ವಿಷಯಕ್ಕೆ ಹೋಗು

ಜಲಮಸ್ತಿಷ್ಕ ರೋಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಲಮಸ್ತಿಷ್ಕ ರೋಗ
Classification and external resources
Hydrocephalus seen on a CT scan of the brain.
ICD-10G91, Q03
ICD-9331.3, 331.4, 741.0, 742.3
DiseasesDB6123
MedlinePlus001571
eMedicineneuro/161
MeSHD006849

"ಮಿದುಳಿನಲ್ಲಿ ನೀರು ತುಂಬಿಕೊಳ್ಳುವಿಕೆ" ಎಂದೂ ಕರೆಸಿಕೊಳ್ಳುವ ಜಲಮಸ್ತಿಷ್ಕ ರೋಗ ವು (pronounced /ˌhaɪdrɵˈsɛfələs/), ಮಿದುಳುಬಳ್ಳಿಯ ದ್ರವ (CSF)ವು ಮಿದುಳುಗೂಡಿನ ಕುಹರಗಳು, ಅಥವಾ ಮಿದುಳಿನ ಕುಹರಗಳಲ್ಲಿ ಅತಿರೇಕವಾಗಿ ತುಂಬಿಕೊಳ್ಳುವ ವೈದ್ಯಕೀಯ ಪರಿಸ್ಥಿತಿಯಾಗಿದೆ. ಹೀಗೆ ತುಂಬಿಕೊಳ್ಳುವುದರಿಂದಾಗಿ [[ತಲೆಬುರುಡೆಯೊಳಗಿನ ಒತ್ತಡ|ತಲೆಬುರುಡೆಯೊಳಗಿನ ಒತ್ತಡ]] ಹೆಚ್ಚಿ ತಲೆಯು ಊದಿಕೊಳ್ಳುವುದು, ಸೆಳೆವು/ಸೆಟೆತ, ಮತ್ತು ಮಾನಸಿಕ ಅಸ್ವಸ್ಥತೆಗಳಂತಹಾ ಪರಿಣಾಮಗಳನ್ನುಂಟುಮಾಡಬಹುದು. ಜಲಮಸ್ತಿಷ್ಕ ರೋಗವು ಸಾವನ್ನೂ ಉಂಟು ಮಾಡಬಹುದು. ಇದರ ಹೆಸರು ಗ್ರೀಕ್‌ ಪದಗಳಾದ ὑδρο- (ಹುಡ್ರೋ-) "ನೀರು" ಮತ್ತು κέφαλος (ಕೆಫಾಲೋಸ್‌‌) "ತಲೆ" ಎಂಬ ಪದಗಳ ಸಂಯೋಜನೆಯಿಂದ ಉಂಟಾಗಿದೆ.

ಚಿಹ್ನೆಗಳು ಹಾಗು ರೋಗಲಕ್ಷಣಗಳು[ಬದಲಾಯಿಸಿ]

ಹೆಚ್ಚುತ್ತಿರುವ ತಲೆಬುರುಡೆಯೊಳಗಿನ ಒತ್ತಡದಿಂದಾಗಬಹುದಾದ ರೋಗಲಕ್ಷಣಗಳಲ್ಲಿ ತಲೆನೋವುಗಳು, ವಾಂತಿ, ಪಿತ್ತೋದ್ರೇಕ, ದೃಗ್‌‌ಬಿಲ್ಲೆಯ ಊದುವಿಕೆ, ನಿದ್ದೆಮಂಪರು ಅಥವಾ ಸುಷುಪ್ತಿಗಳು ಸೇರಿವೆ. ಹೆಚ್ಚಾಗುತ್ತಿರುವ ತಲೆಬುರುಡೆಯೊಳಗಿನ ಒತ್ತಡವು ಕಪಾಲದ ಡೊಂಕಾಗುವಿಕೆ ಹಾಗೂ/ಅಥವಾ ಉಪಮಸ್ತಿಷ್ಕದ ಗಲಗ್ರಂಥಿ ಅಂಗಾಂಶ ಊದಿಕೊಳ್ಳುವಿಕೆಗಳಿಗೆ ಕಾರಣವಾಗಿ ಮಾರಣಾಂತಿಕ ಮಿದುಳು ಕಾಂಡದ ಸಂಕೋಚನಗಳಿಗೆ ಕಾರಣವಾಗಬಹುದು. ತಲೆಬುರುಡೆಯೊಳಗಿನ ಒತ್ತಡದ ಹೆಚ್ಚುವಿಕೆಯಿಂದ ಉಂಟಾಗಬಹುದಾದ ಇತರೆ ರೋಗಲಕ್ಷಣಗಳಿಗೆ ಇದನ್ನು ನೋಡಿ:

ಅಸ್ಥಿರ ನಡುಗೆ, ಮೂತ್ರ ನಿರೋಧರಾಹಿತ್ಯತೆ ಮತ್ತು ಬುದ್ಧಿಮಾಂದ್ಯತೆಗಳ ತ್ರಿತಯಗಳು (ಹಕಿಂ/ಹಾಕಿಂ ತ್ರಿತಯ) ನಿರ್ದಿಷ್ಟ ರೋಗಲಕ್ಷಣವಾದ ಸಾಧಾರಣ ಒತ್ತಡ ಜಲಮಸ್ತಿಷ್ಕ ರೋಗದ (NPH) ಸಾಪೇಕ್ಷವಾದ ಸಾಮಾನ್ಯ ರೋಗಲಕ್ಷಣವಾಗಿದೆ. ಕಣ್ಣಿನ ಪ್ರಚೋದಕ ನರದ ಪಕ್ಷವಾತ ಮತ್ತು ನೇರ ದೃಷ್ಟಿ ಪಕ್ಷವಾತ (ಕಣ್ಣಿನ ಸಂಯೋಜಿತ ಲಂಬ ಚಲನೆಗೆ ಕಾರಣವಾಗುವ ನರಕೇಂದ್ರಗಳಿರುವ ಕ್ವಾಡ್ರಿಜೆಮಿನಲ್‌ ಫಲಕದ ಸಂಕೋಚನೆಯಿಂದಾಗುವ ಪಾರಿನಾಡ್‌ ರೋಗಲಕ್ಷಣ)ಗಳಂತಹಾ ನಾಭಿಯ ನರವೈಜ್ಞಾನಿಕ ಕೊರತೆಗಳು ಕೂಡಾ ಕಂಡುಬರಬಹುದು.

ಹರಿವಿಗೆ ಅಡ್ಡಿಯಾಗುವಿಕೆಯ ಮೂಲ ಕಾರಣ, ವ್ಯಕ್ತಿಯ ವಯಸ್ಸು ಮತ್ತು ಊದುವಿಕೆಯಿಂದ ಹಾಳಾಗಿರುವ ಮಿದುಳಿನ ಅಂಗಾಂಶಗಳ ಪ್ರಮಾಣಗಳ ಮೇಲೆ ಇದರಲ್ಲಿ ತೋರಬಹುದಾದ ರೋಗಲಕ್ಷಣಗಳು ಆಧಾರಿತವಾಗಿರುತ್ತದೆ.

ಕೇಂದ್ರೀಯ ನರವ್ಯೂಹದೊಳಗೆ CSF ದ್ರವವು ಜಲಮಸ್ತಿಷ್ಕ ರೋಗವನ್ನು ಹೊಂದಿರುವ ಶಿಶುಗಳಲ್ಲಿ ತುಂಬಿಕೊಳ್ಳುತ್ತಾ ಬಂದು ನೆತ್ತಿಸುಳಿಯು (ಮಿದು ಪ್ರದೇಶ) ಊದಿಕೊಳ್ಳುವಂತೆ ಮಾಡಿ ತಲೆಯನ್ನು ನಿರೀಕ್ಷೆಗಿಂತ ಹೆಚ್ಚಿನ ಗಾತ್ರವನ್ನು ಹೊಂದುವಂತೆ ಮಾಡುತ್ತದೆ. ತಕ್ಕಷ್ಟು ಮುಂಚಿತವಾಗಿ ಕಾಣಿಸಿಕೊಳ್ಳಬಹುದಾದ ರೋಗಲಕ್ಷಣಗಳಲ್ಲಿ ಕೆಳಕಂಡವು ಕೂಡಾ ಸೇರಿವೆ:

 • ಕೆಳಗೆ ದಿಟ್ಟಿಸಿ ನೋಡುತ್ತಿರುವಂತೆ ಭಾಸವಾಗುವ ಕಣ್ಣುಗಳು
 • ಸಿಡುಕುತನ
 • ಆಘಾತ/ಹೊಡೆತಗಳು
 • ಪ್ರತ್ಯೇಕಗೊಂಡ ತಲೆಯ ಹೊಲಿಗೆಸೇರಿಕೆಗಳು
 • ನಿದ್ದೆಮಂಪರು
 • ವಾಂತಿ ಮಾಡುವುದು

ಸ್ವಲ್ಪ ದೊಡ್ಡ ಮಕ್ಕಳಲ್ಲಿ ಕಂಡುಬರಬಹುದಾದ ರೋಗಲಕ್ಷಣಗಳಲ್ಲಿ ಕೆಳಕಂಡವು ಸೇರಿವೆ :

 • ಅಲ್ಪಾವಧಿಯ, ಕೀರಲು ಧ್ವನಿಯ ಏರು ಸ್ಥಾಯಿಯ ಅಳು
 • ವ್ಯಕ್ತಿತ್ವ, ನೆನಪಿನ ಶಕ್ತಿ ಅಥವಾ ತರ್ಕಸಾಮರ್ಥ್ಯ ಅಥವಾ ಯೋಚನೆಯ ಸಾಮರ್ಥ್ಯಗಳಲ್ಲಿ ಬದಲಾವಣೆ
 • ಮುಖಲಕ್ಷಣಗಳಲ್ಲಿ ಮತ್ತು ಕಣ್ಣುಗಳ ನಡುವಿನ ಅಂತರದಲ್ಲಿ ಬದಲಾವಣೆ
 • ಮೆಳ್ಳೆಗಣ್ಣು ಅಥವಾ ಅನಿಯಂತ್ರಿತ ಕಣ್ಣುಗಳ ಚಲನೆ
 • ಆಹಾರ ಸೇವನೆಯಲ್ಲಿ ತೊಂದರೆ
 • ವಿಪರೀತ ನಿದ್ದೆಮಂಪರು
 • ತಲೆ ನೋವು
 • ಸಿಡುಕುತನ, ಕೋಪದ ಮೇಲಿನ ಹತೋಟಿ ಇಲ್ಲದಿರುವಿಕೆ
 • ಮೂತ್ರಾಶಯದ ಮೇಲಿನ ನಿಯಂತ್ರಣ ಕಳೆದುಕೊಳ್ಳುವಿಕೆ (ಮೂತ್ರ ನಿರೋಧರಾಹಿತ್ಯತೆ)
 • ಹೊಂದಾಣಿಕೆಯಿಲ್ಲದಿರುವಿಕೆ ಹಾಗೂ ನಡೆಯಲಾಗದಿರುವಿಕೆ
 • ಸ್ನಾಯುಗಳ ಸ್ಪ್ಯಾಸ್ಟಿಕ್‌ ಪೀಡಿತವಾಗಿರುವಿಕೆ (ಹಠಾತ್‌ಸ್ನಾಯು ಸಂಕೋಚನ)
 • ನಿಧಾನ ಬೆಳವಣಿಗೆ (0-5 ವರ್ಷಗಳಲ್ಲಿನ ಮಕ್ಕಳಲ್ಲಿ)
 • ನಿಧಾನವಾದ ಅಥವಾ ಸೀಮಿತವಾದ ಚಲನೆ
 • ವಾಂತಿ ಉಲ್ಲೇಖ ದೋಷ: Invalid parameter in <ref> tag

ಇತಿಹಾಸ[ಬದಲಾಯಿಸಿ]

ಜಲಮಸ್ತಿಷ್ಕರೋಗ ತಗಲಿರುವ ತಲೆಬುರುಡೆಗಳ ಬಗೆಗಿನ ಉಲ್ಲೇಖಗಳನ್ನು 2500 BCಯಿಂದ 500 ADಯವರೆಗಿನ ಪ್ರಾಚೀನ ಈಜಿಪ್ಟಿನ ವೈದ್ಯಕೀಯ ಸಾಹಿತ್ಯಕೃತಿಗಳಲ್ಲಿ ಕಾಣಬಹುದಾಗಿದೆ.[೧] 4ನೇ ಶತಮಾನ BCಯಲ್ಲಿ ಪ್ರಾಚೀನ ಗ್ರೀಕ್‌‌‌ ವೈದ್ಯ/ಚಿಕಿತ್ಸಕರಾದ ಹಿಪ್ಪೋಕ್ರೇಟ್ಸ್‌‌ರವರು ಜಲಮಸ್ತಿಷ್ಕ ರೋಗದ ಬಗ್ಗೆ ಮತ್ತಷ್ಟು ಸ್ಪಷ್ಟವಾಗಿ ವಿವರಣೆಯನ್ನು ನೀಡಿದ್ದರೆ, ಮತ್ತಷ್ಟು ನಿಷ್ಕೃಷ್ಟ ವಿವರಣೆಯನ್ನು ನಂತರ 2ನೇ ಶತಮಾನ ADಯಲ್ಲಿ ರೋಮನ್‌‌ ವೈದ್ಯ/ಚಿಕಿತ್ಸಕರಾದ ಗ್ಯಾಲೆನ್‌‌ರು ನೀಡಿದ್ದರು.[೧] ಬಾಹ್ಯವಾದ ತಲೆಬುರುಡೆಯೊಳಗಿನ ದ್ರವವನ್ನು ಜಲಮಸ್ತಿಷ್ಕರೋಗ ತಗಲಿರುವ ಮಕ್ಕಳ ತಲೆಬುರುಡೆಯಿಂದ ತೆಗೆದುಹಾಕುವ ಪ್ರಕ್ರಿಯೆಯನ್ನು ಸ್ಪಷ್ಟವಾಗಿ ವಿವರಿಸಿದ್ದ ಅರಬ್‌ ಶಸ್ತ್ರಚಿಕಿತ್ಸಾ ತಜ್ಞ, ಅಬು ಅಲ್‌-ಖಾಸಿಮ್‌‌ ಅಲ್‌‌‌-ಝಹ್ರಾವಿರವರು ರಚಿಸಿದ ಅಲ್‌-ತಸ್ರಿಫ್‌ (1000 AD) ಎಂಬ ಕೃತಿಯಲ್ಲಿ ಜಲಮಸ್ತಿಷ್ಕ ರೋಗದ ಪ್ರಪ್ರಥಮ ವೈದ್ಯಕೀಯ/ಪ್ರಾಯೋಗಿಕ ವಿವರಣೆ ಹಾಗೂ ಶಸ್ತ್ರಚಿಕಿತ್ಸಾ ವಿಧಾನವು ಕಂಡುಬಂದಿರುತ್ತದೆ.[೧] ತನ್ನ ಕೃತಿಯ ನರಶಸ್ತ್ರಚಿಕಿತ್ಸಾ ರೋಗಗಳಿಗೆ ಸಂಬಂಧಪಟ್ಟ ಅಧ್ಯಾಯದಲ್ಲಿ ಈ ಬಗ್ಗೆ ವಿವರಿಸಿರುವ ಅವರು ಶೈಶವ ಜಲಮಸ್ತಿಷ್ಕ ರೋಗಕ್ಕೆ ಕಾರಣ ಪ್ರಸವದ ಸಮಯದಲ್ಲಿನ ಯಾಂತ್ರಿಕ ಸಂಕುಚನವು ಕಾರಣ ಎಂದು ತಿಳಿಸುತ್ತಾರೆ. ಆ ಬಗ್ಗೆ ಅವರು ಹೀಗೆ ಹೇಳುತ್ತಾರೆ:[೧]

