ವಿಷಯಕ್ಕೆ ಹೋಗು

ಅಜ್ಞೇಯತಾವಾದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಜ್ಞೇಯತಾವಾದ ಒಂದು ರೀತಿಯ ಸಂದೇಹವಾದ. ನಮ್ಮ ಆಲೋಚನಾಶಕ್ತಿ ಇಂದ್ರಿಯಾನುಭವಕ್ಕಿಂತ ಮುಂದೆ ಹೋಗಲಾರದು, ಆಧ್ಯಾತ್ಮಿಕ ವಿಷಯಗಳನ್ನು, ಅದರಲ್ಲೂ ದೇವರ ಅಸ್ತಿತ್ವ ವಿಚಾರವನ್ನು ಸಕಾರಣವಾಗಿ ಸಿದ್ಧಿಸುವುದಕ್ಕಾಗುವುದಿಲ್ಲ ಎಂಬುದು ಈ ವಾದದ ಸಾರಾಂಶ.

ಸಿದ್ಧಾಂತಗಳು

[ಬದಲಾಯಿಸಿ]

ಅಜ್ಞೇಯತಾವಾದ (ಅಗ್ನಾಸ್ಟಿಸಿಸಮ್) ಆಸ್ತಿಕ್ಯವನ್ನು ಒಪ್ಪದಿದ್ದರೂ ನಾಸ್ತಿಕ್ಯವನ್ನು ಪ್ರತಿಪಾದಿಸುವುದಿಲ್ಲ. ಅದು ನಮಗೆ ತಿಳಿದ ಅಥವಾ ತಿಳಿಯುವಂಥ ವಿಷಯವಲ್ಲ. ಅಲ್ಲದೆ ನಮಗೆ ಈಗ ತಿಳಿದಿಲ್ಲ ಎಂದು ಮಾತ್ರ ಹೇಳುವುದಲ್ಲ, ನಮಗೆ ಎಂದೂ ತಿಳಿಯಲು ಶಕ್ಯವಲ್ಲದ್ದು-ಎಂಬುದೇ ಈ ವಾದದ ತಿರುಳು. ಸಾಧಾರಣವಾಗಿ, ವಿಜ್ಞಾನ ಪರಿಣಿತರು ಈ ವಾದವನ್ನು ಮುಂದಿಡುತ್ತಾರೆ. ಅವರವರ ವಿಜ್ಞಾನದ ಪರಿಮಿತಿಯ ದೃಷ್ಟಿಯಿಂದ ಈಶ್ವರನ ಅಸ್ತಿತ್ವದಂಥ ವಿಷಯವನ್ನು ಕುರಿತು ವಿಜ್ಞಾನವೇನನ್ನೂ ಹೇಳಲಾರದೆಂದು ಇವರ ಅಭಿಮತ.

ಪ್ರತಿಪಾದಕರು

[ಬದಲಾಯಿಸಿ]
Thomas Henry Huxley
Proportion of atheists and agnostics around the world

ಅಗ್ನಾಸ್ಟಿಸಿಸಮ್ ಅನ್ನುವ ಶಬ್ದವನ್ನು ಮೊದಲು ಸೃಷ್ಟಿಸಿದವನು ಪ್ರಸಿದ್ಧ ಆಂಗ್ಲ ವೈಜ್ಞಾನಿಕ ಟಿ. ಎಚ್. ಹಕ್ಸ್ಲೆ ಎನ್ನುವವನು. ಹೊಸದಾದರೂ ಈ ಭಾವ ಬಹಳ ಹಳೆಯದು ಎನ್ನುವುದರಲ್ಲಿ ಸಂಶಯವಿಲ್ಲ. ಪಾಶ್ಚಾತ್ಯ ತತ್ತಗಳಲ್ಲಿ ಪಾರಮಾರ್ಥಿಕ ತತ್ತ್ವಗಳು ನಮ್ಮ ಪ್ರತ್ಯಕ್ಷ ಅನುಮಾನ ಪ್ರಮಾಣಗಳಿಗೆ ಗೋಚರವಾಗುವುದಿಲ್ಲವೆಂದೂ ಕೇವಲ ತರ್ಕದಿಂದ, ಯುಕ್ತಿಯಿಂದ, ಆತ್ಮ, ಪರಮಾತ್ಮ, ಮೋಕ್ಷ ಇವುಗಳ ಸ್ವರೂಪವನ್ನು ನಿರ್ಣಯಿಸಲು ಸಾಧ್ಯವಿಲ್ಲವೆಂದೂ ವಾದ ಹೂಡಿದವ ಇಮ್ಯನ್ಯುಯಲ್ ಕ್ಯಾಂಟ್ ಎಂಬ ಜರ್ಮನಿಯ ತತ್ತ್ವಶಾಸ್ತ್ರಜ್ಞ. ಹರ್ಬಟ್ ಸ್ಪೆನ್ಸರ್, ಅಗಸ್ಟ ಕಾಂಟ್ ಮೊದಲಾದವರು ಈ ವಾದವನ್ನು ಪುಷ್ಪವಾದ ರೀತಿಯಲ್ಲಿ ಪ್ರತಿಪಾದಿಸಿದ್ದಾರೆ. ವೇದಾಂತದಲ್ಲಿಯೂ ಈ ವಾದದ ಛಾಯೆ ಇಲ್ಲದಿಲ್ಲ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: