ಜನಪದ ಕ್ರೀಡೆಗಳು
- ಅಂಗಳದಲ್ಲಿ ಒಂದು ಕುಳಿ ತೆಗೆಯುತ್ತಾರೆ. ಕುಳಿಯಿಂದ ಸುಮಾರು ಇಪ್ಪತ್ತು ಇಪ್ಪತ್ತೈದು ಫೂಟುಗಳ ಅಂತರದ ಮೇಲೆ ಅಡ್ಡ ಗೆರೆಯೊಂದನ್ನು ಎಳೆದು, ಅಲ್ಲಿಂದ ಆಟಗಾರರು ಗೋಡಾ-ಎಂದು ತಮ್ಮ ಗೋಲಿಗಳನ್ನು ಕುಳಿಯತ್ತ ಬಿಡುವರು. ಯಾರ ಗೋಲಿ ಕುಳಿಯ ಹತ್ತರ ಬೀಳುವದೋ ಅವರು ಮೊದಲು ಕುಳಿ ತುಂಬುವರು. ಕುಳಿ ತುಂಬಿದವರು ಕುಳಿಯ ಹತ್ತಿರ ಕುಳಿತಯ ಇನ್ನೊಬ್ಬರ ಗೋಲಿಗೆ ಹೊಡೆಯುವರು.
- ಆಗ ಇನ್ನೊಬ್ಬ ಅವನ ಗೋಲಿ ಹೊಡೆತದಿಂದ ಎಷ್ಟು ದೂರ ಬೀಳುವುದೋ ಅಲ್ಲಿಂದ ತನ್ನ ಮುಷ್ಟಿ ಕಟ್ಟಿ ಮುಷ್ಟಿಯ ತುದಿಯಿಂದ ಗೋಲಿಯನ್ನು ತೊರಿ ಕುಳಿಯನ್ನು ತುಂಬಬೇಕು. ಕೈಮುಷ್ಟಿಯಿಂದ ಗೋಲಿ ತೂರುವುದಕ್ಕೆ “ಡೀಗು” ಎನ್ನುತ್ತಾರೆ. ಒಮ್ಮ ಗೋಲಿಗೆ ಹೊಡೆದ ಹೊಡೆತದ ಗುರಿಯನ್ನು ತಪ್ಪಿದರೆ, ಗೋಲಿ ಇದ್ದಲ್ಲಿಂದ ಮೇಲೆ ಹೇಳಿದ ರೀತಿಯಲ್ಲಿ ಗೋಲಿ ತೂರಿ ಕುಳಿ ತುಂಬಬೇಕು.
- ಒಮ್ಮೊಮ್ಮೆ ಗೋಲಿ ಕುಳಿಯಿಂದ ಹೊಡೆದ ಪರಿಣಾಮವಾಗಿ ಬಹಳ ದೂರ ಬಿದ್ದರೆ, ಮೂರು ಸಲ ಮುಷ್ಟಿಯಿಂದ ಡೀಗಲು ಅವಕಾಶ ಕೊಡುತ್ತಾರೆ. ಆಗ ಗೋಲಿ ಕುಳಿ ತುಂಬದೆ ಕುಳಿಯಿಂದ ಅಂತರದಲ್ಲಿಯೇ ಉಳಿದರೆ, ಮತ್ತೆ ಆಟಗಾರ ಇನ್ನೊಮ್ಮೆ ಕುಳಿಯ ಹತ್ತಿರ ಕುಳಿತು ಗೋಲಿಗೆ ಹೊಡೆದು ಓಡುಸುತ್ತಾನೆ. ಹೀಗೆ ಗೋಲಿಯನ್ನು ಮುಷ್ಟಿಯಿಂದ ಡೀಗುವವ ಕುಳಿ ತುಂಬುವವರೆಗೆ ಆಟ ಮುಂದುವರೆಯುತ್ತದೆ.
