್ಯ, ಕೈಗಾರಿಕಾ ಕಚ್ಚಾವಸ್ತುಗಳು, ಖನಿಜ ನಿಕ್ಷೇಪಗಳು, ಇತ್ಯಾದಿಗಳನ್ನು ಒಳಗೊಂಡ ಮಹತ್ವ ’ಜಿಲ್ಲಾ ಸಂಪಮ್ಮೂಲ ನಕ್ಷೆ,’ ಯನ್ನು ಸಿದ್ಧಪಡಿಸುವ ಪರಿಪಾಠವನ್ನು ಅವರು ಜಾರಿಗೆ ತಂದಿದ್ದಾರೆ.[೨]

ಕರ್ನಾಟಕ ಸಾಹಿತ್ಯ ಅಕ್ಯಾಡಮಿ ಪ್ರಶಸ್ತಿ[ಬದಲಾಯಿಸಿ]

ಅನಂತರಾಮುರವರ ಪಶ್ಚಿಮ ಮುಖಿ 'ಪ್ರವಾಸಕಥನ ಕೃತಿ'ಗೆ, ಕರ್ನಾಟಕ ಸರ್ಕಾರದ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಸನ್ ೨೦೦೮ ರ, ಪ್ರವಾಸೋದ್ಯಮ ವಿಭಾಗಕ್ಕೆ ಮೀಸಲಾಗಿಟ್ಟಿದ್ದ ಪ್ರಶಸ್ತಿಯನ್ನು, ೨೦೧೦ ರ, ಜೂನ್ ತಿಂಗಳಿನಲ್ಲಿ ಉಡುಪಿಯಲ್ಲಿ ಆಯೋಜಿಸಲಾಗಿದ್ದ ಪ್ರಶಸ್ತಿಪ್ರದಾನ ಸಮಾರಂಭದಲ್ಲಿ ವಿತರಿಸಲಾಯಿತು. ಸನ್. ೨೦೦೮ ರ, ಪರಿಸರ ಸಂರಕ್ಷಣೆಯ ಬಗ್ಗೆ ಮುಡುಪಾಗಿಟ್ಟ ಪತ್ರಿಕೋದ್ಯಮ-ಪ್ರಶಸ್ತಿ, ಹಾಗೂ ೫೦ ಸಾವಿರರೂಪಾಯಿಗಳ ನಗದು ಬಹುಮಾನವನ್ನು ಬೆಂಗಳೂರಿನ ಡಾ. ಅಂಬೇಡ್ಕರ್ ಭವನದಲ್ಲಿ ಪ್ರದಾನಮಾಡಲಾಯಿತು. ’ಕರ್ನಾಟಕದ ಮುಖ್ಯಮಂತ್ರಿ’ ಯವರು ಈ ಪ್ರತಿಷ್ಠಿತ ಬಹುಮಾನವನ್ನು, ತುಮಕೂರಿನ ವಿಜ್ಞಾನ ಕೇಂದ್ರದಲ್ಲಿ ಆಹ್ವಾನಿತ ಸಭಿಕರ ಸಮ್ಮುಖದಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ವಿತರಿಸಿದರು. ಆದರೆ, ಅನಂತರಾಮುರವರು, ತಮ್ಮ ವೃತ್ತಿಜೀವನದುದ್ದಕ್ಕೂ ಪರಿಸರ ಸಂರಕ್ಷಣೆಯ ಬಗ್ಗೆ ತಿಳಿವಳಿಕೆನೀಡುವ ಹಲವಾರು ಕಮ್ಮಟಗಳನ್ನು ಏರ್ಪಡಿಸಿದ್ದರು. ಸಕ್ರಿಯವಾಗಿ ದುಡಿದಿದ್ದರು. ಹಾಗಾಗಿ ತಮಗೆ ದೊರಕಿದ ನಗದು ೫೦ ಸಾವಿರ ರೂಪಾಯಿಗಳ ಪಾರಿತೋಷಕವನ್ನು, ತಾವು ಪಡೆಯದೆ, 'ಪರಿಸರ ಸಂರಕ್ಷಣೆಯ ಕಾರಣ'ಕ್ಕೆ ದಾನವಾಗಿ ಕೊಟ್ಟಿರುವುದಾಗಿ, ತುಮಕೂರು ವಿಜ್ಞಾನ ಬೋಧಕ ವಿದ್ಯಾಸಂಸ್ಥೆಯ ವೇದಿಕೆಯ ಮೇಲೆ ಘೋಷಿಸಿದರು.[೩]

