ಚಿಲ್ಕ ಸರೋವರ
ಚಿಲ್ಕ ಸರೋವರ | |
---|---|
ನಿರ್ದೇಶಾಂಕಗಳು | 19°43′N 85°19′E / 19.717°N 85.317°E |
Brackish | |
ಒಳಹರಿವು | 35 streams including the Bhargavi, Daya, Makra, Malaguni and Nuna rivers[೧] |
ಹೊರಹರಿವು | old mouth at Arakhakuda, new mouth at Satapada to Bay of Bengal |
ಕ್ಯಾಚ್ಮೆಂಟ್ ಪ್ರದೇಶ | 3,560 km2 (1,370 sq mi) |
Basin countries | India |
ಗರಿಷ್ಠ ಉದ್ದ | 64.3 km (40.0 mi) |
min.: 740 km2 (286 sq mi) max.: 1,165 km2 (450 sq mi) | |
ಗರಿಷ್ಠ ಆಳ | 4.2 m (13.8 ft) |
ನೀರಿನ ಪ್ರಮಾಣ | 4 km3 (3,200,000 acre⋅ft) |
ಮೇಲ್ಮೈ ಎತ್ತರ | 0 – 2 m (6.6 ft) |
Islands | ಟೆಂಪ್ಲೇಟು:Km2 to mi2: Badakuda, Honeymoon, Kalijai Hill, Kanthapantha, Krushnaprasadrah (Old Parikuda), Nalabana, Nuapara and Sanakuda. |
ವಸಾಹತುಗಳು | Puri and Satpara[೨] |
ಉಲ್ಲೇಖಗಳು | [೧][೨] |
ಹರಿದು ಬಂಗಾಳ ಕೊಲ್ಲಿಗೆ ಹೋಗಿ ಸೇರುವ, ದಯಾ ನದಿಯ ಮುಖ ಭಾಗದಲ್ಲಿರುವ, ಭಾರತದ ಪೂರ್ವ ಕರಾವಳಿಯ ಒಡಿಶಾ ರಾಜ್ಯದ ಪುರಿ, ಖುರ್ದಾ ಮತ್ತು ಗಂಜಾಂ ಜಿಲ್ಲೆಗಳುದ್ದಕ್ಕೂ ಹರಡಿಕೊಂಡಿರುವ ಚಿಲ್ಕ ಸರೋವರ (ಚಿಲಿಕ ಸರೋವರ ) ಒಂದು ಉಪ್ಪು ನೀರಿನ ಸರೋವರವಾಗಿದೆ. ಅದು ಭಾರತದಲ್ಲೇ ಅತ್ಯಂತ ದೊಡ್ಡ ಕರಾವಳಿಯ ನೀರಿನ ಪ್ರದೇಶವಾಗಿದೆ ಹಾಗೂ ವಿಶ್ವದಲ್ಲೇ ಎರಡನೆಯ ಅತಿ ವಿಶಾಲವಾದ ಜಲಾವೃತ ಪ್ರದೇಶವಾಗಿದೆ.[೩][೪]
ಇತಿವೃತ್ತ
[ಬದಲಾಯಿಸಿ]- ಭಾರತೀಯ ಉಪಖಂಡದಲ್ಲಿ ವಲಸೆ ಬರುವ ಪಕ್ಷಿಗಳಿಗೆ ಅದು ಚಳಿಗಾಲದ ಆಶ್ರಯದಾಣ. ಈ ಸರೋವರವು ಅಳಿವಿನ ಅಂಚಿನಲ್ಲಿರುವ ಅನೇಕ ಗಿಡಗಳು ಹಾಗೂ ಪ್ರಾಣಿಗಳ ತಳಿಗಳಿಗೆ ಆಶ್ರಯ ಸ್ಥಾನವಾಗಿದೆ.
- ವಿಶಾಲ ಮೀನುಗಾರಿಕಾ ಸಂಪನ್ಮೂಲದ ಸಹಿತ ಪರಿಸರ ವ್ಯವಸ್ಥೆಯನ್ನೂ ಒಳಗೊಂಡಿರುವ ಈ ಸರೋವರ ತನ್ನ ದಡ ಮತ್ತು ದ್ವೀಪಗಳಲ್ಲಿರುವ 132 ಹಳ್ಳಿಗಳಲ್ಲಿ ವಾಸಿಸುವ 150,000 ಕ್ಕಿಂತಲೂ ಹೆಚ್ಚು ಬೆಸ್ತ ಜನಾಂಗದ ಸಮೂಹವನ್ನು ಇದು ಪೊರೆಯುತ್ತಿದೆ.[೭][೮].
ವಲಸೆ ಬರುವ ಅತ್ಯಧಿಕ ಋತುಮಾನದಲ್ಲಿ ಪಕ್ಷಿಗಳ 160 ಕ್ಕೂ ಹೆಚ್ಚು ತಳಿಗಳನ್ನು ಈ ಖಾರಿಯು ಕಾಪಾಡುತ್ತದೆ.
- ಲಡಕ್, ಹಿಮಾಲಯ ಪರ್ವತಗಳು, ಮಧ್ಯ ಹಾಗೂ ಅಗ್ನೇಯ ಏಷಿಯಾ, ಮಂಗೋಲಿಯಾದ ಕಿರ್ಘಿಜ್ ನ ಭೂಪ್ರದೇಶಗಳು, ರಷಿಯಾ ದ ಬಹುದೂರದ ಪ್ರದೇಶಗಳೂ ಅಲ್ಲದೆ, ಕಾಸ್ಪಿಯನ್ ಸಮುದ್ರ, ಬೈಕಲ್ ಸರೋವರ ಮತ್ತು ಆರಲ್ ಸಾಗರದಂತಹ ಹೆಚ್ಚು ದೂರದ ಸ್ಥಳಗಳಿಂದಲೂ ಪಕ್ಷಿಗಳು ಇಲ್ಲಿಗೆ ಬರುತ್ತವೆ. ಈ ಪಕ್ಷಿಗಳು ಗಣನೀಯ ದೂರಗಳನ್ನು ಕ್ರಮಿಸುತ್ತವೆ.
- ಆದರೆ ಚಿಲ್ಕ ನದಿಯನ್ನು ತಲುಪಲು, 12,000 ಕಿ.ಮೀ. ಗಳಿಗೂ ಸಾಧ್ಯತೆಯ ನೇರ ಪಥಗಳಿಗಿಂತ ದೂರದ ಮಾರ್ಗಗಳನ್ನು ಬಹುಶಃ ಈ ವಲಸೆ ಬರುವ ಪಕ್ಷಿಗಳು ಅನುಸರಿಸುತ್ತವೆ ಎಂಬುದನ್ನು ಇಲ್ಲಿ ವಿಶೇಷವಾಗಿ ಪ್ರಸ್ತಾಪಿಸಬೇಕಾಗುತ್ತದೆ. 1981 ರಲ್ಲಿ, ಚಿಲ್ಕ ಸರೋವರವನ್ನು ರಾಮ್ಸಾರ್ ಕನ್ವೆನ್ಷನ್ ಅಡಿ ಮೊದಲ ಭಾರತೀಯ ಅಂತರಾಷ್ಟ್ರೀಯ ಪ್ರಾಮುಖ್ಯತೆಯ ಜೌಗು ಪ್ರದೇಶವೆಂದು ಪರಿಗಣಿಸಲಾಯಿತು.[೯][೧೦]
- ಒಂದು ಸಮೀಕ್ಷೆಯ ಪ್ರಕಾರ, ಪಕ್ಷಿಗಳಲ್ಲಿ ಶೇಕಡಾ 45 ರಷ್ಟು ನೈಸರ್ಗಿಕವಾಗಿ ಭೂ ವಾಸಿಗಳು, ಶೇಕಡಾ 32 ರಷ್ಟು ನೀರ್ಕೋಳಿಗಳು ಹಾಗೂ ಶೇಕಡಾ 23 ರಷ್ಟು ಉದ್ದ ಕಾಲಿನ ಪಕ್ಷಿಗಳು. ಈ ನೀರಿನ ಪ್ರದೇಶವು ಬೇಟೆಯಾಡುವ ಪಕ್ಷಿಗಳ 14 ವಿಧಗಳಿಗೆ ಆಶ್ರಯ ತಾಣವೂ ಆಗಿದೆ. ಸುಮಾರು 135 ಅಪರೂಪದ ಹಾಗೂ ಅಪಾಯದ ಅಂಚಿನಲ್ಲಿರುವ ಇರ್ರವಾಡಿ ಡಾಲ್ಫಿನ್ ಗಳೂ ಸಹ ವರದಿ ಮಾಡಲ್ಪಟ್ಟಿವೆ. ಜೊತೆಗೆ, ಸರೀಸೃಪಗಳು ಮತ್ತು ಭೂ ಜಲಚರಗಳ ಸುಮಾರ 37 ವಿವಿಧ ತಳಿಗಳನ್ನು ಈ ಖಾರಿಯು ಕಾಪಾಡುತ್ತದೆ.
- ಹೆಚ್ಚು ಫಲವತ್ತಾದ ಚಿಲ್ಕ ಖಾರಿಯ ಪರಿಸರ ವ್ಯವಸ್ಥೆಯು ತನ್ನ ಸಮೃದ್ಧ ಮೀನುಗಾರಿಕಾ ಸಂಪನ್ಮೂಲಗಳಿಂದ ಈ ನೀರುಳ್ಳ ಪ್ರದೇಶದ ಹತ್ತಿರ ಹಾಗೂ ಸುತ್ತಮುತ್ತಲೂ ವಾಸಿಸುವ ಮೀನುಗಾರರಿಗೆ ಜೀವನಾಧಾರವಾಗಿ ಕಾಪಾಡುತ್ತಿದೆ. ಅನುಕ್ರಮವಾಗಿ, ಮಳೆಗಾಲ ಮತ್ತು ಬೇಸಿಗೆಯ ಅವಧಿಯಲ್ಲಿ 1165 ರಿಂದ 906 km2 ನಡುವಿನ ವ್ಯಾಪ್ತಿಯಲ್ಲಿ ಖಾರಿಯ ಜಲಪ್ರದೇಶವು ಹರಡಿರುತ್ತದೆ.
- ಮೊಟ್ಟೊ ಹಳ್ಳಿಯ ಬಳಿ, ಒಂದು 32 ಕಿ.ಮೀ ಉದ್ದದ, ಇಕ್ಕಟ್ಟಾದ, ಹೊರ ಕಾಲುವೆಯು ಈ ಖಾರಿಯನ್ನು ಬಂಗಾಳ ಕೊಲ್ಲಿಗೆ ಜೋಡಿಸುತ್ತದೆ, ಇತ್ತೀಚೆಗೆ ಈ ನೀರಿನ ಪ್ರದೇಶಕ್ಕೆ ಜೀವನದ ಹೊಸ ಬಿಡುಗಡೆಯನ್ನು ತಂದ CDA ದಿಂದ ಒಂದು ಹೊಸ ನದಿಯ ಮೂಲವು ತೆರೆಯಲ್ಪಟ್ಟಿದೆ.
ಅತಿ ಸೂಕ್ಷ್ಮ ಸಮುದ್ರದ ಕಳೆಗಳು, ಸಮುದ್ರದ ಪಾಚಿಗಳು, ಸಮುದ್ರದ ಹುಲ್ಲುಗಳು, ಮೀನುಗಳು ಹಾಗೂ ಏಡಿಗತಳನ್ನು ಸಹ ಉಪ್ಪು ನೀರುಳ್ಳ ಚಿಲ್ಕ ಖಾರಿಯಲ್ಲಿ ಅಭಿವೃದ್ಧಿ ಹೊಂದುತ್ತವೆ.
ಇತಿಹಾಸ
[ಬದಲಾಯಿಸಿ]- ಪ್ಲೈಸ್ಟೋಸೀನ್ ಕಾಲದ (1.8 ಮಿಲಿಯನ್ ದಿಂದ 10,000 ವರ್ಷಗಳವರೆಗೆ BP)ಕೊನೆಯ ಹಂತದ ಅವಧಿಯಲ್ಲಿ ಬಂಗಾಳ ಕೊಲ್ಲಿಯ ಒಂದು ಭಾಗವಾಗಿ ಚಿಲ್ಕ ಸರೋವರವಿತ್ತೆಂದು ಭೂ ವಿಜ್ಞಾನದ ಪ್ರಮಾಣವು ನಿರ್ದೇಶಿಸುತ್ತದೆ. ಖುರ್ದ ಜಿಲ್ಲೆಯ ಚಿಲ್ಕ ಸರೋವರದ ಸ್ವಲ್ಪವೇ ಉತ್ತರಕ್ಕೆ ಗೋಲಾಬಾಯ್ ಸಸನ್ 20°1′7″N 85°32′54″E / 20.01861°N 85.54833°Eನಲ್ಲಿ ಭಾರತದ ಆರ್ಕಿಯಾಲಾಜಿಕಲ್ ಸರ್ವೇ ಅವರಿಂದ ಉತ್ಖನನಗಳು ನಡೆಸಲ್ಪಟ್ಟವು.[೧೧] ಮೂರು ಹಂತಗಳಲ್ಲಿ ಚಿಲ್ಕ ಪ್ರದೇಶದ ಸಂಸ್ಕೃತಿಯ ಸರಣಿಯ ಪರಂಪರೆಯ ಸಾಕ್ಷಿಯನ್ನು ಗೋಲಾಬಾಯ್ ಒದಗಿಸುತ್ತದೆ: *ನಿಯೋಲಿಥಿಕ್ (c. 1600 BCE), ಚಲ್ಕೋಲಿಥಿಕ್ (c. ಕ್ರಿ.ಪೂ.500 900 BCE) ಮತ್ತು ಐರನ್ ಏಜ್ (c. ಕ್ರಿ.ಪೂ.500 800 BCE). 2300 BCE ಗಳವರೆಗೆ ಗೋಲಾಬಾಯ್ ನ ಅತ್ಯಂತ ಪುರಾತನ ಕಾಲವನ್ನು ರೇಡಿಯೋ ಕಾರ್ಬನ್ ಕಾಲಗಣನೆಯು ತೋರಿಸಿದೆ. ಚಿಲ್ಕ ಸರೋವರಕ್ಕೆ ಸೇರುವ ದಯಾ ನದಿಯ ಒಂದು ಉಪನದಿಯಾದ, ಮಾಲಾಗುನಿ ನದಿಯ ದಕ್ಷಿಣ ದಡದ ಮೇಲೆ ಈ ತಾಣವು ನೆಲೆಸಿದೆ.
- ಚಿಲ್ಕ ಸರೋವರದ ಮುಖಾಂತರ ಸಮುದ್ರಕ್ಕೆ ದಾರಿ ಮಾಡಿಕೊಡುವ ಈ ಸ್ಥಳವು, ಈ ಪ್ರದೇಶದ ಕಡಲ ಸಂಬಂಧಿತ ಚಟುವಟಿಕೆಗಳಿಗೆ ಬಲವಾದ ಸಾಕ್ಷಿ ಒದಗಿಸುತ್ತದೆ. ಅನೇಕ ಮರ ಕೆಲಸ ಮಾಡುವ ಕೈ ಕೊಡಲಿಗಳು ಹಾಗೂ ಇತರೆ ಮಾನವ ನಿರ್ಮಿತ ಕಲಾಕೃತಿಗಳ ಮರಳಿ ಪಡೆಯುವಿಕೆಯು ಗೋಲಾಬಾಯ್ ಒಂದು ದೋಣಿ ಕಟ್ಟುವ ಕೇಂದ್ರವಾಗಿತ್ತೆಂದು ತಿಳಿದುಬರುತ್ತದೆ.
- ಗಮನಾರ್ಹವಾಗಿ, ಒಡಿಶಾದಲ್ಲಿ ಕೇವಲ ಗೋಲಾಬಾಯ್ ಒಂದೇ ದೋಣಿ ಕಟ್ಟುವ ಕೇಂದ್ರವಾಗಿತ್ತೆಂದು ಭೂ ಶೋಧನೆಗಳಿಂದ ವ್ಯಕ್ತವಾಗುತ್ತದೆ. ಇದು ಗೋಲಾಬಾಯ್ ಗೆ ಚಿಲ್ಕ ಸರೋವರವು ಅತಿ ಸಮೀಪವಾಗಿತ್ತೆಂಬುದನ್ನು ತಿಳಿಸುತ್ತದೆ ಮತ್ತು ಅದು ಪುರಾತನ ಕಾಲದಲ್ಲಿ ಈ ಪ್ರದೇಶದ ಜನಗಳ ಕಡಲ ಸಂಬಂಧಿ ವ್ಯಾಪಾರಕ್ಕೂ ಅನುಕೂಲ ಮಾಡಿಕೊಟ್ಟಿತ್ತೆಂದು ತಿಳಿದು ಬರುತ್ತದೆ.[೧೨]
- ಸಮುದ್ರ ಸಂಬಂಧಿ ವಾಣಿಜ್ಯ ವ್ಯವಹಾರಗಳಿಗೆ ದಕ್ಷಿಣ ವಿಭಾಗದ ಚಿಲ್ಕ ಸರೋವರವು ಒಂದು ಪ್ರಮುಖ ಬಂದರು ಆಗಿತ್ತೆಂದು ಕೆಲವು ಪುರಾತನ ಗ್ರಂಥಗಳು ತಿಳಿಸುತ್ತವೆ, ಹಾಗೂ ಖರಾವೆಲ (IAST: ಖರಾವೆಲ, ದೇವನಾಗರಿಯಲ್ಲಿ: खारवेल) (c. 209 BCE–ನಂತರ 170 BCE), ಸಮುದ್ರದ ಚಕ್ರವರ್ತಿಯೆಂದು ಹೆಸರಾದ, ಕಳಿಂಗ ದ ರಾಜನಾಗಿದ್ದನು.[೧೩]
- ಕಾಂತಿಯಾಗರ್ ನಲ್ಲಿ ಸರೋವರದ ದಕ್ಷೀಣ ತುದಿಯಲ್ಲಿನ ಹೊರಭಾಗದಲ್ಲಿ ನೆಲೆಯಾದ ನಿರ್ಗಮನದ ಬಿಂದುವಿಗೆ ಹತ್ತಿರದಲ್ಲಿರುವ, ಪಾಲುರ್ ಗೆ ಪಲೌರ ಬಂದರು ಎಂದು, ಗ್ರೀಕ್ ಭೂಗೋಳ ಶಾಸ್ತ್ರಜ್ಞ ಪ್ಟೊಲೇಮಿ (150 CE) ಉಲ್ಲೇಖಿಸಿದ್ದಾನೆ, ಅಲ್ಲಿಂದಲೇ ಹಡಗುಗಳು ಆಗ್ನೇಯ ಏಷಿಯಾದ ವಿವಿಧ ಭಾಗಗಳಿಗೆ ಸಮುದ್ರಯಾನ ಮಾಡುತ್ತಿದ್ದವು.
- 639 ರ ನಂತರ, ಚೈನಾ ದೇಶದ ಯಾತ್ರಿಕರಾದ ಫಾ-ಹಿಯಾನ್ ಮತ್ತು ಹ್ಯೂಯೆನ್-ತ್ಸಾಂಗ್ ರವರು ಸಮುದ್ರದ ದಡದ ಹತ್ತಿರದ "ಚೆ-ಲಿ-ತ-ಲೊಚಿಂಗ್ " ಎಂಬ ಒಂದು ಪ್ರಸಿದ್ಧ ಬಂದರನ್ನು ಪ್ರಸ್ತಾಪಿಸಿದ್ದಾರೆ, ಇದು ದೂರದ ಭೂ ಪ್ರದೇಶಗಳಿಂದ ಸಮುದ್ರಯಾನ ಮಾಡುವ ವ್ಯಾಪಾರಿಗಳು ಹಾಗೂ ಅಪರಿಚಿತರಿಗೆ ಒಂದು ರಹದಾರಿ ಮತ್ತು ವಿರಾಮದ ಸ್ಥಳವಾಗಿತ್ತೆಂದು ಉಲ್ಲೇಖಿಸಿದ್ದಾರೆ. ಈ ಬಂದರು ಚಿಲ್ಕ ಸರೋವರದ ದಡದ ಮೇಲೆ 'ಛತ್ರಘರ್' ಎಂಬಲ್ಲಿ ನೆಲೆಸಿತ್ತು.[೧೨]
- ಒಂದು ಬಹಳ ದೊಡ್ಡ ಹಡಗಿನ ಸೈನ್ಯದೊಡನೆ ಪುರಿಯನ್ನು ಆಕ್ರಮಿಸಲು ಕಡಲುಗಳ್ಳರ ದೊರೆ ರಕ್ತಭಾಹುವು, ಯೋಜಿಸಿದ್ದನೆಂದು ಹೇಳುವ ನಾಲ್ಕನೆಯ ಶತಮಾನದ ಒಂದು ಪುರಾಣದ ಕಥೆಯು ಚಿಲ್ಕ ಸರೋವರದ ಹುಟ್ಟನ್ನು ವರ್ಣಿಸಲು ಆಗಾಗ್ಗೆ ಹೇಳಲ್ಪಡುತ್ತದೆ. ಪತ್ತೆಯಾಗುವುದನ್ನು ತಪ್ಪಿಸಲು, ಅವನು ಸಮುದ್ರ ಮುಖ ಭೂಮಿಯಿಂದಾಚೆ ಕಣ್ಣಿಗೆ ಗೋಚರಿಸದಂತೆ ಗುಟ್ಟಾಗಿ ಲಂಗರು ಹಾಕಿದ್ದನು.
- ದಡಕ್ಕೆ ತೇಲುತ್ತಾ ಬಂದ ಹಡಗುಗಳ ತ್ಯಾಜ್ಯ ವಸ್ತುಗಳಿಂದ ವಂಚನೆಯು ಬಹಿರಂಗಗೊಳಿಸಲ್ಪಟ್ಟಿತು, ಆಗ ತಮ್ಮ ಎಲ್ಲಾ ಆಸ್ತಿಪಾಸ್ತಿಗಳ ಸಹಿತ ಪರಾರಿಯಾಗಲು, ನಗರದ ಜನಗಳನ್ನು ಈ ರೀತಿಯಾಗಿ ಎಚ್ಚರಿಸಿತು. ಒಂದು ಪರಿತ್ಯಕ್ತ ಪಟ್ಟಣವನ್ನು ಅವನು ಕಂಡಾಗ ರಕ್ತಬಾಹುವು ತನಗೆ ವಿಶ್ವಾಸಘಾತವಾಯಿತೆಂದು ಭಾವಿಸಿದನು ಮತ್ತು ತನ್ನನ್ನು ಮೋಸಗೊಳಿಸಿದ ಸಮುದ್ರದ ಕಡೆಗೆ ತನ್ನ ಹುಚ್ಚು ಕೋಪವನ್ನು ತಿರುಗಿಸಿದನು.
- ಸಮುದ್ರವು ಇಬ್ಭಾಗವಾಗಿ ಸೈನ್ಯವನ್ನು ಒಳಹೋಗಲು ಬಿಟ್ಟಿತು, ನಂತರ ಹಿಂದಿರುಗಿ ಮೇಲಕ್ಕೆ ಅಲೆಅಲೆಯಾಗೆದ್ದು, ಸೈನ್ಯವನ್ನು ಮುಳುಗಿಸಿ, ಪ್ರಸ್ತುತ ಸರೋವರವನ್ನು ನಿರ್ಮಿಸಿತು.[೨]
- ಸರೋವರಕ್ಕೆ ಬಂದು ಸೇರುವ, ನುನ ನದಿಯ ದಡದ ಮೇಲೆ ಚಿಲ್ಕ ಸರೋವರದ ಸುಮಾರು 25 km (16 mi) ಉತ್ತರಕ್ಕೆ, ಕನಾಸ್ ಎಂಬ ಹೆಸರಿನ ಹಳ್ಳಿಯಲ್ಲಿ ಪ್ರಾಚೀನ ವಸ್ತುಶಾಸ್ತ್ರದ ಸಂಶೋಧನೆಗಳ ಉತ್ಖನನಗಳು ಏಳನೆಯ ಶತಮಾನದ ಹಡಗಿನ ಲಂಗರುಗಳು ಹಾಗೂ ಯುದ್ಧದಲ್ಲಿ ಮಡಿದ ಯೋಧರಿಗೆಂದು ಸಮರ್ಪಿಸಲ್ಪಟ್ಟ ಕಲ್ಲಿನ ವೃತ್ತಾಂತಗಳನ್ನು ಕಂಡುಹಿಡಿದಿವೆ. ಇದು ತೀರದಾಚೆ ಒಂದು ಐತಿಹಾಸಿಕ ನೌಕಾ ಸೈನ್ಯದ ಹೋರಾಟದ ಸಾಕ್ಷಿಯನ್ನು ಒದಗಿಸುತ್ತದೆ.
