ವಿಷಯಕ್ಕೆ ಹೋಗು

ಕೈ ಬರಹದ ಸುಂದರ ಶೈಲಿ(ಕ್ಯಾಲಿಗ್ರಫಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅರೇಬಿಕ್‌ನಲ್ಲಿ ಬರೆದಿರುವ,ಕ್ಯಾಲಿಗ್ರಫಿಯ ಪರಿಣತಿ ಕುರಿತ ಪ್ರಮಾಣಪತ್ರ ಇಜಾಝಾ,1206 AH/1791 AD

ಕೈ ಬರಹದ ಸುಂದರ ಶೈಲಿ(ಕ್ಯಾಲಿಗ್ರಫಿ)(ಅಲಂಕಾರ ಲಿಪಿ) (ಗ್ರೀಕ್‌ನಲ್ಲಿ κάλλος ಕ್ಯಾಲ್ಲೋಸ್ "ಸೌಂದರ್ಯ" + γραφή ಗ್ರಾಫೆ "ಬರಹ") ದೃಶ್ಯಕಲೆಯ ಒಂದು ವಿಧ. ಇದನ್ನು ಹಲವು ಸಂದರ್ಭಗಳಲ್ಲಿ ಬರವಣಿಗೆಯ ಕಲೆ ಎಂದು ಕರೆಯಲಾಗುತ್ತದೆ.(ಉಲ್ಲೇಖ:ಮೆಡಿಯವಿಲ್ಲಾ 1996: 17). ಅಭಿವ್ಯಕ್ತ,ಸಾಮರಸ್ಯ ಮತ್ತು ಕೌಶಲ್ಯಪೂರ್ಣ ರೀತಿಯಲ್ಲಿ ಚಿಹ್ನೆಗಳಿಗೆ ಭಾವ ರೂಪ ನೀಡುವ ಕಲೆಯೇ ಕ್ಯಾಲಿಗ್ರಫಿ, ಎಂಬುದು ಸಮಕಾಲೀನ ವ್ಯಾಖ್ಯೆ.(ಮೆಡಿಯವಿಲ್ಲಾ 1996: 18)ಬರೆಯುವ ಕಲೆಯ ಕಥಾರೂಪವು; ತಾಂತ್ರಿಕ ಪರಿಣತಿ, ಸಂವಹನ ವೇಗ ಮತ್ತು ವ್ಯಕ್ತಿ, ಕಾಲ ಮತ್ತು ಸ್ಥಳದ ಭೌತಿಕ ಮಿತಿಗಳಲ್ಲಿ ರೂಪಿಸಿದ ಒಂದು ಸೌಂದರ್ಯ ವಿಕಾಸವಾಗಿದೆ.(ಡಿರಿಂಜರ್ 1968: 4410). ಬರವಣಿಗೆಯ ಶೈಲಿಯನ್ನು ಲಿಪಿ,ಕೈಬರಹ ಅಥವಾ ವರ್ಣಮಾಲೆ ಎಂದು ಬಣ್ಣಿಸಲಾಗಿದೆ.(ಫ್ರೇಸರ್ ಮತ್ತು ವಿಯಾಟ್‌ಕೋವ್‌ಸ್ಕಿ 2006; ಜಾನ್‌ಸ್ಟನ್ 1909: ಪ್ಲೇಟ್ 6). ಆಧುನಿಕ ಕ್ಯಾಲಿಗ್ರಫಿಯು ಕ್ರಿಯಾಶೀಲ ಕೈಬರಹದ ಕೆತ್ತನೆ, ವಿನ್ಯಾಸ ಮತ್ತು ಲಲಿತ ಕಲೆಯವರೆಗಿನ ವ್ಯಾಪ್ತಿಹೊಂದಿದೆ. ಕೈಬರಹದ ಗುರುತುಗಳ ಅಮ‌ೂರ್ತ ಅಭಿವ್ಯಕ್ತಿಯು ಅಕ್ಷರಗಳ ಸ್ಫುಟತೆಯನ್ನು ಮೀರಬಹುದು ಅಥವಾ ಮೀರದಿರಬಹುದು(ಮೆಡಿಯವಿಲ್ಲ 1996) ಅಂದದ ಬರಹಗಾರ ಇವೆಲ್ಲವನ್ನು ಸೃಷ್ಟಿಸಿದರೂ ಕೂಡ, ಉತ್ಕೃಷ್ಟ ಕ್ಯಾಲಿಗ್ರಫಿಯು ಮುದ್ರಣಕಲೆ ಮತ್ತು ಅಸಂಪ್ರದಾಯಿಕ ಕೈಬರಹಕ್ಕಿಂತ ಭಿನ್ನವಾಗಿದೆ. ಇಲ್ಲಿ ಅಕ್ಷರಗಳು ಸಾಂಪ್ರದಾಯಿಕ ಶಿಸ್ತಿಗೆ ಒಳಪಟ್ಟರೂ ಸುಲಲಿತ ಮತ್ತು ಸುಗಮವಾಗಿ ಬರಹದ ಶೈಲಿಗೆ ಒಳಪಡುತ್ತವೆ.ಬರೆಯುವ ಸಂದರ್ಭದಲ್ಲಿ ಸುಧಾರಣೆ ಕಂಡು ರೂಪಾಂತರ ಹೊಂದುತ್ತವೆ. (ಪಾಟ್ 2006 ಮತ್ತು 2005;ಜ್ಯಾಪ್ 2007 ಮತ್ತು 2006)ವಿವಾಹ ಮತ್ತು ಕಾರ್ಯಕ್ರಮದ ಆಹ್ವಾನ ಪತ್ರಿಕೆಗಳಲ್ಲಿನ, ಫಾಂಟ್,(ಅಕ್ಷರ) ವಿನ್ಯಾಸ/ ಮುದ್ರಣ ಕಲೆ,ಮ‌ೂಲ ಕೈಬರಹದ ಲೋಗೊ,(ಚಿನ್ಹೆ) ವಿನ್ಯಾಸ, ಧಾರ್ಮಿಕ ಕಲೆ, ಘೋಷಣೆಗಳ ಪ್ರಕಟಣೆಗಳು, ಗ್ರಾಫಿಕ್ ಕಲೆ ವಿನ್ಯಾಸಗಳು, ಅಧಿಕೃತ ಬರಹಗಾರಿಕೆಯ ಕಲೆ, ಶಿಲಾ ಕೆತ್ತನೆಗಳು ಮತ್ತು ಸ್ಮಾರಕ ದಾಖಲೆಗಳ ರೂಪಗಳಲ್ಲಿ ಕ್ಯಾಲಿಗ್ರಫಿಯು ಪ್ರವರ್ಧಮಾನಕ್ಕೆ ಬರುತ್ತಿದೆ. ಪ್ರಚಾರ,ಚಲನಚಿತ್ರ ಮತ್ತು ಟೆಲಿವಿಷನ್‌ನಲ್ಲಿನ ಚಲಿಸುವ ದೃಶ್ಯಾವಳಿ,ಸಾಕ್ಷ್ಯಗಳ ದಾಖಲೆ, ಜನನ ಮತ್ತು ಮರಣ ಪ್ರಮಾಣಪತ್ರ, ನಕ್ಷೆ ಮತ್ತಿತರ ಬರವಣಿಗೆಗಳಿಗಾಗಿ ಕೂಡ ಕ್ಯಾಲಿಗ್ರಫಿಯನ್ನು ಬಳಸಲಾಗುತ್ತದೆ.(ಉದಾಹರಣೆಗೆ ಗಮನಿಸಿ, ಅಕ್ಷರ ಕಲೆಗಳ ಪರಾಮರ್ಶೆ;ಪ್ರಾಪ್ಶೆ 2005;ಗೆಡ್ಡೆಸ್ ಮತ್ತು ಡಿಯಾನ್ 2004)

ಪಾಶ್ಚಿಮಾತ್ಯ ಕ್ಯಾಲಿಗ್ರಫಿ[ಬದಲಾಯಿಸಿ]

ಡೆನಿಸ್ ಬ್ರೌನ್ ಅವರಿಂದ ಆಧುನಿಕ ಪಾಶ್ಚಿಮಾತ್ಯ ಕ್ಯಾಲಿಗ್ರಫಿ

ಐತಿಹಾಸಿಕ ಬೆಳವಣಿಗೆ[ಬದಲಾಯಿಸಿ]

ಪಾಶ್ಚಿಮಾತ್ಯ ಕ್ಯಾಲಿಗ್ರಫಿಯನ್ನು ರೋಮನ್ ವರ್ಣಮಾಲೆ ಬಳಕೆಯಿಂದ ಗುರುತಿಸಬಹುದು. ಅದು ಫೀನಿಸಿಯನ್, ಗ್ರೀಕ್ ಮತ್ತು ಎಟ್ರುಸ್ಕಾನ್ ಅಕ್ಷರ ಮಾಲೆ(/0)ಗಳ ಸ್ಫೂರ್ತಿಯಿಂದ ವಿಕಾಸಗೊಂಡಿದೆ. ಪ್ರಥಮ ರೋಮನ್ ವರ್ಣಮಾಲೆಯು ರೋಮ್‌ನಲ್ಲಿ ಸುಮಾರು 600 BC ಯಲ್ಲಿ ಕಾಣಿಸಿಕೊಂಡಿತು. ಮೊದಲ ಶತಮಾನದಲ್ಲಿ ಕಲ್ಲಿನ ಕೆತ್ತನೆಯ ರೋಮನ್ ಸಾಮ್ರಾಜ್ಯಶಾಹಿಯ ದೊಡ್ಡಕ್ಷರ, ಗೋಡೆಗಳ ಮೇಲೆ ಚಿತ್ರಿಸಲಾದ ವಕ್ರವಾದ ದೊಡ್ಡಕ್ಷರಗಳು ಮತ್ತು ದಿನನಿತ್ಯದ ಬಳಕೆಗೆ ರೋಮನ್ ಕೂಡುಬರಹ, ಕೈ ಬರಹಗಳ ಮಾದರಿಗಳಾಗಿ ವಿಕಾಸಗೊಂಡವು. ಎರಡು ಮತ್ತು ಮ‌ೂರನೇ ಶತಮಾನಗಳಲ್ಲಿ ಅನ್ಸಿಯಲ್(ಗುಂಡಗಿರುವ ದೊಡ್ಡಕ್ಷರದ ಶೈಲಿ) ಅಕ್ಷರ ಶೈಲಿ ಅಭಿವೃದ್ಧಿಗೊಂಡಿತು. ಬರವಣಿಗೆ ಪದ್ಧತಿ ಧಾರ್ಮಿಕ ಕೇಂದ್ರಗಳಲ್ಲಿ ಬಳಕೆಗೆ ಬಂದ ನಂತರ,ಅನ್ಸಿಯಲ್ ಬರಹವು ಬೈಬಲ್ ಮತ್ತಿತರ ಧಾರ್ಮಿಕ ಗ್ರಂಥಗಳ ಮರುಪ್ರತಿ ಸಿದ್ದಗೊಳಿಸಲು ಸೂಕ್ತವೆನಿಸಿತು. ರೋಮನ್ ಸಾಮ್ರಾಜ್ಯ ಪತನಗೊಂಡು ಯುರೋಪ್ ಕರಾಳ ಯುಗಕ್ಕೆ ಪ್ರವೇಶಿಸಿದ ನಂತರ, ನಾಲ್ಕು ಮತ್ತು ಐದನೇ ಶತಮಾನಗಳಲ್ಲಿ ಧಾರ್ಮಿಕ ಕೇಂದ್ರಗಳು ಕ್ಯಾಲಿಗ್ರಫಿಯ ಪರಂಪರೆ ಮತ್ತು ಸಂಪ್ರದಾಯಗಳನ್ನು ಸಂರಕ್ಷಿಸಿದವು.[೧] ರೋಮನ್ ಸಾಮ್ರಾಜ್ಯದ ಉತ್ಕರ್ಷ ಸ್ಥಿತಿಯಲ್ಲಿ, ಅದರ ಪ್ರಭಾವ ಗ್ರೇಟ್ ಬ್ರಿಟನ್‌ವರೆಗೂ ತಲುಪಿತು. ಸಾಮ್ರಾಜ್ಯ ಪತನಗೊಂಡರೂ, ಅದರ ಸಾಹಿತ್ಯಕ ಪ್ರಭಾವ ಉಳಿಯಿತು. ಅರೆ-ಅನ್ಸಿಯಲ್‌ನಿಂದ ಐರಿಷ್ ಅರೆ-ಅನ್ಸಿಯಲ್ ಮತ್ತು ಸಣ್ಣ ಆಂಗ್ಲೋ-ಸಾಕ್ಷನ್ ಅಕ್ಷರಗಳ ಉದಯವಾಯಿತು. ಆಯಾ ಪ್ರದೇಶದ ಮುಖ್ಯ ಧಾರ್ಮಿಕ ಕೇಂದ್ರದ ಅನುಯಾಯಿಯಾದ ಪ್ರತಿ ಪ್ರದೇಶ ಅದರದೇ ಆದ ಅಕ್ಷರ ಗುಣಮಟ್ಟವನ್ನು ಅಭಿವೃದ್ಧಿಪಡಿಸಿತು.(ಅವು ಮೆರೋವಿಂಗಿಯನ್ , ಲಾವೊನ್ , ಲುಕ್ಸೆಲ್ , ವಿಸಿಗೊಥಿಕ್ , ಬೆನೆವೆಂಟಾನ್ ಲಿಪಿಗಳು)ಅವೆಲ್ಲ ಬಹುತೇಕ ಕೂಡುಬರಹವಾಗಿದ್ದು, ಓದುವುದು ಕಷ್ಟಕರವಾಗಿತ್ತು.ಪ್ರವರ್ಧಮಾನದಲ್ಲಿದ್ದ ಕಾರೊಲಿಂಗಿಯನ್ ಸಾಮ್ರಾಜ್ಯ ಹೊಸ ಪ್ರಮಾಣೀಕೃತ ಲಿಪಿಯ ರಚನೆಗೆ ಉತ್ತೇಜಿಸಿತು. 8ನೇ ಶತಮಾನದಲ್ಲಿ ಕಾರ್ಬಿ ಅಬೆ ಮತ್ತು ಬಿಯವಾಯಿಸ್ ಸೇರಿದಂತೆ ಅನೇಕ ಪ್ರಖ್ಯಾತ ಧಾರ್ಮಿಕ ಕೇಂದ್ರಗಳು ಇದನ್ನು ಅಭಿವೃದ್ಧಿಪಡಿಸಿದ್ದವು. ಸೇಂಟ್ ಮಾರ್ಟಿನ್ ಆಫ್ ಟೂರ್ಸ್ ಲಿಪಿಯನ್ನು ಅಂತಿಮವಾಗಿ ಇಂಪೀರಿಯಲ್(ಸಾಮ್ರಾಜ್ಯಶಾಹಿ ರಾಜಪ್ರಭುತ್ವದ) ಗುಣಮಟ್ಟದ ಲಿಪಿಯನ್ನಾಗಿ ಸ್ವೀಕರಿಸಿ, ಕಾರೊಲಿಂಗಿಯನ್ ಲಿಪಿ (ಅಥವಾ "ದಿ ಕಾರೋಲೈನ್")ಎಂದು ಹೆಸರಿಸಲಾಯಿತು. ಪ್ರಭಾವಶಾಲಿ ಕಾರೊಲಿಂಗಿಯನ್ ಸಾಮ್ರಾಜ್ಯದಿಂದ, ಈ ಗುಣಮಟ್ಟದ ಲಿಪಿ ನೆರೆಯ ರಾಜ್ಯಗಳಲ್ಲಿ ಕೂಡ ಬಳಕೆಗೆ ಬಂತು.11ನೇ ಶತಮಾನದಲ್ಲಿ, ಕಾರೊಲಿನ್ ಗೊಥಿಕ್ ಲಿಪಿಯಾಗಿ ವಿಕಾಸಗೊಂಡಿತು. ಇದು ಹೆಚ್ಚು ಒತ್ತಾದ ಅಕ್ಷರಗಳಿಂದ ಕೂಡಿದ್ದು, ಪುಟದಲ್ಲಿ ಹೆಚ್ಚು ಪಠ್ಯ-ಗದ್ಯ ಸೇರಿಸಲು ಸಾಧ್ಯವಾಯಿತು.[೨]

