ಟಾಯ್ಲೆಟ್: ಏಕ್ ಪ್ರೇಮ್ ಕಥಾ (ಚಲನಚಿತ್ರ)
ಟಾಯ್ಲೆಟ್: ಏಕ್ ಪ್ರೇಮ್ ಕಥಾ | |
---|---|
ನಿರ್ದೇಶನ | ಶ್ರೀ ನಾರಾಯಣ್ ಸಿಂಗ್ |
ನಿರ್ಮಾಪಕ |
|
ಲೇಖಕ | ಸಿದ್ಧಾರ್ಥ್ ಸಿಂಗ್ |
ಸಂಗೀತ |
|
ಛಾಯಾಗ್ರಹಣ | ಅಂಶುಮಾನ್ ಮಹಾಲೆ |
ಸಂಕಲನ | ಶ್ರೀ ನಾರಾಯಣ್ ಸಿಂಗ್ |
ಸ್ಟುಡಿಯೋ |
|
ವಿತರಕರು | ವಾಯಕಾಮ್ ಏಟೀನ್ ಮೋಷನ್ ಪಿಕ್ಚರ್ಸ್ |
ಬಿಡುಗಡೆಯಾಗಿದ್ದು |
|
ಅವಧಿ | 155 ನಿಮಿಷಗಳು[೧] |
ದೇಶ | ಭಾರತ |
ಭಾಷೆ | ಹಿಂದಿ |
ಬಂಡವಾಳ | ₹ 32 ಕೋಟಿ[೨] |
ಬಾಕ್ಸ್ ಆಫೀಸ್ | ಅಂದಾಜು ₹ 311.5 ಕೋಟಿ[೩] |
ಟಾಯ್ಲೆಟ್: ಏಕ್ ಪ್ರೇಮ್ ಕಥಾ ೨೦೧೭ರ ಒಂದು ಹಿಂದಿ ಹಾಸ್ಯಭರಿತ ನಾಟಕೀಯ ಚಲನಚಿತ್ರ.[೪] ಈ ಚಿತ್ರವನ್ನು ಶ್ರೀ ನಾರಾಯಣ್ ಸಿಂಗ್ ನಿರ್ದೇಶಿಸಿದ್ದಾರೆ.[೫][೬] ಅಕ್ಷಯ್ ಕುಮಾರ್ ಮತ್ತು ನೀರಜ್ ಪಾಂಡೆ ಸಹನಿರ್ಮಾಪಕರಾಗಿರುವ ಈ ಚಿತ್ರದಲ್ಲಿ,[೭] ಮುಖ್ಯ ಪಾತ್ರಗಳಲ್ಲಿ ಅಕ್ಷಯ್ ಕುಮಾರ್ ಮತ್ತು ಭೂಮಿ ಪೇಡ್ನೇಕರ್ ನಟಿಸಿದ್ದಾರೆ.[೮] ಅನುಪಮ್ ಖೇರ್, ಸುಧೀರ್ ಪಾಂಡೆ ಮತ್ತು ದಿವ್ಯೇಂದು ಶರ್ಮಾ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು ೧೧ ಆಗಸ್ಟ್ ೨೦೧೭ರಂದು ಬಿಡುಗಡೆಗೊಂಡಿತು.[೯] ಈ ಚಿತ್ರವು ವಿಡಂಬನಾತ್ಮಕ ಪ್ರಹಸನವಾಗಿದ್ದು ಭಾರತದಲ್ಲಿನ ನೈರ್ಮಲ್ಯದ ಪರಿಸ್ಥಿತಿಗಳನ್ನು ಸುಧಾರಿಸುವುದನ್ನು ಬೆಂಬಲಿಸುತ್ತದೆ, ಮತ್ತು ಬಯಲು ಬಹಿರ್ದೆಸೆ ಮೇಲೆ ಒತ್ತು ನೀಡುತ್ತದೆ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ.
