ಖಾರಾನ್
ಖಾರಾನ್ ಜಿಲ್ಲೆ
ضلع خاران ھاران دمگ ضلع خاران | |
---|---|
ಬಲೂಚಿಸ್ತಾನ್‍ನ ಜಿಲ್ಲೆ | |
ಖಾರಾನ್ | |
ದೇಶ | ಪಾಕಿಸ್ತಾನ |
ಪ್ರಾಂತ್ಯ | ಟೆಂಪ್ಲೇಟು:Country data Balochistan |
ವಿಭಾಗ | ರಖ್‍ಷಣ್ |
ಸ್ಥಾಪನೆ | ಮಾರ್ಚ್ 15, 1952 |
ಕೇಂದ್ರ ಕಾರ್ಯಸ್ಥಳ | ಖಾರಾನ್ |
Government | |
• Type | ಜಿಲ್ಲಾಡಳಿತ |
• ಉಪ ಕಮಿಷನರ್ | N/A |
• ಜಿಲ್ಲಾ ಪೋಲಿಸ್ ಅಧಿಕಾರಿ | N/A |
• ಜಿಲ್ಲಾ ಆರೋಗ್ಯಾಧಿಕಾರಿ | N/A |
Area | |
• Total | ೧೪,೯೫೮ km೨ (೫,೭೭೫ sq mi) |
Population (2023)[೧] | |
• Total | ೨,೬೦,೩೫೨ |
• Density | ೧೭/km೨ (೪೫/sq mi) |
Time zone | UTC+5 (ಪಿಎಸ್‍ಟಿ) |
ಜಿಲ್ಲಾ ಪರಿಷತ್ತುಗಳು | 9 ಯೂನಿಯನ್ ಕೌನ್ಸಿಲ್‍ಗಳು |
ತೆಹಸೀಲ್‍ಗಳ ಸಂಖ್ಯೆ | 3 (1 ಉಪ ತೆಹಸೀಲ್‍ಗಳು |
ಖಾರಾನ್ ಪಾಕಿಸ್ತಾನದ ರಖ್‍ಷಣ್ ವಿಭಾಗದ ಒಂದು ಜಿಲ್ಲೆ; ಆ ಜಿಲ್ಲೆಯ ಮುಖ್ಯ ಪಟ್ಟಣ. ಹಿಂದೆ ಬಲೂಚಿಸ್ತಾನ್ ಪ್ರದೇಶದ ಒಂದು ಸಂಸ್ಥಾನವಾಗಿತ್ತು. 1952ರಿಂದ 1955ರವರೆಗೆ ಬಲೂಚಿಸ್ತಾನ್ ರಾಜ್ಯಗಳ ಒಕ್ಕೂಟದಲ್ಲಿತ್ತು. ವಿಸ್ತೀರ್ಣ 18,553 ಚ.ಮೈ. ಜನಸಂಖ್ಯೆ 44,655 (2017).[೨] ಉತ್ತರದಲ್ಲಿ ರಾಸ್ ಖೊ, ದಕ್ಷಿಣದಲ್ಲಿ ಸಿಯ್ಹಾನ್ ಪರ್ವತಶ್ರೇಣಿ ಮತ್ತು ಪೂರ್ವದಲ್ಲಿ ಗಾರ್ ಬೆಟ್ಟಗಳಿವೆ. ಇದು ಬಹುತೇಕ ಮರುಭೂಮಿ. ಸುತ್ತಣ ಪರ್ವತ ಪ್ರದೇಶದಿಂದ ಇಲ್ಲಿಗೆ ಪರ್ವತಗಳಿಂದ ಝರಿಗಳು ಹರಿದುಬರುತ್ತವೆ. ವರ್ಷವೆಲ್ಲ ಧೂಳಿನಿಂದ ತುಂಬಿದ ಬಿರುಗಾಳಿ ಬೀಸುತ್ತಿರುತ್ತದೆ. ಕುರಿ, ಮೇಕೆ ಮತ್ತು ಒಂಟೆಗಳನ್ನು ಸಾಕುವುದು ಇಲ್ಲಿಯ ಜನರ ಮುಖ್ಯ ಕಸುಬು. ಬೆಟ್ಟಗಳ ಹತ್ತಿರ, ಮಷ್ಕೆಲ್ ಮತ್ತು ಬಡ್ಡೊ ನದೀತೀರಗಳಲ್ಲಿ ವ್ಯವಸಾಯ ಮಾಡುತ್ತಾರೆ. ಗೋಧಿ ಇಲ್ಲಿಯ ಮುಖ್ಯ ಬೆಳೆ. ಖರ್ಜೂರವೂ ಬೆಳೆಯುತ್ತದೆ. ಜಿಲ್ಲೆಯ ಮುಖ್ಯ ಪಟ್ಟಣದ ಜನಸಂಖ್ಯೆ ೮೦,೮೦೬ (೨೦೨೩). ಹಿಂದೆ ಇದು ಖಾರಾನ್ ಸಂಸ್ಥಾನದ ರಾಜಧಾನಿಯಾಗಿತ್ತು. ಇದು ಕಲಾತ್ ನಗರದ ನೈಋತ್ಯಕ್ಕೆ 77ಮೈ. ದೂರದಲ್ಲಿ ಖಾರಾನ್ ಬಡ್ಡೊ ನದಿಯ ದಡದ ಮೇಲಿದೆ. ಇಲ್ಲಿ ಸರ್ದಾರ್ ಅಮೀರ್ ಆಜ಼ಾದ್ ಖಾನ್ ಕಟ್ಟಿಸಿದ ಒಂದು ಹಳೆಯ ಕೋಟೆಯುಂಟು.[೩] ಇರಾನಿನ ಕಿಯಾನಿ ರಾಜವಂಶದ ನೌಷರ್‌ವಾನಿ ಪಂಗಡಕ್ಕೆ ಇಲ್ಲಿಯ ಆಡಳಿತಗಾರ ಮನೆತನ ಸೇರಿತ್ತು. ಮೊದಲು ಇದು ಕಲಾತ್‌ಗೆ ಅಧೀನವಾಗಿದ್ದು, 1884 ರಲ್ಲಿ ಬ್ರಿಟಿಷರ ಅಧೀನಕ್ಕೆ ಒಳಟ್ಟಿತು. 1940ರಲ್ಲಿ ಬ್ರಿಟಿಷ್ ಸರ್ಕಾರ ಖಾರಾನ್‌ನ ಪ್ರತ್ಯೇಕತೆಯನ್ನು ಪುರಸ್ಕರಿಸಿತು. ಹೆಸರಿಗೆ ಮಾತ್ರ ಅದು ಕಲಾತ್‌ಗೆ ಅಧೀನವಾಗಿತ್ತು. 1948ರ ಮಾರ್ಚ್ 17ರಂದು ಪಾಕಿಸ್ತಾನದಲ್ಲಿ ವಿಲೀನಗೊಂಡಿತು.
ಉಲ್ಲೇಖಗಳು
[ಬದಲಾಯಿಸಿ]- ↑ "Population by Sex, Religion and Rural/Urban, Census - 2023" (PDF). Pakistan Bureau of Statistics.
- ↑ "Balochistān (Pakistan): Province, Major Cities, Municipalites & Towns - Population Statistics, Maps, Charts, Weather and Web Information".
- ↑ "Kharan: A Sand Carved Citadel in a Desert". Youlin Magazine.
- Pages with non-numeric formatnum arguments
- Short description is different from Wikidata
- Pages using infobox settlement with bad settlement type
- Articles containing Urdu-language text
- Articles containing Balochi-language text
- Pages using infobox settlement with no coordinates
- ಪಾಕಿಸ್ತಾನ
- ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