[ಪೂರ್ವ ಜರ್ಮನಿಯ ಪುರಾತನ ಗೊಥಿಕ್ ಜನಾಂಗದ ಈ ಭಾಷೆ ಗೊಥಿಕ್ ಬೈಬಲ್ ರಚನೆಯಲ್ಲಿ ಸಹಕಾರಿಯಾಯಿತು]. ಗೊಥಿಕ್ ಕ್ಯಾಲಿಗ್ರಫಿ ಶೈಲಿ ಉತ್ತರ ಯುರೋಪ್‌ನಲ್ಲಿ ಪ್ರಾಬಲ್ಯ ಪಡೆಯಿತು. ಜೋಹಾನ್ಸ್ ಗಟೆನ್‌ಬರ್ಗ್ 1455 ADಯಲ್ಲಿ ಜರ್ಮನಿಯ ಮೇಯಿಂಜ್‌ನಲ್ಲಿ ಪ್ರಥಮ ಮುದ್ರಣಾಲಯ ಸ್ಥಾಪಿಸಿದಾಗ ಗೊಥಿಕ್ ಶೈಲಿಯನ್ನು ಅಳವಡಿಸಿಕೊಂಡು, ಅದನ್ನು ಪ್ರಥಮ ಮುದ್ರಣಾಕ್ಷರವಾಗಿ ರೂಪಿಸಿದರು.[೩]

ಇಂಗ್ಲೆಂಡ್, ವಿಲ್ಟ್‌ಶೈರ್, ಮಲ್ಮೆಶ್‌ಬರಿ ಆಬಿ(ಕ್ರೈಸ್ತ ಸನ್ಯಾಸಿನಿಯರ ಕೇಂದ್ರ)ದಲ್ಲಿ ಪ್ರದರ್ಶನಕ್ಕಿಟ್ಟಿರುವ ಲ್ಯಾಟಿನ್ ಬೈಬಲ್‌ AD 1407 ಕ್ಯಾಲಿಗ್ರಫಿಗೆರಾರ್ಡ್ ಬ್ರಿಲ್ಸ್ ಬೆಲ್ಜಿಯಂ ಧಾರ್ಮಿಕ ಕೇಂದ್ರದಲ್ಲಿ ಗಟ್ಟಿಧ್ವನಿಯಲ್ಲಿ ಓದುವುದಕ್ಕೆ ಈ ಬೈಬಲ್‌ನ್ನು ಕೈಯಿಂದ ಬರೆದಿದ್ದರು.

16ನೇ ಶತಮಾನದಲ್ಲಿ ಹಳೆಯ ಕ್ಯಾರೊಲಿಂಗಿಯನ್ ಪಠ್ಯಗಳ ಮರುಶೋಧನೆಯು ಆಂಟಿಕಾ ಲಿಪಿಯ ಸೃಷ್ಟಿಗೆ ಪ್ರೋತ್ಸಾಹಿಸಿತು.(ಸುಮಾರು 1470ರಲ್ಲಿ) 17ನೇ ಶತಮಾನದಲ್ಲಿ ಫ್ರಾನ್ಸ್‌ನ ಬಟಾರ್ಡೆ ಲಿಪಿ ಬಳಕೆಗೆ ಬಂದರೆ,18ನೇ ಶತಮಾನದಲ್ಲಿ ಇಂಗ್ಲೀಷ್ ಲಿಪಿ ಯುರೋಪ್ ಮತ್ತು ವಿಶ್ಯಾದ್ಯಂತದ ಪುಸ್ತಕಗಳಿಂದಾಗಿ ಬೆಳಕು ಕಂಡಿತು. ಸಮಕಾಲೀನ ಪ್ರತಿ ಕಾಂಪ್ಯೂಟರ್‌ನಲ್ಲಿನ ಮುದ್ರಣಾಕ್ಷರಗಳು ಹಳೆಯ ಮತ್ತು ಸಾಂಪ್ರದಾಯಿಕ ಅಕ್ಷರ ಮಾಲೆಯ ಬಳಕೆಗಾಗಿ ಹಿಂದಿನ ಪದ್ದತಿಗೆ ಋಣಿಯಾಗಬೇಕಾಗಿದೆ.ಮೈಕ್ರೊ ಸಾಫ್ಟ್ ವರ್ಡ್ ಅಥವಾ ಆಪಲ್ ಪೇಜಿಸ್ ಹಿಡಿದು ವೃತ್ತಿಪರ ಸಾಫ್ಟ್ ವೇರ್ ವಿನ್ಯಾಸದ ಪ್ಯಾಕೇಜ್ ಗಳು ಅಂದರೆ ಅಡೋಬ್ ಇನ್ ಡಿಸೈನ್ ನಂತಹವು ಕೂಡಾ ಪುರಾತನ ಬರಹಗಳ ಪುಟ್ಟ ಪ್ರಮಾಣದ ಶೈಲಿಯನ್ನು ಅಳವಡಿಸಿಕೊಂಡಿವೆ. (ಜಾಪ್ 2007; ಮೆಡಿಯವಿಲ್ಲ 2006; ಹೆನ್ನಿಂಗ್ 2002)

ಪಾಶ್ಚಿಮಾತ್ಯ ಕ್ಯಾಲಿಗ್ರಫಿಯ ಲಕ್ಷಣಗಳು[ಬದಲಾಯಿಸಿ]

ಕೆಲವು ಮಧ್ಯಕಾಲೀನ ಸಂದರ್ಭಗಳಲ್ಲಿ ಪ್ರತಿಯೊಂದು ಕೃತಿಯ ಪ್ರಥಮ ಅಕ್ಷರವನ್ನು ಸ್ಫುಟಗೊಳಿಸುವುದು ಅಥವಾ ಪ್ರಕಾಶಮಾನ ಗೊಳಿಸುವುದು ಇಲ್ಲವೇ ಕಣ್ಣಿಗೆ ರಾಚುವಂತೆ ಮಾಡುವುದು ವಿಶೇಷವಾಗಿತ್ತು.(ದೊಡ್ಡಕ್ಷರ ಮತ್ತು ಬಣ್ಣದಿಂದ) ಇಂತಹ ವಿಶೇಷ ಲಕ್ಷಣಗಳು ಪಾಶ್ಚಿಮಾತ್ಯದ ಪವಿತ್ರ ಧರ್ಮಗ್ರಂಥಗಳಲ್ಲಿದ್ದವು. ಸಾಹಿತ್ಯದ ಪೂರ್ವಭಾವಿ ಗ್ರಂಥಗಳಲ್ಲಿ ಅಲಂಕೃತ "ಕಾರ್ಪೆಟ್(ದಪ್ಪನೆಯ ಹಾಳೆಯ) ಪುಟ"ವು ಸ್ಥೂಲ ವರ್ಣದ ಪ್ರಾಣಿಗಳ ರೇಖಾ ಚಿತ್ರಗಳ ವಿವರಣೆಯಿಂದ ಕೂಡಿದೆ. ಲಿಂಡಿಸ್‌ಫರ್ನೆ ಧರ್ಮಗ್ರಂಥಗಳು(715-720 AD)ಇದಕ್ಕೆ ಪೂರ್ವದ ಉದಾಹರಣೆಯಾಗಿವೆ(ಬ್ರೌನ್ 2004).ಚೀನಾ ಅಥವಾ ಅರೇಬಿಯನ್ ಕ್ಯಾಲಿಗ್ರಫಿಯಂತೆ ಪಾಶ್ಚಿಮಾತ್ಯ ಲಿಪಿಯು ಕಠಿಣ ನಿಯಮಗಳು ಮತ್ತು ವಿಶಿಷ್ಟ ರೂಪಾಕೃತಿಗಳಿಂದ ಕೂಡಿತ್ತು. ಉತ್ತಮ ಗುಣಮಟ್ಟದ ಬರವಣಿಗೆಯಲ್ಲಿ ಅಕ್ಷರಗಳು ಕ್ರಮಬದ್ಧತೆ ಮತ್ತು ಲಯದಿಂದ ಕೂಡಿದ್ದವು. ಪುಟದಲ್ಲಿನ ಸಾಲುಗಳು "ರೇಖಾಗಣಿತ"ದ ಸಮಸರಣಿಯ ಪಂಕ್ತಿಯಲ್ಲಿದ್ದವು. ಪ್ರತಿಯೊಂದು ಅಕ್ಷರವು ನಿಖರ ಅಕ್ಷರ ಶ್ರೇಣಿಯಿಂದ ಕೂಡಿತ್ತು.ಮುದ್ರಣಾಕ್ಷರಗಳಿಗೆ ಭಿನ್ನವಾಗಿ, ಅಕ್ಷರಗಳ ಗಾತ್ರ, ಶೈಲಿ ಮತ್ತು ವರ್ಣಗಳಲ್ಲಿನ ವ್ಯತ್ಯಾಸವು ಕ್ರಮೇಣ ಪರಿವರ್ತಿತ "ಅಂದದ ಗ್ರೀಕ್ ಅಕ್ಷರ"ಗಳಿಗೆ ಅರ್ಥ ನೀಡಿತು.

ಅದರ ತಿರುಳು ಅಸ್ಪಷ್ಟವಾಗಿದ್ದರೂ, ವೀಕ್ಷಕರ ಅರ್ಥಪೂರ್ಣ ಗ್ರಹಿಕೆಗೆ ಎಟಕಿ ಕಲೆ ತನ್ನತನದ ಮೇಲೆ ಪ್ರಭಾವ ಬೀರುತಿತ್ತು. ಇಂದಿನ ಸಮಕಾಲೀನ ಪಾಶ್ಚಿಮಾತ್ಯ ಕ್ಯಾಲಿಗ್ರಫಿಯ ಹಲವು ವಿಷಯವಸ್ತುಗಳು ಮತ್ತು ಪರಿವರ್ತನೆಗಳು ಸೇಂಟ್ ಜಾನ್ಸ್ ಬೈಬಲ್‌ನ ಪುಟಗಳಲ್ಲಿ ಕಾಣಿಸಿಕೊಂಡಿವೆ.

ಸ್ಲಾವೋನಿಕ್ ಅಕ್ಷರಗಳು(ಇಂಡೊ-ಯುರೊಪಿಯನ ಲಿಪಿ-ಅಕ್ಷರಗಳ ಮಾದರಿ)[ಬದಲಾಯಿಸಿ]

ಸ್ಲಾವೋನಿಕ್ ಅಕ್ಷರ ಇತಿಹಾಸ ಮತ್ತು ರಷ್ಯಬರವಣಿಗೆ ಪದ್ದತಿಗಳು ಮೂಲಭೂತವಾಗಿಲ್ಯಾಟಿನ್ ಭಾಷೆಯೊಂದರಿಂದ ಭಿನ್ನವಾಗಿವೆ.

ಗ್ಲಾಗೊಲಿಟಿಕ್ ಲಿಪಿ(10-11 ಶತಮಾನ)[ಬದಲಾಯಿಸಿ]

ಸ್ಲಾವೊನಿಕ್ ಬರವಣಿಗೆಗೆ ಆಧಾರವಾದ ವರ್ಣಮಾಲೆಗಳನ್ನು "ಗ್ಲಾಗೋಲಿಟಿಕ್" ಮತ್ತು "ಸಿರಿಲಿಕ್" ವರ್ಣಮಾಲೆಗಳೆಂದು ಕರೆಯಲಾಗುತ್ತಿದೆ.(ಸಿರಿಲಿಕ್ ಎಂಬ ಕ್ರೈಸ್ತ ಸನ್ಯಾಸಿ ಪುರಾತನ ಸಾಲ್ವೊನಿಕ್ ಲಿಪಿಗೆ ಒತ್ತು ಕೊಟ್ಟಿದ್ದ.) ಅವುಗಳ ಮೂಲ ಇತಿಹಾಸವು ಸಂಪೂರ್ಣ ಅಜ್ಞಾತವಾಗಿದೆ. ಗ್ಲಾಗೋಲಿಟ್ಸಾದ ಪ್ರಸಕ್ತ ಸ್ಮಾರಕಗಳು 10ನೇ ಶತಮಾನದ ಅಂತ್ಯಕ್ಕೆ ಸೇರಿದವು. ಚಿಹ್ನೆಗಳು ನಿಯಮಬದ್ಧವಾಗಿ ಎರಡು ಪದಗುಚ್ಛಗಳಿಂದ ರಚನೆಯಾಗಿದ್ದು, ಒಂದರ ಮೇಲೊಂದು ಹೊಂದಿಸಲಾಗಿದೆ.