- ಒಂದು 10 ನೆಯ ಶತಮಾನದ ಸಾಹಿತ್ಯವಾದ, ಬ್ರಹ್ಮಾನಂದ ಪುರಾಣವು, ಚಿಲ್ಕ ಸರೋವರವು, ವ್ಯಾಪಾರ ಹಾಗೂ ವಾಣಿಜ್ಯದ ಪ್ರಮುಖ ಕೇಂದ್ರ, ಅಲ್ಲದೆ ಜಾವಾ, ಮಲಯ, ಸಿಂಘಾಲ, ಚೈನಾ ಹಾಗೂ ಇತರೆ ದೇಶಗಳಿಗೆ ಹಡಗುಗಳು ಯಾನ ಮಾಡಲು ಒಂದು ಆಶ್ರಯ ಸ್ಥಾನವಾಗಿತ್ತೆಂದು ಪ್ರಸ್ತಾಪಿಸುತ್ತದೆ. ಆಗ್ನೇಯ ಏಷಿಯಾಕ್ಕೆ ಭಾರ ಹೊತ್ತ ವ್ಯಾಪಾರದ ಹಡಗುಗಳು ಸಮುದ್ರಕ್ಕೆ ಹತ್ತುವುದಕ್ಕೆ ಸಾಕಷ್ಟು ದೊಡ್ಡದಾದ ಒಂದು ಕಾಲುವೆಯನ್ನು ಹೊಂದಿತ್ತು ಹಾಗೂ ಸಮುದ್ರಯಾನಕ್ಕೆ ಹೋಗುವ ಹಡಗುಗಳಿಗೆ ರೇವು ಪಟ್ಟಣವಾಗಿ ಆಗಲೇ ಸಾಕಷ್ಟು ಆಳವಾಗಿತ್ತೆಂದು ಇದು ಸೂಚಿಸುತ್ತದೆ.[೧೪][೧೫]
[೧೬] ಚಿಲ್ಕ ಸರೋವರದ ಸುತ್ತಮುತ್ತಲಿನ ಗ್ರಾಮೀಣ ಜನಗಳು ಇಂದಿಗೂ "ಬಾಲಿ ಯಾತ್ರಾ " (ಬಾಲಿಗೆ ಪ್ರಯಾಣ) ಎಂದು ಕರೆಯಲ್ಪಡುವ ಒಂದು ವಾರ್ಷಿಕ ಉತ್ಸವವನ್ನು ಆಚರಿಸುತ್ತಾರೆ.
- 1803 ರಲ್ಲಿ ಬ್ರಿಟಿಷರು ಸರೋವರದ ತೀರವನ್ನು ಪ್ರವೇಶಿಸಿದರು, ಪುರಿಯನ್ನು ತಲುಪಿ, ಫತೆಹ್ ಮುಹಮ್ಮದನ ಸಹಾಯದಿಂದ ಒಡಿಶಾವನ್ನು ಆಕ್ರಮಿಸಿದರು. ಫತೆಹ್ ಮುಹಮ್ಮದನು ಇದರ ಬದಲಾಗಿ ಇಂದಿನ ಘರ್ ಕೃಷ್ಣಪ್ರಸಾದ್ ರೆವಿನ್ಯೂ ಆದಾಯದ ಮಲೌದ್ ಮತ್ತು ಪರಿಕುಡ್ ಪ್ರದೇಶಗಳನ್ನು ಇನಾಂಗ್ರಾಮಗಳಾಗಿ ಬ್ರಿಟಿಷರಿಂದ ಬಹುಮಾನವಾಗಿ ಪಡೆದನು.[೧೩]
- ವರ್ಷಗಳು ಕಳೆದಂತೆ, ಕವಿವರ ರಾಧಾನಾಥ್ ರೇ ಮತ್ತು ಪಂಡಿತ್ ಗೋದಾವರಿಶ್ ಮಿಶ್ರಾರು ಒಳಗೊಂಡಂತೆ ಕವಿಗಳು, ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಸಾಧುಗಳು ಅದರ ಸಾಂಸ್ಕೃತಿಕ, ಆಧ್ಯಾತ್ಮಿಕ ಮತ್ತು ಧಾರ್ಮಿಕ ನೋಟಗಳಿಗೆ ಯಥೋಚಿತವಾಗಿ ಸರೋವರದ ಐತಿಹಾಸಿಕತೆಯನ್ನು ಶ್ಲಾಘಿಸಿದ್ದಾರೆ.[೧೩][೧೪]
- "ಸುಪ್ರಸಿದ್ಧ ಒರಿಯಾ ಕವಿ, ಗೋಪಬಂಧು ದಾಸರು ರೈಲು ಗಾಡಿಯಲ್ಲಿ ಹೋಗುತ್ತಿರುವಾಗ ಚಿಲ್ಕ ಸರೋವರದ ಖಾರಿಯ ವರ್ಣಮಯ ದೃಶ್ಯಗಳು ಹಾಗೂ ಶಬ್ಧಗಳ ಶಿಸ್ತಿನ ನಡಿಗೆಯ ಸೌಂದರ್ಯವನ್ನು ನೋಡಲು ಕಾತುರರಾದರು. ಆ ಸೌಂದರ್ಯವನ್ನು ತಾವು ಸವಿಯ ಬಹುದೆಂದು ವೇಗವಾಗಿ ಚಲಿಸುತ್ತಿದ್ದ ರೈಲುಗಾಡಿಯನ್ನು ಒಂದು ಕ್ಷಣ ನಿಲ್ಲಿಸಲು ಅವರು ಕೇಳಿಕೊಂಡರು. ಏಕೆಂದರೆ ಅದರ ಸೌಂದರ್ಯವು ಅವರನ್ನು ಅಷ್ಟು ಆಕರ್ಶಿಸಿತು".[೧೭]
ಭೂ ವಿಜ್ಞಾನ
[ಬದಲಾಯಿಸಿ]- ಈ ಸರೋವರವು ನಶ್ವರ ಪರಿಸರದಲ್ಲಿ ಸಮುದ್ರ ಕೊಲ್ಲಿಯ ಗುಣಲಕ್ಷಣಗಳನ್ನು ಹೊಂದಿದೆ. ಸಮುದ್ರದಡಿಯಲ್ಲಿ ಇರುವ ತನ್ನ ಈಶಾನ್ಯ ಪ್ರದೇಶದ ಸಹಿತ ಪ್ಲೈಸ್ಟೋಸೀನ್ ಯುಗದಲ್ಲಿ ಸರೋವರದ ಪಾಶ್ಚಿಮಾತ್ಯ ದಡದುದ್ದಕ್ಕೂ ಕಡಲ ತೀರವು ವ್ಯಾಪಿಸಿತ್ತೆಂದು ಭೂ ವಿಜ್ಞಾನದ ಅಧ್ಯಯನ ಗಳು ನಿರ್ದೇಶಿಸುತ್ತವೆ.
- ಕೆಲವೇ ನೂರು ವರ್ಷಗಳ ಕೆಳಗೆ ಸಮುದ್ರದ ದಡದಲ್ಲಿ ಮೂಲತಃ ಕಟ್ಟಲ್ಪಟ್ಟ ಹತ್ತಿರದ ಕೋನಾರ್ಕ್ ಸೂರ್ಯ ದೇವಾಲಯವು, ಈಗ ಕಡಲ ತೀರದಿಂದ ಸುಮಾರು 3 km (2 mi), ದೂರದಲ್ಲಿದೆ ಎಂಬ ವಾಸ್ತವಾಂಶದಿಂದ ಕರಾವಳಿಯು ಯುಗಗಳಿಂದಲೂ ಸಮುದ್ರದ ಮೇರೆ ಮೀರಿ ಚಲಿಸಿದೆ ಎಂದು ಬೆಂಬಲಿಸಲ್ಪಡುತ್ತದೆ.
- ಚಿಲ್ಕ ಸರೋವರದ ಹಿನ್ನೀರಿನ ಪ್ರದೇಶವು ಬಂಡೆ, ಮರಳು ಹಾಗೂ ಮಣ್ಣಿನ ಕೆಳಪದರವನ್ನು ಹೊಂದಿದೆ. ಅದು ಜೇಡಿ ಮಣ್ಣು, ಕೆಸರು, ಮರಳು, ಜಲ್ಲಿ ಮತ್ತು ಚಿಪ್ಪಿನ ಸಂಗ್ರಹಗಳಂತಹ ಸೆಡಿಮೆಂಟರಿ ಸಣ್ಣ ತುಂಡುಗಳ ಒಂದು ವಿಶಾಲ ವ್ಯಾಪ್ತಿಯನ್ನು ಹೊಂದಿದೆ, ಆದರೆ ಅಚ್ಚುಕಟ್ಟು ಪ್ರದೇಶದ ಪ್ರಮುಖ ಭಾಗ ಹೂಳು ತುಂಬಿಕೊಳ್ಳುವ ವಸ್ತುಗಳಾಗಿವೆ. ದಯಾ ಮತ್ತು ಭಾರ್ಗವಿ ನದಿಗಳು ಹಾಗೂ ಅನೇಕ ಸಣ್ಣ ತೊರೆಗಳಿಂದ ಚಿಲ್ಕ ಸರೋವರದಲ್ಲಿ ಸುಮಾರು 1.6 ಮಿಲಿಯನ್ ಮೆಟ್ರಿಕ್ ಟನ್ ಹೂಳು ಪ್ರತಿ ವರ್ಷವೂ ಸಂಗ್ರಹವಾಗುತ್ತದೆ.[೧೭]
- ಸುಮಾರು 7,000 ವರ್ಷಗಳ ಕೆಳಗೆ, ಕಡಲ ಮಟ್ಟದ ಏರಿಕೆಯಲ್ಲಿ ವಿರಾಮದ ಸಹಿತ ಕಳೆದ 6,000-8,000 ವರ್ಷಗಳಿಂದಾಚೆ ವಿಶ್ವದಾದ್ಯಂತ ಸಮುದ್ರ ಮಟ್ಟದಲ್ಲಿ ಮೇಲೇರಿಕೆ ಸಂಭವಿಸಿದೆಯೆಂದು ಊಹಿಸಲ್ಪಟ್ಟದೆ, ಇದು ದಕ್ಷಿಣ ವಿಭಾಗದಲ್ಲಿ ಕರಾವಳಿ ಸಮೀಪ ಒಂದು ಮರಳ ತೀರದ ನಿರ್ಮಾಣದಲ್ಲಿ ಪರಿಣಮಿಸಿರಬಹುದೆಂದು ನಂಬಲಾಗಿದೆ.
- ಕಡಲ ಮಟ್ಟದ ಏರಿಕೆಯ ಸಹಿತ, ನಿಧಾನವಾಗಿ ಮರಳ ದಂಡೆಯು ಬೆಳೆದು, ಈಶಾನ್ಯದ ಸಮುದ್ರದ ಕಡೆಗೆ ಮುಂದುವರಿಯುತ್ತಾ ಚಿಲ್ಕ ಸರೋವರದ ಭೂ ಶಿರದ ರಚನೆಯಾಯಿತು. ಈ ಸರೋವರವು ಸುಮಾರು 3,500-4,000 ವರ್ಷಗಳ ಹಿಂದೆ ನಿರ್ಮಾಣವಾಗಿದೆಯೆಂದು ಭೂ ಶಿರದ ನೈರುತ್ಯ ತುದಿಯಿಂದ ಹೊರತೆಗೆದ ಒಂದು ಪಳೆಯುಳಿಕೆಯು ಸೂಚಿಸುತ್ತದೆ.
- ಸರೋವರದ ಉತ್ತರ ತೀರದ ದಿಕ್ಕಿನಲ್ಲಿ ಆಕಸ್ಮಿಕ ಬದಲಾವಣೆ, ಬಲವಾದ ಗಾಳಿಯಿಂದ ಮರಳನ್ನು ದಡಕ್ಕೆ ಸ್ಥಳಾಂತರಿಸಿದ್ದು, ದಂಡೆಯುದ್ದಕ್ಕೂ ನೀರುಗಾಳಿಯಿಂದ ರಾಶಿಯಾದ ವಸ್ತುಗಳು (ಲಿಟ್ಟೋರಲ್ ಡ್ರಿಫ್ಟ್) ಬೇರೆ ಬೇರೆ ಪ್ರದೇಶಗಳಲ್ಲಿ ದೃಢವಾದ ನದಿಯ ಹಾಗೂ ಸಮುದ್ರದ ಉಬ್ಬರ-ಇಳಿತಗಳ ಸೆಳೆವು ಇವು ಭೂ ಶಿರದ ಬೆಳವಣಿಗೆಗೆ ಕಾರಣಗಳಾಗಿವೆ.[೧೩]
- ದಕ್ಷಿಣ ವಲಯದಲ್ಲಿ, ಹವಳದ ಬಿಳಿ ಪಟ್ಟಿಗಳು, ವರ್ತಮಾನದ ನೀರಿನ ಮಟ್ಟದ ಮೇಲೆ 8 m (26 ft)ಯ ಎತ್ತರಕ್ಕೆ ಈ ಪ್ರದೇಶವು ಒಮ್ಮೆ ಸಮುದ್ರವಾಗಿತ್ತೆಂದೂ ಹಾಗೂ ಪ್ರಚಲಿತಕ್ಕಿಂತ ನೀರು ಹೆಚ್ಚು ಆಳವಾಗಿತ್ತೆಂದೂ ತೋರಿಸುತ್ತದೆ.[೧೩] ಸರೋವರದ ಹೊರಗಡೆ ತಡೆಯ ಭೂ ಶಿರದ ಕಾಲಾನುಕ್ರಮವಾದ ಬೆಳವಣಿಗೆಯು ಖನಿಜಗಳ ಆಪ್ಟಿಕಲಿ ಸ್ಟಿಮ್ಯುಲೇಟೆಡ್ ಲ್ಯೂಮಿನಿಸೆನ್ಸ್ ಅಧ್ಯಯನಗಳಿಂದ ಕಾಲವು ನಿರ್ಧರಿಸಲ್ಪಟ್ಟಿದೆ.
- ಇದು ಸರೋವರದ ತಳದ ಹದಿನಾರು ಮಾದರಿಗಳ ಮೇಲೆ ನಡೆಸಲ್ಪಟ್ಟಿದೆ. ಭೂ ಶಿರದ ತುದಿಯಲ್ಲಿ 40 ವರ್ಷಗಳಿಂದ ತಳದಲ್ಲಿ 300 ವರ್ಷಗಳವರೆಗೆ ಯುಗಗಳಿಗೆ ಅನುಗುಣವಾಗಿ 153 ± 3 mGy ಹಾಗೂ 2.23 ± 0.07 Gy ಅನುಕ್ರಮವಾಗಿ ನಡುವಿನ ಪ್ರಮಾಣಗಳನ್ನು ಅಧ್ಯಯನಗಳು ಸೂಚಿಸುತ್ತವೆ. ಅತ್ಯಂತ ಕಿರಿಯ ಯುಗಗಳು ಒಂದರಮೇಲೊಂದುದಿರುವ ಸಸ್ಯವರ್ಗದ ವಯೋಮಾನದ ಸಹಿತ ಸ್ಥಿರವಾಗಿರುತ್ತವೆ. 40 ವರ್ಷಗಳ ಹಿಂದಿನ ತಡೆಯ ರಚನೆಯ >೨.೫ miles (೪ km) ರ ಒಂದು ಸ್ಪಷ್ಟವಾದ ಅವಧಿಯು ಗುರುತಿಸಲ್ಪಟ್ಟಿದೆ. ಅದಕ್ಕೆ ಮೊದಲು ಸಂಗ್ರಹಣೆಯ ದರವು 300 ವರ್ಷಗಳವರೆಗೆ ಹೊಂದಿಕೊಂಡಂತೆ ಸ್ಥಿರವಾಗಿತ್ತು." [೧೮]
ಭೂಗೋಳ ಹಾಗು ಭೂಪಟದ ವಿವರಣೆ
[ಬದಲಾಯಿಸಿ]- ಚಿಲ್ಕ ಸರೋವರವು ಮಣ್ಣಿನ ಸಮತಳಗಳ ದೊಡ್ಡ ಪ್ರದೇಶಗಳ ಸಹಿತ ಒಂದು ಆಳವಲ್ಲದ ತಡೆ ಕಟ್ಟಿದ ಸಮುದ್ರದ ಕೊಲ್ಲಿಯಾಗಿದೆ. ಸರೋವರದ ಪಶ್ಚಿಮ ಹಾಗೂ ದಕ್ಷಿಣದ ತೀರಗಳು ಪೂರ್ವ ಘಟ್ಟಗಳ ಬೆಟ್ಟ ಸಾಲಿನಿಂದ ಸುತ್ತುವರಿಯಲ್ಪಟ್ಟಿವೆ.[೧೬]
ಸರೋವರಕ್ಕೆ ಹೂಳನ್ನು ತರುವ, ಅನೇಕ ಒಳನಾಡಿನ ನದಿಗಳು, ಸರೋವರದ ಉತ್ತರದ ತುದಿಯನ್ನು ನಿರ್ಬಂಧಿಸುತ್ತವೆ. ಬಂಗಾಳ ಕೊಲ್ಲಿಯಲ್ಲಿನ ಉತ್ತರದ ಸೆಳೆತಗಳಿಂದ ನಿರ್ಮಿಸಲ್ಪಟ್ಟ, ರೆಜಾಂಸ [೧೯] ಎಂದು ಕರೆಯಲ್ಪಡುವ ಒಂದು ೬೦ km (೩೭ mi) ಉದ್ದನೆಯ ತಡೆ ತೀರವು, ಈ ಆಳವಲ್ಲದ ಸರೋವರದ ನಿರ್ಮಾಣದಲ್ಲಿ ಪರಿಣಮಿಸಿ, ಅದರ ಪೂರ್ವ ಭಾಗವಾಯಿತು. ಒಂದು ನಶ್ವರ ಸರೋವರವಾಗಿ ಅದರ ನೀರಿನ ಮೇಲ್ಮೈ ಪ್ರದೇಶ ಬೇಸಿಗೆ-ಮಳೆಗಾಲದ ಋತುಮಾನದಲ್ಲಿ 1,165 km2 (449.8 sq mi) ರಿಂದ ಚಳಿಗಾಲದ ಒಣ ಋತುಮಾನದಲ್ಲಿ 906 km2 (349.8 sq mi) ವರೆಗೆ ಬದಲಾಗುತ್ತದೆ.
- ಸರೋವರವು ಅನೇಕ ದ್ವೀಪಗಳನ್ನು ಹೊಂದಿದೆ. ಆಳವಲ್ಲದ ಕಾಲುವೆಗಳಿಂದ ಪ್ರತ್ಯೇಕಿಸಲ್ಪಟ್ಟ, ದೊಡ್ಡ ದ್ವೀಪಗಳು, ತಡೆಗಳು ಹಾಗೂ ಸರೋವರದ ಮುಖ್ಯ ಭಾಗದ ನಡುವೆ ಇದೆ. ಒಟ್ಟು ಟೆಂಪ್ಲೇಟು:Km2 to mi2 ರಷ್ಟು ಸಂಖ್ಯೆಯ ಕಾಲುವೆಗಳು ಬಂಗಾಳ ಕೊಲ್ಲಿಯ ಜೊತೆ ಸರೋವರವನ್ನು ಸಂಪರ್ಕಿಸುತ್ತವೆ.
[೧೪] ಪರಿಕುಡ್, ಫುಲ್ಬರಿ, ಬೆರ್ಹಪುರ, ನೌಪರ, ನಲ್ಬನ ಹಾಗೂ ತಂಪರ ಇವು ಆರು ಪ್ರಮುಖ ದ್ವೀಪಗಳಾಗಿವೆ. ಮಲೌದ್ ಪರ್ಯಾಯ ದ್ವೀಪದ ಸಹಿತ ಒಟ್ಟಾಗಿ ಈ ದ್ವೀಪಗಳು, ಪುರಿ ಜಿಲ್ಲೆಯ, ಕೃಷ್ಣಪ್ರಸಾದ್ ರೆವಿನ್ಯೂ ಆದಾಯದ ಸಾಲನ್ನು ರಚಿಸುತ್ತವೆ.[೪][೮]
- ಸರೋವರದ ಉತ್ತರದ ದಂಡೆ ಖೋರ್ಡ ಜಿಲ್ಲೆಯ ಒಂದು ಭಾಗ ಮತ್ತು ಪಶ್ಚಿಮದ ತೀರ ಗಂಜಾಂ ಜಿಲ್ಲೆಯ ಒಂದು ಭಾಗವಾಗಿದೆ. ಅದರಲ್ಲಿ ಹೂಳು ತುಂಬಿಕೊಳ್ಳುವ ಕಾರಣದಿಂದ, ಆ ತಡೆಯ ಅಗಲವು ಹೆಚ್ಚು ಕಡಿಮೆಯಾಗಿದೆ ಮತ್ತು ಸಮುದ್ರಕ್ಕೆ ಮುಖಜಭೂಮಿಯು ನಿಯತಕಾಲಿಕವಾಗಿ ಮುಚ್ಚಲ್ಪಟ್ಟಿದೆ. ಸರೋವರದ ಮುಖದ ನೆಲೆಯೂ ಸಹ ಆಗಾಗ್ಗೆ, ಸಾಮಾನ್ಯವಾಗಿ ಈಶಾನ್ಯದ ಕಡೆಗೆ, ಬದಲಾಗಿದೆ.
- 1780 ರಲ್ಲಿ ಮುಖದ ಭೂಮಿಯು 1.5 km (0.9 mi) ರಷ್ಟು ಅಗಲ ಇದ್ದದ್ದು, 40 ವರ್ಷಗಳ ನಂತರ ಕೇವಲ .75 km (0.5 mi) ರಷ್ಟು ಆಗಿತ್ತು. ತಮ್ಮ ಜೀವನೋಪಾಯಕ್ಕಾಗಿ, ಸ್ಥಳೀಯ ಬೆಸ್ತ ಜನಾಂಗದವರು, ಮೀನುಗಾರಿಕೆಗಾಗಿ ಸಮುದ್ರಕ್ಕೆ ದಾರಿ ಮಾಡಿಕೊಳ್ಳಲು ಕ್ರಮಬದ್ಧವಾಗಿ ಮುಖಜ ಭೂಮಿಯನ್ನು ಆಗಿಂದಾಗ್ಗೆ ಛೇದಿಸಿಕೊಳ್ಳಬೇಕಾಗುತ್ತದೆ.[೧೩]
- ಒಣ ಋತುಮಾನದಲ್ಲಿ 0.9 ft (0.3 m) ರಿಂದ 2.6 ft (0.8 m) ರವರೆಗೆ ಹಾಗೂ ಮಳೆಗಾಲದಲ್ಲಿ 1.8 m (5.9 ft) ರಿಂದ 4.2 m (13.8 ft) ರವರೆಗೆ ಸರೋವರದ ನೀರಿನ ಆಳವು ಬದಲಾಗುತ್ತಿರುತ್ತದೆ. ಸಮುದ್ರಕ್ಕೆ ಹಳೆಯ ಕಾಲುವೆಯ ಅಗಲವು ಈಗ ಸುಮಾರು 100 m (328.1 ft) ಎಂದು ವರದಿ ಮಾಡಲ್ಪಟ್ಟಿದೆ.
- ಅದನ್ನು ಮಗರ್ ಮುಖ ಎಂದು ಹೆಸರಾಗಿದೆ (ಮೊಸಳೆಯ ಮುಖ ). ಸರೋವರವನ್ನು ದಕ್ಷಿಣದ, ಕೇಂದ್ರ ಮತ್ತು ಉತ್ತರದ ವಿಭಾಗಗಳು ಹಾಗೂ ಹೊರಭಾಗದ ಕಾಲುವೆ ಪ್ರದೇಶ ಎಂಬ ಹೆಸರುಳ್ಳ ನಾಲ್ಕು ಪ್ರತ್ಯೇಕ ವಲಯಗಳಾಗಿ ವಿಭಾಗಿಸಲ್ಪಟ್ಟಿದೆ. ಅರಾಖುಡಾ ಹಳ್ಳಿಯಲ್ಲಿ ಬಂಗಾಳ ಕೊಲ್ಲಿಯ ಜೊತೆ ಒಂದು 32 km (19.9 mi) ಉದ್ದದ ಹೊರ ಕಾಲುವೆಯು ಸರೋವರವನ್ನು ಜೋಡಿಸುತ್ತದೆ. ಸರೋವರವು ಅನಿಶ್ಚಿತವಾಗಿ ಒಂದು ಅಂಜೂರದ ಹಣ್ಣಿನ ಆಕಾರದಲ್ಲಿದ್ದು, ಗರಿಷ್ಟ 64.3 km (40.0 mi) ಉದ್ದ ಹಾಗೂ ಸರಾಸರಿ 20.1 km (12.5 mi) ಅಗಲವನ್ನು ಹೊಂದಿದೆ.[೪][೨೦]
ಜಲಶಾಸ್ತ್ರ
[ಬದಲಾಯಿಸಿ]- ಮೂರು ಜಲವಿಶ್ಲೇಷಣಾ ಶಾಸ್ತ್ರದ ಉಪವ್ಯವಸ್ಥೆಗಳು ಸರೋವರದ ಜಲವಿಶ್ಲೇಷಣೆಯನ್ನು ಹಿಡಿತದಲ್ಲಿಟ್ಟುಕೊಂಡಿವೆ. ಭೂ ಆಧಾರಿತ ವ್ಯವಸ್ಥೆಯು ಮಹಾನದಿ ನದಿಯ ಸಣ್ಣ ಉಪನದಿಗಳನ್ನು ಹೊಂದಿರುವ ಉತ್ತರದ ಭಾಗವಾಗಿ, 52 ನದಿಯ ಕಾಲುವೆಗಳು ಪಶ್ಚಿಮದ ಭಾಗವನ್ನು ನಿರ್ಮಿಸು ತ್ತವೆ ಹಾಗೂ ಪೂರ್ವ ಭಾಗದಲ್ಲಿ ಬಂಗಾಳ ಕೊಲ್ಲಿಯನ್ನು ಒಳಗೊಂಡಿದೆ.