ಈ ಚಿತ್ರವು ವಾಣಿಜ್ಯಿಕ ಯಶಸ್ಸೆನಿಸಿಕೊಂಡು ಸಾರ್ವಕಾಲಿಕವಾಗಿ ಅಕ್ಷಯ್ ಕುಮಾರ್‌ರ ಅತಿ ಹೆಚ್ಚು ಹಣಗಳಿಸಿದ ಚಲನಚಿತ್ರವೆನಿಸಿಕೊಂಡಿತು.[೩] ಈ ಚಿತ್ರವು ಸಾಂಸ್ಕೃತಿಕ ಹಾಗೂ ಧಾರ್ಮಿಕ ಮನೋಭಾವಗಳ ಕಾರಣದಿಂದಾಗುವ ಭಾರತದ ಶೌಚಾಲಯ ಸಮಸ್ಯೆಯನ್ನು ಎತ್ತಿ ತೋರಿಸುತ್ತದೆ. ಭಾರತದ ಗ್ರಾಮೀಣ ಪ್ರದೇಶಗಳಲ್ಲಿ, ಜನರ ಬಳಿ ಈಗಲೂ ಈ ಮೂಲಭೂತ ಅಗತ್ಯವಿಲ್ಲ. ಇದು ಮಹಿಳೆಯರನ್ನು ನಿರಾಶೆಗೊಳಿಸಿ ಮತ್ತಷ್ಟು ಲೈಂಗಿಕ ಕಿರುಕುಳಕ್ಕೆ ಕಾರಣವಾಗುತ್ತದೆ. ೬೩ನೇ ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಈ ಚಿತ್ರವು ಅತ್ಯುತ್ತಮ ಚಲನಚಿತ್ರ, ನಾರಾಯಣ್ ಸಿಂಗ್‍ರಿಗೆ ಅತ್ಯುತ್ತಮ ನಿರ್ದೇಶಕ ಮತ್ತು ಅಕ್ಷಯ್ ಕುಮಾರ್‌ರಿಗೆ ಅತ್ಯುತ್ತಮ ನಟ ಸೇರಿದಂತೆ ಮೂರು ನಾಮನಿರ್ದೇಶನಗಳನ್ನು ಪಡೆಯಿತು.
ಕಥಾವಸ್ತು
[ಬದಲಾಯಿಸಿ]ಒಂದು ಭಾರತೀಯ ಗ್ರಾಮದಲ್ಲಿ, ಮಹಿಳೆಯರ ಒಂದು ಗುಂಪು ದಿನದ ನಸುಕಿನ ಹೊತ್ತಿನಲ್ಲಿ ಪೊದೆಗಳ ಮುಸುಕಿನ ಹಿಂದೆ ಬಯಲು ಬಹಿರ್ದೆಸೆಗಾಗಿ ಗೋರಖಪುರದ ಹತ್ತಿರದ ಒಂದು ಹೊಲಕ್ಕೆ ಹೋಗುತ್ತದೆ. ತನ್ನ ಅಪ್ಪ (ಪಂಡಿತ್‍ಜಿ) ಬಹಳ ಧಾರ್ಮಿಕ ಮತ್ತು ಮೂಢನಂಬಿಕೆಯುಳ್ಳ ಪೂಜಾರಿಯಾಗಿರುವುದರ ಕಾರಣ ಕೇಶವ್ (ಅಕ್ಷಯ್ ಕುಮಾರ್) ಒಂದು ಕಪ್ಪು ಎಮ್ಮೆಯನ್ನು ಮದುವೆಯಾಗಬೇಕಾಗುತ್ತದೆ, ಏಕೆಂದರೆ ಕಪ್ಪು ಎಮ್ಮೆಯೊಂದಿಗೆ ತನ್ನ ಮಗನ ಮದುವೆ ಕೇಶವ್‍ನ ಅದೃಷ್ಟವು ಸುಧಾರಿಸಲು ನೆರವಾಗುವುದು ಎಂದು ಅವನ ತಂದೆ ನಂಬಿರುತ್ತಾನೆ.
ಕೇಶವ್ ಕಾಲೇಜ್‍ಗೆ ಹೋಗುವ ಒಬ್ಬ ವಿದ್ಯಾವಂತ ಹುಡುಗಿ ಜಯಾಳನ್ನು (ಭೂಮಿ ಪೇಡ್ನೇಕರ್) ಭೇಟಿಯಾಗಿ ಪ್ರೀತಿಸತೊಡಗುತ್ತಾನೆ ಮತ್ತು ಅಂತಿಮವಾಗಿ ತನ್ನನ್ನು ಮದುವೆಯಾಗುವಂತೆ ಅವಳ ಮನವೊಲಿಸುತ್ತಾನೆ. ಆದರೆ, ಕೇಶವ್‍ನ ಗ್ರಹಕುಂಡಲಿ ಹೇಗಿರುತ್ತದೆಂದರೆ ಅವನು ಎಡಗೈಯಲ್ಲಿ ಎರಡು ಹೆಬ್ಬಟ್ಟುಗಳಿರುವ ಹುಡುಗಿಯನ್ನು ಮಾತ್ರ ಮದುವೆಯಾಗಬಲ್ಲ ಮತ್ತು ಮದುವೆಯಾಗಬೇಕು ಎಂದು ಕೇಶವ್‍ನ ತಂದೆಯ ಎಣಿಕೆಯಾಗಿರುತ್ತದೆ. ಜಯಾ ಈ ಅಗತ್ಯವನ್ನು ಪೂರೈಸದಿರುವುದರಿಂದ, ಕೇಶವ್ ಒಂದು ಕೃತಕ ಹೆಬ್ಬಟ್ಟನ್ನು ತಯಾರಿಸಿ ಜಯಾಗೆ ಕೊಡುತ್ತಾನೆ ಮತ್ತು ಅವಳು ಅದನ್ನು ತನ್ನ ಹೆಬ್ಬಟ್ಟಿನ ಮೇಲೆ ಉಂಗುರವಾಗಿ ಧರಿಸುತ್ತಾಳೆ. ಸಂಶಯಪಡದ ಕೇಶವ್‍ನ ತಂದೆ ಅವರ ಮದುವೆಗೆ ಒಪ್ಪಿಕೊಳ್ಳುತ್ತಾನೆ.
