ವಿಷಯಕ್ಕೆ ಹೋಗು

ಕಾರ್ಮಿಕ ಕಾನೂನು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:Colliery.jpg
ಕಾರ್ಮಿಕ ಕಾನೂನು ಮಾಲಿಕ ಮತ್ತು ಕೆಲಸಗಾರರ ನಡುವಿನ ತಾರತಮ್ಯ ನೀಗಿಸುತ್ತದೆ.

"ಕಾರ್ಮಿಕ ಕಾನೂನು (ಅಥವಾ"ಲೇಬೊರ್", ಅಥವಾ"ಉದ್ಯೋಗ" ಕಾನೂನು) ಇದನ್ನು ಕಾನೂನಿನ ರಚನೆಗಳು ಎನ್ನಲಾಗುತ್ತದೆ.ಅಲ್ಲದೇ ಆಡಳಿತಾತ್ಮಕ ನಿಯಮಗಳು,ಅದಲ್ಲದೇ ಕಾನೂನು ಹಕ್ಕುಗಳ ವಿವರಣೆ ಮಾಡುವ,ನಿಬಂಧನೆಗಳುಕಾರ್ಯನಿರತ ಜನರು ಅಲ್ಲದೇ ಅವರ ಸಂಘಟನೆಗಳ ವಿವರವನ್ನೊಳಗೊಂಡಿದೆ. ಇದು ಟ್ರೇಡ್ ಯುನಿಯನ್,ಕಾರ್ಮಿಕ ಸಂಘಟನೆಗಳ ಸಂಬಂಧಿಸಿದ ಹಲವಾರು ಅಂಶಗಳನ್ನು,ಉದ್ಯೋಗದಾತರು ಮತ್ತು ಕಾರ್ಮಿಕರು ಇವರ ಬಗ್ಗೆ ವಿವರಗಳನ್ನು ತಿಳಿಸುತ್ತದೆ. ಕೆನಡಾದಲ್ಲಿ ಉದ್ಯೋಗಕ್ಕೆ ಸಂಬಂಧಿಸಿದ ಕಾನೂನುಗಳು ಒಟ್ಟುಗೂಡಿದ ಕೆಲಸದ ತಾಣಗಳ ಬಗ್ಗೆ ಹೇಳುತ್ತವೆಯೇ ವಿನಹ ವ್ಯಕ್ತಿಗಳ ವಿಷಯವನ್ನಲ್ಲ. ಆದರೆ ಈ ತೆರನಾದ ವ್ಯತ್ಯಾಸವನ್ನು ಬಹುತೇಕ ದೇಶಗಳಲ್ಲಿ ಮಾಡುವುದಿಲ್ಲ. ಹೇಗೆಯಾದರೂ ಕಾರ್ಮಿಕ ಕಾನೂನು ವಿಭಾಗದಲ್ಲಿ ಎರಡು ವಿಶಾಲ ವರ್ಗದ ಹಂತಗಳಿವೆ. ಮೊದಲಿಗೆ ಸಮೂಹ ಕಾರ್ಮಿಕ ಕಾನೂನು, ಮೂರು ತೆರನಾದ ಸಂಬಂಧವನ್ನು ವ್ಯಾಖ್ಯಾನಿಸುತ್ತದೆ,ಅದು ಕಾರ್ಮಿಕ,ಉದ್ಯೋಗದಾತ ಮತ್ತು ಕಾರ್ಮಿಕ ಸಂಘಟನೆಗಳ ನಡುವೆ ಇರುವ ಕೊಂಡಿಯನ್ನು ವಿವರಿಸುತ್ತದೆ. ಎರಡನೆಯದಾಗಿ, ವೈಯಕ್ತಿಕ ಕಾರ್ಮಿಕ ಕಾನೂನು,ಇದು ಕಾರ್ಮಿಕರ ಕೆಲಸದ ಜಾಗೆಯಲ್ಲಿನ ಹಕ್ಕುಗಳ ಬಗ್ಗೆ ಹೇಳುತ್ತದೆ,ಅದಲ್ಲದೇ ಒಪ್ಪಂದ ಮೇರೆಗೆ ಕೆಲಸದ ವಿಷಯವನ್ನು ಅದು ವಿವರಿಸುತ್ತದೆ. ಆಗಿನ ಕಾರ್ಮಿಕ ಚಳವಳಿಯು ಕಾರ್ಮಿಕ ಹಕ್ಕುಗಳ ಕುರಿತಾದ ಕಾನೂನು ರೂಪಿಸುವಂತೆ ೧೯ ಮತ್ತು ೨೦ ನೆಯ ಶತಮಾನದಲ್ಲಿ ಪ್ರೇರಕವಾದವು. ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗೆ ಕಾರ್ಮಿಕ ಹಕ್ಕುಗಳು ಸಮಗ್ರತೆ ನೀಡಿದವಲ್ಲದೇ ಅವುಗಳು ಕೈಗಾರಿಕಾ ಕ್ರಾಂತಿಯ ಕಾಲದಿಂದಲೂ ತಮ್ಮ ಪ್ರಭಾವ ಬೀರಿವೆ.

ಕಾರ್ಮಿಕ ಕಾನೂನಿನ ಚರಿತ್ರೆ

[ಬದಲಾಯಿಸಿ]

ಕಾರ್ಮಿಕ ಕಾನೂನು ಜಾರಿಗೆ ಹಲವಾರು ಕಾರಣಗಳಿವೆ;ಉತ್ತಮ ಕೆಲಸದ ವಾತಾವರಣಕ್ಕಾಗಿ ಕೆಲಸಗಾರರ ಬೇಡಿಕೆ,ಸಂಘಟನೆಗೆ ಹಕ್ಕುಗಳು,ಅಲ್ಲದೇ ಈ ಕೆಲಸಗಾರರ ಸಂಘಗಳಮಿತಿ ಮೀರಿದ ಬೇಡಿಕೆಗಳಿಗೆ ನಿರ್ಭಂಧ ಹಾಕಬೇಕೆಂದು ಉದ್ಯೋಗದಾತರ ಒತ್ತಡ ಹಾಗು ಕಾರ್ಮಿಕ ವೆಚ್ಚಗಳ ಕಡಿತಗೊಳಿಸಬೇಕೆಂಬ ಒತ್ತಾಯಗಳು ಈ ಕಾರ್ಮಿಕ ಕಾನೂನು ಹುಟ್ಟಲು ಕಾರಣವಾದವು. ಉದ್ಯೋಗದಾತರ ವೆಚ್ಚಗಳು ಹೆಚ್ಚಾಗಲು ಕಾರ್ಮಿಕರು ಸಂಘಟನೆಗಳ ಮೂಲಕ ಹೆಚ್ಚು ವೇತನಕ್ಕೆ ಆಗ್ರಹ,ಅಥವಾ ಕಾನೂನುಗಳ ಅಳವಡಿಕೆಯ ಖರ್ಚು ಅಧಿಕವಾಗುವುದು,ದುಬಾರಿ ಬೇಡಿಕೆಗಳಿಂದಾಗಿ ಕೆಲಸ ನೀಡುವವರ ಖರ್ಚು ಅಧಿಕಗೊಳ್ಳುತ್ತದೆ.ಉದಾಹರಣೆಗೆ ಆರೋಗ್ಯ ಮತ್ತು ಕಲ್ಯಾಣ ಸೌಲಭ್ಯಗಳು ಅಥವಾ ಉದ್ದಿಮೆಯಲ್ಲಿ ಸಮಪಾಲು ಇತ್ಯಾದಿ ವೆಚ್ಚ ಹೆಚ್ಚಾಗಲು ಕಾರಣ. ಕೆಲಸಗಾರರ (ಕಾರ್ಮಿಕರ) ಸಂಘಟನೆಗಳಾದ ಟ್ರೇಡ್ ಯುನಿಯನ್ಸ್ ಗಳು ಕೈಗಾರಿಕೆ ಕ್ಷೇತ್ರದಲ್ಲಿನ ನೈಜ ಸಮಸ್ಯೆಗಳನ್ನು ಬಿಂಬಿಸಿ ರಾಜಕೀಯ ವಲಯದಲ್ಲೂ ತಮ್ಮ ಲಾಭ ಪಡೆದ ಉದಾಹರಣೆಗಳಿವೆ. ಆದ್ದರಿಂದ ಕಾರ್ಮಿಕ ಕಾನೂನಿನ ಯಥಾಸ್ಥಿತಿ ಎಂದರೆ ಅದು ಯಾವುದೇ ಕಾಲದ ಉತ್ಪಾದನೆ,ಅದರ ಅಂಶ ಹಾಗು ಸಮಾಜದ ವಿಭಿನ್ನ ಹಿತಾಸಕ್ತಿಗಳೊಂದಿಗಿನ ಸಂಘರ್ಷವಾಗಿದೆ.

ವೈಯಕ್ತಿಕ ಕಾರ್ಮಿಕ ಕಾನೂನು

[ಬದಲಾಯಿಸಿ]

ಉದ್ಯೋಗದ ಒಪ್ಪಂದದ ಕರಾರು

[ಬದಲಾಯಿಸಿ]

ಯಾವುದೇ ದೇಶದ ಕಾರ್ಮಿಕ ಕಾನೂನುಗಳನ್ನು ಗಮನಿಸಿದರೆ ಅದು ಉದ್ಯೋಗದಾತ ಮತ್ತು ಕಾರ್ಮಿಕನ ಹಿತಾಸಕ್ತಿಗಳ ರಕ್ಷಣೆಯೇ ಆಗಿದೆ.ಇವರಿಬ್ಬರ ನಡುವೆ ಆಗುವ ಉದ್ಯೋಗ ಕುರಿತಾದ ಒಪ್ಪಂದ-ಕರಾರು ಇದನ್ನು ವಿವರಿಸುತ್ತದೆ. ಇದಕ್ಕೆ ಕಾರಣವೆಂದರೆ ಊಳಿಗ ಮಾನ್ಯ ಪದ್ದತಿಯ ವಿನಾಶ ಹಾಗು ಆಧುನಿಕ ಆರ್ಥಿಕ ಸಂಬಂಧಗಳ ಅಗ್ರ ಸಂಬಂಧವು ಹೊಸತನಕ್ಕೆ ನಾಂದಿ ಹಾಡಿತು. ಈ ಕೆಲಸದ ಕರಾರು ಅಥವಾ ಒಡಂಬಡಿಕೆಗಳ ನೀತಿ-ನಿಯಮ-ನಿಯಂತ್ರಣಗಳ ಬಗ್ಗೆ ಸಾಮಾನ್ಯ ಇಲ್ಲವೆ ಕಾರ್ಮಿಕ ಕಾನೂನು ತಿಳಿಸುತ್ತದೆ.ಇದರಲ್ಲಿ ಜನರ ಕೆಲಸವನ್ನು ನಿರ್ಭಂದಿಸಿ,ಕಾರ್ಮಿಕರ ಹಿತಾಸಕ್ತಿಗೆ ಪೂರಕವಾದ ಹಲವಾರು ಸೌಲಭ್ಯಗಳನ್ನು ವಿತರಿಸುವ ಮೂಲಕ ಕಾರ್ಮಿಕ ವಲಯದ ಮಾರುಕಟ್ಟೆಯಲ್ಲಿ ಹೆಸರೂ ಮಾಡಬೇಕಾಗುತ್ತದೆ. ಅದೇ U.S.ನಲ್ಲಿ ಬಹುತೇಕ ರಾಜ್ಯ ಕಾನೂನುಗಳು "ಮನಸೋಚ್ಛೆ" ನಡೆಯುವಂತೆ ಇರುತ್ತವೆ.ಅದೆಂದರೆ ಉದ್ಯೋಗದಾತನು ಯಾವಾಗ ಬೇಕಾದರೂ ಕಾರ್ಮಿಕನನ್ನು ಕಾನೂನುಬಾಹಿರವಲ್ಲದ ಕಾರಣಗಳಿಗಾಗಿ ಕೆಲಸದಿಂದ ವಜಾ ಮಾಡಬಹುದಾಗಿದೆ.ಅಂದರೆ ಸಾರ್ವಜನಿಕ ಸೂತ್ರಗಳ ನೀತಿ-ನಿಯಮ ಉಲ್ಲಂಘನೆಯೂ ಕಾರ್ಮಿಕನನ್ನು ತೆಗೆಯಲು ಅವಕಾಶವಿರುತ್ತದೆ.[] ಹಲವಾರು ದೇಶಗಳಲ್ಲಿ[] ಉದ್ಯೋಗದಾತನು ತನ್ನ ಉದ್ಯೋಗದ ಮಾಹಿತಿಗಳನ್ನು ಲಿಖಿತ ರೂಪದಲ್ಲಿ ಒದಗಿಸಬೇಕಾಗುತ್ತದೆ.ಅದನ್ನು ಎಸೆಸ್ನ್ಸಿಲಿಯಾ ನೆಗೊಶೀ ಎಂದು ಆ ಒಪ್ಪಂದಕ್ಕೆ ಲ್ಯಾಟಿನ್ ಭಾಷೆಯಲ್ಲಿ ಹೇಳಲಾಗುತ್ತದೆ,ಅಂದರೆ ಕಾರ್ಮಿಕನಿಗಾಗಿ ಅಗತ್ಯ ಕೆಲಸದ ನಿಯಮಾವಳಿಗಳು) ಇದು ಕಾರ್ಮಿಕನಿಗೆ ತನ್ನ ನಿರೀಕ್ಷೆ ಮತ್ತು ಭವಿಷ್ಯದ ಬೇಡಿಕೆಗಳ ಬಗ್ಗೆ ಒಂದು ಕಲ್ಪನೆ ಮೂಡುತ್ತದೆ;ಕೂಲಿ ಹಣ,ರಜಾದಿನದ ಹಕ್ಕುಗಳು,ವಜಾಕಾಲದಲ್ಲಿನ ಪೂರ್ವ ತಿಳಿವಳಿಕೆ ಹೀಗೆ ಹಲವಾರು ವಿಷಗಳಿರುತ್ತವೆ. ಕೆಲವೊಮ್ಮೆ ಉದ್ಯೋಗದಾತ ಕಾನೂನು ಪ್ರಕಾರವಾಗಿ ಕರಾರನ್ನು ಬರೆದು ಕೊಡಲಾರ ಏಕೆಂದರೆ ಆತ ನೀಡುವ ವೇತನ ಅಥವಾ ಕೂಲಿಯು ಅತ್ಯಂತ ಕಡಿಮೆ ಪ್ರಮಾಣದ್ದಾಗಿರಬಹುದು. ಆದರೆ ಒಬ್ಬ ಕಾರ್ಮಿಕನು ತನ್ನ ಕೆಲಸವನ್ನು ಕಳೆಯುವ ಬಗ್ಗೆ ಉದ್ಯೋಗದಾತನಿಗೆ ನೀಡುವ ಹಕ್ಕನ್ನು ನಿರಾಕರಿಸುತ್ತಾನೆ.ಅಥವಾ ಅಸಂಬದ್ದವಾಗಿ ತನ್ನ ಕೆಲಸಕ್ಕೆ ಕುತ್ತು ಬರಬಹುದೆಂಬ ಕಾರಣವೂ ಇದರ ಹಿಂದಿದೆ. ಇನ್ನೂ ಕೆಲವೆಡೆ ಜನರು ಇಂತಹ ಕಾನೂನು ಬಾಹಿರ ಇಲ್ಲವೇ ಅಸಮಂಜಸ ಕರಾರುಗಳಿಗೆ ಒಪ್ಪದೇ ಇರಬಹುದು. ಹೇಗೆಯಾದರೂ ಆಯಾ ದೇಶದ ಕಾನೂನು ಇದನ್ನು ತನ್ನ ಮಸೂದೆಯಲ್ಲಿ ವ್ಯಾಖ್ಯಾನಿಸಿ ಕೆಲಸ-ಕಾರ್ಮಿಕ ಸಂಬಂಧಗಳನ್ನು ಸ್ಪಷ್ಟವಾಗಿ ಉಲ್ಲೇಖಿಸುತ್ತದೆ.[]

ಕನಿಷ್ಠ ವೇತನ

[ಬದಲಾಯಿಸಿ]