- ಕಟಕ್ ಬಳಿ ಮೂರು ಉಪ ಶಾಖೆಗಳಾಗುವ ಮಹಾನದಿ ನದಿಯ ದಕ್ಷಿಣದ ಮೂರು ಕವಲುಗಳಲ್ಲಿನ ಎರಡು, ಸರೋವರವನ್ನು ಪೋಷಿಸುತ್ತವೆ. ಸರೋವರಕ್ಕೆ ಒಟ್ಟು ತಾಜಾ ನೀರಿನ ಶೇಕಡಾ 61 ರಷ್ಟು (850 cubic metres per second (30,000 cu ft/s)) ಒಳ ಹರಿವು ಈ ಎರಡು ಕವಲುಗಳ ಕೊಡುಗೆಯಾಗಿದೆ. ಸರ್ವಕಾಲಿಕವಲ್ಲದ ಎರಡನೆಯ ನಾಲೆಗಳ ವ್ಯವಸ್ಥೆಯು 536 cubic metres per second (18,900 cu ft/s) ಶೇಕಡಾ 39 ರಷ್ಟು ನೀರನ್ನು ಸೇರಿಸುತ್ತದೆ.
- ಕನ್ಸಾರಿ, ಕುಸುಮಿ, ಜಂಜೀರಾ ಮತ್ತು ತರಿಮಿ ನದಿಗಳು ಈ ಕಾಲುವೆ ವ್ಯವಸ್ಥೆಯ ಪ್ರಮುಖ ನದಿಗಳಾಗಿವೆ. ಸರೋವರದ ಮೇಲೆ ನೇರವಾಗಿ ಬೀಳುವ ಮಳೆಯ ಕೊಡುಗೆಯನ್ನು ಸೇರಿಸಿಕೊಂಡು 0.87 cubic kilometres (710,000 acre⋅ft) ಸರೋವರಕ್ಕೆ ವಾರ್ಷಿಕ ಒಟ್ಟು ಮೇಲ್ಮೈ ತಾಜಾ ನೀರಿನ ಒಳಸೇರುವಿಕೆಯು 1.76 cubic kilometres (1,430,000 acre⋅ft) ಎಂದು ಅಂದಾಜು ಮಾಡಲಾಗಿದೆ.
- ಸರೋವರಕ್ಕೆ 13 ಮೆಟ್ರಿಕ್ ಟನ್ ಗಳಷ್ಟು ಕೆಸರನ್ನು ಹೊತ್ತೊಯ್ಯುವುದೆಂದು ಪರಿಗಣಿಸಿರುವ ತಾಜಾನೀರಿನ ಸುಮಾರು 0.375 million cubic metres (304 acre⋅ft) ರಷ್ಟು ವಾರ್ಷಿಕ ಹರಿವನ್ನು ಎಲ್ಲಾ ಒಳನಾಡಿನ ನದಿ ವ್ಯವಸ್ಥೆಗಳು ಸೇರಿಸುತ್ತವೆ. ಈಶಾನ್ಯದಲ್ಲಿ ಒಂದು ಕಾಲುವೆಯು ಸರೋವರವನ್ನು ಬಂಗಾಳ ಕೊಲ್ಲಿಗೆ ಜೋಡಿಸುತ್ತದೆ.
- ಸರೋವರದ ಕಾಲುವೆಯ ರೇವು ಪ್ರದೇಶದ ಮೇಲೆ ಉಷ್ಣವಲಯದ ಮುಂಗಾರು ಮಳೆಯ ಹವಾಮಾನ ಪ್ರಬಲವಾಗಿರುತ್ತದೆ. 72 ಮಳೆಗಾಲದ ದಿನಗಳಲ್ಲಿ, 1,238.8 mm (48.77 in) ರ ಸರಾಸರಿ ವಾರ್ಷಿಕ ಮಳೆಯ ಸಹಿತ ಅನುಕ್ರಮವಾಗಿ ಜೂನ್ ನಿಂದ ಸೆಪ್ಟೆಂಬರ್ ವರೆಗೆ ಮತ್ತು ನವೆಂಬರ್ ನಿಂದ ಡಿಸೆಂಬರ್ ವರೆಗಿನ ಅವಧಿಯಲ್ಲಿ ಸರೋವರವು ನೈರುತ್ಯ ಹಾಗೂ ಈಶಾನ್ಯ ಮುಂಗಾರು ಮಳೆಯನ್ನು ಅನುಭವಿಸುತ್ತದೆ. 39.9 °C (103.8 °F) ರ ಗರಿಷ್ಠ ಉಷ್ಣಾಂಶ ಹಾಗೂ 14 °C (57.2 °F) ರ ಕನಿಷ್ಠ ಉಷ್ಣಾಂಶವು ದಾಖಲಿಸಲ್ಪಟ್ಟಿದೆ. ತಿಂಗಳುಗಳ ಉಳಿದ ಅವದಿಯಲ್ಲಿ ಉತ್ತರದ ಮತ್ತು ಈಶಾನ್ಯ ದಿಕ್ಕುಗಳಿಂದ ಮತ್ತು ನೈರುತ್ಯ ಮುಂಗಾರಿನ ಪ್ರಭಾವದ ಕಾರಣ ದಕ್ಷಿಣದ ಮತ್ತು ಈಶಾನ್ಯ ದಿಕ್ಕುಗಳಿಂದ ಮಾರುತದ ವೇಗವು 5.3 to 16 metres (17 to 52 ft) / ಘಂಟೆಗೆ [dubious ]ಬದಲಾಗುತ್ತಿರುತ್ತದೆ.[೫]
ನೀರು ಹಾಗೂ ಹೂಳಿನ ಗುಣಮಟ್ಟ
[ಬದಲಾಯಿಸಿ]ಸರೋವರದ ನೀರಿನ ಈ ಕೆಳಕಂಡ ವೈಜ್ಞಾನಿಕ-ರಾಸಾಯನಿಕ ಗುಣಲಕ್ಷಣಗಳನ್ನು ನಿರ್ದೇಶಿಸುವ ತಾಜಾನೀರಿನ ತನಿಖೆಗಳು ಮತ್ತು ನೀರಿನ ಗುಣಮಟ್ಟದ ಅಳೆತೆಗಳ ಒಂದು ಸಂಘಟಿತ ವ್ಯವಸ್ಥೆಯನ್ನು ಚಿಲ್ಕ ಅಭಿವೃದ್ಧಿ ಪ್ರಾಧಿಕಾರವು (CDA) ಸ್ಥಾಪಿಸಿತು. [೫]
- ಸರೋವರದ ನೀರು ಕ್ಷಾರಗುಣವುಳ್ಳದ್ದು - ಕ್ಷಾರತ್ವಕ್ಕೆ ಹೊಂದಿಕೆಯಾಗುವ ಒಟ್ಟು ಅಮತೆ ನಿವಾರಿಸುವ ಕ್ಷಾರದ ಸಹಿತ 7.1 ರಿಂದ - 9.6 ವ್ಯಾಪ್ತಿ ಹೊಂದಿರುವ pH. ರಂಭಾದ ಬಳಿ ಸರೋವರದ ದಕ್ಷಿಣ ಭಾಗವು ಅತಿ ಹೆಚ್ಚು ಆಮ್ಲತೆಯ ಕ್ಷಾರವನ್ನು ದಾಖಲಿಸಿದೆ.
- ಒಂದು ವಿಶಾಲ ಪ್ರದೇಶದಲ್ಲಿ 1.5 m (5 ft) ಕ್ಕಿಂತ ಕಡಿಮೆಯುಳ್ಳ, ಉತ್ತರ ವಿಭಾಗದಲ್ಲಿ ಗರಿಷ್ಠ ಆಳವಿಲ್ಲದ ಸ್ಥಳಗಳನ್ನು ಬಾಥ್ಯೈಮೆಟ್ರಿ ಸಮೀಕ್ಷೆಗಳು ಸೂಚಿಸುತ್ತವೆ. ಸರೋವರದ ದಕ್ಷಿಣ ವಿಭಾಗದಲ್ಲಿ ಅತಿ ಹೆಚ್ಚು ಆಳವಾದ 3.9 m (12.8 ft) ಅನ್ನು ದಾಖಲಿಸಲಾಗಿದೆ.
- ಹೂಳಿನ ಸಹಿತ ಮೇಲಿಂದ ಮೇಲೆ ಸೇರುವ ನೀರಿನ ಬಲವಾದ ಮಿಶ್ರಣದ ಕಾರಣ ಹೆಚ್ಚಿನ ರಾಡಿಯು 9 and 155 cm (0.30 and 5.09 ft) ನಡುವಿನ ವ್ಯಾಪ್ತಿಯುಳ್ಳ ಗಮನಿಸಲ್ಪಟ್ಟ ಪಾರದರ್ಶಕ ಮೌಲ್ಯಗಳಿಂದ ದೃಢೀಕರಿಸಲ್ಪಟ್ಟಿದೆ.
- ತಾಜಾ ನೀರಿನ ಪ್ರವಾಹದ ಜಟಿಲ ಮಿಶ್ರಣ, ಆವಿಯಾಗುವಿಕೆ, ಗಾಳಿಯ ಪರಿಸ್ಥಿತಿ ಹಾಗೂ ಸಮುದ್ರ ನೀರಿನ ಉಬ್ಬರ-ಇಳಿತಗಳ ಒಳಹರಿವಿನ ಕಾರಣದಿಂದ ಸರೋವರದಲ್ಲಿ ವಿಶಾಲವಾದ ಕಾಲಬದ್ಧ ಮತ್ತು ಪ್ರವಾಹದ ಮಾರ್ಪಾಡುಗಳಿಂದ ಅತಿ ಹೆಚ್ಚಿನ ಕ್ಷಾರತ್ವದ ಮಟ್ಟವನ್ನು ತೋರಿಸುತ್ತದೆ. ಸರೋವರದ ಸ್ವಲ್ಪ ಉಪ್ಪು ನೀರುಳ್ಳ ಸ್ವಭಾವವು ಒಣ ಹವಾಮಾನದ ಅವಧಿಯಲ್ಲಿ ಕಾಲುವೆಯ ಹೊರ ಮಾರ್ಗದಲ್ಲಿ 42 ppt ಯಷ್ಟು ಅತ್ಯಂತ ಕ್ಷಾರದ ಮಟ್ಟದಿಂದ ದಯಾ ನದಿ ತೀರದ ಮುಖದ ಬಳಿ ಒಂದು ಸಾವಿರಕ್ಕೆ ಶೂನ್ಯ ಭಾಗದಷ್ಟೆಂದು ತೋರಿಸಲ್ಪಟ್ಟಿದೆ.
- ಕರಗಿದ ಆಮ್ಲಜನಕದ ಮೌಲ್ಯಗಳು 3.3–18.9 mg/l ನಡುವೆ ಇತ್ತೆಂದು ತೋರಿಸುತ್ತವೆ.
- ರಂಜಕದ ಫಾಸ್ಫೇಟ್ (0–0.4 ppm), ಸಾರಜನಕದ ನೈಟ್ರೇಟ್ (10–60 ppm) ಮತ್ತು ಸಿಲಿಕೇಟ್ ಗಳು (1–8 ppm) ಸರೋವರದ ಉತ್ತರ ಮತ್ತು ವಾಯುವ್ಯ ಭಾಗದಲ್ಲಿ ಹೆಚ್ಚಾಗಿದೆ, ಅಲ್ಲಿ ಕೆಸರು ಹಾಗೂ ಪೂಷಕ ವಸ್ತುಗಳ ಒಟ್ಟು ಮೊತ್ತದ ಹೆಚ್ಚಿನ ಭಾಗವನ್ನು ಸರೋವರಕ್ಕೆ ಅತ್ಯಂತ ಬಹಳ ನದಿಗಳು ಪ್ರವಹ ಹರಿಸುತ್ತವೆ.
- ದಕ್ಷಿಣದ, ಕೇಂದ್ರೀಯ, ಉತ್ತರದ ಹಾಗೂ ಹೊರ ಕಾಲುವೆಗಳೆಂದು ಕ್ಷಾರತ್ವದ ಮೌಲ್ಯಗಳ ಆಧಾರದ ಮೇಲೆ ಸರೋವರವನ್ನು ವಿಶಾಲವಾಗಿ ನಾಲ್ಕು ವಲಯಗಳಾಗಿ ವಿಭಾಗಿಸಲ್ಪಟ್ಟಿದೆ. ಉತ್ತರದ ಹಾಗೂ ಕೇಂದ್ರದ ಭಾಗಗಳಿಂದ ವ್ಯಾಪಕ ಮೊತ್ತದ ತಾಜಾ ನೀರಿನ ಬಲವಾದ ಒಳ ಪ್ರವಾಹದಿಂದ ಸಮುದ್ರದ ನೀರಿನ ಉಬ್ಬರ-ಇಳಿತಗಳ ಒಳಹರಿವು ಮುಂಗಾರಿನ ಕಾಲದಲ್ಲಿ ತಡೆಹಿಡಿಯಲ್ಪಡುತ್ತದೆ.
- ದಕ್ಷಿಣ ವಲಯದಲ್ಲಿ ಸ್ವಲ್ಪ ಉಪ್ಪುಳ್ಳ ನೀರಿನ ಪರಿಸ್ಥಿತಿಗಳು ಮುಂಗಾರು ಮಳೆಯ ಅವಧಿಯಲ್ಲೂ ಸಹ ಕಡಿಮೆ ನೀರಿನ ವಿನಿಮಯದ ಕಾರಣದಿಂದ ಹಾಗೆಯೇ ಇರುತ್ತವೆ. ದಕ್ಷಿಣ ಭಾಗದಲ್ಲಿ ಕ್ಷಾರತ್ವವು ಮುಂಗಾರು ಮಳೆಯ ನಂತರದ ಅವಧಿ ಹಾಗೂ ಚಳಿಗಾಲದಲ್ಲಿ ಇಳಿಮುಖವಾಗುತ್ತದೆ, ಏಕೆಂದರೆ ಉತ್ತರದಿಂದ ಬೀಸುವ ಮಾರುತಗಳು ಸರೋವರದ ಉಳಿದ ನೀರಿನ ಜೊತೆ ಮಿಶ್ರಣಕ್ಕೆ ಸಹಾಯ ಮಾಡುತ್ತವೆ.
- ಬೇಸಿಗೆ ಕಾಲದಲ್ಲಿ ಸರೋವರದ ನೀರಿನ ಮಟ್ಟವು ಅದರ ಅತ್ಯಂತ ಕಡಿಮೆ ಹಂತದಲ್ಲಿರುವ ಕಾರಣ ಹೊರ ನಾಲೆಯಿಂದ ಸರೋವರಕ್ಕೆ ಉಪ್ಪು ನೀರಿನ ಒಳ ನುಗ್ಗುವಿಕೆಯು ಏರುತ್ತದೆ. ಮುಖ್ಯವಾದ ದಕ್ಷಿಣದ ಮಾರುತಗಳಿಂದ ಪ್ರೇರೇಪಿಸಲ್ಪಟ್ಟ ಗಾಳಿಯಿಂದಾದ ಮಿಶ್ರಣದ ಕಾರಣ ಕೇಂದ್ರ ಮತ್ತು ಉತ್ತರದ ವಳಯಗಳ ಕ್ಷಾರತ್ವದಲ್ಲಿ ಸಾಮಾನ್ಯ ಹೆಚ್ಚಳವು ಕಂಡು ಬರುತ್ತದೆ ಹಾಗೂ ದಕ್ಷಿಣದ ವಲಯದಲ್ಲಿ ಕ್ಷಾರತ್ವವು ಗಮನಾರ್ಹವಾಗಿ ಏರುವುದಿಲ್ಲ.[೫]
- ಸೆಡಿಮೆಂಟೇಷನ್
ಪ್ರತಿ ವರುಷವೂ ಸರೋವರದ ಮುಖಜ ಭೂಮಿಯ ಸ್ಥಳಾಂತರ ಹಾಗೂ ಹರಿವಿನ ಇಳಿಕೆಗೆ ಉಂಟು ಮಾಡಿ ಕರಾವಳಿ ತೀರದುದ್ದಕ್ಕೂ ಸರೋವರದ ತಳ್ಳುವಿಕೆಯನ್ನುಂಟು ಮಾಡಿ ನೀರಿನಿಂದ ಶೇಖರಿಸಲ್ಪಟ್ಟ ವಸ್ತುವಿನ ಕಾರಣ ಪ್ರತಿಕೂಲ ಪರಿಸ್ಥಿತಿಯ ಉಬ್ಬರ-ಇಳಿತದ ವಿನಿಮಯವು ಸಂಭವಿಸಿತು. ಇದರ ಕಾರಣ ಅಂದಾಜು ಮಾಡಲ್ಪಟ್ಟ ಹೂಳಿನ ಸಾಗಣೆ 100,000 ಮೆಟ್ರಿಕ್ ಟನ್ನುಗಳಷ್ಟು ಪ್ರಮಾಣದಲ್ಲಿದೆ. ಈ ವಿಧವಾದ ಪ್ರತೀಕೂಲ ಪರಿಸ್ಥಿತಿಯಿಂದಾಗಿ ಅದನ್ನು ಸರಿಪಡಿಸುವ ಕಾರ್ಯಗಳನ್ನು ಕೈಗೊಳ್ಳಬೇಕಾಯಿತು.[೨೦]
- ಸರೋವರದ ವಿವಿಧ ನೆಲೆಗಳಿಂದ ಹೂಳಿನ ಒಟ್ಟು ಶೇಖರಣೆಯನ್ನು ಶೇಖರಿಸಲಾಯಿತು. ಸರೋವರದ ಮೂರು ವಿಭಾಗಗಳಲ್ಲಿ ಹೂಳು ಕೂಡಿಕೆ ದರದ ಪ್ರಕೃತಿದತ್ತ ಮಾರ್ಪಾಡನ್ನು ಫಲಿತಾಂಶಗಳು ತೋರಿಸಿದವು, (ಉತ್ತರ ವಲಯ) ಪ್ರತಿ ವರುಷ 7.6 millimetres (0.30 in), (ಕೇಂದ್ರ ವಲಯ) ಪ್ರತಿ ವರುಷ 8.0 millimetres (0.31 in) ಹಾಗೂ (ದಕ್ಷಿಣ ವಲಯ) ಪ್ರತಿ ವರುಷ 2.8 millimetres (0.11 in). ಹೂಳಿನ ಮೊತ್ತದ ನೀರಿನ ಸಾಂದ್ರತೆ ಹಾಗೂ ಸಛಿದ್ರತೆಯ ಸಹಿತ ಅಸಮ ಸೆಡಿಮೆಂಟೇಷನ್ ದರವೂ ಸಹ ವಿಶ್ಲೇಷಿಸಲ್ಪಟ್ಟಿತು.
- ಇದು ತುಲನಾತ್ಮಕವಾಗಿ ಉತ್ತರ ಮತ್ತು ಕೇಂದ್ರ ವಲಯಗಳಲ್ಲಿ ಹೆಚ್ಚಿನ ಸೆಡಿಮೆಂಟೇಷನ್ ದರ ಹಾಗೂ ದಕ್ಷಿಣ ವಲಯದಲ್ಲಿ ಕಡಿಮೆ ಮಟ್ಟದಲ್ಲಿ ಸರೋವರವು ಬೇರೆ ಬೇರೆ ಸಂಗ್ರಹಣಾ ವಲಯಗಳನ್ನು ಹೊಂದಿತ್ತೆಂದು ನಿರ್ದೇಶಿಸುತ್ತದೆ.[೨೧]
ಸಂರಕ್ಷಣೆ - ಅಪಾಯಗಳು ಮತ್ತು ಕಾರ್ಯನಿರ್ವಹಣೆ
[ಬದಲಾಯಿಸಿ]1981 ರಲ್ಲಿ, ಚಿಲ್ಕ ಸರೋವರವು ಈ ಕೆಳಗಿನ ವಾಸ್ತವಾಂಶಗಳಿಂದ ಅದರ ಸಮೃದ್ಧ ಜೀವವೈವಿಧ್ಯತೆಯ ಕಾರಣದಿಂದ ರಾಮ್ಸಾರ್ ಒಡಂಬಡಿಕೆಯಡಿ ಮೊದಲ ಭಾರತೀಯ ಅಂತರಾಷ್ಟ್ರೀಯ ಪ್ರಾಮುಖ್ಯತೆಯ ತೇವಭೂಮಿಯೆಂದು ಗುರುತಿಸಲ್ಪಟ್ಟಿತು:
- ಒಂದು ಮಿಲಿಯನ್ ಗಿಂತಲೂ ಹೆಚ್ಚಿನ ವಲಸೆ ಬರುವ ನೀರ್ಕೋಳಿ ಮತ್ತು ಕಡಲತೀರದ ಪಕ್ಷಿಗಳು ಇಲ್ಲಿ ಚಳಿಗಾಲವನ್ನು ಕಳೆಯುತ್ತವೆ.
- 400 ಕ್ಕೂ ಹೆಚ್ಚಿನ ಕಶೇರುಕಗಳ ತಳಿಗಳನ್ನು ದಾಖಲಿಸಲ್ಪಟ್ಟಿವೆ.
- ಒಂದು ಕಡಲ ಕೊಲ್ಲಿಯ ನೀರಿನ ಪ್ರದೇಶವಾಗಿ, ಅದು ಕಡಲ ಸಂಬಂಧದ ಅಪೂರ್ವ ಪ್ರಾಣಿ, ಪಕ್ಷಿಗಳ, ಸ್ವಲ್ಪ ಉಪ್ಪು ನೀರಿನ ಹಾಗೂ ತಾಜಾ ನೀರಿನ ತಳಿಗಳನ್ನು ಸಂರಕ್ಷಿಸುತ್ತದೆ.
- ಅನೇಕ ಅಪರೂಪದ ಹಾಗೂ ಅಳಿವಿನ ಅಂಚಿನಲ್ಲಿರುವ ಜೀವಿಗಳು ಈ ಪ್ರದೇಶದಲ್ಲಿ ಕಂಡುಬರುತ್ತವೆ.
- ಅಲ್ಲಿನ ಜನಾಂಗದ ಜೀವನಾಧಾರವಾದ ಮೀನುಗಾರಿಕೆಯನ್ನು ಈ ಸರೋವರವು ಬೆಂಬಲಿಸುತ್ತದೆ.
- ಉತ್ಪತ್ತಿ ಮೂಲದ ವೈವಿಧ್ಯತೆಯನ್ನು ಕಾಪಾಡುವಲ್ಲಿ ಈ ಸರೋವರವು ಬಹಳ ಬೆಲಯುಳ್ಳದ್ದು.
