ವಿಷಯಕ್ಕೆ ಹೋಗು

ಮುದ್ರಣಕಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
{{{1}}}
ಮುದ್ರಣಕಲೆ
Punctuation
apostrophe ( ’ ' )
brackets ( [ ], ( ), { }, ⟨ ⟩ )
colon ( : )
comma ( , ، 、 )
dash ( , –, —, ― )
ellipsis ( …, ..., . . . )
exclamation mark ( ! )
full stop / period ( . )
hyphen ( )
hyphen-minus ( - )
question mark ( ? )
quotation marks ( ‘ ’, “ ”, ' ', " " )
semicolon ( ; )
slash / stroke / solidus ( /,  ⁄  )
Word dividers
interpunct ( · )
space ( ) ( ) ( )
General typography
ampersand ( & )
asterisk ( * )
at sign ( @ )
backslash ( \ )
bullet ( )
caret ( ^ )
dagger ( †, ‡ )
degree ( ° )
ditto mark ( )
inverted exclamation mark ( ¡ )
inverted question mark ( ¿ )
number sign / pound / hash ( # )
numero sign ( )
obelus ( ÷ )
ordinal indicator ( º, ª )
percent, per mil ( %, ‰ )
plus and minus ( + − )
basis point ( )
pilcrow ( )
prime ( ′, ″, ‴ )
section sign ( § )
tilde ( ~ )
underscore / understrike ( _ )
vertical bar / broken bar / pipe ( ¦, | )
Intellectual property
copyright symbol ( © )
registered trademark ( ® )
service mark ( )
sound recording copyright ( )
trademark ( )
Currency
currency (generic) ( ¤ )
currency (specific)
( ฿ ¢ $ ƒ £ ¥ )
Uncommon typography
asterism ( )
hedera ( )
index / fist ( )
interrobang ( )
irony punctuation ( )
lozenge ( )
reference mark ( )
tie ( )
Related
diacritical marks
logic symbols
whitespace characters
non-English quotation style ( « », „ ” )
In other scripts
Chinese punctuation
Hebrew punctuation
Japanese punctuation
Korean punctuation

ಮುದ್ರಣಕಲೆ ಯು ಅಚ್ಚುಗಳನ್ನು ಜೊಡಿಸುವ, ಅಚ್ಚುಗಳನ್ನು ವಿನ್ಯಾಸಿಸುವ, ಮತ್ತು ಅಚ್ಚುಗಳ ಗ್ಲೈಫ್‌ಗಳನ್ನು ತಿದ್ದುವ ಒಂದು ಕಲೆ ಮತ್ತು ತಂತ್ರ. ಅಚ್ಚುಗಳ ಗ್ಲೈಫ್‌ಗಳನ್ನು ವಿವಿಧ ರೇಖಾಚಿತ್ರ ತಂತ್ರಗಳಿಂದ ತಯಾರಿಸಿ ತಿದ್ದುಪಡಿಸಲಾಗಿದೆ. ಅಚ್ಚುಗಳ ಜೊಡಣೆಯು ಅಚ್ಚಿನಕ್ಷರದ ನಮೂನೆಗಳ ಆಯ್ಕೆ, ಪಾಯಿಂಟ್‌ನ ಗಾತ್ರ, ಪಂಕ್ತಿಯ ಉದ್ದ, ಲೀಡಿಂಗ್‌ (ಪಂಕ್ತಿಯನ್ನು ಅಂತರಿಸುವುದು), ಅಕ್ಷರಗಳ ಗುಂಪುಗಳ ನಡುವೆ ಅಂತರಗಳ ಹೊಂದಾಣಿಕೆ ( ಟ್ರ್ಯಾಕಿಂಗ್ ), ಮತ್ತು ಅಕ್ಷರಗಳ ಜೋಡಿಗಳ ನಡುವೆ ಅಂತರಗಳ ಹೊಂದಾಣಿಕೆ (ಕೆರ್ನಿಂಗ್‌)[] ಗಳನ್ನು ಒಳಗೊಂಡಿದೆ.[]

ಮುದ್ರಣಕಲೆಯು ಅಚ್ಚುಮೊಳೆಗಳನ್ನು ತಯಾರಿಸುವವರು, ಅಚ್ಚುಮೊಳೆಗಳನ್ನು ಜೊಡಿಸುವವರು, ಮುದ್ರಣಕಲೆಗಾರರು, ಗ್ರಾಫಿಕ್ ವಿನ್ಯಾಸಕರು, ಕಲಾ ನಿರ್ದೇಶಕರು, ಹಾಸ್ಯ ಪುಸ್ತಕಗಳ ಕಲೆಗಾರರು, ಗೀಚುಬರಹ ಕಲೆಗಾರರು, ಮತ್ತು ಗುಮಾಸ್ತಕೆಲಸಗಾರರಿಂದ ಕಾರ್ಯರೂಪದಲ್ಲಿ ತರಲಾಗಿದೆ. ಡಿಜಿಟಲ್ ಕಾಲದವರೆಗೂ ಮುದ್ರಣಕಲೆಯು ಒಂದು ವಿಶೇಷ ವೃತ್ತಿಯಾಗಿತ್ತು. ಡಿಜಿಟೈಜೇಷನ್‌ ದೃಷ್ಟಿ ವಿನ್ಯಾಸಕರ ಮತ್ತು ಲೇಖನ ಬಳಕೆದಾರರ ಹೊಸ ಪೀಳಿಗೆಗೆ ಮುದ್ರಣಕಲೆಯನ್ನು ಪರಿಚಯಿಸಿತು.

ಶಬ್ದ ನಿಷ್ಪತ್ತಿ

[ಬದಲಾಯಿಸಿ]

ಮುದ್ರಣಕಲೆಯು ಗ್ರೀಕ್ ಪದಗಳು τύπος ಟೈಪೊಸ್ "ಗುರುತು, ಚಿತ್ರ" ಮತ್ತು γράφωಗ್ರಾಫೊ "ನಾನು ಬರೆಯುತ್ತೇನೆ" ಯಿಂದ ಬಂದಿದೆ.

ಇತಿಹಾಸ

[ಬದಲಾಯಿಸಿ]

ಮುದ್ರಣಕಲೆಯು ಆದಿ ಕಾಲದಲ್ಲಿ ಮುದ್ರಿಕೆಗಳನ್ನು ಮತ್ತು ನಾಣ್ಯಗಳನ್ನು ಮಾಡಲು ಉಪಯೊಗಿಸುತ್ತಿದ್ದ ಮೊದಲ ರಂದ್ರಗಳಲ್ಲಿ ಮತ್ತು ಡೈಗಳಲ್ಲಿ ತನ್ನ ಮೂಲವನ್ನು ಶೋಧಿಸುತ್ತದೆ. ಮುದ್ರಣಕಲೆಯ ಸಿದ್ಧಾಂತ, ಅದು ಒಂದೇ ಮಾದರಿಯ ಅಕ್ಷರಗಳ ಮರುಪಯೋಗದಿಂದ ಒಂದು ಪೂರ್ಣ ಮೂಲಗ್ರಂಥ ನಿರ್ಮಾಣ,ಮೊದಲಬಾರಿಗೆ ಫೈಸ್‌ಟೊಸ್ ಡಿಸ್ಕ್, ಗ್ರೀಸ್‌ನ, 0}ಕ್ರೇಟ್ನಿಂದ, ಒಂದು ನಿಗೂಢ ಮಿನೋನ್ಎಂಬ ಮುದ್ರಣ ವಸ್ತುವಿನಲ್ಲಿ ಕಂಡು ಬಂತು. ಇದನ್ನು 1850 ಮತ್ತು 1600 BCರ ನಡುವೆ ಮುದ್ರಿಸಲಾಗಿದೆ.[][][] ರೋಮನ್ ಸೀಸದ ಕೊಳವಿಗಳ ಮೇಲಿನ ಲಿಪಿಗಳು ಚಲಿಸಲಾಗುವ ಮುದ್ರಣ ಅಚ್ಚುಗಳಿಂದ[] ತಯಾರಿಸಲ್ಪಟ್ಟಿದೆ ಎಂದು ಹೇಳಲಾಗಿತ್ತು, ಆದರೆ ಇತ್ತೀಚೆಗೆ ಈ ವಿಚಾರವನ್ನು ಜರ್ಮನ್ ಮುದ್ರಣಕಲೆಗಾರರು ಹೆರ್‌ಬರ್ಟ್ ಬ್ರೆಕ್ಲೆ ತಳ್ಳಿಹಾಕಿದ್ದಾರೆ.[]

ಮುದ್ರಣ ವ್ಯಕ್ತಿತ್ವದ ಅತ್ಯಾವಶ್ಯಕ ಮಟ್ಟವನ್ನು ಲ್ಯಾಟಿನ್ನ್ 1119ರ ಪ್ರೂಫೆನಿಂಗ್ ಅಬ್ಬೇ ಲಿಪಿಯಂತಹ ಮಧ್ಯಯುಗದ ಅಚ್ಚು ಕೃತಿಗಳು ಪೂರ್ತಿಮಾಡಿತು. ಫೈಸ್‌ಟೋಸ್ ಡಿಸ್ಕ್‌ಅನ್ನು ತಯಾರಿಸಲು ಉಪಯೊಗಿಸಿದ ತಂತ್ರದಿಂದ ಇದನ್ನೂ ತಯಾರಿಸಲಾಯಿತು.[] ಉತ್ತರ ದಿಕ್ಕಿನ ಇಟಲಿಯ ನಗರವಾದ ಸಿವಿಡೇಲ್‌ನಲ್ಲಿ, ca. 1200 ಕಾಲದ ಒಂದು ವೆನೆಶಿಯದ ಬೆಳ್ಳಿಯ ರೀಟೇಬಲ್ (ಕಪಾಟು) ಇದೆ. ಅದನ್ನು ಪ್ರತ್ಯೇಕ ಅಕ್ಷರಗಳ ರಂಧ್ರಗಳಿಂದ ಮುದ್ರಣಮಾಡಲಾಗಿದೆ.[] ಅದೇ ರೀತಿಯ ಮುದ್ರಣ ತಂತ್ರವನ್ನು 10ನೇ ಮತ್ತು 12ನೇ ಶತಮಾನದ ಬೈಝಾನ್‌ಟೈನ್ ಸ್ಟೌರೊಥೆಕ ಮತ್ತು ಲಿಪ್‌ಸನೊಥೆಕದಲ್ಲಿ ಕಾಣಬಹುದು.[] ಏಕ ಅಕ್ಷರಗಳ ಹೆಂಚುಗಳನ್ನು ಬೇಕಾದ ರೀತಿಯಲ್ಲಿ ಜೋಡಿಸಿ ಪದಗಳ ರಚನೆಮಾಡುವ ಪದ್ಧತಿಯು ಮಧ್ಯಾಂತರ ಉತ್ತರ ಯುರೋಪ್‌ನಲ್ಲಿ ಸುಮಾರಾಗಿ ವಿಶಾಲವಾಗಿ ಹರಡಿತ್ತು.[೧೦]

ಯಾಂತ್ರಿಕ ಮುದ್ರಣಾಲಯದ ಜೊತೆಗೆ, ಆಧುನಿಕ ಚಲಿಸಲಾಗುವ ಅಚ್ಚುಗಳನ್ನು, 15ನೇ ಶತಮಾನದ ಮಧ್ಯದಲ್ಲಿ ಯುರೋಪಿನ ಜೆರ್ಮನ್ ಅಕ್ಕಸಾಲಿಗನಾದ ಜೊಹನ್ನೆಸ್ ಗುಟೆನ್ಬೆರ್ಗ್ ಕಂಡುಹಿಡಿದರು.[೧೧] ಸೀಸ ಆಧಾರಿತ ಲೋಹಮಿಶ್ರದ ಅವನ ಅಚ್ಚುಗಳು ಮುದ್ರಣ ಕಾರ್ಯಕ್ಕೆ ಎಷ್ಟು ಚೆನ್ನಾಗಿ ಹೊಂದಿಕೊಂಡಿವೆಯೆಂದರೆ, ಆ ಲೋಹಮಿಶ್ರಣವು ಇವತ್ತಿಗೂ ಉಪಯೋಗದಲ್ಲಿದೆ.[೧೨] ಅಚ್ಚು ಪುಸ್ತಕಗಳನ್ನು ಹೆಚ್ಚು ಸಂಖ್ಯೆಯಲ್ಲಿ ಮುದ್ರಣಮಾಡಲು ಹೇರಳವಾಗಿ ಬೇಕಾಗುವ ಎರಕ ಹೊಯ್ಯವುದರ ಮತ್ತು ಅಗ್ಗವಾದ ಅಕ್ಷರ ರಂಧ್ರಗಳಪ್ರತಿಗಳ ಜೋಡಣೆಯ ವಿಶೇಷ ತಂತ್ರವನ್ನು ಗುಟೆನ್‌ಬರ್ಗ್ ತಯಾರಿಸಿದನು; ಈ ತಾಂತ್ರಿಕ ಭೋಧನೆಯು, ಹೆಚ್ಚೂ ಕಡಿಮೆ ತಕ್ಷಣವೇ ಆರಂಭವಾದ ಮುದ್ರಣ ಚಳುವಳಿಯ ಯಶಸ್ಸಿಗೆ ಕಾರಣವಾಯಿತು.