ಗ್ಲಾಗೋಲಿಥಿಕ್ ಲಿಪಿ

ಕಿರಿಲ್ಲಿಟ್ಸಾ ಪದ್ದತಿಯ ಅಲಂಕಾರದಲ್ಲಿ ಇಂತಹ ಪದಗಳ ರಚನೆ ಕಾಣಬಹುದು. ಇವು ಸಾಮಾನ್ಯವಾಗಿ ಸರಳ ರೂಪಗಳಿಂದ ಕೂಡಿರುವುದಿಲ್ಲ. ಅವು ನೇರಗೆರೆಗಳಿಂದ ಸಂಪರ್ಕ ಹೊಂದಿವೆ. ಕೆಲವು ಅಕ್ಷರಗಳು (ш, у, м, ч, э) ತಮ್ಮ ಆಧುನಿಕ ಸ್ವರೂಪಕ್ಕೆ ಹೊಂದಿಕೆಯಾಗುತ್ತವೆ. ಅಕ್ಷರಗಳ ರೂಪಕ್ಕೆ ಸಂಬಂಧಪಟ್ಟಂತೆ ಎರಡು ವಿಧಗಳ ಗ್ಲಾಗೋಲಿಟ್ಸಾಗಳಿವೆ. ಮೊದಲನೆಯದಾದ ಬಲ್ಗೇರಿಯನ್ ಗ್ಲಾಗೊಲಿಟ್ಸಾ ದುಂಡಾಕೃತಿಯ ಅಕ್ಷರಗಳನ್ನು ಹೊಂದಿವೆ. ಕ್ರೊಯೇಷಿಯ ಗ್ಲಾಗೋಲಿಟ್ಸಾ ಎಂದು ಕರೆಯಲಾಗುವ ಇಲ್ಲಿರಿಯನ್ ಅಥವಾ ಡಲ್ಮಾಟಿಯನ್ ಕೋನಾಕೃತಿಯ ಅಕ್ಷರಗಳ ರೂಪಗಳನ್ನು ಹೊಂದಿದೆ. ಎರಡು ವಿಧದ ಅಕ್ಷರಗಳು ಕಠಿಣ ವಿಸ್ತರಣೆಯ ಗಡಿ ಮೇರೆಗಳನ್ನು ಹೊಂದಿಲ್ಲ. ನಂತರ ಗ್ಲಾಗೋಲಿಟ್ಸಾ ಕಿರಿಲಿಟ್ಸಾದಿಂದ ಅನೇಕ ಶಬ್ದಗಳನ್ನು ಎರವಲು ಪಡೆದುಕೊಂಡಿತು. ಪಾಶ್ಚಿಮಾತ್ಯ ಸ್ಲಾವಿಕ್ ಗ್ಲಾಗೋಲಿಟ್ಸಾ ಅಲ್ಪಾವಧಿ ಅಸ್ತಿತ್ವದಲ್ಲಿದ್ದು, ಲ್ಯಾಟಿನ್ ಬರವಣಿಗೆ ಅದರ ಬದಲಿಗೆ ಬಂತು. ಆದರೆ ಆಧುನಿಕ ಕಾಲದಲ್ಲಿ ಗ್ಲಾಗೋಲಿಟ್ಸಾ ಅವಸಾನ ಹೊಂದಿಲ್ಲ. ವಲ್ಡ್ ವಾರ್ IIರ ಪ್ರಾರಂಭದವರೆಗೆ ಅದನ್ನು ಬಳಸಲಾಯಿತು. ಅಲ್ಲದೇ ಸುದ್ದಿಪತ್ರಿಕೆಗಳ ಮುದ್ರಣದಲ್ಲಿ ಕೂಡ ಬಳಕೆಯಾದವು. ಇಟಲಿಯ ಕ್ರೊವೇಶಿಯನ್ ವಸಾಹತುಗಳಲ್ಲಿ ಇದನ್ನು ಪ್ರಸಕ್ತ ಬಳಸಲಾಗುತ್ತಿದೆ.

ಸಿರಿಲಿಕ್ ವರ್ಣಮಾಲೆ-ಅನ್ಸಿಯಲ್(11ನೇ ಶತಮಾನ)[ಬದಲಾಯಿಸಿ]

ಇದರ ಮ‌ೂಲವು ವಿವರಣೆರಹಿತವಾಗಿ ಉಳಿದಿದೆ. ವರ್ಣಮಾಲೆಗಿಂತ ತಡವಾಗಿ ಶೀರ್ಷಿಕೆ ಕಾಣಿಸಿಕೊಂಡಿದೆ. ಸ್ಲಾವಿಕ್ ರಾಷ್ಟ್ರಗಳಲ್ಲಿ 9ನೇ ಶತಮಾನದ ಸಂದರ್ಭದಲ್ಲಿ ಕಿರಿಲ್ ಪ್ರಯಾಣಿಸುವಾಗ ಹೊಸ ಸ್ಲಾವೊನಿಕ್ ವರ್ಣಮಾಲೆ ರಚಿಸಿರುವುದು ಖಚಿತವಾಗಿದೆ. ಅದು ಗ್ಲಾಗೋಲಿಟಿಕ್ ಲಿಪಿ ಹೌದೊ ಅಲ್ಲವೊ ಅಥವಾ ಬೇರೆಯದೇ ಎನ್ನುವುದು ಗೊತ್ತಾಗಿಲ್ಲ. (0}ಧಾರ್ಮಿಕ ಗ್ರಂಥಗಳನ್ನು ಸ್ಲಾವೊನಿಕ್ ಭಾಷೆಗೆ ಅನುವಾದಿಸುವುದು ಆಗ ಅಗತ್ಯವಾಗಿತ್ತು. ಹೀಗೆ ಮಾಡಲು ಗ್ಲಾಗೊಲಿಟ್ಸಾದ ಜಟಿಲ ಮತ್ತು ಬರೆಯಲು ಕಷ್ಟಕರ ಚಿಹ್ನೆಗಳನ್ನು ಸರಳೀಕರಿಸುವುದು ಅಗತ್ಯವಾಗಿತ್ತು. ಆದರೆ ಅದೇ ಸಂದರ್ಭದಲ್ಲಿ ಮಾತನಾಡುವ ಸ್ಲಾವೋನಿಕ್ ಭಾಷೆಯಲ್ಲಿನ ಶಬ್ದ ಶುದ್ಧತೆಗಾಗಿ ಅಗತ್ಯ ಅಕ್ಷರಗಳನ್ನು ಪರಿಚಯಿಸುವುದು ಅಗತ್ಯವಾಗಿತ್ತು. ಆ ಕಾಲದ ಅನೇಕ ಮ‌ೂಲಗಳು ಇವುಗಳನ್ನು ಬಣ್ಣಿಸಿದ್ದು, ಕೇವಲ ಒಂದು ಸ್ಲೋವೋನಿಕ್ ವರ್ಣಮಾಲೆ ಬಗ್ಗೆ ಪ್ರಸ್ತಾಪಿಸಿವೆ. ಆದರೆ ಈಗಾಗಲೇ ಎರಡು ಸ್ಲೋವೋನಿಕ್ ವರ್ಣಮಾಲೆಗಳಿವೆ. ಸಿರಿಲಿಕ್ ವರ್ಣಮಾಲೆಯಲ್ಲಿ 43 ಅಕ್ಷರಗಳಿದ್ದು, ಅವುಗಳ ಪೈಕಿ 24 ಅಕ್ಷರಗಳನ್ನು ಬೈಜಾಂಟಿಯಂ ಬರವಣಿಗೆಯಿಂದ ಎರವಲು ಪಡೆಯಲಾಗಿದೆ. ಇನ್ನೂ 19 ಅಕ್ಷರಗಳನ್ನು ಹೊಸದಾಗಿ ರಚಿಸಲಾಗಿದೆ. ಆದರೆ ಗ್ರಾಫಿಕ್ ಅಲಂಕಾರಗಳಲ್ಲಿ ಮೊದಲನೆಯದಕ್ಕೆ ಹೋಲಿಕೆಯಾಗುತ್ತದೆ.(ಬೈಜಾಂಟಿಯಂ ಇದು ಪ್ರಾಚೀನಾ ಗ್ರೀಕ್ ನ ಆಧುನಿಕ ಇಸ್ತಾಂಬೂಲ್ ನಗರ ಎಂದು ಕರೆಯಲಾಗುತಿತ್ತು.) ಆದರೆ ಗ್ರೀಕ್ ಭಾಷೆಯಲ್ಲಿ ಎಲ್ಲ ಎರವಲು ಅಕ್ಷರಗಳು ಒಂದೇ ರೀತಿಯ ಶಬ್ದದ ಸಂಕೇತಗಳನ್ನು ಹೊಂದಿಲ್ಲ. ಕೆಲವು ಸ್ಲಾವೊನಿಕ್ ಉಚ್ಚಾರಣೆ ಲಕ್ಷಣಗಳಿಗಿಂತ ವಿಶಿಷ್ಠ ಹೊಸ ಸಂಕೇತಗಳನ್ನು ಹೊಂದಿವೆ.ಇತರೆ ಸ್ಲಾವೋನಿಯನ್ನರಿಗಿಂತ ಬಲ್ಗೇರಿಯನ್ನರು ಸಿರಿಲ್ಯಾಕ್ ವರ್ಣಮಾಲೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಸಂರಕ್ಷಿಸಿಟ್ಟಿದ್ದಾರೆ. ನಿರ್ದಿಷ್ಟ ಉಚ್ಚಾರಣೆ ಲಕ್ಷಣಗಳ ಸಂಕೇತಗಳನ್ನು ಹೊರತುಪಡಿಸಿ ಇಂದಿನ ದಿನಗಳಲ್ಲಿ ಅವರ ಬರವಣಿಗೆಯು(ಸರ್ಬಿಯ ಭಾಷೆ) ರಷ್ಯನ್ ಬರವಣಿಗೆಗೆ ಹೋಲಿಕೆಯಾಗುತ್ತಿದೆ. ಕಿರಿಲ್ಲಿಟ್ಸಾದ ಪ್ರಾಚೀನಾ ರೂಪಕ್ಕೆ "ಅನ್ಸಿಯಲ್"(ಕ್ಯಾಪಿಟಲ ಲೆಟರ್ಸ) ಎಂದು ಕರೆಯಲಾಗುತ್ತದೆ. ಅನ್ಸಿಯಲ್ ಮತ್ತು ಗ್ಲಾಗೋಲಿಟಿಕ್ ವರ್ಣಮಾಲೆಯು ಸಂಪೂರ್ಣವಾಗಿ ಕೈಬರಹದ ಲಿಪಿಗಳನ್ನು ಒಳಗೊಂಡಿದೆ. ಅನ್ಸಿಯಲ್ ಹಾಗೂ ಗ್ಲಾಗೋಲಿಟಿಕ್ ವರ್ಣಮಾಲೆ ಸ್ಪಷ್ಟತೆ ಮತ್ತು ನೇರ ರೂಪಗಳ(ಬರಹಗಳು) ಅಪರೂಪದ ಗುಣ ಹೊಂದಿವೆ. ಅನೇಕ ಅಕ್ಷರಗಳು ಕೋನಾಕೃತಿಯಿಂದ ಕೂಡಿದ್ದು,ಅನಾಕರ್ಷಕ ಲಕ್ಷಣಗಳನ್ನು ಹೊಂದಿವೆ. ವೃತ್ತಾಕಾರದ ಡೊಂಕುಗಳೊಂದಿಗೆ ಸಂಕುಚಿತ ದುಂಡಗಿನ ಅಕ್ಷರಗಳು -(О, С, Э, Р ಮತ್ತಿತರ) ಇದಕ್ಕೆ ಅಪವಾದ. ಇತರೆ ಅಕ್ಷರಗಳ ಹೋಲಿಸಿದರೆ ಇವು ಸ್ಥಾನ ಕಳೆದುಕೊಂಡಂತೆ ಕಾಣುತ್ತವೆ. ಕೆಲವು ಅಕ್ಷರಗಳ ಕೆಳ ದೀರ್ಘಾಕಾರವು(Р, У, 3)ಈ ವಿಧದ ಬರವಣಿಗೆಗೆ ವಿಲಕ್ಷಣವಾಗಿ ಕಾಣುತ್ತದೆ. ಕ್ಯಾಲಿಗ್ರಫಿಗೆ ಸಂಬಂಧಿಸಿದಂತೆ ಹಗುರ ಅಲಂಕಾರಿಕ ಅಂಶಗಳಾಗಿ ಅವು ಕಾಣುತ್ತವೆ. ವೈಶಿಷ್ಠ್ಯಪೂರ್ಣ ಚಿಹ್ನೆಗಳಿಗೆ ಸಂಬಂಧಪಟ್ಟಂತೆ ಅದರ ಮ‌ೂಲ ಇನ್ನೂ ಅಸ್ಪಷ್ಟವಾಗಿ ಉಳಿದಿದೆ. ಅನ್ಸಿಯಲ್ ಅಕ್ಷರಗಳು ದೊಡ್ಡ ಗಾತ್ರದಿಂದ ಕೂಡಿದ್ದು,ಪರಸ್ಪರ ಪ್ರತ್ಯೇಕವಾಗಿರಿಸಲಾಗಿದೆ. ಹಳೆಯ ಅನ್ಸಿಯಲ್‌ಗೆ ಪದಗಳ ನಡುವೆ ವಿರಾಮಗಳು ಇರುತ್ತಿರಲಿಲ್ಲ.

ಅರೆ-ಅನ್ಸಿಯಲ್(14ನೇ ಶತಮಾನ)[ಬದಲಾಯಿಸಿ]