- ಸಮುದ್ರ ಕಳೆ ಮತ್ತು ಆಹಾರಕ್ಕೊಸ್ಕರ ಪ್ರಾಣಿ ಪಕ್ಷಿಗಳನ್ನು ಬೆಳೆಸುವ ಚಟುವಟಿಕೆಗಳಲ್ಲಿ ಏರಿಕೆಯಾಗುತ್ತಿದೆ.[೯][೧೦]
- ಗಂಡಾಂತರಗಳು
ಅನೇಕ ವರ್ಷಗಳಿಂದ ಸರೋವರದ ಪರಿಸರದ ವ್ಯವಸ್ಥೆಯು ಅನೇಕ ಸಮಸ್ಯೆಗಳು ಹಾಗೂ ಅಪಾಯಗಳನ್ನು ಎದುರಿಸುತ್ತಿದೆ, ಅವುಗಳಲ್ಲಿ ಕೆಲವು:
- ನದಿ ವ್ಯವಸ್ಥೆಗಳಿಂದ ಸರೋವರದ ತಳ್ಳುವಿಕೆ ಹಾಗೂ ನೀರಿನಿಂದ ಶೇಖರಿಸಲ್ಪಟ್ಟ ವಸ್ತುಗಳು ಹಾಗೂ ಹೂಳು ತುಂಬಿಕೊಳ್ಳುವುದರಿಂದ ಉಂಟಾದ ಪರಿಸ್ಥಿತಿ
- ನೀರಿನ ಮೇಲ್ಮೈ ಪ್ರದೇಶದ ಕುಗ್ಗುವಿಕೆ
- ಸಮುದ್ರಕ್ಕೆ ಸಂಪರ್ಕಿಸುವ ಮುಖಜ ಭೂಮಿಯ ಸ್ಥಳಾಂತರವೂ ಅಲ್ಲದೆ ಸಮುದ್ರದ ಪ್ರವೇಶ ದ್ವಾರದ ಉಸಿರುಕಟ್ಟಿಸುವಿಕೆ
- ಕ್ಷಾರತ್ವ ಹಾಗೂ ಮೀನುಗಾರಿಕೆ ಸಂಪನ್ಮೂಲಗಳ ಕುಗ್ಗುವಿಕೆ
- ತಾಜಾ ನೀರಿನ ಆಕ್ರಮಣಕಾರಿ ಕಳೆಗಳ ತಳಿಗಳ ಹೆಚ್ಚಾಗುವಿಕೆ ಹಾಗೂ
- ಅದನ್ನೇ ಅವಲಂಬಿಸಿರುವ ಜನಾಂಗದ ಜೀವನೋಪಾಯದ ಮೇಲೆ ಪ್ರತಿಕೂಲ ಪರಿಸ್ಥಿತಿಗಳಿಂದ ಪ್ರಭಾವ ಬೀರಿ ಫಲವತ್ತತೆಯಲ್ಲಿ ಇಳಿಕೆಯ ಸಹಿತ ಜೈವಿಕ ವೈವಿಧ್ಯತೆಯಲ್ಲಿ ಒಟ್ಟಾರೆ ನಷ್ಟಗಳು
- ಸರೋವರದಲ್ಲಿ ಮೀನುಗಾರರು ಮತ್ತು ಮೀನುಗಾರರಲ್ಲದವರ ನಡುವೆ ಮೀನುಗಾರಿಕೆಯ ಹಕ್ಕುಗಳ ಬಗ್ಗೆ ಜಗಳಗಳು ಮತ್ತು ತತ್ಪರಿಣಾಮದ ನ್ಯಾಯಾಲಯದಲ್ಲಿನ ವ್ಯಾಜ್ಯಗಳು
ಪ್ರಾನ್ ಗಳ ವಾಣಿಜ್ಯ ಮೀನುಗಾರಿಕೆಯ ತೀವ್ರ ವೇಗದ ವಿಸ್ತರಣೆಯು ಸರೋವರದೆ ಮೀನುಗಾರಿಕೆ ಮತ್ತು ಪಕ್ಷಿ ಸಂಕುಲನದ ಕುಗ್ಗುವಿಕೆಗೆ ಗಮನಾರ್ಹವಾಗಿ ಕೊಡುಗೆ ಕೊಟ್ಟಿದೆ.[೨೨] ಒಡಿಶಾ ರಾಜ್ಯ ಸರ್ಕಾರವು ಭಾರತ ಸರ್ಕಾರದ ಬೆಂಬಲದೊಂದಿಗೆ ಹೊಂದಿಕೊಳ್ಳಲು ಮಾರ್ಪಾಡು ಮಾಡಿದ ಕಾಪಾಡುವಿಕೆ ಹಾಗೂ ಕಾರ್ಯನಿರ್ವಹಣೆಯನ್ನು ಸ್ವೀಕರಿಸಲು ಅಗತ್ಯದ ಸಾಮರಸ್ಯದ ಕಾರ್ಯಗಳನ್ನು ಆರಂಭಿಸಿತು.[೬][೨೦]
- 1993 ರ ವೇಳೆಗೆ, ಚಿಲಿಕ ದಲ್ಲಿ ಸಮಸ್ಯೆಗಳು ಎಷ್ಟು ತೀವ್ರವಾಗಿತ್ತೆಂದರೆ, ಸರೋವರವನ್ನು "ಮೋಂಟ್ರೆಕ್ಸ್ ರೆಕಾರ್ಡ್" ನಲ್ಲಿನ ಪಟ್ಟಿಯಲ್ಲಿ ಸೇರಿಸ ಬೇಕಾಯಿತು, ಏಕೆಂದರೆ ಸರೋವರವನ್ನು "ಮಾನವನ ಕೃತ್ಯಗಳಿಂದ ಪರಿಸರದ ಗುಣಲಕ್ಷಣಗಳ ಬಗ್ಗೆ ತರಲ್ಪಟ್ಟ, ಅದರಲ್ಲಿ ಬಂದ ಬದಲಾವಣೆಯು ಒಳಗಾದ, ಒಳಗಾಗುತ್ತಿರುವ ಅಥವಾ ಒಳಗಾಗಲು ಸಾಧ್ಯತೆಯಿದೆಯೆಂದು" ಪರಿಗಣಿಸಲ್ಪಟ್ಟಿತು.
- ಸಾಕಷ್ಟು ಉಸ್ತುವಾರಿಯ ಜೊತೆಗೆ ಹೆಚ್ಚಿಗೆ ಸೇರಿಸಲ್ಪಟ್ಟ, ಸರೋವರದ ಉಳಿಯುವಿಕೆಗೆ ಪರಿಹಾರದ ಸೂಕ್ತ ಕಾರ್ಯಕ್ರಮಗಳನ್ನು ಉತ್ತೇಜಿಸುವುದು ಇದರ ಗುರಿಯಾಗಿತ್ತು. ಅಂತಹ ಒಂದು ಕೆಲಸವು ರಾಮ್ಸಾರ್ ಅಡ್ವೈಸರಿ ಮಿಷನ್ ಹಾಗೂ ಇತರೆ ಗುರುತಿಸಲ್ಪಟ್ಟ ತಾಂತ್ರಿಕ ಸಹಾಯದ ಕಾರ್ಯಕ್ರಮಗಳ ಯೋಜನೆಗಳಿಂದ ಲಾಭವಾಗಬಹುದೆಂದು ನಿರೀಕ್ಷಿಸಲಾಗಿತ್ತು.
- ಸಂಕ್ಷಿಪ್ತವಾಗಿ, ಮೇಲಿನಿಂದ ಹರಿದು ಬರುವ ನೀರಿನ ಹೂಳುವಿನಿಂದ ನೀರಿನ ಮೇಲ್ಮೈ ಪ್ರದೇಶದ ಕುಗ್ಗುವಿಕೆ, ಕ್ಷಾರತ್ವದ ಇಳಿಕೆ ಹಾಗೂ ಸಿಹಿ ನೀರಿನಲ್ಲಿರುವ ಆಕ್ರಮಣಕಾರಿ ಕಳೆಯು ಫಲಭರಿತವಾಗಿ ಬೆಳೆದು ತುಂಬಿಕೊಳ್ಳುವಿಕೆ, ಇವೆಲ್ಲವೂ ಅರಣ್ಯಜೀವಿಗಳ ಪರಿಸರದ ಮೇಲೆ ಹಾಗೂ ಮೀನುಗಾರಿಕಾ ಸಂಪನ್ಮೂಲಗಳಿಗೆ ಅಪಾಯಕಾರಿ ಋಣಾತ್ಮಕ ಪ್ರಭಾವವನ್ನು ಬೀರಿದವು.[೧೭]
- ಚಿಲಿಕ ಅಭಿವೃದ್ಧಿ ಪ್ರಾಧಿಕಾರ (CDA)
ಸರೋವರೆದ ಸಂಪನ್ಮೂಲಗಳನ್ನೇ ಅವಲಂಬಿಸಿದ್ದ ಜನಗಳ ಪ್ರಮುಖ ಸಂಖ್ಯೆಯ ಬಗ್ಗೆ ಚಿಂತಿಸಿ ಹಾಗೂ ಸರೋವರದ ಅವನತಿಯಿಂದ ಹಾಳಾಗುತ್ತಿರುವ ಪರಿಸರ ವ್ಯವಸ್ಥೆಯ ಬಗ್ಗೆ ಕಾರ್ಯವಿಶೇಷ ಆಸಕ್ತಿಯನ್ನು ತೋರಿಸುತ್ತಾ, ಒಡಿಶಾ ಸರ್ಕಾರವು 1992 ರಲ್ಲಿ ಚಿಲ್ಕ ಅಭಿವೃದ್ಧಿ ಪ್ರಾಧಿಕಾರವನ್ನು (CDA) ಸ್ಥಾಪಿಸಿತು. ಕೆಳಗೆ ಕಾಣಿಸಿದ ಅಧಿಕಾರದ ವಿಶೇಷತೆಗಳ ಸಹಿತ, ಅರಣ್ಯ ಮತ್ತು ಪರಿಸರ ಇಲಾಖೆಯ ಆಡಳಿತಾತ್ಮಕ ಕಾನೂನಿನ ಪರಿಧಿಯಲ್ಲಿ ಒಂದು ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿ ಭಾರತೀಯ ಸಂಘಗಳ ದಾಖಲಾತಿ ಕಾನೂನಿನ ಕಾಯ್ದೆಯಡಿ ಸರೋವರದ ಪುನರ್ಸ್ಥಾಪನೆ ಮತ್ತು ಒಟ್ಟಾರೆ ಅಭಿವೃದ್ಧಿಗಾಗಿ CDA ಸ್ಥಾಪಿಸಲ್ಪಟ್ಟಿತು:
- ಅದರ ಉತ್ಪತ್ತಿ ಮೂಲದ ವೈವಿಧ್ಯತೆಗಳೆಲ್ಲದರ ಜೊತೆ ಸರೋವರದ ಪರಿಸರದ ವ್ಯವಸ್ಥೆಯನ್ನು ಸಂರಕ್ಷಿಸುವುದು
- ಅದರ ಮೇಲೆ ಅವಲಂಬಿತರಾದ ಜನಾಂಗದವರಿಂದ ಸರೋವರದ ಸಂಪನ್ಮೂಲಗಳ ಸರಾಸರಿ ಉತ್ತಮ ಜೀಪವನೋಪಾಯ ಕಾರ್ಯನಿರ್ವಹಣೆ ಹಾಗೂ ಸೂಕ್ತ ಉಪಯೋಗಕ್ಕಾಗಿ ಕಾರ್ಯವ್ಯವಸ್ಥೆಯನ್ನು ಜಾರಿಗೊಳಿಸುವುದು
- ಸ್ವತಃ ಅದರಿಂದಲೇ ಇಲ್ಲವೇ ಇತರೆ ಏಜನ್ಸಿಗಳ ಮುಖಾಂತರವಾಗಲಿ ಬಹು ಆಯಾಮಗಳ ಮತ್ತು ಬಹುಶಿಸ್ತುಳ್ಳ ಪ್ರಗತಿಯ ಚಟುವಟಿಕೆಗಳನ್ನು ಕಾರ್ಯಗತಗೊಳಿಸುವುದು
- ಸರೋವರದ ವಿಕಾಸಕ್ಕಾಗಿ ವಿವಿಧ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಸಂಸ್ಥೆಗಳ ಜೊತೆ ಸಹಕರಿಸುವುದು[೨೦]
ಪ್ರಾಧಿಕಾರದ ಆಡಳಿತದ ಅಂಗದಲ್ಲಿ ಒಡಿಶಾದ ಮುಖ್ಯ ಮಂತ್ರಿಗಳು ಮುಖ್ಯಸ್ಥರಾಗಿರುತ್ತಾರೆ ಹಾಗೂ ಜನಗಳ ಪ್ರತಿನಿಧಿಗಳು (ಸಂಸತ್ತಿನ ಸದಸ್ಯರು ಮತ್ತು ವಿಧಾನಸಭಾ ಸದಸ್ಯರು), ಮೀನುಗಾರ ಜನಾಂಗದ ಪ್ರತಿನಿಧಿಗಳೂ ಅಲ್ಲದೆ, ಮುಖ್ತ ಇಲಾಖೆಗಳ ಕಾರ್ಯದರ್ಶಿಗಳು, ವಿಷಯ ತಜ್ಞರು ಹಾಗೂ ಪ್ರಸಿದ್ಧ ವಿಜ್ಞಾನಿಗಳು ಅದರ ಸದಸ್ಯರಾಗಿರುತ್ತಾರೆ.
- 1998 ರಲ್ಲಿ, ಭಾರತ ಸರ್ಕಾರದ ಹತ್ತನೆಯ ಹಾಗೂ ಹನ್ನೊಂದನೆಯ ಹಣಕಾಸು ಕಮೀಷನ್ ಗಳಿಂದ ಆರ್ಥಿಕ ಸಹಾಯದ ಜೊತೆ ಸೇರಿಸಲ್ಪಟ್ಟ ಆರ್ಥಿಕ ಪ್ರಾಧಿಕಾರದ ಸಹಿತ ಒಂದು ಕಾರ್ಯನಿರ್ವಾಹಕ ಕಮಿಟಿಯು ಸ್ಥಾಪಿಸಲ್ಪಟ್ಟಿತು, ಇದು CDA ಯಿಂದ ತೆಗೆದುಕೊಳ್ಳಲ್ಪಟ್ಟ ಕಾರ್ಯವ್ಯವಸ್ಥೆಯು ಮುಂದೊಡಗುವುದಕ್ಕೆ ಬೆಂಬಲ ಕೊಟ್ಟಿತು. ಇದು ಪರಿಣಾಮಕಾರಿ ಉತ್ತಮಗೊಳ್ಳುತ್ತಿರುವ ಕಾರ್ಯವ್ಯವಸ್ಥೆಯ ಕೆಲಸಗಳು ಹಾಗೂ ಒಂದು ಸುಸಂಘಟಿತ ಮಾರ್ಗವನ್ನು ಯೋಜಿಸಲು ಸುಗಮಗೊಳಿಸಿತು.
- ಆರ್ಥಿಕ ಅಯೋಗಗಳಿಂದ ಶಿಫಾರಸು ಮಾಡಲ್ಪಟ್ಟ "ವಿಶೇಷ ಸಮಸ್ಯಾ ಸಹಾಯಧನ" ದಿಂದ 570 ಮಿಲಿಯನ್ ರುಪಾಯಿಗಳ (ಯು.ಎಸ್.$12.7 ಮಿಲಿಯನ್) ಆರ್ಥಿಕ ಸಹಾಯದ ಸಹಿತ ಒಂದು ಒಟ್ಟುಗೂಡಿದ ಕಾರ್ಯವ್ಯವಸ್ಥೆಯ ಯೋಜನೆಯು ಜಾರಿಗೊಳಿಸಲ್ಪಟ್ಟಿತು. 10 ಮಿಲಿಯನ್ ರುಪಾಯಿಗಳ (ಯು.ಎಸ್. $220,000) ವರೆಗೆ ವಿಶ್ವ ಬ್ಯಾಂಕ್ ನಿಂದ ಒಡಿಶಾ ವಾಟರ್ ರಿಸೋರ್ಸಸ್ ಕನ್ಸಾಲಿಡೇಷನ್ ಪ್ರಾಜೆಕ್ಟ್ ನ ಅಡಿ ಜಲಜೈವಿಕದ ಮೇಲ್ವಿಚಾರಣೆಯು ಬೆಂಬಲಿಸಲ್ಪಟ್ಟಿತು.
- ರಾಜ್ಯ ಸರ್ಕಾರದ 7 ಸಂಸ್ಥೆಗಳು, 33 NGO ಗಳು, 3 ರಾಷ್ಟ್ರೀಯ ಸರ್ಕಾರದ ಮಂತ್ರಿ ಮಂಡಲಗಳು, ಇತರೆ 6 ಸಂಸ್ಥೆಗಳು, ಅಂತರಾಷ್ಟ್ರೀಯ 11 ಸಂಸ್ಥೆಗಳು, 13 ಸಂಶೋಧನಾ ಸಂಸ್ಥೆಗಳು ಹಾಗೂ ಜನಾಂಗದ ಗುಂಪಿನ 55 ಬೇರೆ ಬೇರೆ ವಿಭಾಗಗಳ ಒಂದು ದೃಢವಾದ ಬೆಂಬಲದ ನೆಟ್ವರ್ಕ್ ರಚಿಸಲ್ಪಟ್ಟಿತು.[೨೦] 2003 ರಲ್ಲಿ, ಭಾರತೀಯ ಮತ್ತು ಜಪಾನಿ ತಜ್ಞರ ಸಹಯೋಗವು ಚಿಲಿಕ ಸರೋವರ ಹಾಗೂ ಜಪಾನಿನಲ್ಲಿರುವ ಸರೋಮಾ ಸರೋವರಗಳ ನಡುವೆ ಒಂದು ಗೆಳೆತನದ ಸಂಬಂಧವಾದ ಸಿಸ್ಟರ್ ವೆಟ್ ಲ್ಯಾಂಡ್ಸ್ ಎನ್ನುವ ಕಾರ್ಯಕ್ರಮಕ್ಕೆ ಅನುವು ಮಾಡಿಕೊಟ್ಟಿತು.[೧೭]
- ಉತ್ತಮಗೊಳ್ಳುತ್ತಿರುವ ಕೆಲಸಗಳು
ಸರೋವರದಿಂದ ಎದುರಿಸಲ್ಪಟ್ಟ ಬೆದರಿಕೆಗಳನ್ನು ಪರಿಗಣಿಸಿ, ರಾಷ್ಟ್ರೀಯ ತೇವಭೂಮಿಗಳು, ಭಾರತ ಸರ್ಕಾರದ ಪರಿಸರ ಮತ್ತು ಅರಣ್ಯಗಳ ಮಂತ್ರಿ ಮಂಡಲದ ಮ್ಯಾಂಗ್ರೋವ್ ಹಾಗೂ ಕೋರಲ್ ರೀಫ್ಸ್ ಕಮಿಟಿಯೂ ಸಹ, ಉಳಿಯುವಿಕೆ ಹಾಗೂ ಕಾರ್ಯವ್ಯವಸ್ಥೆಗೆ ಮೊದಲ ಪ್ರಾಶಸ್ತ್ಯದ ತಾಣವೆಂದು ಸರೋವರವನ್ನು ಗುರುತಿಸಿತು.[೫] CDA ಯಿಂದ ತೆಗೆದುಕೊಳ್ಳಲ್ಪಟ್ಟ ಸುಧಾರಿಸಿಕೊಳ್ಳುತ್ತಿರುವ ಕಾರ್ಯಗಳು, ಪರಿಸರ ವ್ಯವಸ್ಥೆಯನ್ನು ಹಿಂದಕ್ಕೆ ಪಡೆಯಲು ಹಾಗೂ ಸರೋವರದ ಸುತ್ತಲೂ ಮತ್ತು ಅದರ ದ್ವೀಪಗಳಲ್ಲಿ ವಾಸಿಸುತ್ತಿರುವ ಜನಾಂಗದ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳನ್ನು ಸುಧಾರಿಸಲು ಈ ಕೆಳಗಿನ ಕಾರ್ಯಗಳು ಒಳಗೊಂಡಿವೆ.
- ಸರೋವರದ ಮುಖ ದ್ವಾರದ ತೆಗೆಯುವಿಕೆ
ಸತಾಪುರದಲ್ಲಿ ತಡೆದಂಡೆಯ ಮುಖಾಂತರ ಸಮುದ್ರಕ್ಕೆ ಹೊಸ ಮುಖಜ ಭೂಮಿ ಮತ್ತು ಕಾಲುವೆಯ ತೆರೆಯುವಿಕೆಯ ಜಲಶಾಸ್ತ್ರದ ಮಧ್ಯಸ್ತಿಕೆಯು ಅತ್ಯಂತ ಪರಿಣಾಮಕಾರಿ ಸುಧಾರಣೆಯ ಕಾರ್ಯವಾಗಿದೆ. ಇದು ಸಮುದ್ರದ ಕೊಲ್ಲಿಯ ಪರಿಸರದ ಅಪೂರ್ವ ಗುಣಲಕ್ಷಣಗಳನ್ನು ಸಂರಕ್ಷಿಸಲು ಸರೋವರದ ಏರಿಳಿತಗಳ ಪ್ರಮಾಣಗಳ ಪ್ರವಾಹದ ಹಾಗೂ ಲೌಕಿಕ ಕ್ಷಾರತ್ವವನ್ನು ಸುಧಾರಿಸಿತು. ಕೇಂದ್ರ ಜಲ ಮತ್ತು ಶಕ್ತಿ ಸಂಶೋಧನಾ ಕೇಂದ್ರ, ಪುಣೆ ಮತ್ತು ನ್ಯಾಷನಲ್ ಇಂಸ್ಟಿಟ್ಯೂಟ್ ಆಫ್ ಓಷಿಯಾನೋಗ್ರಫಿ, ಗೋವಾ ದವರು ಒಂದು ಮಾದರಿ ಕೃತಿಯ ಮೇಲೆ ಜಲಚಲನಶಾಸ್ತ್ರಾಧ್ಯಯನ, ಮೂರು-ಆಯಾಮಗಳ ಗಣಿತಶಾಸ್ತ್ರದ ಮಾದರಿಯ ರಚನೆಯ ಮೂಲಕ ಅಧ್ಯಯನ, ಇತ್ಯಾದಿ ಕೂಲಂಕಷವಾದ ವೈಜ್ಞಾನಿಕ ಅಧ್ಯಯನಗಳನ್ನು ಕೈಗೊಂಡನಂತರ ಈ ಮಧ್ಯಸ್ಥಿಕೆಯನ್ನು ಕೈಗೊಳ್ಳಲಾಯಿತು. ಸೆಪ್ಟೆಂಬರ್ 2002ರಲ್ಲಿ ಈ ಸರೋವರವನ್ನು ಸಮುದ್ರಕ್ಕೆ ಬೆಸೆಯುವ ಕಾಲುವೆಯ ಹೂಳೆತ್ತುವ ಕಾರ್ಯ ಮತ್ತು ಸ್ವಾಭಾವಿಕ ನೀರಿನ ಹರಿವಿಗೆ ಮತ್ತು ಕ್ಷಾರಮಟ್ಟವನ್ನು ಯಥಾಸ್ಥಿತಿಯಲ್ಲಿರಿಸಲು ಒಂದು ಹೊಸ ಜಲದ್ವಾರವನ್ನು ತೆರೆಯಲಾಯಿತು. ಈ ಕಾರ್ಯಗಳನ್ನು ಕೈಗೊಂಡ ನಂತರ ಹೊಸನೀರಿನ ಜೊಂಡುಗಳ ವೃದ್ಧಿ ಕುಂಠಿತವಾಯಿತು ಮತ್ತು ಸರೋವರದಲ್ಲಿನ ಮೀನುಗಳ ಸಂಖ್ಯೆ ಗಮನೀಯವಾಗಿ ವೃದ್ಧಿಸಿತು. ಈ ಹೊಸ ಜಲದ್ವಾರವು ಹೊರನೀರಿನ (ನೀರನ್ನು ಹೊರಗೊಯ್ಯುವ) ಕಾಲುವೆಯ ಉದ್ದವನ್ನು 18 kilometres (11 mi)ನಷ್ಟು ಕಡಿಮೆಗೊಳಿಸಿತು.[೧೦][೨೩] ನೂತನ ಜಲಮುಖವನ್ನು ತೆರೆಯುವುದರ ಮೂಲಕ ಸರೋವರದಾದ್ಯಂತ ಕ್ಷಾರಗುಣವು ಹೆಚ್ಚಿತು, ಏರುಪೇರುಗಳು ಕಡಿಮೆಯಾದವು ಮತ್ತು ನೀರು ಹೆಚ್ಚು ತಿಳಿಯಾಯಿತು.[೧೭] ಈ ಬಗ್ಗೆ ಸವಿವರ ಫಲಿತಾಂಶಗಳನ್ನು ಬಾಹ್ಯ ಮೂಲಗಳುವಿನಲ್ಲಿ ತೋರಿಸಿರುವ ಆಕರಗಳಲ್ಲಿ ಕಾಣಬಹುದು.
ಹಮ್ಮಿಕೊಂಡ ಇತರ ಸುಧಾರಣಾ ಮಾರ್ಗಗಳು
[ಬದಲಾಯಿಸಿ]- “ಭಾಗವಹಿಸಲ್ಪಡುವ ಸೂಕ್ಷ್ಮ ಜಲಾನಯನ ವ್ಯವಸ್ಥೆಯನ್ನು ಒಂದು ಸಂಪೂರ್ಣ ಪರಿಸರವ್ಯವಸ್ಥಾ ಮಾರ್ಗದಲ್ಲಿ ನಿಭಾಯಿಸುವ" ಹಾಗೆ ಜಲಾನಯನ ನಿಭಾವಣೆಯನ್ನು ಅನುಸರಿಸುವುದು.
- ಪಕ್ಷಿಗಳ ಗೂಡುಗಳ ಸಂರಕ್ಷಣೆ ಮತ್ತು ಪಕ್ಷಿ ಜಾತಿಗಳ ಸಂರಕ್ಷಣೆ
- ಪಕ್ಷಿಗಳನ್ನು ಕೊಲ್ಲದಿರಲು ಸ್ಥಳೀಯ ಜನರಿಗೆ ನಗದು ರೂಪದ ಸವಲತ್ತುಗಳು.