ಚಲಿಸಲಾಗುವ ಅಚ್ಚುಗಳನ್ನೊಳಗೊಂಡ ಮುದ್ರಣಕಲೆಯನ್ನು ಪ್ರತ್ಯೇಕವಾಗಿ 11ನೇ ಶತಮಾನದಲ್ಲಿ ಚೈನಾದಲ್ಲಿ ಕಂಡುಹಿಡಿಯಲಾಯಿತು. ಗೊರ್‌ಯೊ ರಾಜವಂಶದ ಕಾಲದಲ್ಲಿ ಲೋಹದ ಅಚ್ಚನ್ನು ಮೊದಲಬಾರಿಗೆ ಕೊರಿಯಾದಲ್ಲಿ ಸುಮಾರು 1230ರಲ್ಲಿ ಕಂಡುಹಿಡಿಯಲಾಯಿತು. ಹೀಗಿದ್ದರು,ಎರೆಡುಕೈಗಳ ಮುದ್ರಣ ಪದ್ಧತಿಗಳನ್ನು, ವಿರಳವಾಗಿ ಮಾತ್ರ ಊಪಯೊಗಿಸುತ್ತಿದ್ದರು ಮತ್ತು ಪಾಶ್ಚ್ಯಾತ್ಯ ಸೀಸ ಅಚ್ಚು ಮತ್ತು ಮುದ್ರಣಾಲಯದ ಪರಿಚಯದನಂತರ ತೊರೆದುಬಿಡಲಾಯಿತು.[೧೩]

ಆಸ್ಪದ

[ಬದಲಾಯಿಸಿ]

ವರ್ತಮಾನ ಉಪಯೋಗದಲ್ಲಿ, ಮುದ್ರಣಕಲೆಯ ಬಳಕೆ ಮತ್ತು ಅಧ್ಯಯನವು ತುಂಬಾ ವಿಶಾಲವಾಗಿದೆ ಇದು ಅಕ್ಷರ ವಿನ್ಯಾಸ ಮತ್ತು ಉಪಯೋಗಗಳನ್ನೂ ಒಳಗೊಂಡಿದೆ. ಅವುಗಳಲ್ಲಿ:

ಡಿಜಿಟೈಜೇಶನ್ ಯುಗದಿಂದ ಮುದ್ರಣಕಲೆಯು ವಿಶಾಲವಾಗಿ ವಿವಿಧ ಸಲಕರಣೆಗಳಲ್ಲಿ ಹರಡಿದೆ. ಉದಾಹರಣೆಗೆ, ವೆಬ್ ಪೇಜ್‌ಗಳು ಎಲ್‌ಸಿಡಿ ಮೊಬೈಲ್ ಫೋನ್ ಸ್ಕ್ರೀನ್ಗಳು ಮತ್ತು ಕೈಯಲ್ಲಿ ಹಿಡಿದು ಆಡುವ ವೀಡಿಯೋ ಆಟಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಅಚ್ಚಿನ ಸರ್ವವ್ಯಾಪಕತ್ವವು ಮುದ್ರಣಕಲೆಗಾರರನ್ನು "ಎಲ್ಲೆಡೆ ಅಚ್ಚು" ಎಂಬ ವಾಕ್ಯವನ್ನು ರಚಿಸುವಂತೆಮಾಡಿದೆ.

ಸಾಂಪ್ರದಾಯಿಕ ಮುದ್ರಣಕಲೆಯು ನಾಲ್ಕು ಸಿದ್ಧಾಂತಗಳನ್ನು ಅನುಸರಿಸುತ್ತದೆ: ಪುನರಾವೃತ್ತಿ, ವಿರುದ್ಧತೆ, ಸಾನ್ನಿಧ್ಯತೆ ಮತ್ತು ಸಮರೇಖಕತೆ.

ಪಠ್ಯ ಮುದ್ರಣಕಲೆ

[ಬದಲಾಯಿಸಿ]
ವಿಲ್ಲಿಯಮ್ ಕಾಸ್ಲೊನ್ ಅವರಿಂದ ರೊಮನ್ ಅಚ್ಚಿನಕ್ಷರ ನಮೂನೆಗಳು

ಪಾರಂಪರಿಕ ಮುದ್ರಣಕಲೆಯಲ್ಲಿ ಪಠ್ಯವನ್ನು ಓದಲಾಗುವಂತೆ, ಸಮಂಜಸವಾಗುವಂತೆ, ಮತ್ತು ದೃಷ್ಟಿಗೆ ಅನುಕರಣೆಯಾಗುವಂತೆ ಬರಹವನ್ನು ತಯಾರಿಸಲಾಗಿದೆ. ಓದುವವರಿಗೆ ಇವುಗಳ ಅರಿವಾಗದಂತೆ ಅಗೋಚರವಾಗಿ ಕೆಲಸ ಮಾಡುತ್ತದೆ. ಅಚ್ಚು ವಸ್ತುಗಳ ಹಂಚುವಿಕೆಯಲ್ಲಿ ಕೂಡ ಸ್ಪಷ್ಟತೆ ಮತ್ತು ಪಾರದರ್ಶಕತ್ವವನ್ನು, ಅತೀ ಕಡಿಮೆ ಚಿತ್ತಭ್ರಂಶ, ಮತ್ತು ವ್ಯತಿಕ್ರಮದೊಡನೆ ಸಾದರಪಡಿಸುವುದೇ ಅದರ ಗುರಿ.

ಪಠ್ಯ ಮುದ್ರಣಕಲೆಯ ಮುಖ್ಯ ಅಂಶವು ಅಚ್ಚು ಮೊಳೆ(ಗಳ) ಆಯ್ಕೆಯಾಗಿದೆ-ಗದ್ಯ ಕಲ್ಪನಾ ಕಥೆ, ಇತರ ಕಥೆಗಳು, ವ್ಯಾಸಂಗ, ಧಾರ್ಮಿಕ, ವೈಜ್ಙಾನಿಕ, ಸಂಪಾದಕೀಯ ಅಗ್ರಲೇಖ, ಆಧ್ಯಾತ್ಮಿಕ ಮತ್ತು ವ್ಯವಹಾರಿಕ ಬರಹಗಳು ವಿವಿಧ ಗುಣಗಳನ್ನು ಹೊಂದಿವೆ ಮತ್ತು ಆದ್ದಕ್ಕೆ ಅನುಗುಣವಾಗಿ ಸರಿಯಾದ ಅಚ್ಚಿನಕ್ಷರದ ನಮೂನೆಗಳು ಮತ್ತು ಅಚ್ಚುಮೊಳೆಗಳು ಬೇಕಾಗುತ್ತವೆ. ಐತಿಹಾಸಿಕ ಬರಹಕ್ಕೆ ನೆಲೆಗೊಂಡ ಅಚ್ಚಿನಕ್ಷರದ ನಮೂನೆಗಳನ್ನು, ಐತಿಹಾಸಿಕ ಕಾಲಾವಧಿಗಳ ನಡುವೆ ಗಣನೀಯವಾದ ಒಂದರಮೇಲೊಂದು ಮುಚ್ಚಿರುವಿಕೆಯಿಂದ,ಜೊತೆಯಾಗಿ ಬೆಳೆಯುವಿಕೆಯ ಉದ್ದನೆಯ ಪ್ರಕ್ರಿಯೆಯಿಂದ ಸಂಗ್ರಹಿಸಿದ ಐತಿಹಾಸಿಕ ಬೇದದ ಯೋಜನೆಗೆ ತಕ್ಕಂತೆ ಅಡಿಗಡಿಗೆ ಆಯ್ದುಕೊಳ್ಳಲಾಗುತ್ತದೆ.

ಸಮಕಾಲೀನ ಪುಸ್ತಕಗಳು ಆಧುನಿಕ ವಿನ್ಯಾಸದ ನಿಪುಣತೆಯನ್ನು ಪ್ರತಿಬಿಂಬಿಸುವಂತ ಗುಣ ಬಲದೊಂದಿಗೆ ಹೆಚ್ಚಾಗಿ ಸೆರಿಫ್ಡ್ "ಟೆಕ್ಸ್ಟ್ ರೊಮನ್ಸ್‌" ಅಥವಾ "ಬುಕ್ ರೊಮನ್ಸ್"ಗಳ ಸ್ಥಿಯನ್ನು ಒಳಗೊಂಡಂತಿವೆ, ಇವು ನಿಕೋಲ್ಸ್ ಜೆನ್ಸೊನ್, ಫ್ರಾನ್‌ಸೆಸ್ಕೊ ಗ್ರಿಫೊ (ಆಲ್‌ಡೈನ್ ಅಚ್ಚಿನಕ್ಷರದ ನಮೂನೆಗಳಿಗೆ ಮಾದರಿಯನ್ನು ತಯಾರಿಸಿದ ಒಬ್ಬ ಮೊಳೆರಂಧ್ರಕಾರ), ಮತ್ತು ಕ್ಲೌಡ್ ಗರಮೌಂಡ್ ರವರ ಪಾರಂಪರಿಕ ಮಾದರಿಗಳನ್ನು ಆಧರಿಸಿದೆ. ಹೆಚ್ಚಿನ ವಿಶೇಷತೆಯ ಅವಶ್ಯಕತೆಯ ಕಾರಣ, ದಿನಪತ್ರಿಕೆ ಮತ್ತು ವಾರಪತ್ರಿಕೆಗಳು ಚೊಕ್ಕವಾದ, ಗಟ್ಟಿಯಾಗಿ ಜೊಡಿಸಲ್ಪಟ್ಟ ಸೆರಿಫೆಡ್ ಪಠ್ಯ ಅಚ್ಚುಮೊಗಳನ್ನು ಅವಲಂಬಿಸಿದೆ, ಅತಿ ಹೆಚ್ಚು ಹಾಳೆಯ ಉಪಯೋಗ, ಹೊಂದಾಣಿಕೆ ಮತ್ತು ಅನುಕೂಲ ವಾಚನವನ್ನು ಒದಗಿಸುವಂತ ಈ ಪಠ್ಯ ಅಚ್ಚುಮೊಳೆಗಳು ವಿಶೇಷವಾಗಿ ಈ ಕಾರ್ಯಕ್ಕೆ ವಿನ್ಯಾಸಿಸಲ್ಪಟ್ಟಿವೆ. ಸಾನ್ಸ್ ಸೆರಿಫ್ ಅಚ್ಚನ್ನು ಹೆಚ್ಚಾಗಿ ಪರಿಚಯಾತ್ಮಕ ವಾಕ್ಯವೃಂದಕ್ಕೆ, ಸಂಭವನೀಯ ಅಚ್ಚು ಮತ್ತು ಚಿಕ್ಕ ಲೇಖನಗಳಿಗೆ ಉಪಯೋಗಿಸುತ್ತಾರೆ. ಶಿರೋಬರಹಕ್ಕೆ ಸಾನ್ಸ್‌-ಸೆರಿಫ್ ಅಚ್ಚುಗಳು ಮತ್ತು ಉನ್ನತವಾಗಿ ಕಾರ್ಯ ನಿರ್ವಹಿಸುವ ಸೆರೊಫ್‌ಡ್ ಅಚ್ಚುಮೊಳೆಗಳನ್ನು ಲೇಖನದ ಪಠ್ಯಕ್ಕೆ ಹೊಂದಿಕೊಳ್ಳುವ ರೀತಿಯಲ್ಲಿ ಜೊಡಿಸುವುದೇ ಈಗಿನ ಫ್ಯಾಷನ್.

ಮುದ್ರಣಕಲೆಯನ್ನು ಆರ್ಥೊಗ್ರಾಫಿ,ಮತ್ತು ಭಾಷಾಶಾಸ್ತ್ರ, ಪದ ರಚನೆಗಳು, ಪದಗಳ ಪುನರಾವರ್ತನೆಗಳು, ಶಬ್ದರೂಪಗಳ ಅಭ್ಯಾಸ, ಧ್ವನಿಯ ರಚನೆಗಳು ಮತ್ತು ಭಾಷಾವಾರು ನಿಯಮಗಳ ಆಧಾರದ ಮೇಲೆ ಮಾರ್ಪಡಿಸಲಾಗಿದೆ. ಮುದ್ರಣಕಲೆಯು ನಿರ್ದಿಷ್ಟವಾದ ಪಾರಂಪರಿಕೆ ನಂಬಿಕೆಗಳನ್ನು ಸಹ ಪಾಲಿಸುತ್ತದೆ. ಉದಾಹರಣೆಗೆ ಫ್ರೆಂಚ್ ಭಾಷೆಯ ಒಂದು ವಾಕ್ಯದಲ್ಲಿ ಸಾಂಪ್ರದಾಯಿಕವಾಗಿ, ಕೋಲನ್ (:) ಅಥವಾ ಸೆಮಿಕೋಲನ್ (;) ಮುಂದೆ ವಿರಾಮವಿಲ್ಲದ ಅಂತರವನ್ನು ಸೇರಿಸುತ್ತಾರೆ, ಆದರೆ ಇಂಗ್ಲೀಷ್‌ನಲ್ಲಿ ಈ ಪದ್ಧತಿಯಿಲ್ಲ.

