ಕ್ಯಾಲಿಫೋರ್ನಿಯಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬೆರ್ಕೀಲಿಯಂಕಾಲಿಫ಼ೋರ್ನಿಯಂಐನ್ಸ್ಟೀನಿಯಂ
Dy

Cf

(Upn)
ನೋಟ
ಬೆಳ್ಳಿಯಂಥ
A very small disc of silvery metal, magnified to show its metallic texture
ಸಾಮಾನ್ಯ ಗುಣಲಕ್ಷಣಗಳು
ಹೆಸರು, ಚಿನ್ಹೆ, ಸಂಖ್ಯೆ ಕಾಲಿಫ಼ೋರ್ನಿಯಂ, Cf, 98
ಉಚ್ಚಾರ /ˌkælɨˈfɔrniəm/
KAL-i-FOR-nee-əm
ಮೂಲಧಾತು ವರ್ಗ ಆಕ್ಟಿನೈಡ್
ಗುಂಪು, ಸಾಲು, ವಿಭಾಗ [[group {{{group}}} element|{{{group}}}]], 7, f
ಸಾಮಾನ್ಯ ಪರಮಾಣು ತೂಕ (251)[೧]g·mol−1
ಎಲೆಕ್ಟ್ರಾನ್ ಸಂರಚನೆ [Rn] 5f10 7s2 [೨]
ಪ್ರತಿ ಕವಚಕ್ಕೆ ಎಲೆಕ್ಟ್ರಾನ್‍ಗಳು 2, 8, 18, 32, 28, 8, 2 (Image)
ಭೌತಿಕ ಗುಣಗಳು
ಹಂತ ಘನ
ಸಾಂದ್ರತೆ (ಕೊ.ತಾ ಹತ್ತಿರ) 15.1[೧] g·cm−3
ಕರಗುವ ಬಿಂದು 1173 K, 900[೧] °C, 1652 °F
ಕುದಿ ಬಿಂದು (ಅಂದಾಜು) 1743[೩] K, 1470 °C, 2678 °F
ಪರಮಾಣು ಗುಣಗಳು
ಉತ್ಕರ್ಷಣ ಸ್ಥಿತಿಗಳು 2, 3, 4[೪]
ವಿದ್ಯುದೃಣತೆ 1.3[೫] (ಪೌಲಿಂಗ್ ಮಾಪಕ)
ಅಯಾನೀಕರಣ ಅಳವುಗಳು 1st: 608[೬] kJ·mol−1
ಇತರೆ
ಸ್ಫಟಿಕ ರಚನೆ ಸರಳ ಷಡ್ಭುಜೀಯ
ಮೋಸ್ ಗಡಸುತನ 3–4[೭]
ಸಿಎಎಸ್ ನೋಂದಣಿ ಸಂಖ್ಯೆ 7440-71-3[೧]
ಅತ್ಯಂತ ಸ್ಥಿರ ಸಮಸ್ಥಾನಿಗಳು
Main article: Isotopes of ಕಾಲಿಫ಼ೋರ್ನಿಯಂ
iso NA half-life DM DE (MeV) DP
248Cf syn 333.5 d α (100%) 6.369 244Cm
SF (2.9×10−3%) 0.0029
249Cf trace 351 y α (100%) 6.295 245Cm
SF (5.0×10−7%) 4.4×10−7
250Cf trace 13.08 y α (99.92%) 6.129 246Cm
SF (0.08%) 0.077
251Cf trace 898 y α 6.172 247Cm
252Cf trace 2.645 y α (96.91%) 6.217 248Cm
SF (3.09%)
253Cf trace 17.81 d β (99.69%) 0.29 253Es
α (0.31%) 6.126 249Cm
254Cf syn 60.5 d SF (99.69%)
α (0.31%) 5.930 250Cm
Isotope references:[೮][೯]


ಕ್ಯಾಲಿಫೋರ್ನಿಯಮ್ ಕೃತಕವಾಗಿ ಸೃಷ್ಟಿಸಲ್ಪಟ್ಟ ಒಂದು ವಿಕಿರಣಶೀಲ ಮೂಲಧಾತು. ಇದನ್ನು ಅಮೆರಿಕಕ್ಯಾಲಿಫೋರ್ನಿಯಾದ ಬರ್ಕಲಿ ವಿಶ್ವವಿದ್ಯಾಲಯದಲ್ಲಿ ೧೯೫೦ರಲ್ಲಿ ಕಂಡುಹಿಡಿದರು. ಆದುದರಿಂದ ಇದಕ್ಕೆ ಕ್ಯಾಲಿಫೋರ್ನಿಯಮ್ ಎಂದು ಹೆಸರಿಡಲಾಗಿದೆ. ಇದಕ್ಕೆ ಸುಮಾರು ೧೮ ಸಮಸ್ಥಾನಿಗಳಿವೆ.[೯] ಇದನ್ನು ಕ್ಯುರಿಯಮ್ ಪರಮಾಣುವನ್ನು ಹೀಲಿಯಮ್ ಅಯಾನುಗಳಿಂದ ತಾಡಿಸಿ ಪಡೆಯಲಾಗಿದೆ.

