ಕಹೋ ನಾ... ಪ್ಯಾರ್ ಹೇ (ಚಲನಚಿತ್ರ)
ಕಹೋ ನಾ... ಪ್ಯಾರ್ ಹೇ | |
---|---|
Directed by | ರಾಕೇಶ್ ರೋಶನ್ |
Written by | ರಾಕೇಶ್ ರೋಶನ್ |
Screenplay by | ರವಿ ಕಪೂರ್ ಹನಿ ಇರಾನಿ |
Story by | ರಾಕೇಶ್ ರೋಶನ್ |
Produced by | ರಾಕೇಶ್ ರೋಶನ್ |
Starring | ಹೃತಿಕ್ ರೋಶನ್ ಅಮೀಶಾ ಪಟೇಲ್ ದಲೀಪ್ ತಾಹಿಲ್ ಅನುಪಮ್ ಖೇರ್ |
Cinematography | ಕಬೀರ್ ಲಾಲ್ |
Edited by | ಸಂಜಯ್ ವರ್ಮಾ |
Music by | ರಾಜೇಶ್ ರೋಶನ್ |
Production company | ಫ಼ಿಲ್ಮ್‌ಕ್ರಾಫ಼್ಟ್ ಪ್ರೊಡಕ್ಷನ್ಸ್ ಪ್ರೈ. ಲಿ. |
Distributed by | ಈರಾಸ್ ಇಂಟರ್‌ನ್ಯಾಶನಲ್ ಸಾರೆಗಾಮಾ |
Release date | ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೯".
|
Running time | 180 ನಿಮಿಷಗಳು |
Country | ಭಾರತ |
Language | ಹಿಂದಿ |
Budget | ಅಂದಾಜು ₹10 ಕೋಟಿ[೧] |
Box office | ಅಂದಾಜು ₹ 80 ಕೋಟಿ[೧] |
ಕಹೋ ನಾ... ಪ್ಯಾರ್ ಹೇ (ಅನುವಾದ: 'ಹೇಳಿಬಿಡು... ನೀನು ಪ್ರೀತಿಸುತ್ತಿದ್ದೀಯಾ') ೨೦೦೦ರ ಒಂದು ಹಿಂದಿ ಸಂಗೀತ ಪ್ರಣಯಪ್ರಧಾನ ರೋಮಾಂಚನಕಾರಿ ಚಲನಚಿತ್ರ. ಇದನ್ನು ರಾಕೇಶ್ ರೋಶನ್ ಬರೆದು ನಿರ್ದೇಶಿಸಿದ್ದಾರೆ. ಇದು ಹೃತಿಕ್ ರೋಷನ್ ಮತ್ತು ಅಮೀಶಾ ಪಟೇಲ್ ಅಭಿನಯದ ಮೊದಲ ಚಲನಚಿತ್ರವಾಗಿತ್ತು.
ಆ ವರ್ಷದಲ್ಲಿ ಅತಿ ಹೆಚ್ಚು ಹಣಗಳಿಸಿದ ಕಹೋ ನಾ.. ಪ್ಯಾರ್ ಹೇ ೨೦೦೦ನೇ ಸಾಲಿನ ಅತ್ಯಂತ ಯಶಸ್ವಿ ಬಾಲಿವುಡ್ ಚಲನಚಿತ್ರವಾಗಿತ್ತು.[೨] ಈ ಚಿತ್ರದಲ್ಲಿ ದ್ವಿಪಾತ್ರದಲ್ಲಿ ನಟಿಸಿದ್ದ ಹೃತಿಕ್ ರಾತ್ರೋರಾತ್ರಿ ಸೂಪರ್‌ಸ್ಟಾರ್ ಆದರು. ಮಾಧ್ಯಮಗಳು ಅವರ ಯಶಸ್ವಿ ಪಾದಾರ್ಪಣೆಯನ್ನು 'ಹೃತಿಕ್ ಮೇನಿಯಾ' ಎಂದು ಕರೆದರು,[೩] ಮತ್ತು ಅಂದಿನಿಂದ ಅವರು 'ಸಹಸ್ರವರ್ಷದ ಸೂಪರ್‌ಸ್ಟಾರ್' ಎಂದು ಪರಿಚಿತರಾಗಿದ್ದಾರೆ.[೪][೫][೬]
ಕಹೋ ನಾ.. ಪ್ಯಾರ್ ಹೇ ಅತಿ ಹೆಚ್ಚು ಪ್ರಶಸ್ತಿಗಳನ್ನು—ಅಸಂಖ್ಯಾತ ಸಮಾರಂಭಗಳು ಮತ್ತು ವರ್ಗಗಳಲ್ಲಿ ಒಟ್ಟು ೯೨ ಪ್ರಶಸ್ತಿಗಳನ್ನು ಗೆದ್ದಿದ್ದಕ್ಕಾಗಿ ಗಿನ್ನೆಸ್ ದಾಖಲೆಗಳ ಪುಸ್ತಕದಲ್ಲಿ (೨೦೦೨) ಸೇರ್ಪಡೆಯಾಯಿತು.[೭] ಅದೇ ರೀತಿ ಅತಿ ಹೆಚ್ಚಿನ ಸಂಖ್ಯೆಯ ಪ್ರಶಸ್ತಿಗಳನ್ನು ಗೆದ್ದ ಬಾಲಿವುಡ್ ಚಿತ್ರವಾಗಿದ್ದಕ್ಕಾಗಿ ಲಿಮ್ಕಾ ದಾಖಲೆಗಳ ಪುಸ್ತಕದಲ್ಲಿ (೨೦೦೩) ಕೂಡ ಸೇರ್ಪಡೆಯಾಗಲಿದೆ.[೮] ನಿರ್ದೇಶಕ ಮತ್ತು ನಿರ್ಮಾಪಕರಾಗಿ, ರಾಕೇಶ್ ರೋಶನ್ ತಮ್ಮ ಮೊಟ್ಟಮೊದಲ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಸ್ವೀಕರಿಸಿದರು. ಅವರ ಮಗ ಒಂದೇ ಚಲನಚಿತ್ರಕ್ಕೆ ಫಿಲ್ಮ್‌ಫೇರ್ ಅತ್ಯುತ್ತಮ ಪ್ರಥಮ ಪ್ರವೇಶ ಪ್ರಶಸ್ತಿಯನ್ನು ಮತ್ತು ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗೆದ್ದ ಏಕೈಕ ನಟ ಎನಿಸಿಕೊಂಡರು.