ಕೇಶವ್‍ನ ಮನೆಯಲ್ಲಿ ತನ್ನ ಮೊದಲ ಮುಂಜಾನೆಯಂದು, ಮಲವಿಸರ್ಜಿಸಲು ಜಯಾ ಇಷ್ಟವಿಲ್ಲದೆ ಗದ್ದೆಗೆ ಹೋಗುತ್ತಾಳೆ. ಆದರೆ ಮಲವಿಸರ್ಜಿಸದೆ ತಲ್ಲಣಗೊಂಡು ವಾಪಸಾಗಿ ಅದರ ಬಗ್ಗೆ ಕೇಶವ್ ಬಳಿ ದೂರುತ್ತಾಳೆ. ಒಂದು ಶೌಚಾಲಯ ಬೇಕೆಂಬ ಅವಳ ಮೊಂಡುತನವನ್ನು ಬಿಟ್ಟುಬಿಡಬೇಕೆಂದು ಕೇಶವ್‍ನ ಪುನರಾವರ್ತಿತ ಮನವೊಲಿಕೆಯ ಪ್ರಯತ್ನಗಳ ಹೊರತಾಗಿಯೂ ಜಯಾ ಅಚಲವಾಗಿರುತ್ತಾಳೆ. ಸಮಸ್ಯೆಯನ್ನು ಬಗೆಹರಿಸಲು ತನ್ನ ಮನೆಯಲ್ಲಿ ವಾಸ್ತವವಾಗಿ ಶೌಚಾಲಯವನ್ನು ಕಟ್ಟಿಸುವ ಬದಲು ಅವನು ಕೆಲವು ತಾತ್ಕಾಲಿಕ ಏರ್ಪಾಟುಗಳನ್ನು ಮಾಡುತ್ತಾನೆ. ಮೊದಲು ಅವಳನ್ನು ನೆರೆಯವರ ಮನೆಗೆ ಕರೆದೊಯ್ಯುತ್ತಾನೆ ಏಕೆಂದರೆ ಅಲ್ಲಿ ಒಬ್ಬ ಹಾಸಿಗೆ ಹಿಡಿದ ವೃದ್ಧೆಗಾಗಿ ಸಾಗಿಸಬಹುದಾದ ಶೌಚಾಲಯವಿರುತ್ತದೆ. ನಂತರ ಗ್ರಾಮದ ರೇಲ್ವೆ ನಿಲ್ದಾಣದಲ್ಲಿ ಏಳು ನಿಮಿಷಗಳ ನಿಲುಗಡೆಯಿರುವ ಟ್ರೇನಿಗೆ ಕರೆದುಕೊಂಡು ಹೋಗುತ್ತಾನೆ. ಆದರೆ ಸ್ವಲ್ಪ ಸಮಯದ ನಂತರ ಒಂದು ದಿನ, ಅವಳು ಶೌಚಾಲಯದಲ್ಲಿ ಸಿಕ್ಕಿಕೊಂಡಾಗ ಟ್ರೇನ್ ನಿಲ್ದಾಣದಿಂದ ಹೊರಡುತ್ತದೆ. ತಲ್ಲಣಗೊಂಡು ನಿರಾಶಳಾದ ಜಯಾ ಕೇಶವ್‍ನನ್ನು ಬಿಟ್ಟು ತನ್ನ ತಂದೆತಾಯಿಯರ ಮನೆಗೆ ವಾಪಸು ಹೋಗುತ್ತಾಳೆ.
ಗ್ರಾಮದಲ್ಲಿ ಶೌಚಾಲಯಗಳನ್ನು ಕಟ್ಟಿಸುವಂತೆ ಸರಪಂಚ ಮತ್ತು ಗ್ರಾಮಸ್ಥರ ಮನವೊಲಿಸುವ ವಿಫಲ ಪ್ರಯತ್ನದ ನಂತರ, ಜಯಾಳ ಸಹಾಯದೊಂದಿಗೆ ಕೇಶವ್ ಸಂಬಂಧಿತ ನಿಯಂತ್ರಣಾ ಪ್ರಾಧಿಕಾರವನ್ನು ಸಂಪರ್ಕಿಸಿ ತನ್ನ ಮುಂಭಾಗದ ಅಂಗಳದಲ್ಲಿ ಒಂದು ಶೌಚಾಲಯದ ನಿರ್ಮಾಣವನ್ನು ಆರಂಭಿಸುತ್ತಾನೆ. ನಿರ್ಮಾಣವು ಮುಗಿದಾಗ, ಕೇಶವ್ ಮಲಗಿರುವಾಗ ಅವನ ತಂದೆ ಮತ್ತು ಸರಪಂಚ ಶೌಚಾಲಯವನ್ನು ಧ್ವಂಸಮಾಡುವ ಏರ್ಪಾಟು ಮಾಡುತ್ತಾರೆ. ಆದರೆ ಶೌಚಾಲಯವು ಸಂಪೂರ್ಣವಾಗಿ ನಾಶವಾಗುವುದರೊಳಗೆ ಕೇಶವ್ ಎಚ್ಚರಗೊಂಡು ಅದನ್ನು ಸಂಪೂರ್ಣ ವಿನಾಶದಿಂದ ರಕ್ಷಿಸುತ್ತಾನೆ.