- ಆಡಲು ಬೇಕಾಗುವ ವಸ್ತುಗಳು-ಒಬ್ಬ ಆಟಗಾರನಿಗೆ 2 ಗೋಲಿಗಳಂತೆ ಗೋಲಿಗಳು ಆಟದ ವಿವರಣೆ ಮನೆಯಿಂದ ಹೊರಗಡೆ ಎಲ್ಲಿ ಸ್ಥಳವಿದೆಯೊ ಅಲ್ಲಿ ಆಡಬಹುದು ಗೋಲಿ ಆಟ. ಒಂದಕ್ಕೊಂದು ತಾಗಿದಾಗ ಪಳ ಪಳ ಎಂದು ಗೋಲಿಗಳು ಮಾಡುವ ಶಬ್ದ ಮಕ್ಕಳನ್ನೆಲ್ಲಾ ಆಕರ್ಷಿಸುತ್ತದೆ.ಒಂದು ಗೋಲಿಯಿಂದ ಇನ್ನೊಂದಕ್ಕೆ ಹೊಡೆಯುತ್ತಾ ಆಡುವಾಟವೇ ಗೋಲಿ ಆಟ. ಕೆಲವೆಡೆ ಗೋಟಿ ಎಂದೂ ಕರೆಯಲ್ಪಡುತ್ತದೆ ಈ ಆಟ. ಆಡುವ ವಿಧಾನ · ಈ ಆಟ ಆಡಲು ಕನಿಷ್ಟ 2 ಮಂದಿಗಿಂತ ಹೆಚ್ಚು ಮಂದಿ ಇರಬೇಕು. · ಒಂದು ವೃತ್ತವನ್ನು ರಚಿಸಬೇಕು. · ವೃತ್ತದಿಂದ 5 ಹೆಜ್ಜೆ ದೂರದಲ್ಲಿ ಒಂದು ಗೆರೆಯನ್ನು ಹಾಕಬೇಕು · ಆಟಗಾರರು ತಮ್ಮ ಗೋಲಿಯನ್ನು ವೃತ್ತದೊಳಗಡೆ ಹಾಕಬೇಕು ಹಾಗೂ 5 ಹೆಜ್ಜೆ ದೂರದ ಗೆರೆಯಲ್ಲಿ ನಿಂತು ವೃತ್ತದಲ್ಲಿರುವ ಗೋಲಿಗಳಿಗೆ ಹೊಡೆಯ ಬೇಕು. · ಹಾಗೆ ಹೊಡೆದಾಗ ಹೊಡೆದ ಗೋಲಿಯು ಇತರ ಗೋಲಿಗಳಿಗೆ ತಾಗದೆ ವೃತ್ತದಿಂದ ಹೊರಹೋದರೆ ಆ ಗೋಲಿ ಆತನಿಗೆ ಸಿಗುತ್ತದೆ. · ಗೋಲಿಯು ಬೇರೆ ಗೋಲಿಗಳಿಗೆ ತಾಗಿದಲ್ಲಿ ಮುಂದಿನ ಆಟಗಾರನ ಸರದಿ.ಡವ್ ಆಟವು ಈ ಆಟದ ಒಂದು ಪರ್ಯಾಯ ರೂಪವಾಗಿದೆ.
ಲಗೋರಿ
[ಬದಲಾಯಿಸಿ]- ನಮ್ಮ ನಾಡಿನಲ್ಲಿ ಹಲವಾರು ವರ್ಷಗಳಿಂದ ಮಕ್ಕಳಿಂದ ಹಿಡಿದು ಮುದುಕರ ತನಕ ಸಾಯಂಕಾಲ ಎಲ್ಲರೂ ಜೊತೆಗೂಡಿ ಆಡುತ್ತಿದ್ದ ಆಟ ಲಗೋರಿ[೧]. ಲಗೋರಿ !!! ಅಂತ ಕಿರುಚಿದಾಗ ಮೈ ಎಲ್ಲ 'ಜುಮ್' ಅನ್ನುವುದು. ಈಗ ಲಗೋರಿ ಆಡುವವರು ಅತಿ ಕಡಿಮೆ, ಗ್ರಾಮ ಪ್ರದೇಶಗಳಲ್ಲಿ ಮಾತ್ರ ಸಿಗುವವರು.