ನ್ಯಾಶನಲ್ ಜಿಯೊಲಾಜಿಕಲ್ ಮಾನ್ಯುಮೆಂಟ್ಸ್' ಒಂದು ವಿಶಿಷ್ಟ ಕೃತಿ[ಬದಲಾಯಿಸಿ]

’ಭೂವೈಜ್ಞಾನಿಕ ಸರ್ವೆಕ್ಷನ ಸಂಸ್ಥೆ’ ಯ, ೧೫೦ ನೇ ವರ್ಷಾಚರಣೆ’ ಯ ಸಂದರ್ಭದಲ್ಲಿ ಅ ಸಂಪಾದಿಸಿದ " ನ್ಯಾಶನಲ್ ಜಿಯೊಲಾಜಿಕಲ್ ಮಾನ್ಯುಮೆಂಟ್ಸ್," ಅತಿ ವಿಶಿಷ್ಠವಾದ, ಹಾಗೂ ಅತ್ಯಂತ ಮಹತ್ವದ ಕೃತಿಯಾಗಿದೆಯೆಂಬುದು ಕೃತಿ-ವಿಮರ್ಶಕರ ಅಂಬೋಣ. ಈ ಕೃತಿ, ಬಹಳ ಕಾಲದವರೆಗೆ ಎಲ್ಲರ ಸಂಶೋಧನೆಗಳಿಗೆ ನೆರವಾಗುವ ಉಲ್ಲೇಖಗಳಾಗುವ ಕೃತಿಯಾಗಿದೆ.

ಕರ್ನಾಟಕದ ಮರಡಿಹಳ್ಳಿಯಲ್ಲಿರುವ ದಿಂಬುಲಾವ, ಬೆಂಗಳೂರಿನ ಲಾಲ್ ಬಾಗ್ ನ, ಶಿಲಾಬೆಟ್ಟ, ಸೆಂಟ್ ಮೇರಿ ದ್ವೀಪದ, ಶಿಲಾಕಂಬಗಳು, ಕೆ. ಜಿ. ಎಫ್ ನಲ್ಲಿರುವ ಜ್ವಾಲಾಮುಖಿಯ ಕಲ್ಲುಗಳ ರಾಶಿಗಳಬಗ್ಗೆ ಮಾಡಿದ ಅಧ್ಯಯನದ ತಥ್ಯಗಳನ್ನು, ತಮ್ಮ ಕೃತಿ ಪಟ್ಟಿಯಲ್ಲಿ ಸೇರಿಸಿದ್ದಾರೆ.[೪]

ಅನಂತರಾಮುರವರ ಶುದ್ಧ ವ್ಯಕ್ತಿತ್ವ[ಬದಲಾಯಿಸಿ]

’ಟಿ. ಆರ್. ಅನಂತರಾಮು’ ರವರ ವ್ಯಕ್ತಿತ್ವದ ಎಲ್ಲಾ ಆಯಾಮಗಳಲ್ಲೂ ನಮಗೆ ಎದ್ದು ತೋರುವ ಸಂಗತಿಗಳು, ಆಸಕ್ತಿ, ಶ್ರದ್ಧೆ, ಸ್ವೋಪಜ್ಞತೆಗಳು, ಬರವಣಿಗೆಯ ಆಳ-ವಿಸ್ತಾರ, ವೈವಿಧ್ಯಗಳು ಅದ್ಭುತ. ಅವರ ೫೦ ಕೃತಿಗಳಲ್ಲಿ ಸುಮಾರು ೩೫ ಕ್ಕೂ ಹೆಚ್ಚುಕೃತಿಗಳು, ಭೂವಿಜ್ಞಾನಕ್ಕೆ ಸಂಬಂಧಿಸಿದವುಗಳು. ಉಳಿದಂತೆ ಭೂವಿಜ್ಞಾನಿಗಳ ಜೀವನಚರಿತ್ರೆ, ಸಂಪಾದಿತ ಕೃತಿಗಳು, ಹಾಗೂ ಅನುವಾದಿತ ಕೃತಿಗಳೂ ಇವೆ. ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ೮೦೦ ಕ್ಕೂ ಹೆಚ್ಚಿನಲೇಖನಗಳಿವೆ.