ಈಗ ಜಯಾ ವಿಚ್ಛೇದನಕ್ಕಾಗಿ ಸ್ಥಳೀಯ ನ್ಯಾಯಾಲಯದಲ್ಲಿ ಅರ್ಜಿ ಹಾಕುತ್ತಾಳೆ. ವಿಚ್ಛೇದನ ಕೇಳುವುದಕ್ಕೆ ತನ್ನ ಗಂಡನ ಮನೆಯಲ್ಲಿ ಶೌಚಾಲಯ ಲಭ್ಯವಿಲ್ಲದಿರುವುದು ಮುಖ್ಯ ಕಾರಣವೆಂದು ಅದರಲ್ಲಿ ಉಲ್ಲೇಖಿಸುತ್ತಾಳೆ. ಅದರ ಅನನ್ಯ ಸ್ವರೂಪದ ಕಾರಣ, ಆ ಮೊಕದ್ದಮೆಯು ಬಹಳಷ್ಟು ಮಾಧ್ಯಮಗಳ ಗಮನ ಸೆಳೆಯುತ್ತದೆ. ಕೇಶವ್‍ನ ಗ್ರಾಮದಲ್ಲಿ ಶೌಚಾಲಯಗಳ ನಿರ್ಮಾಣವನ್ನು ತ್ವರೆಗೊಳಿಸಲು ರಾಜಕಾರಣಿಗಳು ಮತ್ತು ಸಂಬಂಧಿತ ಸರ್ಕಾರಿ ಇಲಾಖೆಗಳು ಕಾರ್ಯದಲ್ಲಿ ತೊಡಗುತ್ತವೆ. ಆದರೆ ಕೇಶವ್‍ನ ತಂದೆ ತನ್ನ ಮನೆಯಲ್ಲಿ ಶೌಚಾಲಯವನ್ನು ಹೊಂದದಿರುವ ತನ್ನ ನಿರ್ಧಾರದಲ್ಲಿ ದೃಢವಾಗಿರುತ್ತಾನೆ. ಆದರೆ ಒಂದು ದಿನ, ಅವನ ತಾಯಿ ಮಲವಿಸರ್ಜನೆ ಮಾಡಲು ಹೊರಗೆ ಹೋಗುವಾಗ ಹೊಸಿಲ ಮೆಟ್ಟಿಲಿನ ಮೇಲೆ ಬಿದ್ದು ತನ್ನ ಟೊಂಕಕ್ಕೆ ಗಾಯಮಾಡಿಕೊಂಡು ತಾನು ಮಲವಿಸರ್ಜನೆ ಮಾಡಲು ಗದ್ದೆಗಳಿಗೆ ನಡೆದು ಹೋಗುವುದು ಸಾಧ್ಯವಿಲ್ಲ, ಮತ್ತು ತಾನು ಕೇಶವ್ ಕಟ್ಟಿಸಿದ ಮುಂಭಾಗದ ಅಂಗಳದಲ್ಲಿನ ಶೌಚಾಲಯವನ್ನು ಬಳಸಬೇಕೆಂದು ಜೋರಾಗಿ ಅಳುತ್ತಾಳೆ. ಬಹಳಷ್ಟು ಹಿಂಜರಿಕೆಯ ನಂತರ, ಕೇಶವ್‍ನ ತಂದೆ ಪಟ್ಟು ಸಡಿಲಿಸಿ ಶೌಚಾಲಯಕ್ಕೆ ಹೋಗಲು ತನ್ನ ತಾಯಿಗೆ ನೆರವಾಗುತ್ತಾನೆ. ಒಂದು ಮನೆಯೊಳಗೆ ಶೌಚಾಲಯವು ನಿಜಕ್ಕೂ ಅತ್ಯಗತ್ಯವಾದದ್ದು ಎಂದು ಆಗ ಅವನಿಗೆ ಅರಿವಾಗುತ್ತದೆHe then realises that a toilet is indeed a critical requirement within a household.