- ಪರಿಸರ-ಪ್ರವಾಸ ಅಭಿವೃದ್ಧಿಗಳೊಸಲು ಬೇಕಾದ ತರಬೇತಿ ಕಾರ್ಯಕ್ರಮಗಳಂತಹವನ್ನು ಹಮ್ಮಿಕೊಂಡು ಸಾಮಾಜಿಕ-ಆರ್ಥಿಕ ಅಭಿವೃದ್ಧಿಯತ್ತ ದಾಪುಗಾಲು.
- ದ್ವೀಪದಲ್ಲಿರುವ ಹಳ್ಳಿಗಳಿಗೆ ಸೌರಶಕ್ತಿಯಿಂದ ಬೆಳಗುವ ದಾರಿದೀಪಗಳ ನೀಡುವಿಕೆ.
- ಒಂಟಿಯಾಗಿರುವ ಹಳ್ಳಿಗಳಿಗೆ ದೋಣಿಸಾರಿಗೆ ವ್ಯವಸ್ಥೆಯ ಅಭಿವೃದ್ಧಿ
- ಬೆಸ್ತರಿಗೆ ತಮ್ಮ ಕಾರ್ಯದಲ್ಲಿ ತೊಡಗಲು ಅನುಕೂಲವಾಗುವಂತಹ ಕಾಮಗಾರಿಗಳ ನಿರ್ಮಾಣ ಹಾಗೂ ಶೈಕ್ಷಣಿಕ ಮತ್ತು ಪರಿಸರ ಸಂಬಂಧಿತ ಚಟುವಟಿಕೆಗಳು.
ಸರೋವರದ ಅಭಿವೃದ್ಧಿಗೊಂಡ ಸ್ಥಿತಿಗಳನ್ನು ಮನಗಂಡು 2002ರಲ್ಲಿ ಚಿಲ್ಕವನ್ನು ಮಾಂಟ್ರಾಕ್ಸ್ ದಾಖಲೆಗಳಿಂದ ಹೊರಗೆ ಹಾಕಲಾಯಿತು.[೯][೧೦] ಚಿಲ್ಕ ಸರೋವರವು ಮಾಂಟ್ರಾಕ್ಸ್ ದಾಖಲೆಗಳಿಂದ ಹೊರಹಾಕಲ್ಪಟ್ ಮೊಟ್ಟಮೊದಲ ರಾಮ್ಸಾಸ್ ತಾಣವಾಗಿದೆ.[೧೭]
- ಪ್ರಶಸ್ತಿಗಳು
- ನವೆಂಬರ್ 2002ರಲ್ಲಿ "ಸುಧಾರಣೆಯ ಕ್ಷೇತ್ರದಲ್ಲಿ ಶ್ರೇಷ್ಠ ಸಾಧನೆ ಮತ್ತು ಗದ್ದೆಗಳ ವಿವೇಕಯುತ ಬಳಕೆ ಹಾಗೂ ಈ ಚಟುವಟಿಕೆಗಳಲ್ಲಿ ಸ್ಥಳೀಯ ಪಂಗಡಗಳ ಪರಿಣಾಮಕಾರಿ ಭಾಗವಹಿಸುವಿಕೆ"ಗಾಗಿ ಚಿಲ್ಕ ಅಭಿವೃದ್ಧಿ ಪ್ರಾಧಿಕಾರಕ್ಕೆ ರಾಮ್ಸಾರ್ ಗದ್ದೆ ಸಂರಕ್ಷಣಾ ಪ್ರಶಸ್ತಿಯನ್ನು ನೀಡಲಾಯಿತು.[೯][೧೦]
- ಪರಿಸರ ಮತ್ತು ಅರಣ್ಯ ಸಚಿವ ಇಲಾಖೆಯು ಕೊಡಮಾಡುವ ಇಂದಿರಾಗಾಂಧಿ ಪರ್ಯಾವರಣ್ ಪುರಸ್ಕಾರ್ ಎಂಬ ಪುರಸ್ಕಾರವನ್ನು ಭಾರತ ಸರ್ಕಾರವು ಅರ್ಹರಿಗೆ ಪ್ರತಿ ವರ್ಷವೂ ನೀಡುತ್ತದೆ; ಈ ಪ್ರತಿಷ್ಠಿತ ಇಂದಿರಾಗಾಂಧಿ ಪರ್ಯಾವರಣ್ ಪ್ರಶಸ್ತಿ - 2002 ವನ್ನು ಚಿಲಿಕ ಸರೋವರದ ಪರಿಸರ-ವ್ಯವಸ್ಥೆಯ ಪುನಃಸ್ಥಾಪನೆ ಮತ್ತು ಸಂರಕ್ಷಣೆಯನ್ನು ಸಮರ್ಪಕವಾಗಿ ನಿರ್ವಹಿಸಿದ ಚಿಲಿಕ ಅಭಿವೃದ್ಧಿ ಪ್ರಾಧಿಕಾರಕ್ಕೆ ನೀಡಲಾಯಿತು.[೨೪]
ಸಸ್ಯಸಂಪತ್ತು ಮತ್ತು ಪ್ರಾಣಿಸಂಕುಲ
[ಬದಲಾಯಿಸಿ]ಈ ಸರೋವರದ ಪರಿಸರ ಶ್ರೀಮಂತಿಕೆಯು ಇಲ್ಲಿನ ಸಸ್ಯಗಳ ಉತ್ಪತ್ತಿಯ ವೈವಿಧ್ಯತೆಗಳನ್ನು ಸಂರಕ್ಷಿಸಲು ಮಹತ್ತರ ಮೌಲ್ಯವುಳ್ಳದ್ದಾಗಿದೆ; ಏಕೆಂದರೆ ಈ ತಾಣದ ವೈವಿಧ್ಯಪೂರ್ಣತೆ ಹಾಗೂ ಸಸ್ಯ ಮತ್ತು ಪ್ರಾಣಿಗಳ ವಿಶಿಷ್ಟತೆಗಳ ಶ್ರೀಮಂತಿಕೆ ಆ ಮಟ್ಟದ್ದಾಗಿದೆ. (ಕೆಲವು ಚಿತ್ರಗಳನ್ನು ಚಿತ್ರಸಂಪುಟದಲ್ಲಿ ನೀಡಲಾಗಿದೆ).[೬] ಝೂಆಲಾಜಿಕಲ್ ಸರ್ವೇ ಆಫ್ ಇಂಡಿಯಾ (ZSI) 1985ರಿಂದ 1988ರ ವರೆಗೆ ಈ ಸರೋವರದ ಅಧ್ಯಯನವನ್ನು ಕೈಗೊಂಡು 800 ಪ್ರಾಣಿಸಂಕುಲಗಳನ್ನು ಗುರುತಿಸಿದ್ದು, ಅದರಲ್ಲಿ ಕೆಲವು ಅಪರೂಪದ, ಅಳಿವಿನ ಅಂಚಿನಲ್ಲಿರುವ, ಬೇಟೆಗೀಡಾಗಬಲ್ಲಂತಹ ಮತ್ತು ಸುಲಭವಾಗಿ ತುತ್ತಾಗಬಲ್ಲಂತಹ ಪ್ರಾಣಿಗಳೂ ಇದ್ದವು; ಆದರೆ ಈ ಭೂವಲಯದ ಕೀಟಗಳು ಈ ಅಧ್ಯಯನಕ್ಕೆ ಒಳಪಟ್ಟಿರಲಿಲ್ಲ.
ಇಲ್ಲಿ ಗುರುತಿಸಲ್ಪಟ್ಟ ಅಪರೂಪದ ಹಾಗೂ ಅಳಿವಿನ ಅಪಾಯದಲ್ಲಿರುವ ಪ್ರಾಣಿಗಳ ವರ್ಗಗಳೆಂದರೆ ಹಸಿರು ಸಮುದ್ರ ಕೂರ್ಮ (EN), ಡುಗಾಂಗ್ (VU), ಇರ್ರವಡ್ಡಿ ಡಾಲ್ಫಿನ್ (VU), ಕಪ್ಪುಜಿಂಕೆ (NT), ಚಮಚಕೊಕ್ಕಿನ ಸ್ಯಾಂಡ್ ಪೈಪರ್ (CR), ಅಂಗಾಂಗರಹಿತ ಸ್ಕಿಂಕ್ ಮತ್ತು ಬೆಸ್ತಮೀನು (EN). 24 ಸಸ್ತನಿಗಳ ವರ್ಗಗಳೂ ಇವೆಯೆಂದು ವರದಿ ಮಾಡಲಾಗಿತ್ತು. 37 ಸರೀಸೃಪ ಪ್ರಬೇಧಗಳು ಮತ್ತು ನೆಲಜಲೋಭಯಜೀವಿಗಳಿವೆಯೆಂದೂ ವರದಿಯಿದ್ದಿತು.[೬][೭]
ಸಸ್ಯಸಂಪತ್ತು
[ಬದಲಾಯಿಸಿ]ಇತ್ತೀಚಿನ ಸಮೀಕ್ಷೆಯ ಪ್ರಕಾರ ಒಟ್ಟು 726 ವಿಧದ ಹೂವಿನ ಸಸ್ಯಗಳು ಇಲ್ಲಿದ್ದು, ಅದರಲ್ಲಿ 496 ವರ್ಗಗಳು ಹಾಗೂ 120 ಸಸ್ಯಕುಟುಂಬಗಳು ಸೇರಿವೆ. ಸುಮಾರು 2900 ರಸನಾಳಸಹಿತ ಸಸ್ಯವರ್ಗಗಳನ್ನು ಹೊಂದಿರುವ ಒಡಿಶಾ ರಾಜ್ಯದ ಸಸ್ಯವರ್ಗದ ಕಾಲುಭಾಗದಷ್ಟು ವೈವಿಧ್ಯಗಳನ್ನು ಇಲ್ಲಿ ಕಾಣಬಹುದಾಗಿದೆ. ಫಾಬಾಸಿಯೇ ಇಲ್ಲಿನ ಪ್ರಮುಖ ಸಸ್ಯವರ್ಗವಾಗಿದ್ದು ಪೋಸಿಯೇ ಮತ್ತು ಸೈಪರಾಸಿಯೇ ವರ್ಗದ ಸಸ್ಯಗಳೂ ಹೇರಳವಾಗಿವೆ. ಕೆಲವು ಜಾತಿಯ ಗಿಡಗಳು ಕೆಲವು ದ್ವೀಪಗಳ ವೈಶಿಷ್ಟ್ಯಗಳಾಗಿ, ಅಲ್ಲಿಗೆ ಸೀಮಿತವಾದುವಾಗಿ ಕಂಡುಬಂದವು. ಇಲ್ಲಿನ ಸಸ್ಯವರ್ಗದ ಬಹು ಅಂಶವು ಜಲದಲ್ಲಿ ಹಾಗೂ ಜಲಾಂತರದಲ್ಲಿ ಬೆಳೆಯುವ ಜಾತಿಯದ್ದಾಗಿದೆ. ಒಟ್ಟು 726 ವಿಧದ ಹೂವಿನ ಸಸ್ಯಗಳು ಇಲ್ಲಿದ್ದು, ಅದರಲ್ಲಿ 496 ವರ್ಗಗಳು ಹಾಗೂ 120 ಸಸ್ಯಕುಟುಂಬಗಳು ಸೇರಿವೆಯೆಂದು ದಾಖಲಿಸಲಾಗಿದೆ. ಫಾಬಾಸಿಯೇ ಇಲ್ಲಿನ ಪ್ರಮುಖ ಸಸ್ಯವರ್ಗವಾಗಿದ್ದು ಪೋಸಿಯೇ ಮತ್ತು ಸೈಪರಾಸಿಯೇ ವರ್ಗದ ಸಸ್ಯಗಳೂ ಹೇರಳವಾಗಿವೆ. ಇಲ್ಲಿ ಇರುವ ಸಸ್ಯಜಾತಿಗಳೆಂದರೆ ಲೆಗ್ಯುಮಿನೋಸೇ, ಪೋಸಿಯೇ ಮತ್ತು ಸೈಪರಾಸಿಯೇ; ಸ್ಥಾನಿಕ ಕ್ಯಾಸಿಪೌರಿಯಾ ಸೀಲಾನಿಕಾ; ಸಾಗರತೃಣದ ಐದು ವರ್ಗಗಳು ಮತ್ತು ಇತರ ಸಸ್ಯಗಳು. ಗುರುತಿಸಲ್ಪಟ್ಟಿರುವ ಪ್ರಮುಖ ಜಾತಿಯ ಸಸ್ಯಗಳೆಂದರೆ:[೬][೨೦].
- ಲೆಗ್ಯುಮಿನೋಸೇ, ಪೋಸಿಯೇ ಮತ್ತು ಸೈಪರಾಸಿಯೇ
- ಸ್ಥಾನಿಕ ಕ್ಯಾಸಿಪೌರಿಯಾ ಸೀಲಾನಿಕಾ
- ಸಾಗರತೃಣದ ಐದು ವರ್ಗಗಳು
- ತೋಟಗಾರಿಕೆಗೆ ಮುಖ್ಯವಾಗುವ ವನ್ಯಸಸ್ಯಗಳು ಮತ್ತು ಕೀಟಗಳನ್ನು ತಿನ್ನುವ ಗಿಡಗಳಂತಹ ಕುತೂಹಲಕರ ಸಸ್ಯವರ್ಗಗಳು, ಪರೋಪಜೀವಿಗಳು, ಪರಾವಲಂಬಿಸಸ್ಯಗಳು ಮತ್ತು ಶಿಲೋಪಜೀವಿಸಸ್ಯಗಳು
- ಮ್ಯಾನ್ ಗ್ರೂವ್ ಸಂಬಂಧಿತವಾದವುಗಳಾದ ಈಜಿಸೆರಾಸ್ ಕಾರ್ನಿಕ್ಯುಲಾಟಸ್ , ಎಕ್ಸ್ ಕೋಯೆಕಾರಿಯಾ ಅಗಲ್ಲೋಕ್ , ಸಾಲ್ವಡೋರಾ ಪೆರ್ಸಿಕಾ , ಪೊಂಗಾಮಿಯಾ ಪಿನ್ನಾಟಾ , ಕಾಲ್ಯುಬ್ರಿನಾ ಏಷ್ಯಾಟಿಕಾ , ಕ್ಯಾಪ್ಪಾರಿಸ್ ರಾಕ್ಸ್ ಬರ್ಘೀ , ಮ್ಯಾಕ್ರೋಟೈಲೋಮಾ ಸಿಲ್ಲಾಟಂ ಹಾಗೂ ಇತರೆ ಅನೇಕ ವರ್ಗಗಳು.
ಪಕ್ಷಿಸಂಕುಲ
[ಬದಲಾಯಿಸಿ]- ವಲಸೆ ಬರುವ ಹಕ್ಕಿಗಳಿಗೆ ಚಿಲ್ಕ ಸರೋವರವು ಭಾರತೀಯ ಪರ್ಯಾಯದ್ವೀಪದ ಅತಿ ದೊಡ್ಡ ಚಳಿಗಾಲದ ಆಶ್ರಯತಾಣವಾಗಿದೆ. ಇದು ದೇಶದಜೈವಿಕವೈವಿಧ್ಯತೆಯನ್ನು ಬಿಂಬಿಸುವ ಪ್ರಮುಖತಾಣಗಳಲ್ಲಿ ಒಂದಾಗಿದೆ. IUCN ಕೆಂಪು ಪಟ್ಟಿಯಲ್ಲಿ ಉಲ್ಲೇಖಿಸಲ್ಪಟ್ಟಿರುವ ಪ್ರಾಣಾಪಾಯದಲ್ಲಿರುವ/ ಅಳಿವಿನಂಚಿನಲ್ಲಿರುವ ಕೆಲವು ಪ್ರಾಣಿವರ್ಗಗಳು ತಮ್ಮ ಜೀವನಚಕ್ರದಲ್ಲಿನ ಸ್ವಲ್ಪ ಭಾಗವನ್ನಾದರೂ ಈ ಸರೋವರದಲ್ಲಿ ಕಳೆಯುತ್ತವೆ.
- ಬಿಳಿ ಹೊಟ್ಟೆಯ ಸಮುದ್ರ ಗಿಡುಗಗಳು, ಬೂದುಬಣ್ಣದ ಬಾತುಕೋಳಿಗಳು, ನೇರಳೆ ಕೆಸರ್ಗೋಳಿ, ಜಕಾನಾ, ಬಕಗಳು, ಮತ್ತು ಫ್ಲೆಮಿಂಗೋಗಳು, ಕೊಕ್ಕರೆ ಜಾತಿಯ ಪಕ್ಷಿಗಳು, ಬೂದು ಮತ್ತು ನೇರಳೆ ಬಕಗಳು, ಭಾರತೀಯ ರೋಲರ್ ಪಕ್ಷಿ, ಕೊಕ್ಕರೆಗಳು ಮತ್ತು ಬಿಳಿಯ ಐಬಿಸ್, ಚಮಚಕೊಕ್ಕಿನ ಪಕ್ಷಿಗಳು, ಬ್ರಾಹ್ಮಿಣಿ ಬಾತುಗಳು, ಶೊವೆಲರ್ ಗಳು ಮತ್ತು ಪಿನ್ ಟೈಲ್ ಗಳು, ಇತ್ಯಾದಿಗಳು.
- ವಲಸೆ ಬರುವ ನೀರುಕೋಳಿಗಳು ದೂರದ ಕ್ಯಾಸ್ಪಿಯನ್ ಸಮುದ್ರ, ಬೈಕಲ್ ಸರೋವರ ಮತ್ತು ರಷ್ಯಾದ ಮೂಲೆಮುಂಗಡಿಗಳು, ಮಂಗೋಲಿಯಾ, ಲಕಾಹ್, ಸೈಬೀರಿಯಾ, ಇರಾನ್, ಇರಾಕ್, ಆಫ್ಘಾನಿಸ್ತಾನ್ ಮತ್ತು ಹಿಮಾಲಯದ ಪ್ರಾಂತ್ಯಗಳಿಂದ ಇಲ್ಲಿಗೆ ಬರುತ್ತವೆ.[೧೪] 1997-98ರ ಚಳಿಗಾಲದಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ಈ ಸರೋವರದಲ್ಲಿ ಸುಮಾರು ಎರಡು ಮಿಲಿಯನ್ ಪಕ್ಷಿಗಳಿದ್ದವು.[೨೬]
- 2007ರಲ್ಲಿ ಸುಮಾರು 840,000 ಪಕ್ಷಿಗಳು ಈ ಸರೋವರಕ್ಕೆ ಭೇಟಿ ನೀಡಿದವು, ಅದರಲ್ಲಿ 198,000 ನಳಬನ ದ್ವೀಪದಲ್ಲಿ ಕಂಡುಬಂದವು. ಜನವರಿ 5, 2008ರಂದು, 85 ವನ್ಯಜೀವಿ ಅಧಿಕಾರಿಗಳನ್ನೊಳಗೊಂಡ ಪಕ್ಷಿ ಸಮೀಕ್ಷೆಯು 900,000 ಪಕ್ಷಿಗಳನ್ನು ಎಣಿಸಿತು, ಅವುಗಳ ಪೈಕಿ 450,000 ನಳಬನದಲ್ಲಿ ಕಂಡುಬಂದವು. ಹೊಸನೀರಿನಲ್ಲಿ ಕಂಡುಬರುವ ಆಕ್ರಾಮಕ ಜಾತಿಯ ಜಲಸಸ್ಯಗಳನ್ನು ತೆಗೆಯುವುದು.
- ಅದರಲ್ಲೂ ಪ್ರಮುಖವಾಗಿ ಜಲಜ ಗಂಟೆಪುಷ್ಟಸಸ್ಯಗಳನ್ನು, ಮತ್ತು ಕ್ಷಾರ ಪುನಃಸ್ಥಾಪನೆಗಳು ಇತ್ತೀಚೆಗೆ ಈ ಸರೋವರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಿಗಳು ಆಗಮಿಸುವುದಕ್ಕೆ ಕಾರಣಗಳಾಗಿವೆ.[೧೪][೨೭]
- ನಳಬನ ಪಕ್ಷಿಗಳ ಆಶ್ರಯಧಾಮ
ಚಿಲ್ಕ ಸರೋವರ
Nalbana Bird Sanctuary | |
---|---|
nature reserve | |
Website | http://www.wildlifeorissa.in/chilika.html |
- ನಳಬನ ದ್ವೀಪವು ಚಿಲಿಕ ಸರೋವರಕ್ಕೆ ಅಧಿಸೂಚಿತವಾದ ರಾಮ್ಸಾರ್ ಕ್ಲಿನ್ನಭೂಮಿಗಳ ಕೇಂದ್ರ ಪ್ರದೇಶವಾಗಿದೆ. ಒರಿಯಾ ಭಾಷೆಯಲ್ಲಿ ನಳಬನ ಎಂದರೆ ಒಂದು ಕಳೆಗಳಿಂದ ಆವೃತವಾದ ದ್ವೀಪ ಎಂದರ್ಥ. ಇದು ಸರೋವರದ ಮಧ್ಯದಲ್ಲಿರುವ ಪ್ರಮುಖ ದ್ವೀಪವಾಗಿದ್ದು ಇದರ ವಿಸ್ತೀರ್ಣವು 15.53 km2 (6.00 sq mi)[dubious ]. ಮಳೆಗಾಲದಲ್ಲಿ ಈ ದ್ವೀಪವು ಸಂಪೂರ್ಣವಾಗಿ ಜಲಾವೃತವಾಗುತ್ತದೆ.
- ಚಳಿಗಾಲದಲ್ಲಿ ಮಳೆ ತಗ್ಗಿದಂತೆ, ಸರೋವರದ ನೀರಿನ ಮಟ್ಟ ತಗ್ಗಿ ದ್ವೀಪವು ಹಂತಹಂತವಾಗಿ ಗೋಚರಿಸುತ್ತದೆ, ಆ ದ್ವೀಪದಲ್ಲಿ ವಿಪುಲವಾಗಿ ದೊರೆಯುವ ಮಣ್ಣುಚಪ್ಪಟೆ(ಮಡ್ ಫ್ಲ್ಯಾಟ್) ಗಳನ್ನು ಸೇವಿಸುವ ಸಲುವಾಗಿ ಪಕ್ಷಿಗಳು ಹಿಂಡುಹಿಂಡಾಗಿ ಇಲ್ಲಿಗೆ ಬರುತ್ತವೆ. ನಳಬನವು 1987ರಲ್ಲಿ ಅಧಿಸೂಚಿತವಾಯಿತು ಮತ್ತು 1973ರಲ್ಲಿ ವನ್ಯಜೀವಿ ಸಂರಕ್ಷಣಾ ಕಾಯಿದೆಯ ಅಡಿಯಲ್ಲಿ ಪಕ್ಷಿಗಳ ಆಶ್ರಯಧಾಮವೆಂದು ಘೋಷಿಸಲಾಯಿತು.[೧೪][೨೮]
- ಇಲ್ಲಿನ ಆಳವಿಲ್ಲದ ನೀರಿನ ಎಡೆಗಳಲ್ಲಿ ಇರಾನ್ ನ ಗ್ರೇಟರ್ ಫ್ಲೆಮಿಂಗೋಗಳ ಬೃಹತ್ ಹಿಂಡುಗಳು ಮತ್ತು ಗುಜರಾತ್ ನ ರಾನ್ನ್ ಆಫ್ ಕಚ್ ನ ಖಗಗಳು ಆಹಾರ ಸೇವಿಸುತ್ತವೆ. ನಳಬನದಲ್ಲಿ ಕಾಣಸಿಗುವ ಇತರ ನೀಳಕಾಲಿನ ಜಲಚರಗಳೆಂದರೆ ಲೆಸ್ಸರ್ ಫ್ಲೆಮಿಂಗೋಗಳು, ಗೋಲಿಯಾತ್ ಬಕ ಗಳು, ಬೂದುರಂಗಿನ ಬಕ ಗಳು, ಮತ್ತು ನೇರಳೆ ಬಕ ಗಳು, ಎಗ್ರೆಟ್ ಗಳು, ಚಮಚಕೊಕ್ಕಿನ ಹಕ್ಕಿಗಳು, ಕೊಕ್ಕರೆಗಳು ಮತ್ತು ಕಪ್ಪು ತಲೆಯ ಐಬಿಸ್ ಗಳು.