ಪ್ರತಿಯೊಬ್ಬ ಕಾರ್ಮಿಕನಿಗೂ ಕನಿಷ್ತ ವಿತನ ನೀಡುವ ಬಗ್ಗೆ ಒಂದು ಕಾನೂನನ್ನು ರೂಪಿಸಲಾಗಿರುತ್ತದೆ. ಆಸ್ಟ್ರೇಲಿಯಾ,ಬೆಲ್ಜಿಯಮ್ ,ಕೆನಡಾ,ಚೀನಾ,ಫ್ರಾನ್ಸ್ ,ಗ್ರೀಸ್ ,ಹಂಗೇರಿ,ಇಂಡಿಯಾ,ಐರ್ಲೆಂಡ್ ,ಜಪಾನ್ ,ಕೊರಿಯಾ,ಲಕ್ಸೆಂಬರ್ಗ್ ,ದಿ ನೆದರ್ ಲ್ಯಾಂಡ್ಸ್ ,ನ್ಯುಜಿಲ್ಯಾಂಡ್ ,ಪರ್ಗ್ವೆ,ಪೊರ್ಚಗಲ್ ,ಪೊಲಂಡ್ ,ರೊಮಾನಿಯಾ,ಸ್ಪೇನ್ ,ತೈವಾನ್ ,ದಿ ಯುನೈಟೆಡ್ ಕಿಂಗ್ಡಮ್ ,ದಿ ಯುನೈಟೆಡ್ ಸ್ಟೇಟ್ಸ್ ,ಇನ್ನುಳಿದಂತೆ ಎಲ್ಲಾ ದೇಶಗಳು ಈ ಕನಿಷ್ಟ ವೇತನ-ಕೂಲಿ ಕಾರ್ಮಿಕ ಕಾನೂನನ್ನು ಜಾರಿಗೆ ತಂದಿವೆ. ಕನಿಷ್ಟ ವೇತನವು ಸಾಮಾನ್ಯವಾಗಿ ಅತ್ಯಂತ ಕಡಿಮೆ ವೇತನಗಿಂತ ವಿಭಿನ್ನವಾಗಿರುತ್ತದೆ;ಇದನ್ನು ಪೂರೈಕೆ ಮತ್ತು ಬೇಡಿಕೆಯ ಸೂಚ್ಯಂಕದ ಮೇಲೆ ನಿರ್ಧರಿಸಲಾಗುತ್ತದೆ.ಇದು ಮುಕ್ತ ಮಾರುಕಟ್ಟೆಯಲ್ಲಿ ಬೆಲೆ ನಿಗದಿಯ ತಳಪಾಯವಾಗಿರುತ್ತದೆ. ಪ್ರತಿಯೊಂದು ದೇಶವು ಕನಿಷ್ಟ ವೇತನ ಮತ್ತು ನಿಯಂತ್ರಣದ ಕಾನೂನನ್ನು ಹೊಂದಿರುತ್ತವೆ;ಬಹುತೇಕ ಎಲ್ಲಾ ಕೈಗಾರಿಕರಣಗೊಂಡ ದೇಶಗಳಲ್ಲಿ ಕನಿಷ್ಟ ಕೂಲಿ ನಿಗದಿಯಾಗಿರುತ್ತದೆ,ಆದರೆ ಅಭಿವೃದ್ಧಿಹೊಂದುತ್ತಿರುವ ದೇಶಗಳಲ್ಲಿ ಇದು ಇನ್ನೂ ಪೂರ್ಣ ಪ್ರಮಾಣದಲ್ಲಿಲ್ಲ. ಕೆಲವು ದೇಶಗಳಲ್ಲಿ ಈ ಕಾನೂನು ಇಲ್ಲದಿದ್ದರೂ ಅದರ ಕನಿಷ್ಟ ಮತ್ತು ಪೂರಕ ನಿಯಮಾವಳಿಗಳನ್ನು ರೂಪಿಸಲಾಗಿರುತ್ತದೆ. ಆದರೆ ಸ್ವೀಡನ್ ನಲ್ಲಿ ಕಾರ್ಮಿಕ ಮಾರುಕಟ್ಟೆಯಲ್ಲಿನ ಪ್ರವೃತ್ತಿಗನುಗುಣವಾಗಿ ವೇತನ ನೀಡಲಾಗುತ್ತದೆ.(ಯುನಿಯನ್ ಗಳು ಮತ್ತು ಉದ್ಯೋಗದಾತರ ಮೇಲೆ ಅವಲಂಬನೆ)ಒಟ್ಟು ಸಮೂಹದ ನಿಯಮ್ಗಳು ಅಸಂಘಟಿತ (ಮಾಲಿಕರನ್ನೂ)ಕಾರ್ಮಿಕರನ್ನೂ ಒಳಗೊಂಡಿರುತ್ತವೆ. ಕನಿಷ್ಟ ವೇತನ ಕುರಿತ ಕಾನೂನುಗಳು ಮೊದಲು ರಾಷ್ಟ್ರೀಯವಾಗಿ ಯುನೈಟೆಡ್ ಸ್ಟೇಟ್ಸನಲ್ಲಿ [] ೧೯೩೮ ರಲ್ಲಿ ಪರಿಚಯಗೊಂಡವು,ಭಾರತದಲ್ಲಿ ೧೯೪೮,ಫ್ರಾನ್ಸ್ ನಲ್ಲಿ [] ೧೯೫೦ ಮತ್ತು ಯುನೈಟೆಡ್ ಕಿಗ್ಡಮ್ ನಲ್ಲಿ [] ೧೯೯೮ ರಲ್ಲಿ. ಯುರೊಪಿಯನ್ ಯುನಿಯನ್,ನ ೨೫ ಸದಸ್ಯ ದೇಶಗಳಲ್ಲಿನ ೧೮ ರಲ್ಲಿ ಸದ್ಯ ರಾಷ್ಟ್ರೀಯ ಕನಿಷ್ಟ ಕೂಲಿ ನಿಯಮವಿದೆ.[]

ಕೆಲಸದ ವೇಳೆ

[ಬದಲಾಯಿಸಿ]

ಕೈಗಾರಿಕಾ ಕ್ರಾಂತಿಯ ಮೊದಲು ಕೆಲಸದ ಅವಧಿಯು ೧೧ ರಿಂದ ೧೪ ಗಂಟೆಗಳ ವರೆಗೆ ಇತ್ತು. ಕೈಗಾರಿಕಾ ಪದ್ದತಿ ಬೆಳೆದಂತೆ ಮತ್ತು ಯಂತ್ರಗಳ ಪರಿಚಯಿಸಿದಂತೆ ಅತಿ ಹೆಚ್ಚು ಕೆಲಸದ ಅವಧಿ ಸಾಮಾನ್ಯವಾಯಿತಾದರೂ ೧೪-೧೫ ಗಂಟೆಗಳ ಕೆಲಸದ ಅವಧಿ ಇತ್ತು,ಆದರೆ ೧೬ ಗಂಟೆಯ ಕೆಲಸದ ಅವಧಿಯೂ ಕೆಲವೆಡೆ ಇತ್ತು. ಫ್ಯಾಕ್ಟರಿಗಳಲ್ಲಿಬಾಲಕಾರ್ಮಿಕರನ್ನೂ ಉಪಯೋಗಿಸಲಾಗುತಿತ್ತು. ಆಗ ೧೭೮೮ ರಲ್ಲಿ ಇಂಗ್ಲೆಂಡ್ ಮತ್ತು ಸ್ಕಾಟ್ ಲ್ಯಾಂಡ್ ಗಳಲ್ಲಿದ್ದ ಜಲಶಕ್ತಿಯ ಫ್ಯಾಕ್ಟರಿಗಳಲ್ಲಿ ಎರಡು-ಮೂರಾಂಶರಷ್ಟು ಬಾಲಕಾರ್ಮಿಕರು ಕೆಲಸ ಮಾಡುತ್ತಿದ್ದರು.[] ಕೆಲಸದ ಎಂಟು-ಗಂಟೆಗಳ ಚಳವಳಿ ೧೮೩೩ ರಲ್ಲಿ ಇಂಗ್ಲೆಂಡ್ ನಲ್ಲಿ ಕೆಲಸದ ಅವಧಿಯ ಕಾನೂನನ್ನು ತಂದು, ಗಣಿಕಾರ್ಮಿಕರಿಗೆ ೧೨ ಗಂಟೆಗಳು ಮತ್ತು ಬಾಲಕಾರ್ಮಿಕರಿಗೆ ೮ ಗಂಟೆಗಳೆಂದು ನಿಯಮ ರೂಪಿಸಲು ಕಾರಣವಾಯಿತು. ಮುಂದೆ ೧೦-ಗಂಟೆಗಳ ಅವಧಿಯ ಕೆಲಸವನ್ನು ೧೮೪೮ ರಲ್ಲಿ ನಿಗದಿ ಮಾಡಲಾಯಿತು.ಅದರ ನಂತರ ಅದರ ಕೂಲಿ ನಿಗದಿಗೂ ಕ್ರಮ ಕೈಗೊಳ್ಳಲಾಯಿತು. ಮೊದಲ ಬಾರಿಗೆ ೧೮೦೨ ರಲ್ಲಿಫ್ಯಾಕ್ಟರಿ ಆಕ್ಟ್ ಎಂಬ ಕಾರ್ಮಿಕ ಕಾನೂನನ್ನು UK ನಲ್ಲಿ ಜಾರಿ ಮಾಡಲಾಯಿತು. ಇಂಗ್ಲೆಂಡ್ ನಂತರ ಜರ್ಮನಿಯು ಮೊದಲ ಬಾರಿಗೆ ಕಾರ್ಮಿಕ ಕಾನೂನುಗಳನ್ನು ಜಾರಿ ಮಾಡಿತು.ಚಾನ್ಸಲರ್ ಆಗಿದ್ದ ಬಿಸ್ಮಾರ್ಕ್ ಗೆ ಸೊಸಿಯಲ್ ಡೆಮಾಕ್ರಾಟಿಕ್ ಪಾರ್ಟಿ ಆಫ್ ಜರ್ಮನಿಯನ್ನು (SPD)ಕೆಳಮಟ್ಟಕ್ಕೆ ತರುವ ಗುರಿ ಇತ್ತು. ಆದರೆ ಬಿಸ್ಮಾರ್ಕ್ ೧೮೭೮ ರಲ್ಲಿ ಹಲವಾರು ಸಮಾಜವಿರೋಧಿ ಕ್ರಮಗಳನ್ನು ತೆಗೆದುಕೊಳ್ಳಲಾರಂಭಿಸಿದ,ಆದರೂ ಸಮಾಜವಾದಿಗಳು ರೀಚ್ ಸ್ಟ್ಯಾಗ್ ನಲ್ಲಿ ಸ್ಥಾನಗಳನ್ನು ಗೆದ್ದುಕೊಳ್ಳಲು ಆರಂಭಿಸಿದರು. ಹೀಗೆ ಚಾನ್ಸ್ ಲರ್ ಈ ಸಂದರ್ಭದಲ್ಲಿ ಸಮಾಜವಾದ ಪದ್ದತಿಯನ್ನು ನಿಯಂತ್ರಿಸಲು ವಿಭಿನ್ನ ಕ್ರಮಕ್ಕೆ ಮುಂದಾದ. ಕಾರ್ಮಿಕ ಸಮೂಹವನ್ನು ತೃಪ್ತಿಪಡಿಸಲು,ಉತ್ತೇಜಿಸಲು ಆತ ಹಲವಾರು ಕಲ್ಯಾಣ ಕಾರ್ಯಕಮಗಳನ್ನು ಹಾಕಿಕೊಂಡ.ಇವುಗಳು ಮೊದಲ ಬಾರಿಗೆ ಸಾಮಾಜಿಕ ಭದ್ರತೆ ಎಂಬಂತೆ ಮೂಡಿದವು. ಅದೇ ವರ್ಷ ೧೮೮೩ ರಲ್ಲಿ ಆರೋಗ್ಯ ವಿಮೆ ಕಾನೂನು,ಇದು ಕಾರ್ಮಿಕರ ಆರೋಗ್ಯದ ಭದ್ರತೆಗೆ ಕಾರಣವಾಯಿತು,ಇದಕ್ಕಾಗಿ ನೀಡುವ ನಿಧಿಗೆ ಕೆಲಸಗಾರ ಎರಡು-ಮೂರಾಂಶವಾದರೆ ಮಾಲಿಕ ಒಂದ್ಮೂರಾಂಶ ಕೊಡುಗೆ ನೀಡಲು ಆರಂಭಿಸಿದ. ಅದೇ ರೀತಿಯಾಗಿ ೧೮೮೪ ರಲ್ಲಿ ಅಪಘಾತ ವಿಮೆ ಜಾರಿಗೆ ಬಂದರೆ ೧೮೮೯ ರಲ್ಲಿ ಪಿಂಚಣಿ ಯೋಜನೆಗೆ ಚಾಲನೆ ದೊರೆಯಿತು. ಇನ್ನುಳಿದ ಕಾನೂನುಗಳು ಮಹಿಳೆಯರು ಮಕ್ಕಳ ನೇಮಕಕ್ಕೆ ನಿರ್ಭಂಧ ಹೇರಿದವು. ಆದರೆ ಈ ಪ್ರಯತ್ನಗಳು ಯಶಸ್ವಿಯಾಗಲಿಲ್ಲ.ಬಿಸ್ಮಾರ್ಕ್ ನ ಅಭಿವೃದ್ಧಿಯ ತೀವ್ರ ವಿರೋಧಿ ಧೋರಣೆಯಿಂದ ಕಾರ್ಮಿಕರ ಒಗ್ಗಟ್ಟು ಸರಿಯಾಗಿ ಹೊರ ಹೊಮ್ಮಲಿಲ್ಲ. ಫ್ರಾನ್ಸ್ ನಲ್ಲಿ ಮೊದಲ ಕಾರ್ಮಿಕ ಕಾನೂನು ೧೮೪೧ ರಲ್ಲಿ ಜನಾದೇಶ ಪಡೆಯುತು. ಆದರೆ,ಇದು ಅಪ್ರಾಪ್ತ ಗಣಿ ಕೆಲಸಗಾರರು,ಅವರ ಕೆಲಸದ ಅವಧಿಗೆ ಮಾತ್ರ ಸೀಮಿತಗೊಂಡಿತ್ತು.ಇದುಥರ್ಡ್ ರಿಪಬ್ಲಿಕ್ ಕಾರ್ಮಿಕ ಕಾನೂನು ಅನುಷ್ಠಾನಗೊಳ್ಳುವ ವರೆಗೂ ಇದು ಸುಧಾರಣೆ ಕಾಣಲಿಲ್ಲ.ಆದರೆ ಮುಖ್ಯವಾಗಿವಾಲ್ಡೆಕ್-ರೌಸ್ಸೆಯು ಕಾನೂನು ೧೮೮೪ ರಲ್ಲಿಟ್ರೇಡ್ ಯುನಿಯನ್ಸ್ ಗಳನ್ನು ಕಾನೂನುಬದ್ದಗೊಳಿಸಿತು ನಂತರ ಮಟಿಗ್ನಾನ್ ಆಕಾರ್ಡ್ಸ್,ನಂತೆ ಪಾಪ್ಯುಲರ್ ಫ್ರಂಟ್ (೧೯೩೬–೩೮)ರಲ್ಲಿ ಕಾನೂನುಗಳ ರೂಪಿಸಿ ಎರಡು ವಾರ ಅಂದರೆ ೧೨ ದಿನಗಳೆಂದು ಕೆಲಸದ ಅವಧಿ ನಿಗದಿ ಮಾಡಿತು.(ಎರಡು ವಾರಗಳು)ಪ್ರತಿವರ್ಷ ಸಂಬಳಸಹಿತ ರಜೆಗಳ ನ್ನು ಕಾರ್ಮಿಕರಿಗೆ ನೀಡಿತಲ್ಲದೇ ವಾರಕ್ಕೆ ೪೦ ಗಂಟೆಗಳ ಕೆಲಸದ ಅವಧಿಯನ್ನು ನಿಗದಿ ಮಾಡಿತು.(ಹೆಚ್ಚುವರಿ ಕೆಲಸ ಹೊರತುಪಡಿಸಿ)

  • ಲಿಕ್ನೆರ್ ವಿ. ನ್ಯುಯಾರ್ಕ್ , ೧೯೮ U.S. ೪೫ (೧೯೦೫), ಇದೊಂದು ಅಸಂಬದ್ದ ನಿಯಮವಾಗಿತ್ತು ಈಗ ನಿಷ್ಕ್ರಿಯೆಗೊಂಡಿದೆ.US ಸುಪ್ರಿಮ್ ಕೋರ್ಟ್ ಕೆಲಸದ ಅವಧಿಯನ್ನು (ಬೇಕರಿ ಕೆಲಸಗಾರರಿಗೆ)ದಿನಕ್ಕೆ ೧೦ ಗಂಟೆಗಳೆಂದು ನಿಗದಿಗೊಳಿಸಿತು.

ಆರೋಗ್ಯ ಮತ್ತು ಸುರಕ್ಷತೆ

[ಬದಲಾಯಿಸಿ]

ಇನ್ನುಳಿದ ಕಾರ್ಮಿಕ ಕಾನೂನುಗಳು ಸುರಕ್ಷತೆಯ ಕುರಿತ ನಿಯಮಗಳನ್ನು ಹೊಂದಿವೆ. ಆರಂಭಿಕ ಇಂಗ್ಲಿಷ್ಫ್ಯಾಕ್ಟರಿ ಕಾನೂನನ್ನು೧೮೦೨ ರಲ್ಲಿ ರೂಪಿಸಲಾಯಿತು.ಇದು ಕಾರ್ಮಿಕರ ಸುರಕ್ಷತೆ ಮತ್ತು ಆರೋಗ್ಯವನ್ನು ಗುರಿಯಾಗಿಟ್ಟಿತ್ತು. ಅದರಲ್ಲೂ ಮುಖ್ಯವಾಗಿ ಮಕ್ಕಳು ಜವಳಿ ಕೆಲಸಗಾರರ ಬಗ್ಗೆ ಹೆಚ್ಚು ಗಮನ ಹರಿಸಿತು.

ಭೇದಭಾವ-ವಿರೋಧಿ

[ಬದಲಾಯಿಸಿ]

ಈ ಅಧಿನಿಯಮದಡಿ ಕೆಲಸಗಾರರ ವಿರುದ್ದದ ಭೇದಭಾವವು ನೈತಿಕವಾಗಿ ಒಪ್ಪಲಾಗದ್ದು ಮತ್ತು ಕಾನೊನುಬಾಹಿರವಾಗಿದೆ.ಇದಕ್ಕೆ ಪ್ರಮುಖ ಕಾರಣವೆಂದರೆ ಜನಾಂಗೀಯ ಭೇದಭಾವ ಅಥವಾ ಲಿಂಗ ಭೇದಭಾವ ಇತ್ಯಾದಿಗಳಿವೆ.