ಮುದ್ರಣಕಲೆಯಲ್ಲಿ ಬಣ್ಣ ವು ಹಾಳೆಯ ಮೇಲಿನ ಮಸಿಯ ಸಂಪೂರ್ಣ ಸಾಂದ್ರತೆಯಾಗಿರುತ್ತದೆ. ಈ ಸಾಂದ್ರತೆಯನ್ನು ಹೆಚ್ಚಾಗಿ ಅಚ್ಚಿನ ಮುಖ ಮತ್ತು ಗಾತ್ರದ ಮೇಲೆ ನಿರ್ಧರಿಸಲಾಗುತ್ತದೆ,ಇದಲ್ಲದೆ ಪದದ ಅಂತರ ಮತ್ತು ಅಂಚು ಗೆರೆಗಳ ಆಳದಿಂದಲೂ ನಿರ್ಧರಿಸಲಾಗುತ್ತದೆ.[೧೪] ಪಠ್ಯದ ಲೀಔಟ್‌, ಧ್ವನಿ ಅಥವಾ ಜೊಡಿಸಿರುವ ಬರಹದ ಬಣ್ಣ, ಮತ್ತು ಹಾಳೆಯ ಖಾಲಿ ಜಾಗದೊಂದಿಗಿನ ಅಚ್ಚುಗಳ ಪರಸ್ಪರ ಪ್ರಭಾವ ಮತ್ತು ಇತರ ಗ್ರಾಫಿಕ್ ಅಂಶಗಳು ಎಲ್ಲವು ಸೇರಿ ವಿಷಯದ ಅಂಶಕ್ಕೆ "ಭಾವನೆ" ಅಥವಾ "ಪ್ರತಿಧ್ವನಿ"ಯನ್ನು ಕೊಡುತ್ತವೆ. ಮುದ್ರಣಕಲೆಗಾರರು ಮುದ್ರಣಮಾಧ್ಯಮಕ್ಕಾಗಿ ಹಾಳೆಯ ಆಯ್ಕೆ ಮುದ್ರಣ ಪದ್ಧತಿಗಳು ಮತ್ತು ಬೈಂಡಿಂಗ್ ಅಂಚುರೇಖೆಗಳ ಬಗ್ಗೆ ಆಸಕ್ತಿ ವ್ಯಕ್ತಪಡಿಸುತ್ತಾರೆ.

ವಾಚನೀಯತೆ ಮತ್ತು ಸ್ಪಷ್ಟತೆ

[ಬದಲಾಯಿಸಿ]

ಅಚ್ಚಿನಕ್ಷರದ ನಮೂನೆಗಳ ವಿನ್ಯಾಸಗಾರರ ಪ್ರಧಾನ ಆದ್ಯತೆಯಾದ ಲೇಖನ ಲೇಖನ ಸ್ಪಷ್ಟತೆಯ ನ್ನು, ನಿಶ್ಚಿತಮಾಡಲು ಪ್ರತಿಯೊಂದು ಅಕ್ಷರ ಅಥವಾ ಗ್ಲೈಫ್‌ ಎಲ್ಲಾ ಅಕ್ಷರಗಳಿಂದ ಸ್ಪಷ್ಟವಾಗಿ ಮತ್ತು ಭಿನ್ನವಾಗಿರುವಂತೆ ಮಾಡುತ್ತಾರೆ. ನಿರ್ದಿಷ್ಟ ಗಾತ್ರದಲ್ಲಿ ನಿರ್ದಿಷ್ಟ ಉಪಯೋಗಕ್ಕೆ ಸರಿಯಾದ ಸ್ಪಷ್ಟ ವಿನ್ಯಾಸದ ಅಚ್ಚಿನಕ್ಷರಗಳ ನಮೂನೆಗಳನ್ನು ಆಯ್ಕೆ ಮಾಡಲು ಮುದ್ರಣಕಲೆಗಾರರ ಲೇಖನ ಲೇಖನ ಸ್ಪಷ್ಟತೆಯ ಚಿಂತೆಯು ಕೂಡ ಒಂದು ಕಾರಣ. ಹೆಸರು ವಾಸಿಯಾದ ವಿನ್ಯಾಸದ ಒಂದು ಉದಾಹರಣೆ, ಬ್ರಶ್ ಸ್ಕ್ರಿಪ್ಟ್ (ಲಿಪಿ), ಇದರಲ್ಲಿ ಹೇರಳವಾದ ಅಸ್ಪಷ್ಟ ಅಕ್ಷರಗಳಿವೆ ಇದರಿಂದ ಬಹಳಷ್ಟು ಅಕ್ಷರಗಳನ್ನು ಸುಲಭವಾಗಿ ತಪ್ಪಾಗಿಓದಬಹುದು ವಿಶೇಷವಾಗಿ ಪಠ್ಯದ ಸಂದರ್ಭದಿಂದ ಹೊರಗೆ ನೋಡಿದರೆ.

ವಾಚನೀಯತೆ ಯು ಮುದ್ರಣಕಲೆಗಾರರ ಅಥವಾ ಮಾಹಿತಿ ವಿನ್ಯಾಸಕರ ಪ್ರಧಾನ ಆಧ್ಯತೆಯಾಗಿರುತ್ತದೆ. ಇದು ಪಠ್ಯವಸ್ತುವಿನ ಅರ್ಥವನ್ನು ಸಾಧ್ಯವಾದಷ್ಟು ಸ್ಪಷ್ಟವಾಗಿ ತಿಳಿಸುವ ಪೂರ್ತಿ ಪ್ರಕ್ರಿಯೆಯ ಉದ್ದೇಶದ ಫಲಿತಾಂಶವಾಗಿರುತ್ತದೆ. ಅಕ್ಷರದ ನಡುವೆ, ಪದಗಳ ನಡುವೆ ಮತ್ತು ನಿರ್ದಿಷ್ಟವಾಗಿ ಸಾಲಿನ ನಡುವೆ ಅಂತರಗಳಿದ್ದು, ಇದರೊಡನೆ ಸರಿಯಾದ ಸಾಲಿನ ಉದ್ದ ಮತ್ತು ಕಾಗದದ ಮೇಲೆ ಅದರ ಸ್ಥಾನ,ಜಾಗ್ರತೆಯಿಂದ ಸಂಪಾದಕರ "ಚಂಕಿಂಗ್" ಮತ್ತು ತಲೆಬಹರಗಳ, ಪಠ್ಯ ವಾಸ್ತುಕಲೆಯ ಆಯ್ಕೆ, ಫೊಲಿಯೊಸ್‌, ಮತ್ತು ರೆಫೆರೆನ್ಸ್ ಲಿಂಕ್‌ಗಳು, ಒಬ್ಬ ವಾಚನಕಾರ ವಿಷಯವನ್ನು ಸರಳವಾಗಿ ಅರ್ಥ್ಯೈಸಲು ಸಹಕರಿಸುವಂತಿರಬೇಕು.

ಟೈಪ್‌ಸೆಟ್ ಪಠ್ಯವು ಐವೊವನ್ ಓಲ್ಡ್ ಸ್ಟೈಲ್ ರೊಮನ್ ,ಇಟಾಲಿಕ್ಸ್ ಮತ್ತು ಸಣ್ಣ ಅಕ್ಷರಗಳಲ್ಲಿದ್ದು, ಇವುಗಳನ್ನು ಒಂದು ಸಾಲಿಗೆ ಸುಮಾರು 10 ಪದಗಳಂತೆ ಹೊಂದಿಸಲಾಗಿದೆ, ಅಚ್ಚಿನಕ್ಷರ ನಮೂನೆಗಳ ಗಾತ್ರವು 14 ಪಾಯಿಂಟ್ಸ್ 1.4 x ಲೀಡಿಂಗ್ ಮೇಲೆ, 0.2 ಪಾಯಿಂಟ್ಸ್ ಎಕ್ಟ್ರಾ ಟ್ರಾಕಿಂಗ್‌ದೊಂದಿಗೆ.ಆಸ್ಕರ್ ವೈಲ್ಡ್ ದಿ ಇಂಗ್ಲಿಷ್ ರೆನೈಸ್ಸನ್ಸ್ ಆಪ್ ಆರ್ಟ್ ಕ ದಿಂದ ಆಯ್ದು ತೆಗೆದ ಪ್ರಬಂಧ.1882.

ಈ ಎರಡು ವಿಚಾರಗಳ ನಡುವಿನ ಸ್ಷಷ್ಟವಾದ ವ್ಯತ್ಯಾಸಗಳಲ್ಲಿ ಒಂದನ್ನು ವಾಲ್ಟರ್ ಟ್ರೇಸೀ ತನ್ನ ಲೆಟ್ಟರ್ಸ್ ಆಫ್ ಕ್ರೇಡಿಟ್ ನಲ್ಲಿ ವ್ಯಕ್ತಪಡಿಸಿದ್ದಾರೆ. ಈ .... "ಟು ಆಸ್ಪೆಕ್ಟ್ಸ್ ಆಪ್ ಎ ಟೈಪ್ " ...ಫಲೋತ್ಪಾದನಕ್ಕೆ ಅತ್ಯಾವಶ್ಯಕ. "ಲೇಖನ ಸ್ಪಷ್ಟತೆ"ಯ ಸಾಮಾನ್ಯ ಅರ್ಥ "ವಾಚನೀಯತೆ"ಯಾದ ಕಾರಣ, ಕೆಲವು ಜನರು - ಇನ್ನೂ ಕೆಲವರು ಮುದ್ರಣಕಲೆಯಲ್ಲ ತೊಡಗಿದ್ದವರೂ ಸಹ - ಅಚ್ಚುಗಳ ಫಲೋತ್ಪಾದನದ ಯಾವುದೇ ಚರ್ಚೆಯಲ್ಲಿ "ಲೇಖನ ಸ್ಪಷ್ಟತೆ" ಎಂಬ ಶಬ್ದದ ಅವಶ್ಯಕತೆ ಮಾತ್ರ ಸಾಕು ಎಂದು ತಿಳಿದಿದ್ದಾರೆ. ಲೇಖನ ಸ್ಪಷ್ಟತೆ ಮತ್ತು ವಾಚನೀಯತೆ ಅಚ್ಚಿಗೆ ಸಂಬಂಧಿಸಿದ ಎರಡು ವಿಚಾರಗಳಾದರೂ ಇವೆರಡು ಪ್ರತ್ಯೇಕವಾದವು. ಸರಿಯಾಗಿ ಅರ್ಥಮಾಡಿಕೊಂಡಲ್ಲಿ..... ಈ ಎರಡೂ ಪದಗಳು ಅಚ್ಚಿನ ಗುಣ ಲಕ್ಷಣ ಮತ್ತು ಕೆಲಸವನ್ನು ನಿರ್ದಿಷ್ಟವಾಗಿ, ಲೇಖನ ಸ್ಪಷ್ಟತೆ ಮಾತ್ರ ಮಾಡುವುದಕ್ಕಿಂತ ಚೆನ್ನಾಗಿ, ವರ್ಣನೆ ಮಾಡಲು ಸಹಾಯ ಮಾಡುತ್ತವೆ. . ...ಮುದ್ರಣಕಲೆಯಲ್ಲಿ ನಾವು ಲೇಖನ ಲೇಖನ ಸ್ಪಷ್ಟತೆಯ ನಿರೂಪಣೆಯನ್ನು ರಚಿಸಬೇಕಾಗುತ್ತದೆ...ಅರ್ಥಮಾಡಿಕೊಳ್ಳಲಾಗುವ ಮತ್ತು ಗುರುತಿಸಲಾಗುವ ಎಂಬ ಗುಣಗಳ ಅರ್ಥ ಸೂಚಿಸುವಂತೆ - ಇದರಿಂದ ನಾವು ವಿವರಿಸಲು ಸಾಧ್ಯ, ಉದಾಹರಣೆಗೆ, ಒಂದು ನಿರ್ದಿಷ್ಟವಾದ ಪುರಾತನ ಇಟ್ಯಾಲಿಕ್ ಕಲೆಯಲ್ಲಿ h ಅಕ್ಷರದ ಕೆಳಭಾಗವು ಚಿಕ್ಕ ಅಳತೆಯ ಅಕ್ಷರಗಳಲ್ಲಿ ಸ್ಪಷ್ವಾಗಿಲ್ಲ. ಅದರ ಒಳ ತಿರುಗಿದ ಕಾಲುಗಳಿಂದ ಅದುb ಅಕ್ಷರದಂತೆ ಕಾಣುತ್ತದೆ; ಅಥವಾ ಸಂಖ್ಯೆ 3 ವರ್ಗೀಕರಿಸಿದ ಜಾಹಿರಾತಿನಲ್ಲಿ 8 ರಂತೆ ಕಾಣುತ್ತದೆ. …ಪ್ರಕಟಣ ಗಾತ್ರದಲ್ಲಿ ಲೇಖನ ಸ್ಪಷ್ಟತೆ ಒಂದು ಗಂಭೀರವಾದ ವಿಷಯವೇ ಅಲ್ಲ; 8ನೇ ಪಾಯಿಂಟ್ ಗಾತ್ರದಲ್ಲಿ ಖಚಿತವಾಗಿ ಅರ್ಥವಾಗದ ಅಕ್ಷರವು 24ನೇ ಪಾಯಿಂಟಿನಲ್ಲಿ ಸ್ಪಷ್ಟವಾಗಿ ಕಾಣುತ್ತದೆ.[೧೫]

ಈ ಮೇಲ್ಕಂಡದ್ದು ಅನುಕೂಲವಾದ ಬೆಳಕಿನಲ್ಲಿ ಮತ್ತು ಸರಿಯಾದ ಓದುವ ಅಂತರದಲ್ಲಿ 20/20 ದೃಷ್ಟಿಯನ್ನು ಹೊಂದಿರುವ ಜನರಿಗೆ ಮಾತ್ರ ಅನ್ವಯಿಸುತ್ತದೆಯೆಂದು ಗಮನಿಸಬೇಕು. ದೃಷ್ಟಿಯ ತೀಕ್ಷಣತೆಯ ಪರೀಕ್ಷೆ ಮಾಡಲು ಉಪಯೋಗಿಸುವ ಕಣ್ಣಿನ ತಜ್ಙರ ಸಾದೃಶ್ಯ ಪಟ್ಟಿಯು ಮತ್ತು ಅರ್ಥದಲ್ಲಿ ಸ್ಚತಂತ್ರವಾಗಿದ್ದು, ಲೇಖನ ಸ್ಪಷ್ಟತೆಯ ವಿಚಾರದ ಉದ್ದೇಶವನ್ನು ಸೂಚಿಸಲು ಅನುಗುಣವಾಗಿದೆ.