- ಇಲ್ಲಿ ಕಾಣಬರುವ ಅಪರೂಪದ ಹಕ್ಕಿಗಳೆಂದರೆ ಏಷ್ಯಾಟಿಕ್ ಡೊವಿಟ್ಝರ್ ಗಳು (NT), ಡಾಲ್ಮೇಷಿಯನ್ ನೀರಗೋಳಿಗಳು (VU), ಪಲ್ಲಾಸ್ ನ ಮೀನು-ಗಿಡುಗಗಳು (VU), ಬಹಳ ಅಪರೂಪವಾಗಿ ವಲಸೆ ಹೋಗುವ ಚಮಚ-ಕೊಕ್ಕಿನ ಸ್ಯಾಂಡ್ ಪೈಪರ್ (CR) ಮತ್ತು ಚುಕ್ಕೆ-ಕೊಕ್ಕಿನ ನೀರಗೋಳಿಗಳು (NT).[೨೮][೨೯]
- ಬಿಳಿ-ಹೊಟ್ಟೆಯ ಸಮುದ್ರ ಗಿಡುಗ, ಪರದೇಶಿ ಹದ್ದು, ಬ್ರಾಹ್ಮಿಣಿ ಹದ್ದುಗಳು, ಚಿಕ್ಕ ಡೇಗೆ, ಕೆಸರು ಬೇಟೆಪಕ್ಷಿಗಳು, ಮತ್ತು ವಿಶ್ವದಾದ್ಯಂತ ಬೇಟೆಯ ಪಕ್ಷಿಯೆಂದೇ ಖ್ಯಾತವಾದ ವಿದೇಶಿ ಡೇಗೆಗಳು, ಇಲ್ಲಿ ಸಿಗುವ ಬೇಟೆಯಾಡುವ ಪಕ್ಷಿಗಳಲ್ಲಿ ಪ್ರಮುಖವಾದವುಗಳು.[೨೮]
- ಹಲವಾರು ಗಿಡ್ಡಕಾಲಿನ ದಡದಲ್ಲಿಯೇ ಇರುವ ಪಕ್ಷಿಗಳು ಸರೋವರದ ಮತ್ತು ದ್ವೀಪಗಳ ಬದಲಾಗುವ ತೀರಗಳ ಕಿರಿದಾದ ಹಾದಿಯಗುಂಟ ಕಾಣಸಿಗುತ್ತವೆ. ಇವುಗಳ ಪೈಕಿ ಪ್ಲೋವರ್ ಗಳು, ಕೊರಳಪಟ್ಟಿಯಿರುವ ಪ್ರ್ಯಾಟಿಂಕೋಲ್, ರಫ್, ಡುನ್ಲಿನ್, ಸ್ನೈಪ್ ಗಳು ಮತ್ತು ಸ್ಯಾಂಡ್ ಪೈಪರ್ ಗಳು ಇವೆ. ಲಾರ್ಕ್ ಗಳು, ವ್ಯಾಗ್ ಟೈಲ್ ಗಳು ಮತ್ತು ಲ್ಯಾಪ್ ವಿಂಗ್ ಗಳು ಸಹ ಮಡ್ ಪ್ಲ್ಯಾಟ್ಸ್ ಗಳಲ್ಲಿ ಕಾಣಸಿಗುತ್ತವೆ. ಇದಕ್ಕಿಂತಲೂ ಆಳವಾದ ನೀರಿನಲ್ಲಿ ಆಹಾರ ಸೇವಿಸುತ್ತಾ ನಿಲ್ಲುವುದು ನೀಳ ಕಾಲ್ಗಳ ಅವೋಸೆಟ್ ಗಳು, ಸ್ಟಿಲ್ಟ್ ಗಳು ಮತ್ತು ಗಾಡ್ವಿಟ್ ಗಳು.
- ಎತ್ತರದ ಸಸ್ಯಾವೃತ ಪ್ರದೇಶಗಳಲ್ಲಿ ಜವುಗುಕೋಳಿಗಳು, ಕಪ್ಪುನೀರುಕೋಳಿಗಳು, ಮತ್ತು ಜಕನಾಗಳು ಇರುತ್ತವೆ. ಸರೋವರ ಬಕಗಳು ಮತ್ತು ರಾತ್ರಿ ಬಕಗಳು ತೀರದಗುಂಟ ಕಾಣಸಿಗುತ್ತವೆ ಮತ್ತು ಇವುಗಳೊಡನೆ ಜಾಲಗಾರಪಕ್ಷಿಗಳು ಮತ್ತು ರೋಲರ್ ಪಕ್ಷಿಗಳೂ ಇರುತ್ತವೆ. ಪುಟ್ಟ ಕಾರ್ಮೊರಾಂಟ್ ಗಳನ್ನು ಸರೋವರದ ಸುತ್ತಲಿನ ಅಡ್ಡಕಂಬಿಗಳ ಮೇಲೆ ಕಾಣಬಹುದು,
- ಬ್ರಾಹ್ಮಿಣಿ ಬಾತುಕೋಳಿಗಳ ಅಚ್ಚುಕಟ್ಟಾದ ಹಿಂಡುಗಳು, ಹಾಗೂ ಶೊವೆಲರ್ ಗಳು, ಪಿನ್ ಟೈಲ್ ಪಕ್ಷಿಗಳು, ಗಾಡ್ವಾಲ್, ಟಿಯಲ್ಗಳು, ಪೋಚರ್ಡ್ ಗಳು, ಬಾತುಕೋಳಿಗಳು ಮತ್ತು ಸಣ್ಣ ಕಪ್ಪುನೀರುಕೋಳಿಗಳು, ಸಹ ಇಲ್ಲಿ ಕಾಣಸಿಗುತ್ತವೆ.[೩೦]
- ಬೆಳ್ಳಕ್ಕಿ-ಕೊಕ್ಕಿನ ಟೆರ್ನ್ ಗಳು ಮತ್ತು ನದಿಯ ಟೆರ್ನ್ ಗಳ ಗೂಡುಕಟ್ಟುವ ವಸಾಹತುಗಳು ನಳಬನ ದ್ವೀಪದಲ್ಲಿ ಕಾಣಬರುತ್ತವೆ. 2002ರಲ್ಲಿ, ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ ಸಮೀಕ್ಷೆಯು ಈ ದ್ವೀಪದಲ್ಲಿ ಭಾರತೀಯ ನದಿಯ ಟೆರ್ನ್ ನ 540 ಗೂಡುಗಳು ಇರುವುದನ್ನು ದಾಖಲಿಸಿತು, ಇದು ಆಗ್ನೇಯ ಏಷ್ಯಾದ ಅತಿ ದೊಡ್ಡ ಗೂಡುಕಟ್ಟುವ ವಸಾಹತಾಗಿದೆ.[೨೮]
ಜಲಪ್ರಾಣಿಗಳು
[ಬದಲಾಯಿಸಿ]- ಚಿಲಿಕ ಅಭಿವೃದ್ಧಿ ಪ್ರಾಧಿಕಾರ(CDA) ದವರ ಈವರೆಗಿನ ಮಾಹಿತಿಯ ಪ್ರಕಾರ (2002), 323 ಜಲಪ್ರಾಣಿಗಳ ಜಾತಿಗಳಿದ್ದು, ಅದರಲ್ಲಿ 261 ಮೀನಿನ ಬಗೆಗಳು, 28 ಸೀಗಡಿಗಳು ಮತ್ತು 34 ಏಡಿಗಳು ಇರುವುವೆಂದು ವರದಿಯಾಗಿದ್ದು, ಅದರಲ್ಲಿ ಅರವತ್ತೈದು ಜಾತಿಗಳು ಸರೋವರದಲ್ಲಿಯೇ ಸಂತಾನೋತ್ಪತ್ತಿ ಮಾಡುತ್ತವೆ.
- 27 ಜಾತಿಗಳು ಹೊಸನೀರಿನಲ್ಲಿ ವಾಸಿಸುವ ಮೀನುಗಳು ಮತ್ತು ಎರಡು ಜಾತಿಯವು ಸೀಗಡಿಗಳು. ಮಿಕ್ಕವು ಸಂತಾನೋತ್ಪತ್ತಿಗಾಗಿ ಸಮುದ್ರಕ್ಕೆ ವಲಸೆ ಹೋಗುತ್ತವೆ. ಕ್ಲುಪೆಯಿಡಾಯೆ ಕುಟುಂಬಕ್ಕೆ ಸೇರಿದ 21 ಜಾತಿಯ ಹೆರ್ರಿಂಗ್ ಗಳು ಮತ್ತು ಸಾರ್ಡೈನ್ ಗಳು ಸಹ ಇಲ್ಲಿವೆ ಎಂದು ವರದಿಯಾಗಿದೆ.
1998–2002ರ ಅವಧಿಯಲ್ಲಿ, ಪ್ರಪ್ರಥಮ ಬಾರಿಗೆ 40 ಮೀನು ಜಾತಿಗಳು ದಾಖಲಿಸಲ್ಪಟ್ಟವು ಮತ್ತು ಸರೋವರದ ಜಲಮುಖವು 2000ದಲ್ಲಿ ಮತ್ತೆ ತೆರೆಯಲ್ಪಟ್ಟಾಗ, ಆರು ಅಳಿವಿನ ಭೀತಿಯಲ್ಲಿದ್ದ ಜಾತಿಯ ಮೀನುಗಳು ಮತ್ತೆ ಕಾಣಿಸಿಕೊಂಡವು; ಅವು:
- ಹಾಲ್ಮೀನು (ಸೆಬಾ ಖಯಿಂಗ),
- ಹಿಂದೂ-ಶಾಂತಿಸಾಗರ ಟಾರ್ಪನ್ (ಪಣಿಯಲೆಹಿಯೊ),
- ಟೆನ್ ಪೌಂಡರ್ (ನಹಾಮ),
- ಬ್ರೀಂ (ಕಾಲಾ ಖುರಂಟಿ),
- ಹಿಲ್ಸಾ (ಟೆನ್ಯುಯಿಯಾಲೋಸಾ) ilisha (ಇಲಿಶಿ) ಮತ್ತು
- ಮಲ್ಲೆಟ್ ಆರ್. ಕಾರ್ಸುಲ (ಕೆಕೆಂಡ)[೬][೭]
- ವಾಣಿಜ್ಯಪರ ಮೀನುಗಾರಿಕೆ
ಶತಮಾಮಗಳಿಂದಲೂ ಬೆಸ್ತರು ತಮ್ಮದೇ ಆದ ಮೀನುಗಾರಿಕೆಯ ಹಕ್ಕನ್ನು ಸರೋವರದ ಮೀನುಗಾರಿಕೆಯನ್ನು ಭಾಗಗಳಾಗಿ ವಿಂಗಡಿಸಿಕೊಳ್ಳುವಂತಹ ಸಂಕೀರ್ಣ ಪದ್ಧತಿಗಳ ಮೂಲಕ ಹೊಂದುತ್ತಿದ್ದರು, ಬಾಳಿಕೆ/ತಾಳಿಕೆ ಇರುವಂತಹ ರೀತಿಯಲ್ಲಿ ಸರೋವರದ ಕೃಷಿ ಮಾಡುತ್ತಿದ್ದರು ಮತ್ತು ಮೀನುಗಾರಿಕೆಯ ರೀತಿನೀತಿಗಳು, ಬಲೆಗಳು ಮತ್ತು ಸಲಕರಣೆಗಳ ದೊಡ್ಡ ಮಟ್ಟದಲ್ಲಿಯೇ ಅಭಿವೃದ್ಧಿಗೊಳಿಸಿದರು.[೧೩]
- ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ, 1897-98ರಲ್ಲಿ ಬೆಸ್ತರ ಪಂಗಡದವರಿಗೆ ಸರೋವರದಲ್ಲಿ ಮೀನುಗಾರಿಕೆಯ ವಿಶಿಷ್ಟ ಮತ್ತು ಸಂಪೂರ್ಣ ಹಕ್ಕು/ಸ್ವಾಮ್ಯ ಇದ್ದಿತು. ಈ ಸರೋವರದ ಮೀನುಗಾರಿಕೆಯು ಕಲ್ಲೀಕೋಟೆ, ಪಾರಿಕುಡ್, ಸೂನಾ ಬೀಬಿ, ಮಿರ್ಜಾ ತಾಹೆರ್ ಬೇಗ್ ಮತ್ತು ಬಂಗಾರಪುರದ ಮತ್ತು ಖುರ್ಡಾದ ಖಾಸ್ ಮಹಲ್ ಪ್ರದೇಶಗಳ ಚೌಧರಿ ಕುಟುಂಬಗಳ ಜಮೀನ್ದಾರಿ ಎಸ್ಟೇಟುಗಳ ಭಾಗವಾಗಿತ್ತು, ಮತ್ತು ಇವಿಷ್ಟೂ ಪಾರಿಕುಡ್ ಮತ್ತು ಕಲ್ಲೀಕೋಟೆಯ ರಾಜರ ಆಳ್ವಿಕೆಯ ಪರಿಧಿಯಲ್ಲಿ ಬರುತ್ತಿದ್ದವು. ಜಮೀನ್ದಾರರು (ಭೂಮಾಲೀಕರು) ಮೀನುಗಾರಿಕೆಯ ಸ್ಥಳಗಳನ್ನು ಸ್ಥಳೀಯ ಬೆಸ್ತರಿಗೇ ಭೋಗ್ಯಕ್ಕೆ ಕೊಡುತ್ತಿದ್ದರು.[೧೩]
- 1953ರಲ್ಲಿ ಜಮೀನ್ದಾರಿ (ಭೂಮಾಲೀಕತ್ವ) ಪದ್ಧತಿಯ ರದ್ದತಿಯಾದ ಮೇಲೆ ಸಾಂಪ್ರದಾಯಿಕ ಮೀನುಗಾರಿಕೆಯ ಸ್ಥಳಗಳನ್ನು ಸ್ಥಳೀಯ ಮೀನುಗಾರರ ಸಂಘಗಳಿಗೆ ಭೋಗ್ಯಕ್ಕೆ ಕೊಡಲಾಗುತ್ತಿತ್ತು. ಮೀನುಗಾರಿಕೆ, ಅದರಲ್ಲೂ ಸೀಗಡಿ ಹಿಡಿಯುವಿಕೆ, ಬರುಬರುತ್ತಾ ಹೆಚ್ಚು ಲಾಭದಾಯಕವಾಯಿತು ಹಾಗೂ ಹೊರಗಿನವರಿಗೂ ಇದರಲ್ಲಿನ ಆಸಕ್ತಿಯು ಪ್ರಮುಖವಾಗಿ ಗೋಚರಿಸಲಾರಂಭಿಸಿತು.
- ಆದರೆ, 1991ರಲ್ಲಿ, ಒಡಿಶಾ ಸರ್ಕಾರವು ಯಾರು ಹೆಚ್ಚು ಹಣ ಕೊಡುವೆನೆಂದು ಹರಾಜಿನಲ್ಲಿ ಕೂಗುವರೋ ಅವರಿಗೇ ಭೋಗ್ಯಕ್ಕೆ ಸ್ಥಳವನ್ನು ನೀಡುವ ಯೋಜನೆಯನ್ನು ಮುಂದಿಟ್ಟಾಗ ಬೆಸ್ತರ ಸಹಕಾರಿ ಸಂಘಗಳು ಈ ಯೋಜನೆಯ ವಿರುದ್ಧ ಕೋರ್ಟಿನ ಮೆಟ್ಟಲು ಹತ್ತಿದವು. ಒಡಿಶಾದ ಉಚ್ಚ ನ್ಯಾಯಾಲಯವು ಸಾಂಪ್ರದಾಯಿಕ ಬೆಸ್ತರ ಹಿತಾಸಕ್ತಿಗಳನ್ನು ಕಾಪಾಡುವ ರೀತಿಯಲ್ಲಿ ಕೆಲವು ಬದಲಾವಣೆಗಳನ್ನು ಕಾಯಿದೆಯಲ್ಲಿ ಮಾಡಬೇಕೆಂದು ಸರ್ಕಾರಕ್ಕೆ ತಾಕೀತು ಮಾಡಿತು ಹಾಗೂ ಅಂದಿನಿಂದ ಯಾವುದೇ ಹೊಸ ಭೋಗ್ಯ ನೀಡಿದ ವರದಿಯಿಲ್ಲ. ಇದರಿಂದ ಗೊಂದಲಮಯ ಆಳ್ವಿಕೆಯು ಉಂಟಾಗಿ ಹೊರಗಿನ ಪ್ರಬಲ ವಿಕ್ಷಿಪ್ತ ಬಯಕೆಗಳನ್ನು ಹೊಂದಿದವರದು ಮೇಲುಗೈಯಾಗಿ ಸ್ಥಳೀಯರು ಅವರ ಕೈಕೆಳಗೆ ದುಡಿಯುವಂತಾಯಿತು.[೧೩]
- ಬೆಣ್ಣೆ ಬೆಕ್ಕುಮೀನು ಮತ್ತು ವಲ್ಲಗೋ ಅಟ್ಟು ಗಳು ಈ ಸರೋವರದಲ್ಲಿ ಸರ್ವೇಸಾಮಾನ್ಯವಾಗಿ ಕಂಡುಬರುವ ಮೀನುಗಳು. 11 ಜಾತಿಯ ಮೀನುಗಳು, 5 ಜಾತಿಯ ಸೀಗಡಿಗಳು ಮತ್ತು 2 ಏಡಿಗಳ ಜಾತಿಗಳು ವಾಣಿಜ್ಯರೀತ್ಯಾ ಪ್ರಮುಖವಾದವು. ವ್ಯಾಪಾರಿ ದೃಷ್ಟಿಯಿಂದ ಮುಖ್ಯವಾದ ಸೀಗಡಿಗಳೆಂದರೆ ದೊಡ್ಡ ಟೈಗರ್ ಸೀಗಡಿ, ಪೆನಾಯಿಯಸ್ ಇಂಡಿಕಸ್ (ಭಾರತದ ಬಿಳಿಯ ಸೀಗಡಿ), ಮೆಟಾಪಿನಾಯಿಯಸ್ ಮಾನೋಸೆರೋಸ್ (ಚುಕ್ಕೆಚುಕ್ಕೆ ಸೀಗಡಿ), ಮೆಟಾಪಿನಾಯಿಯಸ್ ಅಫಿನಿಸ್ (ಗುಲಾಬಿ ಸೀಗಡಿ) ಮತ್ತು ಮೆಟಾಪಿನಾಯಿಯಸ್ ಡಾಬ್ಸನ್ (ಕಡಲ್ ಸೀಗಡಿ).
- ಮ್ಯಾನ್ ಗ್ರೂವ್ ಏಡಿಯು ಬಹಳ ಮುಖ್ಯವಾದ ವ್ಯಾಪಾರವಾಗುವ ಏಡಿ.[೨೨] ಸರೋವರದಲ್ಲಿ ಮೀನುಗಳು ಬರುವುದು, ಹಿಂದಿನ ದಿನಗಳಲ್ಲಿ ಬಹಳವೇ ಏರುಪೇರಾಗಿರುತ್ತಿದ್ದು, ಹೊಸ ಜಲಮುಖವನ್ನು ತೆರೆದ ನಂತರ ಗಮನೀಯವಾಗಿ ಚೇತರಿಸಿಕೊಂಡಿದೆ ಮತ್ತು ಮರಳಿನಿಂದ ಕಟ್ಟಿಕೊಂಡಿದ್ದ ಹಳೆಯ ಮುಖವಾದ ಮಗರ್ಮುಖ್ ಅನ್ನು 2000-2001ರಲ್ಲಿ ಕೆತ್ತಿದಾಗ ತೆರೆಗಳಿಂದ ಒಳಹರಿದ ಸಮುದ್ರದ ನೀರು ಮತ್ತು ನದಿಗಳಿಂದ ಹರಿದುಬರುವ ಹೊಸನೀರಿನ ಒಳಹರಿವುಗಳು ಉತ್ತಮ ರೀತಿಯಲ್ಲಿ ಮಿಶ್ರಣವಾಗುವುದರಿಂದ ವಾಣಿಜ್ಯಪರ ಮೀನುಗಾರಿಕೆಗೆ ಸಹಾಯಕವಾಗಿದೆ.
- 1995-96ರಲ್ಲಿ ಸರ್ವಕಾಲಿಕವಾಗಿ ಮೀನು ಹಾಗೂ ಸೀಗಡಿಗಳು ಒಳಬಂದುದರ ಸಂಖ್ಯೆಯು ಕನಿಷ್ಠವಾದ 1,269 t (1,399 short tons) ಸಂಖ್ಯೆಯನ್ನು ತಲುಪಿದ್ದ, 2001-02ರಲ್ಲಿ ಈ ಸಂಖ್ಯೆಯು 11,878 t (13,093 short tons) ಆಗಿ ಗರಿಷ್ಠತೆಯನ್ನು ತಲುಪಿತು; ತತ್ಪರಿಣಾಮವಾಗಿ ಮೀನುಗಾರರಿಗೆ ತಲಾ ರೂ 19,575 (ಸುಮಾರು US$392) ಗಳಷ್ಟು ವಾರ್ಷಿಕ ಆದಾಯವಾಯಿತು.[೭] ಇತ್ತೀಚೆಗೆ, ಒಡಿಶಾ ಸರ್ಕಾರವು ವಾಡಿಕೆಯ ಮೀನುಗಾರಿಕೆಗೆ ಚಿಲ್ಕ ಸರೋವರವನ್ನು ಭೋಗ್ಯಕ್ಕೆ ನೀಡುವ ಪದ್ಧತಿಯ ಮೇಲೆ ನಿಷೇಧವನ್ನು ಸಾರಿದೆ.[೧೩]
- ಡಾಲ್ಫಿನ್(ಹಂದಿಮೀನು)ಗಳು
ಇರ್ರವಡ್ಡಿ ಡಾಲ್ಫಿನ್ (ಒರ್ಕಾಯೆಲ್ಲಾ ಬ್ರೆವಿರೋಸ್ಟ್ರಿಸ್ ) ಚಿಲ್ಕ ಸರೋವರದ ಪತಾಕೆನಾವೆ (ಲಾಂಛನ) ವರ್ಗವಾಗಿರುವ ಡಾಲ್ಫಿನ್. ಭಾರತದಲ್ಲಿ ತಿಳಿದುಬಂದಿರುವಂತಹ ಏಕೈಕ ಇರ್ರವಡ್ಡಿ ಡಾಲ್ಫಿನ್ ಸಮೂಹಕ್ಕೆ ಚಿಲ್ಕ ತವರಾಗಿದೆ. [೩೧] ಪ್ರಪಂಚದಲ್ಲಿ ಈ ವರ್ಗದ ಡಾಲ್ಫಿನ್ ಗಳಿಗೆ ಆಶ್ರಯವಾಗಿರುವ ಕೇವಲ ಎರಡೇ ಮಡುವುಗಳಲ್ಲಿ ಇದೂ ಒಂದಾಗಿದೆ. [೨೯] ಈ ಜಾತಿಯ ಡಾಲ್ಫಿನ್ ಗಳು ವಾಸಿಸುವುವೆಂದು ಹೇಳಲಾದ ಆರು ಕಡೆಗಳ ಪೈಕಿ ಐದು ಕಡೆಗಳಲ್ಲಿ ಅದು ಬಹಳವೇ ಅಪಾಯದ ಅಂಚಿನಲ್ಲಿರುವ ಜಾತಿಯೆಂದು ವರ್ಗೀಕರಿಸಲಾಗಿದೆ. [೩೨]
- ಶೀಶೆಮೂಗಿನ ಡಾಲ್ಫನ್ ಗಳ ಒಂದು ಸಣ್ಣ ಹಿಂಡೂ ಸಹ ಸಮುದ್ರದಿಂದ ಈ ಖಾರಿಗೆ ವಲಸೆ ಬರುತ್ತದೆ.[೩] ಇರ್ರವಡ್ಡಿ ಡಾಲ್ಫಿನ್ ಗಳು ಮತ್ತು ಶೀಶೆಮೂಗಿನ ಡಾಲ್ಫಿನ್ ಗಳು ಹೊರಕಾಲುವೆಯಲ್ಲಿ ಪರಸ್ಪರ ಸಂಧಿಸಿದಾಗ ಇರ್ರವಡ್ಡಿ ಡಾಲ್ಫಿನ್ ಗಳು ಬೆದರುತ್ತವೆ ಮತ್ತು ಬಲವಂತವಾಗಿ ಸರೋವರದತ್ತ ಹಿಂತಿರುಗಬೇಕಾಗುತ್ತದೆ ಎಂದು ಚಿಲ್ಕದ ಬೆಸ್ತರು ಹೇಳುತ್ತಾರೆ.[೩೩]
- ಕೆಲವು ಇರ್ರವಡ್ಡಿ ಡಾಲ್ಫಿನ್ ಗಳು ಒಳಕಾಲುವೆಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದವು ಮತ್ತು ಕೆಲವೊಮ್ಮೆ ಸರೋವರದ ಮಧ್ಯಭಾಗದ ಸ್ವಲ್ಪ ಭಾಗಗಳಲ್ಲಿ ಮಾತ್ರ ಗೋಚರಿಸುತ್ತಿದ್ದವು. 2000ದಲ್ಲಿ ಶತಪದದಲ್ಲಿ ಹೊಸ ಜಲಮುಖವನ್ನು ತೆರೆದಾದ ಮೇಲೆ ಅವುಗಳು ಸರೋವರದ ಮಧ್ಯದ ಮತ್ತು ದಕ್ಷಿಣದ ಭಾಗಗಳಲ್ಲಿ ಚೆನ್ನಾಗಿ ವಿಂಗಡಿತವಾಗಿವೆ.[೨೯] ಇಲ್ಲಿಯವರೆಗೆ ಕಾಣಿಸಿಕೊಂಡ ಡಾಲ್ಫಿನ್ ಗಳ ಸಂಖ್ಯೆ 50ರಿಂದ 170. 2006 ಸಮೀಕ್ಷೆಯು 131 ಡಾಲ್ಫಿನ್ ಗಳನ್ನು ಎಣಿಸಿತು ಮತ್ತು 2007ರ ಗಣತಿಯಲ್ಲಿ 138 ಡಾಲ್ಫಿನ್ ಗಳಿದ್ದವು. ಆ 138 ಡಾಲ್ಫಿನ್ ಗಳಲ್ಲಿ, 115 ವಯಸ್ಕ, 17 ಹದಿಯರೆಯದ ಮತ್ತು ಆರು ಮರಿಗಳಿದ್ದವು. 60 ವಯಸ್ಕ ಡಾಲ್ಫಿನ್ ಗಳನ್ನು ಹೊರಕಾಲುವೆಯಲ್ಲಿ ಕಾಣಲಾಯಿತು, 32 ಮಧ್ಯಭಾಗದಲ್ಲಿ ಕಂಡವು ಹಾಗೂ 23 ದಕ್ಷಿಣದ ಭಾಗದಲ್ಲಿದ್ದವು.[೩೪]
- ಡಾಲ್ಫಿನ್ ಪ್ರವಾಸೋದ್ಯಮವು ಹಲವಾರು ಸ್ಥಳೀಯ ನಿವಾಸಿಗಳಿಗೆ ಒಂದು ಪ್ರಮುಖ ಪರ್ಯಾಯ ಆದಾಯಕ್ಕೆ ದಾರಿಯಾಗಿದೆ. ಶತಪದದಲ್ಲಿ ನಾಲ್ಕು ಪ್ರವಾಸೋದ್ಯಮ ಸಂಸ್ಥೆಗಳಿದ್ದು ಮುನ್ನೂರು ಜನರಿಗೆ ಉದ್ಯೋಗ ದೊರೆತಿದೆ ಮತ್ತು ಅರವತ್ತು 9-HP ಉದ್ದ-ಬಾಲದ ಮೋಟಾರ್ ಬೋಟ್ ಗಳು ಪ್ರವಾಸಿಗಳನ್ನು ಸರೋವರದ 25 km2 (9.7 sq mi)ವಿಸ್ತೀರ್ಣದವರೆಗೆ ಡಾಲ್ಫಿನ್ ಗಳನ್ನು ವೀಕ್ಷಿಸಲೆಂದು ಕರೆದೊಯ್ಯುತ್ತವೆ.