ಈ ಚಿತ್ರವು ೧೯೮೬ರ ಕನ್ನಡ ಚಲನಚಿತ್ರ ರಥಸಪ್ತಮಿಯಿಂದ ಸ್ಫೂರ್ತಿ ಪಡೆದಿತ್ತು.
ಕಥಾವಸ್ತು
[ಬದಲಾಯಿಸಿ]ರೋಹಿತ್ (ಹೃತಿಕ್ ರೋಶನ್) ಮತ್ತು ಅವನ ತಮ್ಮ ಅಮಿತ್ ಅನಾಥರಾಗಿದ್ದು ತಮ್ಮ ಪ್ರೀತಿಯ ಆಂಟಿ ಮತ್ತು ಅಂಕಲ್ ಹಾಗೂ ಆ ಮನೆಯ ಮಾಲೀಕರಾದ ಲಿಲಿ (ಫ಼ರೀದಾ ಜಲಾಲ್) ಮತ್ತು ಆ್ಯಂಥನಿಯರೊಂದಿಗೆ (ಸತೀಶ್ ಶಾ) ಒಂದು ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುತ್ತಾರೆ. ರೋಹಿತ್‍ಗೆ ಗಾಯಕನಾಗುವ ಆಕಾಂಕ್ಷೆಯಿದ್ದು ಮಲಿಕ್ (ದಲೀಪ್ ತಾಹಿಲ್) ನಡೆಸುವ ಒಂದು ಕಾರ್ ಶೋರೂಂನಲ್ಲಿ ಮಾರಾಟಗಾರನಾಗಿ ಕೆಲಸಮಾಡುತ್ತಿರುತ್ತಾನೆ. ಒಂದು ದಿನ, ಅವನು ಮಿ. ಸಕ್ಸೇನಾನ (ಅನುಪಮ್ ಖೇರ್) ಸುಂದರ ಮಗಳಾದ ಸೋನಿಯಾ ಸಕ್ಸೇನಾಳನ್ನು (ಅಮೀಶಾ ಪಟೇಲ್) ಭೇಟಿಯಾಗುತ್ತಾನೆ. ಸೋನಿಯಾ ಸೇರಿದಂತೆ ,ಎಲ್ಲರಿಗೂ ತಿಳಿಯದಂತೆ, ಅವಳ ಅಪ್ಪ ಮತ್ತು ಮಲಿಕ್ ಇಬ್ಬರು ಭ್ರಷ್ಟ ಪೋಲಿಸ್ ಅಧಿಕಾರಿಗಳ (ಮೋಹ್‍ನೀಶ್ ಬೆಹೆಲ್ ಮತ್ತು ಆಶೀಶ್ ವಿದ್ಯಾರ್ಥಿ) ನೆರವಿನಿಂದ ಒಂದು ಮಾದಕವಸ್ತುಗಳ ನಿಯಂತ್ರಣ ಕೂಟವನ್ನು ನಡೆಸುತ್ತಿರುತ್ತಾರೆ.