ಮುದ್ರಣಕಲೆಯಲ್ಲಿ .... ದಿನಪತ್ರಿಕೆ ಅಥವಾ ವಾರಪತ್ರಿಕೆ ಭಾಗಗಳನ್ನು ಅಥವಾ ಪುಸ್ತಕದ ಹಾಳೆಗಳನ್ನು, ಕಷ್ಟವಿಲ್ಲದೆ ಅಥವಾ ಆಯಾಸವಿಲ್ಲದೆ ನಿರಂತರವಾಗಿ ಬಹಳ ನಿಮಿಷಗಳ ಕಾಲ ಓದಲುಸಾದ್ಯವಾದರೆ, ಆಗ ನಾವು ಅಚ್ಚುಮೊಳೆಗಳಿಗೆ ಒಳ್ಳೆಯ ವಾಚನೀಯತೆಯಿದೆಯೆಂದು ಹೇಳಬಹುದು. ಈ ಪದವು ದೃಷ್ಟಿಯ ಅನುಕೂಲತೆಯ ಗುಣವನ್ನು ವರ್ಣಿಸುತ್ತದೆ - ವಿಶಾಲವಾದ ಪಠ್ಯವನ್ನು ಗ್ರಹಿಸುವುದಕ್ಕೆ ಒಂದು ಮುಖ್ಯ ಅಂಶ, ಆದರೆ ಇದರ ವಿರೋಧಾಭಾಸವೇನೆಂದರೆ, ದೂರವಾಣಿ ಸಂಖ್ಯೆ ಮತ್ತು ಸ್ಥಾನ ನಿರ್ದೇಶಕ ಪುಸ್ತಕಗಳಲ್ಲಿ ಅಥವಾ ವಿಮಾನ ಸಂಚಾರದ ವಾಹನ ಹೋಗು ಬರುವ ಸೂಚಿ ಪಟ್ಟಿಯಲ್ಲಿ, ಓದುಗಾರ ಧೀರ್ಘ ಸಮಯ ಓದದೆ ಒಂದು ವಿಷಯದ ಮಾಹಿತಿಗಾಗಿ ಹುಡುಕುತ್ತಾನೆ ಕಾರಣ ಇದು ಅಷ್ಟು ಮುಖ್ಯವಲ್ಲ. ದೃಷ್ಟಿ ಪರಿಣಾಮದ ಎರಡು ವಿಷಯಗಳಲ್ಲಿನ ವ್ಯತ್ಯಾಸವನ್ನು ಪಠ್ಯದ ಜೋಡಣೆಗೆ ಸಾನ್ಸ್‌-ಸೆರಿಫ್ ಅಚ್ಚುಗಳ ಅನುಕೂಲತೆಯ ಬಗೆಗಿನ ಪರಿಚಿತವಾದ ವಾದವು ವಿವರಿಸುತ್ತದೆ. ನಿರ್ದಿಷ್ಟವಾದ ಒಂದು ಸಾನ್ಸ್-ಸೆರಿಫ್ ಮುಖದದಲ್ಲಿನ ಅಕ್ಷರಗಳು ಸ್ಚತಂತ್ರವಾಗಿ ಸ್ಪಷ್ಟವಾಗಿರಬಹುದು, ಆದರೆ ಅದರಲ್ಲಿ ಒಂದು ಖ್ಯಾತ ಕಾದಂಬರಿಯನ್ನು ಜೊಡಿಸಲು ಯಾರೂ ಯೋಚಿಸುವುದಿಲ್ಲ, ಕಾರಣ ಅದರ ವಾಚನೀಯತೆ ತುಂಬಾ ಕಡಿಮೆಯಾಗಿದೆ.[೧೬]

ಸ್ಪಷ್ಟತೆ ’ಎಂದರೆ ಗ್ರಹಿಸುವುದು’ ಮತ್ತು ವಾಚನೀಯತೆ ’ಎಂದರೆ ಅರ್ಥಮಾಡಿಕೊಳ್ಳುವುದು’.[೧೬] ಎರಡರಲ್ಲೂ ಉತ್ಕೃಷ್ಟತೆಯನ್ನು ಗಳಿಸುವುದೇ ಮುದ್ರಣಕಲೆಗಾರರ ಗುರಿಯಾಗಿದೆ.

"ಆಯ್ಕೆ ಮಾಡಿದ ಅಚ್ಚಿನಕ್ಷರದ ನಮೂನೆಗಳು ಸ್ಪಷ್ಟವಾಗಿರಬೇಕು. ಅಂದರೆ, ಅದನ್ನು ಶ್ರಮವಿಲ್ಲದೆ ಓದಲಾಗಬೇಕು. ಕೆಲವೊಮ್ಮೆ ಲೇಖನ ಸ್ಪಷ್ಟತೆಯೆಂದರೆ ಅಚ್ಚುಮೊಳೆಯ ಗಾತ್ರ ಮಾತ್ರ. ಹೀಗಿದ್ದರೂ, ಅನೇಕ ಬಾರಿ ಲೇಖನ ಸ್ಪಷ್ಟತೆಯು ಅಚ್ಚಿನಕ್ಷರದ ನಮೂನೆಯ ವಿನ್ಯಾಸವನ್ನು ಕುರಿತಾಗಿದೆ. ಸಾಮಾನ್ಯವಾಗಿ ಅಚ್ಚಿನಕ್ಷರದ ನಮೂನೆಗಳು ಮೂಲ ಅಕ್ಷರಗಳಂತ್ತಿದ್ದರೆ ಹೆಚ್ಚು ಸ್ಪಷ್ಟವಾಗಿರುತ್ತವೆ ಆದರೆ ಅಕ್ಷರಗಳ ಮೂಲರೂಪವನ್ನು ದೊಡ್ಡದಾಗಿಸಿದರೆ, ಸಂಕ್ಷೇಪಿಸಿದರೆ, ಅಂದಗೊಳಿಸಿದರೆ, ಅಥವಾ ಬೇರ್ಪಡಿಸಿದರೆ ಸ್ಪಷ್ಟತೆ ಕಡಿಮೆಯಾಗುತ್ತದೆ.

ಹೀಗಿದ್ದರೂ, ಸ್ಪಷ್ಟವಾದ ಅಚ್ಚಿನಕ್ಷರದ ನಮೂನೆಗಳನ್ನು ಸರಿಯಾಗಿ ಕೂಡಿಸದಿದ್ದರೆ ಮತ್ತು ಜೊಡಿಸದಿದ್ದರೆ, ಓದಲಾಗದಿರಬಹುದು. ಹೀಗೆ, ಕಡಿಮೆ ಲೇಖನ ಸ್ಪಷ್ಟತೆಯಿರುವ ಅಚ್ಚಿನಕ್ಷರದ ನಮೂನೆಗಳಲ್ಲಿ ಒಳ್ಳೆಯ ವಿನ್ಯಾಸದಿಂದ ಹೆಚ್ಚು ವಾಚನಿಯತೆಯನ್ನು ಉಂಟುಮಾಡಬಹುದು.[೧೭]

ಸ್ಪಷ್ಟತೆ ಮತ್ತು ವಾಚನೀಯತೆಯ ಅಧ್ಯಯನದಲ್ಲಿ, ಅಚ್ಚುಮೊಳೆಗಳ ಅಳತೆ ಮತ್ತು ಅಚ್ಚುಮೊಳೆಗಳ ವಿನ್ಯಾಸವನ್ನು ಒಳಗೊಂಡಂತೆ, ಸಂಗತಿಗಳ ವಿಶಾಲ ವ್ಯಾಪ್ತಿಯನ್ನು ಗಮನಿಸಿದೆ. ಉದಾಹರಣೆಗೆ, ಸೆರಿಫ್ ವಿರುದ್ಧ ಸಾನ್ಸ್‌-ಸೆರಿಫ್ ಅಚ್ಚುಮೊಳೆ, ಇಟ್ಯಾಲಿಕ್ ಅಚ್ಚುಮೊಳೆಯ ವಿರುದ್ಧ ರೊಮನ್ ಅಚ್ಚುಮೊಳೆ, ಸಾಲಿನ ಉದ್ದ, ಸಾಲಿನ ನಡುವಿನ ಅಂತರ, ಬಣ್ಣ ವಿರುದ್ಧತೆ, ಬಲಕೈ ತುದಿಯ ವಿನ್ಯಾಸ (ಉದಾಹರಣೆಗೆ, ಸಮರ್ಥತೆ, ನೇರವಾದ ಬಲಗೈತುದಿ)ವಿರುದ್ಧ ಎಡಗೈ,ಹೋಲಿಸುತ್ತಾ ಪಠ್ಯವು ವಿಭಜಿಸುವ ಚಿನ್ಹೆಗಳನ್ನು ಹೊಂದಿವೆಯೇ ಎಂದು ನೋಡಬೇಕು.

ಹತ್ತೊಂಬತ್ತನೆಯ ಶತಮಾನದ ಕೊನೆಯಿಂದ ಲೇಖನ ಸ್ಪಷ್ಟತೆಯ ಬಗ್ಗೆ ಸಂಶೋಧನೆಯನ್ನು ಪ್ರಕಟಿಸಲಾಗಿದೆ. ಬಹಳಷ್ಟು ವಿಷಯಗಳ ಮೇಲೆ ಹಲವು ಬಾರಿ ಸಭೆ ಮತ್ತು ಒಪ್ಪಂದ ನಡೆದರೂ, ಇತರರು ಹಲವುಬಾರಿ ತೀಕ್ಷ್ಣವಾದ ಘರ್ಷಣೆ ಮತ್ತು ವಿಭಿನ್ನ ಅಭಿಪ್ರಾಯವನ್ನು ಉಂಟುಮಾಡಿದ್ದಾರೆ. ಉದಾಹರಣೆಗೆ, ಇದುವರೆಗೂ ಯಾರೂ, ಅಲೆಕ್ಸ್ ಪೂಲ್ ಪ್ರಕಾರ ಯಾವ ಫಾಂಟ್‌ಗೆ ಸೆರಿಫ್ಡ್ ಅಥವಾ ಸಾನ್ಸ್ ಸೆರಿಫ್ಡ್ ಅಚ್ಚುಮೊಳೆಗಳೂ ಅತಿಹೆಚ್ಚು ಲೇಖನ ಸ್ಪಷ್ಟತೆಯನ್ನು ಒದಗಿಸುತ್ತದೆಯೆಂದು ನಿರ್ಧಾರಾತ್ಮಕ ಉತ್ತರವನ್ನು ಒದಗಿಸಿಲ್ಲ.[೧೮]

ಮತ್ತಿತರ ವಿಷಯಗಳಾದ ಸಮರ್ಥಿಸಿದ ವಿರುದ್ಧ ಅಸಮರ್ಥಿಸಿದ ಅಚ್ಚುಮೊಳೆ, ವಿಭಜಿಸುವ ಚಿನ್ಹೆಗಳು, ಮತ್ತು ಡಿಸ್ಲೆಕ್ಸಿಯಾ ದಂತಹ ಓದಲು ತೊಂದರೆ ಇರುವ ಜನರಿಗೆ, ಸರಿಯಾದ ಫಾಂಟ್‌‍ಗಳು, ಚರ್ಚೆಯ ವಿಷಯಗಳಾಗಿ ಮುಂದುವರಿಯುತ್ತಿವೆ. ವೆಬ್‌ಸೈಟ್‌ಗಳಾದ hgredbes.com Archived 2016-12-23 ವೇಬ್ಯಾಕ್ ಮೆಷಿನ್ ನಲ್ಲಿ., ban comic sans Archived 2010-06-22 ವೇಬ್ಯಾಕ್ ಮೆಷಿನ್ ನಲ್ಲಿ., UK National Literacy Trust,ಮತ್ತು Mark Simsonson Studio ಚರ್ಚಾತ್ಮಕ ಅಭಿಪ್ರಾಯಗಳನ್ನು ಮೇಲಿನ ವಿಷಯಗಳ ಮತ್ತು ಪ್ರತಿಯೊಂದು ಅಭಿಪ್ರಾಯವೂ ಸುವ್ಯವಸ್ಥಿತವಾದ ಸ್ಥಾನವನ್ನು ಹೊಂದಿರುವ ಅನೇಕ ವಿಷಯಗಳ ಮೇಲೆ ವ್ಯಕ್ತಪಡಿಸಿವೆ.