ಕೇಶವ್ ಮತ್ತು ಜಯಾರ ವಿಚ್ಛೇದನದ ಪ್ರಕರಣದ ವಿಚಾರಣೆಯ ದಿನದಂದು, ನ್ಯಾಯಾಧೀಶರಿಗೆ ಮುಖ್ಯಮಂತ್ರಿಗಳ ಕಚೇರಿಯಿಂದ ಅಧಿಕೃತ ನೋಟೀಸು ಬರುತ್ತದೆ. ಅವರ ಗ್ರಾಮದಲ್ಲಿ ಶೌಚಾಲಯಗಳ ನಿರ್ಮಾಣವನ್ನು ಮರುದಿನವೇ ಆರಂಭಿಸಲಾಗುವುದು ಮತ್ತು ಹಾಗಾಗಿ ನ್ಯಾಯಾಧೀಶರು ಅವರಿಗೆ ವಿಚ್ಛೇದನ ನೀಡಬಾರದು ಎಂದು ಅದು ವಿನಂತಿಸಿರುತ್ತದೆ. ದಂಪತಿಗಳು ಸಂತೋಷದಿಂದ ಒಟ್ಟಾಗಿ ಹೊರಬರುತ್ತಾರೆ. ಕೇಶವ್‍ನ ತಂದೆಯು ತನ್ನ ಮೊಂಡುತನಕ್ಕಾಗಿ ಜಯಾಳ ಕ್ಷಮೆ ಬೇಡುತ್ತಾನೆ. ಅಂತ್ಯದಲ್ಲಿ ಹೆಸರುಗಳ ಉಲ್ಲೇಖವಾಗುವಾಗ, ಗ್ರಾಮಸ್ಥರು ತಮ್ಮ ಗ್ರಾಮದ ಹೊರಗೆ ಚರ ಶೌಚಾಲಯಗಳನ್ನು ಬಳಸಲು ಸಾಲು ನಿಂತಿರುವುದನ್ನು ಮತ್ತು ಗ್ರಾಮದಾದ್ಯಂತ ಶೌಚಾಲಯಗಳ ನಿರ್ಮಾಣವು ಮುಂದುವರಿದಿರುವುದನ್ನು ತೋರಿಸಲಾಗುತ್ತದೆ.
ಪಾತ್ರವರ್ಗ
[ಬದಲಾಯಿಸಿ]- ಕೇಶವ್ ಶರ್ಮಾ ಪಾತ್ರದಲ್ಲಿ ಅಕ್ಷಯ್ ಕುಮಾರ್[೧೦]
- ಜಯಾ ಜೋಶಿ ಶರ್ಮಾ ಪಾತ್ರದಲ್ಲಿ ಭೂಮಿ ಪೇಡ್ನೇಕರ್[೧೦]
- ನಾರಾಯಣ್ ("ನಾರು") ಶರ್ಮಾ ಪಾತ್ರದಲ್ಲಿ ದಿವ್ಯೇಂದು ಶರ್ಮಾ
- ದೀನಾನಾಥ್ ("ಡಿಜೆ ಕಕ್ಕಾ") ಜೋಶಿ ಪಾತ್ರದಲ್ಲಿ ಅನುಪಮ್ ಖೇರ್[೧೧]
- ಪಂಡಿತ್ ವಿಮಲ್‍ನಾಥ್ ಶರ್ಮಾ ಪಾತ್ರದಲ್ಲಿ ಸುಧೀರ್ ಪಾಂಡೆ
- ಜಗದೀಶ್ ಪಾತ್ರದಲ್ಲಿ ಅತುಲ್ ಶ್ರೀವಾಸ್ತವ
- ವಿದ್ಯಾ ಜೋಶಿ ಪಾತ್ರದಲ್ಲಿ ಆಯೇಶಾ ರಜ಼ಾ ಮಿಶ್ರಾ
- ಮಾಥುರ್ ಪಾತ್ರದಲ್ಲಿ ರಾಜೇಶ್ ಶರ್ಮಾ
- ರಾಮ್‍ಪ್ಯಾರಿ ("ದಾದಿ") ಶರ್ಮಾ ಪಾತ್ರದಲ್ಲಿ ಶುಭಾ ಖೋಟೆ
- ರಸ್ತೋಗಿ ಪಾತ್ರದಲ್ಲಿ ಮುಕೇಶ್ ಎಸ್ ಭಟ್
- ಪ್ರಧಾನ್ ಪಾತ್ರದಲ್ಲಿ ಕಿಮ್ಟಿ ಆನಂದ್
- ಸರ್ಪಂಚ್ ಪಾತ್ರದಲ್ಲಿ ರತಿ ಶಂಕರ್ ತ್ರಿಪಾಠಿ
- ನಿರ್ದೇಶಕನಾಗಿ ಸಚಿನ್ ಖೇಡೇಕರ್ (ಅತಿಥಿ ಪಾತ್ರ)
- ಕೇಶವ್‍ನ ಹೆಸರಿಸಲ್ಲದ ಪ್ರೇಮಿಯಾಗಿ ಸನಾ ಖಾನ್ (ಅತಿಥಿ ಪಾತ್ರ)[೧೨][೧೩]