'ವಿಸ್ಮಯ ವಿಜ್ಞಾನ ಮಾಲಿಕೆ,' ಯಲ್ಲಿ, ೩೩ ಕೃತಿಗಳ ಸಂಪಾದನೆ, ಸಾಕ್ಷ್ಯಚಿತ್ರಗಳಿಗೆ ಸಾಹಿತ್ಯ, 'ಕನ್ನಡ ವಿಶ್ವಕೋಶ', 'ಜ್ಞಾನ-ವಿಜ್ಞಾನಕೋಶ', 'ಕಿರಿಯರ ಕರ್ನಾಟಕ', 'ಕರ್ನಾಟಕ ಸಂಗಾತಿ', 'ಕರ್ನಾಟಕ ಕೋಶ,' ಮುಂತಾದ, 'ಪರಾಮರ್ಶನ ಗ್ರಂಥ,' ಗಳಿಗೆ ಅವರು ಬರೆದಿರುವ ಲೇಖನಗಳು ಮುಂತಾದವುಗಳು, ಅನಂತರಾಮುರವರನ್ನು ಕನ್ನಡ ವಿಜ್ಞಾನ ಸಾಹಿತ್ಯದ ಒಬ್ಬ ವಿಶಿಷ್ಠವ್ಯಕ್ತಿಯನ್ನಾಗಿಸಿವೆ.

೪ ದಶಕಗಳ ಹಿಂದಿನ ಪರಿಸ್ತಿತಿ[ಬದಲಾಯಿಸಿ]

ನಾಲ್ಕು ದಶಕಗಳ ಹಿಂದೆ, ’ಟಿ. ಆರ್. ಅನಂತರಾಮು’ ಬರೆಯಲು ತೊಡಗಿದಾಗ ಕನ್ನಡ ವಿಜ್ಞಾನ ಸಾಹಿತ್ಯದ ಇತಿಹಾಸದ ಆ ಘಟ್ಟದಲ್ಲಿ ಎದುರಾದ ಸಮಸ್ಯೆಗಳನ್ನೆಲ್ಲಾ ಅವರು ಸ್ಪಂದಿಸಿ ಎದುರಿಸಿದರು. ನವಕರ್ನಾಟಕ ಪ್ರಕಟನಾಸಂಸ್ಥೆಯ’ ಪದ ವಿವರಣಾ ಕೋಶ,’ ಮತ್ತು ’ ಜ್ಞಾನ -ವಿಜ್ಞಾನ ಕೋಶ’ ಗಳಲ್ಲಿ ಸಹಾಯಕ ಸಂಪಾದಕರಾಗಿ, ಮಾಡಿದ ಕೆಲಸ ಮಹತ್ವದ್ದೆಂದು ಗುರುತಿಸಲ್ಪಟ್ಟಿದೆ.

ಜನಪ್ರಿಯ ವಿಜ್ಞಾನದ ಬಗ್ಗೆ ಕಾಳಜಿ[ಬದಲಾಯಿಸಿ]

ಜನಪ್ರಿಯ ವಿಜ್ಞಾನದ ಬಗ್ಗೆ ನಮ್ಮ ವಿಶ್ವವಿದ್ಯಾಲಯಗಳಿಗೆ ಆಸಕ್ತಿಯಿಲ್ಲದಿರುವುದು ಅವರಿಗೆ ಖೇದವನ್ನುಂಟುಮಾಡಿದೆ. ಇದಲ್ಲದೆ ಯಾವ ಖ್ಯಾತ ವಿಜ್ಞಾನಿಯೂ ಕನ್ನಡದಲ್ಲಿಬರೆಯಲು ಇಚ್ಛಿಸುವುದಿಲ್ಲ. ಅನಿವಾರ್ಯತೆಯನ್ನು ಬಿಟ್ಟರೆ ಕನ್ನಡದಲ್ಲಿ ಮಾತಾಡಲೂ ಹಿಂಜರಿಯುತ್ತಾರೆ. ಕನ್ನಡದಲ್ಲೇ ಈಗ ಬರೆಯುತ್ತಿರುವ ಅನೇಕ ಲೇಖಕರೂ ಸಹಿತ, ಕನ್ನಡ ಭಾಷೆಯಬಗ್ಗೆ ವಿಶೇಷ ಆಸಕ್ತಿ ಪ್ರೀತಿ, ತವಕ, ಕಾಳಜಿಗಳನ್ನು ವ್ಯಕ್ತಪಡಿಸುತ್ತಿಲ್ಲ.

