ಚಿಕನ್ ಕರಿ

ವಿಕಿಪೀಡಿಯ ಇಂದ
Jump to navigation Jump to search
Chicken preparation in Malvani style.jpg

ಚಿಕನ್ ಕರಿ ಭಾರತೀಯ ಉಪಖಂಡದಲ್ಲಿ ಹುಟ್ಟಿಕೊಂಡ ಒಂದು ಖಾದ್ಯವಾಗಿದೆ. ಇದು ಭಾರತೀಯ ಉಪಖಂಡ, ಆಗ್ನೇಯ ಏಷ್ಯಾ, ಗ್ರೇಟ್ ಬ್ರಿಟನ್ ಜೊತೆಗೆ ಕೆರಿಬಿಯನ್‍ನಲ್ಲಿ ಸಾಮಾನ್ಯವಾಗಿದೆ. ಭಾರತೀಯ ಉಪಖಂಡದ ಸಾಮಾನ್ಯ ಕರಿಯು ಈರುಳ್ಳಿ ಹಾಗೂ ಟೊಮೇಟೊ ಆಧಾರಿತ ಸಾಸ್‍ನಲ್ಲಿ ಬೇಯಿಸಲಾದ ಕೋಳಿಮಾಂಸವನ್ನು ಹೊಂದಿರುತ್ತದೆ. ರುಚಿಗೊಳಿಸಲು ಶುಂಠಿ, ಬೆಳ್ಳುಳ್ಳಿ, ಟೊಮೇಟೊ ತಿಳ್ಳು, ಮೆಣಸಿನಕಾಯಿ ಮತ್ತು ಅರಿಸಿನ, ಜೀರಿಗೆ, ಕೊತ್ತುಂಬರಿ, ದಾಲ್ಚಿನ್ನಿ, ಏಲಕ್ಕಿ ಇತ್ಯಾದಿ ಸೇರಿದಂತೆ ನಾನಾಬಗೆಯ ಸಂಬಾರ ಪದಾರ್ಥಗಳನ್ನು ಸೇರಿಸಲಾಗುತ್ತದೆ. ದಕ್ಷಿಣ ಏಷ್ಯಾದ ಹೊರಗೆ, ಕರಿ ಚಿಕನ್‍ನ್ನು ಹಲವುವೇಳೆ ಕರಿ ಪೌಡರ್ ಎಂಬ ಮೊದಲೇ ತಯಾರಿಸಿಟ್ಟುಕೊಂಡ ಸಂಬಾರ ಪದಾರ್ಥಗಳ ಮಿಶ್ರಣದಿಂದ ತಯಾರಿಸಲಾಗುತ್ತದೆ.

ಮೂಳೆಗಳಿರುವ ಕೋಳಿಮಾಂಸದ ತುಂಡುಗಳನ್ನು ಬಳಸಲಾಗುತ್ತದೆ.[೧] ದಕ್ಷಿಣ ಭಾರತದಲ್ಲಿ, ಕೊಬ್ಬರಿ ತುರಿ ಮತ್ತು ಕರಿಬೇವಿನ ಎಲೆಗಳು ಕೂಡ ಜನಪ್ರಿಯ ಘಟಕಾಂಶಗಳಾಗಿವೆ.[೨] ಚಿಕನ್ ಕರಿಯನ್ನು ಸಾಮಾನ್ಯವಾಗಿ ಕೊತ್ತಂಬರಿ ಎಲೆಗಳಿಂದ ಅಲಂಕರಿಸಲಾಗುತ್ತದೆ, ಮತ್ತು ಅನ್ನ ಅಥವಾ ರೋಟಿಯೊಂದಿಗೆ ಬಡಿಸಲಾಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. Sanjeev Kapoor's Khazana. "Quick and Easy Chicken Curry". Retrieved 10 May 2013.
  2. Sanjay Thumma. "Grandma's Curry chicken". Retrieved 10 May 2013.