- ವರದಿಗಾರ್ತಿಯಾಗಿ ರಿಚಾ ತಿವಾರಿ
ಬೆಳವಣಿಗೆ
[ಬದಲಾಯಿಸಿ]ಈ ಚಿತ್ರವನ್ನು ಸಿದ್ಧಾರ್ಥ್ ಸಿಂಗ್ ಮತ್ತು ಗರಿಮಾ ವಹಾಲ್ ಬರೆದರು. ಇದು ಒಂದು ನೈಜ ಘಟನೆಗೆ ಕೆಲವು ಹೋಲಿಕೆಗಳನ್ನು ಹೊಂದಿದ್ದು ಅದರಲ್ಲಿ ಒಬ್ಬ ಯುವತಿ ಶೌಚಾಲಯವಿಲ್ಲದ್ದರಿಂದ ತನ್ನ ಗಂಡನ ಮನೆಯನ್ನು ಬಿಟ್ಟು ಓಡಿಹೋದಳು.[೧೪][೧೫][೧೬] ಚಿತ್ರದಲ್ಲಿ ಅಂತ್ಯದ ಉಪಕಾರ ಸ್ಮರಣೆ ವಿಭಾಗದಲ್ಲಿ, ಇದು ಮಧ್ಯ ಪ್ರದೇಶದ ಅನಿತಾ ನರ್ರೆಯ ಕಥೆಯ ಮೇಲೆ ಆಧಾರಿತವಾಗಿದೆ ಎಂದು ಟಾಯ್ಲೆಟ್ ಉಲ್ಲೇಖಿಸುತ್ತದೆ. ಇವಳು ತನ್ನ ಗಂಡ ಶಿವರಾಮ್‍ನ ಮನೆಗೆ ವಾಪಸು ಹೋಗಲು ನಿರಾಕರಿಸಿದಳು ಏಕೆಂದರೆ ಅಲ್ಲಿ ಶೌಚಾಲಯವಿರಲಿಲ್ಲ.[೧೭][೧೮]
ಚಲನಚಿತ್ರೋದ್ಯಮಿ ಪ್ರವೀಣ್ ವ್ಯಾಸ್ ಈ ಚಿತ್ರದ ತಯಾರಕರಿಗೆ ಕಾನೂನು ನೋಟೀಸನ್ನು ಕಳಿಸಿ, ಟಾಯ್ಲೆಟ್- ಏಕ್ ಪ್ರೇಮ್ ಕಥಾ ಚಿತ್ರವು ಇದೇ ವಿಷಯದ ಮೇಲೆ ಆಧಾರಿತವಾದ ತಮ್ಮ ಸಾಕ್ಷ್ಯಚಿತ್ರದಿಂದ ದೃಶ್ಯಗಳು ಮತ್ತು ಸಂಭಾಷಣೆಗಳನ್ನು ಚೌರ್ಯ ಮಾಡಿತು ಎಂದು ವಾದಿಸಿದರು.[೧೯]
ಪ್ರಚಾರ
[ಬದಲಾಯಿಸಿ]ಈ ಚಿತ್ರವನ್ನು ಪ್ರಚಾರಮಾಡಲು ಅಕ್ಷಯ್ ಕುಮಾರ್ ಮಧ್ಯ ಪ್ರದೇಶದಲ್ಲಿ ಒಂದು ಶೌಚಾಲಯವನ್ನು ಅಗೆದರು.[೨೦] ಚಿತ್ರದ ಟ್ರೇಲರ್‌ನ್ನು ೧೧ ಜೂನ್ ೨೦೧೭ರಂದು ಬಿಡುಗಡೆ ಮಾಡಲಾಯಿತು.[೨೧] ಸ್ವಚ್ಛ ಭಾರತ ಅಭಿಯಾನದ ಪ್ರಕಾರ ಸ್ವಚ್ಛತೆಯ ಸಂದೇಶವನ್ನು ಪ್ರೋತ್ಸಾಹಿಸಲು ಈ ಚಿತ್ರವು ಉತ್ತಮ ಪ್ರಯತ್ನವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕರೆದರು.[೨೨][೨೩]
ಬಾಕ್ಸ್ ಆಫ಼ಿಸ್
[ಬದಲಾಯಿಸಿ]ಚಿತ್ರವು ಭಾರತದ ಸ್ವಾತಂತ್ರ್ಯ ದಿನದ ಮೊದಲು ೧೧ ಆಗಸ್ಟ್ ೨೦೧೭ರಂದು ಬಿಡುಗಡೆಯಾಯಿತು.[೯] ಈ ಚಿತ್ರವು ವಿಶ್ವಾದ್ಯಂತ ₹311.5 ಕೋಟಿಯಷ್ಟು ಹಣಗಳಿಸಿತು. ಇದು ಅಕ್ಷಯ್ ಕುಮಾರ್ ಅಭಿನಯದ ಅತಿ ಹೆಚ್ಚು ಹಣಗಳಿಸಿದ ಚಲನಚಿತ್ರವೆನಿಸಿಕೊಂಡಿತು.