ವಿನಾಕಾರಣ ವಜಾ

[ಬದಲಾಯಿಸಿ]

ಕನ್ವೆನ್ಸಶನ್ ನಂ.೧೫೮ರ ಇಂಟರ್ ನ್ಯಾಶನಲ್ ಲೇಬರ್ ಆರ್ಗೈನೈಜೇಶನ್ ಹೇಳುವ ಪ್ರಕಾರ ಯಾವುದೇ ಕೆಲಸಗಾರನನ್ನು ಯಾವುದೇ ಕಾನೂನು ಸಕಾರಣವಿಲ್ಲದೇ "ಕೆಲಸದಿಂದ ವಜಾಗೊಳಿಸದೇ" ಅದಕ್ಕಿಂತ ಮುಂಚೆ ತನ್ನಕೆಲಸದ ಬಗ್ಗೆ"ಆತನಿಗೆ ವಿವರಿಸಲು ಅವಕಾಶ ನೀಡಬೇಕಾಗುತ್ತದೆ". ಹೀಗೆ,೨೦೦೬ ರ ಏಪ್ರಿಲ್ ೨೮ ರಲ್ಲಿ ಅನಧಿಕೃತ ಫ್ರೆಂಚ್ಫಸ್ಟ್ ಎಂಪ್ಲಾಮೆಂಟ್ ಕಾಂಟ್ರಾಕ್ಟ್ (CPE)ನ್ನು ಹಿಂದೆ ಪಡೆದ ನಂತರ;ಲಾಂಗ್ಜೆಮೆಯು (ಎಸ್ಸೊನ್ನೆ)ಕೊನ್ಸೆಲ್ ಡೆಸ್ ಪ್ರುಡ್,ಹೊಮೆಸ್ವ್ (ಕಾರ್ಮಿಕ ಕಾನೂನು ನ್ಯಾಯಾಲಯ)ನೂತನ ಉದ್ಯೋಗ ಕರಾರ(CNE)ನ್ನು ಅಂತರರಾಷ್ಟ್ರೀಯ,ಕಾನೂನಿಗೆ ವ್ಯತಿರಿಕ್ತವಾಗಿ ಪಾಸು ಮಾಡಿತು.ಆದ್ದರಿಂದ ವಜಾ ಯಾವಾಗಲೂ "ಕಾರಣರಹಿತ" ಮತ್ತು"ಯಾವುದೇ ನ್ಯಾಯಿಕ ಮೌಲ್ಯ"ಇಲ್ಲದಿದ್ದರೆ ಅದು ತಾರತಮ್ಯದ ನಿರ್ಣಯವಾಗಿದೆ ಎಂದು ಹೇಳಿತು. ಆಗ ನ್ಯಾಯಾಲಯವು ಎರಡು ವರ್ಷಗಳ ಅವಧಿಯಾದರೂ "ಮನಸ್ಸಿನ ಇಚ್ಚೆಯಂತೆ ತೆಗೆದು ಹಾಕಲು" ಅವಕಾಶವಿಲ್ಲ ಎಂಬುದನ್ನು ಸ್ಪಷ್ಟಪಡಿಸಿತು.(ಯಾವುದೇ ಕಾನೂನು ಉದ್ದೇಶವಿರದೇ)ವಜಾ ಮಾಡುವುದು"ವಿನಾಕಾರಣ",ಅಲ್ಲದೇ ಕನ್ವೆನಶನ್ ನಂ.೧೫೮, ಕ್ಕೆ ವ್ಯತಿರಿಕ್ತವಾದುದೆಂದು ಫ್ರಾನ್ಸ್ ತಿದ್ದುಪಡಿ ಮಾಡಿತು.[][೧೦]

ಬಾಲ ಕಾರ್ಮಿಕ

[ಬದಲಾಯಿಸಿ]
ಯಿದ್ದಿಶ್ ಮತ್ತು ಇಂಗ್ಲಿಷ್ ಇಬ್ಬರು ಬಾಲಕಿಯರು "ಬಾಲಕಾರ್ಮಿಕ ಪದ್ದತಿ ರದ್ದುಗೊಳಿಸಿ!!"ಎಂಬ ಘೋಷಣೆಯೊಂದಿಗೆ ಬ್ಯಾನರ್ ಪ್ರದರ್ಶಿಸಿದ್ದಾರೆ.ನ್ಯುಯಾರ್ಕ್ ಸಿಟಿನಲ್ಲಿ 1909 ರ ಮೇ ಡೇ ಪರೇಡ್ , ಕಾರ್ಮಿಕರ ಪಥಚಲನೆ

ಬಾಲಕಾರ್ಮಿಕ ಎಂದರೆ ಕಾನೂನು ಅಥವಾ ಅಧಿನಿಯಮ ವಿಧಿಸಿದ ವಯೋಮಾನಕ್ಕಿಂತ ಕಡಿಮೆಯಾದವರನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳುವುದು. ಈ ಪ್ರವೃತ್ತಿಯನ್ನುಶೋಷಣೆ ಎಂದು ಹಲವಾರು ದೇಶಗಳು ಮತ್ತು ಅಂತರರಾಷ್ಟ್ರೀಯ ಸಂಘಟನೆಗಳು ವ್ಯಾಖ್ಯಾನಿಸಿದವು. ಬಾಲಕಾರ್ಮಿಕ ಪದ್ದತಿಯು ಇಡೀ ಇತಿಹಾಸದುದ್ದಕ್ಕೂ ಒಂದು ಸಮಸ್ಯೆಯಾಗಿರಲಿಲ್ಲ.ಆದರೆ ಅದು ಕೇವಲ ವಿವಾದದ, ವ್ಯಾಜ್ಯದ ವಿಷಯವಾಗಿ ಮಾರ್ಪಡಲು ಸಾರ್ವಜನಿಕವಾದಶಾಲಾಶಿಕ್ಷಣ ಮತ್ತುಕಾರ್ಮಿಕರ' ಪರಿಕಲ್ಪನೆಗಳು ಅದಲ್ಲದೇಮಕ್ಕಳ ಹಕ್ಕುಗಳುಚರ್ಚೆಗೆ ಗ್ರಾಸವಾದವು. ಬಾಲಕಾರ್ಮಿಕ ಕೆಲಸವೆಂದರೆ ಫ್ಯಾಕ್ಟರಿ ಕೆಲಸ, ಗಣಿ ಕೆಲಸ,ಅಥವಾ ಗಣಿಗಾರಿಕೆ,ಕೃಷಿ, ಪೋಷಕರ ಕೆಲಸದಲ್ಲಿಸಹಾಯ ಅಥವಾ ತನ್ನದೇ ಸ್ವಂತಸಣ್ಣ ವ್ಯವಹಾರ (ಉದಾಹರಣೆಗೆ ತಿಂಡಿ ಮಾರಾಟ), ಅಥವಾ ಸಣ್ಣ-ಪುಟ್ಟ ಕೆಲಸಗಳಲ್ಲಿ ತೊಡಗುವುದು. ಕೆಲವು ಮಕ್ಕಳು ಪ್ರವಾಸಿಗರಿಗೆ ಮಾರ್ಗದರ್ಶಿಗಳಾಗಿ, ಕೆಲವೊಮ್ಮೆ ಇದರ ಜೊತೆಗೆ ಅಂಗಡಿ ಮತ್ತು ಉಪಹಾರ ಗೃಹಗಳಗಳಿಗೆ ಕೊಂಡೊಯ್ದು ವ್ಯವಹಾರಗಳಲ್ಲಿ ಸಹಕರಿಸುತ್ತಾರೆ. (ಅಲ್ಲಿ ಅವರು ಸೇವಕರಾಗಿಯೂ ದುಡಿಯುತ್ತಿರಬಹುದು). ಇನ್ನು ಕೆಲವು ಮಕ್ಕಳನ್ನು ಶ್ರಮದಾಯಕ ಕೆಲಸಗಳಲ್ಲಿ ತೊಡಗಿಸುವ ಪ್ರಸಂಗಗಳಿವೆ.ಉದಾಹರಣೆಗೆ ಪೆಟ್ಟಿಗೆಗಳ ಜೋಡಣೆ,ಅಥವಾ ಶೂಗಳ ಪಾಲಿಶ್ ಇತ್ಯಾದಿ. ಆದಾಗ್ಯೂ, ಕಾರ್ಖಾನೆಗಳು ಮತ್ತು ಸಿಹಿತಿಂಡಿ ಅಂಗಡಿ ಗಳಿಗಿಂತ ಹೆಚ್ಚಾಗಿ ಬಾಲಕಾರ್ಮಿಕ ಪದ್ದತಿಯು ವಿದ್ಯುಕ್ತವಲ್ಲದ ಸ್ಥಳಗಳಲ್ಲಿ ಕಂಡುಬರುತ್ತದೆ, ಅದೆಂದರೆ "ಬೀದಿಗಳಲ್ಲಿ ಹಲವಾರು ವಸ್ತುಗಳನ್ನು ಮಾರುವುದು, ಬೇಸಾಯದಲ್ಲಿ ದುಡಿಯುವುದು ಅಥವಾ ಮಕ್ಕಳನ್ನು ಗೋಪ್ಯವಾಗಿ ಮನೆಗಳಲ್ಲಿಕೆಲಸ-ಕಾರ್ಮಿಕ ಉದ್ಯೋಗಸ್ಥ ವಿಚಾರಣಾಧಿಕಾರಿಯಿಂದ ಹಾಗು ಮಾಧ್ಯಮಗಳ ವಿಚಕ್ಷತೆಯಿಂದ ದೂರವಿರಿಸಲಾಗಿತ್ತು.[೧೧]

ಸಾಮೂಹಿಕ ಕಾರ್ಮಿಕ ಕಾನೂನು

[ಬದಲಾಯಿಸಿ]

ಈ ಸಾಮೂಹಿಕ ಕಾರ್ಮಿಕ ಕಾನೂನು ಮೂರು ತೆರನಾದ ಸಂಬಂದಗಳ ಬೆಸೆಯುತ್ತದೆ.ಉದ್ಯೋಗದಾತ, ಕೆಲಸಗಾರ ಮತ್ತು ಟ್ರೇಡ್ ಯುನಿಯನ್ಸ್ ಈ ಮೂರೂ ಜನರ ನಡುವೆ ಒಂದು ಕೊಂಡಿಯಾಗಿರುತ್ತದೆ. ಈ ಟ್ರೇಡ್ ಯುನಿಯನ್ಸ್ ಗಳನ್ನು ಕೆಲವು ವೇಳೆ "ಲೇಬರ್ ಯುನಿಯನ್ಸ್ " ಎಂದು ಕರೆಯುತ್ತಾರೆ.

ಟ್ರೇಡ್ ಯುನಿಯನ್ಸ್ (ಕಾರ್ಮಿಕ ಸಂಘಟನೆಗಳು)

[ಬದಲಾಯಿಸಿ]

ಕೆಲವು ದೇಶಗಳಲ್ಲಿ ಕೆಲಸಗಾರರ ಬಗ್ಗೆ ನಿಶ್ಚಿತ ನೀತಿ-ನಿಯಮ ರೂಪಿಸಲು ಈ ಯುನಿಯನ್ ಗಳು ಸಹಾಯಕ್ಕೆ ಬರುತ್ತವೆ. ಉದಾಹರಣೆಗಾಗಿ ಕಾರ್ಮಿಕರು ಚಳವಳಿಗಿಳಿದರೆ ಅವರು ಟ್ರೇಡ್ ಯುನಿಯನ್ಸ್ ಗಳ ಜೊತೆಗೆ ಸದಸ್ಯತ್ವ ಪಡೆದಿರುವರೇ ಅಥವಾ ಅವರು ಮಾಡುವ ಪ್ರತಿಭಟನೆ ನಿರ್ಧಾರಕವೇ ಇಲ್ಲವೇ ರಾಜಕೀಯ ಪ್ರೇರಿತವೇ ಎಂದು ಇವುಗಳ ಮೂಲಕ ಮಾಡಲಾಗುತ್ತದೆ. ಕಾನೂನುಗಳು ಇಂತಹ ಯುನಿಯನ್ಸ್ ಗಳ ಸೇರ್ಪಡೆಗೆ ಅವಕಾಶ ಮಾಡಿಕೊಡುತ್ತವೆ.(ಇದು ಉದ್ಯೋಗದಾತರ ತಾರತಮ್ಯವನ್ನು ರದ್ದುಪಡಿಸುತ್ತದೆ), ಅಥವಾ ಈ ವಿಷಯಗಳಲ್ಲಿ ಮೌನ ತಾಳಬಹುದು. ಕೆಲವು ಕಾನೂನಿನ ನಿಯಮಗಳು ಕಾರ್ಮಿಕರ ಮೇಲೆ ನಿರ್ಧಿಷ್ಟ ನಿರ್ಭಂದ ಹೇರುವಂತೆ ಯುನಿಯನ್ಸ್ ಗಳನ್ನು ಒತ್ತಾಯಿಸಬಹುದು.ಪ್ರತಿಭಟನೆ,ಚಳವಳಿಯಂತಹದರಲ್ಲಿ ಇದು ಸೂಕ್ತ ಕ್ರಮವಾಗುತ್ತದೆ. ಕೆಲವು ಇದನ್ನು ನಿರ್ಭಂಧಿಸುತ್ತವೆ,ಉದಾಹರಣೆಗೆ'ಕೆಲಸದ ಹಕ್ಕು'ಇದನ್ನು ಯುನೈಟೆಡ್ ಸ್ಟೇಟ್ಸ್ ನಲ್ಲಿ ಇದನ್ನು ಕಾನೂನುಬದ್ದಗೊಳಿಸಲಾಗಿದೆ.

ಮುಷ್ಕರಗಳು

[ಬದಲಾಯಿಸಿ]
ಟಿಲ್ಡೆಸೆಯ್ ನಲ್ಲಿ ಸೇರಿದ ಮುಷ್ಕರ ನಿರತರು 1926 ರಲ್ಲಿ U.K.ದಲ್ಲಿ ನಡೆದ ಜನರಲ್ ಸ್ಟ್ರೈಕ್

ಮುಷ್ಕರ ಕ್ರಿಯೆಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ಒಂದು ಅಸ್ತ್ರ,ಇದು ಸಂಘಟನೆಗಳ ಮೂಲಕ ತಮ್ಮ ಒತ್ತಾಯವನ್ನು ಮಾಡುವ ಒಂದು ಪ್ರಕ್ರಿಯೆಯಾಗಿದೆ. ಹಲವಾರು ದೇಶಗಳಲ್ಲಿ ಈ ಮುಷ್ಕರಗಳು ಕೆಲ ನಿಯಮಗಳಡಿ ಕಾನೂನುಬದ್ದವಾಗಿವೆ. ಅವುಗಳಲ್ಲಿ ಪ್ರಮುಖ:

  • ಮುಷ್ಕರವನ್ನು ಪ್ರಜಾಪ್ರಭುತ್ವ ತತ್ವಗಳಾಧಾರದ ಮೇಲೆ ಅದರ ಸ್ವರೂಪ ನಿರ್ಧರಿಸಲಾಗುತ್ತದೆ. (ಹಿಂಸಾತ್ಮಕ ಮುಷ್ಕರಗಳು ಯಾವಾಗಲೂ ಕಾನೂನು ಬಾಹಿರ).
  • ಅನುಕಂಪದ ಮುಷ್ಕರಗಳು,ಕೂಡಾ ನಿಷೇಧಿಸಲ್ಪಡುತ್ತವೆ,ಕಾರ್ಮಿಕರ ಪರವಾಗಿ ಪ್ರತಿಭಟನೆಗಿಳಿಯುವುದು,ಇತ್ಯಾದಿ.
  • ಸಾರ್ವತ್ರಿಕ ಮುಷ್ಕರಗಳನ್ನುಸಾರ್ವಜನಿಕ ಆಜ್ಞೆಮೂಲಕ ನಿರ್ಭಂಧಿಸಲಾಗಿದೆ.
  • ಕೆಲವು ನಿಶ್ಚಿತ ವಿಭಾಗದ ಕಾರ್ಮಿಕರು ಮುಷ್ಕರ ಹೂಡುವುದನ್ನು ನಿಷೇಧಿಸಲಾಗಿದೆ.(ವಿಮಾನಯಾನ ಸಿಬ್ಬಂದಿ,ಆರೋಗ್ಯ ಸಿಬ್ಬಂದಿ,ಶಿಕ್ಷಕರು,ಆರಕ್ಷಕರು ಅಥವಾ ಅಗ್ನಿಶಾಮಕದವರು ಇತ್ಯಾದಿ)
  • ಮುಷ್ಕರಗಳು ಸಾರ್ವಜನಿಕರಿಂದ ಯಾವಾಗಲೂ ವೀಕ್ಷಿಸಲ್ಪಡುತ್ತವೆ.ಜಪಾನ್ ನಲ್ಲಿ ಮುಷ್ಕರ ಕ್ರಿಯೆವೆಂದರೆ ಅತಿ ಹೆಚ್ಚು ಉತ್ಪಾದನೆ ಅಥವಾ ಅತಿಹೆಚ್ಚು ಕೆಲಸ ಮಾಡಿ ಆಸ್ಪತ್ರೆಗಳಂತಹ ನಿಗದಿಯನ್ನು ವಿನಾಕಾರಣ ಹೆಚ್ಚಿಸುವುದೇ ಆಗಿದೆ.

ಬಹಿಷ್ಕಾರ ಎಂದರೆ ಕೊಳ್ಳಲು ನಿರಾಕರಣೆ,ಮಾರಲು,ಅಥವಾ ನಿಗದಿತ ವ್ಯಕ್ತಿ ಅಥವಾ ವಹಿವಾಟಿಗೆ ಒಲ್ಲೆ ಎನ್ನುವುದು ಅಂದರೆ ಇದರಲ್ಲಿ ಪಾಲ್ಗೊಂಡವರು ನೈತಿಕವಾಗಿ ತಪ್ಪನ್ನು ಎಸಗುವವರು. ಇತಿಹಾಸದುದ್ದಕ್ಕೂ,ಕೆಲಸಗಾರರು ಹಲವಾರು ತಂತ್ರಗಳ ಬಳಸಿದ್ದಾರೆ;ಉದಾಹರಣೆಗೆನಿಧಾನ-ಗತಿ, ವಿಧ್ವಂಸಕ ಕೃತ್ಯ, ಅಥವಾ ಒಟ್ಟಾಗಿ ಕೆಲಸಕ್ಕೆ ನಿಧಾನತೆ ಕೊಟ್ಟು ನಿಯಂತ್ರಣಕ್ಕೆ ಯತ್ನಿಸುವುದು ಇಲ್ಲವೇ ಕಡಿಮೆ ಕೆಲಸ ಮಾಡಿ ಕೆಲಸದ ವಾತಾವರಣದ ನಿಯಂತ್ರಣ ಪಡೆಯುವುದು ಇತ್ಯಾದಿ.[೨] Archived 2006-02-13 ವೇಬ್ಯಾಕ್ ಮೆಷಿನ್ ನಲ್ಲಿ.. ಕೆಲವು ಕಾರ್ಮಿಕ ಕಾನೂನುಗಳು ಇದನ್ನು ಯಾವುದೇ ಮುಚ್ಚುಮರೆಯಿಲ್ಲದೇ ತೋರಿಸಿಕೊಳ್ಳುವುದನ್ನು ಪ್ರತಿಭಂಧಿಸುತ್ತವೆ.

