ಗಾಳಿಪಟ
ಗಾಳಿಪಟ ಎಂಬುದು ಕಾಗದ, ಪ್ಲಾಸ್ಟಿಕ್ ಅಥವಾ ಬಟ್ಟೆಯಿಂದ ತಯಾರಿಸಲ್ಪಟ್ಟ, ಗಾಳಿಯ ಸಹಾಯದಿಂದ ಹಾರುವ, ಅದಕ್ಕೆ ಕಟ್ಟಿದ ದಾರದಿಂದ ನಿಯಂತ್ರಿಸಬಹುದಾದ ಒಂದು ಸಾಧನ. ಪತಂಗ ಎಂದೂ ಇದು ಕರೆಯಲ್ಪಡುತ್ತದೆ. ಪಟದ ಕೆಳಗಿನಿಂದ ತಳ್ಳುವ ಗಾಳಿಯಿಂದಾಗಿ ಹಾರಲ್ಪಡುವ ಈ ಕಾಗದ, ಇದಕ್ಕೆ ಕಟ್ಟಿದ ದಾರವನ್ನು ಹಿಡಿದವರಿಂದ ಕ್ರಮಿಸಬೇಕಾದ ದೂರ ಮತ್ತು ಎತ್ತರವನ್ನು ನಿಯಂತ್ರಿಸಲ್ಪಡುತ್ತದೆ. ಗಾಳಿಪಟವನ್ನು ಒಂದು ಆಟವಾಗಿಯೂ, ಸ್ಪರ್ಧೆಯಾಗಿಯೂ, ಕಲೆಯಾಗಿಯೂ, ಸಂಕೇತವಾಗಿಯೂ ಹಾರಿಸುವ ಪದ್ದತಿ ಇದೆ.
ಇತಿಹಾಸ:
[ಬದಲಾಯಿಸಿ]ಗಾಳಿಪಟವನ್ನು ಐದನೇ ಶತಮಾನದ ಸುಮಾರಿಗೆ ಚೀನಾ ದೇಶದಲ್ಲಿ ಕಂಡುಹಿಡಿಯಲಾಯಿತು ಎಂದು ಹೇಳಲಾಗುತ್ತದೆ. [೧]
ತಯಾರಿಸುವ ವಿಧಾನ:
[ಬದಲಾಯಿಸಿ]ಸಾಮಾನ್ಯವಾಗಿ ಬಣ್ಣದ ಕಾಗದ, ತೆಳು ಪ್ಲಾಸ್ಟಿಕ್ ಹಾಳೆ ಅಥವಾ ಬಟ್ಟೆಯನ್ನು ಬಳಸಿ, ಬಿದಿರಿನ ಕಡ್ಡಿಗಳಿಂದ ಅದು ಹಾರಲು ಅಗತ್ಯವಿರುವ ಸೂತ್ರವನ್ನು ಬಳಸಿ ಬಂಧಿಸಿ ಗಾಳಿಪಟ ತಯಾರಿಸಲಾಗುತ್ತದೆ. ಒಂದು ಉದ್ದನೆಯ ದಾರವನ್ನು ಇದಕ್ಕೆ ಕಟ್ಟಿ ಗಾಳಿ ಜಾಸ್ತಿ ಇರುವ ಪ್ರದೇಶಕ್ಕೆ ಒಯ್ದು ಹಾರಿಸಲಾಗುತ್ತದೆ. ಈ ಗಾಳಿಪಟದ ತಳಕ್ಕೆ ಕೆಲವೊಮ್ಮೆ ಅಲಂಕಾರಿಕವಾಗಿ ಮೂರ್ನಾಲ್ಕು ಪಟ್ಟಿಗಳನ್ನು ಕಟ್ಟಲಾಗುತ್ತದೆ. ಇದಕ್ಕೆ ಬಾಲಂಗೋಚಿ ಎಂದು ಕರೆಯುತ್ತಾರೆ. ಗಾಳಿಪಟವು ಸಾಮಾನ್ಯವಾಗಿ ಚೌಕಾಕಾರದಲ್ಲಿದ್ದರೂ ವಿವಿಧ ಆಕಾರ ಮತ್ತು ಗಾತ್ರಗಳಲ್ಲಿಯೂ ಇದನ್ನು ಮಾಡಬಹುದು.
ಬಳಕೆ
[ಬದಲಾಯಿಸಿ]ಭಾರತದಲ್ಲಿ ಹಲವು ಭಾಗಗಳಲ್ಲಿ ಮಕರ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಗಾಳಿಪಟವನ್ನು ಹಾರಿಸುವ ಪದ್ದತಿ ಇದೆ. ಹಾಗೆಯೇ ಅನೇಕ ಭಾಗಗಳಲ್ಲಿ, ಸಾಮಾನ್ಯವಾಗಿ [ಹಬ್ಬ] ಅಥವಾ [ಜಾತ್ರೆ]ಯ ಸಂದರ್ಭಗಳಲ್ಲಿ, ಗಾಳಿಪಟ ಉತ್ಸವ ಜರುಗುತ್ತದೆ. ಇಂತಹ ಉತ್ಸವಗಳಲ್ಲಿ ದೊಡ್ಡ ದೊಡ್ಡ ಗಾತ್ರದ, ಸಂಸ್ಕೃತಿ-ಸಂಭ್ರಮವನ್ನು ಬಿಂಬಿಸುವ ಗಾಳಿಪಟಗಳನ್ನು ಹಾರಿಸಲಾಗುತ್ತದೆ. ವಿಶೇಷವಾದ ಗಾಳಿಪಟಗಳಿಗೆ ಬಹುಮಾನ ಕೊಡುವ ಗಾಳಿಪಟ ಸ್ಫರ್ಧೆ ಸಹ ನಡೆಸಲಾಗುತ್ತದೆ. [೨]
---
- ↑ Yinke, Deng (2005). Ancient Chinese inventions. Cambridge: Cambridge University Press. p. 122. ISBN 978-0-521-18692-6.
- ↑ "ಆರ್ಕೈವ್ ನಕಲು". Archived from the original on 2021-04-20. Retrieved 2013-11-17.