ಭಾರತದಲ್ಲಿ
[ಬದಲಾಯಿಸಿ]ಈ ಚಿತ್ರವು ಭಾರತದಲ್ಲಿ ರೂ. 132 ಕೋಟಿಯಷ್ಟು ಗಳಿಸಿತು.[೨೪][೨೫]
ಧ್ವನಿವಾಹಿನಿ
[ಬದಲಾಯಿಸಿ]ಚಿತ್ರದ ಧ್ವನಿವಾಹಿನಿಯನ್ನು ವಿಕಿ ಪ್ರಸಾದ್, ಮಾನಸ್-ಶಿಖರ್ ಮತ್ತು ಸಚೇತ್-ಪರಂಪರಾ ಸಂಯೋಜಿಸಿದ್ದಾರೆ ಮತ್ತು ಹಾಡುಗಳಿಗೆ ಸಾಹಿತ್ಯವನ್ನು ಸಿದ್ಧಾರ್ಥ್-ಗರಿಮಾ ಬರೆದಿದ್ದಾರೆ. ಧ್ವನಿವಾಹಿನಿಯನ್ನು ಟಿ-ಸೀರೀಸ್ ೧೩ ಜುಲೈ ೨೦೧೭ರಂದು ಬಿಡುಗಡೆ ಮಾಡಿತು. ಈ ಧ್ವನಿವಾಹಿನಿಯು ಐದು ಹಾಡುಗಳನ್ನು ಹೊಂದಿದೆ.
ಎಲ್ಲ ಹಾಡುಗಳು ಸಿದ್ಧಾರ್ಥ್-ಗರಿಮಾ ಅವರಿಂದ ರಚಿತ
ಹಾಡುಗಳ ಪಟ್ಟಿ | ||||
---|---|---|---|---|
ಸಂ. | ಹಾಡು | संगीतकार | ಗಾಯಕ(ರು) | ಸಮಯ |
1. | "ಹ್ಞಸ್ ಮತ್ ಪಗ್ಲಿ" | ವಿಕಿ ಪ್ರಸಾದ್ | ಸೋನು ನಿಗಮ್, ಶ್ರೇಯಾ ಘೋಶಾಲ್ | 5:18 |
2. | "ಬಖೇಡಾ" | ವಿಕಿ ಪ್ರಸಾದ್ | ಸುಖ್ವಿಂದರ್ ಸಿಂಗ್, ಸುನಿಧಿ ಚೌಹಾನ್ | 3:27 |
3. | "ಗೋರಿ ತೂ ಲಠ್ ಮಾರ್" | ಮಾನಸ್ ಶಿಖರ್ | ಸೋನು ನಿಗಮ್, ಪಲಕ್ ಮುಛಾಲ್ | 3:58 |
4. | "ಸುಬಹ್ ಕಿ ಟ್ರೇನ್" | ಸಚೇತ್-ಪರಂಪರಾ | ಸಚೇತ್-ಪರಂಪರಾ | 3:45 |
5. | "ಟಾಯ್ಲೆಟ್ ಕಾ ಜುಗಾಡ್" | ವಿಕಿ ಪ್ರಸಾದ್ | ಅಕ್ಷಯ್ ಕುಮಾರ್, ವಿಕಿ ಪ್ರಸಾದ್ | 4:32 |
ಒಟ್ಟು ಸಮಯ: | 21:00 |
ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು
[ಬದಲಾಯಿಸಿ]- ಅತ್ಯುತ್ತಮ ಚಲನಚಿತ್ರ - ನಾಮನಿರ್ದೇಶಿತ
- ಅತ್ಯುತ್ತಮ ನಿರ್ದೇಶಕ -ಶ್ರೀ ನಾರಾಯಣ್ ಸಿಂಗ್ - ನಾಮನಿರ್ದೇಶಿತ
- ಅತ್ಯುತ್ತಮ ನಟ - ಅಕ್ಷಯ್ ಕುಮಾರ್ - ನಾಮನಿರ್ದೇಶಿತ
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು
- ಅತ್ಯುತ್ತಮ ನೃತ್ಯ ನಿರ್ದೇಶನ - ಗಣೇಶ್ ಆಚಾರ್ಯ (""ಗೋರಿ ತು ಲಠ್ ಮಾರ್" ಹಾಡಿಗಾಗಿ) - ಗೆಲುವು
ಉಲ್ಲೇಖಗಳು
[ಬದಲಾಯಿಸಿ]- ↑ "TOILET: EK PREM KATHA (12A)". British Board of Film Classification. Archived from the original on 17 ಜುಲೈ 2019. Retrieved 2 August 2017.
- ↑ Express Web Desk (30 July 2017). "Akshay Kumar on poor success rate of Bollywood films: In South, they don't spend more than Rs 2 crore on publicity". The Indian Express. Retrieved 30 July 2017.