ಕೆಲಸ ಮಾಡದಂತೆ ತಡೆ

[ಬದಲಾಯಿಸಿ]

ಕೆಲಸ ಮಾಡದಂತೆ ಪಹರೆ ಮುಷ್ಕರಮಾಡುವುದೂ ಕೂಡಾ ಕೆಲಸಗಾರರು ಉಪಯೋಗಿಸುವ ತಂತ್ರವಾಗಿದೆ. ಕಂಪನಿ ಅಥವಾ ಕೆಲಸ ನಡೆಯುವ ಸ್ಥಳದಲ್ಲಿ ಒಟ್ಟುಗೂಡಿ ಕೆಲಸಕ್ಕೆ ತೆರಳುವವರನ್ನು ಪಹರೆ ಮೇಲೆ ತಡೆದು ಕೆಲಸದಲ್ಲಿ ಅಡ್ಡಿ-ಆತಂಕ ತರುವವರೂ ಇದ್ದಾರೆ.ಮುಷ್ಕರ ಮುರಿಯುವವರನ್ನು (ತಡೆಯಲು) ಇವರು ಫ್ಯಾಕ್ಟರಿ ಪ್ರಿಮೈಸಿಸ್ ನ್ನು ಪ್ರವೇಶಿಸದಂತೆ ತಡೆಯುವುದೂ ಒಂದು ವಿಧಾನ ಕೆಲವು ದೇಶಗಳಲ್ಲಿ ಈ ಪ್ರಕ್ರಿಯೆಗೆ ಅನುಮತಿ ಇಲ್ಲ.ಆದರೆ ಕೆಲವೆಡೆ ಪ್ರದರ್ಶನ ನಿರ್ಭಂಧ,ಇಂತಹ ಪಿಕೆಟಿಂಗ್ ಗಳ ಮೇಲೆ ನ್ಯಾಯಾಲಯದ ಆಜ್ಞೆ ತರುವ ಸಂದರ್ಥಗಳೂ ಉಂಟು. ಉದಾಹರಣೆಗೆ,ಕಾರ್ಮಿಕ ಕಾನೂನುಸೆಕೆಂಡರಿ ಪಿಕೆಟಿಂಗ್ (ನೇರವಾಗಿ ಕೆಲಸಕ್ಕೆ ತಡೆಯೊಡ್ಡದೇ ಅದಕ್ಕೆ ಅಗತ್ಯ ಸಾಮಗ್ರಿ ಸ್ಥಗಿತಗೊಳಿಸುವಿಕೆ,ಅದರೊಂದಿಗೆ ತಕರಾರು,ವ್ಯಾಜ್ಯ ಇತ್ಯಾದಿ),ಅಥವಾ ತಾತ್ಕಾಲಿಕ ತಡೆಗಳು (ಸಂಚಾರಿ ಮುಷ್ಕರಗಳು ಇಂತವರು ಪಿಕೆಟಿಂಗ್ ಸ್ಥಳಗಳಿಗೆ ಹೋಗಿ ಅವರೊಂದಿಗೆ ಮುಷ್ಕರದಲಿ ಪಾಲ್ಗೊಳ್ಳುತ್ತಾರೆ). ಕೆಲಸಗಾರರು ತಮ್ಮ ಕೆಲಸಕ್ಕೆ ತೆರಳುವಾಗ ಅವರಣ್ಣು ಮುಷ್ಕರ ನಿರತರು ಅದನ್ನು ತಡೆದು ಇಲ್ಲವೆ ಅವರ ಕಾನೂನುಬದ್ದ ಕೆಲಸಕ್ಕೆ ಧಕ್ಕೆ ತರುವುದಾದರೆ ಅದನ್ನು(ಮುಷ್ಕರ ಮುರಿಯುವ ನ್ಯಾಯಯುತ ಕ್ರಮ)ಎನ್ನಬಹುದು.ಹೀಗೆ ಪಿಕೆಟಿಂಗ್ ಕುರಿತಂತೇಂಗ್ಲೆಂಡ್ ನಂತಹ ದೇಶಗಳಲ್ಲಿ ಮೇಲಿಂದ ಮೇಲೆ ವಿಶೇಷ ಕಾನೂನುಗಳನ್ನು ಜಾರಿ ಮಾಡಲಾಗುತ್ತದೆ.ಕಾನೂನುಬದ್ದವಾಗಿ ನಡೆಯುವ ಕಾರ್ಮಿಕರಿಗೆ ಕಾನೂನು ಎಲ್ಲದರಂತೆ ನೆರವಾಗುತ್ತದೆ.(ಪಿಕೆಟಿಂಗ್ ಸಂದರ್ಭದಲ್ಲಿ ಅವಾಚ್ಯ ಶಬ್ದಗಳ ಬಳಕೆ,ಅರಚಾಟ ಇತ್ಯಾದಿಗಳ ನಿಷೇಧ ಇರುತ್ತದೆ.)

ಕೆಲಸ ಮಾಡುವ ವಾತಾವರಣ

[ಬದಲಾಯಿಸಿ]

ಹಲವಾರು ದೇಶಗಳಲ್ಲಿ ಕಾರ್ಮಿಕರು ಕೆಲಸ ಮಾಡುವ ಜಾಗೆಯು ಸ್ವಸ್ಥ ಮತ್ತು ಶಿಸ್ತಿನಿಂದ ಇರಬೇಕೆಂಬುದರ ಬಗ್ಗೆ ಹಲವಾರು ದೇಶಗಳಲ್ಲಿ ಕಾನೂನು ರೂಪಿಸಲಾಗಿದೆ.ಆಯಾ ಕಂಪನಿಗಳು ಕೆಲಸಗಾರರನ್ನು ಸಂಪರ್ಕಿಸಿ ಅವರ ಅಭಿಪ್ರಾಯ ಕೇಳಬೇಕೆಂಬ ನಿಯಮವೂ ಕೆಲವೆಡೆ ಇದೆ. ಕೈಗಾರಿಕರಣದ ಪ್ರಜಾಪ್ರಭುತ್ವ ಪದ್ದತಿಯು ಇದೇ ಅಭಿಪ್ರಾಯ ಹೊಂದಿದೆ,ಆದರೆ ಇದು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ಕೆಲಸಗಾರರ ಅಹವಾಲುಗಳನ್ನು ಕೇಳುವುದಷ್ಟೇ ಅಲ್ಲ ಅದನ್ನು ಅವರ ಮತಾಭಿಪ್ರಾಯದ ಮೂಲಕವೂ ಗ್ರಹಿಸಬೇಕಾಗಿದೆ.

ಸಹಮತದ-ನಿರ್ಧಾರ

[ಬದಲಾಯಿಸಿ]

ಈ ಸಹಮತದ ನಿರ್ಧಾರದ ಶಬ್ದವು ಜರ್ಮನಿಯ ಮೂಲದ್ದಾಗಿದೆ;(ಅಥವಾ ಇದನ್ನುಮಿಟ್ಬೆಸ್ಟಿಮುಂಗ್ ) ನಿಯಮಾವಳಿ ಅಥವಾ ನಡವಳಿಕೆ ಎಂದು ಹೇಳಬಹುದು.ಈ ಪದ್ದತಿಯನ್ನು ಯುರೊಪ್ ಖಂಡದ ದೇಶಗಳಲ್ಲಿ ಬಳಸಲಾಗುತ್ತದೆ,ಉದಾಹರಣೆಗೆ ಹಾಲಂಡ್ ಮತ್ತು ಝೆಕ್ ರಿಪಬ್ಲಿಕ್ ಅಲ್ಲದೇ ಸ್ಕ್ಯಾಂಡಿನಿವಿಯನ್ ದೇಶಗಳಲ್ಲಿ(ಸ್ವೆಡೆನ್ ) ಈ ನಡಾವಳಿ ಚಾಲ್ತಿಯಲ್ಲಿದೆ. ಇದು ಕೆಲಸಗಾರರ ಹಕ್ಕುಗಳನ್ನು ಕಂಪನಿಯ ಮಂಡಳಿಯಲ್ಲಿ ಪ್ರತಿಪಾದಿಸುವ ಅವಕಾಶ ನೀಡಲಾಗುತ್ತದೆ. ಜರ್ಮನಿಯಲ್ಲಿ ಕಂಪನಿಯ ನಿರ್ದೇಶಕ ಮಂಡಳಿಗೆ ಕಾರ್ಮಿಕ ಯುನಿಯನ್ಸ್ ನ ನಾಯಕರನ್ನು ಇಲ್ಲಿಗೆ ಕಳಿಸಲಾಗುತ್ತದೆ. ಜರ್ಮನಿ ಕಂಪನಿ ಕಾನೂನು ಪ್ರಕಾರ ಮಂಡಲಿಯ ವಿಭಜನೆ ತತ್ವದ ಮೇಲೆ ತನ್ನ "ಮೇಲ್ವಿಚಾರಣಾ ಮಂಡಳಿ"ಯು (ಆಫ್ಸ್ಕಿಸ್ಟಾರ್ಟ್ಟ್ )ಅನ್ನು ನಿಯಮಿಸಿದಾಗ ಅದು ಒಂದು 'ಕಾರ್ಯಕಾರಿ ಮಂಡಳಿ'ವೊರ್ಸ್ಟಾಂಡ್ ನ್ನು ಇದರ ಚರ್ಚೆಗೆ ತೆಗೆದುಕೊಳ್ಳುತ್ತದೆ. ಶೇರುದಾರರು ಮತ್ತು ಯುನಿಯನ್ ಮೇಲ್ವಿಚಾರಣಾ ಮಂಡಳಿಗೆ ಸಮಬಲದ ಸದಸ್ಯರ ಆಯ್ಕೆ ಮಾಡುತ್ತಾರೆ,ಹೀಗೆ ಈ ಮಂಡಳಿಯ ಮುಖ್ಯಸ್ಥರು ಸಹಮತನಿರ್ಧಾರದ ಕಾನೂನಿನ್ವಯ ಶೇರುದಾರರು ಅಮ್ತ್ತು ಇನ್ನಿತರ ಪ್ರತಿನಿಧಿಯಾಗಿ ಅವರು ಕೆಲಸ ಮಾಡುತ್ತಾರೆ. ಈ ಸಂದರ್ಭದಲ್ಲಿ ಸಂಪೂರ್ಣ ಸಮ್ಮತಿ ದೊರೆಯದಿದ್ದರೆ ಅಲ್ಲಿ ರಾಜಕೀಯ ಅಭಿಪ್ರಾಯವನ್ನೂ ಆದರಿಸುವ ಪರಿಪಾಠವಿದೆ.ಇದುಹೆಲ್ಮುಟ್ ಸ್ಕಿಮ್ಡಿಟ್ ಎಂಬಸೊಸಿಯಲ್ ಡೆಮಾಕ್ರಾಟ್ ಸರ್ಕಾರದ ಆಡಳಿತದ ಕಾಲ ೧೯೭೬ ರಿಂದಲೂ ಗಣನೆಗೆ ತೆಗೆದುಕೊಳ್ಳಲಾಗುತ್ತಿದೆ. ಇದೇ ಪದ್ದತಿಯನ್ನು ಯುನೈಟೆಡ್ ಕಿಂಗ್ಡಮ್ ನಲ್ಲಿಯೂ ಅನುಸರಿಸಲಾಗುತ್ತಿದೆ,ಇದರ ಸಂಪೂರ್ಣ ವಿವರದ ಮಂಡಣೆಗೆ ಬುಲಕ್ ರಿಪೊರ್ಟ್ (ಕೈಗಾರಿಕಾ ಪದ್ದತಿಯ ಪ್ರಜಾಪ್ರಭುತ್ವ)ಎಂದು ಕರೆಯಲಾಗುತ್ತದೆ. ಈ ವರದಿಯು ೧೯೭೭ ರಲ್ಲಿಜೇಮ್ಸ್ ಕಾಲಿಂಗನ್ ಕಾರ್ಮಿಕ ಸರ್ಕಾರದಿಂದ ಹೊರಬಂತು. ಈ ವರದಿ ನಡಾವಳಿಕೆಯು ಈ ತೆರನಾದ ವಿಭಜಿತ ಮಂಡಲಿಯ ಕಾರ್ಯಚಟುವಟಿಕೆಗಳ ವಿವರಿಸುತ್ತದೆ,ಅಲ್ಲದೇ ಇದರ ಬದಲಾವಣೆ ಹೆಚ್ಚು ವಿವೇಚನಾಪೂರ್ಣವಾಗಿರುತ್ತದೆ. ಆದರೆ ಬ್ರಿಟಿಶ್ ಕಂಪನಿ ಕಾನೂನುಗಳಲ್ಲಿ ಈ ತೆರನಾದ ವಿಭಜಿತ ರೂಪವಿಲ್ಲ,ನಿರ್ದೇಶಕರ ಒಪ್ಪಿಗೆಯಂತೆ ಯುನಿಯನ್ ನವರು ನೇರವಾಗಿ ಕಂಪನಿಯಿಂದ ಆಯ್ಕೆಯಾಗುತ್ತಾರೆ. ಇಲ್ಲಿ ಶೇರುದಾರರಿಗೆ ಕೊಂಚ ಮೇಲ್ಗೈ ನೀಡಿ ಜರ್ಮನಿಯಲ್ಲಿರುವಂತೆ ನಿಯಮಗಳ ಅನುಸರಿಸಿಕೆ ನಡೆಯುತ್ತದೆ;'ಸ್ವತಂತ್ರ' ಎಂಬ ಅಂಶ ಇಲ್ಲಿ ಮಹತ್ವ ಪಡೆಯುತ್ತದೆ.ಇದರಲ್ಲಿ ಮಂಡಳಿಯು ೨x + y ಈ ಸಮೀಕರಣಕ್ಕೆ ವಾಲುತ್ತದೆ. ಆದರೂ ಕೂಡಾ,UK ಈ ರಾಡಿಯಲ್ಲಿ ಬಿದ್ದರೂ ತನಗಾದಅತೃಪ್ತಿ ಅಲೆಯನ್ನು ಅದು ಸಮತೋಲನಗೊಳಿಸುತ್ತದೆ. ಇದು ಯುರೊಪಿಯನ್ ಆಯೋಗದ ಶಿಫಾರಸ್ಸುಗಳ ಪ್ರಕಾರ ಕೆಲಸಗಾರರ ಭಾಗವಹಿಸುವಿಕೆ ಇದ್ದರೂ ಅದಿನ್ನೂ'ಫಿಫ್ತ್ ಕಂಪನಿ ಲಾ ಡೈರೆಕ್ಟಿವ್ 'ನಡಿ ಜಾರಿಯಾಗದೇ ವಿಳಂಬವಾಗಿದೆ. ಸ್ವೀಡನ್ ನಲ್ಲಿ ಇದನ್ನು 'ಲಾ ಆನ್ ಬೋರ್ಡ್ ರಿಪ್ರೆಜೆಂಟೇಶನ್ 'ಮೇಲೆ ತನ್ನ ಜವಾಬ್ದಾರಿ ಬಿಟ್ಟಿದೆ.(ಲ್ಯಾಗಿನ್ ಒಮ್ ಸ್ಟಿರೆಲೆರೆಪ್ರೆಂಟೇಶನ್ ) ಈ ಕಾನೂನು ಎಲ್ಲಾ ಖಾಸಗಿ ಕಂಪನಿಗಳನ್ನೊಳಗೊಂಡಿದ್ದು ೨೫ ಅಥವಾ ಅದಕ್ಕಿಂತ ಹೆಚ್ಚು ಕೆಲಸಗಾರರಿಗೆ ಅನುಮತಿ ನೀಡುತ್ತದೆ. ಈ ಕಂಪನಿಗಳಲ್ಲಿ ಕೆಲಸಗಾರರಿಗೆ(ಯುನಿಯನ್ ಮೂಲಕ) ಇಬ್ಬರು ಮಂಡಳಿ ಸದಸ್ಯರು ಮತ್ತು ಇಬ್ಬರು ಪರ್ಯಾಯ ಸದಸ್ಯರ ಆಯ್ಕೆ ಮಾಡಬಹುದು. ಕಂಪನಿಯಲ್ಲಿ ೧,೦೦೦ ಕ್ಕಿಂತ ಅಧಿಕ ಕೆಲಸಗಾರರಿದ್ದರೆ ಮೂವರು ಸದಸ್ಯರು ಮತ್ತು ಮೂವರು ಪರ್ಯಾಯ ಸದಸ್ಯರನ್ನು ಕೆಲಸಗಾರರು/ಯುನಿಯನ್ ಮೂಲಕ ಆಯ್ಕೆ ಮಾಡಬಹುದು. ಇಲ್ಲಿ ವಾಡಿಕೆಯಂತೆ ಸ್ಥಾನಗಳು ಪ್ರತಿನಿಧಿಗಳು ಪರವಹಿಸುವ ಪ್ರಮುಖ ಯುನಿಯನ್ ಒಕ್ಕೂಟವು ಇಲ್ಲಿ ಪ್ರಧಾನವಾಗಿರುತ್ತದೆ.