ಬೀಚ್‍ನಲ್ಲಿ ಸೋನಿಯಾಳ ಹುಟ್ಟುಹಬ್ಬದ ಪಾರ್ಟಿಯ ವೇಳೆ ರೋಹಿತ್ ಮತ್ತು ಸೋನಿಯಾ ಮತ್ತೊಮ್ಮೆ ಒಬ್ಬರನ್ನೊಬ್ಬರು ನೋಡುತ್ತಾರೆ. ರೋಹಿತ್ ಅವಳಿಗಾಗಿ ಹಾಡಿದ ಬಳಿಕ, ವಿಹಾರ ನೌಕಾಯಾನದಲ್ಲಿ ಹಾಡಲು ಅವನನ್ನು ಆಹ್ವಾನಿಸಲಾಗುತ್ತದೆ. ಆಚರಣೆಯ ವೇಳೆ, ರೋಹಿತ್ ಮತ್ತು ಸೋನಿಯಾ ಪಾನಮತ್ತರಾಗಿ ಒಂದು ಕಾಪುದೋಣಿಯಲ್ಲಿ ಬಿದ್ದು ಅದು ಹಡಗಿನಿಂದ ಬೇರೆಯಾಗುತ್ತದೆ. ರೋಹಿತ್ ಒಂದು ದ್ವೀಪಕ್ಕೆ ದೋಣಿಯನ್ನು ಸಾಗಿಸುತ್ತಾನೆ. ಅಲ್ಲಿ ಅವರು ಕೆಲವು ದಿನಗಳವರೆಗೆ ಸಿಕ್ಕಿಬೀಳುತ್ತಾರೆ. ಈ ಸಮಯದಲ್ಲಿ ಅವರು ಒಬ್ಬರನ್ನೊಬ್ಬರು ಪ್ರೀತಿಸತೊಡಗುತ್ತಾರೆ. ಸಕ್ಸೇನಾ ಅವರನ್ನು ಪಾರುಮಾಡುತ್ತಾನೆ. ಆದರೆ ತಮ್ಮ ವರ್ಗ ವ್ಯತ್ಯಾಸಗಳ ಕಾರಣ ಅವರ ಪ್ರೀತಿಯನ್ನು ಒಪ್ಪುವುದಿಲ್ಲ. ತನ್ನ ಉದ್ದೇಶಗಳು ಮರ್ಯಾದೆಯಿಂದ ಕೂಡಿವೆ ಎಂದು ರೋಹಿತ್ ಸಕ್ಸೇನಾಗೆ ಮನವರಿಕೆ ಮಾಡಿಕೊಟ್ಟಾಗ ಸಕ್ಸೇನಾ ಒಪ್ಪಿಕೊಂಡು ರೋಹಿತ್ ಯಶಸ್ವಿಯಾಗಬಲ್ಲನಾದರೆ, ಸೋನಿಯಾಳನ್ನು ಮದುವೆ ಮಾಡಿಕೊಳ್ಳಲು ಬಿಡುವುದಾಗಿ ಹೇಳುತ್ತಾನೆ. ತನ್ನನ್ನು ತಾನು ಸಾಬೀತುಪಡಿಸಲು ದೃಢಸಂಕಲ್ಪ ಮಾಡಿ, ರೋಹಿತ್ ಮತ್ತು ಅವನ ಸ್ನೇಹಿತರು ಅವನಿಗಾಗಿ ಒಂದು ದಾಖಲೆ ವ್ಯವಹಾರವನ್ನು ತಂದುಕೊಡಲು ಪ್ರಯತ್ನಿಸುತ್ತಾರೆ. ಅಂತಿಮವಾಗಿ ರೋಹಿತ್ ಒಬ್ಬ ಸ್ಥಳೀಯವಾಗಿ ಸುಪರಿಚಿತವಾದ ಕಲಾವಿದನಾಗುತ್ತಾನೆ ಮತ್ತು ಸಂಗೀತ ಕೂಟವನ್ನು ನಡೆಸಿಕೊಡಲು ತಯಾರಾಗುತ್ತಾನೆ.
ಕಾರ್ಯಕ್ರಮದ ದಿನದಂದು, ಅವರ ಮಾದಕ ವಸ್ತುಗಳ ವ್ಯವಹಾರಗಳ ಬಗ್ಗೆ ತಿಳಿದಿದ್ದ ಆಯುಕ್ತನನ್ನು ಭ್ರಷ್ಟ ಪೋಲಿಸಿನವರು ಮತ್ತು ಮಲಿಕ್ ಗುಂಡಿಕ್ಕಿ ಸಾಯಿಸುವುದನ್ನು ರೋಹಿತ್ ನೋಡುತ್ತಾನೆ. ಅವರು ಅವನ ಇರುವಿಕೆಯನ್ನು ಪತ್ತೆಹಚ್ಚಿ ಅವನಿಗೆ ಗುಂಡು ಹೊಡೆದು ಅವನನ್ನು ಗಾಯಗೊಳಿಸುತ್ತಾರೆ ಮತ್ತು ಒಂದು ಸೇತುವೆಯ ಮೇಲೆ ಹಿಂಬಾಲಿಸುತ್ತಾರೆ. ಅವರು ಅವನ ಸೈಕಲ್‍ನ್ನು ರಸ್ತೆಯಿಂದ ಉರುಳಿಸಿದ ಕಾರಣ ಅವನು ನದಿಯೊಳಗೆ ಬೀಳುತ್ತಾನೆ. ಈಜಲು ಬಾರದ ರೋಹಿತ್ ಮುಳುಗುತ್ತಾನೆ. ಈ ಸುದ್ದಿಯಿಂದ ಆಘಾತಗೊಂಡ ಅಮಿತ್ ಮೂಕನಾಗುತ್ತಾನೆ ಮತ್ತು ಬಹಳ ದುಃಖಿತಳಾದ ಸೋನಿಯಾ ಖಿನ್ನತೆಗೊಳಗಾಗುತ್ತಾಳೆ.