ಕನ್ನಡವನ್ನು ಬಿಟ್ಟು ಯಾವುದೇ ಭಾಷೆಯ ಭಾರತೀಯರು ತೋರಿಸುವ ಮಾತೃಭಾಷಾ-ಒಲವನ್ನು ಹೆಸರಿಸಿದರೂ, ತಮ್ಮ ಸರದಿ ಬಂದಾಗ ಹಿಂಜರಿಯುವ ಅಳುಕುಸ್ವಾಭಾವವನ್ನು ಹೊಂದಿರುವುದು ಎಲ್ಲರ ಗಮನಕ್ಕೆ ಬಂದ ಸಂಗತಿಯಾಗಿದೆ. ತಮಿಳರು, ಬಂಗಾಳಿಗಳು ಕೇರಳೀಯರು, ಮರಾಠೀಜನರನ್ನು ನೋಡಿಕಲಿಯಬೇಕಾದದ್ದು ಅತಿಯಾಗಿದೆ.

ಪರಿವಾರದ ಸದಸ್ಯರ ಸಹಕಾರ[ಬದಲಾಯಿಸಿ]

ಸಹಧರ್ಮಿಣಿ, ಎನ್ನುವ ಪದಕ್ಕೆ ಅನ್ವರ್ಥನಾಮವೆಂಬಂತೆ ಪತ್ನಿ ಅನ್ನಪೂರ್ಣರವರು, ಕರಡುಪ್ರತಿಗಳನ್ನು ತಿದ್ದುವುದರಿಂದ ಹಿಡಿದು, ಅದಕ್ಕೆ ಅಂತಿಮ ಮೆರುಗನ್ನು ಕೊಡುವವರೆಗೂ ನೆರಳಿನಂತಿದ್ದು ಅತ್ಯಂತ ಕಾಳಜಿ ಶ್ರದ್ಧೆಗಳಿಂದ ಪತಿಯ ಜೊತೆ, ಸಹಕರಿಸುತ್ತಿದ್ದಾರೆ. ಮಗ ಬೆಂಗಳೂರಿನ ಸಂಸ್ಥೆಯೊಂದರಲ್ಲಿ ಇಂಜಿನಿಯರ್. ಮಗಳು, ’ಸ್ಪೇನ್ ದೇಶ’ ದಲ್ಲಿ ವಾಸ್ತವ್ಯ ಹೂಡಿದ್ದಾರೆ. ಅವರ ಈ ಅಮೋಘ ಕಾರ್ಯವಿಧಾನಗಳಿಗೆ ಸಾಕ್ಷಿಯಾಗಿ ಈಗ ಮೊಮ್ಮಗ, ’ಅಮೋಘ್’ ನಿದ್ದಾನೆ. ನಾಳಿನ ಕೆಲಸಗಳಿಗೆ ´ಅನನ್ಯ´ ತಾತನಿಗೆ ಆಸರೆಯಾಗುತ್ತಾಳೆ.

ಪ್ರೊ.ಜಿ.ಟಿ.ಎನ್ ಮೆಚ್ಚುಗೆ ಪಡೆದವರು[ಬದಲಾಯಿಸಿ]

ಪ್ರೊ. ಜಿ. ಟಿ. ನಾರಾಯಣರಾಯರು, ಬಹಳ ಹಿಂದೆಯೇ ಅನಂತರಾಮುರವರ ವಿದ್ವತ್ತನ್ನು ಗುರುತಿಸಿದ್ದರು .ಜಿ. ಟಿ. ನಾರಾಯಣರಾವ್, ನಾಗೇಶ ಹೆಗಡೆ, ಮತ್ತಿತರ ಬೆರೆಳೆಣಿಕೆಯ ಬಿಟ್ಟರೆ, ಅಂಕಣಕಾರ ಡಾ. ಎಚ್. ಆರ್. ಕೃಷ್ಣಮೂರ್ತಿಯವರ ಬರೆದಿರುವಂತೆ, ಅನಂತರಾಮು ರವರು, ವಿಜ್ಞಾನದ ವಿಶ್ವಕೋಶ. ಅವರು, ಹೆಗಡೆಯವರೊಡನೆ ಸೇರಿ, ಕನ್ನಡದ ಜನಪ್ರಿಯ ವಿಜ್ಞಾನ ಪತ್ರಿಕೆಯ ಹೇಗಿರಬೇಕೆಂಬ ’ಬೆಂಚ್ ಮಾರ್ಕ್,’ ನ್ನು ’ವಿಜ್ಞಾನ ಸಂಗಾತಿ’ ಯ ಮೂಲಕ ಮಾಡಿ ತೋರಿಸಿಕೊಟ್ಟಿದ್ದಾರೆ. ’ಟಿ. ಆರ್. ಅನಂತರಾಮು’ ರವರ ವಿದ್ವತ್ತನ್ನು ಅತಿ ಮೊದಲೇ ಕಂಡು ಹಿಡಿದ ವ್ಯಕ್ತಿಗಳಲ್ಲಿ ಜಿ. ಟಿ.ನಾರಾಯಣರಾಯರು ಮೊದಲಿಗರು. " ತಾಕತ್ತಿನ ನೆಲೆಯಿಂದ ಜನಪ್ರಿಯ ವಿಜ್ಞಾನ ಸಾಹಿತ್ಯವನ್ನು ಸೃಷ್ಟಿಸುವ ಕನ್ನಡದ ಕೆಲವೇ ಲೇಖಕರಲ್ಲಿ ಒಬ್ಬರು". ಅನಂತರಾಮು ಹಾಗೂ ನಾಗೇಶ ಹೆಗಡೆಯವರ ಸಂಪಾದಕತ್ವದಲ್ಲಿ ಹಂಪಿ ವಿಶ್ವವಿದ್ಯಾ ಲಯದಿಂದ ಹತ್ತು ಸಂಚಿಕೆಗಳು, ಎಂದೆಂದಿಗೂ ಒಂದು ಸರ್ವಶ್ರೇಷ್ಠಮಾದರಿ ಕನ್ನಡ ಕಾವ್ಯಲೋಕದ ಕಾವ್ಯ-ಸಂಪತ್ತಾಗಿ ಉಳಿಯುತ್ತವೆ. ಆದರೆ ಕಾರಣಾಂತರಗಳಿಂದ ಹಂಪಿ ವಿಶ್ವವಿದ್ಯಾಲಯ ಪ್ರಕಟಣೆಗಳನ್ನು ನಿಲ್ಲಿಸಿದೆ.