ಅಂತರರಾಷ್ಟ್ರೀಯ ಕಾರ್ಮಿಕ ಕಾನೂನು

[ಬದಲಾಯಿಸಿ]

ಕೆಲಸಗಾರರ ಅತ್ಯಂತ ಆತಂಕಕಾರಿ ವಿಷಯವೆಂದರೆ ಅವರ [who?]ಹಕ್ಕುಗಳ ರಕ್ಷಣೆಯ ಮಹತ್ವ,ಇಲ್ಲಿ ಜಾಗತೀಕರಣದ ಆರ್ಥಿಕತೆಯಲ್ಲಿ ಅವರ ಕೆಲಸದ ಕಾನೂನುಗಳು ಮಹತ್ವ ಪಡೆಯುತ್ತವೆ,ಇದರೊಂದಿಗೆ ಸಾಮಾನ್ಯವಾಗಿ ಅವರು ಆರ್ಥಿಕ ಮಾರುಕಟ್ಟೆಗೆ ಪೂರಕವಾಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಅಂತರರಾಷ್ಟ್ರೀಯ ಕಾರ್ಮಿಕ ಕಾನೂನುಗಳು ಯುರೊಪಿಯನ್ ಕಾರ್ಮಿಕ ಕಾನೂನುಗಳಂತೆಯೇ ಇದ್ದು ಅಂತಹ ವ್ಯತ್ಯಾಸವೇನೂ ಇಲ್ಲ.ಆದರೆ ಕಾರ್ಮಿಕರ ಹಕ್ಕು ರಕ್ಷಣೆಗೆ ಒಂದು ಅಪವಾದವೆಂಬಂತೆ ಕೆಲವೆಡೆ ಉತ್ತಮ ಕಾರ್ಮಿಕ ಕಾನೂನುಗಳ ಟಿಪ್ಪಣಿ ಮಾಡಬಹುದು. ಇತ್ತೀಚಿನ ದೊಹಾ ದುಂಡು ಮೇಜಿನಸಭೆಯಲ್ಲಿ ವ್ಯಾಪಾರಿ ಚರ್ಚೆಗಳುವಿಶ್ವ ವ್ಯಾಪಾರಿ ಸಂಘಟನೆಮೂಲಕ ಇತ್ಯರ್ಥಕ್ಕೆ ಬಂದಿದ್ದವು.ಕೆಲಸಗಾರರ ಕನಿಷ್ಟ ವಿದ್ಯೆ,ಗುಣಮಟ್ಟ ಅವರ ರಕ್ಷಣಾ ವಿಧಾನಗಳ ಚರ್ಚೆಯಾಯಿತು. ಇದರಲ್ಲಿ ಚರ್ಚೆಗೆ ಬಂದ ಪ್ರಮುಖ ಪ್ರಶ್ನೆಯೆಂದರೆ ಅದು ಅಂತರರಾಷ್ಟ್ರೀಯ ವ್ಯಾಪಾರ ವಲಯದಲ್ಲಿನ ಕಟ್ಟಳೆಗಳ ಸಡಲಿಸಿ ಗ್ರಾಹಕರಿಗೆ ಅನುಕೂಲ ಮಾಡಲು ಸಾಧ್ಯವಿದೆಯೇ,ಅಲ್ಲದೇ ಬಹುದ್ದೇಶಿತ ಕಂಪನಿಗಳ ಉತ್ಪನ್ನಗಳ ಗುಣಮಟ್ಟ ಹೆಚ್ಚಳದ ಸಾಧ್ಯತೆ,ವೆಚ್ಚ ಕಡಿಮೆ ಮಾಡುವ ವಿಧಾನಗಳಲ್ಲದೇ ಪಾಶ್ಚಿಮಾತ್ಯ ಕೆಲಸಗಾರರಿಗೆ ನೀಡುವ ವೇತನ ಇತ್ಯಾದಿ ಸೌಲಭ್ಯಗಳನ್ನು ಅಭಿವೃದ್ಧಿ ಹೊಂದುತ್ತಿರುವ ದೇಶಗಳೂ ನೀಡಬಲ್ಲವೇ ಎಂಬುದು ಚರ್ಚೆಯಾಯಿತು. ಈ ಉತ್ಪಾದನಾ ಕಾರ್ಪೊರೇಶನ್ ಗಳು ತಮ್ಮ ವ್ಯವಹಾರ ಕೊಂಡಿಯನ್ನು ಒಂದೆಡೆಯಿಂದ ಇನ್ನೊಂದೆಡೆಗೆ ವರ್ಗಾಯಿಸಲು ಸಮರ್ಥವಾಗಿಯೇ ಅವುಗಳಪೂರೈಕ್ ಕೊಂಡಿಗಳನ್ನು ಒಂದು ದೇಶದಿಂದ ಇನ್ನೊಂದಕ್ಕೆ ಸ್ಥಳಾಂತರಿಸಿ "ನಿಯಮಿತ ಸ್ಪರ್ಧೆಯ ಆಳಕ್ಕೆ"ನೇರ ಪೂರಕವಾಗಬಲ್ಲುವೇ ಎಂಬುದು ಉತ್ತರ ಕಾಣಬೇಕಾದ ಪ್ರಶ್ನೆ,ಏಕೆಂದರೆ ಕೇವಲ ತೆರಿಗೆ ವಿನಾಯತಿ ಮತ್ತು ರಿಯಾಯ್ತಿಗಳಿಗೆ ಇದು ಸೀಮಿತವಾದರೆ ಮೂಲ ಉದ್ದೇಶ ಸಾರ್ಥಕವಾಗಲಾರದು.ತೆರಿಗೆ ದರಗಳು ಮತ್ತುಸಾರ್ವಜನಿಕ ಸೇವೆಗಳುಈ ಕಾರ್ಪೊರೇಟ್ ಗಳ ಗುರಿಯಾಗದೇ ಇದು ಕೇವಲ ಉದ್ಯೋಗದಾತರ ಖರ್ಚು ವೆಚ್ಚಕ್ಕೂ ಮಾರಕವಾಗದೇ ಪೂರಕವಾಗಬೇಕೆಂಬುದೇ ಅದರ ಉದ್ದೇಶವಾಗಿತ್ತು. ಆದರೆ ಈ ನಿಯಮವನ್ನು ದೇಶಗಳು ಪಾಲಿಸುವಂತೆ ಒತ್ತಡ ತರಲಾಗುತ್ತಿದೆ.ಯಾಕೆಂದರೆ ಅವುಗಳುವಿದೇಶ ಬಂಡವಾಳ ಅವಕಾಶದಿಂದ ವಂಚಿತವಾಗಬಾರದೆಂಬ ಒಳಸೂಚನೆಯೂ ಇರುತ್ತದೆ.ಇಲ್ಲದೇ ಹೋದರೆ ಅವು ಹೆಚ್ಚು "ಭಾರ" ಅಲ್ಲದೇ ಹೆಚ್ಚು ಜನರನ್ನು ನಿರುದ್ಯೋಗಿಗಳು ಮತ್ತು ಬಡವರನ್ನಾಗಿ ಮಾಡುವಲ್ಲಿ ಅವುಗಳ ಪಾತ್ರ ಎದ್ದು ಕಾಣುತ್ತದೆ. ಈ ವಾದವನ್ನು ಯಾವುದೇ ಆಧಾರವಿಲ್ಲ ಎಂದು ಗಣನೆಗೆ ತಾರದಿರಬಹುದು. ಇದಕ್ಕೆ ತದ್ವಿರುದ್ದವಾದ ಅಭಿಪ್ರಾಯ[who?] ತಿಳಿಸುವ ಕೆಲವು ದೇಶಗಳು ಮುಕ್ತಪೈಪೋಟಿಯನ್ನು ಬಂಡವಾಳ ಹೂಡಿಕೆ ವಲಾಯದಲ್ಲಿ ಎದುರಿಸುತ್ತಿವೆ.ಈ ಸಮರ್ಥ ಬಂಡವಾಳದಿಂದಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತಮ್ಮ ಸ್ಥಾನ ಭದ್ರ ಮಾಡಿಕೊಳ್ಳುತ್ತವೆ. ಮಾರುಕಟ್ಟೆಯ ಒತ್ತಡ ವಿಧಾನಗಳಿಂದಾಗಿ ದೇಶಗಳು ಇನ್ನಿತರ ವಲಯಗಳಲ್ಲೂ ಅಂದರೆ ಶಿಕ್ಷಣ,ತರಬೇತಿ ಮತ್ತು ಕುಶಲತೆ ಹೆಚ್ಚಿಸುವ ಕ್ರಮಗಳ ಮೂಲಕ ದುಡಿಯುವ ವರ್ಗಕ್ಕೆ ಪೈಪೋಟಿ ಸೌಲಭ್ಯ ನೀಡಲು ಮುಂದಾಗಿವೆ. ಹೀಗೆ ಈ ನಿಟ್ಟಿನಲ್ಲಿ ಸರ್ಕಾರಿ ಕ್ರಮಗಳು ಪ್ರಚೋದನೆಗಳಾಗಿ ಸುದೀರ್ಘ ಬಂಡವಾಳದ ಅವಧಿಗೆ ಕಂಪನಿಗಳಿಗೆ ಅನುಕೂಲ ಮಾಡಿಕೊಟ್ಟಿವೆ.ಇದರಿಂದ ಇವುಗಳ ನಿಗಾ-ನಿಯಂತ್ರಣವೂ ಸಾಧ್ಯ. ಈ ವಿಧಾನದ ಪ್ರಕಾರ ಇವುಗಳ ಮೇಲಿನ ಅನಿಯಂತ್ರಿತ ಅಧಿಕಾರವು ಹೆಚ್ಚು ಲಾಭದಾಯಕವಾಗಿವೆ ಎನ್ನಲಡ್ಡಿಯಿಲ್ಲ. ಅವರ ಹೇಳಿಕೆ ಪ್ರಕಾರ ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ (ಕೆಳಗೆ ನೋಡಿ)ಇಲ್ಲವೇ ಯುರೊಪಿಯನ್ ಯುನಿಯನ್ ಈ ಅಭಿಪ್ರಾಯವನ್ನು ಸ್ವೀಕರಿಸಲಾರವು.

ಅಂತರ್ ರಾಷ್ಟ್ರೀಯ ಕಾರ್ಮಿಕ ಸಂಘಟನೆ

[ಬದಲಾಯಿಸಿ]

ದಿ ಇಂಟರ್ ನ್ಯಾಶನಲ್ ಲೇಬರ್ ಆರ್ಗೈನೇಜೇಶನ್ ( ಅಂತರ್ ರಾಷ್ಟ್ರೀಯ ಕಾರ್ಮಿಕ ಸಂಘಟನೆ)(ILO),ಇದರ ಪ್ರಧಾನ ಕಚೇರಿಯು ಜಿನೆವಾದಲ್ಲಿದೆ,ಇದು ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ಅತ್ಯಂತ ಹಳೆಯದಾದ ಸಂಘಟನೆ ಎನ್ನಬಹುದು.ಅದಲ್ಲದೇಲೀಗ್ ಆಫ್ ನೇಶನ್ಸ್ ವೇಳೆಗೆ ಅಂದರೆ ಮೊದಲ ವಿಶ್ವ ಮಹಾಯುದ್ದದ ಅವಧಿಯಲ್ಲಿ ಆರಂಭಗೊಂಡ ಇದುವರೆಗೂ ಅಸ್ತಿತ್ವ ಉಳಿಸಿಕೊಂಡಿರುವ ಏಕೈಕ ಹಳೆಯ ಕಾಲದ ಸಂಸ್ಥೆ ಎನಿಸಿದೆ. ಇದರ ಪ್ರಮುಖ ತತ್ವವೆಂದರೆ "ಕಾರ್ಮಿಕ ಒಂದು ವಸ್ತುವಲ್ಲ"ಸಾಮಾನಗಳ ವ್ಯವಹಾರದಂತೆ ಆತನನ್ನು ನೋಡದೇ ಮಾನವೀಯ ಗುಣಗಳಿ೬ದ ಗೌರವಿಸಬೇಕೆಂದು ಸಾರುತ್ತದೆ.ಆತನ ಕೆಲಸ ಮಾಡುವ ಸ್ಥಳ ಜಾಗೆಯಲ್ಲೂ ಆತನಿಗೆ ತಕ್ಕ ಮನ್ನಣೆಯ ಅಗತ್ಯವನ್ನು ಅದು ಮನವರಿಕೆ ಮಾದಿದೆ.[೧೨] ಹೀಗೆ ILO ಕಾರ್ಮಿಕರನ್ನು ಹೇಗೆ ನೋಡಬೇಕೆಂಬುದರ ಬಗ್ಗೆ ತನ್ನದೇ ಆದ ನೀತಿ-ಸಂಹಿತೆಯನ್ನು ಕಂಡುಕೊಂಡಿದೆ.ಆಯಾ ದೇಶಗಳು ಸೂಕ್ತ ಗುಣಮಟ್ಟ ಆಯ್ಕೆಗೆ ದಾರಿ ಮಾಡಿಕೊಟ್ಟಿದೆ. ಇದಕ್ಕಾಗಿ ದೇಶಗಳು ತಾವಲ್ಲದೇ ಇನ್ನಿತರ ಸಮಾವೇಶಗಳಲ್ಲಿ ತಮ್ಮ ಸ್ವಂತ ರಾಷ್ಟ್ರೀಯ ಕನೂನುಗಳನ್ನು ಉಚ್ಚರಿಸಿವೆ. ಹೇಗೆಯಾದರೂ ಈ ಸಮಾವೇಶದಲ್ಲಿನ ಅಭಿಪ್ರಾಯಗಳನ್ನು ಯಾರ ಮೇಲೂ ಹೇರಿಲ್ಲ;ಅವು ಸಮಂಜಸವಾಗಿ ಜಾರಿ ಕಂಡಿಲ್ಲವೆಂಬ ಟೀಕೆಗಳೂ ಇವೆ.

ಯುರೋಪಿಯನ್ನರ ಕಾರ್ಮಿಕ ಕಾನೂನು

[ಬದಲಾಯಿಸಿ]

ಹೀಗೆ ಯುರೊಪಿಯನ್ ನ ವರ್ಕಿಂಗ್ ಟೈಮ್ ಡೈರೆಕ್ಟಿವ್ಕೆಲಸಗಾರರ ವಾರದ ಕೆಲಸ ಅವಧಿಯನ್ನು ೭ ದಿನಗಳಿಗೆ ೪೮ ಗಂಟೆಗಳು ಎಂದು ನಿಗದಿ ಮಾಡಿದೆ.ಅಲ್ಲದೇ ಪ್ರತಿ ೨೪ ಗಂಟೆಗಳ ಕಾರ್ಯಾವಧಿಯಲ್ಲಿ ೧೧ ಗಂಟೆಗಳ ಕನಿಷ್ಟ ವಿಶ್ರಾಂತಿಯನ್ನೂ ನೀಡಿದೆ. ಇಲ್ಲಿರುವ EU ನಿರ್ದೇಶಿಕದಂತೆ ಈ ಅಧಿನಿಯಮದ ಜಾರಿಯನ್ನು ಆಯಾ ದೇಶಗಳು ತಮ್ಮ ರಾಷ್ಟ್ರೀಯ ಶಾಸನದ ಕಾನೂನಿನಂತೆ ಪಾಸು ಮಾಡಿಸಿ ಅಳವಡಿಸಬೇಕು. ಈ ನಿರ್ದೇಶಿಕ ಮಾರ್ಗದರ್ಶಿ ಸೂತ್ರವು ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ಅನ್ವಯವಾಗುತ್ತದೆ,ಈ ವಾರದ ೪೮ ಗಂಟೆಗಳ ಅವಧಿಯ ಕೆಲಸದ ನಿಯಮದ ಬಗ್ಗೆ "ತಮ್ಮ ನಿಲುವಿಗೆ,ಆಯ್ಕೆಗೆ" ಬಿಟ್ಟ ವಿಷಯ ಇದಾಗಿದೆ ಎಂದೂ ಹೇಳಲು ಇಲ್ಲಿ ಮರೆತಿಲ್ಲ. ಆದರೆ ಇದಕ್ಕೆ ತದ್ವಿರುದ್ದವಾಗಿ ಫ್ರಾನ್ಸ್ ಒಂದು ವಾರಕ್ಕೆ ೩೫ ಗಂಟೆಗಳ ಕೆಲಸದ ಅವಧಿಯನ್ನು ಸೀಮಿತಗೊಳಿಸಿದೆ.(ಆದರೆ ಹೆಚ್ಚು-ಕಡಿಮೆ ಅವಧಿ ಅದರ ಪರ್ಯಾವಲೋಚನೆಗೆ ಬಿಟ್ಟದ್ದು) ಇದರಲ್ಲಿ ಅಂದರೆ ಡೈರೆಕ್ಟಿವ್ ಆನ್ ಸರ್ವಿಸಿಸ್ ಇನ್ ದಿ ಇಂಟರ್ ನಲ್ ಮಾರ್ಕೆಟ್(ಆಂತರಿಕ ಮಾರುಕಟ್ಟೆಯಲ್ಲಿನ ಸೇವಾ ವಿತರಣ ಮಾರ್ಗದರ್ಶಿ ನಿರ್ದೇಶಿಕೆ) (ಅಕಾ"ಬೊಲ್ಕೆಟಿಯನ್ ಡೈರೆಕ್ಟಿವ್")ನ್ನು ೨೦೦೬ ರಲ್ಲಿ ಪಾಸ್ ಮಾಡಲಾಯಿತು.[ಸೂಕ್ತ ಉಲ್ಲೇಖನ ಬೇಕು]

ರಾಷ್ಟ್ರೀಯ ಕಾರ್ಮಿಕ ಕಾನೂನು

[ಬದಲಾಯಿಸಿ]

ಆಸ್ಟ್ರೇಲಿಯನ್ ಕಾರ್ಮಿಕ ಕಾನೂನು

[ಬದಲಾಯಿಸಿ]

ಬ್ರಿಟಿಶ್ ಕಾರ್ಮಿಕ ಕಾನೂನು

[ಬದಲಾಯಿಸಿ]