ಅವಳಿಗೆ ಅವಳ ಖಿನ್ನತೆಯನ್ನು ಹೋಗಲಾಡಿಸಲು ನೆರವಾಗಲು ಮಿ. ಸಕ್ಸೇನಾ ಸೋನಿಯಾಳನ್ನು ಅವಳ ಸೋದರನ ಬಳಿ ನ್ಯೂ ಜೀಲ್ಯಾಂಡ್‍ಗೆ ಕಳಿಸುತ್ತಾನೆ. ಅಲ್ಲಿ ಸೋನಿಯಾ ತನ್ನ ಸೋದರಸಂಬಂಧಿ ನೀತಾಳ (ತನಾಜ಼್ ಕುರಿಮ್) ಗೆಳೆಯ ರಾಜ್ ಚೋಪ್ರಾಳನ್ನು (ಹೃತಿಕ್ ರೋಶನ್) ಭೇಟಿಯಾಗುತ್ತಾಳೆ. ಅವಳಿಗೆ ತೀವ್ರ ಆಘಾತವಾಗುವಂತೆ ಅವನು ಎದ್ದುಕಾಣುವಂತೆ ರೋಹಿತ್‍ನನ್ನು ಹೋಲುತ್ತಾನೆ, ಆದರೆ ಅವರ ವ್ಯಕ್ತಿತ್ವಗಳು ಸ್ವಲ್ಪ ಬೇರೆಯಾಗಿರುತ್ತವೆ. ರಾಜ್ ಸೋನಿಯಾಳನ್ನು ಪ್ರೀತಿಸತೊಡಗುತ್ತಾನೆ. ಆದರೆ ಅವಳು ಅವನನ್ನು ತಪ್ಪಿಸುತ್ತಾಳೆ, ಏಕೆಂದರೆ ರೋಹಿತ್‍ನೊಂದಿಗೆ ಅವನ ಹೋಲಿಕಿಯು ಅವಳಿಗೆ ನೋವು ಮಾಡುತ್ತಿರುತ್ತದೆ. ಅವಳ ಕಥೆಯನ್ನು ತಿಳಿದು, ರಾಜ್ ಅವಳ ಜತೆಗೂಡಿ ಭಾರತಕ್ಕೆ ಬಂದು ಬದುಕಲು ಮುಂದುವರಿಸಲು ಭರವಸೆ ಕೊಡುತ್ತಾನೆ. ಆದರೆ ಅವಳು ಅವನನ್ನು ಪ್ರೀತಿಸುವುದಿಲ್ಲದ್ದರಿಂದ ಅವಳನ್ನು ಹೋಗಲು ಬಿಡಲು ನಿರ್ಧರಿಸುತ್ತಾನೆ. ಆದರೆ ವಿಮಾನ ನಿಲ್ದಾಣದಲ್ಲಿ, ಭ್ರಷ್ಟ ಅಧಿಕಾರಿಗಳಲ್ಲೊಬ್ಬನ್ನು ಅವರನ್ನು ನೋಡಿ ರಾಜ್ ಮೇಲೆ ಗುಂಡು ಹಾರಿಸುತ್ತಾನೆ. ರಾಜ್ ಮತ್ತು ಸೋನಿಯಾ ತಪ್ಪಿಸಿಕೊಂಡ ಮೇಲೆ, ಯಾರೋ ತನ್ನನ್ನು ರೋಹಿತ್ ಎಂದು ತಪ್ಪು ತಿಳಿಯುತ್ತಿದ್ದಾರೆಂದು ರಾಜ್‍ಗೆ ಅರಿವಾಗುತ್ತದೆ. ರೋಹಿತ್‍ನ ಕೊಲೆಯಾಗಿದೆಯೆಂದು ಇಬ್ಬರಿಗೂ ಅರಿವಾಗುತ್ತದೆ.
ರಾಜ್‍ನನ್ನು ರೋಹಿತ್‍ನ ಕುಟುಂಬ ಮತ್ತು ಗೆಳೆಯರು ಸ್ವಾಗತಿಸುತ್ತಾರೆ. ಅವನ ಇರುವಿಕೆಯು ಅಮಿತ್‍ನನ್ನು ಅವನ ಚಿಪ್ಪಿನಿಂದ ಹೊರತರುತ್ತದೆ. ಅಮಿತ್ ರೋಹಿತ್‍ನ ಕೊಲೆಯನ್ನು ಮತ್ತು ಅಪರಾಧಿಗಳನ್ನು ನೋಡಿದ್ದಾನೆಂದು ರಾಜ್‍ಗೆ ಗೊತ್ತಾಗುತ್ತದೆ. ಆ ತಂಡವು ಹಂತಕರನ್ನು ಪ್ರಕಟಪಡಿಸಲು ಒಂದು ಬಲೆಯನ್ನು ಒಡ್ಡಲು ನಿರ್ಧರಿಸುತ್ತದೆ. ಅವರನ್ನು ಸೆಳೆಯಲು ರಾಜ್ ರೋಹಿತ್ ಆಗಿ ನಡೆದುಕೊಳ್ಳುತ್ತಾನೆ. ಇದನ್ನೆಲ್ಲ ಏಕೆ ಮಾಡುತ್ತಿದ್ದಾನೆಂದು ಸೋನಿಯಾ ಕೇಳಿದಾಗ, ತಾನು ಅವಳನ್ನು ಪ್ರೀತಿಸುತ್ತಿದ್ದೇನೆಂದು ರಾಜ್ ಹೇಳಿಕೊಳ್ಳುತ್ತಾನೆ. "ರೋಹಿತ್" ಬದುಕಿದ್ದಾನೆಂದು ತಿಳಿದ ಮೇಲೆ ಮಲಿಕ್, ಸಕ್ಸೇನಾ ಮತ್ತು ಅಧಿಕಾರಿಗಳು ಗಾಬರಿಯಾಗುತ್ತಾರೆ. ರಾಜ್ ರೋಹಿತ್‍ನ ಗೌರವಾರ್ಥವಾಗಿ ಒಂದು ಸಂಗೀತ ಕೂಟ ನಡೆಸುತ್ತಾನೆ. ಹಂತಕರು ಅಲ್ಲಿ ಬರುವರೆಂದು ಅವನಿಗೆ ಗೊತ್ತಿರುತ್ತದೆ. ಅಮಿತ್‍ನಿಂದ ತಿಳಿದುಕೊಂಡ ಗುಂಡು ಹೊಡೆತದ ವಿವರಗಳನ್ನು ಜನಸಮೂಹಕ್ಕೆ ಬಹಿರಂಗಗೊಳಿಸುತ್ತಾನೆ. ರೋಹಿತ್‍ನನ್ನು ಸಾಯಿಸಿದ ಜನರ ಹೆಸರುಗಳನ್ನು ಬಹಿರಂಗಪಡಿಸುವ ಮೊದಲು, ಅಧಿಕಾರಿಗಳಲ್ಲೊಬ್ಬ ಅವನಿಗೆ ಗುಂಡು ಹೊಡೆಯುತ್ತಾನೆ. ಗುಂಡು ನಿರೋಧಕ ನಡುವಂಗಿ ಧರಿಸಿದ್ದರಿಂದ ರಾಜ್ ಉಳಿದುಕೊಳ್ಳುತ್ತಾನೆ.
ತಾವು ರೋಹಿತ್ ಎಂದು ನಂಬಿದವನನ್ನು ಹಿಡಿಯಲು ಅಧಿಕಾರಿಗಳು ಸೋನಿಯಾಳನ್ನು ಅಪಹರಿಸುತ್ತಾರೆ. ರೋಹಿತ್‍ನ ಹಂತಕರನ್ನು ಕಂಡುಹಿಡಿದ ಮೇಲೆ, ಅವರನ್ನು ಸಾಯಿಸುವಂತೆ ಸೋನಿಯಾ ಒದರಿ ಹೇಳುತ್ತಾಳೆ. ರಾಜ್ ಹಾಗೆಯೇ ಮಾಡುತ್ತಾನೆ. ಮಲಿಕ್ ಆಗಮಿಸಿ ಇನ್ನೇನು ಕೊಲೆಯಲ್ಲಿ ಸಕ್ಸೇನಾ ಒಳಗೊಂಡಿರುವ ಬಗ್ಗೆ ಹೇಳಬೇಕೆನ್ನುವಷ್ಟರಲ್ಲಿ ಸಕ್ಸೇನಾ ಅವನನ್ನು ಗುಂಡಿಕ್ಕಿ ಸಾಯಿಸುತ್ತಾನೆ. ರೋಹಿತ್‍ನ ಹಂತಕರಲ್ಲಿ ಮಲಿಕ್ ಒಬ್ಬನೆಂದು ಅಮಿತಿ ಗುರುತು ಹಿಡಿಯುತ್ತಾನೆ. ಅವನ ನೆರವಿನಿಂದ, ರೊಹಿತ್‍ನನ್ನು ಕೊಲ್ಲುವ ಮೊದಲು ಮಲಿಕ್ ಸಕ್ಸೇನಾಗೆ ಕರೆಮಾಡಿದ್ದನೆಂದು ರಾಜ್ ತಿಳಿದುಕೊಳ್ಳುತ್ತಾನೆ. ಅವನನ್ನು ಸಮೀಪಿಸಿದಾಗ, ಸಕ್ಸೇನಾ ತನ್ನ ಅಪರಾಧವನ್ನು ಸೋನಿಯಾ ಮುಂದೆ ಒಪ್ಪಿಕೊಂಡಾಗ ಅವನನ್ನು ಬಂಧಿಸಲಾಗುತ್ತದೆ.
ತಾನು ಅವನನ್ನು ಪ್ರೀತಿಸುತ್ತಿದ್ದೇನೆಂದು ಸೋನಿಯಾ ರಾಜ್‍ನಿಗೆ ಹೇಳಿ ತಾನು ಎರಡನೇ ಬಾರಿ ತನ್ನ ಪ್ರೀತಿಯನ್ನು ಕಳೆದುಕೊಳ್ಳಲು ಬಯಸುವುದಿಲ್ಲವೆಂದು ಹೇಳುತ್ತಾಳೆ. ಆ ದಂಪತಿ ಅಮಿತ್‍ನನ್ನು ತಮ್ಮೊಂದಿಗೆ ಕರೆದುಕೊಂಡು ನ್ಯೂ ಜ಼ಿಲೆಂಡ್‍ಗೆ ಹಿಂದಿರುಗಿ ಕುಟುಂಬ ಮತ್ತು ಸ್ನೇಹಿತರು ಸುತ್ತುವರಿದಾಗ ಮದುವೆಯಾಗುತ್ತದೆ.