- ಈ ಉದ್ಯಮದಲ್ಲಿ ಸುಮಾರು ಐನೂರು ಕುಟುಂಬಗಳು ತೊಡಗಿಕೊಂಡಿವೆ.[೩೧]
ಒಡಿಶಾ ಪ್ರವಾಸೋದ್ಯಮ ಇಲಾಖೆಯವರು ಮತ್ತು ಡಾಲ್ಫಿನ್ ಮೋಟಾರ್ ಬೋಟ್ ಸಂಸ್ಥೆಯೆಂಬ ಶತಪದದಲ್ಲಿನ ಸರ್ಕಾರೇತರ ಸಂಸ್ಥೆಯು ಡಾಲ್ಫಿನ್ ಗಳನ್ನು ನೋಡಲೆಂದೇ ಚಿಲ್ಕಕ್ಕೆ ಪ್ರತಿ ವರ್ಷ ಸುಮಾರು 40,000 ಪ್ರವಾಸಿಗರು ಬರುವರೆಂದು ಹೇಳುತ್ತಾರೆ. ಅಕ್ಟೋಬರ್-ಜನವರಿ ಮತ್ತು ಮೇ-ಜೂನ್ ತಿಂಗಳುಗಳಲ್ಲಿ ಚಿಲ್ಕಕ್ಕೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ ಹಾಗೂ ಡಿಸೆಂಬರ್-ಜನವರಿ ತಿಂಗಳುಗಳಲ್ಲಿ ಈ ಸಂಖ್ಯೆಯು ದಿನಕ್ಕೆ 600ರಿಂದ 700ರ ಗರಿಷ್ಠತೆಯನ್ನು ತಲುಪುತ್ತದೆ.
- ಡಾಲ್ಫಿನ್ ಮೋಟಾರ್ ಬೋಟ್ ಅಸೋಸಿಯೇಷನ್ ನ ಬಳಿ 75 8-ಪ್ರಯಾಣಿಕರ ಮೋಟಾರ್ ಬೋಟ್ ಗಳು ಡಾಲ್ಫಿನ್ ವೀಕ್ಷಣೆಗೆಂದೇ ಮೀಸಲಾಗಿರುವುದಿದೆ. ಪ್ರವಾಸಿಗರು ರೂ. 250 ಅನ್ನು 60–90 ನಿಮಿಷಗಳ ಪ್ರತಿ ಪ್ರಯಾಣಕ್ಕೆ ನೀಡುತ್ತಾರೆ. ಅಸೋಸಿಯೇಷನ್ ನ ಪ್ರಕಾರ ಬಹುತೇಕ ಪ್ರವಾಸಿಗಳು ಡಾಲ್ಫಿನ್ ಗಳನ್ನು ನೋಡುತ್ತಾರೆ. ಕೇವಲ 5% ಮಾತ್ರ ನಿರಾಶರಾಗಿ ಹಿಂದಿರುಗುತ್ತಾರೆ.
- ಈ ಸಂಸ್ಥೆಯಲ್ಲದೆ, ಒಡಿಶಾ ಪ್ರವಾಸೋದ್ಯಮ ಇಲಾಖೆಯು ಪ್ರವಾಸಿಗರಿಗಾಗಿ "ಡಾಲ್ಫಿನ್-ವೀಕ್ಷಣೆ" ಯ ವ್ಯವಸ್ಥೆಗಳನ್ನು ಮಾಡುತ್ತದೆ. ಮಳೆಗಾಲದಲ್ಲೂ ಸಹ ದಿನಕ್ಕೆ ಸುಮಾರು ನೂರು ಪ್ರವಾಸಿಗಳು ಈ ಸರೋವರಕ್ಕೆ ಭೇಟಿ ನೀಡುತ್ತಾರೆ.[೧೧]
- ಪ್ರವಾಸಿಗರ ದೋಣಿ(ಬೋಟ್) ಆಧಾರಿತ ಡಾಲ್ಫಿನ್ ವೀಕ್ಷಣೆಯು ಡಾಲ್ಫಿನ್ ಗಳ ನಡವಳಿಕೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಪ್ರತಿ ವರ್ಷ ಆಕಸ್ಮಿಕದಲ್ಲಿ ಹಲವಾರು ಡಾಲ್ಫಿನ್ ಗಳು ಸಾವಿಗೀಡಾಗುತ್ತವೆ.[೩೫] CDA ಡಾಲ್ಫಿನ್ ಗಳ ವಾರ್ಷಿಕ ಸಾವಿನ ಸಂಖ್ಯೆಯ ಗಣತಿ ನಡೆಸುತ್ತದೆ. ಅದರ ವರದಿಯ ಪ್ರಕಾರ 15 ಸಾವುಗಳು 2003-04ರಲ್ಲಿ, 11 2004-05ರಲ್ಲಿ, 8 2005-06ರಲ್ಲಿ ಮತ್ತು 5 2006-07ರಲ್ಲಿ ಸಂಭವಿಸಿವೆ. 2006-07ರ 40% ಸಾವುಗಳು ಯಂತ್ರಚಾಲಿತ ದೋಣಿಗಳಿಂದ ಆದುದಾಗಿದ್ದವು.[೩೪]
- 2004ರಿಂದ ಈಚೆಗೆ ತಿಮಿಂಗಲ ಮತ್ತು ಡಾಲ್ಫಿನ್ ಸಂರಕ್ಷಣಾ ಸಂಸ್ಥೆಯು ಪಂಗಡಗಳಿಗೆ ವಿಜ್ಞಾನಾಧಾರಿತ ಶಿಕ್ಷಣ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದ್ದು ಚಿಲ್ಕ ಸರೋವರದಲ್ಲಿ ಇರ್ರವಡ್ಡಿ ಡಾಲ್ಫಿನ್ ಗಳ ಸಂರಕ್ಷಣೆಯನ್ನು ಈ ಯೋಜನೆಯ ಗುರಿಯಾಗಿ ಹೊಂದಿದೆ. ಈ ಸಂಸ್ಥೆಯವರು ಈ ಡಾಲ್ಫಿನ್ ಗಳ ಸಾವಿಗೆ ಪ್ರಧಾನ ಕಾರಣಗಳು ತೇಲುವ ಗಿಲ್ ಬಲೆಗಳು ಮತ್ತು ಹುಕ್ ಲೈನ್ ಮೀನುಗಾರಿಕೆಗಳು ಎಂದೂ, ಅವ್ಯವಸ್ಥಿತವಾದ ಪ್ರವಾಸೋದ್ಯಮ ಚಟುವಟಿಕೆಗಳಿಂದ ದೋಣಿ ಅಪ್ಪಳಿಸಿ ಇವು ಸಾಯುವುದು ಎರಡನೆಯ ಪ್ರಮುಖ ಕಾರಣವೆಂದೂ ನಿರ್ಧರಿಸಿದರು.[೩೧]
- ಸಾಂಪ್ರದಾಯಿಕ ಬೆಸ್ತರೊಂದಿಗೆ ಈ ಇರ್ರವಡ್ಡಿ ಡಾಲ್ಫಿನ್ ಗಳು ಸಹಕಾರಿ ಮೀನುಗಾರಿಕೆಯ ಒಂದು ಪರಸ್ಪರ ಸಂಬಂಧವನ್ನು ಇರಿಸಿಕೊಂಡಂತೆನ್ನಿಸುತ್ತದೆ. ಡಾಲ್ಫಿನ್ ಗಳಿಗೆ ಕೂಗು ಹಾಕಿ ತಮ್ಮ ಬಲೆಗಳೊಳಕ್ಕೆ ಮೀನುಗಳನ್ನು ತಳ್ಳಲು ಹೇಳುತ್ತಿದ್ದುದನ್ನು ಬೆಸ್ತರು ನೆನಪಿಸಿಕೊಳ್ಳುತ್ತಾರೆ.
[೩೫] ಅಯೇಯಾವಡಿ ನದಿಯ ಮೇಲುಹರಿವಿನ ಸ್ಥಳಗಳಲ್ಲಿ ಇರ್ರವಡ್ಡಿ ಡಾಲ್ಫಿನ್ ಗಳ ಸಹಾಯದಿಂದ ಕ್ಯಾಸ್ಟ್ ನೆಟ್ ಮೀನುಗಾರಿಕೆಯಲ್ಲಿ ತೊಡಗಿಕೊಳ್ಳುತ್ತಿದ್ದ ವಿಧಿವಿಧಾನಗಳು ಸಮರ್ಪಕವಾಗಿ ಹಾಗೂ ವಿವರವಾಗಿ ದಾಖಲಿಸಲ್ಪಟ್ಟಿವೆ[೩೬].
ಪ್ರಮುಖ ಆಕರ್ಷಣೆಗಳು
[ಬದಲಾಯಿಸಿ]- ನಳಬನ್ ದ್ವೀಪ: 15 ಕಿಲೋಮೀಟರ್ ಉದ್ದದ2 ನಳಬನ್ ದ್ವೀಪವು ಈ ಮಡುವಿನ ಪರಿಧಿಯಲ್ಲೇ ಇದೆ ಮತ್ತು ರಾಮ್ಸಾರ್ ಸೂಚಿತ ಗದ್ದೆಗಳ(ಕ್ಲಿನ್ನಭೂಮಿಗಳ) ಪ್ರಮುಖ ಪ್ರದೇಶವಾಗಿದೆ. ಇದನ್ನು ಪಕ್ಷಿಗಳ ಆಶ್ರಯಧಾಮವೆಂದು ವನ್ಯಜೀವ ಸಂರಕ್ಷಣಾ ಕಾಯಿದೆಯ ಅಡಿಯಲ್ಲಿ 1973ರಲ್ಲಿ ಘೋಷಿಸಲಾಯಿತು. ಇದು ಉದ್ಯಾನದ ಕೇಂದ್ರಸ್ಥಳವಾಗಿದ್ದು ವಲಸೆ ಬರುವ ಕಾಲದಲ್ಲಿ ಸಾವಿರಾರು ಪಕ್ಷಿಗಳು ಇಲ್ಲಿ ಬಂದು ಇಳಿಯುವುದನ್ನು ಕಾಣಬಹುದು.
- ಮಳೆಗಾಲದಲ್ಲಿ ಈ ದ್ವೀಪವು ಮುಳುಗಿಹೋಗುತ್ತದೆ ಮತ್ತು ಮಳೆಗಾಲದ ನಂತರ, ನೀರಿನ ಮಟ್ಟ ತಗ್ಗಿದಂತೆ, ಮತ್ತೆ ಗೋಚರವಾಗುತ್ತದೆ. ಈ ಬೃಹತ್ ಸರೋವರದಲ್ಲಿ 225 ವಿಧದ ಮೀನುಗಳಿವೆ, ಬಹಳಷ್ಟು ವಿಧದ ಫೈಟೋಪ್ಲಾಂಕ್ಟನ್ ಗಳು, ಪಾಚಿ ಮತ್ತು ಜಲಸಸ್ಯಗಳು ಇವೆ ಹಾಗೂ ಜಲಸಸ್ಯಗಳಲ್ಲದ 350ಕ್ಕೂ ಹೆಚ್ಚು ಸಸ್ಯವರ್ಗಗಳ ಬೆಳವಣಿಗೆಗೂ ಇದು ಪೂರಕವಾಗಿದೆ.
- ಇಲ್ಲಲ್ಲದೆ ಪಕ್ಷಿಗಳು ಸಾಂದ್ರವಾಗಿ ವಾಸಿಸುವುದು ದಾಖಲಾಗಿರುವ ಸ್ಥಳಗಳೆಂದರೆ ಗೆರಸೆ, ಪಾರಿಕುಡ್ ದ್ವೀಪ ಮತ್ತು ಉತ್ತರದ ಭಾಗದಲ್ಲಿನ ಪಶ್ಚಿಮದ ತೀರಗಳು. ಚಿಲ್ಕ ಸರೋವರವು ದೇಶದಲ್ಲೇ ಪಕ್ಷಿವೀಕ್ಷಣೆಗೆ ಅತ್ಯುತ್ತಮವಾದ ತಾಣಗಳಲ್ಲಿ ಒಂದಾಗಿದೆ ಹಾಗೂ ಮೀನುಗಾರಿಕೆ ಮತ್ತು ಗಾಳ ಹಾಕಿ ಮೀನು ಹಿಡಿಯುವುದಕ್ಕೂ ಸಹ ಜನಪ್ರಿಯ ಸ್ಥಳವಾಗಿದೆ.
ಇತರ ಆಕರ್ಷಣೆಗಳು
[ಬದಲಾಯಿಸಿ]ಈ ಪುಣ್ಯನಗರಿಯು ಹನ್ನೊಂದನೆಯ ಶತಮಾನದ ಜಗನ್ನಾಥ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ. ಇಲ್ಲಿನ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ ಸಮುದ್ರತೀರ; ಈ ತೀರದಲ್ಲಿ ನಿಂತು ಅಮೋಫವಾದ ಸೂರ್ಯೋದು ಮತ್ತು ಮಂತ್ರಮುಗ್ಧವಾಗಿಸುವ ಸೂರ್ಯಾಸ್ತವನ್ನು ವೀಕ್ಷಿಸುವುದೇ ಒಂದು ಸುಂದರ ಅನುಭವ. ಚಿಲಿಕ ಮಡುವಿಗೆ ನೀಡದೆ ಕೇವಲ ಪುರಿಗೆ ಭೇಟಿ ನೀಡಿದರೆ ಅದು ಅಪೂರ್ಣವೆಂದು ಪರಿಗಣಿಸಲಾಗುವುದೆಂದು ಹೇಳಲಾಗುತ್ತದೆ.
ನಿರ್ಮಲ್ ಝರ್ ಜಲಪಾತ:
[ಬದಲಾಯಿಸಿ]ನಿಮ್ಮ ಪಿಕ್ ನಿಕ್ ಟೆಂಟ್ ಗಳನ್ನು ಹಾಕಿಕೊಳ್ಳಲು ಇದೇ ಸೂಕ್ತವಾದ ತಾಣ. ಈ ಸುಂದರವಾದ ಜಲಪಾತವು ಚಿಲಿಕ ಮಡುವಿನಿಂದ ಸುಮಾರು ೧೨ ಕಿಲೋಮೀಟರ್ ದೂರದಲ್ಲಿದೆ.
ಸತ್ಪಾದ:
[ಬದಲಾಯಿಸಿ]ಇದು ಚಿಲಿಕ ಸರೋವರದ ಪೂರ್ವಭಾಗದಲ್ಲಿ ಪುರಿಯಿಂದು ಸುಮಾರು55 km (34 mi) ದೂರದಲ್ಲಿದೆ. ಈ ಪ್ರದೇಶವು ಮೂರು ಕಡೆಗಳಲ್ಲಿ ಮಡುವುಗಳಿಂದ ಸುತ್ತುವರಿಯಲ್ಪಟ್ಟಿದ್ದು ನಿಸರ್ಗಪ್ರಿಯರಿಗೆ ಒಂದು ರಮಣೀಯವಾದ ಪ್ರವಾಸಿ ತಾಣವಾಗಿದೆ.
ಪರಿಸರ-ಪ್ರವಾಸೋದ್ಯಮ
[ಬದಲಾಯಿಸಿ]- ಮುಕ್ತವಾದ ಸ್ವಚ್ಛಂದದ ಗಾಳಿ ಮತ್ತು ಕಣ್ಣಿಗೆ ಹಬ್ಬವಾಗುವಂತಹ ನೈಸರ್ಗಿಕ ಸಸ್ಯವರ್ಗಗಳು ಮತ್ತು ಪ್ರಾಣಿಸಂಕುಲಗಳು ಈ ಸರೋವರವು ಪರಿಸರ-ಪ್ರವಾಸೋದ್ಯಮದ ಪ್ರಮುಖ ಆಕರ್ಷಣೀಯ ಕೇಂದ್ರವಾಗಲು ಅನುವಾದ ವಿಷಯಗಳಾಗಿವೆ. ಈ ವಿಧದಲ್ಲಿ ಜನಾಕರ್ಷಕವಾಗುವುದರ ಮೂಲಕ ಸ್ಥಳೀಯರಿಗೆ ಪರ್ಯಾಯ ಉದ್ಯೋಗಾವಕಾಶಗಳು ದೊರೆಯುವ ನಿರೀಕ್ಷೆಯಿದೆ ಮತ್ತು ಸ್ಥಳೀಯರಲ್ಲಿ ಹಾಗೂ ಪ್ರವಾಸಿಗರಲ್ಲಿ ಪರಿಸರಪ್ರಜ್ಞೆಯು ಜಾಗೃತವಾಗುವುದರ ಮೂಲಕ ಸರೋವರದ ನೈಸರ್ಗಿಕ ಸಂಪನ್ಮೂಲಗಳನ್ನು ವಿವೇಕದಿಂದ ಬಳಸುವ ಹಾಗೂ ಸಂರಕ್ಷಿಸುವ ಪ್ರಕ್ರಿಯೆಗಳು ಜರುಗುತ್ತವೆ. ಅಂತಹ ಚಟುವಟಿಕೆಗಳಿಗಾಗಿ ಗುರುತಿಸಲ್ಪಟ್ಟಿರುವ ಸರೋವರದಲ್ಲಿನ ಪ್ರದೇಶಗಳೆಂದರೆ:
- ರಂಬಾ ಕೊಲ್ಲಿ ಯು ಸರೋವರದ ದಕ್ಷಿಣದ ತುದಿಯಲ್ಲಿದ್ದು ದ್ವೀಪಗಳ ಸಮೂಹವನ್ನೇ ಹೊಂದಿದ್ದು, ಅದರಲ್ಲಿ:
- ಬೆಕಾನ್ ದ್ವೀಪ ,ಶಿಲ್ಪವಿನ್ಯಾಸಯುತ ಶಂಖಾಕೃತಿಯ ಕಂಬ(ಮೇಲ್ಭಾಗದಲ್ಲಿ ಒಂದು ದೀಪವನ್ನು ಇಡಲು ಅನುಕೂಲವಾಗುವಂತೆ); ಇದನ್ನು ನಿರ್ಮಿಸಿದವರು ಸ್ನಾಡ್ ಗ್ರ್ಯಾಸ್ ಎಂಬ ಈಸ್ಟ್ ಇಂಡಿಯಾ ಕಂಪನಿಯವರು ನಿಯಮಿಸಲ್ಪಟ್ಟ ಅಂದಿನ ಗಂಜಾಂನ ಕಲೆಕ್ಟರ್; ನಿರ್ಮಿತವಾಗಿರುವುದು ಘಂಟಶಿಲಾ ಬೆಟ್ಟದ ಬಳಿಯ ರಂಭಾಕೊಲ್ಲಿಯ ಒಂದು ಬೃಹತ್ ಬಂಡೆಯ ಮೇಲೆ. ಪೂರ್ವಘಟ್ಟಗಳಿಂದ ಆವೃತವಾದ ಈ ಪ್ರದೇಶದಲ್ಲಿ ಜಲರಾಶಿಯು ನಯನಮನೋಹರವಾಗಿ ಹರಡಿಕೊಂಡಿದೆ.
- ಬ್ರೇಕ್ ಫಾಸ್ಟ್ ದ್ವೀಪ , ಪಿಯರ್ ಆಕಾರದಲ್ಲಿದ್ದು, "ಸಂಕುಡ ದ್ವೀಪ" ಎಂದೇ ಖ್ಯಾತವಾಗಿದ್ದು, ಕಲ್ಲಿಕೋಟೆಯ ರಾಜನು ಕಟ್ಟಿದ ಬಂಗಲೆಯ ಶಿಥಿಲವಾದ ಅವಶೇಷಗಳನ್ನು ಹೊಂದಿದೆ; ಇಲ್ಲಿ ಅಪರೂಪದ ಗಿಡಗಳು ಕಂಡುಬರುತ್ತವೆ ಮತ್ತು ಆಕರ್ಷಕವಾದ ಸಸ್ಯವರ್ಗಗಳಿಂದ ಇಡೀ ಪ್ರದೇಶವು ಹಸಿರಾಗಿ ಕಂಗೊಳಿಸುತ್ತದೆ.
- ಮಧುಚಂದ್ರ ದ್ವೀಪ , ರಂಭಾ ಜೆಟ್ಟಿಯಿಂದ 5 km (3 mi) ದೂರ, ಬಾರ್ಕುಡ ದ್ವೀಪವೆಂಬಹೆಸರೂ ಇದೆ, ತಿಳಿಯಾದ ನೀರು ಮತ್ತು ಸಾಕಷ್ಟು ಕೆಂಪು ಮತ್ತು ಹಸಿರು ಪಾಚಿಗಳನ್ನು ಹೊಂದಿದೆ; ಸ್ಥಳೀಯವಾಗಿ ಮಾತ್ರ ಗೋಚರಿಸುವ ವಿಶಿಷ್ಟ ಪ್ರಾಣಿಜಾತಿಯಾದ ಪಾದರಹಿತ (4}ಹಲ್ಲಿಗೂ ಇದು ಹೆಸರುವಾಸಿ.
- ಸೊಮೋಲೋ ಮತ್ತು ಡಂಕುಡಿ ದ್ವೀಪಗಳು , ಸರೋವರದ ಮಧ್ಯ ಮತ್ತು ದಕ್ಷಿಣಭಾಗಗಳಲ್ಲಿದೆ; ಮನೋಹರವಾದ ಕಲ್ಲಿಕೋಟೆ ಬೆಟ್ಟದ ಸಾಲುಗಳ ಹಿನ್ನೆಲೆಯಿದೆ; ನೀರಿನಲ್ಲಿ ಕೊಚ್ಚಿಹೋಗಿ ಉಳಿದ ಪೂರ್ವಘಟ್ಟದ ಅವಶೇಷಗಳಿವೆ; ಸಸ್ಯ ಹಾಗೂ ಪ್ರಾಣಿಸಂಕುಲಗಳಿಂದ ಶ್ರೀಮಂತವಾಗಿದೆ, ಮತ್ತು ಇ.