“The skull of a newborn baby is often full of liquid, either because the matron has compressed it excessively or for other, unknown reasons. The volume of the skull then increases daily, so that the bones of the skull fail to close. In this case, we must open the middle of the skull in three places, make the liquid flow out, then close the wound and tighten the skull with a bandage.”

ಬದಲಿ ಪರಿಚಲನೆ ಮಾರ್ಗ ಮತ್ತು ಇತರ ನರಶಸ್ತ್ರಚಿಕಿತ್ಸಾ ವಿಧಾನಗಳನ್ನು ಅಭಿವೃದ್ಧಿಪಡಿಸಲಾದ 20ನೇ ಶತಮಾನದವರೆಗೆ ಈ ರೋಗವು ಗುಣಪಡಿಸಲಾರದ್ದಾಗಿತ್ತು. ಇಂದಿನವರೆಗೂ ಈ ರೋಗ ಪರಿಸ್ಥಿತಿಗೆ ಯಾವುದೇ ಪರಿಹಾರ ಲಭ್ಯವಾಗಿಲ್ಲ; ಇದೊಂದು ಅಲ್ಪಮಾಹಿತಿ ಲಭ್ಯವಿರುವ ವೈದ್ಯಕೀಯ ಪರಿಸ್ಥಿತಿಯಾಗಿದ್ದು; ಜಲಮಸ್ತಿಷ್ಕ ರೋಗದ ಚಿಕಿತ್ಸೆಗಳನ್ನು ಸುಧಾರಿಸುವ ಬಗ್ಗೆ ಸಾಪೇಕ್ಷವಾಗಿ ಅಲ್ಪ ಪ್ರಮಾಣದ ಸಂಶೋಧನೆಗಳನ್ನು ಮಾತ್ರವೇ ನಡೆಸಲಾಗಿದೆ.

ಸಾಂಕ್ರಾಮಿಕಶಾಸ್ತ್ರ[ಬದಲಾಯಿಸಿ]

ತೀವ್ರ ಜಲಮಸ್ತಿಷ್ಕ ರೋಗ.ಈ ಮಗುವು ಕೆಲವೇ ವಾರಗಳ ಕಾಲ ಬದುಕಿತ್ತು.

ಶೈಶವದ ಹಾಗೂ ಪ್ರೌಢವಯಸ್ಸಿನ ರೋಗಿಗಳನ್ನೂ ಜಲಮಸ್ತಿಷ್ಕ ರೋಗವು ಏಕಪ್ರಕಾರವಾಗಿ ಬಾಧಿಸುತ್ತದೆ. NIH ಜಾಲತಾಣದ ವರದಿಯ ಪ್ರಕಾರ ಅಂದಾಜು 700,000 ಮಕ್ಕಳು ಹಾಗೂ ವಯಸ್ಕರು ಜಲಮಸ್ತಿಷ್ಕ ರೋಗವನ್ನು ಹೊಂದಿದ್ದಾರೆ.

ಪ್ರತಿ 500 ಜೀವಿತ ಜನನಗಳಲ್ಲಿ ಒಂದರಲ್ಲಿ ಶೈಶವದ ಜಲಮಸ್ತಿಷ್ಕ ರೋಗವು ಬಾಧಿಸುತ್ತಿದ್ದು,[೨] ಡೌನ್‌‌ ರೋಗಲಕ್ಷಣ ಅಥವಾ ಕಿವುಡುತನಗಳಿಗಿಂತ ಹೆಚ್ಚು ಸಾಮಾನ್ಯ ಬೆಳವಣಿಗೆಯ ನ್ಯೂನತೆಯಾಗಿ ಪರಿಣಮಿಸಿದೆ.[೩] ಯುನೈಟೆಡ್‌ ಸ್ಟೇಟ್ಸ್‌‌‌ನಲ್ಲಿ ಇದು ಮಕ್ಕಳಿಗೆ ನಡೆಸಲಾಗುತ್ತಿರುವ ಮಿದುಳು ಶಸ್ತ್ರಚಿಕಿತ್ಸೆಗಳಿಗೆ ಪ್ರಮುಖ ಕಾರಣವಾಗಿದೆ. ಈ ರೋಗಪರಿಸ್ಥಿತಿಗೆ 180ಕ್ಕೂ ಹೆಚ್ಚಿನ ವಿವಿಧ ಕಾರಣಗಳಿದ್ದು ಬಹು ಸಾಮಾನ್ಯವಾಗಿ ರೋಗನಿದಾನಗಳಲ್ಲಿ ಕಂಡುಬಂದಂತಹಾ ಪ್ರಮುಖ ಕಾರಣ ಅಕಾಲಿಕ ಜನನದಲ್ಲಿ ಉಂಟಾಗಬಹುದಾದ ಮಿದುಳು ರಕ್ತಸ್ರಾವವಾಗಿದೆ. ಶೈಶವದ ಜಲಮಸ್ತಿಷ್ಕ ರೋಗವು ಕೂಡಾ ಪ್ರಮುಖವಾಗಿ ಪುರುಷರನ್ನು ಬಾಧಿಸುವ ಆನುವಂಶಿಕ ಪರಿಸ್ಥಿತಿಯಾಗಿದೆ. ಜನನ ಪೂರ್ವದ ಅಲ್ಟ್ರಾಸೌಂಡ್‌/ಶ್ರವಣಾತೀತ ತಪಾಸಣೆಗಳಲ್ಲಿ ಜಲಮಸ್ತಿಷ್ಕ ರೋಗವಿರುವುದನ್ನು ಪತ್ತೆಹಚ್ಚಬಹುದು.

ಮಿದುಳಿನ ಬದಲಿ ಪರಿಚಲನೆ ಮಾರ್ಗ ರೂಪಿಸುವಿಕೆಯು ಬಹುವಾಗಿ ನೆರವೇರಿಸಲ್ಪಡುವ ಜಲಮಸ್ತಿಷ್ಕ ರೋಗದ ಚಿಕಿತ್ಸೆಗಳಲ್ಲಿ ಒಂದಾಗಿದ್ದು, ಇದನ್ನು 1960ರಲ್ಲಿ ಮೊತ್ತಮೊದಲಿಗೆ ಅಭಿವೃದ್ಧಿಪಡಿಸಲಾಯಿತು. ಬದಲಿ ಪರಿಚಲನೆ ಮಾರ್ಗವನ್ನು ರೋಗಿಯ ಮಿದುಳಿನಲ್ಲಿ ನರಶಸ್ತ್ರಚಿಕಿತ್ಸೆಯ ಮೂಲಕವೇ ಸ್ಥಾಪಿಸಬೇಕಾಗಿದ್ದು, ಈ ಪ್ರಕ್ರಿಯೆಯೇ ಮಿದುಳಿಗೆ ಹಾನಿಯನ್ನುಂಟು ಮಾಡಬಹುದಾಗಿರುತ್ತದೆ. ಬದಲಿ ಪರಿಚಲನೆ ಮಾರ್ಗ ಶಸ್ತ್ರಚಿಕಿತ್ಸೆಗಳಲ್ಲಿ ಅಂದಾಜು 50%ರಷ್ಟು ಎರಡು ವರ್ಷಗಳೊಳಗೆಯೇ ವಿಫಲವಾಗುತ್ತಿದ್ದು, ಬದಲಿ ಪರಿಚಲನೆ ಮಾರ್ಗಗಳನ್ನು ಬದಲಿಸಲು ಮತ್ತೂ ಶಸ್ತ್ರಚಿಕಿತ್ಸೆಗಳನ್ನು ನಡೆಸುವುದು ಅನಿವಾರ್ಯವಾಗುತ್ತಿದೆ. ಜಲಮಸ್ತಿಷ್ಕ ರೋಗಕ್ಕೆ ಸಂಬಂಧಿಸಿದ ಸಾವುಗಳ ಪ್ರಮಾಣವು ಕಳೆದ 25 ವರ್ಷಗಳಲ್ಲಿ 54%ರಿಂದ 5%ಗೆ ತಗ್ಗಿದ್ದರೆ ಬೌದ್ಧಿಕ ಸಾಮರ್ಥ್ಯ ಕುಗ್ಗುವಿಕೆಯ ಪ್ರಮಾಣವು 62%ರಿಂದ 30%ಗೆ ಇಳಿದಿದೆ.

ಮಿದುಳುಬಳ್ಳಿಯ ದ್ರವಕ್ಕೆ ಸೋಂಕುರೋಗ ತಗಲುವಿಕೆಗೆ ಕೂಡಾ ಜಲಮಸ್ತಿಷ್ಕ ರೋಗವು ಕಾರಣವಾಗಿರಬಹುದಾಗಿದೆ. ಇದು ಜನನದ ಸಮಯದಲ್ಲಿ ತಾಯಿಗೆ ತಗಲಿದ ಸೋಂಕಿನಿಂದಾಗಿಯೂ ಉಂಟಾಗಬಹುದಾಗಿದೆ.

ರೋಗಶಾಸ್ತ್ರ[ಬದಲಾಯಿಸಿ]

ಮಿದುಳಿನ ಬಳಿಯ ಕೆಳಪೊರೆಯ ಸ್ಥಳದಲ್ಲಿ ಅಥವಾ ಮಿದುಳುಗೂಡು/ಕುಹರಗಳಲ್ಲಿ ಮಿದುಳುಬಳ್ಳಿಯ ದ್ರವದ (CSF) ಹೊರಹರಿವಿಗೆ ತಡೆಯುಂಟಾದ ಪರಿಸ್ಥಿತಿಯಲ್ಲಿ ಸಾಧಾರಣವಾಗಿ ಜಲಮಸ್ತಿಷ್ಕ ರೋಗವುಂಟಾಗುತ್ತದೆ. ಜಲಮಸ್ತಿಷ್ಕ ರೋಗ ರಹಿತ ವ್ಯಕ್ತಿಗಳಲ್ಲಿ, CSF ದ್ರವವು ಸತತವಾಗಿ ಮಿದುಳು, ಅದರ ಮಿದುಳುಗೂಡು/ಕುಹರಗಳು ಮತ್ತು ಬೆನ್ನುಮೂಳೆಗಳುದ್ದಕ್ಕೂ ಪರಿಚಲಿಸುತ್ತಾ ಸತತವಾಗಿ ಪರಿಚಲನಾ ವ್ಯವಸ್ಥೆಯಲ್ಲಿ ವ್ಯಯವಾಗುತ್ತದೆ. ಪರ್ಯಾಯವಾಗಿ ಸೋಂಕುರೋಗ ತಗಲುವಿಕೆಗಳು ಅಥವಾ ತಲೆಗೆ ಬಿದ್ದ ಪೆಟ್ಟಿನಿಂದಾದ ಸಂಕೀರ್ಣ ಸಮಸ್ಯೆಗಳಿಂದ ಅಥವಾ ದ್ರವದ ಸಾಮಾನ್ಯ ಪರಿಚಲನೆಯಲ್ಲಿ ಉಂಟಾದ ಜನ್ಮಜಾತ ದೋಷಗಳಿಂದುಂಟಾಗಬಹುದಾದ CSF ದ್ರವದ ಅಧಿಕ ಉತ್ಪಾದನೆಯೂ ಕೂಡಾ ಇದಕ್ಕೆ ಕಾರಣವಿರಬಹುದು.[೪]