ಇದು ಯುರೇನಿಯಂ ಆಚೆಯ (ಟ್ರಾನ್ಸ್‌ಯುರೇನಿಕ್) ಧಾತುಗಳಲ್ಲಿ ಒಂದು. ಇದರ ರಾಸಾಯನಿಕ ಚಿಹ್ನೆ Cf. ಆಕ್ಟಿನೈಡ್ ಶ್ರೇಣಿಯ ಧಾತುಗಳಲ್ಲಿ ಒಂಬತ್ತನೆಯದು.[೧೦] ಪರಮಾಣು ಸಂಖ್ಯೆ ೯೮. ಇದರ ಸಂಭಾವ್ಯ ಎಲೆಕ್ಟ್ರಾನಿಕ್ ವಿನ್ಯಾಸ 1s2 2s2 2p6 3s2 3p6 3d10 4s2 4p6 4d10 4f14 5s2 5p6 5d10 5f10 6s2 6p6 7s2. ಇದನ್ನು ೧೯೫೦ರಲ್ಲಿ ಎಸ್. ಜಿ. ಥಾಂಪ್ಸನ್ ಮತ್ತು ಅವನ ಸಂಗಡಿಗರು ಸಂಶ್ಲೇಷಿಸಿದರು.[೧೧] ಅಮೆರಿಕದ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದಲ್ಲಿ ೬೦" ವ್ಯಾಸದ ಸೈಕ್ಲೊಟ್ರಾನ್ ವೇಗೋತ್ಕರ್ಷದಲ್ಲಿ ಕ್ಯೂರಿಯಂ-೨೪೨ನ್ನು ಹೀಲಿಯಂ ಆಯಾನುಗಳಿಂದ ತಾಡಿಸಿದಾಗ (ಬೊಂಬಾರ್ಡ್) ಕ್ಯಾಲಿಫೋರ್ನಿಯಮಿನ ಅಸ್ತಿತ್ವ ಬೆಳಕಿಗೆ ಬಂತು.[೧೨] ಮೂಡಿಬಂದ ಹೊಸ ಕೃತಕಧಾತುವಿಗೆ ಕ್ಯಾಲಿಫೋರ್ನಿಯಂ ಅನ್ವರ್ಥನಾಮವಾಯಿತು.

ಸಮಸ್ಥಾನಿಗಳು[ಬದಲಾಯಿಸಿ]

ಇದರ ಪ್ರಧಾನ ಸಮಸ್ಥಾನಿಯ ಪರಮಾಣುತೂಕ ೨೪೫. ಕ್ಯಾಲಿಫೋರ್ನಿಯಂ ೨೪೨ರಿಂದ ಹಿಡಿದು ಕ್ಯಾಲಿಫೋರ್ನಿಯಂ-೨೫೪ರ ವರೆಗಿನ ಸಮಸ್ಥಾನಿಗಳನ್ನು ಕಂಡುಹಿಡಿಯಲಾಗಿದೆ. ಎಲ್ಲ ಸಮಸ್ಥಾನಿಗಳಿಗೂ ವಿಕಿರಣಪಟುತ್ವ (ರೇಡಿಯೋ ಆಕ್ಟಿವಿಟಿ) ಉಂಟು. ಇವುಗಳ ಅರ್ಧಾಯು (ಹಾಫ್‌ಲೈಫ್) ಕೆಲವು ಮಿನಿಟುಗಳಿಂದ ಹಿಡಿದು ಸುಮಾರು ೫,೦೦೦ ವರ್ಷಗಳವರೆಗೂ ವ್ಯಾಪಿಸಿದೆ. ಭಿನ್ನ ಭಿನ್ನ ವರ್ಗಗಳ ಸಮಸ್ಥಾನಿಗಳನ್ನು ಪ್ರಯೋಗದ ಗುರಿ ವಸ್ತುವನ್ನಾಗಿ (ಟಾರ್ಗೆಟ್ ಮೆಟೀರಿಯಲ್) ಆರಿಸಿಕೊಂಡು ಅವನ್ನು ಬೇರೆ ಬೇರೆ ಕಣಗಳಿಂದ ತಾಡಿಸಿ ಕ್ಯಾಲಿಫೋರ್ನಿಯಮಿನ ವಿವಿಧ ಸಮಸ್ಥಾನಿಗಳನ್ನು ತಯಾರಿಸುವುದರ ಜೊತೆಗೆ ನ್ಯೂಕ್ಲಿಯರ್ ರಿಯಾಕ್ಟರುಗಳಲ್ಲೂ ಪ್ಲುಟೋನಿಯಂ-೨೩೯ನ್ನು ನ್ಯೂಟ್ರಾನುಗಳ ಪ್ರಭಾವಕ್ಕೊಳಪಡಿಸಿ ಕ್ಯಾಲಿಫೋರ್ನಿಯಮಿನ ಸಮಸ್ಥಾನಿಗಳನ್ನು ತಯಾರಿಸಲಾಗುತ್ತದೆ. ಇಂಥವಲ್ಲಿ ಉತ್ಪಾದನೆಯಾಗುವ ಸಮಸ್ಥಾನಿಯ ಪರಿಮಾಣ ಹಲವು ಮಿಲಿಗ್ರಾಂಗಳಷ್ಟು ಮಾತ್ರ!