- ಪಕ್ಷಿಗಳ ದ್ವೀಪ , ಸರೋವರದ ದಕ್ಷಿಣಭಾಗದಲ್ಲಿರುವ ಈ ಪ್ರದೇಶದಲ್ಲಿ ದೊಡ್ಡ, ಚಾಚಿಕಾಣುವ ಬಂಡೆಗಳಿವೆ; ಪಕ್ಷಿಗಳ ಹಿಕ್ಕೆಗಳಲ್ಲಿರುವ ಫಾಲಿಕ್ ಆಮ್ಲದ ಪ್ರಭಾವದಿಂದ ಇವುಗಳು ಬಿಳಿಯ ಬಣ್ಣ ಬಳೆದಂತೆ ಕಾಣುತ್ತವೆ; ಬಹಳ ವಿಧದ ಪಾಚಿಗಳು, ಕೆಲವು ಮ್ಯಾನ್ ಗ್ರೂವ್ ಜಾತಿಯ ವೃಕ್ಷಗಳು ಮತ್ತು ಚಳಿಗಾಲದಲ್ಲಿ ವಲಸೆ ಬರುವ ಹಕ್ಕಿಗಳು ಇಲ್ಲಿನ ಪ್ರಮುಖವಾದ ಆಕರ್ಷಣೆಗಳು.
- ಪಾರಿಕುಡ್ ಹಲವಾರು ಸಣ್ಣಸಣ್ಣ ದ್ವೀಪಗಳು ಸೇರಿದ ಒಂದು ದ್ವೀಪವಾಗಿದ್ದು, ಗಾರ್ಹ್ ಕೃಷ್ಣಪ್ರಸಾದ್ ಘಟ್ಟದಲ್ಲಿರುವ ಈ ತಾಣವು ನಿಸರ್ಗಪ್ರಿಯರಿಗೆ ಅಚ್ಚುಮೆಚ್ಚಿನ ಜಾಗ; ಚಳಿಗಾಲದಲ್ಲಿ ಪಕ್ಷಿವರ್ಗದ ವರ್ಣರಂಜಿತ ಲೋಕವನ್ನೇ ತೆರೆದಿಡುತ್ತದೆ.
- ಕಾಳಿಜೈ ದೇವಸ್ಥಾನ ಒಂದು ದ್ವೀಪದಲ್ಲಿರುವ ಈ ದೇವಸ್ಥಾನವು ಕಾಳಿಜೈ ಮಾತೆಯ ವಾಸಸ್ಥಾನವೆಂದು ನಂಬಲಾಗಿದೆ.ಸುತ್ತಲೂ ನೀಲಿಯ ಬಣ್ಣದ ನೀರಿನಿಂದ ಆವೃತವಾದ ಬೆಟ್ಟದ ಮೇಲೆ ಈ ದೇವಸ್ಥಾನವಿದೆ. ಚಿಲ್ಕದ ಸ್ಥಳೀಯರು ಈ ದೇವತೆಯನ್ನು ಮಡುವನ್ನು ಆಳುವ ದೇವತೆಯೆಂದು ಪೂಜಿಸುತ್ತಾರೆ.
- ಶತಪದ ಗ್ರಾಮ, ಹೊಸ ಜಲಮುಖಸ್ಥಾನದಲ್ಲಿ ಇದೆ; ಇಲ್ಲಿಂದ ಸರೋವರದ ಸುಂದರ ನೋಟವು ದೊರೆಯುತ್ತದೆ ಮತ್ತು ಡಾಲ್ಫಿನ್ ಗಳು ಸಹ ಇಲ್ಲಿ ಕಾಣಸಿಗುತ್ತವೆ. ಇಲ್ಲಿನ ನೂರಾರು ದೋಣಿಗಳು ಪ್ರವಾಸಿಗರಿಗೆ ಸರೋವರದ ಪ್ರವಾಸವನ್ನು ಮಾಡಿಸುತ್ತವೆ.
- ಬಾರುಂಕುಡ , ಮಗರ್ಮುಖ್ ಬಳಿ ಇರುವ ಒಂದು ಚಿಕ್ಕ ದ್ವೀಪ; ಸರೋವರದ ಜಲಮುಖ; ವರುಣದೇವನ ದೇಗುಲವೊಂದು ಇಲ್ಲಿ ಸ್ಥಾಪಿತವಾಗಿದೆ.
- ನಬಗ್ರಹ ಹೊರ ಕಾಲುವೆಯ ಗುಂಟ ಇರಿಸಲ್ಪಟ್ಟ ಒಂದು ಪುರಾತನ ದೇವತಾವಿಗ್ರಹ.
- ಚೌರ್ಬಾರ್ ಶಿವನ ದೇವಸ್ಥಾನ ವು ಹೊರಕಾಲುವೆಯ ಗುಂಟ ಇರುವ ಆಲುಪಟ್ನ ಗ್ರಾಮದ ಬಳಿಯಲ್ಲಿದೆ.
- ಮಾಣಿಕ್ಪಟ್ನ , ಹೊರಕಾಲುವೆಯ ಬಳಿಯ ಈ ಸ್ಥಳದಲ್ಲಿ ದೂರದ ಪೂರ್ವದೇಶಗಳೊಡನೆ ವ್ಯಾಪಾರ ಮಾಡಲು ಅನುವಾಗಿದ್ದ ಒಂದು ಬಂದರು ಇದ್ದ ಐತಿಹಾಸಿಕ ಪುರಾವೆಯಿದೆ; ಭಗವಾನ್ ಶಿವನ ಭುವನೇಶ್ವರ ದೇವಸ್ಥಾನವಿದೆ, ಒಂದು ಹಳೆಯ ಮಸೀದಿ ಇದ್ದು ಅದರ ಪ್ರವೇಶದ್ವಾರವು ತಿಮಿಂಗಲದ ದವಡೆಗಳಿಂದ ಮಾಡಲ್ಪಟ್ಟಿದೆ.
- ಸ್ಯಾಂಡ್-ಬಾರ್ ಮತ್ತು ಮೌತ್ ಆಫ್ ದ ಲೇಕ್ ಒಂದು ಬಹಳ ಆಕರ್ಷಕವಾದ, 30 km (20 mi) ವಿಸ್ತೀರ್ಣವುಳ್ಳ ತೆರವಾಗಿರುವ ತೀರ; ಇದು ಮರಳಿನ ತಡಿಯಗಲಕ್ಕೂ ಇದ್ದು ಸರೋವರವನ್ನು ಸಮುದ್ರದಿಂದ ಬೇರ್ಪಡಿಸುತ್ತದೆ.[೩೭]
ತಲುಪುವ ಮಾರ್ಗ
[ಬದಲಾಯಿಸಿ]- ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 5ರಲ್ಲಿ ಹಾದು ಕೋಲ್ಕಟಾ ಮತ್ತು ಚೆನ್ನೈಗಳ ಮೂಲಕ ರಸ್ತೆಯ ಮಾರ್ಗದಲ್ಲಿ ಈ ಸರೋವರವನ್ನು ಸುಲಭವಾಗಿ ತಲುಪಬಹುದು. ಸರೋವರದ ಪೂರ್ವತಟದಲ್ಲಿರುವ ಸತ್ಪಾರ ಪಟ್ಟಣವು ರಸ್ತೆಯ ಪ್ರಯಾಣದ ಮೂಲಕ ಪುರಿ ನಗರದ ನೈಋತ್ಯ ದಿಕ್ಕಿನಲ್ಲಿ50 km (30 mi) ದೂರವಿದೆ ಮತ್ತು ಒಡಿಶಾದ ರಾಜಧಾನಿಯಾದ ಭುವನೇಶ್ವರದಿಂದ 100 km (60 mi) ದೂರವಿದೆ; ಭುವನೇಶ್ವರವು ಇಲ್ಲಿಗೆ ಅತಿ ಸಮೀಪವಾದ ವಿಮಾನನಿಲ್ದಾಣವನ್ನೂ ಹೊಂದಿದೆ.
- ದಕ್ಷಿಣಪೂರ್ವ ರೈಲ್ವೇಯ ಒಂದು ಬ್ರಾಡ್ ಗೇಜ್ ರೈಲ್ವೇ ಮಾರ್ಗವು ಕೋಲ್ಕಟಾದಿಂದು ಆರಂಭವಾಗಿ ಸರೋವರದ ಪಶ್ಚಿಮತೀರದ ಗುಂಟ ಸಾಗಿ, ಬಾಲುಗಾಂವ್, ಚಿಲಿಕ ಮತ್ತು ರಂಭಾ ನಿಲ್ದಾಣಗಳ ಮೂಲಕ ಹಾದುಹೋಗುತ್ತದೆ.[೫] ಸರೋವರದ ಆವರಣದಲ್ಲಿಯೇ ಒಡಿಶಾ ಸಾರಿಗೆ ಅಭಿವೃದ್ಧಿ ನಿಗಮ ನಿಯಮಿತ (OTDC) ಮತ್ತು ರಾಜ್ಯಸರ್ಕಾರದ ರೆವಿನ್ಯೂ ಇಲಾಖೆಯವರು ದೋಣಿವಿಹಾರದ ಸವಲತ್ತುಗಳನ್ನು ಒದಗಿಸುತ್ತಾರೆ. ಖಾಸಗಿ ಕಾರ್ಯನಿರ್ವಾಹಕರು ಸಹ ಈ ಸರೋವರದ ವಿವಿಧ ದ್ವೀಪಗಳಿಗೆ ಹೋಗಿಬರಲು ನಾಡದೋಣಿಗಳನ್ನು ಬಾಡಿಗೆಗೆ ಕೊಡುತ್ತಾರೆ.[೩೮]
- OTDC ಅತಿಥಿಗೃಹಗಳು ಬಾರ್ಕುಲ್, ರಂಭಾ, ಶತಪದಗಳಲ್ಲಿವೆ ಮತ್ತು & ಬಾಲುಗಾಂವ್ ನಲ್ಲಿ ಕೆಲವು ಹೊಟೆಲ್ ಗಳಿವೆ. ನಳಬನ ಪಕ್ಷಿ ಆಶ್ರಯಧಾಮಕ್ಕೆ ಪ್ರವೇಶಿಸುವುದಕ್ಕೆ ಮುನ್ನ ಪ್ರವೇಶಿಸಬಯಸುವರು ಒಂದು ಪ್ರವೇಶ ಪರವಾನಗಿಯನ್ನು ಪಡೆಯಬೇಕು. ಈ ಪ್ರವೇಶ ಪರವಾನಗಿಯನ್ನು ಪ್ರವೇಶ/ನಿರ್ಗಮನ ದ್ವಾರಗಳಲ್ಲಿ, ತಪಾಸಣಾ ದ್ವಾರಗಳಲ್ಲಿ ಮತ್ತು ಅಧಿಕಾರಿಗಳು ಯಾವಾಗ ಕೇಳಿದರೆ ಆವಾಗ ತೋರಿಸಬೇಕಾಗುತ್ತದೆ.
ಚಿತ್ರ ಸಂಪುಟ
[ಬದಲಾಯಿಸಿ]-
ಪೊಂಗಾಮಿಯಾ ಪಿನ್ನಾಟಾ (ಪಾಣಿಗ್ರಾಹಿ)- ಒಂದು ಹೂಬಿಡುವ ಕಾಂಡ
-
ಸ್ಯಾಂಡರ್ಲಿಂಗ್ ಕ್ಯಾಲಿಡ್ರಿಸ್ ಆಲ್ಬ
-
ಟೆರೆಕ್ ಸ್ಯಾಂಡ್ ಪೈಪರ್ ಝೀನಸ್ ಸಿನೆರಿಯಸ್
-
ಕೆಂಟಿಷ್ ಪ್ಲೋವರ್ (ಷಾರಾಡ್ರಿಯಸ್ ಅಲೆಕ್ಸಾಂಡ್ರಿನಸ್)
-
ಕಪ್ಪು-ಬಾಲದ ಗುಡ್ವಿಟ್ ಲಿಮೋಸಾ ಲಿಮೋಸ
-
ಪೈಡ್ ಜಲಗಾರಪಕ್ಷಿ (ಸೆರೈಲ್ ರೂಡಿಸ್)
-
ಡೇಗೆ
-
ಬಿಳಿಯ-ಹೊಟ್ಟೆಯ ಸಮುದ್ರ ಗಿಡುಗ
-
ಹಸಿರು ಸಮುದ್ರಕೂರ್ಮ
-
ಡ್ಯುಗಾಂಗ್
-
ಪಾದಹೀನ ಹಲ್ಲಿ
-
ಬೆಸ್ತಮೀನು
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ Tripati, Sila (2008-02-10). "Stone anchors along the coast of Chilika Lake: New light on the maritime activities of Orissa, India" (PDF). CURRENT SCIENCE. 94 (3). Bangalore: Indian Academy of Sciences: 386–390.
{{cite journal}}
: Unknown parameter|coauthors=
ignored (|author=
suggested) (help) - ↑ ೨.೦ ೨.೧ ೨.೨ Mohanty, Prof. Prafulla Kumar (2008-6). "Dolphins of Chilika" (PDF). Orissa Review. Govt. of Orissa: 21–26. Archived from the original (PDF) on 2009-04-10. Retrieved 2010-09-21.
{{cite journal}}
: Check date values in:|date=
(help); Unknown parameter|coauthors=
ignored (|author=
suggested) (help) - ↑ ೩.೦ ೩.೧ Forest and Environment Department. "Chilika". Wildlife Conservation in Orissa. Govt of Orissa. Archived from the original on 2013-07-01. Retrieved 2008-12-21.
- ↑ ೪.೦ ೪.೧ ೪.೨ "Inventory of wetlands" (PDF). Govt. of India. pp. 314–318. Archived from the original (PDF) on 2016-03-03. Retrieved 2008-12-09.
- ↑ ೫.೦ ೫.೧ ೫.೨ ೫.೩ ೫.೪ ೫.೫ Chilika Development Authority (2008). "About Chilika". Archived from the original on 2008-12-07. Retrieved 2008-12-16.
- ↑ ೬.೦ ೬.೧ ೬.೨ ೬.೩ ೬.೪ ೬.೫ WWF India (2008). "Chilika Lake". Retrieved 2008-12-16.
- ↑ ೭.೦ ೭.೧ ೭.೨ ೭.೩ Chilika Development Authority (2008). "Fish Yield Status". Archived from the original on 2008-06-30. Retrieved 2008-12-11.
- ↑ ೮.೦ ೮.೧ Chilika Development Authority (2008). "Welcome to Chilika Lagoon". Archived from the original on 2008-10-01. Retrieved 2008-12-16.
- ↑ ೯.೦ ೯.೧ ೯.೨ ೯.೩ The Ramsar Convention (26 November 2008). "The Montreux Record". Retrieved 2008-12-18.
- ↑ ೧೦.೦ ೧೦.೧ ೧೦.೨ ೧೦.೩ ೧೦.೪ Chilika Development Authority (2008). "Ramsar Award". Archived from the original on 2008-12-07. Retrieved 2008-12-16.
- ↑ ೧೧.೦ ೧೧.೧ Sinha, B.K. (2000). "13. B.K. Sinha, Golabai :". In Kishor K. Basa and Pradeep Mohanty (ed.). A Protohistoric Site on the Coast of Orissa. Vol. vol. I (in: Archaeology of Orissa ed.). Delhi: Pratibha Prakashan. pp. 322–355. ISBN 81-7702-011-0.
{{cite book}}
:|volume=
has extra text (help) - ↑ ೧೨.೦ ೧೨.೧ Patra, Sushanta Ku. (1992-93,). "ARCHAEOLOGY AND THE MARITIME HISTORY OF ANCIENT ORISSA" (PDF). OHRJ. XLVII, (2). Bhubaneswar: Govt. of Orissa: 107–118. Archived from the original (PDF) on 2009-10-29. Retrieved 2010-09-21.
{{cite journal}}
: Check date values in:|date=
(help); Unknown parameter|coauthors=
ignored (|author=
suggested) (help)CS1 maint: extra punctuation (link) - ↑ ೧೩.೦೦ ೧೩.೦೧ ೧೩.೦೨ ೧೩.೦೩ ೧೩.೦೪ ೧೩.೦೫ ೧೩.೦೬ ೧೩.೦೭ ೧೩.೦೮ ೧೩.೦೯ "History of Chilika". Chilika Lake Development Authority, Orissa. Archived from the original on 2008-12-07. Retrieved 2008-12-16.
- ↑ ೧೪.೦ ೧೪.೧ ೧೪.೨ ೧೪.೩ ೧೪.೪ ೧೪.೫ Choudhury, Dr. Janmejay (2007-11). "Nature Queen Chilika and Eco-Tourism" (PDF). Orissa Review. Govt. of Orissa: 17–19. Archived from the original (PDF) on 2009-04-10. Retrieved 2010-09-21.
{{cite journal}}
: Check date values in:|date=
(help) - ↑ "New clues to historic naval war in Chilika". Nature India Journal Published online 3 June 2008, Subhra Priyadarshini. Retrieved 2008-12-16.
- ↑ ೧೬.೦ ೧೬.೧ Tripathy, Dr. Balaram (2007-11). "Maritime Heritage of Orissa" (PDF). Orissa Review. Govt. of Orissa: 27–41. Archived from the original (PDF) on 2009-04-10. Retrieved 2010-09-21.
{{cite journal}}
: Check date values in:|date=
(help) - ↑ ೧೭.೦ ೧೭.೧ ೧೭.೨ ೧೭.೩ ೧೭.೪ ೧೭.೫ Iwasaki, Shimpei (1998-12-14). "Sustainable Regional DevelopmentIn the Catchment of Chilika Lagoon, Orissa State, India". In Chilika Development Authority and Department of Water Resources (Orissa) (ed.). Proceedings of the International Workshop in Sustainable Development of Chilika Lagoon (PDF). Tokyo, Japan.: Global Environment Information Centre. p. 27. Archived from the original (PDF) on 2007-06-10. Retrieved 2010-09-21.
- ↑ "Luminescence dating of the barrier spit at Chilika lake, Orissa, India". Oxford Journals, Radiation Protection Dosimetry, Volume 119, Number 1-4 , pp. 442-445, A. S. Murray and M. Mohanti. Retrieved 2008-12-16.
- ↑ Singh, Sarina (2005). India. Lonely Planet. p. 576. ISBN 1740596943, 9781740596947.
{{cite book}}
: Check|isbn=
value: invalid character (help); Unknown parameter|coauthors=
ignored (|author=
suggested) (help) - ↑ ೨೦.೦ ೨೦.೧ ೨೦.೨ ೨೦.೩ ೨೦.೪ ೨೦.೫ International Lake Environment Committee (ILEC) (2005). "Chilika Lagoon-Experience and Lessons Learned Brief, Asish K.Ghosh, CED & Ajit K.Patnaik, CDA, pp. 116-129" (PDF). Retrieved 2008-12-16.
- ↑ "Estimation of Sedimentation Rate in Chilka Lake, Orissa Using Environmental 210pb Isotope Systematics,P 267" (PDF). Centre for Water Resources Development and Management. Archived from the original (PDF) on 2015-09-23. Retrieved 2008-12-16.
- ↑ ೨೨.೦ ೨೨.೧ Wood, Alexander (2000). "Ch. 10". The Root Causes of Biodiversity Loss. Earthscan. pp. 213–230. ISBN 1853836990, 9781853836992.
{{cite book}}
: Check|isbn=
value: invalid character (help); Unknown parameter|coauthors=
ignored (|author=
suggested) (help) - ↑ Chilika Development Authority. "Restoration". Archived from the original on 2008-08-03. Retrieved 2008-12-15.
- ↑ Chilika Development Authority. "News". Archived from the original on 2008-12-07. Retrieved 2008-12-16.
- ↑ "Chilika Lake". Retrieved 2008-12-16.
- ↑ staff (1998-10-15). "Birds Crowd Orissa Sanctuary". Times of India. Times of India. Archived from the original on 2009-07-27. Retrieved 2008-12-21.
- ↑ "900,000, Birds Visit Chilika Lake". srijanfoundation. Archived from the original on 2012-12-09. Retrieved 2008-12-09.
- ↑ ೨೮.೦ ೨೮.೧ ೨೮.೨ ೨೮.೩ Chilika Development Authority (2008). "Avi fauna". Archived from the original on 2008-12-07. Retrieved 2008-12-16.
- ↑ ೨೯.೦ ೨೯.೧ ೨೯.೨ Ghosh, Asish K. "fig.1 Chilika Lagoon Basin" (PDF). Chilika Lagoon Experience and Lessons learned Brief. UNEP International Waters Learning Exchange and Resource Network. p. 115. Retrieved 2008-12-23.
{{cite web}}
: Unknown parameter|coauthors=
ignored (|author=
suggested) (help) - ↑ "Chilika Lagoon". Birds and birding in India. birding.in. 2008. Retrieved 2008-12-22.
- ↑ ೩೧.೦ ೩೧.೧ ೩೧.೨ Sutaria, Dipani (2007). "Irrawaddy dolphin - India" (PDF). Whale and Dolphin Conservation Society. Archived from the original (PDF) on 2009-03-26. Retrieved 2008-12-25.
- ↑ Cetacean Specialist Group (1996). Orcaella brevirostris. 2006. IUCN Red List of Threatened Species. IUCN 2006. www.iucnredlist.org. Retrieved on 10 March 2007.
- ↑ Sinha, R.K. (May–Aug 2004). "The Irrawaddy Dolphins Orcaella of Chilika Lagoon, India" (PDF). Journal of the Bombay Natural History Society. 101 ((2)). Mumbai, India: online edition: Environmental Information System (ENVIS), Annamalai University, Centre of Advanced Study in Marine Biology, Parangipettai - 608 502, Tamil Nadu, India: 244–251. Archived from the original on 2009-04-10. Retrieved 2021-07-17.
{{cite journal}}
: CS1 maint: bot: original URL status unknown (link) CS1 maint: date format (link) - ↑ ೩೪.೦ ೩೪.೧ Das, Subrat (2008-02-28). "Dolphins better off in Chilika - Survey reveals dip in death toll of Irrawaddy School". The Telegraph. Calcutta. pp. Front page. Retrieved 2008-12-25.
- ↑ ೩೫.೦ ೩೫.೧ D’Lima, Coralie (2008). "Dolphin-human interactions, Chilika" (PDF). Project summary. Whale and Dolphin Conservation Society. Archived from the original (PDF) on 2009-03-19. Retrieved 2008-12-21.
- ↑ Tun, Tint (2008). "Castnet Fishing with the Help of Irrawaddy Dolphins". Irrawaddy Dolphin. Yangon, Myanmar. Archived from the original on 2008-07-25. Retrieved 2008-12-25.
- ↑ Chilika Development Authority. "Eco Tourism". Archived from the original on 2008-12-07. Retrieved 2008-12-16.
- ↑ Chilika Development Authority (2008). "How to reach". Archived from the original on 2008-06-28. Retrieved 2008-12-16.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಇರ್ರವಡ್ಡಿ ಡಾಲ್ಫಿನ್ (ಹಂದಿಮೀನು)— ಭಾರತ Archived 2009-03-26 ವೇಬ್ಯಾಕ್ ಮೆಷಿನ್ ನಲ್ಲಿ.
- ಚಿಲ್ಕ ಸರೋವರ ಪ್ರವಾಸದ ಬಗ್ಗೆ ಪ್ರವಾಸಿಗರಿಗೆ ಮಾಹಿತಿ
- ಹೊಸ ಜಲಮುಖದ ತೆರೆಯುವಿಕೆ ಮತ್ತು ಚಿಲಿಕ ಮಡುವಿನ IRS 1D LISS III ಬಿಂಬ. Archived 2008-12-07 ವೇಬ್ಯಾಕ್ ಮೆಷಿನ್ ನಲ್ಲಿ.
- ಚಿತ್ರ 1 ಚಿಲಿಕ ಮಡುವಿನ ಜಲಾನಯನ
- ಈ ಮಡುವಿನಲ್ಲಿನ ಪ್ರವಾಸಿ ಸ್ಥಳಗಳು
- ಚಿಲಿಕದ ಪಕ್ಷಿಗಳು
- Pages using gadget WikiMiniAtlas
- Pages using the JsonConfig extension
- CS1 errors: unsupported parameter
- CS1 errors: dates
- CS1 errors: extra text: volume
- CS1: long volume value
- CS1 maint: extra punctuation
- CS1 errors: ISBN
- CS1 maint: bot: original URL status unknown
- CS1 maint: date format
- Coordinates on Wikidata
- Pages using infobox body of water with unknown parameters
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- All accuracy disputes
- Articles with disputed statements from December 2009
- Short description is different from Wikidata
- Pages using infobox settlement with unknown parameters
- Pages using infobox settlement with missing country
- Pages using infobox settlement with no map
- Pages using infobox settlement with no coordinates
- Commons category link is on Wikidata
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಒಡಿಶಾದ ಸರೋವರಗಳು
- ಭಾರತದ ಸಮುದ್ರಕೊಲ್ಲಿಗಳು
- ಭಾರತದ ರಾಮ್ಸಾರ್ ತಾಣಗಳು
- ಭಾರತದ ಪಕ್ಷಿಗಳ ಆಶ್ರಯಧಾಮಗಳು
- ಪರಿಸರ ಪ್ರವಾಸೋದ್ಯಮ