ದ್ರವದ ಸಂಗ್ರಹಣೆಯಿಂದುಂಟಾಗಬಹುದಾದ ಮಿದುಳಿನ ಸಂಕೋಚನೆಯೂ ಕೂಡಾ ಅಂತಿಮವಾಗಿ ಸೆಳೆವು/ಸೆಟೆತಗಳು ಮತ್ತು ಬುದ್ಧಿ ಮಾಂದ್ಯತೆಗೆ ಕಾರಣವಾಗಬಹುದಾಗಿದೆ. ಈ ಲಕ್ಷಣಗಳು ಒಳಗೆ ಹೆಚ್ಚುತ್ತಿರುವ ದ್ರವದ ಪ್ರಮಾಣವನ್ನು ಒಳಗೊಳ್ಳಬಲ್ಲ ಮಟ್ಟಿಗೆ ತಲೆಬುರುಡೆಯು ಹಿಗ್ಗಲು ಸಾಧ್ಯವಿಲ್ಲದ ವಯಸ್ಕರಲ್ಲಿ ಹೆಚ್ಚು ಬೇಗ ಕಂಡುಬರುತ್ತದೆ. ದ್ರವದ ಒತ್ತಡವು ಆಗತಾನೆ ರೂಪುಗೊಳ್ಳುತ್ತಿರುವ ಪ್ರತಿ ತಲೆಬುರುಡೆಯ ಮೂಳೆಯನ್ನು ಅವುಗಳ ಸಂಧಿತಾಣಗಳಲ್ಲಿ ಹೊರಮುಖವಾಗಿ ಊದಿಕೊಳ್ಳುವಂತೆ ಮಾಡುವುದರಿಂದ ಜಲಮಸ್ತಿಷ್ಕ ರೋಗ ಪೀಡಿತ ಭ್ರೂಣಗಳು, ಶಿಶುಗಳು ಮತ್ತು ಚಿಕ್ಕಮಕ್ಕಳು ಸಾಧಾರಣವಾಗಿ ಮುಖಭಾಗವನ್ನು ಹೊರತುಪಡಿಸಿ ಅಪಸಾಮಾನ್ಯ ಗಾತ್ರದ ತಲೆಯನ್ನು ಹೊಂದಿರುತ್ತವೆ. ಶಿಶುಗಳಲ್ಲಿ ಕಂಡುಬರುವ ಮತ್ತೊಂದು ವೈದ್ಯಕೀಯ ಲಕ್ಷಣವೆಂದರೆ, ಕಣ್ಪೊರೆಯ ಹೊರಭಾಗದಲ್ಲಿ ಬೆಳ್ಳಗಿದ್ದು ಕಣ್ಣುಗಳು ಕೆಳಕ್ಕೆ ದಿಟ್ಟಿಸಿ ನೋಡುವಂತೆ ತೋರುವ ಶಿಶುವು ತನ್ನದೇ ಕೆಳ ಕಣ್ರೆಪ್ಪೆಗಳನ್ನು ಪರೀಕ್ಷಿಸಿ ನೋಡುತ್ತಿರುವಂತೆ ಭಾಸವಾಗುವ ಲಕ್ಷಣವಾಗಿದೆ.[೫]

ಜಲಮಸ್ತಿಷ್ಕ ರೋಗವನ್ನು ಹೊಂದಿರುವವರಲ್ಲಿ ಆಗಿದ್ದ ಅನೈಚ್ಛಿಕ ಅಂತರ್‌‌‌ಮಿದುಳಿನ ಮತ್ತು ಅಂತರ್‌‌ ಮಿದುಳು ಕುಕ್ಷಿಯ ರಕ್ತಸ್ರಾವ CT ಸ್ಕ್ಯಾನ್‌ನಲ್ಲಿ ಕಂಡ ಹಾಗೆ scan[೬]

ಮಿದುಳನ್ನು ಸಂಕುಚನವಾಗುವಂತೆ ಮಾಡುವ ಹೆಚ್ಚಾದ ತಲೆಬುರುಡೆಯೊಳಗಿನ ಒತ್ತಡವು, ಮಿದುಳಿನ ಹಾನಿ ಮತ್ತಿತರ ಸಂಕೀರ್ಣ ಪರಿಸ್ಥಿತಿಗಳನ್ನುಂಟು ಮಾಡುತ್ತದೆ. ರೋಗ ಪೀಡಿತ ವ್ಯಕ್ತಿಗಳಲ್ಲಿನ ರೋಗಪರಿಸ್ಥಿತಿಗಳು ವ್ಯಾಪಕವಾದ ವೈವಿಧ್ಯವನ್ನು ಹೊಂದಿರುತ್ತವೆ. ಜಲಮಸ್ತಿಷ್ಕ ರೋಗ ಪೀಡಿತ ಮಕ್ಕಳು ಅತಿ ಸಣ್ಣ ಮಿದುಳುಗೂಡು/ಕುಹರಗಳನ್ನು ಹೊಂದಿದ್ದು, "ಸಾಧಾರಣ ಪರಿಸ್ಥಿತಿ" ಎಂಬ ಭಾವನೆ ಮೂಡಿಸಬಹುದು.

ನಾಲ್ಕನೇ ಮಿದುಳುಗೂಡು/ಕುಹರದ ರಂಧ್ರ (pl. ) ಅಥವಾ ಮಿದುಳಿನ ದ್ರವಪರಿಚಲನಾ ಮಾರ್ಗವು ಮುಚ್ಚಿಹೋಗಿದ್ದರೆ, ಬೆನ್ನುಮೂಳೆ ಮಿದುಳುಗಳ ದ್ರವವು (CSF) ಮಿದುಳುಗೂಡು/ಕುಹರಗಳಲ್ಲಿ ಸಂಗ್ರಹಗೊಳ್ಳಬಹುದಾಗಿದೆ. ಇಂತಹಾ ಪರಿಸ್ಥಿತಿಯನ್ನು ಆಂತರಿಕ ಜಲಮಸ್ತಿಷ್ಕ ರೋಗ ವೆಂದು ಕರೆಯುತ್ತಾರಲ್ಲದೇ ಇದರ ಪರಿಣಾಮವಾಗಿ CSF ಒತ್ತಡವು ಹೆಚ್ಚುತ್ತಾ ಹೋಗುತ್ತದೆ. ಮಿದುಳಿನಿಂದ ಹೊರಕ್ಕೆ ಹೋಗಲು ಸಾಮಾನ್ಯವಾಗಿ ತೆರೆದಿರುವ ದ್ವಾರಗಳು ಮುಚ್ಚಿಹೋಗಿದ್ದರೂ CSF ದ್ರವದ ಉತ್ಪಾದನೆಯು ಮುಂದುವರೆಯುತ್ತದೆ. ಮಿದುಳಿನೊಳಗೆ ದ್ರವವು ತರುವಾಯ ಶೇಖರಣೆಗೊಳ್ಳುತ್ತಾ ಹೋಗಿ, ನರಗಳ ಅಂಗಾಂಶಗಳನ್ನು ಸಂಕುಚನಗೊಳ್ಳುವಂತೆ ಮಾಡುವ ಮತ್ತು ಮಿದುಳುಗೂಡು/ಕುಹರಗಳನ್ನು ಹಿಗ್ಗಿಸುವಂತೆ ಮಾಡುವ ಒತ್ತಡಕ್ಕೆ ಕಾರಣವಾಗುತ್ತದೆ. ನರಗಳ ಅಂಗಾಂಶಗಳ ಸಂಕೋಚನೆಯು ಸಾಮಾನ್ಯವಾಗಿ ಮಿದುಳಿಗೆ ಸರಿಪಡಿಸಲಾರದಷ್ಟು ಹಾನಿಯುಂಟು ಮಾಡುತ್ತದೆ. ಜಲಮಸ್ತಿಷ್ಕ ರೋಗವುಂಟಾದಾಗ ತಲೆಬುರುಡೆಯ ಮೂಳೆಗಳು ಸಂಪೂರ್ಣವಾಗಿ ಅಸ್ಥೀಕರಣಗೊಂಡಿಲ್ಲದಿದ್ದರೆ ಈ ಒತ್ತಡವು ತಲೆಯನ್ನು ವಿಪರೀತವೆಂಬಷ್ಟು ಮಟ್ಟಿಗೆ ಹಿಗ್ಗಿಸಬಹುದು. ಮಿದುಳಿನ ನಾಳಿಕೆ/ಕೊಳವೆಯು ಹುಟ್ಟುವ ಸಮಯದಲ್ಲಿ ಮುಚ್ಚಿಕೊಳ್ಳಬಹುದು ಅಥವಾ ಮಿದುಳುಕಾಂಡದಲ್ಲಿ ಬೆಳೆಯುತ್ತಿರುವ ಗಡ್ಡೆಯಿಂದಾಗಿ ನಂತರದ ಜೀವನದಲ್ಲಿಯೂ ಮುಚ್ಚಿಕೊಳ್ಳಬಹುದು.

ಪರಿಚಲನೆ ಕೊಳವೆಯೊಂದನ್ನು (ಬದಲಿ ಪರಿಚಲನೆ ಮಾರ್ಗ) ಮಿದುಳುಗೂಡು/ಕುಹರಗಳಿಂದ ಜಠರದ ಕುಹರಗಳವರೆಗೆ ಅಳವಡಿಸಿ ಹೆಚ್ಚಿದ ಆಂತರಿಕ ಒತ್ತಡವನ್ನು ತಗ್ಗಿಸುವ ಮೂಲಕ ಆಂತರಿಕ ಜಲಮಸ್ತಿಷ್ಕ ರೋಗವನ್ನು ಯಶಸ್ವಿಯಾಗಿ ಗುಣಪಡಿಸಬಹುದು. ಮಿದುಳಿಗೆ ಹೀಗೆ ಅಳವಡಿಸಿದ ಬದಲಿ ಪರಿಚಲನೆ ಮಾರ್ಗಗಳ ಮೂಲಕ ಸೋಂಕುರೋಗ ತಗಲುವಿಕೆಯ ಅಪಾಯವಿದೆ, ಮಾತ್ರವಲ್ಲದೇ ಬದಲಿ ಪರಿಚಲನೆ ಮಾರ್ಗಗಳನ್ನು ವ್ಯಕ್ತಿಯು ಬೆಳವಣಿಗೆ ಹೊಂದುತ್ತಿದ್ದ ಹಾಗೆ ಬದಲಿಸುತ್ತಾ ಹೋಗುವುದು ಅನಿವಾರ್ಯವಾಗಿರುತ್ತದೆ. CSF ದ್ರವವು ಪರಿಚಲನೆಗೆ ಮರಳದಿರುವಂತೆ ಮಿದುಳಿನ ಕೆಳನಡುಪೊರೆ ರಕ್ತಸ್ರಾವವು ತಡೆಗಟ್ಟುವ ಸಾಧ್ಯತೆಯೂ ಇರುತ್ತದೆ. ಮಿದುಳಿನ ಕೆಳನಡುಪೊರೆಯ ಸ್ಥಳದಲ್ಲಿ CSF ದ್ರವವು ಹೀಗೆ ಸಂಗ್ರಹಗೊಂಡರೆ ಅಂತಹಾ ಪರಿಸ್ಥಿತಿಯನ್ನು ಬಾಹ್ಯ ಜಲಮಸ್ತಿಷ್ಕ ರೋಗ ವೆಂದು ಕರೆಯುತ್ತಾರೆ. ಇಂತಹಾ ಪರಿಸ್ಥಿತಿಯಲ್ಲಿ, ಒತ್ತಡವು ಮಿದುಳಿನ ಮೇಲೆ ಹೊರಗಿನಿಂದ ಬಿದ್ದು, ನರಗಳ ಅಂಗಾಂಶಗಳನ್ನು ಸಂಕುಚಿತಗೊಳ್ಳುವಂತೆ ಮಾಡಿ ಮಿದುಳಿಗೆ ಹಾನಿ ಉಂಟುಮಾಡುತ್ತದೆ. ಇದರ ಪರಿಣಾಮವಾಗಿ ಮಿದುಳಿನ ಅಂಗಾಂಶಗಳಿಗೆ ಮತ್ತಷ್ಟು ಹಾನಿಯಾಗುವುದಲ್ಲದೇ ಊತಕಗಳ ಸಾಯುವಿಕೆಗೆ ಕಾರಣವಾಗುತ್ತದೆ.

ವರ್ಗೀಕರಣ[ಬದಲಾಯಿಸಿ]

ಮಿದುಳುಬಳ್ಳಿಯ ದ್ರವದ (CSF) ಸರಿಯಿಲ್ಲದ ಪರಿಚಲನೆ, ಮರುಹೀರಿಕೆ, ಅಥವಾ ಅಧಿಕ CSF ಉತ್ಪಾದನೆಗಳಿಂದಾಗಿ ಜಲಮಸ್ತಿಷ್ಕ ರೋಗವು ಉಂಟಾಗಬಹುದಾಗಿರುತ್ತದೆ.

 • ಜಲಮಸ್ತಿಷ್ಕ ರೋಗದ ಬಹುಸಾಮಾನ್ಯ ಕಾರಣವೆಂದರೆ CSF ಹರಿವಿಗೆ ಉಂಟಾಗುವಂತಹಾ ತಡೆಗಳು ಮಿದುಳು ಕುಹರಗಳ ವ್ಯವಸ್ಥೆಯ ಮೂಲಕ ಮತ್ತು ಮಿದುಳಿನ ಕೆಳನಡುಪೊರೆ ಅವಕಾಶಗಳಲ್ಲಿ ಮಿದುಳುಬಳ್ಳಿಯ ದ್ರವದ ಮುಕ್ತ ಹರಿವಿಗೆ ತೊಂದರೆಯನ್ನುಂಟು ಮಾಡುವುದಾಗಿರುತ್ತದೆ (e.g., ಮಿದುಳಿನ ನಾಳಿಕೆ/ಕೊಳವೆಅತಿಸಂಕೋಚನ ಅಥವಾ ಮಿದುಳಿನ ಅಂತರ್ಕುಹರಗಳ ಮಿದುಳುಗೂಡು/ಕುಹರದ ರಂಧ್ರಗಳಲ್ಲಿರಬಹುದಾದ ತಡೆಗಳು - ಮಾನ್ರೋ ಮಿದುಳುಗೂಡು /ಕುಹರದ ರಂಧ್ರಗಳು, ಗೆಡ್ಡೆಗಳು, ರಕ್ತಸ್ರಾವಗಳು, ಸೋಂಕುರೋಗ ತಗಲುವಿಕೆಗಳು ಅಥವಾ ಜನ್ಮಜಾತ ದೋಷಗಳಿಗೆ ಹೋಲಿಸಿದರೆ ನಂತರದ ಮಹತ್ವವನ್ನು ಪಡೆದಿವೆ).
 • ಮಿದುಳುಬಳ್ಳಿಯ ದ್ರವದ ಅತಿ ಉತ್ಪಾದನೆಯಿಂದಲೂ (ಸಾಪೇಕ್ಷವಾದ ತಡೆಯುಂಟಾಗುತ್ತದೆ) ಜಲಮಸ್ತಿಷ್ಕ ರೋಗವು ಉಂಟಾಗಬಹುದಾಗಿರುತ್ತದೆ (e.g., ಕಣ್ಣುಗುಡ್ಡೆಯ ಜಾಲದ ಗಂತಿಗಳು).