ಆಗಫ್ಯಾಕ್ಟರಿ ಆಕ್ಟ್ಗಳು ಅಸ್ತಿತ್ವ ಪಡೆದಾಗ(ಮೊದಲನೆಯದಾಗಿ ಒಂದು ೧೮೦೨ ರಲ್ಲಿ, ನಂತರ ೧೮೩೩ ರಲ್ಲಿ) ಅಲ್ಲದೇ ೧೮೩೨ರಲ್ಲಿಮಾಸ್ಟರ್ ಅಂಡ್ ಸರ್ವಂಟ್ ಆಕ್ಟ್ಇವು ಕಾರ್ಮಿಕರಿಗಾಗಿ ಬಂದ ಯುನೈಟೆಡ್ ಕಿಂಗ್ಡಮ್ನಲ್ಲಿನ ಮೊದಲ ಕಾನೂನುಗಾಳಾಗಿವೆ. ಅತ್ಯಂತ ವಿಶಾಲಮಟ್ಟದಲ್ಲಿ ಬಂದ ಉದ್ಯೋಗ ನೀಡಿಕೆ ಕಾನೂನು ಲಾ ಆಫ್ ಕಾಂಟ್ರಾಕ್ಟ್ ನ ಮೂಲವಾಗಿಸಿ ೧೯೬೦ ರಲ್ಲಿ ಸಮಗ್ರ ಕಾರ್ಮಿಕ ಕಾನೂನಿಗೆ ಬೆಳಕು ನೀಡಲಾಯಿತು. ಆವಾಗಿನಿಂದಲೂ ಕಾರ್ಮಿಕ ವಲಯದಲ್ಲಿ "ಸಮಾನತೆ [ಸೂಕ್ತ ಉಲ್ಲೇಖನ ಬೇಕು]ಚಳವಳಿ"ತನ್ನ ಮಹತ್ವ ಪಡೆದು ಅದು ಯುರೊಪಿಯನ್ [ಸೂಕ್ತ ಉಲ್ಲೇಖನ ಬೇಕು]ಯುನಿಯನ್ ಗೂ ವ್ಯಾಪಿಸಿತು. ಕಾನೂನಿಗೆ ಮುಖ್ಯವಾಗಿ,ಮೂರು ಮೂಲಗಳಿವೆ: ಸಂಸದೀಯ ಕಾನೂನುಗಳಿಗೆ ಶಾಸನ ಸಭೆಯ ಕಟ್ಟಳೆಗಳೆನ್ನುತ್ತಾರೆ;ಸ್ಟಾಚುಟರಿ ರೆಗ್ಯುಲೇಶನ್ಸ್(ಸಚಿವ-ಕಾರ್ಯದರ್ಶಿಯಿಂದ ಸಂಸತ್ತಿನ ಕಾನೂನಡಿ ಇದನ್ನು ಮಂಡಿಸಲಾಗುತ್ತದೆ) ಅಲ್ಲದೇ ಕೇಸ್ ಲಾ[ಮೊಕದ್ದಮೆಗಳ ಕಾನೂನು[(ಇದನ್ನು ವಿವಿಧ ಕೋರ್ಟ್ ಗಳಲ್ಲಿನ ಪ್ರಕರಣಗಳ ಮೇಲೆ ಹುಟ್ಟು ಹಾಕಲಾಗುತ್ತದೆ). ಮೊದಲ ಆಧುನಿಕ ಕಾರ್ಮಿಕ ಕಾನೂನಿಗೆ ಮುದ್ರೆ ಬಿದ್ದದ್ದು 1970 ರ ಇಕ್ವಲ್ ಪೇ ಆಕ್ಟ್ ಗೆ ಇದು ಕೊಂಚ ಜಟಿಲವಾಗಿದ್ದರಿಂದ 1972 ರ ವರೆಗೆ ಜಾರಿಯಾಗಲಿಲ್ಲ. ಕೆಲಸದ ಸ್ಥಳಗಳಲ್ಲಿ ಬಹುತೇಕ ಮಹಿಳೆಯರಿಗೆ ಸಮಾನ ಸ್ಥಾನ-ಮಾನ ತರುವ ಉದ್ದೇಶ ಇದರದಾಗಿತ್ತು. ಲೇಬರ್ ಗವರ್ನ್ ಮೆಂಟ್ ನ 1997 ರ ಚುನಾವಣೆ ವರೆಗೆ UK ದ ಉದ್ಯೋಗ ಕಾನೂನಿಗೆ ಹಲವಾರು ಬದಲಾವಣೆ ತರಲಾಯಿತು. ಇದರಲ್ಲಿ ಮಹಿಳೆಯರ ಹೆರಿಗೆ ಪೂರ್ವದ ಮತ್ತು ನಂತರದ ವೇತನ-ರಜೆ ಸೌಲಭ್ಯಗಳ ವಿವರಿಸಲಾಗಿದೆ,ಅದಕ್ಕಾಗಿಯೇ ನ್ಯಾಶನಲ್ ಮಿನಿಮಮ್ ವೇಜ್ ಆಕ್ಟ್ ನ್ನು ಪರಿಚಯಿಸಲಾಯಿತು.ಇದು ಕೆಲಸದ,ವಿಶ್ರಾಂತಿಯ ವೇಳೆ ಮತ್ತು ವಾರ್ಷಿಕ ರಜೆಗಳ ಬಗ್ಗೆ ವಿವರವಾಗಿ ದಾಖಲಿಸಿತು. ಭೇದಭಾವ ತಡೆಯುವ ವಿಶೇಷ ಕಾನೂನು ಕೂಡಾ ಈ ತಾರತಮ್ಯಕ್ಕೆ ಕಡಿವಾಣ ಹಾಕಿತು.ವಯಸ್ಸು,ಧರ್ಮ ಅಥವಾ ಶ್ರದ್ದೆ ಮತ್ತು ಲಿಂಗ,ಜನಾಂಗೀಯತೆ ಮತ್ತು ಅಂಗವಿಕಲತೆಯ ಬಗೆಗಿನ ತಾರತಮ್ಯಗಳ ದೂರ ಮಾಡುವಿಕೆ ಇದರ ಮೂಲಮಂತ್ರವಾಗಿತ್ತು.

ಕೆನೆಡಿಯನ್ ಕಾರ್ಮಿಕ ಕಾನೂನು

[ಬದಲಾಯಿಸಿ]

ಕೆನಡಿಯನ್ ಕಾನೂನಲ್ಲಿ'ಕಾರ್ಮಿಕ ಕಾನೂನು'ಅಸಂಘಟಿತ ಕೆಲಸದ ಪ್ರದೇಶಗಳಿಗೆ ಸಂಬಂಧಿಸಿದರೆ;'ಉದ್ಯೋಗ ಕಾನೂನು'ಒಟ್ಟಾಗದ ಅಸಂಘಟಿತ ವ್ಯಾಖ್ಯಾನ ಮೀರಿದ ಕಂಪನಿಗಳ ಬಗ್ಗೆ ವಿವರಿಸುತ್ತದೆ.

ಚೀನಾದ ಕಾರ್ಮಿಕ ಕಾನೂನು

[ಬದಲಾಯಿಸಿ]

ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಕಾರ್ಮಿಕ ಕಾನೂನು ವಿಷಯದಲ್ಲಿ ಮೊದಲು ಹೆಚ್ಚು ಚರ್ಚೆಗೆ ಒಳಗಾಯಿತು.ಅಲ್ಲಿನಹಿನ್ನಡೆ ಸಾಧಿಸಿದ ಅಸಂಖ್ಯಾತ ಫ್ಯಾಕ್ಟರಿಗಳು ಮತ್ತುನಗರೀಕರಣದ ತೀವ್ರತೆಯ ಬಿಸಿಚೀನಾಕ್ಕೆ ಕೊಂಚ ಹಿನ್ನಡೆ ಉಂಟು ಮಾಡಿತು. ಪ್ರಮುಖ ಕಾರ್ಮಿಕ ಕಾನೂನುಗಳೆಂದರೆಲೇಬರ್ ಲಾ ಆಫ್ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ,(ಜಾರಿಯಾದದ್ದು ೫ ಜುಲೈ ೧೯೯೪);ಮತ್ತು ದಿಲಾ ಆಫ್ ದಿ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಆನ್ ಎಂಪ್ಲಾಮೆಂಟ್ ಕಾಂಟ್ರಾಕ್ಟ್ಸ್ (ಇದನ್ನು ೨೮ನೆಯ ಅಧಿವೇಶನದಲ್ಲಿವಾಗಿದ್ದ ಸ್ಥಾಯಿ ಸಮಿತಿಯಾಗಿದ್ದ ೧೦ನೆಯ ನ್ಯಾಶನಲ್ ಪೀಪಲ್ಸ್ ಕಾಂಗ್ರೆಸ್ನಿಂದ ಜೂನ್ ೨೯, ೨೦೦೭,ರಲ್ಲಿ ಅಳವಡಿಸಿ, ಜನವರಿ ೧, ೨೦೦೮ರಿಂದ ಪರಿಣಾಮಕಾರಿ ಜಾರಿ ಮಾಡಲಾಯಿತು). ಆಡಳಿತಾತ್ಮಕ ನಿಯಂತ್ರಣಗಳ ಕಾನೂನುಗಳನ್ನು ಸ್ಟೇಟ್ ಕೌನ್ಸಿಲ್ ಮೂಲಕ ಜಾರಿ ಮಾಡಲಾಯ್ತು.ಹೀಗೆ ಸಚಿವತ್ವದ ಕಾನೂನುಗಳು,ಮತ್ತು ಸುಪ್ರೀಮ್ ಪೀಪಲ್ಸ್ ಕೋರ್ಟ್ ನ ಹಲವಾರು ವಿವರಣೆಗಳು ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಹಲವು ವಿಷಯಗಳನ್ನು ಇದರಲ್ಲಿ ಪ್ರಸ್ತಾಪಿಸಲಾಗಿದೆ. ಚೀನಾದಲ್ಲಿರುವ ಲೇಬರ್ ಯುನಿಯನ್ ನನ್ನು ಸರ್ಕಾರದ ಮೂಲಕ ಆಲ್ ಚೀನಾ ಫೆಡೆರೇಶನ್ ಆಫ್ ಟ್ರೇಡ್ ಯುನಿಯನ್ಸ್ ಮೂಲಕ ನಿಯಂತ್ರಿಸಲಾಗುತ್ತದೆ.ಇಅರ ಮೂಲಕ ಪ್ರಧಾನ ಕಂಪನಿಗಳ ನಿಯಂತ್ರಣ ಮಾಡುವ ಇದು ಮೇನ್ ಲ್ಯಾಂಡ್ ಚೀನಾದಲ್ಲಿನ ಏಕೈಕ ದೊಡ್ಡ ಕಾನೂನು ಸಂಸ್ಥೆ ಎನಿಸಿದೆ. ಮುಷ್ಕರವು ನ್ಯಾಯಬದ್ದವಾಗಿದ್ದರೂ ಆದರೆ ನಿರ್ಬಂಧನೆಗಳಿಂದಾಗಿ ರದ್ದುಪಡಿಸಲಾಗಿದೆ.

ಫ್ರೆಂಚ್ ಕಾರ್ಮಿಕ ಕಾನೂನು

[ಬದಲಾಯಿಸಿ]

ಫ್ರಾನ್ಸನಲ್ಲಿ ಮೊದಲ ಬಾರಿಗೆ ಕಾರ್ಮಿಕ ಕಾನೂನುಗಳೆಂದರೆವಾಲ್ಡೆಕ್ ರೌಸ್ಸೊವ್'ನ ಮೂಲದ ಕಾನೂನುಗಳು ೧೮೮೪ರಲ್ಲಿ ಜಾರಿಯಾದವು. ಅದೇ ರೀತಿ ೧೯೩೬ ಮತ್ತು೧೯೩೮ ರ ನಡುವೆ ದಿ ಪಾಪ್ಯುಲರ್ ಫ್ರಂಟ್ ಒಂದು ಕಡ್ಡಾಯ ಕಾನೂನನ್ನು ಜಾರಿಗೊಳಿಸಿತು.ಕೆಲಸಕ್ಕಾಗಿ ೧೨ ದಿನಗಳ(೨ ವಾರಗಳು) ಪ್ರತಿವರ್ಷ ಕೆಲಸಗಾರರಿಗೆ ಸಂಬಳಸಹಿತ ರಜೆ ನೀಡಬೇಕು.ಮತ್ತೊಂದು ಕಾನೂನುಕೆಲಸವನ್ನು ವಾರದಲ್ಲಿ ೪೦ ಗಂಟೆಗಳಿಗೆ ಸೀಮಿತಗೊಳಿಸಿತು,ಇದರಲ್ಲಿ ಹೆಚ್ಚು ಅವಧಿಯ ಕೆಲಸ ಹೊರತುಪಡಿಸಿ ಎಂದು ಹೇಳಲಾಗಿದೆ. ಹೀಗೆ ದಿಗ್ರೆನ್ನೆಲೆ ಎಕಾರ್ಡ್ಸ್ಎನ್ನುವ ಒಡಂಬಡಿಕೆಯನ್ನು ಮೇ೨೫ ಮತ್ತು ೨೬ ನೆಯ ಮೇ ಮಧ್ಯ ಭಾಗದ ೧೯೬೮ ರ ವಿವಾದದ ಸಂದರ್ಭದಲ್ಲಿ ಪರಿಚಯಿಸಲಾಯಿತು.ಅದರಲ್ಲಿ ವಾರದ ಕೆಲಸ ಅವಧಿಯನ್ನು೪೪ಗಂಟೆಗಳಿಗೆ ನಿಗದಿಗೊಳಿಸಿ ಟ್ರೇಡ್ ಯುನಿಯನ್ ವಿಭಾಗಗಳನ್ನು ಆಯಾ ಎಂಟರ್ ಪ್ರೈಜಿಸಿಗಳಲ್ಲಿ ತೆರೆಯಲಾಯಿತು.[೧೩] ಕನಿಷ್ಟ ಕೂಲಿಯನ್ನೂ ಸಹ ೨೫% ರಷ್ಟು ಹೆಚ್ಚಿಸಲಾಯಿತು.[೧೪] ನಂತರ ೨೦೦೦ರಲ್ಲಿಲಾಯಿನೆಲ್ ಜೊಸ್ಪಿನ್ ಅವರ ಸರ್ಕಾರವು೩೫-ಗಂಟೆ ವಾರದಕೆಲಸ,ದ ನಿಗದಿಯ ಕಾನೂನನ್ನು ತಂದಿತು,ಇದು ೩೯ ಗಂಟೆಗಳಿಂದ ಕೆಳಕ್ಕಿಳಿಯಿತು. ಐದು ವರ್ಷಗಳ ನಂತರ ಕಾಂಜರ್ವೇಟಿವ್ ಪ್ರಧಾನಿಡೊಮಿನಿಕ್ ಡೆ ವಿಲ್ಲೆಪಿನ್ ನೂತನನಿವ್ ಎಂಪ್ಲಾಮೆಂಟ್ ಕಾಂಟ್ರಾಕ್ಟ್ (CNE).ಕಾನೂನನನ್ನು ಜಾರಿಗೆ ತಂದರು. ಉದ್ಯೋಗದಾತರ ಬೇಡಿಕೆಗಳಾದ ಹೆಚ್ಚುಸಡಿಲಿಕೆ(ಸಲತ್ತು) ಫ್ರೆಂಚ್ ಕಾರ್ಮಿಕ ಕಾನೂನುಗಳಲ್ಲಿ ಬೇಡಿಕೆ ಬಗ್ಗೆ CNE ಹಠಾತ್ ವಿವಾದ-ಟೀಕೆಗೆ ಒಳಗಾಯಿತು.ಟ್ರೇಡ್ ಯುನಿಯನ್ಸ್ ಗಳು ಮಾಲಿಕ ವರ್ಗಕ್ಕೆ ಹೆಚ್ಚು ಸವಲತ್ತು ನೀಡುವುದನ್ನು ಪ್ರತಿರೋಧಿಸಿದವು.ಇದರಿಂದಾಗಿ ಹೆಚ್ಚುಜವಾಬ್ದಾರಿ ಕೆಲಸದ ಪರಿಣಾಮಕ್ಕೆ ಈಡಾಗಬೇಕಾಗುತ್ತದೆ ಎಂಬುದು ಟ್ರೇಡ್ ಯುನಿಯನ್ ಗಳ ವಾದವಾಗಿತ್ತು. ಇದರ ಪರಿಣಾಮ ೨೦೦೬ ರಲ್ಲಿಫಸ್ಟ್ ಎಂಪ್ಲಾಮೆಂಟ್ ಕಾಂಟ್ರಾಕ್ಟ್ (CPE)ಕಾನೂನನ್ನು ತುರ್ತು ಮತದಾನದ ಪ್ರಕ್ರಿಯೆ ಮೂಲಕ ಜಾರಿಗೆ ತರಲು ಯತ್ನಿಸಲಾಯಿತು.ಆದರೆ ಇದುವಿದ್ಯಾರ್ಥಿಗಳು ಮತ್ತು ಯುನಿಯನ್ಸ್ ಗಳ ತೀವ್ರ ಪ್ರತಿಭಟನೆಗಳಎದುರಿಸಬೇಕಾಯಿತು. ಅಧ್ಯಕ್ಷಜಾಕ್ವೆಸ್ ಚಿರಾಕ್ಅವರು ಅಂತಿಮವಾಗಿ ದಾರಿ ಕಾಣದೇ ಇದನ್ನು ವಾಪಸ್ಸು ಪಡೆದುಕೊಂಡರು.

ಜರ್ಮನ್ ಕಾರ್ಮಿಕ ಕಾನೂನು

[ಬದಲಾಯಿಸಿ]

=ಭಾರತದ ಕಾರ್ಮಿಕ ಕಾನೂನು

[ಬದಲಾಯಿಸಿ]

=

ಇರಾನ್ ನ ಕಾರ್ಮಿಕ ಕಾನೂನು

[ಬದಲಾಯಿಸಿ]

ಜಪಾನಿಯನ್ನರ ಕಾರ್ಮಿಕ ಕಾನೂನು

[ಬದಲಾಯಿಸಿ]

ಮೆಕ್ಸಿಕೊ ದ ಕಾರ್ಮಿಕ ಕಾನೂನು

[ಬದಲಾಯಿಸಿ]

ಮೆಕ್ಶಿಕನ್ ಕಾರ್ಮಿಕ ಕಾನೂನು ಪ್ರಕಾರ ಕೆಲಸಗಾರರು ಸಂಘಟನೆಗಳ ಕಟ್ಟಬಹುದು,ಸಾಮೂಹಿಕವಾಗಿ ಬೇಡಿಕೆ ಮಂಡಿಸಬಹುದು ಅಲ್ಲದೇ ಮುಷ್ಕರದ ಹಕ್ಕನ್ನೂ ಪಡೆದಿದ್ದಾರೆ. ಸದ್ಯದ ಕಾರ್ಮಿಕ ಕಾನೂನು ರಾಜ್ಯ ಮತ್ತು ಕಾನ್ ಫಿಡೆರೇಶನ್ಸ್ ಆಫ್ ಮಿಕ್ಸಿಕನ್ ವರ್ಕ್ಸಗಳ ಐತಿಹಾಸಿಕ ಪ್ರಭಾವವನ್ನು ಹೊಂದಿದೆ.ಇದರ ಜೊತೆ ಇನ್ ಸ್ಟಿಟುಶನಲ್ ರೆವಲುಶನರಿ ಪಾರ್ಟಿ (ಇನ್ ಸ್ಟಿಟುಶನಲ್ ರೆವಲುಶನರಿ ಪಾರ್ಟಿಅಥವಾ PRI)ಈ ಪಕ್ಷವು ಮೆಕ್ಸಿಕೊವನ್ನು ಸುಮಾರು ಎಪ್ಪತ್ತುವರ್ಷಗಳ ಕಾಲ ಆಡಳಿತದ ನಿಯಂತ್ರಣಕ್ಕೊಳಪಡಿಸಿತ್ತು. ಈ ಕಾನೂನು ಕಾರ್ಮಿಕರಿಗೆ ಮುಷ್ಕರದ ಹಕ್ಕು,ಸಂಘಟನೆ ಮಾಡುವ ಹಕ್ಕು ಇತ್ಯಾದಿ ಕೊಟ್ಟರೂ ಇದು ಆಚರಣೆಯಲ್ಲಿ ತುಂಬಾ ಕಠಿಣವಾಗಿದೆ.ಇವುಗಳು ಸ್ವತಂತ್ರ ಸಂಘಟನೆ ಮಾಡಲಾರವು ಭ್ರಷ್ಟ ವ್ಯವಸ್ಥೆಗಳು ಯುನಿಯನ್ಸ್ ಗಳನ್ನು ಆಳಬಾರದೆಂಬುದು ಈ ಕಾನೂನಿನ ಉದ್ದೇಶವಾಗಿದೆ.