ಉಪಯೋಗಗಳು[ಬದಲಾಯಿಸಿ]

ಕ್ಯಾಲಿಫೋರ್ನಿಯಂ-೨೫೨ನ್ನು ಪರಮಾಣು ಭೌತವಿಜ್ಞಾನದ ವಿವಿಧ ವಿಭಾಗಗಳಲ್ಲಿ ಬಳಸುವುದಲ್ಲದೆ ವೈದ್ಯಕೀಯ ಸಂಶೋಧನೆಯಲ್ಲೂ ಬಳಸುವುದಿದೆ. ಅಧಿಕ ತೀಕ್ಷ್ಣತೆಯ ನ್ಯೂಟ್ರಾನ್ ಆಕರಗಳ ಸಂಬಂಧದಲ್ಲಿ ೨೫೨Cfರ ಉಪಯೋಗ ಹೆಚ್ಚು.[೧೩] ಅರ್ಧಾಯು ೩೨೩ ವರ್ಷಗಳಿರುವ ೨೪೯Cf ಸಮಸ್ಥಾನಿಗೆ ರಾಸಾಯನಿಕ ಪರೀಕ್ಷೆಗಳಲ್ಲಿ ಅತ್ಯಧಿಕ ಪ್ರಯೋಜನ ಉಂಟು. ಇದನ್ನು Cf(III)ರ ಕಾಂತಪ್ರವೃತ್ತಿಯನ್ನು (ಮ್ಯಾಗ್ನೆಟಿಕ್ ಸಸೆಪ್ಟಿಬಿಲಿಟಿ) ಅಳೆಯಲು ಉಪಯೋಗಿಸುತ್ತಾರೆ. ಕ್ಯಾಲಿಫೋರ್ನಿಯಮಿನ ನಾಲ್ಕು ಘನಸಂಯುಕ್ತ ವಸ್ತುಗಳನ್ನು (CfCl3, CfOCl, CfCOF ಮತ್ತು Cf2O3) ವರ್ಗೀಕರಿಸಲಾಗಿದೆ. ಇವೆಲ್ಲವನ್ನೂ ಶುಷ್ಕ ರಾಸಾಯನಿಕ ವಿಧಾಗಳಿಂದ ಕಂಡುಕೊಳ್ಳಲಾಗಿದೆ. ಎಲ್ಲ ಸಂಯುಕ್ತಗಳೂ ಹಸಿರು ಬಣ್ಣದವು. ೧೯೨೮ರ ಮೊದಲು ೨೫೨Cfರ ರಾಸಾಯನಿಕ ಗುಣ ಲಕ್ಷಣಗಳನ್ನು ಟ್ರೇಸರ್ ವಿಧಾನವನ್ನು ಅನುಸರಿಸಿ ಅಧ್ಯಯನ ಮಾಡಲಾಗಿತ್ತು. ಆಕ್ಟಿನೈಡ್ ಶ್ರೇಣಿಯ ಇತರ ಧಾತುಗಳ ರಾಸಾಯನಿಕ ಗುಣಲಕ್ಷಣಗಳು ಇದಕ್ಕೂ ಇರುವುದು ಕಂಡುಬಂದಿತು.

ಉಲ್ಲೇಖ[ಬದಲಾಯಿಸಿ]

  1. ೧.೦ ೧.೧ ೧.೨ ೧.೩ CRC 2006, p. 4.56.
  2. CRC 2006, p. 1.14.
  3. Joseph Jacob Katz; Glenn Theodore Seaborg; Lester R. Morss (1986). The Chemistry of the actinide elements. Chapman and Hall. p. 1038. ISBN 9780412273704. Retrieved 11 July 2011.
  4. Greenwood 1997, p. 1265.
  5. Emsley 1998, p. 50.
  6. CRC 2006, p. 10.204.
  7. CRC 1991, p. 254.
  8. CRC 2006, p. 11.196.
  9. ೯.೦ ೯.೧ NNDC contributors (2008). Sonzogni, Alejandro A. (Database Manager) (ed.). "Chart of Nuclides". National Nuclear Data Center, Brookhaven National Laboratory. Archived from the original on 2011-07-21. Retrieved 2010-03-01. {{cite web}}: |author= has generic name (help) ಉಲ್ಲೇಖ ದೋಷ: Invalid <ref> tag; name "NNDC2008" defined multiple times with different content
  10. Jakubke 1994, p. 166.
  11. Cunningham 1968, p. 103.
  12. Street, K. Jr.; Thompson, S. G.; Seaborg, Glenn T. (1950). "Chemical Properties of Californium" (PDF). Journal of the American Chemical Society. 72 (10): 4832. doi:10.1021/ja01166a528. hdl:2027/mdp.39015086449173. Archived (PDF) from the original on January 19, 2012. Retrieved February 20, 2011.
  13. O'Neil 2006, p. 276.

ಹೊರಗಿನ ಕೊಂಡಿಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: