ವಿಷಯಕ್ಕೆ ಹೋಗು

ಚಂದ್ರಲೇಖಾ (ನರ್ತಕಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಂದ್ರಲೇಖಾ
ಜನನ(೧೯೨೮-೧೨-೦೬)೬ ಡಿಸೆಂಬರ್ ೧೯೨೮
ವಡಾ, ಬಾಂಬೆ ಪ್ರೆಸಿಡೆನ್ಸಿ, ಬ್ರಿಟಿಷ್ ಇಂಡಿಯಾ
ಮರಣ30 December 2006(2006-12-30) (aged 78)

ಚಂದ್ರಲೇಖಾ ಪ್ರಭುದಾಸ್ ಪಟೇಲ್ (೬ ಡಿಸೆಂಬರ್ ೧೯೨೮ - ೩೦ ಡಿಸೆಂಬರ್ ೨೦೦೬), ಇವರನ್ನುಸಾಮಾನ್ಯವಾಗಿ ಚಂದ್ರಲೇಖಾ ಎಂದು ಕರೆಯುತ್ತಾರೆ. ಅವರು ಭಾರತದ ನರ್ತಕಿ ಮತ್ತು ನೃತ್ಯ ಸಂಯೋಜಕರಾಗಿದ್ದರು. ಭಾರತದ ಮೊದಲ ಉಪ ಪ್ರಧಾನ ಮಂತ್ರಿ ವಲ್ಲಭಭಾಯಿ ಪಟೇಲ್ ಅವರ ಸೋದರ ಸೊಸೆಯಾದ ಇವರು ಭರತನಾಟ್ಯದ ಜೊತೆಗೆ ಯೋಗ ಮತ್ತು ಕಲರಿಪ್ಪಯಟ್ಟು ಮುಂತಾದ ಸಮರ ಕಲೆಗಳನ್ನು ಬೆಸೆಯುವ ಪ್ರದರ್ಶನಗಳ ಪ್ರತಿಪಾದಕರಾಗಿದ್ದರು.

ಅವರಿಗೆ ಸಂಗೀತ ನಾಟಕ ಅಕಾಡೆಮಿಯ ಅತ್ಯುನ್ನತ ಪ್ರಶಸ್ತಿ ಹಾಗೂ ಸಂಗೀತ, ನೃತ್ಯ ಮತ್ತು ನಾಟಕಕ್ಕಾಗಿ ಭಾರತದ ರಾಷ್ಟ್ರೀಯ ಅಕಾಡೆಮಿ ಪ್ರಶಸ್ತಿ ಹಾಗೂ ೨೦೦೪ ರಲ್ಲಿ ಸಂಗೀತ ನಾಟಕ ಅಕಾಡೆಮಿ ಫೆಲೋಶಿಪ್ ನೀಡಲಾಯಿತು.

ಆರಂಭಿಕ ಜೀವನ ಮತ್ತು ಶಿಕ್ಷಣ

[ಬದಲಾಯಿಸಿ]

ಅವರು ಮಹಾರಾಷ್ಟ್ರದ ವಡಾದಲ್ಲಿ ಅಜ್ಞೇಯತಾವಾದಿ ವೈದ್ಯ ತಂದೆ ಮತ್ತು ಧರ್ಮನಿಷ್ಠ ಹಿಂದೂ ತಾಯಿಗೆ ಜನಿಸಿದರು. ಅವರು ತಮ್ಮ ಬಾಲ್ಯವನ್ನು ತಮ್ಮ ಸ್ಥಳೀಯ ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಕಳೆದರು. []

ವೃತ್ತಿ

[ಬದಲಾಯಿಸಿ]