ಸ್ವೀಡನ್ನಿನ ಕಾರ್ಮಿಕ ಕಾನೂನು

[ಬದಲಾಯಿಸಿ]

ಸ್ವಿಡೀಶ್ ಕಾರ್ಮಿಕ ಕಾನೂನು ಅಂತರರಾಷ್ಟ್ರೀಯ ಕಾನೂನುಗಳಿಗೆ ಹೋಲಿಸಿದರೆ ಅದು 'ತೆಳು'ಪ್ರವೃತ್ತಿಯದು ಎನ್ನಬಹುದು. ಯಾಕೆಂದರೆ ಇನ್ನುಳಿದ ದೇಶಗಳಲ್ಲಿ ಅಲ್ಲಿನ ಸರ್ಕಾರದ ಆಡಳಿತ ಯಂತ್ರ ನೋಡಿಕೊಳ್ಳುತ್ತದೆ.ಇಲ್ಲಿನ ಸ್ಟೇಟ್ ಅಥವಾ ಫೆಡರಲ್ ಕಾನೂನು ಕೆಲಸದ ವೇಳೆ,ಕನಿಷ್ಟ ವೇತನ,ಹೆಚ್ಚುವರಿ ಕೆಲಸದ ಅವಧಿಯ ಪರಿಹಾರ ಇವುಗಳನ್ನೆಲ್ಲ ಯುನಿಯನ್ಸ್ ಗಳ ಸಾಮೂಹಿಕಾಭಿಪ್ರಾಯದ ಮೇರೆಗೆ ತನ್ನ ನಿಯಮಗಳನ್ನು ಅದು ರೂಪಿಸುತ್ತದೆ.

ಯುನೈಟೆಡ್ ಸ್ಟೇಟ್ಸ್ ಕಾರ್ಮಿಕ ಕಾನೂನು

[ಬದಲಾಯಿಸಿ]
ಒಬ್ಬ ಅಮೆರಿಕನ್ ಬಿಲ್ಡರ್

ದಿಫೇರ್ ಲೇಬರ್ ಸ್ಟ್ಯಾಂಡರ್ಡ್ಸ್ ಆಕ್ಟ್೧೯೩೮ರಲ್ಲಿ ಗರಿಷ್ಟ ವಾರದ ಕೆಲಸದ ಸಮಯವನ್ನು೪೪ ಗಂಟೆಗಳಿಗೆ,ಸೀಮಿತಗೊಳಿಸಿತು.ಅಲ್ಲದೇ ಇದು ೧೯೫೦ರಲ್ಲಿ೪೦ ಗಂಟೆಗಳಿಗೆ ಇಳಿಕೆ ಮಾಡಲಾಯಿತು. ಇಲ್ಲಿಗ್ರೀನ್ ಕಾರ್ಡ್ಗಳನ್ನು ವಲಸೆ ಕೆಲಸಗಾರರಿಗೆ ಕಡ್ಡಾಯಗೊಳಿಸಲಾಗಿದೆ,ಇವರು ಕೇವಲ ಸಾಮಾನ್ಯ US ನಾಗರಿಕರಾಗಿರುತ್ತಾರೆ, ಇವರಿಗೆ ಯಾವುದೇ ರೀತಿಯಕೆಲಸದ ಪರವಾನಿಗೆಗಳ ನೀಡಿಲಾಗಿರುವುದಿಲ್ಲ. ಇಲ್ಲಿ೪೦-ಗಂಟೆಗಳ ವಾರದ ಕೆಲಸದ ಅವಧಿಯ ಹೊರತಾಗಿಯೂ ಇದನ್ನೇಗರಿಷ್ಟ ಕೆಲಸದ ವಾರ,ಎನ್ನಲಾಗುತ್ತದೆ.ಇನ್ನು ಕೆಲವೆಡೆ ನಿರ್ಧಿಷ್ಟ ಗುರಿ ತಲುಪಬೇಕಾದ ಕೆಲಸಗಳಲ್ಲಿ ೪೦-ಗಂಟೆಗಳಿಗಿಂತ ಹೆಚ್ಚು ಕೆಲಸ ಇರಬಹುದು. ಉದಾಹರಣೆಗೆ ನೀವು ಕೃಷಿ ವಸ್ತುಗಳ ತಯಾರಕರಾಗಿದ್ದರೆ ಪ್ರತಿವಾರ ೭೨ ಗಂಟೆಗಳ ಕೆಲಸ ಮಾಡಬೇಕಾಗುತ್ತದೆ,ನೀವು ಕೆಲಸ ಮಾಡಬೇಕೆಂದು ಇಚ್ಚಿಸಿದರೆ ಮಾತ್ರ ಆದರೆ ಕಾನೂನು ಪ್ರಕಾರ ನೀವು ಮಾಡಬೇಕಾಗಿಲ್ಲ. ನೀವು ಕೃಷಿಯ ಸುಗ್ಗಿ ಕಾಲದ ಸಮಯವಾಗಿದ್ದರೆ ಇನ್ನೂ ಹೆಚ್ಚು ಹೊತ್ತು ಬೇಸಾಯದಲ್ಲಿ ತೊಡಬೇಕಾಗುತ್ತದೆ.ಇಲ್ಲಿ ೨೪ ಗ್ಕಂಟೆಗಳ ದಿನದ ಅವಧಿಯೆಂದರೆ ವಾರಕ್ಕೆ ೭೨ ಗಂಟೆಗಳಿಗೂ ಮೀರಿದ ಕೆಲಸದಲ್ಲಿ ತೊಡಬೇಕಾಗುತ್ತದೆ. ಆದರೆ ಕೆಲವು ನ್ಜಿಶ್ಚಿತ ಕೃಷಿ ಕೆಲಸಗಾರರಿಗೆ ಈ ಅವಧಿಯಲ್ಲಿ ಕೆಲವು ವಿಶ್ರಾಂತಿ ಮತ್ತು ಕೆಲಸಕ್ಕೂ ರಿಯಾಯ್ತಿಗಳಿವೆ.ಉದಾಹರಣೆಗೆ ದ್ರಾಕ್ಷಿ,ಹಣ್ಣಿನ ಗಿಡಗಳು ಮತ್ತು ಹತ್ತಿ ಕೃಷಿಯಲ್ಲಿರುವವರಿಗೆ ಅವರದೇ ಆದ ನಿಗದಿತ ಅವಧಿ ಇದೆ. ವೃತ್ತಿಪರರು,ಗುಮಾಸ್ತರು(ಆಡಳಿತಾತ್ಮಕ ಸಹಾಯಕರು), ತಾಂತ್ರಿಕ,ಮತ್ತು ಯಾಂತ್ರಿಕ ಪದ್ದತಿ ಮೇಲೆ ಕೆಲಸ ಮಾಡುವ ಕೆಲಸಗಾರರನ್ನು ವಾರದಲ್ಲಿ೭೨ ಗಂಟೆ ಮಾಡಲು ನಿರಾಕರಿಸಿದರೆಂಬ ಕಾರಣಕ್ಕೆ ಅವರನ್ನು ವಜಾಗೊಳಿಸಲಾಗದು,ಅವರಿಗೆ ಅವರದೇ ಆದ ಸಮಯಾವಧಿ ಇದೆ. ಇಂತಹ ಅತಿ ಹೆಚ್ಚು ಕೆಲಸದ ಅವಧಿ ಪಡೆಯುವ ಮತ್ತು ಪೈಪೋಟಿ ಯುಗದ ಜಾಬ್ ಮಾರುಕಟ್ಟೆಯಲ್ಲಿ ಅಮೆರಿಕನ್ ಕೆಲಸಗಾರರು ಸ್ಪರ್ಧಾತ್ಮಕವಾಗಿ ಕೆಲಸ ಮಾಡುವುದು ಅನಿವಾರ್ಯವಾಗಿದೆ.ಇಲ್ಲಿ ಎಷ್ಟು ಗಂಟೆ ಏನು ಎತ್ತ ಎಂಬ ಲೆಕ್ಕ ಬರದೇ ಕೆಲಸ ಮಾತ್ರ ಗಣನೆಗೆ ಬರುತ್ತದೆ. ಯುರೊಪಿಯನ್ ಕೆಲಸಗಾರರಿಗೆ ಹೋಲಿಸಿದರೆ ಅಮೆರಿಕನ್ ಕೆಲಸಗಾರರು ಅತ್ಯಂತ ಕಡಿಮೆ ರಜಾಅವಧಿಯನ್ನು ಅನುಭವಿಸುತ್ತಾರೆ.ಅಭಿವೃದ್ಧಿ ಹೊ೬ದುತ್ತಿರುವ ದೇಶಗಳಿಗೆ ಹೋಲಿಸಿದರೆ ಇಲ್ಲಿ ಕೆಲಸದ ಪ್ರಮಾಣ ಹೆಚ್ಚು.[೧೫] ಐದನೆಯ ಮತ್ತು ಹದಿನಾಲ್ಕನೆಯಯುನೈಟೆಡ್ ಸ್ಟೇಟ್ಸ್ ಸಂವಿಧಾನದತಿದ್ದುಪಡಿಯುಫೆಡೆರಲ್ ಮತ್ತುರಾಜ್ಯ್ [ಸ್ಟೇಟ್ ] ಸರ್ಕಾರಗಳತಾರತಮ್ಯ ನೀತಿಯ ಬಗ್ಗೆ ಅವುಗಳಿಗೆ ಮತ್ತು ಸಂಬಂಧಿಸಿದ ಆಡಳಿತ ಯಂತ್ರಗಳಿಗೆ ಸೀಮಿತ ಅಧಿಕಾರ ನೀಡುತ್ತದೆ. ಖಾಸಗಿ ವಲಯವು ನೇರವಾಗಿ ಸಂವಿಧಾನದ ನಿಭಂಧನೆಗಳಿಗೆ ಒಳಪಟ್ಟಿಲ್ಲ ಇಲ್ಲಿ ಸರ್ಕಾರಗಳತಾರತಮ್ಯ ನೀತಿಯ ಬಗ್ಗೆ ಅವುಗಳಿಗೆ ಮತ್ತು ಸಂಬಂಧಿಸಿದ ಆಡಳಿತ ಯಂತ್ರಗಳಿಗೆ ಸೀಮಿತ ಅಧಿಕಾರ ನೀಡುತ್ತದೆ. ಖಾಸಗಿ ವಲಯವು ನೇರವಾಗಿ ಸಂವಿಧಾನದ ನಿಭಂಧನೆಗಳಿಗೆ ಒಳಪಟ್ಟಿಲ್ಲ ಇಲ್ಲಿ ಐದನೆಯ ತಿದ್ದುಪಡಿಯು ವಿಶಿಷ್ಟ ಅಧಿಕಾರವನ್ನು ಬಯಸುತ್ತದೆ.ಯಾಕೆಂದರೆ ಸರ್ಕಾರವು ವ್ಯಕ್ತಿಗಳ ಮಟ್ಟದಲ್ಲಿ"ಜೀವಿಸುವಿಕೆ, ವಿಮೋಚನೆ, ಅಥವಾ ಆಸ್ತಿ ಮಾಡುವಿಕೆ", ಇತ್ಯಾದಿಗಳ ಮೇಲೆ ಅಷ್ಟಾಗಿ ನಿರ್ಭಂಧ ವಿಧಿಸದೇ ಕಾನೂನಿನ ಸಮಾನ ಹಕ್ಕು-ಹಂಚಿಕೆಯನ್ನುಅ ಅದು ಪ್ರತಿಪಾದಿಸುತ್ತದೆ. ಅಲ್ಲದೇಹದಿನಾಲ್ಕನೆಯ ತಿದ್ದುಪಡಿಯು ರಾಜ್ಯವು ವ್ಯಕ್ತಿಗಳ ಸೂಕ್ತ ಕೆಲಸದಲ್ಲಿ ತೊಡುಗುವಿಕೆ ಮತ್ತುಸಮಾನ ರಕ್ಷಣೆ.ಯ ಹಕ್ಕನ್ನು ತಪ್ಪಿಸಲು ಸಾಧ್ಯವಿಲ್ಲ. ಅದು ಸರ್ಕಾರದ ಮೇಲೆ ನಿರ್ಭರವಾದ ಜವಾಬ್ದಾರಿಯಾಗಿರುತ್ತದೆ. ಈ ಸಮಾನ ರಕ್ಷಣಾ ಕಾನೂನು ರಾಜ್ಯ ಮತ್ತು ಫೆಡೆರಲ್ ಸರ್ಕಾರಗಳ ಅಧಿಕಾರವನ್ನುಭೇದಭಾವದ ಅನುಷ್ಟಾನದ ವಿಷಯದಲ್ಲಿ ಸೀಮಿತಗೊಳಿಸುತ್ತದೆ.ಕೆಲಸದ ವೇಳೆಯಲ್ಲಿ ಅವರನ್ನು ನಡೆಸಿಕೊಳ್ಳುವ ಬಗ್ಗೆ,ಹಿಂದಿನ ಕೆಲಸಗಾರರ ಬಗೆಗೆನ ಅಭಿಪ್ರಾಯ ಅಥವಾ ಕೆಲಸಗಳ ಅಳವಡಿಕೆ ಇವುಗಳು ಕೆಲವೊಮ್ಮೆ ಅಸಮಾನವಾಗಿ ಕಾಣಲು ಸದಸ್ಯತ್ವದ ಸಮೂಹ,ಅಂದರೆ ಜನಾಂಗೀಯ ಧರ್ಮ ಮತ್ತು ಲಿಂಗದ ಬಗ್ಗೆ ಕೊಂಚ ವ್ಯತ್ಯಾಸಗಳಿಗೆ ಇಲ್ಲಿ ಅನುವಾಗುತ್ತದೆ.. ಈಕಾರ್ಯ ನಿರತತೆ (ಡ್ಯು ಪ್ರಾಸೆಸ)ಕೆಲಸಗಾರರ ರಕ್ಷಣೆ ಕುರಿತಂತೆ ಹಾಗು ಅವರನ್ನು ಕೆಲಸದಿ೬ದ ತೆಗೆದುಹಾಕಿದ ಸಂದರ್ಭದಲ್ಲಿ ಅಥವಾ ಅದು ಅವರ ಹಕ್ಕಿನ "ವಿಮೋಚನೆ"ಗೆ ಅವರ ವಜಾ ಸಂಬಂಧಿಸಿದ್ದರೆ ಇಲ್ಲವೆ ಅವರಮುಕ್ತ ವಾಕ್ ಸ್ವಾತಂತ್ರ್ಯspeech, ಅಥವಾ ಒಂದು ಆಸ್ತಿಯ ಹಿತಾಸಕ್ತಿಯದಾಗಿದ್ದರೆ ಈ ತಿದ್ದುಪಡಿಗಳು ಅಗತ್ಯ ಅಧಿಕಾರ ನೀಡಲು ನೆರವಾಗುತ್ತವೆ. ಇದರಲ್ಲಿಏಜ್ ಡಿಸ್ಕ್ರಿಮಿನೇಶನ್ ಇನ್ ಎಂಪ್ಲಾಮೆಂಟ್ ಆಕ್ಟ್ ಆಫ್ ೧೯೬೭ ಇದು ಕೆಲಸಗಾರರ ವಯೋಮಾನದ ಬಗ್ಗೆ ಮಾಡುವ ತಾರತಮ್ಯವನ್ನು ತಡೆಯುತ್ತದೆ.ಅಂದರೆ ೪೦ ಅಥವಾ ಅದಕ್ಕಿಂತಲೂ ಹೆಚ್ಚಿಮ ವಯೋಮಾನದವರ ರಕ್ಷಣೆಗೆ ಈ ಕಾನೂನು ಇದೆ. ಈ ಕಾನೂನಿನ ಮೂಲಕ ಅವರ ಸಾಮರ್ಥ್ಯದ ಮೇಲೆ ಕೆಲಸ ನೀಡಿ ಅವರ ವಯೋಮಾನದ ಬಗ್ಗೆ ಅದು ಚಿಂತಿಸುವುದಿಲ್ಲ ಹೀಗಾಗಿ ಕೆಲಸಗಳಲ್ಲಿ ವಿವಾದಿತ ವಯೋಮಿತಿಯ ಭೇದಭಾವ ತೊರೆಯಲು ಇದು ಅನುಕೂಲಕರವಾಗಿದೆ.ಇಲ್ಲಿ ಉದ್ಯೋಗದಾತ ಮತ್ತು ಕಾರ್ಮಿಕರಿಗೆ ಅವರ ವಯಸ್ಸಿನಿಂದಾಗಿ ಉಂಟಾಗುವ ಸಮಸ್ಯೆಗಳನ್ನು ಈ ಕಾನೂನು ನಿವಾರಣೆಗೆ ಯತ್ನಿಸುತ್ತದೆ.ಯಾಕೆಂದರೆ ಈ ಕಾರಣದಿಂದ ಉತ್ಪಾದನೆ ಮೇಲೆ ಅದರ ಪರಿಣಾಮ ಆಗಬಾರದು.ಹಿರಿಯ ಕೆಲಸಗಾರರು ತಮ್ಮ ಕೆಲಸ ಉಲಿಸಿಕೊಳ್ಳಲು ಹೆಚ್ಚು ಶ್ರಮ-ದುಡಿಮೆ ಮಾಡಬೇಕಾದ ಅನಿವಾರ್ಯತೆ ಇದ್ದಾಗ ಅದಕ್ಕೆ ತಕ್ಕ ಸಹಾಯಕ್ಕೆ ಈ ಕಾನೂನು ನೆರವಾಗುತ್ತದೆ.ಕೆಲಸದ ದಕ್ಷತೆ ಆಧಾರದಲ್ಲಿ ಕೆಲಸಗಳು ಉಳಿಯುತ್ತವೆ ಆದರೆ ವಯಸ್ಸಾದವರಿಗೆ ಸುದೀರ್ಘ ಅವಧಿ ವರೆಗೆ ನಿರುದ್ಯೋಗದ ಬಿಸಿ ತಡೆಯಲು ಸಾಧ್ಯವಾಗುವುದಿಲ್ಲ.ಹೀಗಾಗಿ ಅವರ ವೃತ್ತಿಕೌಶಲವೂ ಕಡಿಮೆಯಾಗುವ ಅಪಾಯವನ್ನು ತಪ್ಪಿಸುವುದೇ ಇದರ ಉದ್ದೇಶ.ಇದು ವಾಣಿಜ್ಯ ವಲಯದಲ್ಲಿ ಉತ್ಪಾದನೆ ಕುಂಠಿತಗೊಳ್ಳುವ ಸಾಧ್ಯತೆಯನ್ನು ತರುತ್ತದೆ,ಸದ್ಯ ಹಿರಿಯ ಕೆಲಸಗಾರರು ನಿರುದ್ಯೋಗಿಗಳಾಗುವ ಪ್ರಮಾಣ ಹೆಚ್ಚಾಗುತ್ತದೆ.ಅವರ ಆತಂಕ ಮಾನಸಿಕ ಸ್ಥಿತಿ ಸುಧಾರಣೆ ಮತ್ತು ಒಟ್ಟು ಆರ್ಥಿಕ ವಲಯಕ್ಕೆ ಅವರ ಸೇವೆಯನ್ನು ತೆಗೆದುಕೊಂಡು ಅವರನ್ನು ನಿರಾಯಾಸಗೊಳಿಸುವ ನಿಟ್ಟಿನಲ್ಲಿ ಇದನ್ನು ರೂಪಿಸಲಾಗಿದೆ.ಇದಕ್ಕೆಲ್ಲ ಒಂದು ಕಟ್ಟಳೆ ಹಾಕುವುದರಿಂದ ವಾಣಿಜ್ಯ ಸರಕುಗಳ ಮುಕ್ತ ಸಾಗಾಟ,ಲಭ್ಯತೆಗಳನ್ನು ಸಮೀಕರಿಸಬಹುದೆಂಬ ಆಶಯವೂ ಇದರ ಹಿಂದಿದೆ. ಟೈಟಲ್ VII ಆಫ್ ದಿ ಸಿವಿಲ್ ರೈಟ್ಸ್ ಆಕ್ಟ್ ಇದುಉದ್ಯೋಗ ತಾರತಮ್ಯದಕುರಿತು ಚರ್ಚಿಸುವ ಫೆಡರೆಲ್ ಕಾನೂನು ಕಟ್ಟಳೆಗಳ ಪ್ರಧಾನ ಅಂಶವಾಗಿದೆ.ಕಾನೂನುಬಾಹಿರ ಉದ್ಯೋಗವನ್ನು ಅದು ತಡೆಯುತ್ತದೆ.ಖಾಸಗಿ ಉದ್ಯಮಿಗಳು ಮತ್ತು ಸಾರ್ವಜನಿಕ ವಲಯದಲ್ಲಿ ಮತ್ತುಕಾರ್ಮಿಕ ಸಂಗ್ಹಟಣೆಗಳ,ಮೂಲಕ ನಡೆಯುವ ತಾರತಮ್ಯ ಕೊನೆಗಾಣಿಸಲು ಇದನ್ನು ಜಾರಿಗೊಳಿಸಲಾಗಿದೆ.ತರಬೇತಿ ಕಾರ್ಯಕ್ರಮಗಳು ಮತ್ತು ಉದ್ಯೋಗ ಏಜೆನ್ಸೀಗಳು ಯಾವುದೇ ಧರ್ಮ,ವರ್ಣ,ಜನಾಂಗೀಯತೆ,ಲಿಂಗ,ರಾಷ್ಟ್ರೀಯತೆ ಇವುಗಳ ಬಗ್ಗೆ ಭೇದಭಾವ ತೋರುವುದನ್ನು ನಿರ್ಭಂಧಿಸುತ್ತದೆ.ಇದನ್ನುಟೈಟಲ್ VII ಅಡಿಯಲ್ಲಿ ತಡೆಯಲಾಗುತ್ತದೆ.ಯಾವುದೇ ವ್ಯಕ್ತಿಯು ಕಾನೂನಿನಡಿಯ ಯಾವುದೇ ಅಭಿಪ್ರಾಯ ವಿರೋಧಿಸುವವರನ್ನು ಅಥವಾ ಅದರ ವಿರುದ್ದ ಆಪಾದನೆ ಮಾಡುವವರನ್ನು ಅದಕ್ಕೆ ಸಹಾಯ ಮಾಡುವವರನ್ನುಇಲ್ಲವೇ ಸರ್ಕಾರದ ಯಾವುದೇ ನಿಭಂಧನೆಯನ್ನು ಪಾಲಿಸದೇ ಅದರ ವಿರುದ್ಧ ವರ್ತಿಸುವವರ ಸಹಾಯ ಮಾಡುವುದನ್ನೂ ಅದು ತಡೆಯುತ್ತದೆ.ಸರ್ಕಾರ ನಿಗದಿಪಡಿಸಿದ ನೀತಿ-ನಿಯಮಾವಳಿಗಳ ಮೀರಿ ಸೀಮಿತ ಪರಿಧಿ ದಾಟದಂತೆ ಅದು ನಿಗಾ ವಹಿಸುತ್ತದೆ. ದಿ ಸಿವಿಲ್ ರೈಟ್ಸ್ ಆಕ್ಟ್ ಆಫ್ ೧೯೯೧ ಇದುಟೈಟಲ್ VII ಗೆ ಉಂಟಾಗುವ ನಷ್ಟಗಳ ಕಡಿಮೆ ಮಾಡುವ ಅವಕಾಶ ನೀಡುತ್ತದೆ,ಅಲ್ಲದೇ ಪ್ರಕರಣಗಳು ಟೈಟಲ್ VII ರಲ್ಲಿನ ಕಕ್ಷಿದಾರರ ಮೊಕದ್ದಮೆಗಳ ವಿಚಾರಣೆಗೆ ನ್ಯಾಯಾಲಯದ ಮೂಲಕ ಪರಿಹಾರ ಯಾಚಿಸಲು ಅವಕಾಶ ಕೊಡುತ್ತದೆ. ದಿನ್ಯಾಶನಲ್ ಲೇಬರ್ ರಿಲೇಶನ್ಸ್ ಆಕ್ಟ್ ನ್ನು ೧೯೩೫ ರಲ್ಲಿನಿವ್ ಡೀಲ್ ಶಾಸನದ ಭಾಗವಾಗಿ ರೂಪಿಸಲಾಯಿತು,ಇದು ಕಾರ್ಮಿಕರಿಗೆ ಸಂಘಟನೆ ಮಾಡಲು ಮತ್ತು ಸಾಮೂಹಿಕ ಒಕ್ಕೂಟ ರಚನೆಯನ್ನು ಮಾಡುವ ಅವಕಾಶ ನೀಡುತ್ತದೆ. ಈ ಶಾಸನ ಮತ್ತು ಅದರ ಮುಂದಿನ ತಿದ್ದುಪಡಿಗಳು ಅಮೆರಿಕಾದಲ್ಲಿನ ಅಂದರೆ U.S. ಕಾರ್ಮಿಕ ಕಾನೂನಿನಲ್ಲಿನ ಪ್ರಧಾನ ಅಂಶಗಳಾಗಿವೆ.