- ಈ ಆಟವನ್ನು ಇಬ್ಬರಿಗಿಂತ ಹೆಚ್ಚಾಗಿ ಎಷ್ಟು ಜನರು ಕೂಡ ಆಡಬಹುದು. ಅವರನ್ನು ಎರಡು ತಂಡಗಳಲ್ಲಿ ವಿಭಜಿಸುವವರು. ಮೊದಲನೆಯ ತಂಡದವರು ೭ ರಿಂದ ೯ ಕಲ್ಲುಗಳನ್ನು ಒಂದರ ಮೇಲೊಂದು ಜೋಡಿಸುವರು. ಹಾಗೆ ಜೋಡಿಸಿದ ಕಲ್ಲುಗಳಿಗೆ ಸ್ವಲ್ಪದೂರದಿಂದ ಮತ್ತೊಂದು ತಂಡದವರು ಒಂದು ಚೆಂಡನ್ನು ಎಸೆಯುವರು. ಆ ಚೆಂಡು ತಾಗಿ ಕಲ್ಲುಗಳು ಚದುರಿದಾಗ, ಮೊದಲನೆಯ ತಂಡದವರು ಅದನ್ನು ಮತ್ತೆ ಯಥಾಸ್ಥಿತಿಗೆ ತರಲು ಪ್ರಯತ್ನಿಸುವರು.
- ಅದನ್ನು ತಡೆಯುವುದೇ ಎದುರಾಳಿ ತಂಡದ ಗುರಿ. ಮೊದಲನೆಯ ತಂಡದವರು ಆ ಕಲ್ಲುಗಳನ್ನು ಜೋಡಿಸುವ ಪ್ರಯತ್ನದಲ್ಲಿರುವಾಗ ಎದುರಾಳಿ ತಂಡದವರು ಆ ಚೆಂಡನ್ನು ಯಾರೊಬ್ಬರಿಗೆ ತಾಗುವಂತೆ ಎಸೆದರೆ, ತಾಗಿದಾತ ಆಟದಿಂದ ಹೊರಗೆ ಹೋಗುತ್ತಾನೆ. ಹೀಗೆ ಎದುರಾಳಿಯ ಪ್ರತಿಯೊಬ್ಬರನ್ನು ಆಟದಿಂದ ಹೊರ ಕಳುಹಿಸುವುದೇ ಆಟದ ಗುರಿ. ಈ ಸಮಯದಲ್ಲಿ ಎದುರಾಳಿ ತಂಡವೇನಾದರು ಕಲ್ಲುಗಳನ್ನು ಜೋಡಿಸುವುದರಲ್ಲಿ ಯಶಸ್ವಿಯಾದಲ್ಲಿ ಆ ತಂಡವೇ ಈ ಆಟದಲ್ಲಿ ವಿಜಯಿಗಳು.
ವಿವಿಧ ಹೆಸರು
[ಬದಲಾಯಿಸಿ]ದೇಶದ ಇತರ ಭಾಗಗಳಲ್ಲಿ, ಇದೇ ಆಟವನ್ನು ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ:
- ಲಿಂಗೋರ್ಚ, ಲಗೋರಿ (ಮಹಾರಾಷ್ಟ್ರ)
- ಪಿತ್ತು (ಹರ್ಯಾಣ, ಪಂಜಾಬ್, ಚಂಡೀಘಢ ಹಾಗೂ ಉತ್ತರ ರಾಜಸ್ತಾನ)
- ಸೈಟೋಲಿಯ (ರಾಜಸ್ಥಾನ, ಬಿಹಾರ)
- ಸಾತೋಡಿಯು (ಗುಜರಾತ್)
- ಪಿತ್ತು (ಪಶ್ಚಿಮ ಬಂಗಾಳ, ಬಿಹಾರ)
- ಬಮ್ ಪಿತ್ತೋ (ಬಿಹಾರ)
- ಎಡು ಪೆಂಕುಳತ, ಡಿಕೋರಿ ಅಥವಾ ಪಿತ್ತು (ಆಂಧ್ರಪ್ರದೇಶ)
- ಡಬ್ಬಾ ಕಲಿ (ಕೇರಳ, ತೆಂಗಿನ ಎಲೆಗಳು ಮಾಡಿದ್ದ ಚೆಂಡನ್ನು ಬಳಸಿ ಆಡಲಾಗುತ್ತದೆ)
- ಎಜ್ಹು ಕಲ್ಲು (ತಮಿಳುನಾಡು)