ಅರೆ-ಅನ್ಸಿಯಲ್ ಎರಡನೇ ವಿಧದ ಬರವಣಿಗೆಯಾಗಿದ್ದು, 14ನೇ ಶತಮಾನದಿಂದ ಅಭಿವೃದ್ಧಿಯಾಗಿದೆ. ನಂತರ ಅನ್ಸಿಯಲ್‌ಗೆ ಪರ್ಯಾಯವಾಗಿ ಬಳಕೆಯಾಯಿತು. ಈ ಲಿಪಿಯು ಹೆಚ್ಚು ಹೊಳಪು ಮತ್ತು ದುಂಡಾಕೃತಿಯಲ್ಲಿದೆ. ಇದರ ಅಕ್ಷರಗಳು ಹೆಚ್ಚು ಲಘುವಾಗಿದ್ದು, ಅನೇಕ ಮೇಲ್ಬರಹ ಮತ್ತು ವಿರಾಮಚಿಹ್ನೆಗಳ ಇಡೀ ವ್ಯವಸ್ಥೆಯನ್ನು ಹೊಂದಿದೆ. ಅಕ್ಷರಗಳು ಹೆಚ್ಚು ಬಾಗಿದ್ದು, ಅನ್ಸಿಯಲ್ ಬರವಣಿಗೆಗೆ ಹೋಲಿಸಿದರೆ ವಿಶಾಲವಾಗಿದ್ದು, ಕೆಳ ಮತ್ತು ಮೇಲಿನ ದೀರ್ಘಕಾರಕಗಳನ್ನು ಹೊಂದಿವೆ. ಅನ್ಸಿಯಲ್‌ನ ಬರವಣಿಗೆಯಲ್ಲಿ ಬಳಸುವ ಅಗಲತುದಿಯ ಪೆನ್ನಿನ ತಂತ್ರವು ಅರೆ-ಅನ್ಸಿಯಲ್‌ ಶೈಲಿಯಲ್ಲಿ ಬಳಕೆಯಾಗುವುದು ವಿರಳ. ಅರೆ-ಅನ್ಸಿಯಲ್ ಪದ್ಧತಿಯನ್ನು ಜೋಡಿಬರಹ ಮತ್ತು ಕಟ್ಟುಬಂಧಗಳಿಂದ 14-18ನೇ ಶತಮಾನದಲ್ಲಿ ಇತರೆ ಬರವಣಿಗೆ ಶೈಲಿಗಳ ಜತೆ ಬಳಸಲಾಯಿತು. ಅರೆ-ಅನ್ಸಿಯಲ್‌ ಪದ್ಧತಿಯನ್ನು ಬರವಣಿಗೆಯಲ್ಲಿ ಬಳಸುವುದು ಹೆಚ್ಚು ಹಿತಕಾರಿಯೆನಿಸಿತು. ಊಳಿಗಮಾನ್ಯ ಸಿದ್ಧಾಂತವು ವಿಶಿಷ್ಠ ಅನ್ಸಿಯಲ್ ಶೈಲಿ ಮತ್ತು ಕೆಲವು ಹೊರಪ್ರದೇಶದ ಜಿಲ್ಲೆಗಳಲ್ಲಿ ಅನ್ಸಿಯಲ್ ಭಾಷೆಯ ಬೆಳವಣಿಗೆಗೆ ನೆರವಾಯಿತು. ಮಿಲಿಟರಿ ಕಾದಂಬರಿಗಳು ಮತ್ತು ದಾಖಲೆಗಳು ಈ ಹಸ್ತಪ್ರತಿಗಳ ಸರಕನ್ನು ಹೊಂದಿವೆ. ಆದರೆ ಕೆಲವು ಹಸ್ತಪ್ರತಿಗಳು ಆ ಕಾಲದಲ್ಲಿ ರಷ್ಯಾದ ಐತಿಹಾಸಿಕ ಘಟನೆಗಳನ್ನು ನೆನಪಿಸುತ್ತವೆ. ಐವಾನ್ III ಆಡಳಿತಾವಧಿಯಲ್ಲಿ ಮಾಸ್ಕೊದ ಸುತ್ತಮುತ್ತ ಪ್ರದೇಶದ ಏಕೀಕರಣ ಮತ್ತು ಬಲವರ್ಧನೆ ಮುಗಿದ ನಂತರ, ಮಾಸ್ಕೊ ದೇಶೀಯ ಮತ್ತು ಸಾಂಸ್ಕೃತಿಕ ಕೇಂದ್ರವಾಯಿತು. ಹೊಸ ನಿರಂಕುಶ ಆಡಳಿತದ ಮೇಲ್ವಿಚಾರಣೆಯಲ್ಲಿ ರಷ್ಯಾ ರಾಷ್ಟ್ರದ ರಾಜ್ಯ ಸ್ಥಾಪನೆಯಾಯಿತು. ಆದ್ದರಿಂದ ಸ್ಥಳೀಯ ಮಾಸ್ಕೊ ಸಂಸ್ಕೃತಿಯು ರಷ್ಯನ್ನರ ಗುಣಲಕ್ಷಣ ಎನಿಸಿತು. ದೈನಂದಿನ ಬದುಕಿನ ಹೆಚ್ಚುತ್ತಿರುವ ಬೇಡಿಕೆಗಳ ಜತೆಯಲ್ಲಿ ಮಾಸ್ಕೊ ಮತ್ತು ಒಟ್ಟಾರೆಯಾಗಿ ರಷ್ಯಾದ ಸಮಾಜದಲ್ಲಿ ಹೆಚ್ಚು ಸರಳ ಲಿಪಿಯ ಅಗತ್ಯತೆ ಕಂಡಿತು.

ಜೋಡಿಬರವಣಿಗೆ(15-17 ಶತಮಾನದ ಕೂಡು ಬರಹ)[ಬದಲಾಯಿಸಿ]

"ಕೂಡು ಬರವಣಿಗೆ" ಪದವು ಲ್ಯಾಟಿನ್ ಜೋಡಿಬರವಣಿಗೆಗೆ ಹೊಂದಿಕೆಯಾಗುತ್ತದೆ. ಲಿಪಿಗಳ ಬೆಳವಣಿಗೆಯ ಪ್ರಥಮ ಹಂತದಲ್ಲಿ ಪ್ರಾಚೀನಾ ಗ್ರೀಕ್‌ರು ವಿಶಾಲವಾಗಿ ವ್ಯಾಪಿಸಿದ ಬರವಣಿಗೆಯ ಸಂಸ್ಕೃತಿ ಹೊಂದಿದ್ದರು. ಕೆಲವು ವಾಯವ್ಯ ಸ್ಲಾವೋನಿಯನ್ನರು ಕೂಡ ತಮ್ಮದೇ ಆದ ಸ್ವಂತ ಲಿಪಿಗಳನ್ನು ಹೊಂದಿದ್ದರು. ಪ್ರತ್ಯೇಕ ವಿಧದ ಬರಹವಾಗಿ ಕೂಡುಬರವಣಿಗೆಯು ರಷ್ಯಾದಲ್ಲಿ 15ನೇ ಶತಮಾನದಲ್ಲಿ ಬೆಳಕಿಗೆ ಬಂತು. ಆಂಶಿಕ ಬಂಧಿತ ಅಕ್ಷರಗಳು ಮತ್ತು ಮೆರಗಿನ ನಮ‌ೂನೆಗಳು ಇತರೆ ಲಿಪಿಗಳ ಅಕ್ಷರಗಳಿಗಿಂತ ಭಿನ್ನವಾಗಿದ್ದವು. ಅಕ್ಷರಗಳು ವಿಭಿನ್ನ ಗುರುತು ಮತ್ತು ಚಿಹ್ನೆ,ಬಾಲಗಳು ಮತ್ತು ಹೆಚ್ಚುವರಿ ಸಂಕೇತಗಳಿಂದ ಕೂಡಿರುವ ಹಿನ್ನೆಲೆಯಲ್ಲಿ, ಪಠ್ಯಗಳನ್ನು ಓದುವುದು ಕಷ್ಟಕರವಾಗಿತ್ತು. ಕೂಡುಅಕ್ಷರಗಳ ಬರವಣಿಗೆ ಅರೆ-ಅನ್ಸಿಯಲ್ ಲಿಪಿಯನ್ನು ಬಿಂಬಿಸಿದರೂ, ಅಕ್ಷರಗಳನ್ನು ಬಂಧಿಸುವ ಗೆರೆಗಳಿದ್ದು, ಈ ಲಕ್ಷಣಗಳು ಅರೆ-ಅನ್ಸಿಯಲ್ ಅಕ್ಷರಗಳಿಗೆ ಹೋಲಿಸಿದರೆ ಭಿನ್ನವಾಗಿದೆ. ಈ ಲಿಪಿ ಕೂಡ ಹೆಚ್ಚು ಸ್ಥಿತಿಸ್ಥಾಪಕ ಮತ್ತು ನಿರರ್ಗಳವಾಗಿದೆ. ಕೂಡುಅಕ್ಷರಗಳ ಬರವಣಿಗೆಯನ್ನು ದೀರ್ಘಗಳ ಮ‌ೂಲಕ ಬರೆಯಲಾಗುತ್ತದೆ.ಪ್ರಾರಂಭದಲ್ಲಿ ಅನ್ಸಿಯಲ್ ಮತ್ತು ಅರೆ-ಅನ್ಸಿಯಲ್‌ನಲ್ಲಿ ನಿರ್ದಿಷ್ಟವಾಗಿರುವಂತೆ ಚಿಹ್ನೆಗಳನ್ನು ದೀರ್ಘೀಕರಣಗಳ ಮ‌ೂಲಕ ರಚಿಸಲಾಗಿತ್ತು. 16ನೇ ಶತಮಾನದ ದ್ವಿತೀಯಾರ್ಧದಲ್ಲಿ, ವಿಶೇಷವಾಗಿ 17ನೇ ಶತಮಾನದ ಆದಿಯಲ್ಲಿ ಅರೆ ದುಂಡಾಕೃತಿಗಳು ಪ್ರಮುಖ ಗೆರೆಗಳಾದವು. ಐತಿಹಾಸಿಕ ವಿಶಾಲ ದೃಷ್ಟಿಕೋನದಿಂದ ನೋಡಿದರೆ ಗ್ರೀಕ್ ಕೂಡುಅಕ್ಷರದ ಲಿಪಿಯ ಕೆಲವು ಅಂಶಗಳನ್ನು ಇದರಲ್ಲಿ ಕಾಣಲು ಸಾಧ್ಯವಾಗಿದೆ. 17ನೇ ಶತಮಾನದ ದ್ವಿತೀಯಾರ್ಧದಲ್ಲಿ,ಬರವಣಿಗೆಯ ವಿವಿಧ ರೂಪಾಂತರ ಕಾಣಿಸಿಕೊಂಡವು.ಕೂಡುಅಕ್ಷರಗಳ ಲಿಪಿಯು ಹೆಚ್ಚು ದುಂಡಾಕೃತಿಯ ಅಂಶ ಮತ್ತು ಕಟ್ಟುಗಳನ್ನು ತೋರಿಸಿತು. ಅಕ್ಷರಗಳ ದುಂಡಗಿನ ರೇಖಾಕೃತಿಯು ಶತಮಾನದ ಅಂತ್ಯದಲ್ಲಿ ಹೆಚ್ಚು ಸುಂದರ ಮತ್ತು ಸಮತಟ್ಟದ್ದಾಗಿತ್ತು. ಆ ಕಾಲದ ಕೂಡುಅಕ್ಷರಗಳ ಬರವಣಿಗೆಯಲ್ಲಿ ಗ್ರೀಕ್ ಜೋಡಿಅಕ್ಷರದ ಬರವಣಿಗೆಯ ಅಂಶಗಳು ತಪ್ಪಿಹೋಗಿದ್ದವು ಮತ್ತು ಕೆಲವು ಅರೆ-ಅನ್ಸಿಯಲ್ ನ ರೂಪ ಕಳೆದುಕೊಂಡಿದ್ದವು. ನಂತರ ನೇರ ಮತ್ತು ಕೂಡುಅಕ್ಷರಗಳು ಸಮತೋಲನ ಕಾಯ್ದುಕೊಂಡು ಹೆಚ್ಚು ಸಮಪಾರ್ಶ್ವತೆ ಮತ್ತು ದುಂಡಾಕೃತಿ ಹೊಂದಿದವು. ಆ ಅವಧಿಯಲ್ಲಿ ಅನ್ಸಿಯಲ್ ನಾಗರಿಕ ಬರವಣಿಗೆಯ ಲಿಪಿಯಾಗಿ ಪರಿವರ್ತಿತವಾಯಿತು.

ಪೌರಾತ್ಯ ಏಷ್ಯನ್ ಕ್ಯಾಲಿಗ್ರಫಿ[ಬದಲಾಯಿಸಿ]

Jiǎgǔwén
Jīnwén
Dàzhuàn
Xiǎozhuàn
Lìshū
Cǎoshū
Xíngshū
Kǎishū (t)
Kǎishū (s)
ಸಾಂಗ್ ರಾಜವಂಶ ಬರೆದ ಚೈನೀಸ್ ಕ್ಯಾಲಿಗ್ರಫಿ (A.D. 1051-1108) ಕವಿ ಮಿ ಫು

ಹೆಸರು ಮತ್ತು ಲಕ್ಷಣಗಳು[ಬದಲಾಯಿಸಿ]

ಸಾಂಪ್ರದಾಯಿಕ ಪೌರಾತ್ಯ ಏಷ್ಯನ್ ಬರವಣಿಗೆಯಲ್ಲಿ ಚೀನಾದ ಅಕ್ಷರಗಳನ್ನು ಬರೆಯಲು ಶಾಯಿಯ ಕುಂಚ ಬಳಸಲಾಗುತ್ತದೆ. ಬರೆಯುವ ವಿಧಾನ(ಚೀನಾದಲ್ಲಿ, ಶುಫಾ 書法, ಕೊರಿಯಾದಲ್ಲಿ, ಸಿಯೊಯೆ 書藝, ಜಪಾನ್‌ನಲ್ಲಿ ಶೋಡಾ 書道) ಪೌರಾತ್ಯ ಏಷ್ಯಾ ಸಂಸ್ಕೃತಿಯ ಮುಖ್ಯ ಅಂಶವಾಗಿದೆ. ಕ್ಯಾಲಿಗ್ರಫಿಯು ಶಾಯಿ ಮತ್ತು ಕುಂಚದ ವರ್ಣಚಿತ್ರ ರಚನೆಯಲ್ಲಿ ಪ್ರಭಾವ ಬೀರಿತು. ಇದೇರೀತಿಯ ಸಾಧನ ಮತ್ತು ತಂತ್ರಗಳನ್ನು ಬಳಸಿ ಅದನ್ನು ಸಾಧಿಸಲಾಯಿತು. ಕ್ಯಾಲಿಗ್ರಫಿಯು ಶಾಯಿ ಮತ್ತು ಕುಂಚ ವರ್ಣಕಲೆ ಸೇರಿದಂತೆ ಪೌರಾತ್ಯ ಏಷ್ಯದ ಅನೇಕ ಪ್ರಮುಖ ಕಲಾಶೈಲಿಗಳ ಮೇಲೆ ಪ್ರಭಾವ ಬೀರಿತು. ಚೀನಾ, ಕೊರಿಯಾ ಮತ್ತು ಜಪಾನ್ ವರ್ಣಕಲೆ ಮತ್ತು ವಿಯೆಟ್ನಾಂ ವರ್ಣಚಿತ್ರಕಲೆ ಸಂಪೂರ್ಣವಾಗಿ ಕ್ಯಾಲಿಗ್ರಫಿ ಆಧಾರಿತವಾಗಿದೆ.

ಪೌರಾತ್ಯ ಕ್ಯಾಲಿಗ್ರಫಿಯ ಐತಿಹಾಸಿಕ ವಿಕಾಸ[ಬದಲಾಯಿಸಿ]

ಪ್ರಾಚೀನಾ ಚೀನ

ಪ್ರಾಚೀನಾ ಚೀನದಲ್ಲಿ ಅತೀ ಹಳೆಯ ಅಕ್ಷರಗಳು Jiǎgǔwén ಅಕ್ಷರಗಳಾಗಿವೆ. ಎತ್ತಿನ (ಇಣಿ)ಹೆಗಲ‌ಮ‌ೂಳೆ ಮತ್ತು ಆಮೆಚಿಪ್ಪಿನ ಹೊಟ್ಟೆಯ ಭಾಗದ ಮೇಲೆ ಈ ಅಕ್ಷರಗಳನ್ನು ಕೆತ್ತಲಾಗಿದೆ. ಏಕೆಂದರೆ ಕುಂಚದಿಂದ ಬರೆದ ಅಕ್ಷರಗಳು ಕಾಲಾಂತರದಲ್ಲಿ ನಶಿಸುತ್ತವೆ. ಲಿಪಿಯ ಆರಂಭಿಕ ಕ್ರಿಯೆಯಲ್ಲಿ, ಬಿರುಕುಗಳನ್ನು ತಯಾರಿಸಿ, ಅಕ್ಷರಗಳನ್ನು ಕುಂಚದಿಂದ ಚಿಪ್ಪು ಅಥವಾ ಮ‌ೂಳೆಯ ಮೇಲೆ ಬಿಡಿಸಿದ ನಂತರ ಕೆತ್ತಲಾಗುತ್ತಿತ್ತು.. ಕೈಟ್ಲಿ, 1978ಜಿನ್ವೆನ್ (ಕಂಚಿನ ಪರಿಕರಗಳ ಲಿಪಿ) ಮತ್ತು ಡಾಜಾನ್ (ದೊಡ್ಡ ಸೀಲ್ ಲಿಪಿ)ಯ ಅಭಿವೃದ್ಧಿಯೊಂದಿಗೆ "ಕೂಡುಅಕ್ಷರ"ದ ಸಂಕೇತಗಳು ಮುಂದುವರಿದವು. ಇದರ ಜತೆಗೆ ಪ್ರಸಕ್ತ ಚೀನಾದ ಪ್ರಾಚೀನ ರಾಜಧಾನಿ ತನ್ನದೇ ಆದ ಲಿಪಿ ಹೊಂದಿತ್ತು.

