ಕ್ಷೇಮೇಂದ್ರ

ವಿಕಿಪೀಡಿಯ ಇಂದ
Jump to navigation Jump to search

ಕ್ಷೇಮೇಂದ್ರ (ಸು. ಕ್ರಿ.ಶ. 990 – 1070) ೧೧ನೇ ಶತಮಾನದ ಒಬ್ಬ ಕಾಶ್ಮೀರಿ ಸಂಸ್ಕೃತ ಕವಿ.

ಜೀವನ ಚರಿತ್ರೆ[ಬದಲಾಯಿಸಿ]

ಕ್ಷೇಮೇಂದ್ರನು ಒಂದು ಹಳೆ, ಸುಸಂಸ್ಕೃತ, ಮತ್ತು ಶ್ರೀಮಂತ ಕುಟುಂಬದಲ್ಲಿ ಜನಿಸಿದನು.[೧] ಇವನ ತಂದೆ ಪ್ರಕಾಶೇಂದ್ರನು ಜಯಪೀಡನ ಮಂತ್ರಿಯಾಗಿದ್ದ ನರೇಂದ್ರನ ವಂಶಸ್ಥನು.[೨] ಕ್ಷೇಮೇಂದ್ರನ ಶಿಕ್ಷಣ ಮತ್ತು ಸಾಹಿತ್ಯಿಕ ಉತ್ಪತ್ತಿ ಎರಡೂ ವಿಶಾಲ ಮತ್ತು ವೈವಿಧ್ಯಮಯವಾಗಿದ್ದವು. ಇವನು ಸಾಹಿತ್ಯವನ್ನು ತನ್ನ ಕಾಲದ ಅಗ್ರಗಣ್ಯ ಶಿಕ್ಷಕ, ಹೆಸರಾಂತ ಶೈವ ತತ್ವಶಾಸ್ತ್ರಜ್ಞ ಮತ್ತು ಸಾಹಿತ್ಯಿಕ ಪ್ರತಿಪಾದಕ ಅಭಿನವಗುಪ್ತನ ಕೆಳಗೆ ಅಧ್ಯಯನ ಮಾಡಿದನು.[೧] ಕ್ಷೇಮೇಂದ್ರನು ಹುಟ್ಟಿದ್ದು ಶೈವನಾಗಿ, ಆದರೆ ನಂತರ ವೈಷ್ಣವನಾದನು. ಇವನು ವೈಷ್ಣವ ಪಂಥ ಮತ್ತು ಬೌದ್ಧ ಧರ್ಮ ಎರಡನ್ನೂ ಅಧ್ಯಯಿನಿಸದನು ಮತ್ತು ಅವುಗಳ ಬಗ್ಗೆ ಬರೆದನು. ಇವನ ಮಗ ಸೋಮೇಂದ್ರನು ತನ್ನ ಅವದಾನ ಕಲ್ಪಲತಾ ಮತ್ತು ಇತರ ಕೃತಿಗಳ ಪೀಠಿಕೆಯಲ್ಲಿ ತನ್ನ ತಂದೆಯ ಬಗ್ಗೆ ವಿವರಗಳನ್ನು ನೀಡುತ್ತಾನೆ. ಕ್ಷೇಮೇಂದ್ರನು ತನ್ನ ಕೃತಿಗಳಲ್ಲಿ ತನ್ನನ್ನು ವ್ಯಾಸದಾಸನೆಂದು ಹೆಸರಿಸಿಕೊಳ್ಳುತ್ತಾನೆ. ಈ ಬಿರುದನ್ನು ಬಹುಶಃ ತನ್ನ ಕೃತಿ ಭಾರತಮಂಜರಿಯ ಮುಕ್ತಾಯದ ನಂತರ ಗೆದ್ದುಕೊಂಡಿರಬಹುದು ಅಥವಾ ಅಳವಡಿಸಿಕೊಂಡಿರಬಹುದು.

ಕ್ಷೇಮೇಂದ್ರನು ಉದ್ದದ ಪಠ್ಯಗಳ ನುರಿತ ಸಂಕ್ಷೇಪಕನಾಗಿ ಬಹಳ ಬೇಡಿಕೆಯಲ್ಲಿದ್ದನು. ಇವನ ಸಾಹಿತ್ಯಿಕ ವೃತ್ತಿಜೀವನ ಕನಿಷ್ಠಪಕ್ಷ ೧೦೩೭ರಿಂದ (ಇವನ ಅತ್ಯಂತ ಮುಂಚಿನ ಕೃತಿ ಬೃಹತ್ಕಥಾಮಂಜರಿಯ ಕಾಲ, ಇದು ಕಳೆದುಹೋದ ವಾಯವ್ಯ ಬೃಹತ್ಕಥಾದ ಒಂದು ಗದ್ಯ ಸಾರಾಂಶ, ಇದು ಸ್ವತಃ ಗುಣಾಢ್ಯನ ಕಳೆದುಹೋದ ಬೃಹತ್ಕಥಾದ ಪರಿಷ್ಕರಣೆಯಾಗಿತ್ತು) ೧೦೬೬ರ ವರೆಗೆ (ಇವನ ಕೊನೆಯ ಕೃತಿ ದಶಾವತಾರಚರಿತ, ಇದು ವಿಷ್ಣುವಿನ ಹತ್ತು ಅವತಾರಗಳ ಕುರಿತು ಇತ್ತು) ವಿಸ್ತರಿಸಿತ್ತು.

ಲಭ್ಯವಿರುವ ಕೃತಿಗಳು[ಬದಲಾಯಿಸಿ]

ಕ್ಷೇಮೇಂದ್ರನ ಕೃತಿಗಳಲ್ಲಿ ಸುಮಾರು ಹದಿನೆಂಟು ಈಗಲೂ ಲಭ್ಯವಿವೆ ಮತ್ತು ಇನ್ನೂ ಹದಿನಾಲ್ಕು ಇತರ ಸಾಹಿತ್ಯದಲ್ಲಿನ ಉಲ್ಲೇಖಗಳ ಮೂಲಕ ಮಾತ್ರ ತಿಳಿದಿವೆ. ಕೆಳಗೆ ಪಟ್ಟಿಮಾಡಲಾದ ಪ್ರಕಾರಗಳ ಜೊತೆಗೆ, ಇವನು ನಾಟಕಗಳು, ವಿವರಣಾತ್ಮಕ ಕಾವ್ಯಗಳು, ಒಂದು ವಿಡಂಬನಾತ್ಮಕ ಕಾದಂಬರಿ, ಒಂದು ಇತಿಹಾಸ ಮತ್ತು ಪ್ರಾಯಶಃ ಕಾಮಸೂತ್ರದ ಮೇಲೆ ಒಂದು ಭಾಷ್ಯವನ್ನು ರಚಿಸಿದನು.

ಸಂಕ್ಷೇಪಣಗಳು[ಬದಲಾಯಿಸಿ]

  • ರಾಮಯಣಮಂಜರಿರಾಮಾಯಣದ ಗದ್ಯ ಸಂಕ್ಷೇಪಣ (Sanskrit)
  • ಭಾರತಮಂಜರಿಮಹಾಭಾರತದ ಗದ್ಯ ಸಂಕ್ಷೇಪಣ (Sanskrit)
  • ಬೃಹತ್ಕಥಾಮಂಜರಿ — ಬೃಹತ್ಕಥಾದ ಗದ್ಯ ಸಂಕ್ಷೇಪಣ (Sanskrit)

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ Haksar 2011, p. xv.
  2. Warder 1992, p. 365.