ತನ್ನ ಮೂಲಭೂತ ವ್ಯವಸ್ಥೆಗಳ ಮೇಲೆ ಆಧಾರಿತವಾಗಿ, ಜಲಮಸ್ತಿಷ್ಕ ರೋಗವನ್ನು ಸೋಂಕು ತಗಲುವ ಮತ್ತು ಸೋಂಕು ತಗಲದ (ತಡೆಕಾರಕ) ರೋಗಗಳೆಂದು ವಿಂಗಡಿಸಬಹುದಾಗಿದೆ. ಎರಡೂ ವಿಧವಾದ ರೋಗಗಳು ಜನ್ಮಜಾತ ವಾಗಿರಬಹುದು ಅಥವಾ ಪಡೆದುಕೊಂಡಿದ್ದಾ ಗಿರಬಹುದು.

ಸೋಂಕು ತಗಲುವ ಜಲಮಸ್ತಿಷ್ಕರೋಗ[ಬದಲಾಯಿಸಿ]

ತಡೆಕಾರಕವಲ್ಲದ ಜಲಮಸ್ತಿಷ್ಕ ರೋಗ ಎಂದೂ ಹೆಸರಾಗಿರುವ ಸೋಂಕು ತಗಲುವ ಜಲಮಸ್ತಿಷ್ಕ ರೋಗ ವು ಮಿದುಳುಗೂಡು/ಕುಹರಗಳಿಂದ ಮಿದುಳಿನ ಕೆಳನಡುಪೊರೆ ಅವಕಾಶಗಳ ನಡುವಣ CSF-ಹರಿವಿಗೆ ಯಾವುದೇ ತಡೆ ಇಲ್ಲದಿದ್ದ ಪಕ್ಷದಲ್ಲಿ ದುರ್ಬಲ ಮಿದುಳುಬಳ್ಳಿಯ ದ್ರವ ಮರುಹೀರಿಕೆ ವ್ಯವಸ್ಥೆಯಿಂದ ಉಂಟಾಗುತ್ತದೆ. ಮೇಲ್ಭಾಗದ ಭಿತ್ತಿಯಲ್ಲಿಯ ಕುಹರಗಳಲ್ಲಿರುವ ನಡುಪೊರೆಯ ಕಣರಚನೆಗಳ ದುರ್ಬಲ ಕಾರ್ಯನಿರ್ವಹಣೆಯಿಂದಾಗುತ್ತದೆ ಎಂಬ ಸಿದ್ಧಾಂತವಿದೆಯಲ್ಲದೇ ಈ ಕಣರಚನೆಯು ಸಿರೆಗಳ ವ್ಯವಸ್ಥೆಯೊಳಗೆ ಮಿದುಳುಬಳ್ಳಿಯ ದ್ರವ ಮರುಹೀರಿಕೆಯಾಗುವ ಪ್ರದೇಶವೂ ಆಗಿದೆ. ಮಿದುಳಿನ ಕೆಳನಡುಪೊರೆ/ಅಂತರ್‌ಮಿದುಳುಕುಕ್ಷಿಯ ರಕ್ತಸ್ರಾವ, ಮಿದುಳು ಪೊರೆಯುರಿತ, ಛಿಯಾರಿ ವಿರೂಪಗೊಳ್ಳುವಿಕೆ ಮತ್ತು ನಡುಪೊರೆಯ ಕಣರಚನೆಗಳ ಜನ್ಮಜಾತ ರಾಹಿತ್ಯತೆ (ಪಚ್ಛಿಯೋನಿಯವರ ಕಣರಚನೆಗಳು ) ಸೇರಿದಂತೆ ಅನೇಕ ನರವೈಜ್ಞಾನಿಕ ಪರಿಸ್ಥಿತಿಗಳ ಪರಿಣಾಮಗಳಿಂದಾಗಿ ಸೋಂಕು ತಗಲುವ ಜಲಮಸ್ತಿಷ್ಕ ರೋಗ ಉಂಟಾಗಬಹುದಾಗಿದೆ. ಗಾಯವಾಗುವಿಕೆ ಮತ್ತು ಮಿದುಳಿನ ಕೆಳನಡುಪೊರೆಯ ಅವಕಾಶಗಳಲ್ಲಿ ತಂತೂತಕ ವೃದ್ಧಿಗೊಳ್ಳುವಿಕೆ, ಸಾಂಕ್ರಾಮಿಕ, ಉರಿಯೂತಗಳು ಅಥವಾ ರಕ್ತಸ್ರಾವವಾಗುವಂತಹಾ ಘಟನೆಗಳು ಕೂಡಾ CSFನ ಮರುಹೀರಿಕೆಯನ್ನು ತಡೆಗಟ್ಟಬಹುದಾಗಿದ್ದು, ಮಿದುಳು ಕುಕ್ಷಿಯ ವ್ಯಾಪಕ ಹಿಗ್ಗುವಿಕೆಗೆ ಕಾರಣವಾಗಬಹುದಾಗಿದೆ.

 • ಸಾಧಾರಣ ಒತ್ತಡ ಜಲಮಸ್ತಿಷ್ಕ ರೋಗ ವು (NPH) ಸೋಂಕು ತಗಲುವ ಜಲಮಸ್ತಿಷ್ಕ ರೋಗ ದ ನಿರ್ದಿಷ್ಟ ರೂಪವಾಗಿದ್ದು, ಮಧ್ಯೆಮಧ್ಯೆ ಮಾತ್ರವೇ ಏರುವ ಮಿದುಳುಬಳ್ಳಿಯ ದ್ರವ ಒತ್ತಡದೊಂದಿಗೆ ಹಿಗ್ಗಿದ ಮಿದುಳುಗೂಡು/ಕುಹರಗಳು ಇದರ ವಿಶೇಷ ಲಕ್ಷಣವಾಗಿದೆ. ತತ್‌ಕ್ಷಣಗಳಲ್ಲಿ ಪಡೆಯದ ದಾಖಲೆಗಳೇ ಸಾಧಾರಣ ಒತ್ತಡ ಪ್ರಮಾಣಗಳನ್ನು ನೀಡುವುದರಿಂದ NPHನ ರೋಗನಿದಾನವು ಅಂತರ್‌‌ಮಿದುಳು ಕುಕ್ಷಿಯ ಒತ್ತಡಪ್ರಮಾಣದ ಸತತ (24 ಗಂಟೆಗಳ ಅಥವಾ ಅದಕ್ಕೂ ಹೆಚ್ಚಿನ ಅವಧಿಯ) ದಾಖಲೆಗಳ ಮೂಲಕ ಮಾತ್ರವೇ ಮಾಡಬಹುದಾಗಿದೆ. ಕ್ರಿಯಾತ್ಮಕ ಅನುವರ್ತನಾ ಅಧ್ಯಯನಗಳು ಕೂಡಾ ಈ ಬಗ್ಗೆ ನೆರವಾಗಬಲ್ಲವು. ಮಿದುಳು ಕುಕ್ಷಿಯ ಭಿತ್ತಿಗಳ ಬದಲಿಸಿದ ಅನುವರ್ತನೆ (ಸ್ಥಿತಿಸ್ಥಾಪಕತ್ವ) ಹಾಗೂ ಮಿದುಳುಬಳ್ಳಿಯ ದ್ರವದ ಹೆಚ್ಚಿದ ಸ್ನಿಗ್ಧತೆಗಳೂ ಕೂಡಾ ಸಾಧಾರಣ ಒತ್ತಡ ಜಲಮಸ್ತಿಷ್ಕ ರೋಗ ದ ರೋಗೋತ್ಪತ್ತಿಯಲ್ಲಿ ಪಾತ್ರ ವಹಿಸುತ್ತವೆ.
 • ಜಲಮಸ್ತಿಷ್ಕ ರೋಗ ಎಕ್ಸ್‌ ವಾಕುವೋ ಎಂಬುದು ಮಿದುಳಿನ ಗೂಡು/ಕುಹರಗಳು ಮತ್ತು ಮಿದುಳಿನ ಕೆಳನಡುಪೊರೆಗಳ ಅವಕಾಶಗಳ ಹಿಗ್ಗುವಿಕೆಗೆ ಸಂಬಂಧಿಸಿದ್ದ ರೋಗವಾಗಿದ್ದು, ಇದು ಸಾಧಾರಣವಾಗಿ ಮಿದುಳಿನ ಗಾತ್ರಕುಸಿತ ದಿಂದ (ಬುದ್ಧಿಮಾಂದ್ಯತೆಯ ಸನ್ನಿವೇಶದ ಹಾಗೆ), ಗಾಯಗಳಿಂದಾಗಿ ಮಿದುಳಿನಲ್ಲಾದ ಆಘಾತಗಳಿಂದಾಗಿ ಉಂಟಾಗುತ್ತದಲ್ಲದೇ ಛಿದ್ರಮನಸ್ಕತೆಯಂತಹಾ ಕೆಲ ಮಾನಸಿಕ ವ್ಯಾಧಿಗಳಲ್ಲಿ ಕೂಡಾ ಹೀಗಾಗುತ್ತದೆ. ಜಲಮಸ್ತಿಷ್ಕ ರೋಗಕ್ಕೆ ವ್ಯತಿರಿಕ್ತವಾಗಿ ಇದು ಮಿದುಳಿನ ಊತಕದ ಕೊರತೆ ತುಂಬುವ ಪ್ರತಿಕ್ರಿಯೆಯಾಗಿ CSF-ಅವಕಾಶವನ್ನು ಹಿಗ್ಗಿಸುವ ತಟಸ್ಥಕಾರಕ ಹಿಗ್ಗುವಿಕೆ ಯಾಗಿದ್ದು - ಹೆಚ್ಚಿದ CSF ಒತ್ತಡದಿಂದಾಗಿ ಉಂಟಾಗುವಂತಹುದಲ್ಲ .

ಸೋಂಕು ತಗಲದ ಜಲಮಸ್ತಿಷ್ಕ ರೋಗ[ಬದಲಾಯಿಸಿ]

ಸೋಂಕು ತಗಲದ ಜಲಮಸ್ತಿಷ್ಕ ರೋಗ ಅಥವಾ ಪ್ರತಿರೋಧಕ ಜಲಮಸ್ತಿಷ್ಕ ರೋಗ ವು ಅಂತಿಮವಾಗಿ ಮಿದುಳಿನ ಕೆಳನಡುಪೊರೆ ಅವಕಾಶಕ್ಕೆ (ಬಾಹ್ಯ ಸಂಕುಚನ ಅಥವಾ ಆಂತರಿಕ ಮಿದುಳು ಕುಕ್ಷಿಯ ಗಡ್ಡೆವ್ರಣಗಳಿಂದಾಗಿ) ಹರಿದು ಹೋಗದಂತೆ ತಡೆಗಟ್ಟುವ CSF-ಹರಿವಿನ ತಡೆಕಾರಕದಿಂದಾಗಿ ಉಂಟಾಗುತ್ತದೆ.

 • ಮಾನ್ರೋ ಕಂಡಿ ಯ ತಡೆಯು ಒಂದು ಕುಹರದ ಅಥವಾ ಸಾಕಷ್ಟು ದೊಡ್ಡದಾಗಿದ್ದರೆ (e.g., ಕಲಿಲ ಊತಕದಲ್ಲಿ), ಎರಡೂ ಮಗ್ಗಲಿನ ಮಿದುಳುಗೂಡು/ಕುಹರಗಳ ಹಿಗ್ಗುವಿಕೆಗೆ ಕಾರಣವಾಗುತ್ತದೆ.
 • ಸಿಲ್ವಿಯಸ್‌ ನಾಳಿಕೆ/ಕೊಳವೆಯು ಸಾಧಾರಣವಾಗಿ ಇಕ್ಕಟ್ಟಾದ ಪ್ರವೇಶದ್ವಾರವನ್ನು ಹೊಂದಿದ್ದು ಅನೇಕ ಆನುವಂಶಿಕ ಅಥವಾ ಪಡೆದುಕೊಂಡ ವ್ರಣಗಳಿಂದಾಗಿ ಮುಚ್ಚಿಹೋಗಬಹುದಾಗಿದ್ದು (e.g., ನಾಳಬಂಧ, ಎಪಿತೀಲಿಯಮ್ಮಿನ ಉರಿಯೂತ, ರಕ್ತಸ್ರಾವ, ಗೆಡ್ಡೆ) ಎರಡೂ ಪಾರ್ಶ್ವಗಳ ಮಿದುಳುಗೂಡು/ಕುಹರಗಳು ಹಾಗೂ ಮೂರನೇ ಮಿದುಳುಗೂಡು/ಕುಹರಗಳ ಹಿಗ್ಗುವಿಕೆಗೆ ಕಾರಣವಾಗಬಹುದಾಗಿದೆ.
 • ನಾಲ್ಕನೇ ಮಿದುಳುಗೂಡು/ಕುಹರ ದ ಅಡೆತಡೆಗಳು ನಾಳಿಕೆ/ಕೊಳವೆ ಹಾಗೂ ಪಾರ್ಶ್ವಗಳ ಮತ್ತು ಮೂರನೇ ಮಿದುಳುಗೂಡು/ಕುಹರಗಳ ಹಿಗ್ಗುವಿಕೆಗೆ ಕಾರಣವಾಗಬಹುದಾಗಿದೆ.
 • ಲುಷ್ಕಾ ಮಿದುಳುಗೂಡು/ಕುಹರದ ರಂಧ್ರ ಮತ್ತು ಮ್ಯಾಗೆಂಡೀ ರಂಧ್ರ ಗಳೂ ಕೂಡಾ ಜನ್ಮಜಾತವಾಗಿ ಮುಚ್ಚಿಕೊಂಡಿರುವ ತೊಂದರೆಯಿಂದಾಗಿ ತಡೆಗಳನ್ನು ಹೊಂದಿರಬಹುದಾಗಿದೆ (e.g., ಡ್ಯಾಂಡಿ-ವಾಕರ್‌ ವಿರೂಪತೆ).