- ಗರ್ಮಾನ್ (ಕಾಶ್ಮೀರ)
- ಪಿತು(ಕೇರಳ)
ಆಡುವ ಕ್ರಮ
[ಬದಲಾಯಿಸಿ]ಮನೆಯಂಗಳದಲ್ಲೋ, ಗದ್ದೆ ಬಯಲುಗಳಲ್ಲೋ ಹತ್ತಾರು ಮಕ್ಕಳು ಒಟ್ಟು ಸೇರಿದಾಗ ಹೆಂಚು ತುಂಡು, ಗೆರಟೆ, ಅಥವಾ ಚಪ್ಪಡಿ ಕಲ್ಲುಗಳನ್ನು ಒಂದರ ಮೇಲೆ ಒಂದು ಇಟ್ಟು ಆ ಕಾಲದಲ್ಲಿ ಪ್ರಚಲಿತದಲ್ಲಿದ್ದ ರಬ್ಬರ್ ಚೆಂಡು ,ಅಲ್ಲದಿದ್ದರೆ ಹುಲ್ಲನ್ನು ಮುದ್ದೆಯಾಗಿ ಮಾಡಿ ಮೇಲೆ ಕಾಗದ ಸುತ್ತಿ ಬಾಳೆಗಿಡದ ಒಣಗಿದ ಹಗ್ಗವನ್ನು ನೀರಿನಲ್ಲಿ ಮುಳುಗಿಸಿ, ತೇವ ಮಾಡಿ ಅದನ್ನು ಗಟ್ಟಿಯಾಗಿ ಸುತ್ತಿ ಚೆಂಡು ಮಾಡಿ ಲಗೋರಿ ಪ್ರಾರಂಭವಾಗುತ್ತಿತ್ತು. ಹೀಗೆ ಮಾನವ ತನ್ನ ಬೌದ್ಧಿಕ ಶಕ್ತಿಯಿಂದ ಅದಕ್ಕೂಂದು ರೂಪಕೊಟ್ಟು ಆಡುವ ಆಟಗಳೇ ಜಾನಪದ ಕ್ರೀಡೆಗಳಾಗಿ ಬೆಳದು ಬಂದವು ಹಳ್ಳಿಹೈದರ ಆಟದ ವಿಶೇಷತೆಗಳ ಬಗ್ಗೆ ಪ್ರದೇಶಗಳಿಗೆ ಹೊಂದಿಕೊಂಡಂತೆ ಆಟಗಳನ್ನು ಆಡುವುದನ್ನು ನೋಡಿತ್ತೇವೆ ಕಣ್ಣು ಮುಚ್ಚಾಲೆ,ಮರಕೋತಿ,ಕುಂಟಾಟ,ಗೋಲಿ, ಚಿನ್ನಿದಾಂಡು,ಗಾಳಿಪಟ, ನೀರಿನಲ್ಲಿ ಆಡುವ ಪೀಂಕ ಆಟ ಮುಂತಾದ ಇನ್ನು ನುರಾರೂ ಆಟಗಳು ಆದರೆ ಈ ಎಲ್ಲಾ ಆಟಗಳು ಜನಪದದಿಂದ ಮರೆಯಾಗುತ್ತಿದೆ. ಈ ದೃಷ್ಟಿಯಿಂದ ಜನಪದದಿಂದ ಮರೆಯಾಗುತ್ತಿರುವ ಆಟಗಳಲ್ಲಿ ಒಂದು.
ಲಗೋರಿ ಆಟದ ನಿಯಮಗಳು
[ಬದಲಾಯಿಸಿ]ನಿಯಮಗಳನ್ನು ಪಾಲಿಸಿ ಆಡಬೇಕಾಗುತ್ತದೆ ಅದರಲ್ಲಿ ಕೆಲವುಗಳು ಯಾವುದೆಂದರೇ ಆಟದಅಂಗಣ,ಅಂಗಣವನ್ನು ಅಥೀಕಾರಿಗಳು ಪರಿಶೀಲಿಸುವುದು ಅದಕ್ಕೆ ಉಪಹೋಗಿಸುವ ಸೂಕ್ತವಾದ ಸಲಕರಣೆಗಳು ಮತ್ತು ಅಂಗಣರಚಿಸುವುದು. ವಿವಿಧ ನಿಯಮಗಳು ಬಿಲ್ಡರ್ಸ್ ಹಾಗೂ ಫೀಲ್ಡರ್ಸ್ ನಿಯಮಗಳು ಆಟಗಾರರ ಬದಲಾವಣೆ ಪೌಲ್ಸ್(ತಪ್ಪುಗಳು), ದಂಡನೆ, ಟೈ(ಅಂಕ ಸಮವಾದಾಗ) ನಿಯಮಗಳನ್ನು ಲಗೋರಿ ಒಳಗೊಂಡಿದೆ.
- ಮೈದಾನದಲ್ಲಿ ಆಡುವ ಆಟ.