ಸಾಮ್ರಾಜ್ಯಶಾಹಿ ಚೀನಾ

ಸಾಮ್ರಾಜ್ಯಶಾಹಿ ಚೀನಾದಲ್ಲಿ 200 BC ಯಷ್ಟು ಪುರಾತನವಾದ ಕೆಲವು ಶಿಲಾ ವಿಗ್ರಹಗಳ ಮೇಲಿನ ಕ್ಸಿಯೋಜುವಾನ್ ಶೈಲಿಯ ರೇಖಾಚಿತ್ರಗಳು ಇನ್ನೂ ಕಾಣಲು ಸಿಗುತ್ತವೆ.

ಸುಮಾರು 220 BCಯಲ್ಲಿ ಪ್ರಪ್ರಥಮವಾಗಿ ಇಡೀ ಚೀನಾದ ಸಮಗ್ರ ಜಲಾನಯ ಪ್ರದೇಶ ಗೆದ್ದ ಚಕ್ರವರ್ತಿ ಕ್ವಿನ್ ಶಿ ಹಾಂಗ್ ಅನೇಕ ಸುಧಾರಣೆಗಳನ್ನು ಜಾರಿಗೆ ತಂದರು.ಅವುಗಳಲ್ಲಿ ಲೈ ಸಿಯ ಅಕ್ಷರ ಸಂಯೋಜನೆಯು 3300 ಪ್ರಮಾಣೀಕೃತ ಕ್ಸಿಯಾಜುವಾನ್ ಅಕ್ಷರ ಮಾಲೆಯನ್ನು ಸೃಷ್ಟಿಸಿತು.[೪] ಆ ಕಾಲದ ಬರವಣಿಗೆಯ ಪ್ರಮುಖ ಸಾಧನವು ಕುಂಚವಾಗಿದ್ದು, ಈ ಅವಧಿಯ ಕೆಲವೇ ಕಾಗದ ದಾಖಲೆಗಳು ಉಳಿದುಕೊಂಡಿದೆ. ಈ ಶೈಲಿಯ ಮುಖ್ಯ ನಿದರ್ಶನಗಳು ಕಲ್ಲಿನ ವಿಗ್ರಹಗಳ ರೂಪದಲ್ಲಿವೆ.

ಲಿಶು ಶೈಲಿ(ಪಾದ್ರಿವರ್ಗದ ಲಿಪಿ)ಹೆಚ್ಚು ಕ್ರಮಬದ್ಧವಾಗಿದ್ದು, ಕೆಲವು ರೀತಿ ಆಧುನಿಕ ಪಠ್ಯವನ್ನು ಹೋಲುತ್ತಿದೆ. ಇವು ಕ್ವಿನ್ ಶಿ ಹಾಂಗ್ಡಿ ಅವರ ನೇತೃತ್ವದಲ್ಲಿ ಅಧಿಕೃತಗೊಂಡವು.[೫] ಕೈಶು ಶೈಲಿ(ಸಾಂಪ್ರದಾಯಿಕ ನಿಯಮಿತ ಲಿಪಿ)-ಇನ್ನೂ ಬಳಕೆಯಲ್ಲಿದೆ-ವಾಂಗ್ ಕ್ಸಿಜಿ (王羲之, 303-361)ಮತ್ತು ಅನುಯಾಯಿಗಳಿಗೆ ಸಂಬಂಧಿಸಿದ್ದು, ಇನ್ನಷ್ಟು ಕ್ರಮಬದ್ಧಗೊಳಿಸಲಾಗಿದೆ.[೫] ಇದರ ಪ್ರಸಾರಕ್ಕೆ ಎಂಪರರ್ ಮಿಂಗ್‌ಜಾಂಗ್ ಆಫ್ ಲೇಟರ್ ಟಾಂಗ್‌ ಪ್ರೋತ್ಸಾಹಿಸಿದರು.(936-933).ಹೊಸ ಮರದ ಬ್ಲಾಕ್ ಬಳಸಿ ಅತ್ಯುತ್ಕೃಷ್ಟ ಛಾಪಾ ಮುದ್ರಣಕ್ಕೆ ಆದೇಶ ನೀಡಿದರು. ಮುದ್ರಣ ತಂತ್ರಜ್ಞಾನಗಳು ಇಲ್ಲಿ ಆಕಾರ ಧೃಢೀಕರಣಕ್ಕೆ ಅವಕಾಶ ನೀಡಿದವು. ಸುಮಾರು 1000 ವರ್ಷಗಳ ಹಿಂದಿದ್ದ ಕೈಶು ರೂಪದ ಅಕ್ಷರಗಳು ಚೀನಾದ ಸಾಮ್ರಾಜ್ಯಶಾಹಿ ಅಂತ್ಯಾವಧಿಯ ಅಕ್ಷರಗಳಿಗೆ ಬಹುತೇಕ ಸಾಮ್ಯವಾಗಿದೆ.[೫] ಆದರೆ ಚಿಕ್ಕ-ಪುಟ್ಟ ಬದಲಾವಣೆ ಮಾಡಲಾಗಿದೆ. ಉದಾಹರಣೆಗೆ ಈ 广 ಆಕಾರದಲ್ಲಿ ಬದಲಾವಣೆ ಮಾಡಿರುವುದು ಕಾಣಸಿಗುತ್ತದೆ. ಕಾಂಗ್ಸಿ ಪದಕೋಶದಲ್ಲಿ 1716ರಲ್ಲಿದ್ದ ಅಕ್ಷರಗಳು ಆಧುನಿಕ ಗ್ರಂಥದಲ್ಲಿನ ಅಕ್ಷರಗಳಿಗೆ ಹೋಲಿಕೆಯಾಗುವುದಿಲ್ಲ. ಕಾಂಗ್ಸಿ ಮತ್ತು ಪ್ರಸಕ್ತ ಅಕ್ಷರ ರೂಪಗಳ ನಡುವೆ ಸಣ್ಣ ವ್ಯತ್ಯಾಸವಿದೆ. ಆದರೆ ಹಳೆ ಶೈಲಿಯ ಪ್ರಕಾರ,ಅಕ್ಷರ ಶ್ರೇಣಿ ಒಂದೇ ತೆರನಾಗಿದೆ.[೬] ಅಸ್ತಿತ್ವ ಕಳೆದುಕೊಂಡ ಶೈಲಿಗಳಲ್ಲಿ 80% ಕ್ಸಿಯಾವೊಝುವಾನ್ ಶೈಲಿಯ ಮಿಶ್ರಣವಿರುವ ಬಫೆನ್ಶು ಮತ್ತು 20% ಲಿಶುಶೈಲಿ ಸೇರಿವೆ.[೫] ಕೆಲವು ಚೀನಾದ ಭಿನ್ನ ಅಕ್ಷರಗಳನ್ನು ಅಸಂಪ್ರದಾಯಿಕ ಅಥವಾ ಶತಮಾನಗಳ ಕಾಲ ಸ್ಥಳೀಯವಾಗಿ ಬಳಸಲಾಗಿತ್ತು. ಅವುಗಳು ಸಾಮಾನ್ಯವಾಗಿ ಅರ್ಥವಾದರೂ ಅಧಿಕೃತ ಕಚೇರಿ ಬರಹಗಳಲ್ಲಿ ಸದಾ ತಿರಸ್ಕೃತವಾಗಿದ್ದವು. ಕೆಲವು ಅಸಂಪ್ರದಾಯಿಕ ಭಿನ್ನರೂಪಗಳ ಜತೆ ಕೆಲವು ಹೊಸದಾಗಿ ಸೃಷ್ಟಿಯಾದ ಅಕ್ಷರಗಳು ಸರಳೀಕೃತ ಚೀನಾದ ಅಕ್ಷರ ಸಮ‌ೂಹ ರಚನೆಗೆ ಕಾರಣವಾಗಿದೆ.

ಕೂಡುಅಕ್ಷರ ಮತ್ತು ಕೈಬರಹದ ಶೈಲಿಗಳು

Xíngshū (ಅರೆ-ಕೂಡುಅಕ್ಷರ ಅಥವಾ ಚಲನೆ ಓಟದ ಲಿಪಿ) ಮುಂತಾದ ಕೂಡುಅಕ್ಷರ ಶೈಲಿ ಮತ್ತು Cǎoshū (ಕೂಡುಅಕ್ಷರ ಅಥವಾ ಗ್ರಾಸ್ ಲಿಪಿ)ಕಡಿಮೆ ನಿರ್ಬಂಧ ಮತ್ತು ವೇಗದ ಗತಿಯಲ್ಲಿದೆ.ಈ ಬರವಣಿಗೆ ಸಾಧನದಿಂದ ಅಕ್ಷರಗಳಿಗೆ ಹೆಚ್ಚಿನ ಚಲನೆ ನೀಡಿದ್ದು ಗೋಚರಿಸುತ್ತದೆ.

ಈ ಶೈಲಿಗಳ ಅಕ್ಷರ ಶ್ರೇಣಿಯಲ್ಲಿ ಹೆಚ್ಚು ವ್ಯತ್ಯಾಸವಿದ್ದು, ಕೆಲವು ಬಾರಿ ಸಂಪೂರ್ಣ ಭಿನ್ನ ರೂಪಗಳನ್ನು ಸೃಷ್ಟಿಸುತ್ತದೆ. ಹ್ಯಾನ್ ಪ್ರಭುತ್ವದ ಲಿಪಿಯ ಬಳಕೆಯ ಕಾಲದಲ್ಲೇ ಕ್ಲೆರಿಕಲ್ ಲಿಪಿಯಿಂದ ಅವು ಹುಟ್ಟಿಕೊಂಡಿವೆ. ಆದರೆ Xíngshū ಮತ್ತು Cǎoshū ವೈಯಕ್ತಿಕ ಟಿಪ್ಪಣಿಗಳಿಗೆ ಮಾತ್ರ ಬಳಕೆಯಾಗಿದ್ದು, ಗುಣಮಟ್ಟದ ಲಿಪಿಯಾಗಿ ಎಂದೂ ಬಳಕೆಯಾಗಿಲ್ಲ. ಚಕ್ರವರ್ತಿ ವೂ ಆಫ್ ಹಾನ್ ಆಡಳಿತದಲ್ಲಿ(140-87) ಕೋಶು ಶೈಲಿ ಹೆಚ್ಚು ಬಳಕೆಯಲ್ಲಿತ್ತು.[೫]
ಮುದ್ರಿತ ಮತ್ತು ಕಂಪ್ಯೂಟರ್ ಶೈಲಿಗಳು

ಆಧುನಿಕ ಮುದ್ರಿತ ಶೈಲಿಗಳಿಗೆ ಉದಾಹರಣೆ ಸಾಂಗ್ ರಾಜವಂಶಮುದ್ರಣಾಲಯಸಾಂಗ್ ಮತ್ತು ಸಾನ್ಸ್-ಸೇರಿಫ್ ಈ ಶೈಲಿಗಳನ್ನು ಸಾಂಪ್ರದಾಯಿಕ ಶೈಲಿಗಳೆಂದು ಪರಿಗಣಿಸಿಲ್ಲ ಅಲ್ಲದೇ ಸಾಮಾನ್ಯವಾಗಿ ಇದು ಲಿಖಿತ ಬರಹವಲ್ಲ.

ಭಾರತದ ಕ್ಯಾಲಿಗ್ರಫಿ[ಬದಲಾಯಿಸಿ]

ಕ್ಯಾಲಿಗ್ರಫಿಯ ಬಗ್ಗೆ ಮಹಾಭಾರತದ ವಿವರಣಾತ್ಮಕ ಹಸ್ತಪ್ರತಿ

ಭಾರತೀಯ ಅಂದದ ಬರಹ ಶೈಲಿಯ ವಿಷಯದAnderson 2008 ಬಗ್ಗೆ ಲೇಖನಗಳು

ಅಶೋಕನ ರಾಜಶಾಸನಗಳು: ಸುಮಾರು 265-238 BC ಕಾಲಾವಧಿಯು ಕಲ್ಲು-ಬಂಡೆ ಕೆತ್ತನೆಗಳಿಗೆ ಮೀಸಲಾಗಿತ್ತು. ಈ ಕೆತ್ತನೆಗಳು ಗಡುಸಾಗಿದ್ದು, ಕೋನಾಕಾರದಲ್ಲಿವೆ. ಅಶೋಕ ಶೈಲಿಯ ಶಾಸನ ಬರಹವನ್ನು ಅನುಸರಿಸಿ ಎರಡು ಹೊಸ ಕ್ಯಾಲಿಗ್ರಫಿಗಳು ಕಾಣಿಸಿಕೊಂಡವು: ಕಾರೋಸ್ಟಿ ಮತ್ತು ಬ್ರಾಹ್ಮಿ. ಕ್ರಿಸ್ತ ಶಕ 3ನೇ BCಯಿಂದ 4ನೇ ಶತಮಾನದ BCವರೆಗೆ ಭಾರತದ ವಾಯವ್ಯ ಪ್ರದೇಶಗಳಲ್ಲಿ ಖಾರೋಸ್ಟಿ ಬರಹ ರೂಢಿಯಲ್ಲಿತ್ತು. ಮಧ್ಯ ಏಷ್ಯಾದಲ್ಲಿ 8ನೇ ಶತಮಾನದವರೆಗೆ ಖಾರೋಸ್ಟಿ ಬಳಕೆಯಲ್ಲಿತ್ತು.