ಜನ್ಮಜಾತ ವ್ಯಾಧಿಗಳು[ಬದಲಾಯಿಸಿ]

ಕಪಾಲದ ಮೂಳೆಗಳು ಜೀವಿಯ ಮೂರನೇ ವರ್ಷದ ಕೊನೆಯ ವೇಳೆಗೆ ಸ್ಥಿರವಾಗಿ ರೂಪುಗೊಳ್ಳತೊಡಗುತ್ತವೆ. ತಲೆಯು ಹಿಗ್ಗಬೇಕೆಂದರೆ, ಜಲಮಸ್ತಿಷ್ಕ ರೋಗವು ಆ ವಯಸ್ಸಿಗಿಂತ ಮುಂಚೆಯೇ ಬಾಧಿಸಲಾರಂಭಿಸಿರಬೇಕು. ಸಾಧಾರಣವಾಗಿ ಇದಕ್ಕೆ ಕಾರಣಗಳು ಆನುವಂಶಿಕವಾಗಿದ್ದರೂ, ಇದು ಹಾಗೆಯೇ ಸಂಭವಿಸಬಹುದಾದ ರೋಗವೂ ಆಗಿದೆಯಲ್ಲದೇ, ಸಾಧಾರಣವಾಗಿ ಜನನದ ಕೆಲ ತಿಂಗಳುಗಳಲ್ಲೇ ಕಂಡುಬರುತ್ತಿದ್ದು ಇವುಗಳಲ್ಲಿ ಕೆಳಕಂಡವು ಸೇರಿವೆ, 1) ಅಕಾಲಿಕ ಜನನದ ಶಿಶುಗಳಲ್ಲಿನ ಅಂತರ್‌‌‌ಮಿದುಳು ಕುಕ್ಷಿಯ ಗರ್ಭದಲ್ಲಿಯ ರಕ್ತಸ್ರಾವಗಳು, 2) ಸೋಂಕುರೋಗ ತಗಲುವಿಕೆಗಳು, 3) IIನೇ ವಿಧದ ಅರ್ನಾಲ್ಡ್‌‌-ಛಿಲಾರಿ ವಿರೂಪತೆ, 4) ನಾಳಿಕೆ/ಕೊಳವೆ ನಾಳಬಂಧ ಮತ್ತು ಅತಿಸಂಕೋಚನ ಹಾಗೂ 5) ಡ್ಯಾಂಡಿ-ವಾಕರ್‌ ವಿರೂಪತೆ.

ಜಲಮಸ್ತಿಷ್ಕ ರೋಗ ಪೀಡಿತ ನವಜಾತ ಶಿಶುಗಳು ಮತ್ತು ಅಂಬೆಗಾಲಿಡುವ ಮಕ್ಕಳಲ್ಲಿ, ತಲೆಯ ಸುತ್ತಳತೆಯು ವೇಗವಾಗಿ ವಿಸ್ತರಿಸುತ್ತಲ್ಲದೇ ತ್ವರಿತವಾಗಿ 97ನೇ ಶೇಕಡಕವನ್ನು ತಲುಪಿಬಿಡುತ್ತದೆ. ತಲೆಬುರುಡೆಯ ಮೂಳೆಗಳು ಇನ್ನೂ ಸರಿಯಾಗಿ ಕೂಡಿಕೊಂಡಿರುವುದಿಲ್ಲವಾದುದರಿಂದ, ಊದಿಕೊಳ್ಳುವಿಕೆ, ಮುಂಭಾಗದ ಹಾಗೂ ಹಿಂಭಾಗದ ಸ್ಥಾಯಿಯಾದ ನೆತ್ತಿಸುಳಿಗಳು ರೋಗಿಯಾಗಿ ನೇರ ನಿಲುವಿನಲ್ಲಿ ನಿಂತಿದ್ದಾಗಲೂ ಕಂಡುಬರುತ್ತದೆ.

ಶಿಶುವು ತಳಮಳಗೊಳ್ಳುವಿಕೆ, ಅಲ್ಪಾಹಾರ ಸೇವನೆ ಮತ್ತು ಆಗ್ಗಾಗ್ಗೆ ವಾಂತಿ ಮಾಡಿಕೊಳ್ಳುವ ಲಕ್ಷಣಗಳನ್ನು ತೋರುತ್ತಿರುತ್ತದೆ. ಜಲಮಸ್ತಿಷ್ಕ ರೋಗವು ವೃದ್ಧಿಗೊಳ್ಳುತ್ತಿದ್ದ ಹಾಗೆ, ಜಡತ್ವ/ಮಂದತ್ವವು ಆರಂಭಗೊಂಡು ಶಿಶುವು ತನ್ನ ಸುತ್ತಮುತ್ತಲಿನ ಪರಿಸರದ ಬಗ್ಗೆ ಅನಾಸಕ್ತಿ ತಳೆಯುತ್ತದೆ. ನಂತರ, ಮೇಲಿನ ಕಣ್ಣೆವೆಗಳು ಹಿಂದೆ ಹೋಗುತ್ತವಲ್ಲದೇ ಕಣ್ಣುಗಳು ಕೆಳಗೆ ಹೋಗಲು ಆರಂಭಿಸುತ್ತವೆ (ಮಧ್ಯಮಿದುಳಿನ ಟೆಗ್‌ಮೆಂಟಮ್‌‌ ಮೇಲೆ ಜಲಮಸ್ತಿಷ್ಕರೋಗ ತಗಲಿರುವುದರಿಂದುಂಟಾದ ಒತ್ತಡ ಹಾಗೂ ಮೇಲಿನ ರೆಪ್ಪೆಯ ಪಕ್ಷವಾತದಿಂದಾಗಿ ಹೀಗಾಗುತ್ತದೆ). ಚಲನೆಗಳು ದುರ್ಬಲವಾಗುತ್ತಾ ಹೋಗುತ್ತದಲ್ಲದೇ ತೋಳುಗಳು ಕಂಪಿಸತೊಡಗಬಹುದಾಗಿರುತ್ತದೆ. ದೃಗ್‌‌ಬಿಲ್ಲೆಯ ಊದುವಿಕೆಯ ಸಮಸ್ಯೆಯು ಇಲ್ಲದಿದ್ದರೂ ದೃಷ್ಟಿಸಾಮರ್ಥ್ಯದಲ್ಲಿ ತಕ್ಕಮಟ್ಟಿನ ಕೊರತೆಯುಂಟಾಗಬಹುದಾಗಿದೆ. ತಲೆಯು ಎಷ್ಟರಮಟ್ಟಿಗೆ ಹಿಗ್ಗುತ್ತದೆಂದರೆ ಮಗುವು ಅಂತಿಮವಾಗಿ ಹಾಸಿಗೆ ಹಿಡಿಯುವ ಪರಿಸ್ಥಿತಿ ಬರುತ್ತದೆ.

ಸ್ಪೈನಾ-ಬಿಫಿಡಾ/ಬೆನ್ನುಮೂಳೆಯ ತೆರಪಿನ ಮೂಲಕ ಬೆನ್ನುಹುರಿಯು ಬಾಹ್ಯಮುಖವಾಗಿರುವ ದೋಷ ಪೀಡಿತ ಭ್ರೂಣಗಳು ಅಥವಾ ನವಜಾತ ಶಿಶುಗಳಲ್ಲಿ ಸುಮಾರು 80-90%ರಷ್ಟು ಮಕ್ಕಳು ಬಹುಮಟ್ಟಿಗೆ ಮೆದುಳುಬಳ್ಳಿಯ ಪೊರೆಗಳ ಹೊರಚಾಚುದ ಅಂತ್ರವೃದ್ಧಿ ಅಥವಾ ಮೆದುಳಿನ ಪೊರೆಗಳ ಹೊರಚಾಚಿದ ದ್ರವ ತುಂಬಿದ ಕೋಶಗಳಿಂದುಂಟಾದ ಜಲಮಸ್ತಿಷ್ಕ ರೋಗದಿಂದ ಬಳಲುತ್ತಿರುತ್ತಾರೆ.[೭]

ಪಡೆದುಕೊಂಡ ವ್ಯಾಧಿ[ಬದಲಾಯಿಸಿ]

ಪಡೆದುಕೊಳ್ಳುವಂತಹಾ ಈ ರೋಗ ಪರಿಸ್ಥಿತಿಯು CNS ಸೋಂಕುರೋಗ ತಗಲುವಿಕೆಗಳು, ಮಿದುಳು ಪೊರೆಯುರಿತ, ಮಿದುಳು ಗೆಡ್ಡೆಗಳು, ತಲೆಗಾದ ಆಘಾತ/ಗಾಯ, ತಲೆಬುರುಡೆಯೊಳಗಿನ ರಕ್ತಸ್ರಾವ (ಮಿದುಳಿನ ಕೆಳನಡುಪೊರೆ ಅಥವಾ ಮಿದುಳಿನ ಒಳಊತಕಗಳಿಂದುಂಟಾದ)ಗಳ ಪರಿಣಾಮವಾಗಿರುತ್ತದಲ್ಲದೇ ಸಾಧಾರಣವಾಗಿ ವಿಪರೀತ ಯಾತನೆಯ ವ್ಯಾಧಿಯಾಗಿರುತ್ತದೆ.

ಪರಿಣಾಮಗಳು[ಬದಲಾಯಿಸಿ]

ಜಲಮಸ್ತಿಷ್ಕ ರೋಗವು ಮಿದುಳಿಗೆ ಹಾನಿ ಉಂಟುಮಾಡಬಲ್ಲದಾದುದರಿಂದ, ಯೋಚನಾಶಕ್ತಿ ಹಾಗೂ ನಡವಳಿಕೆಗಳ ಮೇಲೆ ಸಾಕಷ್ಟು ದುಷ್ಪರಿಣಾಮಗಳು ಉಂಟಾಗಬಹುದಿರುತ್ತದೆ. ಅಲ್ಪ-ಕಾಲದ ಜ್ಞಾಪಕಶಕ್ತಿಯ ಕೊರತೆಯೂ ಸೇರಿದಂತೆ ಕಲಿಕಾ ನ್ಯೂನತೆಗಳು ಜಲಮಸ್ತಿಷ್ಕ ರೋಗವನ್ನು ಹೊಂದಿದವರಲ್ಲಿ ಸಾಮಾನ್ಯವಾಗಿದ್ದು, ಇವರು ಮಿದುಳಿನ ನರಗಳಿಗೆ ಉಂಟಾದ ಹಾನಿಯ ಪ್ರಮಾಣವನ್ನು ಸೂಚಿಸಬಲ್ಲ ಮಟ್ಟಿಗೆ ಸಾಧನೆಯ IQಗಿಂತ ಮೌಖಿಕ/ವಾಚಕ IQದಲ್ಲಿ ಹೆಚ್ಚಿನ ಅಂಕಗಳಿಕೆ ಪಡೆಯಬಲ್ಲವರಾಗಿರುತ್ತಾರೆ. ಇಷ್ಟೆಲ್ಲಾ ಇದ್ದರೂ ಜಲಮಸ್ತಿಷ್ಕ ರೋಗದ ತೀವ್ರತೆಯು ವ್ಯಕ್ತಿಗಳ ನಡುವೆ ಗಮನಾರ್ಹ ಪ್ರಮಾಣದ ವ್ಯತ್ಯಾಸಗಳನ್ನು ಹೊಂದಿರಬಲ್ಲದಾಗಿದ್ದು, ಇಂತಹವರಲ್ಲಿ ಕೆಲವರು ಸಾಧಾರಣ ಅಥವಾ ಇನ್ನೂ ಕೆಲವರು ಅನನ್ಯ ಸಾಧಾರಣ ಬುದ್ಧಿಮತ್ತೆಯವರಾಗಿರಬಹುದು. ಜಲಮಸ್ತಿಷ್ಕ ರೋಗವನ್ನು ಹೊಂದಿದ ಕೆಲವರು ಚಲನೆಯ ಹಾಗೂ ದೃಷ್ಟಿಯ ಸಮಸ್ಯೆಗಳಿಂದ ಪೀಡಿತರಾಗಿರಬಹುದು, ಹೊಂದಾಣಿಕೆಯ ಸಮಸ್ಯೆ ಹೊಂದಿರಬಹುದು ಅಥವಾ ಅಡ್ಡಾದಿಡ್ಡಿ ಚಲನೆಯ ಸಮಸ್ಯೆ ಹೊಂದಿರಬಹುದು. ರೋಗಪೀಡಿತರು ಸಾಧಾರಣ ಮಕ್ಕಳಿಗಿಂತ ಮುಂಚೆಯೇ ಪ್ರೌಢಾವಸ್ಥೆಗೆ ತಲುಪುವ ಸಾಧ್ಯತೆ ಇರುತ್ತದೆ (ನೋಡಿ ಅಕಾಲ ಪ್ರೌಢಿಮೆ). ಇಂತಹವರಲ್ಲಿ ಸುಮಾರು ನಾಲ್ವರಲ್ಲಿ ಒಬ್ಬರು ಅಪಸ್ಮಾರಕ್ಕೂ ಈಡಾಗುತ್ತಾರೆ.