- ಎರಡು ತಂಡಗಳಿರುತ್ತವೆ.
- ಎರಡೂ ಗುಂಪಿನವರು ಕ್ರಿಕೆಟ್ ರಬ್ಬರ್ ಚೆಂಡನ್ನು ಹೆಚ್ಚಾಗಿ ಆಟಕ್ಕೆ ಬಳಸುತ್ತಾರೆ.
ಚಿನ್ನಿದಾಂಡು
[ಬದಲಾಯಿಸಿ]- ಈ ಆಟವನ್ನೇ ಬ್ರಿಟಿಷರು ನಮ್ಮನ್ನು ಆಡುವುದನ್ನು ನೋಡಿ, ಇದರ ಬಗ್ಗೆ ತೀಳಿದುಕೊಂಡು ತಮ್ಮ ದೇಶಕ್ಕೆ ಹೋಗಿ ಈ ಆಟವನ್ನು ಕ್ರಿಕೆಟ್ ಎಂದು ಕರೆದು ಜಗತ್ ವಿಕ್ಯತಿ ಮಾಡಿದರು. ಆದ್ದರಿಂದ ಕ್ರಿಕೆಟನ್ನು ಸ್ಥಾಪಿಸಿದ ದೇಶದ ಹೆಗ್ಗಳಿಕೆ ಭಾರತಕ್ಕೆ ದೊರಕಿದೆ. ಈ ಆಟದಲ್ಲಿ ಚೆಂಡಿನ(ball) ಬದಲಾಗಿ ಮರದಿಂದ ಮಡಲಾದ ಚಿಕ್ಕ ಚಿನ್ನಿ ಹಾಗೂ ಬ್ಯಾಟ್(bat)ಗೆ ಬದಲಾಗಿ ಮರದಿಂದಲೇ ತಯಾರಾದ ಬಡಿಗೆಯ ರೂಪದ ದಾಂಡನ್ನು ಬಳಸಲಾಗುತ್ತದೆ. ಚಿನ್ನಿ ದಾಂಡು ಅಥವಾ ಗಿಲ್ಲಿ ದಾಂಡು ಅಥವಾ ಹಾಣೆ ಗೆಂಡೆ ಅಥವಾ ಚಿನ್ನಿ ಕೋಲು ಒಂದು ಜನಪ್ರಿಯ ಗ್ರಾಮೀಣ ಆಟ. ಇದರಲ್ಲಿ ಮರದ ಕೋಲಿನಿಂದ ಮಾಡಿದ ಒಂದು ಚಿಕ್ಕ ಚಿನ್ನಿ ಅಥವಾ ಗಿಲ್ಲಿ ಅಥವಾ ಹಾಣೆ ಮತ್ತು ಸ್ವಲ್ಪ ದೊಡ್ಡದಾದ ಒಂದು ದಾಂಡು ಅಥವಾ ಕೋಲು ಇವುಗಳ ಸಹಾಯದಿಂದ ಆಡಲಾಗುತ್ತದೆ .
- ಇದನ್ನು ವೈಯಕ್ತಿಕವಾಗಿ ಅಥವಾ ತಂಡಗಳಾಗಿ ಆಡಬಹುದು. ವ್ಯವಸ್ಥೆ/ಸಲಕರಣೆಗಳು ಆಡಲು ಸಾಕಷ್ಟು ಜಾಗ. ಸುಮಾರು ಒಂದು ಗೇಣು ಉದ್ದದ ನೆಲದ ಮೇಲೆ ಕೊರೆದ ಒಂದು ಗುಂಡಿ / ಕುಳಿ / ಉಳ್ಳ. ಗುಂಡಿಯಷ್ಟೇ ಉದ್ದವಾದ ಮರದ ಕೋಲಿನಿಂದ ಮಾಡಿದ ಚಿನ್ನಿ / ಹಾಣೆ / ಗಿಲ್ಲಿ. ಇದರ ಎರಡೂ ಬದಿ ಚೂಪಾಗಿರಬೇಕು. ಚಿನ್ನಿಗಿಂತ ಕನಿಷ್ಠ ಎರಡೂವರೆ-ಮೂರು ಪಟ್ಟು ಉದ್ದವಾದ, ಮರದ ಕೋಲಿನಿಂದ ಮಾಡಿದ ನೇರವಾದ ದಾಂಡು.