ಇಂಡಿಕ್ ಕೆತ್ತನೆಗಳಿಗೆ ತಾಮ್ರವು ಪ್ರಶಸ್ತ ಲೋಹವಾಗಿತ್ತು. 2ನೇ ಶತಮಾನದ AD ಪೂರ್ವದಲ್ಲೇ ಬಿರ್ಚ್‌ಮರದ ತೊಗಟೆಯನ್ನು ಬರವಣಿಗೆಗೆ ಬಳಸಲಾಗುತ್ತಿತ್ತು. ಅನೇಕ ಇಂಡಿಕ್ ಹಸ್ತಪ್ರತಿಗಳನ್ನು ತಾಳೆಯ ಗರಿಗಳಲ್ಲಿ ಬರೆಯಲಾಗಿದೆ. ಭಾರತದ ಭಾಷಾ ಬರವಣಿಗೆಯನ್ನು 13ನೇ ಶತಮಾನದಲ್ಲಿ ಕಾಗದದ ಮೇಲೆ ಪ್ರಾರಂಭಿಸಿದ ನಂತರವೂ ತಾಳೆಗರಿಯ ಬರವಣಿಗೆ ಚಾಲ್ತಿಯಲ್ಲಿತ್ತು. ಎಲೆಯ ಎರಡೂ ಬದಿಯನ್ನು ಬರವಣಿಗೆಗೆ ಬಳಸಲಾಗುತಿತ್ತು. ಆಯತಾಕಾರದ ಉದ್ದದ ತೊಗಟೆಗಳನ್ನು ಒಂದರ ಮೇಲೊಂದು ಜೋಡಿಸಿ, ಎಲ್ಲ ಎಲೆಗಳಿಗೆ ರಂಧ್ರ ಕೊರೆದು ದಾರದಿಂದ ಪುಸ್ತಕದ ಹಾಳೆಗಳನ್ನು ಒಟ್ಟಿಗೆ ಸೇರಿಸಲಾಗಿತ್ತು. ಆಗ್ನೇಯ ಏಷ್ಯಾದಲ್ಲಿ ಈ ತರದ ಪುಸ್ತಕಗಳ ತಯಾರಿಕೆ ಸಾಮಾನ್ಯವಾಗಿತ್ತು. ಲೇಖನಿಯಿಂದ ಬರೆಯಲು ತಾಳೆಎಲೆ ಅತ್ಯುತ್ತಮ ಹೊರಮೈಯಿಂದ ಕೂಡಿದ್ದು, ಇದು ದಕ್ಷಿಣ ಏಷ್ಯಾದ ಅನೇಕ ಲಿಪಿಗಳಲ್ಲಿ ಸೂಕ್ಷ್ಮ ಅಕ್ಷರಗಳ ಬಳಕೆಯನ್ನು ಸಾಧ್ಯವಾಗಿಸಿದೆ.

ನೇಪಾಳದ ಕ್ಯಾಲಿಗ್ರಫಿ[ಬದಲಾಯಿಸಿ]

ಚಿತ್ರ:ज्वजलपा.svg

ನೇಪಾಳದ ಅಂದದ ಬರಹ ಶೈಲಿಯು ಮಹಾಯಾನ ಮತ್ತು ವಜ್ರಯಾನ ಬೌದ್ಧಮತದ ಮೇಲೆ ಭಾರೀ ಪ್ರಭಾವ ಬೀರಿದೆ. ರಂಜನಾ ಲಿಪಿಯು ಈ ತರದ ಕ್ಯಾಲಿಗ್ರಫಿಯ ಪ್ರಾಥಮಿಕ ಸ್ವರೂಪ. ಸ್ವತಃ ಲಿಪಿ ಮತ್ತು ಅದರ ವ್ಯುತ್ಪತ್ತಿಗಳನ್ನು(ಲಾಂಟ್ಸಾ,ಫಾಗ್ಪಾ,ಕುಟಿಲ ಮುಂತಾದವು)ನೇಪಾಳ, ಟಿಬೆಟ್,ಭೂತಾನ್, ಲೆಹ್, ಮಂಗೋಲಿಯ,ಕರಾವಳಿ ಚೀನಾ,ಜಪಾನ್ ಮತ್ತು ಕೊರಿಯಾದಲ್ಲಿ ಬಳಸಲಾಗಿದೆ.ಸಂಸ್ಕೃತ ಮತ್ತು ಪಾಲಿ ಭಾಷೆಗಳಿಂದ ಜನ್ಯವಾದ "ಓಮ್ ಮಾನೆ ಪೇಮ್ ಓಮ್" ಮತ್ತು ಇತರ ಬೌದ್ಧ ಗ್ರಂಥಗಳನ್ನು ಬರೆಯಲಾಗಿದೆ.

ಟಿಬೆಟ್ ಕ್ಯಾಲಿಗ್ರಫಿ[ಬದಲಾಯಿಸಿ]

ಎ ಬಾನ್ ಪಠ್ಯ
ಎ ಬಾನ್ ಪಠ್ಯ

ಟಿಬೆಟ್ ಸಂಸ್ಕೃತಿಯಲ್ಲಿ ಕ್ಯಾಲಿಗ್ರಫಿ ಪ್ರಾಧಾನ್ಯತೆ ಪಡೆದಿದೆ. ಈ ಲಿಪಿಯು ಇಂಡಿಕ್ ಲಿಪಿಗಳಿಂದ ಹುಟ್ಟಿಕೊಂಡಿದೆ.(ಇಂಡಿಕ್ ಲಿಪಿ ಅಂದರೆ ಇಂಡೊ-ಇರಾನಿಯನ್ ಮೂಲದ ಭಾಷಾ ಗುಚ್ಚ) ಉನ್ನತವರ್ಗದ ಲಾಮಾಗಳು ಮತ್ತು ಪೊಟಾಲಾ ಅರಮನೆಯ ನಿವಾಸಿಗಳು ಮುಂತಾದ ಟಿಬೆಟ್‌ನ ಗಣ್ಯವ್ಯಕ್ತಿಗಳು ಸಾಮಾನ್ಯವಾಗಿ ಸಮರ್ಥ ಸುಂದರ ಬರಹಗಾರರಾಗಿದ್ದರು. ಅನೇಕ ಶತಮಾನಗಳವರೆಗೆ ಟಿಬೆಟ್ ಬೌದ್ಧಮತದ ಕೇಂದ್ರವಾಗಿತ್ತು. ಅಲ್ಲಿನ ಧಾರ್ಮಿಕ ಕೇಂದ್ರಗಳಲ್ಲಿ ಲಿಖಿತರೂಪದ ಪದಕ್ಕೆ ಹೆಚ್ಚಿನ ಮಹತ್ವ ನೀಡಲಾಗಿತ್ತು. ಇದರಿಂದ ಜಾತ್ಯತೀತ ಅಂಗಗಳು ಅಸ್ತಿತ್ವದಲ್ಲಿದ್ದರೂ, ದೊಡ್ಡ ಗುಂಪಿಗೆ ಅವಕಾಶವಿರಲಿಲ್ಲ(ಆದರೆ ಸಾಮಾನ್ಯವಾಗಿ ಒಂದು ರೀತಿಯಲ್ಲಿ ಟಿಬೆಟ್ ಬೌದ್ಧಮತಕ್ಕೆ ಹೆಚ್ಚು ಸಂಬಂಧಪಟ್ಟಿದೆ) ಕ್ಯಾಲಿಗ್ರಫಿಯು ಬಹುತೇಕ ಎಲ್ಲ ಉನ್ನತ ಧಾರ್ಮಿಕತೆಯ ಬರವಣಿಗೆಯನ್ನು ಒಳಗೊಂಡಿದೆ. ದಲೈಲಾಮಾ ಕಳಿಸಿದ ಪತ್ರಗಳು ಮತ್ತಿತರ ಧಾರ್ಮಿಕ ಮತ್ತು ಜಾತ್ಯತೀತ ಪ್ರಾಧಿಕಾರದ ದಾಖಲೆಗಳು ಕ್ಯಾಲಿಗ್ರಫಿಯಲ್ಲಿವೆ. ಪ್ರಾರ್ಥನಾ ಚಕ್ರಗಳಲ್ಲಿ ವಿಶೇಷವಾಗಿ ಕ್ಯಾಲಿಗ್ರಫಿ ಸ್ಪಷ್ಟವಾಗಿ ಕಾಣುತ್ತದೆ.ಈ ರೀತಿಯ ಅಂದದ ಶೈಲಿಯ ಕೆತ್ತನೆ ಬರಹದ ಬದಲಿಗೆ ಇದನ್ನು ಹೊಸೆಯಲಾಗಿದೆ. ಕಟ್ಟಡಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಅರಬ್ ಮತ್ತು ರೋಮನ್ ಕ್ಯಾಲಿಗ್ರಫಿಯಲ್ಲಿ ಇವುಗಳಿವೆ. ಹಿಂದೆ ಲಾಳದಿಂದ ಅಕ್ಷರಗಳನ್ನು ನಿರ್ಮಿಸಲಾಗುತ್ತಿದ್ದು, ಟಿಬೆಟ್ ಬರಹಗಾರರು ಕತ್ತರಿಸಿದ ಮೊನೆಯ ಪೆನ್ನುಗಳನ್ನು ಮತ್ತು ಅಗಲ ಮೊನೆಯ ಲೇಖನಿಗಳನ್ನು ಈಗ ಬಳಸುತ್ತಿದ್ದಾರೆ.

ಪರ್ಶಿಯನ್ ಕ್ಯಾಲಿಗ್ರಫಿ[ಬದಲಾಯಿಸಿ]

[25]'ಪ್ರಮಾಣಾನುಗುಣ ನಿಯಮಗಳನ್ನು ತೋರಿಸುವ ಉದಾಹರಣೆ

ಪರ್ಶಿಯಾದ ಕ್ಯಾಲಿಗ್ರಫಿ ಯು ಪರ್ಶಿಯನ್ ಬರಹ ಪದ್ದತಿ ಯ ಶೈಲಿಯಾಗಿದೆ. ಪರ್ಶಿಯಾದಲ್ಲಿ ಕ್ಯಾಲಿಗ್ರಫಿಯ ಇತಿಹಾಸವು ಇಸ್ಲಾಮ್ ಪೂರ್ವ ಕಾಲದ್ದಾಗಿದೆ. ಝೊರಾಸ್ಟ್ರಿಯ ತತ್ವದಲ್ಲಿ ಸುಂದರ ಮತ್ತು ಸ್ಪಷ್ಟ ಬರವಣಿಗೆಗಳು ಸದಾ ಮೆಚ್ಚುಗೆಗೆ ಅರ್ಹವಾಗಿದ್ದವು.{ಝೊರಾಸ್ಟ್ರಿಯ ತತ್ವ, ಶಿಷ್ಟ ರಕ್ಷಣೆ-ದುಷ್ಟರ ಹರಣಕ್ಕಾಗಿ ಹುಟ್ಟಿದ ಧರ್ಮ-ಸಂಸ್ಕೃತಿ}

ಚರಿತ್ರೆ ಮತ್ತು ವಿಕಾಸ[ಬದಲಾಯಿಸಿ]

ಪ್ರಾಚೀನ ಪರ್ಶಿಯನ್ ಲಿಪಿಯನ್ನು ಸುಮಾರು 500-600 BC ಯಲ್ಲಿ ಸಂಶೋಧಿಸಲಾಯಿತು. ಅಚಾಮೆನಿಡ್ ದೊರೆಗಳಿಗೆ ಸ್ಮಾರಕ ಶಿಲ್ಪ ಕಲಾ ಕೆತ್ತನೆಗಳನ್ನು ಒದಗಿಸಲು ಈ ಲಿಪಿಗಳನ್ನು ಕಂಡುಹಿಡಿಯಲಾಯಿತು. ಈ ಲಿಪಿಗಳು ಸಮತಟ್ಟಾದ, ಲಂಬ ಮತ್ತು ಪಾರ್ಶ್ವ ಕೋನದ ಮೊಳೆಯಾಕಾರದ ಅಕ್ಷರಗಳನ್ನು ಒಳಗೊಂಡಿವೆ. ಈ ಕಾರಣದಿಂದ ಪರ್ಶಿಯಾದಲ್ಲಿ ಅದಕ್ಕೆ ಮೊಳೆಗಳ ಲಿಪಿ(ಖಾಟ್-ಎ-ಮಿಕಿ)ಎಂದು ಕರೆಯಲಾಗುತ್ತದೆ. ಶತಮಾನಗಳ ನಂತರ, "ಪಾಹ್ಲವಿ"(ಇರಾನಿನ ರಾಜನ ಅಡ್ಡ ಹೆಸರು) ಮತ್ತು "ಅವೇಸ್ಟಿ" ಲಿಪಿಗಳು ಪ್ರಾಚೀನ ಪರ್ಶಿಯಾದಲ್ಲಿ ಜನಪ್ರಿಯತೆ ಗಳಿಸಿದವು.ಇಸ್ಲಾಂ ಧರ್ಮ ಆರಂಭದ ನಂತರ,7ನೇ ಶತಮಾನದಲ್ಲಿ ಪರ್ಶಿಯನ್ನರು ಅರೇಬಿಕ್ ವರ್ಣಮಾಲೆಯನ್ನು ಪರ್ಶಿಯನ್ ಭಾಷೆಗೆ ಅಳವಡಿಸಿದರು. ಅಲ್ಲದೇ ಸಮಕಾಲೀನ ಪರ್ಶಿಯನ್ ವರ್ಣಮಾಲೆಯನ್ನು ಅಭಿವೃದ್ಧಿಪಡಿಸಿದರು. ಅರೇಬಿಕ್ ವರ್ಣಮಾಲೆಯಲ್ಲಿ 28 ಅಕ್ಷರಗಳಿವೆ ಮತ್ತು ಇರಾನಿಯನ್ನರು ಇನ್ನೂ ನಾಲ್ಕು ಅಕ್ಷರಗಳನ್ನು ಅದಕ್ಕೆ ಸೇರಿಸಿದ್ದರಿಂದ ಪ್ರಸಕ್ತ 32 ಪರ್ಶಿಯನ್ ಅಕ್ಷರಗಳು ಬಳಕೆಯಲ್ಲಿವೆ.

ಸಮಕಾಲೀನ ಲಿಪಿಗಳು[ಬದಲಾಯಿಸಿ]

ಪರ್ಶಿಯಾದ ಉತ್ಕೃಷ್ಟ ಕ್ಯಾಲಿಗ್ರಫಿಯ ಲಿಪಿಗಳಲ್ಲಿ 'ನಾಸ್ಟಾಲಿಕ್'ಅತ್ಯಂತ ಜನಪ್ರಿಯ ಸಮಕಾಲೀನ ಶೈಲಿಯಾಗಿದೆ.ಇದನ್ನು ಪರ್ಶಿಯಾದ ಬರಹಗಾರರು "ಅಂದದ ಬರಹದ ಲಿಪಿಗಳ ವಧು" ಎಂದು ಕರೆದಿದ್ದಾರೆ. ಈ ಕ್ಯಾಲಿಗ್ರಫಿಯು ಸದೃಢ ರಚನೆಯ ಅಡಿಪಾಯ ಹೊಂದಿದ್ದು,ತೀರಾ ಕಡಿಮೆ ಬದಲಾವಣೆಗಳಿಗೆ ಒಳಗಾಗಿದೆ. ಮಿರ್ ಅಲಿ ತಾಬ್ರಿಜಿ ಅಕ್ಷರಗಳ ಗರಿಷ್ಠ ಸಂಯೋಜನೆ ಮತ್ತು ರೇಖಾಚಿತ್ರ ನಿಯಮಗಳನ್ನು ಕಂಡುಹಿಡಿದರು. ಹೀಗಾಗಿ ಕಳೆದ 7 ಶತಮಾನಗಳಿಂದ ಚಿಕ್ಕ-ಪುಟ್ಟ ಬದಲಾವಣೆಗಳಿಗೆ ಮಾತ್ರ ಒಳಗಾಗಿದೆ. ಅಕ್ಷರಗಳ ರೇಖಾಚಿತ್ರ, ಆಕಾರ,ಪದಗಳ ಸಂಯೋಜನೆ ಮತ್ತು ಇಡೀ ಅಂದದ ಬರಹಗಾರಿಕೆ ರಚನೆಗೆ ಸಂಬಂಧಿಸಿದಂತೆ ಇದು ಕಠಿಣ ನಿಯಮಗಳನ್ನು ಹೊಂದಿದೆ.