ಪ್ರೌಢಶಾಲೆಯನ್ನು ಪೂರ್ಣಗೊಳಿಸಿದ ನಂತರ, ಚಂದ್ರಲೇಖಾರವರು ಕಾನೂನು ಅಧ್ಯಯನ ಮಾಡಿದರು, ಆದರೆ ನೃತ್ಯವನ್ನು ಕಲಿಯುವ ಸಲುವಾಗಿ ತಮ್ಮ ಅಧ್ಯಯನವನ್ನು ಮಧ್ಯದಲ್ಲಿಯೇ ಬಿಟ್ಟರು. ಅವರು ಎಲ್ಲಪ್ಪ ಪಿಳ್ಳೈ ಅವರ ಮಾರ್ಗದರ್ಶನದಲ್ಲಿ, ದಕ್ಷಿಣ ಭಾರತದ ದೇವಾಲಯದ ನೃತ್ಯಗಾರರು ಅಭ್ಯಾಸ ಮಾಡುವ ನೃತ್ಯದ ಒಂದು ರೂಪವಾದ ದಾಸಿ ಅಟ್ಟಂನೊಂದಿಗೆ ತಮ್ಮ ನೃತ್ಯವನ್ನು ಪ್ರಾರಂಭಿಸಿದರು. ಅವರು ತಮ್ಮ ನೃತ್ಯ ಶಿಕ್ಷಣದಲ್ಲಿ ಬಾಲಸರಸ್ವತಿ ಮತ್ತು ರುಕ್ಮಿಣಿ ದೇವಿ ಅರುಂಡೇಲ್‌ರಿಂದ ಪ್ರಭಾವಿತರಾಗಿದ್ದರು. ಆದರೆ ಇವರ ನೃತ್ಯ ಸಂಯೋಜನೆಯು ಹಿಂದಿನಿಂದಲೂ ಹೆಚ್ಚು ಪ್ರಭಾವಿತರಾಗಿದ್ದರು ಎಂದು ತೋರಿಸುತ್ತಿತ್ತು. [] [] ಚಂದ್ರಲೇಖಾ ಅವರು ಭರತನಾಟ್ಯದಲ್ಲಿ ತಮ್ಮ ಆರಂಭಿಕ ತರಬೇತಿಯನ್ನು ಪಡೆದಿದ್ದರೂ, ಅವರ ಇತರ ನೃತ್ಯಗಳು, ಕಲರಿಪ್ಪಯಟ್ಟುಗಳಂತಹ ಸಮರ ಕಲೆಗಳು ಮತ್ತು ಪ್ರದರ್ಶನ ಕಲೆಗಳಿಂದ ಅಂಶಗಳನ್ನು ಒಳಗೊಂಡಿರುವ ಆಧುನಿಕೋತ್ತರ ಫ್ಯೂಷನ್ ನೃತ್ಯಗಳಿಗೆ ತಮ್ಮ ಗಮನವನ್ನು ಬದಲಾಯಿಸಿದರು. [] [] ಅವರ ಪ್ರಬಂಧ 'ಮಿಲಿಟೆಂಟ್ ಒರಿಜಿನ್ಸ್ ಆಫ್ ಇಂಡಿಯನ್ ಡ್ಯಾನ್ಸ್', ಮೂಲತಃ ೧೯೭೯ ರಲ್ಲಿ ಸೋಶಿಯಲ್ ಸೈಂಟಿಸ್ಟ್‌ನಲ್ಲಿ ಪ್ರಕಟವಾಯಿತು. [] ನಂತರ ತುಲಿಕಾ ಬುಕ್ಸ್ ಪ್ರಕಟಿಸಿದ ಇಂಡಿಯಾ ಸಿನ್ಸ್ ೯೦ ರ ಸರಣಿಯ ಭಾಗವಾದ ಇಂಪ್ರೊವೈಸ್ಡ್ ಫ್ಯೂಚರ್ಸ್: ಎನ್‌ಕೌಂಟರಿಂಗ್ ದಿ ಬಾಡಿ ಇನ್ ಪರ್ಫಾರ್ಮೆನ್ಸ್ ಸಂಪುಟದಲ್ಲಿ ಮರುಮುದ್ರಣ ಮಾಡಲಾಯಿತು.

ಪ್ರಶಸ್ತಿಗಳು ಮತ್ತು ಮನ್ನಣೆ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "Chandralekha: Controversial Indian dancer whose ideas challenged convention". The Guardian. London. 9 February 2007. Retrieved 30 November 2009.
  2. "Chandralekha: Controversial Indian dancer whose ideas challenged convention". The Guardian. London. 9 February 2007. Retrieved 30 November 2009."Chandralekha: Controversial Indian dancer whose ideas challenged convention". The Guardian. London. 9 February 2007. Retrieved 30 November 2009.
  3. Kothari, Sunil; Kapoor, Coomi (March 13, 2014) [May 15, 1985]. "Danseuse-feminist Chandralekha: The doyenne of thinkers in Indian dance". India Today (in ಇಂಗ್ಲಿಷ್). Retrieved 2020-11-05.
  4. Dunning, Jennifer (7 January 2007). "Chandralekha, 79, Dancer Who Blended Indian Forms, Dies". The New York Times. Retrieved 30 November 2009.
  5. Barnes, Clive (21 November 1998). "Handsome 'Raga'-Bag of Theses". New York Post. Archived from the original on 21 ಜುಲೈ 2012. Retrieved 30 November 2009.
  6. Chandralekha. "Militant Origins of Indian Dance". Social Scientist. 9 (98–99): 80–86.
  7. "'Kalidas Samman' for Chandralekha". The Hindu. 19 October 2003. Archived from the original on 4 February 2008.{{cite news}}: CS1 maint: unfit URL (link)
  8. "Sangeet Natak Akademi Ratna Sadasya (Fellowship)". Sangeet Natak Akademi. Archived from the original on 27 July 2011. Retrieved 1 December 2009.

ಗ್ರಂಥಸೂಚಿ

[ಬದಲಾಯಿಸಿ]

ರುಸ್ತಂ ಬರುಚಾ. ಚಂದ್ರಲೇಖಾ: ಮಹಿಳೆ, ನೃತ್ಯ, ಪ್ರತಿರೋಧ. ಸಿಂಧೂ. ನವದೆಹಲಿ: ೧೯೯೫. ISBN 81-7223-168-7

ಬಾಹ್ಯ ಕೊಂಡಿಗಳು

[ಬದಲಾಯಿಸಿ]