ಆಟದ ನಿಯಮಗಳು
[ಬದಲಾಯಿಸಿ]- ಆಟಗಾರನು ಗುಂಡಿಯ ಮೇಲೆ ಅಡ್ಡವಾಗಿ ಚಿನ್ನಿಯನ್ನು ಇಡಬೇಕು. ಎದುರು ತಂಡದ ಆಟಗಾರರು ಸನ್ನದ್ಧರಾಗಿರುವುದನ್ನು ತಿಳಿಯಲು ಹೋ ಎಂದು ಕೂಗುವ ರೂಢಿಯಿದೆ. ಎದುರು ತಂಡದವರು ಹೋ ಎಂದು ಉತ್ತರಿಸಿದ ಮೇಲೆ ಚಿನ್ನಿಯ ಕೆಳಭಾಗದಲ್ಲಿ ದಾಂಡನ್ನಿಟ್ಟು ಚಿನ್ನಿಯನ್ನು ಆದಷ್ಟು ದೂರ ಚಿಮ್ಮಬೇಕು. ನೆಲಕ್ಕೆ ಬೀಳುವ ಮೊದಲು ಅದನ್ನು ಎದುರು ತಂಡದ ಆಟಗಾರರು ಹಿಡಿಯಬಹುದು.
- ಹೀಗೆ ಹಿಡಿದರೆ ಆಟಗಾರ ತನ್ನ ಪಾಳಿ ಕಳೆದುಕೊಂಡಂತೆ. ಎದುರು ತಂಡದವರಿಗೆ ಅದನ್ನು ಹಿಡಿಯಲಾಗದಿದ್ದರೆ ದಾಂಡನ್ನು ಗುಂಡಿಯಿಂದ ಒಂದು ದಾಂಡಿನಷ್ಟು ದೂರ ಹಿಂದೆ ಇಡಬೇಕು. ಎದುರು ತಂಡದ ಯಾವುದಾದರೂ (ಅಥವಾ ಚಿನ್ನಿ ಬಿದ್ದ ಸ್ಥಳಕ್ಕೆ ಹತ್ತಿರವಿದ್ದ) ಆಟಗಾರ ಅದಕ್ಕೆ ಚಿನ್ನಿ ಬಿದ್ದ ಸ್ಥಳದಿಂದ ಹೊಡೆಯಬೇಕು. ಚಿನ್ನಿ ದಾಂಡಿಗೆ ಮುಟ್ಟಿದರೆ ಆಟಗಾರ ತನ್ನ ಪಾಳಿಯನ್ನು ಕಳೆದುಕೊಂಡಂತೆ. ಚಿನ್ನಿ ಗುಂಡಿಯ ಒಳಗೆ ಬಿದ್ದರೆ ಕೂಡ ಆಟಗಾರ ತನ್ನ ಪಾಳಿಯನ್ನು ಕಳೆದುಕೊಂಡಂತೆ.
- ಚಿನ್ನಿ ಗುಂಡಿಯಿಂದ ಒಂದು ಚಿನ್ನಿಯಷ್ಟು ದೂರದಲ್ಲಿ ಬಿದ್ದರೆ ಆಟಗಾರ ಎಡಗೈಯಲ್ಲಿ ಆಟ ಮುಂದುವರೆಸಬೇಕು. ಆಟಗಾರನು ಚಿನ್ನಿಯನ್ನು ದಾಂಡಿನಿಂದ ಮೇಲಕ್ಕೆ ಚಿಮ್ಮಿಸಿ ಚಿನ್ನಿ ಗಾಳಿಯಲ್ಲಿರುವಾಗ ಅದಕ್ಕೆ ಹೊಡೆಯಬೇಕು. ಗಾಳಿಯಲ್ಲಿರುವಾಗ ಎಷ್ಟು ಸಲ ಬೇಕಾದರೂ ಹೊಡೆಯಬಹುದು. ಹೀಗೆ ಮೇಲೆ ಚಿಮ್ಮಿಸಿದಾಗ ಎದುರು ತಂಡದ ಆಟಗಾರರು ಚಿನ್ನಿಯನ್ನು ಹಿಡಿದರೆ ಆಟಗಾರ ತನ್ನ ಪಾಳಿ ಕಳೆದುಕೊಂಡಂತೆ. ಮೂರು ಬಾರಿ ಚಿನ್ನಿಯನ್ನು ಹೀಗೆ ಹೊಡೆಯಲಾಗದಿದ್ದರೆ ಆಟಗಾರ ಪಾಳಿ ಕಳೆದುಕೊಂಡಂತೆ.