ಪಾತ್ರವರ್ಗ
[ಬದಲಾಯಿಸಿ]- ರೋಹಿತ್ / ರಾಜ್ ಚೋಪ್ರಾ ಪಾತ್ರದಲ್ಲಿ ಹೃತಿಕ್ ರೋಶನ್
- ಸೋನಿಯಾ ಸಕ್ಸೇನಾ / ಸೋನಿಯಾ ರಾಜ್ ಚೋಪ್ರಾ ಪಾತ್ರದಲ್ಲಿ ಅಮೀಶಾ ಪಟೇಲ್
- ಮಿ. ಸಕ್ಸೇನಾ / ಸರ್ಜಿ ಪಾತ್ರದಲ್ಲಿ ಅನುಪಮ್ ಖೇರ್
- ಶಕ್ತಿ ಮಲಿಕ್ ಪಾತ್ರದಲ್ಲಿ ದಲೀಪ್ ತಾಹಿಲ್
- ಇನ್‍ಸ್ಪೆಕ್ಟರ್ ದಿಲೀಪ್ ಕದಮ್ ಪಾತ್ರದಲ್ಲಿ ಮೋಹ್‍ನೀಶ್ ಬೆಹೆಲ್
- ಇನ್‍ಸ್ಪೆಕ್ಟರ್ ಸತೀಶ್ ಶಿಂದೆ ಪಾತ್ರದಲ್ಲಿ ಆಶೀಶ್ ವಿದ್ಯಾರ್ಥಿ
- ಆ್ಯಂಥನಿ ರಾಡ್ರಿಗೇಸ್ ಅಂಕಲ್ ಪಾತ್ರದಲ್ಲಿ ಸತೀಶ್ ಶಾ
- ಲಿಲಿ ಆ್ಯಂಥನಿ ರಾಡ್ರಿಗೇಸ್ ಆಂಟಿ ಪಾತ್ರದಲ್ಲಿ ಫ಼ರೀದಾ ಜಲಾಲ್
- ಅತುಲ್ ಮಲಿಕ್ ಪಾತ್ರದಲ್ಲಿ ರಾಜೇಶ್ ಟಂಡನ್
- ಮಿಸಸ್ ಚೋಪ್ರಾ ಪಾತ್ರದಲ್ಲಿ ಆಶಾ ಪಟೇಲ್
- ನೀತಾ ಸಕ್ಸೇನಾ ಪಾತ್ರದಲ್ಲಿ ತನಾಜ಼್ ಇರಾನಿ
- ಟೋನಿ ಪಾತ್ರದಲ್ಲಿ ವ್ರಜೇಶ್ ಹೀರ್ಜಿ
- ಅಮಿತ್ ಪಾತ್ರದಲ್ಲಿ ಅಭಿಷೇಕ್ ಶರ್ಮಾ
- ಇನ್‍ಸ್ಪೆಕ್ಟರ್ ಪರಬ್ ಪಾತ್ರದಲ್ಲಿ ಜಾನಿ ಲಿವರ್
- ಪೋಲಿಸ್ ಆಯುಕ್ತನ ಪಾತ್ರದಲ್ಲಿ ರಾಮ್ ಮೋಹನ್
- ಶೋಭನಾ ಪಾತ್ರದಲ್ಲಿ ಪಾಯಲ್ ಮಲ್ಹೋತ್ರಾ
- ನರ್ತಕಿಯಾಗಿ ಡಿಂಪಲ್ ಇನಾಮ್‍ದಾರ್
- ನರ್ತಕಿಯಾಗಿ ಜಸ್ವೀರ್ ಕೌರ್
ತಯಾರಿಕೆ
[ಬದಲಾಯಿಸಿ]ಹೃತಿಕ್ ಜೊತೆ ನಟಿಸಲು ಮೊದಲು ಕರೀನಾ ಕಪೂರ್‌ರನ್ನು ಆಯ್ಕೆಮಾಡಲಾಗಿತ್ತು. ಆದರೆ ಪ್ರಾರಂಭದ ಕೆಲವು ದಿನಗಳ ನಂತರ ತಪ್ಪು ತಿಳುವಳಿಕೆಯ ನಂತರ ಕರೀನಾ ಚಿತ್ರದಿಂದ ಹೊರನಡೆದರು.[೯] ಆಗ ರಾಕೇಶ್ ಅಮೀಶಾ ಪಟೇಲ್‍ರನ್ನು ಚಿತ್ರದ ನಾಯಕಿಯಾಗಿ ಗೊತ್ತುಮಾಡಿದರು.[೧೦]
ಹಡಗಿನ ದೃಶ್ಯಗಳನ್ನು ಸ್ಟಾರ್ ಫ಼್ಲೈಯರ್ ಮೇಲೆ ಚಿತ್ರೀಕರಿಸಲಾಗಿತ್ತು.[೧೧] ದ್ವೀಪದ ದೃಶ್ಯಗಳನ್ನು ಥೈಲ್ಯಾಂಡ್‍ನಲ್ಲಿ ಚಿತ್ರೀಕರಿಸಲಾಗಿತ್ತು.[೧೨]
ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ
[ಬದಲಾಯಿಸಿ]ವಿಮರ್ಶಾತ್ಮಕ ಪ್ರತಿಕ್ರಿಯೆ
[ಬದಲಾಯಿಸಿ]ಹೃತಿಕ್‍ರ ನಟನೆಯನ್ನು ಬಹಳ ಪ್ರಶಂಸಿಸಲಾಯಿತು, ಮತ್ತು ಚಿತ್ರದ ಸಂಗೀತವು ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು.[೧೩] ಕಥಾಹಂದರವು ಚರ್ವಿತಚರ್ವಣವಾಗಿತ್ತು ಎಂದು ಬಹುತೇಕ ವಿಮರ್ಶಕರು ಗಮನಿಸಿದರು.
ಬಾಕ್ಸ್ ಆಫ಼ಿಸ್
[ಬದಲಾಯಿಸಿ]ಭಾರತದಲ್ಲಿ, ಕಹೋ ನಾ... ಪ್ಯಾರ್ ಹೇ ೨೦೦೦ನೇ ಸಾಲಿನಲ್ಲಿ ಅತಿ ಹೆಚ್ಚು ಹಣಗಳಿಸಿದ ಬಾಲಿವುಡ್ ಚಲನಚಿತ್ರವಾಗಿತ್ತು.[೧೪]
ಧ್ವನಿವಾಹಿನಿ
[ಬದಲಾಯಿಸಿ]ಚಿತ್ರದ ಸಂಗೀತವನ್ನು ರಾಜೇಶ್ ರೋಶನ್ ಸಂಯೋಜಿಸಿದ್ದರು ಮತ್ತು ಹಾಡುಗಳಿಗೆ ಸಾಹಿತ್ಯವನ್ನು ಇಬ್ರಾಹಿಂ ಅಷ್ಕ್, ಸಾವನ್ ಕುಮಾರ್ ತಕ್ ಹಾಗೂ ವಿಜಯ್ ಅಕೇಲಾ ಬರೆದಿದ್ದರು. ಬಹುತೇಕ ಹಾಡುಗಳನ್ನು ಲಕಿ ಅಲಿ, ಉದಿತ್ ನಾರಾಯಣ್ ಮತ್ತು ಅಲ್ಕಾ ಯಾಗ್ನಿಕ್. ನೃತ್ಯದ ದೃಶ್ಯಭಾಗಗಳನ್ನು ಫ಼ಾರಾ ಖಾನ್ ನಿರ್ದೇಶಿಸಿದ್ದರು.
"ಎಕ್ ಪಲ್ ಕಾ ಜೀನಾ", "ನಾ ತುಮ್ ಜಾನೊ ನ ಹಮ್", "ಚಾಂದ್ ಸಿತಾರೆ" ಹಾಡುಗಳು ಮತ್ತು ಶೀರ್ಷಿಕೆ ಗೀತೆಯಾದ "ಕಹೋ ನಾ ಪ್ಯಾರ್ ಹೇ" ಚಾರ್ಟ್‌ಬಸ್ಟರ್‌ಗಳಾಗಿದ್ದವು. ಈ ಚಿತ್ರದ ಧ್ವನಿವಾಹಿನಿ ಸಂಗ್ರಹವು ಆ ವರ್ಷದಲ್ಲಿ ಅತಿ ಹೆಚ್ಚು ಮಾರಾಟವಾದ ಬಾಲಿವುಡ್ ಧ್ವನಿವಾಹಿನಿಯಾಗಿತ್ತು.[೧೫]
ಸಂ. | ಹಾಡು | ಸಾಹಿತ್ಯ | ಗಾಯಕ(ರು) | ಸಮಯ |
---|---|---|---|---|
1. | "ಕಹೋ ನಾ ಪ್ಯಾರ್ ಹೇ" | ಇಬ್ರಾಹಿಂ ಅಷ್ಕ್ | ಉದಿತ್ ನಾರಾಯಣ್, ಅಲ್ಕಾ ಯಾಗ್ನಿಕ್ | 7:03 |
2. | "ನಾ ತುಮ್ ಜಾನೊ ನ ಹಮ್" | ಇಬ್ರಾಹಿಂ ಅಷ್ಕ್ | ಲಕಿ ಅಲಿ | 6:18 |
3. | "ಪ್ಯಾರ್ ಕೀ ಕಶ್ತಿ ಮೇ" | ಸಾವನ್ ಕುಮಾರ್ ತಕ್ | ಉದಿತ್ ನಾರಾಯಣ್, ಅಲ್ಕಾ ಯಾಗ್ನಿಕ್ | 5:54 |
4. | "ಜಾನೇಮನ್ ಜಾನೇಮನ್" | ಸಾವನ್ ಕುಮಾರ್ ತಕ್ | ಆಶಾ ಭೋಸ್ಲೆ | 5:11 |
5. | "ಚಾಂದ್ ಸಿತಾರೆ" | ಸಾವನ್ ಕುಮಾರ್ ತಕ್ | ಕುಮಾರ್ ಸಾನು, ಅಲ್ಕಾ ಯಾಗ್ನಿಕ್ | 6:33 |
6. | "ದಿಲ್ ನೇ ದಿಲ್ ಕೊ ಪುಕಾರಾ[೧೬]" | ಇಬ್ರಾಹಿಂ ಅಷ್ಕ್ | ಬಾಬುಲ್ ಸುಪ್ರಿಯೊ | 7:56 |
7. | "ಕಹೋ ನಾ ಪ್ಯಾರ್ ಹೇ (ದುಃಖಭರಿತ ಆವೃತ್ತಿ)" | ಇಬ್ರಾಹಿಂ ಅಷ್ಕ್ | ಉದಿತ್ ನಾರಾಯಣ್ | 1:06 |
8. | "ಎಕ್ ಪಲ್ ಕಾ ಜೀನಾ" | ವಿಜಯ್ ಅಕೇಲಾ | ಲಕಿ ಅಲಿ | 6:36 |
9. | "ಬಿಲೀವ್ ಇನ್ ಲವ್ (ಥೀಮ್ ಮ್ಯೂಸಿಕ್)" (ವಾದ್ಯಸಂಗೀತ) | 3:58 |
ಪ್ರಶಸ್ತಿಗಳು
[ಬದಲಾಯಿಸಿ]೪೬ನೇ ಫಿಲ್ಮ್‌ಫೇರ್ ಪ್ರಶಸ್ತಿಗಳು
- ಅತ್ಯುತ್ತಮ ಚಲನಚಿತ್ರ - ರಾಕೇಶ್ ರೋಶನ್
- ಅತ್ಯುತ್ತಮ ನಿರ್ದೇಶಕ - ರಾಕೇಶ್ ರೋಶನ್
- ಅತ್ಯುತ್ತಮ ನಟ - ಹೃತಿಕ್ ರೋಶನ್
- ಅತ್ಯುತ್ತಮ ಪ್ರಥಮ ಪ್ರವೇಶ (ಪುರುಷ) - ಹೃತಿಕ್ ರೋಶನ್
- ಅತ್ಯುತ್ತಮ ಸಂಗೀತ ನಿರ್ದೇಶಕ - ರಾಜೇಶ್ ರೋಶನ್
- ಅತ್ಯುತ್ತಮ ಹಿನ್ನೆಲೆ ಗಾಯಕ - ಲಕಿ ಅಲಿ
- ಅತ್ಯುತ್ತಮ ಚಿತ್ರಕಥೆ - ರವಿ ಕಪೂರ್ ಮತ್ತು ಹನಿ ಇರಾನಿ
- ಅತ್ಯುತ್ತಮ ಸಂಗೀತ ನಿರ್ದೇಶನ - ಫ಼ಾರಾ ಖಾನ್
- ಅತ್ಯುತ್ತಮ ಸಂಕಲನ - ಸಂಜಯ್ ವರ್ಮಾ
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ "Kaho Naa... Pyaar Hai – Movie". Box Office India. Retrieved 26 July 2016.