ಲೇಖನ ಸ್ಪಷ್ಟತೆಯನ್ನು ಸಾಮಾನ್ಯವಾಗಿ ಓದುವ ವೇಗದಿಂದ ಅಳೆಯಲಾಗುತ್ತದೆ, ಮತ್ತು ಅದರ ಫಲೋತ್ಪಾದನವನ್ನು ಗ್ರಹಣಶಕ್ತಿಯಿಂದ ಶೋಧಿಸಲಾಗುತ್ತದೆ ( ಅದು, ಅವಸರ ಅಥವಾ ನಿರ್ಲಕ್ಷ್ಯವಾದ ವಾಚನವಲ್ಲ). ಉದಾಹರಣೆಗೆ, ಮೈಲ್ಸ್ ಟಿಂಕರ್, ಅನೇಕ ಅಧ್ಯಯನಗಳನ್ನು 1930 ರಿಂದ 1960ವರೆಗು ಪ್ರಕಟಿಸಿದರು, ಒಂದು ಗತಿಯಲ್ಲಿ ಓದುವ ಪರೀಕ್ಷೆಯನ್ನು ಉಪಯೋಗಿಸಿದರು, ಈ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಅಸಮಂಜಸ ಪದಗಳನ್ನು ಫಲೋತ್ಪಾದಕದ ಶೋಧಿಸುವಿಕೆಯಾಗಿ ಕಂಡು ಹಿಡಿಯಬೇಕಾಗಿತ್ತು.

ರಾಯಲ್ ಕಾಲೇಜ್ ಆಫ್ ಆರ್ಟ್‌ನಲ್ಲಿ ವಾಚನೀಯತೆಯ ಮುದ್ರಣ ತಂಡವು ಬ್ರಿಯನ್ ಕೊ ಮತ್ತು ಲಿಂಡ ರೆನೋಲ್‌ಡ್ಸ್[೧೯] ಜೊತೆ ಪ್ರೊಫೆಸ್ಸರ್ ಹೆರ್‌ಬರ್ಟ್ ಸ್ಪೆನ್ಸರ್‌ರ ಆಧೀನದಲ್ಲಿ ಈ ಕ್ಷೇತ್ರದಲ್ಲಿ ಮುಖ್ಯವಾದ ಕಾರ್ಯವನ್ನು ಮಾಡಿದರು ಮತ್ತು ವಾಚನೀಯತೆಗೆ ಸಕ್ಕಾಡಿಕ್ ಕಣ್ಣಿನ ಚಲನೆಯ ಲಯದ ಮಹತ್ವವನ್ನು ಬಹಿರಂಗಪಡಿಸಿದ ಕೇಂದ್ರಗಳಲ್ಲಿ ಒಂದಾಗಿತ್ತು - ನಿರ್ದಿಷ್ಟವಾಗಿ ಒಂದೇಬಾರಿಗೆ ಸುಮಾರು ಮೂರು ಪದಗಳನ್ನು ಗ್ರಹಿಸುವ ( ಅಂದರೆ, ಗುಂಪುಗಳ ಅರ್ಥವನ್ನು ಕಂಡುಹಿಡಿಯುವುದು) ಸಾಮರ್ಥತೆ ಮತ್ತು ಕಣ್ಣಿನ ಫಿಸಿಯೊಗ್ನೊಮ, ಅಂದರೆ ಒಂದು ಸಾಲಿಗೆ 3 ಅಥವಾ 4 ಸಕ್ಕಾಡಿಕ್ ಜಿಗಿತಗಳು ಬೇಕಾದಲ್ಲಿ ಕಣ್ಣುಗಳಿಗೆ ಆಯಾಸವಾಗುತ್ತದೆ ಎಂದು ಅರ್ಥ. ಇದಕ್ಕಿಂತ ಹೆಚ್ಚಾಗಿ ಓದುವಾಗ ಆಯಾಸ ಮತ್ತು ತಪ್ಪುಗಳನ್ನು ಪರಿಚಯಿಸಲು ಕಂಡುಹಿಡಿಯಲಾಗಿದೆ. (ಉ.ದಾ.ಡಬಲಿಂಗ್).

ಈ ದಿನಗಳಲ್ಲಿ, ಲೇಖನ ಲೇಖನ ಸ್ಪಷ್ಟತೆಯ ಸಂಶೋಧನೆಯು ಗಂಭೀರವಾದ ವಿಷ್ಯಗಳನ್ನು ಮಾತ್ರ ಉದ್ದೇಶಿಸಿದೆ, ಅಥವಾ ನಿರ್ದಿಷ್ಟವಾದ ವಿನ್ಯಾಸದ ಪರಿಹಾರವನ್ನು ಪರೀಕ್ಷಿಸುವುದರಲ್ಲಿದೆ (ಉದಾಹರಣೆಗೆ, ಅಚ್ಚಿನಕ್ಷರದ ನಮೂನೆಗಳನ್ನು ತಯಾರಿಸುವಾಗ). ಗಂಭೀರ ವಿಷಯಗಳ ಉದಾಹರಣೆಗಳಲ್ಲಿ, ಲೇಖನ ಲೇಖನ ಸ್ಪಷ್ಟತೆಯು ಮುಖ್ಯ ವ್ಯತ್ಯಾಸವನ್ನುಂಟು ಮಾಡಬಹುದಾದ ದೃಷ್ಟಿ ದುರ್ಬಲತೆಯಿರುವ ಜನರಿಗಾಗಿ ಅಚ್ಚಿನಕ್ಷರದ ನಮೂನೆಗಳು (ಫಾಂಟ್‌ಗಳೆಂದೂ ಕರೆಯಲಾಗುವವು), ಮತ್ತು ರಾಷ್ಟ್ರೀಯ ಹೆದ್ದಾರಿ ಚಿನ್ಹೆಗಳ ಅಚ್ಚಿನಕ್ಷರದ ನಮೂನೆಗಳು, ಅಥವಾ ಮತ್ತಿತರ ಸ್ಥಿತಿಗಳನ್ನು ಒಳಗೊಂಡಿವೆ.

ಲೇಖನ ಸ್ಪಷ್ಟತೆಯ ಶೋಧನೆಯ ಬಹುಪಾಲು ಲೇಖನಗಳು ಸ್ವಲ್ಪ ಮಟ್ಟಿಗೆ ಅಥಿಯೊರೆಟಿಕಲ್‌ (ಸಿದ್ಧಾಂತ ರಹಿತವಾದದ್ದು) ಆಗಿವೆ - ಅನೇಕ ಅಂಶಗಳನ್ನು ಪ್ರತ್ಯೇಕವಾಗಿ ಅಥವಾ ಸಂಯುಕ್ತವಾಗಿ ಪರೀಕ್ಷಿಸಲ್ಪಟ್ಟಿವೆ( ವಿಭಿನ್ನ ಅಂಶಗಳು ಪರಸ್ಪರ ಆಶ್ರಿತವಾಗಿರುವ ಕಾರಣ ಇದು ಅನಿರ್ವಾಯ), ಆದರೆ ಬಹಳಷ್ಟು ಪರೀಕ್ಷೆಗಳನ್ನು ಓದುವ ಮಾದರಿಯ ಅಥವಾ ದೃಷ್ಟಿ ಗ್ರಹಣದ ಗೈರುಹಾಜರಿನಲ್ಲಿ ಮಾಡಲಾಯಿತು. ಕೆಲವು ಮುದ್ರಣಕಲೆಗಾರರು ಪದದ ಸಂಪೂರ್ಣ ಆಕಾರವು ಬೊವ್ಮ ವಾಚನೀಯತೆಯಲ್ಲಿ ಬಹು ಮುಖ್ಯವೆಂದು ನಂಬಿದ್ದಾರೆ, ಮತ್ತು ಸಮಾನಾಂತರದ ಅಕ್ಷರನುಸಾರ ಗುರುತಿಸುವ ಸಿದ್ಧಾಂತವು ತಪ್ಪು ಅಥವಾ ಮಹತ್ವವಿಲ್ಲದ್ದು ಅಥವಾ ಅದೇ ಪರಿಪೂರ್ಣವಾದ ಅಂಶವಲ್ಲವೆಂದು ಹೇಳುತ್ತಾರೆ.

ಅಧ್ಯಯನಗಳು ಬೊವ್ಮ ಗುರುತಿಸಿಸುವಿಕೆ ಮತ್ತು ವಾಸ್ತವದಲ್ಲಿ ಜನರು ಓದುವಾಗ ಪದಗಳನ್ನು ಯಾವರೀತಿ ಗ್ರಹಿಸುತ್ತಾರೆಂಬುದರ ಗಣನೆಯೊಂದಿಗಿನ ಸಮಾನಾಂತರ ಅಕ್ಷರನುಸಾರ ಗುರುತಿಸುವಿಕೆಗಳ ನಡುವೆ ಕಂಡಿದ್ದ ವ್ಯತ್ಯಾಸಗಳಿಂದ, ಸಮಾನಾಂತರ ಅಕ್ಷರನುಸಾರ ಗುರುತಿಸುವಿಕೆಯು ಮೆಚ್ಚುಗೆ ಪಡೆದಿದೆ, ಇದರಿಂದ ಇದನ್ನು ವಿಸ್ತೀರ್ಣವಾಗಿ ಕಾಗ್ನಿಟಿವ್ ಮನೋವಿಜ್ಙಾನಿಗಳು ಒಪ್ಪಿಕೊಂಡಿದ್ದಾರೆ.[ಸೂಕ್ತ ಉಲ್ಲೇಖನ ಬೇಕು]

ಲೇಖನ ಸ್ಪಷ್ಟತೆ ಸಂಶೋಧನೆಯ ನಿರ್ಣಯಗಳಲ್ಲಿ ಸಾಧಾರಣವಾಗಿ ಒಪ್ಪಿಕೊಂಡ ಕೆಲವು:[ಸೂಕ್ತ ಉಲ್ಲೇಖನ ಬೇಕು]

  • ಲೋವರ್ ಕೇಸ್‌ನಲ್ಲಿ ಜೊಡಿಸಿರುವ ಪಠ್ಯ ಅಪ್ಪರ್ ಕೇಸ್ (ಕ್ಯಾಪಿಟಲ್ಸ್‌) ನಲ್ಲಿ ಜೊಡಿಸಿರುವ ಪಠ್ಯಕ್ಕಿಂತ ಸ್ಪಷ್ಟವಾಗಿರುತ್ತದೆ, ಬಹುಶ್ಯ ಲೊವರ್ ಕೇಸ್ ಅಕ್ಷರಗಳ ರಚನೆಗಳು ಮತ್ತು ಪದಗಳ ಆಕೃತಿಗಳಲ್ಲಿ ವ್ಯತ್ಯಾಸಗಳು ಚೆನ್ನಾಗಿ ಕಂಡುಬರುತ್ತವೆ ಎಂದಿರಬಹುದು.
  • ಅಕ್ಷರಗಳನ್ನು ವಿಸ್ತಾರಗೊಳಿಸುವುದರಿಂದ (ಏರಿಸುವುದು ಕೆಳಗಿಳಿಸುವುದು ಮತ್ತಿತರ ಮುಂದೆ ಚಾಚಿರುವ ಭಾಗಗಳು) ಅವುಗಳ ಪ್ರಧಾನತೆ (ಆದ್ಯತೆ) ಹೆಚ್ಚಾಗುತ್ತದೆ.
  • ಸಾಮಾನ್ಯವಾದ ಸರಳ ಅಚ್ಚುಮೊಳೆಗಳು ( ರೋಮನ್ ಅಚ್ಚುಮೊಳೆಗಳು) ಇಟ್ಯಾಲಿಕ್ ಅಚ್ಚುಮೊಳೆಗಳಿಗಿಂತ ಹೆಚ್ಚು ಸ್ಪಷ್ಟವಾಗಿವೆ ಎಂದು ಕಂಡುಬಂದಿದೆ.
  • ಕಣ್ಣುಕುಕ್ಕುವಂತಹ ಪ್ರಕಾಶವಿಲ್ಲದ ಬಣ್ಣ ವಿರುದ್ಧತೆ, ಸಹ ಮುಖ್ಯವೆಂದು ಕಂಡುಬಂದಿದೆ. ಅದರಲ್ಲಿಯೂ ಹಳದಿ/ಹಾಲ್ಬಿಳುಪಿನ ಮೇಲೆ ಕಪ್ಪು ತುಂಬಾ ಪರಿಣಾಮಕಾರಿಯಾಗಿದೆ.
  • ನೆಗೆಟಿವ್ ಅಥವಾ ವಿರುದ್ಧವಾದ ಪ್ರತಿಬಿಂಬಗಳಿಗಿಂತ (ಉದಾಹರಣೆಗೆ: ಕಪ್ಪು ಮೇಲೆ ಬಿಳುಪು ) ಪಾಸಿಟಿವ್ ಪ್ರತಿಬಿಂಬಗಳು (ಉದಾಹರಣೆಗೆ : ಬಿಳಿಯ ಮೇಲೆ ಕಪ್ಪು) ಓದುವುದು ಸುಲಭ. ಹೀಗಿದ್ದರೂ ಸಾಮಾನ್ಯವಾಗಿ ಸ್ವೀಕರಿಸಿದ ಈ ಪದ್ಧತಿಯಲ್ಲಿ ಕೂಡ ಕೆಲವು ಹೊರತುಗಳಿವೆ, ಉದಾಹರಣೆಗೆ ಅಶಕ್ತತೆಯ ಕೆಲವು ಸಂಗತಿಗಳಲ್ಲಿ. (ಈ ಕ್ಷೇತ್ರದ ಮಾಹಿತಿಗಳಿಗಾಗಿ UK National Literacy Trust ನೋಡಿ.)
  • ಗುರುತಿಸುವ ಕಾರ್ಯದಲ್ಲಿ ಅಕ್ಷರಗಳ ಮೇಲಿನ ಭಾಗಗಳಿಗೆ ಕೆಳಭಾಗಗಳಿಗಿಂತ ಬಲವಾದ ಪಾತ್ರವಿದೆ.
ಚಿತ್ರ:Latex example type.png
ಟೈಪ್‌ಸೆಟ್ ಪಠ್ಯದಲ್ಲಿ ಲಟೆಕ್ಸ್ ಡಿಜಿಟಲ್ ಟೈಪ್‌ಸೆಟ್ಟಿಂಗ್ ಸಾಪ್ಟ್‌ವೇರನ್ನು ಉಪಯೋಗಿಸಲಾಗುತ್ತದೆ

