ವಿಷಯಕ್ಕೆ ಹೋಗು

ಕೆತ್ತನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದಿಲ್ವಾರಾ ಜೈನ್ ದೇವಸ್ಥಾನಗಳ ಒಳತಾರಸಿಯ ಕೆತ್ತನೆ ಕೆಲಸ

ಕೆತ್ತನೆ ಎಂದರೆ ಮೂಲವಸ್ತುವಿನಿಂದ ಭಾಗಗಳನ್ನು ಹೆರೆದು/ಕೆತ್ತುವ ಮೂಲಕ ಆ ಮೂಲವಸ್ತುವಿನಿಂದ ಯಾವುದಕ್ಕಾದರೂ ಆಕಾರ ಕೊಡಲು ಉಪಕರಣಗಳನ್ನು ಬಳಸುವ ಕ್ರಿಯೆ. ಅದರಿಂದ ಚೂರುಗಳನ್ನು ತೆಗೆದಾಗ ಕೂಡ ಒಂದು ರೂಪವನ್ನು ಹಿಡಿದಿಡಲು ಸಾಕಷ್ಟು ಗಟ್ಟಿಯಾಗಿರುವ, ಅದೇ ಸಮಯಕ್ಕೆ ಲಭ್ಯವಾದ ಉಪಕರಣಗಳಿಂದ ಅದರ ಭಾಗಗಳನ್ನು ಕೆತ್ತುವಷ್ಟು ಮೃದುವಾದ ಯಾವುದೇ ಮೂಲವಸ್ತುವಿಗೆ ಈ ತಂತ್ರವನ್ನು ಅನ್ವಯಿಸಬಹುದು. ಶಿಲ್ಪವನ್ನು ತಯಾರಿಸುವ ಸಾಧನವಾಗಿ ಕೆತ್ತನೆಯು ಜೇಡಿಮಣ್ಣು, ಹಣ್ಣು, ಮತ್ತು ಕರಗಿಸಿದ ಗಾಜಿನಂತಹ ಮೃದು ಮತ್ತು ಬಡಿದು ತಗಡಾಗಿಸಬಲ್ಲ ವಸ್ತುಗಳನ್ನು ಬಳಸುವ ವಿಧಾನಗಳಿಂದ ಭಿನ್ನವಾಗಿದೆ. ಮೃದುವಾಗಿದ್ದಾಗ ಇವುಗಳಿಗೆ ಅಪೇಕ್ಷಿತ ರೂಪದ ಆಕಾರ ಕೊಡಬಹುದು ಮತ್ತು ನಂತರ ಆ ರೂಪದಲ್ಲಿ ಅವುಗಳನ್ನು ಗಟ್ಟಿಯಾಗಿಸಬಹುದು. ಬಡಿದು ತಗಡಾಗಿಸಬಲ್ಲ ವಸ್ತುಗಳನ್ನು ಬಳಸುವ ವಿಧಾನಗಳಿಗಿಂತ ಕೆತ್ತನೆಗೆ ಮತ್ತಷ್ಟು ಹೆಚ್ಚು ಕೆಲಸ ಬೇಕಾಗುವ ಸಾಧ್ಯತೆಯಿರುತ್ತದೆ.[]

ಕೆತ್ತನೆಯ ಬಗೆಗಳಲ್ಲಿ ಮೂಳೆ ಕೆತ್ತನೆ, ಬಿಲ್ಲೆ ಕೆತ್ತನೆ, ಹಣ್ಣು ಕೆತ್ತನೆ, ಹಾಲುಗುಂಬಳ ಕೆತ್ತನೆ, ಹಿಮ ಕೆತ್ತನೆ, ದಂತ ಕೆತ್ತನೆ, ಕಲ್ಲು ಕೆತ್ತನೆ (ಕಲ್ಲುಕೊರೆತ), ತರಕಾರಿ ಕೆತ್ತನೆ, ದಾರು ಕೆತ್ತನೆ, ನಾಣ್ಯ ಕೆತ್ತನೆ, ಮರ ಕೆತ್ತನೆ ಸೇರಿವೆ.

ಉಲ್ಲೇಖಗಳು

[ಬದಲಾಯಿಸಿ]
  1. Daniel Marcus Mendelowitz, Children Are Artists: An Introduction to Children's Art for Teachers and Parents (1953), p. 136.


"https://kn.wikipedia.org/w/index.php?title=ಕೆತ್ತನೆ&oldid=866623" ಇಂದ ಪಡೆಯಲ್ಪಟ್ಟಿದೆ