ಚಿಕಿತ್ಸಾಕ್ರಮ[ಬದಲಾಯಿಸಿ]

ಜಲಮಸ್ತಿಷ್ಕ ರೋಗದ ಚಿಕಿತ್ಸೆಯು ಶಸ್ತ್ರಚಿಕಿತ್ಸೆಯೇ ಆಗಿರುತ್ತದೆ. ಹರಿವಿಗೆ ಉಂಟಾಗುತ್ತಿರುವ ತಡೆಯನ್ನು ತಪ್ಪಿಸಲು/ನಡುಪೊರೆಯ ಕಣರಚನೆಗಳ ಅಸಮರ್ಥ ಕಾರ್ಯನಿರ್ವಹಣೆಯನ್ನು ತಡೆಯಲು ಮತ್ತು ಹೆಚ್ಚುವರಿ ದ್ರವವನ್ನು ಮತ್ತೆ ಹೀರಿಕೊಳ್ಳಬಹುದಾದ ದೇಹದ ಇತರೆ ಕುಹರಗಳಿಗೆ ಹರಿದುಹೋಗುವಂತೆ ಮಿದುಳು ಕುಕ್ಷಿಯ ತೂರುನಳಿಕೆಯನ್ನು (ಸಿಲಿಕಾನ್‌-ಪ್ಲಾಸ್ಟಿಕ್‌ ಸಂಯೋಜಿತ ವಸ್ತುವಿನಿಂದ ಮಾಡಿದ ನಳಿಕೆ) ಮಿದುಳಿನ ಗೂಡು/ಕುಹರಗಳಲ್ಲಿ ಅಳವಡಿಸುವ ಪ್ರಕ್ರಿಯೆಯನ್ನು ಅದು ಒಳಗೊಂಡಿರುತ್ತದೆ. ಬಹುತೇಕ ಬದಲಿ ಪರಿಚಲನೆ ಮಾರ್ಗಗಳು ದ್ರವವನ್ನು ಜಠರದ ಒಳಪೊರೆಯೊಳಕ್ಕೆ (ಮಿದುಳುಕುಹರದಿಂದ -ಜಠರದ ಒಳಪೊರೆಯ ತನಕ ಬದಲಿ ಪರಿಚಲನೆ ಮಾರ್ಗ) ಹರಿಸುವುದು ಸಾಮಾನ್ಯವಾದರೂ, ಬದಲಿ ಸ್ಥಳಗಳಲ್ಲಿ ಬಲ ಹೃತ್ಕರ್ಣ (ಮಿದುಳುಕುಹರದಿಂದ ಹೃತ್ಕರ್ಣದೆಡೆಗಿನ ಬದಲಿ ಪರಿಚಲನೆ ಮಾರ್ಗ), ಎದೆಗೂಡಿನ ಪೊರೆ (ಮಿದುಳುಕುಹರದಿಂದ-ಎದೆಗೂಡಿನ ಪೊರೆ ಬದಲಿ ಪರಿಚಲನೆ ಮಾರ್ಗ), ಹಾಗೂ ಪಿತ್ತಜನಕಾಂಗಗಳು ಸೇರಿವೆ. ಬದಲಿ ಪರಿಚಲನೆ ಮಾರ್ಗ ವ್ಯವಸ್ಥೆಯೊಂದನ್ನು ಕೂಡಾ ಬೆನ್ನುಹುರಿಯ ಕೆಳಭಾಗದ ಅವಕಾಶದಲ್ಲಿ ಅಳವಡಿಸಿ CSF ದ್ರವವನ್ನು ಜಠರದ ಒಳಪೊರೆಗೆ (ಬೆನ್ನುಹುರಿಯ ಕೆಳಭಾಗದಿಂದ -ಜಠರದ ಒಳಪೊರೆಗೆ ಸಾಗುವ ಬದಲಿ ಪರಿಚಲನೆ ಮಾರ್ಗ) ಪುನರ್ನಿರ್ದೇಶಿಸಲಾಗುತ್ತದೆ. ಪ್ರತಿರೋಧಕ ಜಲಮಸ್ತಿಷ್ಕ ರೋಗಕ್ಕೆ ಆಯ್ದ ರೋಗಿಗಳ ಮೇಲೆ ನಡೆಸಲಾಗುವ ಪರ್ಯಾಯ ಚಿಕಿತ್ಸೆಯೆಂದರೆ ಉದರದರ್ಶಕೀಯ ಮಿದುಳಿನ ಮೂರನೇ ಕುಹರದ (ETV) ಶಸ್ತ್ರಚಿಕಿತ್ಸೆಯಾಗಿದ್ದು, ಇದರಲ್ಲಿ ಮೂರನೇ ಮಿದುಳುಗೂಡು/ಕುಹರದ ತಳಭಾಗದಲ್ಲಿ ಶಸ್ತ್ರಚಿಕಿತ್ಸೆಯ ಮೂಲಕ ಮಾಡಲಾದ ತೆರಪು CSF ದ್ರವವು ನೇರವಾಗಿ ಮಧ್ಯಮಿದುಳಿನ ಹಿಂಭಾಗದ ಅವಕಾಶಕ್ಕೆ ಹರಿದುಹೋಗುವಂತೆ ಮಾಡಿ, ತನ್ಮೂಲಕ ನಾಳಿಕೆ/ಕೊಳವೆಯ ಅತಿಸಂಕೋಚನಗಳಂತಹಾ ಯಾವುದೇ ರೀತಿಯ ಅಡಚಣೆಗಳಿಗೆ ತುತ್ತಾಗದಂತೆ ಪರಿಚಲನೆಯ ವ್ಯವಸ್ಥೆ ಮಾಡಲಾಗುತ್ತದೆ. ಈ ಚಿಕಿತ್ಸೆಯು ಆಯಾ ವ್ಯಕ್ತಿಯ ಅಂಗರಚನೆಗಳಿಗನುಗುಣವಾಗಿ ಸೂಕ್ತವಾಗಿರಬಹುದು ಅಥವಾ ಸೂಕ್ತವಾಗದೇ ಇರಬಹುದು.

ಬದಲಿ ಪರಿಚಲನೆ ಮಾರ್ಗ ಚಿಕಿತ್ಸೆಯ ತೊಡಕು/ಜಟಿಲತೆಗಳು[ಬದಲಾಯಿಸಿ]

ಸಂಭವನೀಯ ತೊಡಕು/ಜಟಿಲತೆಗಳ ಉದಾಹರಣೆಗಳಲ್ಲಿ ಬದಲಿ ಪರಿಚಲನೆ ಮಾರ್ಗದ ಅಸಮರ್ಪಕ ಕಾರ್ಯನಿರ್ವಹಣೆ, ಬದಲಿ ಪರಿಚಲನೆ ಮಾರ್ಗದ ವೈಫಲ್ಯ ಹಾಗೂ ಬದಲಿ ಪರಿಚಲನೆ ಮಾರ್ಗದ ಸೋಂಕುರೋಗ ತಗಲುವಿಕೆಗಳು ಸೇರಿವೆ. ಸಾಧಾರಣವಾಗಿ ಬದಲಿ ಪರಿಚಲನೆ ಮಾರ್ಗಗಳು ಚೆನ್ನಾಗಿಯೇ ಕಾರ್ಯನಿರ್ವಹಿಸುತ್ತವಾದರೂ, ಆ ವ್ಯವಸ್ಥೆಯ ಸಂಪರ್ಕ ಕಡಿದುಹೋದರೆ, ಮುಚ್ಚಿಹೋದರೆ (ಕಟ್ಟಿಕೊಳ್ಳುವುದು), ಸೋಂಕುಪೀಡಿತವಾದರೆ ಅಥವಾ ಅದೇ ಹೆಚ್ಚು ಬೆಳೆದರೆ ಕಾರ್ಯನಿರ್ವಹಣೆ ಸ್ಥಗಿತಗೊಳ್ಳಬಹುದು. ಇಂತಹಾ ಸಮಸ್ಯೆ ಉಂಟಾದರೆ ಮಿದುಳುಬಳ್ಳಿಯ ದ್ರವವು ಮತ್ತೆ ಸಂಗ್ರಹಗೊಳ್ಳಲು ಆರಂಭವಾಗಿ ವಿವಿಧ ದೈಹಿಕ ರೋಗಲಕ್ಷಣಗಳು ಕಂಡು ಬರುತ್ತವಲ್ಲದೇ (ತಲೆನೋವುಗಳು, ಪಿತ್ತೋದ್ರೇಕ, ವಾಂತಿ, ದ್ಯುತಿಭೀತಿ/ಬೆಳಕಿನ ಅತಿಸಂವೇದನೆ), ಅವುಗಳಲ್ಲಿ ಕೆಲವು ಪಾರ್ಶ್ವವಾಯು/ಮೂರ್ಛೆಗಳಂತಹಾ ಹಠಾತ್‌ ಆಘಾತಗಳಂತಹಾ ವಿಪರೀತ ಸಮಸ್ಯೆಗಳೂ ಉಂಟಾಗಬಹುದು. ಬದಲಿ ಪರಿಚಲನೆ ಮಾರ್ಗ ಚಿಕಿತ್ಸೆಯ ವೈಫಲ್ಯದ ದರವು ಕೂಡಾ ಸಾಪೇಕ್ಷವಾಗಿ ಹೆಚ್ಚಿದ್ದು (ವಾರ್ಷಿಕವಾಗಿ ಜಲಮಸ್ತಿಷ್ಕ ರೋಗವನ್ನು ಗುಣಪಡಿಸಲಿಕ್ಕೆ ಕೈಗೊಂಡ 40,000 ಶಸ್ತ್ರಚಿಕಿತ್ಸೆಗಳಲ್ಲಿ ಕೇವಲ 30%ರಷ್ಟು ಮಾತ್ರವೇ ರೋಗಿಯ ಪ್ರಥಮ ಶಸ್ತ್ರಚಿಕಿತ್ಸೆಗಳಾಗಿರುತ್ತವೆ [೮] ಇಷ್ಟೇ ಅಲ್ಲದೇ ಈ ರೋಗಪೀಡಿತರು ತಮ್ಮ ಜೀವಿತಾವಧಿಯಲ್ಲಿ ಅನೇಕ ಬದಲಿ ಪರಿಚಲನೆ ಮಾರ್ಗ ಪರಿಷ್ಕರಣೆಗಳನ್ನು ಹೊಂದುವುದೂ ಕೂಡಾ ಸರ್ವೇಸಾಧಾರಣವಾಗಿದೆ.

ಮಿದುಳುಬಳ್ಳಿಯ ದ್ರವದ ರೂಪುಗೊಳ್ಳುವಿಕೆಯ ರೋಗನಿದಾನವು ಸಂಕೀರ್ಣ ಪ್ರಕ್ರಿಯೆಯಾಗಿದ್ದು ತಜ್ಞರ ನೈಪುಣ್ಯತೆಯು ಅತ್ಯಗತ್ಯವಾಗಿರುತ್ತದೆ.

ಸಂಭವಿಸಬಹುದಾದ ಮತ್ತೊಂದು ಕ್ಲಿಷ್ಟ ಪರಿಸ್ಥಿತಿಯೆಂದರೆ ನಡುಪೊರೆಗಳ ಜಾಲದಿಂದ ಉತ್ಪತ್ತಿಯಾಗುವುದಕ್ಕಿಂತ ತ್ವರಿತವಾಗಿ CSF ದ್ರವವು ಬರಿದಾದಾಗ - ಉದಾಸೀನತೆ, ತೀವ್ರ ತಲೆನೋವುಗಳು, ಕಿರಿಕಿರಿ/ಸಿಡಿಮಿಡಿ, ಬೆಳಕಿನ ಅತಿಸಂವೇದನೆ, ಶ್ರವಣದ ಅತಿಸಂವೇದನೆ (ಶಬ್ದದ ಸಂವೇದನೆ), ಪಿತ್ತೋದ್ರೇಕ, ವಾಂತಿ, ಸ್ಥಿಮಿತ ಕಳೆದುಕೊಳ್ಳುವಿಕೆ, ತಲೆ ಸುತ್ತುವಿಕೆ, ತೀವ್ರ ತಲೆಶೂಲೆಗಳು, ಹಠಾತ್‌ ಆಘಾತಗಳು, ವ್ಯಕ್ತಿತ್ವ ಬದಲಾವಣೆ, ಕಾಲುಗಳು ಅಥವಾ ತೋಳುಗಳ ದುರ್ಬಲತೆ, ಮೆಳ್ಳೆಗಣ್ಣು ಮತ್ತು ಒಂದು ವಸ್ತು ಎರಡಾಗಿ ಕಾಣಿಸುವಿಕೆಯಂತಹಾ ರೋಗಲಕ್ಷಣಗಳು - ರೋಗಿಯು ಲಂಬ ನಿಲುವಿನಲ್ಲಿದ್ದಾಗ ಕಾಣಿಸಿಕೊಳ್ಳುತ್ತದೆ. ರೋಗಿಯು ಮಲಗಿಕೊಂಡರೆ, ಸಾಧಾರಣವಾಗಿ ಈ ಲಕ್ಷಣಗಳೆಲ್ಲಾ ಅಲ್ಪಕಾಲದಲ್ಲೇ ಮಾಯವಾಗುತ್ತವೆ. CT ಸ್ಕ್ಯಾನ್‌‌ ತಪಾಸಣೆಯು ಮಿದುಳುಗೂಡು/ಕುಹರದ ಗಾತ್ರದಲ್ಲಿ ಯಾವುದೇ ವ್ಯತ್ಯಾಸವನ್ನು ತೋರಬಹುದು ಅಥವಾ ತೋರದಿರಬಹುದು, ಅದರಲ್ಲೂ ನಿರ್ದಿಷ್ಟವಾಗಿ ರೋಗಿಯು ಈ ಹಿಂದೆ ಸೀಳು-ಬಿಟ್ಟಂತೆ ಕಾಣುವ ಮಿದುಳುಗೂಡು/ಕುಹರಗಳನ್ನು ಹೊಂದಿದ್ದ ಸಂದರ್ಭಗಳಲ್ಲಿ ಇದು ಇನ್ನೂ ಹೆಚ್ಚು. ದ್ರವದ ತ್ವರಿತ ಬರಿದಾಗುವಿಕೆಯನ್ನು ರೋಗನಿದಾನಿಸುವ/ಪತ್ತೆಹಚ್ಚುವಲ್ಲಿನ ಕ್ಲಿಷ್ಟತೆಗಳು ಈ ಸಂಕೀರ್ಣ ಪರಿಸ್ಥಿತಿಯ ಚಿಕಿತ್ಸೆಯ ಸಮಯದಲ್ಲಿ ನಿರ್ದಿಷ್ಟವಾಗಿ ರೋಗಿಗಳು ಹಾಗೂ ಅವರ ಕುಟುಂಬದವರಿಗೆ ಹತಾಶೆಯನ್ನುಂಟು ಮಾಡಬಹುದು.