ಕಾರ್ಮಿಕ ಕಾನೂನುಗಳು

ಇವನ್ನೂ ನೋಡಿ

[ಬದಲಾಯಿಸಿ]

ಟೆಂಪ್ಲೇಟು:Portal

  • ಸಾಮುದಾಯಿಕ ಚೌಕಾಸಿ ಮಾಡುವಿಕೆ
  • ಆನುಷಂಗಿಕ ಕೆಲಸ
  • (ಔದ್ಯಮಿಕ)ಕೈಗಾರಿಕಾ ಸಂಬಂಧಗಳು
  • ಜರ್ನಲ್ ಆಫ್ ಇಂಡ್ವಿಜ್ವಲ್ ಎಂಪ್ಲಾಮೆಂಟ್ ರೈಟ್ಸ್
  • ಕಾರ್ಮಿಕ ಮಾರುಕಟ್ಟೆಯ ಪ್ರವೃತ್ತಿ
  • ಕಾರ್ಮಿಕ ಚಳವಳಿ
  • ಲೀಗಲ್ ವರ್ಕಿಂಗ್ ಏಜ್ ಅಂಡ್ಚೈಲ್ಡ್ ಲೇಬರ್
  • ಮಾಸ್ಟರ್ ಅಂಡ್ ಸರ್ವಂಟ್ ಆಕ್ಟ್
  • ಪ್ರೊಟೆಕ್ಟಿವ್ ಲಾಜ್(ಆನ್ ಜಂಡರ್)
  • ಕೆಲಸ-ಮಾಡುವ-ಹಕ್ಕಿನ ಕಾನೂನು
  • ಸಾಮಾಜಿಕ ಭದ್ರತೆ
  • ಸಿಹಿತಿಂಡಿ ಅಂಗಡಿಗಳು
  • ನ್ಯಾಯಸಮ್ಮತವಲ್ಲದ ಕಾರ್ಮಿಕ ಪದ್ದತಿ
  • ಯುನಿಯನ್ ಆರ್ಗ್ ನೈಜರ್
  • ವಿಕೇರಿಯಸ್ ಲೈಬ್ಲಿಟಿ
  • ವಾರಾಂತ್ಯಗಳು
  • ಕೆಲಸದ ಆಯ್ಕೆಗಳು
  • ಕೆಲಸದ ಉತ್ತಮ ವಾತಾವರಣ

ಟಿಪ್ಪಣಿಗಳು

[ಬದಲಾಯಿಸಿ]
  1. ಉದಾಹರಣೆಗೆ,ಒಬ್ಬ ಕಾರ್ಮಿಕ ಕಾನೂನು ಉಲ್ಲಂಘಿಸಲು ನಿರಾಕರಣೆ ಅಥವಾ ಆತನ ಹಕ್ಕುಗಳ ಕಡಿಮೆಗೊಳಿಸಿದರೆ ಇದು ಅಗತ್ಯ.
  2. e.g. ಇನ್ ದಿ ಯುರೊಪಿಯನ್ ಯುನಿಯನ್, ಡೈರೆಕ್ಟಿವ್೯೧/೫೩೩
  3. ಇನ್ ದಿ US,ಅಂಡರ್ ದಿನ್ಯಾಶನಲ್ ಲೇಬರ್ ರಿಲೇಶನ್ಸ್ ಆಕ್ಟ್,ಎ ವರ್ಕರ್ ಹ್ಯಾಸ್ ನೊ ರೈಟ್ ಟು ಆರ್ಗೈನೈಜ್ ವ್ಹೇರ್ ಹಿ ಈಸ್ ಕನ್ಸಿಡ್ರೆಡ್ ಎ ಮ್ಯಾನೇಜರ್ ,ನೋಡಿNLRB v.ಕೆಂಟುಕಿ ರಿವರ್ ಕಮ್ಯುಇಟಿ ಕೇರ್ , 532 U.S. 706 Archived 2011-07-13 ವೇಬ್ಯಾಕ್ ಮೆಷಿನ್ ನಲ್ಲಿ. (೨೦೦೧)
  4. "History of Federal Minimum Wage Rates Under the Fair Labor Standards Act, 1938 - 1996". Department of Labor. March 31, 2006. Archived from the original on ಸೆಪ್ಟೆಂಬರ್ 17, 2011. Retrieved ಅಕ್ಟೋಬರ್ 8, 2010.
  5. "MINIMUM WAGE (GUARANTEED)". European Foundation for the Improvement of Living and Working Conditions. March 31, 2006. Archived from the original on ಡಿಸೆಂಬರ್ 7, 2006. Retrieved ಅಕ್ಟೋಬರ್ 8, 2010.
  6. "National Minimum Wage". dti. March 31, 2006. Archived from the original on ಜನವರಿ 29, 2009. Retrieved ಅಕ್ಟೋಬರ್ 8, 2010.
  7. ಯುರೊಸ್ಟಾಟ್(೨೦೦೫):ಮಿನಿಮಮ್ ವೇಜಿಸ್ ೨೦೦೫: ಮೇಜರ್ ಡಿಫರನ್ಸಿಸ್ಸ್ ಬಿಟ್ವೀನ್ EU ಮೆಂಬರ್ ಸ್ಟೇಟ್ಸ್ (PDF) Archived 2011-07-18 ವೇಬ್ಯಾಕ್ ಮೆಷಿನ್ ನಲ್ಲಿ.
  8. ಚೈಲ್ಡ್ ಲೇಬರ್ ಅಂಡ್ ಡಿವಿಜನ್ ಆಫ್ ಲೇಬರ್ ಇನ್ ದಿ ಅರ್ಲಿ ಇಂಗ್ಲಿಷ್ ಕಾಟನ್ ಮಿಲ್ಸ್
  9. (French) "Un contrat en CNE jugé contraire au droit international". Reuters. April 28, 2006. Archived from the original on 2006-05-24. Retrieved 2006-05-05.
  10. (French) "[[Bernard Thibault]] au plus haut". L'Express. April 28, 2006. Archived from the original on 2007-10-17. Retrieved 2006-05-05. {{cite news}}: URL–wikilink conflict (help)
  11. "The State of the World's Children 1997". UNICEF. Archived from the original on 2011-08-09. Retrieved 2007-04-15.
  12. ಲೇಖನ ನೋಡಿ ಇಂಟರ್ ನ್ಯಾಶನಲ್ ಲೇಬರ್ ಲಾ Archived 2007-06-06 ವೇಬ್ಯಾಕ್ ಮೆಷಿನ್ ನಲ್ಲಿ. ಅಥವಾ ಸಂಪೂರ್ಣ ಗ್ಲೊಬಲೈಜೇಶನ್ ಅಂಡ್ ವರ್ಕರ್ಸ್ ರೈಟ್ಸ್ Archived 2007-06-06 ವೇಬ್ಯಾಕ್ ಮೆಷಿನ್ ನಲ್ಲಿ. ಸೆಕ್ಸೆನ್ ಗಳಿಗಾಗಿ ಆಕ್ಟ್ರಾವ್ ಡಿಸ್ಟನ್ಸ್ ಲರ್ನಿಂಗ್ ಪ್ರಾಜೆಕ್ಟ್ Archived 2007-06-07 ವೇಬ್ಯಾಕ್ ಮೆಷಿನ್ ನಲ್ಲಿ. ನಇಂಟರ್ ನ್ಯಾಶನಲ್ ಲೇಬರ್ ಆರ್ಗೈನೈಜೇಶನ್ [೧]
  13. fr:ಸೆಕ್ಸನ್ ಸಿಂಡಿಕೇಲ್ ಡಿ'ಎಂಟರ್ ಪ್ರೈಜ್ ಡಿಸೆಂಬರ್ ೨೭, ೧೯೬೮ ಲಾ
  14. fr:SMIG
  15. http://www.infoplease.com/ipa/A೦೯೨೨೦೫೨.html

ಹೆಚ್ಚಿನ ಓದಿಗಾಗಿ

[ಬದಲಾಯಿಸಿ]
  • ಸ್ಟೆಫೆನ್ ಎಫ್. ಬಿಫೊರ್ಟ್ ಅಂಡ್ ಜಾನ್ ಡಬ್ಲು. ಬಡ್,ಇನ್ವಿಜಿಬಲ್ ಹ್ಯಾಂಡ್ಸ್, ಇನ್ವಿಜಿಬಲ್ ಅಬ್ಜೆಕ್ಟೀವ್ಸ್:ಬ್ರಿಂಗಿಂಗ್ ವರ್ಕ್ ಪ್ಲೇಸ್ ಲಾ ಅಂಡ್ ಪಬ್ಲಿಕ್ ಪಾಲಿಸಿ ಇಂಟು ಫೊಕಸ್ (೨೦೦೯) ಸ್ಟ್ಯಾನ್ ಫೊರ್ಡ್ ಯುನ್ವರ್ಸಿಟಿ ಪ್ರೆಸ್
  • ನಾರ್ಮನ್ ಸೆಲ್ವಿನ್ಸೆಲ್ವಿನ್ಸ್ ಲಾ ಆಫ್ ಎಂಪ್ಲಾಮೆಂಟ್ (೨೦೦೮) ಆಕ್ಸ್ ಫೊರ್ಡ್ ಯುನ್ವರ್ಸಿಟಿ ಪ್ರೆಸ್
  • ಸೈಮನ್ ಹನಿಬಾಲ್,ಹನಿಬಾಲ್ ಅಂಡ್ ಬೌವರ್ಸ್'ಟೆಕ್ಸ್ಟ್ ಬುಕ್ ಆನ್ ಎಂಪ್ಲಾಮೆಂಟ್ ಲಾ (೨೦೦೮)ಆಕ್ಸ್ ಫೊರ್ಡ್ ಯುನ್ವರ್ಸಿಟಿ
  • ಕೀಥ್ ಇವಿಂಗ್,ಐಲೀನ್ ಮ್ಯಾಕ್ ಕೊಲ್ಗನ್ ಅಂಡ್ ಹಗ್ ಕೊಲ್ಲಿನ್ಸ್ಲೇಬರ್ ಲಾ,ಕೇಸಿಸ್,ಟೆಕ್ಸ್ಟ್ಸ್ ಅಂಡ್ ಮಟಿರಿಯಲ್ಸ್ (೨೦೦೫) ಹಾರ್ಟ್ ಪಬ್ಲಿಶಿಂಗ್
  • ಸೈಮನ್ ಡಿಕೆನ್ ಅಂಡ್ ಗಿಲ್ಲಿಯನ್ ಮೊರಿಸ್ಲೇಬರ್ ಲಾ (೨೦೦೫) ಹಾರ್ಟ್ ಪಬ್ಲಿಶಿಂಗ್ ISBN ೯೭೮೧೮೪೧೧೩೫೬೦೧
  • ಕೇಶ್ವನ್ ವಾಕರ್ ಅಂಡ್ ಅರ್ನ್ ಮೊರೆಲ್,"ಲೇಬರ್ ಅಂಡ್ ಎಂಪ್ಲಾಮೆಂಟ್:ವರ್ಕ್ ಪ್ಲೇಸ್ ವಾರ್ ಝೋನ್ ",ಜಾರ್ಜ್ ಟೌನ್ ಯುನ್ವರ್ಸಿಟಿ ಥೆಸಿಸ್(೨೦೦೫)

ಬಾಹ್ಯ ಕೊಂಡಿಗಳು

[ಬದಲಾಯಿಸಿ]

[[ವರ್ಗ:ಕೆ ಕೆಲಸದ ವೇಳೆ]]