ವಾಚನೀಯತೆಯನ್ನು ಅಕ್ಷ್ರಗಳಲ್ಲಿ-ಅಂತರ, ಪದಗಳಲ್ಲಿ ಅಂತರ, ಅಥವಾ ಲೀಡಿಂಗ್ ಅಂದರೆ ತುಂಬಾ ಬಿಗಿ ಅಥವಾ ತುಂಬಾ ಸಡಿಲ ಗಳೊಂದಿಗೆ ಸಂಧಾನ ಮಾಡಿಕೊಳ್ಳಬಹುದು. ಪಠ್ಯದಲ್ಲಿರುವ ಒಂದು ಸಾಲನ್ನು ಅದರ ಮುಂದಿನ ಸಾಲಿನಿಂದ, ಅಥವಾ ಹಿಂದಿನ ಸಾಲಿನಿಂದ ವ್ಯತ್ಯಾಸಿಸಲು ಕಣ್ಣುಗಳಿಗೆ ಸಹಾಯವಾಗುವಂತೆ ಮಾಡಲು, ಧಾರಾಳವಾದ ನೀಟಾದ ಅಂತರವು ಪಠ್ಯದ ಸಾಲುಗಳನ್ನು ಪ್ರತ್ಯೇಕಿಸಿದಾಗ ಇದನ್ನು ಅಭಿವೃದ್ಧಿಪಡಿಸಬಹುದು. ಕಳಪೆಯಾಗಿ ವಿನ್ಯಾಸಿಸಲ್ಪಟ್ಟ ಫಾಂಟ್‌ಗಳು ಮತ್ತು ತುಂಬಾ ಬಿಗಿಯಾಗಿ ಅಥವಾ ತುಂಬಾ ಸಡಿಲವಾಗಿ ಜೊಡಿಸಲ್ಪಟ್ಟ ಫಾಂಟ್‌ಗಳು ಕೂಡ ಸುಮಾರಾದ ಲೇಖನ ಸ್ಪಷ್ಟತೆಯಾಗಿ ಪರಿಣಾಮಗೊಳ್ಳುತ್ತವೆ.

ಮುದ್ರಣಕಲೆಯು ಎಲ್ಲಾ ಮುದ್ರಿಸಿದ ವಸ್ತುಗಳ ಮೂಲವಸ್ತು. ನಿಯತ ಕಾಲಿಕ ಪ್ರಕಾಶನಗಳಲ್ಲಿ, ವಿಶೇಷವಾಗಿ ದಿನಪತ್ರಿಕೆಗಳು ಮತ್ತು ವಾರ/ಮಾಸಿಕ ಪತ್ರಿಕೆಗಳು ಆಕರ್ಷಕವಾದ, ವ್ಯತ್ಯಾಸವಾದ ನೋಟವನ್ನು ಗಳಿಸಲು ಮುದ್ರಣಕಲೆಯ ಮೂಲವಸ್ತುಗಳ ಉಪಯೋಗ ಮಾಡಲಾಗಿದೆ, ಓದುಗರಿಗೆ ಸರಳವಾಗಿ ಪಠ್ಯವನ್ನು ಓದಲು, ಮತ್ತು ಕೆಲವು ಸಂದರ್ಭಗಳಲ್ಲಿ ನಾಟಕೀಯ ಅನುಭವವನ್ನು ನೀಡಲು ಇದು ಸಹಾಯಮಾಡುತ್ತದೆ. ವಿನ್ಯಾಸ ಮಾರ್ಗದರ್ಶಿಯ ನಿಯಮಗಳನ್ನು ರಚಿಸುವುದರಿಂದ, ಪ್ರಕಾಶನದಲ್ಲಿ ಪ್ರತ್ಯೇಕ ಮೂಲವಸ್ತುಗಳಿಗೆ ಉಪಯೋಗಿಸಿದ ಪ್ರತಿಯೊಂದು ಅಚ್ಚಿನಕ್ಷರದ ನಮೂನೆಗಳ ಸಾಪೇಕ್ಷಣೀಯ ಚಿಕ್ಕ ಸಂಗ್ರಹವು ನಿಯತ ಕಾಲಿಕವಾಗಿ ಪ್ರಮಾಣಬದ್ಧ ಮಾಡಲಾಗುವುದು, ಮತ್ತು ಇದು ಸ್ಥಿರವಾದ ಅಚ್ಚಿನ ಗಾತ್ರಗಳು, ಇಟ್ಯಾಲಿಕ್‌, ಬೋಲ್ಡ್‌ಫೇಸ್‌, ದೊಡ್ಡ ಮತ್ತು ಚಿಕ್ಕ ಕ್ಯಾಪಿಟಲ್ ಅಕ್ಷರಗಳು, ಬಣ್ಣಗಳು, ಮತ್ತು ಇತರ ಮುದ್ರಣಕಲೆಯ ವೈಶಿಷ್ಟ್ಯಗಳನ್ನು ಉಪಯೋಗಿಸುವಂತೆ ಮಾಡುತ್ತದೆ. ದ ಗಾರ್ಡಿಯನ್ ಮತ್ತು ದ ಇಕೊನೊಮಿಸ್ಟ್ ,ಗಳಂತಹ ಕೆಲವು ಪ್ರಕಾಶಕರು, ತಮ್ಮ ಪ್ರತ್ಯೇಕ ಉಪಯೋಗಕ್ಕೆ ಬೇಕಾಗುವ ರೀತಿಯಲ್ಲಿ ಬಿಸ್ಪೊಕ್‌ (ಕಸ್ಟಮ್ ಟೇಲರ್ಡ್) ಅಚ್ಚಿನಕ್ಷರದ ನಮೂನೆಗಳನ್ನು ತಯಾರಿಸುವಂತೆ ಅಚ್ಚುಮೊಳೆಗಳ ವಿನ್ಯಾಸಕರಿಗೆ ಅದೇಶವನ್ನು ಹೊರಡಿಸುವವರೆಗೂ ಹೋಗುತ್ತಾರೆ.

ಒಂದು ನಿರ್ದಿಷ್ಟವಾದ ಧ್ವನಿ ಅಥವಾ ಶೈಲಿಯನ್ನು ಗಳಿಸಲು,ವಿಭಿನ್ನ ನಿಯತ ಕಾಲಿಕ ಪ್ರಕಾಶಕರು ಅವರ ಮುದ್ರಣಕಲೆಯನ್ನೂ ಒಳಗೊಂಡು,ತಮ್ಮ ಪ್ರಕಾಶನವನ್ನು ಸ್ಚಂತ ತಾವೇ ವಿನ್ಯಾಸಿಸುತ್ತಾರೆ. ಉದಾಹರಣೆಗೆ, USA Today ಅದರ ವೈವಿಧ್ಯ ಅಚ್ಚಿನಕ್ಷರ ನಮೂನೆಗಳನ್ನು ಮತ್ತು ಬಣ್ಣಗಳನ್ನು ಉಪಯೋಗಿಸುವುದರ ಮೂಲಕ ಧಿಟ್ಟವಾದ, ವಿವಿಧ ಬಣ್ಣಯುಕ್ತವಾದ, ಮತ್ತು ತುಲನಾತ್ಮಕವಾದ ಅಧುನಿಕ ಶೈಲಿಯನ್ನು ಉಪಯೋಗಿಸುತ್ತದೆ; ಅಚ್ಚುಮೊಳೆ ಗಾತ್ರಗಳು ವಿಸ್ತೀರ್ಣವಾಗಿ ಭಿನ್ನವಾಗಿವೆ, ಮತ್ತು ದಿನಪತ್ರಿಕೆಯ ಹೆಸರನ್ನು ಬಣ್ಣದ ಹಿನ್ನೆಲೆಯಲ್ಲಿ ಕೂಡಿಸಲಾಗುತ್ತದೆ. ಇದಕ್ಕೆ ವಿರುದ್ಧವಾಗಿ, ದ ನ್ಯೂ ಯಾರ್ಕ್ ಟೈಮ್ಸ್ ಕೆಲವೇ ಬಣ್ಣಗಳು, ಅಚ್ಚಿನಕ್ಷರ ನಮೂನೆಗಳಲ್ಲಿ ಕಡಿಮೆ ವ್ಯತ್ಯಾಸ, ಮತ್ತು ಹೆಚ್ಚು ಕಾಲಮ್ಸ್‌ ಹೊಂದಿರುವ ಪಾರಂಪರಿಕ ಮಾದರಿಯನ್ನು ಉಪಯೋಗಿಸುತ್ತದೆ.

ವಿಶೇಷವಾಗಿ ವಾರ್ತಾಪತ್ರಿಕೆಯ ಮೊದಲ ಪುಟದಲ್ಲಿ ಮತ್ತು ವಾರ/ಮಾಸಿಕ ಪತ್ರಿಕೆಗಳ ಮುಖ ಪುಟಗಳ ಮೇಲೆ, ಮುಖ್ಯಾಂಶಗಳು ಹಲವು ಬಾರಿ ಗಮನವನ್ನು ಸೆಳೆಯಲು, ದೊಡ್ಡದಾಗಿ ಪ್ರದರ್ಶಿಸುವ ಅಚ್ಚಿನಕ್ಷರ ನಮೂನೆಗಳಲ್ಲಿ ಜೊಡಿಸಲ್ಪಡುತ್ತವೆ, ಮತ್ತು ಮಸ್ತ್‌ಹೆಡ್‌ಬಳಿ ಕೂಡಿಸಲಾಗುತ್ತದೆ.

ಪ್ರದರ್ಶನಾ ಮುದ್ರಣಕಲೆ

[ಬದಲಾಯಿಸಿ]
19ನೇಯ ಶತಮಾನದ ಪ್ರಕಟನಾ ಪತ್ರಿಕೆಗಳು ಮರದ ಮತ್ತು ಲೋಹದ ಅಚ್ಚುಗಳಿಂದ ಮುದ್ರಿಸಲ್ಪಟ್ಟಿವೆ.

ವಾಚನೀಯತೆಯತ್ತ ಕಡಿಮೆ ಧ್ಯಾನ ಮತ್ತು ಅಚ್ಚುಮೊಳೆಯನ್ನು ಕಲಾತ್ಮಕ ರೀತಿಯಲ್ಲಿ ಉಪಯೋಗಿಸುವುದಕ್ಕೆ ಹೆಚ್ಚು ಮಹತ್ವವನ್ನು ಕೊಡುವ ಗ್ರಾಫಿಕ್ ವಿನ್ಯಾಸದಲ್ಲಿ, ಪ್ರದರ್ಶನಾ ಮುದ್ರಣಕಲೆಯು ಪ್ರಬಲ ಮೂಲವಸ್ತುವಾಗಿದೆ. ಅಚ್ಚುಮೊಳೆಯನ್ನು ನೆಗೆಟಿವ್ ಅಂತರ, ಗ್ರಾಫಿಕ್ ಮೂಲವಸ್ತುಗಳು ಮತ್ತು ಚಿತ್ರಗಳೊಡನೆ ಸಂಘಟಿಸಲಾಗಿದೆ, ಇದು ಪದಗಳ ಮತ್ತು ಪ್ರತಿಬಿಂಬಗಳ ನಡುವೆ ಸಂಬಂಧಗಳನ್ನು ಮತ್ತು ಸಂಭಾಷಣೆಯನ್ನು ರೂಪಿಸುತ್ತದೆ.

ಅಚ್ಚುಮೊಳೆ ಮೂಲವಸ್ತುಗಳ ಬಣ್ಣ ಮತ್ತು ಗಾತ್ರಗಳು ಪಠ್ಯ ಮುದ್ರಣಕಲೆಗಿಂತ ಹೆಚ್ಚು ಪ್ರಬಲವಾಗಿವೆ. ಬಹಳಷ್ಟು ಪ್ರದರ್ಶನಾ ಮುದ್ರಣಕಲೆಯು, ಅಕ್ಷರವಿನ್ಯಾಸದ ವಿವರಗಳು ದೊಡ್ಡದಾಗಿ ಕಾಣುವ, ದೊಡ್ಡ ಅಳತೆಯ ಅಚ್ಚುಮೊಳೆಯನ್ನು ಸ್ವಪ್ರಯೋಜನಕ್ಕಾಗಿ ಉಪಯೋಗಿಸುತ್ತದೆ. ವಿಷಯದ ಧ್ವನಿ ಮತ್ತು ಸಹಜಗುಣವನ್ನು ವ್ಯಕ್ತಪಡಿಸಲು ಬಣ್ಣವನ್ನು ಅದರ ಭಾವನಾತ್ಮಕ ಪರಿಣಾಮಕ್ಕಾಗಿ ಉಪಯೋಗಿಸಲ್ಪಡುತ್ತದೆ.