- ಚಿನ್ನಿಯನ್ನು ಎರಡಕ್ಕಿಂತ ಹೆಚ್ಚು ಬಾರಿ ಹೊಡೆದರೆ ಗಿಲ್ಲಿ ಎಂದು ಕರೆಯಲಾಗುತ್ತದೆ. (ಎರಡು ಬಾರಿ ಹೊಡೆದರೆ ಒಂದು ಗಿಲ್ಲಿ, ಮೂರು ಬಾರಿ ಹೊಡೆದರೆ ಎರಡು ಗಿಲ್ಲಿ.. ಹೀಗೆ. ಸ್ಥಳದಿಂದ ಸ್ಥಳಕ್ಕೆ ಈ ನಿಯಮ ಬದಲಾಗಬಹುದು) ಚಿನ್ನಿ ಬಿದ್ದ ಸ್ಥಳದಿಂದ ಗುಂಡಿಯವರೆಗಿನ ದೂರವನ್ನು ಆಟಗಾರ ಊಹಿಸಬೇಕು. ಗಿಲ್ಲಿ ಆಗಿದ್ದರೆ ಚಿನ್ನಿಯಿಂದ ಅಳೆಯಬೇಕು. ಎಷ್ಟು ಬಾರಿ ಗಿಲ್ಲಿಯಾಗಿದೆ ಯೋ ಅಷ್ಟರಿಂದ ಅಂಕಗಳನ್ನು ಗುಣಿಸಬೇಕು.
- ಗಿಲ್ಲಿ ಆಗಿಲ್ಲದಿದ್ದರೆ ದಾಂಡಿನಿಂದ ಅಳೆಯಬೇಕು. ಊಹಿಸಿದ್ದಕ್ಕಿಂತ ಕಡಿಮೆ ದೂರವಿದ್ದರೆ ಆಟಗಾರ ಪಾಳಿ ಕಳೆದುಕೊಂಡಂತೆ. ಸರಿಯಾಗಿ ಊಹಿಸಿದರೆ ಆಟಗಾರ ಅಥವಾ ಅವನ ತಂಡಕ್ಕೆ ಅಷ್ಟು ಅಂಕಗಳು ದೊರೆತಂತೆ. ಮೊದಲೇ ನಿರ್ಧರಿಸಿದ ಅಂಕವನ್ನು ತಲುಪುವವರೆಗೆ, ಅಥವಾ ಯಾರು/ಯಾವ ತಂಡ ಹೆಚ್ಚು ಅಂಕ ಗಳಿಸಿರುತ್ತದೆಯೋ ಆ ಆಟಗಾರ / ತಂಡ ಗೆದ್ದಂತೆ.
ಬುಗುರಿ
[ಬದಲಾಯಿಸಿ]ಸಾಮಾನ್ಯವಾಗಿ ಗಂಡು ಮಕ್ಕಳು ಹಳ್ಳಿಗಳಲ್ಲಿ ಬುಗುರಿ ಆಟವನ್ನು ಹೆಚ್ಚಾಗಿ ಆಡುತ್ತಾರೆ. ಈ ಬುಗುರಿ ಆಟಕ್ಕೆ ಇತಿಹಾಸದ ಹಿನ್ನೆಲೆ ಮಹಾಭಾರತ ಕಥೆಯಲ್ಲಿ ಪಾಂಡವರು ಮತ್ತು ಕೌರವರ ಆಟದ ಸನ್ನಿವೇಶದಲ್ಲಿ ಕಾಣಿಸುತ್ತದೆ.
ಬುಗುರಿ ಆಟದ ನಿಯಮ ಮತ್ತು ರೀತಿ
[ಬದಲಾಯಿಸಿ]- ಮೊದಲು ಹುಡಗರು ಬುಗುರಿಯನ್ನು ದಾರದಿಂದ ಸುತ್ತಿ ತಕ್ಷಣ ನೆಲಕ್ಕೆ ಹಾಕಿ ನಂತರ ಕೈಯಲ್ಲಿ ಹಿಡಿಯುತ್ತಾರೆ. ಮಿಕ್ಕವರು ನೆಲದಲ್ಲಿ ಬಿದ್ದ ಬುಗುರಿಗೆ ಗುರಿ ಇಟ್ಟು ಹೋಡೆದು ತೂತು ಮಾಡುತ್ತಾರೆ.