ಇಸ್ಲಾಮಿಕ್ ಅಥವಾ ಅರೇಬಿಕ್ ಕ್ಯಾಲಿಗ್ರಫಿ[ಬದಲಾಯಿಸಿ]

ಅಂಡಲುಸಿ ಲಿಪಿಯಲ್ಲಿ ಬರೆದಿರುವ 12ನೇ ಶತಮಾನದ ಕುರಾನ್‌ನ ಒಂದು ಪುಟ

ಇಸ್ಲಾಮಿಕ್ ಅಥವಾ ಅರೇಬಿಕ್ ಕ್ಯಾಲಿಗ್ರಫಿ(ಅರಬ್‌ನಲ್ಲಿ ಕ್ಯಾಲಿಗ್ರಫಿ ಗೆ ಖಾಟ್-ಉಲ್-ಯಾದ್ خط اليد) ಅರೇಬಿಕ್ ಕಲೆಯ ಅಂಶವಾಗಿದ್ದು,ಇಸ್ಲಾಂ ಧರ್ಮ ಮತ್ತು ಅರೇಬಿಕ್ ಭಾಷೆಯ ಜತೆಯಲ್ಲೇ ವಿಕಾಸಗೊಂಡಿದೆ.ಅರೇಬಿಕ್ ಕ್ಯಾಲಿಗ್ರಫಿಯು ರೇಖಾಚಿತ್ರಗಳ ಇಸ್ಲಾಮಿಕ್ ಕಲೆ ಅರಬೆಸ್ಕ್ ಜತೆ ಸಂಬಂಧ ಹೊಂದಿದೆ. ಈ ಕಲೆಯು ಮಸೀದಿಯ ಗೋಡೆ,ಮೇಲ್ಛಾವಣಿ ಮತ್ತು ಚರಿತ್ರೆಯ ದಾಖಲೆಗಳಲ್ಲಿ ಕಾಣಿಸಿಕೊಂಡಿವೆ. ಕ್ಯಾಲಿಗ್ರಫಿ ಕೆತ್ತನೆಗಳನ್ನು ಬಳಸಲು ಇಸ್ಲಾಮಿಕ್ ಜಗತ್ತಿನ ಸಮಕಾಲೀನ ಕಲಾವಿದರು ಕ್ಯಾಲಿಗ್ರಫಿಯ ಪರಂಪರೆಯಿಂದ ವಿಷಯಗಳನ್ನು ಎತ್ತಿಕೊಂಡರು.ಮಾತನಾಡುವ ಪದಕ್ಕೆ ಸಂಬಂಧಿಸಿದ್ದನ್ನು ನೆನಪಿಸಿಕೊಳ್ಳುವ ಬದಲಿಗೆ,ಮುಸ್ಲಿಮರಿಗೆ ಕ್ಯಾಲಿಗ್ರಫಿಯು ಎಲ್ಲ ಕಲೆಗಳಿಗಿಂತ ಉನ್ನತ ಆಧ್ಯಾತ್ಮಿಕ ಜಗತ್ತಿನ ಕಲೆಯ ಸ್ಪಷ್ಟ ಅಭಿವ್ಯಕ್ತಿಯಾಗಿದೆ. ಕ್ಯಾಲಿಗ್ರಫಿಯು ಇಸ್ಲಾಮಿಕ್ ಕಲೆಯ ಪೂರ್ಣ ಸ್ವರೂಪದ ವಿವರಗಳು ಚರ್ಚಾಸ್ಪದವಾಗಿವೆ. ಏಕೆಂದರೆ ಮುಸ್ಲಿಮರ ಭಾಷೆಗಳು ಮತ್ತು ಇಸ್ಲಾಂ ಧರ್ಮದ ನಡುವೆ ಅದು ಕೊಂಡಿ ಕಲ್ಪಿಸಿದೆ. ಇಸ್ಲಾಂ ಪವಿತ್ರ ಗ್ರಂಥ ಅಲ್-ಕುರಾನ್ ಅರೇಬಿಕ್ ಭಾಷೆಯ ವಿಕಾಸ ಮತ್ತು ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ.ಅದೇ ರೀತಿ ಅರೇಬಿಕ್ ವರ್ಣಮಾಲೆಯ ಕ್ಯಾಲಿಗ್ರಫಿ ಬೆಳವಣಿಗೆಯಲ್ಲಿ ಕೂಡ ತನ್ನ ಪಾಲು ಪಡೆದಿದೆ. ನಾಣ್ಣುಡಿಗಳು ಮತ್ತು ಕುರಾನ್ ಸಾಲುಗಳು ಇಸ್ಲಾಮಿಕ್ ಕ್ಯಾಲಿಗ್ರಫಿಗೆ ಈಗಲೂ ಮ‌ೂಲಗಳಾಗಿವೆ. ಅರಾಮೈಕ್ ಮತ್ತು ಹೆಬ್ರಿವ್ ವಿದ್ವಾಂಸರಲ್ಲಿ ಇಸ್ಲಾಮಿಕ್ ಧರ್ಮಕ್ಕೆ ಸಮಾನಾಂತರವಾದ,ಪ್ರಬಲ ಸಂಪ್ರದಾಯವಿತ್ತು. 9 ಆಗ 10ನೇ ಶತಮಾನದ ಹೊಸರೂಪದ ಹೆಬ್ರಿವ್ ಬೈಬಲ್‌ಗಳಲ್ಲದೇ ಮುಂತಾದ ಕೆಲಸಗಳಲ್ಲಿ ಇವು ಕಾಣಸಿಗುತ್ತವೆ.

ಮಾಯಾ ಕ್ಯಾಲಿಗ್ರಫಿ[ಬದಲಾಯಿಸಿ]

ಚಿತ್ರ:Dresden codex.jpg
ಅಮಾಟ್ಲ್ ಎಂದು ಕರೆಯುವ ಒಂದು ವಿಧದ ಕಾಗದದ ಮೇಲೆ ಮಾಯಾ ಲಿಪಿಯಲ್ಲಿ ಬರೆದಿರುವ ಡ್ರೆಸ್ಡೆನ್ ಕೋಡೆಕ್ಸ್‌ನ ಕರಪತ್ರ.ಸ್ಪಾನಿಷ್ ಆಕ್ರಮಣಕಾರರಿಂದ ತಪ್ಪಿಸಿಕೊಂಡು ಪ್ರಸಕ್ತ ದಿನದವರೆಗೆ ಉಳಿದುಕೊಂಡ ಡ್ರೆಸ್ಡನ್ಸ್ ಕೋಡೆಕ್ಸ್ ಮಾಯಾ ಕ್ಯಾಲಿಗ್ರಫಿಯ ಕೆಲವೇ ಉದಾಹರಣೆಗಳಲ್ಲಿ ಒಂದಾಗಿದೆ.

ಮಾಯಾ ಕ್ಯಾಲಿಗ್ರಫಿಯನ್ನು ಮಾಯಾ ಚಿತ್ರಲಿಪಿಗಳ ಮ‌ೂಲಕ ಅಭಿವ್ಯಕ್ತಿಸಲಾಗಿದೆ. ಆಧುನಿಕ ಕ್ಯಾಲಿಗ್ರಫಿಯನ್ನು ಮುಖ್ಯವಾಗಿ ಮುದ್ರೆಗಳು ಮತ್ತು ಮೆಕ್ಸಿಕೊದಲ್ಲಿ ಯುಕಾಟಾನ್ ಪರ್ಯಾಯದ್ವೀಪದ ಸ್ಮಾರಕಗಳಲ್ಲಿ ಬಳಸಲಾಗುತ್ತಿದೆ. ಮಾಯಾ ಚಿತ್ರಲಿಪಿಗಳನ್ನು ಸರ್ಕಾರಿ ಕಚೇರಿಗಳಲ್ಲಿ ಅಪರೂಪವಾಗಿ ಬಳಸಲಾಗುತ್ತಿದೆ. ಆದಾಗ್ಯೂ,ಕ್ಯಾಂಪೇಚೆ, ಯುಕಾಟಾನ್ ಮತ್ತು ಕ್ವಿಂಟಾನಾ ರೂನಲ್ಲಿ ಮಾಯಾ ಕ್ಯಾಲಿಗ್ರಫಿಯನ್ನು ಲ್ಯಾಟಿನ್ ಅಕ್ಷರಗಳಲ್ಲಿ ಬರೆಯಲಾಗಿದೆ. ದಕ್ಷಿಣ ಮೆಕ್ಸಿಕೊದ ಕೆಲವು ವಾಣಿಜ್ಯ ಕಂಪೆನಿಗಳು ಮಾಯಾ ಚಿತ್ರಲಿಪಿಗಳನ್ನು ತಮ್ಮ ವ್ಯವಹಾರದ ಚಿಹ್ನೆಗಳಾಗಿ ಬಳಸುತ್ತಿವೆ.(ಈಜಿಪ್ತ್ ನಲ್ಲಿ ಚಿತ್ರ ಸಂಕೇತಗಳ ಮೂಲಕ ಬರಹ ಶೈಲಿಗೆ ಮೆರಗು ನೀಡುತ್ತಿದ್ದರು) ಕೆಲವು ಸಮುದಾಯ ಸಂಸ್ಥೆಗಳು ಮತ್ತು ಆಧುನಿಕ ಮಾಯಾ ಸಹೋದರ ಬಳಗದವರು ತಮ್ಮ ಗುಂಪಿನ ಚಿಹ್ನೆಯಾಗಿ ಮಾಯಾ ಚಿತ್ರಲಿಪಿಯನ್ನು ಬಳಸುತ್ತಾರೆ.ಚಿಚೆನ್ ಇಟ್ಝಾ,ಲಬ್ನಾ, ಉಕ್ಸ್‌ಮಾಲ್,ಎಡ್ಜ್‌ನಾ, ಕಲಾಕ್ಮುಲ್ ಮುಂತಾದ ಮೆಕ್ಸಿಕೊದ ಬಹುತೇಕ ಪುರಾತತ್ವ ಕಟ್ಟಡಗಳಲ್ಲಿ ಚಿತ್ರಲಿಪಿಗಳಿವೆ. ಸ್ಟೀಲೆ ಎಂದು ಕೂಡ ಹೆಸರಾದ ಸಸ್ಯ ಕಾಂಡ ಮೂಲದಲ್ಲಿ ರಚಿಸಿದ ಸಂಕೇತಗಳು ಬಂಡೆಕಲ್ಲಿನ ಕೆತ್ತನೆಯ ಸ್ಮಾರಕ ಮತ್ತು ತಾರಸಿಗಳ ಮೇಲಿನ ಪ್ರಾಚೀನ ಮಾಯಾ ಕ್ಯಾಲಿಗ್ರಫಿಯ ಸಾಮಾನ್ಯ ಮ‌ೂಲಗಳಾಗಿವೆ.

ಸಾಧನಗಳು(ಪರಿಕರಗಳು)[ಬದಲಾಯಿಸಿ]

ಅಂದದ ಶೈಲಿಯ ಬರಹಗಾರನಿಗೆ ಪ್ರಮುಖ ಸಾಧನಗಳು ಚಪ್ಪಟೆ ಅಥವಾ ಗುಂಡಗಿನ ಮೊನೆಯ ಪೆನ್ ಮತ್ತು ಕುಂಚ(ರೀವ್ಸ್ ಮತ್ತು ಸ್ಕುಲ್ಟೆ 2006; ಚೈಲ್ಡ್ 1985; ಲ್ಯಾಂಬ್ 1956). ಕೆಲವು ಅಲಂಕಾರದ ಶೈಲಿಯ ಉದ್ದೇಶಗಳಿಗಾಗಿ ಬಹು ಮೊನೆಯ ಪೆನ್‌‌ಗಳು-ಉಕ್ಕಿನ ಕುಂಚಗಳನ್ನು ಬಳಸಬಹುದು. ಆದಾಗ್ಯೂ, ಗುರುತು ಮಾಡುವ ಪೆನ್ ಮತ್ತು ಬಾಲ್‌ಪಾಯಿಂಟ್ ಪೆನ್‌ಗಳನ್ನು ಕೂಡ ಕ್ಯಾಲಿಗ್ರಫಿ ಕೆಲಸಗಳಿಗೆ ಬಳಸಲಾಗಿದೆ. ಆದರೆ ಇಲ್ಲಿ ಕೋನಾಕೃತಿಯ ಗೆರೆಗಳನ್ನು ಅಳವಡಿಸಿಲ್ಲ. ಬರವಣಿಗೆಯ ಶಾಯಿ ಸಾಮಾನ್ಯವಾಗಿ ನೀರಿನ ‌ಮೂಲದ್ದಾಗಿದ್ದು, ಮುದ್ರಣದಲ್ಲಿ ಬಳಸುವ ತೈಲಮ‌ೂಲದ ಶಾಯಿಗಿಂತ ಕಡಿಮೆ ಜಾರಿಕೆಯ ಗುಣಯುಳ್ಳದ್ದಾಗಿದೆ. ರಂದ್ರ ಸಾಂದ್ರತೆಯ ಉತ್ತಮ ಗುಣಮಟ್ಟದ ಕಾಗದದಲ್ಲಿ ಸ್ಪಷ್ಟಗೆರೆಗಳನ್ನು ಎಳೆಯಲು ಸಾಧ್ಯವಾಗುತ್ತದೆ.[ಸೂಕ್ತ ಉಲ್ಲೇಖನ ಬೇಕು] ತೆಳು ಚರ್ಮದಂತೆ ಕಾಣುವ ಪಾರ್ಚ್‌ಮೆಂಟ್(ಕುರಿ ಚರ್ಮ ಹೋಲುವ ಕಾಗದ) ಅಥವಾ ವೆಲ್ಲಂ ನ್ನು(ಚರ್ಮದಂತೆ ನುಣುಪಾಗಿರುವ ಕಾಗದ) ಅಲ್ಲಲ್ಲಿ ಬಳಸಲಾಗಿದೆ. ಅವುಗಳ ಮೇಲಿನ ಬರಹ ಅಳಿಸಲು ಅದನ್ನು ಚೂರಿಯಂತೆ ಬಳಸಬಹುದಾಗಿದೆ. ಗೆರೆಗಳು ಹಾದುಹೋಗಲು ಅವಕಾಶ ನೀಡುವ ಮತ್ತು ಅಕ್ಷರಗಳನ್ನು ಸ್ಫುಟಗೊಳಿಸುವ ಪ್ರಕಾಶಮಾನ ಪೆಟ್ಟಿಗೆಯ ಅಗತ್ಯವಿರುವುದಿಲ್ಲ. ಇದರ ಜತೆಗೆ,ಪ್ರಕಾಶಮಾನ ಪೆಟ್ಟಿಗೆ ಮತ್ತು ಪಡಿಯಚ್ಚು(ಟೆಂಪ್ಲೇಟ್)ಗಳನ್ನು ಪೆನ್ಸಿಲ್ ಗುರುತುಗಳಿಲ್ಲದೇ ನೇರ ಗೆರೆಎಳೆದು ನಿಖರ ಕಾರ್ಯ ದಕ್ಷತೆಗಾಗಿ ಬಳಸಲಾಗುತ್ತದೆ. ಪ್ರಕಾಶಮಾನ ಪೆಟ್ಟಿಗೆ ಅಥವಾ ನೇರಬಳಕೆಯಲ್ಲಿ ಗೆರೆಯುಳ್ಳ ಕಾಗದದಲ್ಲಿ ಅನೇಕ ಬಾರಿ ಪ್ರತಿ ಕಾಲುಭಾಗ ಅಥವಾ ಅರ್ಧ ಅಂಗುಲದ ಗೆರೆಗಳಿರುತ್ತವೆ. ಆದರೂ ಅಂಗುಲದ ಅಂತರಗಳ ಕಾಗದವನ್ನು ವಿರಳವಾಗಿ ಬಳಸಲಾಗಿದೆ. ಲಿಟ್ಟೇರಿಯ ಅನ್ಸಿಯಲ್ಸ್ ಮುಂತಾದವು(ಅದಕ್ಕಾಗಿ ಆ ಹೆಸರು) ಕಾಲೇಜಿನಲ್ಲಿ ಬಳಸುವ ಗೆರೆಯ ಕಾಗದ ಆಗಾಗ್ಗೆ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತದೆ.[೭]