ಪ್ರದರ್ಶನಾ ಮುದ್ರಣಕಲೆ ಒಳಗೊಂಡ ಅಂಶಗಳು:

ಅಬ್ರಹಮ್ ಲಿಂಕನ್ನ ಕೊಲೆಪಾತಕರಿಗಾಗಿ ’ಬೇಕಾಗಿದ್ದಾರೆ’ ಪ್ರಕಟಣ ಚೀಟಿಯನ್ನು ಸೀಸ ಮತ್ತು ಮರದ ಅಚ್ಚುಮೊಳೆಗಳಿಂದ ಮುದ್ರಿಸಲ್ಪಟ್ಟಿತು, ಮತ್ತು ಛಾಯಾಚಿತ್ರಣವನ್ನು ಸಂಯೋಜಿಸುತ್ತದೆ.

ಜಾಹೀರಾತುಗಳು

[ಬದಲಾಯಿಸಿ]

ಅಭಿವೃದ್ಧೀಕರಣದ ವಸ್ತುಗಳಲ್ಲಿ ಮತ್ತು ಜಾಹೀರಾತುಗಳಲ್ಲಿ ಮುದ್ರಣಕಲೆಯು ಬಹು ಕಾಲದಿಂದ ಒಂದು ಮುಖ್ಯ ಅಂಗವಾಗಿದೆ. ಜಾಹೀರಾತಿನಲ್ಲಿ ವಿಷಯ ಮತ್ತು ಮನೋಭಾವನ್ನು ಜೋಡಿಸಲು ವಿನ್ಯಾಸಕರು ಅನೇಕ ಬಾರಿ ಮುದ್ರಣಕಲೆಯನ್ನು ಉಪಯೋಗಸುತ್ತಾರೆ; ಉದಾಹರಣೆಗೆ ಒಂದು ನಿರ್ದಿಷ್ಟವಾದ ಸಂದೇಶವನ್ನು ಓದುಗರಿಗೆ ತಲುಪಿಸಲು ಧಿಟ್ಟ, ದೊಡ್ಡ ಪಠ್ಯದ ಉಪಯೋಗ ಮಾಡಲಾಗುತ್ತದೆ. ಬಣ್ಣ, ಆಕಾರ ಮತ್ತು ಪ್ರತಿಬಿಂಬಗಳ ಪರಿಣಮಕಾರಿ ಉಪಯೋಗದ ಸಂಘಟಣೆಯೊಡನೆ ಅಚ್ಚುಮೊಳೆಗಳನ್ನು ಅನೇಕ ಬಾರಿ ಒಂದು ನಿರ್ದಿಷ್ಟ ಜಾಹೀರಾತಿನತ್ತ ಆಕರ್ಷಿಸಲು ಉಪಯೋಗಿಸಲ್ಪಡುತ್ತದೆ. ಇವತ್ತು, ಮುದ್ರಣಕಲೆಯು ಪ್ರಚಾರದಲ್ಲಿ ಒಂದು ಸಂಸ್ಥೆಯ ವ್ಯಾಪಾರದ ಗುರುತನ್ನು ಅನೇಕ ಬಾರಿ ಪ್ರತಿಬಿಂಬಿಸುತ್ತದೆ. ಜಾಹೀರಾತುಗಳಲ್ಲಿ ಉಪಯೋಗಿಸಲ್ಪಟ್ಟ ಫಾಂಟ್‌ಗಳು ಓದುಗರಿಗೆ ವಿವಿಧ ಸಂದೇಶಗಳನ್ನು ತಲುಪಿಸುತ್ತವೆ,ಕ್ಲಾಸ್ಸಿಕಲ್ ಫಾಂಟ್‌ಗಳನ್ನು ದೃಢವಾದ ವ್ಯಕ್ತಿತ್ವಕ್ಕೆ, ಮತ್ತು ಹೆಚ್ಚು ಆಧುನಿಕವಾದ ಫಾಂಟ್‌ಗಳನ್ನು ಸ್ವಚ್ಛತೆಗೆ, ನಿಷ್ಪಕ್ಷ ನೋಟಕ್ಕೆ ಉಪಯೋಗಿಸಲ್ಪಡುತ್ತದೆ. ಧಿಟ್ಟ ಫಾಂಟ್‌ಗಳು, ಹೇಳಿಕೆಗಳನ್ನು ರೂಪಿಸಲು ಮತ್ತು ಗಮನವನ್ನು ಆಕರ್ಷಿಸಲು ಉಪಯೋಗಿಸಲ್ಪಡುತ್ತವೆ.

ಶಿಲಾಶಾಸನದ ಮತ್ತು ವಾಸ್ತುಕಲೆಯ ಲಿಪಿ

[ಬದಲಾಯಿಸಿ]
ನ್ಯಾಷನಲ್ ಜಾಗ್ರಫಿಕ್‌ನ 1913ನೆಯ ಸಂಚಿಕೆಯಲ್ಲಿ ಎನ್‌ಸೈಕ್ಲೊಪಿಡಿಯ ಬ್ರಿಟಾನಿಕಗೋಸ್ಕರ ಒಂದು ಜಾಹೀರಾತನ್ನು ಮುದ್ರಿಸಲಾಗಿತ್ತು.

ಶಿಲಾಶಾಸನದ ಲಿಪಿಯ ಇತಿಹಾಸವು, ಬರಹದ, ಅಕ್ಷರ ರೂಪಗಳ ವಿಕಸನ ಮತ್ತು ಕೈ ಚಳಕದ ಇತಿಹಾಸಗಳೊಡನೆ ಆತ್ಮೀಯವಾದ ಬಂಧನದಲ್ಲಿದೆ. ವಿಸ್ತೀರ್ಣವಾಗಿ ಹರಡಿರುವ ಗಣಕಯಂತ್ರದ ಉಪಯೋಗ ಮತ್ತು ಅನೇಕ ಎಟ್‌ಚಿಂಗ್ ಮತ್ತು ಸ್ಯಾಂಡ್‌ಬ್ಲಾಸ್ಟಿಂಗ್ ತಂತ್ರಗಳು ಇಂದು ಕೈಯಿಂದ ತಯಾರಿಸಿರುವ ಕೊರೆದ ಸ್ಮಾರಕಗಳನ್ನು ಅಪರೂಪದವಸ್ತುಗಳನ್ನಾಗಿ ಮಾಡಿವೆ, ಮತ್ತು USAನಲ್ಲಿರುವ ಅಕ್ಷರಗಳನ್ನು ಕೊರೆಯುವವರ ಸಂಖ್ಯೆಯು ಸತತವಾಗಿ ಸಶಿಸುತ್ತಿದೆ.

ಅದ್ಭುತ ಅಚ್ಚುಗಳ ಲೆಟ್ಟರಿಂಗ್ ಪರಿಣಮದಾಯಕವಾಗಲು ಅದನ್ನು ಅದರ ಸಂದರ್ಭದಲ್ಲಿ ಜಾಗ್ರತೆಯಿಂದ ಮನ್ನಣೆಗೆ ತೆಗೆದುಕೊಳ್ಳಬೇಕು. ಅಕ್ಷರಗಳ ಗಾತ್ರ ಮತ್ತು ಅಂತರಗಳು ವೀಕ್ಷಕರಿಂದ ಹೆಚ್ಚುತ್ತಿದ್ದಂತೆ ಅವುಗಳ ಪ್ರಮಾಣವನ್ನು ಬದಲಾಯಿಸಬೇಕಾಗುತ್ತದೆ. ಒಬ್ಬ ನಿಪುಣ ಲಿಪಿಗಾರ ಈ ಸೂಕ್ಷ್ಮ ವ್ಯತ್ಯಾಸಗಳನ್ನು ಆವುಗಳ ಕಲೆಯ ಬಹಳಷ್ಟು ಅಭ್ಯಾಸ ಮತ್ತು ಗಮನಿಸುವುದರಿಂದ ಅರ್ಥಮಾಡಿಕೊಳ್ಳುತ್ತಾನೆ. ಒಂದು ನಿಶ್ಚಿತ ಯೋಜನೆಗೆ ಲಿಪಿಗಾರ ಕೈಯಿಂದಾದ ಚಿತ್ರಣಗಳು ಸಿರಿವಂತಿಕೆಯಿಂದ ವಿಶೇಷವಾಗಿರುತ್ತವೆ ಮತ್ತು ಪರಿಣಿತರ ಕೈಯಲ್ಲಿ ಹೆಚ್ಚು ಅಂದವಾಗಿರುತ್ತವೆ. ಒಂದನ್ನು ಕೊರೆಯಲು[ಸೂಕ್ತ ಉಲ್ಲೇಖನ ಬೇಕು] ಒಂದು ಗಂಟೆಗಳ ಕಾಲದ ತನಕ ಬೇಕಾಗಬಹುದು, ಆದ್ದರಿಂದ ಆಟೊಮೇಟೆಡ್ ಸ್ಯಾಂಡ್‌ಬ್ಲಾಸ್ಟಿಂಗ್ ಪ್ರಕ್ರಿಯೆಯು ಉದ್ಯಮದ ಸಾಮಾನ್ಯ ಪದ್ಧತಿಯಾಗಿರುವುದರಲ್ಲಿ ಆಶ್ಚರ್ಯವೇನಿಲ್ಲ.

ಒಂದು ಸ್ಯಾಂಡ್‌ಬ್ಲಾಸ್ಟೆಡ್ ಅಕ್ಷರವನ್ನು ತಯಾರಿಸಲು, ಗಣಕಯಂತ್ರದ ಫೈಲ್‌ನಿಂದ ಒಂದು ರಬ್ಬರ್ ಮ್ಯಾಟನ್ನು ಲೇಸರ್‌ನಿಂದ ಕತ್ತರಿಸಿ ಕಲ್ಲಿಗೆ ಅಂಟಿಸಲಾಗುವುದು. ಆಗ ಸ್ಯಾಂಡ್ (ಮರಳು) ಬಹಿರಂಗವಾಗಿರುವ ಮೇಲ್ಮೈಯಲ್ಲಿ ಒರಟಾದ ಕಾಲುವೆ ಅಥವಾ ನಾಲೆಯನ್ನು ಕಡಿಯುತ್ತದೆ. ದುರ್ದೈವದಿಂದ, ಈ ಫೈಲ್‌ಗಳನ್ನು ತಯಾರಿಸುವ ಮತ್ತು ಲೇಸರ್ ಕಟ್ಟರಿನ ಇನ್ಟರ್‌ಫೇಸ್‌ಗಳ ಬಹಳಷ್ಟು ಗಣಕಯಂತ್ರ ಉಪಯೋಗಗಳಿಗೆ ಬಹಳಷ್ಟು ಅಚ್ಚಿನಕ್ಷರದ ನಮೂನೆಗಳು ಲಭ್ಯವಿಲ್ಲ, ಮತ್ತು ಅನೇಕ ಬಾರಿ ಲಭ್ಯವಿರುವ ಕೆಳಮಟ್ಟದ ಅಚ್ಚಿನಕ್ಷರದ ನಮೂನೆಗಳನ್ನೇ ಉಪಯೋಗಿಸಬೇಕಾಗುತ್ತದೆ. ಆದರೆ, ಈಗ ಕೆಲವೇ ನಿಮಿಷಗಳಲ್ಲಿ ತಯಾರಾಗುವ ಅಚ್ಚಿನಕ್ಷರದ ನಮೂನೆಗಳಲ್ಲಿ, ಎದ್ದು ಕಾಣುವ ಆರ್ಕಿಟೆಕ್ಚರ್ ಕೊರತೆ ಮತ್ತು ಬೆಳಕನ್ನು ಅಕ್ಷರಗಳಲ್ಲಿ ಆಟವಾಡಲು ಅನುಮತಿಸುವ ಚಾಣದಿಂದ ಕೊರೆಯಲ್ಪಟ್ಟ ಅಕ್ಷರಗಳ ರೇಖಾಗಣಿತದ ಕೊರತೆಯಿದೆ.