- ↑ "Box Office 2000". Box Office India. Archived from the original on 14 October 2013. Retrieved 25 December 2016.
- ↑ "A perfect professional has come to stay". TheHindu. Archived from the original on 6 June 2011. Retrieved 21 May 2010.
- ↑ "mid-day.com". Mid Day. Retrieved 23 October 2017.
- ↑ "uniindia.com". United News of India. Retrieved 25 October 2017.
- ↑ "bollywoodhungama.com". Bollywood Hungama. Retrieved 29 October 2017.
- ↑ "'Kaho Naa.. Pyar Hai' was added to the Guinness Book of World Records 2002 edition for winning the most number of awards for a movie. The movie won a total of 92 awards! #FilmFact". Twitter. Retrieved February 2, 2018.
- ↑ "Kaho Naa... Pyaar Hai breaks record". Rediff. 18 July 2003.
- ↑ Taliculam, Sharmila (20 August 1998). "He's a looker". Rediff. Retrieved 29 April 2016.
- ↑ Verma, Sukanya (22 November 1999). "'It's unfair to have just one goal in life'". Rediff. Retrieved 29 April 2016.
- ↑ "Star Flyer sails into Kochi with 88 tourists". TheHindu. Chennai, India. 4 April 2007. Archived from the original on 8 ಏಪ್ರಿಲ್ 2007. Retrieved 21 May 2010.
- ↑ "Filming locations for Kaho Naa... Pyaar Hai". IMDB. Retrieved 21 May 2010.
- ↑ "Music Review — Kaho naa.. Pyaar Hai". Planet-Bollywood. Retrieved 15 November 2011.
- ↑ "Box Office 2000". BoxOfficeIndia.Com. Archived from the original on 11 August 2013. Retrieved 17 May 2010.
- ↑ "Internet Archive Wayback Machine". Web.archive.org. 22 January 2009. Archived from the original on 15 February 2008. Retrieved 9 May 2012.
{{cite web}}
: Cite uses generic title (help) - ↑ "Sitaro Kee Mehfil Me Gunjega Tarana Song Lyrics of Kaho Naa Pyaar Hai : glamsham.com". Glamsham. Archived from the original on 23 ಸೆಪ್ಟೆಂಬರ್ 2015. Retrieved 22 September 2015.