- ↑ ೩.೦ ೩.೧ MK, Surendhar (18 June 2018). "Toilet: Ek Prem Katha trumps Baahubali 2 in China; becomes Akshay Kumar's first film to cross Rs 300 cr mark worldwide". Firstpost. Retrieved 11 July 2018.
- ↑ IBTimes. "Toilet-Ek Prem Katha success: Haryana Government directs village heads to watch Akshay Kumar's film". International Business Times, India Edition. Retrieved 16 October 2017.
- ↑ ANI (19 September 2017). "Uttar Pradesh becomes the new flavour of Bollywood in 2017". The Indian Express. Retrieved 10 May 2018.
- ↑ BOC India Team (31 March 2017). "Toilet Ek Prem Katha Cast & Crew". BoxOfficeCollection.in. Tulia IT. Retrieved 10 May 2018.
- ↑ PTI (18 August 2017). "Akshay Kumar: 'Toilet: Ek Prem Katha' not a propaganda film". ದಿ ಟೈಮ್ಸ್ ಆಫ್ ಇಂಡಿಯಾ. The Times Group. Retrieved 10 May 2018.
- ↑ ೯.೦ ೯.೧ "Toilet Ek Prem Katha (2017)". FilmiBeat. Greynium Information Technologies. Retrieved 30 July 2017.
- ↑ ೧೦.೦ ೧೦.೧ PTI (30 November 2016). "Toilet Ek Prem Katha is funny yet credible: Bhumi Pednekar". The Indian Express. Retrieved 10 May 2018.
- ↑ PTI (28 January 2017). "Anupam Kher wraps up 'Toilet: Ek Prem Katha' shoot". ದಿ ಟೈಮ್ಸ್ ಆಫ್ ಇಂಡಿಯಾ. The Times Group. Retrieved 10 May 2018.
- ↑ Hungama, Bollywood (3 February 2017). "Sana Khan to play Akshay Kumar's girlfriend in Toilet – Ek Prem Katha – Bollywood Hungama". Retrieved 30 July 2017.
- ↑ ANI (20 July 2017). "Sana Khan: Working with Akshay Kumar in 'Toilet:Ek Prem Katha' was challenging". ದಿ ಟೈಮ್ಸ್ ಆಫ್ ಇಂಡಿಯಾ. The Times Group. Archived from the original on 1 ಅಕ್ಟೋಬರ್ 2017. Retrieved 14 June 2018.
- ↑ FP Staff (3 July 2017). "Toilet: Ek Prem Katha writers refute claims of plagiarism by documentary filmmaker". Showsha. Firstpost. Retrieved 10 May 2018.
- ↑ Saigal, Gaurav (7 March 2014). "21-year-old stands for the need for sanitation". The Hindustan Times. Retrieved 30 July 2017.
- ↑ AFP (2 July 2012). "Bride's new toilet points to social revolution". ದಿ ಹಿಂದೂ. Retrieved 30 July 2017.
- ↑ Vetticad, Anna MM (11 August 2017). "Toilet: Ek Prem Katha movie review — Akshay Kumar's paean to Modi and the potty". Showsha. Firstpost. Retrieved 12 August 2017.
- ↑ Agence France Presse (16 February 2012). "Madhya Pradesh woman awarded for leading 'toilet revolution'". NDTV. NDTV Convergence. Retrieved 16 October 2017.
- ↑ Deccan Chronicle (3 July 2017). "Toilet-Ek Prem Katha writers plan defamation case over 'ridiculous' plagiarism claims". Deccan Chronicle. Retrieved 3 July 2017.
- ↑ "Akshay Kumar Toilet ek Prem katha first look, HD Wallpapers story, star cast, released date". SantaBanta Wallpapers. Archived from the original on 19 July 2017. Retrieved 30 July 2017.
- ↑ "Toilet Ek Prem Katha Wiki, Star Cast & Release Date". MissMahi. 12 June 2017. Archived from the original on 22 September 2017. Retrieved 12 June 2017.
- ↑ News18.com (13 June 2017). "PM Narendra Modi Lauds Akshay Kumar Toilet Ek Prem Katha's Trailer; Calls It a Good Effort to Further the Message of Cleanliness". CNN-News18. Network18 Media and Investments. Retrieved 10 May 2018.
{{cite news}}
: CS1 maint: numeric names: authors list (link) - ↑ ANI (12 June 2017). "PM Narendra Modi impressed with Akshay Kumar's 'Toilet Ek Prem Katha' trailer". ಟೈಮ್ಸ್ ಆಫ್ ಇಂಡಿಯ. The Times Group. Archived from the original on 15 ಡಿಸೆಂಬರ್ 2017. Retrieved 10 May 2018.
- ↑ Box Office India Trade Network (13 September 2017). "Toilet Ek Prem Katha Becomes Akshay Kumar Highest Grosser". Box Office India. Retrieved 10 May 2018.
- ↑ Box Office India Trade Network (2 September 2017). "Toilet Ek Prem Katha – Bareilly Ki Barfi Update". Box Office India. Retrieved 10 May 2018.