ಇವನ್ನೂ ಗಮನಿಸಿ

[ಬದಲಾಯಿಸಿ]

ಸಹಾಯಕ ಸಂಸ್ಥೆಗಳು

[ಬದಲಾಯಿಸಿ]

ಟಿಪ್ಪಣಿಗಳು

[ಬದಲಾಯಿಸಿ]
  1. ೧.೦ ೧.೧ ಪಿಪೆಸ್,ಅಲನ್. Production For Graphic Designers 2nd Edition, Page 40 : ಪ್ರೆಂಟಿಸ್ ಹಾಲ್ Inc 1997
  2. Brekle 1997, pp. 60f.
  3. Schwartz, Benjamin (1959). "The Phaistos disk". Journal of Near Eastern Studies. 18 (2): 105–112 (107).
  4. Diamond, Jared. "13: Necessity's Mother: The evolution of technology". Guns, Germs and Steel: The Fates of Human Society. ISBN 0-393-03891-2.
  5. ಲಾನ್ಸಿಯನಿ 1881, p. 416, Pace 1986, p. 78; Hodge 1992, pp. 310f.
  6. Brekle 2010, p. 19
  7. Brekle 2005, pp. 22–25; Brekle 1997, pp. 62f.; Lehmann-Haupt 1940, pp. 96f.; Hupp 1906, pp. 185f. (+ fig.)
  8. Lipinsky 1986, pp. 78–80; Koch 1994, p. 213
  9. Lipinsky 1986, p. 78; Koch 1994, p. 213
  10. Brekle 1997, pp. 61f.; Lehmann-Haupt 1940, p. 97
  11. McLuhan 1962; Eisenstein 1980; Febvre & Martin 1997; Man 2002
  12. ಎನ್‌ಸೈಕ್ಲೊಪಿಡಿಯ ಬ್ರಿಟನ್ನಿಕ 2006: "ಪ್ರಿಂಟಿಂಗ್", ರಿಟ್ರಿವ್ಡ್ ನವೆಂಬರ್ 27, 2006
  13. ಚ್'ಆನ್ ಹ್ಯೆ-ಬೊಂಗ್ 1993, ಪಿ. 19
  14. Eckersley, Richard (1994). "Color". Glossary of Typesetting Terms. Chicago guides to writing, editing and publishing. University of Chicago Press. p. 22. ISBN 9780226183718. OCLC 316234150. A page is said to have good color if forms an even mass of gray. Squint at the page, and you will see this.
  15. ಟ್ರೇಸಿ 1986.30-31
  16. ೧೬.೦ ೧೬.೧ ಟ್ರೇಸಿ 1986.31
  17. ಕ್ರೈಗ್, J. ಅಂಡ್ ಸ್ಕಾಲ, IK. {Designing with Type, the Essential Guide to Typography. 5th ed{/1} . ಪಿ63. ವಾಟ್‌ಸೊನ್ ಗುಪ್ಟಿಲ್. 2006.
  18. "ಆರ್ಕೈವ್ ನಕಲು". Archived from the original on 2010-03-06. Retrieved 2010-06-03.
  19. ಲೆಜಿಬಿಲಿಟಿ ಆಪ್ ಟೈಪ್, ಲಿಂಡ ರೈನೊಲ್ದ್ಸ್ 1988 ಬೇಸ್‌ಲೈನ್ 10

ಆಕರಗಳು

[ಬದಲಾಯಿಸಿ]
  • ASTM ಇಂಟರ್ನ್ಯಾಷನಲ್ D7298 ಸ್ಟ್ಯಾಂಡರ್ಡ್ ಟೆಸ್ಟ್ ಮೆಥಡ್ ಆಪ್ ಕಂಪರೇಟಿವ್ ಲೆಜಿಬಿಲಿಟಿ ಬೈ ಮೀನ್ಸ್ ಆಫ್ ಪೋಲಾರೈಜಿಂಗ್ ಪಿಲ್ಟರ್
  • Brekle, Herbert E. (1997), "Das typographische Prinzip. Versuch einer Begriffsklärung", Gutenberg-Jahrbuch, 72: 58–63
  • Brekle, Herbert E. (2005), Die Prüfeninger Weihinschrift von 1119. Eine paläographisch-typographische Untersuchung (brief summary), Regensburg: Scriptorium Verlag für Kultur und Wissenschaft, ISBN 3-937527-06-0
  • Brekle, Herbert E. (2010), "Herstellungstechniken von Inschriften auf römischen Wasserleitungsrohren aus Blei", in Hanneforth, Thomas; Fanselow, Gisbert (eds.), Language and Logos. Festschrift for Peter Staudacher on his 70th birthday, Berlin: Akademie Verlag, pp. 1–20
  • Ch'ಆನ್ ಹೈ-ಬೊಂಗ್: "ಟೈಪೊಗ್ರಾಫಿ ಇನ್ ಕೊರೆಯ", Koreana , ವೋಲ್. 7, ನಂ. 2 (1993), ಪಿಪಿ. 10−19
  • ಬ್ರಿಂಘುರ್ಸ್ಟ್, ರೊಬೆರ್ಟ್ (2002). The Elements of Typographic Style (ವರ್ಸನ್ 2.5). ವಂಕೊವೆರ್: ಹಾರ್ಟ್‌ಲೆ& ಮಾರ್ಕ್ಸ್. ISBN 0-471-80580-7. ಅಗಾಗ್ಗೆ ಇದನ್ನು ಸರಳವಾಗಿ "ಬ್ರಿಂಘರ್ಸ್ಟ್" ಎಂದು ಪ್ರಸ್ತಾಪಿಸಲಾಗಿದೆ, ಲಾಟಿನ್ ಮುದ್ರಣಕಲೆಗೆ Elements ಗಳನ್ನು ಈಗಿನ ಮುದ್ರಣಕಲೆಯ ಶೈಲಿಯಾಗಿ ಹೆಚ್ಚು ಗಣನೆಗೆ ತೆಗೆದುಕೊಳ್ಳಲಾಗಿದೆ. (excerpts). Tschichold's ಜೊತೆ ಚೆನ್ನಾಗಿ ಜೋಡಿಸಲಾಗಿದೆ The Form of the Book , ಕೆಳಗೆ, ಅದೇ ಪ್ರಕಾಶಕರಿಂದ.
  • Eisenstein, Elizabeth L. (1980), The Printing Press as an Agent of Change, Cambridge University Press, ISBN 0-521-29955-1
  • Febvre, Lucien; Martin, Henri-Jean (1997), The Coming of the Book: The Impact of Printing 1450-1800, London: Verso, ISBN 1-85984-108-2
  • ಹೆಲ್ಲೆರ್, ಸ್ಟೆವೆನ್ ಮತ್ತು ಮೆಗ್ಗ್ಸ್, ಫಿಲಿಪ್ B. Texts on Type: Critical Writings on Typography (c) 2001, ಆಲ್ ವೊರ್ತ್ ಪ್ರೆಸ್ಸ್, ಆಲ್ ವೊರ್ತ್ ಕಮ್ಯುನಿಕೇಷನ್ಸ್, ನ್ಯು ಯಾರ್ಕ್. ISBN 1-55439-006-0. ಮುದ್ರಣಕಲೆ ಮತ್ತು ಅಚ್ಚಿನ ವಿನ್ಯಾಸಗಳ ಇತಿಹಾಸ, ಆಚರಣೆ, ಮತ್ತು ಸೌಂದರ್ಯಶಾಸ್ತ್ರಗಳಮೇಲೆ ಐವತ್ತಕ್ಕೂ ಹೆಚ್ಚಿನ ಗ್ರಂಥಗಳ ಸಂಗ್ರಹಣೆ.
  • Hodge, A. Trevor (1992), Roman Aqueducts & Water Supply, London: Duckworth, ISBN 0-7156-2194-7
  • Hupp, Otto (1906), "Die Prüfeninger Weiheinschrift von 1119", Studien aus Kunst und Geschichte, Festschrift für Friedrich Schneider, Freiburg i. Br.: Herder
  • Koch, Walter (1994), Literaturbericht zur mittelalterlichen und neuzeitlichen Epigraphik (1985−1991), Monumenta Germaniae Historica: Hilfsmittel, vol. 14, München, p. 213, ISBN 978-3886121144{{citation}}: CS1 maint: location missing publisher (link)
  • ಲಾನ್ಸಿಯಾನಿ, R.: "ಟೊಪೊಗ್ರಾಪಿಯ ಡಿಐ ರೊಮ ಆಂಟಿಕ. I commentarii di Frontino intorno le acque e gli acquedotti. ಸಿಲ್ಲೊಜೆ ಎಪಿಗ್ರಾಫಿಕ ಅಕ್ವಾರಿಯ", ಇನ್: Memorie della Reale Accademia dei Lincei , Serie III, ವೋಲ್ಯುಮ್ IV, ಕ್ಲಾಸ್ಸೆ ಡಿಐ ಸೈಂಜೆ ಮೊರಾಲಿ, ರೋಮ್ 1881 (ಮರುಮುದ್ರಣ: ಕ್ವಾಸರ್ ಪಬ್ಲಿಷಿಂಗ್ ಹವ್ಸ್, 1975), ಪಿಪಿ. 215–616
  • Lehmann-Haupt, Hellmut (1940), "Englische Holzstempelalphabete des XIII. Jahrhunderts", Gutenberg-Jahrbuch: 93–97
  • Lipinsky, Angelo (1986), "La pala argentea del Patriarca Pellegrino nella Collegiata di Cividale e le sue iscrizioni con caratteri mobili", Ateneo Veneto, 24: 75–80
  • Man, John (2002), The Gutenberg Revolution: The Story of a Genius and an Invention that Changed the World, London: Headline Review, ISBN 978-0747245049
  • McLuhan, Marshall (1962), The Gutenberg Galaxy: The Making of Typographic Man (1st ed.), University of Toronto Press, ISBN 978-0802060419
  • Pace, Pietrantonio (1986), Gli acquedotti di Roma e il Aquaeductu di Frontino (2nd ed.), Rome: Art Studio S. Eligio
  • ಟ್ರೇಸಿ, ವಾಲ್ಟೆರ್ Letters of Credit 1986 ಗೊರ್ಡನ್ ಪ್ರಾಸೆರ್
  • Tschichold, Jan (1991). The Form of the Book: Essays on the Morality of Good Design . Vancouver: ಹಾರ್ಟ್‌ಲೈ & ಮಾರ್ಕ್ಸ್. ISBN 978-0-88179-034-4. ಮುದ್ರಣೀಯ ಕಲೆಯ ಪ್ರಬಂಧಗಳ ವಿಸ್ತಾರವಾದ ಸಂಗ್ರಹ. ಎ ಮೋರ್ ಕ್ಲಾಸಿಕ್ ಕಂಪಾನಿಯನ್ ಟು ಬ್ರಿಂಗಸ್ಟ್, ಅಬೋವ್.
  • Lexique des règles typographiques en usage à l'Imprimerie nationale , French: Imprimerie nationale, 2002, ISBN 2-7433-0482-0, ಪರ್ ಪ್ರೆಂಚ್ ಟೈಪೋಗ್ರಫಿ.
  • ಸ್ವಾನ್‌ಸೊನ್,ಗುನ್ನರ್ Graphic Design and Reading: explorations of an uneasy relationship (c) 2000, ಆಲ್ ವೊರ್ತ್ ಪ್ರೆಸ್ಸ್, ಆಲ್ ವೊರ್ತ್ ಕಮ್ಯುನಿಕೇಷನ್ಸ್, ನ್ಯು ಯಾರ್ಕ್. ISBN 1-55439-006-0. The Crystal Goblet, or Printing Should Be Invisible Beatrice Warde; Improving the Tool ಹ್ರಂಟ್ ಹೆಚ್. ಪಪಝಿಯನ್.
  • ಅಲೆಕ್ಸಾಂಡರ್ ಲಾವ್‌ಸೊನ್, Anatomy of a Typeface , 1990 ರಲ್ಲಿ ಮೊದಲಬಾರಿಗೆ ಪ್ರಕಟಿಸಲ್ಪಟ್ಟಿದೆ, ಪ್ರತ್ಯೇಕ ಅಥವಾ ಚಿಕ್ಕ ಗುಂಪಿನ ಅಚ್ಚಿನಕ್ಷರ ನಮೂನೆಗಳ ಬೆಳವಣಿಗೆ ಮತ್ತು ಉಪಯೋಗಗಳಿಗೆ ಸಂಪೂರ್ಣ ಅಧ್ಯಯಗಳನ್ನು ಸಮರ್ಪಿಸಲಾಗಿದೆ. ISBN 978-0-87923-333-4
  • ವೈಟ್, ಅಲೆಕ್ಸ್ W. (1999). Type in Use — Effective typography for electronic publishing (ವರ್ಸನ್ 2.0). W.W. ನೊರ್ಟೊನ್ & ಕಂಪನಿ, ನ್ಯು ಯಾರ್ಕ್ ಸೇರಿ. ISBN 0-393-73034-4 (ಪಿಬಿಕೆ).
  • ಮಾರ್ಟಿನೆಜ್ ಡಿ ಸೌಸ, ಜೊಸೆ, Manual de estilo de la lengua española , 3.ª ed., ಜಿಜೊನ್: ಟ್ರೆಯ, 2007. ಫರ್ ಸ್ಪಾನಿಷ್ ಟೈಪೋಗ್ರಾಫಿ.
  • —, Ortografía y ortotipografía del español actual , 2.ª ed., ಜಿಜೊನ್: ಟ್ರೆಯ, 2008. ಫರ್ ಸ್ಪಾನಿಷ್ ಟೈಪೋಗ್ರಾಫಿ.
  • ಮೆಸ್ಟ್ರೆಸ್, ಜೊಸೆಪ್ M.; ಕೊಸ್ಟ, ಜಾನ್; ಒಲಿವ, ಮಿರೆಯ; ಪಿಟೆ, ರಿಕಾರ್ಡ್. Manual d'estil. La redacció i l'edició de textos . 4a ed., rev. i ampl. Vic / Barcelona: Eumo / UB / UPF / Rosa Sensat, 2009. ಫರ್ ಕಟಲನ್ ಟೈಪೋಗ್ರಫಿ.
  • ಪುಜೊಲ್, J. M., i ಸೊಲ, ಜಾನ್: Ortotipografia. Manual de l'autor, l'autoeditor i el dissenyador gràfic , 2a ed., rev. Barcelona: Columna, 2000. ಫರ್ ಕಟಲನ್ ಟೈಪೋಗ್ರಫಿ.
  • Gill, Eric (2000) [1931]. An Essay on Typography. David R Godine. p. 188. ISBN 0879239506.

ಹೊರಗಿನ ಕೊಂಡಿಗಳು

[ಬದಲಾಯಿಸಿ]