ಇದನ್ನೂ ನೋಡಿರಿ[ಬದಲಾಯಿಸಿ]

ಟಿಪ್ಪಣಿಗಳು[ಬದಲಾಯಿಸಿ]

 1. V. ಸಬಾರ್ಡ್, V. ಜೀನ್‌ಸ್ಲೆ, L. ರೆಬಾನಾ, ಕ್ಯಾಲಿಗ್ರಫಿ ಲ್ಯಾಟೈನ್, ಇನಿಷಿಯೇಷನ್ , ಇಡಿ. ಫ್ಲೂರಸ್, ಪ್ಯಾರಿಸ್,೭ ಎಡಿಷನ್,೨೦೦೪, ಪೇಜಸ್ 8 ಟು 11.
 2. ಪ್ಯಾಟ್ರಿಸಿಯ ಲೊವೆಟ್ ಕ್ಯಾಲಿಗ್ರಫಿ ಅಂಡ್ ಇಲ್ಯುಮಿನೇಷನ್ ಅಬ್ರಾಮ್ಸ್ 2000, p.72
 3. ಪ್ಯಾಟ್ರಿಸಿಯ ಲೊವೆಟ್. ಕ್ಯಾಲಿಗ್ರಫಿ ಅಂಡ್ ಇಲ್ಯುಮಿನೇಷನ್ ಅಬ್ರಾಮ್ಸ್ 2000, p.141
 4. Fazzioli, Edoardo (1987) [1987]. Chinese calligraphy : from pictograph to ideogram : the history of 214 essential Chinese/Japanese characters. calligraphy by Rebecca Hon Ko. New York: Abbeville Press. p. 13. ISBN 0896597741. And so the first Chinese dictionary was born, the Sān Chāng, containing ೩,೩೦೦ characters
 5. ೫.೦ ೫.೧ ೫.೨ ೫.೩ ೫.೪ ಬ್ಲಾಕ್ನಿ, p6 : R. B. Blakney (2007). A Course in the Analysis of Chinese Characters. Lulu.com. p. 148. ISBN 1897367112, 9781897367117. {{cite book}}: Check |isbn= value: invalid character (help)
 6. 康熙字典 ಕಾಂಗ್ಸಿ ಜಿಡಿಯನ್, 1716. ಸ್ಕ್ಯಾನ್ ಮಾಡಿದ ಆವೃತ್ತಿ www.kangxizidian.com. ನಲ್ಲಿ ಸಿಗುತ್ತದೆ. ಉದಾಹರಣೆಗೆ ದಿ ರ‌್ಯಾಡಿಕಲ್ಸ್ ನೋಡಿ , or 广, p.41. ಆ ಅಕ್ಷರಗಳಿಗೆ 2007 ಸಾಮಾನ್ಯ ರೂಪದ ಅಕ್ಷರಶ್ರೇಣಿಯನ್ನು ಸ್ಪಷ್ಟವಾಗಿ ತೋರಿಸುವುದಿಲ್ಲ. ಆದರೆ ಕಾಂಗ್ಸಿ ಜಿಡಿಯನ್ p.41ರಲ್ಲಿ ಗೋಚರಿಸುವ ಹಳೆಯ ಆವೃತ್ತಿಗಳು ಸ್ಪಷ್ಟವಾಗಿ ನಿರ್ಧರಿಸಬೇಕಾದ ಅಕ್ಷರ ಶ್ರೇಣಿಯನ್ನು ತೋರಿಸುತ್ತದೆ.
 7. "ಕ್ಯಾಲಿಗ್ರಫಿ ಇಸ್ಲಾಮಿಕ್ ವೆಬ್‌ಸೈಟ್". Archived from the original on 2012-06-08. Retrieved 2010-01-07.

ಉಲ್ಲೇಖಗಳು[ಬದಲಾಯಿಸಿ]

ಆಯಾ ಲೇಖನಗಳನ್ನು ನೋಡಿ

 • Anderson, D. M. (2008), Indic calligraphy, Encyclopedia Britannica 2008.
 • ಬ್ರೌನ್, M.P.2004) ಪೇಂಟೆಡ್ ಲ್ಯಾಬ್ರಿಂಥ್: ದಿ ವಲ್ಡ್ ಆಫ್ ದಿ ಲಿಂಡಿಸ್‌ಫಾರ್ನೆ ಗಾಸ್ಪೆಲ್. ಪರಿಷ್ಕೃತ ಆವೃತ್ತಿ. ಬ್ರಿಟಿಷ್ ಲೈಬ್ರರಿ.
 • ಚೈಲ್ಡ್, H. ed. (1985)ಕ್ಯಾಲಿಗ್ರಾಫರ್ಸ್ ಹ್ಯಾಂಡ್‌ಬುಕ್ ಟಾಪ್ಲಿಂಗರ್ ಪಬ್ಲಿಷಿಂಗ್ ಕಂ.
 • ಡಿರಿಂಜರ್, D.(1968) ದಿ ಆಲ್ಫಾಬೆಟ್: ಎ ಕಿ ಟು ದಿ ಹಿಸ್ಟರಿ ಆಫ್ ಮ್ಯಾನ್‌ಕೈಂಡ್ ಮ‌ೂರನೇ ಆವೃತ್ತಿ. ಸಂಪುಟ 1 ಹುಚಿಸನ್ & ಕಂ. ಲಂಡನ್
 • ಎರೇಸರ್,M.,& ಕ್ವಿಯಾಟೋವ್ಸ್‌ಕಿ,W(2006) ಇಂಕ್ ಅಂಡ್ ಗೋಲ್ಡ್: ಇಸ್ಲಾಮಿಕ್ ಕ್ಯಾಲಿಗ್ರಫಿ
ಸ್ಯಾಂ ಫಾಗ್ ಲಿಮಿಟೆಡ್. ಲಂಡನ್
 • ಗೆಡ್ಡೇಸ್, A., & ಡಿಯಾನ್,C. (2004)ಮಿರಾಕಲ್: ಹೊಸ ಜೀವನದ ಸಂಭ್ರಮಾಚರಣೆ ಪೋಟೊಜೆನಿಕ್ ಪಬ್ಲಿಷರ್ಸ್ ಆಕ್ಲೆಂಡ್
 • ಹೆನ್ನಿಂಗ್, W.E. (2002)ಆನ್ ಎಲಿಗೆಂಟ್ ಹ್ಯಾಂಡ್ :ಅಮೆರಿಕನ್ ಲೇಖನಕೌಶಲ್ಯ ಮತ್ತು ಕ್ಯಾಪಿಗ್ರಫಿ ಇಡಿ. ಮೆಲ್ಜರ್, P. ಓಕ್ ನಾಲ್ ಪ್ರೆಸ್ ನ್ಯೂ ಕ್ಯಾಸಲ್, ಡೆಲಾವೇರ್
 • ಜಾನ್‌ಸ್ಟನ್, E.(1909) ಮ್ಯಾನ್ಯುಸ್ಕ್ರಿಪ್ಟ್ & ಇನ್‌ಸ್ಕ್ರಿಪ್ಶನ್ ಲೆಟರ್ಸ್: ಶಾಲೆಗಳಿಗೆ ಮತ್ತು ತರಗತಿಗಳಿಗೆ ಮತ್ತು ಪ್ಲೇಟ್ 6 ಕೈಕಸಬುದಾರರ ಬಳಕೆಗೆ. ಸ್ಯಾನ್ ವೀಟೊ ಪ್ರೆಸ್ & ಡಬಲ್ ಎಲಿಫೆಂಟ್ ಪ್ರೆಸ್ 10th ಇಂಪ್ರೆಷನ್
 • ಲ್ಯಾಂಬ್, C.M. ed. (1956) ಕ್ಯಾಲಿಗ್ರಾಫರ್ಸ್ ಕೈಪಿಡಿ. ಪೆಂಟಾಲಿಕ್ 1976 ed.
 • ಲೆಟರ್ ಆರ್ಟ್ಸ್ ರಿವ್ಯೂ
 • ಮೆಡಿಯವಿಲ್ಲ, ಕ್ಲಾಡೆ (2006) ಹಿಸ್ಟರಿ ಡೆ ಲಾ ಕ್ಯಾಲಿಗ್ರಫಿ ಫ್ರಾಂಕೈಸ್ ಅಲ್ಬಿನ್ ಮಿಚೆಲ್, ಫ್ರಾನ್ಸ್
 • ಮೆಡಿಯವಿಲ್ಲ C. (1996) ಕ್ಯಾಲಿಗ್ರಫಿ ಸ್ಕಿರ್ಪಸ್ ಪಬ್ಲಿಕೇಷನ್ಸ್
 • ಪಾಟ್, G. (2006)ಕ್ಯಾಲಿಗ್ರಫೀ:ಇಂಟೆನ್ಸಿವ್ ಟ್ರೇನಿಂಗ್ ವರ್ಲಾಗ್ ಹರ್ಮನ್ ಸ್ಕಿಮಿಡ್ ಮೇಂಜ್
 • ಪಾಟ್, G. (2005)ಕ್ಯಾಲಿಗ್ರಫಿ :ಎರ್ಸ್ಟೆ ಹಿಲ್ಫೆ ಅಂಡ್ ಸ್ಕ್ರಿಫ್ಟ್-ಟ್ರೇನಿಂಗ್ ಮಿಟ್ ಮಸ್ಟರ್-ಆಲ್ಫಾಬಿಟನ್ ವರ್ಲಾಗ್ ಹರ್ಮನ್ ಸ್ಕಿಮಿಡ್ ಮೇಂಜ್
 • ಪ್ರಾಫ್ಫೆ, J. (2005)ಸ್ಕ್ರೈಬ್‌ಕುನ್ಸ್ಟ್‌ರಾಮ್:ಕ್ಯಾಲಿಗ್ರಫಿ ಇಮ್ ರಾಮ್ ವರ್ಲಾಗ್ ಜಾರ್ಜ್ D.W. ಕಾಲ್‌ವೇ GmbH & Co.K.G. ಮ್ಯೂನಿಚ್
 • ರೀವ್ಸ್, M., & ಸ್ಕಲ್ಟೆ, E.(2006)ಬ್ರಷ್ ಲೆಟರಿಂಗ್:ಪಾಶ್ಚಿಮಾತ್ಯ ಕುಂಚ ಕ್ಯಾಲಿಗ್ರಫಿಯಲ್ಲಿ ಸಲಹಾ ಕೈಪಿಡಿ, ರಿವೈಸ್ಡ್ ಎಡಿಷನ್, ಡಿಸೈನ್ ಬುಕ್ಸ್ ನ್ಯೂಯಾರ್ಕ್.
 • ಝಾಪ್, H. (2007) ಆಲ್ಫಾಬೆಟ್ ಸ್ಟೋರೀಸ್ :ತಾಂತ್ರಿಕ ಬೆಳವಣಿಗಗಳ ಚರಿತ್ರೆ, ಕ್ಯಾರಿಗ್ರಾಫಿಕ್ ಆರ್ಟ್ಸ್ ಪ್ರೆಸ್, ರೋಚೆಸ್ಟರ್, ನ್ಯೂಯಾರ್ಕ್
 • ಝಾಪ್ಫ್, H. (2006)ದಿ ವರ್ಲ್ಡ್ ಆಫ್ ಆಲ್ಫಾಬೆಟ್ಸ್ : ಚಿತ್ರಗಳು ಮತ್ತು ಅಕ್ಷರರೂಪಗಳ ಚಿತ್ರದರ್ಶಿಕೆ,CD-ROM
 • ಮಾರ್ನ್ಸ್,F.A (2002)ವೇರಿಯನ್ ಕಾಪರ್‌ಪ್ಲೇಟ್ ಅಂಡ್ ಫಾರ್ಮ್, ಲಂಡನ್

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಆಧುನಿಕ ಇರಾನಿನ ಕ್ಯಾಲಿಗ್ರಫಿ[ಬದಲಾಯಿಸಿ]

ModernCalligraphy.com

ಚೀನಾದ (ಕುಂಚ)ಕ್ಯಾಲಿಗ್ರಫಿ[ಬದಲಾಯಿಸಿ]

ಪಾಶ್ಚಿಮಾತ್ಯ ಕ್ಯಾಲಿಗ್ರಫಿ[ಬದಲಾಯಿಸಿ]

ಇಸ್ಲಾಮಿಕ್ ಕ್ಯಾಲಿಗ್ರಫಿ[ಬದಲಾಯಿಸಿ]

ಇತರೆ ಲಿಪಿಗಳ ಕ್ಯಾಲಿಗ್ರಫಿ[ಬದಲಾಯಿಸಿ]

ಜಪಾನೀಸ್ ಕ್ಯಾಲಿಗ್ರಫಿ[ಬದಲಾಯಿಸಿ]

ಕ್ಯಾಲಿಗ್ರಫಿ ವಸ್ತುಸಂಗ್ರಹಾಲಯಗಳು[ಬದಲಾಯಿಸಿ]

ವಿಶ್ವ ಕ್ಯಾಲಿಗ್ರಫಿ ಸಂಸ್ಥೆಗಳು[ಬದಲಾಯಿಸಿ]

ಅಂತಾರಾಷ್ಟ್ರೀಯ ಸ್ಪರ್ಧೆಗಳು[ಬದಲಾಯಿಸಿ]