ಟಿ ಆರ್. ಅನಂತರಾಮುರವರ ಪ್ರಕಟಿತ ಕೃತಿಗಳು[ಬದಲಾಯಿಸಿ]

ಪ್ರಶಸ್ತಿ ಪುರಸ್ಕಾರಗಳು[ಬದಲಾಯಿಸಿ]

 • ತುಮಕೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟೊರೇಟ್,[೫]

ಅನುವಾದಗಳು[ಬದಲಾಯಿಸಿ]

ಅನಂತರಾಮುರವರ ನಿವೃತ್ತಿ[ಬದಲಾಯಿಸಿ]

ರಾಯರು ವೃತ್ತಿಯಿಂದ ನಿವೃತ್ತರಾದದ್ದು, ಡಿಸೆಂಬರ್, ೨೦೦೮ ರಲ್ಲಿ ; ಆದರೆ ಪ್ರವೃತ್ತಿಯಿಂದಲ್ಲ. ಈಗಲೂ ಅವರು ವಿಜ್ಞಾನ ಪ್ರಸಾರ, ಗ್ರಂಥ ರಚನೆ,ಹಾಗೂ ಗ್ರಂಥ ಸಂಪಾದನೆಯಲ್ಲಿ ಸದಾ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.

’ತಾರಾಅ',ರವರ, ವಿಳಾಸ[ಬದಲಾಯಿಸಿ]

 • ೫೩೪, ’ಧಾತ್ರಿ,’ ೭೦ ನೇ ಅಡ್ಡ ರಸ್ತೆ, ೧೪ ನೇ ಮುಖ್ಯ ರಸ್ತೆ, ಕುಮಾರಸ್ವಾಮಿ ಬಡಾವಣೆ, ೧ ನೇ ಹಂತ, ಬೆಂಗಳೂರು-೫೬೦೦೭೮
 • ದೂರವಾಣಿ : ೨೬೬೬೪೨೦೪/೯೮೮೬೩೫೬೦೮೫

ಉಲ್ಲೇಖಗಳು[ಬದಲಾಯಿಸಿ]

 1. ೩ನೇ ಸಾಹಿತ್ಯ ಸಮ್ಮೇಳನ, ಸಿರ'
 2. http://www.newindianexpress.com/lifestyle/books/article169009.ece?service=print
 3. http://bedrefoundation.blogspot.in/2009/08/50th-work-of-sri-t-r-anantharamu-to-be.html
 4. http://bedrebaraha.blogspot.in/2008/03/pashchima-mukhi-of-t-r-anantharamu.html
 5. ಇ-ಜ್ಞಾನ ಪತ್ರಿಕೆ- 'ಪ್ರಿಯ ಮಿತ್ರ ಅನಂತರಾಮು'.ನಾಗೇಶ್ ಹೆಗಡೆಯವರ ಅಭಿನಂದನಾ ಪತ್ರ.

.