ಸಾಂಪ್ರದಾಯಿಕ ನೋವುನಿವಾರಕ ಔಷಧೀಯ ವಿಜ್ಞಾನದ ಚಿಕಿತ್ಸಾ ಪದ್ಧತಿಗೆ ಉಂಟಾಗುತ್ತಿರುವ ಅವರೋಧವು ಕೂಡಾ ಬದಲಿ ಪರಿಚಲನೆ ಮಾರ್ಗದ ದ್ರವದ ತ್ವರಿತ ಬರಿದಾಗುವಿಕೆಯ ಅಥವಾ ಪರಿಚಲನೆ ಮಾರ್ಗದ ವೈಫಲ್ಯದ ಸೂಚನೆ ಕೂಡಾ ಆಗಿರಬಹುದು. ನಿರ್ದಿಷ್ಟ ಸಂಕೀರ್ಣ ಪರಿಸ್ಥಿತಿಯ ರೋಗನಿದಾನವು ಸಾಧಾರಣವಾಗಿ ರೋಗಲಕ್ಷಣಗಳು ಯಾವ ಸಂದರ್ಭದಲ್ಲಿ ತೋರಿಬರುತ್ತವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ - ಅಂದರೆ, ರೋಗಲಕ್ಷಣಗಳು ರೋಗಿಯು ಲಂಬನಿಲುವಿನಲ್ಲಿದ್ದಾಗ ಕಂಡುಬಂದವೋ ಅಥವಾ ತಲೆಯು ಸ್ಥೂಲವಾಗಿ ಕಾಲಿನ ಮಟ್ಟದಲ್ಲಿಯೇ ಇರುವಂತಹಾ ಬೋರಲು ಮಲಗಿದ್ದ ಸ್ಥಿತಿಯಲ್ಲಿದ್ದಾಗಲೋ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.

ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಬದಲಿ ಪರಿಚಲನೆ ಮಾರ್ಗ ಚಿಕಿತ್ಸೆಗಳು[ಬದಲಾಯಿಸಿ]

ಬದಲಿ ಪರಿಚಲನೆ ಮಾರ್ಗವ್ಯವಸ್ಥೆಯ ಚಿಕಿತ್ಸೆಗಳ ವೆಚ್ಚವು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಸಾಮಾನ್ಯ ಜನತೆಯ ಅಳವಿಗೆ ಮೀರಿದ್ದಾದುದರಿಂದ ಬಹುತೇಕ ಜಲಮಸ್ತಿಷ್ಕ ರೋಗ ಪೀಡಿತರು ಬದಲಿ ಪರಿಚಲನೆ ಮಾರ್ಗ ಚಿಕಿತ್ಸೆಯನ್ನು ಒಮ್ಮೆಯೂ ಪಡೆಯದೆಯೇ ಮರಣಿಸುತ್ತಾರೆ. ಅನೇಕ ಸಂದರ್ಭಗಳಲ್ಲಿ ಬದಲಿ ಪರಿಚಲನೆ ಮಾರ್ಗ ಚಿಕಿತ್ಸೆಯ ವೆಚ್ಚಕ್ಕೆ ಅಡಕವಾಗುವ ಬದಲಿ ಪರಿಚಲನೆ ಮಾರ್ಗ ವ್ಯವಸ್ಥೆಗಳ ಪರಿಷ್ಕರಣಾ ಚಿಕಿತ್ಸೆಯ ಪರಿಮಾಣವು ಇನ್ನೂ ಕಳವಳಕಾರಿಯಾಗಿದೆ. ಈ ಬಗ್ಗೆ Dr. ಬೆಂಜಮಿನ್‌‌ C. ವಾರ್ಫ್‌‌ರವರು ನಡೆಸಿದ ಅಧ್ಯಯನವು ವಿವಿಧ ಬದಲಿ ಪರಿಚಲನೆ ಮಾರ್ಗ ವ್ಯವಸ್ಥೆಗಳನ್ನು ಹೋಲಿಸಿ ಬಹುತೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಅಲ್ಪವೆಚ್ಚದ ಬದಲಿ ಪರಿಚಲನೆ ಮಾರ್ಗ ವ್ಯವಸ್ಥೆ ಚಿಕಿತ್ಸೆಗಳ ಪಾತ್ರವನ್ನು ವಿಷದೀಕರಿಸುತ್ತದೆ. ಈ ಅಧ್ಯಯನವನ್ನು ಜರ್ನಲ್‌ ಆಫ್‌ ನ್ಯೂರೋಸರ್ಜರಿ : ಪೀಡಿಯಾಟ್ರಿಕ್ಸ್‌ ನ ಮೇ 2005ರ ಸಂಚಿಕೆಯಲ್ಲಿ ಪ್ರಕಟಿಸಲಾಗಿದೆ.[೯] ಆ ಅಧ್ಯಯನವು ಛಾಬ್ರಾ ಬದಲಿ ಪರಿಚಲನೆ ಮಾರ್ಗ ವ್ಯವಸ್ಥೆಯನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಪ್ರಚಲಿತವಾಗಿರುವ ಬದಲಿ ಪರಿಚಲನೆ ಮಾರ್ಗ ವ್ಯವಸ್ಥೆಗಳೊಡನೆ ಹೋಲಿಸುತ್ತವೆ. ಈ ಅಧ್ಯಯನವನ್ನು ಉಗಾಂಡದಲ್ಲಿ ನಡೆಸಲಾಗಿದ್ದು, ಬದಲಿ ಪರಿಚಲನೆ ಮಾರ್ಗ ಚಿಕಿತ್ಸಾ ವ್ಯವಸ್ಥೆಗಳನ್ನು ಇಂಟರ್‌ನ್ಯಾಷನಲ್‌ ಫೆಡರೇಷನ್‌ ಫಾರ್‌ ಸ್ಪೈನಾ ಬಿಫಿಡಾ ಅಂಡ್‌ ಹೈಡ್ರೋಸೆಫಾಲಸ್‌ ಸಂಸ್ಥೆಯು ದಾನ ನೀಡಿತ್ತು.

ಅಪವಾದದ ಪರಿಸ್ಥಿತಿಗಳು[ಬದಲಾಯಿಸಿ]

ತಲೆಯಲ್ಲಿ ಮಿದುಳುಬಳ್ಳಿಯ ದ್ರವವು ಸಂಗ್ರಹಗೊಂಡಿದ್ದರಿಂದ ವಾಸ್ತವವಾಗಿ ಮಿದುಳು ಅಂಗಾಂಶದ ತೆಳು ಹಾಳೆಯ ಗಾತ್ರಕ್ಕಿಂತ ಸ್ವಲ್ಪವೇ ದೊಡ್ಡದಾಗಿರಬಹುದಾದಷ್ಟು ಗಾತ್ರಕ್ಕೆ ಕುಗ್ಗಿದ್ದ ಜಲಮಸ್ತಿಷ್ಕ ರೋಗವನ್ನು ಹಿಂದೆ ಹೊಂದಿದ್ದ ಓರ್ವ 44-ವರ್ಷ ವಯಸ್ಸಿನ ಫ್ರೆಂಚ್‌ ವ್ಯಕ್ತಿಯ ಪ್ರಸಂಗವು ಕುತೂಹಲಕರವಾಗಿದೆ. ಮಿದುಳು ದ್ರವದ ಪರಿಚಲನೆಯನ್ನು ಸುರಳೀತಗೊಳಿಸಲು ಬದಲಿ ಪರಿಚಲನೆ ಮಾರ್ಗವನ್ನು ತಲೆಯಲ್ಲಿ ಅಳವಡಿಸಿಕೊಂಡಿದ್ದ ಆ ವ್ಯಕ್ತಿಯು (ಅದನ್ನು ಆತ 14ರ ವಯಸ್ಸು ತಲುಪಿದಾಗ ತೆಗೆಯಲಾಗಿತ್ತು) ತನ್ನ ಎಡಗಾಲಿನಲ್ಲಿ ಅಲ್ಪಪ್ರಮಾಣದ ನಿಶ್ಶಕ್ತಿಯುಂಟಾದ ಕಾರಣದಿಂದಾಗಿ ಆಸ್ಪತ್ರೆಗೆ ತೆರಳಿದ.

ಚಿತ್ರ:DWS empty head.jpg
DWS: ಮಧ್ಯದಲ್ಲಿರುವ ಕಪ್ಪುಭಾಗವೆಲ್ಲಾ ಮಿದುಳುಬಳ್ಳಿಯ ದ್ರವವಾಗಿದೆ ಹಾಗೂ ತಲೆಬುರುಡೆಯ ಹೊರ ಅಂಚಿನುದ್ದಕ್ಕೂ ಇರುವ ಬಿಳಿಭಾಗವು ಮಿದುಳಿನ ಬೂದು ದ್ರವವಾಗಿದೆ. ಇದು ಫಾಕ್ಸ್‌ ನ್ಯೂಸ್‌ ವರದಿಯೊಂದರ ದೃಶ್ಯಚಿತ್ರವಾಗಿದೆ.

ಜುಲೈ 2007ರಲ್ಲಿ, ಫಾಕ್ಸ್‌‌ ನ್ಯೂಸ್‌‌ ವಾಹಿನಿ ಯು ಮಾರ್ಸಿಯೆಲ್ಲೆಯಲ್ಲಿನ ಹೋಪಿಟಲ್‌ ಡೆ ಲಾಟಿಮೊನೆಯ Dr. ಲಿಯೊನೆಲ್‌ ಫ್ಯುಯಿಲ್ಲೆಟ್‌‌ ಕೆಳಕಂಡಂತೆ ಹೇಳಿಕೆ ನೀಡಿದರೆಂದು ವರದಿ ಮಾಡಿತ್ತು : "ಸ್ಕ್ಯಾನ್‌ ಮಾಡಿದ ಚಿತ್ರಗಳು ಅಸಾಧಾರಣವಾಗಿದ್ದವು ... ಮಿದುಳು ಅಲ್ಲಿ ಬಹುತೇಕ ಇರಲೇ ಇಲ್ಲ.[೧೦] ವೈದ್ಯರು ಆ ವ್ಯಕ್ತಿಯ ವೈದ್ಯಕೀಯ ಇತಿಹಾಸವನ್ನು ತಿಳಿದುಕೊಂಡ ನಂತರ, ಗಣನಾ ತಲಲೇಖ/ಕಂಪ್ಯೂಟೆಡ್‌ ಟೋಮೋಗ್ರಫಿಯ (CT) ಸ್ಕ್ಯಾನ್‌ ತಪಾಸಣೆ ಮತ್ತು ಅಯಸ್ಕಾಂತೀಯ ಅನುರಣನ ಬಿಂಬ (MRI) ಸ್ಕ್ಯಾನ್‌ ತಪಾಸಣೆಗಳನ್ನು ನಡೆಸಿದ ನಂತರ, ಅವರುಗಳು ತಲೆಬುರುಡೆಯಲ್ಲಿನ ಪಾರ್ಶ್ವದ ಮಿದುಳುಗೂಡು/ಕುಹರಗಳ "ಬೃಹತ್‌ ಹಿಗ್ಗುವಿಕೆ"ಯನ್ನು ಕಂಡು ಚಕಿತರಾದರು. ಬುದ್ಧಿಮತ್ತೆಯ ಪರೀಕ್ಷೆಗಳಲ್ಲಿ ಆ ವ್ಯಕ್ತಿಯು 100 ಅಂಕಗಳ ಸರಾಸರಿಯಲ್ಲಿ 75ರಷ್ಟು IQ ಅಂಕವನ್ನು ಪಡೆದು ಕಡಿಮೆ ಸಾಮರ್ಥ್ಯವನ್ನು ತೋರಿದರು. ಇದನ್ನು ಸಾಧಾರಣವಾಗಿ ಅಧಿಕೃತವಾಗಿ ಮಾನಸಿಕ ವಿಕಲತೆಯೆಂದು ಭಾವಿಸಲಾಗುವದಕ್ಕಿಂತ ಸ್ವಲ್ಪವೇ ನಂತರದ ಮಟ್ಟವಾದ "ಪರಿಮಿತಿಯಲ್ಲಿ ಬೌದ್ಧಿಕ ಕಾರ್ಯಾಚರಣೆ" ಎಂದು ಪರಿಗಣಿಸಲಾಗುತ್ತದೆ.