- ಹೀಗೆಯೇ ಆಟ ಮುಂದುವರೆಯುತ್ತದೆ. ಈ ಆಟದಲ್ಲಿ ಬುಗುರಿಗಳು ಎರಡು ಹೋಳು ಆಗುವುದು ಸರ್ವೇ ಸಾಮಾನ್ಯ. ನೆಲಕ್ಕೆ ಬುಗುರಿ ಬೀಳದ ಹಾಗೆ ಕ್ಯೆಲ್ಲಿ ಹಿಡಿದರೆ ಅದಕ್ಕೆ "ಅಂತರ ಮಂಗ" ಎನ್ನುತ್ತಾರೆ. ಆಟಗಾರನ ಅನುಭವದಿಂದ ಬುಗುರಿಯನ್ನು ಅನೇಕ ರೀತಿ ಆಡಿಸುತ್ತಾನೆ. ಇದಕ್ಕೆ ಬೇಕಾದದ್ದು ದಾರ ಹಾಗೂ ಬುಗುರಿ. ಇದನ್ನು ಸರಿಯಾಗಿ ಆಡಿಸಲು ನೈಪುಣ್ಯತೆ ಬೇಕು.
ಬೇಕಾಗುವ ಸಲಕರಣಗಳು
[ಬದಲಾಯಿಸಿ]- ಬುಗುರಿ .
- ಉದ್ದನೆಯ ದಾರ .
ಘಟಕಗಳು
[ಬದಲಾಯಿಸಿ]ಮರದ ಕಟ್ಟಿಗೆ ಮೊಳೆ ತುದಿ ಸ್ಟ್ರಿಂಗ್ (ಮೇಲ್ಭಾಗದ ಕಿರೀಟವನ್ನು ಸುತ್ತಲೂ ಸುತ್ತುವಂತೆ, ಆಟಗಾರನು ಎಸೆಯಲ್ಪಟ್ಟಂತೆ ಮೇಲಕ್ಕೆ ತಿರುಗಲು ಅವಕಾಶ ನೀಡುತ್ತದೆ)
ಆಡುವ ವಿಧಾನ
ಈ ಆಟವನ್ನಾಡಲು ಕನಿಷ್ಟ 5 ಮಂದಿಯಾದರೂ ಬೇಕು.
ಆಟಗಾರರು ಮೊದಲಿಗೆ ಒಂದು ದೊಡ್ಡ ವೃತ್ತವನ್ನು ನೆಲದಲ್ಲಿ ಬರೆಯಬೇಕು
ಆನಂತರ ಎಲ್ಲರೂ ತಮ್ಮ ತಮ್ಮ ಬುಗುರಿಗಳಿಗೆ ಚಾಟಿಯನ್ನು ಸುತ್ತಿ, ಬುಗುರಿಯನ್ನು ವೃತ್ತದ ಒಳಗದೆ ಆಡಿಸಬೇಕು.
ನಂತರ ಚಾಟಿಯ ಸಹಾಯದಿಂದ ಬುಗುರಿಯನ್ನು ಮೇಲಕ್ಕೆತ್ತಬೇಕು, ಇದನ್ನು ಅಂತರ್ಚಾಟಿ ಎನ್ನುತ್ತಾರೆ.
ಕೊನೆಯದಾಗಿ ಉಳಿದವನ ಬುಗುರಿಯನ್ನು ಎಲ್ಲಾ ಆಟಗಾರರು ಸೇರಿ ತಮ್ಮ ತಮ್ಮ ಬುಗುರಿಯನ್ನುಪಯೋಗಿಸಿ ಹೊರ ತರಲು ಪ್ರಯತ್ನಿಸಬೆಕು, ಇದನ್ನು ಗುನ್ನಾ ಎನ್ನುತ್ತಾರೆ
ಆಟಗಾರರಿಗೆ 3 ಅವಕಾಶಗಳಿರುತ್ತವೆ, ಈ ಮೂರು ಅವಕಾಶಗಳಲ್ಲೂ ಆತನ ಬುಗುರಿಯನ್ನು ಹೊರತರಲಾಗದಿದ್ದಲ್ಲಿ ಆಟವನ್ನು ಮೊದಲಿಂದ ಪ್ರಾರಂಭಿಸಲಾಗುತ್ತದೆ.
ಇದನ್ನು ನೋಡಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]