ಇದರಲ್ಲಿ ಗಮನಾರ್ಹವಾಗಿ, ವಿಸ್ತರಿಸಿದ ಮಿದುಳುಗೂಡು/ಕುಹರಗಳೊಂದಿಗೆ ಕುಗ್ಗಿದ ಗಾತ್ರದ ಮಿದುಳು ಅಂಗಾಂಶವನ್ನು ಹೊಂದಿದ್ದ ಹೊರತಾಗಿಯೂ ಆ ವ್ಯಕ್ತಿಯು ಮದುವೆಯಾಗಿ ಎರಡು ಮಕ್ಕಳ ತಂದೆಯಾಗಿದ್ದು, ಪೌರ ಕಾರ್ಮಿಕನಾಗಿ ಕನಿಷ್ಟ ಬಾಹ್ಯವಾಗಿ ಆರೋಗ್ಯಕರ ಜೀವನವನ್ನು ನಡೆಸಿದ್ದನು. "ಇಂದಿನವರೆಗೂ ನಾನು ಇದರಲ್ಲಿ ಅದ್ಭುತವೆಂದು ಪರಿಗಣಿಸಿದ್ದೇನೆಂದರೆ ನಾವು ಜೀವಿಸಲು ಅಸಾಧ್ಯವೆಂದು ಭಾವಿಸುವ ಪರಿಸ್ಥಿತಿಯನ್ನು ಕೂಡಾ ಮಿದುಳು ಹೇಗೆ ನಿಭಾಯಿಸುವ ಸಾಮರ್ಥ್ಯ ಹೊಂದಿದೆ ಎಂಬುದು," ಎಂದ ನ್ಯಾಷನಲ್‌‌ ಹ್ಯೂಮನ್‌‌ ಜೀನೋಮ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ ಸಂಸ್ಥೆಯ ಶಿಶುಗಳ ಮಿದುಳುದೋಷಗಳ ತಜ್ಞ Dr. ಮ್ಯಾಕ್ಸ್‌‌ ಮ್ಯುಯೆಂಕೆ ಕೆಳಕಂಡಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದರು. "ದೀರ್ಘಾವಧಿಯಲ್ಲಿ ಎಂದರೆ ಸುಮಾರು ದಶಕಗಳ ಅವಧಿಯಲ್ಲಿ ಯಾವುದಾದರೂ ಚಟುವಟಿಕೆ ನಿಧಾನವಾಗಿ ನಡೆಯುತ್ತಿದ್ದರೆ, ಮಿದುಳಿನ ವಿವಿಧ ಭಾಗಗಳು ಪಕ್ಕಕ್ಕೆ ಸರಿಸಲ್ಪಟ್ಟ ಭಾಗಗಳಿಂದ ಸಾಧಾರಣವಾಗಿ ನೆರವೇರಿಸುತ್ತಿದ್ದ ಕಾರ್ಯಗಳನ್ನು ತಾವೇ ಕೈಗೆತ್ತಿಕೊಳ್ಳುತ್ತವೆ."[೧೧][೧೨]

ಜಲಮಸ್ತಿಷ್ಕ ರೋಗಪೀಡಿತ ಪ್ರಸಿದ್ಧ ವ್ಯಕ್ತಿಗಳು[ಬದಲಾಯಿಸಿ]

ಪ್ರಪ್ರಥಮ ಕೆನಡಾದ ಪ್ರಧಾನ ಮಂತ್ರಿ, ಸರ್‌ ಜಾನ್‌‌ A. ಮೆಕ್‌ಡೊನಾಲ್ಡ್‌‌ರು, ಜಲಮಸ್ತಿಷ್ಕ ರೋಗವನ್ನು ಜನ್ಮಜಾತವಾಗಿ ಪಡೆದ ಪುತ್ರಿಯೋರ್ವಳನ್ನು ಹೊಂದಿದ್ದರು.[೧೩]

ಲೇಖಕ ಷೆರ್ಮನ್‌ ಅಲೆಕ್ಸೀರವರು ಕೂಡಾ ಜನ್ಮಜಾತವಾಗಿ ಜಲಮಸ್ತಿಷ್ಕ ರೋಗವನ್ನು ಹೊಂದಿದ್ದು, ಅದರ ಬಗ್ಗೆ ಆತ ತಮ್ಮ ಆತ್ಮ ಚರಿತ್ರೆ ಮಾದರಿಯ ಕಿರುಕಾದಂಬರಿಯಾದ ದ ಆಬ್‌ಸೊಲ್ಯೂಟ್‌ಲಿ ಟ್ರೂ ಡೈರಿ ಆಫ್‌ ಪಾರ್ಟ್‌-ಟೈಮ್‌ ಇಂಡಿಯನ್‌ನಲ್ಲಿ ಬರೆದಿದ್ದಾರೆ.[೧೪]

ಇವನ್ನೂ ಗಮನಿಸಿ[ಬದಲಾಯಿಸಿ]

ಆಕರಗಳು[ಬದಲಾಯಿಸಿ]

 1. ೧.೦ ೧.೧ ೧.೨ ೧.೩ Alfred Aschoff, Paul Kremer, Bahram Hashemi, Stefan Kunze (October 1999). "The scientific history of hydrocephalus and its treatment". Neurosurgical Review. Springer. 22 (2–3): 67–93 [67]. doi:10.1007/s101430050035. ISSN 1437-2320.{{cite journal}}: CS1 maint: multiple names: authors list (link)
 2. "ಆರ್ಕೈವ್ ನಕಲು". Archived from the original on 2016-07-27. Retrieved 2010-08-12.
 3. ಈಟ್‌ ಯುವರ್‌ ವೇ ಟು ಎ ಬೆಟರ್‌ ಬ್ರೈನ್‌ ಫಾರ್‌ ಯುವರ್‌ ಬೇಬಿ Archived 2010-09-08 ವೇಬ್ಯಾಕ್ ಮೆಷಿನ್ ನಲ್ಲಿ. ಡಿಸೆಂಬರ್‌ 2005. ಅವಾಸ್ತವ ಕಲಿಕಾ ವ್ಯವಸ್ಥೆ (VLE)
 4. "ಜಲಮಸ್ತಿಷ್ಕ ರೋಗದ‌ ಮಾಹಿತಿ ಪಟ್ಟಿ" Archived 2016-07-27 ವೇಬ್ಯಾಕ್ ಮೆಷಿನ್ ನಲ್ಲಿ., ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ನ್ಯೂರೋಲಾಜಿಕಲ್‌ ಡಿಸ್‌ಆರ್ಡರ್ಸ್‌ ಅಂಡ್‌ ಸ್ಟ್ರೋಕ್‌. (ಆಗಸ್ಟ್ 2005)
 5. ಕ್ಯಾಬೊಟ್‌‌, ರಿಚರ್ಡ್‌ C. (1919) ಫಿಸಿಕಲ್‌ ಡಯಾಗ್ನಸಿಸ್‌‌ , ವಿಲಿಯಮ್‌ ವುಡ್‌‌ ಅಂಡ್‌ ಕಂಪೆನಿ, ನ್ಯೂಯಾರ್ಕ್‌‌, 7ನೇ ಆವೃತ್ತಿ, 527 ಪುಟಗಳು, ಪುಟ 5. (Google ಬುಕ್ಸ್‌‌)
 6. [17]
 7. wwww.spinabifidamoms.com
 8. "ಆರ್ಕೈವ್ ನಕಲು". Archived from the original on 2010-03-29. Retrieved 2010-08-12.
 9. Warf, Benjamin C. (2005). "Comparison of 1-year outcomes for the Chhabra and Codman-Hakim Micro Precision shunt systems in Uganda: a prospective study in 195 children". J Neurosurg (Pediatrics 4). 102 (4 Suppl): 358–362. doi:10.3171/ped.2005.102.4.0358. PMID 15926385. {{cite journal}}: Cite has empty unknown parameter: |coauthors= (help) http://thejns.org/doi/pdf/10.3171/ped.2005.102.4.0358
 10. "ಮ್ಯಾನ್‌ ವಿತ್‌ ಆಲ್‌ಮೋಸ್ಟ್‌ ನೋ ಬ್ರೈನ್‌ ಹ್ಯಾಸ್‌ ಲೆಡ್‌ ನಾರ್ಮಲ್‌ ಲೈಫ್‌‌", ಫಾಕ್ಸ್‌ ನ್ಯೂಸ್‌ (2007-07-25). ಇದನ್ನೂ ನೋಡಿ "ಮ್ಯಾನ್‌ ವಿತ್‌ ಟೈನಿ ಬ್ರೈನ್‌ ಷಾಕ್ಸ್‌ ಡಾಕ್ಟರ್ಸ್‌‌, NewScientist.com (2007-07-20); "ಟೈನಿ ಬ್ರೈನ್‌‌, ನಾರ್ಮಲ್‌ ಲೈಫ್‌", ಸೈನ್ಸ್‌ಡೈಲಿ (2007-07-24).
 11. ಅಪಸಾಮಾನ್ಯ ಮಿದುಳನ್ನು ಹೊಂದಿರುವ ಹೊರತಾಗಿಯೂ ವ್ಯಕ್ತಿಯೋರ್ವನು ಸಾಧಾರಣ ಜೀವನ ನಡೆಸುತ್ತಿದ್ದಾನೆ
 12. ಬ್ರೈನ್‌ ಆಫ್‌ ಎ ವೈಟ್‌-ಕಾಲರ್‌ ವರ್ಕರ್‌‌. ಫ್ಯೂಯಿಲ್ಲೆಟ್‌, L., ಡಫರ್‌, H. & ಪೆಲ್ಲೆಟಿಯರ್‌, J., et al. ದ ಲ್ಯಾನ್ಸೆಟ್‌‌, ಸಂಪುಟ 370, ಸಂಚಿಕೆ 9583, ಪುಟ 262, 21 ಜುಲೈ 2007
 13. "ಆರ್ಕೈವ್ ನಕಲು". Archived from the original on 2007-04-05. Retrieved 2010-08-12.
 14. http://www.startribune.com/entertainment/books/11435616.html

ಬಾಹ್ಯ ಕೊಂಡಿಗಳು[ಬದಲಾಯಿಸಿ]

 • [೧] ಜನ್ಮಜಾತ ಜಲಮಸ್ತಿಷ್ಕ ರೋಗವನ್ನು ಹೊಂದಿರುವ ಮಕ್ಕಳ ಕುಟುಂಬಗಳು ಹಾಗೂ ಪೋಷಕರಿಗೆ ಸಹಾಯ ಮಾಡುವ ಉದ್ದೇಶಕ್ಕೆ ಮೀಸಲಾದ ಜಾಲತಾಣ. ಜಲಮಸ್ತಿಷ್ಕ ರೋಗವೆಂದರೇನು ಎಂದು ವಿವರಿಸುವ ಸಾಧಾರಣ ವೈದ್ಯಕೀಯ ಮಾಹಿತಿಗಳೊಂದಿಗೆ, ಇದು ಈ ತರಹದ ಮಕ್ಕಳನ್ನು ಮನೆಯಲ್ಲಿ ಹೇಗೆ ನೋಡಿಕೊಳ್ಳಬೇಕು ಎಂಬ ಬಗ್ಗೆ ಗಮನ ಸೆಳೆಯುತ್ತದೆ. ಇದು ವ್ಯಕ್ತಿಗತ ಕಥನಗಳೂ ಸೇರಿದಂತೆ ಜಲಮಸ್ತಿಷ್ಕ ರೋಗದ ವಿವಿಧ ಮಗ್ಗಲುಗಳ ಬಗ್ಗೆ ಮಾಹಿತಿ ನೀಡುತ್ತದೆ.
 • ಇಂಟರ್‌ನ್ಯಾಷನಲ್‌ ಫೆಡರೇಷನ್‌ ಫಾರ್‌ ಸ್ಪೈನಾ ಬಿಫಿಡಾ ಅಂಡ್‌ ಹೈಡ್ರೋಸೆಫಾಲಸ್‌ ಸಂಸ್ಥೆಯು (IF), ರಾಷ್ಟ್ರೀಯ ಸ್ಪೈನಾ ಬಿಫಿಡಾ ಅಂಡ್‌ ಹೈಡ್ರೋಸೆಫಾಲಸ್‌ ಸಂಸ್ಥೆಗಳಿಗೆ ಆಶ್ರಯದಾತ ಸಂಸ್ಥೆ
 • USನ hydroassoc.org ಜಾಲತಾಣದಲ್ಲಿ ಹೈಡ್ರೋಸೆಫಾಲಸ್‌ ಅಸೋಸಿಯೇಷನ್‌ ಸಂಸ್ಥೆ
 • ಹೈಡ್ರೋಸೆಫಾಲಸ್‌ ಕ್ಲಿನಿಕಲ್‌ ರೀಸರ್ಚ್‌ ನೆಟ್‌ವರ್ಕ್‌‌ (HCRN) ಎಂಬುದೊಂದು ಉತ್ತರ ಅಮೇರಿಕಾದ ಅನೇಕ ಮುಂಚೂಣಿ ಶಿಶು ನರಶಸ್ತ್ರಚಿಕಿತ್ಸಾತಜ್ಞರ ಸಹಯೋಗದ ಬಹು-ಕೇಂದ್ರಗಳನ್ನು ಹೊಂದಿರುವ ವೈದ್ಯಕೀಯ ಸಂಶೋಧನಾ ಜಾಲವಾಗಿದೆ.
 • ಟೀಮ್‌ ಹೈಡ್ರೋ ಎಂಬುದು USನಲ್ಲಿ ಹೈಡ್ರೋಸೆಫಾಲಸ್‌ ಅಸೋಸಿಯೇಷನ್‌ ಸಂಸ್ಥೆಯ ಅಂಗೀಕೃತ ತಂಡವಾಗಿದ್ದು, ಪ್ರತಿವರ್ಷ ಅಲ್‌ಕಾಟ್ರಾಜ್‌ನಿಂದ ಸ್ಯಾನ್‌ ಫ್ರಾನ್ಸಿಸ್ಕೋವರೆಗೆ ಈಜುವುದರ ಮೂಲಕ ಚಿಕಿತ್ಸಾ ಪರಿಹಾರದ ಸಂಶೋಧನೆಗೆ ನಿಧಿ ಸಂಗ್ರಹಣೆ ಮಾಡಲು ಹಾಗೂ ಜಾಗೃತಿ ಮೂಡಿಸಲು ಯತ್ನಿಸುತ್ತಿದೆ